ಅಂಬ್ಡ್, ಚೊಣ್ಕಿ ,ಹತ್ತಾ, ಪತ್ತಿ, ಹುಣ್ಸಿಹಣ್, ಬೆಳ್ಚುದು, ಹಸರ್ಸ್‌ಕಂಡ್, ಧಾತ್

Posted: ಸೆಪ್ಟೆಂಬರ್ 5, 2008 in ಕುಂದಗನ್ನಡ ಕಲಿ
ಟ್ಯಾಗ್ ಗಳು:,

ಅಂಬ್ಡ್, ಅಂಬಡ್ = ಜೋಡಿ, ಅವಳಿ

ಬಳಕೆ

 1. ಅವ್ರಿಬ್ರ್ರೂ ಅಂಬ್ಡ್ ಮಕ್ಳ್ ಅಂಬ್ರ್. ಕಾಂಬುಕೆ ಒಂದೇ ನಮ್ನಿ ಇದ್ರ್ ಕಾಣಿ
 2. ಅಂಬ್ಡ್ ಬಾಳೆಹಣ್ ತಿಂದ್ರೆ ಅಂಬ್ಡ್ ಮಕ್ಳ್ ಹುಟ್ತ್ರ್ ಅಂಬ್ರಲಾ ಹೌದಾ?

 ಹತ್ತ / ಹತ್ತಾ = ಸಂಪೂರ್ಣ, ಪೂರಾ

ಬಳಕೆ

 1. ಹರಿಯಗ್ ನೀರ್ ಹತ್ತಾ ಖಾಲಿ ಮಾಡ್ಬೆಡ ನಂದ್ ಇನ್ನೂ ಮಿಂದ್ ಆಯಲ್ಲ
 2. ಯಾರಾರೂ ಪಾಪ್ದರ್ ಸಿಕ್ರೆ ಅಂವ ಹತ್ತ ಬೋಳ್ಸಿ ಬಿಡ್ತ

ಪತ್ತಿ = ಆಹಾರ

ಇದು ಬಹುಶಃ ಪಥ್ಯ ಶಬ್ದದಿಂದ ಬಂದಿರಬಹುದು. ಪಥ್ಯ ಅಂದರೆ ನಿತ್ಯಗಟ್ಟಳೆಯ ಆಹಾರ ಅನ್ನುವ ಅರ್ಥ ಕೂಡಾ ಇದೆ

ಬಳಕೆ

 1. ಎಂತಾ ಸಪೂರ ಆಯಿದೆ ಮರಾಯಾ? ಸಮ ಪತ್ತಿ ತಿಂತಿಲ್ಯಾ?

 

ಹುಣ್ಸಿಹಣ್ = ಜಂಬ

ಬಳಕೆ

 1. ಅವ್ನಿಗ್ ಕಯ್ಯಗ್ ಕಾಸ್ ಆರ್ ಮೇಲೆ ಮಸ್ತ್ ಹುಣ್ಸಿಹಣ್ ತೋರ್ಸ್‌ತ. ನಾವೆಲ್ಲ ಕಣ್ಣಿಗ್ ತೋರುದೇ ಇಲ್ಲ
 2. ನಿನ್ ಹುಣ್ಸಿಹಣ್ ಎಂತ ಇದ್ರೂ ಮನೆಯಗೆ ಇಟ್ಕೋ. ಇಲ್ಲೆಲ್ಲ ತೋರ್ಸುಕೆ ಹೋಯ್‌ಬೆಡ

 

 ಚೊಣ್ಕಿ = ತೊಣಚಿ, ಮೈಗೆ ತಾಗಿದ್ರೆ ತುರಿಕೆ ಉಂಟುಮಾಡುವ ಒಂದು ಜಾತಿಯ ಗಿಡ.

ಬಳಕೆ

 1. ಎಂತಕೆ ಒಳ್ಳೇ ಚೊಣ್ಕಿ ತಾಗ್ದರ್ ಕಣಗ್ ಆಡ್ತೆ.

 

 ಧಾತ್ ತಪ್ಪು = ಎಚ್ಚರ ತಪ್ಪು, ಪ್ರಜ್ಞೆ ತಪ್ಪು ಧಾತು ಅನ್ನುವ ಪದ ಶಬ್ದಕೋಶದಲ್ಲಿ ಇದೆಯಾದರೂ ಪ್ರಜ್ಞೆ ಅನ್ನುವ ಅರ್ಥದಲ್ಲಿ ಇದರ ಬಳಕೆ ನಮ್ಮ ಕುಂದಾಪ್ರ ಬದಿ ಬಿಟ್ಟು ಬೇರೆ ಕಡೆ ಹೆಚ್ಚಾಗಿ ಇಲ್ಲ ಅಂತ ನನ್ನ ಭಾವನೆ.

ಬಳಕೆ

 1. ಅವ್ರ್ ಮೊನ್ನೆ ಕಾಂತ ಕಾಂತ ತಲಿ ತಿರ್ಗಿ ಬಿದ್ದ್, ಧಾತ್ ತಪ್ಪಿ ಹೋದ್ದಲ್ದೇ
 2. ಅಂವ ನಿದ್ರಿ ಹೊಡುದ್ ಅಂದ್ರೆ…ಮಲ್ಕಂಡನಿಗೆ ಇತ್ತಿನ್ ಧಾತ್ ಇಲ್ಲ.

 

 ಬೆಳ್ಚುದು = ತಡಕಾಡು, ತಡವು, ಕುರುಡನಂತೆ ಹುಡುಕಾಡು

ಬಳಕೆ

 1. ಕತ್ಲಿಯಗೆ ಎಂತ ಬೆಳ್ಚುದ್ ಮಾರಾಯ, ಬೆಟ್ರಿಯಾರೂ ಹಿಡ್ಕಂಡ್ ಕಂಬುಕಾಗ್ದಾ?
 2. ಪೆಟ್ಗಿ ಒಳ್ಗೆ ಎಂತ ಬೆಳ್ಚತಿದ್ದೆ.. ಅಲ್ಲೆಂತ ಗಂಟ್ ಹುಗ್ಸಿಟ್ಟಿದ್ದಿಯಾ?

 ಹಸರ್ಸ್‌ಕಂಡ್ ಕೂಕಂಬ್ದ್ = ಕಾಲನ್ನು ಅಗಲಿಸಿ ಕುಳಿತುಕೊಳ್ಳು. ಹಸರಿಸು ಅನ್ನುವ ಪದಕ್ಕೆ ಹರಡು, ವ್ಯಾಪಿಸು, ಹಬ್ಬಿಸು, ವಿಶಾಲ ಅನ್ನುವ ಅರ್ಥ ಇದೆ.

ಬಳಕೆ

 1. ಅದೆಂತ ಹಸರ್ಸ್‌ಕಂಡ್ ಕೂಕಂಡದ್. ಕಾಲ್ ಮಡ್ಚ್‌ಕಂಡ್ ಕೂಕೊ ಕಾಂಬ

 

ಕಡ್ಗಿ = ಎಳೆಯ ಹಲಸಿನಕಾಯಿ, ಪಲ್ಯ ಸಾಂಬಾರ್ ಮಾಡಲು ಬಳಸುವಂತಹದ್ದು

 

 

ಟಿಪ್ಪಣಿಗಳು
 1. vijayraj ಹೇಳುತ್ತಾರೆ:

  santhu,

  adu ambad alla ambaaDi yele.

  baLchud, beLchud eradoo prayOga itt.

  vijayraj k

 2. ಸಂತು ಹೇಳುತ್ತಾರೆ:

  ಹ್ವಾಯ್,

  ಅಂಬಡ್ ಎಲಿ ಅಂಬುದು ವೀಳ್ಯದೆಲಿಗೆ ಒಂದು ಜಾತಿ ಅಲ್ಯಾ. ಭಟ್ಕಳ ಅಂದೇಳಿ ಇನ್ನೊಂದು ತರದ್ದ ಸಹಾ ಇತ್ತಂದ್ ನೆನಪು (ಇನ್ನು ಹಲವು ರೀತಿ ಇತ್ತ್, ನಂಗೊತ್ತಿಲ್ಲ ಅಷ್ಟೆ).

  ನಂಬದೆಗೆ ’ ಬೆಳ್ಚುದು ’ ಅಂಬು ಬದ್ಲಿಗಿ ’ಬಳ್ಚುದು’ ಅಂತ್ರ್.

  -ಸಂತು

ನಿಮ್ಮದೊಂದು ಉತ್ತರ vijayraj ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s