Posts Tagged ‘ಕಾಶೀಮಾಣಿ’


ಹಳ್ಳಾಡಿ ಜಯ್ರಾಮ ಶೆಟ್ರ್ ಹೆಸ್ರ್ ಕೇಣ್ದಿದ್ದರ್ ಯಾರಿದ್ರ್ ಹೇಳಿ ಕಾಂಬ. ಸುಮಾರ್ ನಲ್‌ವತ್ ವರ್ಷದಿಂದ ಹಾಸ್ಯ ಪಾತ್ರ ಮಾಡಿ ಎಲ್ಲರನ್ನೂ ನೆಗಾಡ್ಸದರ್… ಕಮಲಶಿಲೆ, ಅಮೃತೇಶ್ವರಿ, ಮಂದರ್ತಿ, ಮೂಲ್ಕಿ, ಕುಂಬಳೆ, ಸಾಲಿಗ್ರಾಮ, ಪೆರ್ಡೂರು ಹೀಂಗೆ ಸುಮಾರ್ ಮ್ಯಾಳದಗೆ ಹಾಸ್ಯ ಪಾತ್ರ ಮಾಡಿ ರೈಸ್‌ದರ್…ಬಾಹುಕ, ಪಾಪಣ್ಣ, ಕೈರವ, ಕಾಶೀಮಾಣಿ, ಬಲರಾಮನ ದೂತ, ಕಂದರ, ವಿಜಯ, ಮಂಥರೆ, ದಾರುಕ, ಹುಲಿಯಾದ ಕಾಳ…ಹೀಂಗೆ ನಮ್ ನಮನಿ ವೇಷ ಹಾಕಿ ಹೆಸ್ರ್ ಮಾಡ್ದರ್ ಜಯ್ರಾಮ ಶೆಟ್ರು. ಅವ್ರ್ ಕಲಾಸೇವೆ ಕಂಡ್ ಕುಶಿಪಟ್ಟರೆಲ್ಲ ಸೇರಿ ಅವ್ರಿಗೊಂದ್ ಅಭಿನಂದನೆ ಮಾಡ್ಕ್ ಅಂದೇಳಿ ಮಾಡಿರಂಬ್ರ್. ಯಕ್ಷಗಾನ ಯೋಗಕ್ಷೇಮ ಅಭಿಯಾನದ ವಿ.ಆರ್.ಹೆಗಡೆಯರ್ ಮುಂದ್ ನಿಂತ್ಕಂಡ್ ಈ ಕಾರ್ಯಕ್ರಮದ ವ್ಯವಸ್ಥಿ ಎಲ್ಲಾ ಮಾಡ್ತಿದ್ರ್. ಯಕ್ಷಗಾನ ಅಭಿಮಾನಿಗಳು, ಕಲಾಪೋಷಕರು ಎಲ್ಲಾ ಒಟ್ಟಾಯಿ 1 ಲಕ್ಷ ರೂಪಾಯ್ ಒಟ್ಟ್ ಮಾಡಿ ಜಯ್ರಾಮ ಶೆಟ್ರಿಗೆ ಗೌರವ ನಿಧಿ ಸಮರ್ಪಣೆ ಮಾಡ್ತ್ರ್ ಅಂಬ್ರ್.

 

ನಾಳೆ( ಅಕ್ಟೋಬರ್ 18, ಶನಿವಾರ) ರಾತ್ರಿ ರವೀಂದ್ರ ಕಲಾಕ್ಷೇತ್ರದಗೆ ಈ ಸಮಾರಂಭ ಇಟ್ಕಂಡಿರ್. ಬರೀ ಸಮಾರಂಭ ಮಾತ್ರ ಅಲ್ದೇ. ಭರ್ಜರಿ ಆಟ ಬೇರೆ ಇತ್ತ್. ಪ್ರಸಂಗ ಎಂತ ಕೇಂಡ್ರ್ಯಾ?

 

ಬೇಡರ ಕಣ್ಣಪ್ಪ  – ಶ್ವೇತ ಕುಮಾರನ ಪ್ರೇತ ಚಿತ್ರಾಕ್ಷಿ ಕಲ್ಯಾಣ

 

ಜಯರಾಮ ಶೆಟ್ರದ್ ಕಾಶೀಮಾಣಿ, ಯಕ್ಷರಂಗದ ಚಾರ್ಲಿ ಚಾಪ್ಲಿನ್ ಸೀತಾರಾಂ ಕುಮಾರ್ – ಶ್ವೇತ ಕುಮಾರನ ಪ್ರೇತ, ಹೊಸಂಗಡಿ ಕರುಣಾಕರ ಶೆಟ್ರದ್ ರಕ್ತಜಂಘ , ಹೆರಂಜಾಲ್, ರಾಘವೇಂದ್ರ ಮಯ್ಯ, ರಾಘವೇಂದ್ರ ಆಚಾರಿ, ಸುಬ್ರಹ್ಮಣ್ಯ ನಾವುಡ್ರ ಭಾಗವತಿಕೆ, ಕೋಟ ಶಿವಾನಂದರ ಚೆಂಡೆ…. ಆಟ ರೈಸುಕೆ ಇದಕ್ಕಿಂತ ಹೆಚ್ಚ್ ಎಂತ ಬೇಕ್ ಹೇಳಿ… ಹಂಗಾರೆ ನಾಳೆ ಕಲಾಕ್ಷೇತ್ರದ ಎದ್ರ್ ಸಿಕ್ವಾ ಆಗ್ದಾ..?