Posts Tagged ‘kundapra’


ನೂರನೇ ಪೋಸ್ಟ್ ಹಾಕಿ ಈ ಬದಿಗ್ ಮಂಡಿ ಹಾಕಿ ಮಲ್ಕಣಲ್ಲ ಈ ಜನ ಅಂದ್ಕಂಡ್ರ್ಯಾ ಹ್ಯಾಂಗೆ? ನೂರನೇ ಪೋಸ್ಟ್ ಹಾಕಿದ್ ವಿಜಯ ಕರ್ನಾಟಕದ ಬ್ಲಾಗ್ ಪರಿಚಯದಗೆ ಬಂದಿತ್ತ್ ಮರ್ರೆ ಗೊತ್ತಾ. ಕಂಡ್ ಮಸ್ತ್ ಖುಷಿ ಆಯ್ತ್. ಹಾಂಗಾಯ್ ನೂರ ಒಂದ್ನೇದ್ ಬರ್ದೆ ಇದ್ರ್ ಆತ್ತಾ. ಒಟ್ಟ್ ಕೌರವರ ಸಂಖ್ಯೆ ಮುಟ್ಟತ್ ಅಲ್ಲಿಗೆ 🙂

images

images1

ಚಿತ್ರ ಕೃಪೆ: udayavani ಮತ್ತು wavesofudupi

ಈ ವರ್ಷ ಯುಗಾದಿ ಸುರಿಗೆ ಪಂಚಾಂಗ ಓದುವತಿಗೆ ಬೌಷ ಮಳಿ ಬಪ್ಪ ಕೊಳಗದ ಅಳತೆ ತಪ್ಪಿ ಹೋಯಿತಾ ಕಾಂತ್. ಅಲ್ಲ ಈ ನಮನಿ ಮಳಿ ಬಪ್ಪುದಾ ಹಂಗಾರೆ? ಯಾರ್ ಬಾಯಗ್ ಕೇಂಡ್ರೂ ಈ ನಮನಿ ಮಳಿ ಕಾಣಲ್ಲಪ್ಪ. ಕಡ್ಲ್ ಬದಿಯಗ್ ಇದ್ದರಂತೂ ಯಾವ ರಿಜಿಸ್ತ್ರೀ ಸತೇ ಇಲ್ದೆ ಸಮುದ್ರಕ್ಕೆ ಅವ್ರ್ ಜಾಗ ಬರ್ಕೊಡ್ಕ್ ಆಯ್ತ್. ಒಂದ್ ವರ್ಷಕ್ ಆಪ ಮಳಿ ಕಳ್ದ್ ಒಂದ್ ತಿಂಗ್ಳಗೇ ಸೊರ್ದ್ ಬಿಟ್ಟಿತ್. ಅಲ್ಲಾ ಮಾರ್ರೆ ಹಂಗಾರೆ ಆಕಾಶ ಎಂತ ಒಟ್ಟಿ ಆಯಿತಾ… ಈ ನಮನಿ ಸೊರಿತ್ತಲೆ ಪುರ್ಸೊತ್ ಇಲ್ದೆ. ಇದೆಲ್ಲಾ ತಕಂಡ್ ಹೋಪ ಕಾಲ ಅಲ್ದೇ. ಪ್ರಳಯ ಅಪ್ದ್ ಅಂದ್ರೆ ಮತ್ತೆಂತ? ಈ ಮಳಿ ಸಾಲ ಅಂದೇಳಿ ಅದ್ರೊಟ್ಟಿಗೆ ಈ ಸರ್ತಿ ಜೋರ್ ಗಾಳಿ ಬೇರೆ ಶುರುವಾಯಿತ್. ಇಷ್ಟ್ ಸಮ್ಯ ಇರ್ತಿಲ್ಲ ಅಂದಲ್ಲ… ಆದ್ರೂ ಈ ಸರ್ತಿ ಸ್ವಲ್ಪ ಗಾಳಿ ಹೊಡ್ತ ಬಿಗುವೇ ಇದ್ದಿತ್. ಟೀವಿಯಗೆ ಬ್ರೇಕಿಂಗ್ ನ್ಯೂಸ್ ಅಂದ್ರೆ ರೈನಿಂಗ್ ನ್ಯೂಸ್ ಅಂಬಲ್ಲಿವರಿಗೆ ಮಳಿ-ಗಾಳಿ ಉಪದ್ರ. ಕರಾವಳಿ-ಮಲ್ನಾಡ್ ಬದಿಯರಿಗೆ ಜೋರ್ ಮಳಿ, ನೆರಿ ಇದೆಲ್ಲ ಹೊಸ್ತೇನಲ್ಲ. ಕಳ್ದ್ ವರ್ಷ ಚೂರ್ ಕಮ್ಮಿ ಬಿಟ್ರೆ ಪ್ರತೀ ವರ್ಷವೂ ಮಳ್ಗಾಲದ ನಾಕ್ ತಿಂಗ್ಳ್ ಮಳೆಯಂದ್ರೆ ಮಳೆ. ನೀರ್ ಆಂದ್ರೆ ನೀರ್… ಆರೂ ಈ ವರ್ಷ ಸ್ವಲ್ಪ ಅತಿರೇಕ ಅಂಬಷ್ಟ್ ಸೊರಿತ್ತಪ್ಪ. ಹೀಂಗಿನ ಮಳ್ಗಾಲ ಕಂಡ್ ಭಾರೀ ವರ್ಷ ಆಯಿತ್ತ್… ಪ್ರಾಯ ಆದರೆಲ್ಲ ಹೇಳುದ್ ಕೇಣ್ಕ್… ನಾ ಸಣ್ಣಕಿಪ್ಪತಿಗೆ ನಮ್ಮನಿ ಮೆಟ್ಲ್ ಕಲ್ಲ್ ಬುಡಕ್ ನೀರ್ ಬಂದಿತ್ ಅಂದೇಳಿ, ಅದ್ ಬಿಟ್ರೆ ಈ ಸರ್ತಿಯೇ ಸೈಯಪ್ಪ ಮಳಿರಾಯನ ಹೊಡ್ತ ಅಂದೇಳಿ. ಮಳಿ ಎಷ್ಟೇ ಬರ್ಲಿ ಮಳ್ಗಾಲದಗೆ ರಸ್ತಿ ಅಂದ್ರೆ ಅವಸ್ಥಿ ಅಂದೇಳಿಯೇ ಅಭ್ಯಾಸ ಆಯಿ ಹೋಯಿತ್ತಲ್ಲ ನಂಬದಿಯರಿಗೆ. ಅದ್ರಗೂ ಈ ಸರ್ತಿ ಹೆದ್ದಾರಿ ಅಗ್ಲ ಮಾಡು ಹೆಳಿಯೊಳಗೆ ಕೆಲವ್ ಬದಿ ಕಂಬ್ಳ ಗೆದ್ದಿ ಆರೂ ಬೇಕ್, ರಸ್ತಿ ಬ್ಯಾಡ.

ಅಂತೂ ಮಳಿ ಕತಿ ಹೀಂಗಾಯ್ತಾ… ನಾ ಶುರು ಮಾಡದ್ ಮಳಿ ಸುದ್ದಿಯೇ ಆದ್ರೂ… ಹೇಳುಕ್ ಹೊರ್ಟದ್ ಭಾಷಿಯೊಳಗಿಪ್ಪ ಗಮ್ಮತ್ತಿನ ವಿಷ್ಯ. ಜೋರ್ ಮಳಿ ಬಂದ್ರೆ ಎಂತ ಹೇಳುದ್ ನಾವೆಲ್ಲಾ? ಈ ಕಿಚ್ಚ್ ಹಿಡದ್ ಮಳಿಯೊಂದ್ ನಿಲ್ಲುದೇ ಇಲ್ಲಪ್ಪ ಅಂದೇಳಿ ಅಲ್ದಾ? ಇಲ್ಲೇ ಇಪ್ಪದ್ ಕಾಣಿ ಗಮ್ಮತ್. ಮಳಿ ಅಂದ್ರೆ ನೀರ್… ಅದಕ್ಕ್ ಕಿಚ್ಚ್ ಹಿಡುದ್ ಹ್ಯಾಂಗೇ 🙂 ಅದೇ ಭಾಷಿಯ ಗಮ್ಮತ್. ಅಂದ್ರೆ ಭಾಷಿದ್ ವಾಚ್ಯ ಅರ್ಥ ತಕಂಡ್ರೆ ಅರ್ಥ ಅನರ್ಥ ಆತ್ತ್. ಆದ್ರೆ ಅದ್ರ ಸೂಚ್ಯ ಅರ್ಥ ‘ಕೆಟ್ಟ’ ಮಳೆ ಅಂತ ಇಟ್ಕಣ್ಲಕ್. ನೀವ್ ಕೇಂಬುಕೂ ಸಾಕ್. ಮಳಿಯಗೆ ಕೆಟ್ಟ ಮಳಿ ಒಳ್ಳೇ ಮಳಿ ಅಂದೇಳಿ ಇತ್ತಾ? ಕಾಲ ಕಾಲಕ್ಕ್ ಎಷ್ಟ ಬೇಕೋ ಅಷ್ಟ್ ಬಂದ್ರೆ ಅದ್ ಒಳ್ಳೇ ಮಳಿ. ನಾವ್ ಹೀಂಗೆ ಇದ್ದ್ ಬದ್ದ್ ಗೆದ್ದಿನೆಲ್ಲಾ ಮಣ್ಣ್ ತುಂಬ್ಸಿ ತುಂಡ್ ತುಂಡ್ ಮಾಡಿ ಸೈಟ್ ಅಂದೇಳಿ ಮಾರುಕ್ ಹೊರ್ಟ್ ಮೇಲೆ, ರಸ್ತಿ ಅಗ್ಲ…ಮಣ್ಣ್ ಮಶಿ ಅಂದೇಳಿ ನೂರಾರ್ ವರ್ಷ ಬಾಳಿ ಬದ್ಕಿದ್ ಮರದ್ ಬುಡಕ್ ಕೊಡ್ರಿ ಹಾಕ್ರೆ ಹೀಂಗೆ ಆಪ್ದ್ ಅಲ್ದಾ?ಹಳ್ಳಾಡಿ ಜಯ್ರಾಮ್ ಶೆಟ್ರ್ “ಹುಲಿಯಾದ ಕಾಳ”ದಗೆ ಹೇಳು ಹಾಂಗೆ ಕೆಲವ್ ವರ್ಷ ಹನ್ನೊಂದ್ ತಿಂಗ್ಳೂ ಮಳಿ, ಕೆಲವ್ ವರ್ಷ ಒಂದ್ ತಿಂಗ್ಳೂ ಮಳಿ ಇಲ್ದೆ ಹೋದಾಂಗ್ ಆಪ ಕಾಲ ಬತ್ತ್. ಹೆಚ್ಚ್ ದೂರ ಏನಿಲ್ಲ. ಹೇಳುವರ್ ಹೇಳುದ್…ಮಾತಿಗೆ… ಕಾಲ ಕೆಟ್ಟ್ ಹೋಯ್ತ್… ಕೆಟ್ಟ್ ಹೋದ್ದ್ ಕಾಲ ಅಲ್ಲ. ಅದ್ ಓಡುವಾಂಗೇ ಓಡ್ತಾ ಇತ್ತ್. ಕೆಟ್ಟ್ ಹೋದ್ದ್ ನಾವ್… ಹೌದಾ ಸುಳ್ಳಾ?

ಹೀಂಗೆ ಮಾತಾಡ್ತಾ ಮಾತಾಡ್ತಾ ನೆನ್ಪಾಯ್ತ್. ಮೊನ್ನೆ ಇತ್ಲಾಯಿ ದೂರದರ್ಶನ ಚಂದನದಗೆ ನಮ್ಮ ಕುಂದಾಪ್ರದಗೆ ನೆಡದ್ ಮಧುರ ಮಧುರವೀ ಮಂಜುಳಗಾನ ಬಂದಿತ್. ಅದ್ರಗೆ ಏಎಸ್ಸೆನ್ ಹೆಬ್ಬಾರ್ರ್ ಮತ್ತ್ ವೈದೇಹಿ ಮಾತಾಡಿದ ಕುಂದಾಪ್ರ ಕನ್ನಡ ಕೇಂಡ್ ಮಸ್ತ್ ಖುಷಿ ಆಯ್ತ್. ನೀವೂ ಕಂಡ್ ಖುಷಿಪಟ್ಟಿರಿ ಅಲ್ದಾ?

ಮತ್ತೆ ನಿಮ್ಗೆ ಈ “ಕಿಚ್ಚ್ ಹಿಡಿದ್ ಮಳಿ” ನಮೂನಿದೆ ಬೇರೆ ಶಬ್ದ ಸಿಕ್ರ್ ಹೇಳಿ, ಭಾಷಿ ಚಂದ ಎಲ್ಲರೂ ಒಟ್ಟಾಯಿ ಕಾಂಬ-ಕೇಂಬ

ಬಾಡಿ ಹೋದ್ದ್… ಬೊಂಡದಗೆ ನೀರ್ ಇಪ್ಪುದಿಲ್ಲಿಯೇ…(ಸುಮ್ನೆ ಕುಶಾಲಿಗ್ ಅಣಕ)

Posted: ಮೇ 21, 2013 in anaka, anakavaadu, ಅಣಕ, ಅಣಕವಾಡು, ಇತ್ಯಾದಿ.., ಕನ್ನಡ ರಿಮಿಕ್ಸ್, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಅಣಕ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಅಣಕ, ಕುಂದಾಪ್ರ ಕನ್ನಡ ರಿಮಿಕ್ಸ್, ಗಮ್ಮತ್ ಇತ್ತ್ ಕಾಣಿ..., kannada remix, kundaapra kannada, kundaapra kannada anaka, kundapra, kundapra kannada, kundapur, kundapur kannada, kundapura, kundapura kannada, kundapura kannada anaka, kundapura kannada remix
ಟ್ಯಾಗ್ ಗಳು:, , , , , , , , , , , , , , , , , , , , , , , , , , , ,

‘ಎರಡು ಕನಸು’ ಪಿಚ್ಚರಿನ ‘ಬಾಡಿಹೋದ ಬಳ್ಳಿಯಿಂದ’ ಹಾಡ್ ಕುಂದಾಪ್ರ ಕನ್ನಡದಗೆ… ಸುಮ್ನೆ ಕುಶಾಲಿಗ್ ಮರ್ರೆ 🙂

 

ಬಾಡಿ ಹೋದ್ದ್ ಬೊಂಡದಗೆ
ನೀರ್ ಇಪ್ಪುದಿಲ್ಲಿಯೇ

ಬಾಡಿ ಹೋದ್ದ್ ಬೊಂಡದಗೆ
ನೀರ್ ಇಪ್ಪುದಿಲ್ಲಿಯೇ
ಬತ್ತಿ ಇರದ ಚಿಮ್ಣಿಯಿಂದ
ದೀಪ ಉರ್ಸುಕಾತಿಲ್ಯೇ

ಮೆಣ್ಸ್ ತಿಂದ್ ಬಾಯಿಯೆಲ್ಲಾ
ಖಾರಆಯಿತ್ ಉರಿತಿತ್ತಲ್ದಾ
ಒಂದ್ಲೋಟ ನೀರಿಲ್ಲಿಯಾ?

ಬಾಡಿ ಹೋದ್ದ್ ಬೊಂಡದಗೆ
ನೀರ್ ಇಪ್ಪುದಿಲ್ಲಿಯೇ

ಹಣ್ ತಿನ್ನಲ್ಯೇ ಬೀಜ ತೆಗ್ದಿನೆ
ಅಂಗಡಿಯಲ್ ಮಾರುಕೆ
ಹಣ್ ತಿನ್ನಲ್ಯೇ ಬೀಜ ತೆಗ್ದಿನೆ
ಅಂಗಡಿಯಲ್ ಮಾರುಕೆ

ಪವಾಣಿ ಒಟ್ಟ್ ಮಾಡಿ-ನಾಕ್
ಹಬ್ಬದಗ್-ಹೊಡಿ ಹಾರ್ಸಕೇ
ಪವಾಣಿ ಒಟ್ಟ್ ಮಾಡಿ-ನಾಕ್
ಹಬ್ಬದಗ್-ಹೊಡಿ ಹಾರ್ಸಕೇ

ಬತ್ತಿ ಇರದ ಚಿಮ್ಣಿಯಿಂದ
ದೀಪ ಉರ್ಸುಕಾತಿಲ್ಯೇ

ಮೆಣ್ಸ್ ತಿಂದ್ ಬಾಯಿಯೆಲ್ಲಾ
ಖಾರಆಯಿತ್ ಉರಿತಿತ್ತಲ್ದಾ
ಒಂದ್ಲೋಟ ನೀರಿಲ್ಲಿಯಾ?

ಬಾಡಿ ಹೋದ್ದ್ ಬೊಂಡದಗೆ
ನೀರ್ ಇಪ್ಪುದಿಲ್ಲಿಯೇ

ಮಾಯಿನ್-ಹಣ್ ಕಣ್ಣಿಗ್ ಬಿದ್ರೆ
ಕಲ್ ಹೊಡ್ದಾರೂ ತಾಳ್ಸುವೆ
ಮಾಯಿನ್-ಹಣ್ ಕಣ್ಣಿಗ್ ಬಿದ್ರೆ
ಕಲ್ ಹೊಡ್ದಾರೂ ತಾಳ್ಸುವೆ

ಗಾಳಿಗ್ ಹಣ್ ಉದರಿ ಬಿದ್ರೆ
ಹೆಕ್ಕದೆ ಇಪ್ಪುಕೆ ಆಪುದೆ?
ಗಾಳಿಗ್ ಹಣ್ ಉದರಿ ಬಿದ್ರೆ
ಹೆಕ್ಕದೆ ಇಪ್ಪುಕೆ ಆಪುದೆ?

ಬಾಳಿ ಹಣ್ಣಾರೂ ತಿಂಬ ಅಂದ್ರೆ
ಪೂರ್ತಿ ಕಾಯಿ ಎಲ್ಲದೂ
ಹುಡ್ಕಂಡ್ ಹೋಪ ಗ್ವಾಯಿ… ಮರನ್ನ
ಸಿಕ್ವಾ ಬೀಜ ನಾಕಾರೂ

_____________________________________________________________________________
ಮೂಲ ಪದ್ಯ : ‘ಎರಡು ಕನಸು’ ಪಿಚ್ಚರಿನ ‘ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ’
ಕೃಪೆ: Namma Bengaluru(ಫೇಸ್ಬುಕ್)

ಬಾಡಿ ಹೋದ ಬಳ್ಳಿಯಿಂದ
ಹೂವು ಅರಳಬಲ್ಲದೆ

ಬಾಡಿ ಹೋದ ಬಳ್ಳಿಯಿಂದ
ಹೂವು ಅರಳಬಲ್ಲದೆ
ತಂತಿ ಹರಿದ ವೀಣೆಯಿಂದ ನಾದ
ಹರಿಯಬಲ್ಲದೆ

ಮನಸು ಕಂಡ ಆಸೆ ಎಲ್ಲ
ಕನಸಿನಂತೆ ಕರಗಿತಲ್ಲ
ಉಲ್ಲಾಸ ಇನ್ನೆಲ್ಲಿದೆ

ಬಾಡಿ ಹೋದ ಬಳ್ಳಿಯಿಂದ
ಹೂವು ಅರಳಬಲ್ಲದೆ

ಹಣತೆಯಲ್ಲಿ ದೀಪ ಉರಿಯೇ
ಬೆಳಕಿನಲ್ಲಿ ಬಾಳುವೆ
ಹಣತೆಯಲ್ಲಿ ದೀಪ ಉರಿಯೇ
ಬೆಳಕಿನಲ್ಲಿ ಬಾಳುವೆ

ಧರೆಯೆ ಹತ್ತಿ ಉರಿಯುವಾಗ
ಬದುಕಲೆಲ್ಲಿ ಓಡುವೆ
ಧರೆಯೆ ಹತ್ತಿ ಉರಿಯುವಾಗ
ಬದುಕಲೆಲ್ಲಿ ಓಡುವೆ

ತಂತಿ ಹರಿದ ವೀಣೆಯಿಂದ ನಾದ
ಹರಿಯಬಲ್ಲದೆ

ಮನಸು ಕಂಡ ಆಸೆ ಎಲ್ಲ
ಕನಸಿನಂತೆ ಕರಗಿತಲ್ಲ
ಉಲ್ಲಾಸ ಇನ್ನೆಲ್ಲಿದೆ

ಬಾಡಿ ಹೋದ ಬಳ್ಳಿಯಿಂದ
ಹೂವು ಅರಳಬಲ್ಲದೆ

ನೀರಿನಲ್ಲಿ ದೋಣಿ ಮುಳುಗೆ
ಈಜಿ ದಡವ ಸೇರುವೆ
ನೀರಿನಲ್ಲಿ ದೋಣಿ ಮುಳುಗೆ
ಈಜಿ ದಡವ ಸೇರುವೆ

ಸುಳಿಗೆ ದೋಣಿ ಸಿಲುಕಿದಾಗ
ಬದುಕಿ ಬರಲು ಸಾಧ್ಯವೆ?
ಸುಳಿಗೆ ದೋಣಿ ಸಿಲುಕಿದಾಗ
ಬದುಕಿ ಬರಲು ಸಾಧ್ಯವೆ?

ಬಾಳ ಪಗಡೆ ಆಟದಲ್ಲಿ
ಬರಿಯ ಕಾಯಿ ಎಲ್ಲರೂ
ನಡೆಸುವಾತ ಬೇರೆ… ಅವನ
ಇಚ್ಚೆ ಯಾರು ಬಲ್ಲರೂ?

ಯಾರತ್ರೇಳುದ್… ನನ್ನ್ ರಗ್ಳಿಯನ್ನು… ಪಣ್ಕು ಇಷ್ಟೇನೆ :-)

Posted: ಮೇ 21, 2013 in anaka, anakavaadu, ಅಣಕ, ಅಣಕವಾಡು, ಕನ್ನಡ ರಿಮಿಕ್ಸ್, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಅಣಕ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಅಣಕ, ಕುಂದಾಪ್ರ ಕನ್ನಡ ರಿಮಿಕ್ಸ್, ಗಮ್ಮತ್ ಇತ್ತ್ ಕಾಣಿ..., kannada remix, kundaapra kannada, kundaapra kannada anaka, kundapra, kundapra kannada, kundapur, kundapur kannada, kundapura, kundapura kannada, kundapura kannada anaka, kundapura kannada remix
ಟ್ಯಾಗ್ ಗಳು:, , , , , , , , , , , , , , , , , , , , , , , , , ,

ಒಂದ್ ಕುಂದಾಪ್ರ ಕನ್ನಡದ್ ಪದ್ಯ…. ಹೀಂಗೇ ಸುಮ್ನೆ… ‘ಲೈಫು ಇಷ್ಟೇನೆ’ ಪಿಚ್ಚರಿನ ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಮ್ಮು’ ಧಾಟಿಯಗೆ 🙂

ಯಾರತ್ರೇಳುದ್… ನನ್ನ್ ರಗ್ಳಿಯನ್ನು
ನಾಗರಬೆತ್ತದ ಪೆಟ್ಟಿಗೆ… ಹೆದ್ರಿ ಸಾಯುದು

ನಮ್ ಶಾಲಿ ಮಾಷ್ಟ್ರಿಗೆಲ್ಲಾ… ದೊಡ್ಡ್ ನಮಸ್ಕಾರ್ವೆ
ಕೆಮಿ ಗೆಂಡಿ ತಿಪ್ಪಿ ನನ್ನ… ಹೈಲ್ ಮಾಡ್ರಲ್ದೇ
ಸ್ಟಾಪ್ ರೂಮಗಾರು ಹೊಡಿನಿ… ನನ್ನ ಕರ್ಸ್ಕಂಡು
ಗಂಟಿ ಮೇಯ್ಸುದಾರು ಬೇಕೆ… ಶಾಲಿ ಸಾಯ್ಲಿಯತ್ಲೇ

ಯಾರತ್ರೇಳುದ್… ನನ್ನ್ ರಗ್ಳಿಯನ್ನ್
ಮಾಷ್ಟರದ್ ಕೋಲಿಗೆ… ಇಲ್ಯಾ ಲಗಾಮ್

ತುಂಬಾ ಲಾಯ್ಕ್ ಓದ್ತಾ ಅಂತ್….. ಅನ್ಸ್ಕಂಡಿದ್ದೆ ನಾನು… ಬಾಲ ವಾಡಿಯಾಗೇ
ಸ್ಲೇಟ್-ಕಡ್ಡಿ ತೆಗ್ದಿಟ್ಕಂಡ್… ಕೋಪಿ ಮಗ್ಗಿ ಬರಿತಾ ಇದ್ದೆ… ಚೂರು ತಪ್ಪಿಲ್ಯೇ

ಎಂತಕೆನೋ ನಮ್ಮ ಮಾಷ್ಟ್ರು… ಬಡ್ಗಿ ಹೊಡ್ದ್ ರಗ್ಳಿ ತೆಗ್ದೀರ್
ಹೆಣ್ಗಳ್ ಎದ್ರ್ ಮಾನ ತೆಗ್ದ್… ಕಿಮಿ ಗೆಂಡಿ ತಿಪ್ಪಿಬಿಟ್ರ್

ನಾನ್ ಈ ಶಾಲಿಗ್… ಇನ್ನ್ ಎಷ್ಟ್-ವರ್ಷ… ಮಣ್ಣ ಹೊರ್ಕೆನೋ
ಯಾಕ್ ನಂಗಿಂತಾ ಗೋಳು ಕೊಟ್ಟ್ ಕೊಲ್ತ್ರೋ… ಅರ್ಥ ಆತಿಲ್ಲ…

ಥೋ… ಯಾರತ್ರೇಳುದ್… ನನ್ನ್ ರಗ್ಳಿಯನ್ನು
ಎನ್ಸಾವೋ… ನನ್ ಬಡ್ಗಿ ಹೊಡ್ದೆ ಕೊಂದ್ಹಾಕ್ತ್ರ್-ಉ

ಶೀನ ಸಿಕ್ದ ಗ್ವಾಯ್-ಹಾಡ್ಯಲ್… ಶಾಲಿಗ್ ಹಾಂಟು ಹಾಕಿ ತಿರ್ಕಂಡ್… ಗ್ವಾಯ್-ಹಣ್ಣ ತಿಂತ್
ಕಲ್ ಹೊಡುದ್ರಲ್ ಇಬ್ರೂ ಮುಂದ್…ತಿಂತಾ ಗ್ವಾಯ್ ಹಣ್ಣ… ಬೀಜ-ಒಟ್ಟ್ ಮಾಡ್ತಿತ್ತ್
ಚಡ್ಡಿ ಕಿಸ್ಯಲ್ ತುಂಬತಾ ಹೋದೆ… ಒಟ್ಟಿಯಾಯಿ ಹರದು ಹೋಯ್ತು
ಗಂಟಿ ಹಿಂಡಲ್ ಹೆಂಗರು ಒಂದ್, ಬಳ್ಳಿ ಹರ್ಕಂಡ್ ತಪ್ಸ್ಕ ಹೋಯ್ತು
ಬಿಸ್ಲು ನೆತ್ತಿಗ್ ಬಪ್ಕೂ… ಸಾಕ್ ಆಯಿ… ಕೂಕಂತ್ ಇಬ್ರೂ
ಹೀಂಗೇ ಎಷ್ಟ್ ದಿವ್ಸಾ… ಶಾಲಿ ತಪ್ಸಿಕಂಡು… ಬಳ್ಕಂಡ್ ತಿರ್ಗ್ಲಕ್ಕು

ಶಾಲಿಗ್ ಹೊಪವಾ ಕಂಡರೆ… ಶಾಲಿ ಬಿಟ್ಟಾಯ್ತ್
ಮನಿಗ್ಹೋಪ ಮಕ್ಳ ಒಟ್ಟಿಗ್… ಸೇರ್ಕಂತ್ ಇಬ್ರೂ…

ಶಾಲಿ ರಜಿಯಿದ್ದಲ್ ಮೊನ್ನೆ… ಗಂಟಿ ಮೆಯ್ಸಕಂತಾ ನಾನು… ಗ್ವಾಯ್-ಹಾಡಿಗ್ ಹೋದ್ನೆ
ಬೆನ್ನ ಹಿಂದೇ ಬಂದಿತ್ಮರ್ರೆ… ಹಚಾ ಅಂದ್ ಹೊಡ್ದೆ ಕಲ್ಲ್… ಆದರೂ ಬೆನ್ನಾರ್-ಬಂತ್
ಅರ್ಧ ಗಂಟಿ ಆಯ್ತು ಇರ್ಕ್… ಹೊಡಿತಿದ್ದೆ ಕಲ್ಲಿನಗೆ
ಕಡೀಕ್ ಎಂತ ಆಯ್ತ್ ಅಂದೇಳಿ… ನಿಮ್ಗ್ ಏನಾರೂ ಗೊತ್ತಾ ಮರ್ರೆ
ನಾಯಿಗೆ ನಾನ್ ಮೂರೋನಾಕೋ ಕಲ್ಲಗ್ ಒಟ್-ಮಾಡಿ ಹೊಡ್ಡಿದೆ
ಗುರಿಹಿಡ್ದ್ ಹೊಡದ್ದಕ್ಕ್ ನಾಯಿ ಬಾಲ ಮಡ್ಚ್-ಕಂಡ್ ಓಡಿ ಹೋಯ್ತ್ ಮರ್ರೆ.

ಯಾರತ್ರೇಳುದ್… ನಾನ್ ನಾಯಿ ಬೇರ್ಸದ್ದ್…
ನಂಗ್ ಶಾಲಿ ಇಲ್ದೀರೆ… ಮಾಡುದ್ ಬರೀ ಇಂತಾದ್ದೆ

________________________________________________________
ಮೂಲ ಹಾಡ್ : ಲೈಫು ಇಷ್ಟೇನೆ ಪಿಚ್ಚರಿನ ‘ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಮ್ಮು’
ಕೃಪೆ:http://www.kannada-lyrics.in/
Yaarig Helona Namma Problem-u
Hudugara Novige Illa Mulaamu
Hale Girl-friends-igella Dodda Salaamu
Kiviyalli Neevitta Hoove Kaayammu
Elle Idroonu Neev Henge Idroonu
Bathroomnal-aadru Haadri Namma Poem-u
Maaji Hudugira Life-e Thumba Aaraam-u…
Yaarig Helona Namma Problem-u
Hudugara Novige Illa Mulaamu….

Thumba Sanna Huduga Antha Andkondidde Naanu.. Elne Class-alli..
Gejje Sound-u Maadkondu Kunto Bille Aadtha-bandlu Hesru Vaishali..
Yaako Yeno Namma Devru Batthi Idod Kalt-bittavne
Hudugi Edru Maathaad-dange Naalige Mele Kuntkondavne
Naanu Vaishalige Love You Antha Helok-aaglilla..
Aake Nanagintha Ondu Footu Etra Beldu-bitlalla..
Yaarig Helona Namma Height-u Problem-u
Vaishali Nee Yaake Kudide Complan-u…

Sheela Siklu PUC-li.. Khaara Kammi Haakisikondu Paani Puri Thindvi..
Kinetic-inalli Ibru Obre Kuntha Haage Kunthu Odaadkondu Idvi..
Sankey Tank-al Avala Jothe Eejaadida Kanasu Bitthu..
MidNight-ali Mysore Road-u Nammibranna Nodtha Itthu..
Love-u Netthige Eri Naanu Marthe College-u Metlu..
Aadre Ond Divsa Sheela Seedha Bandu Raakhi Katbitlu..
Yaarig Helona – Ellargu Same-u Problem-u
Henmaklige Anna Aagi Bitkonde Rum-mu..

Degree Maadovaaga Omme Bus-u Paasigantha Naanu Queue-nalli Hode..
Nanna Hindhe Nintolige Tuti Pakka Machche Itthu.. Hesaru Helalaare..
Ardha Second Saaku Nange.. Beelodakke Love-i-nalli..
Aamel-eno Aaythu Antha Nimge Naanu Henge Hel-li..
Avalige Naanu Noora Ondne Boyfriend Aagidde Kanri..
Century Hod-davl Munde Naanu Bachcha Aagode Kanri..

Yaarig Helona Namma Next-u Problem-u..
Nanna Flash-Back-e Ondu.. Chooyingu Gum-mu….

ಕುಂದಾಪ್ರ ಕ್ಷೇತ್ರಾ… ಸೋತ್-ಹೋರೇ ಉಳ್ದರ್ (ಕಡ್ಡಿ ಪುಡಿ ಪುಡಿ ಮಿಕ್ಸ್)

Posted: ಮೇ 16, 2013 in anaka, anakavaadu, ಅಣಕ, ಅಣಕವಾಡು, ಕನ್ನಡ ರಿಮಿಕ್ಸ್, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಅಣಕ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಅಣಕ, ಕುಂದಾಪ್ರ ಕನ್ನಡ ರಿಮಿಕ್ಸ್, ಗಮ್ಮತ್ ಇತ್ತ್ ಕಾಣಿ..., kannada remix, kundaapra kannada, kundaapra kannada anaka, kundapra, kundapra kannada, kundapur, kundapur kannada, kundapura, kundapura kannada, kundapura kannada anaka, kundapura kannada remix
ಟ್ಯಾಗ್ ಗಳು:, , , , , , , , , , , , , , , , , , , , , , , , , , , , ,

‘ಕಡ್ಡಿಪುಡಿ’ ಪಿಚ್ಚರಿನ ‘ಸೌಂದರ್ಯ ಸಮರಾ…ಸೋತವನೇ ಅಮರ’ ಧಾಟಿಯಗೆ ಒಂದ್ ಕುಂದಾಪ್ರ ಪದ್ಯ ‘ಕುಂದಾಪ್ರ ಕ್ಷೇತ್ರಾ… ಸೋತ್-ಹೋರೇ ಉಳ್ದರ್ ’ 🙂

 

ಕುಂದಾಪ್ರ ಕ್ಷೇತ್ರಾ… ಸೋತ್-ಹೋರೇ ಉಳ್ದರ್
ಕುಂದಾಪ್ರ ಕ್ಷೇತ್ರಾ… ಸೋತ್-ಹೋರೇ ಉಳ್ದರ್

ಹಾಲಾಡಿಯರೆದ್ರು ಬೇರ್ಯಾರ್
ಗೆಲ್ತ್ರ್… ಇಲ್ಲ್
ಪಕ್ಷಇಲ್ಲದೇ ಹೋದ್ರೂ
ಗೆಲ್ಸಿ ಕಳ್ಸೀರ್-ಕಾಣಿ
ಘನಾರ್ ಗೆಲ್ಲಕ್-ಕಾಣಿ

ಕುಂದಾಪ್ರ ಮಟ್ಟಿಗೆ ಇವರೇ ಅಲ್ದಾ… ಮಾದರಿ ವಾಜ್ಪೇಯಿ
ಇದ್ ಗೊತ್ತಿದ್ದೆ ವೋಟ್-ಹಾಕಿ… ಗೆದ್ದ್ ಬಂದಿರ್ ಹಾಲಾಡಿ
ಗೆಲ್ಲತಾ-ಇದ್ದ್ರೆ ಸಾಲಾಯಿ… ಚೂರೂ ಇಲ್ಲ ಹುಣ್ಸಿಹುಳಿ

ನೀವ್ ಗೆದ್ರಿ …ಈ ಸರ್ತಿ…ಅತಿ ಹೆಚ್ಚಿನ ವೋಟಿನಗೆ
ನಿಮ್ಮ್ ಒಳ್ಳೆತನ ಕಂಡ್… ಗೆದ್ದ್ ಬಿಟ್ರಿ ಈ ಸರ್ತಿಯೂ
ಬೆನ್ನಿಗ್ ಚೂರಿ ಹಾಕ್ದರಿಗೆ… ಆಯಿತ್ ಒಳ್ಳೇ ಪಾಠ
ಹುಡ್ಕರೂ ಸಿಕ್ಕರೂ… ನಿಮ್ಕಿಂತ್ ಒಳ್ಳೇರ್
ಮಾಡ್ತಾಇರಿ ಒಳ್ಳೇದ್…ಹೀಂಗೇಇರ್ಲಿ ಉಮೇದು…ಊಊಊ…ಊಊಊ

ಕುಂದಾಪ್ರ ಕ್ಷೇತ್ರಾ… ಸೋತ್-ಹೋರೇ ಉಳ್ದರ್
ಕುಂದಾಪ್ರ ಕ್ಷೇತ್ರಾ… ಸೋತ್-ಹೋರೇ ಉಳ್ದರ್

ಹಾಲಾಡಿಯರೆದ್ರು ಬೇರ್ಯಾರ್
ಗೆಲ್ತ್ರ್… ಇಲ್ಲ್
ಪಕ್ಷಇಲ್ಲದೇ ಹೋದ್ರೂ
ಗೆಲ್ಸಿ ಕಳ್ಸೀರ್-ಕಾಣಿ
ಘನಾರ್ ಗೆಲ್ಲಕ್-ಕಾಣಿ

ಕುಂದಾಪ್ರದ ಕ್ಷೇತ್ರಕೆ… ಒದ್ಕಣಿ ಮುಂಚಿನ ಕಣಗೆ
ಊರಿಗ್ ಒಳ್ಳೇದ್ ಮಾಡಿ… ಗೆದ್ದ್ ಮಂತ್ರಿ ಆತ್ರಿ

ಕರೆಂಟ್ ನೀರ್ ರಸ್ತಿಗೆ… ಹೋರಾಡಿ ನೀವ್ ಸಲ್ಪ
ಊರ್ ಒಳ್ಳೇದಿಗೆ ಮಾಡ್ಸಿನಿ… ಕೇಣಿನಿ ಬಡವ್ರ್ ಕಷ್ಟ

ಕಣ್ಣು… ಕಣ್ ಬಿಡುವಾಂಗೆ… ಕುಂದಾಪ್ರ ಮಿಂಚಲಿ
ಹಳ್ಳಿ… ಹಳ್ಳಿಯಂಗೂ ಜನ… ನಿಮ್ಮ ಹೆಸ್ರ್-ಹೇಳ್ಲಿ

ಜನ್ರ ಸೇವೆಯಾ ಮಾಡಿ …ಜನ್ರ ಸೇವೆಯಾ
ಜನ್ರ ಸೇವೆಯಾ ಮಾಡಿ …ಜನ್ರ ಸೇವೆಯಾ

ಕುಂದಾಪ್ರ ಕ್ಷೇತ್ರಾ… ಸೋತ್-ಹೋರೇ ಉಳ್ದರ್
ಕುಂದಾಪ್ರ ಕ್ಷೇತ್ರಾ… ಸೋತ್-ಹೋರೇ ಉಳ್ದರ್

ಹಾಲಾಡಿಯರೆದ್ರ್ ಬೇರ್ಯಾರ್
ಗೆಲ್ತ್ರ್… ಇಲ್ಲ್
ಪಕ್ಷಇಲ್ಲದೇ ಹೋದ್ರೂ
ಗೆಲ್ಸಿ ಕಳ್ಸೀರ್-ಕಾಣಿ
ಘನಾರ್ ಗೆಲ್ಲಕ್-ಕಾಣಿ

______________________________________________________
ಮೂಲ ಹಾಡು: ಕಡ್ಡಿಪುಡಿ ಚಿತ್ರದ ‘ಸೌಂದರ್ಯ ಸಮರಾ…ಸೋತವನೇ ಅಮರ’ ಸಾಹಿತ್ಯ: ಯೋಗರಾಜ್ ಭಟ್ ಸಂಗೀತ: ವಿ.ಹರಿಕೃಷ್ಣ

ಕೃಪೆ: kannadalyrics.com

ಸೌಂದರ್ಯ ಸಮರಾ… ಸೋತವನೇ ಅಮರಾ
ಸೌಂದರ್ಯ ಸಮರಾ… ಸೋತವನೇ ಅಮರಾ

ಕಳೆದುಕೊಳ್ಳಲು ಬೇರೇನೂ
ಇಲ್ಲಾ… ಇಲ್ಲಿ
ಇರುವುದನೇ ಪಡೆದು
ತಿರುಗಿ ಕಳೆದುಕೊಳ್ಳಿ
ಕಳೆದು ಪಡೆದುಕೊಳ್ಳಿ

ಅಮಲುಗಣ್ಣಿಗೆ ಇವಳು ಸದಾ… ಸುಂದರ ಗಾಂಧಾರಿ
ಅದ ತಿಳಿದ ಮದನಾರೀ… ಅತಿ ವಿರಹಿ ವ್ಯಾಮೋಹಿ
ಸುಡುತಿರುವ ಸಾರಂಗೀ… ಮೃದು ಮಧುರಾ ಮಹಕಾಳಿ

ಈ ಒದ್ದೆ ಈ ಮುದ್ದೆ ಕೋಲ್…ಮಿಂಚಿನಾ ಹೆಸರೇನು
ನೂರು ನರಕವಾ ಕಂಡ… ಮುದ್ದು ಚತುರ ಸಖಿಯೂ
ನಟ್ಟ ನಡು ಬೀದಿಯಲ್ಲಿ…. ಬಿರಿದ ಡೇರೆ ಹೂವೂ
ಸಿಕ್ಕರು ಸಿಗಳು ಇದ್ದರು ಇರಳು
ಇವಳದೆ ಹಗಲೂ ಇವಳದೆ ಇರುಳೂ…ಊಊಊ

ಸೌಂದರ್ಯ ಸಮರಾ… ಸೋತವನೇ ಅಮರಾ
ಸೌಂದರ್ಯ ಸಮರಾ… ಸೋತವನೇ ಅಮರಾ

ಕಳೆದುಕೊಳ್ಳಲು ಬೇರೇನೂ
ಇಲ್ಲಾ… ಇಲ್ಲಿ
ಇರುವುದನೇ ಪಡೆದು
ತಿರುಗಿ ಕಳೆದುಕೊಳ್ಳಿ
ಕಳೆದು ಪಡೆದುಕೊಳ್ಳಿ

ಕಾಮನೆಯ ಜೇನಿಗೆ… ಕವಣೆ ಬೀಸಿದ ರಮಣಿ
ಮುಗಿಲ ಮಾನಾ ತೆಗೆದಾ… ಕೊಬ್ಬಿ ನಿಂತ ಧರಣಿ

ರಸಿಕ ನಿಶ ರಾತ್ರಿಯ… ಕುರುಡು ಬೀದಿ ದೀಪಾ
ತಾರೆ ಬೆಳಕಿಗೆ ಇವಳ… ಹೊಳೆವ ಮೈಯ್ಯ ಶಾಪಾ

ಕಣ್ಣು… ಕಣ್ ನೈದಿಲೆಯೋ… ಮಾತ್ಸರ್ಯ ಸೆಲೆಯೋ
ಉಕ್ಕು… ಉನ್ಮಾದದ ದೇಹ… ಮನ್ಮಥನಾ ಬಲೆಯೋ

ದೇಹ ದೇಗುಲಾ… ಈ ದೇಹ ದೇಗುಲಾ
ದೇಹ ದೇಗುಲಾ… ಈ ದೇಹ ದೇಗುಲಾ

ಸೌಂದರ್ಯ ಸಮರಾ… ಸೋತವನೇ ಅಮರಾ
ಸೌಂದರ್ಯ ಸಮರಾ… ಸೋತವನೇ ಅಮರಾ

ಕಳೆದುಕೊಳ್ಳಲು ಬೇರೇನೂ
ಇಲ್ಲಾ… ಇಲ್ಲಿ
ಇರುವುದನೇ ಪಡೆದು
ತಿರುಗಿ ಕಳೆದುಕೊಳ್ಳಿ
ಕಳೆದು ಪಡೆದುಕೊಳ್ಳಿ

ಅಂಡೆ ಪಿರ್ಕಿ ಹೆಣ್ಣ್ ಮರ್ಲು… ಅಂಡೆ ಪಿರ್ಕಿ ಹೆಣ್ಣ್… ಒಂದ್ ಡಬ್ಬಿ ಪದ್ಯ :-)

Posted: ಮೇ 16, 2013 in anaka, anakavaadu, ಅಣಕ, ಅಣಕವಾಡು, ಇತ್ಯಾದಿ.., ಕನ್ನಡ ರಿಮಿಕ್ಸ್, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಅಣಕ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಅಣಕ, ಕುಂದಾಪ್ರ ಕನ್ನಡ ರಿಮಿಕ್ಸ್, ಗಮ್ಮತ್ ಇತ್ತ್ ಕಾಣಿ..., ಹಾಡು, kannada remix, kundaapra kannada, kundaapra kannada anaka, kundapra, kundapra kannada, kundapur, kundapur kannada, kundapura, kundapura kannada, kundapura kannada anaka, kundapura kannada remix
ಟ್ಯಾಗ್ ಗಳು:, , , , , , , , , , , , , , , , , , , , , , , , , , , , , , , , , , ,

ಒಂದು ಡಬ್ಬಿ ಪದ್ಯ… ಮೊನ್ನೆ ಯಕ್ಷಗಾನ ಪದ ಡಬ್ಬಾ ಅಂದೇಳಿ ಹೇಳಿದಳಿಗೆ… 🙂
‘ದಂಡ-ಪಿಂಡಗಳು’ ಧಾರಾವಾಹಿಯ ‘ದಂಡ-ಪಿಂಡಗಳು… ಇವರು… ದಂಡ ಪಿಂಡಗಳು’ ಧಾಟಿಯಗೆ ಓದಿ
ಡಬ್ಬಿ ಎಂತಕೆ… ಶಬ್ದ ಮಾಡತ್ತೋ… ಯಾವಳಿಗ್ ಗೊತ್ತು 😉
___________________________________________________________________

 

ಅಂಡೆ ಪಿರ್ಕಿ ಹೆಣ್ಣ್
ಮರ್ಲು… ಅಂಡೆ ಪಿರ್ಕಿ ಹೆಣ್ಣ್

ಅಂಡೆ ಪಿರ್ಕಿ ಹೆಣ್ಣ್
ಮರ್ಲು… ಅಂಡೆ ಪಿರ್ಕಿ ಹೆಣ್ಣ್

ಬರ್ದೇ… ಮೈತೋರ್ಸಿ… ಮಂಗ್ನಾಂಗ್ ಹಡಿ
ಬರ್ದೇ… ಮೈತೋರ್ಸಿ… ಮಂಗ್ನಾಂಗ್ ಹಡಿ
ಕೆಲಸಕ್ಕ್ ಬರದ್ದೇ… ಕೊಂಕ್ ಮಾತ್ ಆಡಿ
ಕೆಲಸಕ್ಕ್ ಬರದ್ದೇ… ಕೊಂಕ್ ಮಾತ್ ಆಡಿ
ಹ್ಯಾಂಗಾರೂ ಮಾಡಿ ಎದ್-ತೋರ್ಕ್ ಅಂದೇಳಿ… ನಾಟ್ಕ ಮಾಡ್ತ್ಲ್ ಇವ್ಳ್… ಥೋ… ಥೋ…

ಅಂಡೆ ಪಿರ್ಕಿ ಹೆಣ್ಣ್
ಮರ್ಲು… ಅಂಡೆ ಪಿರ್ಕಿ ಹೆಣ್ಣ್

ಚೊಣಕಿ ತಾಗಿತಾ… ಇವ್ಳಿಗೆ ಗೊತ್ತಿಲ್ಲ
ಚೊಣಕಿ ತಾಗಿತಾ… ಇವ್ಳಿಗೆ ಗೊತ್ತಿಲ್ಲ
ಮರ್ಲ್ನಾಯ್ ಕಚ್ಚಿತಾ… ಇಪ್ಪಕೂ ಸಾಕಲ್ದಾ
ಮರ್ಲ್ನಾಯ್ ಕಚ್ಚಿತಾ… ಇಪ್ಪಕೂ ಸಾಕಲ್ದಾ
ಒರ್ಲಿ ಒರ್ಲಿ… ಗೌಜೇ ಗೌಜ್
ಹನ್ನೆರ್ಡ್ ಆಣಿಯೇ ಇಲ್ಯಾಕಾಂತಿವ್ಳಿಗೆ… ಥೋ…ಥೋ

ಅಂಡೆ ಪಿರ್ಕಿ ಹೆಣ್ಣ್
ಮರ್ಲು… ಅಂಡೆ ಪಿರ್ಕಿ ಹೆಣ್ಣ್

ಯಕ್ಷಗಾನದ್ ಸುದ್ದಿತೆಗುಕ್… ಯೋಗ್ಯತೆ ಇಲ್ಲ
ಯಕ್ಷಗಾನದ್ ಸುದ್ದಿತೆಗುಕ್… ಯೋಗ್ಯತೆ ಇಲ್ಲ
ಬಾಯ್ ಅಂದರೆ…. ಇವ್ಳದ್ ಬೊಂಬಾಯ್ ಅಲ್ದಾ
ಬಾಯ್ ಅಂದರೆ…. ಇವ್ಳದ್ ಬೊಂಬಾಯ್ ಅಲ್ದಾ
ಮಿಡ್ಕುದ್ ಬಿಟ್ಟರೆ … ಎಂತಾ ಗೊತ್ತಿಲ್ಲ
ಅಲ್ದೆ ಹೋದ್ದು ಮಾತಾಡಿ… ಬಯ್ಸ್ಕಂಬ್ಕೆ ಹುಟ್ಟಿದ್ಲಾ… ಮರ್ಲು…..

ಈ ನಮನಿಯಗೆ… ಬಾಯಿಗ್ ಬಂದಾಂಗೆ… ಮಾತಾಡಿ ಒಟ್ಟ್ರಾಶಿ
ಅಸ್ಲಿಗೆ ಇವಳದ್ ಯೋಗ್ಯತೆಯೇ ಇಷ್ಟ್

ಅಂಡೆ ಪಿರ್ಕಿ ಹೆಣ್ಣ್
ಮರ್ಲು… ಅಂಡೆ ಪಿರ್ಕಿ ಹೆಣ್ಣ್

ಐನ್… ಅಂಡೆ ಪಿರ್ಕಿ ಹೆಣ್ಣ್
ಮರ್ಲು… ಅಂಡೆ ಪಿರ್ಕಿ ಹೆಣ್ಣ್

ಬರ್ದೇ… ಮೈತೋರ್ಸಿ… ಮಂಗ್ನಾಂಗ್ ಹಡಿ
ಬರ್ದೇ… ಮೈತೋರ್ಸಿ… ಮಂಗ್ನಾಂಗ್ ಹಡಿ
ಕೆಲಸಕ್ಕ್ ಬರದ್ದೇ… ಕೊಂಕ್ ಮಾತ್ ಆಡಿ
ಕೆಲಸಕ್ಕ್ ಬರದ್ದೇ… ಕೊಂಕ್ ಮಾತ್ ಆಡಿ
ಹ್ಯಾಂಗಾರೂ ಮಾಡಿ ಎದ್-ತೋರ್ಕ್ ಅಂದೇಳಿ… ನಾಟ್ಕ ಮಾಡ್ತ್ಲ್ ಇವ್ಳ್… ಥೋ… ಥೋ…

ಅಂಡೆ ಪಿರ್ಕಿ ಹೆಣ್ಣ್
ಮರ್ಲು… ಅಂಡೆ ಪಿರ್ಕಿ ಹೆಣ್ಣ್
___________________________________________________________________
ಮೂಲ ಹಾಡು: ‘ದಂಡಪಿಂಡಗಳು’ ಧಾರಾವಾಹಿಯ ಶೀರ್ಷಿಕೆ ಗೀತೆ ‘ದಂಡ ಪಿಂಡಗಳು…ಇವರು… ದಂಡ ಪಿಂಡಗಳು’
ಕೃಪೆ: kannadalyrics.com

ದಂಡ ಪಿಂಡಗಳು
ಇವರು… ದಂಡ ಪಿಂಡಗಳು

ದಂಡ ಪಿಂಡಗಳು
ಇವರು… ದಂಡ ಪಿಂಡಗಳು

BA, BSc, BCom ಮಾಡಿ
BA, BSc, BCom ಮಾಡಿ
ಕೆಲಸವೇ ಸಿಗದೇ… ದಿನ ಅಲೆದಾಡಿ
ಕೆಲಸವೇ ಸಿಗದೇ… ದಿನ ಅಲೆದಾಡಿ
ಎಲ್ಲರ ಕೈಲೂ ಉಗಿಸಿಕೊಳ್ಳೊ… ವೇಸ್ಟು ಬಾಡಿಗಳು…. ಥೂ…ಥೂ…

ದಂಡ ಪಿಂಡಗಳು
ಇವರು… ದಂಡ ಪಿಂಡಗಳು

ದಿವಾನ್ ಚಾಕರಿ… ಇವರಿಗೆ ಸಿಗಲ್ಲ
ದಿವಾನ್ ಚಾಕರಿ… ಇವರಿಗೆ ಸಿಗಲ್ಲ
ಜವಾನ್ ಚಾಕರಿಗೆ… ಇವರೇ ಹೋಗಲ್ಲ
ಜವಾನ್ ಚಾಕರಿಗೆ… ಇವರೇ ಹೋಗಲ್ಲ
ಅಲ್ಲೂ ಇಲ್ಲ… ಇಲ್ಲೂ ಇಲ್ಲ
ಎಲ್ಲೂ ಇಲ್ಲದ ಅಂತರ ಪಿಶಾಚಿಗಳು…. ಥೂ…ಥೂ…

ದಂಡ ಪಿಂಡಗಳು
ಇವರು… ದಂಡ ಪಿಂಡಗಳು

ಪರ್ಸಂಟೇಜು ತೆಗೆಯಲು… ಯೋಗ್ಯತೆ ಇಲ್ಲಾ
ಪರ್ಸಂಟೇಜು ತೆಗೆಯಲು… ಯೋಗ್ಯತೆ ಇಲ್ಲಾ
ರಿಸರ್ವೇಷನ್ನು… ಇವರ ಜಾತಿಗೆ ಇಲ್ಲಾ
ರಿಸರ್ವೇಷನ್ನು… ಇವರ ಜಾತಿಗೆ ಇಲ್ಲಾ
ಲಂಚ ಕೊಡುವುದಕ್ಕೆ… ದುಡ್ಡೇ… ಇಲ್ಲಾ
ಇನ್-ಫ್ಲುಯೆನ್ಸು ಮಾಡಲು… ಯಾವ ಮಿನಿಸ್ಟ್ರೂ… ಗೊತ್ತಿಲ್ಲಾ..ಆಆ

ಈ ಪ್ರಕಾರವಾಗಿ… ಯಾವುದು ಇಲ್ಲದೆ… ಕೆಲಸ ಸಿಗಲ್ಲ
ಒಟ್ಟಲ್ಲಿ ಇವರಿಗೆ ಭವಿಷ್ಯವೇ ಇಲ್ಲಾ

ದಂಡ ಪಿಂಡಗಳು
ಇವರು… ದಂಡ ಪಿಂಡಗಳು

ಆ ದಂಡ ಪಿಂಡಗಳು
ಇವರು… ದಂಡ ಪಿಂಡಗಳು

BA, BSc, BCom ಮಾಡಿ
BA, BSc, BCom ಮಾಡಿ
ಕೆಲಸವೇ ಸಿಗದೇ… ದಿನ ಅಲೆದಾಡಿ
ಕೆಲಸವೇ ಸಿಗದೇ… ದಿನ ಅಲೆದಾಡಿ
ಎಲ್ಲರ ಕೈಲೂ ಉಗಿಸಿಕೊಳ್ಳೊ… ವೇಸ್ಟು ಬಾಡಿಗಳು…. ಥೂ…ಥೂ…

ದಂಡ ಪಿಂಡಗಳು
ಇವರು… ದಂಡ ಪಿಂಡಗಳು

ಗೆಲ್ತ್ ಮಕ್ಳೇ ಈ ರಿಕ್ಷಾ… ಕೌಂಚ್ ಬಿತ್ತ್ ಆ ಪಕ್ಷ (ಕುಂದಾಪ್ರದ ವಾಜಪೇಯಿ ಹಾಲಾಡಿ ಗೆಲುವಿನ ಹಾಡು)

Posted: ಮೇ 9, 2013 in anaka, anakavaadu, ಅಣಕ, ಅಣಕವಾಡು, ಕನ್ನಡ ರಿಮಿಕ್ಸ್, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಅಣಕ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಅಣಕ, ಕುಂದಾಪ್ರ ಕನ್ನಡ ರಿಮಿಕ್ಸ್, ಗಮ್ಮತ್ ಇತ್ತ್ ಕಾಣಿ..., kannada remix, kundaapra kannada, kundaapra kannada anaka, kundapra, kundapra kannada, kundapur, kundapur kannada, kundapura, kundapura kannada, kundapura kannada anaka, kundapura kannada remix
ಟ್ಯಾಗ್ ಗಳು:, , , , , , , , , , , , , , , , , , , , , , , , , , , ,

ಕುಂದಾಪುರದಲ್ಲಿ ನಡೆದ ಎಲೆಕ್ಷನ್ ‘ಡ್ರಾಮಾ’ ಮುಗಿದು ‘ರಿಕ್ಷಾ’ ಹತ್ತಿ ಬೆಂಗಳೂರಿಗೆ ಪಯಣಿಸುತ್ತಿರುವ ಸೋಲಿಲ್ಲದ ಸರದಾರ ಕುಂದಾಪ್ರದ ವಾಜಪೇಯಿ ನಾಮಾಂಕಿತ ಹಾಲಾಡಿ ಶ್ರೀನಿವಾಸ ಶೆಟ್ರ ಗೆಲುವಿನ ಹಾಡು ‘ಡ್ರಾಮಾ’ ಪಿಚ್ಚರಿನ ‘ತುಂಡ್ ಹೈಕ್ಳ ಸಾವಾಸಾ… ಮೂರ್ ಹೊತ್ತೂ ಉಪ್ವಾಸಾ’ ಧಾಟಿಯಲ್ಲಿ 🙂

ಗೆಲ್ತ್ ಮಕ್ಳೇ ಈ ರಿಕ್ಷಾ… ಕೌಂಚ್ ಬಿತ್ತ್ ಆ ಪಕ್ಷ
ಇದ್ರ್ ಸಾಕೆ ವಿಶ್ವಾಸ… ಗೆದ್ದ್ ಬಿಡ್ತೆ ಆದರ್ಶ

ಹ್ಯಾಂಗೆ… ಗೆದ್ರ್ ಕಾಣಿ… ಬೀ…ಜೆಪಿ ಬಿಟ್ಟರೂ
ಊರಿಗ್ ಒಳ್ಳೆದ್ ಮಾಡದ್ದಕ್ಕೆ… ಈ …ಸರ್ತಿ ಗೆದ್ದಿರೆ

ಎಲ್ಲೇ ನಿಂತ್-ಕಂಡ್ರೂ… ಇವ್ರ್ ಗೆಲ್ತರೆ
ಇನ್ನೂ ನಾಕ್ ಸಲ… ಗೆಲ್ಲಿ ಮಾರಾಯ್ರೆ
ಎಲ್ಲೇ ನಿಂತ್-ಕಂಡ್ರೂ… ಇವ್ರ್ ಗೆಲ್ತರೆ
ಇನ್ನೂ ನಾಕ್ ಸಲ… ಗೆಲ್ಲಿ ಮಾರಾಯ್ರೆ

ಗೆಲ್ತ್ ಮಕ್ಳೇ ಈ ರಿಕ್ಷಾ… ಕೌಂಚ್ ಬಿತ್ತ್ ಆ ಪಕ್ಷ
ಇದ್ರ್ ಸಾಕೆ ವಿಶ್ವಾಸ… ಗೆದ್ದ್ ಬಿಡ್ತೆ ಆದರ್ಶ

ಮಂತ್ರಿ ಆಯ್ನಿ ಅಂತ ಕರ್ದ್ … ಮೋಸ ಮಾಡ್ರ್
ಇಂಥಾ ವ್ಯಕ್ತಿಗೆ… ಮೋಸಮಾಡ್ದರ್ ನೆಗ್ದ್ ಬಿದ್ರ್
ಬಿ…ದ್ರ್ …

ರಾಜಕೀಯದ ಹೆಸರಂಗೆ…ಮಾಡ್ಲಿಲ್ಲ ನೋಟು
ಒಂ…ದೊಳ್ಳೆ ಜನ ಕಂಡು… ಕೊಟ್ರ್ ವೋಟು

ಬಡವರ್ ನೋವ್ ಕಷ್ಟಕ್ಕೆ… ಇವ್ರ್ ಕೈಲಾದಷ್ಟ್ ಕೊಟ್ಟಿರೆ
ಕಯ್ಯಂಗಿದ್ದ ದುಡ್ಡನ್ನೇ… ದಾನ ಮಾಡಿ ಬಿಟ್ಟಿರೆ

ಕರಪ್ಷನ್ನು ಮಾಡ್ದೆ… ಒಳ್ಳೆರಾಯಿದ್ರೆ
ಎಲ್ಲರೂ ಹೀಂಗೇ ಇದ್ರೆ… ದೇಶ ಉಳಿತ್ತೆ
ಕರಪ್ಷನ್ನು ಮಾಡ್ದೆ… ಒಳ್ಳೆರಾಯಿದ್ರೆ
ಎಲ್ಲರೂ ಹೀಂಗೇ ಇದ್ರೆ… ದೇಶ ಉಳಿತ್ತೆ

ಗೆಲ್ತ್ ಮಕ್ಳೇ ಈ ರಿಕ್ಷಾ… ಕೌಂಚ್ ಬಿತ್ತ್ ಆ ಪಕ್ಷ
ಇದ್ರ್ ಸಾಕೆ ವಿಶ್ವಾಸ… ಗೆದ್ದ್ ಬಿಡ್ತೆ ಆದರ್ಶ

ವಿಶ್ವಾ……ಸಾಆಆಅ…… ಆದರ್ಶಾಆಅಆ
ವಿಶ್ವಾ ಆಆಅ… ಆದರ್ಶಾಆಅಆ
ವಿಶ್ವಾ……ಸಾಆಆಅ… ಆದರ್ಶಾ

ಇಂಥವ್ರ್ ಸಿಕ್ಕುದಿಲ್ಲ… ಬೇಕಂದರೂ
ಹಾಲಾಡಿ ಕಣಗಿನರ್… ಲಕ್ಷಕ್ಕೊಬ್ರು
ಲಕ್ಷಕ್ಕ್…ಒಬ್ರೇ…ಎಎಎ…

ಬೇಕಾಯ್ಲಾ… ಪಾರ್ಟಿಹಂಗ್ ಇವ್ರಿಗಿನ್ನ್
ಕೈಲ್ ಆದ್ದು… ಮಾಡಿಕೊಡ್ತ್ರು ಕ್ಷೇತ್ರಕಿನ್ನ್

ಮೋಸ-ಗೀಸ ಗೊತ್ತಿಲ್ಲ… ಹಗ್ಲ್-ರಾತ್ರಿ ಒದ್ಕಂತ್ರ್
ಜನ್ರ್ ಕಷ್ಟ ಕಂಡರೆ… ಕೈಲಿದ್ದೆಲ್ಲಾ ಕೊಡ್ತ್ರಂಬ್ರ್

ನಾಕೂ ಸರ್ತಿ ನಿಂತ್ರೂ… ಗೆದ್ದಿರ್ ಸಾಕಲ್ದಾ
ಮತದಾರ ಮೆಚ್ಚು ಕೆಲ್ಸಾ… ಮಾಡಿ…ಗೆಲ್ತಿರಿ
ನಾಕೂ ಸರ್ತಿ ನಿಂತ್ರೂ… ಗೆದ್ದಿರ್ ಸಾಕಲ್ದಾ
ಮತದಾರ ಮೆಚ್ಚು ಕೆಲ್ಸಾ… ಮಾಡಿ…ಗೆಲ್ತಿರಿ

ಗೆಲ್ತ್ ಮಕ್ಳೇ ಈ ರಿಕ್ಷಾ… ಕೌಂಚ್ ಬಿತ್ತ್ ಆ ಪಕ್ಷ ಸಾ… ಸಾ… ಸಾ…
ಇದ್ರ್ ಸಾಕೆ ವಿಶ್ವಾಸ… ಗೆದ್ದ್ ಬಿಡ್ತೆ ಆದರ್ಶ ಸಾ… ಸಾ… ಸಾ…
ಜಯ್…

___________________________________________________________
ಮೂಲ ಹಾಡು: ‘ಡ್ರಾಮಾ’ ಚಿತ್ರದ ‘ತುಂಡ್ ಹೈಕ್ಳ ಸಾವಾಸ…ಮೂರ್ ಹೊತ್ತೂ ಉಪ್ವಾಸಾ’

ತುಂಡ್ ಹೈಕ್ಳ ಸಾವಾಸಾ… ಮೂರ್ ಹೊತ್ತೂ ಉಪ್ವಾಸಾ
ಒಬ್ಬ ಟೀಕೆ ಎಂಕ್ಟೇಸಾ… ಒಬ್ಬ ಕ್ವಾಟ್ಲೆ ಸತೀಸಾ

ಎಂಗೋ… ಮೊನ್ನೆ ತಾನೇ… ಪೀಯೂ…ಸಿ ಮುಗ್ಸವ್ರೆ
ಊರ್ ಹಾಳು ಮಾಡೋದಕ್ಕೆ… ರೀ…ಸರ್ಚು ನಡ್ಸವ್ರೆ

ಹೆಂಗೇ ಹಾಡಿದರೂ… ಬಾಯ್ ನೋಯ್ತವೆ
ಇನ್ನೂ ಕೇಳಿದರೆ… ಕಿವಿ ಹೋಯ್ತವೆ
ಹೆಂಗೇ ಹಾಡಿದರೂ… ಬಾಯ್ ನೋಯ್ತವೆ
ಇನ್ನೂ ಕೇಳಿದರೆ… ಕಿವಿ ಹೋಯ್ತವೆ

ತುಂಡ್ ಹೈಕ್ಳ ಸಾವಾಸಾ… ಮೂರ್ ಹೊತ್ತೂ ಉಪ್ವಾಸಾ
ಒಬ್ಬ ಟೀಕೆ ಎಂಕ್ಟೇಸಾ… ಒಬ್ಬ ಕ್ವಾಟ್ಲೆ ಸತೀಸಾ

ಇವ್ರು ಕಾಲು ಇಟ್ರು ಅಂದ್ರೆ… ಅದೇ ರೋಡು
ಈ ನನ್ ಮಕ್ಳಿಗೆ… ಬಯೋಡಾಟಾ ಬ್ಯಾರೆ ಕೇಡು
ಕೇ…ಡು…

ಯವ್ವನದ ಹೊಳೆಯಲ್ಲಿ… ಹಳೇ ಬೋಟು
ಬೋಟ…ಲ್ಲಿ ನೂರಾ ಎಂಟು… ಹಳೇ ತೂತು

ಬೆಳಗಾಗ್ ಎದ್ದು ಬೆಟ್ಟಕ್ಕೇ… ಅರೆ ದಾರಾ ಕಟ್ಟಿ ಎಳ್ದವ್ರೇ
ಓಡುತ್ತಿದ್ದ ಕಾಲಕ್ಕೆ… ಕಾಲು ಅಡ್ಡ ಇಟ್ಟವ್ರೇ

ಅನಾಸಿನ್ನು ತಿಂದ್ರೂ… ತಲೆ ನೋಯ್ತಾವೆ
ಚಿಂತೇಲಿ ಊಟ ಬಿಟ್ರೆ… ಗ್ಯಾಸು ಆಯ್ತದೆ
ಅನಾಸಿನ್ನು ತಿಂದ್ರೂ… ತಲೆ ನೋಯ್ತಾವೆ
ಚಿಂತೇಲಿ ಊಟ ಬಿಟ್ರೆ… ಗ್ಯಾಸು ಆಯ್ತದೆ

ತುಂಡ್ ಹೈಕ್ಳ ಸಾವಾಸಾ… ಮೂರ್ ಹೊತ್ತೂ ಉಪ್ವಾಸಾ
ಒಬ್ಬ ಟೀಕೆ ಎಂಕ್ಟೇಸಾ… ಒಬ್ಬ ಕ್ವಾಟ್ಲೆ ಸತೀಸಾ

ವೆಂಕ್ಟೇ……ಸಾಆಆಅ…… ಸತೀಸಾಆಅಆ
ವೆಂಕ್ಟೇಆಆಅ… ಸತೀಸಾಆಅಆ
ವೆಂಕ್ಟೇ……ಸಾಆಆಅ… ಸತೀಸಾ

ದೊಡ್ಡೋರು ಕೊಡೋದಿಲ್ಲಾ… ಪರ್ಮಿಸನ್ನು
ಕಾಂಪೌಂಡು ಹಾರುತಿದೆ… ಜನ್ರೇಸನ್ನು
ಜನರೇ…ಶನ್ನು…ಉಉಉ…

ಬೇಕಿಲ್ಲಾ… ಪ್ರಳಯಕೆ ಕಾಯೋದಿನ್ನು
ತುಂಡ್ ಹೈಕ್ಳು… ಮುಳುಗಿಸ್ತಾರೆ ಊರನ್ನು

ಮೀಸೆ-ಗೀಸೆ ಬಂದಾಗ… ಹಗಲು-ರಾತ್ರಿ ರಾದ್ಧಾಂತ
ಬಿಳೀ ಗಡ್ದ ಬಂದಾಗ… ಹೇಳಿದ್ದೆಲ್ಲಾ ವೇದಾಂತ

ಪ್ರತೀ ಎಂಡಿನಲ್ಲೂ… ಸ್ಟಾರ್ಟು ಇರ್ತಾವೇ
ಪರಮಾತ್ಮ ಮಾಡೋ ಕೆಲ್ಸಾ… ಎಲ್ಲಾ…ದಿಂಥಾವೇ
ಪ್ರತೀ ಎಂಡಿನಲ್ಲೂ… ಸ್ಟಾರ್ಟು ಇರ್ತಾವೇ
ಪರಮಾತ್ಮ ಮಾಡೋ ಕೆಲ್ಸಾ… ಎಲ್ಲಾ…ದಿಂಥಾವೇ

ತುಂಡ್ ಹೈಕ್ಳ ಸಾವಾಸಾ… ಮೂರ್ ಹೊತ್ತೂ ಉಪ್ವಾಸಾ ಸಾ… ಸಾ… ಸಾ…
ಒಬ್ಬ ಟೀಕೆ ಎಂಕ್ಟೇಸಾ… ಒಬ್ಬ ಕ್ವಾಟ್ಲೆ ಸತೀಸಾ ಸಾ… ಸಾ… ಸಾ…
ಆಞ್…


‘ಸಂಜು ವೆಡ್ಸ್ ಗೀತಾ ’ ಪಿಚ್ಚರಿನ ‘ಸಂಜು ಮತ್ತು ಗೀತಾ… ಸೇರಬೇಕು ಅಂತಾ’ ಹಾಡ್ ಕುಂದಾಪ್ರ ಕನ್ನಡದಗೆ 🙂

ಸಂತೀ………..

ಸಂತೀಗ್ ನಾ ಹೊತ್ನೋ…

ಸಂಜು ಮತ್ತು ಗೀತಾ … ಸಂತಿಗ್ಹೋಯ್ಕ್ ಅಂತ
ಕಾಯ್ತಾ ಇದ್ದಿರ್ … ಒಂದು ಬಸ್ಸನ್ನ

ಬಸ್ಸಿಗ್ ಹೋಪುಕಿಂತ… ನೆಡ್ಕಂಡ್ ಹೊಯಲಕ್ಕಾಂತ
ಹತ್ತುಕಾತ್ತ ನಿಂಗೆ…. ನುರ್ಕಿನಗೇನು

ಸಣ್ಣ ಕಯ್ ಚೀಲವನ್ನು… ಹಿಡ್ಕಂಡ್ ಬೀಸ ನೆಡ್ಕಂತಾ
ಮೆಲ್ಲ ಮೆಲ್ಲ ಮಾತಾಡ್ತಾ… ಬರದೆ ಕುಶಾಲ್ ಮಾಡ್ಕಂತಾ

ಮಳಿಬಂದರೂ … ಕೊಡಿಯಾ ಬಿಡ್ಸಿ… ಇಬ್ಬರೇ
ನೆಡ್ಕ ಹೋ…ಪಲೆ… ನೆಡ್ಕ ಹೋಪಲೇ… ರಸ್ತಿಯಂಗೇ

ಸಂಜು ಮತ್ತು ಗೀತಾ … ಸಂತಿಗ್ಹೋಯ್ಕ್ ಅಂತ
ಕಾಯ್ತಾ ಇದ್ದಿರ್… ಒಂದು ಬಸ್ಸನ್ನ

ಆ ಕಯ್ಯಂಗೊಂದ್… ಈ ಕಯ್ಯಂಗೊಂದ್
ಚೀಲಾ ಹಿಡ್ಕಂಡ್… ಹೋದ್ರ್ ನೆಡಕಂಡು
ಸೇಲಾಯಲಿ… ಎಲ್ಲಾ ಸಂತಿಯಂಗೇ
ನಂಗೆ ಇವತ್ತಾರೂ … ಸಿಕ್ಲಿ ನಾಕ್ ಪಾವಲಿ

ಸಂಜು: ಕವಾಟ್ ಗೂಡಿನಂಗೆ… ಇಟ್ಟ ದುಡ್ಡಿನಂಗೆ ನಿಂಗೆ
ಬೆಚ್ಚದ್ದೆಲ್ಲಾ ಹಾಕಿ… ಒಟ್ಟು.. ಮಾಡ್ಸಿ ಕೊಡತೆ ಚಿನ್ನ
ಒಂದು ಚಿನ್ನದಾ … ಸರ ಮಾಡ್ಸುಕೆ… ಹಾಕತೆ… ಇವತ್ತೇ

ಮಳಿಬಂದರೂ … ಕೊಡಿಯಾ ಬಿಡ್ಸಿ… ಇಬ್ಬರೇ
ನೆಡ್ಕ ಹೋ…ಪಲೆ… ನೆಡ್ಕ ಹೋಪಲೇ… ರಸ್ತಿಯಂಗೇ

ಸಂಜು ಮತ್ತು ಗೀತಾ … ಸಂತಿಗ್ಹೋಯ್ಕ್ ಅಂತ
ಕಾಯ್ತಾ ಇದ್ದಿರ್ … ಒಂದು ಬಸ್ಸನ್ನ

ಗೀತಾ: ಕಣ್ಣಂಗೇ ಕಾಣ್ಲ… ನಾ ಸರವನ್ನ್
ಮಾಡ್ಸಿಕೊಟ್ರೆ ನೀವು… ಹಾಯ್ಕಂತೆ ನಾನ್
ಎರ್ಡೆಳಿ ಆದರೇ… ಮಾಡ್ಸುಕೆ ಆಯ್ಕಲ್ದಾ
ಒಂದೆಳಿ ಮಾಡ್ಸಿರೆ… ಸಧ್ಯಕೆ ಸಾಕಲ್ದಾ

ಬಾಳ ಅಗ್ಗ ಮೀನ್ … ನಾಕ್ ತಕಂಡ್ ಹ್ವಾಪ ನಾವ್
ಮನಿಗೆ ಹೋದ್ರ ಮೇಲೆ… ಒಳ್ಳೇ ಪದಾರ್ಥ ಮಾಡ್ತೆ ನಾನ್
ನೆಡುಕಾಯ್ದಿರೂ… ಸಂಗ್ತಿಗಿದ್ದರೆ… ಒಟ್ಟಿಗೇ ಹ್ವಾಪವೇ

ಸಂತಿಯಂಗೆಲ್ಲಾ… ಮಾರಿ ಆರ್ಮೇಲೆ… ತಿರ್ಗುವಾ
ನಿಮ್ಮ ಒ…ಟ್ಟಿಗೇ… ನಿಮ್ಮ ಒಟ್ಟಿಗೇ .. ನಾ ಬತ್ತನೇ

ಸಂಜು ಮತ್ತು ಗೀತಾ … ಸಂತಿ ಮುಗ್ಸ್ಕ ಬಂದ್
ಕಾಯ್ತಾ ಇದ್ರೀಗ … ಒಂದು ಬಸ್ಸನ್ನ

____________________________________________________
ಮೂಲ ಹಾಡು: ‘ಸಂಜು ವೆಡ್ಸ್ ಗೀತಾ ’ ಚಿತ್ರದ ‘ಸಂಜು ಮತ್ತು ಗೀತಾ… ಸೇರಬೇಕು ಅಂತಾ’
ಕೃಪೆ: kannadalyrics.com

ಬ್ಯೂಟೀ………

ಸಂಜು ಐ ಲವ್ ಯೂ…

ಸಂಜು ಮತ್ತು ಗೀತಾ… ಸೇರಬೇಕು ಅಂತಾ
ಬರೆದಾಗಿದೆ… ಇಂದು ಬ್ರಹ್ಮನು
ನನ್ನ ಜೀವಕ್ಕಿಂತಾ… ನೀನೆ ನನ್ನ ಸ್ವಂತಾ
ಇರುವಾಗ ನಾನು… ಚಿಂತೆ ಏನು?

ನಿನ್ನ ಎಲ್ಲ ನೋವನ್ನು… ಕೊಡುಗೆ ನೀಡು ನನಗಿನ್ನು
ನನ್ನ ಎಲ್ಲ ಖುಷಿಯನ್ನು… ಕೊಡುವೇ ನಿನ್ನ ವಶಕಿನ್ನು

ಮಳೆಯಾ ಹನಿ… ಉರುಳೋ ದನಿ… ತರವೇ
ನಗಬಾ…ರದೆ… ನಗಬಾರದೆ… ನನ್ನೊಲವೇ?

ಸಂಜು ಮತ್ತು ಗೀತಾ… ಸೇರಬೇಕು ಅಂತಾ
ಬರೆದಾಗಿದೆ… ಇಂದು ಬ್ರಹ್ಮನು

ಆ ಕಣ್ಣಿಗೊಂದು… ಈ ಕಣ್ಣಿಗೊಂದು
ಸ್ವರ್ಗಾನ ತಂದು… ಕೊಡಲೇನು ಇಂದು
ಏನಾಗಲೀ… ನನ್ನ ಸಂಗಾತಿ ನೀ
ನಿನ್ನ ಈ ಕಣ್ಣಲೀ… ಇದೆ ಕೊನೆಯಾ ಹನಿ

ಎದೆಯ ಗೂಡಿನಲ್ಲಿ… ಪುಟ್ಟ ಗುಬ್ಬಿಯಂತೆ ನಿನ್ನ
ಬೆಚ್ಚನೇಯ ಪ್ರೀತಿ… ಕೊಟ್ಟು… ಬಚ್ಚಿ ಇಡುವೆ ಚಿನ್ನ
ಇತಿಹಾಸದ… ಪುಟ ಕಾಣದ… ಒಲುಮೆ… ನೀಡುವೆ

ಮಳೆಯಾ ಹನಿ… ಉರುಳೋ ದನಿ… ತರವೇ
ನಗಬಾ…ರದೆ… ನಗಬಾರದೆ… ನನ್ನೊಲವೇ?

ಸಂಜು ಮತ್ತು ಗೀತಾ… ಸೇರಬೇಕು ಅಂತಾ
ಬರೆದಾಗಿದೆ… ಇಂದು ಬ್ರಹ್ಮನು

ಕಂಡಿಲ್ಲ ಯಾರೂ… ಆ ದೇವರನ್ನು
ಇರಬಹುದೊ ಏನೋ… ನಿನ್ನಂತೆ ಅವನು
ಗೆಳೆಯಾ ಎಂದರೆ… ಅದಕೂ ಹತ್ತಿರ
ಇನಿಯಾ ಎಂದರೆ… ಅದಕೂ ಎತ್ತರ

ಒರಗಿಕೊಳ್ಳಲೇನು… ನಿನ್ನಾ ಎದೆಗೆ ಒಮ್ಮೆ ನಾನು
ಕರಗಿ ಹೋಗಲೇನು… ನಿನ್ನಾ ಕರಗಳಲ್ಲಿ ನಾನು
ಯುಗದಾಚೆಗೂ… ಜಗದಾಚೆಗೂ… ಜೊತೆಗೇ… ಸಾಗುವೇ

ಕಡಲೆಲ್ಲವ… ಅಲೆ ಸುತ್ತುವಾ… ತರವೇ
ನಿನ್ನ ಸೇ…ರುವೇ… ನಿನ್ನ ಸೇರುವೆ… ನನ್ನೊಲವೇ

ಸಂಜು ಮತ್ತು ಗೀತಾ… ಸೇರಬೇಕು ಅಂತಾ
ಬರೆದಾಗಿದೆ… ಇಂದು ಬ್ರಹ್ಮನು

ಶಾಸ್ತ್ರಿ ಪಾರ್ಕಂಗೆ… ಟೋಟಲ್ ಆಯ್… ಎಷ್ಟ್ ಹೋಟ್ಲಿತ್ತೇ ? ಒಂದ್ ಪಣಕು-ಅಣಕು :-)

Posted: ಮೇ 7, 2013 in anaka, anakavaadu, ಅಣಕ, ಅಣಕವಾಡು, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಅಣಕ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಅಣಕ, ಕುಂದಾಪ್ರ ಕನ್ನಡ ರಿಮಿಕ್ಸ್, ಗಮ್ಮತ್ ಇತ್ತ್ ಕಾಣಿ..., ಹಾಡು, kannada remix, kundaapra kannada, kundaapra kannada anaka, kundapra, kundapra kannada, kundapur, kundapur kannada, kundapura, kundapura kannada, kundapura kannada anaka, kundapura kannada remix
ಟ್ಯಾಗ್ ಗಳು:, , , , , , , , , , , , , , , , , , , , , , , , , , , ,

‘ಶಾಸ್ತ್ರಿ ಪಾರ್ಕಂಗೆ… ಟೋಟಲ್ ಆಯ್… ಎಷ್ಟ್ ಹೋಟ್ಲಿತ್ತೇ ?’ ಹೀಂಗೇ ಸುಮ್ನೇ ಒಂದ್ ಪಣಕು-ಅಣಕ ಕುಂದಾಪ್ರ ಕನ್ನಡದಗೆ 🙂
‘ಬಚ್ಚನ್’ ಪಿಚ್ಚರಿನ ‘ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?’ ಧಾಟಿಯಗೆ ಓದಿ ಕಾಣಿ 🙂

 

ಶಾಸ್ತ್ರಿ ಪಾರ್ಕಂಗೆ… ಟೋಟಲ್ ಆಯ್… ಎಷ್ಟ್ ಹೋಟ್ಲಿತ್ತೇ ?
ಟುಂಗ್ ಟುಂಗ್ ಟುಂಗ್ ಟುಂಗ್
ಸಂತಿ ಮಾರ್ಕೇಟ್… ಬಸ್ಲಿಕಟ್ಟು… ರೇಟ್ ಹ್ಯಾಂಗಿತ್ತೇ?
ಟುಂಗ್ ಟುಂಗ್ ಟುಂಗ್ ಟುಂಗ್

ಬಸ್ಸಿನಂಗೆ… ನುರ್-ಕಂಡು… ಹತ್ಕ ಬೇಕಾತ್ತಲೇ
ಇಲ್ದೇ ಹೋರೇ … ಬಾಗ್ಲಂಗೆ… ನೇಲ್ಕ ಹೋಯ್ಕಾತ್ತಲೇ

ಕಯ್ಯಂಗ್ ಲಗೇಜು… ಹಿಡ್ಕ ಹೋರೇ… ಹೈಲ್ ಆತ್ತಲೇ
ಟುಂಗ್ ಟುಂಗ್ ಟುಂಗ್ ಟುಂಗ್

ಶಾಸ್ತ್ರಿ ಪಾರ್ಕಂಗೆ… ಟೋಟಲ್ ಆಯ್… ಎಷ್ಟ್ ಹೋಟ್ಲಿತ್ತೇ ?
ಟುಂಗ್ ಟುಂಗ್ ಟುಂಗ್ ಟುಂಗ್

ಹಾಡಿ-ಗುಡ್ಯಂಗೆ… ಮೊಬೈಲ್ ನೆಟ್-ವರ್ಕ್
ಸಿಕ್ಕುದ್ ಹ್ಯಾಂಗೇ… ಹೇಳಿ ಕಾಂಬಾ
ಜಬ್ಬು ಸೆಟ್ಟಂಗೇ… ಸಿಗ್ನಲ್ ಇಲ್ದಿರೂ
ಫೋನ್ ಮಾಡ್ತಾ ನಮ್ಮ… ಚೀಂಕ್ರ ಕಾಣಿ

ನ…ಮ್ಮಾ ಬದಿ ಮಕ್ಳ್… ಪೂ…ರಾ… ಪಣ್ಕಲ್ದೇ
ಓ…ದುದ್ರಂಗೇ ಮಾತ್ರ… ಒಂ…ಚೂರ್… ಮುಂದಲ್ದೇ

ಗೆದ್ದಿ ಬೈಲಲ್ಲಿ… ಮ್ಯಾಚು ಶುರು ಆಯ್ತಲೇ
ಉರಿ ಬಿಸಿಲಿನಂಗೇ… ಆಡತಾ ಇರ್ತ್ರಲೇ

ಚೂರೂ ಪುರ್ಸೊತ್ತೇ… ಕೊಡ್ದೇ ಕಾಣಿ … ಹ್ಯಾಂಗ್ ಆಡ್ತ್ರಲೇ
ಟುಂಗ್ ಟುಂಗ್ ಟುಂಗ್ ಟುಂಗ್

ಶಾಸ್ತ್ರಿ ಪಾರ್ಕಂಗೆ… ಟೋಟಲ್ ಆಯ್… ಎಷ್ಟ್ ಹೋಟ್ಲಿತ್ತೇ ?
ಟುಂಗ್ ಟುಂಗ್ ಟುಂಗ್ ಟುಂಗ್

ಮಾಯಿನ್ ಹಣ್ಣನ್… ಕಂಡರಂದ್ರೆ ಸಾಕ್
ಕಲ್ ಕುಟ್ಟಿ ಗೊಂಚಲನ್ನೇ… ತಾಳ್ಸುದಲ್ದೇ
ಹಬ್ಬದ ಗುಡಿಯಾ… ಬಜಾರಂಗೆ ಸುಮ್ನೇ
ಬಿಲಾಸ್ ಬಿಟ್ಟರ್ ಕಣಗ್… ತಿರ್ಗುದಲ್ದೇ

ದಾ…ನಿ ಬ್ಯಾಳಿಯನ್ನು… ಬೇ…ಸಿ ತಿಂದರೇ
ಹಾ…ಳ್ ಹೊಟ್ಟೆಯಂಗೆ… ವಾ…ಯು ಆತ್ತಲೇ

ಹೆಣ್ಮಕ್ಳ್ ಕಲ್ಲಂಗೆ… ಗುಡ್ಣ … ಆಡ್ತಿದ್ರಲೇ
ಗಂಡ್ಮಕ್ಳ್ ಬಳ್ಕಂಡ್… ತಿರ್ಗತಾ ಇದ್ರಲೇ

ರಜಿ ಸಿಕ್ತಂದ್ರೆ… ಅಡುಕ್-ಇವ್ಕೇ…ಲಾಯ್ಕ್ ಆತ್ತಲೇ
ಟುಂಗ್ ಟುಂಗ್ ಟುಂಗ್ ಟುಂಗ್

ಶಾಸ್ತ್ರಿ ಪಾರ್ಕಂಗೆ… ಟೋಟಲ್ ಆಯ್… ಎಷ್ಟ್ ಹೋಟ್ಲಿತ್ತೇ ?
ಟುಂಗ್ ಟುಂಗ್ ಟುಂಗ್ ಟುಂಗ್

————————————————
ಮೂಲ ಹಾಡು: ‘ಬಚ್ಚನ್’ ಚಿತ್ರದ ‘ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?’ ಸಾಹಿತ್ಯ : ಯೋಗರಾಜ್ ಭಟ್
ಕೃಪೆ: ಇಂಟರ್ನೆಟ್

ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್
ಮಂಡ್ಯಾ ಮಾರ್ಕೆಟ್ಟು… ಚೂಡಿದಾರೂ… ರೇಟ್ ಏನಿದೆ?
ಟುಂಗ್ ಟುಂಗ್ ಟುಂಗ್ ಟುಂಗ್

ಕೆಲವೊಮ್ಮೆ… ಕೆಲವೊಂದು… ತಿಳಕೋ ಬೇಕಾಯ್ತದೆ
ಇಲ್ಲಾ ಅಂದ್ರೆ… ಮರ್ಯಾದೆ… ಕಳ್ಕೋ ಬೇಕಾಯ್ತದೆ

ಜನರಲ್ ನಾಲೆಜ್ಜು… ಇಲ್ದೆ ಹೋದ್ರೆ… ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್

ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್

ಇಂಟರ್-ನೆಟ್ಟಲ್ಲಿ… ಇಡ್ಲಿ ನಾ ಡವ್ನ್-ಲೋಡ್
ಮಾಡೋದು ಹೆಂಗೇ… ಹೇಳಿ ಸ್ವಾಮೀ
ಇಂಥಾ ಪ್ರಶ್ನೇಗೆ… ಉತ್ತರ ಸಿಗದೇ
ಸತ್ತ್ ಹೋದಾ ನನ್ನಾ… ಹಳೇ ಪ್ರೇಮೀ

ನ…ನ್ನಾ ಪ್ರೀತಿ ಪಾಠಾ… ಸ್ವ…ಲ್ಪಾ ಹಿಂಗೇನೇ
ಸ್ಕೂ…ಲಿನಲ್ಲೀ ಲಾಸ್ಟು… ಬೆಂ…ಚು… ನಿಮ್ದೇನೇ

ಸಂಜೇ ಟೈಮಲ್ಲಿ… ಕ್ಲಾಸು ಸ್ಟಾರ್ಟ್ ಆಯ್ತದೆ
ಬರೀ ಹುಡುಗರಿಗೆ… ಪ್ರವೆಸಾ ಇರ್ತದೆ

ಎಜುಕೇಸನ್ನೇ… ಇಲ್ದೆ ಹೋದ್ರೆ… ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್

ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್

ವಿಂಡೋ ಕರ್ಟನ್ನು… ತೆಗೆದರೆ ಸಾಕು
ಕೈ ಕೊಟ್ಟ ಹುಡುಗರೇ… ಕಾಣುತಾರೇ
ಕಾಫಿಡೇ ಕೊಡೆಯಾ… ಕೆಳಗಡೆ ಸುಮ್ನೆ
ನಮ್ಗೆ ಫ್ರೆಶ್ ಆಗಿ ಯಾರೋ… ಸಿಗುತಾರೆ

ಮೂ…ರೂ ಘಂಟೆಯಲ್ಲಿ… ಪ್ಯಾ…ರೂ ಆದರೇ
ಆ…ರೂ ಘಂಟೆಗೆಲ್ಲಾ… ಬೋ…ರೂ ಆಯ್ತದೆ

ಲೇಡೀಸ್ಗೆ ಲವ್ವಲ್ಲಿ… ಟೈಮು… ಬೇಕಾಯ್ತದೆ
ಗಂಡಸ್ರು ಪೇಷೆನ್ಸು… ಕಲೀ ಬೇಕಾಯ್ತದೆ

ತುಂಬಾ ಅರ್ಜೆಂಟು… ಆರೋಗ್ಯಕ್ಕೆ… ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್

ಮೈಸೂರ್ ಪಾಕಲ್ಲಿ… ಟೋಟಲ್ ಆಗಿ… ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್


ಹಿಂದಿಯ ‘ಕೂಲಿ ನಂಬರ್ 1’ ಪಿಚ್ಚರಿನ ‘ಮೈ ತೊ ರಸ್ತೆ ಸೆ ಜಾ ರಹಾ ಥಾ…’ ಪದ್ಯ ನಮ್ ಕುಂದಾಪ್ರ ಸ್ಟೈಲಗೆ 🙂

ಅಣಕ ಬರದ್ದ್ : ವಿಜಯರಾಜ ಕನ್ನಂತ

ಕಾಪಿ ರೈಟ್ಸು ಮಣ್ಣ-ಮಸಿ ಎಂತದಿಲ್ಲ… ಎಲ್ ಬೇಕಾರೂ ಹಾಯ್ಕಣಿ… ಆರೇ ಬರ್ದರನ್ನೊಂದ್ ನೆನ್ಪ್ ಮಾಡ್ಕಣಿ…  🙂

 

ಮೈ ತೊ ಗುಡ್ಡಿ ಬದಿಗ್… ಜಾ ರಹಾ ಥಾ

ಮೈ ತೊ ಗ್ವಾಯ್ ಹಣ್ಣ್… ಖಾ ರಹಾ ಥಾ
ಮೈ ತೋ ಗ್ವಾಯ್ ಬೀಜ ಓಟ್ಟ್… ಮಾಡ್ ರಹಾ ಥಾ

ಗುಡ್ಡಿ ಬದಿಗ್ ಜಾ ರಹಾ ಥಾ… ಗ್ವಾಯ್ ಹಣ್ಣ್ ಖಾ ರಹಾ ಥಾ… ಗ್ವಾಯ್ ಬೀಜ ಒಟ್ಮಾಡ್ ರಹಾ ಥಾ
ನಿಂಗ್ ಮೆಣ್ಸ್ ನುರ್ದಾಂಗಾರೆ… ನಾ ಎಂತ ಮಾಡೂದ್ || 2 ಸಲ ||

ಮೈ ತೊ ಹಾಡಿ ಬದಿಗ್… ಜಾ ರಹಿ ಥಿ
ಮೈ ತೊ ಸೊಪ್ಪ್ ಕೊಯ್ದ್… ಹಾಕ್ ರಹಿ ಥಿ
ಮೈ ತೊ ದರ್ಲಿ ಓಟ್ಟ್… ಮಾಡ್ ರಹಿ ಥಿ

ಹಾಡಿ ಬದಿಗ್ ಜಾ ರಹಿ ಥಿ… ಸೊಪ್ಪ್ ಕೊಯ್ದ್ ಹಾಕ್ ರಹಿ ಥಿ… ದರ್ಲಿ ಒಟ್ಮಾಡ್ ರಹಿ ಥಿ
ನಿಂಗ್ ಮೆಣ್ಸ್ ನುರ್ದಾಂಗಾರೆ… ನಾ ಎಂತ ಮಾಡೂದ್ || 2 ಸಲ ||

ಹೊಟ್ಟಿ… ಉರ್ಸ್ ಕಣ್ಕ್ ಹೆಣೆ… ಎಲ್ಲಾ
ಅಷ್ಟ್ ಕೊಂಗಾಟ… ನಿನ್ ಮೇಲೆ… ಬಲ್ಯಾ
ಹೊಟ್ಟಿ… ಉರ್ಸ್ ಕಣ್ಕ್ ಹೆಣೆ… ಎಲ್ಲಾ
ಅಷ್ಟ್ ಕೊಂಗಾಟ… ನಿನ್ ಮೇಲೆ… ಬಲ್ಯಾ

ನಿನ್ನೊಟ್ಟಿಗಿವತ್ತ್… ಓಡ್ಬಪ್ಪುದಾ… ನಾನ್
ಅಪ್ಪಯ್ಯಂಗ್ ಗೊತ್ತಾರ್… ಬೆರ್ಸ್ಕಬತ್ರ್… ಕಾಣ್

ನಮ್ಮನ್ ಕಂಡ್ರೆ ಎಲ್ರಿಗೂ… ಹೊಟ್ಟ್ಯಗೆ ಗಿಮ್ಚದಂಗಾತ್ತ್
ಎಂತ ಹೇಳುದ್ ಗಡೆ… ನಮ್-ನಮನಿ ಕತಿ ಕಟ್ತೋ

ಮೈ ತೊ ತ್ವಾಟದ್ ಬದಿಗ್… ಜಾ ರಹಾ ಥಾ
ಮೈ ತೊ ಹೆಡಿಮಂಡಿ… ಹೆಕ್ಕ್ ರಹಾ ಥಾ
ಮೈ ತೋ ಬಿದ್ದ್-ಅಡ್ಕಿ… ಒಟ್ಮಾಡ್ ರಹಾ ಥಾ

ತ್ವಾಟದ್ ಬದಿಗ್ ಜಾ ರಹಾ ಥಾ… ಹೆಡಿಮಂಡಿ ಹೆಕ್ಕ್ ರಹಾ ಥಾ… ಬಿದ್ದಡ್ಕಿ ಒಟ್ಮಾಡ್ ರಹಾ ಥಾ
ನೀ ಸೊಡ್ಡ್ ಬೀಗ್ಸ್-ಕಂಡ್ರೆ… ನಾ ಎಂತ ಮಾಡೂದ್ || 2 ಸಲ ||

ಹೊಸ್ತ್ ಯಾವ್ದಾರೂ… ಪಿಚ್ಚರಿಗೆ… ಹ್ವಾಪಾ
ಪಾರಿಜಾತದಂಗ್… ಚಾ ಕುಡ್ಕ…ಬಪ್ಪಾ
ಹೊಸ್ತ್ ಯಾವ್ದಾರೂ… ಪಿಚ್ಚರಿಗೆ… ಹ್ವಾಪಾ
ಪಾರಿಜಾತದಂಗ್… ಚಾ ಕುಡ್ಕ…ಬಪ್ಪಾ

ನುಂಗ್ವರ್ ಕಣಗೆ… ನನ್ನನ್ ಎಂತಕೆ… ಕಾಂ…ತೆ
ಸತ್ಯ ಹೇಳುದಾ ಹೆಣೆ… ನೀ ಚಂದು… ಗ್ವಾಂ…ಪಿ

ಅಪ್ಪಯ್ಯ ಎಲ್ಲಾರೂ… ಬಪ್ಕಿದ್ರ್… ಬೇಗ ಮನಿಗ್ಹೋಪಾ
ಬಂದ್ ಅರ್ಧ… ಗಂಟಿ ಆಯ್ಲ… ನಿಂಗ್ ತಕಂಡ್ ಹೋತ್ತಾ?

ಮೈ ತೊ ಗ್ವಾಯ್ ಬೀಜ ಫ್ಯಾಕ್ಟರಿ… ಜಾ ರಹಿ ಥಿ
ಮೈ ತೊ ಗ್ವಾಯ್ ಬೀಜ… ಪೀಲ್ ರಹಿ ಥಿ
ಮೈ ತೊ ಬಟ್ವಾಡಿ… ಲೇ ರಹಿ ಥಿ

ಗ್ವಾಯ್ ಬೀಜ ಫ್ಯಾಕ್ಟರಿ ಜಾ ರಹಿ ಥಿ… ಗ್ವಾಯ್ ಬೀಜ ಪೀಲ್ ರಹಿ ಥಿ… ಬಟ್ವಾಡಿ ಲೇ ರಹಿ ಥಿ
ನಿನ್ನಜ್ಜಿ ನೆಗ್ದ್ ಬಿದ್ ಹೋರೆ… ನಾ ಎಂತ ಮಾಡೂದ್ || 2 ಸಲ ||

ಮೈ ತೊ ಗುಡ್ಡಿ ಬದಿಗ್… ಜಾ ರಹಾ ಥಾ
ಮೈ ತೊ ಗ್ವಾಯ್ ಹಣ್ಣ್… ಖಾ ರಹಾ ಥಾ
ಮೈ ತೋ ಗ್ವಾಯ್ ಬೀಜ ಓಟ್ಟ್… ಮಾಡ್ ರಹಾ ಥಾ

ಗುಡ್ಡಿ ಬದಿಗ್ ಜಾ ರಹಾ ಥಾ… ಗ್ವಾಯ್ ಹಣ್ಣ್ ಖಾ ರಹಾ ಥಾ… ಗ್ವಾಯ್ ಬೀಜ ಒಟ್ಮಾಡ್ ರಹಾ ಥಾ
ನಿಂಗ್ ಮೆಣ್ಸ್ ನುರ್ದಾಂಗಾರೆ… ನಾ ಎಂತ ಮಾಡೂದ್ || 2 ಸಲ ||

ಮೂಲ ಹಾಡು: ಹಿಂದಿಯ ‘ಕೂಲಿ ನಂಬರ್ 1’ ಪಿಚ್ಚರಿನ ‘ಮೈ ತೊ ರಸ್ತೆ ಸೆ ಜಾ ರಹಾ ಥಾ…’

ಮೈ ತೋ ರಸ್ತೇ ಸೇ… ಜಾ ರಹಾ ಥಾ
ಮೈ ತೋ ಭೇಲ್ ಪುರೀ… ಖಾ ರಹಾ ಥಾ
ಮೈ ತೋ ಲಡ್ಕೀ… ಘುಮಾ ರಹಾ ಥಾ

ರಸ್ತೇ ಸೇ ಜಾ ರಹಾ ಥಾ… ಭೇಲ್ ಪುರೀ ಖಾ ರಹಾ ಥಾ… ಲಡ್ಕೀ ಘುಮಾ ರಹಾ ಥಾ
ತುಜ್ಕೋ ಮಿರ್ಚೀ ಲಗೀ ತೋ… ಮೈ ಕ್ಯಾ ಕರೂಂ || 2 ಸಲ ||

ಮೈ ತೋ ರಸ್ತೇ ಸೇ… ಜಾ ರಹೀ ಥೀ
ಮೈ ತೋ ಐಸ್ ಕ್ರೀಮ್… ಖಾ ರಹೀ ಥೀ
ಮೈ ತೋ ನೈನಾ… ಲಡಾ ರಹೀ ಥೀ

ರಸ್ತೇ ಸೇ ಜಾ ರಹೀ ಥೀ… ಜಾ ರಹೀ ಥೀ ಖಾ ರಹೀ ಥೀ… ನೈನಾ ಲಡಾ ರಹೀ ಥೀ
ತುಜ್ಕೋ ಮಿರ್ಚೀ ಲಗೀ ತೋ… ಮೈ ಕ್ಯಾ ಕರೂಂ || 2 ಸಲ ||

ಜಲೇ ಚಾಹೇ… ಸಾರಾ ಜಮಾನಾ
ಚಾಹೇ ತುಜ್ಹೆ… ತೇರಾ ದೀವಾನಾ
ಜಲೇ ಚಾಹೇ… ಸಾರಾ ಜಮಾನಾ
ಚಾಹೇ ತುಜ್ಹೆ… ತೇರಾ ದೀವಾನಾ

ಸಂಗ್ ತೇರೇ… ಮೈ ಭಾಗ್ ಜಾವೂಂ
ನಜರ್ ಕಿಸೀಕೋ… ಭೀ ನ ಆವೂಂ

ಲೋಗ್ ದಿಲ್-ವಾಲೋಂ ಸೆ… ಯಾರ್ ಜಲತೇ ಹೈ
ಕೈಸೇ ಬತಾವೂಂ… ಕ್ಯಾ-ಕ್ಯಾ ಚಾಲ್ ಚಲತೇ ಹೈ

ಮೈ ತೋ ಗಾಡೀ ಸೇ… ಜಾ ರಹಾ ಥಾ
ಮೈ ತೋ ಸೀಟೀ… ಬಜಾ ರಹಾ ಥಾ
ಮೈ ತೋ ಟೋಪೀ… ಫಿರಾ ರಹಾ ಥಾ

ಗಾಡೀ ಸೇ ಜಾ ರಹಾ ಥಾ… ಸೀಟೀ ಬಜಾ ರಹಾ ಥಾ… ಟೋಪೀ ಫಿರಾ ರಹಾ ಥಾ
ತುಜ್ಕೋ ಧಕ್ಕಾ ಲಗಾ ತೋ… ಮೈ ಕ್ಯಾ ಕರೂಂ || 2 ಸಲ ||

ನಯೀ ಕೋಯೀ ಪಿಚ್ಚರ್… ದಿಖಾ ದೇ
ಮುಜ್ಹೆ ಕಹೀ… ಖಾನಾ ಖಿಲಾದೇ
ನಯೀ ಕೋಯೀ ಪಿಚ್ಚರ್… ದಿಖಾ ದೇ
ಮುಜ್ಹೆ ಕಹೀ… ಖಾನಾ ಖಿಲಾದೇ

ಜರಾ ನಿಗಾಹೋಂ ಸೇ… ಗಿಲಾ ದೇ
ಪ್ಯಾಸ್ ಮೇರೆ ದಿಲ್ ಕೀ… ಭುಜಾ ದೇ

ಆಜ್ ತುಜ್ಹೆ ಜೀ ಭರಕೇ… ಪ್ಯಾರ್ ಕರನಾ ಹೈ
ತೇರೀ ನಿಗಾಹೋಂ ಸೇ… ದೀದಾರ್ ಕರನಾ ಹೈ

ಮೈ ತೋ ಠುಮಕಾ… ಲಗಾ ರಹೀ ಥೀ
ಮೈ ತೋ ಗೀತ್ ಕೋಯೀ… ಗಾ ರಹೀ ಥೀ
ಮೈ ತೋ ಚಕ್ಕರ್… ಚಲಾ ರಹೀ ಥೀ

ಠುಮಕಾ ಲಗಾ ರಹೀ ಥೀ… ಗೀತ್ ಕೋಯೀ ಗಾ ರಹೀ ಥೀ… ಚಕ್ಕರ್ ಚಲಾ ರಹೀ ಥೀ
ತೇರೀ ನಾನೀ ಮರೀ ತೋ ಮೈ ಕ್ಯಾ ಕರೂಂ || 2 ಸಲ ||

ಮೈ ತೋ ರಸ್ತೇ ಸೇ… ಜಾ ರಹಾ ಥಾ
ಮೈ ತೋ ಭೇಲ್ ಪುರೀ… ಖಾ ರಹಾ ಥಾ
ಮೈ ತೋ ಲಡ್ಕೀ… ಘುಮಾ ರಹಾ ಥಾ

ರಸ್ತೇ ಸೇ ಜಾ ರಹಾ ಥಾ… ಭೇಲ್ ಪುರೀ ಖಾ ರಹಾ ಥಾ… ಲಡ್ಕೀ ಘುಮಾ ರಹಾ ಥಾ
ತುಜ್ಕೋ ಮಿರ್ಚೀ ಲಗೀ ತೋ… ಮೈ ಕ್ಯಾ ಕರೂಂ || 2 ಸಲ ||


‘ಕೊಲವೆರಿ’ ಸ್ಟೈಲಗೆ ‘ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ… ಬ್ಯಾಟ್’… 🙂

 

ಯೋ ಬಾಯ್ಸ್… ಐ ಯಾಮ್ ಬ್ಯಾಟಿಂಗ್ ಹೀಂಗ್

ಹಪ್ಪ್ ಸಾಂಗ್… ಪೊಕ್ಕ್ ಸಾಂಗ್

ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ… ಬ್ಯಾಟ್
ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ… ಬ್ಯಾಟ್

ಗೆದ್ದವ್ರ್ ಹಂಬಕ್…

ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ… ಬ್ಯಾಟ್

ಎಂಟಾಣಿ ಟಾಸ್…

ವೈ ದಿಸ್……… ಹೆಡಿಮಂಡಿ… ಬ್ಯಾಟ್

ದಿಸ್ಟೆನ್ಸಲ್ಲ್… ಗೆದ್ದಿ ಗೆದ್ದಿ
ಗೆದ್ದಿ ಕೊಯಿಲು… ಆಯ್ತು
ಶಾಲಿಗ್ ಬೇಸ್ಗಿ-ರಜಿ … ಸಿಕ್ತು ಸಿಕ್ತು
ನಮ್ಗ್ ಆಡುಕ್… ಲಾಯ್ಕು

ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ… ಬ್ಯಾಟ್
ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ… ಬ್ಯಾಟ್

ಎರ್ಡ್ ತಿಂಗ್ಳು… ಪೂರ್ತಿ ಪೂರ್ತಿ
ಪೂರ್ತಿ ನಮ್ದು… ಆಟ
ದೋಸ್ತಿ ದೋಸ್ತಿ… ಸಿಕ್ತ್ರು ಸಿಕ್ತ್ರು
ಮೈಯ್ಯು ಪೂರ್ತಿ… ಧೂಳು

ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ… ಬ್ಯಾಟ್
ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ… ಬ್ಯಾಟ್

ಕೈಯ್ಯಲ್ಲಿ ಬ್ಯಾಟ್… ಓನ್ಲೀ ಕುಂದಾಪ್ರ ಕನ್ನಡ.
ಕಯ್ಯಗ್ ಬ್ಯಾಟು… ಹಾಕ್ಯಾ ಬಾಲು
ನಾನು ಜಪ್ತೆ… ಸಿಕ್ಸರ್ರು

ಸಂಕ್ಟ ಆಯ್ತು… ಬಾಲ್ ಬಂತ್
ಬಿತ್ತ್ ವಿಕೇಟ್ಸು… ಮೂರೂ

ಹಂಬಕ್ ಹಂಬಕ್… ಬರೀ…ಹಂಬಕ್
ಈ ಆಟದಂಗೆ… ನಿಮ್ದು

ಬಾಲ್ ಬಾಲ್… ಆಯಿತ್ ನೋಬಾಲ್
ಇಲ್ದಿರೆ ನಾ ಹ್ಯಾಂಗ್.., ಔಟು

ಏ ಗಡೇ ಹೆಡಿಮಂಡಿ… ಬ್ಯಾಟ್ ನಂದು
ನೀವ್ ಆಡತ್-ಹ್ಯಾಂಗ್… ಕಾಂತೆ
ಈ ಮ್ಯಾಚ್-ಉ ಶುರು ಮೊದ್ಲಿಂದ್ ಆಯ್ಕು
ಇಲ್ದೀರ್ ನೀವ್ ಮನಿಗ್ ಹೋಯ್ಕ್

ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ… ಬ್ಯಾಟ್
ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ… ಬ್ಯಾಟ್
ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ… ಬ್ಯಾಟ್
ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ… ಬ್ಯಾಟ್

ಹಪ್ಪ್ ಸಾಂಗ್…
——————————————————————————————-

ಮೂಲ ಹಾಡು: ‘3’ ತಮಿಳು ಚಿತ್ರದ ‘ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ…’
ಕೃಪೆ: http://budbudke-budbudke.blogspot.in/2012_09_01_archive.html

ಯೊ ಬೋಯ್ಸ್… ಐ ಯಾಮ್ ಸಿ೦ಗಿ೦ಗ್ ಸಾಂಗ್
ಸೂಪ್ ಸಾಂಗ್… ಫ್ಲಾಪ್ ಸಾಂಗ್

ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ?
ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ?

ರಿದಮ್ ಕರೆಕ್ಟ್…

ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ?

ಮೆ೦ಟೈನ್ ದಿಸ್…

ವೈ ದಿಸ್ ಕೊಲವೆರಿ………… ಅಡೀ…

ಡಿಸ್ಟೇನ್ಸ್-ಲಾ… ಮೂನು ಮೂನು
ಮೂನ್ ಕಲರ್ರು… ವೈಟು
ವೈಟ್ ಬ್ಯಾಕ್-ಗ್ರೌಂಡ್… ನೈಟು ನೈಟು
ನೈಟು ಕಲರ್ರು… ಬ್ಲ್ಯಾಕು

ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ?
ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ?

ವೈಟ್ ಸ್ಕಿನ್ನು… ಗರ್ಲು ಗರ್ಲು
ಗರ್ಲು ಹಾರ್ಟು… ಬ್ಲ್ಯಾಕು
ಐಸು ಐಸು.. ಮೀಟು ಮೀಟು
ಮೈಯ್ ಫ್ಯೂಚರ್… ಡಾರ್ಕು

ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ?
ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ?

ಕೈಲ ಗ್ಲಾಸ್… ಓನ್ಲೀ ಇ೦ಗ್ಲೀಷ್
ಹ್ಯಾ೦ಡ್ಲಾ ಗ್ಲಾಸ್… ಗ್ಲಾಸ್ಲಾ ಸ್ಕಾಚು
ಐಸು ಫುಲ್ಲು… ಟಿಯರ್ರು

ಎ೦ಮ್ಟಿ ಲೈಫು… ಗರ್ಲ್ ಕಮ್ಮು
ಲೈಫು ರಿವರ್ಸು… ಗಿಯರ್ರು

ಲವ್ವು ಲವ್ವು… ಓ ಮೈ ಲವ್ವು
ಯು ಶೋಡು ಮಿ… ಬವ್ವು

ಕವ್ವು ಕವ್ವು…ಹೋಲಿ ಕವ್ವು
ಐ ವಾ೦ಟ್ ಯು ಹಿಯರ್… ನವ್ವು

ಗಾಡ್ ಐ ಯಾಮ್ ಡೈಯಿ೦ಗ್ ನವ್ವು
ಶೀ ಇಸ್ ಹ್ಯಾಪ್ಪಿ ಹವ್ವು?

ದಿಸ್ಸು ಸಾಂಗ್-ಉ… ಫಾರ್ ಸೂಪ್ ಬಾಯ್ಸು
ವಿ ಡೋ೦ಟ್ ಹ್ಯಾವ್ ಚಾಯ್ಸು

ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ?
ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ?
ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ?
ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡೀ?

ಫ್ಲಾಪ್ ಸಾಂಗ್…


‘ನೆನಪಿರಲಿ’ ಚಿತ್ರದ ‘ಕೂರಕ್ ಕುಕ್ರಳ್ಳಿ ಕೆರೆ’ ಹಾಡು ಕುಂದಾಪ್ರಕ್ಕೆ ಬಂದು ‘ಕೂಕಂಬ್ಕ್ ಮರವಂತೆ ಬೀಚ್’ ಆಯಿತ್ 🙂

 

ಹ್ವಾಯ್ ಯಾರದ್ ಹೆದ್ರಕಂಬರ್… ಅಂಡ್ಕಂಬರ್
ಹೊಕ್ಕಂಬರ್… ಮಂಡಿ ಜಪ್ಕಂಬರ್… ಹಳೀನ್ ಹಿಂಡಲಗೆ ಮಾತಾಡ್ವರ್… ಸಂತಿಯಗೆ ಪಿಸಿ-ಪಿಸಿ ಅಂಬರ್

ಕುಂದಾಪುರ್ದಂತ ತಾಲೋಕಗೆ ಆಯ್ಕಂಡ್… ಕಾಂಬುಕ್ ಬೇಕಾದ್ದೆಲ್ಲ ಇದ್ದೂ
ಹೊಳಿ, ಕಾಡ್, ಗುಡ್ಡಿ ಇದ್ರೂ… ಪ್ರೀತಿ ಮಾಡುಕ್ ಜಾಗ ಇದ್ರೂ
ಕಳ್ರ ಕಣಂಗೆ ಮಿಣ್ಣಗೆ ಹೊತ್ರ್ಯಲ್ಲ…
ಬನಿಯೇ… ಇಲ್ಕಾಣಿಯೇ… ನಾನ್ ಲವ್ ಮಾಡು ಸ್ಟೈಲ್ ಒಂಚೂರ್ ಕಲಿನಿಯೇ !!

ಕೂಕಂಬ್ಕ್ ಮರವಂತೆ ಬೀಚ್…ಬಾ ಬಾ… ಮೀಯುಕ್ ಕೋಟೇಶ್ವರ ಕೆರೆ… ಬಾ ಬಾ

ಕೂಕಂಬ್ಕ್ ಮರವಂತೆ ಬೀಚ್… ಮೀಯುಕ್ ಕೋಟೇಶ್ವರ ಕೆರೆ… ಲವ್ವಿಗೇ… ಈ ಲವ್ವಿಗೇ
ಕೊಡಚಾದ್ರಿ ಬೆಟ್ಟ ಇತ್ … ಈಚಿಗ್ ಮಾರ್ಣಕಟ್ಟಿ ಇತ್… ಲವ್ವಿಗೆ… ನಮ್ ಲವ್ವಿಗೆ
ಈ ಹೆದ್ರಿಕಿ ಬಿಟ್ಟಾಕಿ… ಲವ್ ಮಾಡ್ … ಲವ್ ಮಾಡ್… ಲವ್ ಮಾಡ್
ನೀ ಬಿಲಾಸ್ ಬಿಟ್ಟಾರೂ… ಲವ್ ಮಾಡ್… ಲವ್ ಮಾಡ್… ಲವ್ ಮಾಡ್

ಕುಂಭಾಶಿಯಗೆ ಪೂಜೆ ಹೆಳಿ… ಕೊಲ್ಲೂರಗೆ… ಜಪ ತಪ
ಕುಂಭಾಶಿಯಗೆ ಪೂಜೆ ಹೆಳಿ… ಕೊಲ್ಲೂರಗೆ… ಜಪ ತಪ… ಲವ್ವಿಗೆ… ನಮ್ಮಿಬ್ರ ಲವ್ವಿಗೆ
ನಾರ್ತಿನಲ್ಲಿ ಮೂಡ್ಗಲ್ ಬೆಟ್ಟ … ಈಸ್ಟಗೆ ಶಂಕ್ರನಾರ್ಣ ಇತ್… ಪೂಜಿಗೇ… ಲವ್ ಪೂಜಿಗೇ
ಈ ಹೆದ್ರಿಕಿ ಬಿಟ್ಟಾಕಿ… ಲವ್ ಮಾಡ್ … ಲವ್ ಮಾಡ್… ಲವ್ ಮಾಡ್
ನೀ ಬಿಲಾಸ್ ಬಿಟ್ಟಾರೂ… ಲವ್ ಮಾಡ್… ಲವ್ ಮಾಡ್… ಲವ್ ಮಾಡ್

ಗಲಾಟಿಯೇ ಇಲ್ಲ… ಬನಿ ಗಂಗೊಳ್ಳಿಯಲ್ಲಿ
ಮನ್ಸ್ ಬಿಚ್ಕಣಿ… ಮರ ಮರ ಗ್ವಾಯ್-ಮರ್ನ ಅಡೀಲಿ
ಹಲ್ಸ್ನಾಡಲ್ಲಿ ತಿರ್ಗಾಡುತ್ತ… ಹಲ್ಸ್ನಾಡಲ್ಲಿ ತಿರ್ಗಾಡುತ್ತ… ಮೂಡು ತಕಣಿ
ಹಳ್ಳಿಯರ್ ಕಣಂಗೆ… ಬದಕ್ತಾ ಒಳ್ಳೆದಾಯಿರಿನಿ

ಹ್ವಾಯ್ ಉಪ್ಪಿನಕುದ್ರು ಗೊಂಬೆಯಾಟ…. ಕಾಣಿ ಕಣ್ಬಿಟ್ಟು
ಯಕ್ಷಗಾನ ಬಯಲಾಟ ಕಂಡ್ಕಂಡ್… ಕಣ್ ಕಣ್ಣು ಬಿಟ್ಟು
ಕುಂದೇಶ್ವರನೇ… ಇಲ್ಲಿ ನಿಂತ್ಕಂಡಿದ್ದಾನೆ… ಪ್ರೀತಿಯಿಂದಲೇ… ಕುಂದಾಪ್ರವ ಕಾಯ್ತನೆ

ಪಾರಿಜಾತದಗೆ ಕಾಪಿ ಕುಡಿನಿ… ಶೆರಾನ್ ಗೆ ಉಂಡ್ಕ ಬನಿ… ಲವ್ವಿಗೆ… ರಿಚ್ ಲವ್ವಿಗೆ
ದುಡ್ಡಿದ್ರೆ ಪಿಚ್ಚರ್-ಹೋಟ್ಲು… ಇಲ್ದಿದ್ರೆ ಗುಡ್ಡಿ-ಹಕ್ಕ್ಲು… ಲವ್ವಿಗೆ… ಈ ಲವ್ವಿಗೆ
ಈ ಹೆದ್ರಿಕಿ ಬಿಟ್ಟಾಕಿ… ಲವ್ ಮಾಡ್ … ಲವ್ ಮಾಡ್… ಲವ್ ಮಾಡ್
ನೀ ಬಿಲಾಸ್ ಬಿಟ್ಟಾರೂ… ಲವ್ ಮಾಡ್… ಲವ್ ಮಾಡ್… ಲವ್ ಮಾಡ್

ಜಾತಿ ಕೆಟ್ರೂ ಸುಖ ಪಡ್ಕ್… ಜಾತಿ ಕೆಟ್ರೂ ಸುಖ ಪಡ್ಕ್… ಪ್ರೀತಿ ಮಾಡ್ ಹೆಣೆ
ನಾಳಿಗಾಪುದ್… ಇವತ್ತೇ ಆಯಿ ಹೊಯ್ಲಿ ಹೆಣೆ
ಹೊಕ್ಕಂಡ್… ಅಂಡ್ಕಂಡ್ ಮಾಡ್ವ… ಹೊಕ್ಕಂಡ್… ಅಂಡ್ಕಂಡ್ ಮಾಡ್ವ… ಗುಟ್ಟಿನ ಲವಮ್ಮ
ಸತ್ಯ ಹೇಳ್ ಹೆಣೆ… ಸತ್ತಿಕೂ ಲವ್ ಮಾಡ್ ಹೆಣೆ

ಜಾತಿನ್ ಸುಡು ಕಿಚ್ಚಿನ್ ಕಣಗೆ… ಪ್ರೀತಿ ಕಾಣ್ ಹೆಣೆ
ಮನ್ಸರೆಲ್ಲ ಒಂದೇ ಅಂದೇಳಿ… ಹೇಳ್ ನೀ ಹೆಣೆ
ಕುಂದಾಪ್ರ ಹಳ್ಯಗೆ… ಕಾರಂತ್ರ್ ಹುಟ್ಟಿದ್ರು… ಮೂಕಜ್ಜಿ ಕತೆಗೆ… ಜ್ಞಾನಪೀಠ ತಂದ್ಕೊಟ್ರು

ಸಮುದ್ರ ಬದಿ ಗಾಳಿ ಇತ್ತ್ … ಕಾಡೆಲ್ಲ ತಣ್ಣಗಿತ್ತ್… ಲವ್ವಿಗೇ… ಸ್ವೀಟ್ ಲವ್ವಿಗೇ
ಯಕ್ಷಗಾನದ್… ಪದ್ಯ ಇದೆ… ದರ್ಶಿನ-ಕೋಲದ ವಾದ್ಯ ಇತ್… ಪದ್ಯಕೆ … ಲವ್ ಪದ್ಯಕೆ
ಈ ಹೆದ್ರಿಕಿ ಬಿಟ್ಟಾಕಿ… ಲವ್ ಮಾಡ್ … ಲವ್ ಮಾಡ್… ಲವ್ ಮಾಡ್
ನೀ ಬಿಲಾಸ್ ಬಿಟ್ಟಾರೂ… ಲವ್ ಮಾಡ್… ಲವ್ ಮಾಡ್… ಲವ್ ಮಾಡ್

ಕೂಕಂಬ್ಕ್ ಮರವಂತೆ ಬೀಚ್…ಬಾ ಬಾ… ಮೀಯುಕ್ ಕೋಟೇಶ್ವರ ಕೆರೆ… ಬಾ ಬಾ

ಕೂಕಂಬ್ಕ್ ಮರವಂತೆ ಬೀಚ್… ಮೀಯುಕ್ ಕೋಟೇಶ್ವರ ಕೆರೆ… ಲವ್ವಿಗೇ… ಈ ಲವ್ವಿಗೇ
ಕೊಡಚಾದ್ರಿ ಬೆಟ್ಟ ಇತ್ … ಈಚಿಗ್ ಮಾರ್ಣಕಟ್ಟಿ ಇತ್… ಲವ್ವಿಗೆ… ನಮ್ ಲವ್ವಿಗೆ
ಈ ಹೆದ್ರಿಕಿ ಬಿಟ್ಟಾಕಿ… ಲವ್ ಮಾಡ್ … ಲವ್ ಮಾಡ್… ಲವ್ ಮಾಡ್
ನೀ ಬಿಲಾಸ್ ಬಿಟ್ಟಾರೂ… ಲವ್ ಮಾಡ್… ಲವ್ ಮಾಡ್… ಲವ್ ಮಾಡ್…

ಮೂಲ ಹಾಡು: ನೆನಪಿರಲಿ ಚಿತ್ರದ ಕೂರಕ್ ಕುಕ್ರಳ್ಳಿ ಕೆರೆ
ಕೃಪೆ: kannadalyrics.com

ಅರೆ ಯಾರ್ರೀ ಹೆದರ್‍ಕೊಳ್ಳೋರು… ಬೆದರ್‍ಕೊಳ್ಳೋರು
ಪೇಚಾಡೋರು… ಪರ್‍‍ದಾಡವ್ರು… ಮರಗಳ್ ಮರೆನಲ್ಲಿ ಮಾತಾಡವ್ರು…. ಮಾರ್ನಿಂಗ್ ಶೋನಲ್ಲಿ ಪಿಸ್ಗುಟ್ಟವ್ರು

ಮೈಸೂರ್ ಅಂತಾ ಜಿಲ್ಲೆಲಿದ್ದೂ… ಕಣ್ಣಿಗ್ ಬೇಕಾದ್ ನೋಟ ಇದ್ದೂ
ಹಳೆ ರಾಜ್ರು ಅಪ್ಣೆ ಇದ್ದೂ… ಪ್ರೀತಿ ಮಾಡೋಕ್ ಜಾಗ್ಗುಳ್ ಇದ್ದೂ
ಕದ್ದು ಮುಚ್ಚಿ ಓಡಾಡ್ತೀರಲ್ರೀ…
ಬನ್ರೀ… ನೋಡ್ರೀ… ನಾನ್ ಲವ್ ಮಾಡೊ ಸ್ಟೈಲ್ ಸ್ವಲ್ಪ ಕಲೀರೀ !

ಕೂರಕ್ಕ್ ಕುಕ್ಕ್ರಳ್ಳಿ ಕೆರೆ… ಬಾ ಬಾ… ತೇಲಕ್ ಕಾರಂಜಿ ಕೆರೆ… ಬಾ ಬಾ

ಕೂರಕ್ಕ್ ಕುಕ್ಕ್ರಳ್ಳಿ ಕೆರೆ… ತೇಲಕ್ ಕಾರಂಜಿ ಕೆರೆ… ಲವ್ವಿಗೇ… ಈ ಲವ್ವಿಗೇ
ಚಾಮುಂಡಿ ಬೆಟ್ಟ ಇದೆ… ಕನ್ನಂಬಾಡಿ ಕಟ್ಟೆ ಇದೆ… ಲವ್ವಿಗೆ… ನಂ ಲವ್ವಿಗೆ
ಈ ಭಯಬಿಸಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ
ಈ ದಿಗಿಲ್ ದಬ್ಬಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ

ಬಲ್ಮುರಿಲಿ ಪೂಜೆ ನೆಪ… ಎಡ್ಮುರಿಲಿ ಜಪ ತಪ
ಬಲ್ಮುರಿಲಿ ಪೂಜೆ ನೆಪ… ಎಡ್ಮುರಿಲಿ ಜಪ ತಪ… ಲವ್ವಿಗೆ… ನಿರ್ವಿಘ್ನ ಲವ್ವಿಗೆ
ನಾರ್ತಿನಲ್ಲಿ ಶ್ರೀರಂಗ್‍ಪಟ್ಣ… ಸೌತಿನಲ್ಲಿ ನಂಜನ್‍ಗೂಡು…ಪೂಜೆಗೇ… ಲವ್ ಪೂಜೆಗೇ
ಈ ಭಯಬಿಸಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ
ಈ ದಿಗಿಲ್ ದಬ್ಬಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ

ಗಲಾಟೆನೇ ಇಲ್ಲ ಬನ್ರೀ… ಗಲಾಟೆನೇ ಇಲ್ಲ ಬನ್ರೀ… ಗಂಗೊತ್ರಿಯಲ್ಲಿ
ಮನಸ್ಸು ಬಿಚ್ಕೊಳ್ರೀ… ಮರಮರ ಮರದ ಮರೇಲೀ
ಅರ್‍ಮನೆಲಿ ಅಡ್ಡಾಡುತ… ಅರ್‍ಮನೇಲಿ ಅಡ್ಡಾಡುತ… ಮೂಡು ತಗೊಳ್ರೀ
ರಾಜನ್ ತರಾನೇ… ಲವ್ವಲ್ ದರ್ಬಾರ್ ಮಾಡ್ಬಿಡ್ರೀ

ಹೇ ರಂಗನ್-ತಿಟ್ಟು ನೋಡಿಬಿಟ್ಟು… ಹಾಡ್ರಿ ಮುತ್ತಿಟ್ಟು
ಮುಡುಕುತೊರೆಲ್ ಮನಸು ಕೊಡ್ರಿ… ಕಣ್ಣಲ್ ಕಣ್ಣಿಟ್ಟು
ಕಾಳಿದಾಸನೆ… ಇಲ್ ರಸ್ತೆ ಆಗವ್ನೆ… ಪ್ರೀತಿ ಮಾಡೋವ್ರ್-ಗೆ… ಸರಿ ದಾರಿ ತೋರ್‍ತಾನೆ

ಕೆ.ಆರ್.ಎಸ್ ಅಲ್ಲಿ ಕೆಫೆ ಮಾಡಿ… ಬ್ಲಫ್ಫಿನಲ್ಲಿ ಬಫೆ ಮಾಡಿ… ಲವ್ವಿಗೆ… ರಿಚ್ ಲವ್ವಿಗೆ
ದುಡ್ಡಿದ್ರೆ ಲಲಿತ ಮಹಲ್… ಇಲ್ದಿದ್ರೆ ಒಂಟಿ ಕೊಪ್ಪಲ್… ಲವ್ವಿಗೆ… ಈ ಲವ್ವಿಗೆ
ಈ ಭಯಬಿಸಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ
ಈ ದಿಗಿಲ್ ದಬ್ಬಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ

ಜಾತಿ ಕೆಟ್ರು ಸುಖ ಪಡ್ಬೇಕ್… ಜಾತಿ ಕೆಟ್ರು ಸುಖ ಪಡ್ಬೇಕ್… ಪ್ರೀತಿ ಮಾಡಮ್ಮ
ನಾಳೆ ಆಗೋದು… ಇಂದೇ ಆಗಿ ಹೋಗ್ಲಮ್ಮಾ
ಕದ್ದು ಮುಚ್ಚಿ ಪ್ರೀತಿ ಮಾಡೋ… ಕದ್ದು ಮುಚ್ಚಿ ಪ್ರೀತಿ ಮಾಡೋ… ಕಳ್ಳ ಲವಮ್ಮ
ಸತ್ಯ ಹೇಳಮ್ಮ… ನಿಜ್ವಾದ್ ಪ್ರೀತಿ ಮಾಡಮ್ಮಾ

ಜಾತಿ ಸುಡೋ ಮಂತ್ರ ಕಿಡಿ… ಪ್ರೀತಿ ಕಣಮ್ಮಾ
ಮನುಜ ಮತ ವಿಶ್ವಪಥ… ಅಂಥ ಹೇಳಮ್ಮಾ
ತೀರ್ಥಹಳ್ಳಿಲಿ… ಕುವೆಂಪು ಹುಟ್ಟಿದ್ರು… ವಿಶ್ವಪ್ರೇಮನಾ… ಮೈಸೂರ್‍ಗೆ ತಂದ್ ಕೊಟ್ರು

ಮೈಸೂರೂ ಕೂಲಾಗಿದೆ… ಬೃಂದಾವನ ಗ್ರೀನಾಗಿದೆ… ಲವ್ವಿಗೇ… ಸ್ವೀಟ್ ಲವ್ವಿಗೇ
ನರಸಿಂ‍ಸ್ವಾಮಿ ಪದ್ಯ ಇದೆ…ಅನಂತ್‍ಸ್ವಾಮಿ ವಾದ್ಯ ಇದೆ… ಸಾಂಗಿಗೆ… ಲವ್ ಸಾಂಗಿಗೆ
ಈ ಭಯಬಿಸಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ
ಈ ದಿಗಿಲ್ ದಬ್ಬಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ

ಕೂರಕ್ಕ್ ಕುಕ್ಕ್ರಳ್ಳಿ ಕೆರೆ… ಬಾ ಬಾ… ತೇಲಕ್ ಕಾರಂಜಿ ಕೆರೆ… ಬಾ ಬಾ

ಕೂರಕ್ಕ್ ಕುಕ್ಕ್ರಳ್ಳಿ ಕೆರೆ… ತೇಲಕ್ ಕಾರಂಜಿ ಕೆರೆ… ಲವ್ವಿಗೇ… ಈ ಲವ್ವಿಗೇ
ಚಾಮುಂಡಿ ಬೆಟ್ಟ ಇದೆ… ಕನ್ನಂಬಾಡಿ ಕಟ್ಟೆ ಇದೆ… ಲವ್ವಿಗೆ… ನಂ ಲವ್ವಿಗೆ
ಈ ಭಯಬಿಸಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ
ಈ ದಿಗಿಲ್ ದಬ್ಬಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ


ಗಾಳಿಪಟದ “ಮಿಂಚಾಗಿ ನೀನು ಬರಲು” …ಕುಂದಾಪ್ರ ಕನ್ನಡದಗೆ…:)

(- ಅನುವಾದ ವಿಜಯರಾಜ್ ಕನ್ನಂತ್ )

ಎಲ್ಲ ಹಕ್ಕು ಕಾದಿರಿಸಲಾಗಿದೆ :-):-):-)

ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ
ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ
ನೀ ಇಲ್ದೆ ಕಿಚ್ಹ್ ಹಿಡ್ದಂಗಾಯಿ… ಎದಿಯೊಳಗೆ ಸೆಕಿಗಾಲ
ಇನ್ನಿಲ್ಯೇ ನಂಗೆ ಉಳ್ಗಾಲ…

ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ
ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ

ನಾ ನಿನ್ ಕನ್ಸಿಗೆ… ಬಾಡ್ಗಿಗೆ ಬಂದಿದ್ನೆ…
ತಿಂಗ್ಳ ಬಾಡ್ಗಿ ಕೊಟ್ ಹೋಪ್ಕೆ…ನಿಮ್ಮನಿಗೆ ಬತ್ತೆ ನಾ
ನಾ ಸರ್ತ ಮನ್ಸಿನ…ವರ್ತ್ಮಾನ ಹೇಳ್ವನೋ
ನಿನ್ನ್ ಕಂಡ್ ಕೂಡ್ಲೇ.. ಬಾಯ್ಬಂದ್ ಆಯ್ತ್ ಹೆಣೆ
ದಮ್ಮಯ್ಯ… ಓ ಹೆಣೆ… ನಿನ್ನ್ ಹಿಡ್ಕಂಡ್ ಬಾರ್ಸುದಾ.. (ಬಾರ್ಸುದ್ ಅಂದ್ರೆ ಇಲ್ಲಿ ನುಡ್ಸುದ್ ..ಹೊಡುದಲ್ಲ 🙂 )
ಇಲ್ ಕೇಣೆ..ಮೊದ್ಲೇ ಒಂಚೂರ್.. ಮರ್ಲ್ ನಂಗೆ

ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ
ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ

ನಿನ್ ಮನ್ಸಿನ್ ಪದ್ಯ.. ಕಡ ತಂದ್…. ನಾನೀಗ ಸಾಲಗಾರ
ವಟ್ಟಿ ಮಾಡಿ.. ಗೋಚ್ಕಂಡ್ ಹೋದ… ನೆನ್ಪನೆಲ್ಲ ಪಾಲ್ ಮಾಡ್ಕಂಬ ಬಾರಾ
ನಂಗೆಷ್ಟೇ ನೋವಾರೂ…ನಿಂಗ್ ನೋವ್ ಕೊಡುದಿಲ್ಲೇ …
ಇಲ್ ಕೇಣೆ… ಮೊದ್ಲೇ ಒಂಚೂರ್… ಪಿರ್ಕಿ ನಾನು…

ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ
ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ
ನೀ ಇಲ್ದೆ ಕಿಚ್ಹ್ ಹಿಡ್ದಂಗಾಯಿ… ಎದಿಯೊಳಗೆ ಸೆಕಿಗಾಲ
ಇನ್ನಿಲ್ಯೇ ನಂಗೆ ಉಳ್ಗಾಲ…


ಹ್ವಾಯ್ ಇದೆಂತ ದರ್ಶಿನಿ ಹೋಟ್ಲಗೆ ಜೀರಾ ರೈಸು, ಘೀ ರೈಸು ಅಂದೇಳಿ ಬೋರ್ಡ್ ಬರ್ದ್ ಹಾಕಿದಂಗಿತ್ತಲೆ.. ಎಂತಾ ಮರಾಯ್ರೆ ಹೋಟ್ಲ್ ಗೀಟ್ಲ್ ಇಟ್ಟಿರ್ಯಾ ಎಂತ ಕತಿ ಅಂದೇಳಿ ಮಂಡಿ ಗಿಂಡ್ಕಂಬ್ಕೆ ಶುರು ಮಾಡ್ಬೇಡಿ… ಹೋಟ್ಲ್ ಇಟ್ಟರೇ ಈಗ ಹ್ಯಾಂಗ್ ಸುಧಾರ್ಸುದಂದೇಳಿ ಮಂಡಿ ಬಿಶಿ ಮಾಡ್ಕಂಡಿದ್ರ್ ಮರ್ರೆ..ನೀವ್ ಎಂತದೋ ಹೇಳ್ತ್ರಿ… 🙂

ಮತ್ತೆಂತ ಅಲ್ಲ ಇದ್ ನಾನ್ ಇವತ್ತ್ ಹಿಡ್ಕಂಡ್ ಬಂದ್ ಕುಂದಾಪ್ರ ಕನ್ನಡ ಶಬ್ದ. ಈ ಶಬ್ದದ್ ಕತಿ ಎಂತ ಕಾಂಬ ಬನಿ ಹಂಗಾರೆ…

ರೈಸು = ಗಡದ್ದಾಗಿರು, ಭರ್ಜರಿಯಾಗಿರು, ಮಿಂಚುವುದು, ಕಳೆಕಟ್ಟುವುದು, ಮೆರೆಯು

ಯಾರಾರು ಬೆಂಗ್ಳೂರ್ ಬದಿಯರ ಹತ್ರ ರೈಸು ಅಂದ್ರೆ ಎಂತ ಅಂದೇಳಿ ಕೇಂಡ್ರೆ ಅವ್ರಿಗ್ ಗೊತ್ತಿಪ್ದ್ ಇಷ್ಟೇ.. “ವೈಟ್ ರೈಸು, ಜೀರಾ ರೈಸು, ಕಲರ್ಡ್ ರೈಸು, ಘೀರೈಸು, ರೈಸ್ ಬಾತ್ ಗೊತ್ತು ನಂಗೆ. ಇದ್ರಲ್ಲಿ ಯಾವ ರೈಸ್ ನೀವ್ ಹೇಳಿದ್ದು? ಇಲ್ಲ ನೀವು ಬಾಸ್ಮತಿ ರೈಸ್ ಬಗ್ಗೆ ಹೇಳ್ತಿದ್ದಿರಾ?” ಹೀಂಗಂದೇಳಿ ನಿಮ್ಮನ್ನೇ ಕೇಂತ್ರ್. ಅದನ್ನೂ ಕನ್ನಡದಗೆ ಕೇಂಡ್ರೆ ನಿಮ್ಮಜ್ಜಿ ಪುಣ್ಯ!!

ಇನ್ನೊಂದ್ ಬಾಯಲ್ಡ್ ರೈಸು (ಅದೇ ಮರ್ರೆ ನಮ್ಮ್ ಕೊಚ್ಚಕ್ಕಿ ಕೂಳ್!!) ಅಂದೇಳಿ ಇತ್ತಾರು ಈ ಬದ್ಯರಿಗೆ ಅದ್ ಆಯ್ ಬತ್ತಿಲ್ಯಲೆ.

ಇರ್ಲಿ ಈಗ ನಮ್ಮ ಕುಂದಾಪ್ರದ ರೈಸು ಎಂತ ಕಾಂಬ

ಏನಾರೂ ಭರ್ಜರಿಯಾದ ಪ್ರದರ್ಶನ, ಗಮನಸೆಳೆಯುವ ವ್ಯಕ್ತಿ-ವಿಶೇಷಗಳು, ಗುಂಪಿನಲ್ಲಿ ಮಿಂಚುವುದು ಹೀಂಗೆ ಸುಮಾರ್ ಸಂದರ್ಭದಗೆ ಈ “ರೈಸುವುದು” ಉಪ್ಯೋಗ ಆತ್ತ್

ಈ ಶಬ್ದ ಇಂಗ್ಲೀಶಿನ ರೈಸ್(rise)ನಿಂದ ಬಂದಿತಾ ಅಂದೇಳಿ ನನ್ ಅನ್ಮಾನ ಅಷ್ಟೇ. ಹೇಚ್ಚೂ ಕಡ್ಮಿ ಅರ್ಥ ಸತೇ ಹೊಂದಾಣ್ಕಿ ಆತ್ತ್

ಬಳಕೆ:

೧. ಮೊನ್ನೆ ಪೆರ್ಡೂರ್ ಮ್ಯಾಳ್ದರ್ ಆಟ ಏನ್ ರೈಸಿ ಹೋಯ್ತ್ ಮರಾಯ, ಬೆಳ್ಗಾಪೊಲ್ಲೊರಿಗೂ ಒಂಚೂರ್ ಕಣ್ಣ್ ಕೂರ್ರೆ ಹೇಳ್. ಅದ್ರಗೂ ಗದಾಯುದ್ಧ ಪ್ರಸಂಗನ್ನಂತೂ ಹೊಡಿ ಹಾರ್ಸಿ ಕೊಟ್ರ್ ಕಾಣ್

೨. ಮೊನ್ನೆ ಅಷ್ಟ್ ಜನ ಪದ್ಯ ಹೇಳ್ರ್ ಸುಳ್ಳಾ.. ಆರೆ ನಿನ್ನ್ ಪದ್ಯ ರೈಸ್ದಷ್ಟ್ ಇನ್ಯಾರದ್ದೂ ರೈಸ್ಲಿಲ್ಲ ಕಾಣ್

೩. ಎಂತ ಒಳ್ಳೇ ಗಡ್ಜಾಯಿ ಮದಿ ಮನಿಗ್ ಹೋರ್ಟಂಗಿತ್ತ್…ಎಷ್ಟ್ ರೈಸುಕಿತ್ತೋ ಏನ್ ಕತಿಯೋ…

ಪುರೈಸು = ಫೂರೈಸು, ನೀಗಿಸು, ಈಡೇರಿಸು, ಪೂರ್ತಿಮಾಡು,ಭರ್ತಿ ಮಾಡು,ಸರಬರಾಜು, ಸಾಗಣೆ

 ಪೂರೈಸು ಅನ್ನುವ ಗ್ರಾಂಥಿಕ ರೂಪ ಬಳಕೆಯಲ್ಲಿದೆಯಾದರೂ ಅದನ್ನು ಕುಂದಾಪುರ ಕನ್ನಡದಲ್ಲಿ ಚಿಕ್ಕದಾಗಿ-ಚೊಕ್ಕವಾಗಿ ಪುರೈಸು ಅಂತ ಬಳಕೆಯೇ ಜಾಸ್ತಿ. ಗ್ರಾಂಥಿಕ ಕನ್ನಡದಲ್ಲಿ ಪೂರೈಸು ಅನ್ನುವುದರ ಅರ್ಥ ಹೆಚ್ಚಾಗಿ ಒದಗಿಸು, ಈಡೇರಿಸು, ಪೂರ್ತಿಮಾಡು ಅಥವಾ ಮುಗಿಸು ಅನ್ನುವ ಅರ್ಥದಲ್ಲಿಯೇ ಬಳಸಲಾಗುತ್ತದೆ. ಉದಾಹರಣೆಗೆ ವಿದ್ಯುತ್ ಪೂರೈಕೆ, ಆಸೆ ಪೂರೈಸು, ಕೆಲಸವನ್ನು ಪೂರೈಸು. ಆದರೆ ಕುಂದಾಪುರ ಕನ್ನಡದಲ್ಲಿ ಈ ಎಲ್ಲಾ ಸಂದರ್ಭಗಳಿಗೆ ಹೊರತಾದ ಬಳಕೆಯೂ ಇದೆ. ಇದಕ್ಕೆ ಬೆಂಗಳೂರಿನ ಕಡೆ ಬಳಕೆಯಲ್ಲಿರುವ, ವ್ಯಾಪಾರಿಗಳು ಉಪಯೋಗಿಸುವ ಗಿಟ್ಟುವುದು aಅನ್ನುವ ರೂಡಿಯಲ್ಲಿನ ಶಬ್ದಕ್ಕೆ ತೀರಾ ಹತ್ತಿರದ ಅರ್ಥದಲ್ಲಿ ವ್ಯಾಪಾರ-ವ್ಯವಹಾರಗಳ ಕೊಡು-ಕೊಳ್ಳುವಿಕೆಯಲ್ಲಿ ಬಳಸಲಾಗುತ್ತದೆ. ನನಗೆ ತಿಳಿದಂತೆ ಈ ರೀತಿಯ ಅರ್ಥದಲ್ಲಿ ಪೂರೈಸು ಪದವನ್ನು ಬೇರೆ ಕಡೆ ಬಳಸುವುದು ತೀರಾ ಕಡಿಮೆ

(ಕುಂದಾಪ್ರ ಕನ್ನಡದ್ ಬಗ್ಗೆ ಯೋಚ್ನೆ ಮಾಡುವತಿಗೆಲ್ಲಾ ನಂಗೊಂದ್ ಆಲೋಚ್ನಿ ಬತ್ತ್. ಎಂತ ಕೇಂಡ್ರ್ಯಾ? ಈ ಉಕ್ತಲೇಖನ(ಅಂದ್ರೆ ಯಾರಾರೂ ಹೇಳದ್ದನ್ನ ಬರ್ಕಂಬತಿಗೆ)ಕ್ಕೆ ಶಾರ್ಟ್ ಹ್ಯಾಂಡ್ ಅಂದೇಳಿ ಎಂತೆಲ್ಲಾ ಕೋಡ್ ವರ್ಡ್ ಮಣ್ಣ್ ಮಶಿ ಎಲ್ಲಾ ಕಲಿತ್ರಲೆ, ಅದ್ರ್ ಬದ್ಲ್ ಕುಂದಾಪ್ರ ಕನ್ನಡದಗೆ ಬರ್ಕಂಡ್ರೆ ಅದಕ್ಕಿಂತ್ ಬೇಗ್ ಬರುಕಾತ್ತಾ ಅಂದೇಳಿ!! ಈಗ ನೀವೇ ಕಾಣಿ…”ನಾನು ದಾರಿಯಲ್ಲಿ ಬರುತ್ತಿರುವಾಗ” ಇದನ್ನೇ ಕುಂದಾಪ್ರ ಕನ್ನಡದಗೆ “ನಾ ದಾರಿಲ್ ಬಪ್ಪತಿಗೆ” ಅಂದೇಳಿ ಎಷ್ಟ್ ಸಣ್ಣದ್ ಮಾಡಿ, ಲಾಯ್ಕಾಯಿ ಬರೀಲಕ್ಕ್ ಕಾಣಿ, ನಾ ಹೇಳದ್ದ್ ಸುಳ್ಳಾ ಮತ್ತೆ!! ಇರ್ಲಿ ವಿಷ್ಯ ಒಳ್ದಾರಿ ಹಿಡ್ಕಂಡ್ ಎತ್ಲಾಗೋ ಹೋಯ್ತ್

ಬಳಕೆ:

೧. ನನ್ ಒಬ್ನ್ ಕೈಲ್ ಮಾಡಿ ಪುರೈಸುಕಾಪ್ದಲ್ಲ. ಯಾರಾರೂ ನಾಕ್ ಜನ ಒಟ್ಟಿಗಿದ್ರೆ ಒಂದ್ ಕೈ ಕಾಣ್ಲಕ್ಕ್

೨. ಒಂದ್ ನಾಕ್ ದಿನ ಇದ್ದ್ ಹೋಪ್ರಿಯಲೆ, ನಾಳಲ್ಲ ನಾಡ್ದಂದ್ರೆ ಕಮ್ಲಶಿಲಿ ಹಬ್ಬ. ಹಬ್ಬ ಪುರೈಸ್ಕಂಡೇ ಹೋದಂಗಾತ್

೩. ಇಲ್ಯೇ.. ನೀವ್ ಅಷ್ಟ್ ಕಡ್ಮಿಗ್ ಕೇಂಡ್ರ್ ಹ್ಯಾಂಗೆ, ಅಷ್ಟಕ್ ಕೊಟ್ರೆ ನಮ್ಗ್ ಪುರೈಸುದಿಲ್ಲ

ಹೈಲ್ =  ಈ ಶಬ್ದಕ್ಕೆ ಹೈರಾಣ ಅನ್ನುವ ಶಬ್ದ ಅತೀ ಸಮೀಪದ ಅರ್ಥ ಕೊಡುತ್ತದೆ

(ಹೈರಾಣ =ಕಂಗಾಲಾಗುವಿಕೆ, ಕಷ್ಟ, ತೊಂದರೆ, ದಣಿವು, ಬಳಲಿಕೆ – ಸಂಕ್ಷಿಪ್ತ ಕನ್ನಡ ನಿಘಂಟು)

ಬಳಕೆ:

೧. ಅವ್ನ್ ಮಾತ್ ಕೇಂಡ್ಕಂಡ್ ನೀ ಹೈಲಾದ್ದ್ ಸಾಕ್ ಮರಾಯ. ಅವ್ನಿಗೆ ಎಂತ ಗೊತ್ತಿತಂದೇಳಿ ಅವ್ನತ್ರ ಕೇಂಬ್ಕ್ ಹೋದ್ದ್ ನೀನ್

೨. ಈ ಮಳೀನ್ ನಂಬ್ಕಂಡ್ ಗೆದ್ದಿ ಬ್ಯಾಸಾಯ ಮಾಡ್ತೆ ಅಂದ್ಕಂಡ್ರೆ…ಕಡೀಕ್ ಕತಿ ಹೈಲ್ ಆಪ್ದೇ ಸೈ

೩. ಈ ಮಳಿ ಬಪ್ಪತಿಗೆ ಕುಂದಾಪ್ರ ಸಂತಿಗ್ ಹೋಯ್ ಯಾಪಾರ ಮಾಡ್ಕಂಡ್ ಬಪ್ರೊಳ್ಗೆ ನಮ್ಮ್ ಯಾಪಾರ ಹೈಲ್ ಅಲ್ದೇ. ಒಂದ್ ಗಳ್ಗಿಯಾರೂ ಮಳಿ ಚಡಿ ಕೊಟ್ರ್ ಕಾಣಿ

ಅಂತೂ ರೈಸು-ಪೂರೈಸು ಕತಿ ಬರುದ್ರೊಳ್ಗೆ… ಕಂಪೂಟ್ರ್ ಕುಟ್ಟಿ ಕುಟ್ಟಿ ನಮ್ ಕತಿ ಹೈಲಾಯ್ತ್ ಕಾಣಿ 🙂


ಈ ಬದಿಗ್ ಬಾರ್ದೆ…ಭರ್ತಿ 10 ತಿಂಗ್ಳ್ ಆಯ್ತ್. ಅದೆಂತದೊ ಗಜಗರ್ಭ ಅಂತ್ರಲ್ದಾ ಹಾಂಗಿನ್ ಕತಿ ಆಯ್ತ್. ಇವತ್ತ್ ಬರಿತೆ ನಾಳೆ ಬರಿತೆ… ನಾಡ್ದಿಗಂತೂ ಬರ್ದೇ ಶುದ್ಧ ಅಂದ್ಕಂಡ್ ಅಂದ್ಕಂಡ್…. ದಿನ ಮಸ್ತ್ ಆಯ್ತ್. ಇವತ್ತ್ ಎಂತಾರೂ ಸೈಯೇ… ಬರಿದೆ ಬಿಡುದಿಲ್ಲ ಅಂದೇಳಿ ಎಣ್ಸಕಂಡ್ ಉದಾಶಿನ ಎಲ್ಲ ಒಟ್ಟ್ ಮಾಡಿ ಪೆಟ್ಗಿಒಳ್ಗೆ ಹಾಕಿ ಬರುಕ್ ಕೂಕಂಡಿದೆ…ಈ ಬ್ಲಾಗಿನ್ ಕತಿಯೇ ಹೀಂಗೆ ಕಾಣಿ… ಬರಿತಾ ಇದ್ರೆ, ಒಂದಲ್ಲಾ ಒಂದ್ ವಿಷ್ಯ ಬರುಕ್ ಸಿಕ್ಕತ್ತ್… ಒಂದ್ ನಾಕ್ ದಿನ ಬರುದ್ ನಿಲ್ಸ್ರೆ ಸಾಕ್.. ಎಂತಾ ಬರುದ್ ಎಂತಾ ಬರುದ್ ಅಂದೇಳಿ ದಿನ ಹೊದ್ದೇ ಗೊತ್ತಾತಿಲ್ಲ..ಮೊದ್ಲ್ ಎಷ್ಟೇ ಬರದ್ದಿದ್ರೂ ಈಗ ಪುನ ಗಣ್ಪತಿ ಪದ್ಯದಿಂದ್ಲೇ ಶುರು ಮಾಡ್ಕಾತ್ತ್…

ಅಂದಾಂಗೆ ನಾಡ್ದ್ ಹನ್ನೊಂದ್ನೇ ತಾರೀಕ್ ಬಂದ್ರೆ ಬ್ಲಾಗಿಗೆ ಮೂರ್ ವರ್ಷ ಆತ್ತ್. ಇಷ್ಟ್ ದಿನ ಹ್ಯಾಂಗಿದ್ರೂ ಬ್ಲಾಗಿಗೆ ಉಪ್ವಾಸವೇ ಆಯ್ತ್. ಹುಟ್ದಬ್ಬನಾರೂ ಗಡ್ಜಾಯಿ ಮಾಡಿ ಹೊಟ್ಟಿ ತುಂಬಾ ಊಟ ಹಾಕುದ್ ಬ್ಯಾಡ್ದಾ ಹಂಗಾರೆ…. ಅದಕ್ಕೇ ಇವತ್ತ್ ಅರ್ಧ ದಿನ ಕೂತ್ಕಂಡ್ ಹುಟ್ದಬ್ಬಕ್ಕೆ ಅಡ್ಗಿ ಮಾಡದ್ದೇ ಮಾಡದ್ದ್…. ನೀವೂ ಬಂದ್ ಒಂದೆರ್ಡ್ ತುತ್ತ್ ತಿನ್ಕಂಡ್ ಹೋರೆ ನಂಗೂ ಖುಶಿಯಾತ್ತ್ ಕಾಣಿ.. ಹುಟ್ದಬ್ಬಕ್ಕೆ ಬರೀ ಕೈ ಬೀಸ್ಕಂಡ್ ಬರ್ಬೆಡಿ.. ಎಂತಾರೂ ಹಿಡ್ಕಂಡ್ ಬನಿ… ಅಂದ್ರೆ ಓದಿ ನಿಮ್ಮ ಅಭಿಪ್ರಾಯ ನಂಗ್ ಹೇಳ್ರೆ ಅದೇ ನೀವ್ ಕೊಡು ಉಡ್ಗ್ರಿ…  🙂

ಮೊನ್ನೆ ಮೊನ್ನೆ ಒಂದ್ ಸುದ್ದಿ ಗೊತ್ತಾಯ್ತ್… ಕುಂದಾಪ್ರ ಕನ್ನಡದಗೆ ಒಂದ್ ಆಲ್ಬಮ್ ಬಂದಿತಂಬ್ರ್.. ಯೆಂತ ಮದಿ ಆಲ್ಬಮ್ಮಾ ಕೇಣ್ಬೇಡಿ… ಮ್ಯುಸಿಕ್ ಆಲ್ಬಮ್ ಮಾರಾಯ್ರೆ…ರವಿ ಬಸ್ರೂರು ಅಂಬರೊಬ್ರ್ ಒಂದಿಷ್ಟ್ ಜನಿನ್ ಒಟ್ಮಾಡಿ ಒಂದ್ ಒಳ್ಳೆ ಕೆಲ್ಸ ಮಾಡಿರ್… ಆಲ್ಬಮ್ಮಿದ್ ಹೆಸ್ರೇ ಗಮ್ಮತಿತ್ತ್… ಪಣ್ಕ್ ಮಕ್ಕಳ್ ಅಂದೇಳಿ…ಆದ್ರದ್ ಒಂದ್ ಸಣ್ಣ್ ಶ್ಯಾಂಪಲ್ ಇಲ್ಲಿತ್ತ್ ಕಾಣಿ…

http://www.youtube.com/watch?v=XBP9LCUdlOc

ಆ ಅಲ್ಬಮ್ ಬಿಡುಗಡೆ ಸೈತ ಆಯ್ತಂಬ್ರ್…ಆ ಸಮಾರಂಭದ ಒಂದ್ ಸಣ್ಣ್ ವೀಡ್ಯೊ ಸೈತ ಇತ್ತ್…

http://www.youtube.com/watch?v=XMzSeUEIuXI&feature=related

ಇದ್ರದ್ದ್ ಸೀಡಿ ಊರ್ಬದಿಯಗೆ ಸಿಕ್ಕತ್ತಿರ್ಕ್.. ಬೆಂಗ್ಳೂರಗೆ ಎಲ್ಲಾರೂ ಸಿಕ್ಕತ್ತಾ ಕಾಣ್ಕ್…ನಿಮ್ಗೆಲ್ಲಾರೂ ಎಲ್ಲ್ ಸಿಕ್ಕತ್ತ್ ಅಂದೇಳಿ ಗೊತ್ತಿದ್ರೆ ನಂಗ್ ಹೇಳಿ ಅಕಾ? ಹನುಮಂತ ನಗರದಗೆ ಕ್ಯಾಸೆಟ್ ಕಾರ್ನರವ್ರದ್ದ್ ಒಂದ್ ಅಂಗ್ಡಿ ಇತ್ತ್.. ನಾನ್ ಯಕ್ಷಗಾನ ಸೀಡಿ ತಕಂಬ್ದೆಲ್ಲ ಅಲ್ಲೇ. ಇನ್ನೊಂದ್ ಸರಿ ಆ ಬದಿಗೆ ಹೋರೆ ಸಿಕತ್ತಾ ಕಾಣ್ಕ್

ಗಣ್ಪತಿ ಪದ್ಯ ಆಯ್ತಲ…. ಇನ್ನ್ ಹಗೂರಕ್ಕೆ ಬಾಲಗೋಪಾಲ, ಸ್ತ್ರೀವೇಷ ಒಡ್ಡೋಲ್ಗ ಶುರು ಮಾಡುಕ್ ಅಡ್ಡಿಲ್ಲ 🙂

ಅಂದ್ಹಾಂಗೆ…..ಬಾಲಗೋಪಾಲ ಸ್ತ್ರೀ ವೇಷ ಅಂದ್ರ್ ಕೂಡ್ಲೆ ನೆನ್ಪಾಯ್ತ್ ಕಾಣಿ… ಯಕ್ಷಗಾನದ ಸುಮಾರ್ ಆಡಿಯೋ ಎಲ್ಲಾ ಕನ್ನಡ ಆಡಿಯೊ.ಕಾಮ್ ಸೈಟಗೆ ಸಿಕ್ಕತ್ತ್… ಪುರ್ಸೊತ್ತಿದ್ರೆ ಕೇಂಡ್ ಕಾಣಿ ಸುಮಾರ್ ಪ್ರಸಂಗ ಇತ್ತ್

http://www.kannadaaudio.com/Songs/Yakshagana/home/

ಇವತ್ತ್ ಇನ್ನೊಂದಿಷ್ಟ್ ಕುಂದಾಪ್ರ ಬದಿ ಶಬ್ದ ಹೆಕ್ಕಿ ಹಿಡ್ಕಂಡ್ ಬಂದಿದೆ.. ಹೆಕ್ಕುಕೆ ಎಲ್ಲ್ ಬಿದ್ದೊಯಿತ್ತಾ ಅಂದೇಳಿ ಕೇಣ್ಬೇಡಿ ಮತ್ತೆ.. ಆಯ್ತ್ ಹುಡ್ಕಿ ಹಿಡ್ಕಂಡ್ ಬಂದಿದೆ.. ಹುಡ್ಕುಕೆ ಎಲ್ಲ್ ಕಳ್ದೋಯಿತ್ ಅಂದೇಳಿ ಕೇಂಡ್ರ್ಯಾ? ಇರ್ಲಿ ಬಿಡಿ… ಚೌಕಿ ಬಿಟ್ಟ್.. ಸೀದಾ ರಂಗಸ್ಥಳಕ್ಕೇ ಬಪ್ಪ ಈಗ…

ಕೈಕೋಚ್= ತೊಂದರೆ, ಇಕ್ಕಟ್ಟು (ಕನ್ನಡ ಸಂಕ್ಷಿಪ್ತ ನಿಘಂಟು)

ಈ ಶಬ್ದದ್ ಅರ್ಥ ತೊಂದರೆ,ಇಕ್ಕಟ್ಟು ಅಂದೇಳಿ ಇತ್ತಾರೂ ಇದನ್ನ್ ತುಂಟತನ-ಕಿತಾಪತಿ-ಕೀಟಲೆ ಅಂತ್ ಹೇಳುಕೆ ಹೆಚ್ಚಾಯಿ ನಮ್ ಬದಿಯಗೆ ಉಪ್ಯೋಗಿಸ್ತ್ರಾಯಿ ಕಾಣತ್

ಬಳಕೆ:

೧. ಆ ಮಾಣಿ ಒಂದ್ ಗಳ್ಗಿ ಸುಮ್ನ್ ಕೂಕಂತಿಲ್ಲ, ಹೋದಲ್ಲ್ ಬಂದಲ್ಲ್ ಸತೇ ಒಂದ್ ಕೈಕೋಚಂದ್ರೆ ಅಷ್ಟಿಷ್ಟಲ್ಲಾ… ಹೇಳಿ ಪೂರೈಸುಕಾಪ್ದಲ್ಲ

೨.ನಿನ್ನ್ ಕೈಕೋಚೆಲ್ಲ ನಿಲ್ಸಿ ಕೊಡ್ತೆ ಕಾಣ್. ದಿನಾ ಹುಣ್ಸಿ ಅಡ್ರಗೆ ಎರ್ಡೆರ್ಡ್ ಬಾರ್ಸ್ರೆ ಮಾತ್ರ ನೀ ಸುಮ್ನಾಯ್ಕಂಬ್ದಾ ಕಾಣತ್

ಚಾಷ್ಟಿ, ಚ್ಯಾಷ್ಟಿ= ತುಂಟತನ, ಕೀಟಲೆ

ಇದು ಚೇಷ್ಟೆ ಅನ್ನುವ ಪದದ ಕುಂದಾಪುರ ರೂಪ

ಇದೂ ಸೈತ ಕೈಕೋಚಿಗೆ ತೀರಾ ಹತ್ರದ್ ಶಬ್ದ. ಹೆಚ್ಚೂಕಡ್ಮಿ ಅದೇ ಅರ್ಥ ಬತ್ತ್

ಬಳಕೆ:

೧. ಶಾಲಿಗ್ ರಜಿ ಸಿಕ್ಕದ್ದೇ ಸೈ.. ಮಕ್ಳೆಲ್ಲಾ ಒಟ್ಟಾರಲ್ದಾ… ಸೈ ಬಿಡಿ.. ಇನ್ನ್ ಅವ್ರ್ ಚಾಷ್ಟಿ ತಡುಕೆಡ್ಯಾ

೨.ಮಗೂ ಸಣ್ದ್ ಅಂದ್ರ್ಯಾ… ಅಬ್ಬಾ ಅದ್ರ್ ಚ್ಯಾಷ್ಟಿಯೇ… ಬಲಾದ್ ಮಕ್ಳನ್ನಾರೂ ಸುಧಾರ್ಸಲಕ್ಕ್.. ಈ ಮಗಿನ ಸುಧಾರ್ಸುಕೆ ಎಡುದಿಲ್ಲ

ದರ್ಶಿನ= ಮೈಮೇಲೆ ದೇವ-ದೈವಗಳ ಆವಾಹನೆಯಾಗುವುದು

ಇದಕ್ಕೆ ಕುಂದಾಪ್ರ ಕನ್ನಡದಗೆ “ಮೈಮೇಲ್ ಬಪ್ಪುದ್” ಅಂತ್ ಸತೇ ಹೇಳ್ತ್ರ್.

( ಏನಾದರೂ ತೊಂದರೆ ತಾಪತ್ರಯಗಳು ಬಂದಾಗ, ಪಾತ್ರಿ ಅಂತ ಕರೆಯಲ್ಪುಡುವ ವ್ಯಕ್ತಿಯ ಮೈಮೇಲೆ ದೇವ-ದೇವತೆಗಳನ್ನು ಆವಾಹಿಸಿ ತಮ್ಮ ತೊಂದರೆ, ಸಂಕಷ್ಟಗಳನ್ನು ದೇವರ ಮುಂದೆ ನಿವೇದಿಸಿಕೊಂಡು ಅದಕ್ಕೆ ಪರಿಹಾರ,ಸಲಹೆಗಳನ್ನು ಪಡೆಯುವ ಒಂದು ವಿಶಿಷ್ಟ ವಿಧಿ-ವಿಧಾನ. ಇಲ್ಲಿ ಯಾವ ದೇವರು ಅಥವಾ ದೈವದ ಆವಾಹನೆ ನಡೆಸಲಾಗುತ್ತದೋ ಆ ದೇವರು-ಯಾ-ದೈವವೇ ಪಾತ್ರಿಯ ಬಾಯಲ್ಲಿ ತನ್ನ ನುಡಿಯನ್ನು ನುಡಿಸುತ್ತದೆ ಅನ್ನುವುದು ನಂಬಿಕೆ.ಇದರ ಸತ್ಯಾಸತ್ಯತೆಗಳ ಬಗ್ಗೆ ನಾನಿಲ್ಲಿ ಚರ್ಚಿಸಲು ಹೋಗುವುದಿಲ್ಲ. ಎಲ್ಲ ಅವರವರ ಭಾವ-ಭಕುತಿಗೆ ಬಿಟ್ಟ ವಿಚಾರ. ಆದರೆ ಈ ಪ್ರಕ್ರಿಯೆಯಲ್ಲಿ ಇರುವ ವೈಶಿಷ್ಟ್ಯವೆಂದರೆ ತುಂಬಾ ಕಷ್ಟದಲ್ಲಿರುವವರಿಗೆ ಹೇಳಿಕೊಳ್ಳಲಾಗದ ದುಃಖ ಇರುವವರಿಗೆ, ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದವರಿಗೆ ತಮ್ಮ ಕಷ್ಟ-ಕೋಟಲೆಗಳನ್ನು ದೇವರ ಮುಂದೆ ನಿವೇದಿಸಿಕೊಂಡು ಮನಸ್ಸುಹಗರಾಗಿಸಿಕೊಂಡು ಸಮಾಧಾನ ಹೊಂದುತ್ತಾರೆ. ಅವರ ಸಮಸ್ಯೆ ಪರಿಹಾರವಾಗುತ್ತದೋ ಇಲ್ಲವೋ ಅನ್ನುವುದನು ಒತ್ತಟ್ಟಿಗಿಟ್ಟು ನೋಡಿದರೂ… ಕುಸಿದು ಹೋದ ಭರವಸೆ ಮರಳಿಸಿ ಒಂದಿಷ್ಟು ಸಮಾಧಾನವು ಅವರಲ್ಲಿ ಹೊಸ ಹುಮ್ಮಸ್ಸು ತುಂಬುತ್ತದನ್ನುವುದಂತೂ ಹದಿನಾರಾಣೆ ನಿಜ!! ನಗರಗಳಲ್ಲಿ ಕೌನ್ಸಿಲಿಂಗ್ ಎಂಬ ದೊಡ್ಡ ದೊಡ್ಡ ಶಬ್ದ ಬಳಸುತ್ತೆವೆ…. ಕೌನ್ಸಿಲಿಂಗಿನ ಎಂತಾ ಸರಳ-ಸುಲಭ ಗ್ರಾಮ್ಯ ರೂಪ ನೋಡಿ ಈ ದರ್ಶಿನ. ನಾವೂ ಮೂಢ ಅಂತ ಲೇವಡಿ ಮಾಡುವ ನಂಬಿಕೆಗಳಲ್ಲೂ ಎಂತಾ ತಿರುಳಿರುತ್ತೆ ನೋಡಿ. ನಾವು ಬರೀ ಸಿಪ್ಪೆಯನ್ನು ನೋಡಿ ಒಣಗಿದೆ ಅಂತ ತೀರ್ಮಾನಕ್ಕೆ ಬಂದು ಬಿಡುತ್ತೇವೆ. ಸಿಪ್ಪಿ ಬಿಡಿಸಿ ನೋಡಿದರೆ ಸಿಹಿಯಾದ ರಸಭರಿತ ತಿರುಳಿರಬಹುದಲ್ಲವೇ? ಇದೆಯೋ ಇಲ್ಲವೋ ಸಿಪ್ಪೆ ಸುಲಿದರೆ ತಾನೆ ಗೊತ್ತಾಗೋದು.. ಇರಲಿ, ನನ್ನ ಪುರಾಣವೇ ಉದ್ದವಾಯ್ತು

ಅಂದ ಹಾಗೆ.. ಈ ಶಬ್ದವನ್ನು ಅತಿಯಾದ ಕೋಪದಿಂದ ತರತರ ನಡುಗುವವರನ್ನು ಲೇವಡಿ ಮಾಡಲು ಸಹಾ ಬಳಸುತ್ತಾರೆ)

ಬಳಕೆ:

೧. ಮಗಿಗೆ ಏಗ್ಳಿಕ್ ಕಂಡ್ರೂ  ಹುಷಾರಿಪ್ಪುದಿಲ್ಲ. ಒಂದ್ ದರ್ಶಿನ ಮಾಡಿಯಾರೂ ಕೇಣ್ಲಕ್ಕಿತ್ತ್

೨.ಸಿಟ್ಟ್ ಬಂದ್ರ್ ಸಾಕ್… ಮೈಮೇಲ್ ದರ್ಶಿನ ಬಂದರ್ ಕಣಗ್ ಆಡ್ತ

ತಾಳ್ಸು= ಬೀಳಿಸು

(ತಾಳಿದವನು ಬಾಳಿಯಾನು ಅಂದೇಳಿ ಒಂದ್ ಗಾದಿ ಮಾತ್ ಇತ್ತಲ್ದಾ. ಅದನ್ನ ಕುಂದಾಪುರ ಕನ್ನಡದ ಅರ್ಥದಗೆ (ತಾಳು=ಬೀಳು) ಕಂಡ್ರೆ -ತಾಳಿದವನು ಹೇಗೆ ಬಾಳಿಯಾನು ಅಂತ ಕೇಣ್ಕಾತ್ತ್ ಕಾಣಿ  J)

ಬಳಕೆ:

೧. ಮಾಯ್ನ್ ಕಣ್ಣ್ ಕೈಗ್ ನೀಕುದಿಲ್ಲ. ಒಂದ್ ಅಡ್ಡ್-ಬಡ್ತಿಗೆ ಸಿಕ್ಕಿರೆ ಒಂದ್ ನಾಲ್ಕ್ ಹಣ್ಣ್ ಒಂದೇ ಪೆಟ್ಟಿಗೆ ತಾಳ್ಸುಕಾತಿತ್ತ್

೨.ಗ್ವಾಯ್ ಹಣ್ಣ್ ತಾಳ್ಸುಕಂದೇಳಿ ಕಲ್ಲ್ ಹೊಡಿಬೇಡಿ ಮಕ್ಳೇ.. ಮಿಜ್ರ್ ಪೂರಾ ಉದ್ರಿ ಹೋತ್ತ್… ಬೇಕಾರೆ ಕೊಕ್ಕಿ ತಂದ್ಕಂದ್ ಕೊಯ್ಕಣಿ

ಬಯಿನ್ ತೇರ್, ಬಯಿಂತೇರ್= ಬೈಗಿನ ತೇರು, ಸಂಜೆ ಹೊತ್ತು ರಥ ಎಳೆಯುವುದು

(ನಮ್ಮೂರ ಕಡೆ ಜಾತ್ರೆಲ್ಲಿ ಸಂಜೆಯ ಹೊತ್ತು ಎರಡನೆ ಬಾರಿ ರಥವನ್ನು ರಥಬೀದಿಯಲ್ಲಿ ಭಕ್ತರು ಎಳೆಯುತ್ತಾರೆ. ಅದಕ್ಕೆ ಬಯಿಂತೇರ್ ಅಂದರೆ ಬೈಗಿನ ಹೊತ್ತಿನ ತೇರು ಅನ್ನುತ್ತಾರೆ)

ಬಳಕೆ:

೧. ಬೆಳಿಗ್ಗೆ ಹಬ್ಬಕ್ ಹೋಪ್ಕಾಯಿಲ್ಲ.. ಮಧ್ಯಾನ್ಮೇಲಾರೂ ಹೋಯಿ ಬಯಿಂತೇರ್ ಆರೂ ಕಂಡ್ಕಂದ್ ಬರ್ಕಮಗಿತ್ತ್

ಹಪ್ಪು ನಾತ = ಸಹಿಸಲಾಗದಂಥ ದುರ್ವಾಸನೆ

ಬಳಕೆ:

೧. ಅವ್ರ್ ಹತ್ರ ಹೋರ್ ಸಾಕ್. ಹಪ್ಪ್ ನಾತ ಹೊಡಿತ್ತ್. ಅಂಗಿ ಪಂಜಿಗೆ ನೀರ್ ತೋರ್ಸಿ ಎಷ್ಟ್ ದಿನ ಆಯ್ತೇನೋ

೨.ಮೀಕಿದ್ರೆ ಮೊದ್ಲೇ ಬಟ್ಟಿ ಎಲ್ಲ ಒಗ್ದ್ ಬಿಡ್. ಹಾಂಗೆ ಬಿಟ್ರೆ ಅಲ್ಲೇ ಚೆಂಡಿ ಆಯಿ ನಾಳಿಗೆ ಹಪ್ಪ್ ನಾತ ಹೊಡಿತ್ತ್

ಬೆಳ್ಗಿನ ಜಾಮ, ಬೆಳಿಂಜಾಮ = ಬೆಳಗಿನ ಜಾವ, ನಸುಕು

(ಜಾವ ಅಂದರೆ ದಿನದ ಎಂಟನೇ ಒಂದು ಭಾಗ. ಒಂದು ಜಾವ ಅಂದರೆ ಸರಿಸುಮಾರು ಮೂರು ಗಂಟೆಗಳ ಕಾಲ)

ಬಳಕೆ:

೧. ನಾಳೆ ದೀಪಾವಳಿ ಅಲ್ದಾ, ಎಲ್ಲ ಬೆಳ್ಗಿನ್ ಜಾಮ ಬೇಗ್ ಎದ್ದ್ ಎಣ್ಣಿ-ನೀರ್ ಹಾಯ್ಕಂಡ್ ಮೀಕ್

೨.ಬೆಳ್ಗಿನ್ ಜಾಮಕ್ಕೆ ಎದ್ಕಂಡ್ ಆ ನಾಯಿ ಒರ್ಲುಕ್ ಶುರು ಮಾಡತ್ತ್. ಒಂದ್ಗಳ್ಗಿ ನಿದ್ರಿ ಮಾಡುಕೂ ಬಿಡುದಿಲ್ಲ

ಜಾಪ್ = ಚಾಪು

(ಇದು ಮೂಲತಃ ಮದ್ದಲೆ ಅಥವಾ ತಬಲ ಬಾರಿಸುವ ಒಂದು ಬಗೆಯ ಗತ್ತನ್ನು ಸೂಚಿಸುವ ಪದ. ಆದರೆ ಆಡುಮಾತಿನಲ್ಲಿ ಹುಸಿ ಜಂಬ, ಬಿಂಕ, ಗತ್ತು, ಒಣ ಪ್ರತಿಷ್ಟೆ ತೋರಿಸುವುದನ್ನು ಸೂಚಿಸಲು ಬಳಸಲಾಗುತ್ತದೆ)

ಬಳಕೆ:

೧. ಹೊಸ ಅಂಗಿ ಹಾಯ್ಕಂಡ್ ಬಂದಿದೆ ಅಂದೇಳಿ ಜಾಪ್ ಮಾಡುದ್ ಕಾಣ್. ಮಾತಡ್ಸರೆ ಸತೇ ಮಾತಾಡುದಿಲ್ಲ

೨.ನಿನ್ನ್ ಜಾಪೆಲ್ಲ ಇದ್ರೆ ಮನ್ಯಗ್ ಇಟ್ಕೋ.. ನನ್ನತ್ರ ಅದೆಲ್ಲ ನೆಡುದಿಲ್ಲ ಅಕಾ

ಬಿಲಾಸ್ ಬಿಡು = ಮನಬಂದಂತೆ ವರ್ತಿಸು , ಯಾರ ಅಂಕೆಗೂ ಸಿಗದಿರು

( ಈ ಶಬ್ದದ ಮೂಲದ ಬಗ್ಗೆ ಸಾಕಷ್ಟು ಹುಡುಕಿದೆ. ಆದರೆ ಖಚಿತವಾದ ಮಾಹಿತಿ ಸಿಗಲಿಲ್ಲ. ಬಿಲಾಸ್ ಅನ್ನುವುದು ವಿಲಾಸ ಅನ್ನುವ ಪದದಿಂದ ಬಂದಿರಬಹುದೇ ಅನ್ನುವುದು ನನ್ನ ಊಹೆ ಮಾತ್ರ. ಯಾರಿಗಾದರೂ ಗೊತ್ತಿದ್ದರೆ ತಿಳಿಸಿ)

ಬಳಕೆ:

೧. ಅವ ಹತ್ತಾ ಬಿಲಾಸ್ ಬಿಟ್ಟ್ ಹೋಯಿದ. ಎಂತಾರು ಹೇಳ್ರೆ ಬರೀ ಉಲ್ಟವೇ

೨. ಯಾರಾರೂ ಈ ನಮನಿ ಬಿಲಾಸ್ ಬಿಟ್ಟ್ ಹೋಪುಕಾಗ.

 


ಬರೀ ಕುಂದಾಪ್ರ ಕನ್ನಡದಗೆ ಮಾತ್ರ ಎಂತಕೆ , ಈಗ ಯಾವ್ ಕನ್ನಡದಗೂ ಇಪ್ಪುದ್ ಇಂಗ್ಲೀಷೆ ಅಲ್ದಾ. ಯಾರಾರೂ ಶುದ್ಧ ಕನ್ನಡ ಮಾತಾಡುವರ್ ಇದ್ರೆ ಹುಡ್ಕಿ ಕೊಡಿನಿ ಕಾಂಬ ಹಂಗಾರೆ  ಅಂದೇಳಿ  ನೀವ್ ಕೆಂಬ್ಕೂ ಸಾಕ್.  ಅದ್ರಗೂ ಬೆಂಗಳೂರಗೆ ಹಾಂಗಿನರ್ ಯಾರಾರೂ ಇದ್ರೆ ಅವ್ರಿಗೆ ರಾಜ್ಯೋತ್ಸವ ಪ್ರಶಸ್ತಿಯೇ ಕೊಡ್ಲಕ್ಕ್ ಅಂತ್ ನೀವ್ ಹೇಳುಕೂ ಸಾಕ್.  ಆರೇ ನಾ ಹೇಳುಕ್ ಹೊರಟದ್ದ್ ಅದ್ ಅಲ್ದೆ… ಒಂದ್ ಇಂಗ್ಲಿಷ್ ಶಬ್ದ ಕುಂದಾಪ್ರ ಕನ್ನಡದೊಳಗೆ ಬಂದ್ ಕೂಕಂಡಿತ್.

ಆ ಶಬ್ದ ಯಾವ್ದ್ ಅಂದೇಳಿ ನೆನ್ಪ್ ಮಾಡ್ಕಂಕಿದ್ರೆ ಸಣ್ಣಕಿಪ್ಪತ್ತಿಗೆ ಆಟ ಆಡುವತಿಗೆ ಯಾರಾರೂ ಮೋಸ ಮಾಡ್ರೆ ಎಂಥ ಹೇಳ್ತಿತ್ತ್ ಅಂತ್  ಒಂಚೂರ್ ನೆನ್ಪ್ ಮಾಡ್ಕಣಿ ಕಾಂಬ.  ನೆನ್ಪ್ ಆಯೇ ಇರ್ಕ್ ಅಲ್ದಾ?

ಇನ್ನೂ ನೆನ್ಪ್ ಆಯ್ಲಿಲ್ಯ? ಹಂಗಾರೆ ಮುಂದ್ ಓದಿ ಕಾಣಿ… ಆಗ್ಳಿಕಾರು ನೆನ್ಪ್ ಆತ್ತ್ …

“ಅವನೊಟ್ಟಿಗೆ ಆಡುಕ್ ಹೋಪ್ಕೆ ಆಗ. ಅವಂದ್ ಬರೀ ಹಂಬಕ್ ಮಾರಾಯ ”

“ನೀ ಗೆದ್ದಿಪ್ಕು ಸಾಕ್. ನಿನ್ ಕಣಗೆ  ಹಂಬಕ್ ಮಾಡಿರೆ ನಾನೂ ಗೆಲ್ತಿದ್ದೆ ಗೊತ್ತ?”

” ಬೋಲ್ ಕಾಲಿಗೆ ತಾಗಲೇ ಇಲ್ಲ. ಆರು ಅಂಪೈರ್ ಔಟ್ ಕೊಟ್ಟ ಮಾರಾಯ. ಬರೀ ಹಂಬಕಾಟ”

ಹಾ.. ಈಗ ಗೊತ್ತಾಯ್ತಲ್ದಾ? ನಾ ಎಂತ ಹೇಳುಕೆ ಹೊರ್ಟಿದೆ ಅಂತ. ಅದೇ ಹಂಬಕ್… ಹಂಬಕ್..

“ಮೋಸ ಮಾಡುದ್” ಅಂತ್ ಹೇಳುಕೆ ನಮ್ಮ ಕುಂದಾಪ್ರ ಕನ್ನಡದಗೆ ಇಪ್ಪ ಶಬ್ದ…

ಆರೇ ಈ ಶಬ್ದ ಬಂದದ್ದ್ ಎಲ್ಲಿಂದ ಅಂದೇಳಿ ನಂಗಂತೂ ಗೊತ್ತಿರ್ಲಿಲ್ಲ. ಮೊನ್ನೆ ಒಂದ್ ಪುಸ್ತಕ ಓದ್ತಾ ಇದ್ದೆ. ಅದ್ರಗೆ

ಒಂದ್ ಇಂಗ್ಲೀಶ್ ಶಬ್ದ ಇದ್ದಿತ್. ಅದನ್ನ್ ಕಂಡ್ರ ಕೂಡ್ಲೇ ಫಕ್ನೆ ನೆನ್ಪಾಯ್ತ್.. ಹೋ ಈದ್ ಅದೇ …

ಆ ಶಬ್ದ ಹಂಬಗ್  (humbug) . ಹಾಂಗಂದ್ರೆ ಮೋಸ , ಅಪ್ರಾಮಾಣಿಕತೆ, ವಂಚನೆ, ಮೋಸಗಾರ ಅಂತೆಲ್ಲ ಅರ್ಥ ಸಿಕ್ಕತ್ತ್.

ಬೇಕಾರೆ  http://www.baraha.com/kannada/index.php ಇಲ್ಲಿಗ್ ಹೋಯಿ humbug  ಅಂತ ಬರ್ದ್ ಹುಡ್ಕಿ ಕಾಣಿ.

ಶಬ್ದ ಬೇಕಾರೆ ಇಂಗ್ಲಿಶಿದೆ ಆಯ್ಲಿ…ಅದನ್ನ್ ಸತೆ ನಮ್ಮ ಕುಂದಾಪ್ರ ಕನ್ನಡಕ್ ತಕಂಡ್ ಬಂದ್ ‘ಹಂಬಕ್’ ಅಂತ ಮಾಡಿ ಅದೀಗ ನಮ್ದೆ ಶಬ್ದ ಆಯ್ತಲ್ದ..

ನಿಮ್ಗೆಲ್ಲ ಮೊದ್ಲೇ ಗೊತ್ತಿದ್ದಿತೋ ಏನೋ. ನಂಗಂತೂ ಗೊತ್ತಿರಲ್ಲ,.. ನನ್ಕಣಗೆ ಗೊತ್ತಿಲ್ದಿದ್ದರ್ ಯಾರಾರೂ ಇದ್ರೆ ಅವ್ರಿಗ್ ಗೊತ್ತಾಯ್ಲಿ ಅಂದೇಳಿ ಇಲ್ಲೊಂಚೂರ್ ಬರ್ದ್ ಹಾಕ್ದೆ ಕಾಣಿ.. ನಿಮ್ಗೂ ಯಾವ್ದಾರೂ ಹೀಂಗಿದೆ ಶಬ್ದ ಗೊತ್ತಿದ್ರೆ ಹೇಳಿ… ನನ್ನಂತವ್ರಿಗೆ ಉಪ್ಕಾರ ಆತ್ತ್.. ಹೇಳ್ತ್ರಿ ಅಲ್ದಾ?


ಹೈಲು/ ಹೈಲ್ = ಕಂಗಾಲು, ಹೈರಾಣ

ಬಳಕೆ :

 

೧.         ಈ ವರ್ಷ ಮಳೆ ಬಾರ್ದೆ ಬ್ಯಾಸಾಯ ಮಾಡುವರ್ ಯಾಪಾರ್ ಹೈಲ್ ಅಲ್ದೇ.

೨.         ಈ ಮಕ್ಕಳಿಗೆ ರಜಿಯಾರೂ ಎಂತಕ್ ಬತ್ತೋ ಏನೋ. ಅವ್ರನ್ ಸುಧಾರ್ಸುದ್ರೊಳ್ಗೆ ಅಲ್ದೇ ನಾ ಅರ್ಧ ಹೈಲ್ ಆದ್ದ್.

೩.         ಕೊಡಿ (ಕೊಡೆ) ತಕಂಡ್ ಹೋಪುಕೆ ನೆನ್ಪ್ ಹೋಯಿ, ಮಳೆಯಗ್ ಸಿಕ್ಕಿ ಬಿದ್ದ್ ನನ್ ಯಾಪಾರ ಹೈಲಾದ್ದ್ ಅಲ್ದಾ ಮಾರ್ರೆ

 

ಊಜು / ಊಂಜು/ ಸೀಬು/ ಸೀಂಬು = ಚೀಪು

ಬಳಕೆ :

೧.         ಮಾಯಿನ್ ಹಣ್ಣ್ ತಿಂದ್ ಗೊರ್‍ಟ್ ಊಂಜದ್ ಸಾಕ್. ಬಿಸಾಡಾ ಅದನ್ನ.

೨.         ಒಳ್ಳೆ ಸಣ್ಣ್ ಮಗಿನ್ ಕಣಗೆ ಬೆರಳ್ ಬಾಯ್ಗ್ ಹಾಯ್ಕಂಡ್ ಸೀಂಬತಾ ಇದ್ದ.

 

ಸಾಲಿನ್ ಬಲಿ / ಸಾಲಿ ಬಲಿ  = ಜೇಡರ ಬಲೆ

ಬಳಕೆ :

೧.         ವಾರ ವಾರ ತೆಗ್ದ್ರೂ ಇಲ್ಲ. ಮತ್ತ್ ಸಾಲಿನ್ ಬಲಿ ಕಟ್ಟಿಆಯ್ತ್

 

ತಿಪ್ಪ್/ ತಿಪ್ಪು = ಕೈಯಲ್ಲಿಹಿಡಿದು ಸುರುಳಿ ಮಾಡು, ತಿರುಗಿಸು

ಬಳಕೆ :

 

೧.         ಪಾಠ ಓದ್ ಅಂದ್ರೆ ಆಡುಕ್ ಹೋಯಿದ್ಯಾ? ನಿನ್ ಕೆಮಿ ತಿಪ್ಪಿ ಹದ ಮಾಡ್ರ್ ಮಾತ್ರ ಸಮಾ ಆತ್ತ್ ಕಾಂತ್.

೨.         ಅವ್ನಿಗೆ ಕಾಗ್ದ ಕೈಯಲ್ಲಿ ಇದ್ರ್ ಸಾಕ್. ಅದನ್ನ್ ತಿಪ್ಪಿ ತಿಪ್ಪಿ ಮುದ್ದಿ ಮಾಡುದ್ ಒಂದೆ ಕೆಲ್ಸ.

 

ಹೊಟ್ಟೆ ತಿಪ್ಪುದ್ / ಹೊಟ್ಟಿ ಕಚ್ಚು = ಹೊಟ್ಟೆ ನೋವಾಗು, ಹೊಟ್ಟೆ ತೊಳಸಿದಂತಾಗು

ಬಳಕೆ :

೧.         ಬೆಳ್ಗಾಮುಂಚಿಯಿಂದ ಹೊಟ್ಟಿ ತಿಪ್ಪತಾ ಇತ್ತ್.

೨.         ಇವತ್ತ್ ಲಾಯ್ಕ್ ಇತ್ತ್ ಅಂದೇಳಿ ಒಂದೆರ್ಡ್ ಪೋಡಿ ತಿಂದದ್ದೇ ಸೈಯಪ್ಪ. ಹೊಟ್ಟಿಕಚ್ಚುಕೆ ಶುರುವಾಯ್ತ್

 

ನೆಗ್ / ನೆಗ್ಗು = ಮೇಲಕ್ಕೆತ್ತು , ಎತ್ತು

ಬಳಕೆ :

 

೧.         ಈ ಚೀಲ ಸಮಾ ಬಾದಿ ಇತ್ತ್. ಒಂಚೂರ್ ನೆಗ್ಗಿ ತಲಿ ಮೇಲ್ ಇಡ್‌ತ್ರ್ಯಾ?

೨.         ಮಗಾ, ಅಲ್ಲೆಲ್ಲ ಕೆಸ್ರ್ ಇತ್ತ್. ಬಪ್ಪತಿಗೆ ಅಂಗಿ ಒಂಚೂರ್ ನೆಗ್ಕಂಡ್ ಬಾ. ಇಲ್ದೀರ್ ಅಂಗಿ ಪೂರಾ ಕೆಸ್ರ್ ಆಪ್ಕಿತ್ತ್.

 

 

ಅರ್ತು = ಇಳಿಯು, ತೊಟ್ಟಿಕ್ಕು

ಬಳಕೆ :

೧.         ಮಳೆಗ್ ನೆನ್ಕಂಡ್ ಬಂದ್ ಮೈ ಪೂರಾ ಚಂಡಿ. ಕಾಣಿ ಹ್ಯಾಂಗ್ ನೀರ್ ಅರ್ತ್‌ತಾ ಇತ್ತ್

೨.         ಬಟ್ಟಿ ಒಗ್ದ್ ಹಾಂಗೇ ನ್ಯಾಲಿ ಮೇಲ್ ಹಾಕ್. ಸ್ವಲ್ಪ ನೀರ್ ಅರ್ತ್‌ಲಿ

೩.         ಮಂಡಿಗ್ ಎಣ್ಣಿ ಹಾಯ್ಕಂಡದ್ ಸಾಕಾ..ಕಾಣ್ ಎರ್ಡೂ ಬದಿಯಲ್ ಅರ್ತತಾ ಇತ್ತ್

 

ಜಬ್, ಜಬ್ಬು = ತೀರಾ ಹಳೆಯದಾದ, ಜೀರ್ಣಾವಸ್ಥೆಯಲ್ಲಿರುವ

ಇದೇ ರೀತಿ ಜಬ್ಬ = ಮುದುಕ;  ಜಬ್ಬಿ = ಮುದುಕಿ

ಬಳಕೆ :

೧.         ಆ ಹಳೆ ಜಬ್ ಅಂಗಿ ಹಾಯ್ಕಣ್‌ದಿದ್ರೆ ಬೇರೆ ಒಳ್ಳೆ ಅಂಗಿ ಹಾಯ್ಕಂಬ್‌ಕಾಗ್ದಾ?

೨.         ಈ ನೋಟ್ ಪೂರಾ ಜಬ್ ಆಯಿತ್. ಯಾರೂ ತಕಂತಿಲ್ಲೆ. ಬೇರೆ ಕೊಡಿ

 

ಗೇಯು, ಗೇಯ್ಮೆ, ಗೆಯ್ಮಿ = ಕೆಲಸ ಮಾಡು, ಕೆಲಸ

ಬಳಕೆ :

೧.         ಬೆಳ್‌ಗಿಂದ ಸಾಂಯ್ಕಾಲದ್‌ವರಿಗೆ ಗೇಯ್ದು, ಗೇಯ್ದ್ ಕೈಕಾಲೆಲ್ಲ ಬತ್ತಿ ಹೋಯ್ತ್

೨.         ಅವ್ರ್ ಮನಿಗೆ ಹೆಣ್ ಕೊಡುದಾ. ಅಯ್ಯಬ್ಬ. ಜೀವ್ಮಾನ ಪೂರ್ತಿ ಗೇಯುದ್ರಗೆ ಹೋತ್ತ್.

೩.         ಈಗೆಲ್ಲಾ ಮುಂಚಿನ ಕಣಗೆ ಗೇಯ್ಮಿ ಮಾಡುಕೆ ಜನ ಸಿಕ್ಕುದಿಲ್ಯೆ.

 

ಹೈಸರ / ಹೈಂಸರ = ಕೇರೆ ಹಾವು

 

ಇದಕ್ಕ್ ಯೆಂತ ಉದಾರ್ಣೆ ಕೊಡುದ್ ಬ್ಯಾಡ ಅಂದ್ಕಂಡಿದೆ.

ಹೈಂಸರನ್ ಬಗ್ಗ್ ಇಪ್ಪ್ ಒಂದ್ ಸುಳ್ಳ್ ನಂಬ್ಕಿ ಇದ್ ಕಚ್ಚ್‌ರೆ ಯಾರೂ ಸಾಯುದಿಲ್. ಆರೆ ಕಚ್ಚಿ ಬಾಲದಲ್ಲಿ ಕೊಡದ್ರೆ (ಹೊಡ್‌ದ್ರೆ) ಸಾಯ್ತಾರಂಬ್ರ್.

 

ಉಂಬುದ್ = ಊಟ ಮಾಡೋದು

ಉಂಡ್ಕಂಡ್ = ಊಟ ಮಾಡ್ಕೊಂಡ್

ಬಳಕೆ :

೧.         ಬೇಗ ಬೇಗ ಬಟ್ಲ್ ಇಡಿ ಮಕ್ಕಳೆ. ಉಂಬ ಶಾಸ್ತ್ರ ಒಂದ್ ಮಾಡಿ ಬಿಡ್ವಾ.

೨.         ಬೆಳಿಗ್ಗೆ ಬೇಗ್ ಏಳ್ಕಲ. ಉಂಡ್ಕಂಡ್ ಬೇಗ ಮಲ್ಕಣಿ

 

ತಿಂಬುದು = ತಿನ್ನುವುದು

ತಿಂಬುಕೆ = ತಿನ್ನೋಕೆ

ತಿನ್ಕ್ = ತಿನ್ನಬೇಕು

ಬಳಕೆ :

೧.         ಜೋರ್ ಹಸು (ಹಸಿವೆ) ಆತಾ ಅತ್ತ್. ತಿಂಬುಕೆ ಎಂತಾರು ಇದ್ರೆ ಕೊಡ್

೨.         ಈ ದುಡ್ ಹಬ್ದಗೆ ಐಸ್‌ಕ್ರೀಂ ತಿಂಬುಕೆ ಅಂದೇಳಿ ಇಟ್ಕಂಡದ್

೩.         ಹಲ್ಸಿನ್ ಹಣ್ ತಿನ್ಕ್ ಅಂದೇಳಿ ಜೋರ್ ಆಸಿ ಆತಿತ್ತ್

 

ನೆಗಾಡು = ನಗುವುದು

ಬಳಕೆ :

೧.         ನೆಗಾಡುಕೆ ಈ ಮಕ್ಕಳಿಗೆ ಒಂದ್ ವಿಷಯ ಬೇಕಂದೇಳಿ ಇಲ್ಲ.

೨.         ಹಾಸಿಗಾರನ್ ಮಾತ್ ಕೇಂಡ್ ನೆಗಾಡಿ ನೆಗಾಡಿ ಸಾಕಾಯ್ತ್

 

ಜಪ್, ಜಪ್ಪು = ಹೊಡೆ, ಬಲವಾಗಿ ಕುಟ್ಟು

ಬಳಕೆ :

೧.       ಅಧಿಕ ಪ್ರಸಂಗ ಮಾತಾಡ್ರೆ ಬಾಯ್ ಮೇಲ್ ಎರ್ಡ್ ಜಪ್ತೆ ಕಾಣ್

೨.         ಒಳ್ಳೆ ಬಿಸ್ಲ್ ಇದ್ದಿತ್. ಇವತ್ ಹಾಸ್ಗಿ ಬಿಸ್ಲಿಗ್ ಹಾಕಿ ಜಪ್ಪಿರಾರು ಆತಿತ್ತ್

೩.         ಈಗೀಗ ಕೆಯ್(ತೆನೆ ಸಹಿತ ಬತ್ತದ ಹುಲ್ಲು) ಜಪ್ಪುಕೆ ಜನ್ವೇ ಸಿಕ್ಕುದಿಲ್ಲ.

 

ಬಿಕ್ರ್‌ಮಂಡಿ = ಕೂದಲು ಕೆದರಿಕೊಂಡವಳು

( ಬಿಖರೇ ಬಾಲ್ ನಿಂದ ಈ ಶಬ್ದ ಬಂದಿರಬಹುದೆ?)

ಬಳಕೆ :

೧.         ತಲಿ ಬಾಚಿ ಜಡಿ ಹಾಯ್ಕಂಬದ್ ಬಿಟ್ಟ್ ಒಳ್ಳೆ ಬಿಕ್ರ್‌ಮಂಡಿ ಮಾಡ್ಕಂಡ್ ಕೂತಿದ್ಲ್

 

ಪಿರ್ಕಿ = ತಲೆ ಸರಿಯಿಲ್ಲದವನು(ಳು), ಅರೆ ಮರುಳ(ಳಿ)

( ಇನ್ನೊಂದ್ ಶಬ್ದ ಅಂಡೆಪಿರ್ಕಿ ಅಂತ. ನಂಗ್ ಈ ಅಂಡೆ ವಿಶೇಷಣ ಎಂತಕೆ ಹೇಳ್ತ್ರ್ ಅಂತ್ ಗೊತ್ತಿಲ್ಲ. ಅರ್ಥ ಯಾರಿಗಾದ್ರು ಗೊತ್ತಿದ್ರೆ ಹೇಳಿ)

ಬಳಕೆ :

೧.         ಅಂವ ದೊಡ್ ಪಿರ್ಕಿ ಮರಾಯ. ಅವ್ನತ್ರ ಮಾತಾಡುಕೆ ಹೋಗ್ಬೇಡ.

೨.         ಅವ್ನಿಗೆ ಇತ್ತಿತ್ಲಾಯ್ ಎರ್ಡ್ ಸುತ್ತ್ ಕಡ್ಮಿ ಆಯಿತಾ ಅಂದೇಳಿ. ಎಂತ ಕೇಂಡ್ರೂ ಪಿರ್ಕಿಗಳ್ ಕಣಗೆ ಉತ್ರ ಕೊಡ್ತ

 

ಉಡಾಪಿ, ಉಡಾಪ್ = ಉಡಾಫೆ , ಎದುರುವಾದಿಸು ಅನ್ನುವ ಅರ್ಥ ಕೂಡಾ ಇದೆ

ಬಳಕೆ :

೧.       ದೊಡ್ಡರ್ಸಣ್ಣರ್ ಅಂದಿಲ್ಲ. ಎಂತ ಹೇಳ್ರೂ ಉಡಾಪ್ ಮಾತಾಡ್ತೋ ಈಗ್ಳಿನ್ ಮಕ್ಳೆಲ್ಲಾ

 

ಬಳಕೆ :

ಮಸ್ತ್ = ತುಂಬಾ, ಬಹಳ

೧.         ಈ ಸರ್ತಿ ಮಾಯಿನ್ ಮರ್ದಗೆ ಮಸ್ತ್ ಹೂವಾಯಿತ್. ಆರೆ ಮೋಡ ಆಯಿ ಪೂರಾ ಕರ್ಟಿ ಉದ್ರಿ ಹೋಯ್ತ್

೨.         ಮೊನ್ನೆ ಮದಿಗೆ ಮಸ್ತ್ ಜನ ಬಂದಿರಾ ಹ್ಯಾಂಗೆ?

೩.         ಅವ್ನಿಗೀಗ ಅಡ್ಡಿಲ್ಲ್ಯೇ..ಮಸ್ತ್ ದುಡ್ ಮಾಡಿದ ಅಂಬ್ರ್

 

ತೆವಡ್ಕೋ =  ಒಂದು ಬೈಗುಳದ ಪದ. ಮೂಲೆಯಲ್ಲಿ ಹೋಗಿ ಬಿದ್ದುಕೋ

ಬಳಕೆ :

೧.         ಮಾತಿನ್ ಮಧ್ಯ ನಿನ್ನನ್ ಕರ್ದರ್ ಯಾರ್. ಒಂದ್ ಬದ್ಯಗೆ ತೆವಡ್ಕೋ ಕಾಂಬ

೨.         ಎಲ್ಲಿಗ್ ಹೊರಟ್ರೂ ಈ ಮಕ್ಕಳದ್ ಒಂದೆ ರಾಗ. ನಾನೂ ಬತ್ತೆ ಅಂದೇಳಿ. ಎಲ್ಲಾ ಒಳ್ಗೆ ತೆವ್ಡ್‌ಕಣಿ ಕಾಂಬ

 

ನಿವಾಳ್ಸು = ಒಂದು ಬೈಗುಳದ ಪದ. ಇಲ್ಲಿಂದ ತೊಲಗು ಅನ್ನೋ ಅರ್ಥ

ಬಳಕೆ :

೧.         ನಂಗ್ ಸಿಟ್ಟ್ ಬಂದ್ ಮತ್ತೆಂತಾರೂ ಹೇಳೂ ಮೊದ್ಲ್ ನೀ ಇಲ್ಲಿಂದ ನಿವಾಳ್ಸ್

೨.         ನಿಂಗೆ ಇಲ್ಲ್ ಇಪ್ಪುಕಾಗ್ದಿದ್ರೆ ಯಾರದ್ ಏನ್ ಒತ್ತನ್ಕಿ ಇಲ್ಲ. ನಿವಾಳ್ಸ್ ಇಲ್ಲಿಂದ

 

ಚಾಳಿಸು , ಚಾಳ್ಸು = ಗೇಲಿ ಮಾಡು, ಲೇವಡಿ ಮಾಡು, ಇನ್ನೊಬ್ಬರು ಹೇಳಿದಂತೆ ಹೇಳಿ ಅಣಕಿಸು

ಬಳಕೆ :

೧.       ಮಾಷ್ಟ್ರ ಮಾಡ್ದಾಂಗೆ ಮಾಡಿ ಚಾಳ್ಸ್‌ತ್ರ್ಯಾ ಮಕ್ಕಳೇ. ಹೇಳ್ತೇ ತಡಿ ಅವ್ರ್ ಹತ್ರ

೨.         ನಂಗ್ ಈ ಬಣ್ಣದ್ ಅಂಗಿ ಬ್ಯಾಡ. ಮಕ್ಳೆಲ್ಲಾ ಹುಲಿವೇಷ ಅಂತ ಚಾಳ್ಸ್‌ತೋ

 

ಚಡಿ = ಬಿಡುವು, ಅಂತರ, ಸಂದು

ಬಳಕೆ :

೧.         ಈ ಮಳಿ ಒಂಚೂರ್ ಚಡಿ ಕೊಡ್ದೇ ಸೊರಿತಿತ್ತಲೆ. ಹೀಂಗೆ ಆರೆ ಹೊರ್ಗ್ ಹೊರ್‍ಡುದಾರೂ ಹ್ಯಾಂಗೆ?

೨.         ಬಾಗ್ಲ್ ಬುಡ್ದಗೆ ಒಂದ್ ಸಣ್ಣ್ ಚಡಿ ಇತ್ತ್. ಅದ್ರಗೆ ಈ ಎರು ಎಲ್ಲಾ ಒಳ್ಗ್ ಬಂದದ್

 

ಗನಾ, ಗನಾದ್ = ಒಳ್ಳೆಯ, ಉತ್ತಮ (ಘನದ ಅಪಭ್ರಂಶ ರೂಪ ಇರಬಹುದೇ?)

ಬಳಕೆ :

೧.         ಮಾಯ್ನ್ ಹಣ್ ಪೂರಾ ಕೊಳ್ತ್ ಹೋಯಿತ್. ಗನಾದ್ ಒಂದೂ ಇಲ್ಲ.

೨.         ಗನಾದ್ ಒಂದ್ ಮಳಿ ಬಂದಿರೆ ಸೆಕಿಯಾರೂ ಸ್ವಲ್ಪ ಕಡ್ಮಿ ಆತಿತ್ತ್

 

ಲಗಾಡಿ ತೆಗೆ = ಹಾಳುಮಾಡು, ನಾಶಮಾಡು

ಬಳಕೆ :

೧.         ಅವನ್ ನಂಬ್ಕಂಡ್ ವ್ಯವಹಾರ ಅವ್ನ ಕೈಗ್ ಕೊಟ್ರೆ, ನನ್ನನ್ ಪೂರಾ ಲಗಾಡಿ ತೆಗ್ದ ಮಾರಾಯ

೨.         ಈ ಮಗ, ಅಪ್ಪ ಮಾಡಿಟ್ಟದ್ ಪೂರಾ ಲಗಾಡಿ ತೆಗುಕೆ ಸಾಕ್

 

ದಾವ್ = ದಾಹ, ಬಾಯಾರಿಕೆ

ಬಳಕೆ :

೧.         ಜೋರ್ ದಾವ್ ಆತಾ ಇತ್ತ್. ಒಂಚೂರ್ ಬೆಲ್ಲ ನೀರ್ ಕೊಡ್ ಕಾಂಬಾ

೨.         ಬೆಳಿಗ್ಗೆ ದ್ವಾಸಿ ತಿಂದದ್ದಕ್ಕೋ ಏನೋ..ಜೋರ್ ದಾವ್ ಆತಾ ಇತ್ತಪ್ಪ

 

ಒರ್ಲು = ಕಿರುಚು, ಕೂಗು, ಜೋರಾಗಿ ಮಾತಾಡು

ಬಳಕೆ :

೧.         ಎಮ್ಮಿ ಆಗ್ಳಿಂದ ಒರ್ಲತಾ ಇತ್ತಪ್ಪ. ಅದ್ಕೆ ಬಾಯ್ರ್(ಕಲಗಚ್ಚು) ಕೊಡಲ್ಯಾ?

೨.         ಅಷ್ಟ್ ಗಟ್ಟಿ ಒರ್ಲುಕೆ ಇಲ್ಲ್ಯಾರು ಕೆಪ್ಪರು ಇಲ್ಲೆ. ಸ್ವಲ್ಪ ಮೆಲ್ಲ ಹೇಳ್

೩.         ಶಾಲಿ ಬಿಟ್ರ್ ಕೂಡ್ಳೇ ಸಾಕ್ ಮಕ್ಳೆಲ್ಲಾ ಹೋ ಅಂತ ಒರ್ಲ್‌ತಾ ಮನಿಗ್ ಹೊರ್ಟೋ

 

ದೊಡ್ ಸಂಗ್ತಿ = ದೊಡ್ಡ ಮನುಷ್ಯ, ದೊಡ್ಡ ಜನ

ಬಳಕೆ :

೧.         ಮೊನ್ನೆ ದಾರಿ ಮೇಲ್ ಸಿಕ್ರೂ ಮಾತಡ್ಸ್‌ದೇ ಹೋದ್ಯಲಾ..ಹಂಗಾರ್ ಅಷ್ಟ್ ದೊಡ್ ಸಂಗ್ತಿ ಆಯಿ ಹೋದ್ಯಾ ಮಾರಾಯ?

೨.         ಅವ್ರಿಗೇನ್ ಮರ್ರೆ..ದೊಡ್ ಸಂಗ್ತಿ.. ಮೂರಲ್ಲ ನಾಕ್ ಕಾರ್ ಬೇಕಾರು ಇಟ್‌ಕಣ್‌ಲಕ್

 

ಹೂವಿನ್ ಗುತ್ತಿ = ಹೂವಿನ ಗಿಡ

ಬಳಕೆ :

೧.         ಈ ಸಾರಿಯಾದ್ರೂ ಮಳ್ಗಾಲದಗೆ ಒಂದಿಷ್ಟ್ ಹೂವಿನ ಗುತ್ತಿ ನೆಡ್ಕ್

೨.         ಹೂವಿನ್ ಗುತ್ತಿ ಪೂರಾ ಗಂಟಿ ಬಂದ್ ತಿಂದ್ಕಂಡ್ ಹೋಯ್ತ್

 

ಪ್ರಿಯ =  ದುಬಾರಿ

ಬಳಕೆ :

೧.         ಅಕ್ಕಿ, ಬ್ಯಾಳಿ ( ಬೇಳೆ) ಎಲ್ಲಾ ಒಂದ್ ಪ್ರಿಯ ಆದ್ದ್ ಅಂದ್ರೆ, ಇನ್ನ್ ಸಾಮಾನ್ಯದರ್ ಉಂಬುದೂ ಕಷ್ಟ

೨.         ಇದೆ ನಮನಿ ಎಲ್ಲ ಪ್ರಿಯ ಆತಾ ಹೋರೆ, ಅಗ್ಗ ಆಪುದ್ ನಮ್ ಜೀವ ಒಂದೆಯಾ ಅಂದೇಳಿ

 

ಕುಶಾಲ್ = ತಮಾಷೆ, ವಿನೋದ (ಖುಶ್ ಹಾಲ್ ನಿಂದ ಈ ಶಬ್ಡ ಬಂದಿದ್ದು)

ಬಳಕೆ :

೧.         ನೀ ಸ್ವಲ್ಪ ಸುಮ್ಮನಿರ್, ನಿಂಗೆ ಎಲ್ಲದ್ರಗೂ ಕುಶಾಲ್.

೨.         ನೀ ಬೇಜಾರ್ ಮಾಡ್ಕಂಬೇಡ. ನಾ ಸುಮ್ನೆ ಕುಶಾಲಿಗೆ ಹೇಳದ್

 

ತೊಡು = ತಿನ್ನಬೇಕೆಂಬ ಆಸೆ, ಹಸಿವೆ ಆದಂತೆ ಅನ್ನಿಸೋದು, ಬಾಯಿ ಚಪಲ

ಬಳಕೆ :

೧.         ಈ ಮಳಿ ಬಪ್ಪ್ ಸಮಿಗೆ ತೊಡು ಜಾಸ್ತಿ. ಎರ್ಡ್ ಹಪ್ಳ ಸುಟ್ಟಾರು ತಿನ್ಲಕ್ಕಿದ್ದಿತ್

೨.         ಮಕ್ಳ್ ಶಾಲಿಯಿಂದ್ ಬಂದರೇ ತೊಡು ಆತ್ತ್ ಅಂತೋ ಈಗ. ಎಂತಾರೂ ಮಾಡಿಡ್ಕ್

 

ಮಿಟ್ಟಿ, ಮಿಟ್ಟೆ = ಮೊಗ್ಗು

ಬಳಕೆ :

೧.         ಮಲ್ಗಿ ಮಿಟ್ಟಿ ಕೊಯ್ದಿಟ್ಟಿರೆ, ನಾಳೆ ದೇವ್ರಿಗ್ ಮಾಲೆ ಮಾಡ್ಯಾರು ಹಾಕ್ಲಕ್ಕಿತ್

 

ದಿಗಡ್‌ದಿಮ್ಮಿ / ದಿಗಡುದಿಮ್ಮಿ          = ಸೊಕ್ಕಿನವಳು , ಯಾರ ಅಂಕೆಗೂ ಸಿಗದವಳು,

ಬಳಕೆ :

೧.         ಅವ್ಳಿಗೆ ಸಲ್ಗಿ ಕೊಟ್ಟದ್ ಜಾಸ್ತಿ ಆಯ್ತ್. ಈಗ ಒಳ್ಳೆ ದಿಗಡ್‌ದಿಮ್ಮಿ ಕಣಗೆ ತಿರ್ಗುದ್ ಕಾಂಬ್ರ್ಯೆಲಾ..

೨.         ಆ ದಿಗಡ್‌ದಿಮ್ಮಿ ಬಾಯಿಗ್ ಕೋಲ್ ಹೆಟ್ಟುದ್ ಬ್ಯಾಡ ಮರಾಯ. ಎಂತಾರು ಹೆಳ್ರ್ ಜಗ್ಳಕ್ಕೇ ಬತ್ತ್ಲ್

೩.         ಒಳ್ಳೆ ದಿಗಡ್‌ದಿಮ್ಮಿ ಕಣಗೆ ಹುಡುಗ್ರೊಟ್ಟಿಗೆ ಆಡತ್ ಕಾಣ್

 

ಮುಲ್ಲಿ = ಮೂಲೆ

ಬಳಕೆ :

೧.         ಕೋಣಿ ಮುಲ್ಲಿಯಗೆ ಕೂಕಂಡ್ ಓದ್‌ಬೆಡ್ದಾ. ಅಲ್ಲ್ ಬೆಳ್ಕ್ ಇಲ್ಲ. ಕಣ್ಣ್ ಹಾಳಾತ್

 

ಲಾಟ್  = ಬಂಡಲ್ , ಸುಳ್ಳು

ಬಳಕೆ :

೧.         ಬರೀ ಲಾಟ್ ಬಿಡ್ತಾ ಇದ್ದ. ಈಗ ಅವ ಸತ್ಯ ಹೇಳ್ರೂ ಯಾರೂ ನಂಬುದಿಲ್ಲ