ಮತ್ತೆ ಊರಗೆ ನೆರಿ ಬಂದಿತಂಬ್ರಲೆ…

Posted: ಜುಲೈ 8, 2009 in ಇತ್ಯಾದಿ.., ನಮ್ ಊರ್ ನಮ್ಗ್ ಚಂದ

Kundapra1

ನಮ್ ನಮ್ ಮಟ್ಟಿಗೆ ನಮ್ ಊರ್ ಯೇಗ್ಳಿಕೂ ನಮ್ಗ್ ಚೆಂದವೇ. ಅದ್ರಗೂ ಮಳ್ಗಾಲ ಬಂದ್ರಂತೂ ಇನ್ನೆರ್ಡ್ ಮುಷ್ಟಿ ಹೆಚ್ಚೇ ಚೆಂದ ಕಾಣತ್. ಈ ವರ್ಷ ಜೂನ್ ಸುರಿಗೆ ಒಂದ್ ನಾಕ್ ದಿನ ಮುಖ ತೋರ್ಸದಂಗ್ ಮಾಡಿ ಹೋದ್ ಮಳಿ ಪತ್ತಿ ಇಲ್ಯಲೆ, ಈ ವರ‍್ಷ ಬ್ಯಾಸಾಯ ಮಾಡುದ್ ಹ್ಯಾಂಗೆ ಅಂದೇಳಿ ಊರ್ ಬದ್ಯಗೆ ಎಲ್ರೂ ಮಂಡಿಬಿಶಿ ಮಾಡ್ಕಂಡ್ ಇದ್ದಿರ್. ಪೇಪರಗೆಲ್ಲ ಈ ಸರ್ತಿ ಬರ್ಗಾಲ ಬಂದಂಗೇ ಸೈ, ಇನ್ನ್ ಎಂಟ್ ದಿನ ಹೋರೆ ಕರೆಂಟ್ ಇರುದಿಲ್ಲ ಅಂಬ್ರ್- ಕುಡುಕೆ ನೀರಿಲ್ಲ ಅಂಬ್ರ್ ಅಂದೇಳಿ ಎಲ್ ಕಂಡ್ರೂ ಮಳೀದೇ ಸುದ್ದಿ ಇತ್ತ್. ಕತ್ತಿ ಮದಿ, ಕೆಪ್ಪಿ ಮದಿ, ಶಿವಾಳಭಿಷೇಕದ ಸುದ್ದಿ ಎಲ್ಲಾ ಚಾನಲ್ಲಗೂ ಬ್ರೇಕಿಂಗ್ ನ್ಯೂಸ್, ಫ್ಲಾಶ್ ನ್ಯುಸ್ ಅಂದೇಳಿ ತೋರ್ಸತ್ ಕಂಡ್ ಹಂಗರ್ ಈ ಸರ್ತಿ ಮಳಿ ಕತಿ ಇಷ್ಟೇ ಸೈಯ್ಯಾ ಅಂದೇಳಿ ಎಣ್ಸ್‌ತಿಪ್ಪ್ ಸುರಿಗೆ ಮಳಿ ಬಂದ ಸುದ್ದಿ ಬಂತ್.

 ಬಂದದ್ದಾರೂ ಎಂತ ಮಳಿ ಅಂತ್ರಿ, ಹೊರ್ಗ್ ಕಾಲಿಡುಕೆಡಿಯ ಅಂಬ್ ನಮನಿ ಸುರಿತಿತ್ತ್ ಅಂಬ್ರಲಾ ಹೌದೆ? ಎಲ್ಲಾ ತೋಡ್, ಹೊಳಿ ಪೂರಾ ತುಂಬಿ ಹೋಯ್ ಊರಗೆಲ್ಲ ನೆರಿ ಬಂದಿತಂದೇಳಿ ಸುದ್ದಿಯಪ್ಪ. ಆಯ್ಲಿ ಮಳಿ ಬರ್ಲಿ. ಮಳಿ ಬರ್ದೆ ಬರ್ಗಾಲ ಬಪ್ಪುದಕ್ಕಿಂತ ನಾಕ್ ದಿನ ತಿರ್ಗಾಟಕ್ ತೊಂದ್ರಿ ಆರೂ ಮಳಿ ಬಂದ್ರೆ ಒಳ್ಳೇದಲ್ದೇ? ಈ ಮಳ್ಗಾಲದಗೆ ಎಂತ ಮಣ್ಣ್ ತಿರ್ಗಾಟ ಅಂದ್ರ್ಯಾ? ಇರ್ಲಿ ತಿರ್ಗುದ್ ಬ್ಯಾಡ. ಜೋರ್ ಮಳಿ ಬತ್ತಾ ಇತ್ತ್ ಅಂದೇಳಿ ಅಟ್ಟದ ಮೇಲೆ ಕೂಡಿಟ್ಟಿದ್ದ ಗೆಣ್ಸಿನ ಹಪ್ಳ ಹಲ್ಸಿನ್ ಕಾಯ್ ಹಪ್ಳ ಪೂರಾ ಕೆಂಡದ ಒಲ್ಯಗೆ ಸುಟ್ಕಂಡ್ ಒಲಿ ಬಾಯಗೆ ಚಳಿ ಕಾಯ್ಸ್‌ತಾ ಕುತ್ಕಂಡ್ ಎಲ್ಲಾ ಹಪ್ಳ ಖಾಲಿ ಮಾಡ್‌ಬೇಡಿ ಮರಾಯ್ರೆ. ಊರಿಗ್ ಬಂದ್ರೆ ನಮ್ಗೂ ಒಂದ್ ನಾಕ್ ಹಪ್ಳ ಇರ್ಲಿ ಅಕಾ 🙂

 ಬೆಂಗ್ಳೂರಗೆ ನಾಕ್ ಹನಿ ಮಳಿ ಬಿದ್ದ ಹೊಡ್ತಕ್ಕೇ ಥಂಡಿ ಹೊಡ್ದರ್ ಕಣಗ್ ಆಡ್ತ್ರಪ… ನಮ್ ಬದಿ ಕಣಗೆ ಎಲ್ಲಾರೂ ಮಳಿ ಬಂದ್ರ್ ಇವ್ರ್ ಊರಗೆ ಆಯ್ಕಂಬ್ರಾ? ಇಲ್ಲೂ ಜೋರ್ ಮಳಿ ಬತ್ತ್ ಅಂದೇಳಿ ಸುದ್ದಿ ಇತ್ತಪ್ಪಾ. ಆರೂ ನಮ್ ಬದಿ ಮಳಿಗ್ ಹೋಲ್ಸರೆ ಇದ್ ಎಂತಾ ಜೋರ್ ಮಳಿ ಮರ್ರೆ. ಮಳಿ ಸುದ್ದಿ ಕೇಂತಾ ಇಪ್ಪತಿಗೆ ಆರ್ಕುಟಗೆ ಶಶಿಧರ ಹೆಮ್ಮಾಡಿಯವ್ರ್ ಒಂದಿಷ್ಟ್ ಊರ್ ಬದಿ ಮಳಿದ್ ಫೋಟೋ ಹಾಕದ್ ಕಾಂಬುಕೆ ಸಿಕ್ತ್. ಅವ್ರತ ಕೇಂಡ್ ಆ ಫೋಟೋ ಇಲ್ಲ್ ಹಾಕಿದೆ ಕಾಣಿ, ಊರ್ ಬದಿಯಗ್ ಇಲ್ದಿದ್ದರ್ ಫೋಟೋದಗಾರೂ ಮಳಿ ಕಂಡ್ ಕುಶಿ ಪಡ್ಲಿ ಅಂದೇಳಿ…

kundaapra2

kundaapra3

kundaapra4

kundaapra5

kundaapra6

kundaapra7

ಟಿಪ್ಪಣಿಗಳು
 1. ರೋರೀಟಾ ಹೇಳುತ್ತಾರೆ:

  ನಮ್ಮ ಊರನ್ನು ನೋಡಲು ನಮಗೆ ಅವಕಾಶ ಮಾಡಿ ಕೊಟ್ಟಿದಕ್ಕೆ ನಿಮಗೆ ದನ್ಯವಾದಗಳು…

 2. nayeem kolo ಹೇಳುತ್ತಾರೆ:

  photos thumba chanagide ri male matra super kundapura muncipality road madidarinda neer yella haridu seeda cherandi ge hoit illa andre kundapura kachra agtit ashte mate nan irodu uae nalli nimma phitos nodi thumba khushi aitu

 3. Mohammed Shafi, Kandlur / Dubai ಹೇಳುತ್ತಾರೆ:

  TUMBA CHANNAGIDE NIJAVAGIYU NAVU VIDESHA DALLIDDARU KUDA NAMMA URINA NENAPU SADA NAMMANNU KADUTTA IRUTTADE NAVU ELLE IRALI NAMMA OORU NAMMA NAMAGE CHANDA ALLAVE.

 4. ಸಂತು ಹೇಳುತ್ತಾರೆ:

  ಫೋಟೊ ಲಾಯ್ಕಿತ್ ಮರ್ರೆ,
  ತುಂಬಾ ದಿವ್ಸ್ ಆಯ್ತಪ ಬರಿದೆ?

 5. ವಿಜಯರಾಜ್ ಕನ್ನಂತ ಹೇಳುತ್ತಾರೆ:

  nim reply kand khushi aayt.. aareb photo naan tegaddalla… shashidhara hemmaadi avr tegdadd… avr aafis buDalli tegadd photo irk haangaai hecchphoto cirlce hatradde itt

 6. deepa ಹೇಳುತ್ತಾರೆ:

  namasthe Kannanthre
  Neev egal kundaprakke bandad .Modle bathri andeli guttidire nimmanna onsala betiyalkidithale.Nangansath Kundapradage neev bari circlege bandu hodad ansath ,enthakandre bari circle de photo ith .Irli bidi ,aaru ond math helakkidith neev
  Matte Kundapradage male andre male marre Ayyabba ambstayth .
  Est male bandru kadimene alde .Iga ist male bandru ,akere surige neerilla andale markud thappattha heli
  Enthodo appa sumar jana sattor idrage .marsamy andre maravanthe esthothige rasthe kochkand hotto gothilla
  Anthu Kundaprad photo Haki neev Kundapra bitt ipparigella onchuru kundaprad male hengith andeli thorsi avarigu onchuru kundapra nenap madsri
  Sumar divsa ayth ala neev baride .Chathaka pakshi thara kaythidide .anthu puna baruk shuru madri ala thumba khushi ayth

  Kundapradalu
  Deepa Achar

 7. ವಿಜಯರಾಜ್ ಕನ್ನಂತ ಹೇಳುತ್ತಾರೆ:

  khandita mundeglikaaru kaaNk … kald varsha maaDad kavana sankalanavE innoo 250 copy uLiditt maraayre… haangai dhairya battilla pustaka maaduke 🙂

 8. ವಸಂತ ಹೇಳುತ್ತಾರೆ:

  ಹ್ವಾಯ್ ಊರ ಬದಿಗ್ ಹೋಯಿ ಮಳೆಲಿ ನೆಂದಂಗ್ ಆಯ್ತು ಮರೆರೆ..
  ಮಳಗಾಲ್ದಗ್ ಅಜ್ಜಿ ಮನಿಗ್ ಹೋದಾಗಳಿಕೆಲ್ಲ ತೋಡ್ ಬರ್ತಿ ಆಯ್ ನೀರ್ ಹರುದ್ ಕಾಂಬದೇ ಒಂತರ ಚಂದಾ..
  ನಿಮ್ಮ ಬರಹ ಓದ್ತಾ ಅದೇ ಫೀಲಿಂಗ್ ಸಿಕ್ತ್ ಮರೆರೆ..

  ಈ ಬರಹಗಳನ್ನೆಲ್ಲ ಸೇರ್ಸಿ ಒಂದ್ ಪುಸ್ತಕ್ ಮಾಡಿ,, ಒಳ್ಳೆ ಸೇಲ್ ಆತ್ತು

 9. Ramdas ಹೇಳುತ್ತಾರೆ:

  kushi aytu…oor badi mali bagge oodi. hinge mali galadu beLi, nere avella arkoole ond barini:) photo sa laykithu.

 10. Yashoda ಹೇಳುತ್ತಾರೆ:

  hwaay,
  photo like bandit. A photo elli tegdaddu, bari chanda bandit kani.First photo kandre kundpura shastri circlehatra tegdangit.

  Yashu

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s