ಬರೀ ಕುಂದಾಪ್ರ ಕನ್ನಡದಗೆ ಮಾತ್ರ ಎಂತಕೆ , ಈಗ ಯಾವ್ ಕನ್ನಡದಗೂ ಇಪ್ಪುದ್ ಇಂಗ್ಲೀಷೆ ಅಲ್ದಾ. ಯಾರಾರೂ ಶುದ್ಧ ಕನ್ನಡ ಮಾತಾಡುವರ್ ಇದ್ರೆ ಹುಡ್ಕಿ ಕೊಡಿನಿ ಕಾಂಬ ಹಂಗಾರೆ  ಅಂದೇಳಿ  ನೀವ್ ಕೆಂಬ್ಕೂ ಸಾಕ್.  ಅದ್ರಗೂ ಬೆಂಗಳೂರಗೆ ಹಾಂಗಿನರ್ ಯಾರಾರೂ ಇದ್ರೆ ಅವ್ರಿಗೆ ರಾಜ್ಯೋತ್ಸವ ಪ್ರಶಸ್ತಿಯೇ ಕೊಡ್ಲಕ್ಕ್ ಅಂತ್ ನೀವ್ ಹೇಳುಕೂ ಸಾಕ್.  ಆರೇ ನಾ ಹೇಳುಕ್ ಹೊರಟದ್ದ್ ಅದ್ ಅಲ್ದೆ… ಒಂದ್ ಇಂಗ್ಲಿಷ್ ಶಬ್ದ ಕುಂದಾಪ್ರ ಕನ್ನಡದೊಳಗೆ ಬಂದ್ ಕೂಕಂಡಿತ್.

ಆ ಶಬ್ದ ಯಾವ್ದ್ ಅಂದೇಳಿ ನೆನ್ಪ್ ಮಾಡ್ಕಂಕಿದ್ರೆ ಸಣ್ಣಕಿಪ್ಪತ್ತಿಗೆ ಆಟ ಆಡುವತಿಗೆ ಯಾರಾರೂ ಮೋಸ ಮಾಡ್ರೆ ಎಂಥ ಹೇಳ್ತಿತ್ತ್ ಅಂತ್  ಒಂಚೂರ್ ನೆನ್ಪ್ ಮಾಡ್ಕಣಿ ಕಾಂಬ.  ನೆನ್ಪ್ ಆಯೇ ಇರ್ಕ್ ಅಲ್ದಾ?

ಇನ್ನೂ ನೆನ್ಪ್ ಆಯ್ಲಿಲ್ಯ? ಹಂಗಾರೆ ಮುಂದ್ ಓದಿ ಕಾಣಿ… ಆಗ್ಳಿಕಾರು ನೆನ್ಪ್ ಆತ್ತ್ …

“ಅವನೊಟ್ಟಿಗೆ ಆಡುಕ್ ಹೋಪ್ಕೆ ಆಗ. ಅವಂದ್ ಬರೀ ಹಂಬಕ್ ಮಾರಾಯ ”

“ನೀ ಗೆದ್ದಿಪ್ಕು ಸಾಕ್. ನಿನ್ ಕಣಗೆ  ಹಂಬಕ್ ಮಾಡಿರೆ ನಾನೂ ಗೆಲ್ತಿದ್ದೆ ಗೊತ್ತ?”

” ಬೋಲ್ ಕಾಲಿಗೆ ತಾಗಲೇ ಇಲ್ಲ. ಆರು ಅಂಪೈರ್ ಔಟ್ ಕೊಟ್ಟ ಮಾರಾಯ. ಬರೀ ಹಂಬಕಾಟ”

ಹಾ.. ಈಗ ಗೊತ್ತಾಯ್ತಲ್ದಾ? ನಾ ಎಂತ ಹೇಳುಕೆ ಹೊರ್ಟಿದೆ ಅಂತ. ಅದೇ ಹಂಬಕ್… ಹಂಬಕ್..

“ಮೋಸ ಮಾಡುದ್” ಅಂತ್ ಹೇಳುಕೆ ನಮ್ಮ ಕುಂದಾಪ್ರ ಕನ್ನಡದಗೆ ಇಪ್ಪ ಶಬ್ದ…

ಆರೇ ಈ ಶಬ್ದ ಬಂದದ್ದ್ ಎಲ್ಲಿಂದ ಅಂದೇಳಿ ನಂಗಂತೂ ಗೊತ್ತಿರ್ಲಿಲ್ಲ. ಮೊನ್ನೆ ಒಂದ್ ಪುಸ್ತಕ ಓದ್ತಾ ಇದ್ದೆ. ಅದ್ರಗೆ

ಒಂದ್ ಇಂಗ್ಲೀಶ್ ಶಬ್ದ ಇದ್ದಿತ್. ಅದನ್ನ್ ಕಂಡ್ರ ಕೂಡ್ಲೇ ಫಕ್ನೆ ನೆನ್ಪಾಯ್ತ್.. ಹೋ ಈದ್ ಅದೇ …

ಆ ಶಬ್ದ ಹಂಬಗ್  (humbug) . ಹಾಂಗಂದ್ರೆ ಮೋಸ , ಅಪ್ರಾಮಾಣಿಕತೆ, ವಂಚನೆ, ಮೋಸಗಾರ ಅಂತೆಲ್ಲ ಅರ್ಥ ಸಿಕ್ಕತ್ತ್.

ಬೇಕಾರೆ  http://www.baraha.com/kannada/index.php ಇಲ್ಲಿಗ್ ಹೋಯಿ humbug  ಅಂತ ಬರ್ದ್ ಹುಡ್ಕಿ ಕಾಣಿ.

ಶಬ್ದ ಬೇಕಾರೆ ಇಂಗ್ಲಿಶಿದೆ ಆಯ್ಲಿ…ಅದನ್ನ್ ಸತೆ ನಮ್ಮ ಕುಂದಾಪ್ರ ಕನ್ನಡಕ್ ತಕಂಡ್ ಬಂದ್ ‘ಹಂಬಕ್’ ಅಂತ ಮಾಡಿ ಅದೀಗ ನಮ್ದೆ ಶಬ್ದ ಆಯ್ತಲ್ದ..

ನಿಮ್ಗೆಲ್ಲ ಮೊದ್ಲೇ ಗೊತ್ತಿದ್ದಿತೋ ಏನೋ. ನಂಗಂತೂ ಗೊತ್ತಿರಲ್ಲ,.. ನನ್ಕಣಗೆ ಗೊತ್ತಿಲ್ದಿದ್ದರ್ ಯಾರಾರೂ ಇದ್ರೆ ಅವ್ರಿಗ್ ಗೊತ್ತಾಯ್ಲಿ ಅಂದೇಳಿ ಇಲ್ಲೊಂಚೂರ್ ಬರ್ದ್ ಹಾಕ್ದೆ ಕಾಣಿ.. ನಿಮ್ಗೂ ಯಾವ್ದಾರೂ ಹೀಂಗಿದೆ ಶಬ್ದ ಗೊತ್ತಿದ್ರೆ ಹೇಳಿ… ನನ್ನಂತವ್ರಿಗೆ ಉಪ್ಕಾರ ಆತ್ತ್.. ಹೇಳ್ತ್ರಿ ಅಲ್ದಾ?

ಟಿಪ್ಪಣಿಗಳು
  1. Ramesh Chorady ಹೇಳುತ್ತಾರೆ:

    Hai ambudhu Namma Kundapura Kannadadha Hwai Aldhe, Mathe Like athilla Adhu Kuda

  2. Vanitha Devadiga ಹೇಳುತ್ತಾರೆ:

    nimge hambak madukatte

  3. Satheesh Nayak ಹೇಳುತ್ತಾರೆ:

    ನಮಸ್ಕಾರ…

    ‘ಕುಂದಾಪ್ರ’ ಅಂದ್ ಕೂಡ್ಲೇ ನಮ್ ಕೆಮಿ ನೆಟ್ಗ್ ಆತ್ತ್…..
    ಕುಂದಗನ್ನಡದಗೆ ನೀವ್ ಬ್ಲಾಗ್ ಬರ್ದದ್ ಓದಿ ಖುಸಿ ಆಯ್ತ್…

    ನೀವ್ ಎಂತದೆ ಹೇಳಿ….ಆರೇ ಈ “ಹಂಬಕ್” ಮೂಲ ಕುಂದಾಪುರದ್ದೇ… ನಾವ್ ಬಿಟ್ ಕೊಡುದಿಲ್ಲ. ನೀವ್ ‘ಹಂಬಕ್ ‘ ಮೂಲ ಇಂಗ್ಲಿಷ್ ಅಂದ್ ಹೇಳಿ ನಮ್ಗ್ ‘ಹಂಬಕ್’ ಮಾಡ್ಬೇಡಿ….ಅಕಾ…!!

  4. yogeendra ಹೇಳುತ್ತಾರೆ:

    hoi nimm kundapra kannada oduke lik aat innu mundarsi

  5. JB ಹೇಳುತ್ತಾರೆ:

    http://kaalaharana.blogspot.com/2007/03/blog-post_06.html

    3 varsha hinde pattaangadalli bardidde. eega class ella nint hoyt

  6. Jagadeesh ಹೇಳುತ್ತಾರೆ:

    ಹೋಯ್ ಬರಿತ ಇರಿ.ಬಾಳಾ ದಿವ್ಸು ಅಗಿತ್ತಲೆ? ಬರಿನಿ ನಾವೆಲ್ಲಾ ಓದುಕೆ ಕಾತಿದ್ವೆ.!.

  7. shubhada ಹೇಳುತ್ತಾರೆ:

    ಇನ್ನೊಂದ್ ಇಂಗ್ಲಿಷ್ ಶಬ್ದ ಸಿಕ್ತ್ ಕಾಣಿ ನಮ್ ಕುಂದಾಪ್ರ ಕನ್ನಡದಲ್ಲ್. ಬೂರ್ಣಾಸ್ – born ass (=ಹುಟ್ಟಾ ಕತ್ತೆ) 😉

  8. shashi jois ಹೇಳುತ್ತಾರೆ:

    namaskara ,
    nimma blogige nanna modala beti.namma maatannu aaduvudu sulabha,aadare bareyuvudu churu kashta anta nanna anisike .baruke pyayatna padte akaa.laayk ittu nimma humbug aata !!

  9. Shrinidhi Hande ಹೇಳುತ್ತಾರೆ:

    🙂 shabdha moola, Hrishi moola hudkud tumba kaShta..

  10. Nagaraj Thallanje ಹೇಳುತ್ತಾರೆ:

    Humbug taradde shabdha nange kelav gottit kaani. aambarse(embrace), laike (like),pikasi(pick axe), haant(haunt),

  11. shubhada ಹೇಳುತ್ತಾರೆ:

    ಹೋ.. ಹಂಬಕ್ ಅಂದ್ರೆ ಇಂಗ್ಲೀಷ್ ಶಬ್ದವಾ? ಇದ್ ಬಾರಿ ಹಂಬಕ್ ಆಯ್ತಲೆ.. ಬೌಷ ಅವ್ರೇ ನಮ್ ಕುಂದಾಪ್ರ ಕನ್ನಡದಲ್ಲ್ ಕೇಂಡ್ ಕದ್ಕಂಡ್ ಹೋಯಿಪ್ಕೂ ಸಾಕ್ 😉 ತುಂಬ ದಿನ ಆಯ್ತ್ ಬ್ಲಾಗ್ ಬದಿ ಬಾರ್ದೆ. ಹಳೇ ಪೋಸ್ಟ್ ಎಲ್ಲ ಓದಿ ಕುಸಿ ಪಟ್ಕಂಡೆ 🙂

  12. vasant ಹೇಳುತ್ತಾರೆ:

    ಹ್ವಾಯ್,
    ಇವತ್ತಿನ ಪೋಸ್ಟ್ ಒಳ್ಳೆ ಲಾಯಕ್ ಬಯಿಂತ್ ..
    ಕುಂದಾಪ್ರ ಕನ್ನಡದಷ್ಟು ಪ್ಯೂರ್ ಕನ್ನಡ ಇನ್ನೊಂದಿಲ್ಲ ಮರೆರೆ.. ಯಾವ ಭಾಷಿಯಿಂದ ಬಂದ ಪದ ಆರು ಸರಿ.. ಅದು ಕುಂದಾಪ್ರ ಜನರ ಬಾಯಗೆ ಒಳ್ಳೆ ಲಾಯಕ್ ಪಳಗಿ ಕನ್ನಡದ್ದೇ ಪದ ಆತ್ತು..
    ಈಗ ಉದಾಹರಣೆಗೆ,, ನಮ್ಮ ಅಮಾಸ್ ಬೈಲ್ ನ ನಿಜ ರೂಪ ಅಮವಾಸೆ ಬಯಲು..
    ಮೈಸೂರ್ ಬದಿ ಆಯಿರೆ ಜನ ಕಷ್ಟ ಪಟ್ಕಂಡಾರು “ಅಮವಾಸೆ ಬಯಲು ” ಅಂತಾನೆ ಕರೀತಿದ್ರು ,, ಆದ್ರೆ ನಮ್ ಮಡಿ ನಮ್ಮ ಜನರ ನಾಲಿಗೆ ಮೇಲೆ ಅದು ಒಳ್ಳೆ ಪಳಗಿ “ಅಮಾಸ್ ಬೈಲ್ ” ಆಯಿತು..

    ಕುಂದಾಪ್ರ, ಶಂಕನಾಯಣ, ಸಿದ್ದಾಪ್ರ.. ಹಿಂಗೆ ಸಾಲು ಸಾಲು ಪದ ಸಿಕ್ಕತ್ ಇದಕ್ಕೆ ..

    ಶಂಕರ್ ಭಟ್ರ ” ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ” ಅನ್ನೋ ಪುಸ್ತಕ ಓದಿ .. ಒಳ್ಳೆ ಲಾಯಕ್ ಮಾಡಿ ಹೇಳ್ತ್ರ ಇದರ ಬಗ್ಗೆಯೆಲ್ಲ

Leave a reply to shubhada ಪ್ರತ್ಯುತ್ತರವನ್ನು ರದ್ದುಮಾಡಿ