Archive for ಡಿಸೆಂಬರ್, 2013


ಚೀಂಕ್ರ,ಕುಟ್ಟಿ,ಎಂಕ,ಶೀನ ಒಳ್ಳೇ ಫ್ರೆಂಡ್ಸ್ ಆದ್ರು…
ಒಂದಿನ ಹೀಂಗೆ ಮಾತಾಡ್ತಾ ಮಾತಾಡ್ತಾ ನಾವೆಲ್ಲಾ ಒಟ್ಟಾಯಿ ಎಂತಾರು ಯಾಪಾರ ಮಾಡ್ರೆ ಹ್ಯಾಂಗೆ ಅಂತ ಕುಟ್ಟಿ ಒಂದ್ ಮಾತ್ ನೆಗ್ದ್ ಹಾಕ್ದ…

ಉಳ್ದರಿಗೂ ಹೌದ್ ಅಲ್ದಾ ಅಂಬಗ್ ಆಯ್ತ್…

ಎಂತ ಯಾಪಾರ ಮಾಡುದ್ ಅಂತ ಸುಮಾರ್ ಆಲೋಚ್ನಿ ಮಾಡಿ ಕಡಿಗೆ ಈಗ ಪೆಟ್ರೋಲ್-ಡೀಸಲ್ಲಿಗೆ ಒಳ್ಳೇ ಯಾಪಾರ…ಅದ್ನೆ ಮಾಡ್ವ ಅಂತ ಎಲ್ಲ ಒಟ್ಟ್ ದುಡ್ಡ್ ಹಾಕಿ ಒಂದ್ ಪೆಟ್ರೊಲ್ ಬಂಕು ಹಾಕುದ್ ಅಂತ ತೀರ್ಮಾನ ಆಯ್ತ್…

ಒಂದ್ ದಿನ ಆಯ್ತ್….ಎರ್ಡ್ ದಿನ ಆಯ್ತ್…ಒಂದ್ ವಾರವೇ ಹೋಯ್ತ್….ಕಡಿಗ್ ಒಂದ್ ತಿಂಗ್ಳೂ ಕಳೀತ್…

ಒಂದ್ ರೂಪಾಯಿದು ಯಾಪಾರ ಆಯಲ್ಲ…

ಅಲ್ಲ ಹೋಯಿ ಹೋಯಿ ಸೆಕೆಂಡ್ ಫ್ಲೋರಗೆ ಪೆಟ್ರೊಲ್ ಬಂಕು ಇದ್ರೆ ಯಾರ್ಬತ್ರ್ ಮಾರ್ರೇ….

ಮತ್ತ್ ಸುಮಾರ್ ದಿನ ಹೋರ್ ಮೇಲೆ…ಇದೆ ನಾಕ್ ಜನ ಮತ್ತ್ ಒಟ್ಟಾರ್…ಇದ್ ಯಾಪಾರ ಸುಖ ಇಲ್ಲ ಬೇರೆ ಎಂತಾದಾರು ಮಾಡ್ವ..ಅಂದೇಳಿ ಎಲ್ಲಾ ತೀರ್ಮಾನ ಮಾಡ್ರ್… ನಾವ್ ಅದೇ ಜಾಗದಗೆ ಒಂದ್ ಹೋಟ್ಲು ಮಾಡ್ರೆ ಹ್ಯಾಂಗೆ?

ಸರಿ ನಾಕು ಜನ ಸೇರಿ ಹೋಟ್ಲು ಶುರು ಮಾಡ್ರ್….ಹೋಟ್ಲು ಶುರುವಾಯಿ ಒಂದಿನ ಆಯ್ತ್……ಯಾರು ಗಿರಾಕಿ ಬರಲ್ಲ….

ಒಂದ್ ವಾರ ಒಂದ್ ತಿಂಗ್ಳೂ…ಹೀಂಗೆ ಮುಂದುವರಿತ್……ಯಾಪಾರ ಎಂಥದೂ ಇಲ್ಲ…

ಆದ್ರೆ ಹೋಟ್ಲಿಗೆ ಜನ ಎಂಥಕೆ ಬರಲ್ಲ ಅಂತ ಬ್ರಹ್ಮಾಂಡ ಜ್ಯೋತಿಷಿ ಹತ್ರ ಕುಟ್ಟಿ ನಿಮಿತ್ತ್ಯ ಕೆಂಬುಕ್ ಹೋದ… ಹೋಯಿ, ನಾವ್ ಒಂದು ಹೋಟ್ಲ್ ಮಾಡಿತ್ ಮಾರ್ರೇ ಯಂತಾ ಯಾಪಾರವೇ ಇಲ್ಲ… ಕಾಣಿ ಇದಕ್ಕ್ ಒಂದು ಪರಿಹಾರ ಹೇಳಿ…

ಜ್ಯೋತಿಷಿ ಹೇಳ್ರ್.. ಹ್ವಾಯ್ ಇದು ವಾಸ್ತು ದೋಷ ಆಯಿ ಕಾಣತ್ತ್..ಎಂತಕೂ ನಿಮ್ಮ ಹೋಟ್ಲು ನಾ ಒಂದ್ ಸರ್ತಿ ಕಾಣ್ಕ್.. ಕಂಡಾರ್ ಮೇಲೆ ಹೇಳ್ತೆ ಅಂದ್ರು….

ಸರಿ ಅವ್ರನ್ನ್ ಹೋಟ್ಲಿಗೆ ಕರ್ಕಂಡ್ ಬಂದ…

ಹೋಟ್ಲ್ ಬಾಗ್ಲ್ ಬುಡಕ್ಕ್ ಬಪ್‌ಕೂ ಜ್ಯೋಯಿಸ್ರ್ ಅಲ್ಲೇ ನಿಂತಕಂಡ್ ಬಿಟ್ರು… ಹ್ವಾಯ್ ಕುಟ್ಟಿಯಣ್ಣ…ನಿಮ್ಗ್ ಮಂಡಿ ಸಮಾ ಇತ್ತಾ ಮಾರ್ರೇ… ಪೆಟ್ರೊಲ್ ಬಂಕಿನ ಬೋರ್ಡ್ ಮೊದ್ಲು ತೆಗ್ದ ಹಾಕಿ….ಹೋಟ್ಲ್ ಮಾಡಿ ಪೆಟ್ರೊಲ್ ಬಂಕಿನ ಬೋರ್ಡ್ ಇದ್ರೆ ಜನ ಬಪ್‌ದಾರು ಹ್ಯಾಂಗ್ ಮರ್ರೆ… ಅಂತ ಹೇಳಿ…ಇಗಾಣಿ ಈ ದುಡ್ಡ್ ನೀವೇ ಇಟ್ಕಣಿ..ಮೊದ್ಲು ಹೋಟ್ಲಿನ ಬೋರ್ಡ್ ಬರ್ಸಿ ಹಾಕಿ ಅಂತ ಹೇಳಿ… ದಡದಡಾ ಕೈ ಬೀಸ್ಕ ನೆಡ್ಕಂಡ್ ಹೋದ್ರು….

ಹೋಟ್ಲಿನ್ ಕತಿ ಇಲ್ಲಿಗೆ ಮುಗೀತಾ….

ಈಗ ಒಂದ್ ಕಾರ್ ಬಾಡ್ಗಿಗೆ ಬಿಡುವ..ಒಳ್ಳೇ ದುಡ್ಡ್ ಆತ್ತ್…ಅಂದ್ ಜೋಯಿಸ್ರ ಮಾತ್ ಕೇಂಬ ಅಂದೇಳಿ ಕಾರ್ ಬಂತ್.

ಆರೇ ಏನ್ ಮಾಡ್ರೂ ಯಾರು ಗಿರಾಕಿಯೇ ಸಿಕ್ಕಲ್ಲ…ಬರೀ ಪೆಟ್ರೊಲ್ ಕರ್ಚ್ ಮಾಡದ್ದೆ ಬಂತ್..

ಒಂದ್ ವಾರ ಆಯ್ತ್… ಒಂದ್ ಜನ ಸತೆ ಬಾಡ್ಗಿಗ್ ಬರಲ್ಲ… ಒಟ್ಟ್ ಊರ್ ಬಿಟ್ಟ್ ಓಡಿ ಹೋಪುದೆ ಸೈಯ್ಯಾ ಕಾಣತ್ತ್” ಅಂದೇಳಿ ಮತ್ತ್ ಜೋಯಿಸರ ಹತ್ರ ಕುಟ್ಟಿ ಕೇಂಡ.

ಜೋಯಿಸ್ರ್ ಹೇಳ್ರ್”ಹ್ವಾಯ್… ಕುಟ್ಟೀಯಣ್ಣ…ನಿಮ್ಗೆ ಮಂಡಿ ಒಳ್ಗೆ ಎಂಥ ಇತ್ತ್ ಮಾರ್ರೇ… ಇಪ್ಪ್ ನಾಲ್ಕ್ ಸೀಟಗೆ ನೀವ್ ನಾಕ್ ಜನ ಕೂಕಂಡಿರಿ…ಇನ್ನ್ ಗಿರಾಕಿ ಬಪ್ಪುದ್ ಹ್ಯಾಂಗೆ ಮಾರ್ರೇ…??!”

ಆಗ ಅಲ್ಲಿದ್ದ ನಾಕೂ ಜನಕ್ಕೆ ಮಂಡಿ ಒಳ್ಗೆ ಪಣ್ಕ್..ಪಣ್ಕ್ ಅಂತ ಬೆಳ್ಕ್ ಬಂದಂಗಾಯಿ… ಕಣ್ಣ್ ಕಣ್ಣ್ ಬಿಟ್ರ್…ಮಾರ್ಕುದಾ ನೆಗಾಡುದ ಗೊತ್ತಾಯ್ದೇ…

ಹೊಯ್ಲಿ..ಈ ಕಿಚ್ ಹಿಡಿದ್ದ್ ರಗ್ಳಿಯೆ ಬ್ಯಾಡಾ…ಕಾರಗೆ ಮನಿಗ್ ಹೋಪ ಅಂತ ಕಾರ್ ಸ್ಟಾರ್ಟ್ ಮಾಡುಕ್ ಹೋರೆ… ಕಾರ್ ಏನ್ ಮಾಡ್ರು ನಂಗೆಡಿಯ ಅಂತ ಕೂಕಂಡ್ ಬಿಡ್ತ್…

ಸರಿ ಎಂತ ಮಾಡುದ್ ಅಂತ ನಾಕೂ ಜನ ಇಳ್ದ್ ಬಂದ್… ಜೋಯಿಸ್ರೆ ನೀವೋಂಚೂರ್ ಸ್ಟೇರಿಂಗ್ ಹಿಡ್ಕ ಕೂಕಣಿ ನಾವು ನಾಕೂ ಜನ ಕಾರ್ ದೂಡ್ತೊ.. ಅಂದ್ರು…

ಜೋಯಿಸ್ರ್.. ಸರಿ ಅಂತ ಹೇಳಿ ಕೂಕಂಡ್ರು… 1 ನಿಮಿಷ ಆಯ್ತ್.. 2 ನಿಮಿಷ ಆಯ್ತ್… ಕಾರ್ ಹನಿ ಹಂದಲಿಲ್ಲ… ಅಲ್ಲ ಇವ್ರ್ ಎಂಥ ಮಾಡ್ತ್ರ್ ಕಾಂಬ ಅಂತ ಜೋಯಿಸ್ರ್ ಕಾರ್ ಇಳ್ಕ ಕಂಡ್ರೆ….ಕತಿ ಎಂಥ ಹೇಳುದ್… ಇಬ್ರ್ ಹಿಂದಿಂದ ಕಾರ್ ದೂಡ್ತಾ ಇದ್ರು… ಇಬ್ರು ಮುಂದಿಂದ ಕಾರ್ ದೂಡ್ತಾ ಇದ್ರು…

ಈಗ ಊರ್ಬದಿಯಲ್ಲ್ ಯಾರೇ ಎಂಥ ಯಾಪಾರ ಶುರು ಮಾಡುದಾರೂ ಅವ್ರ ಮನಿಯರ್ ಹೇಳ್ತ್ರು …ನೀ ಎಂತಾರು ಮಾಡ್ ಮಗ…ಆರೇ ಕುಟ್ಟಿಯಣ್ಣನ ಕಣಾಗ್ ಒಂದ್ ಮಾಡ್ಬೆಡ ಅಂದ್… ಹಾಂಗಾಯಿ ಕುಪ್ಳನ್ ನಂಬ್ಕ ಕೊಳ್ಕಿ ನೆಟ್ಟಾಂಗೆ ಅಂಬ ಗಾದಿ ಒಟ್ಟಿಗೆ ಕುಟ್ಟಿಯಣ್ಣ ಬಿಸಿನೆಸ್ಸ್ ಮಾಡ್ದಂಗೇ.. ಅಂತ ಹೊಸ ಗಾದಿ ಮಾತ್ ಈ ಸರ್ತಿದು ಕುಂದಪ್ರಭ ಯುಗಾದಿ ವಿಶೇಷಾಂಕದಗೆ ಬಂದ್ರೂ ಆಶ್ಚರ್ಯ ಇಲ್ಲ… 🙂

ಈ ಕಥೆ ಇಲ್ಲಿಗೆ ಮುಗಿಲಿಲ್ಲ…. ಇದ್ರ ಕ್ಲೈಮ್ಯಾಕ್ಸ್… ಮುಂದಿನ ಪೋಸ್ಟ್ ಬಪ್ಪ್ ವರಿಗೆ ಕಾಯ್‌ತ್ರಿ ಅಲ್ದಾ… 🙂