Posts Tagged ‘kannada jokes’


ಹೀಂಗೆ ಬೇಜಾರ್ ಆರ್ ಕೂಡ್ಲೇ ಎಂತಾರೂ ಜೋಕ್ ಸಿಕ್ಕತ್ತಾ ಹುಡ್ಕುದ್. ಜೋಕ್ ಒಳ್ಳೆದಿತ್ತ್ ಅನ್ಸಿರೆ ಅದನ್ನ ನಿಮಗೂ ಹೇಳ್ವಾ ಅಂದೇಳಿ ಬರುಕ್ ಕೂಕಂಡಿನೆ.

ನೆಗಿ ಬಂದ್ರ್ ಚೂರೇ ಚೂರ್ ನೆಗಾಡಿ ಅಕಾ 🙂

ಒಬ್ನಿಗೆ ಸಾವಿನ ಗಳ್ಗಿ ಹತ್ರ ಬಂತಂಬ್ರ್. ಅವನ್ನ ಕರ್ಕಂಡ್ ಹೋಪ್ಕೆ ಯಮ ಬಂದ ಅಂಬ್ರ್. ಯಮ ಬಂದನ್ ಅವ್ನತ್ರ ಹೇಳ್ದ…

“ಇಲ್ಕಾಣ್ ಮಾರಾಯ… ನಿಂದ್ ಆಯುಷ್ಯ ಮುಗಿತಾ ಬಂತ್… ಆರೂ ನೀನ್ ಭಾರೀ ಪುಣ್ಯ ಮಾಡಿದೆ. ಅದಕ್ಕೆ ನಿಂಗ್ ಒಂದ್ ವರ ಕೊಡ್ತೆ…

ನಿನ್ ಜೀವ ತೆಗಿಕಿದ್ರ್ ಮೊದ್ಲ್ ನಿಂದ್ ಕೊನೆ ಆಶಿ ಎಂತಾರೂ ಇದ್ರೆ ಹೇಳ್… ಅದನ್ ತೀರ್ಸಿಯೇ ನಿನ್ ಜೀವ ತಕ ಹೋತೆ”

ಆಗ್ಳಿಕೆ ಸಾಯುಕ್ ಬಿದ್ದನ್ ಮಂಡಿ ಸಾವ್ ತಪ್ಸಕಂಬ್ಕೆ ಒಳ್ಗೆ ಆಲೋಚ್ನಿ ಬಂತ್… ಅವ ಯಮನತ್ರ ಹೇಳ್ದ…

“ನಾನ್ ಈ ಜೀವಮಾನದಗೆ ಅನ್ಬೈಸುದೆಲ್ಲಾ ಅನಬೈಸಿ ಆಯ್ತ್. ನನ್ ಹೆಚ್ಚಿನ್ ಆಶಿ ಪೂರ್ತಿ ದೇವ್ರ್ ನೆಡಸಿ ತೀರಿತ್. ಆರೂ ನೀನ್ ಕೊನಿ ಆಶಿ ಎಂತಾ ಕೇಂಡಿ ಅಲ್ದಾ… ಬಿಡುದ್ ಯಾಕೆ? ಮತ್ತೆಂತ ಇಲ್ಲ… ನಂದ್ ಒಂದ್ ಸಣ್ಣ ಆಶಿ ಅಷ್ಟೇ. ಮನಮೋಹನ್ ಸಿಂಗ್ ಇದ್ರಲ್ದಾ… ಅವ್ರ್ ಸಲ್ಮಾನ್ ಖಾನ್ ಹೆಂಡ್ತಿ ಹತ್ರ ಮಾತಾಡುದ್ ಕಾಣ್ಕ ಅಂದೇಳಿ ನನ್ ಕೊನಿ ಆಶಿ”

ಯಮ ಅಲ್ಲೇ ಚಂಯ್ಕ 🙂


ಹೋಟ್ಲು ಕ್ಯಾಂಟೀನಗೆ ಚಾತಿಂಡಿ ಊಟ ಮಾಡುವರಿಗೆ ಕುಂದಾಪ್ರ ಕನ್ನಡದ ಅಣಕ. ‘ಪರಮಾತ್ಮ’ ಚಿತ್ರದ ‘ಕತ್ಲಲ್ಲಿ ಕರಡೀಗೆ… ಜಾಮೂನು ತಿನಿಸೋಕೆ…’ ಪದ್ಯ ಹೀಂಗಾಯಿತ್ ಕಾಣಿ – ‘ಹೋಟ್ಲಂಗೆ ಬೆಳ್ಗತಿಗೆ… ಚಾ-ತಿಂಡಿ ಮಾಡುಕೆ… ಯಾವತ್ತೂ ಹೋಪ್ಕಾಗ ರೀ…’ 🙂


ಹೋಟ್ಲಂಗೆ ಬೆಳ್ಗತಿಗೆ… ಚಾ-ತಿಂಡಿ ಮಾಡುಕೆ… ಏಗ್ಳೀಕೂ ಹೋಪ್ಕಾಗ ರೀ… ಹ್ವಾ… ಆ… ಆ…
ಅತ್ಲಾಯಿ ದುಡ್ಡ್ ಹಾಳ್… ಇತ್ಲಾಯಿ ಹೊಟ್ಟಿ ಹಾಳ್… ಏಗ್ಳೀಕೂ ಹೋಪ್ಕಾಗ ರೀ… ಹ್ವಾ… ಆ… ಆ…

ಹೊಸ ಅಡಿಗೆ ಮನ್ಯಾರೆ… ಕಾಣ್ಲಕ್ಕ್ ಏನಂತ್ರಿ
ಹಳಿ ಅಡಗಿ ಮನಿಯಾದ್ರೆ… ತಿಂದದ್ದೆಲ್ಲಾ ಕಾರ್ಕಂತ್ರಿ
ಮನೆಯಂಗೆ ತಿಂಡಿ ತಿಂದ್… ಲಾಯ್ಕಂಗಿರಿ…
ಇನ್ಮಾತ್ರ ಹೋಟ್ಲ್ ತಿಂಡಿಗ್… ದುಡ್ಡ್-ಹಾಕ್ಬೆಡಿ… ಹ್ವಾ… ಆ… ಆ…

ಅತ್ಲಾಯಿ ದುಡ್ಡ್ ಹಾಳ್… ಇತ್ಲಾಯಿ ಹೊಟ್ಟಿ ಹಾಳ್… ಏಗ್ಳೀಕೂ ಹೋಪ್ಕಾಗ ರೀ… ಹ್ವಾ… ಆ… ಆ…
ಹೋಟ್ಲಂಗೆ ಬೆಳ್ಗತಿಗೆ… ಚಾ-ತಿಂಡಿ ಮಾಡುಕೆ… ಏಗ್ಳೀಕೂ ಹೋಪ್ಕಾಗ ರೀ… ಹ್ವಾ… ಆ… ಆ…

ಹೋಟಲವ್ರ್ ತಿಂಡಿಯಂಗೆ… ಎಂತಾ ಇತ್ತ್
ತಿಳ್ಕಂಬ್ಕೆ ತಾಕತ್ತ್… ನಮಗೆಲ್ಲಿತ್ತ್?
ಸೋಡವ ಹಾಕ್ದಿದ್ದ್… ಹೊಟ್ಲಂಬ್ದೇ ಇಲ್ಲ

ಚಿತ್ರಾನ್ನ ಮಾಡ್ತ್ರಂಬ್ರು… ಅನ್ನ ಉಳ್ದ್ರೆ
ಬಿಸಾಡುಕ್ ಆತಿಲ್ಲ… ದುಡ್-ಕೊಟ್ಟದ್ದೇ
ಡಾಲ್ದಾನ್ನೇ ಹಾಕುದು… ಘೀ-ಸ್ಮೆಲ್ಲೇ ಇಲ್ಲ

ಕುಂ…ದಾಪ್ರ ಹೋಟ್ಲಂಗೆ… ಒಂಚೂರು ಕಮ್ಮಿ
ಎಲ್….ಹೋರು… ಸೋಡ ಮಾತ್ರ….ಹಾಕ್ತ್ರಂಬ್ರು ಕಾಣಿ
ಹೋಟ್ಲಂಗೆ ತಿಂದ್ಕಂಡು… ಹೊಟ್ಟಿಉರೀ…
ಬಾಯ್ಮುಚ್ಕಂಡ್… ಬಿಲ್ಕೊಟ್… ಬತ್ತಾಇರಿ… ಹ್ವಾ… ಆ… ಆ…

ಹೋಟ್ಲಂಗೆ ಬೆಳ್ಗತಿಗೆ… ಚಾ-ತಿಂಡಿ ಮಾಡುಕೆ… ಏಗ್ಳೀಕೂ ಹೋಪ್ಕಾಗ ರೀ… ಹ್ವಾ… ಆ… ಆ…
ಅತ್ಲಾಯಿ ದುಡ್ಡ್ ಹಾಳ್… ಇತ್ಲಾಯಿ ಹೊಟ್ಟಿ ಹಾಳ್… ಏಗ್ಳೀಕೂ ಹೋಪ್ಕಾಗ ರೀ… ಹ್ವಾ… ಆ… ಆ…

ಯಾರಾರು ಚಾ ಕುಡ್ಸ್ರೆ… ಕುಡುಕ್ಹೋಯ್ಬೆಡಿ
ಕುಡ್ದ್ರ್ ಸೈತಾ ಬಿಲ್ಮಾತ್ರ… ಕೊಡುಕೋಯ್ಬೇಡಿ
ಹೊಟ್ಲಂಗೆ ಸೋಂಪು… ತಿಂಬ್-ಕಾಗ ಮರ್ರೆ

ಹಶುವಾದ್ರೆ ಒಂಚೂರ್… ತಡ್ಕಂಬಿಡಿ
ಮನ್ಯಂಗೇ ಊಟ ಮಾಡಿರೆ… ಒಳ್ಳೇದ್ ಬಿಡಿ
ಹೋಟಲಿಗೆ ದುಡ್ಡು… ಹಾಕುಕಾಗ ಕಾಣಿ

ಹೋ… ಟ್ಲಂಗೆ ರುಚಿಯಾತ್… ಆ ಪೊಕ್ಕ್ ತಿಂಡಿ
ತಿಂ…ದಾರ ಮೇಲಾಪ್ದ್ ದುಡ್ ದಂಡ ಕಾಣಿ
ಯೇಗ್ಳೀಕು ತಿಂಬುಕಾಗ ಹೋಟ್ಲಂಗೇರೀ….
ಅಪ್ರೂಪಕ್ ಒಂದ್ಸರ್ತಿ ಹೋಯ್ಲಕ್ಕ್ ರೀ

ಹೋಟ್ಲಂಗೆ ಬೆಳ್ಗತಿಗೆ… ಚಾ-ತಿಂಡಿ ಮಾಡುಕೆ… ಏಗ್ಳೀಕೂ ಹೋಪ್ಕಾಗ ರೀ… ಹ್ವಾ… ಆ… ಆ…
ಬಾಕಿ ಸಮಚಾರ… ಎಂತದೂ ಕಾಂತಿಲ್ಯಲೇ… ಮತ್ ಸಿಕ್ವಾ ಹಾಂಗಾರೆ ಹ್ವಾಯ್… .. ಹ್ವಾ… ಆ… ಆ…

ಮೂಲ ಹಾಡು: ‘ಪರಮಾತ್ಮ’ ಚಿತ್ರದ ‘ಕತ್ಲಲ್ಲಿ ಕರಡೀಗೆ… ಜಾಮೂನು ತಿನಿಸೋಕೆ… ಯಾವತ್ತೂ ಹೋಗ್ಬಾರ್ದು ರೀ…’
ಕೃಪೆ: kannadalyrics.com

ಕತ್ಲಲ್ಲಿ ಕರಡೀಗೆ… ಜಾಮೂನು ತಿನಿಸೋಕೆ… ಯಾವತ್ತೂ ಹೋಗ್ಬಾರ್ದು ರೀ… ಆ… ಆ… ಆ…
ಅತ್ಲಾಗೆ ಆ ಹುಡುಗಿ… ಇತ್ಲಾಗೆ ಈ ಹುಡುಗಿ… ಯಾವತ್ತೂ ಇರ್ಬಾರ್ದು ರೀ… ಆ… ಆ… ಆ…

ಹೊಸ ಹುಡುಗಿ ಕೈಯಲ್ಲಿ… ಕೆಂಪಾದ ಗೋರಂಟಿ
ಹಳೆ ಗೆಳತಿ ಕೆಮ್ಮಿದರೆ… ಪ್ರಳಯಾನೇ ಗ್ಯಾರಂಟಿ
ಒಬ್ಳನ್ನೇ ಲವ್ ಮಾಡಿ ಚೆನ್ನಾಗಿರಿ…
ಇನ್ನೊಬ್ಳ ಫೋನ್ ನಂಬರ್ ಇಟ್ಕೊಂಡಿರಿ… ಆ… ಆ… ಆ…

ಅತ್ಲಾಗೆ ಆ ಹುಡುಗಿ… ಇತ್ಲಾಗೆ ಈ ಹುಡುಗಿ… ಯಾವತ್ತೂ ಇರ್ಬಾರ್ದು ರೀ… ಆ… ಆ… ಆ…
ಕತ್ಲಲ್ಲಿ ಕರಡೀಗೆ… ಜಾಮೂನು ತಿನಿಸೋಕೆ… ಯಾವತ್ತೂ ಹೋಗ್ಬಾರ್ದು ರೀ… ಆ… ಆ… ಆ…

ಹುಡುಗೀರ ಮನಸಲ್ಲಿ… ಏನೇನಿದೆ
ತಿಳ್ಕೊಳ್ಳೋ ತಾಕತ್ತು… ನಮಗೆಲ್ಲಿದೆ
ಪ್ರಾಬ್ಲಮ್ಮೇ ಇರದ… ಫೀಮೇಲು ಇಲ್ಲ

ಸಿಕ್ಸರ್ರು ಹೊಡಿಬೋದು… ಬ್ಯಾಟಿಲ್ಲದೆ
ಪ್ರೀತ್ಸೋಕೆ ಆಗಲ್ಲ… ಡೌಟಿಲ್ಲದೆ
ಅನುಮಾನ ಇರದ… ಅನುರಾಗ ಇಲ್ಲ

ಮಾ…ಡರ್ನು ಪ್ರೇಮಕ್ಕೆ ಮೈಲೇಜು ಕಮ್ಮಿ
ಸೆಲ್…. ಪೋನು ಬಂದ್ ಮೇಲೆ ಹಿಂಗಾಯ್ತು ಸ್ವಾಮಿ
ಲವ್ವಲ್ಲಿ ಕಣ್ಣೀರು… ಕಂಪಲ್ಸರೀ…
ಯಾವ್ದಕ್ಕೂ ಕರ್ಚೀಫು… ಇಟ್ಕೊಂಡಿರಿ… ಆ… ಆ… ಆ…

ಕತ್ಲಲ್ಲಿ ಕರಡೀಗೆ… ಜಾಮೂನು ತಿನಿಸೋಕೆ… ಯಾವತ್ತೂ ಹೋಗ್ಬಾರ್ದು ರೀ… ಆ… ಆ… ಆ…
ಅತ್ಲಾಗೆ ಆ ಹುಡುಗಿ… ಇತ್ಲಾಗೆ ಈ ಹುಡುಗಿ… ಯಾವತ್ತೂ ಇರ್ಬಾರ್ದು ರೀ… ಆ… ಆ… ಆ…

ಯಾರಾನ ಕೈ ಕೊಟ್ರೆ… ಪಾರ್ಟಿ ಕೊಡಿ
ನೆನಪೆಲ್ಲಾ ಸೋಪ್ಹಾಕಿ… ತೊಳ್ಕೊಂಡ್ ಬಿಡಿ
ಕಣ್ಣಲ್ಲಿ ಸೋಪು… ಹೋಗ್ಬಾರ್ದು ಕಣ್ರೀ

ಟೈಮ್ ಇದ್ರೆ ಒಂಚೂರು… ದುಃಖ ಪಡಿ
ಮೆಸ್ಸೇಜು ಬರಬಹುದು… ಕಾಯ್ತಾ ಇರಿ
ಹೃದಯಕ್ಕೆ ಗ್ಯಾಪು… ಕೊಡಬಾರ್ದು ಕಣ್ರೀ

ಬೆನ್ನ…ಲ್ಲಿ ಹುಣ್ಣಂತೆ ಆ ಫಸ್ಟ್ ಲವ್ವು
ಯಾ…ಮಾರಿ ಅಂಗಾತ ಮಲ್ಕೊಂಡ್ರೆ ನೋವು
ಎಲ್ಲಾನು ಮರೆಯೋಕೆ ಹೋಗ್ಬಾರ್ದು ರೀ…
ಕೆರೆಯೋಕೆ ಹುಣ್ಣೊಂದು ಇರಬೇಕು ರೀ… ಆ… ಆ… ಆ…

ಕತ್ಲಲ್ಲಿ ಕರಡೀಗೆ… ಜಾಮೂನು ತಿನಿಸೋಕೆ… ಯಾವತ್ತೂ ಹೋಗ್ಬಾರ್ದು ರೀ… ಆ… ಆ… ಆ…
ಬಾಕೀ ಸಮಾಚಾರು… ಬ್ರೇಕ್ ಕೆ ಬಾದ್ ಅಂತೀನಿ… ನನ್ನನ್ನು ನಂಬ್ಕೊಂಡಿರಿ… ಆ… ಆ… ಆ…


ಕನ್ನಡ ಪಿಚ್ಚರ್ ಕುಂದಾಪ್ರ ಕನ್ನಡದಗೆ ಬಂದ್ರೆ ಹೀಂಗ್ ಇರತ್ತಾ ಕಾಣಿ….

ಕುಂದಾಪ್ರ ಟೈಟಲ್                                                                 ಮೂಲ ಟೈಟಲ್ 

——————————————————————————————-

ಕಬ್ಬಿನಾಲಿ ———————————————- ಆಲೆಮನೆ

ಆಟ ಜೋಡಾಟ —————————————– ಆಟ ಹುಡುಗಾಟ

ಅವ್ಳೆ ನನ್ ಹೆಣ್ಣ್ —————————————– ಅವಳೇ ನನ್ನ ಹುಡುಗಿ

ಅಲ್ಲಿ ಗೋಪಾಲಚಾರಿ ಇಲ್ಲಿ ವಿಶ್ವನಾಥ ಆಚಾರಿ —————- ಅಲ್ಲಿ ರಾಮಾಚಾರಿ ಇಲ್ಲಿ ಬ್ರಹ್ಮಚಾರಿ

ಅನಂತನ ಪಚೀತಿ ————————————— ಅನಂತನ ಅವಾಂತರ

ಬಾ ಹುಲ್ಲೆ ಹೊಡಿ ಮಂಚಕೆ ——————————– ಬಾ ನಲ್ಲೇ ಮಧುಚಂದ್ರಕೆ

ಬಾರೆ ನನ್ ಕೊಂಗಾಟದ ಹೆಣೆ —————————– ಬಾರೆ ನನ್ನ ಮುದ್ದಿನ ರಾಣಿ

ಬೆರ್ಚಪ್ಪ ———————————————– ಬೆದರು ಬೊಂಬೆ

ತಿಂಗಳ ಬೆಳ್ಕ್ ಹೆಣ್ಣ್ ————————————- ಬೆಳದಿಂಗಳ ಬಾಲೆ

ಬಣ್ಣದ್ ಯಾಸ —————————————– ಬಣ್ಣದ ವೇಷ

ಕಡಿಕೆ ————————————————- ಅನಂತರ

ಅಂಬ್ಡ್ ———————————————— ಅವಳಿ ಜವಳಿ

ಅವ್ರೆ ನಮ್ಮನಿ ಅವ್ರ್ ————————————- ಅವನೆ ನನ್ನ ಗಂಡ

ಅಳಿಯ ಜಗ್ಲೀ ತಗ್ಗಿಳಿಯ ———————————- ಅಳಿಯ ಮನೆ ತೊಳಿಯ

ಚಂದ ಗ್ವಾಪಿ ——————————————– ಚಂದನದ ಗೊಂಬೆ

ತೆಂಗು-ಅಡ್ಕಿಯ ತ್ವಾಟ ———————————– ಚಂದವಳ್ಳಿಯ ತೋಟ

ಚಿಕ್ಕಿ ————————————————— ಚಿಕ್ಕಮ್ಮ

ಶೆಣ್ಣಯ್ಯ ———————————————– ಚಿಕ್ಕೆಜಮಾನ್ರು

ದಾವ್ ————————————————- ದಾಹ

ದೈವದ್ ಕೊಲ —————————————— ದೈವ ಲೀಲಾ

ಗರ್ಗರ್ ಮಂಡಲ ಮಧ್ಯದಗೆ ——————————- ಧರಣಿ ಮಂಡಲ ಮಧ್ಯದೊಳಗೆ

ಬಿಲಾಸ್ ಬಿಟ್ ಮಗ ————————————– ದಾರಿ ತಪ್ಪಿದ ಮಗ

ಹರ್ಕಿ ಆಟ ———————————————- ದೇವರ ಆಟ

ಕಾಣ್ಕಿ ಡಬ್ಬಿ ——————————————— ದೇವರ ದುಡ್ಡು

ಮೆಟ್ಕಲ್ ಗುಡ್ಡಿ ಮೇಲೆ ———————————— ಎಡಕಲ್ಲು ಗುಡ್ಡಧ ಮೇಲೆ

ಕೋಳಿ ಗೂಡ್ —————————————— ಗೀಜಗನ ಗೂಡು

ಗುಡ್ಡಿ ಹೆಣ್ಣ್ ——————————————— ಗಿರಿ ಕನ್ಯೆ

ಹಗಲ್ಯಾಸ ——————————————— ಹಗಲು ವೇಷ

ಮಕ್ಳಾಟಿಕಿ ಹೆಣ್ಣ್ —————————————- ಹುಡುಗಾಟದ ಹುಡುಗಿ

ಸಾಲಿನ್ ಬಲಿ——————————————- ಜೇಡರ ಬಲೆ

ಉಪ್ಪಿನಕೋಟೆ —————————————– ಕಾಕನ ಕೋಟೆ

ಕಣಾಲಿ ಪಲ್ಯ ——————————————- ಕಲಾಸಿ ಪಾಳ್ಯ

ಮದಿ ಕಾಗ್ದ ——————————————— ಲಗ್ನ ಪತ್ರಿಕೆ

ಕುಟ್ಟಿ ಕೀಸು ——————————————– ಮಿಂಚಿನ ಓಟ

ಆಸಾಡೀ ಒಡ್ರ್. —————————————– ಮುಂಗಾರು ಮಳೆ

ಹಳ್ಳಿಹೊಳೆ ——————————————— ನಾಗರಹೊಳೆ

ನಾ ನಿನ್ ಬೆಚ್ಚುದಿಲ್ಲ ————————————– ನಾ ನಿನ್ನ ಬಿಡಲಾರೆ

ದೇವ್ರ್ ಹಾವ್——————————————– ನಾಗರಹಾವು

ಊರ್ಬದಿ ಗಂಡ್ —————————————– ನಮ್ಮೂರ ಹುಡುಗ

ನಮ್ಮೂರಿನ್ ಕಿಸ್ಕಾರ್ ಹೂವೇ —————————— ನಮ್ಮೂರ ಮಂದಾರ ಹೂವೇ

ನಮ್ಮನಿ ಅವ್ಳದ್ ಮದಿ ————————————- ನನ್ ಹೆಂಡ್ತಿ ಮದುವೆ

ನಮ್ಮೂರ್ ಉಮ್ಮಲ್ತಿ ————————————– ನಮ್ಮೂರ ದೇವತೆ

ಹ್ವಾಯ್ ನಾವ್ ಇಪ್‌ದೇ ಹೀಂಗೆ —————————- ನೋಡಿ ಸ್ವಾಮಿ ನಾವಿರೋದೇ ಹೀಗೆ

ಕೊರಾಜಿ ಐ ಲವ್ ಯೂ ———————————– ಒರಟ ಐ ಲವ್ ಯೂ

ಆನಗಳ್ಳಿ ಪಾಂಡವರು ————————————- ಪಡುವಾರಳ್ಳಿ ಪಾಂಡವರು

ಪಿರ್ಕಿ ನನ್ ಮಗ —————————————– ತರ್ಲೆ ನನ್ನಮಗ

ಕುಂದಾಪ್ರ ಕನ್ನಡಿಗ ————————————— ವೀರ ಕನ್ನಡಿಗ

ಉಡ್ಪಿ ದಾದಾ ಎಮ್.ಬಿ.ಬಿ.ಎಸ್—————————– ಉಪ್ಪಿದಾದ ಎಮ್.ಬಿ.ಬಿ.ಎಸ್

ಕುಂದಾಪುರದಲ್ಲಿ ಕಾಯ್- ಕಳ್ಳ —————————— ಸಿಂಗಪೂರಿನಲ್ಲಿ ರಾಜಾ ಕುಳ್ಳ