Archive for ಜುಲೈ 7, 2008

ಆಟದ್ ಹೇಳ್ಕಿ

Posted: ಜುಲೈ 7, 2008 in ಯಕ್ಷಗಾನ

 

ನಾ ಬ್ಲಾಗಿಗೆ ಬರಿದೆ 2-3 ವಾರ ಆಯ್ತಾ ಕಾಣತ್. ಸ್ವಲ್ಪ ಹುಶಾರಿರ್ಲಿಲ್ಲ. ಅದ್ಕೆ ನಾಕ್ ದಿನ ಊರ್ ಬದಿಗೆ ಹೋಯಿ ಇದ್ದಿದೆ. ಆ ಹೆಳಿ ಮೇಲಾರೂ ಊರಿನ್ ಮಳ್ಗಾಲದ್ ರಾಪ್ ಸ್ವಲ್ಪ ಕಾಂಬುಕ್ ಸಿಕ್ತ್. ಅದ್ರೊಟ್ಟಿಗೆ ಹೊಂಡ ರಸ್ತೆಯ ಒಳಗೋ ರಸ್ತೆ ಹೊಂಡದ ಒಳಗೋ… ಹೊಂಡ ರಸ್ತೆಗಳೆರಡು ಕೆಸರು ಗೆದ್ದಿಯೊಳಗೋ ಅಂಬ ಅನ್ಮಾನ ಸತೆ ಶುರುವಾಯಿತ್. ಇನ್ನ್ ಮೇಲೆ ಬ್ಲಾಗಿಗೆ ವಾರಕ್ ಒಂದಾರೂ ಬರಿಕ್ ಅಂದೇಳಿ ಎಣ್ಸ್‌ಕಂಡಿದೆ.

 

ಮೊನ್ನೆ ನಾಕನೇ ತಾರೀಕಿಗೆ ಬೆಂಗ್ಳೂರಗೆ ನಾ ಹೇಳ್ದಾಂಗೇ ಪೆರ್ಡೂರ್ ಮ್ಯಾಳದ ಆಟ ಶುರು ಆಯ್ತ್. ನಾನ್ 5ನೇ ತಾರೀಕ್ ಆಟ ಕಾಂಬುಕೆ ರವೀಂದ್ರ ಕಲಾಕ್ಷೇತ್ರಕ್ ಹೊಯಿದೆ. ಆರೆ ಒಂದ್ ಬೇಜಾರ್ ಅಂದ್ರೆ ಹಾಸ್ಯ ಚಕ್ರವರ್ತಿ ಅಂದೇಳಿ ಅಭಿಮಾನಿಗಳಿಂದ ಕರ್ಸ್‌ಕಂತಿದ್ದಿದ್ದ ರಮೇಶ್ ಭಂಡಾರಿ ಅವ್ರಿಗೆ ಕಾಲ್ ಫ್ರ್ಯಾಕ್ಚರ್ ಆಯಿ ಅವ್ರು ಇನ್ನೊಂದ್ ತಿಂಗ್ಳ್ ವೇಷ ಹಾಕು ಹಾಂಗ್ ಇಲ್ಲ ಅಂಬ್ರ್. ಅವ್ರು ಬೇಗ್ ಹುಶಾರ್ ಆಯಿ ವೇಷ ಹಾಕುಹಾಂಗ್ ಆಯ್ಲಿ ಅಂದೇಳಿ ಹಾರೈಸುವ. ಅವ್ರಿಲ್ದೆ ಆಟಕ್ ಕಳಿ ಕಟ್ಟುದೆ ಇಲ್ಲ ಅಂದೇಳಿ ಅನ್ಸದ್ ಸುಳ್ಳಲ್ಲ.

 

ಆಟಕ್ ಹೋದನಿಗೆ ಆಟ ಏಗ್ಳಿಕೆಲ್ಲಾ ಇತ್ತ್ ಅಂದೇಳಿ ಪಟ್ಟಿ ಸಿಕ್ಕಿತ್. ಆಟ ಕಾಂಬುಕೆ ಹೋಪರ್ ಇದ್ರೆ ಅವ್ರಿಗೆ ಅನ್ಕೂಲ ಆಯ್ಲಿ ಅಂದೇಳಿ ನಿಮ್ಗೆ ಇಲ್ಲಿ ಪಟ್ಟಿ ಕೊಡ್ತಾ ಇದ್ದೆ.

 

7 ಜುಲೈ  ಬೆಳ್ಳಿ ನಕ್ಷತ್ರ

9 ಜುಲೈ  ಚಿತ್ತ ಚಂಚಲೆ

11 ಜುಲೈ  ಗಿರಿ ಕನ್ಯೆ

12 ಜುಲೈ  ಚಿತ್ತ ಚಂಚಲೆ

14 ಜುಲೈ  ಶಿರ್ಡಿ ಸಾಯಿಬಾಬ

16 ಜುಲೈ  ನಾಗವಲ್ಲಿ

18 ಜುಲೈ  ಬೆಳ್ಳಿ ನಕ್ಷತ್ರ

19 ಜುಲೈ  ವರ್ಣ ವೈಭವ

 

ಮತ್ತೂ ಹೆಚ್ಗಿ ಎಂತಾರೂ ಗೊತ್ತಾಯ್ಕಿದ್ರೆ ಉದಯವಾಣಿ ಕಾಣಿ.