ಸುಮ್ನ್ ಆಯ್ಕಣಿ ಅಮ್ಮ ….ಕೊಡುದ್ ನೂರ್ ರೂಪಾಯ್ ಸಂಬ್ಳ… ಮಾಡೂಕ್ ನಂಗ್-ಎಡುದಿಲ್ಲ

Posted: ಜುಲೈ 23, 2011 in ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಗಮ್ಮತ್ ಇತ್ತ್ ಕಾಣಿ..., kundaapra kannada, kundapra, kundapra kannada, kundapur, kundapur kannada, kundapura, kundapura kannada
ಟ್ಯಾಗ್ ಗಳು:, , , ,

ರಿಷಿ ಸಿನಿಮಾದ “ನಾನು ಒತ್ತಾರೆ ಎದ್ಬಿಟ್ಟು…” ಹಾಡನ್ನು ಕುಂದಾಪ್ರ ಬದಿ ಕೆಲ್ಸದ್ ಹೆಣ್ಣ್ ಮತ್ತ್ ಮನಿ ಯಜ್ಮಾನ್ತಿ ಮಾತಾಡುವಂಗೆ ಬರ್ದ್ರೆ ಹ್ಯಾನ್ಗಿರತ್ತ್ ಕಾಣಿ…

ಈ ಪದ್ಯ ಕೇಂತಾ ಓದ್ರೆ ಇನ್ನೂ ಲಾಯ್ಕಿರತ್ತ್.. ಅದ್ಕೆ ಪದ್ಯದ ವಿಡಿಯೋ ಇಲ್ಲೇ ಪೋಸ್ಟಿನ ತುದಿಯಲ್ ಹಾಕಿದೆ ಕಾಣಿ….

ನಾಳೆ ಬೆಳ್ಮುಚ್ ಬೇಗೆದ್ದು..ಬಚ್ಲ ಒಲಿಗೆ ಕಿಚ್-ಒಟ್ಟಿ..ಗಂಟಿ ಎಬ್ಬಿ ಬರ್ಕ್ ಹೆಣೆ…
ಚೂರ್ ಚಾ ಇದ್ರೆ ಕುಡ್ಕಂಡ್ ..ಆಂಗ್ಳಕ್ಕೆ ನೀರ್ ಹಾಕಿ… ರಂಗೋಲಿ ಹಾಕ್ಕ್ ಹೆಣೆ…
ಹಾಡಿ ಬದಿಗೋಯಿ ಗುಡ್ಸ್ಕಂಡ್ …ದರ್ಲಿ ಒಟ್ಟ್-ಮಾಡ್ಕಂಡ್… ಗೆದ್ದಿಗ್ ಸುಡ್ಮಣ್ಣ್ ಹಾಕ್ಕ್ .. ಹೆಣೆ…
ಬೇಗ ಪಾತ್ರ ತೊಳ್ದಿಟ್ಟು…ಮನಿ ಗುಡ್ಸಿ ಒರ್ಸಿಟ್ಟು…ಬಟ್ಟಿ ವಗುಕೆ ಹೋಯ್ಕ್ ಹೆಣೆ…

ಸುಮ್ನ್ ಆಯ್ಕಣಿ ಅಮ್ಮ ….ಕೊಡುದ್ ನೂರ್ ರೂಪಾಯ್ ಸಂಬ್ಳ… ಮಾಡೂಕ್ ನಂಗ್-ಎಡುದಿಲ್ಲ…ಹೋಯ್…ಹೋಯ್

ಗಂಟಿಗ್ ಅಕ್ಕಚ್ ಕೊಟ್ಟೀಕಿ.. ಹಾಲ್ ಕರ್ದ್ ಕ್ಯಾನಿಗ್ ಹಾಕಿ…ಡೈರಿಗೆ ಕೊಟ್ಟ್ ಬರ್ಕ್ ಹೆಣೆ…
ಗುಡ್ಡೀಗ್ ಹೋಯ್ ಸೊಪ್ಪ್ ಕೊಯ್ದ್… ಹೊರಿ ಕಟ್ಟಿ ಹೊತ್ತಾಕಿ…. ಹಟ್ಟಿಗ್ ಸೊಪ್ಪ್ ಹಾಕ್ಕ್ ಹೆಣೆ…
ದೆನಿನ್ ಶೆಗ್ಣಿ ಎಲ್ಲ ಬಾಚಿಕಿ… ಆಂಗ್ಳಕ್ಕೆ ನೀರ್ ಹಾಕಿ… ಶೆಗ್ಣಿ ಹಾಕಿ ಸಾರ್ಸ್ಕ್ ಹೆಣೆ…
ಗೊಬ್ರ್ ಹೆಡ್ಗಿ ತಕ್ಕಂಡ್…. ಗೊಬ್ರ ಗುಂಡಿ ಗೊಬ್ರ ತೆಗ್ದ್…ತೆಂಗಿನ್ ಮರ್ನ್ ಬುಡ್ಕ್ ಹಾಕ್ಕ್ ಹೆಣೆ..

ಸುಮ್ನ್ ಆಯ್ಕಣಿ ಅಮ್ಮ ….ಕೊಡುದ್ ನೂರ್ ರೂಪಾಯ್ ಸಂಬ್ಳ… ಮಾಡೂಕ್ ನಂಗ್-ಎಡುದಿಲ್ಲ…ಹೋಯ್…ಹೋಯ್

ದೊಡ್ಡ್ ಕೊಡ್ಪಾನ ಹಿಡ್ಕಂಡ್… ಬಾಮಿ ಕಟ್ಟಿಗೆ ಹೋಯಿ, ಬಚ್ಲ್ ಹರಿಗೆ ನೀರ್ ಹಾಕ್ಕ್ ಹೆಣೆ,
ಹರಿ ತುಂಬ್ಸಿ ಆರ್ ಮೇಲೆ, ಹೂವಿನ್ ಗುತ್ತಿ ಬುಡಕ್ಕೆ, ನಾಕ್ ಚಂಬ್ ನೀರ್ ಹಾಕ್ಕ್ ಹೆಣೆ…
ಗಂಜಿ ಒಂದ್ಮುಷ್ಟಿ ಉಂಡ್‌ಕಂಡ್, ಸಣ್ಣ್ ಕೊಡ್ರಿ ಹಿಡ್ಕಂಡ್, ಸೌದಿ ಕೊಳ್ಳಿ ಒಡಿಕ್ ಹೆಣೆ..
ಎಲ್ಲಾ ಕೆಲ್ಸಾನೂ ಮಗ್ಸ್‌ಕಂಡ್…ಹೆಂಗಸ್ರ್-ಒಟ್ಟಿಗೆ ಸೇರ್‌ಕಂಡ್ ಗೆದ್ದಿ ನೆಟ್ಟಿಗೆ ಹೋಯ್ಕ್ ಹೆಣೆ…

ಸುಮ್ನ್ ಆಯ್ಕಣಿ ಅಮ್ಮ ….ಕೊಡುದ್ ನೂರ್ ರೂಪಾಯ್ ಸಂಬ್ಳ… ಮಾಡೂಕ್ ನಂಗ್-ಎಡುದಿಲ್ಲ…ಹೋಯ್…ಹೋಯ್

————————————————————————————–

ಮೂಲ ಹಾಡ್ ಬೇಕಿದ್ರೆ ಇಲ್ಲಿತ್ತ್ ಕಾಣಿ…
(ಕೃಪೆ:http://www.kannadalyrics.com)
ರಿಷಿ (2005) – ನಾನು ಒತ್ತಾರೆ.

ನಾನು ಒತ್ತಾರೆ ಎದ್ಬುಟ್ಟು ನಿನ್ ಮಾರೆ ನೋಡ್ಬುಟ್ಟು ಕೈ ಜೋಡ್ಸಿ ನಿಲ್ತೀನ್ ಕಣೆ
ಬೇಗ ಬೇಡ್ ಕಾಫಿ ತಂದ್ಬುಟ್ಟು ನಿನ್ ಕಾಲ ಒತ್ಬುಟ್ಟು ಬಗ್ ಬಗ್ಸಿ ಕೊಡ್ತೀನ್ ಕಣೆ
ಕಾಫಿ ಸೀಗಿಲ್ಲ ಅಂತ ಒದ್ಬುಟ್ರೆ ನಿನ್ ಬೆಳ್ಳ ಕಪ್ಪಲ್ಲಿ ಅದ್ತೀನ್ ಕಣೆ
ಈ ಸಕ್ರೆಯ ಗೊಂಬೆಗೆ ಸಕ್ಕರೆ ಯಾಕಂತ ಹಲ್ ಗಿಂಜಿ ನಿಲ್ತೀನ್ ಕಣೆ

I love you love you da I really love you da I truely love you da ಹೇ ಹೇ

ನಿಂಗೆ ಒಳ್ಳೆಣ್ಣೆ ಹಚ್ಬುಟ್ಟು ಮೈಯೆಲ್ಲಾ ನೀವ್ಬುಟ್ಟು ನಿಟಿಕೆ ತೆಗಿತೀನ್ ಕಣೆ
ಜಳಕ ಮಾಡ್ಸುತ್ತಾ ಮಾಡ್ಸುತ್ತಾ ಬೆಳ್ ಬೆಳ್ಳೆ ಬೆನ್ನನ್ನ ಮುದ್ದಾಡ್ತಾ ತಿಕ್ತೀನ್ ಕಣೆ
ಕೀರು ಉಪ್ಪಿಟ್ಟು ಒಬ್ಬಟ್ಟು ನಿಪ್ಪಿಟ್ಟು ತಂಬಿಟ್ಟು ಎಲ್ಲಾ ನಾ ಮಾಡ್ತೀನ್ ಕಣೆ
ನಿನ್ ಮಡ್ಲಲ್ಲಿ ಕೂರ್ಸಕಂಡು ಸೊಂಟಾನ ತಬ್ಗಂಡು ತುತ್ತುತ್ತು ತಿನ್ಸ್ತೀನಿ ಕಣೆ

I love you love you da I really love you da I truely love you da ಹೇ ಹೇ

ಅಹಾ ಸಂತೆಗೆ ಕರಕೊಂಡು ಸೀರೆನ್ನ ಕೊಂಡ್ ಕ್ಕೊಂಡು ನಿಂಗುಡ್ಸಿ ನೋಡ್ತೀನ್ ಕಣೆ
ಅಲ್ಲಿ ತೊಟ್ಲಲ್ಲಿ ಕೂತ್ಕಂಡು ಮಂಡಕ್ಕಿ ತಿಂದ್ಕಂಡು ಎತ್ಕಂಡೆ ಬತ್ತೀನ್ ಕಣೆ
ಆಹಾ ಬೆಳದಿಂಗಳ್ ರಾತ್ರೇಲಿ ಮುಂಜಾನೆ ಜೋಕಾಲಿ ಅಂಗ್ಳಾನೆ ಮಂಜಿನ್ ಕೋಣೆ
ಇಂಥಾ ಮುಂಗೋಪ ಬಿಟ್ಬುಟ್ಟು ಇನ್ನಾರೊ ನಂಬುಟ್ಟು ಬಾಬಾರೆ ನನ್ನ ಜಾಣೆ
I love you love you da I really love you da I truely love you da ಹೂ ಹೂ

ಟಿಪ್ಪಣಿಗಳು
  1. Subhashchndra Shetty ಹೇಳುತ್ತಾರೆ:

    Ha ha ha Bhala sapith marre

  2. shashijois ಹೇಳುತ್ತಾರೆ:

    ಕೊಡುದ್ ನೂರು ರುಪಾಯಿ ………….ಕೆಲ್ಸ ಮಾತ್ರ ಮಸ್ತ್ ಇತ್ತಲ್ಲ ಮರ್ರೆ ಹ ಹ ಹ

ನಿಮ್ಮ ಟಿಪ್ಪಣಿ ಬರೆಯಿರಿ