ಕುಮ್ಟಿ ಬೀಳು, ಹೊಕ್ಡ್ , ಬೆಟ್ಟ್, ಹಿಂದಾಗು, ಲಾಟ್ ಬಿಡು

Posted: ಸೆಪ್ಟೆಂಬರ್ 24, 2008 in ಕುಂದಗನ್ನಡ ಕಲಿ
ಟ್ಯಾಗ್ ಗಳು:

ಕುಮ್ಟಿ ಬೀಳು = ಬೆಚ್ಚಿ ಬೀಳು

ಬಳಕೆ

೧.         ಮಗಿನ ಸುದ್ದಿಗ್ ಹೊಗ್ಬೆಡ ಅಂದ್ರ್ ಕೇಂತಿಲ್ಲ. ನೀ ಕೂಗದ್ದ್ ಕಂಡ್ ಮಗು ಕುಮ್ಟಿ ಬಿತ್ತ್ ಕಾಣ್

೨.         ನೀವ್ ಹಿಂದಿಂದ್ ಬಂದ್ ಸುಮ್ನ್ ನಿಂತ್ಕಂಡದ್ದಾ ಮರಾಯ್ರೆ. ಕತ್ಲಿ ಹೌದಾ ಅಲ್ದಾ… ನಾ ಒಂದ್ಸಲ ಕುಮ್ಟಿ ಬಿದ್ದೆ ಗೊತ್ತಾ

 

ಹೊಕ್ಡ್ = ಜೊತೆಗೆ, ಬಳಿ, ಹತ್ತಿರ, ಒಟ್ಟಿಗೆ

ಬಳಕೆ

೧.         ಮೊನ್ನೆ ನಂಗೂ ಅವಂಗೂ ಮಾತಿಗ್ ಮಾತ್ ಆಯ್ ಈಗ ನನ್ ಹೊಕ್ಡ್ ಮಾತಾಡುದೇ ಕೈದ್ ಮಾಡಿದ

೨.         ನಿನ್ನ್ ಹೊಕ್ಡ್ ಒಂದ್ ನೂರ್ ರೂಪಾಯ್ ಇದ್ರ್ ಕೊಡ್ ಮರಾಯಾ, ಒಂದ್ ನಾಕ್ ದಿನ ಬಿಟ್ಟ್ ಕೊಡ್ತೆ

೩.         ಮಗು ಒಂದೇ ಇತ್ತಲೆ ಅಲ್ಲ್. ಮಗಿನ ಹೊಕ್ಡ್ ಯಾರರು ಕೂಕಣಿ ಕಾಂಬ

 

ಚಣಿಲ = ಅಳಿಲು

ಬಳಕೆ

೧.         ಮಾಯ್ನ್ ಹಣ್ಣ್ ಆಪ್ ಸುರಿಗೆ ಇಲ್ಲೆಲ್ಲ ಮಸ್ತ್ ಚಣಿಲ ಬತ್ತೊ

೨.         ಮಕ್ಳೆ ಚಣಿಲಕ್ಕೆ ಎಂತಕೆ ಕಲ್ಲ್ ಹೊಡಿತಿದ್ರಿ… ಅದ್ ಬರೀ ಪಾಪದ್

 

ಬೆಟ್ಟ್, ಬೆಟ್ಟು / ಬೆರ್ಲ್ = ಬೆರಳು

ಬಳಕೆ

೧.         ಮೊನ್ನೆ ಬಪ್ಪತಿಗೆ ಕಾಲ್ ಬೆಟ್ಟಿಗೆ ಕಲ್ಲ್ ತಾಗಿ ಗಾಯ ಆದ್ದ್ ಮಾರಾಯ್ರೆ…ಇಕಾಣಿ ಹಾಂಗೇ ಇತ್ತ್. ಚೂರೂ ಹಿಂದಾಯಿಲ್ಲ

೨.         ಎಂತದಾ ಸಣ್ಣ್ ಮಗಿನ್ ಕಣಗೆ ಎಷ್ಟ್ ಹೊತ್ತಿಗ್ ಕಂಡ್ರೂ ಬೆರ್ಲ್ ಬಾಯಾಕ್ಕಂಡ್ ಇಪ್ಡ್

 

ಹಿಂದಾಗು = ಗುಣವಾಗು, ಶಮನವಾಗು

೧.         ಆ ಡಾಕ್ಟ್ರ್ ಕೈ ಅಡ್ಡಿಲ್ಲ. ಎರ್ಡ್ ಹೊತ್ತಿನ ಮಾತ್ರಿ ತಕಂಬ್ದ್ರೊಳ್ಗೆ  ಬೆನ್ನ್ ನೋವ್ ಹಿಂದಾಯ್ತ್.

೨.         ಕೈಯ್ಯಗ್ ಒಂದ್ ಗಾಯ ಆಯಿತ್. ದಿನಾ ನೀರ್ ತಾಗತ್ ಅಲ್ದಾ.. ಎಂತ ಹಚ್ರೂ ಹಿಂದಾತಿಲ್ಲಪ

 

ಲಾಟ್ ಬಿಡು = ಸುಳ್ಳು ಹೇಳು, ಬೊಗಳೆ ಬಿಡು

ಬಳಕೆ

೧.         ಅಂವನ್ ಮಾತ್ ನಂಬ್ಕಡ್ರ್ ಸೈ. ಬರೀ ಲಾಟ್ ಬಿಡ್ತ

೨.         ನೀ ಲಾಟ್ ಬಿಡುದ್ ಯಾರತ್ರ. ನಂಗ್ ನಿನ್ನ್ ದಗಲ್ಬಾಜಿ ಗೊತ್ತಿಲ್ಲ ಅಂದೇಳಿ ಮಾಡಿದ್ಯಾ?

 

Advertisements
ಟಿಪ್ಪಣಿಗಳು
 1. Sriprakash ಹೇಳುತ್ತಾರೆ:

  Kundapura kannada:It is very nice.I love this language.It made me to recollect the past days.My wife was from Hallihole,Kundapura.She is no more.Your page made me to remember the way she was speaking.Thanks and Good wishes.
  Regards
  Shreeprakash

 2. ranjith ಹೇಳುತ್ತಾರೆ:

  ಈ ಬ್ಲಾಗನ್ನ ಇಷ್ಟ್ ದಿನ ಕಾಣ್ದೆ ಇದ್ದಿದ್ದಕ್ಕೆ ಬೇಜಾರಾಯ್ತ್ ಕಾಣಿ…
  ಲೈಕಿತ್ತ್ ಬ್ಲಾಗ್..
  ಹೀಂಗೆ ಬರೀತ ಇಪ್ರಿಯಲ…ನಮ್ಗೆಲ್ಲ ಊರಿಂದ್ ನೆನಪಾರೂ ಆತ್ತ್..:)

  –ರಂಜಿತ್

 3. ಸಂತು ಹೇಳುತ್ತಾರೆ:

  ವಿಜಯ್,
  ಇದ್ದ ಬ್ಲಾಗಿಗೇ ಬೀಗ ಹಾಕಿ ಕೆಲವ್ ತಿಂಗ್ಳಾಯ್ತ್. ಸದ್ಯಕ್ಕೆ ಬರು ಉಸಾಬರಿ ನಂಗೆ ಬ್ಯಾಡ.
  ನೀವ್ ಬರೀನಿ. ನಾ ಓದಿ ಸೇರ್ಸುದ್ ಎಂತಾರು ಇದ್ರೆ ಹೇಳ್ತೆ.

 4. vijayraj ಹೇಳುತ್ತಾರೆ:

  ಮನಸ್ವಿನಿ,
  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.
  ತುಂಬಾ ಶಬ್ದಗಳು ಶಿವಮೊಗ್ಗ,ಉ.ಕ,ಉಡುಪಿ ಕಡೆ ಹೋಲಿಕೆ ಇರುವಂತದ್ದು ಸಿಗುತ್ತದೆ. ಬಹುಶಃ ಈ ಪ್ರದೇಶಗಳ ನಡುವೆ ಪರಸ್ಪರ ವ್ಯಾಪಾರ-ವಹಿವಾಟು,ವಲಸೆ,ಮದುವೆ ಸಂಬಂಧಗಳು ಇತ್ಯಾದಿ ಜಾಸ್ತಿ ಇರುವ ಕಾರಣಕ್ಕೇ ಈ ಶಬ್ದಗಳೂ ವಿನಿಮಯವಾಗಿರಬಹುದು.
  ಹಂಗೆ ನಿಮ್ಮ ಬ್ಲಾಗ್ ರೋಲಲ್ಲಿ ನಂಗೂ ಒಂಚೂರ್ ಜಾಗ ಕೊಟ್ಟಿದ್ರೆ ಚೆನ್ನಾಗಿತ್ತು

  ಸಂತು,
  ನೀವು ಹೇಳಿದ್ದು ಸರಿ. ನಂಗೆ ಆ ಅರ್ಥ ಹೊಳೆದಿರಲಿಲ್ಲ. ಮಾಹಿತಿಗೆ ಧನ್ಯವಾದ.
  ನೀವೂ ಒಂದ್ ಬ್ಲಾಗ್ ಬರ್ಯುರಲೆ

 5. ಸಂತು ಹೇಳುತ್ತಾರೆ:

  ಬೆಟ್ಟ್, ಬೆಟ್ಟು (ಇನ್ನೊಂದ್ ಅರ್ಥ) = ಎತ್ತರದಲ್ಲಿರೋ ಜಾಗ. ೩-೪ ಮನೆಗಳಿರೋ ಜಾಗ ಸಹಾ ಹೌದು. ಉದಾ. ಮಯ್ಯರ ಬೆಟ್ಟು.

 6. ಮನಸ್ವಿನಿ ಹೇಳುತ್ತಾರೆ:

  ಕುಮ್ಟಿ ಬೀಳು = ಬೆಚ್ಚಿ ಬೀಳು

  ನಮ್ಮ (ಉತ್ತರ ಕನ್ನಡದ ಸಿರ್ಸಿ) ಕಡೆನೂ ಡಿಟ್ಟೊ 🙂
  ಕುಮ್ಟೆ ಬೀಳು ಅಥವಾ ಕುಮಾಟೆ ಬೀಳು ಅಂತ ಅಮ್ಮ ಹೇಳ್ತಾರೆ.

  ಚಂದದ ಬ್ಲಾಗ್…ಬರೀತಾ ಇರಿ. 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s