ಹೋಟ್ಲು ಕ್ಯಾಂಟೀನಗೆ ಚಾತಿಂಡಿ ಊಟ ಮಾಡುವರಿಗೆ ಕುಂದಾಪ್ರ ಕನ್ನಡದ ಅಣಕ. ‘ಪರಮಾತ್ಮ’ ಚಿತ್ರದ ‘ಕತ್ಲಲ್ಲಿ ಕರಡೀಗೆ… ಜಾಮೂನು ತಿನಿಸೋಕೆ…’ ಪದ್ಯ ಹೀಂಗಾಯಿತ್ ಕಾಣಿ – ‘ಹೋಟ್ಲಂಗೆ ಬೆಳ್ಗತಿಗೆ… ಚಾ-ತಿಂಡಿ ಮಾಡುಕೆ… ಯಾವತ್ತೂ ಹೋಪ್ಕಾಗ ರೀ…’ 🙂

ಹೋಟ್ಲಂಗೆ ಬೆಳ್ಗತಿಗೆ… ಚಾ-ತಿಂಡಿ ಮಾಡುಕೆ… ಏಗ್ಳೀಕೂ ಹೋಪ್ಕಾಗ ರೀ… ಹ್ವಾ… ಆ… ಆ…
ಅತ್ಲಾಯಿ ದುಡ್ಡ್ ಹಾಳ್… ಇತ್ಲಾಯಿ ಹೊಟ್ಟಿ ಹಾಳ್… ಏಗ್ಳೀಕೂ ಹೋಪ್ಕಾಗ ರೀ… ಹ್ವಾ… ಆ… ಆ…

ಹೊಸ ಅಡಿಗೆ ಮನ್ಯಾರೆ… ಕಾಣ್ಲಕ್ಕ್ ಏನಂತ್ರಿ
ಹಳಿ ಅಡಗಿ ಮನಿಯಾದ್ರೆ… ತಿಂದದ್ದೆಲ್ಲಾ ಕಾರ್ಕಂತ್ರಿ
ಮನೆಯಂಗೆ ತಿಂಡಿ ತಿಂದ್… ಲಾಯ್ಕಂಗಿರಿ…
ಇನ್ಮಾತ್ರ ಹೋಟ್ಲ್ ತಿಂಡಿಗ್… ದುಡ್ಡ್-ಹಾಕ್ಬೆಡಿ… ಹ್ವಾ… ಆ… ಆ…

ಅತ್ಲಾಯಿ ದುಡ್ಡ್ ಹಾಳ್… ಇತ್ಲಾಯಿ ಹೊಟ್ಟಿ ಹಾಳ್… ಏಗ್ಳೀಕೂ ಹೋಪ್ಕಾಗ ರೀ… ಹ್ವಾ… ಆ… ಆ…
ಹೋಟ್ಲಂಗೆ ಬೆಳ್ಗತಿಗೆ… ಚಾ-ತಿಂಡಿ ಮಾಡುಕೆ… ಏಗ್ಳೀಕೂ ಹೋಪ್ಕಾಗ ರೀ… ಹ್ವಾ… ಆ… ಆ…

ಹೋಟಲವ್ರ್ ತಿಂಡಿಯಂಗೆ… ಎಂತಾ ಇತ್ತ್
ತಿಳ್ಕಂಬ್ಕೆ ತಾಕತ್ತ್… ನಮಗೆಲ್ಲಿತ್ತ್?
ಸೋಡವ ಹಾಕ್ದಿದ್ದ್… ಹೊಟ್ಲಂಬ್ದೇ ಇಲ್ಲ

ಚಿತ್ರಾನ್ನ ಮಾಡ್ತ್ರಂಬ್ರು… ಅನ್ನ ಉಳ್ದ್ರೆ
ಬಿಸಾಡುಕ್ ಆತಿಲ್ಲ… ದುಡ್-ಕೊಟ್ಟದ್ದೇ
ಡಾಲ್ದಾನ್ನೇ ಹಾಕುದು… ಘೀ-ಸ್ಮೆಲ್ಲೇ ಇಲ್ಲ

ಕುಂ…ದಾಪ್ರ ಹೋಟ್ಲಂಗೆ… ಒಂಚೂರು ಕಮ್ಮಿ
ಎಲ್….ಹೋರು… ಸೋಡ ಮಾತ್ರ….ಹಾಕ್ತ್ರಂಬ್ರು ಕಾಣಿ
ಹೋಟ್ಲಂಗೆ ತಿಂದ್ಕಂಡು… ಹೊಟ್ಟಿಉರೀ…
ಬಾಯ್ಮುಚ್ಕಂಡ್… ಬಿಲ್ಕೊಟ್… ಬತ್ತಾಇರಿ… ಹ್ವಾ… ಆ… ಆ…

ಹೋಟ್ಲಂಗೆ ಬೆಳ್ಗತಿಗೆ… ಚಾ-ತಿಂಡಿ ಮಾಡುಕೆ… ಏಗ್ಳೀಕೂ ಹೋಪ್ಕಾಗ ರೀ… ಹ್ವಾ… ಆ… ಆ…
ಅತ್ಲಾಯಿ ದುಡ್ಡ್ ಹಾಳ್… ಇತ್ಲಾಯಿ ಹೊಟ್ಟಿ ಹಾಳ್… ಏಗ್ಳೀಕೂ ಹೋಪ್ಕಾಗ ರೀ… ಹ್ವಾ… ಆ… ಆ…

ಯಾರಾರು ಚಾ ಕುಡ್ಸ್ರೆ… ಕುಡುಕ್ಹೋಯ್ಬೆಡಿ
ಕುಡ್ದ್ರ್ ಸೈತಾ ಬಿಲ್ಮಾತ್ರ… ಕೊಡುಕೋಯ್ಬೇಡಿ
ಹೊಟ್ಲಂಗೆ ಸೋಂಪು… ತಿಂಬ್-ಕಾಗ ಮರ್ರೆ

ಹಶುವಾದ್ರೆ ಒಂಚೂರ್… ತಡ್ಕಂಬಿಡಿ
ಮನ್ಯಂಗೇ ಊಟ ಮಾಡಿರೆ… ಒಳ್ಳೇದ್ ಬಿಡಿ
ಹೋಟಲಿಗೆ ದುಡ್ಡು… ಹಾಕುಕಾಗ ಕಾಣಿ

ಹೋ… ಟ್ಲಂಗೆ ರುಚಿಯಾತ್… ಆ ಪೊಕ್ಕ್ ತಿಂಡಿ
ತಿಂ…ದಾರ ಮೇಲಾಪ್ದ್ ದುಡ್ ದಂಡ ಕಾಣಿ
ಯೇಗ್ಳೀಕು ತಿಂಬುಕಾಗ ಹೋಟ್ಲಂಗೇರೀ….
ಅಪ್ರೂಪಕ್ ಒಂದ್ಸರ್ತಿ ಹೋಯ್ಲಕ್ಕ್ ರೀ

ಹೋಟ್ಲಂಗೆ ಬೆಳ್ಗತಿಗೆ… ಚಾ-ತಿಂಡಿ ಮಾಡುಕೆ… ಏಗ್ಳೀಕೂ ಹೋಪ್ಕಾಗ ರೀ… ಹ್ವಾ… ಆ… ಆ…
ಬಾಕಿ ಸಮಚಾರ… ಎಂತದೂ ಕಾಂತಿಲ್ಯಲೇ… ಮತ್ ಸಿಕ್ವಾ ಹಾಂಗಾರೆ ಹ್ವಾಯ್… .. ಹ್ವಾ… ಆ… ಆ…

ಮೂಲ ಹಾಡು: ‘ಪರಮಾತ್ಮ’ ಚಿತ್ರದ ‘ಕತ್ಲಲ್ಲಿ ಕರಡೀಗೆ… ಜಾಮೂನು ತಿನಿಸೋಕೆ… ಯಾವತ್ತೂ ಹೋಗ್ಬಾರ್ದು ರೀ…’
ಕೃಪೆ: kannadalyrics.com

ಕತ್ಲಲ್ಲಿ ಕರಡೀಗೆ… ಜಾಮೂನು ತಿನಿಸೋಕೆ… ಯಾವತ್ತೂ ಹೋಗ್ಬಾರ್ದು ರೀ… ಆ… ಆ… ಆ…
ಅತ್ಲಾಗೆ ಆ ಹುಡುಗಿ… ಇತ್ಲಾಗೆ ಈ ಹುಡುಗಿ… ಯಾವತ್ತೂ ಇರ್ಬಾರ್ದು ರೀ… ಆ… ಆ… ಆ…

ಹೊಸ ಹುಡುಗಿ ಕೈಯಲ್ಲಿ… ಕೆಂಪಾದ ಗೋರಂಟಿ
ಹಳೆ ಗೆಳತಿ ಕೆಮ್ಮಿದರೆ… ಪ್ರಳಯಾನೇ ಗ್ಯಾರಂಟಿ
ಒಬ್ಳನ್ನೇ ಲವ್ ಮಾಡಿ ಚೆನ್ನಾಗಿರಿ…
ಇನ್ನೊಬ್ಳ ಫೋನ್ ನಂಬರ್ ಇಟ್ಕೊಂಡಿರಿ… ಆ… ಆ… ಆ…

ಅತ್ಲಾಗೆ ಆ ಹುಡುಗಿ… ಇತ್ಲಾಗೆ ಈ ಹುಡುಗಿ… ಯಾವತ್ತೂ ಇರ್ಬಾರ್ದು ರೀ… ಆ… ಆ… ಆ…
ಕತ್ಲಲ್ಲಿ ಕರಡೀಗೆ… ಜಾಮೂನು ತಿನಿಸೋಕೆ… ಯಾವತ್ತೂ ಹೋಗ್ಬಾರ್ದು ರೀ… ಆ… ಆ… ಆ…

ಹುಡುಗೀರ ಮನಸಲ್ಲಿ… ಏನೇನಿದೆ
ತಿಳ್ಕೊಳ್ಳೋ ತಾಕತ್ತು… ನಮಗೆಲ್ಲಿದೆ
ಪ್ರಾಬ್ಲಮ್ಮೇ ಇರದ… ಫೀಮೇಲು ಇಲ್ಲ

ಸಿಕ್ಸರ್ರು ಹೊಡಿಬೋದು… ಬ್ಯಾಟಿಲ್ಲದೆ
ಪ್ರೀತ್ಸೋಕೆ ಆಗಲ್ಲ… ಡೌಟಿಲ್ಲದೆ
ಅನುಮಾನ ಇರದ… ಅನುರಾಗ ಇಲ್ಲ

ಮಾ…ಡರ್ನು ಪ್ರೇಮಕ್ಕೆ ಮೈಲೇಜು ಕಮ್ಮಿ
ಸೆಲ್…. ಪೋನು ಬಂದ್ ಮೇಲೆ ಹಿಂಗಾಯ್ತು ಸ್ವಾಮಿ
ಲವ್ವಲ್ಲಿ ಕಣ್ಣೀರು… ಕಂಪಲ್ಸರೀ…
ಯಾವ್ದಕ್ಕೂ ಕರ್ಚೀಫು… ಇಟ್ಕೊಂಡಿರಿ… ಆ… ಆ… ಆ…

ಕತ್ಲಲ್ಲಿ ಕರಡೀಗೆ… ಜಾಮೂನು ತಿನಿಸೋಕೆ… ಯಾವತ್ತೂ ಹೋಗ್ಬಾರ್ದು ರೀ… ಆ… ಆ… ಆ…
ಅತ್ಲಾಗೆ ಆ ಹುಡುಗಿ… ಇತ್ಲಾಗೆ ಈ ಹುಡುಗಿ… ಯಾವತ್ತೂ ಇರ್ಬಾರ್ದು ರೀ… ಆ… ಆ… ಆ…

ಯಾರಾನ ಕೈ ಕೊಟ್ರೆ… ಪಾರ್ಟಿ ಕೊಡಿ
ನೆನಪೆಲ್ಲಾ ಸೋಪ್ಹಾಕಿ… ತೊಳ್ಕೊಂಡ್ ಬಿಡಿ
ಕಣ್ಣಲ್ಲಿ ಸೋಪು… ಹೋಗ್ಬಾರ್ದು ಕಣ್ರೀ

ಟೈಮ್ ಇದ್ರೆ ಒಂಚೂರು… ದುಃಖ ಪಡಿ
ಮೆಸ್ಸೇಜು ಬರಬಹುದು… ಕಾಯ್ತಾ ಇರಿ
ಹೃದಯಕ್ಕೆ ಗ್ಯಾಪು… ಕೊಡಬಾರ್ದು ಕಣ್ರೀ

ಬೆನ್ನ…ಲ್ಲಿ ಹುಣ್ಣಂತೆ ಆ ಫಸ್ಟ್ ಲವ್ವು
ಯಾ…ಮಾರಿ ಅಂಗಾತ ಮಲ್ಕೊಂಡ್ರೆ ನೋವು
ಎಲ್ಲಾನು ಮರೆಯೋಕೆ ಹೋಗ್ಬಾರ್ದು ರೀ…
ಕೆರೆಯೋಕೆ ಹುಣ್ಣೊಂದು ಇರಬೇಕು ರೀ… ಆ… ಆ… ಆ…

ಕತ್ಲಲ್ಲಿ ಕರಡೀಗೆ… ಜಾಮೂನು ತಿನಿಸೋಕೆ… ಯಾವತ್ತೂ ಹೋಗ್ಬಾರ್ದು ರೀ… ಆ… ಆ… ಆ…
ಬಾಕೀ ಸಮಾಚಾರು… ಬ್ರೇಕ್ ಕೆ ಬಾದ್ ಅಂತೀನಿ… ನನ್ನನ್ನು ನಂಬ್ಕೊಂಡಿರಿ… ಆ… ಆ… ಆ…

ಟಿಪ್ಪಣಿಗಳು
  1. ರಾಮು ಮರವಂತೆ ಹೇಳುತ್ತಾರೆ:

    ಹೋಟ್ಲಲ್ ಎಲ್ಲಾ ತಿಂಡಿಗೂ ಸೋಡಾ ಹಾಕೂದಿಲ್ಲ ಮರ್ರೆ…ಸುಮ್ನೆ ತಪ್ಪ ತಪ್ಪ್ ಎಲ್ಲಾ ಹೇಳ್ಬೇಡಿ, ಎಂತದೂ ಗುತ್ತಿಲ್ದೆ…ಕೆಲು ತಿಂಡಿಗೆ ಹಾಕ್ಕಾತ್, ಪಕೋಡ, ರವೆ ಇಡ್ಲಿ, ದೋಸೆಗೆ ಒಂಚೂರ್, ಹೀಗೇ ಇದೆಲ್ಲಾ ನೀವ್ ಮನ್ಯಲ್ ಮಾಡ್ರೂ ಹಾಕ್ಕಾತ್!, ಅದ್ಬಿಟ್ ಎಲ್ಲದಕ್ಕೂ ಹಾಕ್ತ್ರ್ ಅಂದ್ರೆ ತಪ್ಪಾತ್ತಲ್ದಾ? ಸಮಾ ತಿಳ್ಕಂಡ್ ಹೇಳ್ಕ್….ಯಂತ ಆಯಿತ್ ಗುತ್ತಿತಾ? ಹೋಟ್ಲಲ್ ಎಲ್ಲಾ ತಿಂಡಿಗೂ ಸೋಡಾ ಹಾಕ್ತ್ರ್ ಅಂಬ್ದ್ ಒನ್ನಮೂನಿ caa ತರ ತಲಿ ಒಳ್ಗೆ ಕೂತ್ಬಿಟ್ಟಿತ್ ಅಷ್ಟೇ, ಇನ್ನೆಂತ ಹೇಳೂಕಾತಿಲ್ಲ. ನಮ್ಸ್ಕಾರ

  2. yogish ಹೇಳುತ್ತಾರೆ:

    ಹೋಟ್ಲ್ ಗೆ ಇಪ್ಪರ್ ಬೆರ್ಸ್ಕ ಬಂದ್ ಹೋಡುಕ್ ಇದ್ರ್ ಜಾಗ್ರತಿ ಹೊಯ್.. ಹಾಡ್ ಮಾತ್ರ ಸೂಪರ್ ಡೂಪರ್

  3. Manjunatha Maravanthe ಹೇಳುತ್ತಾರೆ:

    ಕುಂದಾಪ್ರದವ್ರ ಹೋಟ್ಲಲ್ ಚೂರ ಕಡ್ಮಿ ಅಂದ ಊರ್ಬದಿ ಪ್ರೀತಿ ತೋರ್ಸಿರಿ ಅಲ್ದೆ ಹ್ವಾಯಿ
    ನೀವ್ ಹೇಳಿದ್ದ ನಿಜ ಕಾಣಿ.

ನಿಮ್ಮ ಟಿಪ್ಪಣಿ ಬರೆಯಿರಿ