ಕರ್ಕರೆ ದೇವ್ರಿಗೆ ಮರನ್ ಜಾಗಂಟಿ

Posted: ಜುಲೈ 11, 2008 in ಕುಂದಗನ್ನಡ ಕಲಿ
ಟ್ಯಾಗ್ ಗಳು:, , ,

ಕುಂದಾಪ್ರ ಶಬ್ದದ್ ಒಟ್ಟಿಗ್ ನೆನ್ಪಿಗ್ ಬಂದ ಒಂದೆರ್ಡ್ ಕುಂದಾಪ್ರ ಕನ್ನಡ ಗಾದಿ ಮಾತ್ ಇಲ್ಲಿತ್ ಕಾಣಿ

 

೧)         ಕರ್ಕರೆ ದೇವ್ರಿಗೆ ಮರನ್(ಮರದ) ಜಾಗಂಟಿ

೨)          ಊರಿಗ್ ಬುದ್ಧಿ ಹೇಳುದ್ ಒಲಿಗೆ ಉಚ್ಚಿ ಹೊಯ್ಯುದ್

೩)          ಕುಪ್ಳನ್ ನಂಬ್ಕಂಡ್ ಕೊಳ್ಕಿ ನಟ್ರಂಬ್ರ್

 

ಈ ಗಾದಿ ಮಾತಿನ್ ಅರ್ಥ ನಾ ಹೇಳುದಿಲ್ಲ. ಗೊತ್ತಿದ್ರೆ ನೀವೇ ಹೇಳಿ ಕಾಂಬ

 

ಇನ್ನೊಂದ್ ಶಬ್ದ/ನುಡಿಕಟ್ ನೆನ್ಪಾಯ್ತ್ ಕಾಣಿ

 

ಹರ್ಕಿ ಬಲಿ (ಹರಕೆ ಬಲಿ)

ಇದರ ಅರ್ಥ ನಂಗ್ ಗೊತ್ತಿದ್ ಹಾಂಗೆ ಕಾಟಾಚಾರಕ್ಕೆ ಮಾಡುವ ಕೆಲ್ಸ್ ಅಂದೇಳಿ. ಮಾಡುಕ್ ಮನ್ಸ್ ಇಲ್ದಿದ್ರೂ, ಒಟ್ ಮಾಡ್ಕಲ್ಲಾ ಅಂದೇಳಿ ಮಾಡು ಕೆಲ್ಸ.

 

ಬಳಕೆ

ಒಂದ್ ಕೆಲ್ಸ ಹೆಳ್ರ್ ಸಮಾ ಮಾಡುದಿಲ್ಲ. ಬರೀ ಹರ್ಕಿ ಬಲಿ ತೀರ್ಸ್‌ದಾಂಗೆ ಮಾಡಿಟ್ರೆ ಹ್ಯಾಂಗೆ?

ಮಾಣಿ ಓದಾ ಅಂದ್ರೆ ಎದ್ರಿಗ್ ಪುಸ್ತ್ಕ ಹಿಡ್ಕಂಡ್ ಮಣಮಣ ಅಂದೇಳಿ ಹರ್ಕಿ ಬಲಿ ತೀರ್ಸಿ ಆಡುಕ್ ಓಡಿಯಾಯ್ತ್.

 

ಈ ಶಬ್ದ ಹುಟ್ಟದ್ ಹ್ಯಾಂಗೆ ಅಂತೇಳಿ ಕಾಂಬುಕೆ ಹೋದ್ರೆ, ದೇವಸ್ಥಾನದಗೆ ಬಲಿ ಪೀಠ ಅಥ್ವಾ ಬಲಿ ಕಲ್ಲ್ ಅಂದೇಳಿ ಇರತ್ತಲ್ದಾ… ಅದಕ್ಕೆಲ್ಲ ಮುಂಚೆ ಪ್ರಾಣಿ ಬಲಿ ಕೊಡ್ತಿದ್ದಿರ್ಕ್. ಕಡಿ ಕಡಿಗೆ ಅದೆಲ್ಲಾ ನಿಂತ್ ಹೋಯಿ ಬರೀ ಹೆಳಿಗ್ ಮಾತ್ರ ಬಲಿಪೀಠಕ್ಕೆ ಪೂಜಿ ಮಾಡಿ, ಚರು ಇಲ್ಲಾ ನೈವೇದ್ಯ ಮಾಡುಕ್ ಶುರು ಮಾಡಿರ್ ಇರ್ಕ್. ಅದ್ರಗೆ ಬರೀ ಹೆಳಿಗ್ ಮಾತ್ರ (ನೆಪ ಮಾತ್ರಕ್ಕೆ) ಬಲಿ ಕೊಡುದ್ರಿಂದ ಅದ್ ಬರೀ ಕಾಟಾಚಾರದ್ ಬಲಿ ಆದ್ರಿಂದ ಈ ಹೆಸ್ರ್ ಬಂದಿಪ್ಕೂ ಸಾಕ್. ಇದ್ ನಾನ್ ಎಣ್ಸ್‌ಕಂಡದ್ ಅಷ್ಟೆ. ನಂಗೂ ಸಮಾ ಹೀಂಗೇ ಅಂದೇಳಿ ಗೊತ್ತಿಲ್ಲ. ಹೀಂಗ್ ಇಪ್ಕು ಸಾಕ್ ಅಂದೇಳಿ. ನಿಮ್ಗೆನಾರು ಇದ್ರ್ ಬಗ್ಗ್ ಗೊತ್ತಿದ್ರೆ ಹೇಳಿ

ಟಿಪ್ಪಣಿಗಳು
 1. shashidhara halady ಹೇಳುತ್ತಾರೆ:

  ನಿಮ್ಮ ಶಬ್ದಗಳಸಂಗ್ರಹ ಚೆನ್ನಾಗಿದೆ.
  ಕುಂದಗನ್ನಡ ಶಬ್ದ ಉಪಯೋಗ ಕಡ್ಮಿ ಆತಾ ಇತ್ತೊ ಏನೊ ಅಂತಹೇಳಿ ಅನುಮಾನ ಸುರ್ ಆಯಿತ್ ಮಾರಾಯ್ರೆ.

 2. jayarama shetty ಹೇಳುತ್ತಾರೆ:

  yar abbi hattren ? nammabbi olgidr saak
  kannathare busnena collection, adaki bali hangthe
  nimma conducter ticketkodudilla , hola jaganna
  jdkal rotea

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s