ಕೊಂಗಾಟದ ಬ್ಲಾಗಿಗೆ ಐವತ್ತಾಯ್ತ್ ಕಾಣಿ…
Posted in ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ | Tags: ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ
ತಕಂಡ್ ಹೋತ್ತಾ…!!
ಒಂದೊಂದ್ ಬದಿ ಭಾಷಿಯಗೆ ಆಲ್ಲಲ್ಲಿದೇ ವಿಶೇಷ ಆಡುನುಡಿ ಅಂದೇಳಿ ಇರತ್ತ್. ಆ ಬದ್ಯಗಿದ್ದರ್ ಮಾತಗ್ ಮಾತ್ರ ಇದ್ ಕಾಂಬುಕೆ ಸಿಕ್ಕತ್ತ್. ಹಾಂಗಿಂದ್ ಒಂದ್ ನಾಲ್ಕ್ ಕುಂದಾಪ್ರ ಕನ್ನಡದ ಆಡುನುಡಿ ಇಲ್ಲಿತ್ತ್ ಕಾಣಿ…
ತಕಂಡ್ ಹೋತ್ತಾ
ಬಳಕೆ -
೧. ಬಸ್ ಹತ್ತುವ ಅಂದೇಳ್ರೆ ಅಯ್ಯಬ್ಬಾ ಈ ಜನ ಎಲ್ಲಾ ನುರುದೇ… ಹಂಗಾರ್ ಬಸ್ ನಿಲ್ಲುದಿಲ್ಲ್ಯಾ.. ಇವ್ರಿಗೆಲ ಏನ್ ತಕಂಡ್ ಹೋತ್ತಾ?
೨. ಒಂದ್ ಮಾತಾಡ್ಕಾಯ್ದಿಲ್ಲ… ಆ ನಮನಿ ಬೊಬ್ಬಿ ಹೊಡಿತ್ಯಲ.. ನಿಂಗೇನ್ ತಕಂಡ್ ಹೋತ್ತಾ?
೩. ಈ ಮಳ್ಯಗೆ ತಿರ್ಗುಕ್ ಹೊರ್ಟಿರ್ಯಲೆ ಎಂತಾ ನಿಮ್ಮನ್ ತಕಂಡ್ ಹೋತ್ತಾ?
ಬತ್ತ್ ಬರವಾ? – ಈಗ ಬರ್ತಾ ಇರುವುದಾ?
೧. ಹೋ… ಬಾಳಾ ಅಪರೂಪದರ್… ಏನ್ ಬತ್ತ್ ಬರವಾ?
ಎತ್ ಮುಕ್ನೆ ಹೊರ್ಟದ್? – ಯಾವ ಕಡೆ ಹೊರಟಿದ್ದು?
೧. ಹ್ವಾಯ್ ಏನ್ ಈ ಬದಿಗೆ ಬಂದಿರಿ.. ಎತ್ ಮುಕ್ನೆ ಹೊರ್ಟದ್?
೨. ಈ ಜಮ್ ನೆರಿಯಗೆ ಬೆಳ್ಗಾ ಮುಂಚೆ ಎದ್ಕಂಡ್ ಹೊರ್ಟಿರ್ಯಲೆ, ಎತ್ ಮುಕ್ನೆ ಹೋತ್ರಿ?
ಹಸಿಗ್ ಹಿಡದ್ ಹೇಲ್ – (ಹಾಸಿಗೆಗೆ ಹಿಡಿದ ಮಲ ಎಷ್ಟು ತೊಳೆದರೂ ಕಲೆ ಉಳಿಸುತ್ತದೆ ಅನ್ನುವ ಅರ್ಥದಲ್ಲಿ) ಜಿಗುಟುತನ, ಹಿಡಿದ ಪಟ್ಟು ಬಿಡದಿರುವುದು
೧. ಆತಿಲ್ಲ ಅಂದೇಳಿ ಒಂದ್ಸಲ ಹೇಳ್ರ್ ಗೊತ್ತತಿಲ್ಲ್ಯಾ.. ಎಂತಕೆ ಹಸಿಗೆ ಹಿಡ್ದ್ ಹೇಲ್ ಕಣಂಗೆ ಆಡ್ತೆ?
೨. ಅವ್ನಿಗೆ ಎಂತಾರೂ ಆಯ್ಕ್ ಅಂದ್ರೆ ಆಯ್ಕೇಯಾ… ಆಪಲ್ಲೊರಿಗೆ ಹಸಿಗ್ ಹಿಡ್ಡ್ ಹೇಲ್ ಕಣಗೆ ಮಾಡ್ತ
ಭಾಷಿ ಬತ್ತಿಲ್ಲ್ಯಾ? – ಹೇಳಿದ್ದು ಅರ್ಥ ಆಗೋಲ್ಲವಾ?
೧. ನಾನ್ ಕೊಡುದಿಲ್ಲ ಅಂದೇಳಿ ನಿಂಗೇ ಹೇಳದ್ದ್… ಮತ್ತೂ ಎಂತಕೆ ಹೊಸುದ್ ನೀನ್? ನಿಂಗೆಂತ ಭಾಷಿ ಬತ್ತಿಲ್ಲ್ಯಾ?
೨. ಅವ್ನಿಗೆ ಎಷ್ಟ್ ಹೇಳ್ರೂ ಭಾಷಿ ಇಲ್ಲ ಮಾರಾಯ. ತಾ ಹೇಳದ್ದೇ ಸಮ ಅಂತ
ಗುಮ್ಮ ಗೋಳಿಹಣ್ಣ್ ನುಂಗ್ದ ಹಾಂಗೆ – ಅವಸರ ಅವಸರವಾಗಿ ತಿನ್ನುವುದು ( ಗೂಬೆ ಗೋಳಿಮರದ ಹಣ್ಣು ತಿನ್ನುವ ಹಾಗೆ)
೧. ನಿಂಗೆಂತ ತಡ ಆತ್ತಾ.. ಸ್ವಲ್ಪ ನಿಧಾನ್ ತಿನ್ನ್ ಕಾಂಬ. ತಿನ್ನತ್ ಕಂಡ್ರೆ ಗುಮ್ಮ ಗೋಳಿ ಹಣ್ ನುಂಗ್ದಾಂಗ್ ಇತ್ತ್
Posted in ಕುಂದಗನ್ನಡ ಕಲಿ | Tags: ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಕಲಿ, ತಕಂಡ್ ಹೋತ್ತಾ
ಮತ್ತೆ ಊರಗೆ ನೆರಿ ಬಂದಿತಂಬ್ರಲೆ…

ನಮ್ ನಮ್ ಮಟ್ಟಿಗೆ ನಮ್ ಊರ್ ಯೇಗ್ಳಿಕೂ ನಮ್ಗ್ ಚೆಂದವೇ. ಅದ್ರಗೂ ಮಳ್ಗಾಲ ಬಂದ್ರಂತೂ ಇನ್ನೆರ್ಡ್ ಮುಷ್ಟಿ ಹೆಚ್ಚೇ ಚೆಂದ ಕಾಣತ್. ಈ ವರ್ಷ ಜೂನ್ ಸುರಿಗೆ ಒಂದ್ ನಾಕ್ ದಿನ ಮುಖ ತೋರ್ಸದಂಗ್ ಮಾಡಿ ಹೋದ್ ಮಳಿ ಪತ್ತಿ ಇಲ್ಯಲೆ, ಈ ವರ‍್ಷ ಬ್ಯಾಸಾಯ ಮಾಡುದ್ ಹ್ಯಾಂಗೆ ಅಂದೇಳಿ ಊರ್ ಬದ್ಯಗೆ ಎಲ್ರೂ ಮಂಡಿಬಿಶಿ ಮಾಡ್ಕಂಡ್ ಇದ್ದಿರ್. ಪೇಪರಗೆಲ್ಲ ಈ ಸರ್ತಿ ಬರ್ಗಾಲ ಬಂದಂಗೇ ಸೈ, ಇನ್ನ್ ಎಂಟ್ ದಿನ ಹೋರೆ ಕರೆಂಟ್ ಇರುದಿಲ್ಲ ಅಂಬ್ರ್- ಕುಡುಕೆ ನೀರಿಲ್ಲ ಅಂಬ್ರ್ ಅಂದೇಳಿ ಎಲ್ ಕಂಡ್ರೂ ಮಳೀದೇ ಸುದ್ದಿ ಇತ್ತ್. ಕತ್ತಿ ಮದಿ, ಕೆಪ್ಪಿ ಮದಿ, ಶಿವಾಳಭಿಷೇಕದ ಸುದ್ದಿ ಎಲ್ಲಾ ಚಾನಲ್ಲಗೂ ಬ್ರೇಕಿಂಗ್ ನ್ಯೂಸ್, ಫ್ಲಾಶ್ ನ್ಯುಸ್ ಅಂದೇಳಿ ತೋರ್ಸತ್ ಕಂಡ್ ಹಂಗರ್ ಈ ಸರ್ತಿ ಮಳಿ ಕತಿ ಇಷ್ಟೇ ಸೈಯ್ಯಾ ಅಂದೇಳಿ ಎಣ್ಸ್‌ತಿಪ್ಪ್ ಸುರಿಗೆ ಮಳಿ ಬಂದ ಸುದ್ದಿ ಬಂತ್.
ಬಂದದ್ದಾರೂ ಎಂತ ಮಳಿ ಅಂತ್ರಿ, ಹೊರ್ಗ್ ಕಾಲಿಡುಕೆಡಿಯ ಅಂಬ್ ನಮನಿ ಸುರಿತಿತ್ತ್ ಅಂಬ್ರಲಾ ಹೌದೆ? ಎಲ್ಲಾ ತೋಡ್, ಹೊಳಿ ಪೂರಾ ತುಂಬಿ ಹೋಯ್ ಊರಗೆಲ್ಲ ನೆರಿ ಬಂದಿತಂದೇಳಿ ಸುದ್ದಿಯಪ್ಪ. ಆಯ್ಲಿ ಮಳಿ ಬರ್ಲಿ. ಮಳಿ ಬರ್ದೆ ಬರ್ಗಾಲ ಬಪ್ಪುದಕ್ಕಿಂತ ನಾಕ್ ದಿನ ತಿರ್ಗಾಟಕ್ ತೊಂದ್ರಿ ಆರೂ ಮಳಿ ಬಂದ್ರೆ ಒಳ್ಳೇದಲ್ದೇ? ಈ ಮಳ್ಗಾಲದಗೆ ಎಂತ ಮಣ್ಣ್ ತಿರ್ಗಾಟ ಅಂದ್ರ್ಯಾ? ಇರ್ಲಿ ತಿರ್ಗುದ್ ಬ್ಯಾಡ. ಜೋರ್ ಮಳಿ ಬತ್ತಾ ಇತ್ತ್ ಅಂದೇಳಿ ಅಟ್ಟದ ಮೇಲೆ ಕೂಡಿಟ್ಟಿದ್ದ ಗೆಣ್ಸಿನ ಹಪ್ಳ ಹಲ್ಸಿನ್ ಕಾಯ್ ಹಪ್ಳ ಪೂರಾ ಕೆಂಡದ ಒಲ್ಯಗೆ ಸುಟ್ಕಂಡ್ ಒಲಿ ಬಾಯಗೆ ಚಳಿ ಕಾಯ್ಸ್‌ತಾ ಕುತ್ಕಂಡ್ ಎಲ್ಲಾ ಹಪ್ಳ ಖಾಲಿ ಮಾಡ್‌ಬೇಡಿ ಮರಾಯ್ರೆ. ಊರಿಗ್ ಬಂದ್ರೆ ನಮ್ಗೂ ಒಂದ್ ನಾಕ್ ಹಪ್ಳ ಇರ್ಲಿ ಅಕಾ
ಬೆಂಗ್ಳೂರಗೆ ನಾಕ್ ಹನಿ ಮಳಿ ಬಿದ್ದ ಹೊಡ್ತಕ್ಕೇ ಥಂಡಿ ಹೊಡ್ದರ್ ಕಣಗ್ ಆಡ್ತ್ರಪ… ನಮ್ ಬದಿ ಕಣಗೆ ಎಲ್ಲಾರೂ ಮಳಿ ಬಂದ್ರ್ ಇವ್ರ್ ಊರಗೆ ಆಯ್ಕಂಬ್ರಾ? ಇಲ್ಲೂ ಜೋರ್ ಮಳಿ ಬತ್ತ್ ಅಂದೇಳಿ ಸುದ್ದಿ ಇತ್ತಪ್ಪಾ. ಆರೂ ನಮ್ ಬದಿ ಮಳಿಗ್ ಹೋಲ್ಸರೆ ಇದ್ ಎಂತಾ ಜೋರ್ ಮಳಿ ಮರ್ರೆ. ಮಳಿ ಸುದ್ದಿ ಕೇಂತಾ ಇಪ್ಪತಿಗೆ ಆರ್ಕುಟಗೆ ಶಶಿಧರ ಹೆಮ್ಮಾಡಿಯವ್ರ್ ಒಂದಿಷ್ಟ್ ಊರ್ ಬದಿ ಮಳಿದ್ ಫೋಟೋ ಹಾಕದ್ ಕಾಂಬುಕೆ ಸಿಕ್ತ್. ಅವ್ರತ ಕೇಂಡ್ ಆ ಫೋಟೋ ಇಲ್ಲ್ ಹಾಕಿದೆ ಕಾಣಿ, ಊರ್ ಬದಿಯಗ್ ಇಲ್ದಿದ್ದರ್ ಫೋಟೋದಗಾರೂ ಮಳಿ ಕಂಡ್ ಕುಶಿ ಪಡ್ಲಿ ಅಂದೇಳಿ…






Posted in ಇತ್ಯಾದಿ.., ನಮ್ ಊರ್ ನಮ್ಗ್ ಚಂದ
