ಒಂದೊಂದ್ ಬದಿ ಭಾಷಿಯಗೆ ಆಲ್ಲಲ್ಲಿದೇ ವಿಶೇಷ ಆಡುನುಡಿ ಅಂದೇಳಿ ಇರತ್ತ್. ಆ ಬದ್ಯಗಿದ್ದರ್ ಮಾತಗ್ ಮಾತ್ರ ಇದ್ ಕಾಂಬುಕೆ ಸಿಕ್ಕತ್ತ್. ಹಾಂಗಿಂದ್ ಒಂದ್ ನಾಲ್ಕ್ ಕುಂದಾಪ್ರ ಕನ್ನಡದ ಆಡುನುಡಿ ಇಲ್ಲಿತ್ತ್ ಕಾಣಿ…

ತಕಂಡ್ ಹೋತ್ತಾ

ಬಳಕೆ –

೧.         ಬಸ್ ಹತ್ತುವ ಅಂದೇಳ್ರೆ ಅಯ್ಯಬ್ಬಾ ಈ ಜನ ಎಲ್ಲಾ ನುರುದೇ… ಹಂಗಾರ್ ಬಸ್ ನಿಲ್ಲುದಿಲ್ಲ್ಯಾ.. ಇವ್ರಿಗೆಲ ಏನ್ ತಕಂಡ್ ಹೋತ್ತಾ?

೨.         ಒಂದ್ ಮಾತಾಡ್ಕಾಯ್ದಿಲ್ಲ… ಆ ನಮನಿ ಬೊಬ್ಬಿ ಹೊಡಿತ್ಯಲ.. ನಿಂಗೇನ್ ತಕಂಡ್ ಹೋತ್ತಾ?

೩.         ಈ ಮಳ್ಯಗೆ ತಿರ್ಗುಕ್ ಹೊರ್ಟಿರ್ಯಲೆ ಎಂತಾ ನಿಮ್ಮನ್ ತಕಂಡ್ ಹೋತ್ತಾ?

ಬತ್ತ್ ಬರವಾ? – ಈಗ ಬರ್ತಾ ಇರುವುದಾ?

೧.         ಹೋ… ಬಾಳಾ ಅಪರೂಪದರ್… ಏನ್ ಬತ್ತ್ ಬರವಾ?

ಎತ್ ಮುಕ್ನೆ ಹೊರ್ಟದ್? – ಯಾವ ಕಡೆ ಹೊರಟಿದ್ದು?

೧.         ಹ್ವಾಯ್ ಏನ್ ಈ ಬದಿಗೆ ಬಂದಿರಿ.. ಎತ್ ಮುಕ್ನೆ ಹೊರ್ಟದ್?

೨.         ಈ ಜಮ್ ನೆರಿಯಗೆ ಬೆಳ್ಗಾ ಮುಂಚೆ ಎದ್ಕಂಡ್ ಹೊರ್ಟಿರ್ಯಲೆ, ಎತ್ ಮುಕ್ನೆ ಹೋತ್ರಿ?

ಹಸಿಗ್ ಹಿಡದ್ ಹೇಲ್ – (ಹಾಸಿಗೆಗೆ ಹಿಡಿದ ಮಲ ಎಷ್ಟು ತೊಳೆದರೂ ಕಲೆ ಉಳಿಸುತ್ತದೆ ಅನ್ನುವ ಅರ್ಥದಲ್ಲಿ) ಜಿಗುಟುತನ, ಹಿಡಿದ ಪಟ್ಟು ಬಿಡದಿರುವುದು

೧.         ಆತಿಲ್ಲ ಅಂದೇಳಿ ಒಂದ್ಸಲ ಹೇಳ್ರ್ ಗೊತ್ತತಿಲ್ಲ್ಯಾ.. ಎಂತಕೆ ಹಸಿಗೆ ಹಿಡ್ದ್ ಹೇಲ್ ಕಣಂಗೆ ಆಡ್ತೆ?

೨.         ಅವ್ನಿಗೆ ಎಂತಾರೂ ಆಯ್ಕ್ ಅಂದ್ರೆ ಆಯ್ಕೇಯಾ… ಆಪಲ್ಲೊರಿಗೆ ಹಸಿಗ್ ಹಿಡ್ಡ್ ಹೇಲ್ ಕಣಗೆ ಮಾಡ್ತ

ಭಾಷಿ ಬತ್ತಿಲ್ಲ್ಯಾ? – ಹೇಳಿದ್ದು ಅರ್ಥ ಆಗೋಲ್ಲವಾ?

೧.         ನಾನ್ ಕೊಡುದಿಲ್ಲ ಅಂದೇಳಿ ನಿಂಗೇ ಹೇಳದ್ದ್… ಮತ್ತೂ ಎಂತಕೆ ಹೊಸುದ್ ನೀನ್? ನಿಂಗೆಂತ ಭಾಷಿ ಬತ್ತಿಲ್ಲ್ಯಾ?

೨.         ಅವ್ನಿಗೆ ಎಷ್ಟ್ ಹೇಳ್ರೂ ಭಾಷಿ ಇಲ್ಲ ಮಾರಾಯ. ತಾ ಹೇಳದ್ದೇ ಸಮ ಅಂತ

ಗುಮ್ಮ ಗೋಳಿಹಣ್ಣ್ ನುಂಗ್ದ ಹಾಂಗೆ – ಅವಸರ ಅವಸರವಾಗಿ ತಿನ್ನುವುದು ( ಗೂಬೆ ಗೋಳಿಮರದ ಹಣ್ಣು ತಿನ್ನುವ ಹಾಗೆ)

೧.         ನಿಂಗೆಂತ ತಡ ಆತ್ತಾ.. ಸ್ವಲ್ಪ ನಿಧಾನ್ ತಿನ್ನ್ ಕಾಂಬ. ತಿನ್ನತ್ ಕಂಡ್ರೆ ಗುಮ್ಮ ಗೋಳಿ ಹಣ್ ನುಂಗ್ದಾಂಗ್ ಇತ್ತ್

ಟಿಪ್ಪಣಿಗಳು
 1. Praveen Shetty ಹೇಳುತ್ತಾರೆ:

  small correction here….

  ಹಸಿಗ್ ಹಿಡದ್ ಹೇಲ್ – (ಹಾಸಿಗೆಗೆ ಹಿಡಿದ ಮಲ ಎಷ್ಟು ತೊಳೆದರೂ ಕಲೆ (Vasane) ಉಳಿಸುತ್ತದೆ ಅನ್ನುವ ಅರ್ಥದಲ್ಲಿ).

  it should be vasane, not ಕಲೆ..

  Regards
  Praveen Shetty, Jeddah

 2. Maxim Kiran ಹೇಳುತ್ತಾರೆ:

  ನಿಮ್ಮ್’ನ್ ಎಂತ, ತಕಂಡ್ ಹ್ವಾತ್ತಾ?…. ಭಾರೀ ಗಮ್ಮತ್ ಇತ್ತ್ ಕಾಣಿ…

 3. Yogeesh ಹೇಳುತ್ತಾರೆ:

  ಈ ಭಾಷೆ ಪದ ಓದ್ತಾ ಇದ್ರೆ… ಮುಂಗಾರು ಮಳೆ ಚಿತ್ರದಲ್ಲಿ ಗಣೇಶ್ ಅಮ್ಮ ಕೊಡಗು ಭಾಷೆ ಮಾತಾಡಿದ್ದು ನೆನಪಾಯ್ತು…

 4. vasant shetty ಹೇಳುತ್ತಾರೆ:

  ಹ್ವಾಯ್, ಮೊನ್ನೆ ವಾರಾಂತ್ಯ ಅಮ್ಮ-ಅಪ್ಪಯ್ಯ ಎಲ್ಲ ಬೆಂಗಳೂರಿಗ್ ಬಂದೀರ್,, ಆಗಳಿಕ್ ಅಮ್ಮನ ಬಾಯಲ್ಲಿ ಇ ಆರ್ಟಿಕಲ್ಲಗೆ ಇಪ್ಪ ಸುಮಾರ್ ಶಬ್ದ ಕೆಂಡಿದ್ದ್ ನೆನಪ್ ಆಯ್ತು..

  ಈಗೀಗ ನನ್ ಮನಿಯಗ್ ತಮ್ಮ ತಂಗಿ ಜೊತಿಯೆಲ್ಲ ಕುಂದಾಪ್ರ ಕನ್ನಡದ ಹೆಚ್ಚೆಚ್ಚು ಪದ ಬತ್ತಾ ಇತ್ತು,, ಇದಕ್ಕೆಲ್ಲ ನಿಮ್ ಬ್ಲಾಗೇ ಕಾರಣ ಮರೆರೆ.. 🙂

 5. ನೀರ ತೆರೆ ಹೇಳುತ್ತಾರೆ:

  ಎಂಕುಲಾ ಚೂರು ಕಲ್ಪಲೆ ಮರಾಯರೆ

 6. Nagaraj Thallanje ಹೇಳುತ್ತಾರೆ:

  kunda kannadage kelav english shabdha ella itt. nange kelav gottit. nimgenadru nenpare adann barini akka. udarnige: aambarse=Embrase. pikasi=pick axe. laikeilla= dont like.

 7. ಶಿಶಿರ ಕನ್ನಂತ ಹೇಳುತ್ತಾರೆ:

  ಬೆಂಗ್ಳೂರ್ ಬದಿ ಇದ್ರೆ ಈ ಎಲ್ಲ ಪದ ನೆನಪ್ ಹೊತ್ತೆನೋ?
  ಹೌದಾ ಸುಳ್ಳಾ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s