ಹಬ್ಬದ್ ಹೇಳ್ಕಿಗೆ ಹುಲಿ ಕೂಗತ್ತಂಬ್ರಪ್ಪ..

Posted: ಸೆಪ್ಟೆಂಬರ್ 11, 2008 in ನಮ್ ಊರ್ ನಮ್ಗ್ ಚಂದ
ಟ್ಯಾಗ್ ಗಳು:, , , ,

ಮೊನ್ನೆ ನನ್ ಫ್ರೆಂಡ್ ಒಬ್ಬ ಕಮಲಶಿಲೆಗೆ ಹೊಯಿ ಬಂದಿದ್ದ. ಅಲ್ಲಿನ್ ಗುಹೆ ಕಾಣ್ಕ್ ಅಂದೇಳಿಯೇ ಅಂವ ಹೋದ್ದ್. ಹೋಯಿ ಬಂದನೆ ಗುಹೆ ಕಂಡ್ಕಂಡ್ ಬಂದ್ ಕತಿಯೆಲ್ಲ ಹೇಳ್ತಿದ್ದ. ಸುಮಾರ್ ಫೊಟ ಎಲ್ಲಾ ತೆಗ್ದಿದ ಅಂಬ್ರ್. ಆ ಗುಹೆ ಭಾರಿ ಲಾಯ್ಕ್ ಇತ್ತ್ ಮರಾಯ್ರೆ. ನಾನ್ ಗುಹೆ ಕಾಂಬುಕ್ ಹೋಯಿ ಸುಮಾರ್ ವರ್ಷ ಆಯ್ತ್. ಆರೆ ಸುಮಾರ್ ದೊಡ್ಡ್ ಗುಹೆ. ಗುಹೆ ಒಳ್ಗೆ ಲೈಟ್ ಹಿಡ್ಕಂಡ್ ಹೋರೆ ಸುಮಾರ್ ದೂರ್ ಹೋಯ್ಲಕ್. ಅಂವ ಹೇಳದ್ದೆಲ್ಲ ಕೇಂಡ್ ಮೇಲೆ ನಾನೂ ಅವ್ನೊಟ್ಟಿಗ್ ಹೋಯ್ಲಕಿದ್ದಿತ್ ಅಂತ್ ಅನ್‌ಸ್ತ್. ಇರ್ಲಿ ಕಾಂಬ.. ಮತ್ತೇಗ್ಳಿಕಾರೂ ಹೋರ್ ಸೈ ಅಂದೇಳಿ ಸಮ್ಧಾನ ಮಾಡ್ಕಂಡ್, ಅವ್ನ್ ಹತ್ರ ಫೊಟ ಎಲ್ಲಾ ಕಳ್ಸುಕ್ ಹೇಳಿದೆ. ಅಂವ ಕಳ್ಸ್ರ್ ಮೇಲ್ ಬ್ಲಾಗಗೂ ಹಾಕ್ತೆ. ನೀವೂ ಕಾಣ್ಲಕ್ ನಮ್ಮೂರಿನ ಗುಹೆ.

 

ಹೀಂಗೆ ಗುಹೆ ಸುದ್ದಿ ಮಾತಾಡ್ತಿಪ್ಪತಿಗೆ ಒಂದ್ ನೆನ್ಪ್ ಬಂತ್ ಕಾಣಿ. ಆಗ್ಳಿಕೆ ನಮ್ಮೂರಿಗೆ ಪಾರ್ವತಮ್ಮ ಅಂದೇಳಿ ಒಬ್ರ್ ಹಳಿಯರ್ ಬತ್ತಿದ್ರ್. ಮನೆಯಗೆ ಮಾತಾಡ್ತಿದ್ದದ್ ಎಲ್ಲಾ ಕೆಮಿ ಮೇಲೆ ಬಿದ್ದ್ ಪ್ರಕಾರ, ಸುಮಾರ್ ಮೊದ್ಲ್ ಅವ್ರಿಗೆ ಎಂತದೋ ಒಂದ್ ಕಷ್ಟ ಬಂದ್ ಬದ್ಕಿನ್ ಮೇಲೆ ವೈರಾಗ್ಯ ಹುಟ್ಟಿತ್ತ್ ಅಂಬ್ರ್. ಒಂದ್ ನಮನಿ ಸನ್ಯಾಸಿ ಕಣಗೆ ಇದ್ದಿರ್. ಅವ್ರ್ ಇದೇ ಕಂಮ್ರಶಿಲೆ ಗುಹೆಯೊಳ್ಗೆ ಸುಮಾರ್ ಸಮ್ಯ ಕೂಕಂಡ್ ತಪಸ್ಸೆಲ್ಲಾ ಮಾಡಿರಂಬ್ರ್. ಆಗ್ಳಿಕೆ ಹುಲಿಯೆಲ್ಲ ಗುಹೆಯೊಳ್ಗೇ ಓಡಾಡ್ತ ಇರ್ತಿತ್. ಆರೆ ಅದ್ ದೇವ್ರ್ ಹುಲಿ ಆಪುಕೊಯಿ ಯಾರಿಗೂ ಏನೂ ಉಪದ್ರ ಮಾಡ್ತಿರ್‌ಲಿಲ್ಲ ಅಂಬ್ರಪ್ಪ. ಹಿಂದಿಂದೆಲ್ಲ ನಾವ್ ಎಲ್ಲ ಕಂಡಿತ್ ಅಲ್ದಾ? ಇದ್ರೂ ಇದ್ದಿಕ್. ಆರೆ ಈಗ ನೆನ್ಪಾಪ್ದ್ ಅಂದ್ರೆ, ಬಾಯ್ಕಳ್ಕಂದ್ ಕೂಕಂಡ್ ಅರ್ಧ ಪುಕ್, ಅರ್ಧ ಆಶ್ಚರ್ಯದಗೆ ಈ ಕತಿ ಎಲ್ಲಾ ಕೇಂತ ಕೂಕಂತಿದ್ದದ್.

 

ಹುಲಿ ಅಂದ್ರ್‌ಕೂಳೆ ಮತ್ತೊಂದ್ ನೆನ್ಪ್ ಬತ್ತ್ ಕಾಣಿ. ಪ್ರತಿವರ್ಷ ಕಮಲಶಿಲೆ ಹಬ್ಬದ್ ಸುರಿಗೆ, ಹಬ್ಬಕ್ ಸ್ವಲ್ಪ ದಿನ ಮೊದ್ಲ್ ಕಂಮ್ರಶಿಲೆ ಪಾರಿ ಮೇಲೆ ರಾತ್ರಿ ಹೊತ್ತಿಗೆ ಹುಲಿ ಕೂಗತ್ತಂಬ್ರ್. ಅದ್ ದೇವಿಯ ವಾಹನ ಹುಲಿಯೇ ಅಂಬ್ರ್. ಹಾಂಗ್ ಕೂಗುದ್ ಎಂತಕೆ ಕೇಂಡ್ರ್ಯಾ? ಹಬ್ಬ ಬಂತ್, ಎಲ್ಲ ಹಬ್ಬದ್ ತಯಾರಿಗೆ ದೇವ್‌ಸ್ಥಾನಕ್ ಬನಿ ಅಂದೇಳಿ ಹುಲಿ ಹೇಳ್ಕಿ ಮಾಡುದಂಬ್ರ್. ಹಿಂದೆಲ್ಲ ಹಬ್ಬದ್ ಹೇಳ್ಕಿಗೆ ಈ ಬ್ಯಾನರ್, ಕಾಗ್ದ್ ಎಲ್ಲ ಎಲ್ಲಿದ್ದಿತ್. ಹಾಂಗಾಯ್ ಹುಲಿದೇ ಹೇಳ್ಕಿ ಅಂಬ್ರ್. ಈಗ್ಳೂ ಹಬ್ಬದ್ ಸುರಿಗೆ ಹುಲಿ ಕೂಗಿ ಹೇಳ್ಕಿ ಮಾಡತ್ ಅಂತ್ರಪ್ಪ. ನಂಗ್ ಒಂದ್ಸಲವೂ ಕೇಣಲ್ಲ. ಆದ್ರೆ ಕೇಂಡರಿದ್ರಂಬ್ರಪ್ಪ. ಅಂದ್‌ಹಾಂಗೆ ಕಂಮ್ರಶಿಲೆ ಗುಹೆ ಬಗ್ಗೆ ಸುಮಾರ್ ಒಂದ್ ವರ್ಷದ್ ಹಿಂದೆ ಉದಯ ಟಿ.ವಿ.ಯಗೆ ರಾತ್ರಿ ಹತ್ ಗಂಟಿಗೆ ನಂಬಿದ್ರೆ ನಂಬಿಯಗೆ ತೋರ್ಸಿರ್. ನೀವ್ ಕಂಡಿರ್ಯಾ? ಕಾಣ್ದಿರೆ ಒಂದ್ಸಲ ಹೋಯ್ ಕಣ್ಕಂಡ್ ಬನಿ. ಒಳ್ಳೆ ಜಾಗ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s