ನಮ್ ಭಾಷಿ ಚಂದವೇ ಬೇರೆ ಕಾಣಿ…

Posted: ಮೇ 11, 2008 in ನಮ್ ಊರ್ ನಮ್ಗ್ ಚಂದ
ಟ್ಯಾಗ್ ಗಳು:, , , ,

ನಂಗಂತೂ ನಮ್ ಕುಂದಾಪ್ರ ಕನ್ನಡ ಕೇಂಡ್ರೆ ಅಷ್ಟಿಷ್ಟ್ ಖುಷಿ ಆಪುದಲ್ಲ ಗೊತ್ತಿತ?

ಅದ್ರಗೂ ಈಗ ಕೆಲ್ಸ ಮಾಡುಕ್ ಅಂತೆಳಿ ಊರ್ ಬಿಟ್ಟ್ ಬೆಂಗ್ಳೂರ್ ಸೇರ್ಕಂಡ್ ಮೇಲೆ ಯಾರೆ ಕುಂದಾಪ್ರದರ್ ಸಿಕ್ರೂ ಅವ್ರನ್ ಒಂದ್ಸಲ ಕುಂದಾಪ್ರ ಕನ್ನಡದಗೆ ಮಾತಾಡ್ಸ್‌ದಿದ್ರೆ ಸಮಾಧಾನವೇ ಆತಿಲ್ಲ. ಬೆಂಗ್ಳೂರಾಗಂತೂ ಬಿಡಿ ಆ ಭಾಷಿ ಈ ಭಾಷಿ ಅಂತೇಳಿ ಎಲ್ಲಾರೂ ಸೇರ್ಕಂಡ್ ಬೆಂಗ್ಳೂರ್ ಕನ್ನಡ ಅಂಬುದ್ ಒಳ್ಳೇ ಕಿಚಿಡಿ ಆದ್ ಕಂಡ್ಮೇಲೆ…ಇನ್ನೂ ಗಮಗಮ ಅಂತೆಳಿ ಪರಿಮಳ್ ಬಪ್ಪ ಕುಂದಗನ್ನಡ ಕೆಮಿ ಮೇಲೆ ಬಿದ್ರೆ ಆಪ್ ಖುಷಿ ಬಾಯ್ಮಾತಗೆ ಹೇಳುಕೆ ಆತಿಲ್ಯೇ..

 

ಕೆಲವ್ರೆಲ್ಲ ಇದ್ರ್ ಕಾಣಿ ಅವ್ರಿಗೆ ಕುಂದಾಪ್ರ ಕನ್ನಡದಗೆ ಮಾತಾಡುಕೆ ನಾಚ್ಕಿ ಆತ್ ಅಂಬ್ರ್. ಅಲ್ಲ ಈ ಬೇರೆ ಭಾಷಿಯರೆಲ್ಲ ಬಂದು ಅವ್ರವ್ರ ಭಾಷೆಯಗೆ ಮಾತಾಡುವತಿಗೆ ನಮ್ ಭಾಷಿ ಮಾತಾಡುಕೆ ನಮ್ಗೆ ಎಂತಕೆ ನಾಚ್ಕಿ ಆಯ್ಕ್ ನೀವೇ ಹೇಳಿ ಕಾಂಬ. ಅವ್ರಿಗೆಲ್ಲ ಆಗ ಇದೇ ಕುಂದಾಪ್ರ ಕನ್ನಡದಗೆ ಎಲಿಮೆಂಟ್ರಿ ಕಲ್ತದ್, ಇದೇ ಕುಂದಾಪ್ರ ಕನ್ನಡದಗೆ ಹೈಸ್ಕೂಲಗೆ ಪಾಠ ಕೇಂಡದ್ ಎಲ್ಲ ನೆನಪೇ ಹೋಯಿತ್ತಾ ಹಂಗಾರೆ? ಒಂದ್ನಾಕ್ ವರ್ಷ ಊರ್ ಬಿಟ್ರ್ ಕೂಡ್ಳೇ ಟುಸ್ ಪುಸ್ ಅಂದೇಳಿ ಇಂಗ್ಲೀಷ್ ಹಾರ್ಸುಕೆ ಕಲ್ತ್ ಕೂಡ್ಲೇ ಹುಟ್ಟಿನ ಲಾಗಾಯ್ತೂ ಆಡ್ಕಂಡ್ ಬಂದ ಭಾಷಿ ನೆನ್ಪ್ ಹೋತ್ ಅಂತಾರೆ ನಾಳಿಗ್ ಇವ್ರ್ ದೊಡ್ ಮನ್‌ಷ್ರು ಅನ್ಸ್ಕಂಬತಿಗೆ ಹೆತ್ ಅಪ್ಪ ಅಮ್ಮನ್ ನೆನ್ಪ್ ಆರು ಇರತ್ ಅಂದೇಳಿ ಏನ್ ಗ್ಯಾರಂಟಿ ಮಾರಾಯ್ರೆ…?

 

ಅದೆಲ್ಲ ಇರ್ಲಿ ಬಿಡಿ… ಇನ್ಮೇಲೆ ಪುರ್ಸೊತ್ತ್ ಸಿಕ್ದಾಗ್ಳಿಕೆಲ್ಲ ಕುಂದಾಪ್ರ ಕನ್ನಡದಗೆ ಎಂತಾರು ಒಂದಿಷ್ಟ್ ಬರುವ ಅಂದೇಳಿ ಮಾಡಿದ್ನೇ… ಓದಿ. ಲಾಯ್ಕ್ ಇದ್ರೆ ನಂಗೆ ಒಂದ್ಮಾತ್ ಹೇಳಿ…

 

ಒಂದ್ ಮಾತ್ ಮಾತ್ರ ನಾವೆಲ್ಲ ನೆನ್ಪಿಟ್ಕಣ್ಕಾದ್ ಅಂದ್ರೆ… ನೀವ್ ಯಾವ್ ಭಾಷಿ ಬೇಕಾರು ಕಲಿನಿ, ಎಲ್ಲಿಗ್ ಬೇಕಾರೂ ಹೋಯ್ನಿ ಆರೆ ನಮ್ ಭಾಷಿ, ಊರನ್ ಮಾತ್ರ ನೆನ್ಪ್ ಬಿಡ್ದಿದ್ರ್ ಸೈ.

 

ಹುಟ್ಟ್ರೆ ಕುಂದಾಪ್ರದಗೆ ಹುಟ್ಕ್

ಆಡ್ದ್ರೆ ಕುಂದಾಪ್ರ ಕನ್ನಡದಗೆ ಮಾತಾಡ್ಕ್,

ಬದ್ಕಿದ್ ಎತ್ತಿನ ಗಾಡಿ,

ಇದು ವಿಧಿ ಒಡ್ಸುವ ಗಾಡಿ….

ನನ್ ಮಾತ್ನ ನೀವ್ ಮರಿ ಬೇಡಿ…

ಕುಂದಾಪ್ರ ಕನ್ನಡವ ನೀವ್ ಮಾತಾಡಿ

 

Advertisements
ಟಿಪ್ಪಣಿಗಳು
  1. Ganesh ಹೇಳುತ್ತಾರೆ:

    nange baari kushi aat mare,namma bashi oduke….

  2. K G Hebbar ಹೇಳುತ್ತಾರೆ:

    ನಮಸ್ಕಾರ,
    ನಾವಾಡು ಭಾಷೆ ಯೂ ನೀವಾಡು ಭಾಷೆಯೂ ಸ್ವಲ್ಪ ಹತ್ರ ಹತ್ರ, ನಮ್ಮದ್ ಉಡ್ಪಿ ಕಡೆಯೋರ್ ಆಡು ಕುಂದಾಪ್ರ ಭಾಷೆಗ್ ಹತ್ರ ಅದ ಭಾಷೆ, ಹಾಂಗೈ ನಿಮ್ ಅಭಿಪ್ರಾಯವು ನನ್ನ ಅಭಿಪ್ರಾಯವು ಅದೇ, ನಾವ್ ಎಲ್ಲಿಗ್ ಹೋದರು ನಂ ಭಾಷೆ ಮರಿಯುಕಾಗ, ಅದನ್ನ ಉಳ್ಸಿ ಬೆಳ್ಸ್ಕ್.

  3. ಪ್ರದೀಪ ಅಡಿಗ ಹೇಳುತ್ತಾರೆ:

    ಇದನ್ ಕಂಡ್ ಭಾರೀ ಖುಷಿ ಆಯ್ತ್. ಹೀಂಗೇ ಬರಿತಿರಿ.

  4. Shivaram ಹೇಳುತ್ತಾರೆ:

    Very good stuffs Kannanthre!! Good to see you in this passion!! Well done

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s