Posts Tagged ‘kundapura kannada’

ರಿಷಿ ಸಿನಿಮಾದ “ನಾನು ಒತ್ತಾರೆ ಎದ್ಬಿಟ್ಟು…” ಹಾಡನ್ನು ಕುಂದಾಪ್ರ ಬದಿ ಕೆಲ್ಸದ್ ಹೆಣ್ಣ್ ಮತ್ತ್ ಮನಿ ಯಜ್ಮಾನ್ತಿ ಮಾತಾಡುವಂಗೆ ಬರ್ದ್ರೆ ಹ್ಯಾನ್ಗಿರತ್ತ್ ಕಾಣಿ… ಈ ಪದ್ಯ ಕೇಂತಾ ಓದ್ರೆ ಇನ್ನೂ ಲಾಯ್ಕಿರತ್ತ್.. ಅದ್ಕೆ ಪದ್ಯದ ವಿಡಿಯೋ ಇಲ್ಲೇ ಪೋಸ್ಟಿನ ತುದಿಯಲ್ ಹಾಕಿದೆ ಕಾಣಿ…. ನಾಳೆ ಬೆಳ್ಮುಚ್ ಬೇಗೆದ್ದು..ಬಚ್ಲ ಒಲಿಗೆ ಕಿಚ್-ಒಟ್ಟಿ..ಗಂಟಿ ಎಬ್ಬಿ ಬರ್ಕ್ ಹೆಣೆ… ಚೂರ್ ಚಾ ಇದ್ರೆ ಕುಡ್ಕಂಡ್ ..ಆಂಗ್ಳಕ್ಕೆ ನೀರ್ ಹಾಕಿ… ರಂಗೋಲಿ ಹಾಕ್ಕ್ ಹೆಣೆ… ಹಾಡಿ ಬದಿಗೋಯಿ ಗುಡ್ಸ್ಕಂಡ್ …ದರ್ಲಿ ಒಟ್ಟ್-ಮಾಡ್ಕಂಡ್… ಗೆದ್ದಿಗ್ [...]

ರಿಷಿ ಸಿನಿಮಾದ ನಾನು ಒತ್ತಾರೆ ಎದ್ಬುಟ್ಟು…ಹಾಡು ಕುಂದಾಪ್ರಕ್ಕೆ ಬಂದ್ರೆ…ಹೀಂಗ್ ಆತ್ತ್ ಕಾಣಿ… ರಾಜು ಅನಂತ ಸ್ವಾಮೀ ಹಾಡಿದ್ ಈ ಪದ್ಯ ಕಂಡ್ರೆ ನಂಗೆ ಮಸ್ತ್ ಖುಷಿ… ಈ ಪದ್ಯ ಕೇಂತಾ ಓದ್ರೆ ಇನ್ನೂ ಲಾಯ್ಕಿರತ್ತ್.. ಅದ್ಕೆ ಪದ್ಯದ ವಿಡಿಯೋ ಇಲ್ಲೇ ಪೋಸ್ಟಿನ ತುದಿಯಲ್ ಹಾಕಿದೆ ಕಾಣಿ…. ನಾನು ಬೆಳ್ಮುಚ್ ಎದ್ಕಂಡ್..ನಿನ್ ಸೊಡ್ಡ್ ಕಂಡ್ಕಂಡ್.. ಕೈ ಮುಕ್ಕಂಡ್ ನಿಂತ್ಕಂತೆ ಹೆಣೆ… ಬೇಗ ಚಾ ಕಣ್ಣ್ ತಂದ್ಕೋಟ್ಟು.. ನಿನ್ ಕಾಲ ಬುಡ್ದಗಿಟ್ಟು… ಚೂರ್-ಚೂರೆ ಕುಡ್ಸ್ತೆ ಹೆಣೆ… ಚಾಕ್ ಸಕ್ರಿ ಕಮ್ಮಿ [...]

“ನೆನಪಿರಲಿ” ಪಿಚ್ಚರಿನ ಕೂರಕ್ ಕುಕ್ರಳ್ಳಿ ಕೆರೆ ಹಾಡು…ಕುಂದಾಪ್ರ ಸ್ಟೈಲಗೆ … (ಅಣಕ ಬರದ್ದ್ -ವಿಜಯರಾಜ್ ಕನ್ನಂತ) ಎಲ್ಲಾ ಹಕ್ಕು ಕಾಯ್ದಿರಿಸಲಾಗಿದೆ ಹ್ವಾಯ್ ಯಾರದ್ ಹೆದ್ರಕಂಬರ್ …ಅಂಡ್ಕಂಬರ್ ಹೊಕ್ಕಂಬರ್ , ಮಂಡಿ ಜಪ್ಕಂಬರ್, ಹಳೀನ್ ಹಿಂಡಲಗೆ ಮಾತಾಡ್ವರ್, ಸಂತಿಯಗೆ ಪಿಸಿ-ಪಿಸಿ ಅಂಬರ್ ಕುಂದಾಪುರ್ದಂತ ತಾಲೋಕಗೆ ಆಯ್ಕಂಡ್ ಕಾಂಬುಕ್ ಬೇಕಾದ್ದೆಲ್ಲ ಇದ್ದೂ ಹೊಳಿ,ಕಾಡ್ ಗುಡ್ಡಿ ಇದ್ರೂ, ಪ್ರೀತಿ ಮಾಡುಕ್ ಜಾಗ ಇದ್ರೂ ಕಳ್ರ ಕಣಂಗೆ ಮಿಣ್ಣಗೆ ಹೊತ್ರ್ಯಲ್ಲ… ಬನಿಯೇ.. ಇಲ್ಕಾಣಿಯೇ … ನಾನ್ ಲವ್ ಮಾಡು ಸ್ಟೈಲ್ ಒಂಚೂರ್ ಕಲಿನಿಯೇ [...]

ಹ್ವಾಯ್ ಇದೆಂತ ದರ್ಶಿನಿ ಹೋಟ್ಲಗೆ ಜೀರಾ ರೈಸು, ಘೀ ರೈಸು ಅಂದೇಳಿ ಬೋರ್ಡ್ ಬರ್ದ್ ಹಾಕಿದಂಗಿತ್ತಲೆ.. ಎಂತಾ ಮರಾಯ್ರೆ ಹೋಟ್ಲ್ ಗೀಟ್ಲ್ ಇಟ್ಟಿರ್ಯಾ ಎಂತ ಕತಿ ಅಂದೇಳಿ ಮಂಡಿ ಗಿಂಡ್ಕಂಬ್ಕೆ ಶುರು ಮಾಡ್ಬೇಡಿ… ಹೋಟ್ಲ್ ಇಟ್ಟರೇ ಈಗ ಹ್ಯಾಂಗ್ ಸುಧಾರ್ಸುದಂದೇಳಿ ಮಂಡಿ ಬಿಶಿ ಮಾಡ್ಕಂಡಿದ್ರ್ ಮರ್ರೆ..ನೀವ್ ಎಂತದೋ ಹೇಳ್ತ್ರಿ… ಮತ್ತೆಂತ ಅಲ್ಲ ಇದ್ ನಾನ್ ಇವತ್ತ್ ಹಿಡ್ಕಂಡ್ ಬಂದ್ ಕುಂದಾಪ್ರ ಕನ್ನಡ ಶಬ್ದ. ಈ ಶಬ್ದದ್ ಕತಿ ಎಂತ ಕಾಂಬ ಬನಿ ಹಂಗಾರೆ… ರೈಸು = ಗಡದ್ದಾಗಿರು, [...]

ಅಂದಾಂಗೆ ನಾಡ್ದ್ ಹನ್ನೊಂದ್ನೇ ತಾರೀಕ್ ಬಂದ್ರೆ ಬ್ಲಾಗಿಗೆ ಮೂರ್ ವರ್ಷ ಆತ್ತ್. ಇಷ್ಟ್ ದಿನ ಹ್ಯಾಂಗಿದ್ರೂ ಬ್ಲಾಗಿಗೆ ಉಪ್ವಾಸವೇ ಆಯ್ತ್. ಹುಟ್ದಬ್ಬನಾರೂ ಗಡ್ಜಾಯಿ ಮಾಡಿ ಹೊಟ್ಟಿ ತುಂಬಾ ಊಟ ಹಾಕುದ್ ಬ್ಯಾಡ್ದಾ ಹಂಗಾರೆ…. ಅದಕ್ಕೇ ಇವತ್ತ್ ಅರ್ಧ ದಿನ ಕೂತ್ಕಂಡ್ ಹುಟ್ದಬ್ಬಕ್ಕೆ ಅಡ್ಗಿ ಮಾಡದ್ದೇ ಮಾಡದ್ದ್…. ನೀವೂ ಬಂದ್ ಒಂದೆರ್ಡ್ ತುತ್ತ್ ತಿನ್ಕಂಡ್ ಹೋರೆ ನಂಗೂ ಖುಶಿಯಾತ್ತ್ ಕಾಣಿ.. ಹುಟ್ದಬ್ಬಕ್ಕೆ ಬರೀ ಕೈ ಬೀಸ್ಕಂಡ್ ಬರ್ಬೆಡಿ.. ಎಂತಾರೂ ಹಿಡ್ಕಂಡ್ ಬನಿ… ಅಂದ್ರೆ ಓದಿ ನಿಮ್ಮ ಅಭಿಪ್ರಾಯ ನಂಗ್ ಹೇಳ್ರೆ ಅದೇ ನೀವ್ ಕೊಡು ಉಡ್ಗ್ರಿ… :-)

ಪುರ್ಸೊತ್ತಿದ್ದಾಗ್ಳಿಕೆ ಬರುಕ್ ಉದಾಶಿನ, ಬರುಕ್ ಉಮೇದ್ ಬಂದಾಗ್ಳಿಕೆ ಪುರ್ಸೋತ್ತಿಲ್ಲ ಹಾಂಗಿನ್ ಕತಿ ಆಯ್ತ್ ಕಾಣಿ ಆರೂ ಈ ಸರ್ತಿ ಬರೀದೆ ಬಾಳ ಸಮಿ ಆಯ್ತ್. ಇನ್ ಬರಿದಿದ್ರೆ ಆಪ್ದಲ್ಲ ಅಂದೇಳಿ ನಿನ್ನೆ ಬರುಕ್ ಕೂಕಂಡೆ… ಒಂದ್ ಅರ್ಧ ದಿನದ ಮೇಲ್ ಆಯ್ತ್ ಇದನ್ನೆಲ್ಲಾ ಬರ್ದ್ ಮುಗ್ಸುವತ್ತಿಗೆ. ಬರ್ದ್ ಮುಗ್ಸ್ರ್ ಮೇಲೆ ನಂಗಂತೂ ಖುಷಿ ಆಯ್ತ್, ನಿಮ್ಗೂ ಅದ್ರಗೆ ಅರ್ಧ ಪಾಲ್ ಖುಷಿ ಸಿಕ್ರೆ..ನಾ ಬರದ್ದಕ್ಕೂ ಒಂದ್ ಲೆಕ್ಕ, ಎಂತ ಅಂತ್ರಿ? ಇನ್ನೊಂದಿಷ್ಟ್ ಕುಂದಾಪ್ರ ಕನ್ನಡ ಶಬ್ದ ಕಾಂಬ ಬನಿ ಹಂಗಾರೆ [...]

ಹೀಂಗೆ ಇಂಟರ್ನೆಟ್ಟಗೆ ಗಿರಕಿ ಹೊಡಿತಿಪ್ಪತಿಗೆ… ಪಾಲಚಂದ್ರ ಅವ್ರದ್ದ್  ಬ್ಲಾಗ್ ಕಾಮ್ಬುಕೆ ಸಿಕ್ತ್… ತಾರೆ ಜಮಿನ್ ಪರ್ ಪಿಚ್ಚರಿದ್ ಒಂದ್ ಪದ್ಯ ಕುಂದಾಪ್ರ ಕನ್ನಡದಗೆ ‘ನನ್ನಬ್ಬಿ’  ಅಂದೇಳಿ ಬರದ್ದ್ ಓದುಕ್ ಸಿಕ್ತ್… ನೀವೂ ಓದಿ ಕಾಣಿ… ಇಲ್ಲ್ ಅದ್ರದ್ದ್ ಲಿಂಕ್ ಕೊಟ್ಟಿದೆ http://palachandra.blogspot.com/2009/06/blog-post_25.html ಹಾಂಗೆ ಕುಂದಾಪ್ರ ಸಂತಿದ್ ಒಂದಿಷ್ಟ್ ಫೋಟೋ ಸತೆ ಹಾಕಿದ್ರ್… ಅದನ್ನ್ ಕಾಣ್ಕಿದ್ರೆ ಇಲ್ಲಿಗ್ ಹೋಯ್ಕಾಣಿ… ಪಟ ಮಾತ್ರಾ ಭಾರಿ ಲಾಯ್ಕ್ ಬಂದಿತ್.. ಹೌದಾ ಸುಳ್ಳಾ ಬೇಕಾರ್ ನೀವೇ ಕಾಣಿ http://palachandra.blogspot.com/search/label/ಕುಂದಾಪುರ

ಕುಂದಾಪ್ರ ಬದಿ ಶಬ್ದ ಕೆಮಿ ಮೇಲ್ ಬೀಳ್ದೆ ಸುಮಾರ್ ದಿನ ಆಯ್ತಮಗಿತ್ತಲ್ಲ… ಇಲ್ಲೊಂದೆರ್ಡ್ ಇತ್ತ್ ಕಾಣಿ.. ಜೀವ್ ಬಿಡ್ತ – ಈ ಶಬ್ದ ಕುಂದಾಪ್ರ ಕನ್ನಡದ್ದ್ ಮಾತ್ರ ಅಂತ ಹೇಳುಕಾತಿಲ್ಲ. ಬೇರೆ ಬೇರೆ ಬದಿಯಗ್ ಸತೆ ಇದೆ ನಮನಿ ಶಬ್ದ ಕೆಲವ ಇತ್ತ್. ಇದಕ್ಕೆ ಅರ್ಥ ಹೇಳುದಾರೆ ಪಂಚಪ್ರಾಣ ಅಂಬುದ್ ಸರಿ ಆತ್ತಾ ಕಾಣತ್ತ್ ಬಳಕೆ – ೧. ಅವನಿಗೆ ಮಾಯ್ನಣ್ಣ್ ಅಂದ್ರ್ ಸೈ… ಜೀವ್ ಬಿಡ್ತ ( ಬೇಕಿದ್ರೆ ನಿಮ್ಮ್ ನಿಮ್ಮ್ ಅನ್ಕೂಲಕ್ಕೆ ಮಾಯ್ ಹೆಣ್ಣ್ ಅಂದೆಳಿ ಬೇಕಾರ್ ಓದ್ಕಂಬುಕೆ ಅಡ್ಡಿಲ್ಲ) ೨. ಅವ್ಳ್ ಮಕ್ಳ್ [...]

ಬರೀ ಕುಂದಾಪ್ರ ಕನ್ನಡದಗೆ ಮಾತ್ರ ಎಂತಕೆ , ಈಗ ಯಾವ್ ಕನ್ನಡದಗೂ ಇಪ್ಪುದ್ ಇಂಗ್ಲೀಷೆ ಅಲ್ದಾ. ಯಾರಾರೂ ಶುದ್ಧ ಕನ್ನಡ ಮಾತಾಡುವರ್ ಇದ್ರೆ ಹುಡ್ಕಿ ಕೊಡಿನಿ ಕಾಂಬ ಹಂಗಾರೆ  ಅಂದೇಳಿ  ನೀವ್ ಕೆಂಬ್ಕೂ ಸಾಕ್.  ಅದ್ರಗೂ ಬೆಂಗಳೂರಗೆ ಹಾಂಗಿನರ್ ಯಾರಾರೂ ಇದ್ರೆ ಅವ್ರಿಗೆ ರಾಜ್ಯೋತ್ಸವ ಪ್ರಶಸ್ತಿಯೇ ಕೊಡ್ಲಕ್ಕ್ ಅಂತ್ ನೀವ್ ಹೇಳುಕೂ ಸಾಕ್.  ಆರೇ ನಾ ಹೇಳುಕ್ ಹೊರಟದ್ದ್ ಅದ್ ಅಲ್ದೆ… ಒಂದ್ ಇಂಗ್ಲಿಷ್ ಶಬ್ದ ಕುಂದಾಪ್ರ ಕನ್ನಡದೊಳಗೆ ಬಂದ್ ಕೂಕಂಡಿತ್. ಆ ಶಬ್ದ ಯಾವ್ದ್ ಅಂದೇಳಿ ನೆನ್ಪ್ ಮಾಡ್ಕಂಕಿದ್ರೆ [...]

ಹಿಲಾಲ್ ಹಿಡಿ, ದಾನಿ ಸೊಳಿ ಅಂತಾ ಇಪ್ಪುದ್, ಚಂಯ ಚಂಯ ಅಂಬುದು   ಹಿಲಾಲ್ ಹಿಡಿ, ಹಿಲ್ಲಾಲ್ ಹಿಡಿ – ತಮಾಷೆ ಮಾಡು, ಗೇಲಿ ಮಾಡು ಹಿಲಾಲು ಶಬ್ದದ್ ಅರ್ಥ ನಿಜವಾಯಿ ಕಾಂಬುಕೆ ಹೋರೆ -‘ಬಟ್ಟೆಯನ್ನು ಎಣ್ಣೆಯಲ್ಲಿ ನೆನೆಸಿ ಮಾಡಿದ ದೊಂದಿ’ ಅಂತಿತ್ತ್. ದೇವ್ರ್ ಮೂರ್ತಿ ಉತ್ಸವದ್ ಸಮಿಗೆ ರಾತ್ರಿ ಹಿಡಿತ್ರಲ ಆ ನಮನಿ ದೊಂದಿ. ಬೌಶ ಇದು ಮಾಡದ್ ತಪ್ಪನ್ ಬೆಳ್ಕಿಗೆ ಹಿಡುದ್ ಅಂಬ್ ಅರ್ಥದಗೆ ಬಂದ ನುಡಿಕಟ್ ಅಂದೇಳಿ ಕಾಣತ್   ಬಳಕೆ – [...]

  ಪಕ್ತಾ, ಫಕ್ತಾ – ಬರೀ   ಇದ್ ಬಂದದ್ ಮರಾಠಿ ಮೂಲದಿಂದ. ಮೂಲ ಶಬ್ದ ‘ಫಕ್ತ್’.   ಬಳಕೆ – ೧.         ಅವ್ನಿಗೆ ಪಕ್ತಾ ಆಡು ಗಿರ ಬಿಟ್ರೆ ಮತ್ತೆಂತ ಇಲ್ಲ( ಏಗ್ಳಿಕೆ ಕಂಡರೂ ಅಂತ ಬೇಕಾರ್ ಅರ್ಥ ಮಡ್ಕಂಬ್ಕೆ ಅಡ್ಡಿಲ್ಲ) ೨.         ಅವ ಇತ್ತಿತ್ಲಾಯಿ ಪಕ್ತಾ ಸುಳ್ಳ್ ಹೇಳುಕ್ ಕಲ್ತಿದ   ಹತ್ತಾ, ಹತ್ತ – ಪೂರ್ಣ, ಸಂಪೂರ್ಣ   ಬಳಕೆ – ೧.         ಸ್ನಾನಕ್ಕೆ ಹೋದನು ನೀರ್ ಹತ್ತ ಕಾಲಿ ಮಾಡ್ಬೆಡ. ನಂಗೂ [...]

ಭಾಷೆಯೊಂದು ಜೀವನದಿಯಂತೆ. ತನ್ನ ಹರಿವಿನುದ್ದಕ್ಕೂ ಬಂದು ಸೇರುವ ಅಸಂಖ್ಯಾತ ಹಳ್ಳ-ತೊರೆಗಳನ್ನು ಅಂತರ್ಗತವಾಗಿಸಿಕೊಂಡು ಮೈದುಂಬಿ ಹರಿಯುವ ನದಿಯಂತೆಯೇ ಭಾಷೆಯೂ ಕೂಡಾ ಆಯಾ ಪ್ರದೇಶಕ್ಕೇ ಸೀಮಿತವಾದ ಪದ, ಗಾದೆ, ನುಡಿಗಟ್ಟುಗಳನ್ನು ಸೇರಿಸಿಕೊಂಡು ಸಮೃದ್ಧವಾಗುತ್ತದೆ. ಕುಂದಾಪುರ ಕನ್ನಡಕ್ಕೇ ಸೀಮಿತವಾದ ಕೆಲವು ವಿಶೇಷ ಪದಗಳನ್ನಿಲ್ಲಿ ನೋಡೋಣ.   ಚರ್ಗಿ ಭರ್ತಿ           –           ದಂಡ ಪಿಂಡ, ಅಪ್ರಯೋಜಕ   ಬಳಕೆ: ಆ ಕೆಲ್ಸ ಮಾಡುಕ ಅವ್ನ್ ಕೈಯ್ಯಗೆ ಆತ್ತಾ? ಅವ ಏನಿದ್ರೂ ಚರ್ಗಿ ಭರ್ತಿಗೇ ಸೈ   ಹನಿ ಹಂದುದಿಲ್ಲ       [...]