Archive for ನವೆಂಬರ್, 2013


ಪ್ಯಾಟಿ ಬದಿ ಇಪ್ಪರಿಗ್ ಅಡ್ಡಿಲ್ಲ… ಕರೆಂಟ್ ಹೆಚ್ಚ್ ತೆಗುದಿಲ್ಲ… ಹಳ್ಳಿ ಬದಿ ಇಪ್ಪರಿಗ್ ಕರೆಂಟ್ ಇಪ್ಪುದಕ್ಕಿಂತ ಹೋಯಿ ಇಪ್ಪುದೇ ಹೆಚ್ಚ್ … ಅದ್ಕೆ ಚಿಮಣಿ ಬೇಕಲ್ದಾ? ಈಗ ಎಲ್ಲ ಸುಧಾರ್ಸಿತ್… ಆರೂ ನಾವ್ ಸಣ್ಣದಿಪ್ಪತಿಗೆ ಚಿಮ್ಣಿ ದೀಪದಗೆ ಓದದ್ದ್ ಅಲ್ದಾ?

ಕುಂದಾಪ್ರ ಕನ್ನಡದಗೆ ‘ಹಳೇ ಪಾತ್ರೆ ಹಳೇ ಕಬ್ಣಾ…’ ಧಾಟಿಯಗೆ ಒಂದ್ ಚಿಮ್ಣಿ ಪದ್ಯ… 🙂

ಹಳಿ ಚಿಮ್ಣಿ… ಹಳಿ ದೀಪ… ಲಾಯ್ಕ್ ಬೆಳಕು ಕಾಣಿ… ಹೋಯ್
ಈ ದೀಪ… ಅಪ್ರೂಪ… ಭಾರೀ ಲಾಯ್ಕಿತ್ತ್ ಮಾರ್ರೇ… ಹೋಯ್

ಬತ್ತಿಯನು ಎಳದು ಇಡಿ
ಚಿಮ್ನೆಣ್ಣಿಯ ತುಂಬ್ಸಿ ಬಿಡಿ
ಕಡ್ಡಿಯ ಕೀರುದೇ ತಡ… ಬೆಳ್ಕ್-ಏ…

ದೀಪವು ಮೂರೂ ಹೊತ್ತ್
ಆರದೇ ಉರಿತಾ ಇರತ್ತ್
ಎಂತಕೆ ಬ್ಯಾಟರಿ ಶೆಲ್… ಎಲ್ಲಾ ದುಡ್ದ್ ವೇಷ್ಟೂ

ಕಾಣಿ ಮಳಗಾಲದಗೆ… ಅದ್ರಗೂ ಗಾಳಿಮಳೀ…
ಈ ರೀತಿ ಜಮ್ಮಳಿ ಬಪ್ಪ್ ಸುರಿಗೆ… ಕರೆಂಟ್ ಇಪ್ದಿಲ್ಲ
ತುಂಬ್ಸಿ ಬಿಡಿ ಎಣ್ಣಿನ… ಮೇಲ್ ದೂಡಿ ಬತ್ತೀನ…
ಹಳಿ ತಾಮ್ರದ್ ಚಿಮ್ಣಿ ಬುಡ್ಡಿಯಗೆ… ಹಚ್ಚಿಬಿಡಿ ದೀಪನ್ನ

ವಲೆ ಹಿಡಿದೆ ಅಡುಗಿ ಮಾಡೂದ್ ಹ್ಯಾಂಗೆ… ಚಿಮ್ಣಿದೀಪದ ಬೂಚ ನಾ ತೆಗಿತೆ
ಚಿಮ್ಣಿ ಎಣ್ಣಿ ಹೊಯ್ದು ಬಿಡತ್ನೆ ನಾ… ಹಿಡಿವಲ್ಲೊರಿಗೂ

ಹಳಿ ಚಿಮ್ಣಿ… ಹಳಿ ದೀಪ.. .ಲಾಯ್ಕ್ ಬೆಳಕು ಕಾಣಿ… ಹೋಯ್
ಈ ದೀಪ… ಅಪ್ರೂಪ… ಭಾರೀ ಲಾಯ್ಕಿತ್ತ್ ಮಾರ್ರೇ… ಹೋಯ್

ನೀವ್ ಒಳ್ಳೇ ಹೇಳ್ತ್ರಿಯಲೆ… ಈ ಚಿಮ್ನೆಣ್ಣಿ ರೇಟಿನಲಿ…
ಹೇಳಿ ಬಿಡಿ ಸೀದಾ ನಂಗ್-ನೀವ್… ಚಿಮ್ನೆಣ್ಣಿ ಕೊಡ್ತ್ರಿಯಾ…?
ನಾವಿಪ್ಪ ಊರಿನಗೆ… ಇಪ್ಪ ಎರ್ಡ್ ಸೊಸೈಟಿಯಗೆ
ಒಂದು ಮೂರ್ ಲೀಟ್ರು ಚಿಮ್ನೆಣ್ಣಿ… ತೆಗ್ಸಿ ಕೊಡ್ತ್ರಿಯಾ?

ಕಮ್ಮಿ ಕೇಂಡ್ರಿ ಮೂರ್ ಲೀಟರೇನ್… ನಿಮ್ಮ ಮಟ್ಟಿಗೆ ನೂರ್ ಕೊಡ್ತೆ ನಾನ್
ದುಡ್ಡು ಮಾತ್ರ ನೀವೇ ಕೊಡ್ಕಾತ್ತ್… ಹೋಯ್ ಯಜ್ಮಾನ್ರೆ

ಹಳಿ ಚಿಮ್ಣಿ… ಹಳಿ ದೀಪ… ಲಾಯ್ಕ್ ಬೆಳಕು ಕಾಣಿ… ಹೋಯ್
ಈ ದೀಪ… ಅಪ್ರೂಪ… ಭಾರೀ ಲಾಯ್ಕಿತ್ತ್ ಮಾರ್ರೇ… ಹೋಯ್