Archive for ಫೆಬ್ರವರಿ, 2009


ಕಾಳಏನ್ ಮಾಡುದ್ ಹೇಳಿಇದ್ ನಮ್ಮನಿ

ಸಾಯ್ಬ್ರ್ಅಚ್ಚಾ

ಕಾಳ ಮನೀಲ್ ನಾನು ನನ್ ಹೆಂಡ್ತಿ ಇಬ್ರೆ ಇಪ್ಪುದ್

ಸಾಯ್ಬ್ರ್ಅಚ್ಚಾಅಚ್ಚಾ….

ಕಾಳಅದೆಲ್ ಬಂತ್

ಸಾಯ್ಬ್ರ್ಅರೆ ಕ್ಯಾರೆ….

ಕಾಳಅಲಾ…. ಹಚಾ ಹಚಾ ಅಂದ್ರ್ಯಲ…. ಹಚಾ ಅಂದ್ರೆ ನಂಬದೀಲ್ ನಾಯ್ ಬೆರ್ಸುದ್ ಮರಾಯ್ರೆ

ಸಾಯ್ಬ್ರ್ಅರೇ ನಾನು ನಾಯಿಗೆ ಹೇಳ್ತು ಅಂತ ಮಾಡಿದೆ

ಕಾಳಅಲ್ದಾ…. ನಾಯ್ ಬೆರ್ಸದ್ ಅಲ್ದಾ?

ಸಾಯ್ಬ್ರ್ಅರೇ ನಾನು ನಿಂಗೆ ಹೇಳ್ತು

ಕಾಳನಿಮ್ ಲೆಕ್ದಗೆ ನಾನೇನ್ ನಾಯಾ…?

ಸಾಯ್ಬ್ರ್ಅರೇ ಇದೇನು ಹೇಳ್ತದೆನಾನು ಹೇಳಿದ್ದು ಅಚ್ಚಾ ಅಚ್ಚಾ

ಕಾಳಹಚಾ ಅಂದದ್ದಲ್ದಾಅದಿರ್ಲಿಅಚ್ಚಾ ಅಚ್ಚಾ ಅಂದ್ರ್ ಎಂತದ್..?

ಸಾಯ್ಬ್ರ್ಒಳ್ಳೇದು ಒಳ್ಳೇದು

ಕಾಳಅಚ್ಚಾ ಅಂದ್ರೆಒಳ್ಳೇದಾಹೋಯ್ಲಿ ಬಿಡಿಇದ್ ನಮ್ಮನಿ

ಸಾಯ್ಬ್ರ್ಅಚ್ಚಾ

ಕಾಳ ಮನೀಲ್ ನಾನ್ ನನ್ ಹೆಂಡ್ತಿ ಇಬ್ರೆ ಇಪ್ದ್….

ಸಾಯ್ಬ್ರ್ಅಚ್ಚಾ…..ಅಚ್ಚಾ…..

ಕಾಳಮೊನ್ನೆ ಒಂದಿನ ನಾನಿಲ್ದಿದ್ ಹೊತ್ತಿಲ್ ನಮ್ಮನಿಗೆ ಯಾರೋ ಬಂದ್ರ್

ಸಾಯ್ಬ್ರ್ಅಚ್ಚಾ…..ಅಚ್ಚಾ

ಕಾಳಸಾಯ್ಬ್ರೆಅಚ್ಚಾ ಅಚ್ಚಾ ಅಂದ್ರ್ ಎಂತ ಅಂದ್ರಿ..

ಸಾಯ್ಬ್ರ್ಅರೇಒಳ್ಳೇದು..ಒಳ್ಳೇದು

ಕಾಳಸುಮ್ನಾಯ್ಕಣಾಇದ್ ನಮ್ಮನಿ ಅಂದ್ರೂ ಒಳ್ಳೇದ್ನಾನು ನನ್ ಹೆಂಡ್ತಿ ಇಬ್ರೆ ಇಪ್ದಂದ್ರೂ ಒಳ್ಳೇದ್.. ನಾ ಇಲ್ದಿದ್ ಹೊತ್ತಿಲ್ ಯಾರಾರು ಬಂದಿರ್ ಅಂದ್ರೂ ಓಳ್ಳೇದ್ಯಾರಾಉ ಇದ್ರ್ ಅಂದ್ರೂ ಒಳ್ಳೇದ್ಯಾರಾರು ಸತ್ತ್ ಹೋರ್ ಅಂದ್ರೂ ಒಳ್ಳೇದಾ….

ಸಾಯ್ಬ್ರ್ನಂದೂ ಜಾತಿಲಿ ಹೂಂ ಹೇಳುದಿಲ್ಲನಮ್ದು ಮತ್ತೊಬ್ರು ಮಾತಾಡ್ ಬೇಕಾದ್ರೆ ಅಚ್ಚಾ ಅಚ್ಚಾ ಹೇಳ್ತದೆ..

ಕಾಳಇರ್ಲಿ ಬಿಡಿ.. ಮೊನ್ನೆ ನಾನಿಲ್ದಿದ್ದ್ ಹೊತ್ತಿಗೆ ನಮ್ಮನಿಗೆ ಒಬ್ಬ ಕಾಮುಕ ಬಂದ್ ನನ್ ಹೆಂಡ್ತಿ ಶೀಲ ಹಾಳ್ ಮಾಡಿ ಬಿಟ್ಟ

ಸಾಯ್ಬ್ರ್ಅರೇ ನಿಂದು ಹೆಂಡ್ತಿ ಚೀಲ ಹೋಯ್ತು…? ಚೋಟಾ ಚೀಲ ಹೋಯ್ತಾ.. ಬಡಾ ಚೀಲ ಹೋಯ್ತಾ…?

ಕಾಳನೀ ಎಲ್ಲಿ ಹಪ್ಗೆಟ್ಟನ್ ಮರಾಯಾ….

ಸಾಯ್ಬ್ರ್ಇದೇನಿದು.. ಹಪ್ಪುಗೆಟ್ಟದ್ದು ಹೇಳ್ತದೆ…. ನಂಗೇ ನೀನು ಬೈತದೆಬೈತದೇ….?

ಕಾಳಅಲ್ದಾಬಯ್ಯದ್ದಲ್ದಾಹಪ್ಗೆಟ್ಟನ್ ಅಂದ್ರೆ ಭಾರೀ ಒಳ್ಳೆಯನ್ ಅಂದೇಳಿ….

ಇಕಾಣ್ ಚೀಲ ಅಲ್ಲನಾನಿಲ್ದಿದ್ ಹೊತ್ತಿಗೆ ಒಬ್ಬ ಕಾಮುಕ ಬಂದ್ ನನ್ ಹೆಂಡ್ತಿ ಶೀಲ ಹಾಳ್ ಮಾಡಿದನನ್ ಮರ್ಯಾದಿಯೇ ಹೋಯ್ತ್ಮರ್ಯಾದಿ ಹೋರ್ ಮೇಲೆ ಊರಂಗೆ ತಲಿ ಎತ್ಕಂಡ್ ತಿರ್ಗುದಾರು ಹ್ಯಾಂಗೆಅದ್ಕೇ ಎಲ್ಲಾರೂ ಹೋಯಿ ಸಾವುದಂದೇಳಿ ಮಾಡಿದೆನೀವ್ ಬಂದ್ರಿನಿಮ್ಮತ್ರ ಎಲ್ಲಾ ಹೇಳ್ದೆ…. ನನ್ ಮರ್ಯಾದಿ ಹೋರ್ ಮೇಲೆ ನಾ ಯಾಕಾರೂ ಬದ್ಕ್ಕ್ ಹೇಳಿನಿ

ಸಾಯ್ಬ್ರ್ಅರೇ ಮರ್ವಾದಿ ಹೋಯ್ತು….ಯಾರಿಂದ ಹೋಯ್ತು..

ಕಾಳಬೇರೆ ಯಾರಿಂದ್ಲೂ ಅಲ್ಲ ಸಾಯ್ಬ್ರೆ…. ಊರಿನ ಮಹಾರಾಜ ವೀರ್ಯಗುಪ್ತ ಅಂದೇಳಿ. ಅವ್ರಿಂದ್ಲೇ ನನ್ ಹೆಂಡ್ತಿ ಶೀಲ ಹಾಳಾಯ್ತ್

ಸಾಯ್ಬ್ರ್ಅದ್ಕೇ ನೀನು ಸಾಯ್ತದೇ…. ಅರೇ ಕಾಳುನೀನು ಸಾಯ್ಬೇಡ…. ಸತ್ರೇ ಜೀವ ಹೋಗ್ತದಲ್ಲ

ಕಾಳಜೀವ್ ಹೋತ್ತ್

ಸಾಯ್ಬ್ರ್ಜೀವ ಓದ್ರೆ ಪ್ರಾಣ ಓಗ್ತದಲ್ಲ

ಕಾಳಎಂತಾ

ಸಾಯ್ಬ್ರ್ಅರೇಜೀವ ಓದ್ರೆ ಪ್ರಾಣ ಓಗ್ತದಲ್ಲ

ಕಾಳ – (ಸಾಯ್ಬ್ರ್ ಮಾತಾಡು ಸ್ವರದಗೆ….)ಹೌ..ಲ್ಲಾ..

ಜೀವ ಅಂದ್ರ್ ಪ್ರಾಣಪ್ರಾಣ ಅಂದ್ರ್ ಜೀವ…. ಎರ್ಡೂ ಹ್ವಾರ್ ಮೇಲೆ ಎಂತದೂ ಇಲ್ಲ….

ಸಾಯ್ಬ್ರ್ಅರೆ ಅಲ್ಲಾ

ಕಾಳಅಲ್ಲ ಅಂದೇಳ್ರ್ ಹಿಡ್ಕಂಡ್ ಬಡ್ದ್ ಬಿಡ್ವೆಸಿಟ್ ಬಂದ್ರ್ ನಾ ಮನ್ಸನೇ ಅಲ್ಲ..

ಸಾಯ್ಬ್ರ್ಅರೇ ನೀನು ಯಾಕೆ ಸಿಟ್ಟು ಮಾಡ್ತದೆ

ಕಾಳಇಲ್ಲ ಇಷ್ಟೂ ನೆಡದ್ ಹೌದ್ ನೀವ್ ಬಂದ್ಕಂಡ್ ಅಲ್ಲ ಅಂತ್ರ್ಯಲ

ಸಾಯ್ಬ್ರ್ಅರೆ ಕಾಳು ನಿಂದು ಮಂಡೆ ಎಲ್ಲಿ ಇಟ್ಟಿದ್ದೆ ನೀನು

ಕಾಳಎಚಿತ ಅರೆ ಕಾಳು  ಅರೆ ಕಾಳು ಅಲ್ಲ ಇಡೀ ಕಾಳು

ಸಾಯ್ಬ್ರ್ ಇಡೀ ಕಾಳು

ಕಾಳಇಗಾಣಿ ಹಾಂಗಿಂದೆಲ್ಲ ಹೇಳ್ಬೇಡಿ ಬರೀ ಕಾಳು ಅಂದೇಳಿ

ಸಾಯ್ಬ್ರ್ಬರೀ ಕಾಳು

ಕಾಳಮತ್ ಸುರುವಾಯ್ತಲ ಇವ್ರದ್

ಸಾಯ್ಬ್ರ್ಅರೇ ಕಾಳು ಅಂದ್ರೆ ಇಡೀ ಕಾಳು ಅಂತ ಹೇಳ್ತದೆಇಡೀ ಕಾಳು ಅಂದ್ರೆ ಬರೀ ಕಾಳು ಹೇಳ್ತದೆ

ಕಾಳಯಾವ್ದೂ ಬೇಡಕಾಳುಸಾಕ್

ಸಾಯ್ಬ್ರ್ಯಾವ್ದೂ ಬೇಡ ಕಾಳು

ಕಾಳಅಗ ಮತ್….

ಸಾಯ್ಬ್ರ್ಕಾಳುನಿನ್ಗೆ ಹೇಗೆ ಮಾತಾಡುದು ನಾನು

ಕಾಳಎಂಥಾರೂ ಹೇಳಿನಿಯತ್ ನೀವ್

ಸಾಯ್ಬ್ರ್ಅರೇ ಕಾಳು.. ನೀನು ಚಲೋ ಚಲೋ

ಕಾಳಅದಿರ್ಲಿನೀವ್ ಅಲ್ಲ ಅಂದ್ರ್ಯಲ ಎಂಥಕೆ?

ಸಾಯ್ಬ್ರ್ನಾನು ನಿಂದು ವಿಷ್ಯ ಅಲ್ಲ ಅಂತ ಹೇಳಿದ್ದಲ್ಲಅರೇ ನಮ್ದು ಭಗವಾನ್ ಇಲ್ಲಾನಮ್ದು ಅಲ್ಲಾ ದೇವ್ರು ಇಲ್ಲಾ

ಕಾಳಹೋನಿಮ್ದ್ ಅಲ್ಲ ದೇವ್ರು ಇಲ್ಲ್ಯಾ?

ಸಾಯ್ಬ್ರ್ಅಲ್ಲ ದೇವ್ರು ಇಲ್ಲ ಅಂತ ಹೇಳ್ತದೆಹಾಗಲ್ಲನಮ್ದು ಅಲ್ಲ ದೇವ್ರು ಇಲ್ಲಾ

ಕಾಳಇಲ್ಲಇಲ್ಲಾ…. ಹಾ ಹಾಇತ್ತ್ ಇತ್ತ್

ಸಾಯ್ಬ್ರ್ಅರೇನಿಮ್ದು ಕುಟುಂಬದಲ್ಲಿ ಹೀಗಾಯ್ತಲ್ಲ ಅಂತ ನಮ್ದು ಅಲ್ಲಾ ದೇವ್ರ ನೆನ್ಪು ಮಾಡ್ತು

ಕಾಳಹೋ ಹಾಂಗೆಇಲ್ಲ್ ನೆಡದ್ ಅಲ್ಲ ಅಂದೇಳಿ ಹೇಳದ್ದಲ್ಲದೇವ್ರ್ ನೆನ್ಪ್ ಮಾಡದ್ದಾ?

ಸಾಯ್ಬ್ರ್ ಕಾಳು ನೀನು ಸಾಯ್ಬೇಡನೀನು ಚಲೋ ಚಲೋಆಸ್ತಾನ್ ಕೋ ಚಲೋ

ಕಾಳ ಚಲೋ ಅಂದ್ರೆ ಎಂತ ಸಾಯ್ಬ್ರೆ…?

ಸಾಯ್ಬ್ರ್ಅರೆ ಚಲೋ ಚಲೋ.. ಓಗುಓಗು

ಕಾಳಎಲ್ಲಿಗೆ…?

ಸಾಯ್ಬ್ರ್ಆಸ್ತಾನ್ ಕೋ ಚಲೋ

ಕಾಳಸಾಸ್ತಾನ ಅಂದ್ರೆ ಬ್ರಹ್ಮಾವರದ್ ಬುಡ್ದಲ್ ಅಲ್ದಾ?

ಸಾಯ್ಬ್ರ್ಅರೇ ಇದೇನು ಹೇಳ್ತದೆ…?

ಕಾಳಅಲಾಸಾಸ್ತಾನ, ಬ್ರಹ್ಮಾವರ ಬದಿಯಲ್ ಅಲ್ದಾ..?

ಸಾಯ್ಬ್ರ್ನಿಮ್ದು ನವಾಬ ಇಲ್ಲಾ

ಕಾಳನವಾಬ್ನಾ…?

ಸಾಯ್ಬ್ರ್ಅರೇ ನಿಮ್ದು ಮಹಾರಾಜ ಇಲ್ಲಾ

ಕಾಳಹಾ ಇದ್ರ್ ಇದ್ರ್

ಸಾಯ್ಬ್ರ್ಆಸ್ಥಾನ್ ಕೋ ಚಲೋ ಔರ್ ಮಹಾರಾಜ್ ಸೇ ಬೋಲೊಮಹಾರಾಜ ನ್ಯಾಯ ಕೊಡ್ಬೇಕಲ್ಲ

ಇಲ್ಲಿ ನೋಡುನ್ಯಾಯಿ ತೆಪ್ಪು ಮಾಡ್ಲಿಞರಿ ತೆಪ್ಪು ಮಾಡ್ಲಿ

ಕಾಳಎಂಥಾ ನ್ಯಾಯಿ ಞರಿ ಅಂತ್ರಿ ಸಾಯ್ಬ್ರ್ರೆ

ಸಾಯ್ಬ್ರ್ಬಡವ ತೆಪ್ಪು ಮಾಡ್ಲಿ, ಶ್ರೀಮಂತ ತೆಪ್ಪು ಮಾಡ್ಲಿ.. ಅರೇ ಭಟ್ರು ತೆಪ್ಪು ಮಾಡ್ಲಿ, ಶೆಟ್ರು ತೆಪ್ಪು ಮಾಡ್ಲಿ

ಕಾಳಇಗಾಶೆಟ್ರ್..ಭಟ್ರ್ ಸುದ್ದಿ ಬ್ಯಾಡ.. ಹ್ವಾ….

ಸಾಯ್ಬ್ರ್ಯಾರು ತೆಪ್ಪು ಮಾಡಿದ್ರು ತೆಪ್ಪು ತೆಪ್ಪೇ ಅಲ್ವಾ? ಮಹಾರಾಜ ನ್ಯಾಯ ಕೊಡ್ಬೇಕಲ್ಲನೀನು ಓಗಿ ಕೇಳುಮಹಾರಾಜ ನ್ಯಾಯ ಕೊಡ್ಲಿಲ್ಲಹೊಳೆಗೆ ಬಿದ್ದು ಸಾಯಿನಾನು ನೋಡ್ತದೆ

ಕಾಳಒಹೋನೀವ್ ನಮ್ಗ್ ಉಪ್ಕಾರ ಮಾಡುದ್ ಇಷ್ಟೇನಾನ್ ಸಾವತಿಲ್ ನೀವ್ ಮೇಲ್ ನಿಂತ್ಕಂಡ್ ಕಾಂತ್ರಿ ಅಲ್ದಾ…?

ಸಾಯ್ಬ್ರ್ಅಷ್ಟೊತ್ತಿಗೆ ನಾನು ಮಹಾರಾಜನಲ್ಲಿ ಓಗಿ ಕೇಳ್ತದೆನೀನು ಯಾಕೆ ನ್ಯಾಯ ಕೊಡ್ಲಿಲ್ಲ ಅಂತ ಕೇಳ್ತದೆ

ಕಾಳಆಯ್ಲಿ ಸಾಯ್ಬ್ರೆಒಳ್ಳೇ ಹೊತ್ತಿನಂಗ್ ಬಂದ್ರಿಬಂದ್ ನಂಗೊಂದ್ ದಾರಿ ತೋರ್ಸಿರಿನಾನ್ ಮಹಾರಾಜ್ರ್ ಬುಡ್ಕ್ ಹೋತೆಹೋಯಿ ನ್ಯಾಯ ಕೇಂತೆನ್ಯಾಯ ಸಿಕ್ದಿರೆ ನೀವ್ ಹೇಳ್ದಂಗೆ ಮಾಡ್ತಿಆರ್ ಒಂದ್ ಕೆಲ್ಸನಾನ್ ಅಲ್ಲಿಗ್ ಹೋತೆನೀವೆಲ್ಲಿಗೆ ಹೋತ್ರಿ..?

ಸಾಯ್ಬ್ರ್ನೀನು ಅಲ್ಲಿಗೆ ಓಗುನೀನು ಬರುವವರೆಗೆ ನಿನ್ನ ಮನೆಯಲ್ಲಿ ನಿಂದು ಹೆಂಡ್ತಿ ಒಬ್ಳೇ ಇರ್ತದಲ್ಲ..

ಕಾಳಹೌದ್.. ಅದಕ್ ಏನೀಗ…?

ಸಾಯ್ಬ್ರ್ನಾನು ಇಲ್ಲಿ ಇರ್ತದೆನೀನು ಅಲ್ಲಿಗೆ ಓಗು

ಕಾಳನೀವಿಲ್ ಇಪ್ಪುದ್ಯಾಕೆ?

ಸಾಯ್ಬ್ರ್ಅದೇ ನಿನ್ನ ಹೆಂಡ್ತಿ ಒಬ್ಳೇ ಇರ್ತದಲ್ಲನಾನು ನಿಂದು ಹೆಂಡ್ತಿಗೆ ರಸ್ಕಿಣಿ ಮಾಡ್ತದೆ

ಕಾಳನೀವ್ ರಸ್ಕಿಣಿ ಮಾಡುದು ಬ್ಯಾಡ.. ಎಂತ ಮಾಡುದು ಬ್ಯಾಡ.. ಎಲ್ಲಾ ಅಂಜಾದಾತ್ ಹ್ವಾಯ್

ಸಾಯ್ಬ್ರ್ಅರೇ ನಮ್ದು ಈಗ ಏನು ಮಾಡ್ಬೇಕು…?

ಕಾಳಏನ್ ಮಾಡ್ಕಂದೇಳಿ ನಾನ್ ಹೇಳ್ತಿ ಹ್ವಾಯ್ಈಗ ಇಲ್ಲಿವರಿಗ್ ಬಂದ್ ಇಂಥದ್ ಮಾಡ್ ಅಂದೇಳಿ ಹೇಳ್ದರೂ ನೀವೆನಿಮ್ಮನೇನ್ ನಾನ್ ಕರಿಲ್ಲ.. ಆರೂ ಉಪ್ಕಾರ ಮಾಡ್ತ್ರಿ ಅಂದೇಳಿ ಹೇಲ್ತ್ರಿಯಲ್ದಾ.. ಹಾಂಗಿದ್ರ್ ಒಂದ್ ಕೆಲ್ಸ ಮಾಡಿ

ಸಾಯ್ಬ್ರ್ಬೋಲೋ

ಕಾಳನಾನ ರಾಜನ ಆಸ್ಥಾನಕ್ಕೆ ಹೋತೆನನ್ನೊಟ್ಟಿಗೆ ನೀವೂ ಬನಿ, ನಾನ್ ಹೇಳದ್ ಹೌದ್ ಅಂದೇಳಿ ನೀವ್ ಸಾಕ್ಷಿ ಹೇಳಿ

ಸಾಯ್ಬ್ರ್ಆಸ್ಥಾನದಲ್ಲಿ ನಾನು ಸಾಕ್ಷಿ ಹೇಳ್ಬೇಕು…? ಅಲ್ಲಿ ರಾಜ್ ಇದ್ರೆ ನಾನು ಸಾಕ್ಷಿ ಹೇಳ್ತದೆಮಹಾರಾಜ ಇದ್ರೆ ನಾನು ಸಾಕ್ಷಿ ಹೇಳ್ತದೆ

ಕಾಳರಾಜರು ಇಲ್ದೇ ಎಲ್ಲಿಗ್ ಹೋತ್ರ್ಬನಿ ಹೋಪ

ಸಾಯ್ಬ್ರ್ಅರೇಚಲೋಚಲೋನೀನು ಮುಂದೆ ಮುಂದೆ ಓಗುನಾನು ಹಿಂದೆ ಹಿಂದೆ ಬರ್ತದೆ.. ಚಲೋ ಚಲೋ

 

(ಅಷ್ಟೊತ್ತಿಗೆ ನಾಗ್ವೇಣಿ ಬೊಬ್ಬಿ ಹೊಡುಕ್ ಶುರು ಮಾಡ್ತ್ಲ್…)

ನಾಗ್ವೇಣಿಹ್ವಾಯ್ ಇಲ್ಕಾಣಿ.. ಇಲ್ಕಾಣಿನನ್ ಮೈ ಮುಟ್ತಾಅಂವ

ಸಾಯ್ಬ್ರ್ ಲಡ್ಕೀ ಲಡ್ಕೀ

ಕಾಳಏನಾಮುಂದ್ ಮುಂದ್ ಹೋಯ್ನಿ ಅಂದೇಳಿ ಹೇಳ್ಕಂಡ್ನಾ ಮುಂದ್ ಹೋಪತಿಲ್ ಹಿಂದಿಂದ್ ನನ್ ಹೆಂಡ್ತಿ ಮೈ ಮುಟ್ತ್ಯಾ? ಏನಾಎಂತದ್ ನಿನ್ ಕತಿಎಂತ ಅಂದೇಳಿ ಮಾಡಿದ್ಯಾ ನೀನ್

ಸಾಯ್ಬ್ರ್ನಾನು ಮುಟ್ಟಿದ್ದಲ್ಲಮುಟ್ಟಿ ಹೋದದ್ದು….

ಕಾಳಎಂತದ್ಮುಟ್ಟಿ ಹೋದ್ದಾನಿನ್ ನಿನ್…. ನೀ ಆಗಳಿಂದೀಚಿಗ್ ಏನೋ ಒಂಥರಾ ಮಾತಾಡ್ತಿದ್ದೆನಿನ್ ಕಂಡ್ರ್ ನಂಗ್ ಅನ್ಮಾನ ಬತ್ ಬಲ್ಯಾ

ಸಾಯ್ಬ್ರ್ಅರೇ ನಮ್ದು ಮ್ಯಾಲೆ ನಿಂಗೆ ಯಾಕೆ ಅನ್ಮಾನ…?

ಕಾಳಅನ್ಮಾನ ಯಾಕಂದ್ರೆ.. ಇದನ್ನೆಲ್ಲಾ ಕಾಂತಿದ್ರೆ.. ನಿಂದ್ ಯಾಸ ಆಯಿ ಕಾಣತ್ ಬಲ್ಯಾ…?

ಸಾಯ್ಬ್ರ್ಅರೇಬರ್ಕತ್ತಿಲ್ಲ ಖಾನ್ಉಉ

ಕಾಳಬರ್ಕತ್ತಿಲ್ಲಪುರ್ಸೊತ್ತಿಲ್ಲ… (ಗಡ್ಡ ಹಿಡ್ದ್ ಎಳಿತಗಡ್ಡ ಕಳ್ಚಿ ಕೈಗ್ ಬತ್ತ್)

..ಹೋಗಡ್ಡ ಕಟ್ಕಂಡ್ ಇಲ್ಲಿವರಿಗ್ ಬಂದನಾ ನೀನ್.. ನೀನ ಯಾರಾ…?

ನಾಗ್ವೇಣಿಹ್ವಾಯ್.. ಮೊನ್ನೆ ಬಂದ್ ನನ್ ಶೀಲ ಹಾಳ್ ಮಾಡದ್ ಇವ್ನೇಇವ್ನೇ..

ಕಾಳಒಹೋಇದ್ ಬ್ಯಾರೆ ಯಾರೂ ಅಲ್ಲಇದ್ ಮಹಾರಾಜವೀರ್ಯಗುಪ್ತ

ಎಂಥಾ ಕೆಲ್ಸ ಮಾಡಿಬಿಟ್ಟೆಮಹಾರಾಜ…. ಎಂಥಾ ಕೆಲ್ಸ ಮಾಡಿಬಿಟ್ಟೆ

 

( ಕಾಳನಿಗೂ ಮಹಾರಾಜನಿಗೂ ಜೋರ್ ಜೋರ್ ಮಾತ್ ಆತ್ತ್ಕಡಿಗೆ ಕಾಳ ಮಹಾರಾಜನ ಎದುರು ಹುಲಿ ಕಣಗೆ ಅಬ್ರ ತೋರ್ಸಿಕತ್ತಿ ತಕಂಡ್ ಅವನ್ನೇ ಕೊಂದ್ ಹಾಕಿಹೆಂಡ್ತಿಯೊಟ್ಟಿಗೆ ಹೊಳಿಗ್ ಹಾರಿ ಜೀವ ತೆಕ್ಕಂತ)


ಸುಮಾರ್ ದಿವ್ಸ್‌ದ್ ಹಿಂದೆ ಕಾಳನ್ ಕತಿ ಇದೇ ಬ್ಲಾಗಗೆ ಓದದ್ ನೆನ್ಪ್ ಇತ್ತಾ? ಅದ್ರದ್ ಮುಂದಿನ್ ಭಾಗ ಇಲ್ಲಿತ್ತ್ ಕಾಣಿ…

 

ಕಾಳ ಮತ್ ನಾಗ್ವೇಣಿ ಜಗ್ಳ ಮಾಡ್ತಾ ಇಪ್ಪತಿಗೆ ಒಬ್ರ್ ಸಾಯ್‌ಬ್ರ್ ಒಳ್ಗ್ ಬತ್ರ್.

ಅವ್ರಿಬ್ರ್ ಲಡಾಯಿ ಮಾಡತ್ ಕಂಡ್ ಸಾಯ್ಬ್ರ್ ಕೇಂತ್ರ್…

 

ಸಾಯ್ಬ್ರ್- ಅರೇ ಕ್ಯಾರೇ… ಅರೇ ಕ್ಯಾರೇ

ಕಾಳ – ಅದೆಲ್ ಬಂತೆ…?

ಸಾಯ್ಬ್ರ್- ಅರೇ…ನಿಮ್ದು ಏನು ಹುಡುಕ್ತದೆ…

ಕಾಳ – ಅದೇ ನೀವ್ ಕ್ಯಾರಿ ಕ್ಯಾರಿ ಅಂದ್ರ್ಯಲ್ದಾ…. ನಾ ಹಂಗಾರ್ ಹಾವ್ ಗಿನ್ ಒಳ್ಗ್ ಬಂದಿತಾ ಕಾಂತಿದ್ದೆ…

ಸಾಯ್ಬ್ರ್-ಆವು ನಹೀ ಕ್ಯಾರೇ… ಅರೆ ಕ್ಯಾರೇ

ಕಾಳ – ಹಾವು ನಹೀ ಕ್ಯಾರೇ ಅಂಬ್ದೇ ಒಂಜಾತಿ ಹಾವಾ?

ಸಾಯ್ಬ್ರ್- ಅರೆ ನಿಮ್ದು ಏನು ಹೇಳ್ತದೆ… ಕ್ಯಾರೆ ಕ್ಯಾರೆ… ಅಂದ್ರೆ ಏನು ಏನು…

ಕಾಳ – ಕ್ಯಾರೆ ಆಂದ್ರೆ ಏನಾ…. ಏನಂದೇಳಿ ಹೇಳ್ವ…ಅದಿರ್ಲಿ…ನಾನು.. ನನ್ ಹೆಂಡ್ತಿ ಒಳ್ಗಿಪ್ಪತಿಗೆ ಪುಸಕ್ಕ್‌ನೆ ಒಳ್ಗ್ ಬಂದ್ರ್ಯಲ… ನೀವ್ ಯಾರ್… ಎಲ್ಲಿಗ್ ಹೋಪರ್? ಈ ಬದಿಗ್ ಏನ್ ಬಂದ್ರಿ?

ಸಾಯ್ಬ್ರ್- ನಿಮ್ದು ರಾಜಾ ರಸ್ತಾ ಇಲ್ಲಾ..

ಕಾಳ – ಎಂತದ್…. ನೀವ್ ಸಲ್ಪ್ ಸಮ್ ಮಾಡಿ ಹೇಳಿನಿ ಮರಾಯ್ರೆ

ಸಾಯ್ಬ್ರ್- ಅರೆ ನಿಮ್ದು ರಾಜ ರಸ್ತಾ… ರಸ್ತೆ..ರಸ್ತೆ ಇಲ್ಲಾ…

ಕಾಳ – ಹಾಂ..ಹಾಂ..ರಸ್ತಿ… ಇದ್ದಿತಲೆ

ಸಾಯ್ಬ್ರ್- ಆ ರಸ್ತೆಯಲ್ಲಿ ನಮ್ದು ಹೋಗ್ತಾ ಇತ್ತು…

ಕಾಳ – ನಿಮ್ದ್ ರಸ್ತಿಯಗೆ ಹೋಪತಿಗೆ ನೀವೆಂತ ಮಾಡ್ತಿದ್ದಿರಿ?

ಸಾಯ್ಬ್ರ್- ಅರೇ…. ನಮ್ದು ಹೋಗ್ತಾ ಇತ್ತು…

ಕಾಳ – ಹಾ… ನೀವ್ ಹೋತಿದ್ದಿರ್ಯಾ…. ಎಲ್ಲಿಗ್ ಹೋತಿದ್ದಿರಿ?

ಸಾಯ್ಬ್ರ್- ಅರೆ ನಮ್ದು ದುಕಾನ್ ಇಲ್ಲಾ…

ಕಾಳ – ಎಂತದ್…. ದು..ಕಾ..ನಾ…?

ನಾಗ್ವೇಣಿ – ಹ್ವಾಯ್ ಅವ್ರ್ ದೂರ್ದಿಂದ್ ಬಂದರಂಬ್ರೆ…

ಕಾಳ – ನೀ ಸಲ್ಪ ಸುಮ್ನಾಯ್ಕಂತ್ಯಾ ಇಲ್ಯಾ….ಕಡ್ದ್ ಬಿಸಾಕಿ ಬಿಡ್ವೆ ನಿನ್ನೀಗ..

ಸಾಯ್ಬ್ರ್- ಆ ಚೋಕ್ರಿ ಏನು ಹೇಳ್ತದೆ…?

ಕಾಳ – ಏಯ್… ಚೋಕ್ರಿ ಅಲ್ದಾ…ಅದ್ ನನ್ ಹೆಂಡ್ತಿ…

ಸಾಯ್ಬ್ರ್- ಹೇಂಡ್ತಿ… ಏ ಹೇಂಡ್ತಿ… ಏ ಹೆಂಡ್ತಿ…

ಕಾಳ – ಏಯ್… ಏನಾ… ನಂಗ್ ಹೆಂಡ್ತಿಯಾರೆ ಬಂದ್ ನಿಂಗೂ ಹೆಂಡ್ತಿಯನಾ?

ಸಾಯ್ಬ್ರ್- ನಿಂದೂ ಹೆಂಡ್ತಿ… ಅರೆ ಉಸ್ಕೆ ನಾಮ್ ಬೋಲೋ…

ಕಾಳ – ಈಗಾಣ್ ನೀ ಉಸ್ಕ್ ಪುಸ್ಕ್… ಅಂದ್ರೆ ನಂಗ್ ಗೊತ್ತಾತಿಲ್ಲ ಮರಾಯ

ಸಾಯ್ಬ್ರ್- ಉಸ್ಕಿ ನಾಮ್… ಅದ್ರದ್ದು ಹೆಸ್ರು ಹೇಳು.. ಬೋಲೋ ಬೋಲೋ.

ಕಾಳ – ಅವ್ಳ್ ಹೆಸ್ರು ಬೋಳು ಅಂದೇಳಿ ನಿಂಗ್ಯಾರ್ ಹೇಳದ್?

ಸಾಯ್ಬ್ರ್- ಅದ್ರದ್ದು ಎಸ್ರು..ಹೇಳು..ಹೇಳು

ಕಾಳ – ಅವ್ಳ್ ಹೆಸ್ರ್ ನಾಗ್ವೇಣಿ ಅಂದೇಳಿ

ಸಾಯ್ಬ್ರ್- ಅರೇ ನಾಗ್‌ಮ್ಯಾಣಿ

ಕಾಳ – ನಾಗ್‌ಮ್ಯಾಣಿ ಅಲ್ಲ… ಕುಷ್ಟ್ ಮ್ಯಾಣಿ…

ಸಾಯ್ಬ್ರ್- ಕುಷ್ಟ್‌ಮ್ಯಾಣಿ… ಕುಷ್ಟ್‌ಮ್ಯಾಣಿ

ಕಾಳ – ಇಗಾ ನಿಂಗ್ ಹೇಳುಕ್ ಬತ್ತಿಲ್ಲ. ಅವ್ಳ್ ಹೆಸ್ರು ನಾಗು ಅಂದೇಳಿ…

ಸಾಯ್ಬ್ರ್- ಅಚ್ಚಾ…ತುಮಾರಾ ನಾಮ್‌ಕೋ ಬೋಲೋ..

ಕಾಳ – ನೀ ಬರೀ ಅಲ್ದಿದ್ದೆಲ್ಲ ಹೇಳ್ಬೆಡ ಮರಾಯ…

ಸಾಯ್ಬ್ರ್- ಅರೆ ನಿಂದು ನಮ್ದುಕೆ ಮಸ್ಕಿರಿ ಮಾಡ್ತದೆ…

ಕಾಳ – ಮತ್ ನೀ ಎಂತ ಹೇಳುದ್ ಅದನ್ನಾರೂ ಸಮ್ ಮಾಡಿ ಹೇಳ್

ಸಾಯ್ಬ್ರ್- ತುಮಾರಾ…ನಾಮು..ಉ ನಿಂದು ಎಸ್ರು ಹೇಳು…

ಕಾಳ – ಓ ನನ್ ಹೆಸ್ರಾ.. ನನ್ ಹೆಸ್ರ್ ಕಾಳ ಅಂದೇಳಿ

ಸಾಯ್ಬ್ರ್- ನಿಮ್‌ದು ಗಂಡಾ ಹೆಣ್ತಿ..?

ಕಾಳ – ಹಾ.. ನಾವಿಬ್ರ್ ಗಂಡ-ಹೆಂಡ್ತಿ

ಸಾಯ್ಬ್ರ್- ನಮ್ದು ದುಕಾನಾ ಅಂದ್ರೆ ನಿಂಗೆ ಗೊತಾಗ್‌ಲಿಲ್ಲ…ಅಂಗ್ಡಿ ಅಂಗ್ಡಿ ಗೊತ್ತಿಲ್ಲ…

ಕಾಳ – ಅಂಗ್ಡಿಯಾ…. ಆಯ್ಲಿ… ಎಂತ ಅಂಗ್ಡಿ?

ಸಾಯ್ಬ್ರ್- ನಮ್ದು ಬಡಾ ದುಕಾನಾ..ಬಹುತ್ ಬಡಾ…

ಕಾಳ – ನೀ ಬಡವ್‌ನಾ.. ನಾವ್ ಮೊದ್ಲೇ ಬಡ್ವರ್… ನೀ ಇಲ್ಲಿಗ್ ಯಾಕೋ ಬಂದೆ ಮಾರಾಯಾ..

ಸಾಯ್ಬ್ರ್- ಬಡಾ ಅಂದ್ರೆ ದೊಡ್ದು.. ದೊಡ್ದು…

ಕಾಳ – ಹೋ ಬಡಾ ಅಂದ್ರ್ ದೊಡ್ದಾ…. ಅಡ್ಡಿಲ್ಲೆ.. ಎಂತ ಅಂಗ್ಡಿ?

ಸಾಯ್ಬ್ರ್- ಕಪಡಾ..ಕಪಡಾ…..

ಕಾಳ – ಕವ್ಡಿ ಕವ್ಡಿ.. ಎಂತ ಅಂದೇಳಿ ಸಮ್ ಮಾಡಿ ಹೇಳಾ

ಸಾಯ್ಬ್ರ್- ಅರೇ ಇದರ್ ದೇಖೋ ಕಪ್ಡಾ..ಕಪ್ಡಾ… ( ಅಂಗಿ ತೋರ್ಸಿ ಹೇಳ್ತ್ರ್…)

ಕಾಳ – ವಸ್ತ್ರದಂಗಡಿ ಸಾಯ್ಬ್‌ರಾ ನೀವ್

ನಾಗ್ವೇಣಿ- ಹ್ವಾಯ್… ಅವ್ರ್ ಅಂಗ್ಡಿಯಗೆ ಲಾಯ್ಕ್ ಲಾಯ್ಕಿದ್ ಸೀರಿ ಇದ್ದಿರ್ಕ್… ಕಂಡ್ಕಂಡಾರೂ ಬರ್ಲಕಿದ್ದಿತ್ ಅಲ್ದೇ?

ಸಾಯ್ಬ್ರ್- ಹಮಾರೇ ದುಕಾನ್ ಮೇ ಕಾಶಿ ಶೀರೆ ಮಿಲೆಗಾ, ಕಾಶ್ಮೀರಿ ಶೀರೆ ಮಿಲೆಗಾ, ರೇಶ್ಮೆ ಶೀರೆ ಮಿಲೆಗಾ… ಸ್ವದೇಶಿ ಶೀರೆ ಮಿಲೆಗಾ… ವಿದೇಶಿ ಶೀರೆ ಮಿಲೆಗಾ…ಔರ್ ಬನಾರಸಿ ಶೀರೆ ಭೀ ಮಿಲೇಗಾ…

ನಿಂದು ಹೆಣ್ತಿ ಕಳ್ಸು.. ನಮ್ದು ಒಂದು ಶೀರಿ ಉಡ್ಸಿ ಕಳ್ಸ್‌ತದೇ…

ಕಾಳ – ಹ್ವಾಯ್…

ಸಾಯ್ಬ್ರ್- ನಮ್ದು…ಶೀರಿ ಉಡ್ಸಿ ಕಳಿಸ್ತದೆ..

ಕಾಳ – ಹೋ.. ಅಡ್ಡಿಲ್ಲ…ಅವ್ಳ್ ಬಪ್ಪುಕೆ.. ನೀ ಸೀರಿ ಉಡ್ಸಿ ಕಳ್ಸುಕೆ.. ಅಡ್ಡಿಲ್ಲ.. ಎಲ್ಲಾ ನಿಮ್‌ನಿಮ್ಮೊಳ್ಗೇ ಅಲ್ದಾನಾ?

ಸಾಯ್ಬ್ರ್- ಅರೇ.. ಬರ್ತದೆ ಅಂತ ನಿಂದು ಹೆಣ್ತಿ ಹೇಳ್ತಲ್ಲ..

ಕಾಳ – ಸುಮ್ನಾಯ್ಕಣಾ..ಬರೀ ಅಲ್ದಿದ್ದೆಲ್ಲ ಮಾತಾಡ್‌ಬೇಡ…

ಹ್ವಾಯ್ಲಿ…. ಎಂತ ವಸ್ತ್ರದ್ ಅಂಗ್ಡಿ ಸಾಯ್ಬ್ರ್ ಅಂದ್ರ್ಯಾ.. ನಿಮ್ ಹೆಸ್ರ್…

ಸಾಯ್ಬ್ರ್- ಪುರ್ಸೊತ್ತಿಲ್ಲ ಖಾನ್…

ಕಾಳ – ಎಷ್ಟೊತ್ತಿಗೂ ಪುರ್ಸೊತ್ತಿಲ್ಯಾ ನಿಮ್ಗೆ…?

ಸಾಯ್ಬ್ರ್- ಅರೇ ನಮ್ದು ಎಸ್ರು ಹೇಳ್ತು

ಕಾಳ – ಎಂತ ಪುರ್ಸೊತ್ತಿಲ್ಲ ಖಾನ್‌ಆಆ.. ನಿಮ್ ಅಪ್ಪ್‌ಯ್ನ್ ಹೆಸ್ರ್..

ಸಾಯ್ಬ್ರ್- ಬರ್ಕತ್ತಿಲ್ಲ ಖಾನ್…

ಕಾಳ – ಸಮ್ನೇ. ನಿಮ್ಗ್ ಪುರ್ಸೊತ್ತಿಲ್ಲ… ಅವ್ರಿಗೆ ಬರ್ಕತ್ತಿಲ್ಲ…. ಅದಿರ್ಲಿ.. ಇಲ್ಲಿಗೇನ್ ಬಂದ್ರಿ..

ಸಾಯ್ಬ್ರ್- ಅದೇ ನಮ್ದು ರಾಜಾ ರಸ್ತೆಯಲ್ಲಿ ಹೋಗುವಾಗ ನಿಮ್ದು ಗಲಾಟಾ ನಡಿತಿತ್ತಲ್ಲಾ.. ಸಾಕಾ ಬೇಕಾ ಕೇಳ್ತಿತ್ತಲ್ಲ..ಹೊಡ್ಕೊಳ್ತಿತ್ತಲ್ಲಾ ನಿಮ್ದು… ನಿಮ್ದು ಯಾಕೇ ಹೊಡ್ಕೊಳ್ತು…ನಾನು ನೋಡ್ತದೆ…ಪಂಚತ್ಗಿ ಮಾಡ್ತದೆ…

ಕಾಳ – ನೀ ಎಂಥ ಕರ್ಮ್‌ದ್ ಪಂಚತ್ಗಿ ಮಾಡ್ತೆ ಮರಾಯಾ..

ಸಾಯ್ಬ್ರ್- ಅರೇ ನಮ್ದುಕೇ ಪಂಚತ್ಗಿ ಮಾಡ್ಲಿಕ್ಕೆ ಬರ್ತದೆ…ನೀನು ಏಳು… ನಾನು ಕೇಳ್ತದೆ… ನ್ಯಾಯ ತೀರ್ಮಾನ ಕೊಡ್ತದೆ…

ಕಾಳ – ಆಯ್ಲಿ ಸಾಯ್ಬ್ರೆ… ಒಳ್ಳೇ ಹೊತ್ತಿನಗೇ ಬಂದ್ರಿ ನೀವ್… ನಿಮ್ಕೇಲಾರೂ ಹೇಳ್ತೆ ನಾನ್… ಕೇಣಿ…

 

( ಉಳದ್ ಮುಂದಿನ್ ಸರ್ತಿಗೆ ಕಾಂಬ ಅಕಾ….)


ಹಾಸ್ಯ ಬೆರ್ಸ್ ಮಜ್ಜಿಗಿಅಂದೇಳಿ ಒಂದ್ ಯಕ್ಷಗಾನದ್ ಎಂಪಿ3 ಇತ್ತ್. ಅದ್ರಗೆ ಪತ್ರಕರ್ತ ಬಸವರಾಜ್ ಶೆಟ್ಟಿಗಾರ್ರ್ ಬರದ್ದ್ ಒಂದ್ ಹಾಸ್ಯ ಪ್ರಸಂಗ ಮೇಸ್ತ್ರಿ ಮಾದಯ್ಯಅಂದೇಳಿ ಇತ್ತ್. ಆ ಪ್ರಸಂಗದಗೆ ಹಳ್ಳಾಡಿ ಜಯ್ರಾಮ ಶೆಟ್ರದ್ ಮೇಸ್ತ್ರಿ ಮಾದಯ್ಯನ ಪಾರ್ಟ್. ಅವ್ರ್ ಸುರಿಗೆ ಕುಂದಾಪ್ರ ಶಾಸ್ತ್ರಿ ಸರ್ಕಲ್ಲಗೆ ಬಂದ್ ಕೂತ್ಕಂಡ್ ಭಾಗ್ವತ್ರತ್ರ ಮಾತಾಡ್ತಾ ಒಂದ್ ಕತಿ ಹೇಳ್ತ್ರ್. ಆ ಕತಿ ಕೆಂಬ್ಕೆ ಒಂದ್ನಮನಿ ಗಮ್ಮತಿತ್ತ್. ನೀವೂ ಒಂಚೂರ್ ಕೇಣಿ…

 

ಇದ್ ಭಾರೀ ಹಿಂದಿನ್ ಕಾಲದ್ ಕತಿ. ದೇವ್ರ್ ಒಂದ್ಸಲಿ ಪ್ರಾಣಿಗಳನ್ನೆಲ್ಲ ಒಟ್ಟಾಯಿ ಬಪ್ಪುಕೆ ಹೇಳ್ರಂಬ್ರ. ಈ ಮನುಷ್ಯ ಸೈತ ಒಂಜಾತಿ ಪ್ರಾಣಿ ಅಲ್ದಾ.. ಆರೂ ಇವ್ರ್ ಜಾಪ್ ಬಿಡತ್ತಾ.. ಬೇರೆ ಪ್ರಾಣಿಗಳನ್ನೆಲ್ಲ ಕರ್ದಾಗ್ಳಿಕೆ ಹೋರೆ ನಮ್ಮ್ ಮರ್ಯಾದಿಗ್ ಕಡ್ಮಿ ಅಲ್ದಾ ಅಂದೇಳಿ ಸುರೀಕೆ ಮನುಷ್ಯರ್ ಹೋಯ್ಲೇ ಇಲ್ಲಾ ಅಂಬ್ರ್. ಪ್ರಾಣಿಗಳೆಲ್ಲಾ ಹೋರ್‌ಗತಿಲ್ ದೇವ್ರ್ ಹೇಳ್ರಂಬ್ರ್… ಬಪ್ಪುಕ್ ಹೇಳದ್ ಮತ್ತೆಂತಕ್ ಅಲ್ಲ. ಯಾವ್ ಯಾವ್ ಪ್ರಾಣಿಗೆ ಎಷ್ಟ್ ಎಷ್ಟ್ ಆಯುಷ್ಯ ಅಂದೇಳಿ ಹೇಳುಕೆ ಕರದ್ದ್‘. ಹಾಂಗೇ ಒಂದೊಂದ್ ಪ್ರಾಣಿಗೆ ಎಷ್ಟೆಷ್ಟ್ ವರ್ಷ ಅಂದೇಳಿ ದೇವ್ರ್ ಹೇಳ್ರಂಬ್ರ್. ಕತ್ತಿಗೆ ಒಂದ್ 60 ವರ್ಷ, ನಾಯಿಗೆ ಒಂದ್ 30 ವರ್ಷ, ಮಂಗನಿಗೆ ಒಂದ್ 30 ವರ್ಷ ಅಂದೇಳಿ ಎಲ್ಲಾ ಹಂಚ್ರಂಬ್ರ್. ಈ ಬದ್ಯಗೆ ಮನುಷ್ಯರ್ ಇದ್ರಲ್ದಾ… ಅವ್ರ್ ಕಡೀಕೆ ಇದೆಂಥ ಕಂಡೇ ಬಿಡ್ವ ಅಂದೇಳಿ ದೇವ್ರ್ ಬುಡಕ್ ಹೋರಂಬ್ರ್. ದೇವ್ರ್ ಹೇಳ್ರಂಬ್ರ… ನಾನ್ ಎಲ್ಲಾ ಪ್ರಾಣಿಗಳಿಗೆ ಆಯುಷ್ಯ ಹಂಚಿ ಆಯ್ತ್. ನೀವ್ ಬಪ್ ಸಮಿಗೆ ಭಾರೀ ತಡ ಆಯ್ತ್. ನಿಮ್ಗ್ ಉಳದ್ 30 ವರ್ಷ ಮಾತ್ರ.

ಇದನ್ನ್ ಕೇಂಡ್ ಮನುಷ್ಯರಿಗೆ ಜೀವ್ ಹಾರಿ ಹೋಯ್ತ್. ಸಮಾ ಬುದ್ಧಿ ಭಾಷಿ ಬತ್ತ್ ಅಂಬತಿಗೆ 10 ವರ್ಷ ಆಯಿ ಹೋಯಿರತ್. ಕಡಿಕೆ ಎ0ತಾರೂ ಕಲುದ್ರೊಳ್ಗೆ ಮತ್ತ್ ಹತ್ತ್ ಹೋತ್ತ್. ಇನ್ನ್ ಕಲ್ತ ಆಯಿ ಏನಾರೂ ಕೆಲ್ಸ ಮಾಡ್ಕ್ ಮಾಡ್ಕ್ ಅಂಬುದ್ರೊಳ್ಗೇ 30 ವರ್ಷ ಆತ್ತಲೆ. ಏ ದೇವ್ರೆ ಹೀಂಗಾರೆ ನಾವ್ ಜೀವನದಗೆ ಸುಖ ಪಡುದ್ ಎಂತ ಇತ್ತ್ ನೀವೇ ಒಂಚೂರ್ ಆಲೋಚ್ನಿ ಮಾಡಿ. 30 ವರ್ಷ ಏನೇನೂ ಸಾಕಾತಿಲ್ಲ…ಅಂದ್ರ್.

ಅವ್ರ್ ಇಷ್ಟ್ ಬೇಡತ್ ಕಂಡ್ ದೇವ್ರಿಗೂ ಪಾಪ ಅಂಮಗಾಯ್ತ್. ಹೋಯ್ಲಿ… ಕತ್ತಿಗೆ 60 ವರ್ಷ ಕೊಟ್ಟಿದೆ… ಅದ್ರಗೆ ನಿಮ್ಗ್ 30 ವರ್ಷ ತೆಗ್ದ್ ಕೊಡ್ತೆ ಸಾಕಲ್ದಾ ಅಂದೇಳಿ ಕೇಂಡ್ರ್. ಮನುಷ್ಯರ್ ಮತ್ ಆಲೋಚ್ನಿ ಮಾಡುಕ್ ಸುರು ಮಾಡ್ರ್. ಆರೂ ಸಾಕಾತಿಲ್ಲ ಅಂಮಗಾಯ್ತ್. ಇನ್ನೊಂಚೂರ್ ಜಾಸ್ತಿ ಮಾಡಿ ಅಂದೇಳಿ ಕೇಂಡ್ರ್. ಅದಕ್ಕೂ ದೇವ್ರ್ ಹೂಂ ಹಾಕ್ರ್. ಹೋಯ್ಲಿ ನಾಯಿಗ್ 30 ವರ್ಷ ಕೊಟ್ಟಿದೆ. ಅದ್ರಗೆ 20 ತೆಗ್ದ್ ನಿಮ್ಗ್ ಕೊಡ್ತೆ. ನಿಮ್ಗ್ ಅಲ್ಲಿಗ್ 80 ವರ್ಷ ಆಯುಷ್ಯ ಆಯ್ತ್ ಕಾಣಿ ಅಂದೇಳಿ ದೇವ್ರ್ ಹೇಳ್ರಂಬ್ರ್. ಮನಷ್ರ್ ಆಶಿ ಎಲ್ಲಿವರಿಗ್ ಕಾಣಿ. ಅದೂ ಸಾಕಾಯಲ್ಲ ಅಂದೇಳಿ ದೇವ್ರ್ ಹತ್ರ್ ಪಿರಿಪಿರಿ ಮಾಡುಕ್ ಶುರು ಮಾಡ್ರ್. ನಮ್ಗ್ ಒಂದ್ ನೂರ್ ವರ್ಷ ಬದ್ಕಕಮಗಿತ್ತ್. ಏನಾರೂ ಮಾಡಿ ಇನ್ನೊಂದ್ ಇಪ್ಪತ್ ಕೊಟ್ಟಿರ್ ಆತಿದ್ದಿತ್ ಅಂಬುಕ್ ಶುರು ಮಾಡ್ರ್. ದೇವ್ರಿಗ್ ಇವ್ರ್ ಕರ್ಕರಿ ಮುಗ್ದಿರ್ ಸಾಕಾಯಿತ್. ಹೋಯ್ಲಿ ಅತ್ಲಾಗೆ ಅಂದೇಳಿ ಮಂಗನಿಗ್ ಕೊಟ್ಟದ್ 20 ವರ್ಷ ತೆಗ್ದ್ ಒಟ್ಟ್ ನೂರ್ ವರ್ಷ ಆಯುಷ್ಯ ಮನುಷ್ಯರಿಗೆ ಕೊಟ್ರ್.

 

ನೀವ್ ಹೌದಾ ಸುಳ್ಳಾ ಕಾಣಿ ಬೇಕಾರೆ. ಈ ಮನುಷ್ಯರ್ 30 ವರ್ಷದಿಂದ 60 ವರ್ಷ ಆಪಲ್ಲಿವರಿಗೆ ದುಡುದ್ ಕಂಡರೆಲ್ಲ ಹೇಳ್ತ್ರ್…ಅಂವ ಏನ್ ಕೆಲ್ಸ ಮಾಡ್ತಾ ಮಾರಾಯಾ. ಗೇಯುದಂದ್ರೆ.. ಕತ್ತಿ ಗೇಯ್ದಂಗ್ ಗೇಯ್ತ ಕಾಣ್ ಅಂತ್ರ್. ಅದೆಂತಕ್ ಅಂದೇಳಿ ಮಾಡಿರಿ. ಕತ್ತಿದ್ 30 ವರ್ಷ ಬಂದದಕ್ಕೇ ಹಾಂಗ್ ಕತ್ತಿ ಕಣಗೆ ಗೇಯುದ್. 60 ವರ್ಷ ಆಪ್ ಸಮಿಗೆ ಕೆಲ್ಸ ಮಾಡು ಕಾಲ ಎಲ್ಲ ಮುಗ್ದ್ ಹೋಯಿರತ್. ಹೋದ್ದ್ ವರ್ಷ ಹೆಚ್ಚ್ ಉಳದ್ ಕಡ್ಮಿ. ಹಿಂದಿಂದೆಲ್ಲ ನೆನ್ಪ್ ಮಾಡ್ಕಂತ.. ಆ ಮಗ ಕೊಡ್ತ್ನಾ, ಈ ಮಗ್ಳ್ ಕರಿತ್ಲಾ… ಆ ಅಳಿಯ ಕೊಟ್ಟಿರ್ ಆತಿದ್ದಿತ್ ಅಂದೇಳಿ ಕಾಯುದೇ ಆತ್. ಎಂತಕಂತೇಳಿ ಮಾಡಿರಿ. ಅದ್ ನಾಯಿದ್ 20 ವರ್ಷ ಆಯುಷ್ಯ ತಕಂಡದ್ದಲ್ದಾ… ಹಾಂಗಾಯಿ ನಾಯಿ ಕಾದಂಗ್ ಕಾಯುದೇ ಆತ್ತ್. ಕಡೀಕಿದ್ 20 ವರ್ಷ ಥೇಟ್ ಮಂಗನೇ… ಉಡುಕ್ ಒಂದ್ ವಸ್ತ್ರ, ಉಂಬುಕ್ ಒಂದ್ಮುಷ್ಟಿ ಗಂಜಿ ಇದ್ರ್ ಸಾಕ್. ಮತ್ತೇನೂ ಬೇಕಾಯಿಲ್ಲ. ಬೋಡ್ ಬಾಯಿ ಮಾಡ್ಕಂಡ್ ಹಳ್ತೆಲ್ಲ ನೆನ್ಪ್ ಮಾಡ್ಕಂತ ಮಂಗನ್ ಕಣಗೆ ಆಡುದೇ ಸೈಯಲ್ದಾ?

ಹ್ಯಾಂಗಿತ್ತ್ ಕತಿ… ನಂಗ್ ಸಮ ಹೇಳುಕ್ ಬತ್ತಿಲ್ಲ… ಏನಿದ್ರೂ ಜಯ್ರಾಮ್ ಶೆಟ್ರ್ ಬಾಯಗೇ ಕೇಂಬುಕೆ ಚಂದ.


ನಮ್ ಹಳ್ಳಿ ಬದ್ಯರಿಗೆ ಬಾಯ್ತುಂಬ ಮಾತಾಡ್ಕ್ ಕಾಣಿ. ನೂರ್ ಮಾರ್ ದೂರ ಇದ್ದರಿಗೆ ಸತೇ ಕೇಣ್ಕ್. ಯಾರ್ದಾರೂ ಮನಿಗ್ ಹೋರೆ ಕಾಪಿ ಕೊಡ್ದಿರೂ ಅಡ್ಡಿಲ್ಲ… ಅವ್ರ್ ಸಮಾ ಮಾತಾಡ್ಸ್‌ದಿದ್ರೆ ಮಾತ್ರ ಎಲ್ಲಿಲ್ದಿದ್ ಸಿಟ್ಟ್ ಬತ್ತ್. ಈ ಪ್ಯಾಟಿ ಬದ್ಯಗೆ ಹುಡ್‌ಗಿಯರೆಲ ಬಾಯ್ ಬುಡ್ದಗೆ ಮೊಬೈಲ್ ಫೋನ್ ಇಟ್ಕಂಡ್ ಪಿಸಪಿಸ ಅಂದೇಳಿ ಮಾತಾಡ್ತ್ರಲ್ದಾ… ಹಾಂಗ್ ಏನಾರೂ ಮಾತಾಡ್ಕಿದ್ರೆ ಮತ್ತೊಂದ್ ಜನ್ಮ ಎತ್ತಿ ಬರ್ಕ್. ಎಂತ ಮಾತಾಡುದಾರೂ ಗಟ್‌ಗಟ್ಟಿ ಮಾತಾಡಿಯೇ ಅಭ್ಯಾಸ. ನಂಗೆ ಹೈಸ್ಕೂಲಗೆ ಒಬ್ರ್ ಮಾಸ್ಟ್ರ್ ಇದ್ದಿರ್. ಅವ್ರ್ ಪಾಠ ಮಾಡುದ್ಕಿಂತ್ಲೂ ಹೆಚ್ಚ್ ಎಂತಾರೂ ಕತಿ ಹೇಳ್ತಿದ್ದದ್ ಹೆಚ್ಚ್. ನಮ್ಗೂ ಪಾಠ ಎಲ್ಲ್ ಬೇಕಾಯಿತ್ ಹೇಳಿ. ಅವ್ರ್ ಹೇಳ್ತಿದ್ದ್ ಕತಿ ಎಲ್ಲಾ ಕೇಂತ ಕೂಕಂಬ್ದ್ ಅಂದ್ರೆ ನಮ್ಗೂ ಭಾರಿ ಖುಶಿ. ಅವ್ರಿಗೆ ಹರಿಕಥಿ ದಾಸರು ಅಂದೇಳಿ ಅಡ್ಡ ಹೆಸ್ರ್ ಬೇರೆ ಇಟ್‌ಬಿಟ್ಟಿತ್. ಅವ್ರ್ ಹೀಂಗೆ ಒಂದ್ಸಲ ಒಂದ್ ಮಾತ್ ಹೇಳಿರ್. ಈಗ ನೀವ್ ಬಸ್ಸಗೆ ಕೂಕಂಡಿರಿ ಅಂದ್ರೆ ಯಾರಾರು ಏನಾರು ಪುರಾಣ ಹಿಡ್ಕಂಡ್ ಮಾತಾಡ್ತ ಇರ್ತ್ರ್ ಅಲ್ದಾ… ಆ ಪುರಾಣ ಸುಮ್ನೆ ಕೇಂತಾ ಆಯ್ಕಣಿ.. ಎಷ್ಟೋ ಸರ್ತಿ ನಮ್ಗ್ ಗೊತ್ತಿಲ್ಲದೇ ಇದ್ದ್ ಮಸ್ತ್ ವಿಷ್ಯ ನಮ್ಗ್ ಸಿಕ್ಕತ್. ನಾವ್ ಮಧ್ಯ ಬಾಯ್ ಹಾಕುಕ್ ಹೋಪ್ಕಾಗ… ಅಂದೇಳಿ ಹೇಳಿರ್. ನಾನೂ ಕಾಂಬ ಅಂದೇಳಿ ಹೀಂಗೆ ಸುಮಾರ್ ಸರ್ತಿ ಕೆಮಿ ತೆರ್ಕಂಡ್ ಕೂಕಂಡದ್ ಇತ್ತ್. ಹೀಂಗೆ ಒಂದ್ಸರ್ತಿ ಬಸ್ಸಗೆ ಹೋಪತಿಗೆ ಕೇಂಡದ್ ಒಂದ್ ಪುರಾಣ ಹೇಳ್ತೆ… ನಿಮ್ಗ್ ಬೇಕಾದದ್ ಎಂತ ಸಿಕ್ದಿದ್ರೂ ಹೊತ್ತ್ ಕಳುಕೆ ಒಂದ್ ದಾರಿ ಆದಾಂಗ್ ಆಯ್ತಲ್ದಾ?

 

ಸಿದ್ಧಾಪ್ರಕ್ ಹೋಯ್ ಬಪ್ಪ ಅಂದೇಳಿ ದುರ್ಗಾಂಭಾ ಬಸ್ಸ್ ಹತ್ತಿ ಕೂಕಂಡಿದ್ದೆ. ಬಸ್ಸಗೆ ಮಸ್ತ್ ಜನ ಇಲ್ದಿರೂ ಸೀಟೆಲ್ಲ ಭರ್ತಿ ಆಯಿದ್ದಿತ್. ಆರೂ ಬಾಗ್ಲ್ ಬುಡ್ದಗೆ ನಂಗೊಂದ್ ಸೀಟ್ ಸಿಕ್ತ್. ಸಣ್ಣಕೆ ಅಲ್ಲೇ ಕಣ್ ಕೂರುಕೆ ಶುರುವಾಯಿದ್ದಿತ್. ನನ್ ಬದಿಯಗೆ ಒಬ್ರ್ ನಮ್ಮೂರ್ನರೇ ಕೂಕಂಡಿದ್ದಿರ್. ಅವ್ರ್ ಪೈಕಿಯರ್ ಯಾರೋ ನಾಕ್ ಸೀಟ್ ಹಿಂದ್ ಇದ್ದಿರ್. ತಕಣಿ ಶುರುವಾಯ್ತ್ ಅವ್ರ್ ಪಟ್ಟಾಂಗ. ಎಷ್ಟ್ ಬ್ಯಾಡ ಅಂದ್ರೂ ಅವ್ರ್ ಮಾತಾಡ್ತಿದ್ದದ್ ಕಿಮಿ ಬುಡ್ದಗೇ ಜಾಗಂಟಿ ಹೊಡ್ದಾಂಗ್ ಕೇಂತಿದ್ದಿತ್. ಸರಿ ಹ್ಯಾಂಗಿದ್ರೂ ಮಾಷ್ಟ್ರ್ ಹೇಳದ್ದನ್ನಾರೂ ಮಾಡ್ವ ಅಂದೇಳಿ ಕೇಂತಾ ಕೂಕಂಡೆ. ನನ್ ಸೀಟಿನ್ ಬದ್ಯಗೆ ಕೂಕಂಡರ್ ಶುರು ಮಾಡ್ರ್..

ಹ್ವಾಯ್ ಶಂಕ್ರಣ್ಣ ಎತ್ ಮುಖ್ನೆ ಹೊರ್ಟದ್. ನಿಮ್ಮನ್ ಕಾಣ್ದೇ ಭಾರಿ ಸಮಿ ಅಯ್ತ್ ಮಾರ್ರೆ.. ಏನ್ ಕಣ್ಣಂಗ್ ಕಾಂಬ್ಕಿಲ್ಲ.

 

ಹ್ವಾ.. ಯಾರದ್ ಶೀನನಾ ಮಾರಾಯ… ಎಲ್ಲಿಗಿಲ್ಲ… ಸಿದ್ಧಾಪ್ರಕ್ ಹೋಯ್ ಬಪ್ಪ ಅಂದೇಳಿ… ಬ್ಯಾಸಾಯ್ದ್ ಕೆಲ್ಸ ಇದ್ದಿತಲ್ದಾ… ಹಾಂಗಾಯ್ ಹೆರ್ಗ್ ಹೆರ್ಡುಕ್ ಪುರ್ಸೊತ್ತ್ ಆಯಿಲ್ಲ ಕಾಣ್. ನೀನ್ ದೂರ ಹೊರ್‍ಟದ್?

 

ಮಗ್ಳದ್ ಮದಿ ಹತ್ರ ಬಂತಲ… ಹಾಂಗಾಯ್ ಕುಂದಾಪ್ರಕ್ಕೆ ಜವ್ಳಿ ತೆಗ್ವ ಅಂದೇಳಿ ಹೊರ್ಟಿದ್ನೆ

 

ಅದೇನ್ ಒಬ್ನೇ ಹೊರ್ಟೆ.. ಯಜ್‌ಮಾನ್ತಿಯರ್ ಬರಲ್ಯಾ?

 

ಅವ್ಳಿಗೆ ಮೂರ್ ದಿನ್ದಿಂದ ಕಂಡಾಪಟ್ಟೆ ಜ್ವರ. ಏನೂ ಎಡುದಿಲ್ಲ. ನೀವೇ ಹೋಯ್ ಬನಿ ಅಂದ್ಲ್. ಅದ್ಕೇ ಒಬ್ನೇ ಹೊರ್ಟದ್.

 

ಮತ್ತ್ ಬ್ಯಾಸಾಯ ಎಲ್ಲಾ ಹ್ಯಾಂಗಿತ್ತ್ ಈ ವರ್ಷ?

 

ಬ್ಯಾಸಾಯ ನಂಬ್ಕಂಡ್ರೆ ಆಪ್ದಾ ಹೋಪ್ದಾ? ನಂಗೂ ಈಗೀಗ ಏನೂ ಎಡುದಿಲ್ಲ. ಮಗ ಅದೆಂತದೋ ಕಂಪ್ಯೂಟರ್ ಕಲಿತೆ ಅಂದೇಳಿ ಬೆಂಗ್ಳೂರಿಗೆ ಹೋಯಿದ. ಇನ್ನ್ ಮಗ್ಳ್ ಹ್ಯಾಂಗಿದ್ರೂ ಮದಿ ಆಯಿ ಹೋಪಳ್. ಜನಿನ್ ಹಾಯ್ಕಂಡ್ ಮಾಡ್ಸ್‌ವಾ ಅಂದ್ರೆ ಯಾರೂ ಸಿಕ್ಕುದಿಲ್ಲೆ. ಹೆಣ್ಗಳೆಲ್ಲ ಗ್ವಾಯ್‌ಬೀಜದ್ ಪ್ಯಾಕ್ಟ್ರಿಗ್ ಹೋಪರ್. ಗಂಡ್ಗಳೆಲ್ಲ ಒಂದೋ ಶೋಕಿ ಮಾಡ್ಕಂಡ್ ತಿರ್ಗುವರ್ ಇಲ್ದಿರೆ ಈಗ ನನ್ ಮಗ್ನ್ ಕಣಗೆ ಪ್ಯಾಟಿ ಬದಿ ರುಚಿ ಕಾಂಬುಕ್ ಹೋಪರ್. ನಾವ್ ಹಳಿ ಜಬ್ಬ್ರ್ ಕೈಯಾಗೆ ಎಂತಾ ಎಡಿತ್ತ್ ಅಂದೇಳಿ ಬ್ಯಾಡ್ದಾ? ಆರೂ ಕದ್ರ್ ಕಟ್ಟುಕೆ ಯಾರಾ ಮನಿ ಬಾಗ್ಲಿಗ್ ಬೇಡುಕ್ ಹೋಪುಕಾಗ ಅಂದೇಳಿ ಆ ಬೆಟ್ಟಿನ್ ಗೆದ್ಯಗೆ ಒಂದರ್ಧ ಮುಡಿ ಬೀಜ ಹಾಕಿನೆ…

 

ಅದೂ ಸಮ್ನೇ ಕಾಣಿ… ಹೀಂಗೇ ಎಲ್ಲಾರೂ ಪ್ಯಟಿ ಬದಿಗ್ ಹೋತಾ ಇದ್ರೆ… ಕಡಿಕ್ ಹೊಟ್ಟಿಗ್ ಎಂತ ಮಣ್ಣ್ ತಿಂತ್ರಾ… ಇಲ್ಲ ತೌಡ್ ತೀಂತ್ರಾ…?

 

ಏನೋ ನಮ್ಕಾಲ ಇಪ್ಪೊಲೊರಿಗ್ ಅಡ್ಡಿಲ್ಲ… ಕಡಿಗ್ ನೀವ್ ಹೇಳ್ದಂಗೆ ತೌಡ್ ತಿಂಬು ಯಾಪಾರ್‌ವೇ ಸೈಯಾ ಕಾಣತ್

 

ಅದಿರ್ಲಿ ಎಲಕ್ಷನ್ ಹತ್ರ ಬಂತಲ್ದನ? ಈ ಸರ್ತಿ ಯಾರ್ ನಿಲ್ತ್ರ್ ಅಂಬ್ರ್?

 

ಎಂತದಪ ಈ ಸರ್ತಿ ಪೂರಾ ಬದ್ಲ್ ಅಂಬ್ರಲ್ದೇ. ಬೈಂದೂರ್ ಕ್ಷೇತ್ರ ಪೂರಾ ಶಿಮೊಗ್ಗಕ್ ಸೇರಿತಂಬ್ರಪ್ಪ. ಅತ್ಲಾಗ್ ಕುಂದಾಪ್ರ, ಉಡ್ಪಿಯೆಲ್ಲ ಸೇರಿ ಚಿಕ್ಮಂಗ್ಳೂರಿಗ್ ಹೋಯಿತ್ ಅಂತ್ರಪ್ಪ. ಇಲ್ಲಿಲ್ಲಿನರ್ ಇದ್ಕಂಡ್ ಉದ್ಧರ್ಸದ್ದೇ ಕಾಣತ್ ಅಲ್ದಾ ಈಗ. ಇನ್ನ್ ಶಿಮೊಗ್ಗದರ್, ಚಿಕ್ಮಂಗ್ಳೂರಗ್ ಗೆದ್ದ ಬಂದರ್ ಮಾಡುದ್ ಅಷ್ಟ್ರಗೆ ಇತ್ತ್ ಬಿಡಿ. ಅಲ್ಲ ಇದು ಬರಿ ನಾಕ್ ದಿನ ಪಟ್ಟಾಂಗ ಹೊಡುಕ್ ಸೈಯ್ಯೇ ಬಿಟ್ರೆ ಇವ್ರ್‌ನ್ನೆಲ್ಲ ನಂಬ್ಕಂಡ್ರೆ ಅದೆಂತದೋ ಹೇಳ್ತ್ರಲ ಕುಪ್ಳನ್ ನಂಬ್ಕಂಡ್ ಕೊಳ್ಕಿ ನಟ್ಟ್ರ್ ಅಂಬಂಗೇ ಸಮ.

ಅದಾರ್ ಹದ್ನಾರಾಣಿ ಬದ್ದ ಕಾಣ್. ನಾವ್ ಎಲೆಕ್ಷನ್ ದಿನ ಎಡ್ದ್‌ರೆ ಹೋಯಿ… ಇದ್ದರಗೆ ಯಾರ್ ಗನಾರ್ ಅಂದೇಳಿ ಕಂಡ್ ಅವ್ರಿಗ್ ಓಟ್ ಹಾಕಿ ಬಪ್ಪುದಪ

 

ಹ್ವಾಯ್ ಮಾತಾಡ್ತಾ ಮಾತಾಡ್ತಾ ಸಿದ್ಧಾಪ್ರ ಬಂದದ್ದೇ ಗೊತ್ತಾಯಲ್ಲ ಕಾಣಿ… ನೀವ್ ಇಳಿತ್ರ್ಯಾ… ಮದಿಗ್ ತಪ್ದೇ ಬರ್ಕ್ ಮತ್ತೆ. ಹೇಳ್ಕಿ ಕೊಡುಕೆ ನಾನೇ ಒಂದಿನ ನಿಮ್ಮ್ ಮನಿಗ್ ಬತ್ತೆ. ಮದಿ ಇಲ್ಲೇ ಕಂಮ್ರಶಿಲೆ ದೇವ್‌ಸ್ಥಾನದ್ ಕಲ್ಯಾಣ ಮಂಟಪ್ದಗೆ… ನೀವೆಲ್ಲ ಬಂದ್ರ್ ನಂಗೂ ಒಂದ್ ಧೈರ್ಯ ಕಾಣಿ. ಎಲ್ಲಾ ಹಿಂದಿನ ದಿನವೇ ಬಂದ್ ಒಂಚೂರ್ ಸುಧಾರ್ಸಿ ಕೊಡ್ಕ್

 

ಅಕ್ಕ್ ಮರಾಯ… ನೀ ಇಷ್ಟ್ ಹೇಳ್ಕ್ ಅಂದೇಳಿ ಇಲ್ಲ. ನಾ ಹಿಂದಿನ್ ದಿನೇ ಬತ್ತೆ. ಹಂಗಾರೆ ಮತ್ತ್ ಸಿಕ್ವಾ ಅಕಾ….?

 

ಅಡ್ಡಿಲ್ಲ ಹಂಗಾರೆ… ಬರು ಸಂಕ್ರಾಂತಿ ಅರ್ ಮೇಲೆ ನಿಂ ಬದಿಗೆ ಬತ್ತೆ

 

ಹ್ವಾಯ್ ಹ್ಯಾಂಗಿತ್ತ್ ಪಟ್ಟಾಂಗ…. ಈಗ ನಾನೂ ಬತ್ತೆ… ಮತ್ತ ಸಿಕ್ವ ಅಕಾ ಹಂಗಾರೆ..