ರಿಷಿ ಸಿನಿಮಾದ ನಾನು ಒತ್ತಾರೆ ಎದ್ಬುಟ್ಟು…ಹಾಡು ಕುಂದಾಪ್ರಕ್ಕೆ ಬಂದ್ರೆ…ಹೀಂಗ್ ಆತ್ತ್ ಕಾಣಿ…
ರಾಜು ಅನಂತ ಸ್ವಾಮೀ ಹಾಡಿದ್ ಈ ಪದ್ಯ ಕಂಡ್ರೆ ನಂಗೆ ಮಸ್ತ್ ಖುಷಿ…

ಈ ಪದ್ಯ ಕೇಂತಾ ಓದ್ರೆ ಇನ್ನೂ ಲಾಯ್ಕಿರತ್ತ್.. ಅದ್ಕೆ ಪದ್ಯದ ವಿಡಿಯೋ ಇಲ್ಲೇ ಪೋಸ್ಟಿನ ತುದಿಯಲ್ ಹಾಕಿದೆ ಕಾಣಿ….

ನಾನು ಬೆಳ್ಮುಚ್ ಎದ್ಕಂಡ್..ನಿನ್ ಸೊಡ್ಡ್ ಕಂಡ್ಕಂಡ್.. ಕೈ ಮುಕ್ಕಂಡ್ ನಿಂತ್ಕಂತೆ ಹೆಣೆ…
ಬೇಗ ಚಾ ಕಣ್ಣ್ ತಂದ್ಕೋಟ್ಟು.. ನಿನ್ ಕಾಲ ಬುಡ್ದಗಿಟ್ಟು… ಚೂರ್-ಚೂರೆ ಕುಡ್ಸ್ತೆ ಹೆಣೆ…
ಚಾಕ್ ಸಕ್ರಿ ಕಮ್ಮಿ ಅಂದ್… ಕೊಯ್ಸಾಣಿ ನೀ ನೆಗ್ದ್ರೆ..ನಿನ್ ಬೆಟ್ಟನ್ನೇ ಮುಳಸ್ತೆ ಹೆಣೆ…
ಈ ಮ್ಯಾಮಿ ಮಿಟಾಯಿಗೆ.. ಸಕ್ರಿ ಎಂತಕ್ ಬೇಕ್ ಅಂದೇಳಿ.. ಹಲ್ ಚಿಲ್ಕಂಡ್ ನೆಗಾಡ್ತೆ ಹೆಣೆ…

ಸುಮ್ನಾ…ಯ್ಕೊ… ಏ ಗಡಾ.. ಕೊಂಗಾ…ಟ ಸಾಕ್ ಗಡಾ… ಚೊಣ್ಕಿ ತಾಗ್ದಂಗ್ ಆಡ್ಬೆಡ…ಹ್ವಾ..ಹ್ವಾ..

ನಿಂಗೆ ಎಳ್ಳೆಣ್ಣಿ ಹಚ್ಚಿ ಬಿಟ್…ನಿನ್ ಮಂಡಿಗಿಷ್ಟ್ ಹೊಯ್ದ್ ಬಿಟ್…ನೆಟ್ಗಿ ತೆಗಿತೆ ಹೆಣೆ…
ನಿನ್ನನ್ ಮೀಸುತ್ತಾ ಮೀಸುತ್ತಾ…ಬಚ್ಲಮನಿ ಹರಿಯಗೆ…ನೀರ್-ಪೂರ್ತಿ ಖಾಲಿ ಹೆಣೆ…
ಕಡ್ಬು ಪತ್ರೊಡೆ ಮಾಡಿಟ್..ಗೆಣ್ಗಿನ ಹಪ್ಳ ಸುಟ್ಬಿಟ್ಟ್…ಬಾಳೆಲೆ ಹಾಕ್ತೆ ಹೆಣೆ…
ನಾ ಚಕ್ರಮಟ್ಟಿ ಹಾಯ್ಕಂಡ್…ನಿನ್ ಮಟ್ಟಿ ಮೇಲ್ ಕೂರ್‌ಸ್ಕಂಡ್ , ನಿಂಗ್ ಒಂದ್ ಮುಷ್ಟಿ ಉಣ್ಸ್ತೆ ಹೆಣೆ…

ಸುಮ್ನಾ…ಯ್ಕೊ… ಏ ಗಡಾ.. ಕೊಂಗಾ…ಟ ಸಾಕ್ ಗಡಾ… ಚೊಣ್ಕಿ ತಾಗ್ದಂಗ್ ಆಡ್ಬೆಡ…ಹ್ವಾ..ಹ್ವಾ..

ಸಂತಿಗ್ ಕರ್ಕಂಡೋಯಿ…ವಾಯ್ಲ್ ಸೀರಿ ತೆಗ್ಸಿಕೊಟ್ಟ್..ನಿಂಗ್ ಉಡ್ಸಿ ಬಿಡ್ತೆ ಹೆಣೆ…
ಅಲ್ ಹೋಟ್ಲಲ್ ಕೂಕಂಡ್…ಗೋಳಿಬಜಿ ಬನ್ಸ್ ತಿಂದ್…ತೀರ್ಗಾಡ್ಕ ಬಪ್ಪ ಹೆಣೆ…
ತಿಂಗಳ್ ಬೆಳ್ಕಿನ್ ರಾತ್ರಿಯಗೆ..ಆಂಗ್ಳದಗೆ ಕೂಕಂಡ್…ಪಟ್ಟಾಂಗ ಹೊಡುವ ಹೆಣೆ…
ಸೊಡ್ಡ್ ಬೀಗ್ಸೂದ್ ಬಿಟ್ಟೀಕಿ…ಒಂಚೂರ್ ನೆಗಾಡ್ತಾ ಬಾ ಮರತಿ..ನನ್ ಕೊಂಗಾಟದ ಗೊಂಬಿ ಹೆಣೆ…

ಸುಮ್ನಾ…ಯ್ಕೊ… ಏ ಗಡಾ.. ಕೊಂಗಾ…ಟ ಸಾಕ್ ಗಡಾ… ಚೊಣ್ಕಿ ತಾಗ್ದಂಗ್ ಆಡ್ಬೆಡ…ಹ್ವಾ..ಹ್ವಾ..
———————————————————————————————

ಮೂಲ ಹಾಡ್ ಬೇಕಿದ್ರೆ ಇಲ್ಲಿತ್ತ್ ಕಾಣಿ…
(ಕೃಪೆ:http://www.kannadalyrics.com)
ರಿಷಿ (2005) – ನಾನು ಒತ್ತಾರೆ.

ನಾನು ಒತ್ತಾರೆ ಎದ್ಬುಟ್ಟು ನಿನ್ ಮಾರೆ ನೋಡ್ಬುಟ್ಟು ಕೈ ಜೋಡ್ಸಿ ನಿಲ್ತೀನ್ ಕಣೆ
ಬೇಗ ಬೇಡ್ ಕಾಫಿ ತಂದ್ಬುಟ್ಟು ನಿನ್ ಕಾಲ ಒತ್ಬುಟ್ಟು ಬಗ್ ಬಗ್ಸಿ ಕೊಡ್ತೀನ್ ಕಣೆ
ಕಾಫಿ ಸೀಗಿಲ್ಲ ಅಂತ ಒದ್ಬುಟ್ರೆ ನಿನ್ ಬೆಳ್ಳ ಕಪ್ಪಲ್ಲಿ ಅದ್ತೀನ್ ಕಣೆ
ಈ ಸಕ್ರೆಯ ಗೊಂಬೆಗೆ ಸಕ್ಕರೆ ಯಾಕಂತ ಹಲ್ ಗಿಂಜಿ ನಿಲ್ತೀನ್ ಕಣೆ

I love you love you da I really love you da I truely love you da ಹೇ ಹೇ

ನಿಂಗೆ ಒಳ್ಳೆಣ್ಣೆ ಹಚ್ಬುಟ್ಟು ಮೈಯೆಲ್ಲಾ ನೀವ್ಬುಟ್ಟು ನಿಟಿಕೆ ತೆಗಿತೀನ್ ಕಣೆ
ಜಳಕ ಮಾಡ್ಸುತ್ತಾ ಮಾಡ್ಸುತ್ತಾ ಬೆಳ್ ಬೆಳ್ಳೆ ಬೆನ್ನನ್ನ ಮುದ್ದಾಡ್ತಾ ತಿಕ್ತೀನ್ ಕಣೆ
ಕೀರು ಉಪ್ಪಿಟ್ಟು ಒಬ್ಬಟ್ಟು ನಿಪ್ಪಿಟ್ಟು ತಂಬಿಟ್ಟು ಎಲ್ಲಾ ನಾ ಮಾಡ್ತೀನ್ ಕಣೆ
ನಿನ್ ಮಡ್ಲಲ್ಲಿ ಕೂರ್ಸಕಂಡು ಸೊಂಟಾನ ತಬ್ಗಂಡು ತುತ್ತುತ್ತು ತಿನ್ಸ್ತೀನಿ ಕಣೆ

I love you love you da I really love you da I truely love you da ಹೇ ಹೇ

ಅಹಾ ಸಂತೆಗೆ ಕರಕೊಂಡು ಸೀರೆನ್ನ ಕೊಂಡ್ ಕ್ಕೊಂಡು ನಿಂಗುಡ್ಸಿ ನೋಡ್ತೀನ್ ಕಣೆ
ಅಲ್ಲಿ ತೊಟ್ಲಲ್ಲಿ ಕೂತ್ಕಂಡು ಮಂಡಕ್ಕಿ ತಿಂದ್ಕಂಡು ಎತ್ಕಂಡೆ ಬತ್ತೀನ್ ಕಣೆ
ಆಹಾ ಬೆಳದಿಂಗಳ್ ರಾತ್ರೇಲಿ ಮುಂಜಾನೆ ಜೋಕಾಲಿ ಅಂಗ್ಳಾನೆ ಮಂಜಿನ್ ಕೋಣೆ
ಇಂಥಾ ಮುಂಗೋಪ ಬಿಟ್ಬುಟ್ಟು ಇನ್ನಾರೊ ನಂಬುಟ್ಟು ಬಾಬಾರೆ ನನ್ನ ಜಾಣೆ
I love you love you da I really love you da I truely love you da ಹೂ ಹೂ

ಟಿಪ್ಪಣಿಗಳು
 1. Shashidhar Ampar ಹೇಳುತ್ತಾರೆ:

  super vijayanna…i like ur writing style

 2. mmaravanthe ಹೇಳುತ್ತಾರೆ:

  ಅಷ್ಟೆಲ್ಲ ಕೊಂಗಾಟ ಮಾಡಿರೆ, ಆ ಹೆಣ್ಣ ಕೊಣಸೊಕ್ಕತ್ತ ಕಾಣ ಗಡ.
  ಆದ್ರೂ ಹ್ವಾಯಿ ಲಾಯಿಕ್ಕಿತ್ ಮರಾಯ್ರೆ.

 3. shashidhara halady ಹೇಳುತ್ತಾರೆ:

  ಹ್ವಾಯ್, ಭಾರೀ ಗಮ್ಮತ್ತಿತ್ ಕಾಣಿ, ಕನ್ನಂತರೆ, ಚಾ ಕಣ್ ಹೊಸ್ತ್ರು ಕೇಂಡ್, ಚಾ ಕಣ್ ಕುಡುವ ಅಮ್ಮಂಗಾಯ್ತ್, ಮಾರಾಯ್ರೆ. ನಿಮ್ಗ್ ಆ ಎಲ್ಲಾ ಸಬ್ದೊ ಸಮಾ ನೆನಪಿತ್, ಕಾಣಿ, ನನಗ್ ಆಗ್ಲೇ ಕೆಲವು ಸಬ್ದ ಹಂಬಲ್ಲಿಲ್ಲೆ ಮಾರಾರ್ಯೆ. ನೀವೇ ಎಲ್ಲೋ ಒಂದ್ ಕಡೆ ಕೇಂಡೀರಲ್ದಾ, ನಿಮ್ ಮಕ್ಳಿಗೆ ಎಂತಕೆ ಕುಂದಾಪ್ರ ಕನ್ನಡ ಕಲ್ಸುದಿಲ್ಲೆ ಅಂದೇಳಿ.

 4. Sandesh ಹೇಳುತ್ತಾರೆ:

  ಸಾಪ್ ಇತ್ ಗಡೆ.

 5. Akshata ಹೇಳುತ್ತಾರೆ:

  Super………..
  Im nt getng dat frm wer u get dese wrds men……………..

 6. gautam shetty ಹೇಳುತ್ತಾರೆ:

  Yenta creativity marree adbhuta.mast kushi aayt…..kundapra kannadakk nimmanttr beke bek……….

 7. Subhashchndra Shetty ಹೇಳುತ್ತಾರೆ:

  Ha ha ha Super ith marre ..!

 8. Clinton Dsouza ಹೇಳುತ್ತಾರೆ:

  Super sir 🙂 Good one…

 9. Bellala Gopinatha Rao ಹೇಳುತ್ತಾರೆ:

  KannaMtarE
  mast khuShIyaayt kaaNi

 10. C. L. D'Souza ಹೇಳುತ್ತಾರೆ:

  Suuuuuuuuuuuuuuuperrrrrrrrrrrrrrr Kannantre. Mast kushi ayit odi.

 11. Ajith S Shetty ಹೇಳುತ್ತಾರೆ:

  ಕೊಂಗಾ…ಟ ಲೈಕ್ ಮಾಡ್ತ್ರಿ….

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s