ಕೊಂಗಾಟದ ಬ್ಲಾಗಿಗೆ ಐವತ್ತಾಯ್ತ್ ಕಾಣಿ…

Posted: ಜುಲೈ 31, 2009 in ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ
ಟ್ಯಾಗ್ ಗಳು:, , ,

ನಿಮ್ಮ ಕೊಂಗಾಟದ ಕುಂದಾಪ್ರ ಕನ್ನಡ ಬ್ಲಾಗಗಿವತ್ತ್ ಐವತ್ನೆ ಪೋಸ್ಟ್ ಹಾಕ್ತಿದ್ದೆ ಕಾಣಿ. ಐವತ್ನೇದ್ ಆಪುಕೋಯಿ ಎಂತಾರೂ ಗಡ್ಜ್ ಮಾಡ್ಕಂದೇಳಿ ಎಣ್ಸಕಂಡಿದ್ದಿದೆ.
ಸುಮಾರ್ ದಿನ್ದಿಂದ ಎಂತ ಬರುದ್ ಎಂತ ಬರುದ್ ಅಂದೇಳಿ ಆಲೋಚ್ನಿ ಮಾಡದ್ದೆ ಮಾಡದ್ದ್. ಕಡೀಗೆ ಹೀಂಗ್ ಮಾಡ್ರೆ ಹ್ಯಾಂಗ್ ಅನ್ಸ್ತ್. ನೀವೆಲ್ಲ ಈ ಬ್ಲಾಗಿಗೆ ಸುಮಾರ್ ದಿನ್ದಿಂದ್ ಬತ್ತಿದ್ರಿ ಹೌದಾ. ನಿಮ್ ಕೈಯ್ಯಗೆ ಎಂತಾರೂ ಒಂಚೂರ್ ಬರುಕೆ ಹೇಳುದ್. ಎಲ್ಲ ಎಂತ ಬರಿತ್ರಿ ಕಾಂಬಾ.
 
ಬರುಕೆ ವಿಷ್ಯ ಎಂತಾ ಕೇಂಡ್ರ್ಯಾ? ನಮ್ ಕುಂದಾಪ್ರ ಭಾಷಿ, ಕುಂದಾಪ್ರದ್ ಜಾಗ, ಕುಂದಾಪ್ರದಗೆ ಮಾತ್ರ ಇಪ್ಪ್ ಯಾವ್ದಾರೂ ಹಬ್ಬ, ವಿಶೇಷ , ಕುಂದಾಪ್ರ ಕನ್ನಡದ ಗಾದಿ ಮಾತ್, ಎದ್ರ್ ಕತಿ, ಕುಂದಾಪ್ರದ ಮಳ್ಗಾಲ, ಕುಂದಾಪ್ರದ ಬಗ್ಗ್ ಕೆಲ್ಸ ಮಾಡ್ದವ್ರ್, ಯಕ್ಷಗಾನ… ಹೀಂಗೆ ಯಾವ್ ವಿಷ್ಯ ಆರೂ ಅಡ್ಡಿಲ್ಲ. ನಿಮ್ಗ್ ಗೊತ್ತಿದ್ದನ್ನ್ ಹೇಳಿ… ಒಟ್ಟ್ ಕುಂದಾಪ್ರಕ್ಕ್ ಸಂಬಂಧಪಟ್ಟದ್ ಆರ್ ಸೈ. ಎಲ್ಲಾ ಒಟ್ಟಾಯಿ ಓದುವ… ನಿಮ್ಗ್ ಗೊತ್ತಿದ್ದನ್ನ್ ಬೇರೆ ನಾಕ್ ಜನ ಓದಿ ಅವರೂ ಕುಶಿ ಪಡ್ಲಿ.
 
ಈ ಬ್ಲಾಗ್ ಶುರು ಮಾಡು ಹೊತ್ತಿಗೆ ನಂಗ್ ಇದ್ದ ಆಸಿ ಒಂದೇ.. ನನ್ ಕಣಗೆ ಕುಂದಾಪ್ರ ಕನ್ನಡ ಅಂದ್ರೆ ಜೀವ ಬಿಡು ನಾಲ್ಕ್ ಜನ ಓದ್ರ್ ಸಾಕ್… ನಾ ಬರದ್ದೂ ಸಾರ್ಥ ಆಯ್ತ್ ಅಂತ್ ಹಾರೈಸಿದ್ದೆ. ನೀವ್ ನಾಕಾರ್ ಜನ ಓದಿ, ನಿಮ್ಗ್ ಖುಷಿ ಆದಾಗ್ಳಿಕೆ ಅದನ್ನ ಹೇಳಿ ಬೆನ್ನ್ ತಟ್ರ ಮೇಲೆ ಮತ್ತೂ ಬರೀಕಂಬ್ ಉಮೇದ್ ಬಂದದ್ದ್ ಸುಳ್ಳಲ್ಲ.. ಹೀಂಗೆ ಈ ಬ್ಲಾಗಿಗೆ ಬನಿ.. ನಮ್ಮ ಕುಂದಾಪ್ರ ಕನ್ನಡ ಓದಿ ನಾವ್ ನೀವ್ ಎಲ್ಲ ಖುಷಿ ಪಡ್ವ ಅಕಾ?
 
ಹೇಳದ್ ನೆನ್ಪಿತ್ತಲ್ದಾ? ಬೇಗ್ ಬರ್ದ್ ಕಳ್ಸಿ.. ಕಾಯ್ತಾ ಇರ್ತೆ… ಕನ್ನಡದಗೆ ಬರುಕೆ ಅನ್ಕೂಲ ಇಲ್ದಿದ್ರೆ.. ಕಂಗ್ಲೀಷ್ ( ಅಂದ್ರೆ ಕಣಾದ ಶಬ್ದ ಇಂಗ್ಲೀಷಗೆ ಬರ್ದ್) ಆರೂ ಅಡ್ಡಿಲ್ಲ..
 
ವಿಜಯ್ ರಾಜ್  ಕನ್ನಂತ್, ಹಳ್ಳಿಹೊಳೆ
ಟಿಪ್ಪಣಿಗಳು
  1. raghavendra ಹೇಳುತ್ತಾರೆ:

    nimdella mat kend bari lyik ayth ,kundaprkke hoyi bandang ayth kani

  2. Yogeesh ಹೇಳುತ್ತಾರೆ:

    ಏನಾ… ಇನ್ನೂ ಪುರಸೊತ್ತು ಆಯ್ಲಿಲ್ಲ್ಯ?

  3. dileepchs ಹೇಳುತ್ತಾರೆ:

    ಹ್ವಾಯ್… ಭಾರಿ ಗಮ್ಮತ್ ಇತ್ತೆ ನೀವ್ ಬರೂದ್ರಾಗೇ…

  4. omganesh ಹೇಳುತ್ತಾರೆ:

    howde?nangotthe aaille!
    nooraili,saaveeraili…aathe irli…

  5. Aithal ಹೇಳುತ್ತಾರೆ:

    hway bhari kushi aathi ee blagella oduke. Oorig hoi bandangaythu. maarayre. – S.R.Aithal

  6. suresh kota ಹೇಳುತ್ತಾರೆ:

    ಹ್ವಾಯ್, ಐವತ್ತಕ್ಕೆ ಇನ್ನಿಂಗ್ಸ್ ಡಿಕ್ಲೇರ್ ಮಾಡ್ರ್ಯಾ ಹ್ಯಾಂಗೆ? ಎಂತಾ ಕತಿ? ಬಪ್ರ್ಯಲೆ ಮಾರ್ರೆ

  7. Praveen Shetty ಹೇಳುತ್ತಾರೆ:

    ಪದ್ಯದ ತಾತ್ಪರ್ಯ, ನನ್ನ ಅಜ್ಜಯ್ಯ ಹೇಳಿದಾಗೆ ಹೀಗೆ….., ಕೈಲಾಗದವರು ( ಸತ್ತ ಕಾಕಿ ) ದೇಶ (ಭತ್ತ) ಆಳುತ್ತಾರೆ (ತಿನ್ನತ್ತೋ), ಬುದ್ದಿಜೀವಿಗಳು (ಜೀವಿದ್ ಕಾಕಿ) ಸುಮ್ನೆ ಕೊತು (ಕೂಕ) ನೋಡುತ್ತಿದ್ದಾರೆ (ಕಾಣತ್ತೋ)
    Praveen Shetty, Jeddah, Saudi Arabia

  8. Yogeesh ಹೇಳುತ್ತಾರೆ:

    ಸಂತು ಅವ್ರೆ… ನಾ ಫಸ್ಟ್ ಕೇಂತಾ ಇಪ್ಪುದು… ಅರ್ಥ ತುಂಬಾನೇ ಇದೆ… ಆದ್ರೂ ಸರಿ ಅರ್ಥ ಆಯಿಲ್ಲ…
    “ಸತ್ತ್ ಕಾಕಿ ಬತ್ತ ತಿನ್ನತ್ತೋ
    ಓ ಗಂಡೇ
    ಜೀವಿದ್ ಕಾಕಿ ಕೂಕ ಕಾಣತ್ತೋ!“
    ಹಾಂಗಂದ್ರೆ ಏನು?

    • ಸಂತು ಹೇಳುತ್ತಾರೆ:

      ಯೋಗೀಶ್,

      ಅದ್ರ ಸರಿ ಅರ್ಥ ನಂಗೂ ಗೊತ್ತಿಲ್ಲ ಮರ್ರೆ. ವೇದದೆಗೂ ಉಪನಿಷತ್ತೆಗೊ “ಹಕ್ಕಿಯೊಂದು ಹಣ್ಣ ತಿನ್ತಿತ್ತ್, ಹತ್ರ ಕೂತ್ ಇನ್ನೊಂದ್ ಹಕ್ಕಿ, ಈ ಹಕ್ಕಿ ಹಣ್ಣ್ ತಿಂಬುದನ್ನೆ ಕಾಣ್ತಿತ್ತ್” ಅಂದೇಳಿ ಅರ್ಥ ಬಪ್ಪೊ ವಾಕ್ಯ ಇತ್ತಂಬ್ರ್. ಅದನ್ನು ನಮ್ಮ ಬದಿಯವ್ರು ನಾ ಮೇಲ್ ಬರ್ದಾಂಗೆ ತಿರಿಸಿರೋ ಬರದ್ರೊ ಎನೋ.

  9. suresh kota ಹೇಳುತ್ತಾರೆ:

    ಯಾರೋ ಯಾರೋ ಮಂಡೆ ಮೇಲೆ ಕುಪ್ಳ ಕೂತಿತೋ
    ನಾನಲ್ಲ ಅಪ್ಪಯ್ಯ, ಆಚಿಮನಿ ಕುಪ್ಪಯ್ಯ..
    ಇದನ್ನೆಲ್ಲಾರೂ ಕೇಂಡಿರ್ಯಾ?

  10. ಸಂತು ಹೇಳುತ್ತಾರೆ:

    ವಿಜಯ್,

    ನಿವ್ ಕೇಂಬುದು ಹೆಚ್ಚಾ ನಾ ಕಳ್ಸುದ್ ಹೆಚ್ಚಾ! 🙂

    ನಾವ್ ಸಣ್ಣಕಿಪ್ಪತ್ತಿಗೆ ಈ ಎರ್ಡ್ ಸಾಲಿನ ಪದ್ಯ ಹೇಳ್ಖ್ಂಡ್, ಖಾಲಿ ಬೆಲ್ಲದ ಡಬ್ಬಿ ಬಡ್ಕಂಡ್ ನವರಾತ್ರಿ ಟೈಮಗೆ ಕುಣಿತಿದ್ದಿತಪ. ಇದನ್ನ ಕಟ್ಟದ್ ಯಾರೋ ನಂಗೊತ್ತಿಲ್ಲ. ಪದ್ಯದಗೆ ಮಾತ್ರ ಒಳ್ಳೆ twist ಇತ್ತ್.

    “ಸತ್ತ್ ಕಾಕಿ ಬತ್ತ ತಿನ್ನತ್ತೋ
    ಓ ಗಂಡೇ
    ಜೀವಿದ್ ಕಾಕಿ ಕೂಕ ಕಾಣತ್ತೋ!”

  11. Chetana Teerthahalli ಹೇಳುತ್ತಾರೆ:

    Congrats!!
    nimma blog OdtA OdtA nAnU alpa swalpa Kundaapra kannaDa kalte kANi…

    – Chetana

    • ವಿಜಯರಾಜ್ ಕನ್ನಂತ ಹೇಳುತ್ತಾರೆ:

      Chetana madam… heenge batta aaykani pooraa kundaapra kannada kalilakk
      Shishira… nangyaaroo kENallappa
      Suresh… bEngLurage aasaDi Odr yellitt marayre… neev hELdange kelsa swalpa jaasti itt…
      Ranjith, Yogeesh, Shama, Sushrutha… ellarigoo yELd ond thanx
      Mayya…Neev entaaru bard kaLsi andre nange baruk hELtriyale.. id samnaa?

  12. ಶಿಶಿರ ಕನ್ನಂತ ಹೇಳುತ್ತಾರೆ:

    ಎಂತ ಬರುದ್ ಅಂತೇಳಿ ಗೊತ್ತಾತಿಲ್ಲ. ಆದ್ರು ನಂದ್ ಒಂದ್ ಒಳ್ಳೆ ಎಕ್ಸ್ ಪೀರಿಯನ್ಸ್ ಹೇಳ್ತೆ…..

    ನಾನಂತೂ ತುಂಬಾ ವರ್ಷದಿಂದ ಬೇರೆ ಬೇರೆ ಬದಿ ಇದ್ದವ್ನ್ ಮರ್ರೆ. ಹೀಂಗೆ ನನ್ನ ಗುರ್ತ ಮಾಡ್ಕಂಬೋತ್ತಿಗೆ ನಾನ್ ಎಲ್ಲಾದ್ರು ಕುಂದಾಪ್ರ ಬದಿಯವ್ನ್ ಅಂದೇಳಿ ಗೊತ್ತಾದ್ರೆ, ಒಂದ್ ಹಾಡ್ ಹಾಡುಕ್ ಸುರ್ ಮಾಡ್ತ್ರು, ಅದ್ಯಾವ್ದ್ ಅಂದ್ರೆ “ಕುಂದಾಪುರದ ಮೀನಮ್ಮ…ಸೂಪರ್ ಡೂಪರ್ ಟೇಸ್ಟಮ್ಮ…. …. ನಿಮ್ಮ ಕಡೆ ಮೀನು ತುಂಬಾ ಫೇಮಸ್ ಅಂತೆ ಹೌದ?”…….. ಅಂತ ನಮ್ಮನ್ನ್ ಕೇಂತ್ರ……
    ನಿಮಗ್ಯಾರಿಗಾದ್ರು ಈ ತರ ಎಕ್ಸ್ ಪೀರಿಯನ್ಸ್ ಆಯ್ತಾ?……….

  13. suresh kota ಹೇಳುತ್ತಾರೆ:

    ಹ್ವಾಯ್ ಕನ್ನಂತ್ರೇ, ಎಂತ ! ಆಸಾಡಿ ಒಡ್ರ್ ನಿಮ್ಗೂ ತಾಗ್ತಾ ಹ್ಯಾಂಗೆ? ಬರೂದೆ ಕಮ್ಮಿ ಮಾಡಿರ್ಯಲೆ ಮಾರ್ರೆ.
    ಅಡ್ಡಿಲ್ಲ ಬಿಡಿ, ಪುರ್ಸೊತ್ತಿಲ್ಯ ಕಾಂತ್ ಅಲ್ದಾ? ಈಗ ಸ್ವಾಣಿ ತಿಂಗ್ಳಂಗಾರೂ ಸಮಾ ಬರಿನಿ ಅಕಾ?
    ಕಾಂತ ಕಾಂತ ನಿಮ್ ಬ್ಲಾಗಿಗ್ ಐವತ್ ತುಂಬ್ತಲ್ದಾ ಮರ್ರೆ, ಇನ್ನೂ ಐವತ್, ಐನೂರ್, ಐದ್ ಸಾವ್ರ, ಐದ್ ಲಕ್ಷ ಬರೂ ಹಾಂಗ್ ಆಯ್ಲಿ ಅಂದೇಳಿ ಹಾರೈಸ್ತೆ, ಅಕಾ?

  14. ರಂಜಿತ್ ಹೇಳುತ್ತಾರೆ:

    ಊರಿಗಿಂತ ಭಯಂಕರ ದೂರ ಇಪ್ಪೋ ನಮ್ಮಂಥ ಮಾಣಿಗಳಿಗೆ ಊರಿನ ನೆನ್ಪು ಮಾಡ್ಸೋ ಬ್ಲಾಗಿದ್.

    ನೂರು, ಸಾವ್ರ ಹೊಡೀಲಿ ಪೋಸ್ಟ್ ಸಂಖ್ಯೆ.

  15. minchulli ಹೇಳುತ್ತಾರೆ:

    congrats vijay.. keep writing

  16. Yogeesh ಹೇಳುತ್ತಾರೆ:

    ಇನ್ನೊಂದು ನೆನಪಾದ್ದು –
    ಕಪ್ಪ ಕಪ್ಪತಾ ಬಪ್ಪುದು – ಅಂದ್ರೆ ಬೆಳಿಗಿನ ಮುಂಚ್ ಬಪ್ಪುದು…..

  17. Yogeesh ಹೇಳುತ್ತಾರೆ:

    ನಮ್ಕೈಲು ಬರ್ಸುವ ಅಂದ್ಹೇಲಿ ಮಾಡಿದ್ಯ… ಸಧ್ಯಕ್ಕೆ ನಂಗೆ ಶಾಲೇಲಿ ಮಾಸ್ತರು ಹೇಳಿದ್ದ ಒಂದು ಭಾಷೆ ಅವಾಂತರ ನೆನಪಾತ್ತು….
    “ಬರ್ಕ ಬರ್ಕಾ?” – ಒಂಚೂರು ಆಲೋಚನೆ ಮಾಡಿರೆ ಗೊತ್ತಾತ್ತ್ ಹಂಗೆ ಅಂದ್ರೆ ಎಂತ ಅಂದ್ಹೇಲಿ…
    ಈ ಬೆಂಗಳೂರಿಗೆ ಬಂದ ಮೇಲೆ ತಿರುಗಿ ಕಂಡ್ರೆ ನಮ್ ಭಾಷಿ ಗಮ್ಮತ್ ಗೊತ್ತಾತ್ತ್…

  18. Sushrutha ಹೇಳುತ್ತಾರೆ:

    ಐವತ್ನೇ ಪೋಸ್ಟಿಗೆ ಶುಭಾಶಯಾ ಕನ್ನತ್ತರೇ..

  19. Mayya ಹೇಳುತ್ತಾರೆ:

    nav pursoThange kayta irath marre blog oduke.
    idea tumba ith marre..holitilla koodle 🙂
    ond kelsa madi kamba….
    oor badi bus bagge barini ondu, conducter ticket, ava ellelli bus hoth andeli koogudu, bussigoskara jana kayudu, est hothige bus ?…heenge kundapura badi tara.

    matondu oor badi navu ata adadd ithale …gillidandu, goli, benchendu, .avella sersi hang ata adthith heli adre barini kamba…

    heege yavdaru nenpige bandre helthe…enthakandre heludu tumba sulba aldana ?? 🙂
    ithi mayya
    <>

ನಿಮ್ಮ ಟಿಪ್ಪಣಿ ಬರೆಯಿರಿ