ಕಳ್ಸರ್ತಿದ್ ಉತ್ರ… ಈ ಸರ್ತಿದ್ ಪ್ರಶ್ನೆ

Posted: ಡಿಸೆಂಬರ್ 4, 2008 in ಕುಂದಗನ್ನಡ ಕಲಿ
ಟ್ಯಾಗ್ ಗಳು:, ,

ಕಳ್ದ್ ಸರ್ತಿ ಒಂದಿಷ್ಟ್ ಕುಂದಾಪ್ರ ಕನ್ನಡ ಶಬ್ದ ಕೊಟ್ಟ್ ನಿವೆಲ್ಲ ಉತ್ರ ಹೇಳಿನಿ ಕಾಂಬ ಅಂತ್ ಹೇಳಿದೆ…

ನಾವಡ್ರ್, ಯಶೋಧ ಮತ್ತೆ ಅನುಪಮ ಸುಮಾರ್ ಸರಿ ಉತ್ರ ಕೊಟ್ಟಿರ್. ಬೇರೆ ಯಾರೂ ಈ ಬದಿಗ್ ನೀಕಿ ಕಾಣಲ್ಯೋ…, ಕಂಡ್ರೂ ಉತ್ರ ಹೇಳುಕೆ ಮನ್ಸಿಲ್ಯೋ, ಅತ್ವ ಯಾರ್ ಹೇಳ್ತ್ರ್.. ಇವ್ನಿಗೆ ಬೇರೆ ಕೆಲ್ಸ ಇಲ್ಲ ಅಂದೇಳಿ ಸುಮ್ನಾಯ್ಕಂಡ್ರೋ ಗೊತ್ತಿಲ್ಲ. ಹೋಯ್ಲಿ ಬಿಡಿ… ನಂಗೇನ್ ಬೇಜಾರಿಲ್ಲ… ಯಾರಿಗಾರೂ ಒತ್ತಾಯ ಮಾಡಿ ಉತ್ರ ಹೇಳಿ ಅಂದೇಳಿ ಹೇಳುಕಾತ್ತಾ?

 

ಆರ್ ಹೀಂಗ್ ನಿಮ್ಮತ್ರ ಉತ್ರ ಕೇಂಬುದರ್ ಉದ್ಧೇಶ ಎಂತ ಅಂದ್ರೆ… ಒಂದ್ ಶಬ್ದಕ್ಕೆ ನಮ್ಗೆ ಗೊತ್ತಿಲ್ದಿದ್ದ್ ಕೆಲವ್ ಅರ್ಥ ಇದ್ರೆ ಅದನ್ನು ಒಂಚೂರ್ ತಿಳ್ಕಂಬ ಅಂದೇಳಿ

ಇರ್ಲಿ… ಈಗ ಉತ್ರ ಎಂತ ಕಾಂಬ ಅಕಾ…

 

1. ಗತಿ ಗೋತ್ರ ಇಲ್ದಿದಂಗ್ ಆಪುದ್ = ಯಾರೂ ದಿಕ್ಕಿಲ್ಲದಂತಾಗುವುದು, ಅನಾಥರಾಗುವುದು, ಎಲ್ಲ ಕಳೆದುಹೋಗಿ ಅಸಹಾಯಕರಾಗು                       

2. ಅಂಡುದ್ = ಹಿಂಜರಿಕೆಯಿಂದ ಅಡಗಿಕೊಳ್ಳು, ಹಿಂದೇಟು ಹಾಕು, ಸಂಕೋಚದಿಂದ ಮರೆಯಲ್ಲಿ ಕುಳಿತು ಇಣುಕಿ ನೋಡು

3. ಹೊತ್ತ್ಹೋಪತಿಗೆ = ಸಂಜೆಯ ವೇಳೆಯಲ್ಲಿ, ಸಾಯಂಕಾಲದ ಹೊತ್ತಿನಲ್ಲಿ , ಹೊತ್ತು ಮುಳುಗುವ ಹೊತ್ತಿನಲ್ಲಿ

4. ವರ್ಕುದ್ = ಕುಳಿತಲ್ಲಿಯೇ ತೆವಳುತ್ತಾ ಚಲಿಸುವುದು

(ಅನುಪಮ ಹೆಚ್ಚು ಕಮ್ಮಿ ಎಲ್ಲಾ ಸರಿ ಉತ್ರ ಹೇಳಿರ್, ನಾವಡ್ರ್ 1,3 ಸರಿ ಉತ್ರ ಹೇಳಿರ್, ಯಶೋಧ 1,2,3 ಕ್ಕೆ ಸರಿ ಉತ್ರ ಹೇಳಿರ್)

 

ಈ ಸರ್ತಿ ಬರಿ ಮೂರೇ ಮೂರ್ ಶಬ್ದಕ್ಕೆ ಉತ್ರ ಕೊಡಿ ಸಾಕ್.

 

1. ತೊಡಮಿ/ತೊಡಮೆ

2. ಮಿಟ್ಟಿ

3. ಗಿರ

Advertisements
ಟಿಪ್ಪಣಿಗಳು
 1. manjunath ಹೇಳುತ್ತಾರೆ:

  nim prashnege nim urnavre uthra kottir,so nim prashne nam thirthahalli varge bandilye.. (nange sari baralla try madtidini aste.. thappidre sory..)

 2. ಭಾಗ್ವತ್ರು ಹೇಳುತ್ತಾರೆ:

  ತೊಡಮೆಗೆ ಹವ್ಯಗನ್ನಡದಲ್ಲಿ ದಣಪೆ ಅಂತಾರೆ ಇರ್ಬೇಕು. ಮತ್ತೆ, ಎಲ್ಲ ಅನುಪಮ ಉತ್ರ ಕೂಟ್ಟಿದ್ರಲೆ.

 3. deepa ಹೇಳುತ್ತಾರೆ:

  namskara marre
  nimma baravanige kandre khushi atthe neev kend prasnege uttra
  1.todame=kevala manushar matra datukapange madud beli
  2.mitti=mogg
  3.gira=chata
  nimma barvanige itthala,ud channakippathige madud chastee ala hamblu ayth .thumba thanks aka .ayth innond sala sikwa

  DEEPa

 4. ರಂಜಿತ್ ಹೇಳುತ್ತಾರೆ:

  ತೊಡಮೆ(ತಡೆಬಾಗಿಲು) : ದನಕರು ಎಲ್ಲ ಒಳಗ್ ಬಪ್ಪುಕಾಗ ಅಂದೇಳಿ ಬೇಲಿಗೆ ಹಾಕ್ಕಂಬುವ ಬೊಂಬಿನ ಚೌಕಟ್ಟು.

  ಮಿಟ್ಟಿ: ಮೊಗ್ಗು….

  ಗಿರ : ಚಟ, ಧ್ಯಾನ (ಬಳಕೆ: ಎಷ್ಟೊತ್ತಿಗ್ ಕಂಡ್ರೂ ಅವ್ಳ್ ವಿಷ್ಯ ಮಾತಾಡ್ತಾ ಇರ್ತ್ಯಲ ಮರೆ… ಬೇರೆ ಕೆಲ್ಸ ಇಲ್ದ ಮೆರೆ… ಅವ್ಳದ್ದೇ ಗಿರ ಹಿಡ್ದಿತಾ?…;-))

 5. ಶಿಶಿರ ಕನ್ನಂತ ಹೇಳುತ್ತಾರೆ:

  ಗಿರ= ಹುಚ್ಚು ಆಸೆ.
  ತೊಡ್ಮಿ= ಬಲಗ, ಉಣಗೋಲು.
  ಮಿಟ್ಟಿ= ಮೊಗ್ಗು, ಬಳಕೆ : ಹೂವಿನ್ ಮಿಟ್ಟಿ ಕೊಯ್ಕಂಡ್ ಬಾರಾ.

 6. adiga ಹೇಳುತ್ತಾರೆ:

  1 it is not exactly a gate, wont open fully but with adjustable heights

  2. ಮೊಗ್ಗು
  3 ಚಟ, ಅತಿ ಆಸೆ

 7. Veema Shetty ಹೇಳುತ್ತಾರೆ:

  ೧. ಸಣ್ಣ ಮರದ ಗೇಟ್
  ೨. ಮೊಗ್ಗು
  ೩. ಚಟ

 8. kallare ಹೇಳುತ್ತಾರೆ:

  ಹ್ವಾಯ್,
  ಉತ್ರ ಸಿಕ್ತಲ ಮಾರಾಯ್ರೆ, ಕುಂದಾಪ್ರದವ್ರೆ ಕೊಟ್ಮೇಲೆ ನಮ್ದೆಂತ?
  ನಿಮ್ಮ್ ಗಾಡಿ ಮುಂದ್ಹೊಯ್ತಿರ್ಲಿ ಮಾರಾಯ್ರೆ… ನಾ ನೀಕಿ ಕಾಂತಿರ್ತೆ. 🙂

 9. Anupama ಹೇಳುತ್ತಾರೆ:

  1. ಮರದಿಂದ ಮಾಡಿದ ಗೇಟ್
  2. ಮೊಗ್ಗು
  3. ಹುಚ್ಚು

  ಸರ್, ನಾನು ಕುಂದಾಪುರದವಳು!!!!!!!!!!!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s