ರೊಟ್ಟಿ ಜಾರಿ ತುಪ್ಪದಗ್ ಬಿದ್ದಾಂಗ್ ಆಯ್ತ್… ಹುಡ್ಕತಿದ್ದ ಬಳ್ಳಿಯೇ ಕಾಲಿಗೆ ಸಿಕ್ಕಾಂಗ್ ಆಯ್ತ್… ಹೀಂಗೆ ಎಂತ ಬೇಕಾರು ಅನ್ಕಣ್ಲಕ್ಕ್…

ಇವತ್ತ್ ರವೀಂದ್ರ ಕಲಾಕ್ಷೇತ್ರದಗೆ ನೆಡಿತಿಪ್ಪ ಪುಸ್ತಕ ಪ್ರದರ್ಶನಕ್ಕ್ ಒಂದ್ ಗಳ್ಗಿ ಹೋಯ್ ಬಪ್ಪ ಅಂತ ಹೋಯಿ ಬಂದೆ. ಪ್ರತಿ ಸರ್ತಿ ಅರಮನೆ ಮೈದಾನದಗೆ ನೆಡುವ ಪುಸ್ತಕ ಪ್ರದರ್ಶನಕ್ಕೆ ಹೋತಿದ್ದಿದೆ. ಈ ವರ್ಷ ಅಲ್ಲಿಗ್ ಹೋಪ್ಕ್ ಆಯಲ್ಲ. ಬೆಂಗ್ಳೂರಗೆ ಸಾಹಿತ್ಯ ಸಮ್ಮೇಳನ ಆದಲ್ಲ್ ಹೋದ್ದೆ ಕೊನೆ. ಅದ್ರ ಮೇಲೆ ಅಂಕಿತ ಪುಸ್ತಕಕ್ಕೆ ಒಂದೊಂದ್ ಸಲ ಹೋದ್ದ್ ಬಿಟ್ರೆ ಪುಸ್ತಕ ಪ್ರದರ್ಶನಕ್ಕೆ ಯಾವ್ದಕ್ಕೂ ಹೋಯಿರ್ಲಿಲ್ಲ. ಹೋದದಕ್ಕ್ ಎರ್ಡ್ ಎರ್ಡ್ ಲಾಭ ಆಯ್ತ್. ಒಂದ್ ಒಳ್ಳೇ ಪುಸ್ತಕ ಸಿಕ್ತ್. ಇನ್ನೊಂದ್ ಸುಮಾರ್ ದಿನದಿಂದ ಎಂತದೂ ಬರೀಲಿಲ್ಲ ಅಂಬ ಪಾಪಪ್ರಜ್ಞೆ ಕಳ್ಕಂಡ್ ನನ್ನ ಕೊಂಗಾಟದ ಬ್ಲಾಗಿಗೆ ಬರುಕ್ ಒಂದ್ ವಿಷ್ಯ ಸಿಕ್ದಾಂಗ್ ಆಯ್ತ್ ಇವತ್ತ್ ಹ್ಯಾಂಗಿದ್ರೂ ಶನಿವಾರ. ಮಾಡುಕ್ ಎಂತ ಕೆಲ್ಸ ಇಲ್ಲ. ಹಾಂಗಾಯ್ ಹೋಯ್ ಬಪ್ಪ್ ಮನ್ಸ್ ಮಾಡದ್ದ್. ಪುಸ್ತಕ ಪ್ರದರ್ಶನಕ್ಕ್ ನಾ ಹೋಪ್ದಂದ್ರ್ ನನ್ ಕಿಸಿಗ್ ಒಂದಿಷ್ಟ್ ಕತ್ರಿ ಂತ ಲೆಕ್ಕವೇ… ಆದ್ರೆ ಬೇರೆ ಎಂತಕೋ ಖರ್ಚ್ ಮಾಡಿದಾಂಗೆ ಪುಸ್ತಕಕ್ಕ್ ದುಡ್ಡ್ ಕರ್ಚ್ ಮಾಡುಕ್ ನಂಗೆ ಬೇಜಾರಂಬ್ದೇ ಇಲ್ಲ. ಹೋದ್ದಕ್ಕ್ ಒಂದಿಷ್ಟ್ ಪುಸ್ತಕ ತಕಂಡ್ ಹಾಂಗೇ ಐ.ಬಿ.ಎಚ್. ಪ್ರಕಾಶನದ ಸ್ಟಾಲಿಗ್ ಬಂದೆ. ಕುಂದಾಪ್ರ ಕನ್ನಡ ಬ್ಲಾಗ್ ಬರುವವನಿಗೆ ಅಲ್ಲಿ ಕುಂದಗನ್ನಡ ಗಾದೆಗಳು ಅಂಬ ಪುಸ್ತಕ ಸಿಕ್ದಾಗ್ಳಿಕೆ ಆದ ಖುಷಿನ ಹ್ಯಾಂಗ್ ಹೇಳುದೋ ಗೊತ್ತಾತಿಲ್ಲ. ಕುಂದಾಪ್ರ ಕನ್ನಡದ ನಾನ್ನೂರಾ ಅರವತ್ತು ಗಾದೆ. ಪ್ರತೀ ಗಾದೆಗೂ ಅರ್ಥ ಸಹಿತ ವಿವರಣೆ… ಇನ್ನೂರೈವತ್ತ್ ಪುಟದ ಪುಸ್ತಕ ಡಿಸ್ಕೌಂಟ್ ಸೇರಿ ಇನ್ನೂರ ಇಪ್ಪತ್ತೈದಕ್ಕೆ ಸಿಕ್ರೆ ಅದಕ್ಕಿಂತ ಹಬ್ಬ ಬೇಕಾ…
ಆ ಪುಸ್ತಕದ ಒಂದು ಗಾದೆ ಅದ್ರ ಅರ್ಥ ಸಹಿತ ನಿಮ್ಮ ಖುಷಿಗೆ… ಅದ್ರಗೆ ಅರ್ಥ ಎಲ್ಲ ಗ್ರಾಂಥಿಕ ಕನ್ನಡದಗೆ ಕೊಟ್ಟಿರ್ (ಗ್ರಾಂಥಿಕ ಕನ್ನಡ ಅಂಬುದಕ್ಕೆ ಕೆಲವರ್ ಶುದ್ಧ ಕನ್ನಡ ಅಂತ್ರ್… ಹಾಂಗೆ ಅಂದ ಒಬ್ಬೆ ಒಬ್ರತ್ರೂ ಜಗಳ ಆಡದೇ ಬಿಟ್ಟದ್ದಿಲ್ಲ..:-) ) ಅದನ್ನ ನಾನ್ ಕುಂದಾಪ್ರ ಕನ್ನಡದಗೆ ಬರ್ದಿದೆ…

ಗಾದೆ: ಕೊಂದ್ ಪಾಪ ತಿಂದೇ ಪರಿಹಾರ

ನಾ ಈ ಗಾದೆನೆ ಆರ್ಸ್ಕಂಬ್ಕ್ ಒಂದ್ ಕಾರಣ ಇತ್ತ್. ಇದಕ್ಕೆ ರೂಢಿಮಾತಗೆ ನಾನ್ ಕೇಂಡಿದ್ದ್ ಅರ್ಥವೇ ಬೇರೆ. ಪ್ರಾಣಿ-ಪಕ್ಷಿನ ಕೊಂದ್ರೆ ಬಪ್ಪ ಪಾಪ ಅವನ್ನ ತಿಂದ್ ಕೂಡ್ಲೆ ಪರಿಹಾರ ಆತ್ತ್ ಅಂಬ ಅರ್ಥದಗೆ ಹೇಳ್ತ್ರ್ ಎಲ್ಲ. ಆದ್ರೆ ಇದನ್ನ ಓದಿದ ಮೇಲೆ ನಂಗ್ ಗೊತ್ತಾದ್ದ್ ಇದ್ರ ಅರ್ಥ ಬೇರೆ ಅಂದೇಳಿ. ಕೊಲ್ಲುದು ಮಹಾಪಾಪ. ಆ ಪಾಪವನ್ನು ಅನುಭವಿಸಿಯೇ (ತಿಂದೇ) ಅದಕ್ಕೆ ಪರಿಹಾರ ಅಂತ ಅರ್ಥ

ನಿಮ್ಗೆ ಗೊತ್ತಿಪ್ಪ ಕುಂದಾಪ್ರ ಕನ್ನಡ ಗಾದೆ ಇದ್ರೆ ಹೇಳಿ. ಅದನ್ನ ಎಲ್ಲರೂ ಓದಿ ಖುಷಿ ಪಡ್ಲಿ

 

Advertisements
ಟಿಪ್ಪಣಿಗಳು
 1. Manjunath Hegde ಹೇಳುತ್ತಾರೆ:

  Hoy Kannantre etlag hoydri kambuke ilyapa bega bariri marre

 2. Amaravanthe ಹೇಳುತ್ತಾರೆ:

  ಹೊತ್ ಯಾಕ್ ಹ್ವಾತಿಲ್ಲ…ಎತ್ ಯಾಕ್ ನೆಡಿತಿಲ್ಲ…

  ಮನೆ ಮಜ್ಜಿಗೆ ತಕಂಡ್, ಮರನ್ ಕಟ್ಟಿಯಗ್ ಕುಡ್ವರ್.

  ಕಲ್ತದ್ ಹೆಚ್ಚಾಯ್ತ್ …ಕಾಲ್ ಮ್ಯಾಲಾಯ್ತ್.

  ಕೊಡುದ್ ಮೂರ್ ಕಾಸ್…ಕ್ವಾಣಿ ತುಂಬಾ ಹಾಸ್.

  ಬೇರ್ ಬಲ್ಲದರ್ ಹತ್ರ ಎಲೆ ತೋರ್ಸುದ್

  ತಲೆ ಹತ್ಕಂಡ್ ಬುಡ ಕಡುದ್

  ಆಳ್ ಮಾಡದ್ ಹಾಳ್ …ಮಗ ಮಾಡದ್ ಮದ್ಯಮ…ತಾನ್ ಮಾಡದ್ ಉತ್ತಮ.

  ಇಪ್ಪತ್ತಕ್ ಯಜಮಾನ್ಕಿ ಸಿಕ್ಕುಕಾಗ…ಎಪ್ಪತ್ತಕ್ ಕೆಮ್ಮು ಸುರುವಾಪ್ಕಾಗ…

 3. amrathshetty ಹೇಳುತ್ತಾರೆ:

  laik bardiri.., hinge baritiri..:-)

 4. shashijois ಹೇಳುತ್ತಾರೆ:

  ಅದಕ್ಕೆ ನಾನು ಕೈ-ಕಾಲು ಇಪ್ಪುದನ್ನು ತಿನ್ತಿಲ್ಲ ಹ ಹ ಹ ……..
  ಕುಂದ ಗಾದೆ ಬರೆದವಳು ನನ್ನತ್ತೆ ……

 5. wildlifeguru69 ಹೇಳುತ್ತಾರೆ:

  ಎಲ್ಲಕ್ಕಿಂತ ನಿಮ್ಮ ಬಗ್ಗೆ ಇಷ್ಟ ಆಪದ ಎಂತ ಆಂದ್ರ ನಮ್ಮ ಕುಂದಾಪ್ರ ಕನ್ನಡದಲ್ಲ್ ಬರಿತ್ರ್ಯಲ ಅದ…

 6. Ravi Adiga ಹೇಳುತ್ತಾರೆ:

  ಪಧಾರ್ಥ ಮಾಡಿ ತಿಂದ್ರೆ ಪಾಪ ಬತ್ತಿಲ್ಲ ಅನ್ಕಂಡೆ ಸಮಾ ಹಂದಿ ತುಕ್ಡಿ ತಕಂಬವ್ರ್ ಇದ್ರ್ ಮರ್ರೆ ಅವ್ರಿಗೆಲ್ಲ ನಾವ್ ಹೊಯ್ಕ ಪ್ರಾಣಿಗಳನ್ನೆಲ್ಲ ಸುಮ್ನೆ ಕೊಲ್ಲುಕಾಗ ಅಂದಾಗಳಿಕ್ ಹಿಂಗೇ ಗತ್ತಿನಗ್ ಅಂತ್ರ್ ಮರ್ರೆ ಕೊಂದ್ ಪಾಪ ತಿಂದ್ ಪರಿಹಾರ ಅನ್ಕ, ಅದ್ರಗು ಭಟ್ರ್ ಬಗಿಯರ್ ಗೆದ್ದಿ ಬದಿಗ್ ಹಂದಿ ಬಂದ್ ಸಾಗೊಳ್ಳಿ ಹಾಳ್ ಮಾಡ್ರು ಹಂದಿ ಸುದ್ದಿಗ್ ಹ್ವಾಪ್ಕಾಗ ಅಂಬ್ದ್ ಕೆಲವ್ರ್, ಪಾಪ ಯಾವ್ದ ಅಂದೇಳಿಯೆ ಗೊತ್ತಿಲ್ಲ ಪಾಪ………:-):-)

 7. MMaravanthe ಹೇಳುತ್ತಾರೆ:

  ತುಂಬಾ ದಿನಕ್ಕೆ ಇವತ್ತ ಬರ್ದಿರಿ, ಖುಷಿಗೆ ಕಿಚ್ಚಿಡುಕೆ (ಮಮಕಾರದಿಂದ)ಗಾದಿಯೇ ಹಂಬ್ಲಾತಿಲ್ಲ.
  ಹ್ವಾಯಿ! ಹೀಂಗೆ ಬರಿತಿರಿನಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s