ಹಾಂಟ್ ಹಾಕು, ಹರ್ಪು, ಬಳುವಟಿ, ಕುಟ್ಟಿ ಕೀಸು, ಮ್ವಾಳ

Posted: ಆಗಷ್ಟ್ 8, 2008 in ಕುಂದಗನ್ನಡ ಕಲಿ
ಟ್ಯಾಗ್ ಗಳು:, ,

ಹಾಂಟ್ ಹಾಕು / ಹಾಟ್ ಹಾಕು = ಮೋಸ ಮಾಡು, ಚಕ್ಕರ್ ಹೊಡೆ, ಕೈ ಕೊಡು

ಬಳಕೆ

೧.         ನಿಮ್ ದುಡ್ ಕೊಡ್ವಾ ಮರಾಯ್ರೆ..ನಾನೇನ್ ಹಾಂಟ್ ಹಾಕ್ತನಾ ಹಂಗಾರೆ

೨.         ಇವತ್ತ್ ಮನಿಗ್ ನೆಂಟ್ರ್ ಬಂದಿರ್. ಅದಕ್ಕೆ ಶಾಲಿಗ್ ಹಾಂಟ್ ಹಾಕದ್

 

ಹರ್ಪು = ಪರಚುವುದು, ಗಿಬರು, ಗೀರು

ಬಳಕೆ

೧.         ಮಗಿನ್ ಉಗ್ರ್ ಸಮಾ ಉದ್ದ ಆಯಿತ್. ಇಲ್ಕಾಣಿ ನನ್ ಮುಖದ್ ತುಂಬಾ ಹರ್ಪದ್

೨.         ಅವ್ನೊಟ್ಟಿಗೆ ಆಡುದ್ ಬ್ಯಾಡಾ ಮರಾಯ. ಸಿಟ್ಟ್ ಬಂದ್ರ್ ಹರ್ಪುಕೇ ಬತ್ತ

 

ಮೋಳ, ಮ್ವಾಳ = ಬಿಲ, ರಂಧ್ರ

ಬಳಕೆ

೧.         ಆ ಮೋಳದ್ ಹತ್ರ ಹೋಗ್ಬೇಡಿ ಮಕ್ಳೇ. ಅಲ್ಲ್ ಹಾವ್ ಗಿನ್ ಇದ್ದಿಕ್

೨.         ಈ ಹೆಗ್ಳನ್ ದೆಸ್ಯಿಂದ್ ಸುಕಾ ಇಲ್ಲ. ಗ್ವಾಡಿ ಬದ್ಯಗೆ ದೊಡ್ಡ್ ಮ್ವಾಳ ಮಾಡಿತ್ ಕಾಣಿ

 

ಗಿಮ್ಚು, ಗಿಮ್ಚುದ್ = ಕಿವಿಚು, ಹಿಸುಕು, ಹಿಂಡು

ಬಳಕೆ

೧.         ಬೇಗ್ ಬೇಗ್ ಉಣ್ ಅಂದ್ರೆ ಅದೆಂತಾ ಅನ್ನ ಗಿಮ್ಚ್‌ತಾ ಕೂಕಂಡದ್

೨.         ಡಾಕ್ಟ್ರೆ ಹೊಟ್ಟಿ ನೋವ್ ಇಲ್ಲ. ಆರೆ ಒಂನಮನಿ ಗಿಮ್ಚದಂಗಾತ್ ಹೊಟ್ಟಿ ಒಳ್ಗೆ.

 

ಬಳುದ್ = ಬೀದಿ ಸುತ್ತೋದು, ಮಾಡೋಕೆ ಕೆಲಸವಿಲ್ಲದೆ ವೃಥಾ ಅಲೆದಾಡು

ಬಳಕೆ

೧.         ಇಪ್ಪತ್ನಾಕ್ ಗಂಟಿ ಊರ್ ಮೇಲ್ ಬಳುದ್ ಕೈದ್ ಮಾಡಿ ಎಂತಾರೂ ಕೆಲ್ಸ ಮಾಡುಕಾಗ್ದಾ?

 

ಬಳ್ಕಂಡ್ =  ತೇಲಿಕೊಂಡು

ಬಳಕೆ

೧. ನೆರಿ ಬಂದ್ರೆ ಹೊಳಿಯಗೆ ದೊಡ್ ದೊಡ್ ಮರ್ ಬಳ್ಕಂಡ್ ಬತ್ತ್

 

ಬಳುವಟಿ = ಬೀದಿ ಬಸವ, ಮಾಡೋಕೆ ಕೆಲಸವಿಲ್ಲದೆ ವೃಥಾ ಅಲೆದಾಡುವವ

ಬಳಕೆ

೧.         ಮನೆಯಗೆ ಕೂಕಂಡ್ ಓದುದ್ ಬಿಟ್ಕಂಡ್ ಬಳುವಟಿ ಕಣಗೆ ತಿರ್ಗುಕ್ ಹೋತ್ಯನಾ?

 

ವೈದೇಹಿಯವರ ಕಥೆಯೊಂದರಲ್ಲಿ ಬಳುವಟಿ ನಾರಾಯಣ ಅನ್ನೋದೊಂದು ಪಾತ್ರವೇ ಇದೆ

 

 

ಕುಟ್ಟಿ ಕೀಸು = ಕಾಲಿಗೆ ಬುದ್ಧಿ ಹೇಳು, ಜಾಗ ಖಾಲಿ ಮಾಡು, ಪರಾರಿಯಾಗು

ಬಳಕೆ

೧.         ಹುಲಿ ಬಂತ್ ಹುಲಿ ಅಂದ್ ಹೇಳದ್ದೇ ತಡ. ಅಂವ ಅಲ್ಲಿಂದ ಕುಟ್ಟಿ ಕೀಸದ್ದೇ ಅಲ್ದಾ

೨.         ಮಾಷ್ಟ್ರನ್ ಕಂಡ್ರ್ ಕೂಡ್ಲೆ ಆಡ್ತಾ ಇದ್ದಿದ್ ಮಕ್ಳ್ ಕುಟ್ಟಿ ಕೀಸದ್ದೇ

 

ತುಳುನಾಡಿಗೆ ಹತ್ರ್ ಇಪ್ಪ್ ಕುಂದಾಪ್ರದ್ ಕೆಲವ್ ಬದ್ಯಗೆ ಇದೇ ಶಬ್ದಕ್ಕೆ ತುಳು ಶಬ್ದ ಪದ್ರಾಡ್ ಸತೇ ಕೆಲವ್ ಸರ್ತಿ ಉಪ್ಯೋಗ ಮಾಡ್ತ್ರ್.

Advertisements
ಟಿಪ್ಪಣಿಗಳು
 1. shashidhara halady ಹೇಳುತ್ತಾರೆ:

  ಬಳ್ಕಂಡ್ ಬಪ್ಪುದು ಅಂದ್ರೆ, ತೇಲಿಕೊಂಡು ಬರುವುದು ಎಂಬುದು ಕುಂದಗನ್ನಡದಲ್ಲಿ ಸರಿಯಾದ ಅರ್ಥ.
  ಬಳಿ ಎಂಬುದಕ್ಕೆ ಕನ್ನಡದಲ್ಲಿ ಬೇರೆ ಅರ್ಥಗಳಿರುವುದೂ ನಿಜ.
  ಆದರೆ ಕುಂದಗನ್ನಡದಲ್ಲಿ ಬಳ್ಕಂಡ್ ಶಬ್ದಕ್ಕೆ ತೇಲಿಕೊಂಡು ಎಂಬ ಅರ್ಥ ಹುಟ್ಟಿದ್ದು ಹೇಗೊ ನಾಕಾಣೆ!

 2. shashidhara halady ಹೇಳುತ್ತಾರೆ:

  ಹಾಂಟ್ ಹಾಕು ಎಂಬ ಶಬ್ದದ ಮೂಲ ಯಾವುದು ಮಾರಾಯ್ರೆ?
  ಬಹುಶ ಹಾಟ್ (ಬಯಲು ಸೀಮೆಲಿ ಬಳಸುವ ಅಶ್ಲೀಲ ಬೈಗುಳದ ಪದ) ಶಬ್ದವೇ ಇದರ ಮೂಲ ವಿರಬಹುದು.
  (ಅರಸಿಕೆರೆ ಸೀಮೆಲಿ ಬೈಗುಳ : “ನನ್ ಹಾಟ್ ಕುಡಿಯೋ ನನ್ಮಗನೆ, ಹೋಗ್ತೀಯೊ ಇಲ್ವೊ” : ಹೆಂಗುಸರು ಹೆಚ್ಚಾಗಿ ಬಳಸುವ ಬೈಗುಳ)

 3. vijayraj ಹೇಳುತ್ತಾರೆ:

  ನೀವ್ ಹೇಳದ್ ಸಮ. ಆ ಅರ್ಥ ನೆನ್ಪ್ ಆಯಲ್ಲ. ಹೌದ್ ಮಾರಾಯ್ರ್ರೆ…ಕುಂದಾಪ್ರ ಕನ್ನಡ ಓದುಕೆ, ಬರ್ಯುಕೆ, ಕೇಂಬುಕೆ ಭಾರೀ ಸಾಪ್.
  ಅಂದ ಹಾಂಗೆ ನಿಮ್ದ್ ಕುಂದಾಪ್ರವ? ಈಗ ಎಲ್ಲಿದ್ರಿ? ಎಂತ ಮಾಡ್ತಿದ್ರಿ?

  ವಿಜಯ್ ರಾಜ್

 4. ಅಧಿಕಪ್ರಸಂಗಿ ಹೇಳುತ್ತಾರೆ:

  ಬಳ್ಕಂಡ್ ಅಂಬ ಶಬ್ದಕ್ಕೆ “ಹಚ್ಕಂಡ್” ಎಂಬ ಅರ್ಥ ಕೂಡ ಇತ್ ಅಲ್ದೆ. ಯಾರಾದ್ರು ಸಮಾ ಮೇಕಪ್ ಮಾಡ್ಕಂಡ್ ಬಂದದಿದ್ರೆ ಅವರಿಗೆ “ಅಲ್ಕಾಣ, ಅವ್ಳ್ ಮುಖಕ್ಕೆ ಎಷ್ಟ್ ಬಣ್ಣ ಬಳ್ಕಂಡ್’ದ್ದ ಮಾರಯ” ಅಂತ ಹೇಳತ್ತ್ ಅಲ್ದಾ? ಕುಂದಾಪ್ರ ಕನ್ನಡ ಮಾತಾಡುಕ್, ಕೆಂಬುಕ್ ಅಲ್ದೆ ಬರೂಕೂ ಕುಷಿಯಾತ್ ಅನ್ದೇಳಿ ಇವತ್ತ ಗೊತ್ತಯಿತ್ ಮಾರಾಯ್ರೇ.

 5. vijayraj ಹೇಳುತ್ತಾರೆ:

  ಈ ಶಬ್ದವನ್ನು ತೇಲಿಕೊಂಡು ಅನ್ನುವ ಅರ್ಥದಲ್ಲಿ ಉಪಯೋಗ ಮಾಡೋದು ಕುಂದಾಪ್ರ ಕಡೆಯಂತೂ ಇದೆ.
  ಉದಾ –
  ಮೊನ್ನೆ ನೆರೆ ಬಂದಾಗ 3 ಜನ ಹೊಳೆಯಗೆ ಬಳ್ಕಂಡ್ ಹೋದ್ರಂಬ್ರ್.
  (ಇಲ್ಲಿ ಬಳಿದು ಕೊಂಡು ಅನ್ನುವುದರ ಅರ್ಥ ಕೊಚ್ಚಿಕೊಂಡು ಹೋಗು ಅಂತಾಗುತ್ತದೆ)

  ಆದರೆ ಇನ್ನೊಂದು ಉದಾಹರಣೆ ಕೊಡುತ್ತೇನೆ ನೋಡಿ
  ನೀರ್ ತಕ್ಕಂಡ್ ಬಪ್ಪತಿಗೆ ಎಲ್ಲೋ ಎಣ್ಣೆ ಮುಟ್ಟಿದ್ನಾ ಕಾಣತ್. ನೀರಗೆ ಎಣ್ಣಿ ಬಳಿತಾ ಇತ್ತ್ ಕಾಣಿ.( ಇಲ್ಲಿ ಬಳಿಯುವುದರ ಅರ್ಥ ತೇಲುತ್ತಾ ಇರು ಅಂತಾನೇ)

  ಅಂದ ಹಾಗೆ ನೀವೂ ಕುಂದಾಪುರದವರಾ?

 6. M G Harish ಹೇಳುತ್ತಾರೆ:

  ಬಳ್ಕಂಡ್ ಎಂಬುದಕ್ಕೆ ತೇಲಿಕೊಂಡು ಎಂಬ ಅರ್ಥದ ಬಗ್ಗೆ ನನಗೆ ಸ್ವಲ್ಪ ಸಂದೇಹವಿದೆ.

  ಬಳಿ (ದೇ) (ಕ್ರಿ) ೧ ಗುಡಿಸು, ಉಡುಪು ಸ್ವಚ್ಛಮಾಡು ೨ ತೊಡೆ, ಒರೆಸು ೩ ಗೋರು, ಬಾಚು ೪ ಲೇಪಿಸು, ಹಚ್ಚು, ಸವರು ೫ (ನೆಲವನ್ನು) ಸಾರಿಸು, ಒರೆಸು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s