Posts Tagged ‘ಕುಂದಾಪುರ’


ಪ್ಯಾಟಿ ಬದಿ ಇಪ್ಪರಿಗ್ ಅಡ್ಡಿಲ್ಲ… ಕರೆಂಟ್ ಹೆಚ್ಚ್ ತೆಗುದಿಲ್ಲ… ಹಳ್ಳಿ ಬದಿ ಇಪ್ಪರಿಗ್ ಕರೆಂಟ್ ಇಪ್ಪುದಕ್ಕಿಂತ ಹೋಯಿ ಇಪ್ಪುದೇ ಹೆಚ್ಚ್ … ಅದ್ಕೆ ಚಿಮಣಿ ಬೇಕಲ್ದಾ? ಈಗ ಎಲ್ಲ ಸುಧಾರ್ಸಿತ್… ಆರೂ ನಾವ್ ಸಣ್ಣದಿಪ್ಪತಿಗೆ ಚಿಮ್ಣಿ ದೀಪದಗೆ ಓದದ್ದ್ ಅಲ್ದಾ?

ಕುಂದಾಪ್ರ ಕನ್ನಡದಗೆ ‘ಹಳೇ ಪಾತ್ರೆ ಹಳೇ ಕಬ್ಣಾ…’ ಧಾಟಿಯಗೆ ಒಂದ್ ಚಿಮ್ಣಿ ಪದ್ಯ… 🙂

ಹಳಿ ಚಿಮ್ಣಿ… ಹಳಿ ದೀಪ… ಲಾಯ್ಕ್ ಬೆಳಕು ಕಾಣಿ… ಹೋಯ್
ಈ ದೀಪ… ಅಪ್ರೂಪ… ಭಾರೀ ಲಾಯ್ಕಿತ್ತ್ ಮಾರ್ರೇ… ಹೋಯ್

ಬತ್ತಿಯನು ಎಳದು ಇಡಿ
ಚಿಮ್ನೆಣ್ಣಿಯ ತುಂಬ್ಸಿ ಬಿಡಿ
ಕಡ್ಡಿಯ ಕೀರುದೇ ತಡ… ಬೆಳ್ಕ್-ಏ…

ದೀಪವು ಮೂರೂ ಹೊತ್ತ್
ಆರದೇ ಉರಿತಾ ಇರತ್ತ್
ಎಂತಕೆ ಬ್ಯಾಟರಿ ಶೆಲ್… ಎಲ್ಲಾ ದುಡ್ದ್ ವೇಷ್ಟೂ

ಕಾಣಿ ಮಳಗಾಲದಗೆ… ಅದ್ರಗೂ ಗಾಳಿಮಳೀ…
ಈ ರೀತಿ ಜಮ್ಮಳಿ ಬಪ್ಪ್ ಸುರಿಗೆ… ಕರೆಂಟ್ ಇಪ್ದಿಲ್ಲ
ತುಂಬ್ಸಿ ಬಿಡಿ ಎಣ್ಣಿನ… ಮೇಲ್ ದೂಡಿ ಬತ್ತೀನ…
ಹಳಿ ತಾಮ್ರದ್ ಚಿಮ್ಣಿ ಬುಡ್ಡಿಯಗೆ… ಹಚ್ಚಿಬಿಡಿ ದೀಪನ್ನ

ವಲೆ ಹಿಡಿದೆ ಅಡುಗಿ ಮಾಡೂದ್ ಹ್ಯಾಂಗೆ… ಚಿಮ್ಣಿದೀಪದ ಬೂಚ ನಾ ತೆಗಿತೆ
ಚಿಮ್ಣಿ ಎಣ್ಣಿ ಹೊಯ್ದು ಬಿಡತ್ನೆ ನಾ… ಹಿಡಿವಲ್ಲೊರಿಗೂ

ಹಳಿ ಚಿಮ್ಣಿ… ಹಳಿ ದೀಪ.. .ಲಾಯ್ಕ್ ಬೆಳಕು ಕಾಣಿ… ಹೋಯ್
ಈ ದೀಪ… ಅಪ್ರೂಪ… ಭಾರೀ ಲಾಯ್ಕಿತ್ತ್ ಮಾರ್ರೇ… ಹೋಯ್

ನೀವ್ ಒಳ್ಳೇ ಹೇಳ್ತ್ರಿಯಲೆ… ಈ ಚಿಮ್ನೆಣ್ಣಿ ರೇಟಿನಲಿ…
ಹೇಳಿ ಬಿಡಿ ಸೀದಾ ನಂಗ್-ನೀವ್… ಚಿಮ್ನೆಣ್ಣಿ ಕೊಡ್ತ್ರಿಯಾ…?
ನಾವಿಪ್ಪ ಊರಿನಗೆ… ಇಪ್ಪ ಎರ್ಡ್ ಸೊಸೈಟಿಯಗೆ
ಒಂದು ಮೂರ್ ಲೀಟ್ರು ಚಿಮ್ನೆಣ್ಣಿ… ತೆಗ್ಸಿ ಕೊಡ್ತ್ರಿಯಾ?

ಕಮ್ಮಿ ಕೇಂಡ್ರಿ ಮೂರ್ ಲೀಟರೇನ್… ನಿಮ್ಮ ಮಟ್ಟಿಗೆ ನೂರ್ ಕೊಡ್ತೆ ನಾನ್
ದುಡ್ಡು ಮಾತ್ರ ನೀವೇ ಕೊಡ್ಕಾತ್ತ್… ಹೋಯ್ ಯಜ್ಮಾನ್ರೆ

ಹಳಿ ಚಿಮ್ಣಿ… ಹಳಿ ದೀಪ… ಲಾಯ್ಕ್ ಬೆಳಕು ಕಾಣಿ… ಹೋಯ್
ಈ ದೀಪ… ಅಪ್ರೂಪ… ಭಾರೀ ಲಾಯ್ಕಿತ್ತ್ ಮಾರ್ರೇ… ಹೋಯ್


7090092777_eab618725e_c

ಚಿತ್ರ ಕೃಪೆ: flicker ( ಹ್ವಾಯ್ ಚಿತ್ರಕ್ಕೂ ಕತಿಗೂ ಸಂಬಂದ ಇಲ್ಲ… ಸಂಬಂಧ ಇದ್ದಿರೆ ಚಿತ್ರಕತೆ ಆತಿದ್ದಿತ್ 🙂 )
ಇದೇ ವಿಷ್ಯ ನಂದ್ ಇನ್ನೊಂದ್ ಬ್ಲಾಗ್ “ಮನಸಿನ ಮರ್ಮರ”ದಗೆ ಬರ್ದಿದೆ. ಅದ್ ಗ್ರಾಂಥಿಕ ಕನ್ನಡದಗೆ ಬರ್ದದ್. (ಕೆಲ್ವರ್ ಗ್ರಾಂಥಿಕ ಕನ್ನಡಕ್ಕೆ ಶುದ್ಧ ಕನ್ನಡ ಅಂತ್ರ್… ಅಂತರ್ ಕೈಗ್ ಸಿಕ್ರ್ ಕೆಪ್ಪಿ ಮೇಲ್ ಎರ್ಡ್ ಬಾರ್ಸಿ… ಕುಂದಾಪ್ರ ಕನ್ನಡ ಶುದ್ದ ಅಲ್ದಾ ಹಾಂಗಾರೆ? :-)) ಅದನ್ನೇ ಕುಂದಾಪ್ರ ಕನ್ನಡದ ಒಗ್ಗರ್ಣಿ ಹಾಕಿ ನಿಮ್ಮ್ ಎದ್ರಿಗ್ ಇಡ್ತೆ. ಇದು ಕುಂದಾಪ್ರ ಬದಿಯರಿಗೆ ಹೆಚ್ಚಿನರಿಗೆ ಗೊತ್ತಿಪ್ದೇ ಬಿಡಿ

ನಾವೆಲ್ಲ ಸಣ್ಣಕಿಪ್ಪತ್ತಿಗೆ ಸುಮಾರ್ ಕತಿ, ಗಾದಿ ಮಾತ್, ಎದ್ರ್ ಕತಿ ಎಲ್ಲಾ ಕೇಂಡಿರತ್ತ್ ಅಲ್ದಾ. ಈಗ್ಳಿನ್ ಕಣಗೆ ಮಕ್ಳ್ ಬಾಯಿಂದ್ ಬೆಟ್ಟ್ ತೆಗು ಮೊದ್ಲೇ ಟುಸ್ಕು-ಪುಸ್ಕು ಇಂಗ್ಲೀಷ್ ಹಾರ್ಸು ಕಾಲ ಅಲ್ಲ ಕಾಣಿ. ಹಾಂಗಾಯಿ ನಮ್ ಹಿರಿಯರಷ್ಟ್ ಅಲ್ದಿರೂ ಚೂರ್-ಪಾರ್ ಆರೂ ಕೆಮಿ ಮೇಲ್ ಬಿದ್ದಿರತ್ತ್. ಕೇಂಬುಕ್ ಸುಮಾರ್ ಕೇಂಡಿರತ್ತ್. ಆರೆ ಕೆಲವ್ ಮಾತ್ರ ಹಶಿ ಗ್ವಾಡಿ ಮೇಲ್ ಕಲ್ಲ್ ಹರ್ಲ್ ಕೂರ್ಸಿದಾಂಗೆ ನೆನ್ಪಗೆ ಉಳ್ದಿರತ್ತ್. ಹಾಂಗಿಂದೇ ಒಂದ್ ಕತಿ ಈ ಸುಕ್ರಂದ್. ಕುಂದಾಪ್ರ ಬದಿಯರಿಗೆಲ್ಲ ಈ ಕತಿ ಖಂಡಿತಾ ಗೊತ್ತಿರತ್ತ್. ಎಲ್ಲಾರೂ ನೆನ್ಪ್ ಹೋದ್ದಿದ್ರೆ ನೆನ್ಪ್ ಮಾಡುವಾ ಅಂದೇಳಿ

ಕತಿ ಎಂತ ಕೇಂಡ್ರ್ಯಾ, ಹೇಳ್ತೆ ತಡಿನಿ ಮರ್ರೆ… ಎಂತ ಕೆಸಿನ್ ಬುಡಕ್ಕ್ ಕರು ಕಟ್ಟಿ ಬಂದರ್ ಕಣಗೆ ಗಡ್ಬಿಡಿ ಮಾಡ್ತ್ರಿ… 🙂

“ಸುಳ್ ಹೇಳೋ ಸುಕ್ರಾ ಅಂದ್ರೆ… ವಾಟಿ ಅಂಡಿಯೊಳ್ಗೆ ಒಂಬತ್ ಆನಿ ಹೋಯಿ, ಮರಿಯಾನಿ ಬಾಲ ಸಿಕ್ಕಂಡ್ ಬಿದ್ದಿತ್ತ್ ಅಂದ ಅಂಬ್ರ್”

ಇದ್ರ್ ವಿವರ್ಣಿ ಹೀಂಗೆ… ಒಂದ್ ಊರಗೆ ಸುಕ್ರ ಅಂಬ ಒಬ್ಬ ದೊಡ್-ಭೂತ್ ಲಾಟ್ ಬಿಡುವನ್ ಇದ್ದ ಅಂಬ್ರ್. ಯಾರಾರೂ ಅವ್ನ್ ಹತ್ರ ಹೋಯಿ, ಸುಕ್ರಾ…ಸುಕ್ರಾ… ಒಂದ್ ಸುಳ್ಳ್ ಹೇಳ್ ಮರಯಾ ಅಂದ್ರ್ ಕೂಡ್ಲೇ ಅಂವ ಬಿಡು ರೈಲ್ ಇದ್. ‘ವಾಟಿ ಅಂಡಿ ಒಳ್ಗೆ ಒಂಬತ್ ಆನಿ ಹೋಯ್ತಂಬ್ರ್; ಒಂಬತ್ತ್ ಆನಿ ದಾಟಿ ಹೋರ್ ಮೇಲ್ ಒಂದ್ ಮರಿ ಆನಿ ವಾಟಿಯಂಡಿಯೊಳ್ಗೆ ಹೋಪತಿಗೆ, ಅದ್ರ್ ಬಾಲ ಸಿಕ್ಕಂಡ್ ಬಿತ್ತಂಬ್ರ್’. ಇಲ್ಲ್ ಸುಕ್ರನ ಸುಳ್ಳಿನ್ ಘಾಟ್ ಎಷ್ಟಿತ್ತ್ ಕಾಣಿ… ವಾಟಿ ಅಂಡಿಯೊಳ್ಗೆ ಆನಿ ಹೋಪುದಂಬುದೇ ಹಶೀ ಸುಳ್ಳ್. ಅಂತಾದ್ರಗೆ ಒಂಬತ್ತ್ ಆನಿ ಸೀದಾ ನುಗ್ಗಿ ಹೆರ್ಗ್ ಬಂದಾರ್ ಮೇಲೆ, ಒಂದ್ ಶೆಣ್ಣ್ ಮರಿ ಆನಿದ್ ಬಾಲ ಸಿಕ್ಕಂಡ್ ಬಿತ್ತ್ ಅಂದ್ರೆ ನೀವೇ ಲೆಕ್ಕ ಹಾಕಿ ಸುಕ್ರನ್ ಬಾಯ್ ಪಟಾಕಿ. ಅಲ್ಲ… ಮರಿ ಆನಿ ಸಿಕ್ಕಂಡ್ ಬಿದ್ದಿತ್ ಅಂದಿರಾರು ಒಂದ್ ಲೆಕ್ಕ ಮರ್ರೆ… ಅದ್ ಬಿಟ್ಟ್ ಅದ್ರ್ ಬಾಲ ಸಿಕ್ಕಂಡ್ ಬೀಳುದಂದ್ರೆ… 🙂

ನಮ್ ಸುಕ್ರನ್ ಕಂಡೇ ಗುರು ಕಿರಣ್ “ಬಂಡಲ್ ಬಡಾಯಿ ಮಾದೇವ…” ಪದ್ಯ ಬರದ್ ಅಂದೇಳಿ ಕುಟ್ಟಿ ಯಾರತ್ರೋ ಹೇಳ್ತಿದ್ದ ಅಂಬ್ದ್ ಹಶೀ ಶುಂಠಿ 🙂
ಹೀಂಗಿಂದೇ ಹಳಿಕಾಲದ್ ಕತಿ ನಿಮ್ಗ್ ಗೊತ್ತಿಪ್ದ್ ಇದ್ರೆ ಹೇಳಿ. ಕೇಂಡ್, ಓದಿ… ನೆಗಾಡುವ

( ವಾಟಿ ಅಂಡಿ ಅಂದ್ರೂ ಗೊತ್ತಿಲ್ದೆ ಇಪ್ಪರಿಗೆ – ವಾಟಿ ಅಂಡಿ==> ಒಲಿಯಗೆ ಬೆಂಕಿ ಉರ್ಸುಕೆ ಉಪ್ಯೋಗ ಮಾಡು ಬೆದ್ರಿನ್ ಅಂಡಿ… ಕಬ್ಣದ್ ಅಂಡಿ ಅಂತ್ ಬೇಕಾರೂ ಅನ್ಕಣ್ಲಕ್ )


ನೂರನೇ ಪೋಸ್ಟ್ ಹಾಕಿ ಈ ಬದಿಗ್ ಮಂಡಿ ಹಾಕಿ ಮಲ್ಕಣಲ್ಲ ಈ ಜನ ಅಂದ್ಕಂಡ್ರ್ಯಾ ಹ್ಯಾಂಗೆ? ನೂರನೇ ಪೋಸ್ಟ್ ಹಾಕಿದ್ ವಿಜಯ ಕರ್ನಾಟಕದ ಬ್ಲಾಗ್ ಪರಿಚಯದಗೆ ಬಂದಿತ್ತ್ ಮರ್ರೆ ಗೊತ್ತಾ. ಕಂಡ್ ಮಸ್ತ್ ಖುಷಿ ಆಯ್ತ್. ಹಾಂಗಾಯ್ ನೂರ ಒಂದ್ನೇದ್ ಬರ್ದೆ ಇದ್ರ್ ಆತ್ತಾ. ಒಟ್ಟ್ ಕೌರವರ ಸಂಖ್ಯೆ ಮುಟ್ಟತ್ ಅಲ್ಲಿಗೆ 🙂

images

images1

ಚಿತ್ರ ಕೃಪೆ: udayavani ಮತ್ತು wavesofudupi

ಈ ವರ್ಷ ಯುಗಾದಿ ಸುರಿಗೆ ಪಂಚಾಂಗ ಓದುವತಿಗೆ ಬೌಷ ಮಳಿ ಬಪ್ಪ ಕೊಳಗದ ಅಳತೆ ತಪ್ಪಿ ಹೋಯಿತಾ ಕಾಂತ್. ಅಲ್ಲ ಈ ನಮನಿ ಮಳಿ ಬಪ್ಪುದಾ ಹಂಗಾರೆ? ಯಾರ್ ಬಾಯಗ್ ಕೇಂಡ್ರೂ ಈ ನಮನಿ ಮಳಿ ಕಾಣಲ್ಲಪ್ಪ. ಕಡ್ಲ್ ಬದಿಯಗ್ ಇದ್ದರಂತೂ ಯಾವ ರಿಜಿಸ್ತ್ರೀ ಸತೇ ಇಲ್ದೆ ಸಮುದ್ರಕ್ಕೆ ಅವ್ರ್ ಜಾಗ ಬರ್ಕೊಡ್ಕ್ ಆಯ್ತ್. ಒಂದ್ ವರ್ಷಕ್ ಆಪ ಮಳಿ ಕಳ್ದ್ ಒಂದ್ ತಿಂಗ್ಳಗೇ ಸೊರ್ದ್ ಬಿಟ್ಟಿತ್. ಅಲ್ಲಾ ಮಾರ್ರೆ ಹಂಗಾರೆ ಆಕಾಶ ಎಂತ ಒಟ್ಟಿ ಆಯಿತಾ… ಈ ನಮನಿ ಸೊರಿತ್ತಲೆ ಪುರ್ಸೊತ್ ಇಲ್ದೆ. ಇದೆಲ್ಲಾ ತಕಂಡ್ ಹೋಪ ಕಾಲ ಅಲ್ದೇ. ಪ್ರಳಯ ಅಪ್ದ್ ಅಂದ್ರೆ ಮತ್ತೆಂತ? ಈ ಮಳಿ ಸಾಲ ಅಂದೇಳಿ ಅದ್ರೊಟ್ಟಿಗೆ ಈ ಸರ್ತಿ ಜೋರ್ ಗಾಳಿ ಬೇರೆ ಶುರುವಾಯಿತ್. ಇಷ್ಟ್ ಸಮ್ಯ ಇರ್ತಿಲ್ಲ ಅಂದಲ್ಲ… ಆದ್ರೂ ಈ ಸರ್ತಿ ಸ್ವಲ್ಪ ಗಾಳಿ ಹೊಡ್ತ ಬಿಗುವೇ ಇದ್ದಿತ್. ಟೀವಿಯಗೆ ಬ್ರೇಕಿಂಗ್ ನ್ಯೂಸ್ ಅಂದ್ರೆ ರೈನಿಂಗ್ ನ್ಯೂಸ್ ಅಂಬಲ್ಲಿವರಿಗೆ ಮಳಿ-ಗಾಳಿ ಉಪದ್ರ. ಕರಾವಳಿ-ಮಲ್ನಾಡ್ ಬದಿಯರಿಗೆ ಜೋರ್ ಮಳಿ, ನೆರಿ ಇದೆಲ್ಲ ಹೊಸ್ತೇನಲ್ಲ. ಕಳ್ದ್ ವರ್ಷ ಚೂರ್ ಕಮ್ಮಿ ಬಿಟ್ರೆ ಪ್ರತೀ ವರ್ಷವೂ ಮಳ್ಗಾಲದ ನಾಕ್ ತಿಂಗ್ಳ್ ಮಳೆಯಂದ್ರೆ ಮಳೆ. ನೀರ್ ಆಂದ್ರೆ ನೀರ್… ಆರೂ ಈ ವರ್ಷ ಸ್ವಲ್ಪ ಅತಿರೇಕ ಅಂಬಷ್ಟ್ ಸೊರಿತ್ತಪ್ಪ. ಹೀಂಗಿನ ಮಳ್ಗಾಲ ಕಂಡ್ ಭಾರೀ ವರ್ಷ ಆಯಿತ್ತ್… ಪ್ರಾಯ ಆದರೆಲ್ಲ ಹೇಳುದ್ ಕೇಣ್ಕ್… ನಾ ಸಣ್ಣಕಿಪ್ಪತಿಗೆ ನಮ್ಮನಿ ಮೆಟ್ಲ್ ಕಲ್ಲ್ ಬುಡಕ್ ನೀರ್ ಬಂದಿತ್ ಅಂದೇಳಿ, ಅದ್ ಬಿಟ್ರೆ ಈ ಸರ್ತಿಯೇ ಸೈಯಪ್ಪ ಮಳಿರಾಯನ ಹೊಡ್ತ ಅಂದೇಳಿ. ಮಳಿ ಎಷ್ಟೇ ಬರ್ಲಿ ಮಳ್ಗಾಲದಗೆ ರಸ್ತಿ ಅಂದ್ರೆ ಅವಸ್ಥಿ ಅಂದೇಳಿಯೇ ಅಭ್ಯಾಸ ಆಯಿ ಹೋಯಿತ್ತಲ್ಲ ನಂಬದಿಯರಿಗೆ. ಅದ್ರಗೂ ಈ ಸರ್ತಿ ಹೆದ್ದಾರಿ ಅಗ್ಲ ಮಾಡು ಹೆಳಿಯೊಳಗೆ ಕೆಲವ್ ಬದಿ ಕಂಬ್ಳ ಗೆದ್ದಿ ಆರೂ ಬೇಕ್, ರಸ್ತಿ ಬ್ಯಾಡ.

ಅಂತೂ ಮಳಿ ಕತಿ ಹೀಂಗಾಯ್ತಾ… ನಾ ಶುರು ಮಾಡದ್ ಮಳಿ ಸುದ್ದಿಯೇ ಆದ್ರೂ… ಹೇಳುಕ್ ಹೊರ್ಟದ್ ಭಾಷಿಯೊಳಗಿಪ್ಪ ಗಮ್ಮತ್ತಿನ ವಿಷ್ಯ. ಜೋರ್ ಮಳಿ ಬಂದ್ರೆ ಎಂತ ಹೇಳುದ್ ನಾವೆಲ್ಲಾ? ಈ ಕಿಚ್ಚ್ ಹಿಡದ್ ಮಳಿಯೊಂದ್ ನಿಲ್ಲುದೇ ಇಲ್ಲಪ್ಪ ಅಂದೇಳಿ ಅಲ್ದಾ? ಇಲ್ಲೇ ಇಪ್ಪದ್ ಕಾಣಿ ಗಮ್ಮತ್. ಮಳಿ ಅಂದ್ರೆ ನೀರ್… ಅದಕ್ಕ್ ಕಿಚ್ಚ್ ಹಿಡುದ್ ಹ್ಯಾಂಗೇ 🙂 ಅದೇ ಭಾಷಿಯ ಗಮ್ಮತ್. ಅಂದ್ರೆ ಭಾಷಿದ್ ವಾಚ್ಯ ಅರ್ಥ ತಕಂಡ್ರೆ ಅರ್ಥ ಅನರ್ಥ ಆತ್ತ್. ಆದ್ರೆ ಅದ್ರ ಸೂಚ್ಯ ಅರ್ಥ ‘ಕೆಟ್ಟ’ ಮಳೆ ಅಂತ ಇಟ್ಕಣ್ಲಕ್. ನೀವ್ ಕೇಂಬುಕೂ ಸಾಕ್. ಮಳಿಯಗೆ ಕೆಟ್ಟ ಮಳಿ ಒಳ್ಳೇ ಮಳಿ ಅಂದೇಳಿ ಇತ್ತಾ? ಕಾಲ ಕಾಲಕ್ಕ್ ಎಷ್ಟ ಬೇಕೋ ಅಷ್ಟ್ ಬಂದ್ರೆ ಅದ್ ಒಳ್ಳೇ ಮಳಿ. ನಾವ್ ಹೀಂಗೆ ಇದ್ದ್ ಬದ್ದ್ ಗೆದ್ದಿನೆಲ್ಲಾ ಮಣ್ಣ್ ತುಂಬ್ಸಿ ತುಂಡ್ ತುಂಡ್ ಮಾಡಿ ಸೈಟ್ ಅಂದೇಳಿ ಮಾರುಕ್ ಹೊರ್ಟ್ ಮೇಲೆ, ರಸ್ತಿ ಅಗ್ಲ…ಮಣ್ಣ್ ಮಶಿ ಅಂದೇಳಿ ನೂರಾರ್ ವರ್ಷ ಬಾಳಿ ಬದ್ಕಿದ್ ಮರದ್ ಬುಡಕ್ ಕೊಡ್ರಿ ಹಾಕ್ರೆ ಹೀಂಗೆ ಆಪ್ದ್ ಅಲ್ದಾ?ಹಳ್ಳಾಡಿ ಜಯ್ರಾಮ್ ಶೆಟ್ರ್ “ಹುಲಿಯಾದ ಕಾಳ”ದಗೆ ಹೇಳು ಹಾಂಗೆ ಕೆಲವ್ ವರ್ಷ ಹನ್ನೊಂದ್ ತಿಂಗ್ಳೂ ಮಳಿ, ಕೆಲವ್ ವರ್ಷ ಒಂದ್ ತಿಂಗ್ಳೂ ಮಳಿ ಇಲ್ದೆ ಹೋದಾಂಗ್ ಆಪ ಕಾಲ ಬತ್ತ್. ಹೆಚ್ಚ್ ದೂರ ಏನಿಲ್ಲ. ಹೇಳುವರ್ ಹೇಳುದ್…ಮಾತಿಗೆ… ಕಾಲ ಕೆಟ್ಟ್ ಹೋಯ್ತ್… ಕೆಟ್ಟ್ ಹೋದ್ದ್ ಕಾಲ ಅಲ್ಲ. ಅದ್ ಓಡುವಾಂಗೇ ಓಡ್ತಾ ಇತ್ತ್. ಕೆಟ್ಟ್ ಹೋದ್ದ್ ನಾವ್… ಹೌದಾ ಸುಳ್ಳಾ?

ಹೀಂಗೆ ಮಾತಾಡ್ತಾ ಮಾತಾಡ್ತಾ ನೆನ್ಪಾಯ್ತ್. ಮೊನ್ನೆ ಇತ್ಲಾಯಿ ದೂರದರ್ಶನ ಚಂದನದಗೆ ನಮ್ಮ ಕುಂದಾಪ್ರದಗೆ ನೆಡದ್ ಮಧುರ ಮಧುರವೀ ಮಂಜುಳಗಾನ ಬಂದಿತ್. ಅದ್ರಗೆ ಏಎಸ್ಸೆನ್ ಹೆಬ್ಬಾರ್ರ್ ಮತ್ತ್ ವೈದೇಹಿ ಮಾತಾಡಿದ ಕುಂದಾಪ್ರ ಕನ್ನಡ ಕೇಂಡ್ ಮಸ್ತ್ ಖುಷಿ ಆಯ್ತ್. ನೀವೂ ಕಂಡ್ ಖುಷಿಪಟ್ಟಿರಿ ಅಲ್ದಾ?

ಮತ್ತೆ ನಿಮ್ಗೆ ಈ “ಕಿಚ್ಚ್ ಹಿಡಿದ್ ಮಳಿ” ನಮೂನಿದೆ ಬೇರೆ ಶಬ್ದ ಸಿಕ್ರ್ ಹೇಳಿ, ಭಾಷಿ ಚಂದ ಎಲ್ಲರೂ ಒಟ್ಟಾಯಿ ಕಾಂಬ-ಕೇಂಬ


ಅಂತೂ ಇಂತೂ ಕುಂದಾಪ್ರ ಕನ್ನಡದ ತಳಿಕಂಡಿಯಗೆ ನೀಕಿ ಕಂಡ್ರೆ 100ನೇ ಪೋಸ್ಟ್ ಮಂಡಿ ಹಾಕದ್ದ್ ತೋರ್ತಾ ಇತ್ತ್ 🙂

“ಕುಂದಗನ್ನಡದ ಅಂದಕ್ಕೊಂದು ಪುಟ್ಟ ತಳಿಕಂಡಿ” ಅಂದೇಳಿ ಟ್ಯಾಗ್ ಲೈನ್ ಇಟ್ಟ ಈ ಬ್ಲಾಗ್ ಶುರು ಮಾಡಿ ಮೊನ್ನೆ ಮೇ 11ಕ್ಕ್ ಭರ್ತಿ ಐದ್ ವರ್ಷ ತುಂಬ್ತ್ ಕಾಣಿ…

ಬ್ಲಾಗಿನ ಬಾಗ್ಲಿಗ್ ಬಂದ್ ನೀಕಿ ಕಂಡರ್, ಹೊಸ್ಲ್ ಮೇಲೆ ನಿಂತ್ಕಂಡ್… ಹ್ವಾಯ್ ಈ ಭಾಷಿ ನಮ್ಗ್ ಬತ್ತಿಲ್ಲ ಮರ್ರೆ ಅಂದೇಳಿ ಹೊಸ್ಲ್ ದಾಟುದಾ ಬ್ಯಾಡದಾ ಅಂದ್ ಅನ್ಮಾನದಗೆ ಈ ಬದಿಗ್ ಬಂದರ್… ಎಂತಾ ಬರ್ದರೂ ಲಾಯ್ಕಿತ್ತ್ ಅಂದ್ ಬೆನ್ನ್ ತಟ್ಟಿದರ್, ಬರುಕ್ ಎಂತದೂ ಸಿಕ್ದೇ… ಯಾವ್ದಾರೂ ಪಿಚ್ಚರಿನ್ ಪದ್ಯ ಹಿಡ್ಕಂಡ್…ಅದಕ್ ಒಂಚೂರ್ ಕುಂದಾಪ್ರ ಕನ್ನಡ ಒಗ್ಗರ್ಣಿ ಹಾಕ್ರೂ, ಬೇಜಾರ್ ಮಾಡ್ಕಣದೇ ಬರೀ ಒಗ್ಗರ್ಣಿ ಪರಿಮಳಕ್ಕೆ ಬಂದ್ ಓದಿ ಹೊದರ್, ಕುಂದಾಪ್ರ ಕನ್ನಡ ಬ್ಲಾಗಿಗೆ ಖಾಯಂ ಆಯಿ ಬಂದ್… ಕಂಡ್ ಖುಷಿಯಾದ್ದ್ ಹೇಳಿ, ಬರುಕ್ ಉಮೇದ್ ಬರ್ಸಿದರ್… ನಾ ಬರ್ದ್ ಬರಹ, ಅಣಕ, ಜೋಕ್ ಇದಕ್ಕೆಲ್ಲಾ ಎಷ್ಟೋ ಸರ್ತಿ ಬರುಕ್ ಉಮೇದ್ ಬಪ್ಪಂಗ್ ಅವ್ರೂ ಬರ್ದ್ ಓದಿ ಮೆಚ್ಚಿ ಜೈ ಅಂದರ್…. ನೆನ್ಪ್ ಮಾಡ್ಕಂಬ್ಕ್ ಹೋರೆ… ಸುಮಾರ್ ಜನ ಇದ್ರ್… ಅವರಿಗೆಲ್ಲಾ ಬರ್ದೇ ಒಂದ್ ಥ್ಯಾಂಕ್ಸ್ ಹೇಳಿ ಬಿಟ್ರ್ ಸಾಕಾ?
ಹಂಗಾರ್ ಅವರ ಪ್ರೋತ್ಸಾಹಕ್ ನಾ ಕೊಡು ಮರ್ಯಾದಿ ಅಂದ್ರೆ… ಹೀಂಗೇ ಎಂತಾರೂ ಮಂಡಿಗ್ ಬಂದದ್ದ್ ನಾಕ್ ಅಕ್ಷರ ಬರ್ದ್ ಅಷ್ಟೇ. ಅದ್ ಬಿಟ್ರೆ ನಂಗ್ ಬೇರೆ ಎಂತದೂ ಬತ್ತಿಲ್ಲ, ಅದ್ ಬಿಟ್ರ್ ನನ್ನತ್ರ ಬೇರೆ ಎಂತದೂ ಇಲ್ಲ ಅಂದೇಳಿ ಗಟ್ಟಿ ಗೊತ್ತಾಯಿತ್.

ಈ ಐದ್ ವರ್ಷದಗ್ ಹಾಂಟ್ ಹಾಕದ್ದ್ ಎಷ್ಟ್? ನನ್ ಇನ್ನೊಂದ್ ಬ್ಲಾಗ್ ಮನಸಿನ ಮರ್ಮರಕ್ಕ್, ಅಲ್ ಬರು ಅಣಕಕ್ಕ್ ಕೊಟ್ಟ್ ಸಮ್ಯದಗೆ ಒಂದ್ ಚೂರೂ ಪಾಲ್ ನಂಗ್ ಕೊಡುದಿಲ್ಯಾ ಅಂದೇಳಿ ಈ ಬಡಬ್ಬಿ ಮಗು ಮರ್ಕತ್ತಲೇ ಮರ್ರೆ… 🙂 ಆ ಕಿಚ್ಚ್ ಹಿಡದ್ದ್ ನೆನಪಿನ ಕವನ ಅಂದೇಳಿ ನಯಾ ಪೈಸೆ ಉಪ್ಯೋಗ್ ಇಲ್ದಿದ್ದ್ ಕುಟ್ಟಿ ಬೆನ್ನ್ ತಟ್ಕಂಬ್ದ್ ಎಂತಕೆ, ಈ ಬದಿಗೂ ಚೂರ್ ನೀಕಿ ಕಾಣ ಮಾರಾಯಾ ಅಂತ್ ಹೇಳ್ದೆ ಇದ್ರೂ ನಂಗ್ ಅರ್ಥ ಆತ್ತ್. ಆ ಬ್ಲಾಗ್ ಈ ಬ್ಲಾಗ್ ಶುರು ಆದ್ದ್ ಹೆಚ್ಚು ಕಡ್ಮಿ ಒಂದೇ ಸುರಿಗೆ. ಇದ್ ಒಂದ್ 35-40 ದಿನ ತಡ್ದ್ ಹುಟ್ಟಿತ್ ಅಂಬ್ದ್ ಬಿಟ್ರೆ… ಹೆಚ್ಚು ಕಡ್ಮಿ ಒಟ್ಟೊಟ್ಟಿಗೆ ಶುರುವಾದ್ದ್ ಈ ಎರ್ಡ್ ದೋಣಿ ಯಾಪಾರ 🙂 ಅಲ್ 228 ಪೋಸ್ಟ್ ಹಾಕಿದೆ… ಇಲ್ಲ್ ಮಾತ್ರ ಇನ್ನೂ ಗುರ್ಟತಾ ಇತ್ತಲೇ ಕಾಣ ಅಂದೇಳಿ ನನ್ನ್ ಹಂಗ್ಸುಕ್ ಸುರು ಮಾಡ್ತ್. ಅದ್ರ್ ದೆಸಿಯಿಂದ್ಲೆ ಇವತ್ತ್ ನೂರನೇ ಮೆಟ್ಲ್ ಕಲ್ ಬುಡಕ್ಕ್ ಬಂದ್ ನಿಂತಿತ್…

ಇದೆಲ್ಲದ್ರ್ ಮಧ್ಯ ನಂಗ್ ಸಮ್ಧಾನ ಮತ್ ಖುಷಿ ಕೊಟ್ಟದ್ದ್ ಅಂದ್ರೆ ಈ ಬ್ಲಾಗಿನ ಪೋಸ್ಟಿನ್ ಹೆಳಿಯಗೆ ನಂಗ್ ಒಟ್ ಮಾಡುಕ್ ಸಿಕ್ಕಿದ್ ಕುಂದಾಪ್ರ ಕನ್ನಡ ಶಬ್ದ… ಕುಂದಾಪ್ರ ಪದಾರ್ಥ ಅಂತ್ ಒಂದ್ ಪೋಸ್ಟ್ ಹಾಕಿ ಸುಮಾರ್ ಶಬ್ದ ಸಿಕ್ಕಿತ್… ಅದನ್ನ ಹುಡ್ಕುಕೆ ಎಷ್ಟೋ ಜನ ಉಪ್ಕಾರ ಮಾಡಿರ್. ಅವ್ರನ್ನ್ ನೆನ್ಪ್ ಬಿಟ್ರ್ ಹ್ಯಾಂಗ್ ಹೇಳಿ. ಅಣಕ್-ಪಣಕ್ ಜೋಕ್-ಗೀಕ್ ಅಂದೇಳಿ ಸುಮಾರ್ ಇತ್ಲಿತ್ಲಾಯ್ ಹೆಚ್ಚ್ ಬರದ್ದ್ ಒಂದ್ ನಮನಿ ಗಮ್ಮತ್ತಿನ ಬರಹ. ಆದ್ರೂ ಸೈತ ಬ್ಲಾಗ್ ಶುರು ಮಾಡು ಸುರಿಗ್ ನಾ ಇಟ್ಟ “ಕುಂದಾಪ್ರ ಕನ್ನಡದ ಅಂದಕ್ಕೊಂದು ಪುಟ್ಟ ತಳಿಕಂಡಿ”ಅಂಬುದ್ ನೆನ್ಪ್ ಹೊಯ್ದೆ ಇರ್ಲಿ ಅಂಬ ಆಸಿ ಸತೇ ಇತ್ತ್… ಇದನ್ನ್ ಹೇಳುವಷ್ಟತಿಗೆ ಅರ್ಧ ಬರ್ದದ್ ಕತಿ ಕುಶಾಲ್ ಮಾಡತ್ತ್… ಕಂಡ ಯಕ್ಷಗಾನ ಪ್ರಸಂಗ ನನ್ ಬಗ್ಗೆ ಬರುಕ್ ಏನ್ ಧಾಡಿ ನಿಂಗ್ ಅನ್ನತ್. ವೈದೇಹಿ ಕತಿ ಪುಸ್ತಕ ಹೇಳತ್ತ್… ಒಂದೊಂದ್ ಕತಿ ಬಗ್ಗೂ ಬರ್ದಿರೆ ಅದೇ ನೂರ್ ಪೋಸ್ಟ್ ಆತಿತ್ತಲೇ ಮಾರಾಯ ಅಂತ್ ಕಣ್ಣಿಗ್ ಕೈ ಹಾಕಿ ಕಾಂಬು ಹಂಗ ಮಾಡತ್ತ್. ಕಾಂಬ ಎಲ್ಲದನ್ನೂ ನೆನ್ಪ್ ಇಟ್ಕಂತೆ. ಹೀಂಗೇ ನಿಮ್ಮಂತರ್ ಪ್ರೋತ್ಸಾಹ ಕೊಟ್ರೆ… ಯಾಕಾತಿಲ್ಲ ಒಂದ್ ಕೈ ಕಂಡೇ ಬಿಡ್ಕ್ ಅಂಬ್ ಉಮೇದ್ ಇತ್ತ್… 🙂

ಇನ್ನೊಂದ್ ವರ್ಷ ಆಪಲ್ಲಿವರಿಗ್ ಅದ್ರಗ್ ಎಷ್ಟ್ ಕೈ ಹಿಡ್ದ್ ಬರ್ಸತ್ತ್ ಕಾಂಬ… ಆಶಿ ಅಂತೂ ಇತ್ತ್… ಆತ್ತಾ… ಕಾಂಬ 🙂

ಇಷ್ಟ್ ಬರುಕ್ ಕಲ್ಸಿ ಕೊಟ್ಟ ಕುಂದಾಪ್ರ ಕನ್ನಡ ಭಾಷಿಗೊಂದ್ ಪ್ರೀತಿಯ ನಮಸ್ಕಾರ ಹ್ವಾಯ್…

ನೀಲಿ ಮತ್ ಜೂಲಿ ಕತಿ ಗೊತ್ತಿತಾ? ಕುಂದಾಪ್ರ ಪಿ.ಜೆ…ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 18

Posted: ಮೇ 22, 2013 in ಇತ್ಯಾದಿ.., ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಜೋಕ್ಸ್, ಕುಂದಾಪುರ ಕನ್ನಡ ಪೀಜೆ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಜೋಕ್ಸ್, ಕುಂದಾಪ್ರ ಕನ್ನಡ ಪೀಜೆ, ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದ, kundaapra kannada, kundaapra kannada PJ, kundapra, kundapra kannada, kundapra kannada jokes, kundapur, kundapur kannada, kundapura, kundapura kannada, kundapura kannada jokes, kundapura kannada PJ
ಟ್ಯಾಗ್ ಗಳು:, , , , , , , , , , , , , , , , , , , , , , , , , , , , ,

ನಿಮ್ಗೆ ನೀಲಿ ಮತ್ ಜೂಲಿ ಕತಿ ಗೊತ್ತಿತಾ?

ಗೊತ್ತಿಲ್ದೀರ್ ಈ ಪೀಜೆ ಓದಿ ಕಾಣಿ… ಓದಿ ಆರ್ ಮೇಲ್ ಗೊತ್ತಾತ್ತ್ 🙂

ಕುಂದಾಪ್ರದಗೆ ಜೂಲಿ ಮತ್ತೆ ನೀಲಿ ಅಂದೇಳಿ ಇಬ್ರ್ ಅವ್ಳಿ-ಜವ್ಳಿ ಅಕ್ಕ ತಂಗಿ ಇದ್ದಿರಂಬ್ರ್

ಅದ್ರಗೆ ನೀಲಿ ಅಂಬಳಿಗೆ ಬಾರಿ ಹಟ. ತಾನ್ ಹೇಳದ್ದೇ ಆಯ್ಕ್

ಅವ್ಳ್ ಹೇಳದ್ದ್ ಆಪಲ್ಲಿವರಿಗ್… ಬಿಡುದೇ ಇಲ್ಲ… ಹಸಿಗ್ ಹಿಡದ್ ಹೇಲ್ ಕಣಗೆ… ಒಂದೇ ಹಟ

ಜೂಲಿಗ್ ಎಂತ ತಂದ್ರೂ… ನೀಲಿಗೂ ತರ್ಕೇ… ಇಲ್ದಿರ್ ಗಲಾಟಿ ಬಿದ್ದ್ ಹೊತ್ತ್

ಅವ್ಳಿಗೆ ಗೊಂಬಿ ತಂದ್ರೆ ಇವ್ಳಿಗೂ ಬೇಕ್… ಅವ್ಳಿಗೆ ಹೊಸ ಅಂಗಿ ತಂದ್ರೆ ಇವ್ಳಿಗೂ ಹಾಂಗಿದ್ದೇ ಅಂಗಿ ಬೇಕ್

ಒಟ್ರಾಶಿ ಅಪ್ಪ ಅಮ್ಮನ ಕತಿ ಹೈಲ್ 🙂

ಹೀಂಗೆ ಸುಮಾರ್ ಮಳ್ಗಾಲ ಕಳಿತ್… ಇಬ್ರಿಗೂ ಮದಿ ಆಯ್ತ್.

ನೀಲಿದ್ ಹಟ ಮದಿ ಆರೂ ಕೈದ್ ಆಯಲ್ಲ. ಜೂಲಿ ಮನಿಗೆ ಫ್ರಿಜ್ ಬಂದ್ರೆ ಇವ್ಳ ಮನಿಗೂ ಬಂತ್. ಜೂಲಿ ಮನಿಗೆ ಎ.ಸಿ. ಬಂದ್ರೆ ನೀಲಿ ಮನಿಗೂ ಬಂತ್

ಒಟ್ಟ್ ಕಟ್ಕಂಡ್ ಗಂಡ ಹೈಲಾದ 🙂

ಆರೂ ಅಕ್ಕ-ತಂಗಿ ಮಾತ್ರ ಭಾರೀ ಒಗ್ಗಟ್ಟಗ್ ಇದ್ದಿರ್.

ಒಂದಿನ ಜೂಲಿ ಒಂದ್ ಬಸ್ ತಕಂಡ್ಳು… ನೀಲಿಯೂ ಗಂಡನ ಹತ್ರ ದಮ್ಮಯ್ಯ ಹಾಕಿ ಒಂದ್ ಬಸ್ ತಕಂಡೇ ಬಿಟ್ಳು

ಒಂದ್ ಆದಿತ್ಯವಾರ ಇಬ್ರೂ… ಅವ್ರ ದೊಸ್ತಿಗಳೆಲ್ಲಾ ಒಟ್ಟಾಯಿ, ಮರವಂತೆ ಬೀಚಿಗೆ ಪಿಕ್‌ನಿಕ್ಕಿಗೆ ಬಸ್ಸಗ್ ಹೋರ್

ಎರ್ಡೂ ಬಸ್ ನಿಲ್ಸಿ, ಎಲ್ಲರೂ ಬೀಚ್ ಬದಿಗ್ ಹೋಯಿ ತಿರ್ಗಾಡಿ ಬಂದ್ರ್

ನೀಲಿ ಎಲ್ಲರ್ಕಿಂತ ಮೊದ್ಲ್ ಬಂದ್, ಎರ್ಡೂ ಬಸ್ ಹೊಗ್ಗಿ ಕಂಡ್ರೆ… ಎಂಥ ಇತ್ತ್… ಬಸ್ಸಿನ ಸ್ಟೇರಿಂಗ್, ಸೀಟ್, ಗೇರ್, ಹಾರ್ನ್ ಎಲ್ಲಾ ಯಾರೋ ಕದ್ಕ ಹೋಯಿರ್… ಎರ್ಡೂ ಬಸ್ಸಿಂದ್ !!

ಇದನ್ನ್ ಕಂಡ್ಕಂಡ್… ಜೂಲಿಯತ್ರ ಮರ್ಕತಾ ಮರ್ಕತಾ… ನೀಲಿ ಎಂತ ಹೇಳಿದ್ಲ್ ಗೊತ್ತಾ?
.
.
.
.
.
.
.
.
.
.
.
.
.
.
.
.
.
.
ನಾ ಕುಚ್ ‘ತೇರೇ ಬಸ್’ ಮೇ ಜೂಲಿ…… ನಾ ಕುಚ್ ‘ಮೇರೆ ಬಸ್’ ಮೇ…… 🙂 🙂 🙂

ಕುಂದಾಪ್ರ ಪಿ.ಜೆ…ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 17

Posted: ಮೇ 22, 2013 in ಇತ್ಯಾದಿ.., ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಜೋಕ್ಸ್, ಕುಂದಾಪುರ ಕನ್ನಡ ಪೀಜೆ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಜೋಕ್ಸ್, ಕುಂದಾಪ್ರ ಕನ್ನಡ ಪೀಜೆ, ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದ, kundaapra kannada, kundaapra kannada PJ, kundapra, kundapra kannada, kundapra kannada jokes, kundapur, kundapur kannada, kundapura, kundapura kannada, kundapura kannada jokes, kundapura kannada PJ
ಟ್ಯಾಗ್ ಗಳು:, , , , , , , , , , , , , , , , , , , , , , , , , , , , ,

ಕುಂದಾಪ್ರ ಕನ್ನಡ ಪಿ.ಜೆಗಳು (Kundapura kannada PJs)…

ಇಲ್ಲ್ ಒಟ್ಟ್ ಮೂರ್ ಕುಂದಾಪ್ರ ಕನ್ನಡ ಪೀಜೆ ಇತ್ತ್ … ಎಲ್ಲಾ ಗಮ್ಮತ್ ಇತ್ತ್ ಕಾಣಿ 🙂

PJ 1
ಒಂದ್ ಕೆರಿಯಗೆ ಹತ್ತ್ ಮೀನ್ ಇದ್ದಿದೋ. ಅದ್ರಗೆ ಒಂದ್ ಮೀನ್ ಸತ್ತೋಯ್ತ್.

ಅದ್ ಸತ್ ಹೋರ್ ಮೇಲೆ, ಕೆರಿ ನೀರ್ ಒಂದ್ ಇಂಚ್ ಜಾಸ್ತಿ ಆಯ್ತಂಬ್ರ್ ಎಂತಕೆ?

.

.

.

.

.

.

.

.

.

.

.

.

.

.

.

ಎಂತಕಂದ್ರೆ, ಉಳದ್ದ್ ಒಂಬತ್ ಮೀನ್ ಮರ್ಕತ್ವಲಾ ಅದಕ್ಕೆ 🙂 🙂 🙂

__________________________________________________________________________
PJ 2
ಒಂದ್ ಮನಿ ಗ್ವಾಡಿ ಮೇಲ್ ಸುಮಾರ್ ಹಲ್ಲಿ ಇದ್ದಿದೋ. ಅದ್ರಗೆ ಒಂದ್ ಹಲ್ಲಿ ಪದ್ಯ ಹೇಳ್ತ್ ಅಂಬ್ರ್

ಪದ್ಯ ಮುಗ್ದ್ರ್ ಕೂಡ್ಲೇ, ಪದ್ಯ ಹೇಳದ್ದ್ ಹಲ್ಲಿ ಒಂದ್ ಬಿಟ್ಟ್… ಉಳದವೆಲ್ಲಾ ನೆಲಕ್ಕ್ ಬಿದ್ದೋ ಅಂಬ್ರ್ ಎಂತಕೆ?

.

.

.

.

.

.

.

.

.

.

.

.

.

.

.

.

.

.

ಎಂತಕಂದ್ರೆ, ಪದ್ಯ ಲಾಯ್ಕ್ ಇದ್ದಿತ್ ಅಂದೇಳಿ ಉಳ್ದವೆಲ್ಲಾ… ಚಪ್ಪಾಳೆ ತಟ್ದೊ ಅದಕ್ಕೇ 🙂 🙂 🙂
__________________________________________________________________________
PJ 3
ಈಶ್ವರ ದೇವ್ರಿಗೆ ಬಿಲ್ಪತ್ರಿ (ಬಿಲ್ವ ಪತ್ರೆ) ಕಂಡ್ರೆ ಕುಶಿ ಅಂಬ್ರು

.

.

.

.

.

.

ಕೃಷ್ಣ ದೇವ್ರಿಗೆ ತುಳ್ಸಿಪತ್ರೆ ಕಂಡ್ರೆ ಕುಶಿ ಅಂಬ್ರು…

.

.

.

.

.

.

ಹಂಗಾರೆ ಯಮರಾಯನಿಗೆ ಎಂತ ಕಂಡ್ರೆ ಕುಶಿ ಹೇಳಿ ಕಾಂಬ…?

.

.

.

.

.

.

ಆಸ್ಪತ್ರಿ… 🙂 🙂 🙂
__________________________________________________________________________

ಆನಿ ಬಾಳಿಹಣ್ಣಿನ್ ಕತಿ ಗೊತ್ತಾ? ಕುಂದಾಪ್ರ ಪಿ.ಜೆ…ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 16

Posted: ಮೇ 22, 2013 in ಇತ್ಯಾದಿ.., ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಜೋಕ್ಸ್, ಕುಂದಾಪುರ ಕನ್ನಡ ಪೀಜೆ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಜೋಕ್ಸ್, ಕುಂದಾಪ್ರ ಕನ್ನಡ ಪೀಜೆ, ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದ, kundaapra kannada, kundaapra kannada PJ, kundapra, kundapra kannada, kundapra kannada jokes, kundapur, kundapur kannada, kundapura, kundapura kannada, kundapura kannada jokes, kundapura kannada PJ
ಟ್ಯಾಗ್ ಗಳು:, , , , , , , , , , , , , , , , , , , , , , , , , , , , ,

ನಿಮ್ಗ್ ಆನಿ ಮತ್ ಬಾಳಿ ಹಣ್ಣಿನ್ ಕತಿ ಗೊತ್ತಿತಾ ನಿಮ್ಗೆ?

ಗೊತ್ತಿಲ್ದೀರ್ ಇಲ್ಲಿತ್ತ್ ಕಾಣಿ ಆ ಕತಿ  🙂

ಕುಂದಾಪ್ರ ಕನ್ನಡ ಪಿ.ಜೆ (Kundapura kannada PJ)
_____________________________________________________________

elephant

 

 

 

 

 

 

 

 

 

ಚಿತ್ರ ಕೃಪೆ: tech-queries.blogspot.com

ಒಂದ್ ಆನಿ ಇದ್ದಿತ್… ಆ ಆನಿಗ್ ಜೋರ್ ಹಸು ಆಯಿದ್ದಿತ್ತ್… ಅದ್ರ ಎದ್ರ್ 5 ಬಾಳಿಹಣ್ಣ್ ಇದ್ದಿತ್
ಆರೂ ಆನಿ ಬಾಳಿಹಣ್ಣ್ ತಿನಲ್ಲ ಎಂತಕೆ?
.
.
.
.
.
.
ಎಂತಕಂದ್ರ್ ಆ ಬಾಳಿಹಣ್ಣ್ ಪ್ಲಾಸ್ಟಿಕ್ಕಿದ್……ಹೆ…ಹೆ…
.
.
.
.
.
.
ಈಗ ನಿಜವಾದ್ ಬಾಳಿಹಣ್ಣೇ ಇದ್ದಿತ್… ಆದ್ರೂ ಆನಿ ಬಾಳಿಹಣ್ಣ್ ತಿನ್ಲಿಲ್ಲ… ಎಂತಕೆ?
.
.
.
.
.
.
ಎಂತಕಂದ್ರ್ ಈ ಸರ್ತಿ ಆನಿ ಪ್ಲಾಸ್ಟಿಕ್ಕಿದ್……ಹೆ…ಹೆ…
.
.
.
.
.
.
ಈಗ ಆನಿ, ಬಾಳಿಹಣ್ಣ್ ಎರ್ಡೂ ನಿಜವಾದ್ದೇ… ಆದ್ರೂ ಆನಿ ಬಾಳಿಹಣ್ಣ್ ತಿನಲ್ಲ ಎಂತಕೆ?
.
.
.
.
.
.
ಎಂತಕಂದ್ರ್ ಬಾಳಿಹಣ್ಣ್ ಟಿ.ವಿ.ಯೊಳಗೆ ಇದ್ದಿತ್……ಹೆ…ಹೆ…
.
.
.
.
.
.
ಈಗ ಆನಿ ಬಾಳಿಹಣ್ಣ್ ಎರ್ಡೂ ನಿಜವಾದ್ದೇ… ಎರ್ಡೂ ಟಿ.ವಿ.ಯೊಳಗೆ ಇದ್ದಿತ್ತ್… ಆದ್ರೂ ಆನಿ ಬಾಳಿಹಣ್ಣ್ ತಿನಲ್ಲ ಎಂತಕೆ?
.
.
.
.
.
.
ಎಂತಕಂದ್ರ್ ಈ ಸರ್ತಿ… ಎರ್ಡೂ ಬೇರೆ ಬೇರೆ ಚಾನಲ್ ಒಳ್ಗ್ ಇದ್ದಿತ್……ಹೆ…ಹೆ…
.
.
.
.
.
.
ಈಗ ಆನಿ ಬಾಳಿಹಣ್ಣ್ ಎರ್ಡೂ ನಿಜವಾದ್ದೇ… ಎರ್ಡೂ ಟಿ.ವಿ.ಯೊಳಗೆ ಇದ್ದಿತ್ತ್… ಎರ್ಡೂ ಒಂದೇ ಚಾನಲ್ ಒಳ್ಗೆ ಇದ್ದಿತ್… ಆದ್ರೂ ಆನಿ ಬಾಳಿಹಣ್ಣ್ ತಿನಲ್ಲ ಎಂತಕೆ?
.
.
.
.
.
.
ಎಂತಕಂದ್ರ್ … ಟಿ.ವಿ. ಆಫ್ ಆಯಿದ್ದಿತ್……ಹೆ…ಹೆ… 🙂  🙂  🙂

ಹಚ್ ನಾಯಿ ಹುಚ್ಚ್… ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 15

Posted: ಮೇ 22, 2013 in ಇತ್ಯಾದಿ.., ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಜೋಕ್ಸ್, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಜೋಕ್ಸ್, ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದ, kundaapra kannada, kundapra, kundapra kannada, kundapra kannada jokes, kundapur, kundapur kannada, kundapura, kundapura kannada, kundapura kannada jokes
ಟ್ಯಾಗ್ ಗಳು:, , , , , , , , , , , , , , , , , , , , , , , , ,

ಇದು ಸುಮಾರ್ ಹಿಂದಿನ ಕತಿ…(ಇದ್ ಬರ್ದೂ ಸುಮಾರ್ ಸಮಿ ಆಯ್ತ್) ಆಗ್ಳಿಕೆ ಟಿವಿಯಗೆ ಹಚ್ ಎಡುಟೈಸ್ ಬತ್ತಿತ್ತ್ ಅಲ್ದಾ? ಅದ್ರಗೆ ಒಂದ್ ನಾಯ್ ಮರಿ ಬತ್ತಿತ್ತ್ ನೆನ್ಪಿತ್ತಾ? ಅದನ್ ಒಂದಿನ ಕುಟ್ಟಿಯಣ್ಣ ಕಂಡ್ರ್ ಅಂಬ್ರ್. ಅದನ್ನ ಕಂಡರಿಗೆ ಆ ನಾಯಿ ಮರಿ ಹಾಂಗಿದ್ದೇ ಒಂದ್ ನಾಯಿ ಮರಿ ಸಾಕ್ಕ್ ಅಂದೇಳಿ ಭಾರೀ ಮನ್ಸ್ ಆಯ್ತ್. ಹುಚ್ ನಾಯಿ ಆರೂ ಅಡ್ಡಿಲ್ಲೆ ಹಚ್ ನಾಯಿ ಕಣಗಿದ್ರೆ ಸಾಕ್ ಅಂಬ್ ಹುಚ್ಚ್ ಹೆಚ್ಚಾಯಿ, ಅವ್ರ್ ಕಿಶಿಯಿಂದ ಸಾವ್ರ್ ರುಪಾಯಿ ಕರ್ಚಾಯಿ… ಕಡಿಕೂ ಒಂದ್ ಹಚ್ ನಾಯಿ ತಕಂಡೇ ಬಂದ್ರ್

hutch
ನಾಯಿ ಬಂತ್ ಹೌದ್… ಆರೇ ಅದಕ್ ಉಳ್ದ್ ಬಳ್ವಟಿ ನಾಯ್ ಕಣಗೆ ಸಿಕ್ಕದ್ ಸುಡ್ಗಾಡ್ ಎಲ್ಲಾ ಹಾಕುಕಾತ್ತಾ… ಸಾವ್ರ್ ರೂಪಾಯಿ ನಾಯಿ ಅಲ್ದಾ ಮರ್ರೆ? ಸರಿ… ಹಂಗಾರ್ ನಾಯಿಗ್ ತಿಂಬುಕೆ ಎಂತಾ ಕೊಡುದ್….? ಕುಟ್ಟಿಯಣ್ಣ ಮಂಡಿ ಬಿಸಿ ಮಾಡ್ಕಂಡ್ ಆಲೋಚ್ನಿ ಮಾಡ್ರ್. ಸುಮಾರ್ ಹೊತ್ತ್ ಪಕ ಪಕ ಅಂದ್… ಕಡಿಗೂ ಟ್ಯೂಬ್ ಲೈಟ್ ಪಳ್ಕ್ ಅಂದೇಳಿ ಬೆಳ್ಕಾಯ್ತ್… 🙂

ಕುಟ್ಟಿಯಣ್ಣನ ದೋಸ್ತಿ ಒಬ್ಬ ಜೀನ್ಸಿನ ಅಂಗಡಿ ಇಟ್ಕಂಡಿದ. ಆ ಜೀನ್ಸಿನ ಅಂಗಡಿಯನ ಹತ್ರ ನಾಯಿಗೆ ತಿಂಬುಕ್ ಹಾಕುಕೆ ಎಂತಾರು ಸಿಕ್ಕುಕೂ ಸಾಕ್. ಅವನತ್ರವೇ ಕೇಂಬ ಅಂದೇಳಿ ಕುಟ್ಟಿಯಣ್ಣ ಆಲೋಚ್ನಿ ಮಾಡಿ, ಕೊಡಿ ಜಲ್ ಹಿಡ್ಕಂಡ್ ಹಗೂರ ಅಂಗ್ಡಿ ಬದಿಗ್ ಹೊರ್ಟ್ರ್. ಆರೇ ಇಲ್ಲೊಂದ್ ಗುಟ್ಟಿನ್ ವಿಷ್ಯ ಇತ್ತ್ ಮರ್ರೆ. ಮತ್ತೆಂತ ಅಲ್ದೇ… ಜೀನ್ಸಿನ ಅಂಗ್ಡಿಯಗೆ ಇವ್ರದ್ ಒಂದ್ಸಾವ್ರ್ ರುಪಾಯ್ ಕಡ ಇದ್ದಿತ್. ಆ ಕಡ ತೀರ್ಸುದ್ ಬಿಟ್ಕಂಡ್ ಇವ್ರ್ ಹಚ್ ನಾಯ್ ಮರಿ ಯಾಪಾರ ಮಾಡದ್ದ್ ಸುದ್ದಿ ಹಗೂರ ಜೀನ್ಸಿನ ಅಂಗ್ಡಿಯನ್ ಕೆಮಿಗೂ ಯಾರೋ ಹಾಕಿ ಇಟ್ಟಿರ್. ಅಂವ ‘ಅವ್ರ್ ಈ ಬದಿಗ್ ಬರ್ಲಿ… ಅವ್ರ ಬಳಿ ಬಿಡ್ಸತೆ ಇವತ್’ ಅಂತ ಲೆಕ್ಕ ಹಾಯ್ಕಂಡ್ ಕಾಯ್ತಾ ಕೂಕಂಡಿದ್ದ.

ಕುಟ್ಟಿಯಣ್ಣ ಹಗೂರ ಕೊಡಿ ಜಲ್ ಊರ್ಕಂಡ್… ಅಂಗ್ಡಿ ಬುಡಕ್ ಬಂದ್, ಜಗಲಿ ಮೇಲ್ ಕೂಕಂಡ್ರ್. ಮಳಿ ಬತ್ತಾ ಇದ್ದಿಪ್ಪುಕೋಯಿ ಅಂಗ್ಡಿ ಬಾಗ್ಲಗ್ ಸುಮಾರ್ ಜನ ಇದ್ದಿರ್. ಕುಟ್ಟಿಯಣ್ಣನ್ ಕಂಡ್ ಅಂಗ್ಡಿಯವ ಕೇಂಡ… “ಹ್ವಾಯ್, ಏನ್ ಬಂದದ್ದ್ ಈ ಬದಿಗೆ… ಇತ್ಲಾಯಿ ಭಾಳಾ ಅಪ್ರೂಪ” ಅಂದ ಹಗೂರಕ್ಕೆ ಕೊಯ್ಸಾಣಿ ನೆಗಿ ಸ್ವರದಗೆ. ಕುಟ್ಟಿಯಣ್ಣ ಹೇಳ್ರ್… “ಮತ್ತೆಂತ ಅಲ್ದಾ… ನಿಮ್ ಅಂಗ್ಡಿಯಗೆ… ನಾಯಿ ಬಿಸ್ಕತ್ತ್ ಇತ್ತನಾ?”

ಮೊದ್ಲೇ ಸಾವ್ರ್ ರುಪಾಯ್ ಬಾಕಿ ಕೊಡು ಬದ್ಲ್ ನಾಯಿ ತಕಂಡ್ ಬಂದಿರ್ ಅಂಬ್ ಸಿಟ್ ಇದ್ದಿತಾ? ಈಗ ಉರಿತಿಪ್ಪ್ ಬೆಂಕಿಗ್ ತುಪ್ಪ ಹಾಕ್ವರ್ ಕಣಗೆ ನಾಯಿ ಬಿಸ್ಕತ್ತ್ ಕೇಂಡ್ರಾ ಇಲ್ಯಾ, ಅವ್ನಿಗ್ ಪಿತ್ತ ನೆತ್ತಿಗ್ ಏರಿ ಎಲ್ಲಿಲ್ಲದ್ ಸಿಟ್ ಬಂದ್ ಬಿಡ್ತ್. “ನಾಯಿ ಬಿಸ್ಕತ್ತಾ… ಇತ್ತ್ ಕಾಣಿ… ಎಂತಾ… ಇಲ್ಲೇ ತಿಂತ್ರಿಯಾ ಪೆಕೆಟ್ ಕಟ್ಟಿ ಕೊಡುದಾ?” ಕೇಂಡ 🙂 ಅಲ್ಲಿದ್ದ ಹೆಣ್ಗಳೆಲ್ಲಾ… ಕಿಸ-ಕಿಸ ನೆಗಾಡುಕ್ ಸುರು ಮಾಡದೋ… ಮಕ್ಳೆಲ್ಲಾ ಹಲ್ ಚಿಲ್ದೋ.., ಹಳಿಯರ್ ಬೀಡಿ ಎಳ್ದರ್ ಕೆಮ್ಸು ಕಣಗ್ ಮಾಡಿ, ಕುಸ್ಕು ಕುಸ್ಕು ನೆಗಾಡುಕ್ ಶುರು ಮಾಡ್ರ್.

ಕುಟ್ಟಿಯಣ್ಣನ್ ಕತಿ ಹೈಲಲ್ದೆ…? ಮನಿಗ್ ಬಂದರೇ… ಗೋಣಿ ಚೀಲದಗ್ ನಾಯಿ ಮರಿನ್ ಕಟ್ಟಿ, ಸಾವ್ರ್ ರೂಪಾಯ್ ಕಿಚ್ಚ್ ಹಿಡ್ದ್ ಹೋಯ್ಲಿ ಅತ್ಲಾಯ್ ಅಂದೇಳಿ ಅದನ್ ರಸ್ತಿ ಬದಿ ಬಿಟ್ ಬಂದ್ರಂಬ್ರ್. ಈಗ್ಳೂ ಯಾವ್ದಾರೂ ನಾಯ್ ಕಂಡ್ರ್ ಸಾಕ್… ಕುಟ್ಟಿಯಣ್ಣನಿಗೆ ಹಳ್ತೆಲ್ಲಾ ನೆನ್ಪಾಯ್ ಸಿಟ್ ಬಂದ್ ಕಲ್ ಹೊಡ್ದ್ ಬೇರ್ಸ್ತ್ರ ಅಂಬ್ರ್ ಮರ್ರೆ 🙂

ಬಾಡಿ ಹೋದ್ದ್… ಬೊಂಡದಗೆ ನೀರ್ ಇಪ್ಪುದಿಲ್ಲಿಯೇ…(ಸುಮ್ನೆ ಕುಶಾಲಿಗ್ ಅಣಕ)

Posted: ಮೇ 21, 2013 in anaka, anakavaadu, ಅಣಕ, ಅಣಕವಾಡು, ಇತ್ಯಾದಿ.., ಕನ್ನಡ ರಿಮಿಕ್ಸ್, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಅಣಕ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಅಣಕ, ಕುಂದಾಪ್ರ ಕನ್ನಡ ರಿಮಿಕ್ಸ್, ಗಮ್ಮತ್ ಇತ್ತ್ ಕಾಣಿ..., kannada remix, kundaapra kannada, kundaapra kannada anaka, kundapra, kundapra kannada, kundapur, kundapur kannada, kundapura, kundapura kannada, kundapura kannada anaka, kundapura kannada remix
ಟ್ಯಾಗ್ ಗಳು:, , , , , , , , , , , , , , , , , , , , , , , , , , , ,

‘ಎರಡು ಕನಸು’ ಪಿಚ್ಚರಿನ ‘ಬಾಡಿಹೋದ ಬಳ್ಳಿಯಿಂದ’ ಹಾಡ್ ಕುಂದಾಪ್ರ ಕನ್ನಡದಗೆ… ಸುಮ್ನೆ ಕುಶಾಲಿಗ್ ಮರ್ರೆ 🙂

 

ಬಾಡಿ ಹೋದ್ದ್ ಬೊಂಡದಗೆ
ನೀರ್ ಇಪ್ಪುದಿಲ್ಲಿಯೇ

ಬಾಡಿ ಹೋದ್ದ್ ಬೊಂಡದಗೆ
ನೀರ್ ಇಪ್ಪುದಿಲ್ಲಿಯೇ
ಬತ್ತಿ ಇರದ ಚಿಮ್ಣಿಯಿಂದ
ದೀಪ ಉರ್ಸುಕಾತಿಲ್ಯೇ

ಮೆಣ್ಸ್ ತಿಂದ್ ಬಾಯಿಯೆಲ್ಲಾ
ಖಾರಆಯಿತ್ ಉರಿತಿತ್ತಲ್ದಾ
ಒಂದ್ಲೋಟ ನೀರಿಲ್ಲಿಯಾ?

ಬಾಡಿ ಹೋದ್ದ್ ಬೊಂಡದಗೆ
ನೀರ್ ಇಪ್ಪುದಿಲ್ಲಿಯೇ

ಹಣ್ ತಿನ್ನಲ್ಯೇ ಬೀಜ ತೆಗ್ದಿನೆ
ಅಂಗಡಿಯಲ್ ಮಾರುಕೆ
ಹಣ್ ತಿನ್ನಲ್ಯೇ ಬೀಜ ತೆಗ್ದಿನೆ
ಅಂಗಡಿಯಲ್ ಮಾರುಕೆ

ಪವಾಣಿ ಒಟ್ಟ್ ಮಾಡಿ-ನಾಕ್
ಹಬ್ಬದಗ್-ಹೊಡಿ ಹಾರ್ಸಕೇ
ಪವಾಣಿ ಒಟ್ಟ್ ಮಾಡಿ-ನಾಕ್
ಹಬ್ಬದಗ್-ಹೊಡಿ ಹಾರ್ಸಕೇ

ಬತ್ತಿ ಇರದ ಚಿಮ್ಣಿಯಿಂದ
ದೀಪ ಉರ್ಸುಕಾತಿಲ್ಯೇ

ಮೆಣ್ಸ್ ತಿಂದ್ ಬಾಯಿಯೆಲ್ಲಾ
ಖಾರಆಯಿತ್ ಉರಿತಿತ್ತಲ್ದಾ
ಒಂದ್ಲೋಟ ನೀರಿಲ್ಲಿಯಾ?

ಬಾಡಿ ಹೋದ್ದ್ ಬೊಂಡದಗೆ
ನೀರ್ ಇಪ್ಪುದಿಲ್ಲಿಯೇ

ಮಾಯಿನ್-ಹಣ್ ಕಣ್ಣಿಗ್ ಬಿದ್ರೆ
ಕಲ್ ಹೊಡ್ದಾರೂ ತಾಳ್ಸುವೆ
ಮಾಯಿನ್-ಹಣ್ ಕಣ್ಣಿಗ್ ಬಿದ್ರೆ
ಕಲ್ ಹೊಡ್ದಾರೂ ತಾಳ್ಸುವೆ

ಗಾಳಿಗ್ ಹಣ್ ಉದರಿ ಬಿದ್ರೆ
ಹೆಕ್ಕದೆ ಇಪ್ಪುಕೆ ಆಪುದೆ?
ಗಾಳಿಗ್ ಹಣ್ ಉದರಿ ಬಿದ್ರೆ
ಹೆಕ್ಕದೆ ಇಪ್ಪುಕೆ ಆಪುದೆ?

ಬಾಳಿ ಹಣ್ಣಾರೂ ತಿಂಬ ಅಂದ್ರೆ
ಪೂರ್ತಿ ಕಾಯಿ ಎಲ್ಲದೂ
ಹುಡ್ಕಂಡ್ ಹೋಪ ಗ್ವಾಯಿ… ಮರನ್ನ
ಸಿಕ್ವಾ ಬೀಜ ನಾಕಾರೂ

_____________________________________________________________________________
ಮೂಲ ಪದ್ಯ : ‘ಎರಡು ಕನಸು’ ಪಿಚ್ಚರಿನ ‘ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ’
ಕೃಪೆ: Namma Bengaluru(ಫೇಸ್ಬುಕ್)

ಬಾಡಿ ಹೋದ ಬಳ್ಳಿಯಿಂದ
ಹೂವು ಅರಳಬಲ್ಲದೆ

ಬಾಡಿ ಹೋದ ಬಳ್ಳಿಯಿಂದ
ಹೂವು ಅರಳಬಲ್ಲದೆ
ತಂತಿ ಹರಿದ ವೀಣೆಯಿಂದ ನಾದ
ಹರಿಯಬಲ್ಲದೆ

ಮನಸು ಕಂಡ ಆಸೆ ಎಲ್ಲ
ಕನಸಿನಂತೆ ಕರಗಿತಲ್ಲ
ಉಲ್ಲಾಸ ಇನ್ನೆಲ್ಲಿದೆ

ಬಾಡಿ ಹೋದ ಬಳ್ಳಿಯಿಂದ
ಹೂವು ಅರಳಬಲ್ಲದೆ

ಹಣತೆಯಲ್ಲಿ ದೀಪ ಉರಿಯೇ
ಬೆಳಕಿನಲ್ಲಿ ಬಾಳುವೆ
ಹಣತೆಯಲ್ಲಿ ದೀಪ ಉರಿಯೇ
ಬೆಳಕಿನಲ್ಲಿ ಬಾಳುವೆ

ಧರೆಯೆ ಹತ್ತಿ ಉರಿಯುವಾಗ
ಬದುಕಲೆಲ್ಲಿ ಓಡುವೆ
ಧರೆಯೆ ಹತ್ತಿ ಉರಿಯುವಾಗ
ಬದುಕಲೆಲ್ಲಿ ಓಡುವೆ

ತಂತಿ ಹರಿದ ವೀಣೆಯಿಂದ ನಾದ
ಹರಿಯಬಲ್ಲದೆ

ಮನಸು ಕಂಡ ಆಸೆ ಎಲ್ಲ
ಕನಸಿನಂತೆ ಕರಗಿತಲ್ಲ
ಉಲ್ಲಾಸ ಇನ್ನೆಲ್ಲಿದೆ

ಬಾಡಿ ಹೋದ ಬಳ್ಳಿಯಿಂದ
ಹೂವು ಅರಳಬಲ್ಲದೆ

ನೀರಿನಲ್ಲಿ ದೋಣಿ ಮುಳುಗೆ
ಈಜಿ ದಡವ ಸೇರುವೆ
ನೀರಿನಲ್ಲಿ ದೋಣಿ ಮುಳುಗೆ
ಈಜಿ ದಡವ ಸೇರುವೆ

ಸುಳಿಗೆ ದೋಣಿ ಸಿಲುಕಿದಾಗ
ಬದುಕಿ ಬರಲು ಸಾಧ್ಯವೆ?
ಸುಳಿಗೆ ದೋಣಿ ಸಿಲುಕಿದಾಗ
ಬದುಕಿ ಬರಲು ಸಾಧ್ಯವೆ?

ಬಾಳ ಪಗಡೆ ಆಟದಲ್ಲಿ
ಬರಿಯ ಕಾಯಿ ಎಲ್ಲರೂ
ನಡೆಸುವಾತ ಬೇರೆ… ಅವನ
ಇಚ್ಚೆ ಯಾರು ಬಲ್ಲರೂ?

ಯಾರತ್ರೇಳುದ್… ನನ್ನ್ ರಗ್ಳಿಯನ್ನು… ಪಣ್ಕು ಇಷ್ಟೇನೆ :-)

Posted: ಮೇ 21, 2013 in anaka, anakavaadu, ಅಣಕ, ಅಣಕವಾಡು, ಕನ್ನಡ ರಿಮಿಕ್ಸ್, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಅಣಕ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಅಣಕ, ಕುಂದಾಪ್ರ ಕನ್ನಡ ರಿಮಿಕ್ಸ್, ಗಮ್ಮತ್ ಇತ್ತ್ ಕಾಣಿ..., kannada remix, kundaapra kannada, kundaapra kannada anaka, kundapra, kundapra kannada, kundapur, kundapur kannada, kundapura, kundapura kannada, kundapura kannada anaka, kundapura kannada remix
ಟ್ಯಾಗ್ ಗಳು:, , , , , , , , , , , , , , , , , , , , , , , , , ,

ಒಂದ್ ಕುಂದಾಪ್ರ ಕನ್ನಡದ್ ಪದ್ಯ…. ಹೀಂಗೇ ಸುಮ್ನೆ… ‘ಲೈಫು ಇಷ್ಟೇನೆ’ ಪಿಚ್ಚರಿನ ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಮ್ಮು’ ಧಾಟಿಯಗೆ 🙂

ಯಾರತ್ರೇಳುದ್… ನನ್ನ್ ರಗ್ಳಿಯನ್ನು
ನಾಗರಬೆತ್ತದ ಪೆಟ್ಟಿಗೆ… ಹೆದ್ರಿ ಸಾಯುದು

ನಮ್ ಶಾಲಿ ಮಾಷ್ಟ್ರಿಗೆಲ್ಲಾ… ದೊಡ್ಡ್ ನಮಸ್ಕಾರ್ವೆ
ಕೆಮಿ ಗೆಂಡಿ ತಿಪ್ಪಿ ನನ್ನ… ಹೈಲ್ ಮಾಡ್ರಲ್ದೇ
ಸ್ಟಾಪ್ ರೂಮಗಾರು ಹೊಡಿನಿ… ನನ್ನ ಕರ್ಸ್ಕಂಡು
ಗಂಟಿ ಮೇಯ್ಸುದಾರು ಬೇಕೆ… ಶಾಲಿ ಸಾಯ್ಲಿಯತ್ಲೇ

ಯಾರತ್ರೇಳುದ್… ನನ್ನ್ ರಗ್ಳಿಯನ್ನ್
ಮಾಷ್ಟರದ್ ಕೋಲಿಗೆ… ಇಲ್ಯಾ ಲಗಾಮ್

ತುಂಬಾ ಲಾಯ್ಕ್ ಓದ್ತಾ ಅಂತ್….. ಅನ್ಸ್ಕಂಡಿದ್ದೆ ನಾನು… ಬಾಲ ವಾಡಿಯಾಗೇ
ಸ್ಲೇಟ್-ಕಡ್ಡಿ ತೆಗ್ದಿಟ್ಕಂಡ್… ಕೋಪಿ ಮಗ್ಗಿ ಬರಿತಾ ಇದ್ದೆ… ಚೂರು ತಪ್ಪಿಲ್ಯೇ

ಎಂತಕೆನೋ ನಮ್ಮ ಮಾಷ್ಟ್ರು… ಬಡ್ಗಿ ಹೊಡ್ದ್ ರಗ್ಳಿ ತೆಗ್ದೀರ್
ಹೆಣ್ಗಳ್ ಎದ್ರ್ ಮಾನ ತೆಗ್ದ್… ಕಿಮಿ ಗೆಂಡಿ ತಿಪ್ಪಿಬಿಟ್ರ್

ನಾನ್ ಈ ಶಾಲಿಗ್… ಇನ್ನ್ ಎಷ್ಟ್-ವರ್ಷ… ಮಣ್ಣ ಹೊರ್ಕೆನೋ
ಯಾಕ್ ನಂಗಿಂತಾ ಗೋಳು ಕೊಟ್ಟ್ ಕೊಲ್ತ್ರೋ… ಅರ್ಥ ಆತಿಲ್ಲ…

ಥೋ… ಯಾರತ್ರೇಳುದ್… ನನ್ನ್ ರಗ್ಳಿಯನ್ನು
ಎನ್ಸಾವೋ… ನನ್ ಬಡ್ಗಿ ಹೊಡ್ದೆ ಕೊಂದ್ಹಾಕ್ತ್ರ್-ಉ

ಶೀನ ಸಿಕ್ದ ಗ್ವಾಯ್-ಹಾಡ್ಯಲ್… ಶಾಲಿಗ್ ಹಾಂಟು ಹಾಕಿ ತಿರ್ಕಂಡ್… ಗ್ವಾಯ್-ಹಣ್ಣ ತಿಂತ್
ಕಲ್ ಹೊಡುದ್ರಲ್ ಇಬ್ರೂ ಮುಂದ್…ತಿಂತಾ ಗ್ವಾಯ್ ಹಣ್ಣ… ಬೀಜ-ಒಟ್ಟ್ ಮಾಡ್ತಿತ್ತ್
ಚಡ್ಡಿ ಕಿಸ್ಯಲ್ ತುಂಬತಾ ಹೋದೆ… ಒಟ್ಟಿಯಾಯಿ ಹರದು ಹೋಯ್ತು
ಗಂಟಿ ಹಿಂಡಲ್ ಹೆಂಗರು ಒಂದ್, ಬಳ್ಳಿ ಹರ್ಕಂಡ್ ತಪ್ಸ್ಕ ಹೋಯ್ತು
ಬಿಸ್ಲು ನೆತ್ತಿಗ್ ಬಪ್ಕೂ… ಸಾಕ್ ಆಯಿ… ಕೂಕಂತ್ ಇಬ್ರೂ
ಹೀಂಗೇ ಎಷ್ಟ್ ದಿವ್ಸಾ… ಶಾಲಿ ತಪ್ಸಿಕಂಡು… ಬಳ್ಕಂಡ್ ತಿರ್ಗ್ಲಕ್ಕು

ಶಾಲಿಗ್ ಹೊಪವಾ ಕಂಡರೆ… ಶಾಲಿ ಬಿಟ್ಟಾಯ್ತ್
ಮನಿಗ್ಹೋಪ ಮಕ್ಳ ಒಟ್ಟಿಗ್… ಸೇರ್ಕಂತ್ ಇಬ್ರೂ…

ಶಾಲಿ ರಜಿಯಿದ್ದಲ್ ಮೊನ್ನೆ… ಗಂಟಿ ಮೆಯ್ಸಕಂತಾ ನಾನು… ಗ್ವಾಯ್-ಹಾಡಿಗ್ ಹೋದ್ನೆ
ಬೆನ್ನ ಹಿಂದೇ ಬಂದಿತ್ಮರ್ರೆ… ಹಚಾ ಅಂದ್ ಹೊಡ್ದೆ ಕಲ್ಲ್… ಆದರೂ ಬೆನ್ನಾರ್-ಬಂತ್
ಅರ್ಧ ಗಂಟಿ ಆಯ್ತು ಇರ್ಕ್… ಹೊಡಿತಿದ್ದೆ ಕಲ್ಲಿನಗೆ
ಕಡೀಕ್ ಎಂತ ಆಯ್ತ್ ಅಂದೇಳಿ… ನಿಮ್ಗ್ ಏನಾರೂ ಗೊತ್ತಾ ಮರ್ರೆ
ನಾಯಿಗೆ ನಾನ್ ಮೂರೋನಾಕೋ ಕಲ್ಲಗ್ ಒಟ್-ಮಾಡಿ ಹೊಡ್ಡಿದೆ
ಗುರಿಹಿಡ್ದ್ ಹೊಡದ್ದಕ್ಕ್ ನಾಯಿ ಬಾಲ ಮಡ್ಚ್-ಕಂಡ್ ಓಡಿ ಹೋಯ್ತ್ ಮರ್ರೆ.

ಯಾರತ್ರೇಳುದ್… ನಾನ್ ನಾಯಿ ಬೇರ್ಸದ್ದ್…
ನಂಗ್ ಶಾಲಿ ಇಲ್ದೀರೆ… ಮಾಡುದ್ ಬರೀ ಇಂತಾದ್ದೆ

________________________________________________________
ಮೂಲ ಹಾಡ್ : ಲೈಫು ಇಷ್ಟೇನೆ ಪಿಚ್ಚರಿನ ‘ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಮ್ಮು’
ಕೃಪೆ:http://www.kannada-lyrics.in/
Yaarig Helona Namma Problem-u
Hudugara Novige Illa Mulaamu
Hale Girl-friends-igella Dodda Salaamu
Kiviyalli Neevitta Hoove Kaayammu
Elle Idroonu Neev Henge Idroonu
Bathroomnal-aadru Haadri Namma Poem-u
Maaji Hudugira Life-e Thumba Aaraam-u…
Yaarig Helona Namma Problem-u
Hudugara Novige Illa Mulaamu….

Thumba Sanna Huduga Antha Andkondidde Naanu.. Elne Class-alli..
Gejje Sound-u Maadkondu Kunto Bille Aadtha-bandlu Hesru Vaishali..
Yaako Yeno Namma Devru Batthi Idod Kalt-bittavne
Hudugi Edru Maathaad-dange Naalige Mele Kuntkondavne
Naanu Vaishalige Love You Antha Helok-aaglilla..
Aake Nanagintha Ondu Footu Etra Beldu-bitlalla..
Yaarig Helona Namma Height-u Problem-u
Vaishali Nee Yaake Kudide Complan-u…

Sheela Siklu PUC-li.. Khaara Kammi Haakisikondu Paani Puri Thindvi..
Kinetic-inalli Ibru Obre Kuntha Haage Kunthu Odaadkondu Idvi..
Sankey Tank-al Avala Jothe Eejaadida Kanasu Bitthu..
MidNight-ali Mysore Road-u Nammibranna Nodtha Itthu..
Love-u Netthige Eri Naanu Marthe College-u Metlu..
Aadre Ond Divsa Sheela Seedha Bandu Raakhi Katbitlu..
Yaarig Helona – Ellargu Same-u Problem-u
Henmaklige Anna Aagi Bitkonde Rum-mu..

Degree Maadovaaga Omme Bus-u Paasigantha Naanu Queue-nalli Hode..
Nanna Hindhe Nintolige Tuti Pakka Machche Itthu.. Hesaru Helalaare..
Ardha Second Saaku Nange.. Beelodakke Love-i-nalli..
Aamel-eno Aaythu Antha Nimge Naanu Henge Hel-li..
Avalige Naanu Noora Ondne Boyfriend Aagidde Kanri..
Century Hod-davl Munde Naanu Bachcha Aagode Kanri..

Yaarig Helona Namma Next-u Problem-u..
Nanna Flash-Back-e Ondu.. Chooyingu Gum-mu….

ನೆಂಟ್ರ್ ಉಪ್ಚಾರ… ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 14

Posted: ಮೇ 21, 2013 in ಇತ್ಯಾದಿ.., ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಜೋಕ್ಸ್, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಜೋಕ್ಸ್, ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದ, kundaapra kannada, kundapra, kundapra kannada, kundapra kannada jokes, kundapur, kundapur kannada, kundapura, kundapura kannada, kundapura kannada jokes
ಟ್ಯಾಗ್ ಗಳು:, , , , , , , , , , , , , , , , , , , , , , , , ,

ಕುಟ್ಟಿ ಮದಿ ಆಯ್ ಐದ್ ವರ್ಷ ಆಯ್ತ್…ಆ ಖುಷಿಯಗೆ ಕುಟ್ಟಿ ಹೆಂಡ್ತಿ ಹತ್ರ ಹೇಳ್ದಾ…
“ನಮ್ಮ ಮದಿ ಆಯಿ 5 ವರ್ಷ ಆಯ್ತ್ ಕಾಣ್… ನಿಂಗ್ ಎಂತಾರು ಆಸಿ ಇದ್ರ್ ಹೇಳ್”

ಹೆಂಡ್ತಿ ಸಿಕ್ಕದ್ದೇ ಚಾನ್ಸ್ ಅಂದ್ಕಂಡ್ ಹೇಳಿದ್ಲ್…
“ಹ್ವಾಯ್… ನಮ್ಮದಿ ಆಯಿ ಇಷ್ಟ್ ಸಮಿ ಆಯ್ತ್ ಹೌದ…
ನನ್ನ್ ಯಾವ್ದಾರೂ ಕ್ವಾಷ್ಟ್ಲೀ ಜಾಗಕ್ಕ್ ಒಂದ್ಸಲ ಆರೂ ಕರ್ಕಂಡ್ ಹೊಯಿರ್ಯಾ? ಇವತ್ತಾರೂ ಕರ್ಕಂಡ್ ಹೋಯ್ನಿ ಕಾಂಬ”

ಕುಟ್ಟಿ ಅಲ್ಲೇ ಇದ್ದ ಅವ್ನ್ ಅಮ್ಮನ ಕರ್ದ್ ಹೇಳ್ದ…
“ಅಮ್ಮಾ… ಬಾಗ್ಲ್ ಸಾಂಚ್ಕೋ.. ನಾವಿಬ್ರ್ ಇಲ್ಲೇ ಪೆಟ್ರೋಲ್ ಬಂಕಿಗ್ ಹೋಯ್ ಬತ್ತೋ…” 🙂 🙂 🙂

_______________________________________________________________________________________
ಮನಿಗ್ ನೆಂಟ್ರ್ ಬಂದ್ರಂಬ್ರ್

ಮನಿ ಯಜ್ಮಾನ್ರ್ ಕುಟ್ಟಿಯಣ್ಣ ಬಂದರತ್ರ ಕೇಂಡ್ರ್ …
“ಹ್ವಾಯ್ ಬನಿ ಬನಿ… ಕೂಕಣಿ… ನಿಮ್ಗೇ ಕುಡುಕ್ ಎಂತ ಬಿಸಿ ಅಡ್ಡಿಲ್ಯಾ ಎಂತಾರೂ ತಣ್ಣಗಿದ್ದ್ ಬೇಕಾ?”

ಕುಟ್ಟಿಯಣ್ಣ ಭಯಂಕರ ಕಂಜೂಸ್ ಅಂದ್ ಹೆಸ್ರವಾಸಿ ಆಯಿದ್ದರ್… ಅಂತಾ ಜನ ಹೀಂಗೆ ಕೇಂತ ಇಪ್ಪತಿಗೆ ಬಿಡುದ್ ಎಂತಕೆ ಅಂದೇಳಿ ಬಂದ್ ನೆಂಟ್ರ್ ಹೇಳ್ರಂಬ್ರ್…
“ಹ್ವಾಯ್ ನಂಗ್ ಒಂದ್ ಬಿಸಿ ಒಂದ್ ತಣ್ಣಗೆ… ಎರ್ಡೂ ಇರ್ಲಿ”

ಕುಟ್ಟಿಯಣ್ಣ ಮಗನ್ನ್ ಕರ್ದ್ ಹೇಳ್ರ್…
“ಏ ಮಾಣಿ, ಇಲ್ ಬಾ… ಇಗಾ ಇವ್ರಿಗೆ ಎರ್ಡ್ ಚೆಂಬ್ ನೀರ್ ತಕಂಡ್ ಬಾ… ಒಂದ್ ಫ್ರೀಜರಿದ್… ಒಂದ್ ಬಚ್ಲ ಮನಿ ಹರೀದ್… 🙂

ನೆಂಟ್ರ್ ಧಾತ್ ತಪ್ಪಿ ಬಿದ್ದರ್ ಇನ್ನೂ ಏಳಲ್ಲ ಅಂಬ್ರ್… 🙂 🙂 🙂

ಕುಟ್ಟಿ ಕುಂದಾಪ್ರ ಜೋಕ್ಸ್…ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 13

Posted: ಮೇ 21, 2013 in ಇತ್ಯಾದಿ.., ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಜೋಕ್ಸ್, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಜೋಕ್ಸ್, ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದ, kundaapra kannada, kundapra, kundapra kannada, kundapra kannada jokes, kundapur, kundapur kannada, kundapura, kundapura kannada, kundapura kannada jokes
ಟ್ಯಾಗ್ ಗಳು:, , , , , , , , , , , , , , , , , , , , , , , , ,

ಮಾಷ್ಟ್ರು: ಕುಟ್ಟಿ, ಸಮುದ್ರ ಮಧ್ಯದಗ್ ಒಂದ್ ಮಾಯ್ನ್ ಮರ ಇತ್ತ್… ಅದ್ರಗೆ ಮಾಯ್ನ್ ಹಣ್ ಆರೆ ಹ್ಯಾಂಗ್ ಕೊಯ್ಕಂಡ್ ಬತ್ತೆ?

ಕುಟ್ಟಿ : ನಾ ಹಾರ್ಕಂಡ್ ಹೋಯ್ ಕೊಯ್ಕ ಬತ್ತೆ… ಸರ್

ಮಾಷ್ಟ್ರು: ಹಾರ್ಕಂಡ್ ಹೋಪ್ಕೆ ರೆಕ್ಕಿ ಯಾರ್ ನಿನ್ನ ಅಜ್ಜ ಕೊಡ್ತನಾ?

ಕುಟ್ಟಿ: ಮತ್ತೆಂತ… ಸಮುದ್ರ ಮಧ್ಯದಗ್ ಮಾಯ್ನ್ ಮರ ನಿಮ್ಮ ಅಜ್ಜಿ ನೆಟ್ ಬತ್ರಾ ? 🙂
_____________________________________________________________

ಕುಟ್ಟಿ ಬಾಲ್ವಾಡಿ ಬಿಟ್ಟ್ ಮನಿಗ್ ಬಂದ

ಕುಟ್ಟಿಯ ಅಮ್ಮ ಕುಟ್ಟಿ ಹತ್ರ ಕೇಂಡ್ಳು…
“ಮಗಾ, ಇವತ್ತ್ ಶಾಲ್ಯಗೆ ಎಂತ ಕಲ್ತೆ?”

ಕುಟ್ಟಿ ಹೇಳ್ದಾ…
“ಅಮ್ಮಾ… ಇವತ್ ನಂಗೆ ಬರುಕೆ ಹೇಳಿ ಕೊಟ್ರ್”

ಅಮ್ಮ ಹೇಳ್ರ್…
“ಹೌದಾ ಮಗಾ… ಭಾರಿ ಒಳ್ಳೇದ್.., ಎಂತೆಲ್ಲಾ ಹೇಳಿ ಕೊಟ್ಟಿರ್… ಬರದ್ದ್ ಓದಿ ಹೇಳ್ ಕಾಂಬ”

ಕುಟ್ಟಿ ಹೇಳ್ದಾ…
“ಎಂತ ಅಂದೇಳಿ ಗೊತ್ತಿಲ್ಲ ಅಮ್ಮ… ಇವತ್ತ್ ಬರುಕ್ ಮಾತ್ರ ಹೇಳಿ ಕೊಟ್ಟದ್ದ್. ಓದುಕೆ ಹೇಳಿ ಕೊಡಲ್ಲ  🙂

_____________________________________________________________

ಕುಟ್ಟಿ ಹತ್ರ ಒಬ್ರು ಬ್ಯಾಂಕಿನ ಮೆನೆಜರ್ ಹೇಳ್ರ್…..

ಹ್ವಾಯ್ ಕುಟ್ಟಿಯಣ್ಣ… ನೀವ್ ನಮ್ ಬ್ಯಾಂಕಿಗ್ ಒಂದಿನ ಪುರ್ಸೊತ್ತ್ ಮಾಡ್ಕಂಡ್ ಬನಿ… ನಾವ್ ನಿಮ್ಗ್ ಇಂಟರೆಸ್ಟ್ ಇಲ್ಲದೆ ಸಾಲ ಕೊಡತ್…

ಕುಟ್ಟಿ ಹೇಳ್ದ… “ಹೊಯ್ಲಿ ಬ್ಯಾಡ ಬಿಡಿ… ನಿಮ್ಗ್ ಕೊಡುಕೇ ಇಂಟರೆಸ್ಟ್ ಇಲ್ದೀರ್ ಮೇಲೆ ಸುಮ್ನೆ ಬಪ್ಕೆ ನಂಗ್ ಮರ್ಲಾ? ಊರಗ್ ಬೇರೆ ಬ್ಯಾಂಕಿಲ್ಯಾ” 🙂

_____________________________________________________________

BBA-MBA ಒಟ್ಟಿಗ್ ಮಾಡ್ಕಾ…ಓದಿ…ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 12

Posted: ಮೇ 21, 2013 in ಇತ್ಯಾದಿ.., ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಜೋಕ್ಸ್, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಜೋಕ್ಸ್, ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದ, kundaapra kannada, kundapra, kundapra kannada, kundapra kannada jokes, kundapur, kundapur kannada, kundapura, kundapura kannada, kundapura kannada jokes
ಟ್ಯಾಗ್ ಗಳು:, , , , , , , , , , , , , , , , , , , , , , , , ,

ಒಂದ್ ಮಾತಿತ್ತ್ ಕಾಣಿ…

ಎಂತದಂದ್ರೆ… ದೇವ್ರ್ ಹತ್ರ ಮತ್ತ್ ಡಾಕ್ಟ್ರ ಹತ್ರ ಸಿಟ್ಟ್ ಮಾಡ್ಕಂಬ್ಕಾಗ ಅಂಬ್ರ್

ಎಂತಕ್ ಕೇಂತ್ರಿಯಾ…?

ಎಂತಕ್ ಅಂದ್ರೆ…

ದೇವ್ರ್ ಹತ್ರ ಸಿಟ್ಟ್ ಮಾಡ್ಕಂಡ್ರೆ… ಅಂವ ಡಾಕ್ಟ್ರ ಹತ್ರ ಕಳ್ಸತಾ ಅಂಬ್ರ್

ಡಾಕ್ಟ್ರ ಹತ್ರ ಸಿಟ್ಟ್ ಮಾಡ್ಕಂಡ್ರೆ… ಅವ್ರ್ ದೇವ್ರ್ ಹತ್ರ ಕಳ್ಸತ್ರ್ ಅಂಬ್ರ್… 🙂
______________________________________________________________________________________

ಚೀಂಕ್ರ: ಹ್ವಾಯ್ ನೀವ್ ಈಗ ಎಂತ ಮಾಡ್ಕಂಡಿದ್ರಿ?
ಕುಟ್ಟಿ : ನಾನ್ ಬೆಳಿಗ್ಗೆ BBA ಮಾಡ್ತೆ… ಸಾಯಂಕಾಲ ಆರ್ ಮೇಲೆ MBA ಮಾಡ್ತೆ
ಚೀಂಕ್ರ: ಅದ್ ಹ್ಯಾಂಗ್ ಮರ್ರೆ ಎರ್ಡೆರ್ಡ್ ಕೋರ್ಸ್ ಒಟ್ಟಿಗೆ ಮಾಡ್ತಾ ಇದ್ರಿ?
ಕುಟ್ಟಿ : ಎಂತ ಸುಟ್ಟ ಕೋರ್ಸೂ ಇಲ್ಲ ಮರಾಯಾ…
BBA ಅಂದ್ರೆ ಬೀಡಾ ಬೀಡಿ ಅಂಗಡಿ…MBA ಅಂದ್ರೆ ಮೆಣ್ಸಿನ್ಕಾಯ್ ಬಜ್ಜಿ ಅಂಗಡಿ

ಚೀಂಕ್ರ ಅಲ್ಲೇ ಚಂಯ್ಕ ಆದನ್ ಇನ್ನೂ ಮೇಲ್ ಏಳಲ್ಲ ಅಂಬ್ರ್… 🙂
______________________________________________________________________________________

ಕುಟ್ಟಿ ಒಂದ್ನೇ ಕ್ಲಾಸಗ್ ಇದ್ದಲ್ ನೆಡದ್ದ್ ಇದ್…

ಟೀಚರ್ ಮಕ್ಳಿಗೆ ಕೂಡ್ಸುದ್ ಕಳುದ್ ಲೆಕ್ಕ ಹೇಳಿ ಕೊಡ್ತಿದ್ರ್

ಟೀಚರ್: ಕುಟ್ಟಿ… ಎರಡರಗೆ ಎರಡ್ ಕಳದ್ರೆ ಎಷ್ಟ್ ಉಳಿತ್ತ್?

ಕುಟ್ಟಿ: ಟೀಚರೇ, ಸಮಾ ಗೊತ್ತಾಯ್ಲ… ಸ್ವಲ್ಪ ಬಿಡ್ಸಿ ಹೇಳಿ ಕಾಂಬ

ಟೀಚರ್ : ನನ್ ಕರ್ಮ… ಇನ್ನೆಂತ ಬಿಡ್ಸಿ ಹೇಳುದು… ಹೊಯ್ಲಿ… ಇಲ್ಕಾಣ್ ಕುಟ್ಟಿ, ನಿನ್ ಪ್ಲೇಟಗೆ 2 ಇಡ್ಲಿ ಇತ್ತ್
ನೀನ್ ಎರ್ಡೂ ಇಡ್ಲಿ ತಿಂದೆ… ಪ್ಲೇಟಗೆ ಎಂಥ ಉಳಿತ್ತ್…?

ಕುಟ್ಟಿ: ಪ್ಲೇಟಗೆ ಚಟ್ನಿ ಮತ್ತ್ ಸಾಂಬರ್ ಉಳಿತ್ತ್ ಟೀಚರ್ 🙂
______________________________________________________________________________________

ಕುಟ್ಟಿ ಕೋಳಿಗ್ ಬಿಸ್ನೀರ್ ಕುಡ್ಸಿದ…ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 11

Posted: ಮೇ 21, 2013 in ಇತ್ಯಾದಿ.., ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಜೋಕ್ಸ್, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಜೋಕ್ಸ್, ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದ, kundaapra kannada, kundapra, kundapra kannada, kundapra kannada jokes, kundapur, kundapur kannada, kundapura, kundapura kannada, kundapura kannada jokes
ಟ್ಯಾಗ್ ಗಳು:, , , , , , , , , , , , , , , , , , , , , , , , ,

ಒಟ್ಟ್ ಕುಶಾಲ್ ಮರ್ರೆ… 🙂
ಮೂರ್ ಸಣ್ಣ ಸಣ್ಣ ಕುಂದಾಪ್ರ ಜೋಕ್ಸ್… ಓದಿ ಗಮ್ಮತಗೆ 🙂

ಹೆಂಡ್ತಿ: “ಹ್ವಾಯ್… ನಿಮ್ಗೆ ನನ್ನ ಮದಿ ಆಯ್ಕಿದ್ರೆ ಮೊದ್ಲೇ ರಾಣಿ ಅಂದೇಳಿ ಒಬ್ಳ್ ಹೆಂಡ್ತಿ ಇದ್ಲ್ ಅಂತ್ ನೀವ್ ನಂಗ್ ಹೇಳ್ಲೇ ಇಲ್ಲ”

ಗಂಡ: “ಸ್ವಲ್ಪ ಸುಮ್ನಾಯ್ಕಂತ್ಯಾ? ನಾ ಹೇಳಲ್ಯ… ಅವತ್ತೇ ಹೇಳಿದೆ…

ನಿನ್ನ ಮದಿಯಾರ್ ಮೇಲೆ ರಾಣಿ ಕಂಡಗೆ ಕಂಡ್ಕಂತೆ ಅಂದೇಳಿ… ನಿಂಗ್ ಸೂಕ್ಷ್ಮ ಅರ್ಥ ಆಯ್ದಿರ್ ನಾ ಎಂತ ಮಾಡುದ್?”
___________________________________________________________________________

ಗಂಡ ಹೆಂಡ್ತಿ ಹತ್ರ ಕೇಂಡ… “ಏ ಇವಳೇ… ಎಲ್ಲಾರೂ ನಾ ಸತ್ತ್ ಹೋರೆ, ನೀ ಬೇರೆ ಮದಿ ಮಾಡ್ಕಂತ್ಯ?”

ಹೆಂಡ್ತಿ ಹೇಳ್ಲ್… “ಇಲ್ಲ ಮರ್ರೆ… ನಾ ನನ್ ತಂಗಿ ಒಟ್ಟಿಗ್ ಹೋಯಿ ಆಯ್ಕಂತೆ”

ಈಗ ಹೆಂಡ್ತಿ ಕೇಂಡ್ಳು… “ನಾ ಎಲ್ಲಾರು ಸತ್ತ್ ಹೋರೆ, ನೀವ್ ಬೇರೆ ಮದಿ ಮಾಡ್ಕಂತ್ರ್ಯಾ?”

ಗಂಡ ಹೇಳ್ದ… “ಇಲ್ಲ ಮರೈತಿ… ನಾನು ಸತೇ ನಿನ್ ತಂಗಿ ಒಟ್ಟಿಗೇ ಹೋಯ್ ಇರ್ತೆ… 🙂
___________________________________________________________________________

ಒಂದಿನ ಕುಟ್ಟಿ ಬೆಳಿಗ್ಗೆ ಎದ್ದನೇ ಒಂದ್ ಲೋಟದಗೆ ಬಿಸ್ನೀರ್ ಹಿಡ್ಕಂಡ್ ಕೋಳಿಗೆ ಕುಡ್ಸತಾ ಇದ್ದ

ಇದನ್ನ್ ಕಂಡ್ ಚೀಂಕ್ರ ಕೇಂಡ…
“ಹ್ವಾ ಕುಟ್ಟಿ… ಇದೆಂತಕೆ ಕೋಳಿಗೆ ಬಿಸ್ನೀರ್ ಕುಡ್ಸತಾ ಇದ್ದೆ ?”

ಚೀಂಕ್ರ ಹೇಳ್ದಾ…
“ಅದಾ… ಮತ್ತೆಂತ ಅಲ್ದಾ… ಇವತ್ತ್-ನಾಳೆಯಗೆ ಕೋಳಿ ಮೊಟ್ಟಿ ಇಡುಕೂ ಸಾಕ್… ಇಡುದಾರೆ ಬೇಯ್ಸದ್ ಮೊಟ್ಟಿಯೇ ಇಡ್ಲಿ ಅಂದೇಳಿ” 🙂
___________________________________________________________________________

ನೆಗಾಡಿ ಅಷ್ಟ್ ಸಾಕ್… ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 10

Posted: ಮೇ 21, 2013 in ಇತ್ಯಾದಿ.., ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಜೋಕ್ಸ್, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಜೋಕ್ಸ್, ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದ, kundaapra kannada, kundapra, kundapra kannada, kundapra kannada jokes, kundapur, kundapur kannada, kundapura, kundapura kannada, kundapura kannada jokes
ಟ್ಯಾಗ್ ಗಳು:, , , , , , , , , , , , , , , , , , , , , , , , ,

ಮೂರು ಸಣ್ಣ ಸಣ್ಣ ಕುಂದಾಪ್ರ ಕನ್ನಡ ಜೋಕ್ಸ್ ಮರ್ರೆ… ಓದಿ ಲಾಯ್ಕಿದ್ರ್ ಹೇಳಿ 🙂

ಚೀಂಕ್ರ: ಹ್ವಾಯ್ ಪರ್ಸ್ ಮನಿಯಲ್ ಬಿಟ್ಟ್ ಬಂದೆ ಮರ್ರೆ… ಅರ್ಜೆಂಟ್ ಒಂದ್ ಸಾವ್ರ್ ರೂಪಾಯಿ ಇದ್ರೆ ಕೊಡಿ

ಕುಟ್ಟಿ: ಅದಕ್ ಮಂಡಿ ಬಿಸಿ ಎಂತಕಾ… ಇಗ… ಈ 20 ರುಪಾಯ್ ತಕೋ… ರಿಕ್ಷದಲ್ ಮನಿಗ್ ಹೋಯ್ ಪರ್ಸ್ ತಕಂಬಾ ಅಕಾ? 🙂

______________________________________________________________________________________

ಕುಟ್ಟಿ : ಡಾಕ್ಟ್ರೆ… ನಂಗ್ ಜೋರ್ ಕೆಮ್ಮ ಮರ್ರೆ… ಸುರು ಆಯ್ ಮೂರ್ ತಿಂಗ್ಳ್ ಆಯ್ತ್

ಡಾಕ್ಟ್ರು: ಅಲ್ಲ ಮರ್ರೆ… ಸುರು ಆಯ್ 3 ತಿಂಗ್ಳ್ ಆಯ್ತ್ ಅಂತ್ರಿ… ಇಷ್ಟ್ ದಿನ ಎಂತಾ ಮಾಡ್ತಿದ್ರಿ…?

ಕುಟ್ಟಿ: ಡಾಕ್ಟ್ರೆ… ನೀವ್ ಬರಿ ಹೊಟ್ಟಿತಿಪ್ಪು ಮಾತಾಡ್ಬೇಡಿ… ಎಂತ ಮಾಡ್ತಿದ್ದೆ ಅಂಬ್ರ್… ಮತ್ತೆಂತ… ಕೆಮ್ಸತಾ ಇದ್ದಿದೆ ಮರ್ರೆ 🙂
______________________________________________________________________________________

ಹೆಂಡ್ತಿ: ಹ್ವಾಯ್… ವಿಷ್ಯ ಗೊತ್ತಾಯ್ತಾ? ನಮ್ ಮದಿ ಮಾಡ್ಸಿರಲೇ…. ಆ ಪುರೋಹಿತ್ರು ತೀರಿ ಹೋರ್ ಅಂಬ್ರ್.

ಕುಟ್ಟಿ: ಅಲ್ದಾ ಮತ್ತೆ… ಮಾಡದ್ ಪಾಪ ಸುಮ್ನೆ ಬಿಡತ್ತಾ?

______________________________________________________________________________________

ಕೊಡ್ಪಾನಕ್ ಜ್ವರ ಬಂದ್ರ್ ಎಂತ ಮಾಡ್ಕ್?…ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 9

Posted: ಮೇ 21, 2013 in ಇತ್ಯಾದಿ.., ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಜೋಕ್ಸ್, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಜೋಕ್ಸ್, ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದ, kundaapra kannada, kundapra, kundapra kannada, kundapra kannada jokes, kundapur, kundapur kannada, kundapura, kundapura kannada, kundapura kannada jokes
ಟ್ಯಾಗ್ ಗಳು:, , , , , , , , , , , , , , , , , , , , , , , , ,

ಕೊಡ್ಪಾನಕ್ ಜ್ವರ ಬಂದ್ರ್ ಎಂತ ಮಾಡ್ಕ್ ? ನಮ್ ಕುಟ್ಟಿ ಹತ್ರ ಕೇಂಬ ಬನಿ… 🙂
hosabettu water problem.2jpg
ಇದ್ ನಮ್ಕು ಕುಂದಾಪ್ರ ಕುಟ್ಟಿ ಬುದ್ದಿವಂತ ಆಯ್ಕಿದ್ರೆ ಮೊದ್ಲ್ ನೆಡದ್ದ್ 🙂

ಕುಟ್ಟಿ ಮನ್ಯಗೆ ಒಂದ್ ಎಲಿಮನ್ ಕೊಡ್ಪಾನ ಇದ್ದಿತ್. ಅದ್ ಒಂದಿನ ಹೆರ್ಗ್ ಬಿಸ್ಲಗೇ ಇದ್ದಿತ್ ಅಂಬ್ರ್. ಬಿಸ್ಲ್ ಜೋರಿದ್ದಿತ್ತಾ ಕಾಂತ್. ಕುಟ್ಟಿ ಸಾಂಯ್ಕಾಲ ಶಾಲಿ ಬಿಟ್ಟ್ ಮನಿಗ್ ಬಪ್ಪತಿಗೆ ಕೊಡ್ಪಾನ ಸಮಾ ಬಿಸಿ ಆಯಿದ್ದಿತ್. ಕುಟ್ಟಿ ಬಂದನೇ ಕೊಡ್ಪಾನ ಮುಟ್ಟಿ ಕಂಡ. ಕೊಡ್ಪಾನ ಬಿಸಿ ಕೊದಿತಿತ್ತ್.
ಅವ್ರ್ ನೆರ್ಮನಿಯಗ್ ಒಬ್ರ್ ಕಂಪೌಂಡ್ರ್ ಇದ್ದಿರ್. ಕುಟ್ಟಿ ಸೀದಾ ಬಂದನೇ ಚೀಲ ಮನಿ ಒಳ್ಗ್ ಬಿಸಾಕಿ, ಅವರತ್ರ ಹೋಯಿ ಹೇಳ್ದಾ… “ಹ್ವಾಯ್ ಕಂಪೌಂಡ್ರೆ… ನಮ್ಮನಿ ಕೊಡ್ಪಾನಕ್ ಜ್ವರ ಬಂದಿತ್ತ್ ಮರ್ರೆ… ಔಷಿದ್ದಿ ಎಂತಾರೂ ಕೊಡಿನಿ”

ಕಂಪೌಂಡ್ರ್ ಇನ್ ಈ ಭಾಷಿ ಬರ್ದಿದ್ದನಿಗ್ ಯಾರ್ ಇದನ್ನ್ ಬಿಡ್ಸಿ ಹೇಳುದ್ ಅಂದೇಳಿ, ಹೇಳ್ರ್…”ಈ ಜ್ವರಕ್ ಮಾತ್ರಿ ಎಂತ ಬ್ಯಾಡ… ಕೊಡ್ಪಾನಕ್ಕ್ ಬಳ್ಳಿ ಹಾಕಿ, ಒಂದ್ಸಲ ಬಾಮಿಗ್ ಇಳ್ಸ್… ಜ್ವರ ಬಿಡತ್ತ್”.

ಕುಟ್ಟಿ ಅವ್ರ್ ಹೇಳ್ದಂಗೆ ಮಾಡ್ದ. ಮೇಲ್ ಬಂದ್ ಕೊಡ್ಪಾನ ಬಿಸಿ ಇಲ್ದಿದ್ದ್ ಕಂಡ್ ಭಾರಿ ಖುಷಿ ಆಯ್ತ್ ಅವ್ನಿಗ್. ನೆರ್ಮನಿಗ್ ಹೋಯಿ ಬಾಳಾ ಉಪ್ಕಾರ ಆಯ್ತ್ ಮರ್ರೆ ನಿಮ್ಮಿಂದ ಅಂದ್ ಕಂಪೌಂಡ್ರ್ ಹತ್ರ ಹೇಳಿ ಬಂದ.

ಮಾರನೆ ದಿನ ಕುಟ್ಟಿ ಅಜ್ಜಿಗೆ ಜ್ವರ ಬಂತ್… 🙂

ಜೋಕ್ ಇಲ್ಲಿಗೇ ಮುಗಿತ್… ಹಾಂಗೆ ಕುಟ್ಟಿಯ ಅಜ್ಜಿ ಕಥಿಯೂ… 🙂

ನೆಗಿ ತಕಂಡ್ ಹೊತ್ತಾ ಅಂಬಷ್ಟ್…ನೆಗಾಡಿ… ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 8

Posted: ಮೇ 21, 2013 in ಇತ್ಯಾದಿ.., ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಜೋಕ್ಸ್, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಜೋಕ್ಸ್, ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದ, kundaapra kannada, kundapra, kundapra kannada, kundapra kannada jokes, kundapur, kundapur kannada, kundapura, kundapura kannada, kundapura kannada jokes
ಟ್ಯಾಗ್ ಗಳು:, , , , , , , , , , , , , , , , , , , , , , , , ,

ಕುಟ್ಟಿ ದೋಸ್ತಿ ಒಬ್ರು ಆಸ್ಪತ್ರಿಯಗೆ….ಐ.ಸಿ.ಯು ನಗೆ ಇದ್ದಿರಂಬ್ರ್
ಅವ್ರ್ ಮನಿಯರ್ ಕುಟ್ಟಿ ಮೇಲ್ ಪೋಲಿಸ್ ಕಂಪ್ಲೇಂಟ್ ಕೊಟ್ಟಿರಂಬ್ರ್… ಇವ್ನಿಗೆ ಹೀಂಗ್ ಆಪುಕ್ ಕುಟ್ಟಿಯೇ ಕಾರಣ ಅಂದೇಳಿ.

ಪೋಲಿಸ್ರು ಕುಟ್ಟಿನ್ ಹುಡ್ಕಂಡ್ ಬಂದ್ ತನ್ಕಿ ಮಾಡ್ರ್

ಪೋಲಿಸ್ರ್ ಕೇಂಡ್ರ್…
“ಏಯ್… ಆ ಗಂಡಿನ ಮನಿಯರ್ ನಿನ್ ಮೇಲ್ ಕಂಪ್ಲೆಂಟ್ ಕೊಟ್ಟಿರ್. ನೆಡದ್ದ್ ಎಂತಾ ವಿಷ್ಯ ಅಂದೇಳಿ ಹೇಳ್”

ಕುಟ್ಟಿ ಏಂಕತಾ ಏಂಕತಾ ಹೇಳ್ದಾ…
“ಆ ಗಂಡ್ ಹೊಟ್ಟಿಯೊಳ್ಗ್ ಒಂದ್ ನಮೂನಿ ಆತಾ ಇತ್ತ್… ಹೆಗ್ಗುಳ ಓಡ್ದ್ ಹಾಂಗ್ ಆತ್ತ್ ಅಂದ.
ಹಂಗಾರೆ ಹೆಗ್ಗುಳ ಸತ್ ಹೋಯ್ಲಿ ಅಂಡ್ಕಂಡ್ ಒಂದ್ ಬಾಟ್ಲ್ ಎಲಿ ಪಾಷಾಣ ಕುಡ್ಸದ್… ಅಷ್ಟೇ ಮಾರ್ರೇ ವಿಷ್ಯ” 🙂

_______________________________________________________________________________

ಚೀಂಕ್ರ ಅವ್ನಿಗೆ ತಾಪತ್ರ್ಯ ಬಂದಾಗ್ಳಿಕೆಲ್ಲ ಕಿಶಿಯಿಂದ ಹೆಂಡ್ತಿ ಚೀಂಕ್ರಿ ಫೋಟೋ ತೆಗ್ದ್ ಕಾಂತಿರ್ತಿದ್ದ

ಇದನ್ನ್ ಕಂಡ್… ಸ್ವಾಂಪ್ರ ಒಂದಿನ ಚೀಂಕ್ರನ ಹತ್ರ ಕೇಂಡ…
“ಅಲ್ಲ ಚೀಂಕ್ರಣ್ಣ… ಅದೆಂಥಕೆ ನೀವ್ ಒಂದೊಂದ್ ಸರ್ತಿ ನಿಮ್ ಹೆಂಡ್ತಿ ಫೊಟ ತೆಗ್ದ್ ತೆಗ್ದ್ ಕಾಂತ್ರಿ?
ನಿಮ್ಗೆ ತೊಂದ್ರಿ ಬಂದಲ್ ಅವ್ರ್ ನೆನ್ಪಾರೆ ನಿಮ್ ಕಷ್ಟ ಪರಿಹಾರ ಆಪುಕ್ ದಾರಿ ತೋರತ್ತಾ?”

ಚೀಂಕ್ರ ಹಗೂರಕ್ ಹೇಳ್ದ…
“ಹಾಂಗೆಂತ ಇಲ್ಯೇ.. ಯಾರತ್ರೂ ಹೇಳ್ಬೆಡಿ… ಅವ್ಳ್ ಫೊಟ ಕಂಡ್ರ್ ಮೇಲ್…
ಇವ್ಳ್ ಮುಂದೆ ನಂಗೆ ಬಂದ್ ಕಷ್ಟ ಯಾವ್ ದೊಡ್ಡ್… ಅನ್ಸಿ ಸಮ್ಧಾನ ಆತ್ತ್ ಮರ್ರೆ” 🙂
_______________________________________________________________________________

ಚೀಂಕ್ರ ಒಬ್ಬನೇ ಮರ್ಕತಾ ಕೂಕಂಡಿದ್ದ.

ಅದನ್ನ್ ಕಂಡ್ ಅವ್ನ ಚೆಡ್ಡಿ ದೋಸ್ತಿ ಸ್ವಾಂಪ್ರ ಕೇಂಡ…
“ಏ ಗಡೆ ಚೀಂಕ್ರಾ… ಎಂತಕ್ ಮರ್ಕುದ್?”

ಅದ್ಕೆ ಚೀಂಕ್ರ ಹೇಳ್ದಾ…
“ನಾನ್ ಒಂದ್ ಹೆಣ್ಣಿನ್ ಮರೀಕ್ ಅಂದೇಳಿ ಪ್ರಯತ್ನ ಮಾಡ್ತಾ ಇದ್ದೆ”

ಸ್ವಾಂಪ್ರ ಹೇಳ್ದಾ…
“ಅದಕ್ಕೆಲ್ಲಾ ಮರ್ಕುದಾ ಮರಾಯಾ… ಆ ಹೆಣ್ಣ ಒಬ್ಳೆಯಾ ಇಪ್ಪುದ್. ಅವ್ಳ್ ಅಲ್ದಿರ್ ಇನ್ನೊಬ್ಳ್ ಸಿಕ್ಕತ್ಲ್”

ಚೀಂಕ್ರ ಹೇಳ್ದಾ …
“ವಿಷ್ಯ ಅದಲ್ಲ ಮರಾಯಾ… ಎಷ್ಟ್ ಹೊತ್ತಿಂದ್ ಆಲೋಚ್ನಿ ಮಾಡ್ರೂ ಅವ್ಳ್ ಯಾರ್ ಅಂದೇಳಿಯೇ ನೆನ್ಪ್ ಬತ್ತಿಲ್ಲ ಕಾಣ್” 🙂
_______________________________________________________________________________

ನೆಗಾಡುಕೊಂದ್ ಹೆಳಿ ಬೇಕಾ…ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 7

Posted: ಮೇ 21, 2013 in ಇತ್ಯಾದಿ.., ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಜೋಕ್ಸ್, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಜೋಕ್ಸ್, ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದ, kundaapra kannada, kundapra, kundapra kannada, kundapra kannada jokes, kundapur, kundapur kannada, kundapura, kundapura kannada, kundapura kannada jokes
ಟ್ಯಾಗ್ ಗಳು:, , , , , , , , , , , , , , , , , , , , , , , , ,

ನೆಗಾಡುಕೊಂದ್ ಹೆಳಿ ಬೇಕಾ… ನೆಗಾಡಿ ಎಷ್ಟ್ ಎಡಿತ್ತೋ ಅಷ್ಟ್… ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 7 🙂

ಚೀಂಕ್ರ ಮತ್ತ್ ಸ್ವಾಂಪ್ರ ಒಂದಿನ ಕುಂದಾಪ್ರ ಸಂತಿಯಗ್ ನಿಂತ್ಕಂಡ್ ಜಗ್ಳ ಮಾಡ್ತಾ ಇದ್ರ್

ಅಷ್ಟೊತ್ತಿಗೆ ಅಲ್ಲಿಗ್ ಕುಟ್ಟಿ ಬಂದ್ ಕೇಂಡ…
“ಹ್ವಾಯ್ ನೀವಿಬ್ರು ಎಂತಕೆ ಜಗ್ಳ ಮಾಡ್ಕಂತಾ ಇದ್ರಿ? ವಿಷ್ಯ ಎಂತ?”

ಚೀಂಕ್ರ ಹೇಳ್ದಾ…
“ನಮ್ಗ್ ಬಪ್ಪತಿಗ್ ದಾರಿ ಮೇಲೆ ಒಂದ್ ನೂರ್ ರುಪಾಯಿದ್ ನೋಟ್ ಸಿಕ್ಕಿತ್.
ಅದನ್ನ ಯಾರ್ ಒಂದ್ ಬಿಗಿಯಾದ್ದ್ ಲಾಟ್ ಬಿಡ್ತ್ರೋ ಅವ್ರಿಗೆ ಅಂತ್ ಮಾತಾಡ್ಕಂಡಿತ್…
ಯಾರ್ ಮೊದ್ಲ್ ಹೇಳುದ್ ಅಂದೇಳಿ ಜಗ್ಳ ಅಷ್ಟೇ…”

ಕುಟ್ಟಿ ಹೇಳ್ದಾ…
“ಥೂ… ನಿಮ್ಗ್ ನಾಚ್ಕಿ ಆತಿಲ್ಯಾ…?
ನಾ ನಿಮ್ಮ್ ಪ್ರಾಯದಗ್ ಇಪ್ಪತಿಗ್ ನಂಗ್ ಸುಳ್ ಅಂದ್ರ್ ಎಂತ ಅಂದೇಳಿಯೇ ಗೊತ್ತಿರ್ಲಾ”

ಇದನ್ನ್ ಕೇಂಡ್ ಸ್ವಾಂಪ್ರ ಹಗೂರಕ್ ಹೇಳ್ದಾ…
“ಚೀಂಕ್ರಣ್ಣ ಕೆಂತಾ…. ಇದಕ್ಕಿಂತ್ ದೊಡ್ಡ್ ಲಾಟ್ ನಮ್ಗ್ ಹೇಳುಕ್ ಎಡುವಾ?
ನೂರ್ ರುಪಾಯ್ ಕುಟ್ಟಿಯಣ್ಣನಿಗೆ ಕೊಡುವ ಆಗ್ದಾ?” 🙂
____________________________________________________________________________________
ಕುಟ್ಟಿ ಅಬ್ಬಿ ತೀರಿ ಹೋದ್ರ್… ಸುದ್ದಿ ಗೊತ್ತಾಯಿ ಅವ್ನ ನೆಂಟ್ರೆಲ್ಲಾ ಕುಟ್ಟಿ ಮನಿಗ್ ಬಂದ್ರ್

ಒಬ್ಬ: “ಅಯ್ಯೋ… ಒಬ್ಳೇ ಹೋಯ್ಬಿಟ್ಯಾ… ನನ್ನನ್ನಾರೂ ಕರ್ಕಂಡೇ ಹೋಯ್ಲಕಿತ್ತಲ್ಲ…”

ಇನ್ನೊಬ್ಬ: “ಅಮ್ಮಾ… ನಮ್ಮನ್ನೆಲ್ಲಾ ಬಿಟ್ಟಿಕಿ ಹೋಯ್ ಅನಾಥ್ರನ್ನಾಯ್ ಮಾಡ್ದೆ… ನಮ್ನೂ ಕರ್ಕಂಡ್ ಹೊಪ್ಕಾಗ್ದಿತ್ತಾ?”

ಮತ್ತೊಬ್ಬ: “ಅಯ್ಯೋ… ನೀವಿಲ್ದಿರ್ ನಾನಿಲ್ಲ ಅಂದ್ ಗೊತ್ತಿದ್ದೂ ನನ್ನ್ ಬಿಟ್ಟಿಕಿ ಹೋರ್ಯಾ ಅಮ್ಮ…”

ಕುಟ್ಟಿ: “ಸಾಕಾ ಬಾಯ್ ಮುಚ್ಕಣಿ… ನಿಮ್ಮನ್ನೆಲ್ಲಾ ಕರ್ಕಂಡ್ ಹೋಪ್ಕೆ ಅಮ್ಮ ಏನ್ ಟಾಟಾ ಸುಮೋ ಮಾಡ್ಕಂಡ್ ಹೋಯಿದ್ಲಾ?” 🙂
____________________________________________________________________________________
ಕುಟ್ಟಿ ಕುಂದಾಪ್ರ ಸಂತಿಗೆ ಹೋತಿದ್ದ

ದಾರಿ ಮೇಲ್ ಎಂತದೋ ಕಪ್ಪ್ ಇದ್ದದ್ದ್ ಬಿದ್ಕಂಡ್ ಇದ್ದಿತ್

ಇದ್ ಎಂತಾ ಕಾಂಬ ಅಂದೇಳಿ ಹತ್ರ ಹೋಯಿ ಗಾಳಿ ಉರ್ಸಿ ಕಂಡ. ಅದ್ ಹನಿ ಹಂದಲಿಲ್ಲ.
ಶಬ್ದ ಮಾಡಿ ಕಂಡ. ಅದ್ ಅಲ್ಲಾಡಲ್ಲ. ಕಡಿಗ್ ಬೆರ್ಲಗ್ ಮುಟ್ಟಿ ಚೂರ್ ನಾಲ್ಗಿಗ್ ತಾಗ್ಸಿ ಕಂಡ್ ಹೇಳ್ತ್ನಂಬ್ರ್…

“ಹೋ… ಇದ್ ಶೆಗ್ಣಿ… ಪುಣ್ಯಕ್ಕ್ ನೆಕ್ಕಿ ಕಂಡೆ… ಗೊತ್ತಾಯ್ತ್… ಇಲ್ದಿರ್ ಮೆಟ್ಟಿ ಬಿಡ್ತಿದ್ನಲೇ… 🙂
____________________________________________________________________________________

ನೆಗಾಡಿ ಹೊಟ್ಟಿ ನೋವಾಪಲ್ಲೊರಿಗೆ… ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 6

Posted: ಮೇ 21, 2013 in ಇತ್ಯಾದಿ.., ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಜೋಕ್ಸ್, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಜೋಕ್ಸ್, ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದ, kundaapra kannada, kundapra, kundapra kannada, kundapra kannada jokes, kundapur, kundapur kannada, kundapura, kundapura kannada, kundapura kannada jokes
ಟ್ಯಾಗ್ ಗಳು:, , , , , , , , , , , , , , , , , , , , , , , ,

ನೆಗಾಡಿ ಹೊಟ್ಟಿ ನೋವಾಪಲ್ಲೊರಿಗೆ… ಇದ್ ಕುಂದಾಪ್ರ ಕನ್ನಡ ಜೋಕ್ಸ್ 🙂

ಕುಟ್ಟಿ ಒಂದ್ಸರ್ತಿ ಒಂದ್ಸಲ ಬಸ್ರೂರ್ ಮೂರ್ಕೈಯಿಂದ ಬಸ್ಟ್ಯಾಂಡಿಗ್ ರಿಕ್ಷ ಮಾಡ್ಕಂಡ್ ಬಂದ.
ಇಳ್ದ್ರ್ ಮೇಲೆ ರಿಕ್ಷದನ್ ಹತ್ರ “ಬಾಡ್ಗಿ ಎಷ್ಟ್ ಆಯ್ತ್” ಅಂದೇಳಿ ಕೇಂಡ

ರಿಕ್ಷದನ್ ಹೇಳ್ದ… “ಇಪ್ಪತ್ ರೂಪೈ ಆಯ್ತ್”

ಸರಿ… ಅಂದ್… ಕುಟ್ಟಿ ಹತ್ ರೂಪೈ ನೋಟ್ ಕೊಟ್ಟ್ ರಿಕ್ಷ ಇಳ್ದ

ರಿಕ್ಷದನ್… “ಹೋಯ್ ನಾ ಹೇಳದ್ದ್ ಇಪ್ಪತ್… ಆರೇ ನೀವ್ ಬರಿ ಹತ್ತೇ ರೂಪೈ ಕೊಟ್ಟಿರಿ”

ಕುಟ್ಟಿ ಹೇಳ್ದಾ…”.ಹ್ವಾ… ಎಂತ ನೀ ನನ್ನ್ ಮಂಗ ಮಾಡುದಾ… ನನ್ನೊಟ್ಟಿಗೆ ನೀನೂ ಕೂಕಂಡ್ ಬರಲ್ಯಾ?

ನಂದ್ ಹತ್ತ್… ನಿಂದ್ ಹತ್ತ್… ಅಲ್ಲಿಂದಲ್ಲಿಗೆ ಸಮಾ ಆಯ್ತ್… ಅಂದೇಳಿ ಇಳ್ಕಂಡ್ ಹೋತೆ ಇದ್ದ

ರಿಕ್ಷದನ್ ಆವತ್ತೇ ರಿಕ್ಷ ಮಾರಿ ಗೂಡ್ ಅಂಗಡಿ ಹಾಕಿದ ಅಂದೇಳಿ ಸುದ್ದಿ 🙂
___________________________________________________________________________________

ಚೀಂಕ್ರ : ಕುಟ್ಟಿಯಣ್ಣ … ಎಲ್ಲಿಗ್ ಹೋಯಿರಿ?

ಕುಟ್ಟಿ : ಗರ್ಲ್ ಫ್ರೆಂಡ್ ಒಟ್ಟಿಗೆ ಪಿಚ್ಚರಿಗೆ ಹೋಯಿದೆ ಮರ್ರೆ

ಚೀಂಕ್ರ : ಎಷ್ಟು ಖರ್ಚ್ ಆಯ್ತೇ?

ಕುಟ್ಟಿ: ಒಂದ್ ಸಾವ್ರ ಕರ್ಚ್ ಆಯ್ತ್ ಕಾಣಿ

ಚೀಂಕ್ರ : ಒಂದ್ ಸಾವ್ರ ಕರ್ಚ್ ಆಯ್ತಾ !!

ಕುಟ್ಟಿ : ನಂಗ್ ಇನ್ನೂ ಕರ್ಚ್ ಮಾಡೂಕ್ ಮನ್ಸ್ ಇದ್ದಿತ್ತ್… ಆರೇ ಎಂತ ಮಾಡುದ್… ಪಾಪ ಅವ್ಳ್ ಹತ್ರ ಇದ್ದದ್ದ್ ಅಷ್ಟೇ.. 🙂
___________________________________________________________________________________

ಕುಟ್ಟಿ : ಚೀಂಕ್ರಣ್ಣಾ, ಎಂತಕ್ ಬಾರೀ ಬೇಜಾರಗ್ ಇದ್ದಂಗ್ ಕಾಣತ್ತ್?

ಚೀಂಕ್ರ: ಎಂತಾ ಹೇಳುದ್ ಮರಾಯಾ… ನಿನ್ನೆ ನನ್ ಹೆಂಡ್ತಿ ಕಾರ್ ಡ್ರೈವರ್ ಒಟ್ಟಿಗೆ ಓಡಿ ಹೋಯಿಳ್

ಕುಟ್ಟಿ: ಥೋ… ಹೌದಾ… ಇನ್ನೀಗ ಎಂಥ ಮಾಡ್ತ್ರಿ?

ಚೀಂಕ್ರ: ಮತ್ತೆಂತ ಮಾಡುದ್… ಹೊಸ ಡ್ರೈವರ್ ಹುಡ್ಕತಾ ಇದ್ದೇ.. ಅಲ್ಲೀವರಿಗ್ ನಾನೇ ಕಾರ್ ಓಡ್ಸಕಲೇ ಅಂದೇಳಿ ಬೇಜಾರ್ ಮರ್ರೆ ಅಷ್ಟೇ 🙂
___________________________________________________________________________________

ಟ್ರಿಣ್ ಟ್ರಿಣ್… ಸೈಕಲ್ ಮರ್ಲ್…ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 5

Posted: ಮೇ 21, 2013 in ಇತ್ಯಾದಿ.., ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಜೋಕ್ಸ್, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಜೋಕ್ಸ್, ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದ, kundaapra kannada, kundapra, kundapra kannada, kundapra kannada jokes, kundapur, kundapur kannada, kundapura, kundapura kannada, kundapura kannada jokes
ಟ್ಯಾಗ್ ಗಳು:, , , , , , , , , , , , , , , , , , , , , , , ,

ಇದು ಮಸ್ತ್ ಹಳೀ ಜೋಕ್… ನೀವ್ ಮೊದ್ಲೇ ಕೇಂಡಿಪ್ಕೂ ಸಾಕ್… ಕೇಣದಿದ್ರೆ ಇಲ್ಕೇಣಿ 🙂

cycle

         ಚಿತ್ರ ಕೃಪೆ: http://www.frozenmercury.com

ಒಂದ್ ಹುಚ್ ಆಸ್ಪತ್ರಿಯಗೆ ಒಬ್ಬ ಹುಚ್ಚ ಇದ್ದಿದ ಅಂಬ್ರ್. ಅವನ ಹುಚ್ ಎಂತ ಅಂದ್ರೆ ಸೈಕಲ್ ಬಿಡು ಹುಚ್. ಇಪತ್ನಾಕ್ ಗಂಟಿಯೂ ಅದೇ ಆಲೋಚ್ನಿ…
ಸೈಕಲ್ ಮೇಲ್ ಇಲ್ದೇ ಇಪ್ಪತಿಗೂ… ಕೂಕಂಡಲ್…ಮಲ್ಕಂಡಲ್ಲ್… ಸೈಕಲ್ ಪೆಡ್ಲು ಮೆಟ್ಟುದ್… ಬೆಲ್ ಹೊಡುದ್… ಯಾಕ್ಷನ್ ಮಾಡ್ತಾ ಇರ್ತಾ.
ಮನಿಯರಿಗ್ ಕಂಡ್ ಕಂಡ್ ಸಾಕಾಯಿ ಆಸ್ಪತ್ರಿಗೆ ಸೇರ್ಸ್ರ್. ಸೇರ್ಸ್ರ್ ಮೇಲೂ ಅವ್ನ್ ಮರ್ಲ್ ಏನ್ ಕಡ್ಮಿ ಆಯಲ್ಲ.

ಹೀಂಗಿಪ್ಪತಿಗೆ ಒಂದಿನ ಡಾಕ್ಟ್ರು ಇವ್ರನ್ನೆಲ್ಲಾ ಕಾಂಬುಕ್ ಬಂದ್ರ್. ಡಾಕ್ಟ್ರಿಗ್ ಭಯಂಕರ ಆಶ್ಚರ್ಯ ಆಯ್ತ್. ಎಂತಕಂದ್ರೆ… ಇಂವ ಸುಮ್ನ್ ಕೂಕಂಡಿದ್ದ.
ಆಯ್ಲಿ… ಇಂವ ಒಬ್ಬ ಆರೂ ಸಮಾ ಆದ್ನಲ ಅಂದ್ ಎಣ್ಸಿ ಡಾಕ್ಟ್ರು ಖುಷಿಯಗ್ ಅವ್ನತ್ರ ಕೇಂಡ್ರ್ “ಹ್ವಾ… ಎಂತಾ ಸೈಕಲ್ ಮರ್ಲ್ ಪೂರ್ತಿ ಬಿಡ್ತನಾ?”

ಅಂವ ಹೇಳದ್ ಎಂತಾ ಗೊತ್ತಿತಾ… “ಹ್ವಾಯ್ ನಾ ಡವ್ನಗೆ ಹೋತಾ ಇದ್ದೆ… ಮಾತಾಡ್ಸ್ ಬೆಡಿ… ಬ್ಯಾಲೆನ್ಸ್ ತಪ್ಪತ್ತ್…”

ಡಾಕ್ಱು ಈಗ ಅದೇ ಆಸ್ಪತ್ರಿಗೆ….ಎಡ್ಮಿಟ್ ಆಯೀರ್ ಅಂತ್ ಸುದ್ದಿಯಪ…!! 🙂

ಕುಟ್ಟಿ ಬೆಂಗ್ಳೂರಿಗ್ ಹೋದ್ ಕತಿ…ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 4

Posted: ಮೇ 21, 2013 in ಇತ್ಯಾದಿ.., ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಜೋಕ್ಸ್, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಜೋಕ್ಸ್, ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದ, kundaapra kannada, kundapra, kundapra kannada, kundapra kannada jokes, kundapur, kundapur kannada, kundapura, kundapura kannada, kundapura kannada jokes
ಟ್ಯಾಗ್ ಗಳು:, , , , , , , , , , , , , , , , , , , , , , , ,

ನಮ್ಮ ಕುಟ್ಟಿ ಬರೀ ಕುಂದಾಪ್ರಕ್ಕ್ ಮಾತ್ರ ಅಲ್ದೇ… ಬೆಂಗ್ಳೂರಿಗ್ ಸತೇ ಹೋದ್ದ್ ಕತಿ ಗೊತ್ತಿತಾ? ಗೊತ್ತಿಲ್ದಿರ್ ನಾ ಹೇಳ್ತೆ ಆ ಕತಿ. ನೀವ್ ಬಾಯ್ ಕಳ್ಕಂಡ್ ಕೇಣಿ ಅಕಾ 🙂

ಕುಟ್ಟಿನ್ ಒಂದ್ಸಲ ಅವ್ನ್ ಅಂಗ್ಡಿ ಸವ್ಕಾರ್ರ್ ಬೆಂಗ್ಳೂರಿಗ್ ಕಳ್ಸಿರ್. ಸವ್ಕಾರ್ರ್ ಹೇಳದ್ ಕೆಲ್ಸ ಎಲ್ಲಾ ಮುಗ್ಸಿ, ಕುಟ್ಟಿ ಬೆಂಗ್ಳೂರ್ ತಿರ್ಗಕ್ ಅಂದೇಳಿ ಬೈಕಗ್ ಅವ್ನ ದೋಸ್ತಿ ಬೆಂಗ್ಳೂರಗ್ ಇದ್ದ ಚೀಂಕ್ರನ ಒಟ್ಟಿಗ್ ತಿರ್ಗತಾ ಇದ್ದಿದ. ಹೀಂಗೇ ಬಳೀತಾ-ತಿರ್ಗತಾ ಅರ್.ಟಿ ನಗರ-ಗಂಗಾನಗರ ಬದಿಗ್ ಹೋರ್ ಇಬ್ರೂ. ಅರ್.ಟಿ. ನಗರ ಹತ್ರ ಬಪ್ಪುಕೂ ಸಣ್ಣಕ್ ಮಳಿ ಬಪ್ಕ್ ಸುರು ಆಯ್ತ್. ಇದೆಂತಾ ಕಿಚ್ಚ್ ಹಿಡದ್ದ್ ಮಳಿ… ಬೆಂಗ್ಳೂರ್ ತಿರ್ಗುಕೂ ಬಿಡುದಿಲ್ಯಲೇ ಅಂದೇಳಿ ಗೊಣ ಗೊಣ ಅಂತಾ ಒಂದ್ ಲೋಟಿ ಚಾ ಕುಡುವನಾ ಚೀಂಕ್ರ ಅಂದ್ ಕುಟ್ಟಿ ಕೇಂಡ. ಸರಿ ಮತ್ತೆಂತ ಮಾಡುದ್ ಮಳಿಯಗ್ ಮೈ ಚಂಡಿ ಆತ್ತಲೇ ಅಂದೇಳಿ ಬೈಕನ್ ಅಲ್ಲೇ ಮುಲ್ಲಿಗ್ ಹಾಕಿ, ಒಂದ್ ಸಣ್ಣ್ ಗೂಡ್-ಅಂಗ್ಡಿ ಕಣಗಿದ್ದ್ ಹೋಟ್ಲಿಗ್ ಹೋಯಿ… ಮೂರ್ ಕಾಲಿಂದ್ ಒಂದ್ ಬೆಂಚಿನ್ ಮೇಲ್ ಇಬ್ರೂ ಹಗೂರ ಕೂಕಂಡ್ರ್. ಚೀಂಕ್ರ ಹೇಳ್ದಾ… “ನಂಗ್ ಚಾ ಬ್ಯಾಡ ಕುಟ್ಟಿ, ನಿಂಗ್ ಬೇಕಾರ್ ಕುಡಿ”

ಅಲ್ಲೇ ವರ್ಸತಾ ಇದ್ದಿದ್ ಸಪ್ಲಯರ್ ಗಂಡಿನ್ ಕರ್ದ್…”ಏ ಗಡಾ… ಒಂದ್ ಪೆಶಲ್ ಚಾ ತಕಂಬಾ” ಅಂದ ಕುಟ್ಟಿ

ಗಂಡೂ ಕುಂದಾಪ್ರದ್ದೇ… ಹಂಗಾಯಿ ಅವ್ನಿಗ್ ಇವ್ರ್ ಹೇಳದ್ ಗೊತ್ತಾಯ್ತ್

ಒಳ್ಗ್ ಹೋದ್ ಗಂಡ್ ಐದ್ ನಿಮ್ಷ ಬಿಟ್ ಹೆರ್ಗ್ ಬಂತ್… ಕುಟ್ಟಿ ಕಾಂತಾ ಇದ್ದ… ಆ ಗಂಡ್ 1-2-3-4-5-6 ಹೀಂಗೆ 6 ಲೋಟ ಚಾ ಒಂದಂದಾಯಿ ಇವ್ನ್ ಎದ್ರ್ ಇಡ್ತ್.

ಕುಟ್ಟಿಗ್ ಅನ್ಮಾನ ಆಯ್ತ್… ಎಂತಾ ಈ ಗಂಡಿಗೆ ಅಂಗ್ಡಿ ದೂರವಾ ಹ್ಯಾಂಗೆ? ನಾ ಹೇಳದ್ದ್ ಒಂದ್ ಪೆಶಲ್ ಚಾ. ಆರೇ ಇಂವ ಆರ್ ಚಾ ತಂದಿನಲಾ… ಅಂದೇಳಿ ಆಲೊಚ್ನಿ ಮಾಡ್ತಾ ಕೇಂಡ…” ಗಡೇ… ನಾ ಹೇಳದ್ ಒಂದ್ ಪೆಶಲ್ ಚಾ, ನೀ ಎಂತಕೆ ಆರ್ ಚಾ ತಕ ಬಂದೆ?”
tea

 

Untitled

 

 

 

 

 

 

 

 

ಗಂಡ್ ಹೇಳ್ತ್…. “ಹ್ವಾಯ್… ನಿಮ್ಗ್ ಈ ಊರಿನ್ ಹೆಸ್ರ್ ಗೊತಿತಲ್ದಾ? ಇದ್ “ಅರ್ ಟೀ“ ನಗರ ಮರ್ರೆ… ಅದಕ್ಕೇ ಆರ್ ಚಾ ತಕಂಡ್ ಬಂದೆ”

ಕುಟ್ಟಿ ಅಲ್ಲೇ ಚಂಯ್ಕ… ಕುಟ್ಟಿ ಕುಂದಾಪ್ರಕ್ಕ್ ಹೋದ್ ಕತಿ ಕಣಗೆ ಕುಟ್ಟಿ ಆರ್-ಟೀ ಕುಡದ್ ಕತಿಯೂ ಈಗ ಕುಂದಾಪ್ರದಗೆ ವಲ್ಡ್ ಪೇಮಸ್ 🙂

ಟಾಸ್… ಪುಲ್ಟಾಸ್… ಗಪ್ಳಾಸ್…ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 3

Posted: ಮೇ 21, 2013 in ಇತ್ಯಾದಿ.., ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಜೋಕ್ಸ್, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಜೋಕ್ಸ್, ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದ, kundaapra kannada, kundapra, kundapra kannada, kundapra kannada jokes, kundapur, kundapur kannada, kundapura, kundapura kannada, kundapura kannada jokes
ಟ್ಯಾಗ್ ಗಳು:, , , , , , , , , , , , , , , , , , , , , , ,

ಟಾಸ್… ಪುಲ್ಟಾಸ್… ಗಪ್ಳಾಸ್… ಎಷ್ಟ್ ಆತ್ತೋ ಅಷ್ಟ್ ಹಾರ್ಸ್ 🙂

ಇದು ಕುಂದಾಪ್ರದಗ್ ನೆಡದ್ ಸತ್ಯ ಘಟನೆ… ಸುಮಾರ್ ವರ್ಷದ ಹಿಂದೆ ನೆಡದ್ದ್ 🙂

coin

 

 

 

 

 

 

 

 

 

 

 

 

 

 

 

 

 

 

 

 

 

(ಚಿತ್ರ ಕೃಪೆ : http://vecto.rs/design/vector-of-a-cartoon-coach-tossing-a-coin-coloring-page-outline-by-ron-leishman-22462)

 

ಶಾಲಿಯಗೆ 7ನೇ ಕ್ಲಾಸಿನ ವಾರ್ಷಿಕ ಪರೀಕ್ಷೆ ನಡಿತಿದ್ದಿತ್. ನಮ್ ಕುಟ್ಟಿ ಇದ್ದ್ ವರ್ಷ ಆ ಶಾಲಿಯಗೆ ಮಕ್ಳ್ ಬರೀ ಬಡ್ಡ್ ಅಂಬ್ರ್. ಅದಕ್ಕೇ ಮಾಷ್ಟ್ರೆಲ್ಲಾ ಒಟ್ಟಾಯಿ ಈ ಸರ್ತಿ ಈ ಮಕ್ಳನ್ನೆಲ್ಲಾ ಹ್ಯಾಂಗಾರೂ ಮಾಡಿ ದೂಡ್ವಾ, ಇವ್ ಹತ್ತಾ ಪಣ್ಕ್ ಮಕ್ಕಳ್ ಅಂದೇಳಿ, ಪರಿಕ್ಷೆಯಗೆ ಬರೀ ಸರಿ-ತಪ್ಪು ಹೇಳುವ ಪ್ರಶ್ನೆ ಮಾತ್ರ ಕೇಂಡಿರ್. ಪರಿಕ್ಷೆ ಸುರು ಆಯ್ತ್… ಮಕ್ಕಳೆಲ್ಲಾ ಅಡ್ಡ ಬಿದ್ಕ ಬರುಕ್ ಸುರು ಮಾಡಿದೋ.

ನಮ್ಮ ಕುಟ್ಟಿ ಲಾಸ್ಟ್ ಬೆಂಚಗೆ ಕೂಕಂಡ್ ಇದ್ದಿದಾ. ಮಾಷ್ಟ್ರು ಎಲ್ಲ ಮಕ್ಳನ್ನೂ ಕಾಂತಾ ಇದ್ದಿರ್… ಎಲ್ಲರೂ ಬರುದ್ರಗೇ ಇದ್ದಿರ್. ಆರೆ ಕುಟ್ಟಿ ಮಾತ್ರ ಮಧ್ಯ ಮಧ್ಯ ಬರುದ್ ನಿಲ್ಸಿ ಚಡ್ಡಿ ಕಿಸಿಗ್ ಕೈ ಹಾಕಿ ಎಂತದೊ ಹುಡ್ಕತಾ ಇದ್ದಿದ. ಇಂವ ಕಾಪಿ ಚೀಟಿ ಏನಾರೂ ತಕಂಡ್ ಬಂದಿನಾ ಕಾಂಬ ಅಂದೇಳಿ ಮಾಷ್ಟ್ರು ಹತ್ರ ಹೋಯಿ ಕಂಡ್ರೆ ಅಂವ ಎಂಟಾಣಿ ಹಿಡ್ಕಂಡ್ ಟಾಸ್ ಹಾರ್ಸ್ತಾ ಇದ್ದ

ಮಾಷ್ಟ್ರು ಕೇಂಡ್ರ್… “ಎಂಥದಾ ಕುಟ್ಟಿ, ಬರುದ್ ಬಿಟ್ಕಂಡ್ ಟಾಸ್ ಎಂತಕೆ ಹಾರ್ಸ್ತಾ ಇದ್ದೆ?”

ಕುಟ್ಟಿ ಹೇಳ್ದಾ… “ಅದಾ… ಮಾಷ್ಟ್ರೇ… ನೀವ್ ಪರೀಕ್ಷೆಯಗೆ ಸರಿ-ತಪ್ಪು ಉತ್ರ ಹೇಳುಕ್ ಪ್ರಶ್ನೆ ಕೇಂಡಿರಿ ಅಲ್ದಾ? ಕಿಚ್ಚ್ ಹಿಡಿದ್ದ್ ಉತ್ರ ಒಂದೂ ಗೊತ್ತಿಲ್ಲ ಮರ್ರೆ… ಅದ್ಕೆ ಟಾಸ್ ಹಾರ್ಸ್ತಾ ಇದ್ದೆ. ಹೆಡ್ ಬಿದ್ರ್ ಸರಿ ಅಂದೇಳಿ ಟೇಲ್ ಬಿದ್ರೆ ತಪ್ಪು ಅಂದೇಳಿ ಉತ್ರ ಬರಿತಾ ಇದ್ದೆ”

ಮಾಷ್ಟ್ರಿಗೆ ಇವ್ನ್ ಬುದ್ವಂತ್ಕಿ ಕಂಡ್ ತಲಿ ತಿರ್ಗ್ತ್… ಆರೂ ಸುಧಾರ್ಸ್ಕಂಡ್… “ನೀ ಏನ್ ಬೇಕಾರೂ ಮಾಡಿ ಸಾಯ್ ಮಾರಾಯಾ… ಓಟ್ಟ್… ನಮ್ ಶಾಲಿಗ್ ನಿನ್ನ್ ರಗ್ಳಿ ಒಂದ್ ಕೈದ್ ಆರ್ ಸಾಕ್” ಅಂದ್ರ್.
ಸುಮಾರ್ ಅರ್ಧ ಗಂಟಿ ಆಪ್ಕೂ ಕುಟ್ಟಿ ಎದ್ ನಿಂತ್ಕಂಡ್ ಕೇಂಡಾ… “ಸರ್ ನಂದ್ ಬರ್ದ್ ಆಯ್ತ್… ನಾ ಮನಿಗ್ ಹೋಪ್ದಾ“

ಮಾಷ್ಟ್ರು ಹೇಳ್ರ್… “ಎಂತ ಗಡ್ಬಿಡಿ ನಿಂಗೆ ? ಕೆಸಿನ್ ಬುಡಕ್ಕ್ ಕರಿನ್ ಕಟ್ಟಿ ಬಂದಿದ್ಯಾ? ಎಲ್ಲರದ್ ಬರ್ದ್ ಆರ್ ಮೇಲೆ ಒಟ್ಟಿಗ್ ಹೋಯ್ಲಕ್… ಸುಮ್ನ್ ಕೂಕೋ ಈಗ”

ಸರಿ ಕುಟ್ಟಿ ಕೂಕಂಡ… ಸುಮಾರ್ ಹೊತ್ತ್ ಆರ್ ಮೇಲ್ ಮಾಷ್ಟ್ರು ಕಾಂತ್ರ್ ಕುಟ್ಟಿ ಮತ್ತ್ ಟಾಸ್ ಹಾಕ್ತಾ ಇದ್ದ… ಮಾಷ್ಟ್ರು ಹತ್ರ ಹೋಯಿ ಕೇಂಡ್ರ್… “ಆಗ್ಲೇ ಬರ್ದ್ ಆಯ್ತ್ ಅಂದೆ… ಈಗ ಮತ್ತ್ ಎಂತಕ್ ಟಾಸ್ ಹಾರ್ಸ್ತಾ ಇದ್ದೆ?”

ಕುಟ್ಟಿ ಹಗೂರ ಹೇಳ್ದಾ… “ಎಂತದಿಲ್ಯೇ… ಪುರ್ಸೊತ್ತ್ ಇದ್ದಿತಲ್ದಾ… ಅದ್ಕೆ ಬರದ್ ಉತ್ರ ಸರಿಯಾ ತಪ್ಪಾ ಅಂತ ಟಾಸ್ ಹಾರ್ಸಿ ಒಂದೊಂದಾಯಿ ಚಕ್ ಮಾಡಿ ಕಾಂತಾ ಇದ್ದೆ 🙂

ಇದಾರ್ ಮೇಲ್ ಆ ಶಾಲಿಗೆ ಮಾಷ್ಟ್ರು ಆಯಿ ಬಪ್ಪುಕೆ ಯಾರೂ ಒಪ್ಪುದಿಲ್ಲ ಅಂದೇಳಿ ಸುದ್ದಿ !!

ಎಷ್ಟ್ ಬೇಕಾರೂ ನೆಗಾಡಿ… ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 2 :-)

Posted: ಮೇ 21, 2013 in ಇತ್ಯಾದಿ.., ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಜೋಕ್ಸ್, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಜೋಕ್ಸ್, ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದ, kundaapra kannada, kundapra, kundapra kannada, kundapra kannada jokes, kundapur, kundapur kannada, kundapura, kundapura kannada, kundapura kannada jokes
ಟ್ಯಾಗ್ ಗಳು:, , , , , , , , , , , , , , , , , , , , , , ,

ಎಷ್ಟ್ ಬೇಕಾರೂ ನೆಗಾಡಿ… ಇದ್ ಕುಂದಾಪ್ರ ಕನ್ನಡ ಜೋಕ್ಸ್ ಭಾಗ 2 🙂

ಇದು ಕುಟ್ಟಿ ಸಣ್ಣಕಿಪ್ಪತಿಗ್ ನೆಡದ್ದ್…

ಕುಟ್ಟಿ ಒಂದ್ ಇನ್-ಲ್ಯಾಂಡ್ ಲೆಟರಗೆ ಕಾಗ್ದ ಬರ್ದ್ ಎಡ್ರಸ್ ಬರಿತಾ ಇದ್ದ
ಅವ್ನ್ ಅಮ್ಮ ಬಂದ್ ಕೇಂಡ್ರ್… ’ಮಗಾ ಯಾರಿಗ್ ಕಾಗ್ದ ಬರೀತಿದ್ದೆ?’

ಕುಟ್ಟಿ ಹೇಳ್ದಾ… ‘ನಂಗೇ ಬರದ್ದ್ ಅಮ್ಮ… ಈಗ ಪೋಸ್ಟ್ ಮಾಡಿ ಬರ್ಕ್’

ಅವ್ನ್ ಅಮ್ಮನಿಗೆ ಇದ್ಯಾವ್ ನಮನಿ ವಿಚಿತ್ರ ಅನ್ಸಿ ಕೇಂಡ್ರ್ … ‘ನಿಂಗೆ ನೀ ಕಾಗ್ದ ಬರುದಾ… ಇದೊಳ್ಳೇ ಪಂಚಾಯ್ತಿ ಮರಾಯ… ಹೋಯ್ಲಿ ಎಂತ ಬರ್ದಿದೆ?’

ಕುಟ್ಟಿ ಹೇಳ್ದಾ… ‘ಅದ್ ಈಗ್ಲೇ ಹ್ಯಾಂಗ್ ಗೊತ್ತಾತ್ತ್? ನಂಗ್ ಕಾಗ್ದ ಸಿಕ್ರ ಮೇಲೆ ಗೊತ್ತಾಪ್ದ್ ಅಲ್ದಾ…’ 🙂
—————————————————————————————————————————

ಕುಟ್ಟಿ ಮತ್ ಚೀಂಕ್ರ ದೋಣಿಯಲ್ ಹೊಳಿ ದಾಟ್ತ ಇದ್ದಿರ್…

ಹೊಳಿ ಮಧ್ಯ ಬಪ್ಕೂ ಚೀಂಕ್ರ ಹೇಳ್ದಾ… ‘ಕುಟ್ಟಿಯಣ್ಣ… ಅಲ್ಕಾಣಿ ಮರ್ರೆ… ದೋಣಿ ಒಟ್ಟಿ ಆಯಿತ್… ನೀರ್ ಒಳ್ಗ್ ಬತ್ತಾ ಇತ್ತ್’

ಕುಟ್ಟಿ ಹೇಳ್ದಾ… ‘ಚೀಂಕ್ರಣ್ಣ… ನಿಮ್ಗೆ ತಲಿಬಿಸಿ ಎಂತಕೆ… ನಾ ಇದ್ನಲ್ಲ’

ಚೀಂಕ್ರ ಕೇಂಡಾ… ‘ನೀವ್ ಎಂತ ಮಾಡ್ತ್ರಿ?’

ಕುಟ್ಟಿ ಹೇಳ್ದಾ… ’ಮತ್ತೆಂತ ಇಲ್ಯೇ… ಇನ್ನೊಂದ್ ಒಟ್ಟಿ ಮಾಡ್ರ್ ಸೈ… ಆ ಒಟ್ಟಿಯಗ್ ಬಂದ್ ನೀರ್ ಈ ಒಟ್ಟಿಯಗೆ ಹೆರ್ಗ್ ಹೋತ್ತ್…’ 🙂

ಚೀಂಕ್ರ ಅಲ್ಲೇ ತಲಿ ತಿರ್ಗಿ ಬಿದ್ದನ್ ಇನ್ನೂ ಮೇಲ್ ಏಳಲ್ಲ ಅಂಬ್ರ್ !!
—————————————————————————————————————————

ಮಾಷ್ಟ್ರು ಅಂಕಗಣಿತ ಪಾಠ ಮಾಡ್ತಾ ಪ್ರಶ್ನೆ ಕೇಂಡ್ರ್

ಮಾಷ್ಟ್ರು: ಕುಟ್ಟಿ… ನಿನ್ನತ್ರ 2000 ರೂಪಾಯಿ ಇತ್ತ್. ಅದ್ರಗೆ ನೀನ್ ಒಂದ್ ಸಾವ್ರ ಚೀಂಕ್ರನಿಗೆ ಸಾಲ ಕೊಡ್ತೆ ಅಂತ ಎಣ್ಸ್ಕೋ.
ಸಾಲಕ್ಕ್ ಒಂದ್ ವರ್ಷಕ್ಕ್ 10 % ಲೆಕ್ಕದಗೆ ಬಡ್ಡಿ ಹಾಕ್ರೆ ಎಷ್ಟ್ ಬಡ್ಡಿ ಆತ್ತ್?

ಕುಟ್ಟಿ ಹೇಳ್ದಾ… ‘ನೀವ್ ಬರೀ ಹೊಟ್ಟಿತಿಪ್ಪು ಮಾತ್ ಆಡ್ಬೇಡಿ ಸರ್… ಅಸ್ಲ್ ಸಿಕ್ರೇ ನನ್ನ್ ಅಜ್ಜಿ ಪುಣ್ಯ.. ನೀವ್ ಬಡ್ಡಿಗ್ ಹೋದ್ರಿ ಮರ್ರೆ’ 🙂
—————————————————————————————————————————


ಕುಂದಾಪ್ರ ಕನ್ನಡ ಜೋಕ್ಸ್… ಸಮಾ ನೆಗಾಡಿ… ಆಪಲ್ಲಿವರಿಗ್ ಲಗಾಡಿ… 🙂

kundapura Kannada Jokes

 

 

 

 

ಒಂದಿನ ಕುಟ್ಟಿ ಕುಂದಾಪ್ರಕ್ಕೆ ಬಂದಿದ್ದ. ಮನಿ ಬದಿಗೆ ಹೋಪುಕೆ ಬಸ್ಸಿಗೆ ಕಾಯ್ತ ಶಾಸ್ತ್ರಿ ಸರ್ಕಲ್ಲಗೆ ನಿಂತಿದ್ದ

ಅಷ್ಟೊತ್ತಿಗೆ ಅಲ್ಲಿಗೆ ಒಬ್ಬ ಬೇಡುವವ ಅವ್ನತ್ರ ಬಂದ

‘ಹ್ವಾಯ್… ಒಂದ್ ರುಪಾಯ್ ಇದ್ರೆ ಕೊಡಿ ಮರ್ರೆ…’ ಅಂತ ಕುಟ್ಟಿ ಹತ್ರ ಕೇಂಡ

ಕುಟ್ಟಿ ಯಾವ್ ಸಿಟ್ಟಗೆ ಇದ್ದಿನೋ ಏನೋ….. ‘ನಿಂಗ್ ನಾಚ್ಕಿ ಆತಿಲ್ಯನಾ, ರಸ್ತಿ ಮೇಲ್ ನಿಂತ್ಕ ಬೇಡುಕೆ…’ ಅಂದೇಳಿ ಬೈದ

ಬೇಡುವವ ಹೇಳ್ದಾ, ‘ಹೋಯ್ನಿಯೇ… ನೀವ್ ಕೊಡ್ದಿರೆ ಅಷ್ಟೇ ಹೋಯ್ತ್… ನೀವ್ ಕೊಡು ಆ ಒಂದ್ರುಪಾಯಿಗೆ ನಾನ್ ರಸ್ತಿ ಮೇಲ್ ನಿಂತ್ಕಣ್ದೆ ಇನ್ನೆಂತಾ ಆಪಿಸ್ ಕಟ್ಟಿ ಕೂಕಂಬ್ಕ್ ಆತ್ತಾ?’ 🙂

ಇದಾದ್ರ್ ಮೇಲೆ ದೂರದಗೆ ಯಾರಾರು ಬೇಡುವರ್ ಕಂಡ್ರೂ ಸಾಕ್ ಕುಟ್ಟಿ, ಕಲ್ ಕುಟ್ಟಿ ಬೆರ್ಸತಾ ಅಂಬ್ರ್ ಅಂದೇಳಿ ಸುದ್ದಿ 🙂

_______________________________________________________________________________

ಕುಟ್ಟಿ ಒಂದ್ ಸಲ ಕಾರಗೆ ಕುಂದಾಪ್ರಕ್ಕೆ ಹೋಯಿದ್ದ. ಅವ್ನೊಟ್ಟಿಗೆ ಚೀಂಕ್ರ ಸತೇ ಹೋಯಿದ್ದಿದ

ಸರಿ ಕುಂದಾಪ್ರ ಬಂತ್… ಕಾರ್ ನಿಲ್ಸಿ ಕುಟ್ಟಿ ಕಾರಿನ ಚಕ್ರ ಬಿಚ್ಚುಕ್ ಶುರು ಮಾಡ್ದ

ಚೀಂಕ್ರ ‘ಬೌಷ ಕಾರಿನ್ ಚಕ್ರ ಪಂಚರ್ ಆಯಿತ್ತೆನೋ’ ಅಂದೇಳಿ ಎಣ್ಸಕಂಡ್ ಸುಮ್ನೆ ಕೂಕಂಡಿದ.

ಸಲ್ಪ ಹೊತ್ತಾರ್ ಕೂಡ್ಲೆ ಕುಟ್ಟಿ ಇನ್ನೊಂದ್ ಚಕ್ರ ಕಳ್ಚುಕೆ ಸುರು ಮಾಡ್ದ

ಚೀಂಕ್ರನಿಗೆ ಹೆದ್ರಿಕಿ ಸುರು ಆಯ್ತ್. ಕಾರಿಂದ್ ಕೆಳ್ಗ್ ಇಳ್ದ್… ‘ಕುಟ್ಟಿಯಣ್ಣ ಎಂತ ಮಾಡ್ತಿದ್ರಿ… ಚಕ್ರ ಎಂತಕೆ ಕಳ್ಚತಾ ಇದ್ರಿ’ ಅಂದ್ ಕೇಂಡ

ಕುಟ್ಟಿ ಮಂಡಿ ನೆಗ್ಗಿ ಹೇಳ್ದ… ‘ಹ್ವಾಯ್… ನಿಮ್ಮ್ ಕಣ್ ಹೊಟ್ಟಿ ಹೋಯಿತಾ ಎಂತ? ಅಲ್ಲ್ ಅಷ್ಟ್ ದೊಡ್ಡ್ ಬೋರ್ಡ್ ಬರ್ದ್ ಹಾಕಿರಲೇ…. ಇಲ್ಲಿ ಬರೀ ದ್ವಿಚಕ್ರ ವಾಹನ ಮಾತ್ರ ನಿಲ್ಲಿಸಬಹುದು ಅಂದೇಳಿ… ನಾ ಕಾರ್ ನಿಲ್ಸಕ್ ಅಲ್ದಾ… ಅದ್ಕೆ ಎರ್ಡ್ ಚಕ್ರ ಕಳ್ಚತಾ ಇದ್ದೆ…’ 🙂

_______________________________________________________________________________

ಕುಟ್ಟಿಗೆ ಬಸ್ಸಗೆ ಟಿಕೇಟ್ ಸಿಕ್ಕಲ್ಲ ಅಂದೇಳಿ ರೈಲಗೆ ಊರಿಗ್ ಹೊರ್ಟಿದ್ದ.

ಮನಿ ಮುಟ್ರ ಮೇಲೆ ಮನಿಯರತ್ರ ಹೇಳ್ದ ಅಂಬ್ರ್ …’ರಾತ್ರಿ ಪೂರ್ತಿ ನಿದ್ರಿ ಇಲ್ಲ…. ಮನ್ಕಣ್ಕ್‘

ಮನಿಯರ್ ಕೇಂಡ್ರ್ … ಎಂತಕೆ ಮನ್ಕಣಲ್ಯಾ ರೈಲಗೆ?

ಕುಟ್ಟಿ ಹೇಳ್ದ… ನಂಗೆ ಅಪ್ಪರ್ ಬರ್ತ್ ಸಿಕ್ಕಿತ್…. ಅಪ್ಪರ್ ಬರ್ತಗ್ ಮನ್ಕಂಡ್ರೆ ನಂಗ್ ನಿದ್ರಿ ಬತ್ತಿಲ್ಲ

ಆಲ್ಲ್ ಇದ್ದ ಅವ್ನ ನೆರ್ಮನಿದ್ ಒಂದ್ ಪಣ್ಕ್ ಗಂಡ್ ಕೇಂತ್… ‘ಕುಟ್ಟಿಯಣ್ಣ… ಕೆಳ್ಗಿನ ಬರ್ತಗೆ ಇದ್ದರ್ ಯಾರ್ ಹತ್ರಾರೂ ಬರ್ತ್ ಅದ್ಲ್-ಬದ್ಲ್ ಮಾಡುಕೆ ಕೇಣ್ಕ್ ಇತ್ತ್’

ಕುಟ್ಟಿ ಹೇಳ್ದ… ‘ಗಡಾ ನೀ ಸುಮ್ನಾಯ್ಕೋ… ನಂಗ್ ಅಷ್ಟೂ ಗೊತ್ತಾತಿಲ್ಲ್ಯಾ….. ನಾನೂ ಹಾಂಗೇ ಮಾಡ್ತಿದ್ದೆ…. ಆರೆ.. ಕಿಚ್ಚ್ ಹಿಡದ್ದ್… ಕೆಳ್ಗಿನ ಬರ್ತಗೆ ಯಾರೂ ಇರ್ಲೇ ಇಲ್ಲ ಬದ್ಲಾಯ್ಸಕಂಬ್ಕೆ.. 🙂

ಕುಂದಾಪ್ರ ಕ್ಷೇತ್ರಾ… ಸೋತ್-ಹೋರೇ ಉಳ್ದರ್ (ಕಡ್ಡಿ ಪುಡಿ ಪುಡಿ ಮಿಕ್ಸ್)

Posted: ಮೇ 16, 2013 in anaka, anakavaadu, ಅಣಕ, ಅಣಕವಾಡು, ಕನ್ನಡ ರಿಮಿಕ್ಸ್, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಅಣಕ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಅಣಕ, ಕುಂದಾಪ್ರ ಕನ್ನಡ ರಿಮಿಕ್ಸ್, ಗಮ್ಮತ್ ಇತ್ತ್ ಕಾಣಿ..., kannada remix, kundaapra kannada, kundaapra kannada anaka, kundapra, kundapra kannada, kundapur, kundapur kannada, kundapura, kundapura kannada, kundapura kannada anaka, kundapura kannada remix
ಟ್ಯಾಗ್ ಗಳು:, , , , , , , , , , , , , , , , , , , , , , , , , , , , ,

‘ಕಡ್ಡಿಪುಡಿ’ ಪಿಚ್ಚರಿನ ‘ಸೌಂದರ್ಯ ಸಮರಾ…ಸೋತವನೇ ಅಮರ’ ಧಾಟಿಯಗೆ ಒಂದ್ ಕುಂದಾಪ್ರ ಪದ್ಯ ‘ಕುಂದಾಪ್ರ ಕ್ಷೇತ್ರಾ… ಸೋತ್-ಹೋರೇ ಉಳ್ದರ್ ’ 🙂

 

ಕುಂದಾಪ್ರ ಕ್ಷೇತ್ರಾ… ಸೋತ್-ಹೋರೇ ಉಳ್ದರ್
ಕುಂದಾಪ್ರ ಕ್ಷೇತ್ರಾ… ಸೋತ್-ಹೋರೇ ಉಳ್ದರ್

ಹಾಲಾಡಿಯರೆದ್ರು ಬೇರ್ಯಾರ್
ಗೆಲ್ತ್ರ್… ಇಲ್ಲ್
ಪಕ್ಷಇಲ್ಲದೇ ಹೋದ್ರೂ
ಗೆಲ್ಸಿ ಕಳ್ಸೀರ್-ಕಾಣಿ
ಘನಾರ್ ಗೆಲ್ಲಕ್-ಕಾಣಿ

ಕುಂದಾಪ್ರ ಮಟ್ಟಿಗೆ ಇವರೇ ಅಲ್ದಾ… ಮಾದರಿ ವಾಜ್ಪೇಯಿ
ಇದ್ ಗೊತ್ತಿದ್ದೆ ವೋಟ್-ಹಾಕಿ… ಗೆದ್ದ್ ಬಂದಿರ್ ಹಾಲಾಡಿ
ಗೆಲ್ಲತಾ-ಇದ್ದ್ರೆ ಸಾಲಾಯಿ… ಚೂರೂ ಇಲ್ಲ ಹುಣ್ಸಿಹುಳಿ

ನೀವ್ ಗೆದ್ರಿ …ಈ ಸರ್ತಿ…ಅತಿ ಹೆಚ್ಚಿನ ವೋಟಿನಗೆ
ನಿಮ್ಮ್ ಒಳ್ಳೆತನ ಕಂಡ್… ಗೆದ್ದ್ ಬಿಟ್ರಿ ಈ ಸರ್ತಿಯೂ
ಬೆನ್ನಿಗ್ ಚೂರಿ ಹಾಕ್ದರಿಗೆ… ಆಯಿತ್ ಒಳ್ಳೇ ಪಾಠ
ಹುಡ್ಕರೂ ಸಿಕ್ಕರೂ… ನಿಮ್ಕಿಂತ್ ಒಳ್ಳೇರ್
ಮಾಡ್ತಾಇರಿ ಒಳ್ಳೇದ್…ಹೀಂಗೇಇರ್ಲಿ ಉಮೇದು…ಊಊಊ…ಊಊಊ

ಕುಂದಾಪ್ರ ಕ್ಷೇತ್ರಾ… ಸೋತ್-ಹೋರೇ ಉಳ್ದರ್
ಕುಂದಾಪ್ರ ಕ್ಷೇತ್ರಾ… ಸೋತ್-ಹೋರೇ ಉಳ್ದರ್

ಹಾಲಾಡಿಯರೆದ್ರು ಬೇರ್ಯಾರ್
ಗೆಲ್ತ್ರ್… ಇಲ್ಲ್
ಪಕ್ಷಇಲ್ಲದೇ ಹೋದ್ರೂ
ಗೆಲ್ಸಿ ಕಳ್ಸೀರ್-ಕಾಣಿ
ಘನಾರ್ ಗೆಲ್ಲಕ್-ಕಾಣಿ

ಕುಂದಾಪ್ರದ ಕ್ಷೇತ್ರಕೆ… ಒದ್ಕಣಿ ಮುಂಚಿನ ಕಣಗೆ
ಊರಿಗ್ ಒಳ್ಳೇದ್ ಮಾಡಿ… ಗೆದ್ದ್ ಮಂತ್ರಿ ಆತ್ರಿ

ಕರೆಂಟ್ ನೀರ್ ರಸ್ತಿಗೆ… ಹೋರಾಡಿ ನೀವ್ ಸಲ್ಪ
ಊರ್ ಒಳ್ಳೇದಿಗೆ ಮಾಡ್ಸಿನಿ… ಕೇಣಿನಿ ಬಡವ್ರ್ ಕಷ್ಟ

ಕಣ್ಣು… ಕಣ್ ಬಿಡುವಾಂಗೆ… ಕುಂದಾಪ್ರ ಮಿಂಚಲಿ
ಹಳ್ಳಿ… ಹಳ್ಳಿಯಂಗೂ ಜನ… ನಿಮ್ಮ ಹೆಸ್ರ್-ಹೇಳ್ಲಿ

ಜನ್ರ ಸೇವೆಯಾ ಮಾಡಿ …ಜನ್ರ ಸೇವೆಯಾ
ಜನ್ರ ಸೇವೆಯಾ ಮಾಡಿ …ಜನ್ರ ಸೇವೆಯಾ

ಕುಂದಾಪ್ರ ಕ್ಷೇತ್ರಾ… ಸೋತ್-ಹೋರೇ ಉಳ್ದರ್
ಕುಂದಾಪ್ರ ಕ್ಷೇತ್ರಾ… ಸೋತ್-ಹೋರೇ ಉಳ್ದರ್

ಹಾಲಾಡಿಯರೆದ್ರ್ ಬೇರ್ಯಾರ್
ಗೆಲ್ತ್ರ್… ಇಲ್ಲ್
ಪಕ್ಷಇಲ್ಲದೇ ಹೋದ್ರೂ
ಗೆಲ್ಸಿ ಕಳ್ಸೀರ್-ಕಾಣಿ
ಘನಾರ್ ಗೆಲ್ಲಕ್-ಕಾಣಿ

______________________________________________________
ಮೂಲ ಹಾಡು: ಕಡ್ಡಿಪುಡಿ ಚಿತ್ರದ ‘ಸೌಂದರ್ಯ ಸಮರಾ…ಸೋತವನೇ ಅಮರ’ ಸಾಹಿತ್ಯ: ಯೋಗರಾಜ್ ಭಟ್ ಸಂಗೀತ: ವಿ.ಹರಿಕೃಷ್ಣ

ಕೃಪೆ: kannadalyrics.com

ಸೌಂದರ್ಯ ಸಮರಾ… ಸೋತವನೇ ಅಮರಾ
ಸೌಂದರ್ಯ ಸಮರಾ… ಸೋತವನೇ ಅಮರಾ

ಕಳೆದುಕೊಳ್ಳಲು ಬೇರೇನೂ
ಇಲ್ಲಾ… ಇಲ್ಲಿ
ಇರುವುದನೇ ಪಡೆದು
ತಿರುಗಿ ಕಳೆದುಕೊಳ್ಳಿ
ಕಳೆದು ಪಡೆದುಕೊಳ್ಳಿ

ಅಮಲುಗಣ್ಣಿಗೆ ಇವಳು ಸದಾ… ಸುಂದರ ಗಾಂಧಾರಿ
ಅದ ತಿಳಿದ ಮದನಾರೀ… ಅತಿ ವಿರಹಿ ವ್ಯಾಮೋಹಿ
ಸುಡುತಿರುವ ಸಾರಂಗೀ… ಮೃದು ಮಧುರಾ ಮಹಕಾಳಿ

ಈ ಒದ್ದೆ ಈ ಮುದ್ದೆ ಕೋಲ್…ಮಿಂಚಿನಾ ಹೆಸರೇನು
ನೂರು ನರಕವಾ ಕಂಡ… ಮುದ್ದು ಚತುರ ಸಖಿಯೂ
ನಟ್ಟ ನಡು ಬೀದಿಯಲ್ಲಿ…. ಬಿರಿದ ಡೇರೆ ಹೂವೂ
ಸಿಕ್ಕರು ಸಿಗಳು ಇದ್ದರು ಇರಳು
ಇವಳದೆ ಹಗಲೂ ಇವಳದೆ ಇರುಳೂ…ಊಊಊ

ಸೌಂದರ್ಯ ಸಮರಾ… ಸೋತವನೇ ಅಮರಾ
ಸೌಂದರ್ಯ ಸಮರಾ… ಸೋತವನೇ ಅಮರಾ

ಕಳೆದುಕೊಳ್ಳಲು ಬೇರೇನೂ
ಇಲ್ಲಾ… ಇಲ್ಲಿ
ಇರುವುದನೇ ಪಡೆದು
ತಿರುಗಿ ಕಳೆದುಕೊಳ್ಳಿ
ಕಳೆದು ಪಡೆದುಕೊಳ್ಳಿ

ಕಾಮನೆಯ ಜೇನಿಗೆ… ಕವಣೆ ಬೀಸಿದ ರಮಣಿ
ಮುಗಿಲ ಮಾನಾ ತೆಗೆದಾ… ಕೊಬ್ಬಿ ನಿಂತ ಧರಣಿ

ರಸಿಕ ನಿಶ ರಾತ್ರಿಯ… ಕುರುಡು ಬೀದಿ ದೀಪಾ
ತಾರೆ ಬೆಳಕಿಗೆ ಇವಳ… ಹೊಳೆವ ಮೈಯ್ಯ ಶಾಪಾ

ಕಣ್ಣು… ಕಣ್ ನೈದಿಲೆಯೋ… ಮಾತ್ಸರ್ಯ ಸೆಲೆಯೋ
ಉಕ್ಕು… ಉನ್ಮಾದದ ದೇಹ… ಮನ್ಮಥನಾ ಬಲೆಯೋ

ದೇಹ ದೇಗುಲಾ… ಈ ದೇಹ ದೇಗುಲಾ
ದೇಹ ದೇಗುಲಾ… ಈ ದೇಹ ದೇಗುಲಾ

ಸೌಂದರ್ಯ ಸಮರಾ… ಸೋತವನೇ ಅಮರಾ
ಸೌಂದರ್ಯ ಸಮರಾ… ಸೋತವನೇ ಅಮರಾ

ಕಳೆದುಕೊಳ್ಳಲು ಬೇರೇನೂ
ಇಲ್ಲಾ… ಇಲ್ಲಿ
ಇರುವುದನೇ ಪಡೆದು
ತಿರುಗಿ ಕಳೆದುಕೊಳ್ಳಿ
ಕಳೆದು ಪಡೆದುಕೊಳ್ಳಿ

ಅಂಡೆ ಪಿರ್ಕಿ ಹೆಣ್ಣ್ ಮರ್ಲು… ಅಂಡೆ ಪಿರ್ಕಿ ಹೆಣ್ಣ್… ಒಂದ್ ಡಬ್ಬಿ ಪದ್ಯ :-)

Posted: ಮೇ 16, 2013 in anaka, anakavaadu, ಅಣಕ, ಅಣಕವಾಡು, ಇತ್ಯಾದಿ.., ಕನ್ನಡ ರಿಮಿಕ್ಸ್, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಅಣಕ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಅಣಕ, ಕುಂದಾಪ್ರ ಕನ್ನಡ ರಿಮಿಕ್ಸ್, ಗಮ್ಮತ್ ಇತ್ತ್ ಕಾಣಿ..., ಹಾಡು, kannada remix, kundaapra kannada, kundaapra kannada anaka, kundapra, kundapra kannada, kundapur, kundapur kannada, kundapura, kundapura kannada, kundapura kannada anaka, kundapura kannada remix
ಟ್ಯಾಗ್ ಗಳು:, , , , , , , , , , , , , , , , , , , , , , , , , , , , , , , , , , ,

ಒಂದು ಡಬ್ಬಿ ಪದ್ಯ… ಮೊನ್ನೆ ಯಕ್ಷಗಾನ ಪದ ಡಬ್ಬಾ ಅಂದೇಳಿ ಹೇಳಿದಳಿಗೆ… 🙂
‘ದಂಡ-ಪಿಂಡಗಳು’ ಧಾರಾವಾಹಿಯ ‘ದಂಡ-ಪಿಂಡಗಳು… ಇವರು… ದಂಡ ಪಿಂಡಗಳು’ ಧಾಟಿಯಗೆ ಓದಿ
ಡಬ್ಬಿ ಎಂತಕೆ… ಶಬ್ದ ಮಾಡತ್ತೋ… ಯಾವಳಿಗ್ ಗೊತ್ತು 😉
___________________________________________________________________

 

ಅಂಡೆ ಪಿರ್ಕಿ ಹೆಣ್ಣ್
ಮರ್ಲು… ಅಂಡೆ ಪಿರ್ಕಿ ಹೆಣ್ಣ್

ಅಂಡೆ ಪಿರ್ಕಿ ಹೆಣ್ಣ್
ಮರ್ಲು… ಅಂಡೆ ಪಿರ್ಕಿ ಹೆಣ್ಣ್

ಬರ್ದೇ… ಮೈತೋರ್ಸಿ… ಮಂಗ್ನಾಂಗ್ ಹಡಿ
ಬರ್ದೇ… ಮೈತೋರ್ಸಿ… ಮಂಗ್ನಾಂಗ್ ಹಡಿ
ಕೆಲಸಕ್ಕ್ ಬರದ್ದೇ… ಕೊಂಕ್ ಮಾತ್ ಆಡಿ
ಕೆಲಸಕ್ಕ್ ಬರದ್ದೇ… ಕೊಂಕ್ ಮಾತ್ ಆಡಿ
ಹ್ಯಾಂಗಾರೂ ಮಾಡಿ ಎದ್-ತೋರ್ಕ್ ಅಂದೇಳಿ… ನಾಟ್ಕ ಮಾಡ್ತ್ಲ್ ಇವ್ಳ್… ಥೋ… ಥೋ…

ಅಂಡೆ ಪಿರ್ಕಿ ಹೆಣ್ಣ್
ಮರ್ಲು… ಅಂಡೆ ಪಿರ್ಕಿ ಹೆಣ್ಣ್

ಚೊಣಕಿ ತಾಗಿತಾ… ಇವ್ಳಿಗೆ ಗೊತ್ತಿಲ್ಲ
ಚೊಣಕಿ ತಾಗಿತಾ… ಇವ್ಳಿಗೆ ಗೊತ್ತಿಲ್ಲ
ಮರ್ಲ್ನಾಯ್ ಕಚ್ಚಿತಾ… ಇಪ್ಪಕೂ ಸಾಕಲ್ದಾ
ಮರ್ಲ್ನಾಯ್ ಕಚ್ಚಿತಾ… ಇಪ್ಪಕೂ ಸಾಕಲ್ದಾ
ಒರ್ಲಿ ಒರ್ಲಿ… ಗೌಜೇ ಗೌಜ್
ಹನ್ನೆರ್ಡ್ ಆಣಿಯೇ ಇಲ್ಯಾಕಾಂತಿವ್ಳಿಗೆ… ಥೋ…ಥೋ

ಅಂಡೆ ಪಿರ್ಕಿ ಹೆಣ್ಣ್
ಮರ್ಲು… ಅಂಡೆ ಪಿರ್ಕಿ ಹೆಣ್ಣ್

ಯಕ್ಷಗಾನದ್ ಸುದ್ದಿತೆಗುಕ್… ಯೋಗ್ಯತೆ ಇಲ್ಲ
ಯಕ್ಷಗಾನದ್ ಸುದ್ದಿತೆಗುಕ್… ಯೋಗ್ಯತೆ ಇಲ್ಲ
ಬಾಯ್ ಅಂದರೆ…. ಇವ್ಳದ್ ಬೊಂಬಾಯ್ ಅಲ್ದಾ
ಬಾಯ್ ಅಂದರೆ…. ಇವ್ಳದ್ ಬೊಂಬಾಯ್ ಅಲ್ದಾ
ಮಿಡ್ಕುದ್ ಬಿಟ್ಟರೆ … ಎಂತಾ ಗೊತ್ತಿಲ್ಲ
ಅಲ್ದೆ ಹೋದ್ದು ಮಾತಾಡಿ… ಬಯ್ಸ್ಕಂಬ್ಕೆ ಹುಟ್ಟಿದ್ಲಾ… ಮರ್ಲು…..

ಈ ನಮನಿಯಗೆ… ಬಾಯಿಗ್ ಬಂದಾಂಗೆ… ಮಾತಾಡಿ ಒಟ್ಟ್ರಾಶಿ
ಅಸ್ಲಿಗೆ ಇವಳದ್ ಯೋಗ್ಯತೆಯೇ ಇಷ್ಟ್

ಅಂಡೆ ಪಿರ್ಕಿ ಹೆಣ್ಣ್
ಮರ್ಲು… ಅಂಡೆ ಪಿರ್ಕಿ ಹೆಣ್ಣ್

ಐನ್… ಅಂಡೆ ಪಿರ್ಕಿ ಹೆಣ್ಣ್
ಮರ್ಲು… ಅಂಡೆ ಪಿರ್ಕಿ ಹೆಣ್ಣ್

ಬರ್ದೇ… ಮೈತೋರ್ಸಿ… ಮಂಗ್ನಾಂಗ್ ಹಡಿ
ಬರ್ದೇ… ಮೈತೋರ್ಸಿ… ಮಂಗ್ನಾಂಗ್ ಹಡಿ
ಕೆಲಸಕ್ಕ್ ಬರದ್ದೇ… ಕೊಂಕ್ ಮಾತ್ ಆಡಿ
ಕೆಲಸಕ್ಕ್ ಬರದ್ದೇ… ಕೊಂಕ್ ಮಾತ್ ಆಡಿ
ಹ್ಯಾಂಗಾರೂ ಮಾಡಿ ಎದ್-ತೋರ್ಕ್ ಅಂದೇಳಿ… ನಾಟ್ಕ ಮಾಡ್ತ್ಲ್ ಇವ್ಳ್… ಥೋ… ಥೋ…

ಅಂಡೆ ಪಿರ್ಕಿ ಹೆಣ್ಣ್
ಮರ್ಲು… ಅಂಡೆ ಪಿರ್ಕಿ ಹೆಣ್ಣ್
___________________________________________________________________
ಮೂಲ ಹಾಡು: ‘ದಂಡಪಿಂಡಗಳು’ ಧಾರಾವಾಹಿಯ ಶೀರ್ಷಿಕೆ ಗೀತೆ ‘ದಂಡ ಪಿಂಡಗಳು…ಇವರು… ದಂಡ ಪಿಂಡಗಳು’
ಕೃಪೆ: kannadalyrics.com

ದಂಡ ಪಿಂಡಗಳು
ಇವರು… ದಂಡ ಪಿಂಡಗಳು

ದಂಡ ಪಿಂಡಗಳು
ಇವರು… ದಂಡ ಪಿಂಡಗಳು

BA, BSc, BCom ಮಾಡಿ
BA, BSc, BCom ಮಾಡಿ
ಕೆಲಸವೇ ಸಿಗದೇ… ದಿನ ಅಲೆದಾಡಿ
ಕೆಲಸವೇ ಸಿಗದೇ… ದಿನ ಅಲೆದಾಡಿ
ಎಲ್ಲರ ಕೈಲೂ ಉಗಿಸಿಕೊಳ್ಳೊ… ವೇಸ್ಟು ಬಾಡಿಗಳು…. ಥೂ…ಥೂ…

ದಂಡ ಪಿಂಡಗಳು
ಇವರು… ದಂಡ ಪಿಂಡಗಳು

ದಿವಾನ್ ಚಾಕರಿ… ಇವರಿಗೆ ಸಿಗಲ್ಲ
ದಿವಾನ್ ಚಾಕರಿ… ಇವರಿಗೆ ಸಿಗಲ್ಲ
ಜವಾನ್ ಚಾಕರಿಗೆ… ಇವರೇ ಹೋಗಲ್ಲ
ಜವಾನ್ ಚಾಕರಿಗೆ… ಇವರೇ ಹೋಗಲ್ಲ
ಅಲ್ಲೂ ಇಲ್ಲ… ಇಲ್ಲೂ ಇಲ್ಲ
ಎಲ್ಲೂ ಇಲ್ಲದ ಅಂತರ ಪಿಶಾಚಿಗಳು…. ಥೂ…ಥೂ…

ದಂಡ ಪಿಂಡಗಳು
ಇವರು… ದಂಡ ಪಿಂಡಗಳು

ಪರ್ಸಂಟೇಜು ತೆಗೆಯಲು… ಯೋಗ್ಯತೆ ಇಲ್ಲಾ
ಪರ್ಸಂಟೇಜು ತೆಗೆಯಲು… ಯೋಗ್ಯತೆ ಇಲ್ಲಾ
ರಿಸರ್ವೇಷನ್ನು… ಇವರ ಜಾತಿಗೆ ಇಲ್ಲಾ
ರಿಸರ್ವೇಷನ್ನು… ಇವರ ಜಾತಿಗೆ ಇಲ್ಲಾ
ಲಂಚ ಕೊಡುವುದಕ್ಕೆ… ದುಡ್ಡೇ… ಇಲ್ಲಾ
ಇನ್-ಫ್ಲುಯೆನ್ಸು ಮಾಡಲು… ಯಾವ ಮಿನಿಸ್ಟ್ರೂ… ಗೊತ್ತಿಲ್ಲಾ..ಆಆ

ಈ ಪ್ರಕಾರವಾಗಿ… ಯಾವುದು ಇಲ್ಲದೆ… ಕೆಲಸ ಸಿಗಲ್ಲ
ಒಟ್ಟಲ್ಲಿ ಇವರಿಗೆ ಭವಿಷ್ಯವೇ ಇಲ್ಲಾ

ದಂಡ ಪಿಂಡಗಳು
ಇವರು… ದಂಡ ಪಿಂಡಗಳು

ಆ ದಂಡ ಪಿಂಡಗಳು
ಇವರು… ದಂಡ ಪಿಂಡಗಳು

BA, BSc, BCom ಮಾಡಿ
BA, BSc, BCom ಮಾಡಿ
ಕೆಲಸವೇ ಸಿಗದೇ… ದಿನ ಅಲೆದಾಡಿ
ಕೆಲಸವೇ ಸಿಗದೇ… ದಿನ ಅಲೆದಾಡಿ
ಎಲ್ಲರ ಕೈಲೂ ಉಗಿಸಿಕೊಳ್ಳೊ… ವೇಸ್ಟು ಬಾಡಿಗಳು…. ಥೂ…ಥೂ…

ದಂಡ ಪಿಂಡಗಳು
ಇವರು… ದಂಡ ಪಿಂಡಗಳು

ಗೆಲ್ತ್ ಮಕ್ಳೇ ಈ ರಿಕ್ಷಾ… ಕೌಂಚ್ ಬಿತ್ತ್ ಆ ಪಕ್ಷ (ಕುಂದಾಪ್ರದ ವಾಜಪೇಯಿ ಹಾಲಾಡಿ ಗೆಲುವಿನ ಹಾಡು)

Posted: ಮೇ 9, 2013 in anaka, anakavaadu, ಅಣಕ, ಅಣಕವಾಡು, ಕನ್ನಡ ರಿಮಿಕ್ಸ್, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಅಣಕ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಅಣಕ, ಕುಂದಾಪ್ರ ಕನ್ನಡ ರಿಮಿಕ್ಸ್, ಗಮ್ಮತ್ ಇತ್ತ್ ಕಾಣಿ..., kannada remix, kundaapra kannada, kundaapra kannada anaka, kundapra, kundapra kannada, kundapur, kundapur kannada, kundapura, kundapura kannada, kundapura kannada anaka, kundapura kannada remix
ಟ್ಯಾಗ್ ಗಳು:, , , , , , , , , , , , , , , , , , , , , , , , , , , ,

ಕುಂದಾಪುರದಲ್ಲಿ ನಡೆದ ಎಲೆಕ್ಷನ್ ‘ಡ್ರಾಮಾ’ ಮುಗಿದು ‘ರಿಕ್ಷಾ’ ಹತ್ತಿ ಬೆಂಗಳೂರಿಗೆ ಪಯಣಿಸುತ್ತಿರುವ ಸೋಲಿಲ್ಲದ ಸರದಾರ ಕುಂದಾಪ್ರದ ವಾಜಪೇಯಿ ನಾಮಾಂಕಿತ ಹಾಲಾಡಿ ಶ್ರೀನಿವಾಸ ಶೆಟ್ರ ಗೆಲುವಿನ ಹಾಡು ‘ಡ್ರಾಮಾ’ ಪಿಚ್ಚರಿನ ‘ತುಂಡ್ ಹೈಕ್ಳ ಸಾವಾಸಾ… ಮೂರ್ ಹೊತ್ತೂ ಉಪ್ವಾಸಾ’ ಧಾಟಿಯಲ್ಲಿ 🙂

ಗೆಲ್ತ್ ಮಕ್ಳೇ ಈ ರಿಕ್ಷಾ… ಕೌಂಚ್ ಬಿತ್ತ್ ಆ ಪಕ್ಷ
ಇದ್ರ್ ಸಾಕೆ ವಿಶ್ವಾಸ… ಗೆದ್ದ್ ಬಿಡ್ತೆ ಆದರ್ಶ

ಹ್ಯಾಂಗೆ… ಗೆದ್ರ್ ಕಾಣಿ… ಬೀ…ಜೆಪಿ ಬಿಟ್ಟರೂ
ಊರಿಗ್ ಒಳ್ಳೆದ್ ಮಾಡದ್ದಕ್ಕೆ… ಈ …ಸರ್ತಿ ಗೆದ್ದಿರೆ

ಎಲ್ಲೇ ನಿಂತ್-ಕಂಡ್ರೂ… ಇವ್ರ್ ಗೆಲ್ತರೆ
ಇನ್ನೂ ನಾಕ್ ಸಲ… ಗೆಲ್ಲಿ ಮಾರಾಯ್ರೆ
ಎಲ್ಲೇ ನಿಂತ್-ಕಂಡ್ರೂ… ಇವ್ರ್ ಗೆಲ್ತರೆ
ಇನ್ನೂ ನಾಕ್ ಸಲ… ಗೆಲ್ಲಿ ಮಾರಾಯ್ರೆ

ಗೆಲ್ತ್ ಮಕ್ಳೇ ಈ ರಿಕ್ಷಾ… ಕೌಂಚ್ ಬಿತ್ತ್ ಆ ಪಕ್ಷ
ಇದ್ರ್ ಸಾಕೆ ವಿಶ್ವಾಸ… ಗೆದ್ದ್ ಬಿಡ್ತೆ ಆದರ್ಶ

ಮಂತ್ರಿ ಆಯ್ನಿ ಅಂತ ಕರ್ದ್ … ಮೋಸ ಮಾಡ್ರ್
ಇಂಥಾ ವ್ಯಕ್ತಿಗೆ… ಮೋಸಮಾಡ್ದರ್ ನೆಗ್ದ್ ಬಿದ್ರ್
ಬಿ…ದ್ರ್ …

ರಾಜಕೀಯದ ಹೆಸರಂಗೆ…ಮಾಡ್ಲಿಲ್ಲ ನೋಟು
ಒಂ…ದೊಳ್ಳೆ ಜನ ಕಂಡು… ಕೊಟ್ರ್ ವೋಟು

ಬಡವರ್ ನೋವ್ ಕಷ್ಟಕ್ಕೆ… ಇವ್ರ್ ಕೈಲಾದಷ್ಟ್ ಕೊಟ್ಟಿರೆ
ಕಯ್ಯಂಗಿದ್ದ ದುಡ್ಡನ್ನೇ… ದಾನ ಮಾಡಿ ಬಿಟ್ಟಿರೆ

ಕರಪ್ಷನ್ನು ಮಾಡ್ದೆ… ಒಳ್ಳೆರಾಯಿದ್ರೆ
ಎಲ್ಲರೂ ಹೀಂಗೇ ಇದ್ರೆ… ದೇಶ ಉಳಿತ್ತೆ
ಕರಪ್ಷನ್ನು ಮಾಡ್ದೆ… ಒಳ್ಳೆರಾಯಿದ್ರೆ
ಎಲ್ಲರೂ ಹೀಂಗೇ ಇದ್ರೆ… ದೇಶ ಉಳಿತ್ತೆ

ಗೆಲ್ತ್ ಮಕ್ಳೇ ಈ ರಿಕ್ಷಾ… ಕೌಂಚ್ ಬಿತ್ತ್ ಆ ಪಕ್ಷ
ಇದ್ರ್ ಸಾಕೆ ವಿಶ್ವಾಸ… ಗೆದ್ದ್ ಬಿಡ್ತೆ ಆದರ್ಶ

ವಿಶ್ವಾ……ಸಾಆಆಅ…… ಆದರ್ಶಾಆಅಆ
ವಿಶ್ವಾ ಆಆಅ… ಆದರ್ಶಾಆಅಆ
ವಿಶ್ವಾ……ಸಾಆಆಅ… ಆದರ್ಶಾ

ಇಂಥವ್ರ್ ಸಿಕ್ಕುದಿಲ್ಲ… ಬೇಕಂದರೂ
ಹಾಲಾಡಿ ಕಣಗಿನರ್… ಲಕ್ಷಕ್ಕೊಬ್ರು
ಲಕ್ಷಕ್ಕ್…ಒಬ್ರೇ…ಎಎಎ…

ಬೇಕಾಯ್ಲಾ… ಪಾರ್ಟಿಹಂಗ್ ಇವ್ರಿಗಿನ್ನ್
ಕೈಲ್ ಆದ್ದು… ಮಾಡಿಕೊಡ್ತ್ರು ಕ್ಷೇತ್ರಕಿನ್ನ್

ಮೋಸ-ಗೀಸ ಗೊತ್ತಿಲ್ಲ… ಹಗ್ಲ್-ರಾತ್ರಿ ಒದ್ಕಂತ್ರ್
ಜನ್ರ್ ಕಷ್ಟ ಕಂಡರೆ… ಕೈಲಿದ್ದೆಲ್ಲಾ ಕೊಡ್ತ್ರಂಬ್ರ್

ನಾಕೂ ಸರ್ತಿ ನಿಂತ್ರೂ… ಗೆದ್ದಿರ್ ಸಾಕಲ್ದಾ
ಮತದಾರ ಮೆಚ್ಚು ಕೆಲ್ಸಾ… ಮಾಡಿ…ಗೆಲ್ತಿರಿ
ನಾಕೂ ಸರ್ತಿ ನಿಂತ್ರೂ… ಗೆದ್ದಿರ್ ಸಾಕಲ್ದಾ
ಮತದಾರ ಮೆಚ್ಚು ಕೆಲ್ಸಾ… ಮಾಡಿ…ಗೆಲ್ತಿರಿ

ಗೆಲ್ತ್ ಮಕ್ಳೇ ಈ ರಿಕ್ಷಾ… ಕೌಂಚ್ ಬಿತ್ತ್ ಆ ಪಕ್ಷ ಸಾ… ಸಾ… ಸಾ…
ಇದ್ರ್ ಸಾಕೆ ವಿಶ್ವಾಸ… ಗೆದ್ದ್ ಬಿಡ್ತೆ ಆದರ್ಶ ಸಾ… ಸಾ… ಸಾ…
ಜಯ್…

___________________________________________________________
ಮೂಲ ಹಾಡು: ‘ಡ್ರಾಮಾ’ ಚಿತ್ರದ ‘ತುಂಡ್ ಹೈಕ್ಳ ಸಾವಾಸ…ಮೂರ್ ಹೊತ್ತೂ ಉಪ್ವಾಸಾ’

ತುಂಡ್ ಹೈಕ್ಳ ಸಾವಾಸಾ… ಮೂರ್ ಹೊತ್ತೂ ಉಪ್ವಾಸಾ
ಒಬ್ಬ ಟೀಕೆ ಎಂಕ್ಟೇಸಾ… ಒಬ್ಬ ಕ್ವಾಟ್ಲೆ ಸತೀಸಾ

ಎಂಗೋ… ಮೊನ್ನೆ ತಾನೇ… ಪೀಯೂ…ಸಿ ಮುಗ್ಸವ್ರೆ
ಊರ್ ಹಾಳು ಮಾಡೋದಕ್ಕೆ… ರೀ…ಸರ್ಚು ನಡ್ಸವ್ರೆ

ಹೆಂಗೇ ಹಾಡಿದರೂ… ಬಾಯ್ ನೋಯ್ತವೆ
ಇನ್ನೂ ಕೇಳಿದರೆ… ಕಿವಿ ಹೋಯ್ತವೆ
ಹೆಂಗೇ ಹಾಡಿದರೂ… ಬಾಯ್ ನೋಯ್ತವೆ
ಇನ್ನೂ ಕೇಳಿದರೆ… ಕಿವಿ ಹೋಯ್ತವೆ

ತುಂಡ್ ಹೈಕ್ಳ ಸಾವಾಸಾ… ಮೂರ್ ಹೊತ್ತೂ ಉಪ್ವಾಸಾ
ಒಬ್ಬ ಟೀಕೆ ಎಂಕ್ಟೇಸಾ… ಒಬ್ಬ ಕ್ವಾಟ್ಲೆ ಸತೀಸಾ

ಇವ್ರು ಕಾಲು ಇಟ್ರು ಅಂದ್ರೆ… ಅದೇ ರೋಡು
ಈ ನನ್ ಮಕ್ಳಿಗೆ… ಬಯೋಡಾಟಾ ಬ್ಯಾರೆ ಕೇಡು
ಕೇ…ಡು…

ಯವ್ವನದ ಹೊಳೆಯಲ್ಲಿ… ಹಳೇ ಬೋಟು
ಬೋಟ…ಲ್ಲಿ ನೂರಾ ಎಂಟು… ಹಳೇ ತೂತು

ಬೆಳಗಾಗ್ ಎದ್ದು ಬೆಟ್ಟಕ್ಕೇ… ಅರೆ ದಾರಾ ಕಟ್ಟಿ ಎಳ್ದವ್ರೇ
ಓಡುತ್ತಿದ್ದ ಕಾಲಕ್ಕೆ… ಕಾಲು ಅಡ್ಡ ಇಟ್ಟವ್ರೇ

ಅನಾಸಿನ್ನು ತಿಂದ್ರೂ… ತಲೆ ನೋಯ್ತಾವೆ
ಚಿಂತೇಲಿ ಊಟ ಬಿಟ್ರೆ… ಗ್ಯಾಸು ಆಯ್ತದೆ
ಅನಾಸಿನ್ನು ತಿಂದ್ರೂ… ತಲೆ ನೋಯ್ತಾವೆ
ಚಿಂತೇಲಿ ಊಟ ಬಿಟ್ರೆ… ಗ್ಯಾಸು ಆಯ್ತದೆ

ತುಂಡ್ ಹೈಕ್ಳ ಸಾವಾಸಾ… ಮೂರ್ ಹೊತ್ತೂ ಉಪ್ವಾಸಾ
ಒಬ್ಬ ಟೀಕೆ ಎಂಕ್ಟೇಸಾ… ಒಬ್ಬ ಕ್ವಾಟ್ಲೆ ಸತೀಸಾ

ವೆಂಕ್ಟೇ……ಸಾಆಆಅ…… ಸತೀಸಾಆಅಆ
ವೆಂಕ್ಟೇಆಆಅ… ಸತೀಸಾಆಅಆ
ವೆಂಕ್ಟೇ……ಸಾಆಆಅ… ಸತೀಸಾ

ದೊಡ್ಡೋರು ಕೊಡೋದಿಲ್ಲಾ… ಪರ್ಮಿಸನ್ನು
ಕಾಂಪೌಂಡು ಹಾರುತಿದೆ… ಜನ್ರೇಸನ್ನು
ಜನರೇ…ಶನ್ನು…ಉಉಉ…

ಬೇಕಿಲ್ಲಾ… ಪ್ರಳಯಕೆ ಕಾಯೋದಿನ್ನು
ತುಂಡ್ ಹೈಕ್ಳು… ಮುಳುಗಿಸ್ತಾರೆ ಊರನ್ನು

ಮೀಸೆ-ಗೀಸೆ ಬಂದಾಗ… ಹಗಲು-ರಾತ್ರಿ ರಾದ್ಧಾಂತ
ಬಿಳೀ ಗಡ್ದ ಬಂದಾಗ… ಹೇಳಿದ್ದೆಲ್ಲಾ ವೇದಾಂತ

ಪ್ರತೀ ಎಂಡಿನಲ್ಲೂ… ಸ್ಟಾರ್ಟು ಇರ್ತಾವೇ
ಪರಮಾತ್ಮ ಮಾಡೋ ಕೆಲ್ಸಾ… ಎಲ್ಲಾ…ದಿಂಥಾವೇ
ಪ್ರತೀ ಎಂಡಿನಲ್ಲೂ… ಸ್ಟಾರ್ಟು ಇರ್ತಾವೇ
ಪರಮಾತ್ಮ ಮಾಡೋ ಕೆಲ್ಸಾ… ಎಲ್ಲಾ…ದಿಂಥಾವೇ

ತುಂಡ್ ಹೈಕ್ಳ ಸಾವಾಸಾ… ಮೂರ್ ಹೊತ್ತೂ ಉಪ್ವಾಸಾ ಸಾ… ಸಾ… ಸಾ…
ಒಬ್ಬ ಟೀಕೆ ಎಂಕ್ಟೇಸಾ… ಒಬ್ಬ ಕ್ವಾಟ್ಲೆ ಸತೀಸಾ ಸಾ… ಸಾ… ಸಾ…
ಆಞ್…


‘ಸಂಜು ವೆಡ್ಸ್ ಗೀತಾ ’ ಪಿಚ್ಚರಿನ ‘ಸಂಜು ಮತ್ತು ಗೀತಾ… ಸೇರಬೇಕು ಅಂತಾ’ ಹಾಡ್ ಕುಂದಾಪ್ರ ಕನ್ನಡದಗೆ 🙂

ಸಂತೀ………..

ಸಂತೀಗ್ ನಾ ಹೊತ್ನೋ…

ಸಂಜು ಮತ್ತು ಗೀತಾ … ಸಂತಿಗ್ಹೋಯ್ಕ್ ಅಂತ
ಕಾಯ್ತಾ ಇದ್ದಿರ್ … ಒಂದು ಬಸ್ಸನ್ನ

ಬಸ್ಸಿಗ್ ಹೋಪುಕಿಂತ… ನೆಡ್ಕಂಡ್ ಹೊಯಲಕ್ಕಾಂತ
ಹತ್ತುಕಾತ್ತ ನಿಂಗೆ…. ನುರ್ಕಿನಗೇನು

ಸಣ್ಣ ಕಯ್ ಚೀಲವನ್ನು… ಹಿಡ್ಕಂಡ್ ಬೀಸ ನೆಡ್ಕಂತಾ
ಮೆಲ್ಲ ಮೆಲ್ಲ ಮಾತಾಡ್ತಾ… ಬರದೆ ಕುಶಾಲ್ ಮಾಡ್ಕಂತಾ

ಮಳಿಬಂದರೂ … ಕೊಡಿಯಾ ಬಿಡ್ಸಿ… ಇಬ್ಬರೇ
ನೆಡ್ಕ ಹೋ…ಪಲೆ… ನೆಡ್ಕ ಹೋಪಲೇ… ರಸ್ತಿಯಂಗೇ

ಸಂಜು ಮತ್ತು ಗೀತಾ … ಸಂತಿಗ್ಹೋಯ್ಕ್ ಅಂತ
ಕಾಯ್ತಾ ಇದ್ದಿರ್… ಒಂದು ಬಸ್ಸನ್ನ

ಆ ಕಯ್ಯಂಗೊಂದ್… ಈ ಕಯ್ಯಂಗೊಂದ್
ಚೀಲಾ ಹಿಡ್ಕಂಡ್… ಹೋದ್ರ್ ನೆಡಕಂಡು
ಸೇಲಾಯಲಿ… ಎಲ್ಲಾ ಸಂತಿಯಂಗೇ
ನಂಗೆ ಇವತ್ತಾರೂ … ಸಿಕ್ಲಿ ನಾಕ್ ಪಾವಲಿ

ಸಂಜು: ಕವಾಟ್ ಗೂಡಿನಂಗೆ… ಇಟ್ಟ ದುಡ್ಡಿನಂಗೆ ನಿಂಗೆ
ಬೆಚ್ಚದ್ದೆಲ್ಲಾ ಹಾಕಿ… ಒಟ್ಟು.. ಮಾಡ್ಸಿ ಕೊಡತೆ ಚಿನ್ನ
ಒಂದು ಚಿನ್ನದಾ … ಸರ ಮಾಡ್ಸುಕೆ… ಹಾಕತೆ… ಇವತ್ತೇ

ಮಳಿಬಂದರೂ … ಕೊಡಿಯಾ ಬಿಡ್ಸಿ… ಇಬ್ಬರೇ
ನೆಡ್ಕ ಹೋ…ಪಲೆ… ನೆಡ್ಕ ಹೋಪಲೇ… ರಸ್ತಿಯಂಗೇ

ಸಂಜು ಮತ್ತು ಗೀತಾ … ಸಂತಿಗ್ಹೋಯ್ಕ್ ಅಂತ
ಕಾಯ್ತಾ ಇದ್ದಿರ್ … ಒಂದು ಬಸ್ಸನ್ನ

ಗೀತಾ: ಕಣ್ಣಂಗೇ ಕಾಣ್ಲ… ನಾ ಸರವನ್ನ್
ಮಾಡ್ಸಿಕೊಟ್ರೆ ನೀವು… ಹಾಯ್ಕಂತೆ ನಾನ್
ಎರ್ಡೆಳಿ ಆದರೇ… ಮಾಡ್ಸುಕೆ ಆಯ್ಕಲ್ದಾ
ಒಂದೆಳಿ ಮಾಡ್ಸಿರೆ… ಸಧ್ಯಕೆ ಸಾಕಲ್ದಾ

ಬಾಳ ಅಗ್ಗ ಮೀನ್ … ನಾಕ್ ತಕಂಡ್ ಹ್ವಾಪ ನಾವ್
ಮನಿಗೆ ಹೋದ್ರ ಮೇಲೆ… ಒಳ್ಳೇ ಪದಾರ್ಥ ಮಾಡ್ತೆ ನಾನ್
ನೆಡುಕಾಯ್ದಿರೂ… ಸಂಗ್ತಿಗಿದ್ದರೆ… ಒಟ್ಟಿಗೇ ಹ್ವಾಪವೇ

ಸಂತಿಯಂಗೆಲ್ಲಾ… ಮಾರಿ ಆರ್ಮೇಲೆ… ತಿರ್ಗುವಾ
ನಿಮ್ಮ ಒ…ಟ್ಟಿಗೇ… ನಿಮ್ಮ ಒಟ್ಟಿಗೇ .. ನಾ ಬತ್ತನೇ

ಸಂಜು ಮತ್ತು ಗೀತಾ … ಸಂತಿ ಮುಗ್ಸ್ಕ ಬಂದ್
ಕಾಯ್ತಾ ಇದ್ರೀಗ … ಒಂದು ಬಸ್ಸನ್ನ

____________________________________________________
ಮೂಲ ಹಾಡು: ‘ಸಂಜು ವೆಡ್ಸ್ ಗೀತಾ ’ ಚಿತ್ರದ ‘ಸಂಜು ಮತ್ತು ಗೀತಾ… ಸೇರಬೇಕು ಅಂತಾ’
ಕೃಪೆ: kannadalyrics.com

ಬ್ಯೂಟೀ………

ಸಂಜು ಐ ಲವ್ ಯೂ…

ಸಂಜು ಮತ್ತು ಗೀತಾ… ಸೇರಬೇಕು ಅಂತಾ
ಬರೆದಾಗಿದೆ… ಇಂದು ಬ್ರಹ್ಮನು
ನನ್ನ ಜೀವಕ್ಕಿಂತಾ… ನೀನೆ ನನ್ನ ಸ್ವಂತಾ
ಇರುವಾಗ ನಾನು… ಚಿಂತೆ ಏನು?

ನಿನ್ನ ಎಲ್ಲ ನೋವನ್ನು… ಕೊಡುಗೆ ನೀಡು ನನಗಿನ್ನು
ನನ್ನ ಎಲ್ಲ ಖುಷಿಯನ್ನು… ಕೊಡುವೇ ನಿನ್ನ ವಶಕಿನ್ನು

ಮಳೆಯಾ ಹನಿ… ಉರುಳೋ ದನಿ… ತರವೇ
ನಗಬಾ…ರದೆ… ನಗಬಾರದೆ… ನನ್ನೊಲವೇ?

ಸಂಜು ಮತ್ತು ಗೀತಾ… ಸೇರಬೇಕು ಅಂತಾ
ಬರೆದಾಗಿದೆ… ಇಂದು ಬ್ರಹ್ಮನು

ಆ ಕಣ್ಣಿಗೊಂದು… ಈ ಕಣ್ಣಿಗೊಂದು
ಸ್ವರ್ಗಾನ ತಂದು… ಕೊಡಲೇನು ಇಂದು
ಏನಾಗಲೀ… ನನ್ನ ಸಂಗಾತಿ ನೀ
ನಿನ್ನ ಈ ಕಣ್ಣಲೀ… ಇದೆ ಕೊನೆಯಾ ಹನಿ

ಎದೆಯ ಗೂಡಿನಲ್ಲಿ… ಪುಟ್ಟ ಗುಬ್ಬಿಯಂತೆ ನಿನ್ನ
ಬೆಚ್ಚನೇಯ ಪ್ರೀತಿ… ಕೊಟ್ಟು… ಬಚ್ಚಿ ಇಡುವೆ ಚಿನ್ನ
ಇತಿಹಾಸದ… ಪುಟ ಕಾಣದ… ಒಲುಮೆ… ನೀಡುವೆ

ಮಳೆಯಾ ಹನಿ… ಉರುಳೋ ದನಿ… ತರವೇ
ನಗಬಾ…ರದೆ… ನಗಬಾರದೆ… ನನ್ನೊಲವೇ?

ಸಂಜು ಮತ್ತು ಗೀತಾ… ಸೇರಬೇಕು ಅಂತಾ
ಬರೆದಾಗಿದೆ… ಇಂದು ಬ್ರಹ್ಮನು

ಕಂಡಿಲ್ಲ ಯಾರೂ… ಆ ದೇವರನ್ನು
ಇರಬಹುದೊ ಏನೋ… ನಿನ್ನಂತೆ ಅವನು
ಗೆಳೆಯಾ ಎಂದರೆ… ಅದಕೂ ಹತ್ತಿರ
ಇನಿಯಾ ಎಂದರೆ… ಅದಕೂ ಎತ್ತರ

ಒರಗಿಕೊಳ್ಳಲೇನು… ನಿನ್ನಾ ಎದೆಗೆ ಒಮ್ಮೆ ನಾನು
ಕರಗಿ ಹೋಗಲೇನು… ನಿನ್ನಾ ಕರಗಳಲ್ಲಿ ನಾನು
ಯುಗದಾಚೆಗೂ… ಜಗದಾಚೆಗೂ… ಜೊತೆಗೇ… ಸಾಗುವೇ

ಕಡಲೆಲ್ಲವ… ಅಲೆ ಸುತ್ತುವಾ… ತರವೇ
ನಿನ್ನ ಸೇ…ರುವೇ… ನಿನ್ನ ಸೇರುವೆ… ನನ್ನೊಲವೇ

ಸಂಜು ಮತ್ತು ಗೀತಾ… ಸೇರಬೇಕು ಅಂತಾ
ಬರೆದಾಗಿದೆ… ಇಂದು ಬ್ರಹ್ಮನು

ಶಾಸ್ತ್ರಿ ಪಾರ್ಕಂಗೆ… ಟೋಟಲ್ ಆಯ್… ಎಷ್ಟ್ ಹೋಟ್ಲಿತ್ತೇ ? ಒಂದ್ ಪಣಕು-ಅಣಕು :-)

Posted: ಮೇ 7, 2013 in anaka, anakavaadu, ಅಣಕ, ಅಣಕವಾಡು, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಅಣಕ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಅಣಕ, ಕುಂದಾಪ್ರ ಕನ್ನಡ ರಿಮಿಕ್ಸ್, ಗಮ್ಮತ್ ಇತ್ತ್ ಕಾಣಿ..., ಹಾಡು, kannada remix, kundaapra kannada, kundaapra kannada anaka, kundapra, kundapra kannada, kundapur, kundapur kannada, kundapura, kundapura kannada, kundapura kannada anaka, kundapura kannada remix
ಟ್ಯಾಗ್ ಗಳು:, , , , , , , , , , , , , , , , , , , , , , , , , , , ,

‘ಶಾಸ್ತ್ರಿ ಪಾರ್ಕಂಗೆ… ಟೋಟಲ್ ಆಯ್… ಎಷ್ಟ್ ಹೋಟ್ಲಿತ್ತೇ ?’ ಹೀಂಗೇ ಸುಮ್ನೇ ಒಂದ್ ಪಣಕು-ಅಣಕ ಕುಂದಾಪ್ರ ಕನ್ನಡದಗೆ 🙂
‘ಬಚ್ಚನ್’ ಪಿಚ್ಚರಿನ ‘ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?’ ಧಾಟಿಯಗೆ ಓದಿ ಕಾಣಿ 🙂

 

ಶಾಸ್ತ್ರಿ ಪಾರ್ಕಂಗೆ… ಟೋಟಲ್ ಆಯ್… ಎಷ್ಟ್ ಹೋಟ್ಲಿತ್ತೇ ?
ಟುಂಗ್ ಟುಂಗ್ ಟುಂಗ್ ಟುಂಗ್
ಸಂತಿ ಮಾರ್ಕೇಟ್… ಬಸ್ಲಿಕಟ್ಟು… ರೇಟ್ ಹ್ಯಾಂಗಿತ್ತೇ?
ಟುಂಗ್ ಟುಂಗ್ ಟುಂಗ್ ಟುಂಗ್

ಬಸ್ಸಿನಂಗೆ… ನುರ್-ಕಂಡು… ಹತ್ಕ ಬೇಕಾತ್ತಲೇ
ಇಲ್ದೇ ಹೋರೇ … ಬಾಗ್ಲಂಗೆ… ನೇಲ್ಕ ಹೋಯ್ಕಾತ್ತಲೇ

ಕಯ್ಯಂಗ್ ಲಗೇಜು… ಹಿಡ್ಕ ಹೋರೇ… ಹೈಲ್ ಆತ್ತಲೇ
ಟುಂಗ್ ಟುಂಗ್ ಟುಂಗ್ ಟುಂಗ್

ಶಾಸ್ತ್ರಿ ಪಾರ್ಕಂಗೆ… ಟೋಟಲ್ ಆಯ್… ಎಷ್ಟ್ ಹೋಟ್ಲಿತ್ತೇ ?
ಟುಂಗ್ ಟುಂಗ್ ಟುಂಗ್ ಟುಂಗ್

ಹಾಡಿ-ಗುಡ್ಯಂಗೆ… ಮೊಬೈಲ್ ನೆಟ್-ವರ್ಕ್
ಸಿಕ್ಕುದ್ ಹ್ಯಾಂಗೇ… ಹೇಳಿ ಕಾಂಬಾ
ಜಬ್ಬು ಸೆಟ್ಟಂಗೇ… ಸಿಗ್ನಲ್ ಇಲ್ದಿರೂ
ಫೋನ್ ಮಾಡ್ತಾ ನಮ್ಮ… ಚೀಂಕ್ರ ಕಾಣಿ

ನ…ಮ್ಮಾ ಬದಿ ಮಕ್ಳ್… ಪೂ…ರಾ… ಪಣ್ಕಲ್ದೇ
ಓ…ದುದ್ರಂಗೇ ಮಾತ್ರ… ಒಂ…ಚೂರ್… ಮುಂದಲ್ದೇ

ಗೆದ್ದಿ ಬೈಲಲ್ಲಿ… ಮ್ಯಾಚು ಶುರು ಆಯ್ತಲೇ
ಉರಿ ಬಿಸಿಲಿನಂಗೇ… ಆಡತಾ ಇರ್ತ್ರಲೇ

ಚೂರೂ ಪುರ್ಸೊತ್ತೇ… ಕೊಡ್ದೇ ಕಾಣಿ … ಹ್ಯಾಂಗ್ ಆಡ್ತ್ರಲೇ
ಟುಂಗ್ ಟುಂಗ್ ಟುಂಗ್ ಟುಂಗ್

ಶಾಸ್ತ್ರಿ ಪಾರ್ಕಂಗೆ… ಟೋಟಲ್ ಆಯ್… ಎಷ್ಟ್ ಹೋಟ್ಲಿತ್ತೇ ?
ಟುಂಗ್ ಟುಂಗ್ ಟುಂಗ್ ಟುಂಗ್

ಮಾಯಿನ್ ಹಣ್ಣನ್… ಕಂಡರಂದ್ರೆ ಸಾಕ್
ಕಲ್ ಕುಟ್ಟಿ ಗೊಂಚಲನ್ನೇ… ತಾಳ್ಸುದಲ್ದೇ
ಹಬ್ಬದ ಗುಡಿಯಾ… ಬಜಾರಂಗೆ ಸುಮ್ನೇ
ಬಿಲಾಸ್ ಬಿಟ್ಟರ್ ಕಣಗ್… ತಿರ್ಗುದಲ್ದೇ

ದಾ…ನಿ ಬ್ಯಾಳಿಯನ್ನು… ಬೇ…ಸಿ ತಿಂದರೇ
ಹಾ…ಳ್ ಹೊಟ್ಟೆಯಂಗೆ… ವಾ…ಯು ಆತ್ತಲೇ

ಹೆಣ್ಮಕ್ಳ್ ಕಲ್ಲಂಗೆ… ಗುಡ್ಣ … ಆಡ್ತಿದ್ರಲೇ
ಗಂಡ್ಮಕ್ಳ್ ಬಳ್ಕಂಡ್… ತಿರ್ಗತಾ ಇದ್ರಲೇ

ರಜಿ ಸಿಕ್ತಂದ್ರೆ… ಅಡುಕ್-ಇವ್ಕೇ…ಲಾಯ್ಕ್ ಆತ್ತಲೇ
ಟುಂಗ್ ಟುಂಗ್ ಟುಂಗ್ ಟುಂಗ್

ಶಾಸ್ತ್ರಿ ಪಾರ್ಕಂಗೆ… ಟೋಟಲ್ ಆಯ್… ಎಷ್ಟ್ ಹೋಟ್ಲಿತ್ತೇ ?
ಟುಂಗ್ ಟುಂಗ್ ಟುಂಗ್ ಟುಂಗ್

————————————————
ಮೂಲ ಹಾಡು: ‘ಬಚ್ಚನ್’ ಚಿತ್ರದ ‘ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?’ ಸಾಹಿತ್ಯ : ಯೋಗರಾಜ್ ಭಟ್
ಕೃಪೆ: ಇಂಟರ್ನೆಟ್

ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್
ಮಂಡ್ಯಾ ಮಾರ್ಕೆಟ್ಟು… ಚೂಡಿದಾರೂ… ರೇಟ್ ಏನಿದೆ?
ಟುಂಗ್ ಟುಂಗ್ ಟುಂಗ್ ಟುಂಗ್

ಕೆಲವೊಮ್ಮೆ… ಕೆಲವೊಂದು… ತಿಳಕೋ ಬೇಕಾಯ್ತದೆ
ಇಲ್ಲಾ ಅಂದ್ರೆ… ಮರ್ಯಾದೆ… ಕಳ್ಕೋ ಬೇಕಾಯ್ತದೆ

ಜನರಲ್ ನಾಲೆಜ್ಜು… ಇಲ್ದೆ ಹೋದ್ರೆ… ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್

ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್

ಇಂಟರ್-ನೆಟ್ಟಲ್ಲಿ… ಇಡ್ಲಿ ನಾ ಡವ್ನ್-ಲೋಡ್
ಮಾಡೋದು ಹೆಂಗೇ… ಹೇಳಿ ಸ್ವಾಮೀ
ಇಂಥಾ ಪ್ರಶ್ನೇಗೆ… ಉತ್ತರ ಸಿಗದೇ
ಸತ್ತ್ ಹೋದಾ ನನ್ನಾ… ಹಳೇ ಪ್ರೇಮೀ

ನ…ನ್ನಾ ಪ್ರೀತಿ ಪಾಠಾ… ಸ್ವ…ಲ್ಪಾ ಹಿಂಗೇನೇ
ಸ್ಕೂ…ಲಿನಲ್ಲೀ ಲಾಸ್ಟು… ಬೆಂ…ಚು… ನಿಮ್ದೇನೇ

ಸಂಜೇ ಟೈಮಲ್ಲಿ… ಕ್ಲಾಸು ಸ್ಟಾರ್ಟ್ ಆಯ್ತದೆ
ಬರೀ ಹುಡುಗರಿಗೆ… ಪ್ರವೆಸಾ ಇರ್ತದೆ

ಎಜುಕೇಸನ್ನೇ… ಇಲ್ದೆ ಹೋದ್ರೆ… ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್

ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್

ವಿಂಡೋ ಕರ್ಟನ್ನು… ತೆಗೆದರೆ ಸಾಕು
ಕೈ ಕೊಟ್ಟ ಹುಡುಗರೇ… ಕಾಣುತಾರೇ
ಕಾಫಿಡೇ ಕೊಡೆಯಾ… ಕೆಳಗಡೆ ಸುಮ್ನೆ
ನಮ್ಗೆ ಫ್ರೆಶ್ ಆಗಿ ಯಾರೋ… ಸಿಗುತಾರೆ

ಮೂ…ರೂ ಘಂಟೆಯಲ್ಲಿ… ಪ್ಯಾ…ರೂ ಆದರೇ
ಆ…ರೂ ಘಂಟೆಗೆಲ್ಲಾ… ಬೋ…ರೂ ಆಯ್ತದೆ

ಲೇಡೀಸ್ಗೆ ಲವ್ವಲ್ಲಿ… ಟೈಮು… ಬೇಕಾಯ್ತದೆ
ಗಂಡಸ್ರು ಪೇಷೆನ್ಸು… ಕಲೀ ಬೇಕಾಯ್ತದೆ

ತುಂಬಾ ಅರ್ಜೆಂಟು… ಆರೋಗ್ಯಕ್ಕೆ… ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್

ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್

ಪಾರಿಗೆ ಹೊಯ್ಬಿಟ್ಟಿನೆ.. ಗಂಟಿ ಎಬ್ಬುಕೆ..(‘ಪ್ಯಾರ್‌ಗೆ ಅಗ್ಬಿಟೈತೆ… ’ ಕುಂದಾಪ್ರ ಸ್ಟೈಲಗೆ)

Posted: ಮೇ 7, 2013 in anaka, anakavaadu, ಅಣಕ, ಅಣಕವಾಡು, ಕನ್ನಡ ರಿಮಿಕ್ಸ್, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಅಣಕ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಅಣಕ, ಕುಂದಾಪ್ರ ಕನ್ನಡ ರಿಮಿಕ್ಸ್, ಗಮ್ಮತ್ ಇತ್ತ್ ಕಾಣಿ..., kannada remix, kundaapra kannada, kundaapra kannada anaka, kundapra, kundapra kannada, kundapur, kundapur kannada, kundapura, kundapura kannada, kundapura kannada anaka, kundapura kannada remix
ಟ್ಯಾಗ್ ಗಳು:, , , , , , , , , , , , , , , , , , , ,

ಗಂಟಿ ಮೆಯ್ಸುಕ್ ಕಳ್ಸಿದ್ ಗಂಡ್ … ‘ಗಂಟಿಹಿಂಡಾಯ ನಮಃ’ ಆಯಿ … ‘ಗೋವಿಂದಾಯ ನಮಃ’ ಪಿಚ್ಚರಿನ ‘ಪ್ಯಾರ್‌ಗೆ ಅಗ್ಬಿಟೈತೆ… ’ಪದ್ಯನ್ನ ಬದ್ಲ್ ಮಾಡಿ ‘ಪಾರಿಗೆ ಹೊಯ್ಬಿಟ್ಟಿನೆ… ಗಂಟಿ ಎಬ್ಬುಕೆ… ಪಾರಿಗೆ ಹೊಯ್ಬಿಟ್ಟಿನೆ’ ಅಂದೇಳಿ ಹಾಡು ಚೆಂದು ಕಾಣಿನಿ 🙂

 

ಪಾರಿಗೆ ಹೊಯ್ಬಿಟ್ಟಿನೆ… ಗಂಟಿ ಎಬ್ಬುಕೆ… ಪಾರಿಗೆ ಹೊಯ್ಬಿಟ್ಟಿನೆ
ಗುಡ್ಡಿಗೆ ಹೊಯ್ಬಿಟ್ಟಿನೆ… ಗಂಟಿ ಎಬ್ಬುಕೆ… ಗುಡ್ಡಿಗೆ ಹೊಯ್ಬಿಟ್ಟಿನೆ

ಆಟ-ಗೀಟ ಅಡುಕಿಲ್ಲ… ಹಗ್ಲಿಕೆ
ಉಂಡ್ ಕಂಡ್ ಗಂಟಿ ಬಿಟ್ಕ… ಹೊರ್ಡುದೇ
ಗಂಟಿಮೇಸಿ ಸಾಕಾಯ್-ಬಿಟ್ಟಿತೇ

ಪಾರಿಗೆ ಹೊಯ್ಬಿಟ್ಟಿನೆ…
ಪಾರಿಗೆ ಹೊಯ್ಬಿಟ್ಟಿನೆ…
ಪಾರಿಗೆ ಹೊಯ್ಬಿಟ್ಟಿನೆ… ಗಂಟಿ ಎಬ್ಬುಕೆ… ಪಾರಿಗೆ ಹೊಯ್ಬಿಟ್ಟಿನೆ

ಕುತ್ರಿ ಒಳ್ಗೆ ಹುಲ್ಲು ಇದ್ರೂ… ನಮ್ನ ಮೇಸು ಗಂಟಿ ಅಂದ್ … ಬೆರ್ಸ್ಬೆರ್ಸಿ… ಕಳ್ಸತ್ರಲ್ಯೇ
ಆಡುಕ್ಕೆ … ಹೋರ್ ಕಾಣ್ ಅಂತ ಬೈತ್ರೆ
ಕುತ್ರಿ ಒಳ್ಗೆ ಹುಲ್ಲು ಇದ್ರೂ… ನಮ್ನ ಮೇಸು ಗಂಟಿ ಅಂದ್ … ಬೆರ್ಸ್ಬೆರ್ಸಿ… ಕಳ್ಸತ್ರಲ್ಯೇ
ಆಡುಕ್ಕೆ … ಹೋರ್ ಕಾಣ್ ಅಂತ ಬೈತ್ರೆ

ಮನ್ಯಗಿದ್ರೆ ಗಲಾಟಿ
ಒಂದ್ನೇ ನಂಬ್ರ ಕೊರಾಜಿ
ಅದಕ್ಕೇ ನನ್… ಹೊರ್ಗ್ ಕಳ್ಸತ್ರೆ ಹ್ವಾಯ್

ಪಾರಿಗೆ ಹೊಯ್ಬಿಟ್ಟಿನೆ… ಗಂಟಿ ಎಬ್ಬುಕೆ… ಪಾರಿಗೆ ಹೊಯ್ಬಿಟ್ಟಿನೆ
ಪಾರಿಗೆ ಹೊಯ್ಬಿಟ್ಟಿನೆ… ಗಂಟಿ ಎಬ್ಬುಕೆ… ಪಾರಿಗೆ ಹೊಯ್ಬಿಟ್ಟಿನೆ

ಹಾಡಿ-ಗೀಡಿಗ್ ಗಂಟಿ ಎಬ್ಬಿ… ಗೂಟ ಕಟ್ಟಿ ಮೇಯುಕ್ಬಿಟ್ಟ್… ಹೊಕ್ಕಂಬ್ ಆಟ ಆಡುಕ್-ಹೊಪುವೇ
ಗುಟ್ಟಂಗೇ … ಹೊಕ್ಕಂಡ್-ಹೊಕ್ಕಂಡ್ ಆಡುಕ್-ಹೊಪುವೇ
ಹಾಡಿ-ಗೀಡಿಗ್ ಗಂಟಿ ಎಬ್ಬಿ… ಗೂಟ ಕಟ್ಟಿ ಮೇಯುಕ್ಬಿಟ್ಟ್… ಹೊಕ್ಕಂಬ್ ಆಟ ಆಡುಕ್-ಹೊಪುವೇ
ಗುಟ್ಟಂಗೇ … ಹೊಕ್ಕಂಡ್-ಹೊಕ್ಕಂಡ್ ಆಡುಕ್-ಹೊಪುವೇ

ಮನ್ಯರ್ ಕಂಡ್ರೆ ಏನ್ಕತಿ
ಹೊಡ್ದ್ರೆ ಬೂಡ್-ಬೂಡ್ ಫಚೀತಿ
ಅಲ್ಲ್ ಯಾರೋ ಬಂದಂಗಿತ್ತ್-ಕಾಣ್

ಹೊಕ್ಕೋ… ಹೊಕ್ಕೋ…

ಪಾರಿಗೆ ಹೊಯ್ಬಿಟ್ಟಿನೆ… ಗಂಟಿ ಎಬ್ಬುಕೆ… ಪಾರಿಗೆ ಹೊಯ್ಬಿಟ್ಟಿನೆ
ಗುಡ್ಡಿಗೆ ಹೊಯ್ಬಿಟ್ಟಿನೆ… ಗಂಟಿ ಎಬ್ಬುಕೆ… ಗುಡ್ಡಿಗೆ ಹೊಯ್ಬಿಟ್ಟಿನೆ

ಆಟ-ಗೀಟ ಅಡುಕಿಲ್ಲ… ಹಗ್ಲಿಕೆ
ಉಂಡ್ ಕಂಡ್ ಗಂಟಿ ಬಿಟ್ಕ… ಹೊರ್ಡುದೇ
ಗಂಟಿಮೇಸಿ ಸಾಕಾಯ್-ಬಿಟ್ಟಿತೇ

ಪಾರಿಗೆ ಹೊಯ್ಬಿಟ್ಟಿನೆ… ಗಂಟಿ ಎಬ್ಬುಕೆ… ಪಾರಿಗೆ ಹೊಯ್ಬಿಟ್ಟಿನೆ

ಮೂಲ ಹಾಡು: ‘ಗೋವಿಂದಾಯ ನಮಃ’ ಚಿತ್ರದ ‘ಪ್ಯಾರ್‌ಗೆ ಅಗ್ಬಿಟೈತೆ…’
ಕೃಪೆ: kannadalyrics.com

ಪ್ಯಾರ್‌ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಪ್ಯಾರ್‌ಗೆ ಅಗ್ಬಿಟೈತೆ
ಜಾನ್‌ಗೆ ಹೋಗ್ಬಿಟೈತೆ… ಓಯ್ ನಮ್ದುಕ್ಕೆ… ಜಾನ್‌ಗೆ ಹೋಗ್ಬಿಟೈತೆ

ಖಾನಾ ಪೀನಾ ಸೇರ್ತಾ ಇಲ್ಲ… ನಮ್ದುಕೇ
ನೀಂದ್ ಗೀಂದ್ ಬರ್ತಾ ಇಲ್ಲ… ನಮ್ದುಕೇ
ಜಿಂದ್‌ಗೀನೆ ಹಾಳಾಗ್ಬಿಟೈತೆ

ಪ್ಯಾರ್‌ಗೆ ಅಗ್ಬಿಟೈತೆ…
ಪ್ಯಾರ್‌ಗೆ ಅಗ್ಬಿಟೈತೆ…
ಪ್ಯಾರ್‌ಗೆ ಅಗ್ಬಿಟೈತೆ… ಓಯ್ ನಮ್ದುಕ್ಕೆ… ಪ್ಯಾರ್‌ಗೆ ಅಗ್ಬಿಟೈತೆ

ದಿಲ್ದು ಒಳ್ಗೆ ಗುಲ್ಲು ಎದ್ದು… ನಮ್ದು ಮನ್ಸು ಯಾಕೋ ಇಂದು… ಕ್ಯಾಕರ್ಸಿ… ಉಗಿತೈತೆ
ನಿಮ್ದುಕ್ಕೆ… ಪ್ಯಾರ್ ಕರೋ ಅಂತಾ ಐತೆ
ದಿಲ್ದು ಒಳ್ಗೆ ಗುಲ್ಲು ಎದ್ದು… ನಮ್ದು ಮನ್ಸು ಯಾಕೋ ಇಂದು… ಕ್ಯಾಕರ್ಸಿ… ಉಗಿತೈತೆ
ನಿಮ್ದುಕ್ಕೆ… ಪ್ಯಾರ್ ಕರೋ ಅಂತಾ ಐತೆ

ಉಗ್ಯೋ-ಗಿಗ್ಯೋ ನಕ್ಕೊಜಿ
ಸುಮ್ಕೇ ಪ್ಯಾರ್ ಕರೋಜಿ
ನಮ್ದುಕ್ಕೆ ನಿಮ್… ಇಶ್ಕ್ ಕರ್ತಾ ಹೈ

ಪ್ಯಾರ್‌ಗೆ ಅಗ್ಬಿಟೈತೆ… ಓಯ್ ನಮ್ದುಕ್ಕೆ… ಪ್ಯಾರ್‌ಗೆ ಅಗ್ಬಿಟೈತೆ
ಪ್ಯಾರ್‌ಗೆ ಅಗ್ಬಿಟೈತೆ… ಓಯ್ ನಮ್ದುಕ್ಕೆ… ಪ್ಯಾರ್‌ಗೆ ಅಗ್ಬಿಟೈತೆ

ಶಾದಿ ಗೀದಿ ಆಗ್-ಬಿಟ್ಟಿ… ಛೋಟಾ ಘರ್ ಮಾಡ್-ಬಿಟ್ಟಿ… ಡಜನ್ ಮಕ್ಳು ಹೆತ್ತುಬಿಡೋದೇ
ಇನ್ಮುಂದೆ… ಡೆಕೇಡ್ ಭರ್ಕೋ ಹೆತ್ತುಬಿಡೋದೇ
ಶಾದಿ ಗೀದಿ ಆಗ್-ಬಿಟ್ಟಿ… ಛೋಟಾ ಘರ್ ಮಾಡ್ಕೊಂಡ್ಬಿಟ್ಟಿ… ಡಜನ್ ಮಕ್ಳು ಹೆತ್ತುಬಿಡೋದೇ
ಇನ್ಮುಂದೆ… ಡಜನ್ ಡಜನ್ ಹೆತ್ತುಬಿಡೋದೇ

ಅಲ್ಲಿಗಂಟಾ ಯಾಕ್ ಕಾಯ್ತೀ
ಒಳಗೆ ಜುಂ-ಜುಂ ಅಂತೈತಿ
ಇಲ್ಲೇ ಶುರು ಹಚ್ಕೊಂಬಿಡೋದೇ

ನಕ್ಕೋ… ನಕ್ಕೋ…

ಪ್ಯಾರ್‌ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಪ್ಯಾರ್‌ಗೆ ಅಗ್ಬಿಟೈತೆ
ಜಾನ್‌ಗೆ ಹೋಗ್ಬಿಟೈತೆ… ಓಯ್ ನಮ್ದುಕ್ಕೆ… ಜಾನ್‌ಗೆ ಹೋ…ಗ್ಬಿಟೈತೆ

ಖಾನಾ ಪೀನಾ ಸೇರ್ತಾ ಇಲ್ಲ… ನಮ್ದುಕೇ
ನೀಂದ್ ಗೀಂದ್ ಬರ್ತಾ ಇಲ್ಲ… ನಮ್ದುಕೇ
ಜಿಂದ್‌ಗೀನೆ ಹಾಳಾಗ್ಬಿಟೈತೆ… ಎ… ಎ… ಎ…

ಪ್ಯಾರ್‌ಗೆ ಅಗ್ಬಿಟೈತೆ… ಓ ನಮ್ದುಕ್ಕೆ ಪ್ಯಾರ್‌ಗೆ ಅಗ್ಬಿಟೈತೆ


ಹಿಂದಿಯ ‘ಕೂಲಿ ನಂಬರ್ 1’ ಪಿಚ್ಚರಿನ ‘ಮೈ ತೊ ರಸ್ತೆ ಸೆ ಜಾ ರಹಾ ಥಾ…’ ಪದ್ಯ ನಮ್ ಕುಂದಾಪ್ರ ಸ್ಟೈಲಗೆ 🙂

ಅಣಕ ಬರದ್ದ್ : ವಿಜಯರಾಜ ಕನ್ನಂತ

ಕಾಪಿ ರೈಟ್ಸು ಮಣ್ಣ-ಮಸಿ ಎಂತದಿಲ್ಲ… ಎಲ್ ಬೇಕಾರೂ ಹಾಯ್ಕಣಿ… ಆರೇ ಬರ್ದರನ್ನೊಂದ್ ನೆನ್ಪ್ ಮಾಡ್ಕಣಿ…  🙂

 

ಮೈ ತೊ ಗುಡ್ಡಿ ಬದಿಗ್… ಜಾ ರಹಾ ಥಾ

ಮೈ ತೊ ಗ್ವಾಯ್ ಹಣ್ಣ್… ಖಾ ರಹಾ ಥಾ
ಮೈ ತೋ ಗ್ವಾಯ್ ಬೀಜ ಓಟ್ಟ್… ಮಾಡ್ ರಹಾ ಥಾ

ಗುಡ್ಡಿ ಬದಿಗ್ ಜಾ ರಹಾ ಥಾ… ಗ್ವಾಯ್ ಹಣ್ಣ್ ಖಾ ರಹಾ ಥಾ… ಗ್ವಾಯ್ ಬೀಜ ಒಟ್ಮಾಡ್ ರಹಾ ಥಾ
ನಿಂಗ್ ಮೆಣ್ಸ್ ನುರ್ದಾಂಗಾರೆ… ನಾ ಎಂತ ಮಾಡೂದ್ || 2 ಸಲ ||

ಮೈ ತೊ ಹಾಡಿ ಬದಿಗ್… ಜಾ ರಹಿ ಥಿ
ಮೈ ತೊ ಸೊಪ್ಪ್ ಕೊಯ್ದ್… ಹಾಕ್ ರಹಿ ಥಿ
ಮೈ ತೊ ದರ್ಲಿ ಓಟ್ಟ್… ಮಾಡ್ ರಹಿ ಥಿ

ಹಾಡಿ ಬದಿಗ್ ಜಾ ರಹಿ ಥಿ… ಸೊಪ್ಪ್ ಕೊಯ್ದ್ ಹಾಕ್ ರಹಿ ಥಿ… ದರ್ಲಿ ಒಟ್ಮಾಡ್ ರಹಿ ಥಿ
ನಿಂಗ್ ಮೆಣ್ಸ್ ನುರ್ದಾಂಗಾರೆ… ನಾ ಎಂತ ಮಾಡೂದ್ || 2 ಸಲ ||

ಹೊಟ್ಟಿ… ಉರ್ಸ್ ಕಣ್ಕ್ ಹೆಣೆ… ಎಲ್ಲಾ
ಅಷ್ಟ್ ಕೊಂಗಾಟ… ನಿನ್ ಮೇಲೆ… ಬಲ್ಯಾ
ಹೊಟ್ಟಿ… ಉರ್ಸ್ ಕಣ್ಕ್ ಹೆಣೆ… ಎಲ್ಲಾ
ಅಷ್ಟ್ ಕೊಂಗಾಟ… ನಿನ್ ಮೇಲೆ… ಬಲ್ಯಾ

ನಿನ್ನೊಟ್ಟಿಗಿವತ್ತ್… ಓಡ್ಬಪ್ಪುದಾ… ನಾನ್
ಅಪ್ಪಯ್ಯಂಗ್ ಗೊತ್ತಾರ್… ಬೆರ್ಸ್ಕಬತ್ರ್… ಕಾಣ್

ನಮ್ಮನ್ ಕಂಡ್ರೆ ಎಲ್ರಿಗೂ… ಹೊಟ್ಟ್ಯಗೆ ಗಿಮ್ಚದಂಗಾತ್ತ್
ಎಂತ ಹೇಳುದ್ ಗಡೆ… ನಮ್-ನಮನಿ ಕತಿ ಕಟ್ತೋ

ಮೈ ತೊ ತ್ವಾಟದ್ ಬದಿಗ್… ಜಾ ರಹಾ ಥಾ
ಮೈ ತೊ ಹೆಡಿಮಂಡಿ… ಹೆಕ್ಕ್ ರಹಾ ಥಾ
ಮೈ ತೋ ಬಿದ್ದ್-ಅಡ್ಕಿ… ಒಟ್ಮಾಡ್ ರಹಾ ಥಾ

ತ್ವಾಟದ್ ಬದಿಗ್ ಜಾ ರಹಾ ಥಾ… ಹೆಡಿಮಂಡಿ ಹೆಕ್ಕ್ ರಹಾ ಥಾ… ಬಿದ್ದಡ್ಕಿ ಒಟ್ಮಾಡ್ ರಹಾ ಥಾ
ನೀ ಸೊಡ್ಡ್ ಬೀಗ್ಸ್-ಕಂಡ್ರೆ… ನಾ ಎಂತ ಮಾಡೂದ್ || 2 ಸಲ ||

ಹೊಸ್ತ್ ಯಾವ್ದಾರೂ… ಪಿಚ್ಚರಿಗೆ… ಹ್ವಾಪಾ
ಪಾರಿಜಾತದಂಗ್… ಚಾ ಕುಡ್ಕ…ಬಪ್ಪಾ
ಹೊಸ್ತ್ ಯಾವ್ದಾರೂ… ಪಿಚ್ಚರಿಗೆ… ಹ್ವಾಪಾ
ಪಾರಿಜಾತದಂಗ್… ಚಾ ಕುಡ್ಕ…ಬಪ್ಪಾ

ನುಂಗ್ವರ್ ಕಣಗೆ… ನನ್ನನ್ ಎಂತಕೆ… ಕಾಂ…ತೆ
ಸತ್ಯ ಹೇಳುದಾ ಹೆಣೆ… ನೀ ಚಂದು… ಗ್ವಾಂ…ಪಿ

ಅಪ್ಪಯ್ಯ ಎಲ್ಲಾರೂ… ಬಪ್ಕಿದ್ರ್… ಬೇಗ ಮನಿಗ್ಹೋಪಾ
ಬಂದ್ ಅರ್ಧ… ಗಂಟಿ ಆಯ್ಲ… ನಿಂಗ್ ತಕಂಡ್ ಹೋತ್ತಾ?

ಮೈ ತೊ ಗ್ವಾಯ್ ಬೀಜ ಫ್ಯಾಕ್ಟರಿ… ಜಾ ರಹಿ ಥಿ
ಮೈ ತೊ ಗ್ವಾಯ್ ಬೀಜ… ಪೀಲ್ ರಹಿ ಥಿ
ಮೈ ತೊ ಬಟ್ವಾಡಿ… ಲೇ ರಹಿ ಥಿ

ಗ್ವಾಯ್ ಬೀಜ ಫ್ಯಾಕ್ಟರಿ ಜಾ ರಹಿ ಥಿ… ಗ್ವಾಯ್ ಬೀಜ ಪೀಲ್ ರಹಿ ಥಿ… ಬಟ್ವಾಡಿ ಲೇ ರಹಿ ಥಿ
ನಿನ್ನಜ್ಜಿ ನೆಗ್ದ್ ಬಿದ್ ಹೋರೆ… ನಾ ಎಂತ ಮಾಡೂದ್ || 2 ಸಲ ||

ಮೈ ತೊ ಗುಡ್ಡಿ ಬದಿಗ್… ಜಾ ರಹಾ ಥಾ
ಮೈ ತೊ ಗ್ವಾಯ್ ಹಣ್ಣ್… ಖಾ ರಹಾ ಥಾ
ಮೈ ತೋ ಗ್ವಾಯ್ ಬೀಜ ಓಟ್ಟ್… ಮಾಡ್ ರಹಾ ಥಾ

ಗುಡ್ಡಿ ಬದಿಗ್ ಜಾ ರಹಾ ಥಾ… ಗ್ವಾಯ್ ಹಣ್ಣ್ ಖಾ ರಹಾ ಥಾ… ಗ್ವಾಯ್ ಬೀಜ ಒಟ್ಮಾಡ್ ರಹಾ ಥಾ
ನಿಂಗ್ ಮೆಣ್ಸ್ ನುರ್ದಾಂಗಾರೆ… ನಾ ಎಂತ ಮಾಡೂದ್ || 2 ಸಲ ||

ಮೂಲ ಹಾಡು: ಹಿಂದಿಯ ‘ಕೂಲಿ ನಂಬರ್ 1’ ಪಿಚ್ಚರಿನ ‘ಮೈ ತೊ ರಸ್ತೆ ಸೆ ಜಾ ರಹಾ ಥಾ…’

ಮೈ ತೋ ರಸ್ತೇ ಸೇ… ಜಾ ರಹಾ ಥಾ
ಮೈ ತೋ ಭೇಲ್ ಪುರೀ… ಖಾ ರಹಾ ಥಾ
ಮೈ ತೋ ಲಡ್ಕೀ… ಘುಮಾ ರಹಾ ಥಾ

ರಸ್ತೇ ಸೇ ಜಾ ರಹಾ ಥಾ… ಭೇಲ್ ಪುರೀ ಖಾ ರಹಾ ಥಾ… ಲಡ್ಕೀ ಘುಮಾ ರಹಾ ಥಾ
ತುಜ್ಕೋ ಮಿರ್ಚೀ ಲಗೀ ತೋ… ಮೈ ಕ್ಯಾ ಕರೂಂ || 2 ಸಲ ||

ಮೈ ತೋ ರಸ್ತೇ ಸೇ… ಜಾ ರಹೀ ಥೀ
ಮೈ ತೋ ಐಸ್ ಕ್ರೀಮ್… ಖಾ ರಹೀ ಥೀ
ಮೈ ತೋ ನೈನಾ… ಲಡಾ ರಹೀ ಥೀ

ರಸ್ತೇ ಸೇ ಜಾ ರಹೀ ಥೀ… ಜಾ ರಹೀ ಥೀ ಖಾ ರಹೀ ಥೀ… ನೈನಾ ಲಡಾ ರಹೀ ಥೀ
ತುಜ್ಕೋ ಮಿರ್ಚೀ ಲಗೀ ತೋ… ಮೈ ಕ್ಯಾ ಕರೂಂ || 2 ಸಲ ||

ಜಲೇ ಚಾಹೇ… ಸಾರಾ ಜಮಾನಾ
ಚಾಹೇ ತುಜ್ಹೆ… ತೇರಾ ದೀವಾನಾ
ಜಲೇ ಚಾಹೇ… ಸಾರಾ ಜಮಾನಾ
ಚಾಹೇ ತುಜ್ಹೆ… ತೇರಾ ದೀವಾನಾ

ಸಂಗ್ ತೇರೇ… ಮೈ ಭಾಗ್ ಜಾವೂಂ
ನಜರ್ ಕಿಸೀಕೋ… ಭೀ ನ ಆವೂಂ

ಲೋಗ್ ದಿಲ್-ವಾಲೋಂ ಸೆ… ಯಾರ್ ಜಲತೇ ಹೈ
ಕೈಸೇ ಬತಾವೂಂ… ಕ್ಯಾ-ಕ್ಯಾ ಚಾಲ್ ಚಲತೇ ಹೈ

ಮೈ ತೋ ಗಾಡೀ ಸೇ… ಜಾ ರಹಾ ಥಾ
ಮೈ ತೋ ಸೀಟೀ… ಬಜಾ ರಹಾ ಥಾ
ಮೈ ತೋ ಟೋಪೀ… ಫಿರಾ ರಹಾ ಥಾ

ಗಾಡೀ ಸೇ ಜಾ ರಹಾ ಥಾ… ಸೀಟೀ ಬಜಾ ರಹಾ ಥಾ… ಟೋಪೀ ಫಿರಾ ರಹಾ ಥಾ
ತುಜ್ಕೋ ಧಕ್ಕಾ ಲಗಾ ತೋ… ಮೈ ಕ್ಯಾ ಕರೂಂ || 2 ಸಲ ||

ನಯೀ ಕೋಯೀ ಪಿಚ್ಚರ್… ದಿಖಾ ದೇ
ಮುಜ್ಹೆ ಕಹೀ… ಖಾನಾ ಖಿಲಾದೇ
ನಯೀ ಕೋಯೀ ಪಿಚ್ಚರ್… ದಿಖಾ ದೇ
ಮುಜ್ಹೆ ಕಹೀ… ಖಾನಾ ಖಿಲಾದೇ

ಜರಾ ನಿಗಾಹೋಂ ಸೇ… ಗಿಲಾ ದೇ
ಪ್ಯಾಸ್ ಮೇರೆ ದಿಲ್ ಕೀ… ಭುಜಾ ದೇ

ಆಜ್ ತುಜ್ಹೆ ಜೀ ಭರಕೇ… ಪ್ಯಾರ್ ಕರನಾ ಹೈ
ತೇರೀ ನಿಗಾಹೋಂ ಸೇ… ದೀದಾರ್ ಕರನಾ ಹೈ

ಮೈ ತೋ ಠುಮಕಾ… ಲಗಾ ರಹೀ ಥೀ
ಮೈ ತೋ ಗೀತ್ ಕೋಯೀ… ಗಾ ರಹೀ ಥೀ
ಮೈ ತೋ ಚಕ್ಕರ್… ಚಲಾ ರಹೀ ಥೀ

ಠುಮಕಾ ಲಗಾ ರಹೀ ಥೀ… ಗೀತ್ ಕೋಯೀ ಗಾ ರಹೀ ಥೀ… ಚಕ್ಕರ್ ಚಲಾ ರಹೀ ಥೀ
ತೇರೀ ನಾನೀ ಮರೀ ತೋ ಮೈ ಕ್ಯಾ ಕರೂಂ || 2 ಸಲ ||

ಮೈ ತೋ ರಸ್ತೇ ಸೇ… ಜಾ ರಹಾ ಥಾ
ಮೈ ತೋ ಭೇಲ್ ಪುರೀ… ಖಾ ರಹಾ ಥಾ
ಮೈ ತೋ ಲಡ್ಕೀ… ಘುಮಾ ರಹಾ ಥಾ

ರಸ್ತೇ ಸೇ ಜಾ ರಹಾ ಥಾ… ಭೇಲ್ ಪುರೀ ಖಾ ರಹಾ ಥಾ… ಲಡ್ಕೀ ಘುಮಾ ರಹಾ ಥಾ
ತುಜ್ಕೋ ಮಿರ್ಚೀ ಲಗೀ ತೋ… ಮೈ ಕ್ಯಾ ಕರೂಂ || 2 ಸಲ ||



ಶಿವರಾಜ್ ಕುಮಾರ್ ಮೊದಲ ಪಿಚ್ಚರ್ ಆನಂದ್‘ …ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ ಹೊಸ ಹಕ್ಕಿಯ ನೋಡಿದೆ….. ಧಾಟಿಯಗೆ ಓದಿ…ಈ ಹಾಡು..ನಾಯಿ ಪಾಡು… 🙂

ಅಣಕ ಬರದ್ದ್: ವಿಜಯರಾಜ್ ಕನ್ನಂತ

ಸ್ಪೂರ್ತಿ: ಫೇಸ್-ಬುಕ್ ಗ್ರೂಪಿನ ಪ್ರಸಂಗಗಳು

 

ಕುಂಯ್ಯಿ ಕುಂಯ್ಯಿ ಕುಂಯ್ಯಿ ಅಂದ್ ಕೂಗುತ

ಕಜ್ಜಿ ನಾಯಿಯು ಓಡಿದೆ…

ಕುಂಯ್ಯಿ ಕುಂಯ್ಯಿ ಕುಂಯ್ಯಿ ಅಂದ್ ಕೂಗುತ

ಕಜ್ಜಿ ನಾಯಿಯು ಓಡಿದೆ…

 

ಕೂಗುತ… ಕೂಗುತ… ಬೇಲಿಯಾ ಹಾರಿದೇ…

ಕೂಗುತ… ಕೂಗುತ… ಬೇಲಿಯಾ ಹಾರಿದೇ……ಹಾರಿದೇ….

 

ಕುಂಯ್ಯಿ ಕುಂಯ್ಯಿ

ಕುಂಯ್ಯಿ ಕುಂಯ್ಯಿ

ಕುಂಯ್ಯಿ ಕುಂಯ್ಯಿ ಕುಂಯ್ಯಿ

 

ಕುಂಯ್ಯಿ ಕುಂಯ್ಯಿ ಕುಂಯ್ಯಿ ಅಂದ್ ಕೂಗುತ

ಕಜ್ಜಿ ನಾಯಿಯು ಓಡಿದೆ…

ಕುಂಯ್ಯಿ ಕುಂಯ್ಯಿ ಕುಂಯ್ಯಿ ಅಂದ್ ಕೂಗುತ

ಕಜ್ಜಿ ನಾಯಿಯು ಓಡಿದೆ…

 

ಕೂಗುತ… ಕೂಗುತ… ಬೇಲಿಯಾ ಹಾರಿದೇ…

ಕೂಗುತ… ಕೂಗುತ… ಬೇಲಿಯಾ ಹಾರಿದೇ……ಹಾರಿದೇ…….

 

ಕುಂಯ್ಯಿ ಕುಂಯ್ಯಿ

ಕುಂಯ್ಯಿ ಕುಂಯ್ಯಿ

ಕುಂಯ್ಯಿ ಕುಂಯ್ಯಿ ಕುಂಯ್ಯಿ

 

ನೆರ್ಮನಿ ನಾಯಿಯದ್… ಹಾಳಾಯ್ ಹೊಪುಕದ್…

ಅಂಡುತ ನಿಂತಕಂಡ್…. ಈ ದಿನ ನಮ್ಮನಿ

ಬೆಕ್ಕಿನ ಕಂಡಿದೆ…. ಹಾಂಗಾಯ್…… ಬೆರ್ಸ್ಕಕಂಡು ಬಂದಿದೆ

 

ನೆರ್ಮನಿ ನಾಯಿಯದ್…ಹಾಳಾಯ್ ಹೊಪುಕದ್…

ಅಂಡುತ ನಿಂತಕಂಡ್…. ಈ ದಿನ ನಮ್ಮನಿ

ಬೆಕ್ಕಿನ ಕಂಡಿದೆ…. ಹಾಂಗಾಯ್…… ಬೆರ್ಸ್ಕಕಂಡು ಬಂದಿದೆ

 

ಮೂರು ಕಲ್ಲನು ಹೊಡೆದೇ….. ನಾಯಿ…ಒರ್ಲುತ ಓಡಿದೆ…

ಮೂರು ಕಲ್ಲನು ಹೊಡೆದೇ…… ನಾಯಿ…ಒರ್ಲುತ ಓಡಿದೆ…

 

ಕುಂಯ್ಯಿ ಕುಂಯ್ಯಿ ಕುಂಯ್ಯಿ ಅಂದ್ ಕೂಗುತ

ಕಜ್ಜಿ ನಾಯಿಯು ಓಡಿದೆ…

ಕುಂಯ್ಯಿ ಕುಂಯ್ಯಿ ಕುಂಯ್ಯಿ ಅಂದ್ ಕೂಗುತ

ಕಜ್ಜಿ ನಾಯಿಯು ಓಡಿದೆ…

 

ಕೂಗುತ… ಕೂಗುತ… ಬೇಲಿಯ ಹಾರಿದೇ…

ಕೂಗುತ… ಕೂಗುತ… ಬೇಲಿಯ ಹಾರಿದೇ….ಹಾರಿದೇ…..

 

ಕುಂಯ್ಯಿ ಕುಂಯ್ಯಿ

ಕುಂಯ್ಯಿ ಕುಂಯ್ಯಿ

ಕುಂಯ್ಯಿ ಕುಂಯ್ಯಿ ಕುಂಯ್ಯಿ

 

ನೆರ್ಮನಿ ಮಾಬ್ಲಣ್ಣ….. ಅಷ್ಟೊತ್ತಿಗೆ ಹೆರ್ಗ್ಬಂದು

ನಾಯಿಯು ಒರ್ಲುತ…. ಒಡುದ್ ಕಂಡರು

ಬೆರ್ಸ್ಕಂಡ್ ಬಂದರು ….ನನ್ನ…. ಬಯ್ಯುತ ನಿಂತ್ಕಂಡ್ರು

 

ನೆರ್ಮನಿ ಮಾಬ್ಲಣ್ಣ….. ಅಷ್ಟೊತ್ತಿಗೆ ಹೆರ್ಗ್ಬಂದು

ನಾಯಿಯು ಒರ್ಲುತ…. ಒಡುದ್ ಕಂಡರು

ಬೆರ್ಸ್ಕಂಡ್ ಬಂದರು ….ನನ್ನ…. ಬಯ್ಯುತ ನಿಂತ್ಕಂಡ್ರು

 

ನಾನ್ ಮೆತ್ತಗ್ ಜಾರ್ಕಂಡೆ. …ನಮ್ಮನಿ ಒಳಗೆ ಸೇರ್‌ಕಂಡೆ…

ಅವ್ರು ನನ್ನ ಬಯ್‌ಕಂಡೆ…..ಅವ್ರ್ ಮನಿ ಒಳ್ಗ್ ಹೋದ್ದ್ ಕಂಡೆ

 

ಕುಂಯ್ಯಿ ಕುಂಯ್ಯಿ ಕುಂಯ್ಯಿ ಅಂದ್ ಕೂಗುತ

ಕಜ್ಜಿ ನಾಯಿಯು ಓಡಿದೆ…

ಕುಂಯ್ಯಿ ಕುಂಯ್ಯಿ ಕುಂಯ್ಯಿ ಅಂದ್ ಕೂಗುತ

ಕಜ್ಜಿ ನಾಯಿಯು ಓಡಿದೆ…

 

ಕೂಗುತ… ಕೂಗುತ… ಬೇಲಿಯ ಹಾರಿದೇ..

ಕೂಗುತ… ಕೂಗುತ… ಬೇಲಿಯ ಹಾರಿದೇ…….ಹಾರಿದೇ….

 

ಕುಂಯ್ಯಿ ಕುಂಯ್ಯಿ

ಕುಂಯ್ಯಿ ಕುಂಯ್ಯಿ

ಕುಂಯ್ಯಿ ಕುಂಯ್ಯಿ ಕುಂಯ್ಯಿ………….

 

ಮೂಲ ಸಾಹಿತ್ಯ (ಕೃಪೆ:kannadalyrics.com)

ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ

ಕೇಳುತಾ ಕೇಳುತ ಮೇಲೆ ನಾ ಹಾರಿದೇ..
ಕೇಳುತಾ ಕೇಳುತ ಮೇಲೆ ನಾ ಹಾರಿದೇ.. ಹಾಡಿದೆ…

ಟುವ್ವಿ ಟುವ್ವಿ
ಟುವ್ವಿ ಟುವ್ವಿ
ಟುವ್ವಿ.. ಟುವ್ವಿ.. ಟುವ್ವೀ….

ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ

ಹೊಸ ಹಕ್ಕಿಯ ನೋಡಿದೆ
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ

ಕೇಳುತಾ ಕೇಳುತ ಮೇಲೆ ನಾ ಹಾರಿದೇ..
ಕೇಳುತಾ ಕೇಳುತ ಮೇಲೆ ನಾ ಹಾರಿದೇ.. ಹಾಡಿದೆ…

ಟುವ್ವಿ ಟುವ್ವಿ
ಟುವ್ವಿ ಟುವ್ವಿ
ಟುವ್ವಿ.. ಟುವ್ವಿ.. ಟುವ್ವೀ….

ನಿನ್ನೆಯು ಮುಗಿದುದು ನಾಳೆಯು ಕನಸದು
ತುಂಬಿದ ಯೌವನ ಈ ದಿನ ನಮ್ಮದು
ಎನ್ನುತಾ ಆಡಿದೆ.. ಆಗ ಹೊಸತನ ನೋಡಿದೆ..

ನಿನ್ನೆಯು ಮುಗಿದುದು ನಾಳೆಯು ಕನಸದು
ತುಂಬಿದ ಯೌವನ ಈ ದಿನ ನಮ್ಮದು
ಎನ್ನುತಾ ಆಡಿದೆ.. ಆಗ ಹೊಸತನ ನೋಡಿದೆ..

ನೂರು ಕಲ್ಪನೆ ಮಾಡಿದೆ.. ನೂರು ರಾಗವ ಹಾಡಿದೆ..
ನೂರು ಕಲ್ಪನೆ ಮಾಡಿದೆ.. ನೂರು ರಾಗವ ಹಾಡಿದೆ..

ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ

ಕೇಳುತಾ ಕೇಳುತ ಮೇಲೆ ನಾ ಹಾರಿದೇ..
ಕೇಳುತಾ ಕೇಳುತ ಮೇಲೆ ನಾ ಹಾರಿದೇ.. ಹಾಡಿದೆ…

ಟುವ್ವಿ ಟುವ್ವಿ
ಟುವ್ವಿ ಟುವ್ವಿ
ಟುವ್ವಿ.. ಟುವ್ವಿ.. ಟುವ್ವೀ….

ಸೂರ್ಯನ ಕಿರಣವ ಕೈಯಲಿ ಹಿಡಿದೆನು
ಮೋಡವ ಕರಗಿಸಿ ಆಡುತ ಕುಡಿದೆನು
ಎಣಿಸುತಾ ತಾರೆಯ ನಾನು ಕಳೆದೆನು ರಾತ್ರಿಯಾ…

ಸೂರ್ಯನ ಕಿರಣವ ಕೈಯಲಿ ಹಿಡಿದೆನು
ಮೋಡವ ಕರಗಿಸಿ ಆಡುತ ಕುಡಿದೆನು
ಎಣಿಸುತಾ ತಾರೆಯ ನಾನು ಕಳೆದೆನು ರಾತ್ರಿಯಾ…

ಮುಗಿಲ ಮೆತ್ತೆಯಲಿ ತೇಲಿದೆ.. ಭುವಿಯ ಅಂದವನು ನೋಡಿದೆ..
ಮುಗಿಲ ಮೆತ್ತೆಯಲಿ ತೇಲಿದೆ.. ಭುವಿಯ ಅಂದವನು ನೋಡಿದೆ..

ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ

ಕೇಳುತಾ ಕೇಳುತ ಮೇಲೆ ನಾ ಹಾರಿದೇ..
ಕೇಳುತಾ ಕೇಳುತ ಮೇಲೆ ನಾ ಹಾರಿದೇ.. ಹಾಡಿದೆ…

ಟುವ್ವಿ ಟುವ್ವಿ
ಟುವ್ವಿ ಟುವ್ವಿ
ಟುವ್ವಿ.. ಟುವ್ವಿ.. ಟುವ್ವೀ….


ಹೋಟ್ಲು ಕ್ಯಾಂಟೀನಗೆ ಚಾತಿಂಡಿ ಊಟ ಮಾಡುವರಿಗೆ ಕುಂದಾಪ್ರ ಕನ್ನಡದ ಅಣಕ. ‘ಪರಮಾತ್ಮ’ ಚಿತ್ರದ ‘ಕತ್ಲಲ್ಲಿ ಕರಡೀಗೆ… ಜಾಮೂನು ತಿನಿಸೋಕೆ…’ ಪದ್ಯ ಹೀಂಗಾಯಿತ್ ಕಾಣಿ – ‘ಹೋಟ್ಲಂಗೆ ಬೆಳ್ಗತಿಗೆ… ಚಾ-ತಿಂಡಿ ಮಾಡುಕೆ… ಯಾವತ್ತೂ ಹೋಪ್ಕಾಗ ರೀ…’ 🙂


ಹೋಟ್ಲಂಗೆ ಬೆಳ್ಗತಿಗೆ… ಚಾ-ತಿಂಡಿ ಮಾಡುಕೆ… ಏಗ್ಳೀಕೂ ಹೋಪ್ಕಾಗ ರೀ… ಹ್ವಾ… ಆ… ಆ…
ಅತ್ಲಾಯಿ ದುಡ್ಡ್ ಹಾಳ್… ಇತ್ಲಾಯಿ ಹೊಟ್ಟಿ ಹಾಳ್… ಏಗ್ಳೀಕೂ ಹೋಪ್ಕಾಗ ರೀ… ಹ್ವಾ… ಆ… ಆ…

ಹೊಸ ಅಡಿಗೆ ಮನ್ಯಾರೆ… ಕಾಣ್ಲಕ್ಕ್ ಏನಂತ್ರಿ
ಹಳಿ ಅಡಗಿ ಮನಿಯಾದ್ರೆ… ತಿಂದದ್ದೆಲ್ಲಾ ಕಾರ್ಕಂತ್ರಿ
ಮನೆಯಂಗೆ ತಿಂಡಿ ತಿಂದ್… ಲಾಯ್ಕಂಗಿರಿ…
ಇನ್ಮಾತ್ರ ಹೋಟ್ಲ್ ತಿಂಡಿಗ್… ದುಡ್ಡ್-ಹಾಕ್ಬೆಡಿ… ಹ್ವಾ… ಆ… ಆ…

ಅತ್ಲಾಯಿ ದುಡ್ಡ್ ಹಾಳ್… ಇತ್ಲಾಯಿ ಹೊಟ್ಟಿ ಹಾಳ್… ಏಗ್ಳೀಕೂ ಹೋಪ್ಕಾಗ ರೀ… ಹ್ವಾ… ಆ… ಆ…
ಹೋಟ್ಲಂಗೆ ಬೆಳ್ಗತಿಗೆ… ಚಾ-ತಿಂಡಿ ಮಾಡುಕೆ… ಏಗ್ಳೀಕೂ ಹೋಪ್ಕಾಗ ರೀ… ಹ್ವಾ… ಆ… ಆ…

ಹೋಟಲವ್ರ್ ತಿಂಡಿಯಂಗೆ… ಎಂತಾ ಇತ್ತ್
ತಿಳ್ಕಂಬ್ಕೆ ತಾಕತ್ತ್… ನಮಗೆಲ್ಲಿತ್ತ್?
ಸೋಡವ ಹಾಕ್ದಿದ್ದ್… ಹೊಟ್ಲಂಬ್ದೇ ಇಲ್ಲ

ಚಿತ್ರಾನ್ನ ಮಾಡ್ತ್ರಂಬ್ರು… ಅನ್ನ ಉಳ್ದ್ರೆ
ಬಿಸಾಡುಕ್ ಆತಿಲ್ಲ… ದುಡ್-ಕೊಟ್ಟದ್ದೇ
ಡಾಲ್ದಾನ್ನೇ ಹಾಕುದು… ಘೀ-ಸ್ಮೆಲ್ಲೇ ಇಲ್ಲ

ಕುಂ…ದಾಪ್ರ ಹೋಟ್ಲಂಗೆ… ಒಂಚೂರು ಕಮ್ಮಿ
ಎಲ್….ಹೋರು… ಸೋಡ ಮಾತ್ರ….ಹಾಕ್ತ್ರಂಬ್ರು ಕಾಣಿ
ಹೋಟ್ಲಂಗೆ ತಿಂದ್ಕಂಡು… ಹೊಟ್ಟಿಉರೀ…
ಬಾಯ್ಮುಚ್ಕಂಡ್… ಬಿಲ್ಕೊಟ್… ಬತ್ತಾಇರಿ… ಹ್ವಾ… ಆ… ಆ…

ಹೋಟ್ಲಂಗೆ ಬೆಳ್ಗತಿಗೆ… ಚಾ-ತಿಂಡಿ ಮಾಡುಕೆ… ಏಗ್ಳೀಕೂ ಹೋಪ್ಕಾಗ ರೀ… ಹ್ವಾ… ಆ… ಆ…
ಅತ್ಲಾಯಿ ದುಡ್ಡ್ ಹಾಳ್… ಇತ್ಲಾಯಿ ಹೊಟ್ಟಿ ಹಾಳ್… ಏಗ್ಳೀಕೂ ಹೋಪ್ಕಾಗ ರೀ… ಹ್ವಾ… ಆ… ಆ…

ಯಾರಾರು ಚಾ ಕುಡ್ಸ್ರೆ… ಕುಡುಕ್ಹೋಯ್ಬೆಡಿ
ಕುಡ್ದ್ರ್ ಸೈತಾ ಬಿಲ್ಮಾತ್ರ… ಕೊಡುಕೋಯ್ಬೇಡಿ
ಹೊಟ್ಲಂಗೆ ಸೋಂಪು… ತಿಂಬ್-ಕಾಗ ಮರ್ರೆ

ಹಶುವಾದ್ರೆ ಒಂಚೂರ್… ತಡ್ಕಂಬಿಡಿ
ಮನ್ಯಂಗೇ ಊಟ ಮಾಡಿರೆ… ಒಳ್ಳೇದ್ ಬಿಡಿ
ಹೋಟಲಿಗೆ ದುಡ್ಡು… ಹಾಕುಕಾಗ ಕಾಣಿ

ಹೋ… ಟ್ಲಂಗೆ ರುಚಿಯಾತ್… ಆ ಪೊಕ್ಕ್ ತಿಂಡಿ
ತಿಂ…ದಾರ ಮೇಲಾಪ್ದ್ ದುಡ್ ದಂಡ ಕಾಣಿ
ಯೇಗ್ಳೀಕು ತಿಂಬುಕಾಗ ಹೋಟ್ಲಂಗೇರೀ….
ಅಪ್ರೂಪಕ್ ಒಂದ್ಸರ್ತಿ ಹೋಯ್ಲಕ್ಕ್ ರೀ

ಹೋಟ್ಲಂಗೆ ಬೆಳ್ಗತಿಗೆ… ಚಾ-ತಿಂಡಿ ಮಾಡುಕೆ… ಏಗ್ಳೀಕೂ ಹೋಪ್ಕಾಗ ರೀ… ಹ್ವಾ… ಆ… ಆ…
ಬಾಕಿ ಸಮಚಾರ… ಎಂತದೂ ಕಾಂತಿಲ್ಯಲೇ… ಮತ್ ಸಿಕ್ವಾ ಹಾಂಗಾರೆ ಹ್ವಾಯ್… .. ಹ್ವಾ… ಆ… ಆ…

ಮೂಲ ಹಾಡು: ‘ಪರಮಾತ್ಮ’ ಚಿತ್ರದ ‘ಕತ್ಲಲ್ಲಿ ಕರಡೀಗೆ… ಜಾಮೂನು ತಿನಿಸೋಕೆ… ಯಾವತ್ತೂ ಹೋಗ್ಬಾರ್ದು ರೀ…’
ಕೃಪೆ: kannadalyrics.com

ಕತ್ಲಲ್ಲಿ ಕರಡೀಗೆ… ಜಾಮೂನು ತಿನಿಸೋಕೆ… ಯಾವತ್ತೂ ಹೋಗ್ಬಾರ್ದು ರೀ… ಆ… ಆ… ಆ…
ಅತ್ಲಾಗೆ ಆ ಹುಡುಗಿ… ಇತ್ಲಾಗೆ ಈ ಹುಡುಗಿ… ಯಾವತ್ತೂ ಇರ್ಬಾರ್ದು ರೀ… ಆ… ಆ… ಆ…

ಹೊಸ ಹುಡುಗಿ ಕೈಯಲ್ಲಿ… ಕೆಂಪಾದ ಗೋರಂಟಿ
ಹಳೆ ಗೆಳತಿ ಕೆಮ್ಮಿದರೆ… ಪ್ರಳಯಾನೇ ಗ್ಯಾರಂಟಿ
ಒಬ್ಳನ್ನೇ ಲವ್ ಮಾಡಿ ಚೆನ್ನಾಗಿರಿ…
ಇನ್ನೊಬ್ಳ ಫೋನ್ ನಂಬರ್ ಇಟ್ಕೊಂಡಿರಿ… ಆ… ಆ… ಆ…

ಅತ್ಲಾಗೆ ಆ ಹುಡುಗಿ… ಇತ್ಲಾಗೆ ಈ ಹುಡುಗಿ… ಯಾವತ್ತೂ ಇರ್ಬಾರ್ದು ರೀ… ಆ… ಆ… ಆ…
ಕತ್ಲಲ್ಲಿ ಕರಡೀಗೆ… ಜಾಮೂನು ತಿನಿಸೋಕೆ… ಯಾವತ್ತೂ ಹೋಗ್ಬಾರ್ದು ರೀ… ಆ… ಆ… ಆ…

ಹುಡುಗೀರ ಮನಸಲ್ಲಿ… ಏನೇನಿದೆ
ತಿಳ್ಕೊಳ್ಳೋ ತಾಕತ್ತು… ನಮಗೆಲ್ಲಿದೆ
ಪ್ರಾಬ್ಲಮ್ಮೇ ಇರದ… ಫೀಮೇಲು ಇಲ್ಲ

ಸಿಕ್ಸರ್ರು ಹೊಡಿಬೋದು… ಬ್ಯಾಟಿಲ್ಲದೆ
ಪ್ರೀತ್ಸೋಕೆ ಆಗಲ್ಲ… ಡೌಟಿಲ್ಲದೆ
ಅನುಮಾನ ಇರದ… ಅನುರಾಗ ಇಲ್ಲ

ಮಾ…ಡರ್ನು ಪ್ರೇಮಕ್ಕೆ ಮೈಲೇಜು ಕಮ್ಮಿ
ಸೆಲ್…. ಪೋನು ಬಂದ್ ಮೇಲೆ ಹಿಂಗಾಯ್ತು ಸ್ವಾಮಿ
ಲವ್ವಲ್ಲಿ ಕಣ್ಣೀರು… ಕಂಪಲ್ಸರೀ…
ಯಾವ್ದಕ್ಕೂ ಕರ್ಚೀಫು… ಇಟ್ಕೊಂಡಿರಿ… ಆ… ಆ… ಆ…

ಕತ್ಲಲ್ಲಿ ಕರಡೀಗೆ… ಜಾಮೂನು ತಿನಿಸೋಕೆ… ಯಾವತ್ತೂ ಹೋಗ್ಬಾರ್ದು ರೀ… ಆ… ಆ… ಆ…
ಅತ್ಲಾಗೆ ಆ ಹುಡುಗಿ… ಇತ್ಲಾಗೆ ಈ ಹುಡುಗಿ… ಯಾವತ್ತೂ ಇರ್ಬಾರ್ದು ರೀ… ಆ… ಆ… ಆ…

ಯಾರಾನ ಕೈ ಕೊಟ್ರೆ… ಪಾರ್ಟಿ ಕೊಡಿ
ನೆನಪೆಲ್ಲಾ ಸೋಪ್ಹಾಕಿ… ತೊಳ್ಕೊಂಡ್ ಬಿಡಿ
ಕಣ್ಣಲ್ಲಿ ಸೋಪು… ಹೋಗ್ಬಾರ್ದು ಕಣ್ರೀ

ಟೈಮ್ ಇದ್ರೆ ಒಂಚೂರು… ದುಃಖ ಪಡಿ
ಮೆಸ್ಸೇಜು ಬರಬಹುದು… ಕಾಯ್ತಾ ಇರಿ
ಹೃದಯಕ್ಕೆ ಗ್ಯಾಪು… ಕೊಡಬಾರ್ದು ಕಣ್ರೀ

ಬೆನ್ನ…ಲ್ಲಿ ಹುಣ್ಣಂತೆ ಆ ಫಸ್ಟ್ ಲವ್ವು
ಯಾ…ಮಾರಿ ಅಂಗಾತ ಮಲ್ಕೊಂಡ್ರೆ ನೋವು
ಎಲ್ಲಾನು ಮರೆಯೋಕೆ ಹೋಗ್ಬಾರ್ದು ರೀ…
ಕೆರೆಯೋಕೆ ಹುಣ್ಣೊಂದು ಇರಬೇಕು ರೀ… ಆ… ಆ… ಆ…

ಕತ್ಲಲ್ಲಿ ಕರಡೀಗೆ… ಜಾಮೂನು ತಿನಿಸೋಕೆ… ಯಾವತ್ತೂ ಹೋಗ್ಬಾರ್ದು ರೀ… ಆ… ಆ… ಆ…
ಬಾಕೀ ಸಮಾಚಾರು… ಬ್ರೇಕ್ ಕೆ ಬಾದ್ ಅಂತೀನಿ… ನನ್ನನ್ನು ನಂಬ್ಕೊಂಡಿರಿ… ಆ… ಆ… ಆ…


ಕನ್ನಡ ಪಿಚ್ಚರ್ ಕುಂದಾಪ್ರ ಕನ್ನಡದಗೆ ಬಂದ್ರೆ ಹೀಂಗ್ ಇರತ್ತಾ ಕಾಣಿ….

ಕುಂದಾಪ್ರ ಟೈಟಲ್                                                                 ಮೂಲ ಟೈಟಲ್ 

——————————————————————————————-

ಕಬ್ಬಿನಾಲಿ ———————————————- ಆಲೆಮನೆ

ಆಟ ಜೋಡಾಟ —————————————– ಆಟ ಹುಡುಗಾಟ

ಅವ್ಳೆ ನನ್ ಹೆಣ್ಣ್ —————————————– ಅವಳೇ ನನ್ನ ಹುಡುಗಿ

ಅಲ್ಲಿ ಗೋಪಾಲಚಾರಿ ಇಲ್ಲಿ ವಿಶ್ವನಾಥ ಆಚಾರಿ —————- ಅಲ್ಲಿ ರಾಮಾಚಾರಿ ಇಲ್ಲಿ ಬ್ರಹ್ಮಚಾರಿ

ಅನಂತನ ಪಚೀತಿ ————————————— ಅನಂತನ ಅವಾಂತರ

ಬಾ ಹುಲ್ಲೆ ಹೊಡಿ ಮಂಚಕೆ ——————————– ಬಾ ನಲ್ಲೇ ಮಧುಚಂದ್ರಕೆ

ಬಾರೆ ನನ್ ಕೊಂಗಾಟದ ಹೆಣೆ —————————– ಬಾರೆ ನನ್ನ ಮುದ್ದಿನ ರಾಣಿ

ಬೆರ್ಚಪ್ಪ ———————————————– ಬೆದರು ಬೊಂಬೆ

ತಿಂಗಳ ಬೆಳ್ಕ್ ಹೆಣ್ಣ್ ————————————- ಬೆಳದಿಂಗಳ ಬಾಲೆ

ಬಣ್ಣದ್ ಯಾಸ —————————————– ಬಣ್ಣದ ವೇಷ

ಕಡಿಕೆ ————————————————- ಅನಂತರ

ಅಂಬ್ಡ್ ———————————————— ಅವಳಿ ಜವಳಿ

ಅವ್ರೆ ನಮ್ಮನಿ ಅವ್ರ್ ————————————- ಅವನೆ ನನ್ನ ಗಂಡ

ಅಳಿಯ ಜಗ್ಲೀ ತಗ್ಗಿಳಿಯ ———————————- ಅಳಿಯ ಮನೆ ತೊಳಿಯ

ಚಂದ ಗ್ವಾಪಿ ——————————————– ಚಂದನದ ಗೊಂಬೆ

ತೆಂಗು-ಅಡ್ಕಿಯ ತ್ವಾಟ ———————————– ಚಂದವಳ್ಳಿಯ ತೋಟ

ಚಿಕ್ಕಿ ————————————————— ಚಿಕ್ಕಮ್ಮ

ಶೆಣ್ಣಯ್ಯ ———————————————– ಚಿಕ್ಕೆಜಮಾನ್ರು

ದಾವ್ ————————————————- ದಾಹ

ದೈವದ್ ಕೊಲ —————————————— ದೈವ ಲೀಲಾ

ಗರ್ಗರ್ ಮಂಡಲ ಮಧ್ಯದಗೆ ——————————- ಧರಣಿ ಮಂಡಲ ಮಧ್ಯದೊಳಗೆ

ಬಿಲಾಸ್ ಬಿಟ್ ಮಗ ————————————– ದಾರಿ ತಪ್ಪಿದ ಮಗ

ಹರ್ಕಿ ಆಟ ———————————————- ದೇವರ ಆಟ

ಕಾಣ್ಕಿ ಡಬ್ಬಿ ——————————————— ದೇವರ ದುಡ್ಡು

ಮೆಟ್ಕಲ್ ಗುಡ್ಡಿ ಮೇಲೆ ———————————— ಎಡಕಲ್ಲು ಗುಡ್ಡಧ ಮೇಲೆ

ಕೋಳಿ ಗೂಡ್ —————————————— ಗೀಜಗನ ಗೂಡು

ಗುಡ್ಡಿ ಹೆಣ್ಣ್ ——————————————— ಗಿರಿ ಕನ್ಯೆ

ಹಗಲ್ಯಾಸ ——————————————— ಹಗಲು ವೇಷ

ಮಕ್ಳಾಟಿಕಿ ಹೆಣ್ಣ್ —————————————- ಹುಡುಗಾಟದ ಹುಡುಗಿ

ಸಾಲಿನ್ ಬಲಿ——————————————- ಜೇಡರ ಬಲೆ

ಉಪ್ಪಿನಕೋಟೆ —————————————– ಕಾಕನ ಕೋಟೆ

ಕಣಾಲಿ ಪಲ್ಯ ——————————————- ಕಲಾಸಿ ಪಾಳ್ಯ

ಮದಿ ಕಾಗ್ದ ——————————————— ಲಗ್ನ ಪತ್ರಿಕೆ

ಕುಟ್ಟಿ ಕೀಸು ——————————————– ಮಿಂಚಿನ ಓಟ

ಆಸಾಡೀ ಒಡ್ರ್. —————————————– ಮುಂಗಾರು ಮಳೆ

ಹಳ್ಳಿಹೊಳೆ ——————————————— ನಾಗರಹೊಳೆ

ನಾ ನಿನ್ ಬೆಚ್ಚುದಿಲ್ಲ ————————————– ನಾ ನಿನ್ನ ಬಿಡಲಾರೆ

ದೇವ್ರ್ ಹಾವ್——————————————– ನಾಗರಹಾವು

ಊರ್ಬದಿ ಗಂಡ್ —————————————– ನಮ್ಮೂರ ಹುಡುಗ

ನಮ್ಮೂರಿನ್ ಕಿಸ್ಕಾರ್ ಹೂವೇ —————————— ನಮ್ಮೂರ ಮಂದಾರ ಹೂವೇ

ನಮ್ಮನಿ ಅವ್ಳದ್ ಮದಿ ————————————- ನನ್ ಹೆಂಡ್ತಿ ಮದುವೆ

ನಮ್ಮೂರ್ ಉಮ್ಮಲ್ತಿ ————————————– ನಮ್ಮೂರ ದೇವತೆ

ಹ್ವಾಯ್ ನಾವ್ ಇಪ್‌ದೇ ಹೀಂಗೆ —————————- ನೋಡಿ ಸ್ವಾಮಿ ನಾವಿರೋದೇ ಹೀಗೆ

ಕೊರಾಜಿ ಐ ಲವ್ ಯೂ ———————————– ಒರಟ ಐ ಲವ್ ಯೂ

ಆನಗಳ್ಳಿ ಪಾಂಡವರು ————————————- ಪಡುವಾರಳ್ಳಿ ಪಾಂಡವರು

ಪಿರ್ಕಿ ನನ್ ಮಗ —————————————– ತರ್ಲೆ ನನ್ನಮಗ

ಕುಂದಾಪ್ರ ಕನ್ನಡಿಗ ————————————— ವೀರ ಕನ್ನಡಿಗ

ಉಡ್ಪಿ ದಾದಾ ಎಮ್.ಬಿ.ಬಿ.ಎಸ್—————————– ಉಪ್ಪಿದಾದ ಎಮ್.ಬಿ.ಬಿ.ಎಸ್

ಕುಂದಾಪುರದಲ್ಲಿ ಕಾಯ್- ಕಳ್ಳ —————————— ಸಿಂಗಪೂರಿನಲ್ಲಿ ರಾಜಾ ಕುಳ್ಳ


ರಿಷಿ ಸಿನಿಮಾದ “ನಾನು ಒತ್ತಾರೆ ಎದ್ಬಿಟ್ಟು…” ಹಾಡನ್ನು ಕುಂದಾಪ್ರ ಬದಿ ಕೆಲ್ಸದ್ ಹೆಣ್ಣ್ ಮತ್ತ್ ಮನಿ ಯಜ್ಮಾನ್ತಿ ಮಾತಾಡುವಂಗೆ ಬರ್ದ್ರೆ ಹ್ಯಾನ್ಗಿರತ್ತ್ ಕಾಣಿ…

ಈ ಪದ್ಯ ಕೇಂತಾ ಓದ್ರೆ ಇನ್ನೂ ಲಾಯ್ಕಿರತ್ತ್.. ಅದ್ಕೆ ಪದ್ಯದ ವಿಡಿಯೋ ಇಲ್ಲೇ ಪೋಸ್ಟಿನ ತುದಿಯಲ್ ಹಾಕಿದೆ ಕಾಣಿ….

ನಾಳೆ ಬೆಳ್ಮುಚ್ ಬೇಗೆದ್ದು..ಬಚ್ಲ ಒಲಿಗೆ ಕಿಚ್-ಒಟ್ಟಿ..ಗಂಟಿ ಎಬ್ಬಿ ಬರ್ಕ್ ಹೆಣೆ…
ಚೂರ್ ಚಾ ಇದ್ರೆ ಕುಡ್ಕಂಡ್ ..ಆಂಗ್ಳಕ್ಕೆ ನೀರ್ ಹಾಕಿ… ರಂಗೋಲಿ ಹಾಕ್ಕ್ ಹೆಣೆ…
ಹಾಡಿ ಬದಿಗೋಯಿ ಗುಡ್ಸ್ಕಂಡ್ …ದರ್ಲಿ ಒಟ್ಟ್-ಮಾಡ್ಕಂಡ್… ಗೆದ್ದಿಗ್ ಸುಡ್ಮಣ್ಣ್ ಹಾಕ್ಕ್ .. ಹೆಣೆ…
ಬೇಗ ಪಾತ್ರ ತೊಳ್ದಿಟ್ಟು…ಮನಿ ಗುಡ್ಸಿ ಒರ್ಸಿಟ್ಟು…ಬಟ್ಟಿ ವಗುಕೆ ಹೋಯ್ಕ್ ಹೆಣೆ…

ಸುಮ್ನ್ ಆಯ್ಕಣಿ ಅಮ್ಮ ….ಕೊಡುದ್ ನೂರ್ ರೂಪಾಯ್ ಸಂಬ್ಳ… ಮಾಡೂಕ್ ನಂಗ್-ಎಡುದಿಲ್ಲ…ಹೋಯ್…ಹೋಯ್

ಗಂಟಿಗ್ ಅಕ್ಕಚ್ ಕೊಟ್ಟೀಕಿ.. ಹಾಲ್ ಕರ್ದ್ ಕ್ಯಾನಿಗ್ ಹಾಕಿ…ಡೈರಿಗೆ ಕೊಟ್ಟ್ ಬರ್ಕ್ ಹೆಣೆ…
ಗುಡ್ಡೀಗ್ ಹೋಯ್ ಸೊಪ್ಪ್ ಕೊಯ್ದ್… ಹೊರಿ ಕಟ್ಟಿ ಹೊತ್ತಾಕಿ…. ಹಟ್ಟಿಗ್ ಸೊಪ್ಪ್ ಹಾಕ್ಕ್ ಹೆಣೆ…
ದೆನಿನ್ ಶೆಗ್ಣಿ ಎಲ್ಲ ಬಾಚಿಕಿ… ಆಂಗ್ಳಕ್ಕೆ ನೀರ್ ಹಾಕಿ… ಶೆಗ್ಣಿ ಹಾಕಿ ಸಾರ್ಸ್ಕ್ ಹೆಣೆ…
ಗೊಬ್ರ್ ಹೆಡ್ಗಿ ತಕ್ಕಂಡ್…. ಗೊಬ್ರ ಗುಂಡಿ ಗೊಬ್ರ ತೆಗ್ದ್…ತೆಂಗಿನ್ ಮರ್ನ್ ಬುಡ್ಕ್ ಹಾಕ್ಕ್ ಹೆಣೆ..

ಸುಮ್ನ್ ಆಯ್ಕಣಿ ಅಮ್ಮ ….ಕೊಡುದ್ ನೂರ್ ರೂಪಾಯ್ ಸಂಬ್ಳ… ಮಾಡೂಕ್ ನಂಗ್-ಎಡುದಿಲ್ಲ…ಹೋಯ್…ಹೋಯ್

ದೊಡ್ಡ್ ಕೊಡ್ಪಾನ ಹಿಡ್ಕಂಡ್… ಬಾಮಿ ಕಟ್ಟಿಗೆ ಹೋಯಿ, ಬಚ್ಲ್ ಹರಿಗೆ ನೀರ್ ಹಾಕ್ಕ್ ಹೆಣೆ,
ಹರಿ ತುಂಬ್ಸಿ ಆರ್ ಮೇಲೆ, ಹೂವಿನ್ ಗುತ್ತಿ ಬುಡಕ್ಕೆ, ನಾಕ್ ಚಂಬ್ ನೀರ್ ಹಾಕ್ಕ್ ಹೆಣೆ…
ಗಂಜಿ ಒಂದ್ಮುಷ್ಟಿ ಉಂಡ್‌ಕಂಡ್, ಸಣ್ಣ್ ಕೊಡ್ರಿ ಹಿಡ್ಕಂಡ್, ಸೌದಿ ಕೊಳ್ಳಿ ಒಡಿಕ್ ಹೆಣೆ..
ಎಲ್ಲಾ ಕೆಲ್ಸಾನೂ ಮಗ್ಸ್‌ಕಂಡ್…ಹೆಂಗಸ್ರ್-ಒಟ್ಟಿಗೆ ಸೇರ್‌ಕಂಡ್ ಗೆದ್ದಿ ನೆಟ್ಟಿಗೆ ಹೋಯ್ಕ್ ಹೆಣೆ…

ಸುಮ್ನ್ ಆಯ್ಕಣಿ ಅಮ್ಮ ….ಕೊಡುದ್ ನೂರ್ ರೂಪಾಯ್ ಸಂಬ್ಳ… ಮಾಡೂಕ್ ನಂಗ್-ಎಡುದಿಲ್ಲ…ಹೋಯ್…ಹೋಯ್

————————————————————————————–

ಮೂಲ ಹಾಡ್ ಬೇಕಿದ್ರೆ ಇಲ್ಲಿತ್ತ್ ಕಾಣಿ…
(ಕೃಪೆ:http://www.kannadalyrics.com)
ರಿಷಿ (2005) – ನಾನು ಒತ್ತಾರೆ.

ನಾನು ಒತ್ತಾರೆ ಎದ್ಬುಟ್ಟು ನಿನ್ ಮಾರೆ ನೋಡ್ಬುಟ್ಟು ಕೈ ಜೋಡ್ಸಿ ನಿಲ್ತೀನ್ ಕಣೆ
ಬೇಗ ಬೇಡ್ ಕಾಫಿ ತಂದ್ಬುಟ್ಟು ನಿನ್ ಕಾಲ ಒತ್ಬುಟ್ಟು ಬಗ್ ಬಗ್ಸಿ ಕೊಡ್ತೀನ್ ಕಣೆ
ಕಾಫಿ ಸೀಗಿಲ್ಲ ಅಂತ ಒದ್ಬುಟ್ರೆ ನಿನ್ ಬೆಳ್ಳ ಕಪ್ಪಲ್ಲಿ ಅದ್ತೀನ್ ಕಣೆ
ಈ ಸಕ್ರೆಯ ಗೊಂಬೆಗೆ ಸಕ್ಕರೆ ಯಾಕಂತ ಹಲ್ ಗಿಂಜಿ ನಿಲ್ತೀನ್ ಕಣೆ

I love you love you da I really love you da I truely love you da ಹೇ ಹೇ

ನಿಂಗೆ ಒಳ್ಳೆಣ್ಣೆ ಹಚ್ಬುಟ್ಟು ಮೈಯೆಲ್ಲಾ ನೀವ್ಬುಟ್ಟು ನಿಟಿಕೆ ತೆಗಿತೀನ್ ಕಣೆ
ಜಳಕ ಮಾಡ್ಸುತ್ತಾ ಮಾಡ್ಸುತ್ತಾ ಬೆಳ್ ಬೆಳ್ಳೆ ಬೆನ್ನನ್ನ ಮುದ್ದಾಡ್ತಾ ತಿಕ್ತೀನ್ ಕಣೆ
ಕೀರು ಉಪ್ಪಿಟ್ಟು ಒಬ್ಬಟ್ಟು ನಿಪ್ಪಿಟ್ಟು ತಂಬಿಟ್ಟು ಎಲ್ಲಾ ನಾ ಮಾಡ್ತೀನ್ ಕಣೆ
ನಿನ್ ಮಡ್ಲಲ್ಲಿ ಕೂರ್ಸಕಂಡು ಸೊಂಟಾನ ತಬ್ಗಂಡು ತುತ್ತುತ್ತು ತಿನ್ಸ್ತೀನಿ ಕಣೆ

I love you love you da I really love you da I truely love you da ಹೇ ಹೇ

ಅಹಾ ಸಂತೆಗೆ ಕರಕೊಂಡು ಸೀರೆನ್ನ ಕೊಂಡ್ ಕ್ಕೊಂಡು ನಿಂಗುಡ್ಸಿ ನೋಡ್ತೀನ್ ಕಣೆ
ಅಲ್ಲಿ ತೊಟ್ಲಲ್ಲಿ ಕೂತ್ಕಂಡು ಮಂಡಕ್ಕಿ ತಿಂದ್ಕಂಡು ಎತ್ಕಂಡೆ ಬತ್ತೀನ್ ಕಣೆ
ಆಹಾ ಬೆಳದಿಂಗಳ್ ರಾತ್ರೇಲಿ ಮುಂಜಾನೆ ಜೋಕಾಲಿ ಅಂಗ್ಳಾನೆ ಮಂಜಿನ್ ಕೋಣೆ
ಇಂಥಾ ಮುಂಗೋಪ ಬಿಟ್ಬುಟ್ಟು ಇನ್ನಾರೊ ನಂಬುಟ್ಟು ಬಾಬಾರೆ ನನ್ನ ಜಾಣೆ
I love you love you da I really love you da I truely love you da ಹೂ ಹೂ


ರಿಷಿ ಸಿನಿಮಾದ ನಾನು ಒತ್ತಾರೆ ಎದ್ಬುಟ್ಟು…ಹಾಡು ಕುಂದಾಪ್ರಕ್ಕೆ ಬಂದ್ರೆ…ಹೀಂಗ್ ಆತ್ತ್ ಕಾಣಿ…
ರಾಜು ಅನಂತ ಸ್ವಾಮೀ ಹಾಡಿದ್ ಈ ಪದ್ಯ ಕಂಡ್ರೆ ನಂಗೆ ಮಸ್ತ್ ಖುಷಿ…

ಈ ಪದ್ಯ ಕೇಂತಾ ಓದ್ರೆ ಇನ್ನೂ ಲಾಯ್ಕಿರತ್ತ್.. ಅದ್ಕೆ ಪದ್ಯದ ವಿಡಿಯೋ ಇಲ್ಲೇ ಪೋಸ್ಟಿನ ತುದಿಯಲ್ ಹಾಕಿದೆ ಕಾಣಿ….

ನಾನು ಬೆಳ್ಮುಚ್ ಎದ್ಕಂಡ್..ನಿನ್ ಸೊಡ್ಡ್ ಕಂಡ್ಕಂಡ್.. ಕೈ ಮುಕ್ಕಂಡ್ ನಿಂತ್ಕಂತೆ ಹೆಣೆ…
ಬೇಗ ಚಾ ಕಣ್ಣ್ ತಂದ್ಕೋಟ್ಟು.. ನಿನ್ ಕಾಲ ಬುಡ್ದಗಿಟ್ಟು… ಚೂರ್-ಚೂರೆ ಕುಡ್ಸ್ತೆ ಹೆಣೆ…
ಚಾಕ್ ಸಕ್ರಿ ಕಮ್ಮಿ ಅಂದ್… ಕೊಯ್ಸಾಣಿ ನೀ ನೆಗ್ದ್ರೆ..ನಿನ್ ಬೆಟ್ಟನ್ನೇ ಮುಳಸ್ತೆ ಹೆಣೆ…
ಈ ಮ್ಯಾಮಿ ಮಿಟಾಯಿಗೆ.. ಸಕ್ರಿ ಎಂತಕ್ ಬೇಕ್ ಅಂದೇಳಿ.. ಹಲ್ ಚಿಲ್ಕಂಡ್ ನೆಗಾಡ್ತೆ ಹೆಣೆ…

ಸುಮ್ನಾ…ಯ್ಕೊ… ಏ ಗಡಾ.. ಕೊಂಗಾ…ಟ ಸಾಕ್ ಗಡಾ… ಚೊಣ್ಕಿ ತಾಗ್ದಂಗ್ ಆಡ್ಬೆಡ…ಹ್ವಾ..ಹ್ವಾ..

ನಿಂಗೆ ಎಳ್ಳೆಣ್ಣಿ ಹಚ್ಚಿ ಬಿಟ್…ನಿನ್ ಮಂಡಿಗಿಷ್ಟ್ ಹೊಯ್ದ್ ಬಿಟ್…ನೆಟ್ಗಿ ತೆಗಿತೆ ಹೆಣೆ…
ನಿನ್ನನ್ ಮೀಸುತ್ತಾ ಮೀಸುತ್ತಾ…ಬಚ್ಲಮನಿ ಹರಿಯಗೆ…ನೀರ್-ಪೂರ್ತಿ ಖಾಲಿ ಹೆಣೆ…
ಕಡ್ಬು ಪತ್ರೊಡೆ ಮಾಡಿಟ್..ಗೆಣ್ಗಿನ ಹಪ್ಳ ಸುಟ್ಬಿಟ್ಟ್…ಬಾಳೆಲೆ ಹಾಕ್ತೆ ಹೆಣೆ…
ನಾ ಚಕ್ರಮಟ್ಟಿ ಹಾಯ್ಕಂಡ್…ನಿನ್ ಮಟ್ಟಿ ಮೇಲ್ ಕೂರ್‌ಸ್ಕಂಡ್ , ನಿಂಗ್ ಒಂದ್ ಮುಷ್ಟಿ ಉಣ್ಸ್ತೆ ಹೆಣೆ…

ಸುಮ್ನಾ…ಯ್ಕೊ… ಏ ಗಡಾ.. ಕೊಂಗಾ…ಟ ಸಾಕ್ ಗಡಾ… ಚೊಣ್ಕಿ ತಾಗ್ದಂಗ್ ಆಡ್ಬೆಡ…ಹ್ವಾ..ಹ್ವಾ..

ಸಂತಿಗ್ ಕರ್ಕಂಡೋಯಿ…ವಾಯ್ಲ್ ಸೀರಿ ತೆಗ್ಸಿಕೊಟ್ಟ್..ನಿಂಗ್ ಉಡ್ಸಿ ಬಿಡ್ತೆ ಹೆಣೆ…
ಅಲ್ ಹೋಟ್ಲಲ್ ಕೂಕಂಡ್…ಗೋಳಿಬಜಿ ಬನ್ಸ್ ತಿಂದ್…ತೀರ್ಗಾಡ್ಕ ಬಪ್ಪ ಹೆಣೆ…
ತಿಂಗಳ್ ಬೆಳ್ಕಿನ್ ರಾತ್ರಿಯಗೆ..ಆಂಗ್ಳದಗೆ ಕೂಕಂಡ್…ಪಟ್ಟಾಂಗ ಹೊಡುವ ಹೆಣೆ…
ಸೊಡ್ಡ್ ಬೀಗ್ಸೂದ್ ಬಿಟ್ಟೀಕಿ…ಒಂಚೂರ್ ನೆಗಾಡ್ತಾ ಬಾ ಮರತಿ..ನನ್ ಕೊಂಗಾಟದ ಗೊಂಬಿ ಹೆಣೆ…

ಸುಮ್ನಾ…ಯ್ಕೊ… ಏ ಗಡಾ.. ಕೊಂಗಾ…ಟ ಸಾಕ್ ಗಡಾ… ಚೊಣ್ಕಿ ತಾಗ್ದಂಗ್ ಆಡ್ಬೆಡ…ಹ್ವಾ..ಹ್ವಾ..
———————————————————————————————

ಮೂಲ ಹಾಡ್ ಬೇಕಿದ್ರೆ ಇಲ್ಲಿತ್ತ್ ಕಾಣಿ…
(ಕೃಪೆ:http://www.kannadalyrics.com)
ರಿಷಿ (2005) – ನಾನು ಒತ್ತಾರೆ.

ನಾನು ಒತ್ತಾರೆ ಎದ್ಬುಟ್ಟು ನಿನ್ ಮಾರೆ ನೋಡ್ಬುಟ್ಟು ಕೈ ಜೋಡ್ಸಿ ನಿಲ್ತೀನ್ ಕಣೆ
ಬೇಗ ಬೇಡ್ ಕಾಫಿ ತಂದ್ಬುಟ್ಟು ನಿನ್ ಕಾಲ ಒತ್ಬುಟ್ಟು ಬಗ್ ಬಗ್ಸಿ ಕೊಡ್ತೀನ್ ಕಣೆ
ಕಾಫಿ ಸೀಗಿಲ್ಲ ಅಂತ ಒದ್ಬುಟ್ರೆ ನಿನ್ ಬೆಳ್ಳ ಕಪ್ಪಲ್ಲಿ ಅದ್ತೀನ್ ಕಣೆ
ಈ ಸಕ್ರೆಯ ಗೊಂಬೆಗೆ ಸಕ್ಕರೆ ಯಾಕಂತ ಹಲ್ ಗಿಂಜಿ ನಿಲ್ತೀನ್ ಕಣೆ

I love you love you da I really love you da I truely love you da ಹೇ ಹೇ

ನಿಂಗೆ ಒಳ್ಳೆಣ್ಣೆ ಹಚ್ಬುಟ್ಟು ಮೈಯೆಲ್ಲಾ ನೀವ್ಬುಟ್ಟು ನಿಟಿಕೆ ತೆಗಿತೀನ್ ಕಣೆ
ಜಳಕ ಮಾಡ್ಸುತ್ತಾ ಮಾಡ್ಸುತ್ತಾ ಬೆಳ್ ಬೆಳ್ಳೆ ಬೆನ್ನನ್ನ ಮುದ್ದಾಡ್ತಾ ತಿಕ್ತೀನ್ ಕಣೆ
ಕೀರು ಉಪ್ಪಿಟ್ಟು ಒಬ್ಬಟ್ಟು ನಿಪ್ಪಿಟ್ಟು ತಂಬಿಟ್ಟು ಎಲ್ಲಾ ನಾ ಮಾಡ್ತೀನ್ ಕಣೆ
ನಿನ್ ಮಡ್ಲಲ್ಲಿ ಕೂರ್ಸಕಂಡು ಸೊಂಟಾನ ತಬ್ಗಂಡು ತುತ್ತುತ್ತು ತಿನ್ಸ್ತೀನಿ ಕಣೆ

I love you love you da I really love you da I truely love you da ಹೇ ಹೇ

ಅಹಾ ಸಂತೆಗೆ ಕರಕೊಂಡು ಸೀರೆನ್ನ ಕೊಂಡ್ ಕ್ಕೊಂಡು ನಿಂಗುಡ್ಸಿ ನೋಡ್ತೀನ್ ಕಣೆ
ಅಲ್ಲಿ ತೊಟ್ಲಲ್ಲಿ ಕೂತ್ಕಂಡು ಮಂಡಕ್ಕಿ ತಿಂದ್ಕಂಡು ಎತ್ಕಂಡೆ ಬತ್ತೀನ್ ಕಣೆ
ಆಹಾ ಬೆಳದಿಂಗಳ್ ರಾತ್ರೇಲಿ ಮುಂಜಾನೆ ಜೋಕಾಲಿ ಅಂಗ್ಳಾನೆ ಮಂಜಿನ್ ಕೋಣೆ
ಇಂಥಾ ಮುಂಗೋಪ ಬಿಟ್ಬುಟ್ಟು ಇನ್ನಾರೊ ನಂಬುಟ್ಟು ಬಾಬಾರೆ ನನ್ನ ಜಾಣೆ
I love you love you da I really love you da I truely love you da ಹೂ ಹೂ


‘ನೆನಪಿರಲಿ’ ಚಿತ್ರದ ‘ಕೂರಕ್ ಕುಕ್ರಳ್ಳಿ ಕೆರೆ’ ಹಾಡು ಕುಂದಾಪ್ರಕ್ಕೆ ಬಂದು ‘ಕೂಕಂಬ್ಕ್ ಮರವಂತೆ ಬೀಚ್’ ಆಯಿತ್ 🙂

 

ಹ್ವಾಯ್ ಯಾರದ್ ಹೆದ್ರಕಂಬರ್… ಅಂಡ್ಕಂಬರ್
ಹೊಕ್ಕಂಬರ್… ಮಂಡಿ ಜಪ್ಕಂಬರ್… ಹಳೀನ್ ಹಿಂಡಲಗೆ ಮಾತಾಡ್ವರ್… ಸಂತಿಯಗೆ ಪಿಸಿ-ಪಿಸಿ ಅಂಬರ್

ಕುಂದಾಪುರ್ದಂತ ತಾಲೋಕಗೆ ಆಯ್ಕಂಡ್… ಕಾಂಬುಕ್ ಬೇಕಾದ್ದೆಲ್ಲ ಇದ್ದೂ
ಹೊಳಿ, ಕಾಡ್, ಗುಡ್ಡಿ ಇದ್ರೂ… ಪ್ರೀತಿ ಮಾಡುಕ್ ಜಾಗ ಇದ್ರೂ
ಕಳ್ರ ಕಣಂಗೆ ಮಿಣ್ಣಗೆ ಹೊತ್ರ್ಯಲ್ಲ…
ಬನಿಯೇ… ಇಲ್ಕಾಣಿಯೇ… ನಾನ್ ಲವ್ ಮಾಡು ಸ್ಟೈಲ್ ಒಂಚೂರ್ ಕಲಿನಿಯೇ !!

ಕೂಕಂಬ್ಕ್ ಮರವಂತೆ ಬೀಚ್…ಬಾ ಬಾ… ಮೀಯುಕ್ ಕೋಟೇಶ್ವರ ಕೆರೆ… ಬಾ ಬಾ

ಕೂಕಂಬ್ಕ್ ಮರವಂತೆ ಬೀಚ್… ಮೀಯುಕ್ ಕೋಟೇಶ್ವರ ಕೆರೆ… ಲವ್ವಿಗೇ… ಈ ಲವ್ವಿಗೇ
ಕೊಡಚಾದ್ರಿ ಬೆಟ್ಟ ಇತ್ … ಈಚಿಗ್ ಮಾರ್ಣಕಟ್ಟಿ ಇತ್… ಲವ್ವಿಗೆ… ನಮ್ ಲವ್ವಿಗೆ
ಈ ಹೆದ್ರಿಕಿ ಬಿಟ್ಟಾಕಿ… ಲವ್ ಮಾಡ್ … ಲವ್ ಮಾಡ್… ಲವ್ ಮಾಡ್
ನೀ ಬಿಲಾಸ್ ಬಿಟ್ಟಾರೂ… ಲವ್ ಮಾಡ್… ಲವ್ ಮಾಡ್… ಲವ್ ಮಾಡ್

ಕುಂಭಾಶಿಯಗೆ ಪೂಜೆ ಹೆಳಿ… ಕೊಲ್ಲೂರಗೆ… ಜಪ ತಪ
ಕುಂಭಾಶಿಯಗೆ ಪೂಜೆ ಹೆಳಿ… ಕೊಲ್ಲೂರಗೆ… ಜಪ ತಪ… ಲವ್ವಿಗೆ… ನಮ್ಮಿಬ್ರ ಲವ್ವಿಗೆ
ನಾರ್ತಿನಲ್ಲಿ ಮೂಡ್ಗಲ್ ಬೆಟ್ಟ … ಈಸ್ಟಗೆ ಶಂಕ್ರನಾರ್ಣ ಇತ್… ಪೂಜಿಗೇ… ಲವ್ ಪೂಜಿಗೇ
ಈ ಹೆದ್ರಿಕಿ ಬಿಟ್ಟಾಕಿ… ಲವ್ ಮಾಡ್ … ಲವ್ ಮಾಡ್… ಲವ್ ಮಾಡ್
ನೀ ಬಿಲಾಸ್ ಬಿಟ್ಟಾರೂ… ಲವ್ ಮಾಡ್… ಲವ್ ಮಾಡ್… ಲವ್ ಮಾಡ್

ಗಲಾಟಿಯೇ ಇಲ್ಲ… ಬನಿ ಗಂಗೊಳ್ಳಿಯಲ್ಲಿ
ಮನ್ಸ್ ಬಿಚ್ಕಣಿ… ಮರ ಮರ ಗ್ವಾಯ್-ಮರ್ನ ಅಡೀಲಿ
ಹಲ್ಸ್ನಾಡಲ್ಲಿ ತಿರ್ಗಾಡುತ್ತ… ಹಲ್ಸ್ನಾಡಲ್ಲಿ ತಿರ್ಗಾಡುತ್ತ… ಮೂಡು ತಕಣಿ
ಹಳ್ಳಿಯರ್ ಕಣಂಗೆ… ಬದಕ್ತಾ ಒಳ್ಳೆದಾಯಿರಿನಿ

ಹ್ವಾಯ್ ಉಪ್ಪಿನಕುದ್ರು ಗೊಂಬೆಯಾಟ…. ಕಾಣಿ ಕಣ್ಬಿಟ್ಟು
ಯಕ್ಷಗಾನ ಬಯಲಾಟ ಕಂಡ್ಕಂಡ್… ಕಣ್ ಕಣ್ಣು ಬಿಟ್ಟು
ಕುಂದೇಶ್ವರನೇ… ಇಲ್ಲಿ ನಿಂತ್ಕಂಡಿದ್ದಾನೆ… ಪ್ರೀತಿಯಿಂದಲೇ… ಕುಂದಾಪ್ರವ ಕಾಯ್ತನೆ

ಪಾರಿಜಾತದಗೆ ಕಾಪಿ ಕುಡಿನಿ… ಶೆರಾನ್ ಗೆ ಉಂಡ್ಕ ಬನಿ… ಲವ್ವಿಗೆ… ರಿಚ್ ಲವ್ವಿಗೆ
ದುಡ್ಡಿದ್ರೆ ಪಿಚ್ಚರ್-ಹೋಟ್ಲು… ಇಲ್ದಿದ್ರೆ ಗುಡ್ಡಿ-ಹಕ್ಕ್ಲು… ಲವ್ವಿಗೆ… ಈ ಲವ್ವಿಗೆ
ಈ ಹೆದ್ರಿಕಿ ಬಿಟ್ಟಾಕಿ… ಲವ್ ಮಾಡ್ … ಲವ್ ಮಾಡ್… ಲವ್ ಮಾಡ್
ನೀ ಬಿಲಾಸ್ ಬಿಟ್ಟಾರೂ… ಲವ್ ಮಾಡ್… ಲವ್ ಮಾಡ್… ಲವ್ ಮಾಡ್

ಜಾತಿ ಕೆಟ್ರೂ ಸುಖ ಪಡ್ಕ್… ಜಾತಿ ಕೆಟ್ರೂ ಸುಖ ಪಡ್ಕ್… ಪ್ರೀತಿ ಮಾಡ್ ಹೆಣೆ
ನಾಳಿಗಾಪುದ್… ಇವತ್ತೇ ಆಯಿ ಹೊಯ್ಲಿ ಹೆಣೆ
ಹೊಕ್ಕಂಡ್… ಅಂಡ್ಕಂಡ್ ಮಾಡ್ವ… ಹೊಕ್ಕಂಡ್… ಅಂಡ್ಕಂಡ್ ಮಾಡ್ವ… ಗುಟ್ಟಿನ ಲವಮ್ಮ
ಸತ್ಯ ಹೇಳ್ ಹೆಣೆ… ಸತ್ತಿಕೂ ಲವ್ ಮಾಡ್ ಹೆಣೆ

ಜಾತಿನ್ ಸುಡು ಕಿಚ್ಚಿನ್ ಕಣಗೆ… ಪ್ರೀತಿ ಕಾಣ್ ಹೆಣೆ
ಮನ್ಸರೆಲ್ಲ ಒಂದೇ ಅಂದೇಳಿ… ಹೇಳ್ ನೀ ಹೆಣೆ
ಕುಂದಾಪ್ರ ಹಳ್ಯಗೆ… ಕಾರಂತ್ರ್ ಹುಟ್ಟಿದ್ರು… ಮೂಕಜ್ಜಿ ಕತೆಗೆ… ಜ್ಞಾನಪೀಠ ತಂದ್ಕೊಟ್ರು

ಸಮುದ್ರ ಬದಿ ಗಾಳಿ ಇತ್ತ್ … ಕಾಡೆಲ್ಲ ತಣ್ಣಗಿತ್ತ್… ಲವ್ವಿಗೇ… ಸ್ವೀಟ್ ಲವ್ವಿಗೇ
ಯಕ್ಷಗಾನದ್… ಪದ್ಯ ಇದೆ… ದರ್ಶಿನ-ಕೋಲದ ವಾದ್ಯ ಇತ್… ಪದ್ಯಕೆ … ಲವ್ ಪದ್ಯಕೆ
ಈ ಹೆದ್ರಿಕಿ ಬಿಟ್ಟಾಕಿ… ಲವ್ ಮಾಡ್ … ಲವ್ ಮಾಡ್… ಲವ್ ಮಾಡ್
ನೀ ಬಿಲಾಸ್ ಬಿಟ್ಟಾರೂ… ಲವ್ ಮಾಡ್… ಲವ್ ಮಾಡ್… ಲವ್ ಮಾಡ್

ಕೂಕಂಬ್ಕ್ ಮರವಂತೆ ಬೀಚ್…ಬಾ ಬಾ… ಮೀಯುಕ್ ಕೋಟೇಶ್ವರ ಕೆರೆ… ಬಾ ಬಾ

ಕೂಕಂಬ್ಕ್ ಮರವಂತೆ ಬೀಚ್… ಮೀಯುಕ್ ಕೋಟೇಶ್ವರ ಕೆರೆ… ಲವ್ವಿಗೇ… ಈ ಲವ್ವಿಗೇ
ಕೊಡಚಾದ್ರಿ ಬೆಟ್ಟ ಇತ್ … ಈಚಿಗ್ ಮಾರ್ಣಕಟ್ಟಿ ಇತ್… ಲವ್ವಿಗೆ… ನಮ್ ಲವ್ವಿಗೆ
ಈ ಹೆದ್ರಿಕಿ ಬಿಟ್ಟಾಕಿ… ಲವ್ ಮಾಡ್ … ಲವ್ ಮಾಡ್… ಲವ್ ಮಾಡ್
ನೀ ಬಿಲಾಸ್ ಬಿಟ್ಟಾರೂ… ಲವ್ ಮಾಡ್… ಲವ್ ಮಾಡ್… ಲವ್ ಮಾಡ್…

ಮೂಲ ಹಾಡು: ನೆನಪಿರಲಿ ಚಿತ್ರದ ಕೂರಕ್ ಕುಕ್ರಳ್ಳಿ ಕೆರೆ
ಕೃಪೆ: kannadalyrics.com

ಅರೆ ಯಾರ್ರೀ ಹೆದರ್‍ಕೊಳ್ಳೋರು… ಬೆದರ್‍ಕೊಳ್ಳೋರು
ಪೇಚಾಡೋರು… ಪರ್‍‍ದಾಡವ್ರು… ಮರಗಳ್ ಮರೆನಲ್ಲಿ ಮಾತಾಡವ್ರು…. ಮಾರ್ನಿಂಗ್ ಶೋನಲ್ಲಿ ಪಿಸ್ಗುಟ್ಟವ್ರು

ಮೈಸೂರ್ ಅಂತಾ ಜಿಲ್ಲೆಲಿದ್ದೂ… ಕಣ್ಣಿಗ್ ಬೇಕಾದ್ ನೋಟ ಇದ್ದೂ
ಹಳೆ ರಾಜ್ರು ಅಪ್ಣೆ ಇದ್ದೂ… ಪ್ರೀತಿ ಮಾಡೋಕ್ ಜಾಗ್ಗುಳ್ ಇದ್ದೂ
ಕದ್ದು ಮುಚ್ಚಿ ಓಡಾಡ್ತೀರಲ್ರೀ…
ಬನ್ರೀ… ನೋಡ್ರೀ… ನಾನ್ ಲವ್ ಮಾಡೊ ಸ್ಟೈಲ್ ಸ್ವಲ್ಪ ಕಲೀರೀ !

ಕೂರಕ್ಕ್ ಕುಕ್ಕ್ರಳ್ಳಿ ಕೆರೆ… ಬಾ ಬಾ… ತೇಲಕ್ ಕಾರಂಜಿ ಕೆರೆ… ಬಾ ಬಾ

ಕೂರಕ್ಕ್ ಕುಕ್ಕ್ರಳ್ಳಿ ಕೆರೆ… ತೇಲಕ್ ಕಾರಂಜಿ ಕೆರೆ… ಲವ್ವಿಗೇ… ಈ ಲವ್ವಿಗೇ
ಚಾಮುಂಡಿ ಬೆಟ್ಟ ಇದೆ… ಕನ್ನಂಬಾಡಿ ಕಟ್ಟೆ ಇದೆ… ಲವ್ವಿಗೆ… ನಂ ಲವ್ವಿಗೆ
ಈ ಭಯಬಿಸಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ
ಈ ದಿಗಿಲ್ ದಬ್ಬಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ

ಬಲ್ಮುರಿಲಿ ಪೂಜೆ ನೆಪ… ಎಡ್ಮುರಿಲಿ ಜಪ ತಪ
ಬಲ್ಮುರಿಲಿ ಪೂಜೆ ನೆಪ… ಎಡ್ಮುರಿಲಿ ಜಪ ತಪ… ಲವ್ವಿಗೆ… ನಿರ್ವಿಘ್ನ ಲವ್ವಿಗೆ
ನಾರ್ತಿನಲ್ಲಿ ಶ್ರೀರಂಗ್‍ಪಟ್ಣ… ಸೌತಿನಲ್ಲಿ ನಂಜನ್‍ಗೂಡು…ಪೂಜೆಗೇ… ಲವ್ ಪೂಜೆಗೇ
ಈ ಭಯಬಿಸಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ
ಈ ದಿಗಿಲ್ ದಬ್ಬಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ

ಗಲಾಟೆನೇ ಇಲ್ಲ ಬನ್ರೀ… ಗಲಾಟೆನೇ ಇಲ್ಲ ಬನ್ರೀ… ಗಂಗೊತ್ರಿಯಲ್ಲಿ
ಮನಸ್ಸು ಬಿಚ್ಕೊಳ್ರೀ… ಮರಮರ ಮರದ ಮರೇಲೀ
ಅರ್‍ಮನೆಲಿ ಅಡ್ಡಾಡುತ… ಅರ್‍ಮನೇಲಿ ಅಡ್ಡಾಡುತ… ಮೂಡು ತಗೊಳ್ರೀ
ರಾಜನ್ ತರಾನೇ… ಲವ್ವಲ್ ದರ್ಬಾರ್ ಮಾಡ್ಬಿಡ್ರೀ

ಹೇ ರಂಗನ್-ತಿಟ್ಟು ನೋಡಿಬಿಟ್ಟು… ಹಾಡ್ರಿ ಮುತ್ತಿಟ್ಟು
ಮುಡುಕುತೊರೆಲ್ ಮನಸು ಕೊಡ್ರಿ… ಕಣ್ಣಲ್ ಕಣ್ಣಿಟ್ಟು
ಕಾಳಿದಾಸನೆ… ಇಲ್ ರಸ್ತೆ ಆಗವ್ನೆ… ಪ್ರೀತಿ ಮಾಡೋವ್ರ್-ಗೆ… ಸರಿ ದಾರಿ ತೋರ್‍ತಾನೆ

ಕೆ.ಆರ್.ಎಸ್ ಅಲ್ಲಿ ಕೆಫೆ ಮಾಡಿ… ಬ್ಲಫ್ಫಿನಲ್ಲಿ ಬಫೆ ಮಾಡಿ… ಲವ್ವಿಗೆ… ರಿಚ್ ಲವ್ವಿಗೆ
ದುಡ್ಡಿದ್ರೆ ಲಲಿತ ಮಹಲ್… ಇಲ್ದಿದ್ರೆ ಒಂಟಿ ಕೊಪ್ಪಲ್… ಲವ್ವಿಗೆ… ಈ ಲವ್ವಿಗೆ
ಈ ಭಯಬಿಸಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ
ಈ ದಿಗಿಲ್ ದಬ್ಬಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ

ಜಾತಿ ಕೆಟ್ರು ಸುಖ ಪಡ್ಬೇಕ್… ಜಾತಿ ಕೆಟ್ರು ಸುಖ ಪಡ್ಬೇಕ್… ಪ್ರೀತಿ ಮಾಡಮ್ಮ
ನಾಳೆ ಆಗೋದು… ಇಂದೇ ಆಗಿ ಹೋಗ್ಲಮ್ಮಾ
ಕದ್ದು ಮುಚ್ಚಿ ಪ್ರೀತಿ ಮಾಡೋ… ಕದ್ದು ಮುಚ್ಚಿ ಪ್ರೀತಿ ಮಾಡೋ… ಕಳ್ಳ ಲವಮ್ಮ
ಸತ್ಯ ಹೇಳಮ್ಮ… ನಿಜ್ವಾದ್ ಪ್ರೀತಿ ಮಾಡಮ್ಮಾ

ಜಾತಿ ಸುಡೋ ಮಂತ್ರ ಕಿಡಿ… ಪ್ರೀತಿ ಕಣಮ್ಮಾ
ಮನುಜ ಮತ ವಿಶ್ವಪಥ… ಅಂಥ ಹೇಳಮ್ಮಾ
ತೀರ್ಥಹಳ್ಳಿಲಿ… ಕುವೆಂಪು ಹುಟ್ಟಿದ್ರು… ವಿಶ್ವಪ್ರೇಮನಾ… ಮೈಸೂರ್‍ಗೆ ತಂದ್ ಕೊಟ್ರು

ಮೈಸೂರೂ ಕೂಲಾಗಿದೆ… ಬೃಂದಾವನ ಗ್ರೀನಾಗಿದೆ… ಲವ್ವಿಗೇ… ಸ್ವೀಟ್ ಲವ್ವಿಗೇ
ನರಸಿಂ‍ಸ್ವಾಮಿ ಪದ್ಯ ಇದೆ…ಅನಂತ್‍ಸ್ವಾಮಿ ವಾದ್ಯ ಇದೆ… ಸಾಂಗಿಗೆ… ಲವ್ ಸಾಂಗಿಗೆ
ಈ ಭಯಬಿಸಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ
ಈ ದಿಗಿಲ್ ದಬ್ಬಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ

ಕೂರಕ್ಕ್ ಕುಕ್ಕ್ರಳ್ಳಿ ಕೆರೆ… ಬಾ ಬಾ… ತೇಲಕ್ ಕಾರಂಜಿ ಕೆರೆ… ಬಾ ಬಾ

ಕೂರಕ್ಕ್ ಕುಕ್ಕ್ರಳ್ಳಿ ಕೆರೆ… ತೇಲಕ್ ಕಾರಂಜಿ ಕೆರೆ… ಲವ್ವಿಗೇ… ಈ ಲವ್ವಿಗೇ
ಚಾಮುಂಡಿ ಬೆಟ್ಟ ಇದೆ… ಕನ್ನಂಬಾಡಿ ಕಟ್ಟೆ ಇದೆ… ಲವ್ವಿಗೆ… ನಂ ಲವ್ವಿಗೆ
ಈ ಭಯಬಿಸಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ
ಈ ದಿಗಿಲ್ ದಬ್ಬಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ


ಗಾಳಿಪಟದ “ಮಿಂಚಾಗಿ ನೀನು ಬರಲು” …ಕುಂದಾಪ್ರ ಕನ್ನಡದಗೆ…:)

(- ಅನುವಾದ ವಿಜಯರಾಜ್ ಕನ್ನಂತ್ )

ಎಲ್ಲ ಹಕ್ಕು ಕಾದಿರಿಸಲಾಗಿದೆ :-):-):-)

ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ
ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ
ನೀ ಇಲ್ದೆ ಕಿಚ್ಹ್ ಹಿಡ್ದಂಗಾಯಿ… ಎದಿಯೊಳಗೆ ಸೆಕಿಗಾಲ
ಇನ್ನಿಲ್ಯೇ ನಂಗೆ ಉಳ್ಗಾಲ…

ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ
ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ

ನಾ ನಿನ್ ಕನ್ಸಿಗೆ… ಬಾಡ್ಗಿಗೆ ಬಂದಿದ್ನೆ…
ತಿಂಗ್ಳ ಬಾಡ್ಗಿ ಕೊಟ್ ಹೋಪ್ಕೆ…ನಿಮ್ಮನಿಗೆ ಬತ್ತೆ ನಾ
ನಾ ಸರ್ತ ಮನ್ಸಿನ…ವರ್ತ್ಮಾನ ಹೇಳ್ವನೋ
ನಿನ್ನ್ ಕಂಡ್ ಕೂಡ್ಲೇ.. ಬಾಯ್ಬಂದ್ ಆಯ್ತ್ ಹೆಣೆ
ದಮ್ಮಯ್ಯ… ಓ ಹೆಣೆ… ನಿನ್ನ್ ಹಿಡ್ಕಂಡ್ ಬಾರ್ಸುದಾ.. (ಬಾರ್ಸುದ್ ಅಂದ್ರೆ ಇಲ್ಲಿ ನುಡ್ಸುದ್ ..ಹೊಡುದಲ್ಲ 🙂 )
ಇಲ್ ಕೇಣೆ..ಮೊದ್ಲೇ ಒಂಚೂರ್.. ಮರ್ಲ್ ನಂಗೆ

ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ
ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ

ನಿನ್ ಮನ್ಸಿನ್ ಪದ್ಯ.. ಕಡ ತಂದ್…. ನಾನೀಗ ಸಾಲಗಾರ
ವಟ್ಟಿ ಮಾಡಿ.. ಗೋಚ್ಕಂಡ್ ಹೋದ… ನೆನ್ಪನೆಲ್ಲ ಪಾಲ್ ಮಾಡ್ಕಂಬ ಬಾರಾ
ನಂಗೆಷ್ಟೇ ನೋವಾರೂ…ನಿಂಗ್ ನೋವ್ ಕೊಡುದಿಲ್ಲೇ …
ಇಲ್ ಕೇಣೆ… ಮೊದ್ಲೇ ಒಂಚೂರ್… ಪಿರ್ಕಿ ನಾನು…

ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ
ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ
ನೀ ಇಲ್ದೆ ಕಿಚ್ಹ್ ಹಿಡ್ದಂಗಾಯಿ… ಎದಿಯೊಳಗೆ ಸೆಕಿಗಾಲ
ಇನ್ನಿಲ್ಯೇ ನಂಗೆ ಉಳ್ಗಾಲ…



ಸುಮಾರ್ ಸಮಿಂದ ಎಣ್ಸ್ ಕಂಡಿದ್ದೆ… ಬ್ಲಾಗಗೆ ಯೇಗ್ಳೇಗ್ಳೋ ಬರದ್ದ್ ಕುಂದಾಪ್ರ ಕನ್ನಡ ಶಬ್ದ ಎಲ್ಲ ಒಟ್ಟ್ ಮಾಡಿ ಒಂದ್ ಬದ್ಯಗೆ ಇಟ್ರೆ ಒಳ್ಳೇದಾತ್ತಲ್ದಾ ಅಂದೇಳಿ… ಇವತ್ತ್ ಗಳ್ಗಿ ಕೂಡಿ ಬಂತ್… ಇಷ್ಟ್ ದಿನ ಬ್ಲಾಗಗೆ ಬರದ್ ಶಬ್ದ ಎಲ್ಲಾ ಒಟ್ಟ್ ಮಾಡಿ ಇಲ್ಲ್ ಕೊಟ್ಟಿದೆ.. ಇದ್ರಗೆ ನೊಂಗೂ ಒಂದ್ ’ಪಡಾವ್’ ಇತ್ತ್.!! ಹೊಸ್ತೆಂತಾರೂ ಬರುವತಿಗೆ, ಈ ಶಬ್ದ ಮೊದ್ಲೇ ಬ್ಲಾಗಗೆ ಬರ್ದಿನಾ ಇಲ್ಯಾ ಅಂದೇಳಿ ಹುಡ್ಕುಕ್ ಸುಲ್ಭ ಆಯಲ್ಯಾ?

ನಿಮ್ಗ್ ಓದುಕ್ ಸಂತೆ ಎಲ್ಲ ಒಂದೆ ಬದ್ಯಗೆ ಇದ್ರೆ ಲಾಯ್ಕ್ ಆತ್ತ್ ಅಲ್ದಾ?

ಅಕೇರಿಗೆ = ಕೊನೆಗೆ

ಮೂಲ ಶಬ್ದ ಹಿಂದಿಯ ಆಖಿರ್ ಇರಬಹುದೇ?

ಬಳಕೆ :

೧. ಬ್ಯಾಸ್ಗಿ ತಿಂಗ್ಳ್ ಅಕೇರಿಗೆ ಬಾಮಿಯಗೆ ಕುಡುಕ್ ಸತೇ ನೀರ್ ಇಪ್ಪುದಿಲ್ಲ.

೨. ಇದ್ ಅಕೇರಿದ್ ಪರೀಕ್ಷೆ. ಇದ್ ಮುಗ್ದ್ ಮೇಲ್ ಎರ್ಡ್ ತಿಂಗ್ಳ್ ರಜಿ

ಅರ್ತು = ಇಳಿಯು, ತೊಟ್ಟಿಕ್ಕು

ಬಳಕೆ :

೧. ಮಳೆಗ್ ನೆನ್ಕಂಡ್ ಬಂದ್ ಮೈ ಪೂರಾ ಚಂಡಿ. ಕಾಣಿ ಹ್ಯಾಂಗ್ ನೀರ್ ಅರ್ತ್‌ತಾ ಇತ್ತ್

೨. ಬಟ್ಟಿ ಒಗ್ದ್ ಹಾಂಗೇ ನ್ಯಾಲಿ ಮೇಲ್ ಹಾಕ್. ಸ್ವಲ್ಪ ನೀರ್ ಅರ್ತ್‌ಲಿ

೩. ಮಂಡಿಗ್ ಎಣ್ಣಿ ಹಾಯ್ಕಂಡದ್ ಸಾಕಾ..ಕಾಣ್ ಎರ್ಡೂ ಬದಿಯಲ್ ಅರ್ತತಾ ಇತ್ತ್

ಉಡಾಪಿಉಡಾಪ್ = ಉಡಾಫೆ , ಎದುರುವಾದಿಸು ಅನ್ನುವ ಅರ್ಥ ಕೂಡಾ ಇದೆ

ಬಳಕೆ :

೧.       ದೊಡ್ಡರ್-ಸಣ್ಣರ್ ಅಂದಿಲ್ಲ. ಎಂತ ಹೇಳ್ರೂ ಉಡಾಪ್ ಮಾತಾಡ್ತೋ ಈಗ್ಳಿನ್ ಮಕ್ಳೆಲ್ಲಾ

ಉರ್ಡಕಂಬ್ದ್  ಹೊಡೆದಾಡು, ಬಡಿದಾಡು

ಬಳಕೆ –

೧  ಉರ್ಡ್ಕಂಬ್ಕೆ ಹೋಯ್ಬೆಡ ಅಂದ್ರೆ ಕೇಂತಿಲ್ಲ. ನಾವೆಲ್ಲ ಹೇಳ್ರೆ ನಿಂಗ್ ಸಾಕಾತಿಲ್ಲ. ನಾಳೆ ಶಾಲಿಗೆ ಬಂದ್ ನಿಮ್ ಹೆಡ್ಮಾಷ್ಟ್ ಹತ್ರ ಹೇಳ್ತೆ. ಅವ್ರ್ ಬೆನ್ಮೇಲೆ ಎರ್ಡ್ ಬಿಟ್ರೆ ಎಲ್ಲ ತನ್ನಂತ್ಲೇ ಸಮಾ ಆತ್ತ್.

೨  ಸುರು-ಸುರಿಗೆ ಬೈಕಂತ ಇದ್ದಿರ್, ಒಂದ್ಗಳ್ಗಿ ಆಪ್ರೊಳ್ಗೆ ಇಬ್ರೂ ಅಂಗಿ ಕೈ ಮೇಲ್ ಮಾಡ್ಕಂಡ್ ಉರ್ಡಕಂಡದ್ದೇ ಅಲ್ದಾ, ಅಲ್ಲಿದ್ದರೆಲ್ಲ ಒಟ್ಟಾಯಿ ಬಿಡ್ಸರ್. ಅಲ್ದಿರೆ ಇವತ್ತ್ ಕಾಂತ ಕಾಂತ ಒಂದ್ ಕತಿ ಆತಿತ್ತ್

ಉಂಬುದ್ = ಊಟ ಮಾಡೋದು

ಉಂಡ್ಕಂಡ್ = ಊಟ ಮಾಡ್ಕೊಂಡ್

ಬಳಕೆ :

೧. ಬೇಗ ಬೇಗ ಬಟ್ಲ್ ಇಡಿ ಮಕ್ಕಳೆ. ಉಂಬ ಶಾಸ್ತ್ರ ಒಂದ್ ಮಾಡಿ ಬಿಡ್ವಾ.

೨. ಬೆಳಿಗ್ಗೆ ಬೇಗ್ ಏಳ್ಕಲ. ಉಂಡ್ಕಂಡ್ ಬೇಗ ಮಲ್ಕಣಿ

ಊಜು / ಊಂಜು/ ಸೀಬು/ ಸೀಂಬು =ಚೀಪು

ಬಳಕೆ :

೧. ಮಾಯಿನ್ ಹಣ್ಣ್ ತಿಂದ್ ಗೊರ್‍ಟ್ ಊಂಜದ್ ಸಾಕ್. ಬಿಸಾಡಾ ಅದನ್ನ.

೨. ಒಳ್ಳೆ ಸಣ್ಣ್ ಮಗಿನ್ ಕಣಗೆ ಬೆರಳ್ ಬಾಯ್ಗ್ ಹಾಯ್ಕಂಡ್ ಸೀಂಬತಾ ಇದ್ದ.

ಎಡ್ಕ್ಎಡ್ಕಿ = ಸಂದಿನಡುವೆಮಧ್ಯೆ ( ಮೂಲ ಪದ ಎಡೆ )

ಬಳಕೆ –

೧. ಹಬ್ಬಕ್ ಹೋರೆ ಆ ಜನ್ರ್ ಎಡ್ಕಿನಗೆ ಸಮಾ ತಿರ್ಗುಕಾರೂ ಆತ್ತಾ?

೨. ಅಂವ ಬೈಕ್ ಬಿಡುವತಿಗೆ ಹಿಂದ್ ಕೂಕಂಬ್ಕ್ ಹೆದ್ರಿಕ್ ಆತ್. ಆಚೀಚಿಗೆ ಎರ್ಡ್ ವಾಹನ ಹೋತಿದ್ರೆ ಇಂವ ಅದ್ರ ಎಡ್ಕಕೆ ನುಗುಳ್ಸ್‌ಕಂಡ್ ಹೋತಾ ಮರಾಯಾ.

ಎತ್ ಮುಕ್ನೆ ಹೊರ್ಟದ್? – ಯಾವ ಕಡೆ ಹೊರಟಿದ್ದು?

೧. ಹ್ವಾಯ್ ಏನ್ ಈ ಬದಿಗೆ ಬಂದಿರಿ.. ಎತ್ ಮುಕ್ನೆ ಹೊರ್ಟದ್?

೨. ಈ ಜಮ್ ನೆರಿಯಗೆ ಬೆಳ್ಗಾ ಮುಂಚೆ ಎದ್ಕಂಡ್ ಹೊರ್ಟಿರ್ಯಲೆ, ಎತ್ ಮುಕ್ನೆ ಹೋತ್ರಿ?

ಎಬ್ಬು  ಅಟ್ಟು, ಓಡಿಸು ( ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ –

೧  ಮಧ್ಯಾಹ್ನ ಒಂದ್ ಗಳ್ಗಿ ಮಲ್ಕಂಬ ಅಂದ್ರೆ ಬಿಡ್ತ್ವಾ, ಯಾರ್ಯಾರ ಮನಿ ಗಂಟಿ ಪೂರಾ ಇಲ್ಲೇ ಸಾರ್ತಿ ಆಯಿದೊ, ಎಬ್ಬಿ ಎಬ್ಬಿ ಸಾಕಾಯ್ತ್

೨  ಇನ್ನೊಂದ್ ಸ್ವಲ್ಪ ಹೊತ್ತ್ ಮೇಯ್ಲಿ ಬಿಡ್, ಹೊತ್ತ್ ಹೋಪತಿಗೆ ಹಟ್ಟಿಗೆ ಎಬ್ಕಂಡ್ ಬಂದ್ರ್ ಸಾಕ್

ಒರ್ಲುದ್ = ಅರಚು, ಕಿರುಚು, ಗಟ್ಟಿಯಾಗು ಕೂಗು, ಬೊಬ್ಬೆ ಹೊಡೆ, ಕೂಗುಜೋರಾಗಿ ಮಾತಾಡು

ಬಳಕೆ:

೧. ಹಗೂರಕ್ಕೆ ಎರ್ಡ್ ಹೊಡದ್ದೇ ಸೈ, ಏನ್ ಒರ್ಲತಾ, ಊರಿಡೀ ಕೇಂಬ್ಕ್ ಸಾಕ್

೨. ನಿನ್ ಗೆಂಡಿ ಗಟ್ಟಿ ಇತ್ತಂದೇಳಿ ಒರ್ಲುದ್ ಬ್ಯಾಡ, ನಿಧಾನ ಮಾತಾಡ್, ಇಲ್ಯಾರೂ ಕ್ಯೆಪ್ರ್ ಇಲ್ಲ

೩. ಎಮ್ಮಿ ಆಗ್ಳಿಂದ ಒರ್ಲತಾ ಇತ್ತಪ್ಪ. ಅದ್ಕೆ ಬಾಯ್ರ್(ಕಲಗಚ್ಚು) ಕೊಡಲ್ಯಾ?

೪. ಅಷ್ಟ್ ಗಟ್ಟಿ ಒರ್ಲುಕೆ ಇಲ್ಲ್ಯಾರು ಕೆಪ್ಪರು ಇಲ್ಲೆ. ಸ್ವಲ್ಪ ಮೆಲ್ಲ ಹೇಳ್

೫. ಶಾಲಿ ಬಿಟ್ರ್ ಕೂಡ್ಳೇ ಸಾಕ್ ಮಕ್ಳೆಲ್ಲಾ ಹೋ ಅಂತ ಒರ್ಲ್‌ತಾ ಮನಿಗ್ ಹೊರ್ಟೋ

ಒರ್ಸಿ-ಗುಡ್ಸುದ್ = ಒರೆಸುವುದು-ಗುಡಿಸುವುದು

ಬಳಕೆ:

೧. ಹೊತ್ತ್ ಮಧ್ಯಾನ್ನಾತಾ ಬಂತ್, ಇನ್ನೂ ಒರ್ಸಿ ಗುಡ್ಸಿಯೇ ಆಯಿಲ್ಲ

೨. ಇಷ್ಟ್ ದೊಡ್ಡ ಮನಿ ಬ್ಯಾಡ ಅಂದೆ, ನೀವ್ ಕೇಂಡ್ರ್ಯಾ, ಈಗ ಇಡೀ ಮನಿ ಒರ್ಸಿ ಗುಡ್ಸುರೊಳ್ಗೆ ನನ್ ಬೆನ್ಕೋಲ್ ಮುರ್ದೇ ಹೊತ್ತ್ ಕಾಣಿ

ಅಂಡುದ್ = ಹಿಂಜರಿಕೆಯಿಂದ ಅಡಗಿಕೊಳ್ಳು, ಹಿಂದೇಟು ಹಾಕು, ಸಂಕೋಚದಿಂದ ಮರೆಯಲ್ಲಿ ಕುಳಿತು ಇಣುಕಿ ನೋಡು

ಬಳಕೆ:

೧. ಮಾಡುದೆಲ್ಲ ಮಾಡಿ ಈಗ ಒಳ್ಳೆ ಪಾಪ್ದರ್ ಕಣಗೆ ಅಂಡ್ಕಂಡ್ ಕೂಕಂಡಿದ

ಅಂಬ್ಡ್ಅಂಬಡ್ = ಜೋಡಿಅವಳಿ

ಬಳಕೆ:

೧. ಅವ್ರಿಬ್ರ್ರೂ ಅಂಬ್ಡ್ ಮಕ್ಳ್ ಅಂಬ್ರ್. ಕಾಂಬುಕೆ ಒಂದೇ ನಮ್ನಿ ಇದ್ರ್ ಕಾಣಿ

೨. ಅಂಬ್ಡ್ ಬಾಳೆಹಣ್ ತಿಂದ್ರೆ ಅಂಬ್ಡ್ ಮಕ್ಳ್ ಹುಟ್ತ್ರ್ ಅಂಬ್ರಲಾ ಹೌದಾ?

ಕರ್ಟುದ್, ಕರ್ಟಿ ಹೋದ್ದ್= ಸೀದು ಹೋಗು, ಸೀದು ಹೋದಂತಹ,

ಬಳಕೆ:

೧.  ಬೆಂಕಿ ಒಂಚೂರ್ ಸಣ್ಣ ಮಾಡ್ಕೋ, ಇಲ್ದಿರ್ ಪೂರಾ ಅಡಿ ಹಿಡ್ದ್, ಕರ್ಟಿ ಹೋತ್ತ್

೨. ಒಲಿ ಮೇಲ್ ಎಂತ ಇಟ್ಟಿದೆ, ಕರ್ಟಿ ಹೋಯ್ತಾ ಕಾಂತ್, ಹೊಗಿ ವಾಸ್ನಿ ಬತ್ತಾ ಇತ್ತ್

೩. ಒಂದ್ ಗನಾ ಮಳಿ ಬಂದಿರೂ ಆತಿತ್ತ್, ನೀರಿಲ್ದೆ ಹೂವಿನ್ ಗಿಡಾ ಪೂರಾ ಕರ್ಟಿ ಹೋತ್ತ್ ಕಾಂಬ್ಕಾತಿಲ್ಲ

ಕಡ್ಗಿ = ಎಳೆಯ ಹಲಸಿನಕಾಯಿಪಲ್ಯ ಸಾಂಬಾರ್ ಮಾಡಲು ಬಳಸುವಂತಹದ್ದು

ಬಳಕೆ:

೧. ಇವತ್ತ್ ಕಡ್ಗಿ ತಾಳ್ಳ್ ಮಾಡದ್ ಭಾರಿ ಸಾಪಾಯಿತ್ತ್

ಕಣ್ ಕಸ್ತ್ಲಿ(ಕಣ್ ಕತ್ಲಿ) – ಕಣ್ಣು ಕತ್ತಲೆ

ಬಳಕೆ –

೧. ನಿನ್ನೆ ರಾತ್ರಿ ಉಣಲ್ಲ ಹೌದಲ್ದಾ, ಬೆಳಿಗ್ಗೆ ಏಳುವತಿಗೇ ಒಂದ್ನಮನಿ ಸಂಕ್ಟ ಆಯಿ ಕಣ್ಣ್ ಕತ್ಲಿ ಬಂದಂಗಾಯ್ತಪ್ಪ

೨. ಜ್ವರಕ್ಕಂದೇಳಿ ತಕಂಡ್ ಮಾತ್ರಿ ರಾಪ್ ಜೋರಿತ್ತ್, ನುಂಗಿ ಸ್ವಲ್ಪ ಹೊತ್ತಿನಗೆ ಹೊಟ್ಟಿ ಸಂಕ್ಟ ಆಯಿ ಕಣ್ಣ್ ಕಸ್ತ್ಲಿ ಬಂದಾಂಗಾಯ್ತ್

ಕವಳ = ಎಲೆ-ಅಡಿಕೆ

ಬಳಕೆ –

೧. ನಂಗೆ ಊಟ ಆರ್ ಮೇಲ್ ಒಂದ್ ಕವಳ ಹಾಕ್ದಿದ್ರೆ ಉಂಡದ್ ಉಂಡಂಗಾತಿಲ್ಲ

೨. ಸಣ್ಣ್ ಮಕ್ಕ್ಳ್ ಎಲ್ಲ ಕವ್ಳ ಹಾಕುಕಾಗ. ಬರ ತಲಿಗ್ ಹತ್ತುದಿಲ್ಲ

(ಈ ಪದ ಪ್ರಯೋಗ ಬಹುಶಃ ಶಿವಮೊಗ್ಗ ಮತ್ತು ಉತ್ತರಕನ್ನಡದ ಕೆಲವು ಕಡೆ ಕೂಡಾ ಇರಬೇಕು)

ಕುಟ್ಟಿ ಕೀಸು = ಕಾಲಿಗೆ ಬುದ್ಧಿ ಹೇಳುಜಾಗ ಖಾಲಿ ಮಾಡುಪರಾರಿಯಾಗು

ಬಳಕೆ –

೧. ಹುಲಿ ಬಂತ್ ಹುಲಿ ಅಂದ್ ಹೇಳದ್ದೇ ತಡ. ಅಂವ ಅಲ್ಲಿಂದ ಕುಟ್ಟಿ ಕೀಸದ್ದೇ ಅಲ್ದಾ

೨. ಮಾಷ್ಟ್ರನ್ ಕಂಡ್ರ್ ಕೂಡ್ಲೆ ಆಡ್ತಾ ಇದ್ದಿದ್ ಮಕ್ಳ್ ಕುಟ್ಟಿ ಕೀಸದ್ದೇ

(ತುಳುನಾಡಿಗೆ ಹತ್ರ್ ಇಪ್ಪ್ ಕುಂದಾಪ್ರದ್ ಕೆಲವ್ ಬದ್ಯಗೆ ಇದೇ ಶಬ್ದಕ್ಕೆ ತುಳು ಶಬ್ದ ‘ಪದ್ರಾಡ್’ ಸತೇ ಕೆಲವ್ ಸರ್ತಿ ಉಪ್ಯೋಗ ಮಾಡ್ತ್ರ್)

ಕುಮ್ಟಿ ಬೀಳು = ಬೆಚ್ಚಿ ಬೀಳು

ಬಳಕೆ

೧. ಮಗಿನ ಸುದ್ದಿಗ್ ಹೊಗ್ಬೆಡ ಅಂದ್ರ್ ಕೇಂತಿಲ್ಲ. ನೀ ಕೂಗದ್ದ್ ಕಂಡ್ ಮಗು ಕುಮ್ಟಿ ಬಿತ್ತ್ ಕಾಣ್

೨. ನೀವ್ ಹಿಂದಿಂದ್ ಬಂದ್ ಸುಮ್ನ್ ನಿಂತ್ಕಂಡದ್ದಾ ಮರಾಯ್ರೆ. ಕತ್ಲಿ ಹೌದಾ ಅಲ್ದಾ… ನಾ ಒಂದ್ಸಲ ಕುಮ್ಟಿ ಬಿದ್ದೆ ಗೊತ್ತಾ

ಕುಶಾಲ್, ಕುಸಾಲ್ = ತಮಾಷೆವಿನೋದ (ಖುಶ್ ಹಾಲ್ನಿಂದ ಬಹುಶಃ ಈ ಶಬ್ಡ ಬಂದಿದ್ದು)

ಬಳಕೆ :

೧. ನೀ ಸ್ವಲ್ಪ ಸುಮ್ಮನಿರ್, ನಿಂಗೆ ಎಲ್ಲದ್ರಗೂ ಕುಶಾಲ್.

೨. ನೀ ಬೇಜಾರ್ ಮಾಡ್ಕಂಬೇಡ. ನಾ ಸುಮ್ನೆ ಕುಶಾಲಿಗೆ ಹೇಳದ್

ಕೂರ್ ಮಂಡಿ ಹಾಕುದ್/ ಕಣ್ಣ್ ಕೂರುದು = ತೂಕಡಿಸುನಿದ್ರೆ ಬರುವಂತಾಗು

ಬಳಕೆ –

೧. ನಂಗ್ ಕಣ್ಣ್ ಕೂರ್‌ತಾ ಇತ್ತ್. ನಾ ಮಲ್ಕಂತೆ ಅಕಾ?

೨. ಟಿ.ವಿ. ಮುಂದ್ ಕೂಕಂಡ್ ಕೂರ್ ಮಂಡಿ ಹಾಕ್ದಿದ್ರೆ ಹೊಯಿ ಮಲ್ಕಂಬ್‌ಕಾಗ್ದಾ?

ಕೊಡ್ಕುದ್ = ಕೊಡಹು, ಜಾಡಿಸು

ಬಳಕೆ:

೧. ಆ ಅಂಗಿ ಮುಲ್ಲಿಯಗೆ ಹಾಕಿದ್ಯಲ, ಸಮಾ ಕೊಡ್ಕಿ ಹಾಯ್ಕೊ, ಚೇಳ್ ಗೀಳ್ ಇದ್ದಿಪ್ಕೂ ಸಾಕ್

೨.  ಈ ಪೆನ್ ಹಿಡ್ಕಂಡ್ ಬರುಕ್ ಕೂಕಂಡದ್ದೇ ಬಂತ್, ಸಮ ಹಿಡಿತಿಲ್ಲೆ ಮಣ್ಣಿಲ್ಲೆ. ಕೊಡ್ಕಿ ಕೊಡ್ಕಿ ಕಯೆಲ್ಲ ನೋವ್ ಸುರುವಾಯ್ತ್

ಕೊಯ್ಸಾಣಿ ನೆಗುದ್ = ಕೊಂಕು ಮಾತನಾಡುವುದು

ಬಳಕೆ:

೧. ಅವ್ಳಿಗೆ ನಾ ಹ್ಯಾಂಗ್ ಕೆಲ್ಸ ಮಾಡ್ರೂ ಏನಾರೂ ಕೊಯ್ಸಾಣಿ ನೆಗಿದಿದ್ರೆ ತಿಂದದ್ ಜೀರ್ಣ ಆತಿಲ್ಲೆ

೨. ಕೆಲ್ಸ ಎಂತಾ ಮಾಡ್ರೂ ತಿಂದ್ಕಂಡ್ ಕೂಕಂಡ್ ಕೊಯ್ಸಾಣಿ ನೆಗುಕೇನ್ ಅಡ್ಡಿಲ್ಲ

ಕೈಕೋಚ್= ತೊಂದರೆ, ಇಕ್ಕಟ್ಟು (ಕನ್ನಡ ಸಂಕ್ಷಿಪ್ತ ನಿಘಂಟು)

ಈ ಶಬ್ದದ್ ಅರ್ಥ ತೊಂದರೆ,ಇಕ್ಕಟ್ಟು ಅಂದೇಳಿ ಇತ್ತಾರೂ ಇದನ್ನ್ ತುಂಟತನ-ಕಿತಾಪತಿ-ಕೀಟಲೆ ಅಂತ್ ಹೇಳುಕೆ ಹೆಚ್ಚಾಯಿ ನಮ್ ಬದಿಯಗೆ ಉಪ್ಯೋಗಿಸ್ತ್ರಾಯಿ ಕಾಣತ್

ಬಳಕೆ:

೧. ಆ ಮಾಣಿ ಒಂದ್ ಗಳ್ಗಿ ಸುಮ್ನ್ ಕೂಕಂತಿಲ್ಲ, ಹೋದಲ್ಲ್ ಬಂದಲ್ಲ್ ಸತೇ ಒಂದ್ ಕೈಕೋಚಂದ್ರೆ ಅಷ್ಟಿಷ್ಟಲ್ಲಾ… ಹೇಳಿ ಪೂರೈಸುಕಾಪ್ದಲ್ಲ

೨.ನಿನ್ನ್ ಕೈಕೋಚೆಲ್ಲ ನಿಲ್ಸಿ ಕೊಡ್ತೆ ಕಾಣ್. ದಿನಾ ಹುಣ್ಸಿ ಅಡ್ರಗೆ ಎರ್ಡೆರ್ಡ್ ಬಾರ್ಸ್ರೆ ಮಾತ್ರ ನೀ ಸುಮ್ನಾಯ್ಕಂಬ್ದಾ ಕಾಣತ್

ಗನಾಗನಾದ್ = ಒಳ್ಳೆಯಉತ್ತಮ (ಘನದ ಅಪಭ್ರಂಶ ರೂಪ ಇರಬಹುದೇ?)

ಬಳಕೆ :

೧. ಮಾಯ್ನ್ ಹಣ್ ಪೂರಾ ಕೊಳ್ತ್ ಹೋಯಿತ್. ಗನಾದ್ ಒಂದೂ ಇಲ್ಲ.

೨. ಗನಾದ್ ಒಂದ್ ಮಳಿ ಬಂದಿರೆ ಸೆಕಿಯಾರೂ ಸ್ವಲ್ಪ ಕಡ್ಮಿ ಆತಿತ್ತ್

ಗತಿ ಗೋತ್ರ ಇಲ್ದಿದಂಗ್ ಆಪುದ್ = ಯಾರೂ ದಿಕ್ಕಿಲ್ಲದಂತಾಗುವುದು, ಅನಾಥರಾಗುವುದು, ಎಲ್ಲ ಕಳೆದುಹೋಗಿ ಅಸಹಾಯಕರಾಗು     

ಬಳಕೆ:

೧. ಆ ಸಣ್ಣ್ ಮಕ್ಳನ್ನ್ ಬಿಟ್ಟ್ ಅವ್ಳ್ ಓಡಿ ಹೋದ್ದ್ ಸಾಕ್. ಈಗ ಪಾಪ ಮಕ್ಳಿಗೆ ಗತಿ ಗೋತ್ರ ಇಲ್ದಿದ್ದಾಂಗ್ ಆಯ್ತ್

೨. ಯಾಪಾರ ಮಾಡುಕಂದೇಳಿ ಕೈಲ್ ಇದ್ದದ್ ಪೂರಾ ಹಾಕಿದ. ಯಾಪಾರ ದಿವಾಳಿ ಆಯಿ ಪಾಪ ಗತಿ ಗೋತ್ರ ಇಲ್ದಿದಂಗ್ ಆಯ್ತ್

ಗಿಮ್ಚುಗಿಮ್ಚುದ್ = ಕಿವಿಚುಹಿಸುಕುಹಿಂಡು

ಬಳಕೆ:

೧. ಬೇಗ್ ಬೇಗ್ ಉಣ್ ಅಂದ್ರೆ ಅದೆಂತಾ ಅನ್ನ ಗಿಮ್ಚ್‌ತಾ ಕೂಕಂಡದ್

೨. ಡಾಕ್ಟ್ರೆ ಹೊಟ್ಟಿ ನೋವ್ ಇಲ್ಲ. ಆರೆ ಒಂನಮನಿ ಗಿಮ್ಚದಂಗಾತ್ ಹೊಟ್ಟಿ ಒಳ್ಗೆ

ಗಿರ = ಗೀಳುಹಂಬಲಚಟ

ಬಳಕೆ:

೧. ಒಂದ್ ಗಳ್ಗಿ ಪುಸ್ತ್‌ಕ ಹಿಡ್ಕಂಡ್ ಓದಂದ್ರೆ… ಒಡಿಯಾಯ್ತ್.. ಅವ್ನಿಗೆ ಆಟದ್ದೊಂದೇ ಗಿರ.

೨. ಅವ್ಳ್ ಹತ್ರ ಒಂದ್ ಕೆಲ್ಸ ಮಾಡ್ಸ್‌ಕಂಬ್ಕೆ ಆತಿಲ್ಲ. ದಿನೀಡಿ ಕತಿ ಪುಸ್ತ್‌ಕ ಓದುದೇ ಆಯ್ತ್. ಅದ್ಯಾವ್ನಮನಿ ಗಿರವೋ

೩. ಅವ್ನಿಗೆ ಕೈಯ್ಯಗೆ ನಾಕ್ ಪಾವಾಣಿ ಆರ್ ಮೇಲೆ ಯಾವ್ದೂ, ಯಾರೂ ಬೇಕಿಲ್ಲ. ದುಡ್ಡಿನ್ ಗಿರ ಅಲ್ದೇಮತ್ತೆಂತ

ಗುರ್ಟುದ್ = ಸಾವಕಾಶವಾಗಿ ಮಾಡು, ನಿಧಾನವಾಗಿ ಮಾಡು

ಬಳಕೆ:

೧. ಒಂದ್ ಪಾತ್ರ ತೊಳಿ ಅಂದೇಳಿ ಎಷ್ಟೊತ್ತ್ ಆಯ್ತ್, ಆಗ್ಳಿಂದ ಗುರ್ಟತಾ ಇದ್ಯಪ, ಹೀಂಗಾರೆ ಹ್ಯಾಂಗೆ?

೨. ಒಂದ್ ಪುಟ ಕೋಪಿ ಬರುಕ್ ಎಷ್ಟೊತ್ತಾ, ಹೀಂಗೆ ಗುರ್ಟತಾ ಆಯ್ಕಂಡ್ರೆ ಇವತ್ತಿಡೀ ಅದೇ ಆತ್ತ್

ಗುಮ್ಮ ಗೋಳಿಹಣ್ಣ್ ನುಂಗ್ದ ಹಾಂಗೆ – ಅವಸರ ಅವಸರವಾಗಿ ತಿನ್ನುವುದು ( ಗೂಬೆ ಗೋಳಿಮರದ ಹಣ್ಣು ತಿನ್ನುವ ಹಾಗೆ)

೧. ನಿಂಗೆಂತ ತಡ ಆತ್ತಾ.. ಸ್ವಲ್ಪ ನಿಧಾನ್ ತಿನ್ನ್ ಕಾಂಬ. ತಿನ್ನತ್ ಕಂಡ್ರೆ ಗುಮ್ಮ ಗೋಳಿ ಹಣ್ ನುಂಗ್ದಾಂಗ್ ಇತ್ತ್

ಗೆರ್ಚು = ಗೀರು ಬೀಳುವಂತೆ ಎಳೆ, ಗೀರು ಮಾಡು, ಗೆರೆ ಬೀಳುವಂತೆ ಮಾಡು

ಬಳಕೆ:

೧. ಕುರ್ಚಿ ಎತ್ತಿಡುಕಾಗ್ದಾ ಹಂಗಾರೆ, ಆ ನಮನಿ ಗೆರ್ಚರೆ ನೆಲ ಎಂತಕಾತ್ತ್

೨. ಅಂವ ಬಿದ್ದ್ ಕೈಕಾಲ್ ಪೂರಾ ಗೆರ್ಚಿ ಹೋಯಿತ್ತ್

ಗೇಯುಗೇಯ್ಮೆಗೆಯ್ಮಿ = ಕೆಲಸ ಮಾಡುಕೆಲಸ

ಬಳಕೆ :

೧. ಬೆಳ್‌ಗಿಂದ ಸಾಂಯ್ಕಾಲದ್‌ವರಿಗೆ ಗೇಯ್ದು, ಗೇಯ್ದ್ ಕೈಕಾಲೆಲ್ಲ ಬತ್ತಿ ಹೋಯ್ತ್

೨. ಅವ್ರ್ ಮನಿಗೆ ಹೆಣ್ ಕೊಡುದಾ. ಅಯ್ಯಬ್ಬ. ಜೀವ್ಮಾನ ಪೂರ್ತಿ ಗೇಯುದ್ರಗೆ ಹೋತ್ತ್.

೩. ಈಗೆಲ್ಲಾ ಮುಂಚಿನ ಕಣಗೆ ಗೇಯ್ಮಿ ಮಾಡುಕೆ ಜನ ಸಿಕ್ಕುದಿಲ್ಯೆ.

ಗೊಬ್ರ್ ಹೆಡ್ಗಿ  ಈ ಶಬ್ದದ ಅರ್ಥ ಗೊಬ್ಬರ ಹೊರಲು ಬಳಸುವ ಬುಟ್ಟಿ ಅಂತಿದ್ದರೂ ಕೂಡ ಇದನ್ನು ತುಂಬಾ, ಜಾಸ್ತಿ ಅನ್ನುವ ಅರ್ಥದಲ್ಲಿ ಬಳಸಲಾಗುತ್ತದೆ

ಬಳಕೆ –

೧  ನನ್ ಕೈಲ್ ಮಾಡಿ ಪೂರೈಸುಕೆ ಎಡಿಯ. ಒಂದ್ ಗೊಬ್ರ್ ಹೆಡ್ಗಿ ಕೆಲ್ಸ ಇತ್ತ್.

೨  ಆಡುಕ್ ಹೋರ್ ಅಡ್ಡಿಲ್ಲ, ಮೈ ಮಂಡಿ ಕಂಡ್ರ್ ಸಾಕಲೆ, ಒಂದ್ ಗೊಬ್ರ್ ಹೆಡ್ಗಿ ಮಣ್ಣ್ ಇತ್ತ್, ಎಂತ ಮಣ್ಣಗೇ ಬಿದ್ದ್ ಹೊಡ್ಕದ್ದಾ?

ಚರ್ಗಿ ಭರ್ತಿ = ದಂಡ ಪಿಂಡಅಪ್ರಯೋಜಕ

ಬಳಕೆ:

೧. ಆ ಕೆಲ್ಸ ಮಾಡುಕ ಅವ್ನ್ ಕೈಯ್ಯಗೆ ಆತ್ತಾ? ಅವ ಏನಿದ್ರೂ ಚರ್ಗಿ ಭರ್ತಿಗೇ ಸೈ

ಚಡಿ = ಬಿಡುವುಅಂತರಸಂದು

ಬಳಕೆ :

೧. ಈ ಮಳಿ ಒಂಚೂರ್ ಚಡಿ ಕೊಡ್ದೇ ಸೊರಿತಿತ್ತಲೆ. ಹೀಂಗೆ ಆರೆ ಹೊರ್ಗ್ ಹೊರ್‍ಡುದಾರೂ ಹ್ಯಾಂಗೆ?

೨. ಬಾಗ್ಲ್ ಬುಡ್ದಗೆ ಒಂದ್ ಸಣ್ಣ್ ಚಡಿ ಇತ್ತ್. ಅದ್ರಗೆ ಈ ಎರು ಎಲ್ಲಾ ಒಳ್ಗ್ ಬಂದದ್

ಚಣಿಲ = ಅಳಿಲು

ಬಳಕೆ

೧. ಮಾಯ್ನ್ ಹಣ್ಣ್ ಆಪ್ ಸುರಿಗೆ ಇಲ್ಲೆಲ್ಲ ಮಸ್ತ್ ಚಣಿಲ ಬತ್ತೊ

೨. ಮಕ್ಳೆ ಚಣಿಲಕ್ಕೆ ಎಂತಕೆ ಕಲ್ಲ್ ಹೊಡಿತಿದ್ರಿ… ಅದ್ ಬರೀ ಪಾಪದ್

ಚಪ್ಪಾಂಚೂರುಛಿದ್ರ, 56 ಚೂರುಚಪ್ಪನ್ಚೂರು)

ಬಳಕೆ:

೧. ಮಗಿನ್ ಕೈಗೆ ಪುಸ್ತ್ಕಕೊಡ್ಬೆಡಿ. ಹತ್ ನಿಮ್ಷದೊಳ್ಗೆ ಹರ್ದ್ಹಾಕಿ ಚಪ್ಪಾಂಚೂರ್ ಮಾಡತ್ತ್

೨. ರಾತ್ರಿ ಜೋರ್ ಗಾಳಿ ಬಂತ್ ಹೌದಲ್ದಾ, ಜಗ್ಲಿ ಮೇಲಿದ್ದ್ ಮಡ್ಕಿ ಒಡ್ದ್ ಚಪ್ಪಾನ್ ಚೂರ್ ಆಯ್ತ್

 

ಚಪ್ಪಿಚಪ್ಪೆ,ಚೆಪ್ಪಿ = ಸಪ್ಪೆ

(ಬಿಸಿ ತಣಿಯುವುದು ಅನ್ನುವ ಅರ್ಥ ಕೂಡಾ ಇದೆ)

ಬಳಕೆ –

೧. ಸಾರ್ ಸಾಪಾಯಿತ್.. ಆರೆ ಒಂಚೂರ್ ಉಪ್ಪ್ ಚಪ್ಪೆ

೨.  ಎಂಥ ಮಾರಾಯ ಚಪ್ಪಿ ಇದ್ದೆ, ಹುಶಾರಿಲ್ಯಾ?

೩.  ಸ್ನಾನ ಮಾಡುಕ್ ಹೋಯಿ ಕಾಂತೆ ನೀರ್ ಬರಿ ಚಪ್ಪೆ, ಒಂಚೂರು ಬಿಸಿ ಮುಟ್ಲಿಲ್ಲ

೪. ಹ್ವಾಯ್… ಚಾ ಮಾಡಿ ಇಟ್ ಎಷ್ಟ್ಹೊತ್ತಾಯ್ತ್. ಹಂಗಾರೆ ಚಪ್ಪಿ ಆಯ್ಕಿದ್ರೆಮೊದ್ಲೆ ಕುಡುಕಾಗ್ದಾ?

೫. ಮಕ್ಳೆಲ್ಲ ರಜಿಗ್ ಬಂದ್ಹೋರ್ ಮೇಲೆ ಮನಿಯೆಲ್ಲ ಬರೀ ಚಪ್ಪಿ ಚಪ್ಪಿ.

ಚಾಟುಳ/ಚಾಕ್ಟಿ ಹುಳ=ಚೇರಟೆಹುಳ

ಬಳಕೆ:

೧. ನಾಕ್ ಹುಂಡ್ ಮಳಿ ಬಿದ್ರ್ಸಾಕ್. ಗ್ವಾಡಿಮೇಲೆ, ಕಡ್ ಮಾಡಗೆ ಒಂದ್ ರಾಶಿ ಚಾಕ್ಟಿ ಹುಳ

೨. ಮಗಿನ್ ನೆಲ್ದ್ ಮೇಲ್ಹಾಕ್ಬೆಡ. ಚಾಟುಳ ಎಲ್ಲ ಹರಿತಾಇರತ್ತ್.

ಚಾಷ್ಟಿ, ಚ್ಯಾಷ್ಟಿಚೇಷ್ಟೆತುಂಟತನ, ಕೀಟಲೆ

ಇದು ಚೇಷ್ಟೆ ಅನ್ನುವ ಪದದ ಕುಂದಾಪುರ ರೂಪ

ಇದು ಕೈಕೋಚಿಗೆ ತೀರಾ ಹತ್ರದ್ ಶಬ್ದ. ಹೆಚ್ಚೂಕಡ್ಮಿ ಅದೇ ಅರ್ಥ ಬತ್ತ್

೧. ಮಗಿನ್ ಚಾಷ್ಟಿಯೊಳ್ಗ್ಆಯಿಲ್ಲಪ್ಪ. ಒಂದ್ ಗಳ್ಗಿ ಸುಮ್ನ್ ಕೂಕಂಬ್ಕ್ ಬಿಡುದಿಲ್ಲ

೨. ನೀ ಮನಿಯಗೆ ಚಾಷ್ಟಿಮಾಡ್ದಂಗೆ ಹೋದಲ್ಲೆಲ್ಲ ಚಾಷ್ಟಿ ಮಾಡ್ರೆ ಬೆನ್ನ್ ಭೇರಿಯಾತ್ತ್ ಗೊತ್ತಾಯ್ತಾ?

೩. ಶಾಲಿಗ್ ರಜಿ ಸಿಕ್ಕದ್ದೇ ಸೈ.. ಮಕ್ಳೆಲ್ಲಾ ಒಟ್ಟಾರಲ್ದಾ… ಸೈ ಬಿಡಿ.. ಇನ್ನ್ ಅವ್ರ್ ಚಾಷ್ಟಿ ತಡುಕೆಡ್ಯಾ

೪. ಮಗೂ ಸಣ್ದ್ ಅಂದ್ರ್ಯಾ… ಅಬ್ಬಾ ಅದ್ರ್ ಚ್ಯಾಷ್ಟಿಯೇ… ಬಲಾದ್ ಮಕ್ಳನ್ನಾರೂ ಸುಧಾರ್ಸಲಕ್ಕ್.. ಈ ಮಗಿನ ಸುಧಾರ್ಸುಕೆ ಎಡುದಿಲ್ಲ

ಚಾಳಿಸು , ಚಾಳ್ಸು = ಗೇಲಿ ಮಾಡುಹೀಯಾಳಿಸು, ಲೇವಡಿ ಮಾಡುಇನ್ನೊಬ್ಬರು ಹೇಳಿದಂತೆ ಹೇಳಿ ಅಣಕಿಸು

ಚಾಳಿಸು – ಹೀಯಾಳಿಸು, ತಿರಸ್ಕರಿಸು (ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ :

೧.  ನಾ ಶಾಲಿಗ್ ಹೋತಿಲ್ಲ, ನನ್ನ್ ಬಾಯ್ ಕೊಜ್ಲ್ ಅಂದೇಳಿ ಎಲ್ಲಾ ಚಾಳ್ಸತ್ರ್

೨.  ನನ್ನ್ ಕಣ್ಣ್ ಒಡ್ಡ್ ಅಂದೇಳಿ ಚಾಳ್ಸ್ತಿಯಲ, ನಿನ್ನ್ ಬಾಯ್ ಕಂಡ್ರ್ ಸಾಲ್ದಾ.. ಹೆರ್ಮಣಿ

೩.  ಮಾಷ್ಟ್ರ ಮಾಡ್ದಾಂಗೆ ಮಾಡಿ ಚಾಳ್ಸ್‌ತ್ರ್ಯಾ ಮಕ್ಕಳೇ. ಹೇಳ್ತೇ ತಡಿ ಅವ್ರ್ ಹತ್ರ

೪. ನಂಗ್ ಈ ಬಣ್ಣದ್ ಅಂಗಿ ಬ್ಯಾಡ. ಮಕ್ಳೆಲ್ಲಾ ಹುಲಿವೇಷ ಅಂತ ಚಾಳ್ಸ್‌ತೋ

ಚಿರ್ಟು(ಚಿರಿಟು)  ಮುರುಟಿಕೊಳ್ಳು, ಸುರುಟಿಕೊಳ್ಳು,ಮುದುರು ( ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ –

೧. ಬಿಸ್ಲ್ ರಾಪ್ ಜೋರಿತ್ತ್. ಒಂದ್ ನಾಕ್ ಹನಿ ಮಳಿ ಬಿದ್ದಿರಾರೂ ಆತಿದ್ದಿತ್, ಮೆಣ್ಸಿನ ಗಿಡ್ದಗೆ ಕೋಡ್ ಪೂರಾ ಚಿರ್ಟಿ

ಹೋಯಿತ್ತ್

೨. ಒಂದ್ ನಾಕ್ ಮಾತ್ ಹೆಚ್ಚ್ ಹೇಳ್ರ್ ಸಾಕ್, ಮುಖ ಚಿರ್ಟ್ಸಕಂಡ್ ಕೂಕಂಡಾಯ್ತ್

೩. ಮಾಯ್ನ್‌ಮಿಡಿ ಉಪ್ಪಿಗ್ ಹಾಕದ್ದ್ ಉಪ್ಪಿನ್‌ಕಾಯ್ ಮಾಡ್ವ ಅಂದೇಳಿ ತೆಗ್ದ್ರೆ ಸಮಾ ಚಿರ್ಟಲೇ ಇಲ್ಲಪ್ಪ, ಉಪ್ಪ್ ಹಾಕದ್ದ್

ಸಾಕಾಯ್ಲಿಲ್ಯೋ ಏನೋ

ಚೊಣ್ಕಿ = ತೊಣಚಿಮೈಗೆ ತಾಗಿದ್ರೆ ತುರಿಕೆ ಉಂಟುಮಾಡುವ ಒಂದು ಜಾತಿಯ ಗಿಡ.

ಬಳಕೆ:

೧. ಎಂತಕೆ ಒಳ್ಳೇ ಚೊಣ್ಕಿ ತಾಗ್ದರ್ ಕಣಗ್ ಆಡ್ತೆ

ಚೊರ್ಚುದ್ = ತಳದಲ್ಲಿ ಇರುವುದನ್ನು ಸಹಬ್ದವಾಗಿ ತೆಗೆಯು

ಬಳಕೆ:

೧. ನಿಂಗ್ಯಾವ್ ನಮ್ನಿ ಉದಾಶಿನ ಮರಯ. ಹರಿಯಗೆ ನೀರ್ ಇಲ್ಲ, ಒಂದ್ ನಾಕ್ ಕೊಡ್ಪಾನ ನೀರ್ ಹಾಕ್ ಅಂದ್ರೆ, ಅದ್ರಗೆ ಚೊರ್ಚ್ಕಂಡ್ ಮಿಂದ್ಕಂಡ್ ಬಂದ್ಯಾ? ಚೊರ್ಚಿ ಚೊರ್ಚಿ ಹರಿ ಒಟ್ಟಿ ಬೀಳತ್ ಕಾಣ್

ಚೊರೆ ಅಂಡೆ( ಚೊರಿ ಅಂಡಿ)   ತಲೆ ತಿನ್ನುವವನು

ಬಳಕೆ:

೧. ಅವ ದೊಡ್ ಚೊರಿ ಅಂಡಿ ಮರಾಯ. ಹೇಳಿದ್ದನ್ನೇ ಹೇಳಿ ಜೀವ ತಿಂತ

೨. ನೀನ್ ಎಷ್ಟ್ ಚೊರಿ ಮಾಡ್ರೂ ಅಷ್ಟೇ, ನಾ ಕೊಡುದಿಲ್ಲ ಅಂದ್ರ್ ಕೊಡುದಿಲ್ಲ

ಚಂಯ ಚಂಯ ಅಂಬುದು = ರಗಳೆಯಾಗುವಂತೆ ಮಾತಾಡುಅರ್ಥಹೀನ ಬಡಬಡಿಕೆ

ಬಳಕೆ –

೧. ಮಾತಾಡುಕೆ ಯಾರದ್ದಾರೂ ಕೆಮಿ ಸಿಕ್ರ್ ಸಾಕ್, ಚಂಯ ಚಂಯ ಅಂತಾ ಕೂಕಂಬ್ದ್. ಎಂತ ಹೇಳ್ಕ್ ಎಂತ ಹೇಳುಕಾಗ ಅಂತೇಳಿ ಗೋಚರವೇ ಇಲ್ಲ.

೨. ಎಂತಾ ಮರಾಯ ಚಂಯ ಚಂಯ ಅಂತೆ. ಒಂದ್ ಗಳ್ಗಿ ಸುಮ್ನ್ ಕೂಕಂಬ್ಕಾಗ್ದಾ

ಜಪ್ಜಪ್ಪು, ಜಪ್ಪುದ್ = ಹೊಡೆಬಲವಾಗಿ ಕುಟ್ಟು, ಬಡಿಯುವುದು, ಚಚ್ಚುವುದು

ಬಳಕೆ :

೧. ಅಧಿಕ ಪ್ರಸಂಗ ಮಾತಾಡ್ರೆ ಬಾಯ್ ಮೇಲ್ ಎರ್ಡ್ ಜಪ್ತೆ ಕಾಣ್

೨. ಅದೆಂತಕೆ ಮಗಿಗೆ ಆ ನಮನಿ ಜಪ್ತಿದ್ರಿ, ನಿಮ್ಗ್ ಸಿಟ್ಟ್ ಬಂದ್ರೆ ಅದನ್ನ್ ಸಣ್ಣ್ ಮಗಿನ್ ಮೇಲೆ ತೋರ್ಸುದಾ?

೩. ಒಳ್ಳೆ ಬಿಸ್ಲ್ ಇದ್ದಿತ್. ಇವತ್ ಹಾಸ್ಗಿ ಬಿಸ್ಲಿಗ್ ಹಾಕಿ ಜಪ್ಪಿರಾರು ಆತಿತ್ತ್

೪.ಈಗೀಗ ಕೆಯ್(ತೆನೆ ಸಹಿತ ಬತ್ತದ ಹುಲ್ಲು) ಜಪ್ಪುಕೆ ಜನ್ವೇ ಸಿಕ್ಕುದಿಲ್ಲ

೫. ಆ ನಮನಿ ಜಪ್ಪಿ ಒಗ್ದ್ರೆ, ಬಟ್ಟಿ ಎಂತಕಾತ್ತ್

೬. ನೀ ನನ್ ಸುದ್ದಿಗ್ ಬಂದ್ರೆ ಸಮಾ ಎರ್ಡ್ ಜಪ್ತೆ ಕಾಣ್

ಜಬ್ಜಬ್ಬು = ತೀರಾ ಹಳೆಯದಾದ, ಜೀರ್ಣಾವಸ್ಥೆಯಲ್ಲಿರುವ

ಇದೇ ರೀತಿ

ಜಬ್ಬ = ಮುದುಕ;  ಜಬ್ಬಿ = ಮುದುಕಿ

ಬಳಕೆ :

೧. ಆ ಹಳೆ ಜಬ್ ಅಂಗಿ ಹಾಯ್ಕಣ್‌ದಿದ್ರೆ ಬೇರೆ ಒಳ್ಳೆ ಅಂಗಿ ಹಾಯ್ಕಂಬ್‌ಕಾಗ್ದಾ?

೨. ಈ ನೋಟ್ ಪೂರಾ ಜಬ್ ಆಯಿತ್. ಯಾರೂ ತಕಂತಿಲ್ಲೆ. ಬೇರೆ ಕೊಡಿ

ಜಾಪ್ = ಚಾಪು

(ಇದು ಮೂಲತಃ ಮದ್ದಲೆ ಅಥವಾ ತಬಲ ಬಾರಿಸುವ ಒಂದು ಬಗೆಯ ಗತ್ತನ್ನು ಸೂಚಿಸುವ ಪದ. ಆದರೆ ಆಡುಮಾತಿನಲ್ಲಿ ಹುಸಿ ಜಂಬ, ಬಿಂಕ, ಗತ್ತು, ಒಣ ಪ್ರತಿಷ್ಟೆ ತೋರಿಸುವುದನ್ನು ಸೂಚಿಸಲು ಬಳಸಲಾಗುತ್ತದೆ)

ಬಳಕೆ:

೧. ಹೊಸ ಅಂಗಿ ಹಾಯ್ಕಂಡ್ ಬಂದಿದೆ ಅಂದೇಳಿ ಜಾಪ್ ಮಾಡುದ್ ಕಾಣ್. ಮಾತಡ್ಸರೆ ಸತೇ ಮಾತಾಡುದಿಲ್ಲ

೨.ನಿನ್ನ್ ಜಾಪೆಲ್ಲ ಇದ್ರೆ ಮನ್ಯಗ್ ಇಟ್ಕೋ.. ನನ್ನತ್ರ ಅದೆಲ್ಲ ನೆಡುದಿಲ್ಲ ಅಕಾ

ಜೀವ್ ತೆಕ್ಕಂಬ್ದ್ – ಆತ್ಮಹತ್ಯೆ ಮಾಡ್ಕಂಬ್ದ್

ಬಳಕೆ –

೧. ಈ ಮಕ್ಳಿಗೆಲ್ಲ ಭಾಷಿ ಇತ್ತಾ ಮಾರಾಯ್ರೆ… ಪರಿಕ್ಷೆಯಗೆ ಕಡ್ಮಿ ಮಾರ್ಕ್ ಬಂತ್ ಅಂದೆಳಿ ಜೀವ್ ತೆಕ್ಕಂತ್ವಲೇ

೨. ಆ ಮನ್ಯಗೆ ಕಳ್ದ್ ವರ್ಷ ಯಾರೋ ಜೀವ್ ತೆಕ್ಕಂಡಿರ್, ಅದ್ಕೆ ಬಾಡ್ಗಿ ಕಡ್ಮಿ ಇಟ್ರೂ ಯಾರೂ ಬತ್ತಿಲ್ಲ

ಜೀವ್ ಬಿಡ್ತ – ಈ ಶಬ್ದ ಕುಂದಾಪ್ರ ಕನ್ನಡದ್ದ್ ಮಾತ್ರ ಅಂತ ಹೇಳುಕಾತಿಲ್ಲ. ಬೇರೆ ಬೇರೆ ಬದಿಯಗ್ ಸತೆ ಇದೆ ನಮನಿ ಶಬ್ದ ಕೆಲವ ಇತ್ತ್. ಇದಕ್ಕೆ ಅರ್ಥ ಹೇಳುದಾರೆ ಪಂಚಪ್ರಾಣ ಅಂಬುದ್ ಸರಿ ಆತ್ತಾ ಕಾಣತ್ತ್

ಬಳಕೆ:

೧. ಅವನಿಗೆ ಮಾಯ್ನಣ್ಣ್ ಅಂದ್ರ್ ಸೈ… ಜೀವ್ ಬಿಡ್ತ ( ಬೇಕಿದ್ರೆ ನಿಮ್ಮ್ ನಿಮ್ಮ್ ಅನ್ಕೂಲಕ್ಕೆ ಮಾಯ್ ಹೆಣ್ಣ್ ಅಂದೆಳಿ ಬೇಕಾರ್ ಓದ್ಕಂಬುಕೆ ಅಡ್ಡಿಲ್ಲ)

೨. ಅವ್ಳ್ ಮಕ್ಳ್ ಅಂದ್ರೆ ಸಾಕ್, ಜೀವ್ ಬಿಡತ್ಲ್

ಜಂಬ್ಜಂಬು = ಕೆಟ್ಟ ವಾಸನೆ

ಬಳಕೆ:

೧. ಎಲಿಯೋ (ಹೆಗ್ಳ-ಹೆಗ್ಗಣ) ಎಂಥಾದೋ ಸತ್ತ್ ಹೋಯಿತಾ ಕಾಣತ್. ಆ ಬದಿಗ್ ಹೋಪು ಕೆಡ್ಯ..ಜಂಬ್ ಬತ್ತಾ ಇತ್ತ್

ತಕಂಡ್ ಹೋತ್ತಾ = ಇದಕ್ಕೆ ಹೀಗೇ ಅಂತ ಅರ್ಥ ಹೇಳಲು ಬರುವುದಿಲ್ಲವಾದರೂ ಪ್ರಾಣ ಹೋಗುತ್ತಾ ಅನ್ನುವ ಅರ್ಥ ಸುಮಾರಾಗಿ ಹೊಂದಿಕೆಯಾಗುತ್ತದೆ

ಬಳಕೆ –

೧. ಬಸ್ ಹತ್ತುವ ಅಂದೇಳ್ರೆ ಅಯ್ಯಬ್ಬಾ ಈ ಜನ ಎಲ್ಲಾ ನುರುದೇ… ಹಂಗಾರ್ ಬಸ್ ನಿಲ್ಲುದಿಲ್ಲ್ಯಾ.. ಇವ್ರಿಗೆಲ ಏನ್ ತಕಂಡ್ ಹೋತ್ತಾ?

೨. ಒಂದ್ ಮಾತಾಡ್ಕಾಯ್ದಿಲ್ಲ… ಆ ನಮನಿ ಬೊಬ್ಬಿ ಹೊಡಿತ್ಯಲ.. ನಿಂಗೇನ್ ತಕಂಡ್ ಹೋತ್ತಾ?

೩. ಈ ಮಳ್ಯಗೆ ತಿರ್ಗುಕ್ ಹೊರ್ಟಿರ್ಯಲೆ ಎಂತಾ ನಿಮ್ಮನ್ ತಕಂಡ್ ಹೋತ್ತಾ?

ತಳಿಕಂಡಿ  ಕಿಟಕಿ

ಬಳಕೆ:

೧. ತಳಿಕಂಡಿ ಬಾಗ್ಲ್ ಹಾಕ್ ಮಗಾ… ನುಸಿ ಪೂರಾ ಒಳ್ಗ್ ಬತ್ತ್

೨. ಎಂತ ಕೊಡಿ ಹುಡ್ಕ್ ತಿದ್ರ್ಯಾ, ಅಲಿ ತಳಿಕಂಡಿ ಹತ್ರ ಇತ್ತ್

ತಾಪತ್ರತಾಪತ್ರ್ಯ  ತಾಪತ್ರಯ ( ಆದಿದೈವಿಕ, ಆದಿಭೌತಿಕ ಮತ್ತು ಆಧ್ಯಾತ್ಮಿಕ ಎಂಬ ೩ ಬಗೆಯ ಕಷ್ಟಗಳು)ತೊಂದರೆ

೧. ಈ ಸರ್ತಿ ಮಳಿಯೊಂದ್ ಕೈಕೊಟ್ ಬ್ಯಾಸಾಯ ಮಾಡುವರಿಗೆ ಭಾರಿ ತಾಪತ್ರ ಮರಾಯ್ರೆ

೨. ಸ್ವಲ್ಪ ತಾಪತ್ರ ಇದ್ದಿತ್ತ್. ಅದ್ಕೆ ದುಡ್ಡ್ ಕೊಡುದ್ ಒಂದ್ ನಾಲ್ಕ್ ದಿನ ತಡ ಆತ್ತ್ ಅಕಾ?

೩. ಸೌದಿ ಪೂರಾ ಚಂಡಿ ಆಯಿ ಒಂದ್ ಬೆಂಕಿ ಹಿಡ್ಸ್‌ಕಿದ್ರೆ ತಾಪತ್ರ್ಯ ಕಂಡ್ರ್ ಬ್ಯಾಡ

ತಾಳ್ಳ್ = ಪಲ್ಯ

ಬಳಕೆ –

೧. ಇವತ್ತ್ ತೊಂಡೆಕಾಯಿ ತಾಳ್ಳ್ ಯಾರ್ ಮಾಡದ್? ಭಾರಿ ಲಾಯ್ಕ್ ಆಯ್ತ್

ತಾಳ್ = ಬಾಗಿಲ ಚಿಲಕಅಗುಳಿ

ಬಳಕೆ –

೧. ಈ ಮಳ್ಗಾಲ್ದಗೆ ಬಾಗ್ಲ್ ನೀರ್ ಕುಡ್ದ್, ತಾಳ್ ಹಾಕುಕೆ ಭಾರಿ ರಗ್ಳಿ

೨. ಮಕ್ಳೇ ಮಲ್ಕಣ್ಕಿದ್ರೆ ಮುಂಚೆ ಒಂದ್ಸಲ್ ಎಲ್ಲಾ ಬಾಗ್ಲ್ ತಾಳ್ ಹಾಕಿತಾ ಕಾಣಿ

ತಾಳ್ಸು= ಬೀಳಿಸು

(ತಾಳಿದವನು ಬಾಳಿಯಾನು ಅಂದೇಳಿ ಒಂದ್ ಗಾದಿ ಮಾತ್ ಇತ್ತಲ್ದಾ. ಅದನ್ನ ಕುಂದಾಪುರ ಕನ್ನಡದ ಅರ್ಥದಗೆ (ತಾಳು=ಬೀಳು) ಕಂಡ್ರೆ -ತಾಳಿದವನು ಹೇಗೆ ಬಾಳಿಯಾನು ಅಂತ ಕೇಣ್ಕಾತ್ತ್ ಕಾಣಿ  J)

ಬಳಕೆ:

೧.ಮಾಯ್ನ್ ಕಣ್ಣ್ ಕೈಗ್ ನೀಕುದಿಲ್ಲ. ಒಂದ್ ಅಡ್ಡ್-ಬಡ್ತಿಗೆ ಸಿಕ್ಕಿರೆ ಒಂದ್ ನಾಲ್ಕ್ ಹಣ್ಣ್ ಒಂದೇ ಪೆಟ್ಟಿಗೆ ತಾಳ್ಸುಕಾತಿತ್ತ್

೨.ಗ್ವಾಯ್ ಹಣ್ಣ್ ತಾಳ್ಸುಕಂದೇಳಿ ಕಲ್ಲ್ ಹೊಡಿಬೇಡಿ ಮಕ್ಳೇ.. ಮಿಜ್ರ್ ಪೂರಾ ಉದ್ರಿ ಹೋತ್ತ್… ಬೇಕಾರೆ ಕೊಕ್ಕಿ ತಂದ್ಕಂದ್ ಕೊಯ್ಕಣಿ

ತಿಪ್ಪ್/ ತಿಪ್ಪು = ಕೈಯಲ್ಲಿಹಿಡಿದು ಸುರುಳಿ ಮಾಡುತಿರುಗಿಸು

ಬಳಕೆ :

೧. ಪಾಠ ಓದ್ ಅಂದ್ರೆ ಆಡುಕ್ ಹೋಯಿದ್ಯಾ? ನಿನ್ ಕೆಮಿ ತಿಪ್ಪಿ ಹದ ಮಾಡ್ರ್ ಮಾತ್ರ ಸಮಾ ಆತ್ತ್ ಕಾಂತ್.

೨. ಅವ್ನಿಗೆ ಕಾಗ್ದ ಕೈಯಲ್ಲಿ ಇದ್ರ್ ಸಾಕ್. ಅದನ್ನ್ ತಿಪ್ಪಿ ತಿಪ್ಪಿ ಮುದ್ದಿ ಮಾಡುದ್ ಒಂದೇ ಕೆಲ್ಸ.

ತಿಂಬುದು = ತಿನ್ನುವುದು

ತಿಂಬುಕೆ = ತಿನ್ನಲಿಕ್ಕೆ

ತಿನ್ಕ್ = ತಿನ್ನಬೇಕು

ಬಳಕೆ :

೧. ಜೋರ್ ಹಸು (ಹಸಿವೆ) ಆತಾ ಅತ್ತ್. ತಿಂಬುಕೆ ಎಂತಾರು ಇದ್ರೆ ಕೊಡ್

೨. ಈ ದುಡ್ ಹಬ್ದಗೆ ಐಸ್‌ಕ್ರೀಂ ತಿಂಬುಕೆ ಅಂದೇಳಿ ಇಟ್ಕಂಡದ್

೩. ಹಲ್ಸಿನ್ ಹಣ್ ತಿನ್ಕ್ ಅಂದೇಳಿ ಜೋರ್ ಆಸಿ ಆತಿತ್ತ್

ತೆವಡ್ಕೋ, ತೆವಡಸ್ಕೋ=  ಒಂದು ಬೈಗುಳದ ಪದ. ಮೂಲೆಯಲ್ಲಿ ಹೋಗಿ ಬಿದ್ದುಕೋ

ಬಳಕೆ :

೧. ಮಾತಿನ್ ಮಧ್ಯ ನಿನ್ನನ್ ಕರ್ದರ್ ಯಾರ್. ಒಂದ್ ಬದ್ಯಗೆ ತೆವಡ್ಕೋ ಕಾಂಬ

೨. ಎಲ್ಲಿಗ್ ಹೊರಟ್ರೂ ಈ ಮಕ್ಕಳದ್ ಒಂದೆ ರಾಗ. ನಾನೂ ಬತ್ತೆ ಅಂದೇಳಿ. ಎಲ್ಲಾ ಒಳ್ಗೆ ತೆವಡ್ಸ್ಕಣಿ ಕಾಂಬ

ತೊಡಮಿ/ತೊಡಮೆ = ದನ-ಕರುಗಳು ಒಳಗೆ ಅಡ್ಡ ಬರದಂತೆ ಬೇಲಿಗೆ ಅಳವಡಿಸುವ ಬಿದಿರು ಅಥವಾ ಬೊಂಬಿನ ಚೌಕಟ್ಟು

(ನಂಬದೀಲ್ ಅಡ್ಕಿ ದಬ್ಬಿದೂ ಮಾಡ್ತ್ರ್ ಕೆಲವ್ ಸರ್ತಿ)

ಬಳಕೆ:

೧. ನೀ ಆಡುಕ್ ಹೋಪುದಾರೆ ಅಡ್ಡಿಲ್ಲ. ತೊಡ್ಮಿ ಹಾಕಿ ಹೋಗ್. ಇಲ್ದಿರೆ ಗಂಟಿ ಪೂರಾ ಒಳ್ಗ್ ಬತ್ತೊ

ತೊಡು = ತಿನ್ನಬೇಕೆಂಬ ಆಸೆಹಸಿವೆ ಆದಂತೆ ಅನ್ನಿಸೋದುಬಾಯಿ ಚಪಲ

ಬಳಕೆ :

೧. ಈ ಮಳಿ ಬಪ್ಪ್ ಸಮಿಗೆ ತೊಡು ಜಾಸ್ತಿ. ಎರ್ಡ್ ಹಪ್ಳ ಸುಟ್ಟಾರು ತಿನ್ಲಕ್ಕಿದ್ದಿತ್

೨. ಮಕ್ಳ್ ಶಾಲಿಯಿಂದ್ ಬಂದರೇ ತೊಡು ಆತ್ತ್ ಅಂತೋ ಈಗ. ಎಂತಾರೂ ಮಾಡಿಡ್ಕ್

ದರ್ಶಿನ= ಮೈಮೇಲೆ ದೇವ-ದೈವಗಳ ಆವಾಹನೆಯಾಗುವುದು

ಇದಕ್ಕೆ ಕುಂದಾಪ್ರ ಕನ್ನಡದಗೆ “ಮೈಮೇಲ್ ಬಪ್ಪುದ್” ಅಂತ್ ಸತೇ ಹೇಳ್ತ್ರ್.

( ಏನಾದರೂ ತೊಂದರೆ ತಾಪತ್ರಯಗಳು ಬಂದಾಗ, ಪಾತ್ರಿ ಅಂತ ಕರೆಯಲ್ಪುಡುವ ವ್ಯಕ್ತಿಯ ಮೈಮೇಲೆ ದೇವ-ದೇವತೆಗಳನ್ನು ಆವಾಹಿಸಿ ತಮ್ಮ ತೊಂದರೆ, ಸಂಕಷ್ಟಗಳನ್ನು ದೇವರ ಮುಂದೆ ನಿವೇದಿಸಿಕೊಂಡು ಅದಕ್ಕೆ ಪರಿಹಾರ,ಸಲಹೆಗಳನ್ನು ಪಡೆಯುವ ಒಂದು ವಿಶಿಷ್ಟ ವಿಧಿ-ವಿಧಾನ. ಇಲ್ಲಿ ಯಾವ ದೇವರು ಅಥವಾ ದೈವದ ಆವಾಹನೆ ನಡೆಸಲಾಗುತ್ತದೋ ಆ ದೇವರು-ಯಾ-ದೈವವೇ ಪಾತ್ರಿಯ ಬಾಯಲ್ಲಿ ತನ್ನ ನುಡಿಯನ್ನು ನುಡಿಸುತ್ತದೆ ಅನ್ನುವುದು ನಂಬಿಕೆ.ಇದರ ಸತ್ಯಾಸತ್ಯತೆಗಳ ಬಗ್ಗೆ ನಾನಿಲ್ಲಿ ಚರ್ಚಿಸಲು ಹೋಗುವುದಿಲ್ಲ. ಎಲ್ಲ ಅವರವರ ಭಾವ-ಭಕುತಿಗೆ ಬಿಟ್ಟ ವಿಚಾರ. ಆದರೆ ಈ ಪ್ರಕ್ರಿಯೆಯಲ್ಲಿ ಇರುವ ವೈಶಿಷ್ಟ್ಯವೆಂದರೆ ತುಂಬಾ ಕಷ್ಟದಲ್ಲಿರುವವರಿಗೆ ಹೇಳಿಕೊಳ್ಳಲಾಗದ ದುಃಖ ಇರುವವರಿಗೆ, ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದವರಿಗೆ ತಮ್ಮ ಕಷ್ಟ-ಕೋಟಲೆಗಳನ್ನು ದೇವರ ಮುಂದೆ ನಿವೇದಿಸಿಕೊಂಡು ಮನಸ್ಸುಹಗರಾಗಿಸಿಕೊಂಡು ಸಮಾಧಾನ ಹೊಂದುತ್ತಾರೆ. ಅವರ ಸಮಸ್ಯೆ ಪರಿಹಾರವಾಗುತ್ತದೋ ಇಲ್ಲವೋ ಅನ್ನುವುದನು ಒತ್ತಟ್ಟಿಗಿಟ್ಟು ನೋಡಿದರೂ… ಕುಸಿದು ಹೋದ ಭರವಸೆ ಮರಳಿಸಿ ಒಂದಿಷ್ಟು ಸಮಾಧಾನವು ಅವರಲ್ಲಿ ಹೊಸ ಹುಮ್ಮಸ್ಸು ತುಂಬುತ್ತದನ್ನುವುದಂತೂ ಹದಿನಾರಾಣೆ ನಿಜ!! ನಗರಗಳಲ್ಲಿ ಕೌನ್ಸಿಲಿಂಗ್ ಎಂಬ ದೊಡ್ಡ ದೊಡ್ಡ ಶಬ್ದ ಬಳಸುತ್ತೆವೆ…. ಕೌನ್ಸಿಲಿಂಗಿನ ಎಂತಾ ಸರಳ-ಸುಲಭ ಗ್ರಾಮ್ಯ ರೂಪ ನೋಡಿ ಈ ದರ್ಶಿನ. ನಾವೂ ಮೂಢ ಅಂತ ಲೇವಡಿ ಮಾಡುವ ನಂಬಿಕೆಗಳಲ್ಲೂ ಎಂತಾ ತಿರುಳಿರುತ್ತೆ ನೋಡಿ. ನಾವು ಬರೀ ಸಿಪ್ಪೆಯನ್ನು ನೋಡಿ ಒಣಗಿದೆ ಅಂತ ತೀರ್ಮಾನಕ್ಕೆ ಬಂದು ಬಿಡುತ್ತೇವೆ. ಸಿಪ್ಪಿ ಬಿಡಿಸಿ ನೋಡಿದರೆ ಸಿಹಿಯಾದ ರಸಭರಿತ ತಿರುಳಿರಬಹುದಲ್ಲವೇ? ಇದೆಯೋ ಇಲ್ಲವೋ ಸಿಪ್ಪೆ ಸುಲಿದರೆ ತಾನೆ ಗೊತ್ತಾಗೋದು.. ಇರಲಿ, ನನ್ನ ಪುರಾಣವೇ ಉದ್ದವಾಯ್ತು

ಅಂದ ಹಾಗೆ.. ಈ ಶಬ್ದವನ್ನು ಅತಿಯಾದ ಕೋಪದಿಂದ ತರತರ ನಡುಗುವವರನ್ನು ಲೇವಡಿ ಮಾಡಲು ಸಹಾ ಬಳಸುತ್ತಾರೆ)

ಬಳಕೆ:

೧. ಮಗಿಗೆ ಏಗ್ಳಿಕ್ ಕಂಡ್ರೂ  ಹುಷಾರಿಪ್ಪುದಿಲ್ಲ. ಒಂದ್ ದರ್ಶಿನ ಮಾಡಿಯಾರೂ ಕೇಣ್ಲಕ್ಕಿತ್ತ್

೨.ಸಿಟ್ಟ್ ಬಂದ್ರ್ ಸಾಕ್… ಮೈಮೇಲ್ ದರ್ಶಿನ ಬಂದರ್ ಕಣಗ್ ಆಡ್ತ

ದರ್ಲಿ ತರಗೆಲೆ

ಬಳಕೆ –

೧  ಇದ್ಯಾವ್ ನಮನಿ ಗಾಳಿಯಪ್ಪ, ಬೆಳಿಗ್ಗೆಯಷ್ಟೇ ದರ್ಲಿ ಗುಡ್ಸದ್ದ್, ಈಗ ಇನ್ನೊಂದ್ಸಲಿ ಗುಡ್ಸಕಾಯ್ತ್

ದಾನಿ ಸೊಳಿ ಅಂತಾ ಇಪ್ಪುದ್  ಕೆಲಸಕ್ಕೆ ಬಾರದ ಮಾತಾಡುತ್ತ ಇರುಒಣಹರಟೆ ಮಾಡು

(ದಾನಿ – ಹಲಸಿನ ಹಣ್ಣಿನ ಬೀಜ ;  ಸೊಳೆ  ತೊಳೆ )

 (ಈ ತರದ್ ಒಂದ್ ನುಡಿಕಟ್ಟ್ ಇತ್ತ್. ನಂಗ್ ಗೊತ್ತಿದ್ದ ಹಾಂಗೆ ಇದ್ರ ಅರ್ಥ ‘ಅಪ್ರಯೋಜಕ ಮಾತಾಡು, ಸುಮ್ಮನೆ ಏನಾದ್ರೂ ಪಟ್ಟಾಂಗ ಹೊಡೆಯೋದು’ ಅಂದೇಳಿ. ಇದ್ ಅಲ್ದೇ ಬೇರೆ ಅರ್ಥ ಗೊತ್ತಿದ್ರ್ ಹೇಳಿ)

ಬಳಕೆ –

೧. ಬೆಳ್ಗಿಂದ ಸಾಂಯ್ಕಾಲದ್‌ವರಿಗೆ ಬಂದರ್ ಹೋದರ್ ಹತ್ರ ಎಲ್ಲಾ ದಾನಿ ಸೊಳಿ ಅಂತಾ ಕೂಕಂಬ್ ಪಾಲ್(ಬದ್ಲ್) ಎಂತಾರೂ ಬೇರೆ ಕೆಲ್ಸ ಮಾಡ್ಲಕ್ಕಲ್ದಾ?

ದಾವ್ = ದಾಹಬಾಯಾರಿಕೆ

ಬಳಕೆ :

೧. ಜೋರ್ ದಾವ್ ಆತಾ ಇತ್ತ್. ಒಂಚೂರ್ ಬೆಲ್ಲ ನೀರ್ ಕೊಡ್ ಕಾಂಬಾ

೨. ಬೆಳಿಗ್ಗೆ ದ್ವಾಸಿ ತಿಂದದ್ದಕ್ಕೋ ಏನೋ..ಜೋರ್ ದಾವ್ ಆತಾ ಇತ್ತಪ್ಪ

ದಿಗಡ್‌ದಿಮ್ಮಿ / ದಿಗಡುದಿಮ್ಮಿ = ಸೊಕ್ಕಿನವಳು , ಯಾರ ಅಂಕೆಗೂ ಸಿಗದವಳು,

ಬಳಕೆ :

೧. ಅವ್ಳಿಗೆ ಸಲ್ಗಿ ಕೊಟ್ಟದ್ ಜಾಸ್ತಿ ಆಯ್ತ್. ಈಗ ಒಳ್ಳೆ ದಿಗಡ್‌ದಿಮ್ಮಿ ಕಣಗೆ ತಿರ್ಗುದ್ ಕಾಂಬ್ರ್ಯೆಲಾ..

೨. ಆ ದಿಗಡ್‌ದಿಮ್ಮಿ ಬಾಯಿಗ್ ಕೋಲ್ ಹೆಟ್ಟುದ್ ಬ್ಯಾಡ ಮರಾಯ. ಎಂತಾರು ಹೆಳ್ರ್ ಜಗ್ಳಕ್ಕೇ ಬತ್ತ್ಲ್

೩. ಒಳ್ಳೆ ದಿಗಡ್‌ದಿಮ್ಮಿ ಕಣಗೆ ಹುಡಗ್ರೊಟ್ಟಿಗೆ ಆಡತ್ ಕಾಣ್

ದೊಡ್ ಸಂಗ್ತಿ = ದೊಡ್ಡ ಮನುಷ್ಯದೊಡ್ಡ ಜನ

ಬಳಕೆ :

೧. ಮೊನ್ನೆ ದಾರಿ ಮೇಲ್ ಸಿಕ್ರೂ ಮಾತಡ್ಸ್‌ದೇ ಹೋದ್ಯಲಾ..ಹಂಗಾರ್ ಅಷ್ಟ್ ದೊಡ್ ಸಂಗ್ತಿ ಆಯಿ ಹೋದ್ಯಾ ಮಾರಾಯ?

೨. ಅವ್ರಿಗೇನ್ ಮರ್ರೆ..ದೊಡ್ ಸಂಗ್ತಿ.. ಮೂರಲ್ಲ ನಾಕ್ ಕಾರ್ ಬೇಕಾರು ಇಟ್ಕಣ್ಲಕ್

ಧಾತ್ ತಪ್ಪು = ಎಚ್ಚರ ತಪ್ಪುಪ್ರಜ್ಞೆ ತಪ್ಪು

(ಧಾತು ಅನ್ನುವ ಪದ ಶಬ್ದಕೋಶದಲ್ಲಿ ಇದೆಯಾದರೂ ಪ್ರಜ್ಞೆ ಅನ್ನುವ ಅರ್ಥದಲ್ಲಿ ಇದರ ಬಳಕೆ ನಮ್ಮ ಕುಂದಾಪ್ರ ಬದಿ ಬಿಟ್ಟು ಬೇರೆ ಕಡೆ ಹೆಚ್ಚಾಗಿ ಇಲ್ಲ ಅಂತ ನನ್ನ ಭಾವನೆ)

ಬಳಕೆ

೧. ಅವ್ರ್ ಮೊನ್ನೆ ಕಾಂತ ಕಾಂತ ತಲಿ ತಿರ್ಗಿ ಬಿದ್ದ್, ಧಾತ್ ತಪ್ಪಿ ಹೋದ್ದಲ್ದೇ

೨.ಅಂವ ನಿದ್ರಿ ಹೊಡುದ್ ಅಂದ್ರೆ…ಮಲ್ಕಂಡನಿಗೆ ಇತ್ತಿನ್ ಧಾತ್ ಇಲ್ಲ.

ನಿವಾಳ್ಸು = ಒಂದು ಬೈಗುಳದ ಪದ. ಇಲ್ಲಿಂದ ತೊಲಗು ಅನ್ನೋ ಅರ್ಥ

ಬಳಕೆ :

೧. ನಂಗ್ ಸಿಟ್ಟ್ ಬಂದ್ ಮತ್ತೆಂತಾರೂ ಹೇಳೂ ಮೊದ್ಲ್ ನೀ ಇಲ್ಲಿಂದ ನಿವಾಳ್ಸ್

೨. ನಿಂಗೆ ಇಲ್ಲ್ ಇಪ್ಪುಕಾಗ್ದಿದ್ರೆ ಯಾರದ್ದೇನ್ ಒತ್ತನ್ಕಿ ಇಲ್ಲ. ನಿವಾಳ್ಸ್ ಇಲ್ಲಿಂದ

ನೆಗ್ / ನೆಗ್ಗು = ಮೇಲಕ್ಕೆತ್ತು , ಎತ್ತು

ಬಳಕೆ :

೧. ಈ ಚೀಲ ಸಮಾ ಬಾದಿ ಇತ್ತ್. ಒಂಚೂರ್ ನೆಗ್ಗಿ ತಲಿ ಮೇಲ್ ಇಡ್‌ತ್ರ್ಯಾ?

೨. ಮಗಾ, ಅಲ್ಲೆಲ್ಲ ಕೆಸ್ರ್ ಇತ್ತ್. ಬಪ್ಪತಿಗೆ ಅಂಗಿ ಒಂಚೂರ್ ನೆಗ್ಕಂಡ್ ಬಾ. ಇಲ್ದೀರ್ ಅಂಗಿ ಪೂರಾ ಕೆಸ್ರ್ ಆಪ್ಕಿತ್ತ್.

ನೆಗಾಡು = ನಗುವುದು

ಬಳಕೆ :

೧. ನೆಗಾಡುಕೆ ಈ ಮಕ್ಕಳಿಗೆ ಒಂದ್ ವಿಷಯ ಬೇಕಂದೇಳಿ ಇಲ್ಲ.

೨. ಹಾಸಿಗಾರನ್ ಮಾತ್ ಕೇಂಡ್ ನೆಗಾಡಿ ನೆಗಾಡಿ ಸಾಕಾಯ್ತ್

ನರ್ಕುದ್ = ನರಳುವುದು

ನರಕು – ನರಳು, ಮುಲುಕು (ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ:

೧. ಪಾಪ ಅವ್ನ್ ಅವಸ್ಥಿ ಕಾಂಬ್ಕೆಡಿಯ, ಮಲ್ಕಂಡಲ್ಲೇ ಸೈ. ರಾತ್ರಿಡೀ ನರ್ಕತಾ ಇರ್ತ

೨. ಅಂವಂದೆಲ್ಲ ಬರೀ ನಾಟ್ಕ. ಹಗೂರ ಮೈ ಮುಟ್ದಾಂಗ್ ಮಾಡದ್ದ್ ಅಷ್ಟೇ, ಭಾರಿ ನೋವಾದರ್ ಕಣಗೆ ನರ್ಕತಾ ಇದ್ದ ಕಾಣ್

ನೇಲ್ಸು = ಜೋತಾಡು, ತೂಗುಹಾಕು, ನೇತಾಡಿಸು, ಜೋತು ಬೀಳು

ನೇಲು(ೞು)- ನೇತು ಹಾಕು, ತೂಗುಹಾಕು, ತೂಗುಬೀಳು, ಜೋತುಬೀಳು (ಸಂಕ್ಷಿಪ್ತ ಕನ್ನಡ ನಿಘಂಟು)

೧. ಮಳ್ಗಾಲ ಶುರುವಾರ್ ಸಾಕ್, ಬಟ್ಟಿ ಒಣ್ಸುದೆ ಒಂದ್ ದೊಡ್ಡ್ ರಾಮಾಯ್ಣ. ಮನ್ಯಗೆ ಎಲ್ಲ್ ಕಂಡ್ರೂ ವಸ್ತ್ರ ನೇಲ್ತಾ ಇರತ್ತ್

೨. ಸಿದ್ದಾಪ್ರ ಸಂತಿ ದಿನ ಬಸ್ಸ್ ಹತ್ತುಕೆಡ್ವಾ? ಯಾವ್ ಬಸ್ಸ್ ಕಂಡ್ರೂ ಬಾಗ್ಲಗೆ ಹತ್ತಿಪ್ಪತ್ ಜನ ನೇಲ್ತಾ ಇರ್ತ್ರ್

೩. ನಿಂಗ್ ಒಂದ್ಸಾರಿ ಹೇಳ್ರ್ ಅರ್ಥ ಆತಿಲ್ಯಾ, ನಾ ಕೊಡುದಿಲ್ಲ ಅಂದ್ರೆ ಕೊಡುದಿಲ್ಲ. ಮತ್ತ್ ಅದನ್ನೇ ಹಿಡ್ಕಂಡ್ ನೇಲ್ತಾ ಆಯ್ಕಂಬೆಡ

ಪಕ್ತಾಫಕ್ತಾ – ಬರೀ, ಯಾವಾಗ್ಲೂ

(ಇದ್ ಬಂದದ್ ಮರಾಠಿ ಮೂಲದಿಂದ. ಮೂಲ ಶಬ್ದ ‘ಫಕ್ತ್’.)

ಬಳಕೆ –

೧. ಅವ್ನಿಗೆ ಪಕ್ತಾ ಆಡು ಗಿರ ಬಿಟ್ರೆ ಮತ್ತೆಂತ ಇಲ್ಲ( ಏಗ್ಳಿಕೆ ಕಂಡರೂ ಅಂತ ಬೇಕಾರ್ ಅರ್ಥ ಮಡ್ಕಂಬ್ಕೆ ಅಡ್ಡಿಲ್ಲ)

೨. ಅವ ಇತ್ತಿತ್ಲಾಯಿ ಪಕ್ತಾ ಸುಳ್ಳ್ ಹೇಳುಕ್ ಕಲ್ತಿದ

ಪಡಾವ್  = ಪ್ರಯೋಜನಲಾಭ

ಬಳಕೆ :

೧. ಅವ್ರ್ ಹಾಂಗೆಲ್ಲ್ ಈ ಬದಿಗ್ ಬಪ್ಪರಲ್ಲಪ್ಪ. ಏನಾರೂ ಪಡಾವ್ ಇದ್ರ್ ಮಾತ್ರ ಬತ್ರ್.

೨. ನಾವ್ ಸುಮ್ನೆ ಒದ್ಕಂಡದ್ದೇ ಬಂತ್, ಪಡಾವ್ ಆದ್ದ್ ಯಾರಿಗೋ

ಪತ್ತಿ = ಆಹಾರ

ಇದು ಬಹುಶಃ ಪಥ್ಯ ಶಬ್ದದಿಂದ ಬಂದಿರಬಹುದು. ಪಥ್ಯ ಅಂದರೆ ನಿತ್ಯಗಟ್ಟಳೆಯ ಆಹಾರ ಅನ್ನುವ ಅರ್ಥ ಕೂಡಾ ಇದೆ

ಬಳಕೆ

೧. ಎಂತಾ ಸಪೂರ ಆಯಿದೆ ಮರಾಯಾ? ಸಮ ಪತ್ತಿ ತಿಂತಿಲ್ಯಾ?

ಪಿರ್ಕಿ = ತಲೆ ಸರಿಯಿಲ್ಲದವನು(ಳು)ಅರೆ ಮರುಳ(ಳಿ)

(ಇನ್ನೊಂದ್ ಶಬ್ದ ಅಂಡೆಪಿರ್ಕಿ ಅಂತ. ನಂಗ್ ಈ ಅಂಡೆ ವಿಶೇಷಣ ಎಂತಕೆ ಹೇಳ್ತ್ರ್ ಅಂತ್ ಗೊತ್ತಿಲ್ಲ. ಅರ್ಥ ಯಾರಿಗಾದ್ರು ಗೊತ್ತಿದ್ರೆ ಹೇಳಿ)

ಬಳಕೆ :

೧. ಅಂವ ದೊಡ್ ಪಿರ್ಕಿ ಮರಾಯ. ಅವ್ನತ್ರ ಮಾತಾಡುಕೆ ಹೋಗ್ಬೇಡ.

೨. ಅವ್ನಿಗೆ ಇತ್ತಿತ್ಲಾಯ್ ಎರ್ಡ್ ಸುತ್ತ್ ಕಡ್ಮಿ ಆಯಿತಾ ಅಂದೇಳಿ. ಎಂತ ಕೇಂಡ್ರೂ ಪಿರ್ಕಿಗಳ್ ಕಣಗೆ ಉತ್ರ ಕೊಡ್ತ

ಪ್ರಿಯ,ಪಿರಿಯ =  ದುಬಾರಿ

ಬಳಕೆ :

೧. ಅಕ್ಕಿ, ಬ್ಯಾಳಿ ( ಬೇಳೆ) ಎಲ್ಲಾ ಒಂದ್ ಪ್ರಿಯ ಆದ್ದ್ ಅಂದ್ರೆ, ಇನ್ನ್ ಸಾಮಾನ್ಯದರ್ ಉಂಬುದೂ ಕಷ್ಟ

೨. ಇದೆ ನಮನಿ ಎಲ್ಲ ಪ್ರಿಯ ಆತಾ ಹೋರೆ, ಅಗ್ಗ ಆಪುದ್ ನಮ್ ಜೀವ ಒಂದೆಯಾ ಅಂದೇಳಿ

ಪುರೈಸು = ಫೂರೈಸು, ನೀಗಿಸು, ಈಡೇರಿಸು, ಪೂರ್ತಿಮಾಡು,ಭರ್ತಿ ಮಾಡು,ಸರಬರಾಜು, ಸಾಗಣೆ

( ಪೂರೈಸು ಅನ್ನುವ ಗ್ರಾಂಥಿಕ ರೂಪ ಬಳಕೆಯಲ್ಲಿದೆಯಾದರೂ ಅದನ್ನು ಕುಂದಾಪುರ ಕನ್ನಡದಲ್ಲಿ ಚಿಕ್ಕದಾಗಿ-ಚೊಕ್ಕವಾಗಿ ಪುರೈಸು ಅಂತ ಬಳಕೆಯೇ ಜಾಸ್ತಿ. ಗ್ರಾಂಥಿಕ ಕನ್ನಡದಲ್ಲಿ ಪೂರೈಸು ಅನ್ನುವುದರ ಅರ್ಥ ಹೆಚ್ಚಾಗಿ ಒದಗಿಸು, ಈಡೇರಿಸು, ಪೂರ್ತಿಮಾಡು ಅಥವಾ ಮುಗಿಸು ಅನ್ನುವ ಅರ್ಥದಲ್ಲಿಯೇ ಬಳಸಲಾಗುತ್ತದೆ. ಉದಾಹರಣೆಗೆ ವಿದ್ಯುತ್ ಪೂರೈಕೆ, ಆಸೆ ಪೂರೈಸು, ಕೆಲಸವನ್ನು ಪೂರೈಸು. ಆದರೆ ಕುಂದಾಪುರ ಕನ್ನಡದಲ್ಲಿ ಈ ಎಲ್ಲಾ ಸಂದರ್ಭಗಳಿಗೆ ಹೊರತಾದ ಬಳಕೆಯೂ ಇದೆ. ಇದಕ್ಕೆ ಬೆಂಗಳೂರಿನ ಕಡೆ ಬಳಕೆಯಲ್ಲಿರುವ, ವ್ಯಾಪಾರಿಗಳು ಉಪಯೋಗಿಸುವ ಗಿಟ್ಟುವುದು”aಅನ್ನುವ ರೂಡಿಯಲ್ಲಿನ ಶಬ್ದಕ್ಕೆ ತೀರಾ ಹತ್ತಿರದ ಅರ್ಥದಲ್ಲಿ ವ್ಯಾಪಾರ-ವ್ಯವಹಾರಗಳ ಕೊಡು-ಕೊಳ್ಳುವಿಕೆಯಲ್ಲಿ ಬಳಸಲಾಗುತ್ತದೆ. ನನಗೆ ತಿಳಿದಂತೆ ಈ ರೀತಿಯ ಅರ್ಥದಲ್ಲಿ ಪೂರೈಸು ಪದವನ್ನು ಬೇರೆ ಕಡೆ ಬಳಸುವುದು ತೀರಾ ಕಡಿಮೆ)

ಬಳಕೆ:

೧. ನನ್ ಒಬ್ನ್ ಕೈಲ್ ಮಾಡಿ ಪುರೈಸುಕಾಪ್ದಲ್ಲ. ಯಾರಾರೂ ನಾಕ್ ಜನ ಒಟ್ಟಿಗಿದ್ರೆ ಒಂದ್ ಕೈ ಕಾಣ್ಲಕ್ಕ್

೨. ಒಂದ್ ನಾಕ್ ದಿನ ಇದ್ದ್ ಹೋಪ್ರಿಯಲೆ, ನಾಳಲ್ಲ ನಾಡ್ದಂದ್ರೆ ಕಮ್ಲಶಿಲಿ ಹಬ್ಬ. ಹಬ್ಬ ಪುರೈಸ್ಕಂಡೇ ಹೋದಂಗಾತ್

೩. ಇಲ್ಯೇ.. ನೀವ್ ಅಷ್ಟ್ ಕಡ್ಮಿಗ್ ಕೇಂಡ್ರ್ ಹ್ಯಾಂಗೆ, ಅಷ್ಟಕ್ ಕೊಟ್ರೆ ನಮ್ಗ್ ಪುರೈಸುದಿಲ್ಲ

ಬರ್ಟುದ್ = ಪರಚು, ಉಗುರಿನಿಂದ ಗೀರು, ಗಿಬರು

ಬಳಕೆ:

೧. ಮಗಿನ್ ಕಯ್ಯುಗ್ರ್ ತೆಗಿ ಅಂದೇಳಿ ಸಾವ್ರ್ ಸತಿ ಹೇಳ್ದೆ, ಇಲ್ಕಾಣ್ ಈಗ ಅದ್ ಬರ್ಟದ್, ಅದಕ್ಕೆಂತ ಗೊತ್ತಾತ್, ಸಣ್ಣದಲ್ದಾ, ಹಾಂಗಾರೆ ನಿಂಗೂ ಬಾಷಿ ಬ್ಯಾಡ್ದಾ?

೨. ಎಂತದೋ ಕಚ್ದಾಂಗ್ ಆಯ್ತ್, ಒಂಚೂರ್ ತೊರ್ಸ್ಕಂಡದ್ದೇ ಸೈ, ಮೈ ಪೂರಾ ಬರ್ಟ್ಕಂಡಾಂಗೆ ತುಪ್ರ್ ತುಪ್ರ್ ಆಯ್ತ್ ಕಾಣ್

ಬಡ್ಗಿ  ಏಟು, ಪೆಟ್ಟು, ಹೊಡೆತ

(ಈ ಪದ ಬಹುಶಃ ಬಡಿಗೆ (ಕೋಲು, ದೊಣ್ಣೆ) ಪದದಿಂದ ಬಂದಿರಬೇಕೆಂಬುದು ನನ್ನ ಅನಿಸಿಕೆ)

ಬಳಕೆ –

೧  ಸುಮ್ನ್ ಕೂಕಂತ್ಯಾ ಇಲ್ಲ ಬಡ್ಗಿ ಬೇಕಾ ಹೇಳ್

೨  ಮನಿಗ್ ಬಾ ಇವತ್ತ್, ಅಪ್ಪಯ್ಯನಿಗೆ ಹೇಳಿ ಸಮಾ ಎರ್ಡ್ ಬಡ್ಗಿ ಬಿdrEದ್ರೇ ನಿಂಗ್ ಬುದ್ಧಿ ಬಪ್ದ್

ಬತ್ತ್ ಬರವಾ? = ಈಗ ಬರ್ತಾ ಇರುವುದಾ?

ಬಳಕೆ:

೧. ಹೋ… ಬಾಳಾ ಅಪರೂಪದರ್… ಏನ್ ಬತ್ತ್ ಬರವಾ?

ಬಯಿನ್ ತೇರ್, ಬಯಿಂತೇರ್= ಬೈಗಿನ ತೇರು, ಸಂಜೆ ಹೊತ್ತು ರಥ ಎಳೆಯುವುದು

(ನಮ್ಮೂರ ಕಡೆ ಜಾತ್ರೆಯಲ್ಲಿ ಸಂಜೆಯ ಹೊತ್ತು ಎರಡನೆ ಬಾರಿ ರಥವನ್ನು ರಥಬೀದಿಯಲ್ಲಿ ಭಕ್ತರು ಎಳೆಯುತ್ತಾರೆ. ಅದಕ್ಕೆ ಬಯಿಂತೇರ್ ಅಂದರೆ ಬೈಗಿನ ಹೊತ್ತಿನ ತೇರು ಅನ್ನುತ್ತಾರೆ)

ಬಳಕೆ:

೧. ಬೆಳಿಗ್ಗೆ ಹಬ್ಬಕ್ ಹೋಪ್ಕಾಯಿಲ್ಲ.. ಮಧ್ಯಾನ್ಮೇಲಾರೂ ಹೋಯಿ ಬಯಿಂತೇರ್ ಆರೂ ಕಂಡ್ಕಂದ್ ಬರ್ಕಮಗಿತ್ತ್

ಬಲ ಮಾಡುದ್ = ಬೆಳೆಸಿ ದೊಡ್ಡವರನ್ನಾಗಿ ಮಾಡು

ಬಳಕೆ –

೧.ದೊಡ್ಡಕೆ ಮಾತ್ ಬತ್ತ್ ಅಂದೇಳಿ ಮಾತಾಡ್ಬೆಡ, ಮಾತಾಡುಕೆ ಭಾರಿ ಸುಲ್ಭ, ನಿಮ್ಮನೆಲ್ಲ ಬಲ ಮಾಡ್ಕಿದ್ರೆ ಎಷ್ಟ್ ಕಷ್ಟ್ ಪಟ್ಟಿದೆ ಅಂದೇಳಿ ನಿಂಗೆಂತ ಗೊತಿತ್?

೨.ನಿಮ್ಗ್ ಬೇರೆ ಕೆಲ್ಸ ಇಲ್ಯಾ, ಮಕ್ಳನ್ನೆಲ್ಲ ಸಾಕಿ ಬಲ ಮಾಡುದೇ ಕಷ್ಟ, ಇನ್ನ್ ಶಾಲಿ ಗೀಲಿಗೆಲ್ಲ ಕಳ್ಸುಕೆ ಎಲ್ಲಿಗೆ ಹೋಪ್ದ್?

ಬಲಾದರ್ = ಬಲ ಆದವರು ,ದೊಡ್ಡವರು , ಹಿರಿಯರು

ಬಳಕೆ –

೧. ಸಣ್ಣರಂದೇಳಿ ಇಲ್ಲ, ಬಲಾದರಂದೇಳಿ ಇಲ್ಲ, ಎದ್ರುತ್ರ ಕೊಡುಕೊಂದ್ ಸಮಾ ಕಲ್ತಿದೆ ಅಲ್ದಾ, ನಿಂಗ್ ಶಾಲ್ಯಗೆ ಮಾಷ್ಟ್ರ್ ಇದ್ನೇ ಹೇಳಿ ಕೊಟ್ಟದ್ದಾ?

೨ ನೀವ್ ನೀವೆ ಜಗ್ಳ ಮಾಡ್ಕಂಡ್ ಹೊಡ್ಕಂಬ್ದಾರೆ, ಹಂಗಾರೆ ಮನ್ಯಗೆ ಬಲಾದರ್ ಅಂದೇಳಿ ಇಪ್ದ್ ಎಂತಕೆ?

ಬಳ್ಕಂಡ್ =  ತೇಲಿಕೊಂಡು, ಬಳಿದುಕೊಂಡು (ಹಚ್ಚಿಕೊಂಡು ಅನ್ನುವ ಅರ್ಥ)

ಬಳಕೆ –

೧. ನೆರಿ ಬಂದ್ರೆ ಹೊಳಿಯಗೆ ದೊಡ್ ದೊಡ್ ಮರ್ ಬಳ್ಕಂಡ್ ಬತ್ತ್

೨. ತೋಡಗ್ ನೀರ್ ಮಸ್ತ್ ಇತ್ತ್. ಮಕ್ಳ್ ಯಾರೂ ಆ ಬದಿಗೆ ಹೋಯ್ಬೆಡಿ. ಬಳ್ಕಂಡ್ ಹೋತ್ರಿ

೩. ಮಂಡಿಗ್ ಸಮಾ ಎಣ್ಣಿ ಬಳ್ಕಂಡದ್ದಾ?

೪. ಅದ್ಯಾವ್ ನಮ್ನಿ ಪೌಡ್ರ್ ಬಳ್ಕಂಡದ್. ಒಳ್ಳೆ ಯಾಸ ಬಂದಂಗಿತ್ತ್

ಬಳುದ್ = ಬೀದಿ ಸುತ್ತೋದುಮಾಡೋಕೆ ಕೆಲಸವಿಲ್ಲದೆ ವೃಥಾ ಅಲೆದಾಡು

ಬಳಕೆ –

೧. ಇಪ್ಪತ್ನಾಕ್ ಗಂಟಿ ಊರ್ ಮೇಲ್ ಬಳುದ್ ಕೈದ್ ಮಾಡಿ ಎಂತಾರೂ ಕೆಲ್ಸ ಮಾಡುಕಾಗ್ದಾ?

ಬಳುವಟಿ = ಬೀದಿ ಬಸವಮಾಡೋಕೆ ಕೆಲಸವಿಲ್ಲದೆ ವೃಥಾ ಅಲೆದಾಡುವವ

ಬಳಕೆ –

೧. ಮನೆಯಗೆ ಕೂಕಂಡ್ ಓದುದ್ ಬಿಟ್ಕಂಡ್ ಬಳುವಟಿ ಕಣಗೆ ತಿರ್ಗುಕ್ ಹೋತ್ಯನಾ?

(ವೈದೇಹಿಯವರ ಕಥೆಯೊಂದರಲ್ಲಿ ಬಳುವಟಿ ನಾರಾಯಣ ಅನ್ನೋದೊಂದು ಪಾತ್ರವೇ ಇದೆ)

ಬಳ್ಸುದ್ = ಬಡಿಸುವುದು

ಬಳಕೆ:

೧. ನೀವೆಲ್ಲ ಊಟಕ್ಕ್ ಕೂಕಣಿ, ನಾ ಕಡೀಕ್ ಕೂಕಂತೆ, ನಾನೂ ಕೂಕಂಡ್ರೆ ಬಳ್ಸುಕ್ ಯಾರ್ ಇಲ್ಲೆ

೨. ಮೊನ್ನೆ ಹಬ್ಬದಗೆ ಎರ್ಡ್ ಪಂಗ್ತಿ ಬಳ್ಸುಕ್ ಹೋಯ್ದೆ.. ಆವತ್ ಶುರುವಾದ್ ಬೆನ್ನೋವ್ ಇನ್ನೂ ಕಡ್ಮಿ ಆಯಲ್ಲ

೩. ಈಗ ಬಳ್ಸುದೆಲ್ಲ ಕೈದ್, ಅದೆಂತದೋ ಬಫೆ ಅಂಬ್ರ್, ಎಂಜ್ಲ್ ಕೈಯ್ಯಗೆ ಹೋಯಿ ಬೇಕಾದ್ ಹಾಯ್ಕಂಡ್ ತಿಂಬ್ದ್ ಎಂತಾ ಲಾಯ್ಕೋ ಏನಪ

ಬಾಯ್ ಕಳ್ಕಂಡ್ ಕೂಕಂಬ್ದ್ = ಆಸೆಯಿಂದ ನಿರೀಕ್ಷಿಸು

ಬಳಕೆ:

೧. ಮಂತ್ರಿಗಳ್ ಮನಿ ಕಟ್ಸಿಕೊಡ್ತೆ  ಅಂದಿರ್ ಅಂದೆಳಿ ಎಲ್ಲಾ ಬಾಯ್ ಕಳ್ಕಂಡ್ ಕೂಕಂಡದ್ದೇ ಬಂತ್ … ಎಲ್ಲಿತ್ತ್ ಮನಿ?

೨. ಎಂತ.. ಈ ಹೊಸ ಅಂಗಿ ನಿಂಗ್ ಬೇಕಾ.. ಹೂಂ.. ಕೊಡ್ತೆ… ಬಾಯ್ಕಳ್ಕಂಡ್ ಕೂಕೋ

ಬಾಯ್ ಕಳ್ಕಂಡ್ ಕೇಂಬುದ್ = ತನ್ಮಯತೆಯಿಂದ ಕುತೂಹಲ/ಆಸಕ್ತಿಯಿಂದ ಕೇಳು

ಬಳಕೆ:

೧. ರಾಕ್ಷಸರದ್ದ್ .. ಭೂತದ್ದ್ ಕತಿ ಹೇಳ್ರೆ ಮಕ್ಳ್ ಬಾಯ್ಕಳ್ಕಂಡ್ ಕೇಂತಾ ಕೂಕಂತೋ…

ಬಾಯ್ ಕಳ್ಕಂಡ್ ಕಾಂಬುದ್ = ಮಗ್ನನಾಗಿ ತನ್ಮಯತೆಯಿದ ನೋಡು / ಆಸೆಯಿಂದ ನಿರೀಕ್ಷಿಸು

ಬಳಕೆ:

೧. ಆ ಧಾರಾವಾಯಗೆ ಎಂತ ಸುಟ್ಟ ಕತಿ ಇತ್ತಂದೆಳಿ ಬ್ಯಾಡ್ದಾ.. ಆ ನಮ್ನಿ ಬಾಯ್ಕಳ್ಕಂಡ್ ಕಾಂಬುಕೆ

೨. ತಿಂಡಿ..ನಿಂಗೆ ಬೇಕಾರೆ ನೀನೇ ಕೇಂಡ್ ತಕೋ.. ನಾ ಕೊಡ್ತೆ..ನೀ ಬಾಯ್ಕಳ್ಕಂಡ್  ಕೂಕೋ ..

(ಇದಕ್ಕ್ ಇನ್ನೂ ಸುಮಾರ್ ಅರ್ಥ ಹೇಳಲಕ್ಕ್ … ಆಯಾ ಸಂದರ್ಭಕ್ಕೆ ಸರಿ ಆಯಿ ಅರ್ಥ ಬತ್ತ್…)

ಬಿಕ್ರ್‌ಮಂಡಿ, ಬಿಕ್ರ್ ಮಂಡಿ = ಕೂದಲು ಕೆದರಿಕೊಂಡವಳು

(ಬಿಖರೇ ಬಾಲ್ ನಿಂದ ಈ ಶಬ್ದ ಬಂದಿರಬಹುದೆ?)

ಬಳಕೆ :

೧. ತಲಿ ಬಾಚಿ ಜಡಿ ಹಾಯ್ಕಂಬದ್ ಬಿಟ್ಟ್ ಒಳ್ಳೆ ಬಿಕ್ರ್‌ಮಂಡಿ ಮಾಡ್ಕಂಡ್ ಕೂತಿದ್ಲ್

ಬಿಲಾಸ್ ಬಿಡು = ಮನಬಂದಂತೆ ವರ್ತಿಸು , ಯಾರ ಅಂಕೆಗೂ ಸಿಗದಿರು

(ಈ ಶಬ್ದದ ಮೂಲದ ಬಗ್ಗೆ ಸಾಕಷ್ಟು ಹುಡುಕಿದೆ. ಆದರೆ ಖಚಿತವಾದ ಮಾಹಿತಿ ಸಿಗಲಿಲ್ಲ. ಬಿಲಾಸ್ ಅನ್ನುವುದು ವಿಲಾಸ ಅನ್ನುವ ಪದದಿಂದ ಬಂದಿರಬಹುದೇ ಅನ್ನುವುದು ನನ್ನ ಊಹೆ ಮಾತ್ರ. ಯಾರಿಗಾದರೂ ಗೊತ್ತಿದ್ದರೆ ತಿಳಿಸಿ)

ಬಳಕೆ:

೧. ಅವ ಹತ್ತಾ ಬಿಲಾಸ್ ಬಿಟ್ಟ್ ಹೋಯಿದ. ಎಂತಾರು ಹೇಳ್ರೆ ಬರೀ ಉಲ್ಟವೇ

೨. ಯಾರಾರೂ ಈ ನಮನಿ ಬಿಲಾಸ್ ಬಿಟ್ಟ್ ಹೋಪುಕಾಗ.

ಬೆಟ್ಟ್ಬೆಟ್ಟು / ಬೆರ್ಲ್ = ಬೆರಳು

ಬಳಕೆ

೧. ಮೊನ್ನೆ ಬಪ್ಪತಿಗೆ ಕಾಲ್ ಬೆಟ್ಟಿಗೆ ಕಲ್ಲ್ ತಾಗಿ ಗಾಯ ಆದ್ದ್ ಮಾರಾಯ್ರೆ…ಇಕಾಣಿ ಹಾಂಗೇ ಇತ್ತ್. ಚೂರೂ ಹಿಂದಾಯಿಲ್ಲ

೨. ಎಂತದಾ, ಸಣ್ಣ್ ಮಗಿನ್ ಕಣಗೆ ಎಷ್ಟ್ ಹೊತ್ತಿಗ್ ಕಂಡ್ರೂ ಬೆರ್ಲ್ ಬಾಯಾಕ್ಕಂಡ್ ಇಪ್ಡ್

ಬೆರ್ಸು = ಬೆದರಿಸಿ ಓಡಿಸು, ಓಡಿಸುವುದು, ಬೆನ್ನಟ್ಟಿ ಓಡಿಸುವುದು

(ಈ ಶಬ್ದ ಬೌಶ ಬೆರ್ಚು, ಅಥವ ಬೆರ್ಚಿಸು ಶಬ್ದದಿಂದ ಬಂದಿರ್ಕ್. ಬೆರ್ಚಿಸು ಅಂದ್ರೆ ಬೆಚ್ಚಿಸು, ಹೆದರಿಸು, ಭಯಪಡಿಸು ಅಂದೇಳಿ ಅರ್ಥ ಬತ್ತ್. ಬೆರ್ಚಪ್ಪ (ಬೆದರುಬೊಂಬೆ) ನೆನ್ಪ್ ಮಾಡ್ಕಣಿ)

ಬಳಕೆ:

೧. ಅಗಾ.. ನಾಯಿ ಮನಿ ಒಳಗೆ ಬಂದಿತ್ ಕಾಣ್ ಅದನ್ ಬೆರ್ಸ್

೨. ನಾಯಿ ಬೆಕ್ಕನ್ ಬೆರ್ಸ್ಕಂಡ್ ಹೋತಾ ಇತ್ತ್

೩. ಅವ್ರ್ ಮನಿ ಬುಡ್ಕೆ ಯಾರೂ ಹೋಪುಕೆಡಿಯ. ಹತ್ರ ಹೋರ್ ಸಾಕ್ ಒಂದ್ ಹಿಂಡ್ ನಾಯ್ ಬೆರ್ಸ್ಕಂಡ್ ಬತ್ತೊ

೪. ಸ್ವಲ್ಪ ನಿಧಾನ ನೆಡಿನಿಯೇ, ಆ ನಮನಿ ಓಡೋಡ್ಕಂಡ್ ಹೋಪ್ಕೆ ಇಲ್ಲ್ಯಾರ್ ಬೆರ್ಸ್ಕಂಡ್ ಬತ್ರಾ?

೫. ಬಲ್ಗ ತೆಗ್ದ್ ಹಾಕಿ ಬಂದಿದ್ಯಾ ಕಾಂತ್, ಆಚಿ ಮನಿ ಗಂಟಿ ಪೂರಾ ಒಳ್ಗ್ ಬಂದ್ ಹೂವಿನ್‌ಗುತ್ತಿಯೆಲ್ಲ ಚೊಕ್ಕವಾ ಅಂದೇಳಿ. ಬೇಗ್ ಹೋಯಿ ಒಂಚೂರ್ ಬೆರ್ಸಿ ಬಾ

ಬೆಳ್ಗಾಮುಂಚೆ = ಮುಂಜಾವುನಸುಕುಬೆಳ್-ಬೆಳಿಗ್ಗೆ

ಬಳಕೆ –

೧. ಬೆಳ್ಗಾಮುಂಚೆ ಬೇಗ್ ಏಳ್ಕ್. ನಾಳಿಗ್ ಹಬ್ಬಕ್ ಹೋಯ್ಕಲ್ದಾ

೨. ಬೆಳ್ಗಾಮುಂಚೆ ಎದ್ಕಂಡ್ ಎಲ್ಲಿಗೆ ಹೊರ್ಟದ್ ಮರಾಯ್ರೆ?

ಬೆಳ್ಗಿನ ಜಾಮ, ಬೆಳಿಂಜಾಮ = ಬೆಳಗಿನ ಜಾವ, ನಸುಕು

(ಜಾವ ಅಂದರೆ ದಿನದ ಎಂಟನೇ ಒಂದು ಭಾಗ. ಒಂದು ಜಾವ ಅಂದರೆ ಸರಿಸುಮಾರು ಮೂರು ಗಂಟೆಗಳ ಕಾಲ)

ಬಳಕೆ:

೧. ನಾಳೆ ದೀಪಾವಳಿ ಅಲ್ದಾ, ಎಲ್ಲ ಬೆಳ್ಗಿನ್ ಜಾಮ ಬೇಗ್ ಎದ್ದ್ ಎಣ್ಣಿ-ನೀರ್ ಹಾಯ್ಕಂಡ್ ಮೀಕ್

೨.ಬೆಳ್ಗಿನ್ ಜಾಮಕ್ಕೆ ಎದ್ಕಂಡ್ ಆ ನಾಯಿ ಒರ್ಲುಕ್ ಶುರು ಮಾಡತ್ತ್. ಒಂದ್ಗಳ್ಗಿ ನಿದ್ರಿ ಮಾಡುಕೂ ಬಿಡುದಿಲ್ಲ

ಬೆಳ್ಚುದು = ತಡಕಾಡುತಡವುಕುರುಡನಂತೆ ಹುಡುಕಾಡು, ಸವರುವುದು,

ಬಳಚು= ಸವರು, ತಡವು (ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ

೧. ಕತ್ಲಿಯಗೆ ಎಂತ ಬೆಳ್ಚುದ್ ಮಾರಾಯ, ಬೆಟ್ರಿಯಾರೂ ಹಿಡ್ಕಂಡ್ ಕಾಂಬುಕಾಗ್ದಾ?

೨. ಪೆಟ್ಗಿ ಒಳ್ಗೆ ಎಂತ ಬೆಳ್ಚತಿದ್ದೆ.. ಅಲ್ಲೆಂತ ಗಂಟ್ ಹುಗ್ಸಿಟ್ಟಿದ್ಯಾ?

೩. ಈ ಸುಟ್ಟ್ ಕರೆಂಟ್ ಇನ್ನ್ ಬಪ್ದ್ ಎಷ್ಟೊತ್ತಿಗೋ. ಆಗ್ಳೇ ಬೆಂಕಿ ಪೆಟ್ಗಿ ತಕಂಡ್ಬಾ ಅಂದ್ರ್ ಕೇಂಡ್ಯಾ? ಇನ್ನೀಗ ಬೆಳ್ಚ್‌ಕಂಡೇ ಅಡ್ಗಿ ಮನಿ ಒರಿಗ್ ಹೋಯ್ಕಲ

೪. ಅಲ್ಲೆಂತ ಬೆಳ್ಚ್‌ತಿದ್ಯಾ ಈ ಕತ್ಲಿಯಗೆ, ಬೆಳ್ಗಾರ್ ಮೇಲ್ ಹುಡ್ಕಿ ಕಂಡ್ರ್ ಸಾಲ್ದಾ?

ಭಾಷಿ ಬತ್ತಿಲ್ಲ್ಯಾ=  ಹೇಳಿದ್ದು ಅರ್ಥ ಆಗೋಲ್ಲವಾ?

ಬಳಕೆ

೧. ನಾನ್ ಕೊಡುದಿಲ್ಲ ಅಂದೇಳಿ ನಿಂಗೇ ಹೇಳದ್ದ್… ಮತ್ತೂ ಎಂತಕೆ ಹೊಸುದ್ ನೀನ್? ನಿಂಗೆಂತ ಭಾಷಿ ಬತ್ತಿಲ್ಲ್ಯಾ?

೨. ಅವ್ನಿಗೆ ಎಷ್ಟ್ ಹೇಳ್ರೂ ಭಾಷಿ ಇಲ್ಲ ಮಾರಾಯ. ತಾನ್ ಹೇಳದ್ದೇ ಸಮ ಅಂದೇಳಿ

ಮರ್ಕು= ಅಳು

ಬಳಕೆ:

೧. ಮಗು ಅಷ್ಟೊತ್ತಿಂದ ಮರ್ಕತಾ ಇತ್ ಹಂಗಾರ್ ಯಾರಾರು ಚೂರ್ ಮಗಿನ್ ಆಡ್ಸುಕಾಗ್ದಾ?

ಮರ್ಕುದ್-ಹರ್ಕುದ್ = ಅಳುವುದು

(ಇಲ್ಲ್ ಹರ್ಕುದ್ ಅಥ್ವಾ ಹರಕುವುದು ಅಂದ್ರೆ ವಿಶೇಷ ಅರ್ಥ ಎಂತ ಇಲ್ಲ. ಅದೊಂಜಾತಿ ಜೋಡಿ ಶಬ್ದ. ಆರೂ ಶಬ್ದ ಕೋಶದಗೆ ಹರಗು, ಹರಕಲಿಸು ಅಂದ್ರೆ ಹರಡುವಂತೆ ಮಾಡು ಅಂದೇಳಿ ಅರ್ಥ ಇತ್ತ್. ಮರ್ಕುದ್ರ ಒಟ್ಟಿಗೆ ದುಃಖ ಎಲ್ಲರಿಗೂ ಹರ್ಡುವಾಂಗೆ ಮಾಡುದ್ ಅಂದೇಳಿ ಇಪ್ಪುಕು ಸಾಕ್ ಅಂದೇಳಿ ನನ್ ಅನ್ಮಾನ ಮಾತ್ರ)

ಬಳಕೆ:

೧. ನೀ ಎಷ್ಟ್ ಮರ್ಕಿ ಹರ್ಕ್ರೂ ಅಷ್ಟೇ, ನಿನ್ನ ನಾ ಇವತ್ತ್ ಕರ್ಕಂಡ್ ಹೋತಿಲ್ಲೆ

೨. ಈಗ ಯಾರ್ ಎಂತ ಹೇಳ್ರ್ ಅಂದೇಳಿ ಬೆಳ್ಗಾಮುಂಚೆ ಎದ್ಕಂಡ್ ಮರ್ಕಿ ಹರ್ಕುದ್?

ಮಲ್ಸುದ್ = ಮಲಗಿಸುವುದು

ಬಳಕೆ:

೧. ಮಕ್ಳೇ ಹಂಗಾರೆ ಒಂದ್ ಗಳ್ಗಿ ಸುಮ್ನ್ ಕೂಕಂಬ್ಕಾಗ್ದಾ, ಏನ್ ಗಲಾಟಿ ಮಾಡ್ತ್ರಿ ಹಂಗಾರೆ, ಮಗಿನ್ ಈಗಷ್ಟೇ ಮಲ್ಸಿ ಬಂದಿದೆ, ಮತ್ತ್ ಎದ್ಕಂಡ್ ಮರ್ಕತ್ತ್ ಕಾಣಿ, ನೀವೆ ಹೋಯಿ ತೊಟ್ಲ್ ತೂಗಿ

ಮಸ್ತ್  = ತುಂಬಾಬಹಳ

೧. ಈ ಸರ್ತಿ ಮಾಯಿನ್ ಮರ್ದಗೆ ಮಸ್ತ್ ಹೂವಾಯಿತ್. ಆರೆ ಮೋಡ ಆಯಿ ಪೂರಾ ಕರ್ಟಿ ಉದ್ರಿ ಹೋಯ್ತ್

೨. ಮೊನ್ನೆ ಮದಿಗೆ ಮಸ್ತ್ ಜನ ಬಂದಿರಾ ಹ್ಯಾಂಗೆ?

೩. ಅವ್ನಿಗೀಗ ಅಡ್ಡಿಲ್ಲ್ಯೇ..ಮಸ್ತ್ ದುಡ್ ಮಾಡಿದ ಅಂಬ್ರ್

ಮ್ಯಾಲಾಗ್ರ = ಮೇಲೋಗರ

ಬಳಕೆ –

೧. ಶೆಕಿ ದಿನಕ್ಕೆ ಮ್ಯಾಲಾಗ್ರ ಬೇರೆ ಎಂತ ಬೇಕಂದೇಳಿಯೇ ಇಲ್ಲ. ಒಂದ್ ತಂಬುಳಿ ಇದ್ರ್ ತಂಪಾತ್ತ್

೨. ಹ್ವಾಯ್ ಎಂತಾರು ಸ್ವಲ್ಪ ತರ್ಕಾರಿ ತನ್ನಿ ಕಾಂಬಾ. ಮ್ಯಲಾಗ್ರಕ್ಕೆ ಇವತ್ತ್ ಎಂತದು ಇಲ್ಲ

ಮ್ಯಾಳಿ = ಕುತ್ತಿಗೆ

ಬಳಕೆ –

೧. ನೆಂಟ್ರ್ ಬತ್ತೆ ಅಂದರ್ ಪತ್ತಿ ಇಲ್ಲಪ. ನೀಕಿ ನೀಕಿ ಮ್ಯಾಳಿ ಉದ್ದ ಆಯ್ತ್

೨. ನಿನ್ನೆ ಮಲ್ಕಂಡಲ್ ಉಳ್ಕದ್ದೋ ಎಂತದೋ, ಇವತ್ತ್ ಮ್ಯಾಳಿ ತಿರ್ಸುಕಾತಿಲ್ಲ

ಮಿಗಲಿ = ಬೆಸ ಸಂಖ್ಯೆ

ಬಳಕೆ –

೧. ದೆವ್ರ್ ಪ್ರಸಾದ ಮಿಗ್ಲಿ ಬಂದಿತ್. ಅಡ್ಡಿಲ್ಲ, ದೇವ್ರ್ ನೆಡ್ಸಿ ಕೊಡ್ತ

ಮಿಟ್ಟಿ = ಮೊಗ್ಗು

ಬಳಕೆ:

೧.  ಹೂ ಕೊಯ್ಕಂಡ್ ಬಾ ಅಂದ್ರೆ ಮಿಟ್ಟಿ ಪೂರಾ ಚಿಪ್ಪಡ್‌ಸ್ಕಂಡ್ ಬಂದಿದ್ಯಲಾ ಮರಾಯ

೨.  ಮಸ್ತ್ ಮಲ್ಗಿ ಮಿಟ್ಟಿ ಬಿಟ್ಟಿತ್, ಕೊಯ್ದಿರ್ ಕಟ್ಟಿ ನಾಳೆ ದೇವಸ್ಥಾನಕ್ಕಾರೂ ತಕಂಡ್ ಹೋಯ್ಲಕ್ಕಿತ್ತ್

ಮಿಡ್ಕುದ್ = ಒಯ್ಯಾರ ತೋರು, ಬಿನ್ನಾಣ ತೋರು, ಬೆಡಗು ತೋರು, ಸೇಳೆ ಮಾಡು

(ಕುಂದಾಪ್ರ ಕನ್ನಡದಗೆ ಮಿಡ್ಕುದ್ ಅಂತ ಶಬ್ದ ಇತ್ತಾದ್ರೂ ಶಬ್ದಕೋಶದಗೆ ಮಿಡುಕು ಶಬ್ದಕ್ಕೆ ಅರ್ಥ ಬೇರೆಯೇ ಇತ್ತ್, ಅದ್ರಗೆ ಸುಮಾರಿಕೆ ಹತ್ರದ್ ಅರ್ಥ ಅಂದ್ರೆ ಚಂಚಲಗೊಳಿಸು. ಆರೆ ನಂಗ್ ಅನ್ಸತ್ತ್ , ಬೌಶ ಈ ಶಬ್ದ ಮಿಟುಕಲಾಡಿ ಶಬ್ದದಿಂದ ಬಂದಿರ್ಕ್. ಮಿಟುಕಲಾಡಿ ಅಂದ್ರೆ ಒಯ್ಯಾರಿ, ಸೋಗಲಾಡಿ ಅಂದೇಳಿ ಅರ್ಥ ಇತ್ತ್)

ಬಳಕೆ:

೧. ಮೊನ್ನೆ ಹೊಸ ಸರ ಮಾಡ್ಸಿದ್ಲಂಬ್ರ್, ಅದನ್ನ್ ಹಾಯ್ಕಂಡ್ ಅವ್ಳೊಂದ್ ಮಿಡ್ಕುದ್ ಕಂಡ್ರೆ…ಅಯ್ಯಬ್ಬ

೨. ಅವ್ಳಿಗೆ ನಾ ಮಸ್ತ್ ಕಲ್ತಿದೆ ಅಂದೇಳಿ ಒಂದ್ನಮನಿ ಹುಣ್ಸಿಹಣ್ಣ್, ಇತ್ತಿತ್ಲಾಯಿ ಅವ್ಳ್ ಮಿಡ್ಕಣಿ ಕಾಂಬ್ಕೇ ಎರ್ಡ್ ಕಣ್ಣ್ ಸಾಕಾತಿಲ್ಲ

ಮುಲ್ಲಿ = ಮೂಲೆ

ಬಳಕೆ :

೧. ಕೋಣಿ ಮುಲ್ಲಿಯಗೆ ಕೂಕಂಡ್ ಓದ್‌ಬೆಡ್ದಾ. ಅಲ್ಲ್ ಬೆಳ್ಕ್ ಇಲ್ಲ. ಕಣ್ಣ್ ಹಾಳಾತ್

೨. ನಿಂಗ್ ಎಂತ ಆಯ್ತ್. ಒಂದ್ ಮುಲ್ಲಿ ಹಿಡ್ಕಂಡ್ ಕೂಕಂಡಿದ್ಯಲ?

ಮುಸುಡ್ಸೊಡ್ಡ್  =ಮುಖ

ಬಳಕೆ:

೧. ಅಧಿಕಪ್ರಸಂಗ ಎಲ್ಲ ಮಾಡ್ರ್ ಕಾಣ್, ಮುಸುಡ್ ಒಡ್ದ್ ಹಾಕ್ತೆ.

೨. ಹೆಚ್ಚ್ ಮಾತಾಡ್ರೆ ಸೊಡ್ ಮೇಲೆ ಎರ್ಡ್ ಬಿಡ್ತೆ ಈಗ

೩. ಅವ್ನ ಸೊಡ್ಡ್ ಕಂಡ್ರೆ ಸಾಕ್. ಮೂರ್ ದಿನ ಪತ್ತಿ(ಊಟ/ಆಹಾರ) ಹುಟ್ಟುದಿಲ್ಲ ( ಅವನ ಮುಖ ದರ್ಶನ ಅನಿಷ್ಟ ಅನ್ನುವ ಅರ್ಥದಲ್ಲಿ)

ಮೋಳಮ್ವಾಳ = ಬಿಲರಂಧ್ರ

ಬಳಕೆ –

೧. ಆ ಮೋಳದ್ ಹತ್ರ ಹೋಗ್ಬೇಡಿ ಮಕ್ಳೇ. ಅಲ್ಲ್ ಹಾವ್ ಗಿನ್ ಇದ್ದಿಕ್

೨. ಈ ಹೆಗ್ಳನ್ ದೆಸ್ಯಿಂದ್ ಸುಕಾ ಇಲ್ಲ. ಗ್ವಾಡಿ ಬದ್ಯಗೆ ದೊಡ್ಡ್ ಮ್ವಾಳ ಮಾಡಿತ್ ಕಾಣಿ

ರೈಸು = ಗಡದ್ದಾಗಿರು, ಭರ್ಜರಿಯಾಗಿರು, ಮಿಂಚುವುದು, ಕಳೆಕಟ್ಟುವುದು, ಮೆರೆಯು

(ಏನಾರೂ ಭರ್ಜರಿಯಾದ ಪ್ರದರ್ಶನ, ಗಮನಸೆಳೆಯುವ ವ್ಯಕ್ತಿ-ವಿಶೇಷಗಳು, ಗುಂಪಿನಲ್ಲಿ ಮಿಂಚುವುದು ಹೀಂಗೆ ಸುಮಾರ್ ಸಂದರ್ಭದಗೆ ಈ “ರೈಸುವುದು” ಉಪ್ಯೋಗ ಆತ್ತ್

ಈ ಶಬ್ದ ಇಂಗ್ಲೀಶಿನ ರೈಸ್(rise)ನಿಂದ ಬಂದಿತಾ ಅಂದೇಳಿ ನನ್ ಅನ್ಮಾನ ಅಷ್ಟೇ. ಹೇಚ್ಚೂ ಕಡ್ಮಿ ಅರ್ಥ ಸತೇ ಹೊಂದಾಣ್ಕಿ ಆತ್ತ್)

ಬಳಕೆ:

೧. ಮೊನ್ನೆ ಪೆರ್ಡೂರ್ ಮ್ಯಾಳ್ದರ್ ಆಟ ಏನ್ ರೈಸಿ ಹೋಯ್ತ್ ಮರಾಯ, ಬೆಳ್ಗಾಪೊಲ್ಲೊರಿಗೂ ಒಂಚೂರ್ ಕಣ್ಣ್ ಕೂರ್ರೆ ಹೇಳ್. ಅದ್ರಗೂ ಗದಾಯುದ್ಧ ಪ್ರಸಂಗನ್ನಂತೂ ಹೊಡಿ ಹಾರ್ಸಿ ಕೊಟ್ರ್ ಕಾಣ್

೨. ಮೊನ್ನೆ ಅಷ್ಟ್ ಜನ ಪದ್ಯ ಹೇಳ್ರ್ ಸುಳ್ಳಾ.. ಆರೆ ನಿನ್ನ್ ಪದ್ಯ ರೈಸ್ದಷ್ಟ್ ಇನ್ಯಾರದ್ದೂ ರೈಸ್ಲಿಲ್ಲ ಕಾಣ್

೩. ಎಂತ ಒಳ್ಳೇ ಗಡ್ಜಾಯಿ ಮದಿ ಮನಿಗ್ ಹೋರ್ಟಂಗಿತ್ತ್…ಎಷ್ಟ್ ರೈಸುಕಿತ್ತೋ ಏನ್ ಕತಿಯೋ…

ಲಗ್ತ್ ಆಯಿ = ಅನುಕೂಲವಾಗಿ, ಆ ಹೊತ್ತಿಗೆ ಸರಿಯಾಗಿ

ಬಳಕೆ –

೧  ನೀವ್ ಬಂದದ್ದ್ ಲಗ್ತ್ ಆಯ್ತ್ ಕಾಣಿ, ಇನ್ನೇನ್ ದೇವ್ರಿಗ್ ಮಂಗ್ಳಾರ್ತಿ ಶುರು ಆಪುಕಾಯಿತ್

೨  ಈಗ ಎರ್ಡ್ ಹೊಸ ಬಸ್ಸ್ ಬಿಟ್ಟಿರಲ ಭಾರಿ ಒಳ್ಳೆದಾಯ್ತ್, ನಾವ್ ಶಾಲಿಗ್ ಹೊರ್ಡು ಸುರಿಗೆ ಲಗ್ತಾಯಿ ಬತ್ತ್

೩  ಈ ಉರಿ ಬಿಸ್ಲಗೆ ಹೊರ್ಡುದ್ ಬ್ಯಾಡ, ಹೊತ್ತೋಪತ್ತಿಗೆ ಹೊರ್ಟ್ರೆ ಲಗ್ತ್ ಆತ್ತ್, ಕತ್ಲಿ ಆಪುರೊಳ್ಗೆ ಮನಿಗ್ ಹೋಯ್ಲಕ್ಕ್

ಲಗಾಡಿ ತೆಗೆ = ಹಾಳುಮಾಡುನಾಶಮಾಡು

ಬಳಕೆ :

೧. ಅವನ್ ನಂಬ್ಕಂಡ್ ವ್ಯವಹಾರ ಅವ್ನ ಕೈಗ್ ಕೊಟ್ರೆ, ನನ್ನನ್ ಪೂರಾ ಲಗಾಡಿ ತೆಗ್ದ ಮಾರಾಯ

೨. ಈ ಮಗ, ಅಪ್ಪ ಮಾಡಿಟ್ಟದ್ ಪೂರಾ ಲಗಾಡಿ ತೆಗುಕೆ ಸಾಕ್

ಲಾಟ್  = ಬಂಡಲ್ಸುಳ್ಳು

ಲಾಟ್ ಬಿಡು = ಸುಳ್ಳು ಹೇಳುಬೊಗಳೆ ಬಿಡು

ಬಳಕೆ :

೧. ಬರೀ ಲಾಟ್ ಬಿಡ್ತಾ ಇದ್ದ. ಈಗ ಅವ ಸತ್ಯ ಹೇಳ್ರೂ ಯಾರೂ ನಂಬುದಿಲ್ಲ

೨. ಅವ್ನ್ ಮಾತ್ ನಂಬ್ಕಂಡ್ ಕೂಕಂಬೆಡ. ಅವ ದೊಡ್ ಲಾಟ್ ಮರಾಯ

೩. ನೀ ಲಾಟ್ ಬಿಡುದ್ ಯಾರತ್ರ. ನಂಗ್ ನಿನ್ನ್ ದಗಲ್ಬಾಜಿ ಗೊತ್ತಿಲ್ಲ ಅಂದೇಳಿ ಮಾಡಿದ್ಯಾ?

೪. ಅಂವ ಹೇಳ್ತ ಅಂದೇಳಿ ನೀ ಅದನ್ನೆಲ್ಲ ನಂಬುಕ್ ಹೋಯ್ಬೆಡ, ಕೇಂಬರಿದ್ರೆ ಅಂವ ಎಷ್ಟೂ ಲಾಟ್ ಬಿಡ್ತ.

೫. ನಮ್ಗ್ ಗೊತ್ತಿಪ್ಕೋಯಿ ಆಯ್ತ್, ಯಾರಾರೂ ಗೊತ್ತಿಲ್ದಿದ್ದರೆ ಸಿಕ್ರೆ ಇವ ಲಾಟ್ ಬಿಡತ್ತ್ ಕೇಂಡ್ರೆ ಹೌದ್ ಅಂದೇಳಿಯೆ ಅಂದ್ಕಣ್ಕ್

ವದ್ಕಂಬ್ದ್(ಒದ್ಕಂಬ್ದ್) – ಶ್ರಮಿಸು, ಒದ್ದಾಟ ನಡೆಸು, ಪರಿಶ್ರಮ ಪಡು

ಬಳಕೆ –

೧  ಬೆಳ್ಗಿಂದ ಸಾಂಯ್ಕಾಲದವರಿಗೂ ಒದ್ಕಂಡ್ರೂ ಸಾಕಾತಿಲ್ಲ, ನಂಗಂತೂ ಮಾಡಿ ಮಾಡಿ ಸಾಕಾಯ್ತ್

೨  ನಾನೊಬ್ನೆ ಎಷ್ಟ್ ಅಂದೇಳಿ ಒದ್ಕಂಬ್ದ್, ಮನಿ ಅಂದ್ರ್ ನಂಗೊಬ್ನಿಗೆಯಾ, ನೀನೂ ಮನಿಯನೇ ಅಲ್ದಾ?

ವಾರಂತ್  ಸಾಲಾಗಿ, ಅನುಕ್ರಮವಾಗಿ

ಬಳಕೆ:

೧  ಈ ಸರ್ತಿ ಚೌತಿ ಶುಕ್ರವಾರ ಬಂದದ್ದ್ ಭಾರಿ ಲಾಯ್ಕಾಯ್ತ್, ವಾರಂತ್ ಆಯಿ 3 ದಿನ ರಜಿ ಸಿಕ್ಕತ್ತ್

೨  ಈ ಮಳ್ಗಾಲದಗೆ ಮನ್ಯಗೆ ಒಬ್ರಿಗೆ ಜ್ವರ ಬಂದದ್ದೇ ಸೈಯಲ್ಲ, ವಾರಂತಾಯಿ ಒಬ್ಬೊಬ್ರಿಗೇ ಜ್ವರ, ಬಿಡ್ಸದ್ ಹಾಸ್ಗಿ ಮಡ್ಚಲೇ ಇಲ್ಲ

ಶೆಗ್ಣಿ ಮಂಜ/ ಸಗ್ಣಿ ಮಂಜ = ಅಳುಬುರುಕ ಅಥವ ಅಳುಮುಂಜಿ

ಬಳಕೆ :

೧. ಚೂರ್ ಬಯ್ದ್ರ್ ಸಾಕ್ ಒಳ್ಳೇ ಶೆಗ್ಣಿ ಮಂಜನ ಕಣಗೆ ಮರ್ಕತಾ ಕೂಕಂತ.

(ಬಹುಶಃ ನಿಷ್ಪ್ರಯೋಜಕ ಅನ್ನೋ ಅರ್ಥ ಕೂಡಾ ಇರ್ಬೇಕು..ಯಾರಿಗಾದ್ರೂ ಗೊತ್ತಿದ್ರೆ ಹೇಳಿ)

ಸತೇಸೈತ  ಕೂಡಾ

ಬಳಕೆ –

೧. ಮೂರ್ನಾಕ್ ದಿನ ಆಯ್ತ್. ಒಂದ್ ಹನಿ ಸೈತ ಮಳಿ ಬಂದಿರ್ ಹೇಳ್ ( ಬಂದಿರ್ ಹೇಳ್ = ಬರ್ಲಿಲ್ಲ)

೨. ನಂಗೊಂದ್ ಮಾತ್ ಸತೇ ಹೇಳ್ದೇ ನೀ ಬೆಂಗ್ಳೂರಿಗೆ ಹೊದದ್ದನಾ?

ಸಾಪ್   – ಚೆಂದಒಳ್ಳೆಯ ( ಹಿಂದಿಯ ಸಾಫ್ ಇಂದ ಈ ಶಬ್ದ ಬಂದಿರಬಹುದೇ)

ಬಳಕೆ:

೧. ಅವ್ಳ್ ಕೆಲ್ಸ ಒಂಚೂರು ಸಾಪಲ್ಲ

೨. ಇವತ್ತ್ ಅಡ್ಗಿ ಭಾರಿ ಸಾಪಾಯಿತ್ತ್ ಯಾರ್ ಮಾಡದ್?

ಸಾಲಿನ್ ಬಲಿ / ಸಾಲಿ ಬಲಿ  = ಜೇಡರ ಬಲೆ

ಬಳಕೆ :

೧. ವಾರ ವಾರ ತೆಗ್ದ್ರೂ ಇಲ್ಲ. ಮತ್ತ್ ಸಾಲಿನ್ ಬಲಿ ಕಟ್ಟಿ ಆಯ್ತ್

ಸೀಂಬುದ್ = ಚೀಪುವುದು

ಸೀಪು – ಚೀಪು , ಹೀರು, ಸವಿ, ಸಿಹಿ (ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ:

೧. ಶಾಲಿ ಬಿಡುದೇ ತಡ, ಐಸ್ಕ್ಯಾಂಡಿ ಗಾಡಿ ಬುಡ್ದಲ್ಲ ಬಂದ್ ಬೆಲ್ಲದ ಕ್ಯಾಂಡಿ ಸೀಂಬತಾ ನಿಂತ್ಕಂಡ

೨. ಅದೆಂತಕೆ ಮಾಯ್ನಣ್ಣ್ ಗೊರ್ಟ್ ಸೀಂಬತಾ ನಿಂತ್ಕಂಡೆ, ಬಿಸಾಡಿ ಕೈ ತೊಳ್ಕ ಬಾ

ಹರ್ಕಟಿ ಬಾಯ್ = ಗುಟ್ಟು ನಿಲ್ಲದ ಬಾಯಿ

ಬಳಕೆ-

೧.ಗುಟ್ಟ್ ನಿನ್ನತ್ರೆ ಇರ್ಲಿ ಅಂದ್ರೆ ,  ನೀನ್ ಹೋಯಿ ಹೋಯಿ ಅವ್ಳತ್ರ ಹೇಳ್ದ್ಯ…ಅವ್ಳದ್ ಹರ್ಕಟಿ ಬಾಯಿ.. ಇನ್ ಊರಿಡಿ ಪ್ರಚಾರ ಆಪ್ಕೆ ಅಡ್ಡಿಲ್ಲ..

ಹರ್ಕತ್ – ಹರಕತ್ತುಅಡ್ಡಿತೊಂದರೆಕಷ್ಟಅಡಚಣೆ

ಬಳಕೆ –

೧. ಒಂದ್ ಇಟ್ಟ್ ವಸ್ತು ಇದ್ದ್ ಜಾಗ್ದಗೆ ಇಡುದಿಲ್ಲ. ಹರ್ಕತ್ತಿಗೆ ಬೇಕಂದ್ರೆ ಸಿಕ್ಕುದಿಲ್ಲ

೨. ಸ್ವಲ್ಪ ಹರ್ಕತ್ ಇತ್ತ್ ಮಾರಾಯ ಒಂದ್ ಸಾವ್ರ ಇದ್ರೆ ಕೊಡ್

ಹರ್ಕಿ ಬಲಿ (ಹರಕೆ ಬಲಿ) 

(ಇದರ ಅರ್ಥ ನಂಗ್ ಗೊತ್ತಿದ್ ಹಾಂಗೆ ಕಾಟಾಚಾರಕ್ಕೆ ಮಾಡುವ ಕೆಲ್ಸ್ ಅಂದೇಳಿ. ಮಾಡುಕ್ ಮನ್ಸ್ ಇಲ್ದಿದ್ರೂ,ಒಟ್ ಮಾಡ್ಕಲ್ಲಾ ಅಂದೇಳಿ ಮಾಡು ಕೆಲ್ಸ)

ಬಳಕೆ

೧. ಒಂದ್ ಕೆಲ್ಸ ಹೆಳ್ರ್ ಸಮಾ ಮಾಡುದಿಲ್ಲ. ಬರೀ ಹರ್ಕಿ ಬಲಿ ತೀರ್ಸ್‌ದಾಂಗೆ ಮಾಡಿಟ್ರೆ ಹ್ಯಾಂಗೆ?

೨. ಮಾಣಿ ಓದಾ ಅಂದ್ರೆ ಎದ್ರಿಗ್ ಪುಸ್ತ್ಕ ಹಿಡ್ಕಂಡ್ ಮಣಮಣ ಅಂದೇಳಿ ಹರ್ಕಿ ಬಲಿ ತೀರ್ಸಿ ಆಡುಕ್ ಓಡಿಯಾಯ್ತ್.

(ಈ ಶಬ್ದ ಹುಟ್ಟದ್ ಹ್ಯಾಂಗೆ ಅಂತೇಳಿ ಕಾಂಬುಕೆ ಹೋದ್ರೆ, ದೇವಸ್ಥಾನದಗೆ ಬಲಿ ಪೀಠ ಅಥ್ವಾ ಬಲಿ ಕಲ್ಲ್ ಅಂದೇಳಿ ಇರತ್ತಲ್ದಾ… ಅದಕ್ಕೆಲ್ಲ ಮುಂಚೆ ಪ್ರಾಣಿ ಬಲಿ ಕೊಡ್ತಿದ್ದಿರ್ಕ್. ಕಡಿ ಕಡಿಗೆ ಅದೆಲ್ಲಾ ನಿಂತ್ ಹೋಯಿ ಬರೀ ಹೆಳಿಗ್ ಮಾತ್ರ ಬಲಿಪೀಠಕ್ಕೆ ಪೂಜಿ ಮಾಡಿ, ಚರು ಇಲ್ಲಾ ನೈವೇದ್ಯ ಮಾಡುಕ್ ಶುರು ಮಾಡಿರ್ ಇರ್ಕ್. ಅದ್ರಗೆ ಬರೀ ಹೆಳಿಗ್ ಮಾತ್ರ (ನೆಪ ಮಾತ್ರಕ್ಕೆ) ಬಲಿ ಕೊಡುದ್ರಿಂದ ಅದ್ ಬರೀ ಕಾಟಾಚಾರದ್ ಬಲಿ ಆದ್ರಿಂದ ಈ ಹೆಸ್ರ್ ಬಂದಿಪ್ಕೂ ಸಾಕ್. ಇದ್ ನಾನ್ ಎಣ್ಸ್‌ಕಂಡದ್ ಅಷ್ಟೆ. ನಂಗೂ ಸಮಾ ಹೀಂಗೇ ಅಂದೇಳಿ ಗೊತ್ತಿಲ್ಲ. ಹೀಂಗ್ ಇಪ್ಕು ಸಾಕ್ ಅಂದೇಳಿ. ನಿಮ್ಗೆನಾರು ಇದ್ರ್ ಬಗ್ಗ್ ಗೊತ್ತಿದ್ರೆ ಹೇಳಿ)

ಹತ್ತ / ಹತ್ತಾ = ಸಂಪೂರ್ಣಪೂರಾ, ಪೂರ್ಣ

ಬಳಕೆ

೧. ಹರಿಯಗ್ ನೀರ್ ಹತ್ತಾ ಖಾಲಿ ಮಾಡ್ಬೆಡ ನಂದ್ ಇನ್ನೂ ಮಿಂದ್ ಆಯಲ್ಲ

೨. ಯಾರಾರೂ ಪಾಪ್ದರ್ ಸಿಕ್ರೆ ಅಂವ ಹತ್ತ ಬೋಳ್ಸಿ ಬಿಡ್ತ

೩. ದುಡ್ ಕೊಡ್ಕ್ ಅಂದೇಳಿ ನಂಗೂ ಮನ್ಸಿತ್ತ್. ಆರೆ ಕೈ ಹತ್ತ ಖಾಲಿಯಾಯಿತ್ ಎಂತಾ ಮಾಡುದ್ ಹೇಳ್

ಹನಿ ಹಂದುದಿಲ್ಲ  = ಕುಳಿತಲ್ಲೇ ಕುಳಿತಿರುಏನೂ ಮಾಡದೇ ಸುಮ್ಮನೆ ಇರು

ಬಳಕೆ:

೧. ಬೆಳಿಗ್ಗೆಯಿಂದ ಜಗ್ಲಿ ಮೇಲ್ ಕೂಕಂಡರ್ ಹನಿ ಹಂದಲಿಲ್ಲ.

೨. ಎಷ್ಟ್ ಕೆಲ್ಸ ಎಲ್ಲ ಬಾಕಿ ಇತ್ತ್. ಅವ್ನಿಗೆ ಮಾಡುಕೆ ಏನ್ ದಾಡಿ. ಹೆಳ್ರೆ ಹನಿ ಹಂದತ್ನಾ ಕಾಣಿ

ಹಪ್ಪು ನಾತ = ಸಹಿಸಲಾಗದಂಥ ದುರ್ವಾಸನೆ

ಬಳಕೆ:

೧. ಅವ್ರ್ ಹತ್ರ ಹೋರ್ ಸಾಕ್. ಹಪ್ಪ್ ನಾತ ಹೊಡಿತ್ತ್. ಅಂಗಿ ಪಂಜಿಗೆ ನೀರ್ ತೋರ್ಸಿ ಎಷ್ಟ್ ದಿನ ಆಯ್ತೇನೋ

೨.ಮೀಕಿದ್ರೆ ಮೊದ್ಲೇ ಬಟ್ಟಿ ಎಲ್ಲ ಒಗ್ದ್ ಬಿಡ್. ಹಾಂಗೆ ಬಿಟ್ರೆ ಅಲ್ಲೇ ಚೆಂಡಿ ಆಯಿ ನಾಳಿಗೆ ಹಪ್ಪ್ ನಾತ ಹೊಡಿತ್ತ್

ಹರ್ಪು = ಪರಚುವುದುಗಿಬರುಗೀರು, ಉಗುರಿನಿಂದ ಗೀರು,

ಬಳಕೆ:

೧. ಮಗಿನ್ ಉಗ್ರ್ ಸಮಾ ಉದ್ದ ಆಯಿತ್. ಇಲ್ಕಾಣಿ ನನ್ ಮುಖದ್ ತುಂಬಾ ಹರ್ಪದ್

೨. ಅವ್ನೊಟ್ಟಿಗೆ ಆಡುದ್ ಬ್ಯಾಡಾ ಮರಾಯ. ಸಿಟ್ಟ್ ಬಂದ್ರ್ ಹರ್ಪುಕೇ ಬತ್ತ

೩. ಆ ಮಗಿನೊಂಚೂರ್ ಕಾಂತಾ ಆಯ್ಕೋ , ನಾ ಮಿಂದ್ಕಂಡ್ ಬತ್ತೆ. ಬೆಕ್ಕ್ ಗಿಕ್ಕ್ ಹತ್ರ ಎಲ್ಲಾರೂ ಹೋಯಿ ಅದ್ ಹರ್ಪುಕಿತ್ತ್

೪. ಸರ್, ಅವ ನನ್ನ್ ಪೆನ್ಸಿಲ್ ಕೇಂಡಾ, ನಾ ಕೊಡುಕ್ ಎಡಿಯ ಅಂದೆ, ಅದಕ್ಕೇ ಅಂವ ಹರ್ಪದ್ ಕಾಣಿ

ಹರ್ಬ್  ಕೆಲಸ

ಬಳಕೆ:

೧. ನಿಂಗ್ ಬೇರೆ ಎಂತ ಹರ್ಬ್ ಇಲ್ಲ್ಯ ಮಾಣಿ? ಬೆಳಿಗ್ಗೆಯಿಂದ್ ಒಂದೇ ರಗಳೆ.

೨. ಹಾಳ್ ಪಂಚತ್ಕಿ ಮಾಡ್ತಾ ಕೂಕಂಡಿರ್ಯಲೆ..ಬೇರೆ ಹರ್ಬ್ ಇಲ್ಲ್ಯಾ?

ಹರಿ = ಸ್ನಾನದ ನೀರು ಕಾಯಿಸಲು ಬಳಸುವ ದೊಡ್ಡ ಪಾತ್ರೆ

( ತಾಮದ್ದ್ರುಅಲ್ಯುಮಿನಿಯಂದುಮಣ್ಣಿಂದು..ಹೀಗೆ ಇದರಲ್ಲಿ ಬೇರೆ ಬೇರೆ ತರದ್ದು ಇದೆ)

ಬಳಕೆ:

೧. ಹರಿಯಗೆ ನೀರಿಲ್ಲ. ಯಾರಾರು ಒಂದ್ ನಾಕ್ ಕೊಡ್ಪಾನ ನೀರ್ ತುಂಬ್ಸಿ ಕಾಂಬ

ಹಲ್ಚಿಲಿಹಲ್ಲು ಕಿರಿಹಲ್ಲುಕಿಸಿಯು

ಬಳಕೆ:

೧. ನಿಂಗ್ ಭಾಷಿ ಬಪ್ಪುದ್ಏಗ್ಳಿಕ್ ಮರಾಯ. ಎಂತ ಹೇಳ್ರೂ ಹಲ್ಲ್ಚಿಲಿತಾ ನಿಂತ್ಕಂಡ.

೨.ಇಷ್ಟ್ದೊಡ್ಡಳಾಯಿದೆ. ಇಡೀ ದಿನ ಹಲ್ಲ್ ಚಿಲಿತಾನಿಂತ್ಕಂಬ್ಕಾಗ ಅಂದೇಳಿ ಗೊತ್ತಾತಿಲ್ಯಾ?

ಹಸರ್ಸ್‌ಕಂಡ್ ಕೂಕಂಬ್ದ್ = ಕಾಲನ್ನು ಅಗಲಿಸಿ ಕುಳಿತುಕೊಳ್ಳು.

(ಹಸರಿಸು ಅನ್ನುವ ಪದಕ್ಕೆ ಹರಡು, ವ್ಯಾಪಿಸು, ಹಬ್ಬಿಸು, ವಿಶಾಲ ಅನ್ನುವ ಅರ್ಥ ಇದೆ)

ಬಳಕೆ

೧. ಅದೆಂತ ಹಸರ್ಸ್‌ಕಂಡ್ ಕೂಕಂಡದ್. ಕಾಲ್ ಮಡ್ಚ್‌ಕಂಡ್ ಕೂಕೊ ಕಾಂಬ

ಹಸಿಗ್ ಹಿಡದ್ ಹೇಲ್ = ಜಿಗುಟುತನ, ಹಿಡಿದ ಪಟ್ಟು ಬಿಡದಿರುವುದು

(ಹಾಸಿಗೆಗೆ ಹಿಡಿದ ಮಲ ಎಷ್ಟು ತೊಳೆದರೂ ಕಲೆ ಉಳಿಸುತ್ತದೆ / ವಾಸನೆ ಉಳಿಯುತ್ತದೆ ಅನ್ನುವ ಅರ್ಥದಲ್ಲಿ)

೧. ಆತಿಲ್ಲ ಅಂದೇಳಿ ಒಂದ್ಸಲ ಹೇಳ್ರ್ ಗೊತ್ತತಿಲ್ಲ್ಯಾ.. ಎಂತಕೆ ಹಸಿಗೆ ಹಿಡ್ದ್ ಹೇಲ್ ಕಣಂಗೆ ಆಡ್ತೆ?

೨. ಅವ್ನಿಗೆ ಎಂತಾರೂ ಆಯ್ಕ್ ಅಂದ್ರೆ ಆಯ್ಕೇಯಾ… ಆಪಲ್ಲೊರಿಗೆ ಹಸಿಗ್ ಹಿಡ್ಡ್ ಹೇಲ್ ಕಣಗೆ ಮಾಡ್ತ

ಹಳು , ಹಳಿನ್ ಹಿಂಡ್ಲ್ , ಹಳ್ಕಟ್ – ಪೊದೆ , ಕುರುಚಲು ಗಿಡಗಳು ಒತ್ತೊತ್ತಾಗಿ ಬೆಳೆದ ಜಾಗ, ಕಾಡುಗಿಡ ಅಥವ ಕುರುಚಲು ಗಿಡಗಳ ದಟ್ಟವಾದ ಪೊದೆ

ಹಳು=ಕಾಡು ಗಿಡ, ಅರಣ್ಯ ( ಸಂಕ್ಷಿಪ್ತ ಕನ್ನಡ ನಿಘಂಟು)

ಹಿಂಡಲು=ಪೊದರು,ಪೊದೆ,ದಟ್ಟವಾಗಿ ಬೆಳೆದ ಗಿಡಗಳ ಗುಂಪು ( ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ:

೧, ಮನಿ ಸುತ್ತಾ ಎಷ್ಟ್ ಹಳು ಬೆಳ್ದಿತ್. ಈ ಹಳು ಒಂದ್ ಸವ್ರಿ ಕೊಡುಕ್ ಯಾರಾರೂ ಸಿಕ್ಕಿರ್ ಆತಿತ್ತ್, ಹಳಿನ್ ಹಿಂಡ್ಲಗೆ ಹುಲಿ ಬಂದ್ ಕೂಕಂಡ್ರೂ ಗೊತ್ತಾತಿಲ್ಲ

೨. ಬಾಲ್ ಹೊಡದ್ ಸೀದಾ ಹೋಯಿ ಹಳಿನ್ ಹಿಂಡ್ಲಗ್ ಬಿತ್ತ್

೩. ಮಕ್ಳೆ , ಕತ್ಲಿ ಆರ್ ಮೇಲೆ ಆ ಹಳಿನ್ ಹಿಂಡ್ಲ್ ಹತ್ರ ಹೋಯ್ಬೇಡಿ, ಮೊನ್ನೆ ಒಂದ್ ಹಾವ್ ತಿರ್ಗತಿದ್ದಿತ್ತ್

ಹಾಂಟ್ ಹಾಕು / ಹಾಟ್ ಹಾಕು = ಮೋಸ ಮಾಡುಚಕ್ಕರ್ ಹೊಡೆಕೈ ಕೊಡು

ಬಳಕೆ –

೧. ನಿಮ್ ದುಡ್ ಕೊಡ್ವಾ ಮರಾಯ್ರೆ..ನಾನೇನ್ ಹಾಂಟ್ ಹಾಕ್ತನಾ ಹಂಗಾರೆ

೨. ಇವತ್ತ್ ಮನಿಗ್ ನೆಂಟ್ರ್ ಬಂದಿರ್. ಅದಕ್ಕೆ ಶಾಲಿಗ್ ಹಾಂಟ್ ಹಾಕದ್

ಹಿಜ್ಕುದ್ = ಹಿದುಕು, ಚಿದುಕು, ಹಿಸುಕು, ಅಮುಕು, ಹಿಚುಕು

ಹಿಚುಕು – ಅದುಮು, ಹಿಸುಕು, ಅಮುಕು (ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ:

೧. ಬಟ್ಲಿಗ್ ಅನ್ನ ಹಾಕಿ ಎಷ್ಟೊತ್ತಾಯ್ತ್, ಎಂತಾ ಹಿಜಕ್ತಾ ಕೂಕಂಡಿದೆ, ಬೇಗ್ ಉಂಡ್ ಏಳುಕಾಗ್ದಾ?

೨. ಹುಣ್ಸಿ ಹಣ್ ನೀರಗೆ ನೆನ್ಸಿ ಇಟ್ಟಿದೆ, ಕಡಿಗೆ ಒಂಚೂರ್ ಹಿಜ್ಕಿ ಹುಳಿಗ್ ಹಾಕ್ ಅಕಾ

೩. ಅವ್ರಿಗೆ ವರ್ಷ ಆಯ್ತಲ್ದಾ, ಅನ್ನ ಗಟ್ಟಿ ಆರೆ ಜೀರ್ಣ ಆತಿಲ್ಲೆ, ಅದ್ಕೆ ಸಮಾ ಹಿಜ್ಕಿ ನುರ್ದ್ ಒಂಚೂರ್ ಹಾಲ್ ಹಾಕಿ ಕೊಡ್ಕ್

ಹಿಡಿಸೂಡಿ / ಹಿಡ್ಸುಡಿ  – ಕಸಬರಿಕೆ

ಬಳಕೆ:

೧. ತೆಂಗಿನ್ ಮಡ್ಲ್ ಸುಮಾರಿದ್ದಿತ್. ಪುರ್ಸೊತ್ತಾರೆ ನಾಕ್ ಹಿಡಿಸೂಡಿಯಾರೂ ಮಾಡ್ಲಕ್ಕಿದ್ದಿತ್ತ್.

ಹಿಂದಾಗು = ಗುಣವಾಗುಶಮನವಾಗು

೧. ಆ ಡಾಕ್ಟ್ರ್ ಕೈ ಅಡ್ಡಿಲ್ಲ. ಎರ್ಡ್ ಹೊತ್ತಿನ ಮಾತ್ರಿ ತಕಂಬ್ದ್ರೊಳ್ಗೆ  ಬೆನ್ನ್ ನೋವ್ ಹಿಂದಾಯ್ತ್.

೨. ಕೈಯ್ಯಗ್ ಒಂದ್ ಗಾಯ ಆಯಿತ್. ದಿನಾ ನೀರ್ ತಾಗತ್ ಅಲ್ದಾ.. ಎಂತ ಹಚ್ರೂ ಹಿಂದಾತಿಲ್ಲಪ

ಹಿಲಾಲ್ ಹಿಡಿಹಿಲ್ಲಾಲ್ ಹಿಡಿ  ತಮಾಷೆ ಮಾಡುಗೇಲಿ ಮಾಡು

(ಹಿಲಾಲು ಶಬ್ದದ್ ಅರ್ಥ ನಿಜವಾಯಿ ಕಾಂಬುಕೆ ಹೋರೆ -‘ಬಟ್ಟೆಯನ್ನು ಎಣ್ಣೆಯಲ್ಲಿ ನೆನೆಸಿ ಮಾಡಿದ ದೊಂದಿ’ಅಂತಿತ್ತ್. ದೇವ್ರ್ ಮೂರ್ತಿ ಉತ್ಸವದ್ ಸಮಿಗೆ ರಾತ್ರಿ ಹಿಡಿತ್ರಲ ಆ ನಮನಿ ದೊಂದಿ. ಬೌಶ ಇದು ಮಾಡದ್ ತಪ್ಪನ್ ಬೆಳ್ಕಿಗೆ ಹಿಡುದ್ ಅಂಬ್ ಅರ್ಥದಗೆ ಬಂದ ನುಡಿಕಟ್ ಅಂದೇಳಿ ಕಾಣತ್)

ಬಳಕೆ –

೧. ಸ್ವಲ್ಪ ಸದ್ರ ಕೊಟ್ರ್ ಸಾಕ್ ಎಲ್ಲರೂ ಹಿಲ್ಲಾಲ್ ಹಿಡುಕೇ ಬತ್ತ್ರ್

೨. ನೀ ಹಿಲಾಲ್ ಹಿಡುದ್ ಬ್ಯಾಡ್ದಾ…ನೀ ಎಂತ ಅಂದೇಳಿ ನಂಗ್ ಗೊತ್ತಿಲ್ಲ್ಯಾ?

೩. ಅಂವ ಜಾರಿ ಬಿದ್ರೆ ನೆಗ್ಗುದ್ ಬಿಟ್‌ಕಂಡ್ ಎಲ್ಲಾ ಸೇರ್‌ಕಂಡ್ ಹಿಲಾಲ್ ಹಿಡಿತಾ ಇದ್ರ್ಯಾ?

ಹೀಕರ್ಣೆಹೀಕರ್ಣಿ – ಹೀಕರಣೆಜಿಗುಪ್ಸೆಹೇವರಿಗೆ

ಬಳಕೆ –

೧. ಜ್ವರ ಬಂದ್ ನಾಲ್ಗಿ ಎಲ್ಲ ಕಂಯ್ ಆಯಿತ್. ಎಂತ ತಿಂಬುಕ್ ಹೋರು ಹೀಕರ್ಣೆ ಬಂದಂಗಾತ್

೨. ದಿನಾ ಸೌತಿಕಾಯ್ ತಿಂದ್ ತಿಂದ್ ಹೀಕರ್ಣಿ ಬಂದಾಂಗಾಯಿತ್. ಇವತ್ ಬೇರೆ ಎಂತಾರು ಹುಳಿ ಮಾಡ್ ಕಾಂಬ

ಹುಕ್ಶಿಡು/ಹುಗ್ಸಿಡು/ಹುಗ್ಸಿ ಇಡುದ್ = ಅಡಗಿಸಿ ಇಡು, ಬಚ್ಚಿಡು

ಹುಗ್ಗು – ಆಡಗು,ಹುದುಗು (ಸಂಕ್ಷಿಪ್ತ ಕನ್ನಡ ನಿಘಂಟು)

೧. ಈ ಸರ್ತಿ ಹಪ್ಳ ಮಾಡದ್ದ್ ಭಾರಿ ಕಡ್ಮಿ ಆಯ್ತ್. ಒಂದ್ ಸ್ವಲ್ಪಾ ಆರೂ ಹುಗ್ಸಿಡ್‌ದಿದ್ರೆ, ಈ ಮಕ್ಳ ಕಡಿಂದ ಈ ವರ್ಷ ಮಳ್ಗಾಲಕ್ಕೆ ತೊಡುಗ್ ಬೇಕಂದ್ರೊ ಹಪ್ಳ ಇರುದಿಲ್ಲೆ

೨. ನಾ ಸ್ವಲ್ಪ ಜಾಗ್ರತೆ ಮಾಡಿ ಹುಗ್ಸಿಟ್ಟದ್ದಕ್ಕಾಯ್ತ್, ಇಲ್ದಿರೆ ಈಗ ಅರ್ಜೆಂಟಿಗೆ ಬೇಕಂದ್ರೆ ಸಿಕ್ತಿತ್ತಾ?

ಹುಣ್ಸಿಹಣ್ = ಜಂಬ

ಬಳಕೆ

೧. ಅವ್ನಿಗ್ ಕಯ್ಯಗ್ ಕಾಸ್ ಆರ್ ಮೇಲೆ ಮಸ್ತ್ ಹುಣ್ಸಿಹಣ್ ತೋರ್ಸ್‌ತ. ನಾವೆಲ್ಲ ಕಣ್ಣಿಗ್ ತೋರುದೇ ಇಲ್ಲ

೨. ನಿನ್ ಹುಣ್ಸಿಹಣ್ ಎಂತ ಇದ್ರೂ ಮನೆಯಗೆ ಇಟ್ಕೋ. ಇಲ್ಲೆಲ್ಲ ತೋರ್ಸುಕೆ ಹೋಯ್ಬೇಡ

ಹೂವಿನ್ ಗುತ್ತಿ = ಹೂವಿನ ಗಿಡ

ಬಳಕೆ :

೧. ಈ ಸಾರಿಯಾದ್ರೂ ಮಳ್ಗಾಲದಗೆ ಒಂದಿಷ್ಟ್ ಹೂವಿನ ಗುತ್ತಿ ನೆಡ್ಕ್

೨. ಹೂವಿನ್ ಗುತ್ತಿ ಪೂರಾ ಗಂಟಿ ಬಂದ್ ತಿಂದ್ಕಂಡ್ ಹೋಯ್ತ್

ಹೆಡಿಮಂಡಿ , ಹೆಡೆಮಂಡೆ  ತೆಂಗಿನ ಹೆಡೆಯ ತಲೆಯ ಭಾಗ (ಮಂಡೆ = ತಲೆ )

ಬಳಕೆ:

೧. ಒಲಿಗ್ ಹಾಕುಕೆ ಸೌದಿ ಎಂತ ಇಲ್ಲ. ನಾಕ್ ಹೆಡಿಮಂಡಿಯಾರೂ ಇದ್ದಿರ್ ಆತಿತ್ತ್.

( ಕ್ರಿಕೇಟ್ ಆಡುಕೆ ಬೇರೆ ಯಾವ ಬ್ಯಾಟೂ ಇಲ್ದಿದ್ರೆ…ಹೆಡಿಮಂಡಿ ಬ್ಯಾಟಗೆ ಆಡ್ಲಕ್. ನಾವೆಲ್ಲ ಕ್ರಿಕೇಟ್ ಆಡುಕೆ ಕಲ್ತದ್ದ್ ಅದ್ರಗೇ)

ಹೈಲು/ ಹೈಲ್ =ಕಂಗಾಲು, ಹೈರಾಣ

( ಈ ಶಬ್ದಕ್ಕೆ ಹೈರಾಣ ಅನ್ನುವ ಶಬ್ದ ಅತೀ ಸಮೀಪದ ಅರ್ಥ ಕೊಡುತ್ತದೆ

ಹೈರಾಣ =ಕಂಗಾಲಾಗುವಿಕೆ, ಕಷ್ಟ, ತೊಂದರೆ, ದಣಿವು, ಬಳಲಿಕೆ – ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ:

೧. ಅವ್ನ್ ಮಾತ್ ಕೇಂಡ್ಕಂಡ್ ನೀ ಹೈಲಾದ್ದ್ ಸಾಕ್ ಮರಾಯ. ಅವ್ನಿಗೆ ಎಂತ ಗೊತ್ತಿತಂದೇಳಿ ಅವ್ನತ್ರ ಕೇಂಬ್ಕ್ ಹೋದ್ದ್ ನೀನ್

೨. ಈ ಮಳೀನ್ ನಂಬ್ಕಂಡ್ ಗೆದ್ದಿ ಬ್ಯಾಸಾಯ ಮಾಡ್ತೆ ಅಂದ್ಕಂಡ್ರೆ…ಕಡೀಕ್ ಕತಿ ಹೈಲ್ ಆಪ್ದೇ ಸೈ

೩. ಈ ಮಳಿ ಬಪ್ಪತಿಗೆ ಕುಂದಾಪ್ರ ಸಂತಿಗ್ ಹೋಯ್ ಯಾಪಾರ ಮಾಡ್ಕಂಡ್ ಬಪ್ರೊಳ್ಗೆ ನಮ್ಮ್ ಯಾಪಾರ ಹೈಲ್ ಅಲ್ದೇ. ಒಂದ್ ಗಳ್ಗಿಯಾರೂ ಮಳಿ ಚಡಿ ಕೊಟ್ರ್ ಕಾಣಿ

೪. ಈ ಮಕ್ಕಳಿಗೆ ರಜಿಯಾರೂ ಎಂತಕ್ ಬತ್ತೋ ಏನೋ. ಅವ್ರನ್ ಸುಧಾರ್ಸುದ್ರೊಳ್ಗೆ ಅಲ್ದೇ ನಾ ಅರ್ಧ ಹೈಲ್ ಆದ್ದ್.

೫. ಕೊಡಿ(ಕೊಡೆ) ತಕಂಡ್ ಹೋಪುಕೆ ನೆನ್ಪ್ ಹೋಯಿ, ಮಳೆಯಗ್ ಸಿಕ್ಕಿ ಬಿದ್ದ್ ನನ್ ಯಾಪಾರ ಹೈಲಾದ್ದ್ ಅಲ್ದಾ ಮಾರ್ರೆ

ಹೈಸರ / ಹೈಂಸರ = ಕೇರೆ ಹಾವು

ಇದಕ್ಕ್ ಯೆಂತ ಉದಾರ್ಣೆ ಕೊಡುದ್ ಬ್ಯಾಡ ಅಂದ್ಕಂಡಿದೆ.

ಹೈಂಸರನ್ ಬಗ್ಗ್ ಇಪ್ಪ್ ಒಂದ್ ಸುಳ್ಳ್ ನಂಬ್ಕಿ-“ಇದ್ ಕಚ್ಚ್‌ರೆ ಯಾರೂ ಸಾಯುದಿಲ್. ಆರೆ ಕಚ್ಚಿ ಬಾಲದಲ್ಲಿ ಕೊಡದ್ರೆ (ಹೊಡ್‌ದ್ರೆ) ಸಾಯ್ತ್ರಂಬ್ರ್.

ಹೊಕ್ಡ್ = ಜೊತೆಗೆಬಳಿಹತ್ತಿರಒಟ್ಟಿಗೆ

ಬಳಕೆ

೧. ಮೊನ್ನೆ ನಂಗೂ ಅವಂಗೂ ಮಾತಿಗ್ ಮಾತ್ ಆಯ್ ಈಗ ನನ್ ಹೊಕ್ಡ್ ಮಾತಾಡುದೇ ಕೈದ್ ಮಾಡಿದ

೨. ನಿನ್ನ್ ಹೊಕ್ಡ್ ಒಂದ್ ನೂರ್ ರೂಪಾಯ್ ಇದ್ರ್ ಕೊಡ್ ಮರಾಯಾ, ಒಂದ್ ನಾಕ್ ದಿನ ಬಿಟ್ಟ್ ಕೊಡ್ತೆ

೩. ಮಗು ಒಂದೇ ಇತ್ತಲೆ ಅಲ್ಲ್. ಮಗಿನ ಹೊಕ್ಡ್ ಯಾರರು ಕೂಕಣಿ ಕಾಂಬ

ಹೊಟ್ಟೆ ತಿಪ್ಪುದ್ / ಹೊಟ್ಟಿ ಕಚ್ಚು = ಹೊಟ್ಟೆ ನೋವಾಗು, ಹೊಟ್ಟೆ ತೊಳಸಿದಂತಾಗು

ಬಳಕೆ :

೧. ಬೆಳ್ಗಾಮುಂಚಿಯಿಂದ ಹೊಟ್ಟಿ ತಿಪ್ಪತಾ ಇತ್ತ್

೨. ಇವತ್ತ್ ಲಾಯ್ಕ್ ಇತ್ತ್ ಅಂದೇಳಿ ಒಂದೆರ್ಡ್ ಪೋಡಿ ತಿಂದದ್ದೇ ಸೈಯಪ್ಪ. ಹೊಟ್ಟಿಕಚ್ಚುಕೆ ಶುರುವಾಯ್ತ್

ಹೊಟ್ಟಿ ಹೊರ್ಕಂಬ್ದ್  ಉದರ ಪೋಷಣೆ (ಜೀವನ ನಿರ್ವಹಣೆ ಅನ್ನುವುದು ಸೂಚ್ಯಾರ್ಥ)

ಹೊರೆ = ಕಾಪಾಡು, ಪೊರೆ, ಪೋಷಿಸು, ಸಲಹು ( ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ –

೧  ಏನೋ ಓದದ್ದ್ ದಂಡ ಆಪುಕಾಗ ಅಂದೇಳಿ ಅಂವ ಕೆಲ್ಸಕ್ ಹೋತಾ ಬಿಟ್ರೆ, ಅದ್ರಗೇ ಹೊಟ್ಟಿ ಹೊರ್ಕಣ್ಕ್ ಅಂದೇಳಿ ಇಲ್ಲ. ಮನಿ ಬದ್ಯಗೆ ಬೇಕಾದಷ್ಟ್ ಇತ್ತಂಬ್ರಪ.

೨  ಈಗ ಏನೋ ಒಬ್ನೇ, ಹ್ಯಾಂಗೋ ಹೊಟ್ಟಿ ಹೊರ್ದ್ ಹೊತ್ತ್, ಕೆಲ್ಸ ಮಾಡ್ರೂ ಮಾಡ್ದಿದ್ರೂ ಹ್ಯಾಂಗೋ ನೆಡ್ದ್ ಹೋತ್ತ್. ಕಡಿಗೆ ಮದಿ ಗಿದಿ ಆರ್ಮೇಲಾರೂ ಹೆಂಡ್ತಿ ಮಕ್ಳ್ ಹೊಟ್ಟಿ ಹೊರುಕಾರೂ ಕೆಲ್ಸ ಮಾಡ್ಕೇ ಅಲ್ದಾ?

ಹೊಡ್ಕುಹೊಡಕು = ಹೊರಳಾಡುವುದು, ಉರುಳಾಡು

ಬಳಕೆ:

೧. ಎಂತ ನಿದ್ರಿ ಬತ್ತಿಲ್ಯನಾ, ಆಗ್ಳಿಂದ ಪುರ್ಸೊತ್ತಿಲ್ದೆ ಹೊಡ್ಕತಾ ಇದ್ದೆ

೨. ಅಂವ ಒಂದ್ ಹೊಡ್ಕುದಂದ್ರೆ ಮರಾಯ, ರಾತ್ರಿ ಬೆಳ್ಗಾಪ್ರೊಳ್ಗೆ ತಲ್ದಿಸಿಲ್ ಕಾಲ್ ಇರತ್ತ್, ಕಾಲ್ ಬುಡ್ದಗೆ ತಲಿ ಇರತ್ತ್

೩. ಬೆಳಿಗ್ಗೆ ಬೇಗ್ ಎದ್ದ್ ಓದ್ ಅಂದ್ರೆ ಹಾಸ್ಗಿ ಮೇಲೆ ಹೊಡ್ಕ್‌ತಾ ಆಯ್ಕಂಡಿದ್ಯಾ?

೪. ಅವ್ನಿಗೆ ಹೊಟ್ಟಿ ನೋವ್ ಬಂದದ್ದಾರೂ ಎಂತ ಅಂತ್ರಿ..ಏನ್ ಬಿದ್ದ್ ಬಿದ್ದ್ ಹೊಡ್ಕ್‌ತಾ ಇದ್ದ

ಹೋಪ್ದ್-ಬಪ್ದ್ =ಹೋಗುವುದು ಬರುವುದು

ಹೋಯ್‌ಬಪ್ದ್=ಹೋಗಿ ಬರುವುದು

ಹೋಪ್‌ಬಪ್ಪಲ್ಲಿಗೆ = ಹೋಗಿ ಬರುವಲ್ಲಿಗೆ

ಬಳಕೆ:

೧. ಪೈಕಿಯರ್ ಮನಿ ಮದಿ ಅಲ್ದಾ, ಒಂದ್ ಗಳ್ಗಿಯಾರೂ ಹೋಯ್ ಬರ್ಕ್

೨. ನಾವ್ ಅವ್ರ್ ಮನಿಗೆ ಹೋಪ್ದ್ ಬಪ್ದ್ ಇಟ್ಕಂಡ್ರ್ ಮಾತ್ರ ಅಲ್ದಾ ಅವ್ರೂ ನಮ್ಮನಿಗೆ ಬಪ್ಪುದ್

೩. ಅದೆಂತಕೆ ಆ ಅಂಗಿ ಚಡ್ಡಿ ಹಾಯ್ಕಂಡಿದೆ, ಅದ್ ಹಾಳಾರೆ ಹೋಪ್ ಬಪ್ಪಲ್ಲಿಗೆ ಎಂತ ಹಾಯ್ಕಂಡ್ ಹೋತೆ

 

ಒಂದಿಷ್ಟು ಕುಂದಾಪ್ರ ಕನ್ನಡದ ನುಡಿಗಟ್ಟುಗಳು 

೧) ಕರ್ಕರೆ ದೇವ್ರಿಗೆ ಮರನ್(ಮರದ) ಜಾಗಂಟಿ

೨)  ಊರಿಗ್ ಬುದ್ಧಿ ಹೇಳುದ್ ಒಲಿಗೆ ಉಚ್ಚಿ ಹೊಯ್ಯುದ್

೩)  ಕುಪ್ಳನ್ ನಂಬ್ಕಂಡ್ ಕೊಳ್ಕಿ ನಟ್ರಂಬ್ರ್


ಹ್ವಾಯ್ ಇದೆಂತ ದರ್ಶಿನಿ ಹೋಟ್ಲಗೆ ಜೀರಾ ರೈಸು, ಘೀ ರೈಸು ಅಂದೇಳಿ ಬೋರ್ಡ್ ಬರ್ದ್ ಹಾಕಿದಂಗಿತ್ತಲೆ.. ಎಂತಾ ಮರಾಯ್ರೆ ಹೋಟ್ಲ್ ಗೀಟ್ಲ್ ಇಟ್ಟಿರ್ಯಾ ಎಂತ ಕತಿ ಅಂದೇಳಿ ಮಂಡಿ ಗಿಂಡ್ಕಂಬ್ಕೆ ಶುರು ಮಾಡ್ಬೇಡಿ… ಹೋಟ್ಲ್ ಇಟ್ಟರೇ ಈಗ ಹ್ಯಾಂಗ್ ಸುಧಾರ್ಸುದಂದೇಳಿ ಮಂಡಿ ಬಿಶಿ ಮಾಡ್ಕಂಡಿದ್ರ್ ಮರ್ರೆ..ನೀವ್ ಎಂತದೋ ಹೇಳ್ತ್ರಿ… 🙂

ಮತ್ತೆಂತ ಅಲ್ಲ ಇದ್ ನಾನ್ ಇವತ್ತ್ ಹಿಡ್ಕಂಡ್ ಬಂದ್ ಕುಂದಾಪ್ರ ಕನ್ನಡ ಶಬ್ದ. ಈ ಶಬ್ದದ್ ಕತಿ ಎಂತ ಕಾಂಬ ಬನಿ ಹಂಗಾರೆ…

ರೈಸು = ಗಡದ್ದಾಗಿರು, ಭರ್ಜರಿಯಾಗಿರು, ಮಿಂಚುವುದು, ಕಳೆಕಟ್ಟುವುದು, ಮೆರೆಯು

ಯಾರಾರು ಬೆಂಗ್ಳೂರ್ ಬದಿಯರ ಹತ್ರ ರೈಸು ಅಂದ್ರೆ ಎಂತ ಅಂದೇಳಿ ಕೇಂಡ್ರೆ ಅವ್ರಿಗ್ ಗೊತ್ತಿಪ್ದ್ ಇಷ್ಟೇ.. “ವೈಟ್ ರೈಸು, ಜೀರಾ ರೈಸು, ಕಲರ್ಡ್ ರೈಸು, ಘೀರೈಸು, ರೈಸ್ ಬಾತ್ ಗೊತ್ತು ನಂಗೆ. ಇದ್ರಲ್ಲಿ ಯಾವ ರೈಸ್ ನೀವ್ ಹೇಳಿದ್ದು? ಇಲ್ಲ ನೀವು ಬಾಸ್ಮತಿ ರೈಸ್ ಬಗ್ಗೆ ಹೇಳ್ತಿದ್ದಿರಾ?” ಹೀಂಗಂದೇಳಿ ನಿಮ್ಮನ್ನೇ ಕೇಂತ್ರ್. ಅದನ್ನೂ ಕನ್ನಡದಗೆ ಕೇಂಡ್ರೆ ನಿಮ್ಮಜ್ಜಿ ಪುಣ್ಯ!!

ಇನ್ನೊಂದ್ ಬಾಯಲ್ಡ್ ರೈಸು (ಅದೇ ಮರ್ರೆ ನಮ್ಮ್ ಕೊಚ್ಚಕ್ಕಿ ಕೂಳ್!!) ಅಂದೇಳಿ ಇತ್ತಾರು ಈ ಬದ್ಯರಿಗೆ ಅದ್ ಆಯ್ ಬತ್ತಿಲ್ಯಲೆ.

ಇರ್ಲಿ ಈಗ ನಮ್ಮ ಕುಂದಾಪ್ರದ ರೈಸು ಎಂತ ಕಾಂಬ

ಏನಾರೂ ಭರ್ಜರಿಯಾದ ಪ್ರದರ್ಶನ, ಗಮನಸೆಳೆಯುವ ವ್ಯಕ್ತಿ-ವಿಶೇಷಗಳು, ಗುಂಪಿನಲ್ಲಿ ಮಿಂಚುವುದು ಹೀಂಗೆ ಸುಮಾರ್ ಸಂದರ್ಭದಗೆ ಈ “ರೈಸುವುದು” ಉಪ್ಯೋಗ ಆತ್ತ್

ಈ ಶಬ್ದ ಇಂಗ್ಲೀಶಿನ ರೈಸ್(rise)ನಿಂದ ಬಂದಿತಾ ಅಂದೇಳಿ ನನ್ ಅನ್ಮಾನ ಅಷ್ಟೇ. ಹೇಚ್ಚೂ ಕಡ್ಮಿ ಅರ್ಥ ಸತೇ ಹೊಂದಾಣ್ಕಿ ಆತ್ತ್

ಬಳಕೆ:

೧. ಮೊನ್ನೆ ಪೆರ್ಡೂರ್ ಮ್ಯಾಳ್ದರ್ ಆಟ ಏನ್ ರೈಸಿ ಹೋಯ್ತ್ ಮರಾಯ, ಬೆಳ್ಗಾಪೊಲ್ಲೊರಿಗೂ ಒಂಚೂರ್ ಕಣ್ಣ್ ಕೂರ್ರೆ ಹೇಳ್. ಅದ್ರಗೂ ಗದಾಯುದ್ಧ ಪ್ರಸಂಗನ್ನಂತೂ ಹೊಡಿ ಹಾರ್ಸಿ ಕೊಟ್ರ್ ಕಾಣ್

೨. ಮೊನ್ನೆ ಅಷ್ಟ್ ಜನ ಪದ್ಯ ಹೇಳ್ರ್ ಸುಳ್ಳಾ.. ಆರೆ ನಿನ್ನ್ ಪದ್ಯ ರೈಸ್ದಷ್ಟ್ ಇನ್ಯಾರದ್ದೂ ರೈಸ್ಲಿಲ್ಲ ಕಾಣ್

೩. ಎಂತ ಒಳ್ಳೇ ಗಡ್ಜಾಯಿ ಮದಿ ಮನಿಗ್ ಹೋರ್ಟಂಗಿತ್ತ್…ಎಷ್ಟ್ ರೈಸುಕಿತ್ತೋ ಏನ್ ಕತಿಯೋ…

ಪುರೈಸು = ಫೂರೈಸು, ನೀಗಿಸು, ಈಡೇರಿಸು, ಪೂರ್ತಿಮಾಡು,ಭರ್ತಿ ಮಾಡು,ಸರಬರಾಜು, ಸಾಗಣೆ

 ಪೂರೈಸು ಅನ್ನುವ ಗ್ರಾಂಥಿಕ ರೂಪ ಬಳಕೆಯಲ್ಲಿದೆಯಾದರೂ ಅದನ್ನು ಕುಂದಾಪುರ ಕನ್ನಡದಲ್ಲಿ ಚಿಕ್ಕದಾಗಿ-ಚೊಕ್ಕವಾಗಿ ಪುರೈಸು ಅಂತ ಬಳಕೆಯೇ ಜಾಸ್ತಿ. ಗ್ರಾಂಥಿಕ ಕನ್ನಡದಲ್ಲಿ ಪೂರೈಸು ಅನ್ನುವುದರ ಅರ್ಥ ಹೆಚ್ಚಾಗಿ ಒದಗಿಸು, ಈಡೇರಿಸು, ಪೂರ್ತಿಮಾಡು ಅಥವಾ ಮುಗಿಸು ಅನ್ನುವ ಅರ್ಥದಲ್ಲಿಯೇ ಬಳಸಲಾಗುತ್ತದೆ. ಉದಾಹರಣೆಗೆ ವಿದ್ಯುತ್ ಪೂರೈಕೆ, ಆಸೆ ಪೂರೈಸು, ಕೆಲಸವನ್ನು ಪೂರೈಸು. ಆದರೆ ಕುಂದಾಪುರ ಕನ್ನಡದಲ್ಲಿ ಈ ಎಲ್ಲಾ ಸಂದರ್ಭಗಳಿಗೆ ಹೊರತಾದ ಬಳಕೆಯೂ ಇದೆ. ಇದಕ್ಕೆ ಬೆಂಗಳೂರಿನ ಕಡೆ ಬಳಕೆಯಲ್ಲಿರುವ, ವ್ಯಾಪಾರಿಗಳು ಉಪಯೋಗಿಸುವ ಗಿಟ್ಟುವುದು aಅನ್ನುವ ರೂಡಿಯಲ್ಲಿನ ಶಬ್ದಕ್ಕೆ ತೀರಾ ಹತ್ತಿರದ ಅರ್ಥದಲ್ಲಿ ವ್ಯಾಪಾರ-ವ್ಯವಹಾರಗಳ ಕೊಡು-ಕೊಳ್ಳುವಿಕೆಯಲ್ಲಿ ಬಳಸಲಾಗುತ್ತದೆ. ನನಗೆ ತಿಳಿದಂತೆ ಈ ರೀತಿಯ ಅರ್ಥದಲ್ಲಿ ಪೂರೈಸು ಪದವನ್ನು ಬೇರೆ ಕಡೆ ಬಳಸುವುದು ತೀರಾ ಕಡಿಮೆ

(ಕುಂದಾಪ್ರ ಕನ್ನಡದ್ ಬಗ್ಗೆ ಯೋಚ್ನೆ ಮಾಡುವತಿಗೆಲ್ಲಾ ನಂಗೊಂದ್ ಆಲೋಚ್ನಿ ಬತ್ತ್. ಎಂತ ಕೇಂಡ್ರ್ಯಾ? ಈ ಉಕ್ತಲೇಖನ(ಅಂದ್ರೆ ಯಾರಾರೂ ಹೇಳದ್ದನ್ನ ಬರ್ಕಂಬತಿಗೆ)ಕ್ಕೆ ಶಾರ್ಟ್ ಹ್ಯಾಂಡ್ ಅಂದೇಳಿ ಎಂತೆಲ್ಲಾ ಕೋಡ್ ವರ್ಡ್ ಮಣ್ಣ್ ಮಶಿ ಎಲ್ಲಾ ಕಲಿತ್ರಲೆ, ಅದ್ರ್ ಬದ್ಲ್ ಕುಂದಾಪ್ರ ಕನ್ನಡದಗೆ ಬರ್ಕಂಡ್ರೆ ಅದಕ್ಕಿಂತ್ ಬೇಗ್ ಬರುಕಾತ್ತಾ ಅಂದೇಳಿ!! ಈಗ ನೀವೇ ಕಾಣಿ…”ನಾನು ದಾರಿಯಲ್ಲಿ ಬರುತ್ತಿರುವಾಗ” ಇದನ್ನೇ ಕುಂದಾಪ್ರ ಕನ್ನಡದಗೆ “ನಾ ದಾರಿಲ್ ಬಪ್ಪತಿಗೆ” ಅಂದೇಳಿ ಎಷ್ಟ್ ಸಣ್ಣದ್ ಮಾಡಿ, ಲಾಯ್ಕಾಯಿ ಬರೀಲಕ್ಕ್ ಕಾಣಿ, ನಾ ಹೇಳದ್ದ್ ಸುಳ್ಳಾ ಮತ್ತೆ!! ಇರ್ಲಿ ವಿಷ್ಯ ಒಳ್ದಾರಿ ಹಿಡ್ಕಂಡ್ ಎತ್ಲಾಗೋ ಹೋಯ್ತ್

ಬಳಕೆ:

೧. ನನ್ ಒಬ್ನ್ ಕೈಲ್ ಮಾಡಿ ಪುರೈಸುಕಾಪ್ದಲ್ಲ. ಯಾರಾರೂ ನಾಕ್ ಜನ ಒಟ್ಟಿಗಿದ್ರೆ ಒಂದ್ ಕೈ ಕಾಣ್ಲಕ್ಕ್

೨. ಒಂದ್ ನಾಕ್ ದಿನ ಇದ್ದ್ ಹೋಪ್ರಿಯಲೆ, ನಾಳಲ್ಲ ನಾಡ್ದಂದ್ರೆ ಕಮ್ಲಶಿಲಿ ಹಬ್ಬ. ಹಬ್ಬ ಪುರೈಸ್ಕಂಡೇ ಹೋದಂಗಾತ್

೩. ಇಲ್ಯೇ.. ನೀವ್ ಅಷ್ಟ್ ಕಡ್ಮಿಗ್ ಕೇಂಡ್ರ್ ಹ್ಯಾಂಗೆ, ಅಷ್ಟಕ್ ಕೊಟ್ರೆ ನಮ್ಗ್ ಪುರೈಸುದಿಲ್ಲ

ಹೈಲ್ =  ಈ ಶಬ್ದಕ್ಕೆ ಹೈರಾಣ ಅನ್ನುವ ಶಬ್ದ ಅತೀ ಸಮೀಪದ ಅರ್ಥ ಕೊಡುತ್ತದೆ

(ಹೈರಾಣ =ಕಂಗಾಲಾಗುವಿಕೆ, ಕಷ್ಟ, ತೊಂದರೆ, ದಣಿವು, ಬಳಲಿಕೆ – ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ:

೧. ಅವ್ನ್ ಮಾತ್ ಕೇಂಡ್ಕಂಡ್ ನೀ ಹೈಲಾದ್ದ್ ಸಾಕ್ ಮರಾಯ. ಅವ್ನಿಗೆ ಎಂತ ಗೊತ್ತಿತಂದೇಳಿ ಅವ್ನತ್ರ ಕೇಂಬ್ಕ್ ಹೋದ್ದ್ ನೀನ್

೨. ಈ ಮಳೀನ್ ನಂಬ್ಕಂಡ್ ಗೆದ್ದಿ ಬ್ಯಾಸಾಯ ಮಾಡ್ತೆ ಅಂದ್ಕಂಡ್ರೆ…ಕಡೀಕ್ ಕತಿ ಹೈಲ್ ಆಪ್ದೇ ಸೈ

೩. ಈ ಮಳಿ ಬಪ್ಪತಿಗೆ ಕುಂದಾಪ್ರ ಸಂತಿಗ್ ಹೋಯ್ ಯಾಪಾರ ಮಾಡ್ಕಂಡ್ ಬಪ್ರೊಳ್ಗೆ ನಮ್ಮ್ ಯಾಪಾರ ಹೈಲ್ ಅಲ್ದೇ. ಒಂದ್ ಗಳ್ಗಿಯಾರೂ ಮಳಿ ಚಡಿ ಕೊಟ್ರ್ ಕಾಣಿ

ಅಂತೂ ರೈಸು-ಪೂರೈಸು ಕತಿ ಬರುದ್ರೊಳ್ಗೆ… ಕಂಪೂಟ್ರ್ ಕುಟ್ಟಿ ಕುಟ್ಟಿ ನಮ್ ಕತಿ ಹೈಲಾಯ್ತ್ ಕಾಣಿ 🙂


ಈ ಬದಿಗ್ ಬಾರ್ದೆ…ಭರ್ತಿ 10 ತಿಂಗ್ಳ್ ಆಯ್ತ್. ಅದೆಂತದೊ ಗಜಗರ್ಭ ಅಂತ್ರಲ್ದಾ ಹಾಂಗಿನ್ ಕತಿ ಆಯ್ತ್. ಇವತ್ತ್ ಬರಿತೆ ನಾಳೆ ಬರಿತೆ… ನಾಡ್ದಿಗಂತೂ ಬರ್ದೇ ಶುದ್ಧ ಅಂದ್ಕಂಡ್ ಅಂದ್ಕಂಡ್…. ದಿನ ಮಸ್ತ್ ಆಯ್ತ್. ಇವತ್ತ್ ಎಂತಾರೂ ಸೈಯೇ… ಬರಿದೆ ಬಿಡುದಿಲ್ಲ ಅಂದೇಳಿ ಎಣ್ಸಕಂಡ್ ಉದಾಶಿನ ಎಲ್ಲ ಒಟ್ಟ್ ಮಾಡಿ ಪೆಟ್ಗಿಒಳ್ಗೆ ಹಾಕಿ ಬರುಕ್ ಕೂಕಂಡಿದೆ…ಈ ಬ್ಲಾಗಿನ್ ಕತಿಯೇ ಹೀಂಗೆ ಕಾಣಿ… ಬರಿತಾ ಇದ್ರೆ, ಒಂದಲ್ಲಾ ಒಂದ್ ವಿಷ್ಯ ಬರುಕ್ ಸಿಕ್ಕತ್ತ್… ಒಂದ್ ನಾಕ್ ದಿನ ಬರುದ್ ನಿಲ್ಸ್ರೆ ಸಾಕ್.. ಎಂತಾ ಬರುದ್ ಎಂತಾ ಬರುದ್ ಅಂದೇಳಿ ದಿನ ಹೊದ್ದೇ ಗೊತ್ತಾತಿಲ್ಲ..ಮೊದ್ಲ್ ಎಷ್ಟೇ ಬರದ್ದಿದ್ರೂ ಈಗ ಪುನ ಗಣ್ಪತಿ ಪದ್ಯದಿಂದ್ಲೇ ಶುರು ಮಾಡ್ಕಾತ್ತ್…

ಅಂದಾಂಗೆ ನಾಡ್ದ್ ಹನ್ನೊಂದ್ನೇ ತಾರೀಕ್ ಬಂದ್ರೆ ಬ್ಲಾಗಿಗೆ ಮೂರ್ ವರ್ಷ ಆತ್ತ್. ಇಷ್ಟ್ ದಿನ ಹ್ಯಾಂಗಿದ್ರೂ ಬ್ಲಾಗಿಗೆ ಉಪ್ವಾಸವೇ ಆಯ್ತ್. ಹುಟ್ದಬ್ಬನಾರೂ ಗಡ್ಜಾಯಿ ಮಾಡಿ ಹೊಟ್ಟಿ ತುಂಬಾ ಊಟ ಹಾಕುದ್ ಬ್ಯಾಡ್ದಾ ಹಂಗಾರೆ…. ಅದಕ್ಕೇ ಇವತ್ತ್ ಅರ್ಧ ದಿನ ಕೂತ್ಕಂಡ್ ಹುಟ್ದಬ್ಬಕ್ಕೆ ಅಡ್ಗಿ ಮಾಡದ್ದೇ ಮಾಡದ್ದ್…. ನೀವೂ ಬಂದ್ ಒಂದೆರ್ಡ್ ತುತ್ತ್ ತಿನ್ಕಂಡ್ ಹೋರೆ ನಂಗೂ ಖುಶಿಯಾತ್ತ್ ಕಾಣಿ.. ಹುಟ್ದಬ್ಬಕ್ಕೆ ಬರೀ ಕೈ ಬೀಸ್ಕಂಡ್ ಬರ್ಬೆಡಿ.. ಎಂತಾರೂ ಹಿಡ್ಕಂಡ್ ಬನಿ… ಅಂದ್ರೆ ಓದಿ ನಿಮ್ಮ ಅಭಿಪ್ರಾಯ ನಂಗ್ ಹೇಳ್ರೆ ಅದೇ ನೀವ್ ಕೊಡು ಉಡ್ಗ್ರಿ…  🙂

ಮೊನ್ನೆ ಮೊನ್ನೆ ಒಂದ್ ಸುದ್ದಿ ಗೊತ್ತಾಯ್ತ್… ಕುಂದಾಪ್ರ ಕನ್ನಡದಗೆ ಒಂದ್ ಆಲ್ಬಮ್ ಬಂದಿತಂಬ್ರ್.. ಯೆಂತ ಮದಿ ಆಲ್ಬಮ್ಮಾ ಕೇಣ್ಬೇಡಿ… ಮ್ಯುಸಿಕ್ ಆಲ್ಬಮ್ ಮಾರಾಯ್ರೆ…ರವಿ ಬಸ್ರೂರು ಅಂಬರೊಬ್ರ್ ಒಂದಿಷ್ಟ್ ಜನಿನ್ ಒಟ್ಮಾಡಿ ಒಂದ್ ಒಳ್ಳೆ ಕೆಲ್ಸ ಮಾಡಿರ್… ಆಲ್ಬಮ್ಮಿದ್ ಹೆಸ್ರೇ ಗಮ್ಮತಿತ್ತ್… ಪಣ್ಕ್ ಮಕ್ಕಳ್ ಅಂದೇಳಿ…ಆದ್ರದ್ ಒಂದ್ ಸಣ್ಣ್ ಶ್ಯಾಂಪಲ್ ಇಲ್ಲಿತ್ತ್ ಕಾಣಿ…

http://www.youtube.com/watch?v=XBP9LCUdlOc

ಆ ಅಲ್ಬಮ್ ಬಿಡುಗಡೆ ಸೈತ ಆಯ್ತಂಬ್ರ್…ಆ ಸಮಾರಂಭದ ಒಂದ್ ಸಣ್ಣ್ ವೀಡ್ಯೊ ಸೈತ ಇತ್ತ್…

http://www.youtube.com/watch?v=XMzSeUEIuXI&feature=related

ಇದ್ರದ್ದ್ ಸೀಡಿ ಊರ್ಬದಿಯಗೆ ಸಿಕ್ಕತ್ತಿರ್ಕ್.. ಬೆಂಗ್ಳೂರಗೆ ಎಲ್ಲಾರೂ ಸಿಕ್ಕತ್ತಾ ಕಾಣ್ಕ್…ನಿಮ್ಗೆಲ್ಲಾರೂ ಎಲ್ಲ್ ಸಿಕ್ಕತ್ತ್ ಅಂದೇಳಿ ಗೊತ್ತಿದ್ರೆ ನಂಗ್ ಹೇಳಿ ಅಕಾ? ಹನುಮಂತ ನಗರದಗೆ ಕ್ಯಾಸೆಟ್ ಕಾರ್ನರವ್ರದ್ದ್ ಒಂದ್ ಅಂಗ್ಡಿ ಇತ್ತ್.. ನಾನ್ ಯಕ್ಷಗಾನ ಸೀಡಿ ತಕಂಬ್ದೆಲ್ಲ ಅಲ್ಲೇ. ಇನ್ನೊಂದ್ ಸರಿ ಆ ಬದಿಗೆ ಹೋರೆ ಸಿಕತ್ತಾ ಕಾಣ್ಕ್

ಗಣ್ಪತಿ ಪದ್ಯ ಆಯ್ತಲ…. ಇನ್ನ್ ಹಗೂರಕ್ಕೆ ಬಾಲಗೋಪಾಲ, ಸ್ತ್ರೀವೇಷ ಒಡ್ಡೋಲ್ಗ ಶುರು ಮಾಡುಕ್ ಅಡ್ಡಿಲ್ಲ 🙂

ಅಂದ್ಹಾಂಗೆ…..ಬಾಲಗೋಪಾಲ ಸ್ತ್ರೀ ವೇಷ ಅಂದ್ರ್ ಕೂಡ್ಲೆ ನೆನ್ಪಾಯ್ತ್ ಕಾಣಿ… ಯಕ್ಷಗಾನದ ಸುಮಾರ್ ಆಡಿಯೋ ಎಲ್ಲಾ ಕನ್ನಡ ಆಡಿಯೊ.ಕಾಮ್ ಸೈಟಗೆ ಸಿಕ್ಕತ್ತ್… ಪುರ್ಸೊತ್ತಿದ್ರೆ ಕೇಂಡ್ ಕಾಣಿ ಸುಮಾರ್ ಪ್ರಸಂಗ ಇತ್ತ್

http://www.kannadaaudio.com/Songs/Yakshagana/home/

ಇವತ್ತ್ ಇನ್ನೊಂದಿಷ್ಟ್ ಕುಂದಾಪ್ರ ಬದಿ ಶಬ್ದ ಹೆಕ್ಕಿ ಹಿಡ್ಕಂಡ್ ಬಂದಿದೆ.. ಹೆಕ್ಕುಕೆ ಎಲ್ಲ್ ಬಿದ್ದೊಯಿತ್ತಾ ಅಂದೇಳಿ ಕೇಣ್ಬೇಡಿ ಮತ್ತೆ.. ಆಯ್ತ್ ಹುಡ್ಕಿ ಹಿಡ್ಕಂಡ್ ಬಂದಿದೆ.. ಹುಡ್ಕುಕೆ ಎಲ್ಲ್ ಕಳ್ದೋಯಿತ್ ಅಂದೇಳಿ ಕೇಂಡ್ರ್ಯಾ? ಇರ್ಲಿ ಬಿಡಿ… ಚೌಕಿ ಬಿಟ್ಟ್.. ಸೀದಾ ರಂಗಸ್ಥಳಕ್ಕೇ ಬಪ್ಪ ಈಗ…

ಕೈಕೋಚ್= ತೊಂದರೆ, ಇಕ್ಕಟ್ಟು (ಕನ್ನಡ ಸಂಕ್ಷಿಪ್ತ ನಿಘಂಟು)

ಈ ಶಬ್ದದ್ ಅರ್ಥ ತೊಂದರೆ,ಇಕ್ಕಟ್ಟು ಅಂದೇಳಿ ಇತ್ತಾರೂ ಇದನ್ನ್ ತುಂಟತನ-ಕಿತಾಪತಿ-ಕೀಟಲೆ ಅಂತ್ ಹೇಳುಕೆ ಹೆಚ್ಚಾಯಿ ನಮ್ ಬದಿಯಗೆ ಉಪ್ಯೋಗಿಸ್ತ್ರಾಯಿ ಕಾಣತ್

ಬಳಕೆ:

೧. ಆ ಮಾಣಿ ಒಂದ್ ಗಳ್ಗಿ ಸುಮ್ನ್ ಕೂಕಂತಿಲ್ಲ, ಹೋದಲ್ಲ್ ಬಂದಲ್ಲ್ ಸತೇ ಒಂದ್ ಕೈಕೋಚಂದ್ರೆ ಅಷ್ಟಿಷ್ಟಲ್ಲಾ… ಹೇಳಿ ಪೂರೈಸುಕಾಪ್ದಲ್ಲ

೨.ನಿನ್ನ್ ಕೈಕೋಚೆಲ್ಲ ನಿಲ್ಸಿ ಕೊಡ್ತೆ ಕಾಣ್. ದಿನಾ ಹುಣ್ಸಿ ಅಡ್ರಗೆ ಎರ್ಡೆರ್ಡ್ ಬಾರ್ಸ್ರೆ ಮಾತ್ರ ನೀ ಸುಮ್ನಾಯ್ಕಂಬ್ದಾ ಕಾಣತ್

ಚಾಷ್ಟಿ, ಚ್ಯಾಷ್ಟಿ= ತುಂಟತನ, ಕೀಟಲೆ

ಇದು ಚೇಷ್ಟೆ ಅನ್ನುವ ಪದದ ಕುಂದಾಪುರ ರೂಪ

ಇದೂ ಸೈತ ಕೈಕೋಚಿಗೆ ತೀರಾ ಹತ್ರದ್ ಶಬ್ದ. ಹೆಚ್ಚೂಕಡ್ಮಿ ಅದೇ ಅರ್ಥ ಬತ್ತ್

ಬಳಕೆ:

೧. ಶಾಲಿಗ್ ರಜಿ ಸಿಕ್ಕದ್ದೇ ಸೈ.. ಮಕ್ಳೆಲ್ಲಾ ಒಟ್ಟಾರಲ್ದಾ… ಸೈ ಬಿಡಿ.. ಇನ್ನ್ ಅವ್ರ್ ಚಾಷ್ಟಿ ತಡುಕೆಡ್ಯಾ

೨.ಮಗೂ ಸಣ್ದ್ ಅಂದ್ರ್ಯಾ… ಅಬ್ಬಾ ಅದ್ರ್ ಚ್ಯಾಷ್ಟಿಯೇ… ಬಲಾದ್ ಮಕ್ಳನ್ನಾರೂ ಸುಧಾರ್ಸಲಕ್ಕ್.. ಈ ಮಗಿನ ಸುಧಾರ್ಸುಕೆ ಎಡುದಿಲ್ಲ

ದರ್ಶಿನ= ಮೈಮೇಲೆ ದೇವ-ದೈವಗಳ ಆವಾಹನೆಯಾಗುವುದು

ಇದಕ್ಕೆ ಕುಂದಾಪ್ರ ಕನ್ನಡದಗೆ “ಮೈಮೇಲ್ ಬಪ್ಪುದ್” ಅಂತ್ ಸತೇ ಹೇಳ್ತ್ರ್.

( ಏನಾದರೂ ತೊಂದರೆ ತಾಪತ್ರಯಗಳು ಬಂದಾಗ, ಪಾತ್ರಿ ಅಂತ ಕರೆಯಲ್ಪುಡುವ ವ್ಯಕ್ತಿಯ ಮೈಮೇಲೆ ದೇವ-ದೇವತೆಗಳನ್ನು ಆವಾಹಿಸಿ ತಮ್ಮ ತೊಂದರೆ, ಸಂಕಷ್ಟಗಳನ್ನು ದೇವರ ಮುಂದೆ ನಿವೇದಿಸಿಕೊಂಡು ಅದಕ್ಕೆ ಪರಿಹಾರ,ಸಲಹೆಗಳನ್ನು ಪಡೆಯುವ ಒಂದು ವಿಶಿಷ್ಟ ವಿಧಿ-ವಿಧಾನ. ಇಲ್ಲಿ ಯಾವ ದೇವರು ಅಥವಾ ದೈವದ ಆವಾಹನೆ ನಡೆಸಲಾಗುತ್ತದೋ ಆ ದೇವರು-ಯಾ-ದೈವವೇ ಪಾತ್ರಿಯ ಬಾಯಲ್ಲಿ ತನ್ನ ನುಡಿಯನ್ನು ನುಡಿಸುತ್ತದೆ ಅನ್ನುವುದು ನಂಬಿಕೆ.ಇದರ ಸತ್ಯಾಸತ್ಯತೆಗಳ ಬಗ್ಗೆ ನಾನಿಲ್ಲಿ ಚರ್ಚಿಸಲು ಹೋಗುವುದಿಲ್ಲ. ಎಲ್ಲ ಅವರವರ ಭಾವ-ಭಕುತಿಗೆ ಬಿಟ್ಟ ವಿಚಾರ. ಆದರೆ ಈ ಪ್ರಕ್ರಿಯೆಯಲ್ಲಿ ಇರುವ ವೈಶಿಷ್ಟ್ಯವೆಂದರೆ ತುಂಬಾ ಕಷ್ಟದಲ್ಲಿರುವವರಿಗೆ ಹೇಳಿಕೊಳ್ಳಲಾಗದ ದುಃಖ ಇರುವವರಿಗೆ, ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದವರಿಗೆ ತಮ್ಮ ಕಷ್ಟ-ಕೋಟಲೆಗಳನ್ನು ದೇವರ ಮುಂದೆ ನಿವೇದಿಸಿಕೊಂಡು ಮನಸ್ಸುಹಗರಾಗಿಸಿಕೊಂಡು ಸಮಾಧಾನ ಹೊಂದುತ್ತಾರೆ. ಅವರ ಸಮಸ್ಯೆ ಪರಿಹಾರವಾಗುತ್ತದೋ ಇಲ್ಲವೋ ಅನ್ನುವುದನು ಒತ್ತಟ್ಟಿಗಿಟ್ಟು ನೋಡಿದರೂ… ಕುಸಿದು ಹೋದ ಭರವಸೆ ಮರಳಿಸಿ ಒಂದಿಷ್ಟು ಸಮಾಧಾನವು ಅವರಲ್ಲಿ ಹೊಸ ಹುಮ್ಮಸ್ಸು ತುಂಬುತ್ತದನ್ನುವುದಂತೂ ಹದಿನಾರಾಣೆ ನಿಜ!! ನಗರಗಳಲ್ಲಿ ಕೌನ್ಸಿಲಿಂಗ್ ಎಂಬ ದೊಡ್ಡ ದೊಡ್ಡ ಶಬ್ದ ಬಳಸುತ್ತೆವೆ…. ಕೌನ್ಸಿಲಿಂಗಿನ ಎಂತಾ ಸರಳ-ಸುಲಭ ಗ್ರಾಮ್ಯ ರೂಪ ನೋಡಿ ಈ ದರ್ಶಿನ. ನಾವೂ ಮೂಢ ಅಂತ ಲೇವಡಿ ಮಾಡುವ ನಂಬಿಕೆಗಳಲ್ಲೂ ಎಂತಾ ತಿರುಳಿರುತ್ತೆ ನೋಡಿ. ನಾವು ಬರೀ ಸಿಪ್ಪೆಯನ್ನು ನೋಡಿ ಒಣಗಿದೆ ಅಂತ ತೀರ್ಮಾನಕ್ಕೆ ಬಂದು ಬಿಡುತ್ತೇವೆ. ಸಿಪ್ಪಿ ಬಿಡಿಸಿ ನೋಡಿದರೆ ಸಿಹಿಯಾದ ರಸಭರಿತ ತಿರುಳಿರಬಹುದಲ್ಲವೇ? ಇದೆಯೋ ಇಲ್ಲವೋ ಸಿಪ್ಪೆ ಸುಲಿದರೆ ತಾನೆ ಗೊತ್ತಾಗೋದು.. ಇರಲಿ, ನನ್ನ ಪುರಾಣವೇ ಉದ್ದವಾಯ್ತು

ಅಂದ ಹಾಗೆ.. ಈ ಶಬ್ದವನ್ನು ಅತಿಯಾದ ಕೋಪದಿಂದ ತರತರ ನಡುಗುವವರನ್ನು ಲೇವಡಿ ಮಾಡಲು ಸಹಾ ಬಳಸುತ್ತಾರೆ)

ಬಳಕೆ:

೧. ಮಗಿಗೆ ಏಗ್ಳಿಕ್ ಕಂಡ್ರೂ  ಹುಷಾರಿಪ್ಪುದಿಲ್ಲ. ಒಂದ್ ದರ್ಶಿನ ಮಾಡಿಯಾರೂ ಕೇಣ್ಲಕ್ಕಿತ್ತ್

೨.ಸಿಟ್ಟ್ ಬಂದ್ರ್ ಸಾಕ್… ಮೈಮೇಲ್ ದರ್ಶಿನ ಬಂದರ್ ಕಣಗ್ ಆಡ್ತ

ತಾಳ್ಸು= ಬೀಳಿಸು

(ತಾಳಿದವನು ಬಾಳಿಯಾನು ಅಂದೇಳಿ ಒಂದ್ ಗಾದಿ ಮಾತ್ ಇತ್ತಲ್ದಾ. ಅದನ್ನ ಕುಂದಾಪುರ ಕನ್ನಡದ ಅರ್ಥದಗೆ (ತಾಳು=ಬೀಳು) ಕಂಡ್ರೆ -ತಾಳಿದವನು ಹೇಗೆ ಬಾಳಿಯಾನು ಅಂತ ಕೇಣ್ಕಾತ್ತ್ ಕಾಣಿ  J)

ಬಳಕೆ:

೧. ಮಾಯ್ನ್ ಕಣ್ಣ್ ಕೈಗ್ ನೀಕುದಿಲ್ಲ. ಒಂದ್ ಅಡ್ಡ್-ಬಡ್ತಿಗೆ ಸಿಕ್ಕಿರೆ ಒಂದ್ ನಾಲ್ಕ್ ಹಣ್ಣ್ ಒಂದೇ ಪೆಟ್ಟಿಗೆ ತಾಳ್ಸುಕಾತಿತ್ತ್

೨.ಗ್ವಾಯ್ ಹಣ್ಣ್ ತಾಳ್ಸುಕಂದೇಳಿ ಕಲ್ಲ್ ಹೊಡಿಬೇಡಿ ಮಕ್ಳೇ.. ಮಿಜ್ರ್ ಪೂರಾ ಉದ್ರಿ ಹೋತ್ತ್… ಬೇಕಾರೆ ಕೊಕ್ಕಿ ತಂದ್ಕಂದ್ ಕೊಯ್ಕಣಿ

ಬಯಿನ್ ತೇರ್, ಬಯಿಂತೇರ್= ಬೈಗಿನ ತೇರು, ಸಂಜೆ ಹೊತ್ತು ರಥ ಎಳೆಯುವುದು

(ನಮ್ಮೂರ ಕಡೆ ಜಾತ್ರೆಲ್ಲಿ ಸಂಜೆಯ ಹೊತ್ತು ಎರಡನೆ ಬಾರಿ ರಥವನ್ನು ರಥಬೀದಿಯಲ್ಲಿ ಭಕ್ತರು ಎಳೆಯುತ್ತಾರೆ. ಅದಕ್ಕೆ ಬಯಿಂತೇರ್ ಅಂದರೆ ಬೈಗಿನ ಹೊತ್ತಿನ ತೇರು ಅನ್ನುತ್ತಾರೆ)

ಬಳಕೆ:

೧. ಬೆಳಿಗ್ಗೆ ಹಬ್ಬಕ್ ಹೋಪ್ಕಾಯಿಲ್ಲ.. ಮಧ್ಯಾನ್ಮೇಲಾರೂ ಹೋಯಿ ಬಯಿಂತೇರ್ ಆರೂ ಕಂಡ್ಕಂದ್ ಬರ್ಕಮಗಿತ್ತ್

ಹಪ್ಪು ನಾತ = ಸಹಿಸಲಾಗದಂಥ ದುರ್ವಾಸನೆ

ಬಳಕೆ:

೧. ಅವ್ರ್ ಹತ್ರ ಹೋರ್ ಸಾಕ್. ಹಪ್ಪ್ ನಾತ ಹೊಡಿತ್ತ್. ಅಂಗಿ ಪಂಜಿಗೆ ನೀರ್ ತೋರ್ಸಿ ಎಷ್ಟ್ ದಿನ ಆಯ್ತೇನೋ

೨.ಮೀಕಿದ್ರೆ ಮೊದ್ಲೇ ಬಟ್ಟಿ ಎಲ್ಲ ಒಗ್ದ್ ಬಿಡ್. ಹಾಂಗೆ ಬಿಟ್ರೆ ಅಲ್ಲೇ ಚೆಂಡಿ ಆಯಿ ನಾಳಿಗೆ ಹಪ್ಪ್ ನಾತ ಹೊಡಿತ್ತ್

ಬೆಳ್ಗಿನ ಜಾಮ, ಬೆಳಿಂಜಾಮ = ಬೆಳಗಿನ ಜಾವ, ನಸುಕು

(ಜಾವ ಅಂದರೆ ದಿನದ ಎಂಟನೇ ಒಂದು ಭಾಗ. ಒಂದು ಜಾವ ಅಂದರೆ ಸರಿಸುಮಾರು ಮೂರು ಗಂಟೆಗಳ ಕಾಲ)

ಬಳಕೆ:

೧. ನಾಳೆ ದೀಪಾವಳಿ ಅಲ್ದಾ, ಎಲ್ಲ ಬೆಳ್ಗಿನ್ ಜಾಮ ಬೇಗ್ ಎದ್ದ್ ಎಣ್ಣಿ-ನೀರ್ ಹಾಯ್ಕಂಡ್ ಮೀಕ್

೨.ಬೆಳ್ಗಿನ್ ಜಾಮಕ್ಕೆ ಎದ್ಕಂಡ್ ಆ ನಾಯಿ ಒರ್ಲುಕ್ ಶುರು ಮಾಡತ್ತ್. ಒಂದ್ಗಳ್ಗಿ ನಿದ್ರಿ ಮಾಡುಕೂ ಬಿಡುದಿಲ್ಲ

ಜಾಪ್ = ಚಾಪು

(ಇದು ಮೂಲತಃ ಮದ್ದಲೆ ಅಥವಾ ತಬಲ ಬಾರಿಸುವ ಒಂದು ಬಗೆಯ ಗತ್ತನ್ನು ಸೂಚಿಸುವ ಪದ. ಆದರೆ ಆಡುಮಾತಿನಲ್ಲಿ ಹುಸಿ ಜಂಬ, ಬಿಂಕ, ಗತ್ತು, ಒಣ ಪ್ರತಿಷ್ಟೆ ತೋರಿಸುವುದನ್ನು ಸೂಚಿಸಲು ಬಳಸಲಾಗುತ್ತದೆ)

ಬಳಕೆ:

೧. ಹೊಸ ಅಂಗಿ ಹಾಯ್ಕಂಡ್ ಬಂದಿದೆ ಅಂದೇಳಿ ಜಾಪ್ ಮಾಡುದ್ ಕಾಣ್. ಮಾತಡ್ಸರೆ ಸತೇ ಮಾತಾಡುದಿಲ್ಲ

೨.ನಿನ್ನ್ ಜಾಪೆಲ್ಲ ಇದ್ರೆ ಮನ್ಯಗ್ ಇಟ್ಕೋ.. ನನ್ನತ್ರ ಅದೆಲ್ಲ ನೆಡುದಿಲ್ಲ ಅಕಾ

ಬಿಲಾಸ್ ಬಿಡು = ಮನಬಂದಂತೆ ವರ್ತಿಸು , ಯಾರ ಅಂಕೆಗೂ ಸಿಗದಿರು

( ಈ ಶಬ್ದದ ಮೂಲದ ಬಗ್ಗೆ ಸಾಕಷ್ಟು ಹುಡುಕಿದೆ. ಆದರೆ ಖಚಿತವಾದ ಮಾಹಿತಿ ಸಿಗಲಿಲ್ಲ. ಬಿಲಾಸ್ ಅನ್ನುವುದು ವಿಲಾಸ ಅನ್ನುವ ಪದದಿಂದ ಬಂದಿರಬಹುದೇ ಅನ್ನುವುದು ನನ್ನ ಊಹೆ ಮಾತ್ರ. ಯಾರಿಗಾದರೂ ಗೊತ್ತಿದ್ದರೆ ತಿಳಿಸಿ)

ಬಳಕೆ:

೧. ಅವ ಹತ್ತಾ ಬಿಲಾಸ್ ಬಿಟ್ಟ್ ಹೋಯಿದ. ಎಂತಾರು ಹೇಳ್ರೆ ಬರೀ ಉಲ್ಟವೇ

೨. ಯಾರಾರೂ ಈ ನಮನಿ ಬಿಲಾಸ್ ಬಿಟ್ಟ್ ಹೋಪುಕಾಗ.

 


ಬಲ ಮಾಡುದ್ ಬೆಳೆಸಿ ದೊಡ್ಡವರನ್ನಾಗಿ ಮಾಡು

ಬಳಕೆ –

೧.ದೊಡ್ಡಕೆ ಮಾತ್ ಬತ್ತ್ ಅಂದೇಳಿ ಮಾತಾಡ್ಬೆಡ, ಮಾತಾಡುಕೆ ಭಾರಿ ಸುಲ್ಭ, ನಿಮ್ಮನೆಲ್ಲ ಬಲ ಮಾಡ್ಕಿದ್ರೆ ಎಷ್ಟ್ ಕಷ್ಟ್ ಪಟ್ಟಿದೆ ಅಂದೇಳಿ ನಿಂಗೆಂತ ಗೊತಿತ್?

೨.ನಿಮ್ಗ್ ಬೇರೆ ಕೆಲ್ಸ ಇಲ್ಯಾ, ಮಕ್ಳನ್ನೆಲ್ಲ ಸಾಕಿ ಬಲ ಮಾಡುದೇ ಕಷ್ಟ, ಇನ್ನ್ ಶಾಲಿ ಗೀಲಿಗೆಲ್ಲ ಕಳ್ಸುಕೆ ಎಲ್ಲಿಗೆ ಹೋಪ್ದ್?

ಬಲಾದರ್ ಬಲ ಆದವರು ,ದೊಡ್ಡವರು , ಹಿರಿಯರು

ಬಳಕೆ –

1. ಸಣ್ಣರಂದೇಳಿ ಇಲ್ಲ, ಬಲಾದರಂದೇಳಿ ಇಲ್ಲ, ಎದ್ರುತ್ರ ಕೊಡುಕೊಂದ್ ಸಮಾ ಕಲ್ತಿದೆ ಅಲ್ದಾ, ನಿಂಗ್ ಶಾಲ್ಯಗೆ ಮಾಷ್ಟ್ರ್ ಇದ್ನೇ ಹೇಳಿ ಕೊಟ್ಟದ್ದಾ?

೨ ನೀವ್ ನೀವೆ ಜಗ್ಳ ಮಾಡ್ಕಂಡ್ ಹೊಡ್ಕಂಬ್ದಾರೆ, ಹಂಗಾರೆ ಮನ್ಯಗೆ ಬಲಾದರ್ ಅಂದೇಳಿ ಇಪ್ದ್ ಎಂತಕೆ?

ಚಿರ್ಟು(ಚಿರಿಟು)ಮುರುಟಿಕೊಳ್ಳು, ಸುರುಟಿಕೊಳ್ಳು,ಮುದುರು ( ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ –

೧          ಬಿಸ್ಲ್ ರಾಪ್ ಜೋರಿತ್ತ್. ಒಂದ್ ನಾಕ್ ಹನಿ ಮಳಿ ಬಿದ್ದಿರಾರೂ ಆತಿದ್ದಿತ್, ಮೆಣ್ಸಿನ ಗಿಡ್ದಗೆ ಕೋಡ್ ಪೂರಾ ಚಿರ್ಟಿ

ಹೋಯಿತ್ತ್

೨          ಒಂದ್ ನಾಕ್ ಮಾತ್ ಹೆಚ್ಚ್ ಹೇಳ್ರ್ ಸಾಕ್, ಮುಖ ಚಿರ್ಟ್ಸಕಂಡ್ ಕೂಕಂಡಾಯ್ತ್

೩          ಮಾಯ್ನ್‌ಮಿಡಿ ಉಪ್ಪಿಗ್ ಹಾಕದ್ದ್ ಉಪ್ಪಿನ್‌ಕಾಯ್ ಮಾಡ್ವ ಅಂದೇಳಿ ತೆಗ್ದ್ರೆ ಸಮಾ ಚಿರ್ಟಲೇ ಇಲ್ಲಪ್ಪ, ಉಪ್ಪ್ ಹಾಕದ್ದ್

ಸಾಕಾಯ್ಲಿಲ್ಯೋ ಏನೋ

ಉರ್ಡಕಂಬ್ದ್ ಹೊಡೆದಾಡು, ಬಡಿದಾಡು

ಬಳಕೆ –

೧          ಉರ್ಡ್ಕಂಬ್ಕೆ ಹೋಯ್ಬೆಡ ಅಂದ್ರೆ ಕೇಂತಿಲ್ಲ. ನಾವೆಲ್ಲ ಹೇಳ್ರೆ ನಿಂಗ್ ಸಾಕಾತಿಲ್ಲ. ನಾಳೆ ಶಾಲಿಗೆ ಬಂದ್ ನಿಮ್ ಹೆಡ್ಮಾಷ್ಟ್ ಹತ್ರ ಹೇಳ್ತೆ. ಅವ್ರ್ ಬೆನ್ಮೇಲೆ ಎರ್ಡ್ ಬಿಟ್ರೆ ಎಲ್ಲ ತನ್ನಂತ್ಲೇ ಸಮಾ ಆತ್ತ್.

೨          ಸುರು-ಸುರಿಗೆ ಬೈಕಂತ ಇದ್ದಿರ್, ಒಂದ್ಗಳ್ಗಿ ಆಪ್ರೊಳ್ಗೆ ಇಬ್ರೂ ಅಂಗಿ ಕೈ ಮೇಲ್ ಮಾಡ್ಕಂಡ್ ಉರ್ಡಕಂಡದ್ದೇ ಅಲ್ದಾ, ಅಲ್ಲಿದ್ದರೆಲ್ಲ ಒಟ್ಟಾಯಿ ಬಿಡ್ಸರ್. ಅಲ್ದಿರೆ ಇವತ್ತ್ ಕಾಂತ ಕಾಂತ ಒಂದ್ ಕತಿ ಆತಿತ್ತ್

ಲಾಟ್ ಬಿಡು ಸುಳ್ಳು ಹೇಳು, ಬೊಗಳೆ ಬಿಡು

ಬಳಕೆ –

೧          ಅಂವ ಹೇಳ್ತ ಅಂದೇಳಿ ನೀ ಅದನ್ನೆಲ್ಲ ನಂಬುಕ್ ಹೋಯ್ಬೆಡ, ಕೇಂಬರಿದ್ರೆ ಅಂವ ಎಷ್ಟೂ ಲಾಟ್ ಬಿಡ್ತ.

೨          ನಮ್ಗ್ ಗೊತ್ತಿಪ್ಕೋಯಿ ಆಯ್ತ್, ಯಾರಾರೂ ಗೊತ್ತಿಲ್ದಿದ್ದರೆ ಸಿಕ್ರೆ ಇವ ಲಾಟ್ ಬಿಡತ್ತ್ ಕೇಂಡ್ರೆ ಹೌದ್ ಅಂದೇಳಿಯೆ ಅಂದ್ಕಣ್ಕ್

ಲಗ್ತ್ ಆಯಿ ಅನುಕೂಲವಾಗಿ, ಆ ಹೊತ್ತಿಗೆ ಸರಿಯಾಗಿ

ಬಳಕೆ –

೧          ನೀವ್ ಬಂದದ್ದ್ ಲಗ್ತ್ ಆಯ್ತ್ ಕಾಣಿ, ಇನ್ನೇನ್ ದೇವ್ರಿಗ್ ಮಂಗ್ಳಾರ್ತಿ ಶುರು ಆಪುಕಾಯಿತ್

೨          ಈಗ ಎರ್ಡ್ ಹೊಸ ಬಸ್ಸ್ ಬಿಟ್ಟಿರಲ ಭಾರಿ ಒಳ್ಳೆದಾಯ್ತ್, ನಾವ್ ಶಾಲಿಗ್ ಹೊರ್ಡು ಸುರಿಗೆ ಲಗ್ತಾಯಿ ಬತ್ತ್

೩          ಈ ಉರಿ ಬಿಸ್ಲಗೆ ಹೊರ್ಡುದ್ ಬ್ಯಾಡ, ಹೊತ್ತೋಪತ್ತಿಗೆ ಹೊರ್ಟ್ರೆ ಲಗ್ತ್ ಆತ್ತ್, ಕತ್ಲಿ ಆಪುರೊಳ್ಗೆ ಮನಿಗ್ ಹೋಯ್ಲಕ್ಕ್

ವಾರಂತ್ ಸಾಲಾಗಿ, ಅನುಕ್ರಮವಾಗಿ

ಬಳಕೆ –

೧          ಈ ಸರ್ತಿ ಚೌತಿ ಶುಕ್ರವಾರ ಬಂದದ್ದ್ ಭಾರಿ ಲಾಯ್ಕಾಯ್ತ್, ವಾರಂತ್ ಆಯಿ 3 ದಿನ ರಜಿ ಸಿಕ್ಕತ್ತ್

೨          ಈ ಮಳ್ಗಾಲದಗೆ ಮನ್ಯಗೆ ಒಬ್ರಿಗೆ ಜ್ವರ ಬಂದದ್ದೇ ಸೈಯಲ್ಲ, ವಾರಂತಾಯಿ ಒಬ್ಬೊಬ್ರಿಗೇ ಜ್ವರ, ಬಿಡ್ಸದ್ ಹಾಸ್ಗಿ ಮಡ್ಚಲೇ ಇಲ್ಲ

ಎಬ್ಬು ಅಟ್ಟು, ಓಡಿಸು ( ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ –

೧          ಮಧ್ಯಾಹ್ನ ಒಂದ್ ಗಳ್ಗಿ ಮಲ್ಕಂಬ ಅಂದ್ರೆ ಬಿಡ್ತ್ವಾ, ಯಾರ್ಯಾರ ಮನಿ ಗಂಟಿ ಪೂರಾ ಇಲ್ಲೇ ಸಾರ್ತಿ ಆಯಿದೊ, ಎಬ್ಬಿ ಎಬ್ಬಿ ಸಾಕಾಯ್ತ್

೨          ಇನ್ನೊಂದ್ ಸ್ವಲ್ಪ ಹೊತ್ತ್ ಮೇಯ್ಲಿ ಬಿಡ್, ಹೊತ್ತ್ ಹೋಪತಿಗೆ ಹಟ್ಟಿಗೆ ಎಬ್ಕಂಡ್ ಬಂದ್ರ್ ಸಾಕ್

ಹೊಟ್ಟಿ ಹೊರ್ಕಂಬ್ದ್ ಉದರ ಪೋಷಣೆ (ಜೀವನ ನಿರ್ವಹಣೆ ಅನ್ನುವುದು ಸೂಚ್ಯಾರ್ಥ)

ಹೊರೆ = ಕಾಪಾಡು, ಪೊರೆ, ಪೋಷಿಸು, ಸಲಹು ( ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ –

೧          ಏನೋ ಓದದ್ದ್ ದಂಡ ಆಪುಕಾಗ ಅಂದೇಳಿ ಅಂವ ಕೆಲ್ಸಕ್ ಹೋತಾ ಬಿಟ್ರೆ, ಅದ್ರಗೇ ಹೊಟ್ಟಿ ಹೊರ್ಕಣ್ಕ್ ಅಂದೇಳಿ ಇಲ್ಲ. ಮನಿ ಬದ್ಯಗೆ ಬೇಕಾದಷ್ಟ್ ಇತ್ತಂಬ್ರಪ.

೨          ಈಗ ಏನೋ ಒಬ್ನೇ, ಹ್ಯಾಂಗೋ ಹೊಟ್ಟಿ ಹೊರ್ದ್ ಹೊತ್ತ್, ಕೆಲ್ಸ ಮಾಡ್ರೂ ಮಾಡ್ದಿದ್ರೂ ಹ್ಯಾಂಗೋ ನೆಡ್ದ್ ಹೋತ್ತ್. ಕಡಿಗೆ ಮದಿ ಗಿದಿ ಆರ್ಮೇಲಾರೂ ಹೆಂಡ್ತಿ ಮಕ್ಳ್ ಹೊಟ್ಟಿ ಹೊರುಕಾರೂ ಕೆಲ್ಸ ಮಾಡ್ಕೇ ಅಲ್ದಾ?

ಕಣ್ ಕಸ್ತ್ಲಿ(ಕಣ್ ಕತ್ಲಿ) – ಕಣ್ಣು ಕತ್ತಲೆ

ಬಳಕೆ –

೧          ನಿನ್ನೆ ರಾತ್ರಿ ಉಣಲ್ಲ ಹೌದಲ್ದಾ, ಬೆಳಿಗ್ಗೆ ಏಳುವತಿಗೇ ಒಂದ್ನಮನಿ ಸಂಕ್ಟ ಆಯಿ ಕಣ್ಣ್ ಕತ್ಲಿ ಬಂದಂಗಾಯ್ತಪ್ಪ

೨          ಜ್ವರಕ್ಕಂದೇಳಿ ತಕಂಡ್ ಮಾತ್ರಿ ರಾಪ್ ಜೋರಿತ್ತ್, ನುಂಗಿ ಸ್ವಲ್ಪ ಹೊತ್ತಿನಗೆ ಹೊಟ್ಟಿ ಸಂಕ್ಟ ಆಯಿ ಕಣ್ಣ್ ಕಸ್ತ್ಲಿ ಬಂದಾಂಗಾಯ್ತ್

ಹಳಿನ್ ಹಿಂಡ್ಲ್ ಕಾಡುಗಿಡ ಅಥವ ಕುರುಚಲು ಗಿಡಗಳ ದಟ್ಟವಾದ ಪೊದೆ

ಹಳು=ಕಾಡು ಗಿಡ, ಅರಣ್ಯ ( ಸಂಕ್ಷಿಪ್ತ ಕನ್ನಡ ನಿಘಂಟು)

ಹಿಂಡಲು=ಪೊದರು,ಪೊದೆ,ದಟ್ಟವಾಗಿ ಬೆಳೆದ ಗಿಡಗಳ ಗುಂಪು ( ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ –

೧          ಮಕ್ಳೆ , ಕತ್ಲಿ ಆರ್ ಮೇಲೆ ಆ ಹಳಿನ್ ಹಿಂಡ್ಲ್ ಹತ್ರ ಹೋಯ್ಬೇಡಿ, ಮೊನ್ನೆ ಒಂದ್ ಹಾವ್ ತಿರ್ಗತಿದ್ದಿತ್ತ್

೨          ಈ ಹಳು ಒಂದ್ ಸವ್ರಿ ಕೊಡುಕ್ ಯಾರಾರೂ ಸಿಕ್ಕಿರ್ ಆತಿತ್ತ್, ಹಳಿನ್ ಹಿಂಡ್ಲಗೆ ಹುಲಿ ಬಂದ್ ಕೂಕಂಡ್ರೂ ಗೊತ್ತಾತಿಲ್ಲ.

ದರ್ಲಿತರಗೆಲೆ

ಬಳಕೆ –

೧          ಇದ್ಯಾವ್ ನಮನಿ ಗಾಳಿಯಪ್ಪ, ಬೆಳಿಗ್ಗೆಯಷ್ಟೇ ದರ್ಲಿ ಗುಡ್ಸದ್ದ್, ಈಗ ಇನ್ನೊಂದ್ಸಲಿ ಗುಡ್ಸ್‌ಕಾಯ್ತ್

ಬಡ್ಗಿ ಏಟು, ಪೆಟ್ಟು, ಹೊಡೆತ

ಈ ಪದ ಬಹುಶಃ ಬಡಿಗೆ (ಕೋಲು, ದೊಣ್ಣೆ) ಪದದಿಂದ ಬಂದಿರಬೇಕೆಂಬುದು ನನ್ನ ಅನಿಸಿಕೆ

ಬಳಕೆ –

೧          ಸುಮ್ನ್ ಕೂಕಂತ್ಯಾ ಇಲ್ಲ ಬಡ್ಗಿ ಬೇಕಾ ಹೇಳ್

೨          ಮನಿಗ್ ಬಾ ಇವತ್ತ್, ಅಪ್ಪಯ್ಯನಿಗೆ ಹೇಳಿ ಸಮಾ ಎರ್ಡ್ ಬಡ್ಗಿ ಬಿದ್ರೆ ನಿಂಗ್ ಬುದ್ಧಿ ಬಪ್ದ್

ಗೊಬ್ರ್ ಹೆಡ್ಗಿ ಈ ಶಬ್ದದ ಅರ್ಥ ಗೊಬ್ಬರ ಹೊರಲು ಬಳಸುವ ಬುಟ್ಟಿ ಅಂತಿದ್ದರೂ ಕೂಡ ಇದನ್ನು ತುಂಬಾ, ಜಾಸ್ತಿ ಅನ್ನುವ ಅರ್ಥದಲ್ಲಿ ಬಳಸಲಾಗುತ್ತದೆ

ಬಳಕೆ –

೧          ನನ್ ಕೈಲ್ ಮಾಡಿ ಪೂರೈಸುಕೆ ಎಡಿಯ. ಒಂದ್ ಗೊಬ್ರ್ ಹೆಡ್ಗಿ ಕೆಲ್ಸ ಇತ್ತ್.

೨          ಆಡುಕ್ ಹೋರ್ ಅಡ್ಡಿಲ್ಲ, ಮೈ ಮಂಡಿ ಕಂಡ್ರ್ ಸಾಕಲೆ, ಒಂದ್ ಗೊಬ್ರ್ ಹೆಡ್ಗಿ ಮಣ್ಣ್ ಇತ್ತ್, ಎಂತ ಮಣ್ಣಗೇ ಬಿದ್ದ್ ಹೊಡ್ಕದ್ದಾ?

ವದ್ಕಂಬ್ದ್(ಒದ್ಕಂಬ್ದ್) – ಶ್ರಮಿಸು, ಒದ್ದಾಟ ನಡೆಸು, ಪರಿಶ್ರಮ ಪಡು

ಬಳಕೆ –

೧          ಬೆಳ್ಗಿಂದ ಸಾಂಯ್ಕಾಲದವರಿಗೂ ಒದ್ಕಂಡ್ರೂ ಸಾಕಾತಿಲ್ಲ, ನಂಗಂತೂ ಮಾಡಿ ಮಾಡಿ ಸಾಕಾಯ್ತ್

೨          ನಾನೊಬ್ನೆ ಎಷ್ಟ್ ಅಂದೇಳಿ ಒದ್ಕಂಬ್ದ್, ಮನಿ ಅಂದ್ರ್ ನಂಗೊಬ್ನಿಗೆಯಾ, ನೀನೂ ಮನಿಯನೇ ಅಲ್ದಾ?


ಪುರ್ಸೊತ್ತಿದ್ದಾಗ್ಳಿಕೆ ಬರುಕ್ ಉದಾಶಿನ, ಬರುಕ್ ಉಮೇದ್ ಬಂದಾಗ್ಳಿಕೆ ಪುರ್ಸೋತ್ತಿಲ್ಲ ಹಾಂಗಿನ್ ಕತಿ ಆಯ್ತ್ ಕಾಣಿ

ಆರೂ ಈ ಸರ್ತಿ ಬರೀದೆ ಬಾಳ ಸಮಿ ಆಯ್ತ್. ಇನ್ ಬರಿದಿದ್ರೆ ಆಪ್ದಲ್ಲ ಅಂದೇಳಿ ನಿನ್ನೆ ಬರುಕ್ ಕೂಕಂಡೆ… ಒಂದ್ ಅರ್ಧ ದಿನದ ಮೇಲ್ ಆಯ್ತ್ ಇದನ್ನೆಲ್ಲಾ ಬರ್ದ್ ಮುಗ್ಸುವತ್ತಿಗೆ.

ಬರ್ದ್ ಮುಗ್ಸ್ರ್ ಮೇಲೆ ನಂಗಂತೂ ಖುಷಿ ಆಯ್ತ್, ನಿಮ್ಗೂ ಅದ್ರಗೆ ಅರ್ಧ ಪಾಲ್ ಖುಷಿ ಸಿಕ್ರೆ..ನಾ ಬರದ್ದಕ್ಕೂ ಒಂದ್ ಲೆಕ್ಕ, ಎಂತ ಅಂತ್ರಿ?

ಇನ್ನೊಂದಿಷ್ಟ್ ಕುಂದಾಪ್ರ ಕನ್ನಡ ಶಬ್ದ ಕಾಂಬ ಬನಿ ಹಂಗಾರೆ

ಹೊಡ್ಕುದ್ =ಹೊರಳಾಡುವುದು

ಬಳಕೆ:

೧.         ಎಂತ ನಿದ್ರಿ ಬತ್ತಿಲ್ಯನಾ, ಆಗ್ಳಿಂದ ಪುರ್ಸೊತ್ತಿಲ್ದೆ ಹೊಡ್ಕತಾ ಇದ್ದೆ

೨.         ಅಂವ ಒಂದ್ ಹೊಡ್ಕುದಂದ್ರೆ ಮರಾಯ, ರಾತ್ರಿ ಬೆಳ್ಗಾಪ್ರೊಳ್ಗೆ ತಲ್ದಿಸಿಲ್ ಕಾಲ್ ಇರತ್ತ್, ಕಾಲ್ ಬುಡ್ದಗೆ ತಲಿ ಇರತ್ತ್

ಕೊಡ್ಕುದ್ = ಕೊಡಹು, ಜಾಡಿಸು

ಬಳಕೆ:

೧.         ಆ ಅಂಗಿ ಮುಲ್ಲಿಯಗೆ ಹಾಕಿದ್ಯಲ, ಸಮಾ ಕೊಡ್ಕಿ ಹಾಯ್ಕೊ, ಚೇಳ್ ಗೀಳ್ ಇದ್ದಿಪ್ಕೂ ಸಾಕ್

೨.         ಈ ಪೆನ್ ಹಿಡ್ಕಂಡ್ ಬರುಕ್ ಕೂಕಂಡದ್ದೇ ಬಂತ್, ಸಮ ಹಿಡಿತಿಲ್ಲೆ ಮಣ್ಣಿಲ್ಲೆ. ಕೊಡ್ಕಿ ಕೊಡ್ಕಿ ಕಯೆಲ್ಲ ನೋವ್ ಸುರುವಾಯ್ತ್

ಬೆಳ್ಚುದ್ = ಸವರುವುದು, ತಡವು, ತಡಕಾಡು

ಬಳಚು= ಸವರು, ತಡವು (ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ:

೧.         ಈ ಸುಟ್ಟ್ ಕರೆಂಟ್ ಇನ್ನ್ ಬಪ್ದ್ ಎಷ್ಟೊತ್ತಿಗೋ. ಆಗ್ಳೇ ಬೆಂಕಿ ಪೆಟ್ಗಿ ತಕಂಡ್ಬಾ ಅಂದ್ರ್ ಕೇಂಡ್ಯಾ? ಇನ್ನೀಗ ಬೆಳ್ಚ್‌ಕಂಡೇ ಅಡ್ಗಿ ಮನಿ ಒರಿಗ್ ಹೋಯ್ಕಲ

೨.         ಅಲ್ಲೆಂತ ಬೆಳ್ಚ್‌ತಿದ್ಯಾ ಈ ಕತ್ಲಿಯಗೆ, ಬೆಳ್ಗಾರ್ ಮೇಲ್ ಹುಡ್ಕಿ ಕಂಡ್ರ್ ಸಾಲ್ದಾ?

ಬರ್ಟುದ್ = ಪರಚು, ಉಗುರಿನಿಂದ ಗೀರು, ಗಿಬರು

ಬಳಕೆ:

೧.         ಮಗಿನ್ ಕಯ್ಯುಗ್ರ್ ತೆಗಿ ಅಂದೇಳಿ ಸಾವ್ರ್ ಸತಿ ಹೇಳ್ದೆ, ಇಲ್ಕಾಣ್ ಈಗ ಅದ್ ಬರ್ಟದ್, ಅದಕ್ಕೆಂತ ಗೊತ್ತಾತ್, ಸಣ್ಣದಲ್ದಾ, ಹಾಂಗಾರೆ ನಿಂಗೂ ಬಾಷಿ ಬ್ಯಾಡ್ದಾ?

೨.         ಎಂತದೋ ಕಚ್ದಾಂಗ್ ಆಯ್ತ್, ಒಂಚೂರ್ ತೊರ್ಸ್ಕಂಡದ್ದೇ ಸೈ, ಮೈ ಪೂರಾ ಬರ್ಟ್ಕಂಡಾಂಗೆ ತುಪ್ರ್ ತುಪ್ರ್ ಆಯ್ತ್ ಕಾಣ್

ಚೊರ್ಚುದ್ =ತಳದಲ್ಲಿ ಇರುವುದನ್ನು ಸಹಬ್ದವಾಗಿ ತೆಗೆಯು

ಬಳಕೆ:

೧.         ನಿಂಗ್ಯಾವ್ ನಮ್ನಿ ಉದಾಶಿನ ಮರಯ. ಹರಿಯಗೆ ನೀರ್ ಇಲ್ಲ, ಒಂದ್ ನಾಕ್ ಕೊಡ್ಪಾನ ನೀರ್ ಹಾಕ್ ಅಂದ್ರೆ, ಅದ್ರಗೆ ಚೊರ್ಚ್ಕಂಡ್ ಮಿಂದ್ಕಂಡ್ ಬಂದ್ಯಾ? ಚೊರ್ಚಿ ಚೊರ್ಚಿ ಹರಿ ಒಟ್ಟಿ ಬೀಳತ್ ಕಾಣ್

ಗೆರ್ಚು = ಗೀರು ಬೀಳುವಂತೆ ಎಳೆ, ಗೀರು ಮಾಡು, ಗೆರೆ ಬೀಳುವಂತೆ ಮಾಡು

ಬಳಕೆ:

೧.         ಕುರ್ಚಿ ಎತ್ತಿಡುಕಾಗ್ದಾ ಹಂಗಾರೆ, ಆ ನಮನಿ ಗೆರ್ಚರೆ ನೆಲ ಎಂತಕಾತ್ತ್

ಒರ್ಲುದ್ = ಅರಚು, ಕಿರುಚು, ಗಟ್ಟಿಯಾಗು ಕೂಗು, ಬೊಬ್ಬೆ ಹೊಡೆ

ಬಳಕೆ:

೧.         ಹಗೂರಕ್ಕೆ ಎರ್ಡ್ ಹೊಡದ್ದೇ ಸೈ, ಏನ್ ಒರ್ಲತಾ, ಊರಿಡೀ ಕೇಂಬ್ಕ್ ಸಾಕ್

೨.         ನಿನ್ ಗೆಂಡಿ ಗಟ್ಟಿ ಇತ್ತಂದೇಳಿ ಒರ್ಲುದ್ ಬ್ಯಾಡ, ನಿಧಾನ ಮಾತಾಡ್, ಇಲ್ಯಾರೂ ಕ್ಯೆಪ್ರ್ ಇಲ್ಲ

ಮರ್ಕುದ್-ಹರ್ಕುದ್ = ಅಳುವುದು

(ಇಲ್ಲ್ ಹರ್ಕುದ್ ಅಥ್ವಾ ಹರಕುವುದು ಅಂದ್ರೆ ವಿಶೇಷ ಅರ್ಥ ಎಂತ ಇಲ್ಲ. ಅದೊಂಥರ ಜೋಡಿ ಶಬ್ದ. ಆರೂ ಶಬ್ದ ಕೋಶದಗೆ ಹರಗು, ಹರಕಲಿಸು ಅಂದ್ರೆ ಹರಡುವಂತೆ ಮಾಡು ಅಂದೇಳಿ ಅರ್ಥ ಇತ್ತ್. ಮರ್ಕುದ್ರ ಒಟ್ಟಿಗೆ ದುಃಖ ಎಲ್ಲರಿಗೂ ಹರ್ಡುವಾಂಗೆ ಮಾಡುದ್ ಅಂದೇಳಿ ಇಪ್ಪುಕು ಸಾಕ್ ಅಂದೇಳಿ ನನ್ ಅನ್ಮಾನ ಮಾತ್ರ)

ಬಳಕೆ:

೧.         ನೀ ಎಷ್ಟ್ ಮರ್ಕಿ ಹರ್ಕ್ರೂ ಅಷ್ಟೇ, ನಿನ್ನ ನಾ ಇವತ್ತ್ ಕರ್ಕಂಡ್ ಹೋತಿಲ್ಲೆ

೨.         ಈಗ ಯಾರ್ ಎಂತ ಹೇಳ್ರ್ ಅಂದೇಳಿ ಬೆಳ್ಗಾಮುಂಚೆ ಎದ್ಕಂಡ್ ಮರ್ಕಿ ಹರ್ಕುದ್?

ಹರ್ಪುದ್ = ಪರಚು, ಉಗುರಿನಿಂದ ಗೀರು, ಗಿಬರು

ಬಳಕೆ:

೧.         ಆ ಮಗಿನೊಂಚೂರ್ ಕಾಂತಾ ಆಯ್ಕೋ , ನಾ ಮಿಂದ್ಕಂಡ್ ಬತ್ತೆ. ಬೆಕ್ಕ್ ಗಿಕ್ಕ್ ಹತ್ರ ಎಲ್ಲಾರೂ ಹೋಯಿ ಅದ್ ಹರ್ಪುಕಿತ್ತ್

೨.         ಸರ್, ಅವ ನನ್ನ್ ಪೆನ್ಸಿಲ್ ಕೇಂಡಾ, ನಾ ಕೊಡುಕ್ ಎಡಿಯ ಅಂದೆ, ಅದಕ್ಕೇ ಅಂವ ಹರ್ಪದ್ ಕಾಣಿ

ಬೆರ್ಸುದ್ = ಬೆದರಿಸಿ ಓಡಿಸು, ಓಡಿಸುವುದು, ಬೆನ್ನಟ್ಟಿ ಓಡಿಸುವುದು

(ಈ ಶಬ್ದ ಬೌಶ ಬೆರ್ಚು, ಅಥವ ಬೆರ್ಚಿಸು ಶಬ್ದದಿಂದ ಬಂದಿರ್ಕ್. ಬೆರ್ಚಿಸು ಅಂದ್ರೆ ಬೆಚ್ಚಿಸು, ಹೆದರಿಸು, ಭಯಪಡಿಸು ಅಂದೇಳಿ ಅರ್ಥ ಬತ್ತ್. ಬೆರ್ಚಪ್ಪ (ಬೆದರುಬೊಂಬೆ) ನೆನ್ಪ್ ಮಾಡ್ಕಣಿ)

ಬಳಕೆ:

೧.         ಅವ್ರ್ ಮನಿ ಬುಡ್ಕೆ ಯಾರೂ ಹೋಪುಕೆಡಿಯ. ಹತ್ರ ಹೋರ್ ಸಾಕ್ ಒಂದ್ ಹಿಂಡ್ ನಾಯ್ ಬೆರ್ಸ್ಕಂಡ್ ಬತ್ತೊ

೨.         ಸ್ವಲ್ಪ ನಿಧಾನ ನೆಡಿನಿಯೇ, ಆ ನಮನಿ ಓಡೋಡ್ಕಂಡ್ ಹೋಪ್ಕೆ ಇಲ್ಲ್ಯಾರ್ ಬೆರ್ಸ್ಕಂಡ್ ಬತ್ರಾ?

೩.         ಬಲ್ಗ ತೆಗ್ದ್ ಹಾಕಿ ಬಂದಿದ್ಯಾ ಕಾಂತ್, ಆಚಿ ಮನಿ ಗಂಟಿ ಪೂರಾ ಒಳ್ಗ್ ಬಂದ್ ಹೂವಿನ್‌ಗುತ್ತಿಯೆಲ್ಲ ಚೊಕ್ಕವಾ ಅಂದೇಳಿ. ಬೇಗ್ ಹೋಯಿ ಒಂಚೂರ್ ಬೆರ್ಸಿ ಬಾ

ಒರ್ಸಿ-ಗುಡ್ಸುದ್ =ಒರೆಸುವುದು-ಗುಡಿಸುವುದು

ಬಳಕೆ:

೧.         ಹೊತ್ತ್ ಮಧ್ಯಾನ್ನಾತಾ ಬಂತ್, ಇನ್ನೂ ಒರ್ಸಿ ಗುಡ್ಸಿಯೇ ಆಯಿಲ್ಲ

೨.         ಇಷ್ಟ್ ದೊಡ್ಡ ಮನಿ ಬ್ಯಾಡ ಅಂದೆ, ನೀವ್ ಕೇಂಡ್ರ್ಯಾ, ಈಗ ಇಡೀ ಮನಿ ಒರ್ಸಿ ಗುಡ್ಸುರೊಳ್ಗೆ ನನ್ ಬೆನ್ಕೋಲ್ ಮುರ್ದೇ ಹೊತ್ತ್ ಕಾಣಿ

ಗುರ್ಟುದ್ = ಸಾವಕಾಶವಾಗಿ ಮಾಡು, ನಿಧಾನವಾಗಿ ಮಾಡು

ಬಳಕೆ:

೧.         ಒಂದ್ ಪಾತ್ರ ತೊಳಿ ಅಂದೇಳಿ ಎಷ್ಟೊತ್ತ್ ಆಯ್ತ್, ಆಗ್ಳಿಂದ ಗುರ್ಟತಾ ಇದ್ಯಪ, ಹೀಂಗಾರೆ ಹ್ಯಾಂಗೆ?

೨.         ಒಂದ್ ಪುಟ ಕೋಪಿ ಬರುಕ್ ಎಷ್ಟೊತ್ತಾ, ಹೀಂಗೆ ಗುರ್ಟತಾ ಆಯ್ಕಂಡ್ರೆ ಇವತ್ತಿಡೀ ಅದೇ ಆತ್ತ್

ಬಳ್ಸುದ್ = ಬಡಿಸುವುದು

ಬಳಕೆ:

೧.         ನೀವೆಲ್ಲ ಊಟಕ್ಕ್ ಕೂಕಣಿ, ನಾ ಕಡೀಕ್ ಕೂಕಂತೆ, ನಾನೂ ಕೂಕಂಡ್ರೆ ಬಳ್ಸುಕ್ ಯಾರ್ ಇಲ್ಲೆ

೨.         ಮೊನ್ನೆ ಹಬ್ಬದಗೆ ಎರ್ಡ್ ಪಂಗ್ತಿ ಬಳ್ಸುಕ್ ಹೋಯ್ದೆ.. ಆವತ್ ಶುರುವಾದ್ ಬೆನ್ನೋವ್ ಇನ್ನೂ ಕಡ್ಮಿ ಆಯಲ್ಲ

೩.         ಈಗ ಬಳ್ಸುದೆಲ್ಲ ಕೈದ್, ಅದೆಂತದೋ ಬಫೆ ಅಂಬ್ರ್, ಎಂಜ್ಲ್ ಕೈಯ್ಯಗೆ ಹೋಯಿ ಬೇಕಾದ್ ಹಾಯ್ಕಂಡ್ ತಿಂಬ್ದ್ ಎಂತಾ ಲಾಯ್ಕೋ ಏನಪ

ಮಲ್ಸುದ್ = ಮಲಗಿಸುವುದು

ಬಳಕೆ:

೧.         ಮಕ್ಳೇ ಹಂಗಾರೆ ಒಂದ್ ಗಳ್ಗಿ ಸುಮ್ನ್ ಕೂಕಂಬ್ಕಾಗ್ದಾ, ಏನ್ ಗಲಾಟಿ ಮಾಡ್ತ್ರಿ ಹಂಗಾರೆ, ಮಗಿನ್ ಈಗಷ್ಟೇ ಮಲ್ಸಿ ಬಂದಿದೆ, ಮತ್ತ್ ಎದ್ಕಂಡ್ ಮರ್ಕತ್ತ್ ಕಾಣಿ, ನೀವೆ ಹೋಯಿ ತೊಟ್ಲ್ ತೂಗಿ

ಕರ್ಟುದ್, ಕರ್ಟಿ ಹೋದ್ದ್= ಸೀದು ಹೋಗು, ಸೀದು ಹೋದಂತಹ,

ಬಳಕೆ:

೧.         ಬೆಂಕಿ ಒಂಚೂರ್ ಸಣ್ಣ ಮಾಡ್ಕೋ, ಇಲ್ದಿರ್ ಪೂರಾ ಅಡಿ ಹಿಡ್ದ್, ಕರ್ಟಿ ಹೋತ್ತ್

೨.         ಒಲಿ ಮೇಲ್ ಎಂತ ಇಟ್ಟಿದೆ, ಕರ್ಟಿ ಹೋಯ್ತಾ ಕಾಂತ್, ಹೊಗಿ ವಾಸ್ನಿ ಬತ್ತಾ ಇತ್ತ್

೩.         ಒಂದ್ ಗನಾ ಮಳಿ ಬಂದಿರೂ ಆತಿತ್ತ್, ನೀರಿಲ್ದೆ ಹೂವಿನ್ ಗಿಡಾ ಪೂರಾ ಕರ್ಟಿ ಹೋತ್ತ್ ಕಾಂಬ್ಕಾತಿಲ್ಲ

ನರ್ಕುದ್ = ನರಳುವುದು

ನರಕು – ನರಳು, ಮುಲುಕು (ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ:

೧.         ಪಾಪ ಅವ್ನ್ ಅವಸ್ಥಿ ಕಾಂಬ್ಕೆಡಿಯ, ಮಲ್ಕಂಡಲ್ಲೇ ಸೈ. ರಾತ್ರಿಡೀ ನರ್ಕತಾ ಇರ್ತ

೨.         ಅಂವಂದೆಲ್ಲ ಬರೀ ನಾಟ್ಕ. ಹಗೂರ ಮೈ ಮುಟ್ದಾಂಗ್ ಮಾಡದ್ದ್ ಅಷ್ಟೇ, ಭಾರಿ ನೋವಾದರ್ ಕಣಗೆ ನರ್ಕತಾ ಇದ್ದ ಕಾಣ್

ಮಿಡ್ಕುದ್ = ಒಯ್ಯಾರ ತೋರು, ಬಿನ್ನಾಣ ತೋರು, ಬೆಡಗು ತೋರು, ಸೇಳೆ ಮಾಡು

(ಕುಂದಾಪ್ರ ಕನ್ನಡದಗೆ ಮಿಡ್ಕುದ್ ಅಂತ ಶಬ್ದ ಇತ್ತಾದ್ರೂ ಶಬ್ದಕೋಶದಗೆ ಮಿಡುಕು ಶಬ್ದಕ್ಕೆ ಅರ್ಥ ಬೇರೆಯೇ ಇತ್ತ್, ಅದ್ರಗೆ ಸುಮಾರಿಕೆ ಹತ್ರದ್ ಅರ್ಥ ಅಂದ್ರೆ ಚಂಚಲಗೊಳಿಸು. ಆರೆ ನಂಗ್ ಅನ್ಸತ್ತ್ , ಬೌಶ ಈ ಶಬ್ದ ಮಿಟುಕಲಾಡಿ ಶಬ್ದದಿಂದ ಬಂದಿರ್ಕ್. ಮಿಟುಕಲಾಡಿ ಅಂದ್ರೆ ಒಯ್ಯಾರಿ, ಸೋಗಲಾಡಿ ಅಂದೇಳಿ ಅರ್ಥ ಇತ್ತ್)

ಬಳಕೆ:

೧.         ಮೊನ್ನೆ ಹೊಸ ಸರ ಮಾಡ್ಸಿದ್ಲಂಬ್ರ್, ಅದನ್ನ್ ಹಾಯ್ಕಂಡ್ ಅವ್ಳೊಂದ್ ಮಿಡ್ಕುದ್ ಕಂಡ್ರೆ…ಅಯ್ಯಬ್ಬ

೨.         ಅವ್ಳಿಗೆ ನಾ ಮಸ್ತ್ ಕಲ್ತಿದೆ ಅಂದೇಳಿ ಒಂದ್ನಮನಿ ಹುಣ್ಸಿಹಣ್ಣ್, ಇತ್ತಿತ್ಲಾಯಿ ಅವ್ಳ್ ಮಿಡ್ಕಣಿ ಕಾಂಬ್ಕೇ ಎರ್ಡ್ ಕಣ್ಣ್ ಸಾಕಾತಿಲ್ಲ

ಹಿಜ್ಕುದ್ = ಹಿದುಕು, ಚಿದುಕು, ಹಿಸುಕು, ಅಮುಕು, ಹಿಚುಕು

ಹಿಚುಕು – ಅದುಮು, ಹಿಸುಕು, ಅಮುಕು (ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ:

೧.         ಬಟ್ಲಿಗ್ ಅನ್ನ ಹಾಕಿ ಎಷ್ಟೊತ್ತಾಯ್ತ್, ಎಂತಾ ಹಿಜಕ್ತಾ ಕೂಕಂಡಿದೆ, ಬೇಗ್ ಉಂಡ್ ಏಳುಕಾಗ್ದಾ?

೨.         ಹುಣ್ಸಿ ಹಣ್ ನೀರಗೆ ನೆನ್ಸಿ ಇಟ್ಟಿದೆ, ಕಡಿಗೆ ಒಂಚೂರ್ ಹಿಜ್ಕಿ ಹುಳಿಗ್ ಹಾಕ್ ಅಕಾ

೩.         ಅವ್ರಿಗೆ ವರ್ಷ ಆಯ್ತಲ್ದಾ, ಅನ್ನ ಗಟ್ಟಿ ಆರೆ ಜೀರ್ಣ ಆತಿಲ್ಲೆ, ಅದ್ಕೆ ಸಮಾ ಹಿಜ್ಕಿ ನುರ್ದ್ ಒಂಚೂರ್ ಹಾಲ್ ಹಾಕಿ ಕೊಡ್ಕ್

ಸೀಂಬುದ್ = ಚೀಪುವುದು

ಸೀಪು – ಚೀಪು ,ಹೀರು, ಸವಿ, ಸಿಹಿ (ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ:

೧.         ಶಾಲಿ ಬಿಡುದೇ ತಡ, ಐಸ್ಕ್ಯಾಂಡಿ ಗಾಡಿ ಬುಡ್ದಲ್ಲ ಬಂದ್ ಬೆಲ್ಲದ ಕ್ಯಾಂಡಿ ಸೀಂಬತಾ ನಿಂತ್ಕಂಡ

೨.         ಅದೆಂತಕೆ ಮಾಯ್ನಣ್ಣ್ ಗೊರ್ಟ್ ಸೀಂಬತಾ ನಿಂತ್ಕಂಡೆ, ಬಿಸಾಡಿ ಕೈ ತೊಳ್ಕ ಬಾ

ಹೋಪ್ದ್-ಬಪ್ದ್ =ಹೋಗುವುದು ಬರುವುದು

ಹೋಯ್‌ಬಪ್ದ್=ಹೋಗಿ ಬರುವುದು

ಹೋಪ್‌ಬಪ್ಪಲ್ಲಿಗೆ = ಹೋಗಿ ಬರುವಲ್ಲಿಗೆ

ಬಳಕೆ:

೧.         ಪೈಕಿಯರ್ ಮನಿ ಮದಿ ಅಲ್ದಾ, ಒಂದ್ ಗಳ್ಗಿಯಾರೂ ಹೋಯ್ ಬರ್ಕ್

೨.         ನಾವ್ ಅವ್ರ್ ಮನಿಗೆ ಹೋಪ್ದ್ ಬಪ್ದ್ ಇಟ್ಕಂಡ್ರ್ ಮಾತ್ರ ಅಲ್ದಾ ಅವ್ರೂ ನಮ್ಮನಿಗೆ ಬಪ್ಪುದ್

೩.         ಅದೆಂತಕೆ ಆ ಅಂಗಿ ಚಡ್ಡಿ ಹಾಯ್ಕಂಡಿದೆ, ಅದ್ ಹಾಳಾರೆ ಹೋಪ್ ಬಪ್ಪಲ್ಲಿಗೆ ಎಂತ ಹಾಯ್ಕಂಡ್ ಹೋತೆ

ಜಪ್ಪುದ್ = ಹೊಡೆಯುವುದು, ಬಡಿಯುವುದು, ಚಚ್ಚುವುದು

ಬಳಕೆ:

೧.         ಅದೆಂತಕೆ ಮಗಿಗೆ ಆ ನಮನಿ ಜಪ್ತಿದ್ರಿ, ನಿಮ್ಗ್ ಸಿಟ್ಟ್ ಬಂದ್ರೆ ಅದನ್ನ್ ಸಣ್ಣ್ ಮಗಿನ್ ಮೇಲೆ ತೋರ್ಸುದಾ?

೨.         ಆ ನಮನಿ ಜಪ್ಪಿ ಒಗ್ದ್ರೆ, ಬಟ್ಟಿ ಎಂತಕಾತ್ತ್

೩.         ನೀ ನನ್ ಸುದ್ದಿಗ್ ಬಂದ್ರೆ ಸಮಾ ಎರ್ಡ್ ಜಪ್ತೆ ಕಾಣ್

ಚಾಳ್ಸುದ್= ಹೀಯಾಳಿಸುವುದು, ಗೇಲಿ ಮಾಡುವುದು, ಲೇವಡಿ ಮಾಡುವುದು

ಚಾಳಿಸು – ಹೀಯಾಳಿಸು, ತಿರಸ್ಕರಿಸು (ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ:

೧.         ನಾ ಶಾಲಿಗ್ ಹೋತಿಲ್ಲ, ನನ್ನ್ ಬಾಯ್ ಕೊಜ್ಲ್ ಅಂದೇಳಿ ಎಲ್ಲಾ ಚಾಳ್ಸ್ತ್ರ್

೨.         ನನ್ನ್ ಕಣ್ಣ್ ಒಡ್ಡ್ ಅಂದೇಳಿ ಚಾಳ್ಸ್ತಿಯಲ, ನಿನ್ನ್ ಬಾಯ್ ಕಂಡ್ರ್ ಸಾಲ್ದಾ.. ಹೆರ್ಮಣಿ

ನೇಲ್ಸುದ್ = ಜೋತಾಡಿಸು, ತೂಗುಹಾಕು, ನೇತಾಡಿಸು,ಜೋತು ಬೀಳು

ನೇಲು(ೞು)- ನೇತು ಹಾಕು,ತೂಗುಹಾಕು,ತೂಗುಬೀಳು,ಜೋತುಬೀಳು (ಸಂಕ್ಷಿಪ್ತ ಕನ್ನಡ ನಿಘಂಟು)

೧.         ಮಳ್ಗಾಲ ಶುರುವಾರ್ ಸಾಕ್, ಬಟ್ಟಿ ಒಣ್ಸುದೆ ಒಂದ್ ದೊಡ್ಡ್ ರಾಮಾಯ್ಣ. ಮನ್ಯಗೆ ಎಲ್ಲ್ ಕಂಡ್ರೂ ವಸ್ತ್ರ ನೇಲ್ತಾ ಇರತ್ತ್

೨.         ಸಿದ್ದಾಪ್ರ ಸಂತಿ ದಿನ ಬಸ್ಸ್ ಹತ್ತುಕೆಡ್ವಾ? ಯಾವ್ ಬಸ್ಸ್ ಕಂಡ್ರೂ ಬಾಗ್ಲಗೆ ಹತ್ತಿಪ್ಪತ್ ಜನ ನೇಲ್ತಾ ಇರ್ತ್ರ್

೩.         ನಿಂಗ್ ಒಂದ್ಸಾರಿ ಹೇಳ್ರ್ ಅರ್ಥ ಆತಿಲ್ಯಾ, ನಾ ಕೊಡುದಿಲ್ಲ ಅಂದ್ರೆ ಕೊಡುದಿಲ್ಲ. ಮತ್ತ್ ಅದನ್ನೇ ಹಿಡ್ಕಂಡ್ ನೇಲ್ತಾ ಆಯ್ಕಂಬೆಡ

ಹುಕ್ಶಿಡು/ಹುಗ್ಸಿಡು/ಹುಗ್ಸಿ ಇಡುದ್ = ಅಡಗಿಸಿ ಇಡು, ಬಚ್ಚಿಡು

ಹುಗ್ಗು – ಆಡಗು,ಹುದುಗು (ಸಂಕ್ಷಿಪ್ತ ಕನ್ನಡ ನಿಘಂಟು)

೧.         ಈ ಸರ್ತಿ ಹಪ್ಳ ಮಾಡದ್ದ್ ಭಾರಿ ಕಡ್ಮಿ ಆಯ್ತ್. ಒಂದ್ ಸ್ವಲ್ಪಾ ಆರೂ ಹುಗ್ಸಿಡ್‌ದಿದ್ರೆ, ಈ ಮಕ್ಳ ಕಡಿಂದ ಈ ವರ್ಷ ಮಳ್ಗಾಲಕ್ಕೆ ತೊಡುಗ್ ಬೇಕಂದ್ರೊ ಹಪ್ಳ ಇರುದಿಲ್ಲೆ

೨.         ನಾ ಸ್ವಲ್ಪ ಜಾಗ್ರತೆ ಮಾಡಿ ಹುಗ್ಸಿಟ್ಟದ್ದಕ್ಕಾಯ್ತ್, ಇಲ್ದಿರೆ ಈಗ ಅರ್ಜೆಂಟಿಗೆ ಬೇಕಂದ್ರೆ ಸಿಕ್ತಿತ್ತಾ?


ಹೀಂಗೆ ಇಂಟರ್ನೆಟ್ಟಗೆ ಗಿರಕಿ ಹೊಡಿತಿಪ್ಪತಿಗೆ… ಪಾಲಚಂದ್ರ ಅವ್ರದ್ದ್  ಬ್ಲಾಗ್ ಕಾಮ್ಬುಕೆ ಸಿಕ್ತ್… ತಾರೆ ಜಮಿನ್ ಪರ್ ಪಿಚ್ಚರಿದ್ ಒಂದ್ ಪದ್ಯ ಕುಂದಾಪ್ರ ಕನ್ನಡದಗೆ ‘ನನ್ನಬ್ಬಿ’  ಅಂದೇಳಿ ಬರದ್ದ್ ಓದುಕ್ ಸಿಕ್ತ್…

ನೀವೂ ಓದಿ ಕಾಣಿ… ಇಲ್ಲ್ ಅದ್ರದ್ದ್ ಲಿಂಕ್ ಕೊಟ್ಟಿದೆ

http://palachandra.blogspot.com/2009/06/blog-post_25.html

ಹಾಂಗೆ ಕುಂದಾಪ್ರ ಸಂತಿದ್ ಒಂದಿಷ್ಟ್ ಫೋಟೋ ಸತೆ ಹಾಕಿದ್ರ್… ಅದನ್ನ್ ಕಾಣ್ಕಿದ್ರೆ ಇಲ್ಲಿಗ್ ಹೋಯ್ಕಾಣಿ… ಪಟ ಮಾತ್ರಾ ಭಾರಿ ಲಾಯ್ಕ್ ಬಂದಿತ್.. ಹೌದಾ ಸುಳ್ಳಾ ಬೇಕಾರ್ ನೀವೇ ಕಾಣಿ

http://palachandra.blogspot.com/search/label/ಕುಂದಾಪುರ


ಕುಂದಾಪ್ರ ಬದಿ ಶಬ್ದ ಕೆಮಿ ಮೇಲ್ ಬೀಳ್ದೆ ಸುಮಾರ್ ದಿನ ಆಯ್ತಮಗಿತ್ತಲ್ಲ… ಇಲ್ಲೊಂದೆರ್ಡ್ ಇತ್ತ್ ಕಾಣಿ..

ಜೀವ್ ಬಿಡ್ತ – ಈ ಶಬ್ದ ಕುಂದಾಪ್ರ ಕನ್ನಡದ್ದ್ ಮಾತ್ರ ಅಂತ ಹೇಳುಕಾತಿಲ್ಲ. ಬೇರೆ ಬೇರೆ ಬದಿಯಗ್ ಸತೆ ಇದೆ ನಮನಿ ಶಬ್ದ ಕೆಲವ ಇತ್ತ್. ಇದಕ್ಕೆ ಅರ್ಥ ಹೇಳುದಾರೆ ಪಂಚಪ್ರಾಣ ಅಂಬುದ್ ಸರಿ ಆತ್ತಾ ಕಾಣತ್ತ್

ಬಳಕೆ –

೧. ಅವನಿಗೆ ಮಾಯ್ನಣ್ಣ್ ಅಂದ್ರ್ ಸೈ… ಜೀವ್ ಬಿಡ್ತ ( ಬೇಕಿದ್ರೆ ನಿಮ್ಮ್ ನಿಮ್ಮ್ ಅನ್ಕೂಲಕ್ಕೆ ಮಾಯ್ ಹೆಣ್ಣ್ ಅಂದೆಳಿ ಬೇಕಾರ್ ಓದ್ಕಂಬುಕೆ ಅಡ್ಡಿಲ್ಲ)

೨. ಅವ್ಳ್ ಮಕ್ಳ್ ಅಂದ್ರೆ ಜೀವ್ ಬಿಡತ್ಲ್

ಜೀವ್ ತೆಕ್ಕಂಬ್ದ್ – ಆತ್ಮಹತ್ಯೆ ಮಾಡ್ಕಂಬ್ದ್

ಬಳಕೆ –

೧. ಈ ಮಕ್ಳಿಗೆಲ್ಲ ಭಾಷಿ ಇತ್ತ ಮಾರಾಯ್ರೆ… ಪರಿಕ್ಷೆಯಗೆ ಕಡ್ಮಿ ಮಾರ್ಕ್ ಬಂತ್ ಅಂದೆಳಿ ಜೀವ್ ತೆಕ್ಕಂತ್ವಲೇ

ಬಾಯ್ ಕಳ್ಕಂಡ್ ಕೂಕಂಬ್ದ್ – ಆಸೆಯಿಂದ ನಿರೀಕ್ಷಿಸು

ಬಳಕೆ –

೧. ಮಂತ್ರಿಗಳ್ ಮನಿ ಕಟ್ಸಿಕೊಡ್ತೆ  ಅಂದಿರ್ ಅಂದೆಳಿ ಎಲ್ಲಾ ಬಾಯ್ ಕಳ್ಕಂಡ್ ಕೂಕಂಡದ್ದೇ ಬಂತ್ … ಎಲ್ಲಿತ್ತ್ ಮನಿ…

೨. ಎಂತ.. ಈ ಹೊಸ ಅಂಗಿ ನಿಂಗ್ ಬೇಕಾ.. ಹೂಂ.. ಕೊಡ್ತೆ… ಬಾಯ್ಕಳ್ಕಂಡ್ ಕೂಕೋ

ಬಾಯ್ ಕಳ್ಕಂಡ್ ಕೇಂಬುದ್ – ತನ್ಮಯತೆಯಿಂದ ಕುತೂಹಲ/ಆಸಕ್ತಿಯಿಂದ ಕೇಳು

೧. ರಾಕ್ಷಸರದ್ದ್ .. ಭೂತದ್ದ್ ಕತಿ ಹೇಳ್ರೆ ಮಕ್ಳ್ ಬಾಯ್ಕಳ್ಕಂಡ್ ಕೇಂತಾ ಕೂಕಂತೋ…

ಬಾಯ್ ಕಳ್ಕಂಡ್ ಕಾಂಬುದ್ – ಮಗ್ನನಾಗಿ ತನ್ಮಯತೆಯಿದ ನೋಡು / ಆಸೆಯಿಂದ ನಿರೀಕ್ಷಿಸು

೧. ಆ ಧಾರಾವಾಯಗೆ ಎಂತ ಸುಟ್ಟ ಕತಿ ಇತ್ತಂದೆಳಿ ಬ್ಯಾಡ್ದಾ.. ಆ ನಮ್ನಿ ಬಾಯ್ಕಳ್ಕಂಡ್ ಕಾಂಬುಕೆ

೨. ತಿಂಡಿ..ನಿಂಗೆ ಬೇಕಾರೆ ನೀನೇ ಕೇಂಡ್ ತಕೋ.. ನಾ ಕೊಡ್ತೆ..ನೀ ಬಾಯ್ಕಳ್ಕಂಡ್  ಕೂಕೋ ..

ಇದಕ್ಕ್ ಇನ್ನೂ ಸುಮಾರ್ ಅರ್ಥ ಹೇಳಲಕ್ಕ್ … ಆಯಾ ಸಂದರ್ಭಕ್ಕೆ ಸರಿ ಆಯಿ ಅರ್ಥ ಬತ್ತ್…

ಹರ್ಕಟಿ ಬಾಯ್ – ಗುಟ್ಟು ನಿಲ್ಲದ ಬಾಯಿ

ಬಳಕೆ-

ಗುಟ್ಟ್ ನಿನ್ನತ್ರೆ ಇರ್ಲಿ ಅಂದ್ರೆ ,  ನೀನ್ ಹೋಯಿ ಹೋಯಿ ಅವ್ಳತ್ರ ಹೇಳ್ದ್ಯ…ಅವ್ಳದ್ ಹರ್ಕಟಿ ಬಾಯಿ.. ಇನ್ ಊರಿಡಿ ಪ್ರಚಾರ ಆಪ್ಕೆ ಅಡ್ಡಿಲ್ಲ..


ಬರೀ ಕುಂದಾಪ್ರ ಕನ್ನಡದಗೆ ಮಾತ್ರ ಎಂತಕೆ , ಈಗ ಯಾವ್ ಕನ್ನಡದಗೂ ಇಪ್ಪುದ್ ಇಂಗ್ಲೀಷೆ ಅಲ್ದಾ. ಯಾರಾರೂ ಶುದ್ಧ ಕನ್ನಡ ಮಾತಾಡುವರ್ ಇದ್ರೆ ಹುಡ್ಕಿ ಕೊಡಿನಿ ಕಾಂಬ ಹಂಗಾರೆ  ಅಂದೇಳಿ  ನೀವ್ ಕೆಂಬ್ಕೂ ಸಾಕ್.  ಅದ್ರಗೂ ಬೆಂಗಳೂರಗೆ ಹಾಂಗಿನರ್ ಯಾರಾರೂ ಇದ್ರೆ ಅವ್ರಿಗೆ ರಾಜ್ಯೋತ್ಸವ ಪ್ರಶಸ್ತಿಯೇ ಕೊಡ್ಲಕ್ಕ್ ಅಂತ್ ನೀವ್ ಹೇಳುಕೂ ಸಾಕ್.  ಆರೇ ನಾ ಹೇಳುಕ್ ಹೊರಟದ್ದ್ ಅದ್ ಅಲ್ದೆ… ಒಂದ್ ಇಂಗ್ಲಿಷ್ ಶಬ್ದ ಕುಂದಾಪ್ರ ಕನ್ನಡದೊಳಗೆ ಬಂದ್ ಕೂಕಂಡಿತ್.

ಆ ಶಬ್ದ ಯಾವ್ದ್ ಅಂದೇಳಿ ನೆನ್ಪ್ ಮಾಡ್ಕಂಕಿದ್ರೆ ಸಣ್ಣಕಿಪ್ಪತ್ತಿಗೆ ಆಟ ಆಡುವತಿಗೆ ಯಾರಾರೂ ಮೋಸ ಮಾಡ್ರೆ ಎಂಥ ಹೇಳ್ತಿತ್ತ್ ಅಂತ್  ಒಂಚೂರ್ ನೆನ್ಪ್ ಮಾಡ್ಕಣಿ ಕಾಂಬ.  ನೆನ್ಪ್ ಆಯೇ ಇರ್ಕ್ ಅಲ್ದಾ?

ಇನ್ನೂ ನೆನ್ಪ್ ಆಯ್ಲಿಲ್ಯ? ಹಂಗಾರೆ ಮುಂದ್ ಓದಿ ಕಾಣಿ… ಆಗ್ಳಿಕಾರು ನೆನ್ಪ್ ಆತ್ತ್ …

“ಅವನೊಟ್ಟಿಗೆ ಆಡುಕ್ ಹೋಪ್ಕೆ ಆಗ. ಅವಂದ್ ಬರೀ ಹಂಬಕ್ ಮಾರಾಯ ”

“ನೀ ಗೆದ್ದಿಪ್ಕು ಸಾಕ್. ನಿನ್ ಕಣಗೆ  ಹಂಬಕ್ ಮಾಡಿರೆ ನಾನೂ ಗೆಲ್ತಿದ್ದೆ ಗೊತ್ತ?”

” ಬೋಲ್ ಕಾಲಿಗೆ ತಾಗಲೇ ಇಲ್ಲ. ಆರು ಅಂಪೈರ್ ಔಟ್ ಕೊಟ್ಟ ಮಾರಾಯ. ಬರೀ ಹಂಬಕಾಟ”

ಹಾ.. ಈಗ ಗೊತ್ತಾಯ್ತಲ್ದಾ? ನಾ ಎಂತ ಹೇಳುಕೆ ಹೊರ್ಟಿದೆ ಅಂತ. ಅದೇ ಹಂಬಕ್… ಹಂಬಕ್..

“ಮೋಸ ಮಾಡುದ್” ಅಂತ್ ಹೇಳುಕೆ ನಮ್ಮ ಕುಂದಾಪ್ರ ಕನ್ನಡದಗೆ ಇಪ್ಪ ಶಬ್ದ…

ಆರೇ ಈ ಶಬ್ದ ಬಂದದ್ದ್ ಎಲ್ಲಿಂದ ಅಂದೇಳಿ ನಂಗಂತೂ ಗೊತ್ತಿರ್ಲಿಲ್ಲ. ಮೊನ್ನೆ ಒಂದ್ ಪುಸ್ತಕ ಓದ್ತಾ ಇದ್ದೆ. ಅದ್ರಗೆ

ಒಂದ್ ಇಂಗ್ಲೀಶ್ ಶಬ್ದ ಇದ್ದಿತ್. ಅದನ್ನ್ ಕಂಡ್ರ ಕೂಡ್ಲೇ ಫಕ್ನೆ ನೆನ್ಪಾಯ್ತ್.. ಹೋ ಈದ್ ಅದೇ …

ಆ ಶಬ್ದ ಹಂಬಗ್  (humbug) . ಹಾಂಗಂದ್ರೆ ಮೋಸ , ಅಪ್ರಾಮಾಣಿಕತೆ, ವಂಚನೆ, ಮೋಸಗಾರ ಅಂತೆಲ್ಲ ಅರ್ಥ ಸಿಕ್ಕತ್ತ್.

ಬೇಕಾರೆ  http://www.baraha.com/kannada/index.php ಇಲ್ಲಿಗ್ ಹೋಯಿ humbug  ಅಂತ ಬರ್ದ್ ಹುಡ್ಕಿ ಕಾಣಿ.

ಶಬ್ದ ಬೇಕಾರೆ ಇಂಗ್ಲಿಶಿದೆ ಆಯ್ಲಿ…ಅದನ್ನ್ ಸತೆ ನಮ್ಮ ಕುಂದಾಪ್ರ ಕನ್ನಡಕ್ ತಕಂಡ್ ಬಂದ್ ‘ಹಂಬಕ್’ ಅಂತ ಮಾಡಿ ಅದೀಗ ನಮ್ದೆ ಶಬ್ದ ಆಯ್ತಲ್ದ..

ನಿಮ್ಗೆಲ್ಲ ಮೊದ್ಲೇ ಗೊತ್ತಿದ್ದಿತೋ ಏನೋ. ನಂಗಂತೂ ಗೊತ್ತಿರಲ್ಲ,.. ನನ್ಕಣಗೆ ಗೊತ್ತಿಲ್ದಿದ್ದರ್ ಯಾರಾರೂ ಇದ್ರೆ ಅವ್ರಿಗ್ ಗೊತ್ತಾಯ್ಲಿ ಅಂದೇಳಿ ಇಲ್ಲೊಂಚೂರ್ ಬರ್ದ್ ಹಾಕ್ದೆ ಕಾಣಿ.. ನಿಮ್ಗೂ ಯಾವ್ದಾರೂ ಹೀಂಗಿದೆ ಶಬ್ದ ಗೊತ್ತಿದ್ರೆ ಹೇಳಿ… ನನ್ನಂತವ್ರಿಗೆ ಉಪ್ಕಾರ ಆತ್ತ್.. ಹೇಳ್ತ್ರಿ ಅಲ್ದಾ?


ಮತ್ತೆ ಎಲ್ಲ ಹ್ಯಾಂಗಿದ್ರಿ? ಊರಗ್ ಮೊನ್ನೆ ಮತ್ತ್ ಮಳಿ ಬಂದಿತಂಬ್ರಲೆ… ನಿಮ್ದ್ ಕೊಯ್ಲ್ ಎಲ್ಲಾ ಆಯ್ತ್ ಕಾಣತ್ ಅಲ್ದಾ? ಹ್ಯಾಂಗೆ ಈ ವರ್ಷ ಬ್ಯಾಸಾಯ ಅಡ್ಡಿಲ್ಲ್ಯಾ? ಪೆರ್ಡೂರ್, ಸಾಲಿಗ್ರಾಮದರದ್ ತಿರ್ಗಾಟ ಶುರು ಆಯಿರ್ಕ್ ಅಲ್ದಾ?

 ಆಟ ಗೀಟ ಕಾಂಬ್ಕ್ ಹೋಯಿಲ್ಲ್ಯಾ? ಈಗೀಗ ಆಟ ಕಾಂಬ್ಕ್ ಹೋಪ್ಕೇ ಮನ್ಸ್ ಬತ್ತಿಲ್ಲಪ. ಎಲ್ಲಾ ಪಿಚ್ಚರಿದೇ ಕತಿ ಮಾಡುದಾರೆ ಆಟ ಎಂತಕ್ ಕಾಣ್ಕ್ ರಾತ್ರಿಡೀ ನಿದ್ರಿ ಬಿಟ್ಕ್ಂಡ್. ಪಿಚ್ಚರೇ ಕಾಣ್ಲಕ್. ಆರೂ ಒಂದ್ ಅಂದ್ರೆ ಬೆಂಗ್ಳೂರಗೆ ಬಂದಲ್ಲ್ ಈ ಸರ್ತಿ ಎಲ್ಲಾ ಮ್ಯಾಳದರೂ ಹೆಚ್ಚ್ ಪೌರಾಣಿಕ ಪ್ರಸಂಗವೇ ಆಡಿರ್. ನಾನೂ ಒಂಡೆರ್ಡ್ ಆಟ ಕಂಡಿನೆ. ಮ್ಯಾಳದರ್ ಹೇಳುದ್ ಎಂತ ಅಂದ್ರೆ ಹೊಸ ಪ್ರಸಂಗ ಆಡ್ರ್ ಮಾತ್ರ ಜನ ಬತ್ರೆ. ಹಳ್ತೆಲ್ಲಾ ಯಾರಿಗೂ ಬ್ಯಾಡ. ಜನ ಬರ್ದಿರೆ ನಾವ್ ಮ್ಯಾಳ ನೆಡ್ಸುದಾರೂ ಹ್ಯಾಂಗೆ ಅಂದೇಳಿ. ಅವ್ರ್ ಹೇಳುದ್ರಗೂ ಸತ್ಯ ಇಲ್ದೇ ಇಲ್ಲ. ಆರೂ ಇದ್ ಕತಿ ಹ್ಯಾಂಗಾಯ್ತ್ ಗೊತ್ತಾ, ೨೦-೨೦ ಬಂದ್ಮೇಲೆ ಟೆಸ್ಟ್ ಮ್ಯಾಚ್ ಕಾಂಬುಕೆ ಯಾರೂ ಬತ್ತಿಲ್ಲ ಅಂದೇಳ್ದಾಂಗ್ ಆಯ್ತ್. ಇದ್ ಪೂರ್ತಿ ಸತ್ಯವೂ ಅಲ್ಲ. ಹಾಂಗಂದೇಳಿ ತೀರಾ ಸುಳ್ಳ್ ಅಂದೇಳಿಯೂ ಹೇಳುಕಾತಿಲ್ಲೆ. ಈಗ ಬೆಂಗ್ಳೂರಗಾರೆ ನಾನೆ ಕಂಡಾಂಗೆ ಪೌರಾಣಿಕ ಪ್ರಸಂಗ ಆಡದಾಗ್ಳಿಕೆ ಯಾವತ್ತೂ ಜನ ಇಲ್ಲ ಅಂದೇಳಿ ಆಯಿಲ್ಲ. ಪ್ರತೀ ವರ್ಷ ದೇವಿ ಮಹಾತ್ಮೆ ಆಡ್ರೂ ಜನ ಭರ್ತಿಯಾದ್ದ್ ನಾನೇ ಕಂಡಿದೆ. ಆರೆ ಬೆಂಗ್ಳೂರಗೆ ಬಂದಾಂಗೆ ಊರಗ್ ಜನ ಪೌರಾಣಿಕ ಪ್ರಸಂಗಕ್ಕ್ ಬತ್ರಾ? ಯಾಕ್ ಬತ್ತಿಲ್ಲ ಹೇಳಿ… ಒಂದ್ ಒಳ್ಳೇ ಹತ್ತ್ ಪ್ರಸಂಗ ತಯಾರ್ ಮಾಡ್ಕಂಡ್, ಹೊಸ ಪ್ರಸಂಗದ ಸೆಟ್ಟಿಂಗಿಗೆ ಕರ್ಚ್ ಮಾಡು ದುಡ್ಡನ್ನ ಕಲಾವಿದ್ರಿಗೆ ಕೊಟ್ಟ್, ಒಳ್ಳೋಳ್ಳೇ ಕಲಾವಿದ್ರನ್ ಹಾಯ್ಕಂಡ್ ಹೊಡಿ ಹಾರ್ಸರೆ  ಎರ್ಡ್ ದಿನ ಬರ್ದಿರೂ ಕಡಿಗೆ ಆಟ ಕಂಡರ್ ಮಾತಾಡತ್ ಕೇಂಡ್ ಆರೂ ಕಾಂಬ ಹ್ಯಾಂಗಿತ್ತ್ ಅಂದೇಳಿ ಬಂದೇ ಬತ್ರೆ. ಜನ್ರಿಗೆ ಎಂತ ಗೊತ್ತಾ.. ಒಟ್ಟಾರ್ ಮೇಲ್ ಆಟ ರೈಸ್ಕ್.. ಆರೆ ಇದ ಸ್ವಲ್ಪ ಕಷ್ಟದ ಕೆಲ್ಸ. ಈಗ ಮ್ಯಾಳದರಿಗೆ ಹ್ಯಾಂಗಂದ್ರೆ… ಯಕ್ಷಗಾನ ಉಳೀಕ್ ಅಂದೇಳಿ ಇಲ್ಲ… ಒಟ್ಟಾರ್ ಮೇಲ್ ಅವ್ರ್ ಪೆಟ್ಗಿ ತುಂಬುಕ್ ಸುಲ್ಭದ್ ದಾರಿ ಆರ್ ಸಾಕ್. ಇದ್ ಹೀಂಗೆ ಮುಂದ್ ಹೋರೆ.. ಇನ್ನ್ ಮೇಲೆ ಆಟದಗೆ ನೀವ್ ಐಟಮ್ ಸಾಂಗ್ ಕಾಂಬ್ ದಿನವೂ ದೂರ ಇಲ್ಲ ಅನ್ಸತ್ತ್…

 ನಂಗೆ ಸಣ್ಣಕಿಪ್ಪತ್ತಿಗೆ ಅಷ್ಟೇನ್ ಆಟ ಕಾಂಬ್ ಗಿರ ಇರ್ಲಿಲ್ಲ. ಆಟ ಹೆಚ್ಚ್ ಕಾಂಬುಕೆ ಶುರು ಮಾಡದ್ದ್ ಬೆಂಗ್ಳೂರಿಗೆ ಬಂದ್ ಮೇಲೆ. ಊರಗಿದ್ದಾಗ್ಳಿಕೆ ವರ್ಷಕ್ ಒಂದ್ ತಪ್ರೆ ಎರ್ಡ್ ಟೆಂಟ್ ಮ್ಯಾಳದ ಆಟ. ಅದೂ ಚಕ್ರಮೈದಾನದಗೆ ಆರೆ ಮಾತ್ರ. ಆಗ ಹೆಚ್ಚ್ ಸಾಲಿಗ್ರಾಮ ಮ್ಯಾಳದ ಆಟ ಕಂಡದ್ದೇ ಹೆಚ್ಚ್. ನಂಗ್ ನೆನ್ಪ್ ಇಪ್ಪಾಂಗೆ ಮೇಘ ಮಯೂರಿ, ಶೃಂಗ ಸಾರಂಗ, ಧರ್ಮ ಸಂಕ್ರಾಂತಿ…ಶಿರ್ಸಿ ಮ್ಯಾಳದರದ್ದ್ ಭಾಗ್ಯ ಭಾರತಿ… ಹೀಂಗೆ ಸುಮಾರ್ ಆಟ ಕಂಡಿದೆ. ಅದ್ರಗೂ ಮೇಘ ಮಯೂರಿ ಮತ್ತ್ ಭಾಗ್ಯ ಭಾರತಿ ಆಗ್ಳಿಕೆ ಭಾರಿ ರೈಸಿತ್… ಮೇಘ ಮಯೂರಿ ಕತಿಯಗೆ ಬಪ್ಪ್ ಕೃಷಿಕ ಕಾಳನ ಕತಿಯೇ ಕಡಿಗೆ ‘ಹುಲಿಯಾದ ಕಾಳ’ ಕ್ಯಾಸೆಟ್ ಬಂದ್ ಭಾರಿ ಹೆಸ್ರ್ ಮಾಡಿತ್. ಆ ಕಾಳನ ಕತಿ ಸುಮಾರ್ ಮೊದ್ಲ್ ನನ್ ಬ್ಲಾಗಗೂ ಹಾಕಿದ್ದೆ… ಹೀಂಗೆ ವರ್ಷಕ್ ಒಂದೋ ಎರ್ಡ್ ಟೆಂಟಿನಾಟ ಬಿಟ್ರೆ ಮತ್ತ್ ಹರ್ಕಿ ಬಯಲಾಟ. ಮನಿ ಬುಡ್ದಲ್ಲೇ ಆಟ ಆರೆ ಆಟಕ್ ಹೋಪ್ದ್ ಅಂದೇಳಿ ಬೇಗ್ ಬೇಗ್ ಉಂಡಾಂಗ್ ಮಾಡಿ, ಎಲ್ಲರ್ಕಿಂತ ಮುಂದ್ ಹೋಯಿ ಕೂಕಂಡ್, ಕ್ವಾಡಂಗಿ, ಬಾಲಗೋಪಾಲ, ಶ್ರೀವೇಷ(ಇದ್ ಶ್ತ್ರೀವೇಷ ಆರೂ ಯಾರೂ ಹಾಂಗ್ ಹೇಳತ್ ಇಲ್ಲಿವರಿಗೂ ನಾನ್ ಕೇಣಲ್ಲಪ್ಪ) ಎಲ್ಲ ಕಂಡ್ ಇನ್ನೇನ್ ಒಡ್ಡೋಲ್ಗ ಶುರು ಆಪಲ್ಲೊರಿಗೆ ಒಂದ್ ಗಳ್ಗಿ ಆಟ ಕಂಡಾಂಗ್ ಮಾಡಿ ಆಟದ ಗರದಗೆ ಸುತ್ತ್ ಹೊಡುಕ್ ಹೋರೆ, ಆಟದ ಖರ್ಚಿಗೆ ಕಿಸಿಯೊಳ್ಗೆ ಇಟ್ಕಂಡ್ ಚಿಲ್ರಿ ಪೂರ್ತಿ ಕಾಲಿ ಆಪಲ್ಲೊರಿಗೆ ಮತ್ತ್ ಆಟದ ಬದಿಗೆ ಮುಖ ಹಾಕಿ ಕಾಂಬರ್ಯಾರ್? ಅದೆಲ್ಲಾ ಆಪಷ್ಟೊತ್ತಿಗೆ ಹ್ಯಾಂಗೂ ಕಣ್ಣ್ ಕೂರ್‌ತಿರತ್ತ್… ಆಟಕ್ಕ್ ಹೋಯ್ಕ್ ಅಂದೇಳಿ ಮಧ್ಯಾಹ್ನ ಮನ್ಕೋ ಅಂದೇಳಿ ಮನ್ಯರ್ ಒತ್ತಾಯಕ್ಕೆ ಕಣ್ಣ್ ಮುಚ್ದಾಂಗ್ ಮಾಡಿ ಅವ್ರಿಗೆಲ್ಲ ನಿದ್ರಿ ಬಂತ್ ಅಂದೇಳಿ ಗೊತ್ತಾರ್ಕೂಡ್ಲೇ ಹಗೂರ ಎದ್ದ್ ಆಡುಕೆ ಹೋದ್ದಲ್ದಾ? ಕಣ್ನ್ ಕೂರ್ದೇ ಎಲ್ಲಿಗ್ ಹೋತ್ತ್. ಮನಿಗ್ ಹೋಯ್ ಮಲ್ಕಂಡ್ರೂ ಆಯ್ತ್. ಇಲ್ದಿರೆ ಅಲ್ಲೇ ಎಲ್ಲಾರೂ ಒಂದ್ ಮುಲ್ಲಿ ಹಿಡ್ಕಂದ್ ಬಿದ್ಕಂಡ್ರೂ ಆಯ್ತ್. ಮತ್ತ್ ಆಟ ಕಾಣ್ಕಿದ್ರೆ ರಾಕ್ಷಸನ ವೇಷ ಬರ್ಕ್. ಅದ್ ಬಪ್ಪತಿಗೆ ಹ್ಯಾಂಗಿದ್ರೂ ಬೆಳ್ಗಿನ ಜಾಮ ಆಯಿರತ್ತ್. ಹಾಂಗಾಯಿ. ಅದನ್ನ್ ಒಂದ್ ಕಂಡ್ರೆ ಅಲ್ಲಿಗ್ ನಮ್ಮ್ ಆಟ ಮುಗ್ದಾಂಗೆ… ಆಟದ ಗರದಗೆ ರಾತ್ರಿಡೀ ನಿದ್ರಿ ಮಾಡ್ರೂ.. ಆಟದ ನಿದ್ರಿ ಅಂದೇಳಿ ಮಾರ್ನೆ ದಿನ ಶಾಲಿಗ್ ಹಾಂಟ್ ಬೇರೆ… ಆರೂ ಆಗ ಆಟಕ್ ಹೋಯಿ ಬಪ್ದಂದ್ರೆ ಸಣ್ಣಕೆ ಒಂದ್ ಹಬ್ಬಕ್ ಹೊಯಿ ಬಂದಷ್ಟೇ ಖುಶಿ… ಈಗ ಆಗ್ಳಿಕಿನ ನಮನಿ ಆಟವೂ ಇಲ್ಲ… ಇದ್ರೂ ಆ ಖುಷಿ ಖಂದಿತ ಬತ್ತಿಲ್ಲ… ಹಳ್ತ್ ಹೋಯಿ ಹೊಸ್ತ್ ಬಂದಾಂಗೆ… ಎಲ್ಲ ಬದ್ಲಾಯ್ಕೇ ಅಲ್ದಾ? ನಾಳಿಗೆ ಇದೂ ಹಳ್ತಾಯಿ ಮತ್ತ್ ಹೊಸ್ತ್ ಬರ್ಕೇ ಅಲ್ದಾ …. ಅಂದೇಳಿ ಹೇಳ್ತಾ ಈ ಆಟದ ಪುರಾಣಕ್ಕೆ… ಮಂಗಳ ಹಾಡ್ತೆ.

 


ನಿಮ್ಮ ಕೊಂಗಾಟದ ಕುಂದಾಪ್ರ ಕನ್ನಡ ಬ್ಲಾಗಗಿವತ್ತ್ ಐವತ್ನೆ ಪೋಸ್ಟ್ ಹಾಕ್ತಿದ್ದೆ ಕಾಣಿ. ಐವತ್ನೇದ್ ಆಪುಕೋಯಿ ಎಂತಾರೂ ಗಡ್ಜ್ ಮಾಡ್ಕಂದೇಳಿ ಎಣ್ಸಕಂಡಿದ್ದಿದೆ.
ಸುಮಾರ್ ದಿನ್ದಿಂದ ಎಂತ ಬರುದ್ ಎಂತ ಬರುದ್ ಅಂದೇಳಿ ಆಲೋಚ್ನಿ ಮಾಡದ್ದೆ ಮಾಡದ್ದ್. ಕಡೀಗೆ ಹೀಂಗ್ ಮಾಡ್ರೆ ಹ್ಯಾಂಗ್ ಅನ್ಸ್ತ್. ನೀವೆಲ್ಲ ಈ ಬ್ಲಾಗಿಗೆ ಸುಮಾರ್ ದಿನ್ದಿಂದ್ ಬತ್ತಿದ್ರಿ ಹೌದಾ. ನಿಮ್ ಕೈಯ್ಯಗೆ ಎಂತಾರೂ ಒಂಚೂರ್ ಬರುಕೆ ಹೇಳುದ್. ಎಲ್ಲ ಎಂತ ಬರಿತ್ರಿ ಕಾಂಬಾ.
 
ಬರುಕೆ ವಿಷ್ಯ ಎಂತಾ ಕೇಂಡ್ರ್ಯಾ? ನಮ್ ಕುಂದಾಪ್ರ ಭಾಷಿ, ಕುಂದಾಪ್ರದ್ ಜಾಗ, ಕುಂದಾಪ್ರದಗೆ ಮಾತ್ರ ಇಪ್ಪ್ ಯಾವ್ದಾರೂ ಹಬ್ಬ, ವಿಶೇಷ , ಕುಂದಾಪ್ರ ಕನ್ನಡದ ಗಾದಿ ಮಾತ್, ಎದ್ರ್ ಕತಿ, ಕುಂದಾಪ್ರದ ಮಳ್ಗಾಲ, ಕುಂದಾಪ್ರದ ಬಗ್ಗ್ ಕೆಲ್ಸ ಮಾಡ್ದವ್ರ್, ಯಕ್ಷಗಾನ… ಹೀಂಗೆ ಯಾವ್ ವಿಷ್ಯ ಆರೂ ಅಡ್ಡಿಲ್ಲ. ನಿಮ್ಗ್ ಗೊತ್ತಿದ್ದನ್ನ್ ಹೇಳಿ… ಒಟ್ಟ್ ಕುಂದಾಪ್ರಕ್ಕ್ ಸಂಬಂಧಪಟ್ಟದ್ ಆರ್ ಸೈ. ಎಲ್ಲಾ ಒಟ್ಟಾಯಿ ಓದುವ… ನಿಮ್ಗ್ ಗೊತ್ತಿದ್ದನ್ನ್ ಬೇರೆ ನಾಕ್ ಜನ ಓದಿ ಅವರೂ ಕುಶಿ ಪಡ್ಲಿ.
 
ಈ ಬ್ಲಾಗ್ ಶುರು ಮಾಡು ಹೊತ್ತಿಗೆ ನಂಗ್ ಇದ್ದ ಆಸಿ ಒಂದೇ.. ನನ್ ಕಣಗೆ ಕುಂದಾಪ್ರ ಕನ್ನಡ ಅಂದ್ರೆ ಜೀವ ಬಿಡು ನಾಲ್ಕ್ ಜನ ಓದ್ರ್ ಸಾಕ್… ನಾ ಬರದ್ದೂ ಸಾರ್ಥ ಆಯ್ತ್ ಅಂತ್ ಹಾರೈಸಿದ್ದೆ. ನೀವ್ ನಾಕಾರ್ ಜನ ಓದಿ, ನಿಮ್ಗ್ ಖುಷಿ ಆದಾಗ್ಳಿಕೆ ಅದನ್ನ ಹೇಳಿ ಬೆನ್ನ್ ತಟ್ರ ಮೇಲೆ ಮತ್ತೂ ಬರೀಕಂಬ್ ಉಮೇದ್ ಬಂದದ್ದ್ ಸುಳ್ಳಲ್ಲ.. ಹೀಂಗೆ ಈ ಬ್ಲಾಗಿಗೆ ಬನಿ.. ನಮ್ಮ ಕುಂದಾಪ್ರ ಕನ್ನಡ ಓದಿ ನಾವ್ ನೀವ್ ಎಲ್ಲ ಖುಷಿ ಪಡ್ವ ಅಕಾ?
 
ಹೇಳದ್ ನೆನ್ಪಿತ್ತಲ್ದಾ? ಬೇಗ್ ಬರ್ದ್ ಕಳ್ಸಿ.. ಕಾಯ್ತಾ ಇರ್ತೆ… ಕನ್ನಡದಗೆ ಬರುಕೆ ಅನ್ಕೂಲ ಇಲ್ದಿದ್ರೆ.. ಕಂಗ್ಲೀಷ್ ( ಅಂದ್ರೆ ಕಣಾದ ಶಬ್ದ ಇಂಗ್ಲೀಷಗೆ ಬರ್ದ್) ಆರೂ ಅಡ್ಡಿಲ್ಲ..
 
ವಿಜಯ್ ರಾಜ್  ಕನ್ನಂತ್, ಹಳ್ಳಿಹೊಳೆ

Mumbai-Protest-against-Assam-riots-turns-violent
ಮೊನ್ನೆ ಕಡಲ ತಡಿಯ ತಲ್ಲಣ ಪುಸ್ತಕ ತಕಂಡ್ ಬಂದ್ ಓದ್ತಾ ಇದ್ದೆ. ಈ ಪುಸ್ತಕ ಓದ್ತಾ ಇಪ್ಪತಿಗೆ ನಮ್ ಕುಂದಾಪ್ರ ಬದಿಯಗೆ ನಾ ಶಾಲಿಗ್ ಹೋಪತಿಗೆ ನೆಡದ್ ಒಂದ್ ಗಲಾಟಿ ನೆನ್ಪ್ ಆಯ್ತ್. ಅದಕ್ಕೂ ಮೊದ್ಲ್ ಅಷ್ಟ್ ದೊಡ್ಡ್ ಗಲಾಟಿ ನೆಡ್ದಿತೋ ಇಲ್ಯೋ ಗೊತ್ತಿಲ್ಲ. ಆರೆ ಅದ್ ಮಾತ್ರ ಕುಂದಾಪ್ರ ಬದ್ಯಗೆ ನಾ ಕಂಡ್ ದೊಡ್ಡ್ ಗಲಾಟಿ

ಆಗ ನಾನ್ ಏಳ್ನೇ ಕ್ಲಾಸಗೆ ಇದ್ದೆ. ಕಮಲಶಿಲೆ ಶಾಲಿಗ್ ಹೋತಾ ಇದ್ದೆ. ಒಂದಿನ ನನ್ ಕ್ಲಾಸ್ಮೇಟ್ ರಘು ಅಂಬನ್ ಬೆಳಿಗ್ಗೆ ಬಂದನ್ ಒಂದ್ ಸುದ್ದಿ ಹಿಡ್ಕಂಡ್ ಬಂದಿದ್ದ. ಯಾರೋ ಸಾಯ್ಬ್ರ್ ಅಂಬ್ರ್… ಕಾರಗೆ ಬಂದದ್ದಂಬ್ರ್. ಒಬ್ಬ ಹಿಂದೂ ಹುಡ್ಗನ್ ಕಾರಿಗ್ ತುಂಬ್ಕಂಡ್ ಹೋಯಿರ್ ಅಂಬ್ರ್. ಪ್ಯಾಟಿ ಬದ್ಯಗೆ ಜೋರ್ ಗಲಾಟಿ ಶುರುವಾಯಿತ್ ಅಂಬ್ರ್. ಹಿಂದೂ ಹುಡ್ಗನಿಗೆ ಸಮಾ ಹೊಡ್ದಿರ್ ಅಂಬ್ರ್. ಹಾಂಗಂಬ್ರ್ ಹೀಂಗಂಬ್ರ್… ಅಂದೇಳಿ ಕತಿ ಹೇಳುಕ್ ಶುರು ಮಾಡಿದ. ನಾವೆಲ್ಲಾ ಅವ್ನ್ ಸುತ್ತ ಬಾಯ್ ಕಳ್ಕಂಡ್ ಅವ ಹೇಳ್ತಿದ್ ಕತಿ ಕೇಂತಾ ಕೂಕಂಡಿದ್ದಿತ್. ನಮ್ ನಮ್ಮೊಳ್ಗೇ ನಮ್ಗ್ ತಿಳ್ದ್ ಮಟ್ಟಿಗೆ ಗುಸು-ಗುಸು ಮಾತಾಡ್ಕಂತಾ ಇದ್ದಿತ್. ನಮ್ಗ್ ಆ ಸುದ್ದಿ ಎಷ್ಟ್ ವಿಚಿತ್ರ ಆಯಿ ಕಂಡಿತ್ ಅಂದ್ರೆ ಅದನ್ ನಂಗ್ ಹೇಳುಕ್ ಬತ್ತಿಲ್ಲ. ಅಲ್ಲಿವರಿಗೆ ನಾವ್ ಕೇಂಡದ್ ಏನಿದ್ರೂ ಪೇಪರಗೆ ಓದದ್ ಏನಿದ್ರೂ ಎಲ್ಲೋ ಹಾಂಗ್ ಆಯ್ತಂಬ್ರ್. ಕರ್ಫ್ಯೂ ಹಾಕಿರಂಬ್ರ್… ಇಷ್ಟ್ ಜನ ಸತ್ತ್ ಹೋರಂಬ್ರ್… ಆ ಎಲ್ಲೋ ಈಗ ನಮ್ ಕುಂದಾಪ್ರ ಆಯ್ತಲೆ ಅಂದೇಳಿ ಒಂಥರಾ ಹೆದ್ರಿಕಿ, ಒಂದ್ ನಮೂನಿ ಕುತೂಹಲ, ಟೆನ್ಷನ್. ಮಧ್ಯಾಹ್ನದ ಹೊತ್ತಿಗೆ ಸುದ್ದಿ ಹಗೂರ ಎಲ್ಲ ಬದಿಗ್ ಹರ್ಡುಕ್ ಶುರುವಾಯಿತ್ತ್. ಹುಡ್ಗ ಮೂಡ್‌ಬಗಿಯನ್ ಅಂಬ್ರ್. ಸಾಯ್ಬ್ರ್ ಹುಡ್ಗಿನ ಲವ್ ಮಾಡಿದ ಅಂಬ್ರ್… ಅದ್ಕೇ ಸಾಯ್ಬ್ರ್ ಎಲ್ಲಾ ಒಟ್ಟಿಗ್ ಸೇರಿ ಅವನ್ ಹೊತ್ಕಂಡ್ ಹೊಯಿರಂಬ್ರ್… ಹೀಂಗೆ ರೆಕ್ಕಿ-ಪುಕ್ಕ-ಬಾಲ ಎಲ್ಲ ಕಟ್ಕಂಡ್ ಇದ್ದದ್ ಇಲ್ದಿದ್ದದ್ ಎಲ್ಲಾ ಸೇರಿ ಸುದ್ದಿಯೇ ಸುದ್ದಿ.

ಮಧ್ಯಾಹ್ನದ ಮೇಲ್ ಬಸ್ ತಿರ್ಗುದ್ ಎಲ್ಲಾ ಕೈದ್ ಆಯ್ತ್. ಕಡಿಗ್ ಶಾಲಿಗ್ ರಜಿ ಕೊಟ್ರ್. ಬಸ್ಸಿಲ್ದೇ ನೆಡ್ಕಂಡೇ ಮನಿಗ್ ಹೋಪತಿಗೆ ಸಾಕ್ ಬೇಕಾಯ್ತ್. ಆರೂ ಮಾತಾಡುಕ್ ಬಿಸಿ ಬಿಸಿ ಸುದ್ದಿ ಇದ್ದಿತಲ್ದಾ… ಹಾಂಗಾಯ್ ನೆಡದ್ ದೂರ ಗೊತ್ತೇ ಆಯಲ್ಲ. ಮನಿಗ್ ಬಪ್ಪುರೊಳ್ಗೇ ಎಲ್ಲಾ ಬದ್ಯಗೂ ಸುದ್ದಿ ನಮ್‌ನಮೂನಿ ಬಣ್ಣ ಕಟ್ಕಂಡ್ ಎಲ್ಲರ್ ಬಾಯಗೂ ಅದೇ ಮಾತ್. ಅದ್ರೊಟ್ಟಿಗೆ ಕಂಡ್ಲೂರಗೆ ಗಲಾಟಿ ಅಂಬ್ರ್, ಸಿದ್ದಾಪುರ್ದಗೆ ಬಂದ್ ಅಂಬ್ರ್, ಕುಂದಾಪ್ರದಗೆ ಸಾಯ್ಬ್ರ್ ಗೂಡಂಗ್ಡಿಗೆಲ್ಲ ಬೆಂಕಿ ಕೊಟ್ಟಿರಂಬ್ರ್. ಹೊಸಂಗ್ಡಿಯಗೆ ಸಾಯ್ಬ್ರ್ ತ್ವಾಟ ಎಲ್ಲ ಹೊಡಿ ಮಾಡಿ ಹಾಕ್ರಂಬ್ರ್, ಕುಂದಾಪ್ರದಗೆ ಕರ್ಫ್ಯೂ ಹಾಕಿರಂಬ್ರ್… ಹೀಂಗೇ ಸುದ್ದಿಯೇ ಸುದ್ದಿ
ಅಂತೂ ರಾತ್ರಿ ಆಯ್ತ್. ಯಾವ್ ಬದಿಗ್ ಕೆಮಿ ಕೊಟ್ರೂ ಗಲಾಟಿದೇ ಸುದ್ದಿ. ರಾತ್ರಿ ಮಲ್ಕಂಡ್ ಬೆಳಿಗ್ಗೆ ಏಳುವತಿಗೆ ಮತ್ತೊಂದ್ ಭಯಂಕರ ಸುದ್ದಿ ಬಂದಿತ್ತ್. ನಮ್ ಊರಗ್ ಇದ್ದ್ ಒಂದೇ ಒಂದ್ ಸಾಯ್ಬ್ರ್ ಅಂಗ್ಡಿಗ್ ಯಾರೋ ಬೆಂಕಿ ಕೊಟ್ಟಿರ್. ಅಂಗ್ಡಿ ಪೂರ್ತಿ ಸುಟ್ಟ್ ಹೋಯ್ತ್. ಮುಲ್ಲಿಯಗೆ ಇದ್ದ್ ನಮ್ ಊರಗೇ ಹೀಂಗೆಲ್ಲ ಆತ್ತ್ ಅಂದೇಳಿ ಯಾರೂ ಎಣ್ಸ್‌ಕಂಡಿರಲ್ಲ. ಇನ್ನ್ ಪ್ಯಾಟಿ ಬದ್ಯಗೆ ಎಂತ ಆಯಿತ್ತೋ ಅಂದೇಳಿ ಸಮಾ ಸುದ್ದಿ ಇಲ್ಲ. ಬಸ್ಸ್ ಓಡುದ್ ಕೈದ್ ಆಪುಕೋಯಿ ಪೇಪರ್ ಸತೇ ಬತ್ತಿಲ್ಲ. ಶಾಲಿಗೆಲ್ಲ ಒಂದ್ ವಾರ ರಜಿ ಕೊಟ್ಟಿರ್ ಅಂದೇಳಿ ಟಿ.ವಿ. ವಾರ್ತೆಯಗೆ ಕೇಂಡದ್ ಕಂಡ್ ರಜಿ ಸಿಕ್ಕದ್ದಕ್ ಖುಷಿ ಪಡುಕೂ ಆಗ್ದಿದ್ದ್ ನಮನಿ ಹೆದ್ರಿಕಿ ಹುಟ್ಟಿ ಹೋಯಿತ್ತ್. ಹೆಚ್ಚು ಕಡ್ಮಿ ಒಂದ್ ವಾರ ಹೀಂಗೇ ನಡಿತ್. ಎಷ್ಟೋ ಗೂಡಂಗ್ಡಿ ಬೆಂಕಿಯಗೆ ಸುಟ್ಟ್ ಬೂದಿಯಾಯ್ತ್. ಎಷ್ಟೋ ಚೂರಿ ಹಾಕದ್, ಕಲ್ಲ್‌ ಬಿಸಾಡದ್, ಬೆಂಕಿ ಹಚ್ಚದ್ ಸುದ್ದಿ

ಒಟ್ರಾಶಿ ಇಡೀ ಕುಂದಾಪ್ರಕ್ಕೆ ಬೆಂಕಿ ಬಿದ್ದಂಗಾಯಿತ್ತ್. ಎಷ್ಟೋ ಜನ ಅವ್ರ್ ಹಗಿ ತೀರ್ಸ್‌ಕಂಡ್ರ್. ಅಲ್ಲಿನೊರಿಗೆ ಅಷ್ಟ್ ಸೇಲ್ ಇಲ್ದಿದ್ದ್ ಕುಂದಪ್ರಭ ಪೇಪರಿಗೆ ಏಕ್‌ದಂ ಡಿಮ್ಯಾಂಡ್. ಒಂದಕ್ಕೆರ್ಡ್ ರೇಟಿಗೆ ಮಾರಾಟ ಆಯ್ತ್. ಎಲ್ಲಾ ಗಲಾಟಿ ಮುಗ್ದ್ ತಣ್ಣಗಾರ್ ಮೇಲ್ ಸುದ್ದಿ ಹಗೂರ ಹೊರ್ಗ್ ಬಂತ್. ಹುಡ್ಗನ್ ಹೆಸ್ರ್ ಭಾಸ್ಕರ ಕೊಠಾರಿ ಅಂಬ್ರ್. ಅವ ಒಬ್ಳ್ ಸಾಯ್ಬ್ರ್ ಹುಡ್ಗಿನ ಲವ್ ಮಾಡ್ತಿದ್ದ ಅಂಬ್ರ್. ಹುಡ್ಗಿ ಮನ್ಯರಿಗ್ ಒಪ್ಗಿ ಇದ್ದಿತಂಬ್ರ್. ಅವ್ನ್ ಮನ್ಯರಿಗೆ ಒಪ್ಗಿ ಇರ್ಲ್ಲಿಲ್ಲ ಅಂಬ್ರ್. ಅಲ್ಲಲ್ಲ ಅವ್ನ್ ಮನ್ಯರ್ ಒಪ್ಪಿರಂಬ್ರ್. ಹುಡ್ಗಿ ಕಡ್ಯರದ್ದೇ ರಗ್ಳಿ ಅಂಬ್ರ್. ಅಂತೂ ಹೀಂಗೆ ಇದ್ರೆ ಮದಿ ಆಪುದ್ ಕಷ್ಟ ಅಂದೇಳಿ ಅವ್ನೇ ಕಿಡ್ನ್ಯಾಪ್ ಆದ್ ನಾಟ್ಕ ಮಾಡದ್ ಅಂಬ್ರ್… ಅಲ್ಲಲ್ಲ ಹುಡ್ಗಿ ಕಡ್ಯರೇ ಅವನ್ನ ಹುಗ್ಸಿ ಇಟ್ಟದಂಬ್ರ… ಯಾವ್ದನ್ ನಂಬ್ಕೋ ಬಿಡ್ಕೋ ಗೊತ್ತಿಲ್ಲ… ಇವತ್ತಿಗೂ… ಕತಿ ಎಂತದೇ ಇರ್ಲಿ… ಇದೆಲ್ಲಾ ಆರ್ ಮೇಲೆ ಮತ್ತ್ ಕುಂದಾಪ್ರದಗೆ ಹಿಂದೂಗಳ ಮಧ್ಯ ಸಾಯ್ಬ್ರ್ ಮಧ್ಯೆ ಮುಂಚಿನ ಆ ವಿಶ್ವಾಸ ಇವತ್ತಿಗೂ ವಾಪಾಸ್ ಬರಲ್ಲ. ಮೇಲಿಂದ್ ಮೇಲೆ ಎಲ್ಲಾ ಸಮಾ ಇರತ್. ಯಾವ್ದಾರೂ ಬದ್ಯಗೆ ಗಲಾಟಿ ಸುರುವಾದ್ ಸುದ್ದಿ ಗೊತ್ತಾರೆ, ಇಲ್ಲೂ ಕಿಡಿ ಹಾರುಕ್ ಸುರುವಾತ್ತ್. ಗಂಗೊಳ್ಳಿ, ಕಂಡ್ಲೂರು ಕುಂದಾಪುರದಗೆ ಇವತ್ತಿಗೂ ಬೂದಿಯೊಳ್ಗಿನ ಕೆಂಡವೇ ಇದ್

ಇಷ್ಟೆಲ್ಲಾ ಗಲಾಟಿ ಮುಗ್ದ್ ಆರ್ ಮೇಲೆ ಕುಂದಪ್ರಭದಗೆ ಒಂದ್ ಸುದ್ದಿ ಬಂತ್. ಭಾಸ್ಕರ ಕೊಠಾರಿ ಮತ್ತು ಮುನಾವರ್‌ಗೆ ಮದಿ ಅಂಬ್ರ್. ಮುನಾವರ್‌ಗೆ ಸ್ನೇಹಲತಾ(?) ಅಂದೇಳಿ ಪುನರ್‌ನಾಮ್ಕರ್ಣ ಆಯ್ತ್. ಅಂತೂ ಅಷ್ಟೆಲ್ಲಾ ರಾಮಾಯ್ಣ ಮಾಡ್ದ ಕತಿ ಹೀಂಗ್ ಮುಗಿತ್. ಕಡಿಕೆ ಎಲ್ಲ ಸುಖ್ದಂಗೆ ಇದ್ರ್…
ಇದ್ರಾ… ನೀವೆ ಆಲೋಚ್ನಿ ಮಾಡಿ ಹೇಳಿ…. ‘ಕಡಲ ತಡಿಯ ತಲ್ಲಣ’ ಪುಸ್ತ್ಕ ಓದುಕ್ ಸುರು ಮಾಡ್ರ್ ಕೂಡ್ಲೇ ಇದೆಲ್ಲ ಎಂತಕೋ ನೆನ್ಪ್ ಆಯ್ತ್… ಅದನ್ನ್ ಹಾಂಗೇ ನಿಮ್ಮತ್ರ ಹೇಳ್ಕ್ ಅನ್ಸಿ ಹಾಂಗೇ ಹೇಳಿದೆ… ಆಲೋಚ್ನಿ ಮಾಡುದ್-ಬಿಡುದ್ ನಿಮ್ಗೆ ಬಿಟ್ಟಿದೆ…


ಹಾಸ್ಯ ಬೆರ್ಸ್ ಮಜ್ಜಿಗಿಅಂದೇಳಿ ಒಂದ್ ಯಕ್ಷಗಾನದ್ ಎಂಪಿ3 ಇತ್ತ್. ಅದ್ರಗೆ ಪತ್ರಕರ್ತ ಬಸವರಾಜ್ ಶೆಟ್ಟಿಗಾರ್ರ್ ಬರದ್ದ್ ಒಂದ್ ಹಾಸ್ಯ ಪ್ರಸಂಗ ಮೇಸ್ತ್ರಿ ಮಾದಯ್ಯಅಂದೇಳಿ ಇತ್ತ್. ಆ ಪ್ರಸಂಗದಗೆ ಹಳ್ಳಾಡಿ ಜಯ್ರಾಮ ಶೆಟ್ರದ್ ಮೇಸ್ತ್ರಿ ಮಾದಯ್ಯನ ಪಾರ್ಟ್. ಅವ್ರ್ ಸುರಿಗೆ ಕುಂದಾಪ್ರ ಶಾಸ್ತ್ರಿ ಸರ್ಕಲ್ಲಗೆ ಬಂದ್ ಕೂತ್ಕಂಡ್ ಭಾಗ್ವತ್ರತ್ರ ಮಾತಾಡ್ತಾ ಒಂದ್ ಕತಿ ಹೇಳ್ತ್ರ್. ಆ ಕತಿ ಕೆಂಬ್ಕೆ ಒಂದ್ನಮನಿ ಗಮ್ಮತಿತ್ತ್. ನೀವೂ ಒಂಚೂರ್ ಕೇಣಿ…

 

ಇದ್ ಭಾರೀ ಹಿಂದಿನ್ ಕಾಲದ್ ಕತಿ. ದೇವ್ರ್ ಒಂದ್ಸಲಿ ಪ್ರಾಣಿಗಳನ್ನೆಲ್ಲ ಒಟ್ಟಾಯಿ ಬಪ್ಪುಕೆ ಹೇಳ್ರಂಬ್ರ. ಈ ಮನುಷ್ಯ ಸೈತ ಒಂಜಾತಿ ಪ್ರಾಣಿ ಅಲ್ದಾ.. ಆರೂ ಇವ್ರ್ ಜಾಪ್ ಬಿಡತ್ತಾ.. ಬೇರೆ ಪ್ರಾಣಿಗಳನ್ನೆಲ್ಲ ಕರ್ದಾಗ್ಳಿಕೆ ಹೋರೆ ನಮ್ಮ್ ಮರ್ಯಾದಿಗ್ ಕಡ್ಮಿ ಅಲ್ದಾ ಅಂದೇಳಿ ಸುರೀಕೆ ಮನುಷ್ಯರ್ ಹೋಯ್ಲೇ ಇಲ್ಲಾ ಅಂಬ್ರ್. ಪ್ರಾಣಿಗಳೆಲ್ಲಾ ಹೋರ್‌ಗತಿಲ್ ದೇವ್ರ್ ಹೇಳ್ರಂಬ್ರ್… ಬಪ್ಪುಕ್ ಹೇಳದ್ ಮತ್ತೆಂತಕ್ ಅಲ್ಲ. ಯಾವ್ ಯಾವ್ ಪ್ರಾಣಿಗೆ ಎಷ್ಟ್ ಎಷ್ಟ್ ಆಯುಷ್ಯ ಅಂದೇಳಿ ಹೇಳುಕೆ ಕರದ್ದ್‘. ಹಾಂಗೇ ಒಂದೊಂದ್ ಪ್ರಾಣಿಗೆ ಎಷ್ಟೆಷ್ಟ್ ವರ್ಷ ಅಂದೇಳಿ ದೇವ್ರ್ ಹೇಳ್ರಂಬ್ರ್. ಕತ್ತಿಗೆ ಒಂದ್ 60 ವರ್ಷ, ನಾಯಿಗೆ ಒಂದ್ 30 ವರ್ಷ, ಮಂಗನಿಗೆ ಒಂದ್ 30 ವರ್ಷ ಅಂದೇಳಿ ಎಲ್ಲಾ ಹಂಚ್ರಂಬ್ರ್. ಈ ಬದ್ಯಗೆ ಮನುಷ್ಯರ್ ಇದ್ರಲ್ದಾ… ಅವ್ರ್ ಕಡೀಕೆ ಇದೆಂಥ ಕಂಡೇ ಬಿಡ್ವ ಅಂದೇಳಿ ದೇವ್ರ್ ಬುಡಕ್ ಹೋರಂಬ್ರ್. ದೇವ್ರ್ ಹೇಳ್ರಂಬ್ರ… ನಾನ್ ಎಲ್ಲಾ ಪ್ರಾಣಿಗಳಿಗೆ ಆಯುಷ್ಯ ಹಂಚಿ ಆಯ್ತ್. ನೀವ್ ಬಪ್ ಸಮಿಗೆ ಭಾರೀ ತಡ ಆಯ್ತ್. ನಿಮ್ಗ್ ಉಳದ್ 30 ವರ್ಷ ಮಾತ್ರ.

ಇದನ್ನ್ ಕೇಂಡ್ ಮನುಷ್ಯರಿಗೆ ಜೀವ್ ಹಾರಿ ಹೋಯ್ತ್. ಸಮಾ ಬುದ್ಧಿ ಭಾಷಿ ಬತ್ತ್ ಅಂಬತಿಗೆ 10 ವರ್ಷ ಆಯಿ ಹೋಯಿರತ್. ಕಡಿಕೆ ಎ0ತಾರೂ ಕಲುದ್ರೊಳ್ಗೆ ಮತ್ತ್ ಹತ್ತ್ ಹೋತ್ತ್. ಇನ್ನ್ ಕಲ್ತ ಆಯಿ ಏನಾರೂ ಕೆಲ್ಸ ಮಾಡ್ಕ್ ಮಾಡ್ಕ್ ಅಂಬುದ್ರೊಳ್ಗೇ 30 ವರ್ಷ ಆತ್ತಲೆ. ಏ ದೇವ್ರೆ ಹೀಂಗಾರೆ ನಾವ್ ಜೀವನದಗೆ ಸುಖ ಪಡುದ್ ಎಂತ ಇತ್ತ್ ನೀವೇ ಒಂಚೂರ್ ಆಲೋಚ್ನಿ ಮಾಡಿ. 30 ವರ್ಷ ಏನೇನೂ ಸಾಕಾತಿಲ್ಲ…ಅಂದ್ರ್.

ಅವ್ರ್ ಇಷ್ಟ್ ಬೇಡತ್ ಕಂಡ್ ದೇವ್ರಿಗೂ ಪಾಪ ಅಂಮಗಾಯ್ತ್. ಹೋಯ್ಲಿ… ಕತ್ತಿಗೆ 60 ವರ್ಷ ಕೊಟ್ಟಿದೆ… ಅದ್ರಗೆ ನಿಮ್ಗ್ 30 ವರ್ಷ ತೆಗ್ದ್ ಕೊಡ್ತೆ ಸಾಕಲ್ದಾ ಅಂದೇಳಿ ಕೇಂಡ್ರ್. ಮನುಷ್ಯರ್ ಮತ್ ಆಲೋಚ್ನಿ ಮಾಡುಕ್ ಸುರು ಮಾಡ್ರ್. ಆರೂ ಸಾಕಾತಿಲ್ಲ ಅಂಮಗಾಯ್ತ್. ಇನ್ನೊಂಚೂರ್ ಜಾಸ್ತಿ ಮಾಡಿ ಅಂದೇಳಿ ಕೇಂಡ್ರ್. ಅದಕ್ಕೂ ದೇವ್ರ್ ಹೂಂ ಹಾಕ್ರ್. ಹೋಯ್ಲಿ ನಾಯಿಗ್ 30 ವರ್ಷ ಕೊಟ್ಟಿದೆ. ಅದ್ರಗೆ 20 ತೆಗ್ದ್ ನಿಮ್ಗ್ ಕೊಡ್ತೆ. ನಿಮ್ಗ್ ಅಲ್ಲಿಗ್ 80 ವರ್ಷ ಆಯುಷ್ಯ ಆಯ್ತ್ ಕಾಣಿ ಅಂದೇಳಿ ದೇವ್ರ್ ಹೇಳ್ರಂಬ್ರ್. ಮನಷ್ರ್ ಆಶಿ ಎಲ್ಲಿವರಿಗ್ ಕಾಣಿ. ಅದೂ ಸಾಕಾಯಲ್ಲ ಅಂದೇಳಿ ದೇವ್ರ್ ಹತ್ರ್ ಪಿರಿಪಿರಿ ಮಾಡುಕ್ ಶುರು ಮಾಡ್ರ್. ನಮ್ಗ್ ಒಂದ್ ನೂರ್ ವರ್ಷ ಬದ್ಕಕಮಗಿತ್ತ್. ಏನಾರೂ ಮಾಡಿ ಇನ್ನೊಂದ್ ಇಪ್ಪತ್ ಕೊಟ್ಟಿರ್ ಆತಿದ್ದಿತ್ ಅಂಬುಕ್ ಶುರು ಮಾಡ್ರ್. ದೇವ್ರಿಗ್ ಇವ್ರ್ ಕರ್ಕರಿ ಮುಗ್ದಿರ್ ಸಾಕಾಯಿತ್. ಹೋಯ್ಲಿ ಅತ್ಲಾಗೆ ಅಂದೇಳಿ ಮಂಗನಿಗ್ ಕೊಟ್ಟದ್ 20 ವರ್ಷ ತೆಗ್ದ್ ಒಟ್ಟ್ ನೂರ್ ವರ್ಷ ಆಯುಷ್ಯ ಮನುಷ್ಯರಿಗೆ ಕೊಟ್ರ್.

 

ನೀವ್ ಹೌದಾ ಸುಳ್ಳಾ ಕಾಣಿ ಬೇಕಾರೆ. ಈ ಮನುಷ್ಯರ್ 30 ವರ್ಷದಿಂದ 60 ವರ್ಷ ಆಪಲ್ಲಿವರಿಗೆ ದುಡುದ್ ಕಂಡರೆಲ್ಲ ಹೇಳ್ತ್ರ್…ಅಂವ ಏನ್ ಕೆಲ್ಸ ಮಾಡ್ತಾ ಮಾರಾಯಾ. ಗೇಯುದಂದ್ರೆ.. ಕತ್ತಿ ಗೇಯ್ದಂಗ್ ಗೇಯ್ತ ಕಾಣ್ ಅಂತ್ರ್. ಅದೆಂತಕ್ ಅಂದೇಳಿ ಮಾಡಿರಿ. ಕತ್ತಿದ್ 30 ವರ್ಷ ಬಂದದಕ್ಕೇ ಹಾಂಗ್ ಕತ್ತಿ ಕಣಗೆ ಗೇಯುದ್. 60 ವರ್ಷ ಆಪ್ ಸಮಿಗೆ ಕೆಲ್ಸ ಮಾಡು ಕಾಲ ಎಲ್ಲ ಮುಗ್ದ್ ಹೋಯಿರತ್. ಹೋದ್ದ್ ವರ್ಷ ಹೆಚ್ಚ್ ಉಳದ್ ಕಡ್ಮಿ. ಹಿಂದಿಂದೆಲ್ಲ ನೆನ್ಪ್ ಮಾಡ್ಕಂತ.. ಆ ಮಗ ಕೊಡ್ತ್ನಾ, ಈ ಮಗ್ಳ್ ಕರಿತ್ಲಾ… ಆ ಅಳಿಯ ಕೊಟ್ಟಿರ್ ಆತಿದ್ದಿತ್ ಅಂದೇಳಿ ಕಾಯುದೇ ಆತ್. ಎಂತಕಂತೇಳಿ ಮಾಡಿರಿ. ಅದ್ ನಾಯಿದ್ 20 ವರ್ಷ ಆಯುಷ್ಯ ತಕಂಡದ್ದಲ್ದಾ… ಹಾಂಗಾಯಿ ನಾಯಿ ಕಾದಂಗ್ ಕಾಯುದೇ ಆತ್ತ್. ಕಡೀಕಿದ್ 20 ವರ್ಷ ಥೇಟ್ ಮಂಗನೇ… ಉಡುಕ್ ಒಂದ್ ವಸ್ತ್ರ, ಉಂಬುಕ್ ಒಂದ್ಮುಷ್ಟಿ ಗಂಜಿ ಇದ್ರ್ ಸಾಕ್. ಮತ್ತೇನೂ ಬೇಕಾಯಿಲ್ಲ. ಬೋಡ್ ಬಾಯಿ ಮಾಡ್ಕಂಡ್ ಹಳ್ತೆಲ್ಲ ನೆನ್ಪ್ ಮಾಡ್ಕಂತ ಮಂಗನ್ ಕಣಗೆ ಆಡುದೇ ಸೈಯಲ್ದಾ?

ಹ್ಯಾಂಗಿತ್ತ್ ಕತಿ… ನಂಗ್ ಸಮ ಹೇಳುಕ್ ಬತ್ತಿಲ್ಲ… ಏನಿದ್ರೂ ಜಯ್ರಾಮ್ ಶೆಟ್ರ್ ಬಾಯಗೇ ಕೇಂಬುಕೆ ಚಂದ.


ಈ ಬ್ಲಾಗ್ ಬದಿಗೆ ಮಂಡಿ ಹಾಕಿ ಮನ್ಕಣ್ದೆ ಸುಮಾರ್ ದಿನ ಆಯ್ತ್. ಹಾಂಗಂದೇಳಿ ಬರುಕ್ ಪುರ್ಸೊತ್ ಇಲ್ಲ, ಬರುಕ್ ಮನ್ಸಿಲ್ಲ ಅಂದೇಳಿ ಅಲ್ಲ. ಹಾಂಗ್ ಕೇಂಡ್ರೆ ಈ ಬ್ಲಾಗಿಗೆ ಬರುಕೆ ನಂಗೂ ಮಸ್ತ್ ಖುಷಿಯೇ. ಆರೂ ಕಳ್ದ್ ತಿಂಗ್ಳ್ ಇಡೀ ಏನೋ ಒಂದ್ನಮನಿ ಉದಾಶಿನ ಹಿಡ್ದಂಗ್ ಆಯಿತ್. ಈಗ ಅದ್ನೆಲ್ಲ ಕೊಡ್ಕಿ ಹಾಕಿ ಬರುಕ್ ಕೂಕಂಡಿದೆ. ಇನ್ನ್ ಮೇಲೆ ಹೀಂಗೆಲ್ಲ ಹಾಂಟ್ ಹಾಕುದಿಲ್ಲ ಅಕಾ… ಸುಳ್ಳಾ-ಬದ್ಧವಾ ನೀವೇ ಕಾಣಿ ಬೇಕಾರೆ. ಈ ಬದಿಗೆಲ್ಲಾರೂ ನೀವ್ ನೀಕಿ ಕಂಡದ್ದೇ ಹೌದಾರೆ ಒಂದ್ ನಾಕ್ ಮಾತ್ ಹೇಳಿ ಮಾರಾಯ್ರೆ… ಇದ್ ಸಾಪಿತ್ತ್, ಇಲ್ಲಾ ಇದ ಚೂರೂ ಲಾಯ್ಕಿರಲ್ಲ, ಹೀಂಗ್ ಹೀಂಗ್ ಬರ್ದ್ರೆ ಒಳ್ಳೆದಿರತ್ತ್… ಅಂದೇಳಿ ಏನಾರೂ ಹೇಳ್ರೆ ನಂಗೂ ಬರುಕ್ ಒಂದ್ ಉಮೇದ್ ಬತ್ತ್. ಹೇಳ್ತ್ರಿ ಅಲ್ದಾ?
Cashew_-_sprout

cashew-sprout (3)

cashew-sprouts-250x250

ನೀವ್ ಏನೇ ಹೇಳಿ ಬೇಕಾರೆ.. ನಾವ ಸಣ್ಣಕಿಪ್ಪ ಸುರಿಗಿದ್ದ ದಿನದ್ ನೆನ್ಪಿನ ಚಂದ ಬೇರೆ ಯಾವ್ದಕ್ ಸತೇ ಬತ್ತಿಲ್ಲ. ಡಿಸೆಂಬರ್-ಜನವರಿ ಸುರಿಗೆ ಹಗೂರ ಹೂ ಬಿಡುಕೆ ಸುರುವಾಪ ಗ್ವಾಯ್ ಮರದಗೆ ಫೆಬ್ರವರಿ ಬಪ್ಪತಿಗೆ ಒಂದೊಂದೇ ಮಿಜ್ರ್ ಬಿಡುಕ್ ಶುರುವಾತ್. ಕೈಯೆಲ್ಲ ಸೊನಿಯಾತ್ ಬ್ಯಾಡ ಅಂದ್ರೂ ಕೇಣ್ದೆ ಮಿಜ್ರ್ ಎಲ್ಲಾ ಕೊಯ್ಕಂಡ್ ಬಂದ್, ಕತ್ತಿಯೋ, ಬ್ಲೇಡೋ ಹಿಡ್ಕಂಡ್ ಮಿಜ್ರನ್ನ ಬಗ್ತಿ ಮಾಡಿ, ಅದ್ರ್ ಒಳ್ಗಿನ ಬೆಳಿ ಬೆಳಿ ಚಿರ್ಲ್(ತಿರುಳು) ತಿಂಬುದನ್ನ್ ಎಣ್ಸಕಂಡ್ರೆ ಬಾಯಗೆ ನೀರ್ ಒಡುಕೆ ಶುರುವಾತ್ತ್. ಹೆಸ್ರ್‌ಬ್ಯಾಳಿ ಪಾಯ್ಸಕ್ಕೆ ಇದನ್ನ ಹಾಕ್ರಂತೂ ಭಾರಿ ಲಾಯ್ಕಿರತ್ತ್. ಕಡಿಗೆ ಗ್ವಾಯ್ ಹಣ್ನೆಲ್ಲಾ ಬಿಳ್ದ್ ಹೋಯಿ ನಾಕ್ ಮಳಿ ಬಿದ್ರ್ ಕೂಡ್ಲೆ ಮಕ್ಳೆಲ್ಲಾ ಗ್ವಾಯ್ ಮರದ ಅಡಿಯೇ. ಎಂತಕಂದ್ರೆ ಬಿದ್ದ್ ಹುಟ್ಟದ್ ಗ್ವಾಯ್ ಬೀಜ ಬೆದಿ ಬಂದಿರತ್ತಲ್ದಾ.. ಅದ್ ದೊಡ್ಡದಾಯ್ಕಿದ್ರೇ ಹುಡ್ಕಿ ಅದರ ಎಸಳು ಹಿಡ್ಕಂಡ್ ತಿಂತಾ ಇದ್ರೆ… ಹ್ಯಾಂಗೆ ಹೇಳುದ್ ಅದ್ರ್ ರುಚಿ… ಆರೆ ಅದೆಲ್ಲಾರೂ ಚೂರು ಬೆಳದ್ರೆ ಅದ್ರ ರುಚಿ ಪೂರಾ ಹೋಯಿ ಒಂದ್ನಮನಿ ರಬ್ಬರ್ ಜಗ್ದಾಂಗ್ ಆತ್ತ್

images

ಆಗೆಲ್ಲಾ ಜೋರ್ ಮಳಿ ಬಂದ್ರ್ ಸಾಕ್.. ಶಾಲಿಗೆ ರಜಿ… ಯಾಕಂದ್ರೆ ಹೊಳಿ, ತೋಡ್, ಹಳ್ಳ ದಾಟ್ಕಂಡ್, ಸಂಕದ ಮೇಲೆ ನೆಡ್ಕಂಡ್ ಬಪ್ಪರಿಗೆ ಮನಿಗೆ ಹೋಪುಕೆ ಕಷ್ಟ ಆಪ್ಕಾಗ ಅಂದೇಳಿ. ನಾನ ಸಿದ್ಧಾಪ್ರದಗೆ ಎಂಟನೇ ಕ್ಲಾಸಿಗೆ ಹೋಪ್ ಸಮಿಗೆ ಒಂದಿನ ಜೋರ್ ಮಳಿ ಬಂದ್ ಶಾಲಿಗ್ ಬೆಳಿಗ್ಗೆಯೆ ರಜಿ ಕೊಟ್ಟಿದ್ರ್. ಮನಿಗ್ ಹೋಪ ಅಂದ್ರೆ ಹತ್ತ್ ಗಂಟಿ ಬಸ್ಸ್ ಹೋಯಾಯಿತ್ತ್. ಇನ್ನ್ ಬಸ್ ಇಪ್ದ್ ಹನ್ನೆರ್ಡ್ ಗಂಟಿಗೇ ಸೈ. ಸರಿ ಎಂತ ಮಾಡುದ್ ಅಂದೇಳಿ ನಂ ಬದಿಗೆ ಹೋಪ ಮಕ್ಳೆಲ್ಲಾ ಒಟ್ಟಾಯಿ ಮಾತಾಡ್ಕಂಡ್… ನೆಡ್ಕಂಡ್ ಹೋಪ ಅಂದೇಳಿ ತೀರ್ಮಾನ ಆಯ್ತ್. ಸಿದ್ಧಾಪ್ರದಿಂದ ನಮ್ಮ್ ಮನಿಗೆ ಸುಮಾರ್ ಹನ್ನೊಂದ್-ಹನ್ನೆರ್ಡ್ ಕಿಲೋಮೀಟ್ರ್ ಆತ್ತ್. ಆರೆ ಆಗ್ಳಿಕೆ ಅದೆಲ್ಲ ಒಂದ್ ಲೆಕ್ಕವಾ? ಸರಿ ಹೊರ್ಟೇ ಬಿಡ್ತ್. ನಮ್ಗ್ ಶಾಲಿ ಬಿಡುಕೂ ಮಳಿ ಕೈದ್ ಆಪುಕೂ ಸಮಾ ಆಯ್ತ್. ಆರೂ ನಾಕೆಂಟ್ ಹುಂಡ್ ಬೀಳ್ತಾ ಇದ್ದಿತ್. ಹೀಂಗೆ ಪಟ್ಟಾಂಗ ಹೊಡಿತಾ ನೆಡ್ಕಂಡ್ ಹೋಪತಿಗೆ , ದಾರಿ ಬದ್ಯಗೆ ಒಂದ್ ಬದಿ ಉಜರ್ ಬತ್ತಾ ಇದ್ದಿತ್ತ್. ಅಲ್ಲೇ ಬುತ್ತಿ ಊಟ ಮುಗ್ಸಿ, ಬುತ್ತಿ ತೊಳ್ಕಂಡ್ ಮತ್ತ ನೆಡುಕ್ ಶುರು ಮಾಡದ್ದೇ… ಮಾತಾಡ್ತಾ ಮಾತಾಡ್ತಾ ಕಮಲಶಿಲೆ ಪಾರಿ ಹತ್ತದ್ದೇ ಗೊತ್ತಾಯಲ್ಲ. ಪಾರಿ ಹತ್ತಿ ಆರ್ ಮೇಲೆ ನಮ್ಮ್ ಮಂಗನಾಟ ಶುರುವಾಯ್ತ್. ಎಲ್ಲ್ ನೆಲ್ಲಿಮರ, ಚಾಪಿ ಮರ, ಚೂರಿ ಹಣ್ಣಿನ ಗಿಡ, ನೇರ್ಲ್ ಮರ ಅಂದೇಳಿ ಹುಡ್ಕಂಡ್ ಸಿಕ್ಕದ್ದನ್ನೆಲ್ಲಾ ಗುಳುಂ ಸ್ವಾಹಾ ಮಾಡಿ, ಚಡ್ಡಿ ಕಿಸಿಗಿಷ್ಟ್, ಬುತ್ತಿ ಒಳ್ಗ್ ಇಷ್ಟ್ ಅಂದೇಳಿ ತುಂಬಿ ಮನಿಗ್ ಬಪ್ಪತಿಗೆ ಮೂರ್ ಗಂಟಿ ಬಸ್ಸಿನ ಹಾರ್ನ್ ಕೇಂತಾ ಇದ್ದಿತ್ತ್. ಅಷ್ಟ್ ನೆಡದ್ರೂ ಸಾಕಾಯ್ತ್ ಅಂತ ಅನ್ಸಲೇ ಇಲ್ಲ.

ಹೀಂಗೇ ಹೇಳುಕ್ ಹೊರಟ್ರೆ ಈ ನಮನೀದ್ ಸುಮಾರ್ ಕತಿ ಇತ್ತ್. ಎಲ್ಲಾ ಇವತ್ತೇ ಹೇಳ್ರೆ ನಾಳಿಗೂ ಒಂಚೂರ್ ಬ್ಯಾಡ್ದಾ? ನಿಮ್ದೂ ಹೀಂಗಿಂದೆಂತಾರೂ ನೆನ್ಪ್ ಇದ್ರೆ ಹೇಳಿ ಕಾಂಬ 🙂


ಯಾವ್ದಾರೂ ಬೇಕ್ ಕಾಣಿ, ಈ ಸಂತಿ ದಿನ ಬಸ್ಸಗೆ ಹೋಪುದ್ ಮಾತ್ರ ಎಷ್ಟ್ ಕೊಟ್ರೂ ಬ್ಯಾಡ್ದೆ. ಅದ್ರಗೂ ಜೋರ ಸೆಕಿ ಇಪ್ಪ್ ಸಮಿಗೆ ಹೋಯ್ಕಾರೆ ಸಾಕ್‌ಬೇಕ್ ಅಂಬಂಗಾತ್. ಬುಧ್ವಾರ ಸಿದ್ಧಾಪ್ರದಗೆ ಸಂತಿ. ಹಾಂಗಂತೇಳಿ ಎಂತಾರೂ ಕೆಲ್ಸ ಇದ್ರೆ ಈ ವಾರ ಎಲ್ಲ ಕಾಂತ ಕೂಕಂಬುಕೆ ಆತ್ತಾ? ಅದೂ ದಿನ ಕೇಂಡರೊಟ್ಟಿಗ್ ಆ ದಿನ್‌ವೇ ಎಂತಾರೂ ಕೆಲ್ಸ ಬಂದ್ರೆ ಎಂತ ಮಾಡುಕಾತ್ತ್? ಒಟ್ಟ್ ಹೋಯ್ದಿರ್ ಉಪಾಯಿಲ್ಲ.

 

ನಾನ್ ಶಾಲಿಗ್ ಹೋಪತಿಗೆ ಬುಧ್ವಾರ ಬಂದ್ರ್ ಸಾಕ್. ಯಾಕಾರೂ ಬಂತೋ ಅಂತ್ ಅನ್ಸ್‌ತಿದ್ದಿತ್. ಬೆಳಿಗ್ಗೆ ಹ್ಯಾಂಗಿದ್ರೂ ಬೇಗ್ ಹೋಪುದಲ್ದಾ. ಹಾಂಗಾಯ್ ಬಚಾವ್. ಆರೆ ಸಾಂಯ್ಕಾಲ ಬಪ್ಪ್ ಕತಿ ಕೇಂಡ್ರ್ ಮಾತ್ರ ಸುಕ ಇಲ್ಲ. ಈ ಮಾಯ್ನ್‌ಕಾಯಿ ಉಪ್ಪಿಗ್ ಹಾಕ್ತ್ರ್ ಅಲ್ದಾ..ಥೇಟ್ ಅದೇ ನಮ್ನಿ. ಅದ್ರಗೂ ಬೆನ್ ಮೇಲೆ ಶಾಲಿ ಚೀಲ ಬೇರೆ. ಅದನ್ನ್ ಹೊತ್‌ಕಂಡ್ ಆ ಜನ್ರ್ ಎಡ್ಕಿಯಲ್ ನುರ್ಕಂತ ಒಳ್ಗ್ ಹೋಪ್ರ್ ಒಳ್ಗ್ ಮೈಯೆಲ್ಲ ಹೊಡಿಯಾದಂಗಾತ್. ಅರವತ್ತ್ ಜನ ಹಿಡೂ ಬಸ್ಸಿಗೆ ನೂರಿಪ್ಪತ್ ಜನ ತುಂಬ್ಸರೂ, ಇನ್ನೂ ನಾಕ್ ಜನ ಹಿಡ್ಸ್‌ಲಕ್ಕಲಾ ಅಂಬ್ ಉಮೇದಿ ಬಸ್ಸಿನರಿಗೆ. ಬಸ್ಸ್ ಹತ್ತುದ್ ಹ್ಯಾಂಗಿದ್ರೂ ಹತ್ತಿಯಾಯ್ತ್. ಆರೆ ಒಳ್ಗೆ ಉಸ್ರಾಡ್ತೆ ಅಂದ್ರೂ ಗಾಳಿ ಆಡುದಿಲ್ಲ. ಬೆವ್ರ್ ವಾಸ್ನಿ, ಸಂತಿಯಿಂದ ಎಲ್ಲ ಹಿಡ್ಕಂಡ್ ಬಂದ್ ಹೊಳಿ ಬಾಳಿಕಾಯಿ ವಾಸ್ನಿ ಎಲ್ಲಾ ಸೇರಿ ಗುಂ ಅಂತಿರತ್ತ್. ಕೆಳಗಿಪ್ಪತ್ತಿಗೆ ಹ್ವಾಯ್..ಒಂಚೂರ್ ಜಾಗ ಬಿಡಿನಿ ನಾ ಒಂಚೂರ್ ಮೇಲ್ ಬತ್ನೆ.. ಅಂದೇಳಿ ಮೇಲ್ ಹತ್‌ದರೆಲ್ಲ ಈಗ …ಪ್ಲೇಟ್ ಬದ್ಲ್ ಮಾಡಿ.. ಎಂತಾ ತುಂಬ್‌ತ್ರ್ ಮಾರಾಯ್ರೆ ಹಂಗಾರೆ..ಈ ಬಸ್ಸ್ ಬಿಡುದೇ ಇಲ್ಯಾ ಕಾಂತ್ ಅಂದ್ ಗೊಣಗೊಣ ಅಂದ್ರೂ ಬಸ್ಸಿನ್ ಕಂಡೆಕ್ಟ್ರಿಗೆ , ಏಜೆಂಟ್ರಿಗೆ ಎಡ್ದಷ್ಟ್ ಜನ ತುಂಬ್ಸುವರಿಗೆ ಮನ್ಸಿಗ್ ಸಮ್ದಾನ ಇಲ್ಲ. ಹಿಂದೋಯ್ನಿ, ಮುಂದೋಯ್ನಿ, ಮೇಲ್ ಹತ್ತಿ… ಅಂದೇಳಿ ನಿಂತ್ ಜಾಗದಗೂ ನಿಲ್ಲುಕ್ ಬಿಡ್ದೆ ಅವ್ರ್ ಜನ ತುಂಬುವಷ್ಟೊತ್ತಿಗೆ ಇಲ್ಲ್ ಒಳ್ಗ್ ಇದ್ದರಿಗೆ ಒಂದ್ ಬೆವ್ರ್ ಸ್ನಾನ ಆಯಿರತ್

 

ಅಂತೂ ಒಳ್ಗ್ ಸಾಸ್ಮಿ ಕಾಳ್ ಹಾಕುಕೂ ಚಡಿ ಇಲ್ಲ ಅಂತ್ ಗ್ಯಾರಂಟಿ ಆರ್ ಮೇಲೆ ಟಾಪ್ ಹತ್ತುವರನ್ನೆಲ್ಲಾ ಹರ್ಸಿ, ಅವ್ರಿಗೆಲ್ಲಾ ಟಿಕೇಟ್ ಕೊಟ್ಟ್, ಬಾಗ್ಲಗೂ ಒಂದ್ ಇಪ್ಪತ್ತೈದ್ ಜನ ನೇಲುಕ್ ಶುರುವಾರ್ ಮೇಲೆ ಅಂತೂ ಬಸ್ಸ್ ಬಿಡ್ತ್ ಅಂದೇಳಿ ಆಯ್ತ್. ಬಸ್ಸ್ ಹೊರ್‌ಟ್ರಾರೂ ಸುಕ ಇತ್ತ? ನಾಕ್ ನಾಕ್ ಮಾರಿಗೊಂದೊಂದ್ ಸ್ಟಾಪ್. ಎಲ್ಲೋ ಮಧ್ಯ ಸೇರ್ಕಂಡರ್ ದಾರ್ಯಗಿದ್ದರದ್ದೆಲ್ಲ ಕಾಲ್ ಮೆಟ್ಟಿ, ಅವ್ರನ್ ದೂಡ್ಕಂಡ್ ಬಾಗ್ಲಿಗೆ ಬಪ್ಪತಿಗೆ ಬಸ್ ಹೊರ್ಟಾಯಿರತ್. ಹೋಯ್…ಹೋಯ್ ನಿಲ್ಸಿನಿ.. ಇಳುಕಿತ್ತೇ .. ಅಂತ್ ಕೂಗಿ, ಕೈ ತಟ್ಟಿ ಬಸ್ಸ್ ನಿಲ್ಸಿ, ಅವ್ರನ್ ಇಳ್ಸಿ ಇನ್ನೇನ್ ಪಷ್ಟ್ ಗೇರಿಂದ ಸೆಕೆಂಡ್ ಗೇರಿಗ್ ಬಿದ್ದಿರತ್ ಅಷ್ಟೇ… ಮತ್ತೊಂದ್ ಸ್ಟಾಪ್ ಬಂದಾಯ್ತ್. ಅಂತೂ ಹಣಿಮಕ್ಕಿ, ಆಜ್ರಿ ಮೂರ್‌ಕೈ, ತಾರಿಕೋಡ್ಲ್, ಮುತ್ತಾಬೇರ್, ಕೆಳಂಜಿ ಮೋರಿ, ಸೊಸೈಟಿ, ರಾಂ ಭಟ್ರ್ ಅಂಗ್ಡಿ, ಎಡಮೊಗೆ ದಾರಿ, ಕಮಲಶಿಲೆ ದೇವಸ್ಥಾನ ಅಂದೇಳಿ ನಾಲ್ಕ್ ಕಿಲೋಮೀಟ್ರಿಗೆ ಹನ್ನೆರ್ಡ್ ಹದಿಮೂರ್ ಸ್ಟಾಪ್. ಅರೂ ಜನ ಇಳ್ದ್ ಇಳ್ದ್ ಒಂಚೂರ್ ಗಾಳಿ ಆಡುವಂಗೆ ಆಯಿರತ್ತ್. ಕಮ್ಲಶಿಲೆ ಏರ್ ಹತ್ತುಕ್ ಎಡಿದೋ ಅಂದೇಳಿ ಒರ್ಲತಾ ಎಕ್ಸ್‌ಟ್ರಾ ಗೇರಗೆ ಹಗೂರ ನಕ್ಕುಳ ಹರ್ದಂಗೆ ಹತ್ತಿ ಮೇಲ್ ಬಂದ್ ಮೇಲೆ ಅಯ್ಯಬ್ಬ ಅನ್ಸತ್ತ್. ಅಲ್ಲಿಂದ್ ಬಸ್ಸು ಮತ್ತೆ ಎಳ್‌ಬೇರ್ ದಾರಿ, ನಡ್‌ಮದ್ರಿ ದಾರಿ, ಸಾಯ್ಬರಂಗಡಿ, ಬಾಚುಗುಳಿ ಅಂತ ಮತ್ತೆ ಕಟ್ಟೆ ಪೂಜೆ ಮಾಡಿ ನಮ್ ಮನಿ ಹತ್ರ ಇಳು ಸುರಿಗೆ ಮೈಕೈ ಪೂರಾ ನೋವ್, ಅಂಗಿ ಚಡ್ಡಿ ಎಲ್ಲಾ ಬೇವ್ರ್ ವಾಸ್ನಿ. ಹೊಟ್ಟಿ ತಾಳ ಹಾಕ್ತಾ ಇದ್ರೂ, ನಾಕ್ ಚಂಬ್ ನೀರ್ ಮೈಮೇಲ್ ಬೀಳ್ದೆ ಎಂತ ತಿಂಬ್ಕೂ ಎಡಿಯ. ಅಂತೂ ಒಂದ್ ಸಂತಿ ದಿನದ ಬಸ್ಸಿನ ರಗ್ಳಿ ಮುಗೀತಲ್ಲ ಅಂತ್ ಸುಧಾರ್ಸ್‌ಕಂಬಷ್ಟೊತ್ತಿಗೆ ಮತ್ತೊಂದ್ ಬುಧ್ವಾರ ಬಂದಾಯಿರತ್ತ್.

 


 

ಕುಂದಾಪ್ರದ್ ಕಾರ್ಬಾರ್ ಎಲ್ಲಾ ತಿಳ್ಕಣ್ಕ್ ಅಂಬಗಿದ್ರೆ, ಕುಂದಾಪ್ರದ್ದೇ ಪೇಪರ್ ಓದ್ಕ್ ಅಲ್ದಾ? ಕುಂದಾಪ್ರ್‌ದ್ ಸುದ್ದಿ ವಾರ ವಾರವೂ ಕಾಣ್ಕಂಬಗಿದ್ರೆ ಈ ಲಿಂಕ್ ಕ್ಲಿಕ್ ಮಾಡಿ <http://kundaprabha.com&gt;

ವಾರದ್ ಬಿಸಿಬಿಸಿ ಸುದ್ದಿ ಒಟ್ಟಿಗೆ ಧಾರವಾಹಿ , ಕಥೆ , ಅಂಕಣ , ರಂಗೋಲಿ ಎಲ್ಲಾನು ಕಾಂಬುಕ್ ಸಿಕ್ಕತ್. ಪುರ್ಸೊತ್ತಾದ್ರೆ ಒಂದ್ ಗಳ್ಗಿ ಹೋಯಿ ಬಿಸಿ ಬಿಸಿ ಸುದ್ದಿ ಓದ್ಕಂಡ್ ಬನಿ.

 


ಮಳ್ಗಾಲ ಬಂದ್ರ್ ಸಾಕ್ ಕಾಣಿ. ನಂಗಂತೂ ಎಲ್ಲಿಲ್ಲದ್ ಖುಷಿ. ಮೂರೊತ್ತೂ ಬಿಡ್ದೆ ಮಳಿ ಹೊಡುವತಿಗೆ ಮನಿ ಒಳ್ಗ್ ಕೂಕಂಡ್ ಕಾಂಬುದೇ ಒಂದ್ ಚೆಂದ. ಸಣ್ಣಕಿಪ್ಪತ್ತಿಗೆ ಚೂರ್ ಮಳಿ ಬಿಟ್ರೂ ಸಾಕ್, ಗುಡ್ಡಿ ಬದಿಯಿಂದ್ ಹರ್ಕಂಡ್ ಬಪ್ಪ್ ನೀರಿಗೆ ಕಟ್ ಕಟ್ಟಿ, ಮಣ್ಣಂಗ್ ಆಡುದ್, ಹೊಳಿಯಗೆ ನೆರಿ ಬಂದ್ರೆ ನೀರ್ ಎಷ್ಟ್ ಏರಿತ್ ಅಂದೇಳಿ ಕಾಂಬುಕೆ ಮನೆಯರದ್ ಪಿರಿಪಿರಿ ಮಧ್ಯವೇ ಕೊಡಿ ಹಿಡ್ಕಂಡ್ ಹೋಯಿ ಕಾಂತಾ ಕೂಕಂತಿದ್ದದ್ದ್… ಎಲ್ಲಾ ನಿನ್ನೆ ಮೊನ್ನೆ ಅಂಬಂಗಿತ್ತ್. ಘಾಟಿಯಗೆ ಜೋರ್ ಮಳಿ ಬಂದ್ರೆ ದೊಡ್ ದೊಡ್ ಮರನ್ ತುಂಡ್, ಯಾರ್ದಾರೂ ತ್ವಾಟಕ್ ನೀರ್ ಹೊಗ್ರೆ ಬಳ್ಕಂಡ್ ಬತ್ತಿದ್ದ ಇಡಿಡೀ ಅಡ್ಕಿ ಮರ, ಜೋರ್ ಮಳಿ ಬಂದ್ರೆ ಶಾಲಿಗ್ ರಜಿ ಸಿಕ್ತಿದ್ದದ್… ಎಲ್ಲಾ ಕಣ್ಣಿಗ್ ಕಟ್ದಂಗ್ ಇತ್ತ್. ಒಲಿದಂಡಿ ಬದ್ಯಗೆ ಚಳಿ ಕಾಯ್ಸತಾ, ಹಲ್ಸಿನ್‌ಕಾಯಿ ಹಪ್ಳ ಸುಟ್ಕಂಡ್ ತಿಂತಿದ್ದದ್ ಇನ್ನೂ ಹಲ್ಲಿಗ್ ಹಿಡ್ಕಂಡಿತ್ ಅಂಬಂಗಿತ್ತ್. ಈಗ ಬೆಂಗ್ಳೂರಿಗ್ ಬಂದ್ ಮೇಲೆ ಊರಗಿನ್ ಮಳ್ಗಾಲ ನೆನ್ಪ್ ಮಾಡ್ಕಂತಾ ರಸ್ತಿ ಮೇಲ್ ಚರಂಡಿ ನೀರ್ ತೋಡ್ ಕಣಂಗ್ ಹರ್ದ್ ಹೋಪುದ್ ಕಾಂತಾ ಕೂಕಣ್ಕ್ ಅಷ್ಟೆ J

 

ಆರೂ ಬೆಂಗ್ಳೂರಿಗ್ ಬಂದ್ ಮೇಲೆ ಮಳ್ಗಾಲ ಬಂದ್ರೆ ಖುಷಿ ಆಪುಕೆ ಒಂದ್ ವಿಷಯ ಇತ್ತೆ. ಎಂಥ ಅಂದ್ರೆ ಊರಗೆ ಮಳಿ ನಾಕ್ ಹನಿ ಬಿದ್ರ್ ಕೂಡ್ಲೆ ಆಟದ ಮ್ಯಾಳ್ದರ್ ಪೆಟ್ಗಿ ಎಲ್ಲಾ ಬಸ್ ಹತ್ಕಂಡ್ ಬೆಂಗ್ಳೂರಿಗೆ ಬತ್ತಲ್ದಾ.. ಹಾಂಗಾಯಿ ಜುಲೈ ತಿಂಗ್ಳಿಂದ 3 ತಿಂಗ್ಳ್ ವರಿಗೆ ಆಟ ಕಾಂಬುಕೆ ಅಡ್ದಿ ಇಲ್ಲ. ಪೆರ್ಡೂರ್, ಸಾಲಿಗ್ರಾಮದರ್ 2-3 ಸರ್ತಿ ಬಂದ್ ಹೋತ್ರಲ್ದೆ, ಮಂದರ್ತಿ, ಮಾರಣಕಟ್ಟಿ ಮ್ಯಾಳದವ್ರ್ ಸತೆ ಅತಿಥಿ ಕಲಾವಿದ್ರನ್ನೆಲ್ಲ ಕರ್ಸಿ ಆಟ ಆಡ್ತ್ರ್. ಅಲ್ದೆ ಯಾಜಿ, ಕಣ್ಣಿಮನೆ ಇವ್ರ್ ಗ್ರೂಪಿನರದ್ದೂ ಆಟ ಇರತ್ತ್. ಒಟ್ಟ್ರಾಸಿ 3 ತಿಂಗ್ಳ್ ಆಟ ಕಾಂಬರಿಗೆ ಹಬ್ಬವೇ ಸೈ. ಪೌರಾಣಿಕ ಪ್ರಸಂಗ, ಬರು ವರ್ಷದ್ ತಿರ್ಗಾಟದ್ ಹೊಸ ಪ್ರಸಂಗ ಎಲ್ಲಾ ಇರತ್ತ್. ರಾತ್ರಿ ನಿದ್ರಿ ಬಿಡುಕೆ ಎಡ್ದರೆ ಎಷ್ಟ್ ಆಟ ಬೇಕಾರೂ ಕಾಣ್ಲಕ್. ರವೀಂದ್ರ ಕಲಾಕ್ಷೇತ್ರ, ಪುರಭವನದ್ ಬುಡ್ದಗ್ ರಾತ್ರಿ ಹತ್ ಗಂಟಿ ಸುರಿಗೆ ಹೋರೆ ಇನ್ನ್ ಚಂಡಿ ಮದ್ಲಿ ಶಬ್ದ ಕೆಮಿಗ್ ಬೀಳತ್ತ್.

 

ಎಲ್ಲಾ ಮ್ಯಾಳ್ದರೂ ಬತ್ತ್ರಾದ್ರೂ ನಂಗೆ ಪೆರ್ಡೂರ್ ಮ್ಯಾಳದ್ ಆಟ ಕಾಂಬುಕೆ ಬಾರೀ ಲಾಯ್ಕ್ ಆತ್ತ್. ಧಾರೇಶ್ವರ್‌ರು, ಸುರೇಶ್ ಶೆಟ್ರ ಭಾಗ್ವತ್ಗಿ, ತೀರ್ಥಳ್ಳಿ ಗೋಪಾಲಾಚಾರ್ರ ಕೊಣ್ಕಿ- ಮಾತ್, ರಮೇಶ್ ಭಂಡಾರಿ, ರವೀಂದ್ರ ಇವ್ರ ಹಾಸಿಗಾರ್ಕಿ, ಶಂಕ್ರ್ ಹೆಗ್ಡೆ ಸ್ತ್ರೀ ವೇಷ ಇದೆಲ್ಲ ಕಾಂಬುಕೆ ಎರ್ಡ್ ಕಣ್ನಿದ್ರೂ ಸಾಕಾತಿಲ್ಲ..ಕೇಂಬುಕೆ ಎರ್ಡ್ ಕೆಮಿ ಸಾಲ್ದೇ ಸಾಲ್ದ್. ನಂಗಂತೂ ಪೆರ್ಡೂರ್‌ನವ್ರದ್ ಎಂಟತ್ ಆಟ ಆರೂ ಕಾಣ್ದೇ ಇದ್ರೆ ಸಮಾಧಾನ ಇಲ್ಲ. ಅದೂ ಅಲ್ದೆ ಲಗ್ತ್ ಆಯಿ ಶನಿವಾರ ರಾತ್ರಿಗೆ ಒಳ್ಳೊಳ್ಳೆ ಪ್ರಸಂಗ ಎಲ್ಲ ಇಪ್ಪುಕೋಯಿ ಆಟ ಕಂಡ್ಕಂಡ್ ಆದಿತ್ಯವಾರ ನಿದ್ರಿ ತೆಗುಕೆ ಅಡ್ಡಿಲ್ಲ. ಕೆಲವ್ ಸರ್ತಿ ಅತಿಥಿ ಕಲಾವಿದ್ರಾಯಿ ಕಣ್ಣಿಮನಿ ಬಪ್ಪ್‌ದೂ ಇರತ್ತ್. ಅವ್ರ ಬಂದ್ರೆ ಆಟಕ್ ಇನ್ನೂ ಕಳಿ ಕಟ್ಟತ್. ಸಾಲಿಗ್ರಾಮದರದ್ದೂ ಆಟ ಒಂದೆರ್ಡ್ ಸರ್ತಿ ಕಾಂಬುಕೆ ಹೂತ್ನಾರೂ ನನ್ ಮನ್ಸಿಗ್ಯಾಕೊ ಅವ್ರ್ ಆಟ ಪೆರ್ಡೂರ್‌ನವ್ರಷ್ಟ್ ಹಿಡ್ಸುದಿಲ್ಲ ಕಾಣಿ.

 

ಬಪ್ ಜುಲೈ ೬ ನೆ ತಾರಿಕಿಂದ ಪೆರ್ಡೂರ್‌ನರ್ ಈ ಸರ್ತಿದ್ ಬೆಂಗ್ಳೂರಿನ್ ಮೊದಲನೆ ತಿರ್ಗಾಟ ಶುರು ಮಾಡ್ತ್ರಂಬ್ರ್. ಈ ಸರ್ತಿ ಒಂದ್ ನಾಕಾರು ಆಟ ಕಾಣ್ಕ್ ಅಂದೇಳಿ ಇತ್ತ್. ಆಟ ಕಾಂಬುಕೆ ನೀವೂ ಬತ್ರಿ ಅಲ್ದಾ… ನಂಗೆ ಯೇಗ್ಳೇಗ್ಳಿಕೆ ಯಾವ ಆಟ ಇತ್ತ್ ಅಂದೇಳಿ ಗೊತ್ತಾರೆ ನಾ ನಿಮ್ಗೆ ಬರ್ದ್ ತಿಳ್‌ಸ್ತೆ ಅಕಾ? ಹಂಗಾರೆ ಆಟದ್ ಗರದಂಗೆ ಸಿಕ್ವಾ?

 

ವಿಜಯ್‌ರಾಜ್ ಕನ್ನಂತ್