ಸುಮಾರ್ ದಿವ್ಸ್‌ದ್ ಹಿಂದೆ ಕಾಳನ್ ಕತಿ ಇದೇ ಬ್ಲಾಗಗೆ ಓದದ್ ನೆನ್ಪ್ ಇತ್ತಾ? ಅದ್ರದ್ ಮುಂದಿನ್ ಭಾಗ ಇಲ್ಲಿತ್ತ್ ಕಾಣಿ…

 

ಕಾಳ ಮತ್ ನಾಗ್ವೇಣಿ ಜಗ್ಳ ಮಾಡ್ತಾ ಇಪ್ಪತಿಗೆ ಒಬ್ರ್ ಸಾಯ್‌ಬ್ರ್ ಒಳ್ಗ್ ಬತ್ರ್.

ಅವ್ರಿಬ್ರ್ ಲಡಾಯಿ ಮಾಡತ್ ಕಂಡ್ ಸಾಯ್ಬ್ರ್ ಕೇಂತ್ರ್…

 

ಸಾಯ್ಬ್ರ್- ಅರೇ ಕ್ಯಾರೇ… ಅರೇ ಕ್ಯಾರೇ

ಕಾಳ – ಅದೆಲ್ ಬಂತೆ…?

ಸಾಯ್ಬ್ರ್- ಅರೇ…ನಿಮ್ದು ಏನು ಹುಡುಕ್ತದೆ…

ಕಾಳ – ಅದೇ ನೀವ್ ಕ್ಯಾರಿ ಕ್ಯಾರಿ ಅಂದ್ರ್ಯಲ್ದಾ…. ನಾ ಹಂಗಾರ್ ಹಾವ್ ಗಿನ್ ಒಳ್ಗ್ ಬಂದಿತಾ ಕಾಂತಿದ್ದೆ…

ಸಾಯ್ಬ್ರ್-ಆವು ನಹೀ ಕ್ಯಾರೇ… ಅರೆ ಕ್ಯಾರೇ

ಕಾಳ – ಹಾವು ನಹೀ ಕ್ಯಾರೇ ಅಂಬ್ದೇ ಒಂಜಾತಿ ಹಾವಾ?

ಸಾಯ್ಬ್ರ್- ಅರೆ ನಿಮ್ದು ಏನು ಹೇಳ್ತದೆ… ಕ್ಯಾರೆ ಕ್ಯಾರೆ… ಅಂದ್ರೆ ಏನು ಏನು…

ಕಾಳ – ಕ್ಯಾರೆ ಆಂದ್ರೆ ಏನಾ…. ಏನಂದೇಳಿ ಹೇಳ್ವ…ಅದಿರ್ಲಿ…ನಾನು.. ನನ್ ಹೆಂಡ್ತಿ ಒಳ್ಗಿಪ್ಪತಿಗೆ ಪುಸಕ್ಕ್‌ನೆ ಒಳ್ಗ್ ಬಂದ್ರ್ಯಲ… ನೀವ್ ಯಾರ್… ಎಲ್ಲಿಗ್ ಹೋಪರ್? ಈ ಬದಿಗ್ ಏನ್ ಬಂದ್ರಿ?

ಸಾಯ್ಬ್ರ್- ನಿಮ್ದು ರಾಜಾ ರಸ್ತಾ ಇಲ್ಲಾ..

ಕಾಳ – ಎಂತದ್…. ನೀವ್ ಸಲ್ಪ್ ಸಮ್ ಮಾಡಿ ಹೇಳಿನಿ ಮರಾಯ್ರೆ

ಸಾಯ್ಬ್ರ್- ಅರೆ ನಿಮ್ದು ರಾಜ ರಸ್ತಾ… ರಸ್ತೆ..ರಸ್ತೆ ಇಲ್ಲಾ…

ಕಾಳ – ಹಾಂ..ಹಾಂ..ರಸ್ತಿ… ಇದ್ದಿತಲೆ

ಸಾಯ್ಬ್ರ್- ಆ ರಸ್ತೆಯಲ್ಲಿ ನಮ್ದು ಹೋಗ್ತಾ ಇತ್ತು…

ಕಾಳ – ನಿಮ್ದ್ ರಸ್ತಿಯಗೆ ಹೋಪತಿಗೆ ನೀವೆಂತ ಮಾಡ್ತಿದ್ದಿರಿ?

ಸಾಯ್ಬ್ರ್- ಅರೇ…. ನಮ್ದು ಹೋಗ್ತಾ ಇತ್ತು…

ಕಾಳ – ಹಾ… ನೀವ್ ಹೋತಿದ್ದಿರ್ಯಾ…. ಎಲ್ಲಿಗ್ ಹೋತಿದ್ದಿರಿ?

ಸಾಯ್ಬ್ರ್- ಅರೆ ನಮ್ದು ದುಕಾನ್ ಇಲ್ಲಾ…

ಕಾಳ – ಎಂತದ್…. ದು..ಕಾ..ನಾ…?

ನಾಗ್ವೇಣಿ – ಹ್ವಾಯ್ ಅವ್ರ್ ದೂರ್ದಿಂದ್ ಬಂದರಂಬ್ರೆ…

ಕಾಳ – ನೀ ಸಲ್ಪ ಸುಮ್ನಾಯ್ಕಂತ್ಯಾ ಇಲ್ಯಾ….ಕಡ್ದ್ ಬಿಸಾಕಿ ಬಿಡ್ವೆ ನಿನ್ನೀಗ..

ಸಾಯ್ಬ್ರ್- ಆ ಚೋಕ್ರಿ ಏನು ಹೇಳ್ತದೆ…?

ಕಾಳ – ಏಯ್… ಚೋಕ್ರಿ ಅಲ್ದಾ…ಅದ್ ನನ್ ಹೆಂಡ್ತಿ…

ಸಾಯ್ಬ್ರ್- ಹೇಂಡ್ತಿ… ಏ ಹೇಂಡ್ತಿ… ಏ ಹೆಂಡ್ತಿ…

ಕಾಳ – ಏಯ್… ಏನಾ… ನಂಗ್ ಹೆಂಡ್ತಿಯಾರೆ ಬಂದ್ ನಿಂಗೂ ಹೆಂಡ್ತಿಯನಾ?

ಸಾಯ್ಬ್ರ್- ನಿಂದೂ ಹೆಂಡ್ತಿ… ಅರೆ ಉಸ್ಕೆ ನಾಮ್ ಬೋಲೋ…

ಕಾಳ – ಈಗಾಣ್ ನೀ ಉಸ್ಕ್ ಪುಸ್ಕ್… ಅಂದ್ರೆ ನಂಗ್ ಗೊತ್ತಾತಿಲ್ಲ ಮರಾಯ

ಸಾಯ್ಬ್ರ್- ಉಸ್ಕಿ ನಾಮ್… ಅದ್ರದ್ದು ಹೆಸ್ರು ಹೇಳು.. ಬೋಲೋ ಬೋಲೋ.

ಕಾಳ – ಅವ್ಳ್ ಹೆಸ್ರು ಬೋಳು ಅಂದೇಳಿ ನಿಂಗ್ಯಾರ್ ಹೇಳದ್?

ಸಾಯ್ಬ್ರ್- ಅದ್ರದ್ದು ಎಸ್ರು..ಹೇಳು..ಹೇಳು

ಕಾಳ – ಅವ್ಳ್ ಹೆಸ್ರ್ ನಾಗ್ವೇಣಿ ಅಂದೇಳಿ

ಸಾಯ್ಬ್ರ್- ಅರೇ ನಾಗ್‌ಮ್ಯಾಣಿ

ಕಾಳ – ನಾಗ್‌ಮ್ಯಾಣಿ ಅಲ್ಲ… ಕುಷ್ಟ್ ಮ್ಯಾಣಿ…

ಸಾಯ್ಬ್ರ್- ಕುಷ್ಟ್‌ಮ್ಯಾಣಿ… ಕುಷ್ಟ್‌ಮ್ಯಾಣಿ

ಕಾಳ – ಇಗಾ ನಿಂಗ್ ಹೇಳುಕ್ ಬತ್ತಿಲ್ಲ. ಅವ್ಳ್ ಹೆಸ್ರು ನಾಗು ಅಂದೇಳಿ…

ಸಾಯ್ಬ್ರ್- ಅಚ್ಚಾ…ತುಮಾರಾ ನಾಮ್‌ಕೋ ಬೋಲೋ..

ಕಾಳ – ನೀ ಬರೀ ಅಲ್ದಿದ್ದೆಲ್ಲ ಹೇಳ್ಬೆಡ ಮರಾಯ…

ಸಾಯ್ಬ್ರ್- ಅರೆ ನಿಂದು ನಮ್ದುಕೆ ಮಸ್ಕಿರಿ ಮಾಡ್ತದೆ…

ಕಾಳ – ಮತ್ ನೀ ಎಂತ ಹೇಳುದ್ ಅದನ್ನಾರೂ ಸಮ್ ಮಾಡಿ ಹೇಳ್

ಸಾಯ್ಬ್ರ್- ತುಮಾರಾ…ನಾಮು..ಉ ನಿಂದು ಎಸ್ರು ಹೇಳು…

ಕಾಳ – ಓ ನನ್ ಹೆಸ್ರಾ.. ನನ್ ಹೆಸ್ರ್ ಕಾಳ ಅಂದೇಳಿ

ಸಾಯ್ಬ್ರ್- ನಿಮ್‌ದು ಗಂಡಾ ಹೆಣ್ತಿ..?

ಕಾಳ – ಹಾ.. ನಾವಿಬ್ರ್ ಗಂಡ-ಹೆಂಡ್ತಿ

ಸಾಯ್ಬ್ರ್- ನಮ್ದು ದುಕಾನಾ ಅಂದ್ರೆ ನಿಂಗೆ ಗೊತಾಗ್‌ಲಿಲ್ಲ…ಅಂಗ್ಡಿ ಅಂಗ್ಡಿ ಗೊತ್ತಿಲ್ಲ…

ಕಾಳ – ಅಂಗ್ಡಿಯಾ…. ಆಯ್ಲಿ… ಎಂತ ಅಂಗ್ಡಿ?

ಸಾಯ್ಬ್ರ್- ನಮ್ದು ಬಡಾ ದುಕಾನಾ..ಬಹುತ್ ಬಡಾ…

ಕಾಳ – ನೀ ಬಡವ್‌ನಾ.. ನಾವ್ ಮೊದ್ಲೇ ಬಡ್ವರ್… ನೀ ಇಲ್ಲಿಗ್ ಯಾಕೋ ಬಂದೆ ಮಾರಾಯಾ..

ಸಾಯ್ಬ್ರ್- ಬಡಾ ಅಂದ್ರೆ ದೊಡ್ದು.. ದೊಡ್ದು…

ಕಾಳ – ಹೋ ಬಡಾ ಅಂದ್ರ್ ದೊಡ್ದಾ…. ಅಡ್ಡಿಲ್ಲೆ.. ಎಂತ ಅಂಗ್ಡಿ?

ಸಾಯ್ಬ್ರ್- ಕಪಡಾ..ಕಪಡಾ…..

ಕಾಳ – ಕವ್ಡಿ ಕವ್ಡಿ.. ಎಂತ ಅಂದೇಳಿ ಸಮ್ ಮಾಡಿ ಹೇಳಾ

ಸಾಯ್ಬ್ರ್- ಅರೇ ಇದರ್ ದೇಖೋ ಕಪ್ಡಾ..ಕಪ್ಡಾ… ( ಅಂಗಿ ತೋರ್ಸಿ ಹೇಳ್ತ್ರ್…)

ಕಾಳ – ವಸ್ತ್ರದಂಗಡಿ ಸಾಯ್ಬ್‌ರಾ ನೀವ್

ನಾಗ್ವೇಣಿ- ಹ್ವಾಯ್… ಅವ್ರ್ ಅಂಗ್ಡಿಯಗೆ ಲಾಯ್ಕ್ ಲಾಯ್ಕಿದ್ ಸೀರಿ ಇದ್ದಿರ್ಕ್… ಕಂಡ್ಕಂಡಾರೂ ಬರ್ಲಕಿದ್ದಿತ್ ಅಲ್ದೇ?

ಸಾಯ್ಬ್ರ್- ಹಮಾರೇ ದುಕಾನ್ ಮೇ ಕಾಶಿ ಶೀರೆ ಮಿಲೆಗಾ, ಕಾಶ್ಮೀರಿ ಶೀರೆ ಮಿಲೆಗಾ, ರೇಶ್ಮೆ ಶೀರೆ ಮಿಲೆಗಾ… ಸ್ವದೇಶಿ ಶೀರೆ ಮಿಲೆಗಾ… ವಿದೇಶಿ ಶೀರೆ ಮಿಲೆಗಾ…ಔರ್ ಬನಾರಸಿ ಶೀರೆ ಭೀ ಮಿಲೇಗಾ…

ನಿಂದು ಹೆಣ್ತಿ ಕಳ್ಸು.. ನಮ್ದು ಒಂದು ಶೀರಿ ಉಡ್ಸಿ ಕಳ್ಸ್‌ತದೇ…

ಕಾಳ – ಹ್ವಾಯ್…

ಸಾಯ್ಬ್ರ್- ನಮ್ದು…ಶೀರಿ ಉಡ್ಸಿ ಕಳಿಸ್ತದೆ..

ಕಾಳ – ಹೋ.. ಅಡ್ಡಿಲ್ಲ…ಅವ್ಳ್ ಬಪ್ಪುಕೆ.. ನೀ ಸೀರಿ ಉಡ್ಸಿ ಕಳ್ಸುಕೆ.. ಅಡ್ಡಿಲ್ಲ.. ಎಲ್ಲಾ ನಿಮ್‌ನಿಮ್ಮೊಳ್ಗೇ ಅಲ್ದಾನಾ?

ಸಾಯ್ಬ್ರ್- ಅರೇ.. ಬರ್ತದೆ ಅಂತ ನಿಂದು ಹೆಣ್ತಿ ಹೇಳ್ತಲ್ಲ..

ಕಾಳ – ಸುಮ್ನಾಯ್ಕಣಾ..ಬರೀ ಅಲ್ದಿದ್ದೆಲ್ಲ ಮಾತಾಡ್‌ಬೇಡ…

ಹ್ವಾಯ್ಲಿ…. ಎಂತ ವಸ್ತ್ರದ್ ಅಂಗ್ಡಿ ಸಾಯ್ಬ್ರ್ ಅಂದ್ರ್ಯಾ.. ನಿಮ್ ಹೆಸ್ರ್…

ಸಾಯ್ಬ್ರ್- ಪುರ್ಸೊತ್ತಿಲ್ಲ ಖಾನ್…

ಕಾಳ – ಎಷ್ಟೊತ್ತಿಗೂ ಪುರ್ಸೊತ್ತಿಲ್ಯಾ ನಿಮ್ಗೆ…?

ಸಾಯ್ಬ್ರ್- ಅರೇ ನಮ್ದು ಎಸ್ರು ಹೇಳ್ತು

ಕಾಳ – ಎಂತ ಪುರ್ಸೊತ್ತಿಲ್ಲ ಖಾನ್‌ಆಆ.. ನಿಮ್ ಅಪ್ಪ್‌ಯ್ನ್ ಹೆಸ್ರ್..

ಸಾಯ್ಬ್ರ್- ಬರ್ಕತ್ತಿಲ್ಲ ಖಾನ್…

ಕಾಳ – ಸಮ್ನೇ. ನಿಮ್ಗ್ ಪುರ್ಸೊತ್ತಿಲ್ಲ… ಅವ್ರಿಗೆ ಬರ್ಕತ್ತಿಲ್ಲ…. ಅದಿರ್ಲಿ.. ಇಲ್ಲಿಗೇನ್ ಬಂದ್ರಿ..

ಸಾಯ್ಬ್ರ್- ಅದೇ ನಮ್ದು ರಾಜಾ ರಸ್ತೆಯಲ್ಲಿ ಹೋಗುವಾಗ ನಿಮ್ದು ಗಲಾಟಾ ನಡಿತಿತ್ತಲ್ಲಾ.. ಸಾಕಾ ಬೇಕಾ ಕೇಳ್ತಿತ್ತಲ್ಲ..ಹೊಡ್ಕೊಳ್ತಿತ್ತಲ್ಲಾ ನಿಮ್ದು… ನಿಮ್ದು ಯಾಕೇ ಹೊಡ್ಕೊಳ್ತು…ನಾನು ನೋಡ್ತದೆ…ಪಂಚತ್ಗಿ ಮಾಡ್ತದೆ…

ಕಾಳ – ನೀ ಎಂಥ ಕರ್ಮ್‌ದ್ ಪಂಚತ್ಗಿ ಮಾಡ್ತೆ ಮರಾಯಾ..

ಸಾಯ್ಬ್ರ್- ಅರೇ ನಮ್ದುಕೇ ಪಂಚತ್ಗಿ ಮಾಡ್ಲಿಕ್ಕೆ ಬರ್ತದೆ…ನೀನು ಏಳು… ನಾನು ಕೇಳ್ತದೆ… ನ್ಯಾಯ ತೀರ್ಮಾನ ಕೊಡ್ತದೆ…

ಕಾಳ – ಆಯ್ಲಿ ಸಾಯ್ಬ್ರೆ… ಒಳ್ಳೇ ಹೊತ್ತಿನಗೇ ಬಂದ್ರಿ ನೀವ್… ನಿಮ್ಕೇಲಾರೂ ಹೇಳ್ತೆ ನಾನ್… ಕೇಣಿ…

 

( ಉಳದ್ ಮುಂದಿನ್ ಸರ್ತಿಗೆ ಕಾಂಬ ಅಕಾ….)

ಟಿಪ್ಪಣಿಗಳು
  1. Raghavendra ಹೇಳುತ್ತಾರೆ:

    ಅಲ್ಲ ಮರ್ರೆ …..
    ಕೂಕ ಪುರ್ಸೋತಗೆ ಬರುದ್ ಸಾಕ್ ಮರ್ರೆ …
    ಅಲಾ ಓದ್ರೆ ಒಂದ್ ಗಳಗಿ ಕುಸಿ ಆತ್ ಅಂಬೋ …..
    ಮಾಡಿ ….ಮನಸಾ ಅಂದ್ರೆ ಮೇಲೆ ಹಿಂಗಿನ್ದೆಲ್ಲ ಇರ್ಕೆ……ಅಲ್ದಾ .
    ಸಿಕ್ತೆ ಮತ್ತೆ ………..

ನಿಮ್ಮ ಟಿಪ್ಪಣಿ ಬರೆಯಿರಿ