Posts Tagged ‘kundapur’

  ಸುಮಾರ್ ಊರ್ ಬದಿ ಫೋಟೋ ಸ್ಲೈಡ್ ಶೋ ಇತ್ತ್… ಲಾಯ್ಕಿತ್ತಾ ಕಾಣಿ ನಮ್ಮ ಕುಂದಾಪ್ರ ಭಾಗ -1 ನಮ್ಮ ಕುಂದಾಪ್ರ ಭಾಗ -2 ನಮ್ಮ ಕುಂದಾಪ್ರ ಭಾಗ -3  

“ನೆನಪಿರಲಿ” ಪಿಚ್ಚರಿನ ಕೂರಕ್ ಕುಕ್ರಳ್ಳಿ ಕೆರೆ ಹಾಡು…ಕುಂದಾಪ್ರ ಸ್ಟೈಲಗೆ … (ಅಣಕ ಬರದ್ದ್ -ವಿಜಯರಾಜ್ ಕನ್ನಂತ) ಎಲ್ಲಾ ಹಕ್ಕು ಕಾಯ್ದಿರಿಸಲಾಗಿದೆ ಹ್ವಾಯ್ ಯಾರದ್ ಹೆದ್ರಕಂಬರ್ …ಅಂಡ್ಕಂಬರ್ ಹೊಕ್ಕಂಬರ್ , ಮಂಡಿ ಜಪ್ಕಂಬರ್, ಹಳೀನ್ ಹಿಂಡಲಗೆ ಮಾತಾಡ್ವರ್, ಸಂತಿಯಗೆ ಪಿಸಿ-ಪಿಸಿ ಅಂಬರ್ ಕುಂದಾಪುರ್ದಂತ ತಾಲೋಕಗೆ ಆಯ್ಕಂಡ್ ಕಾಂಬುಕ್ ಬೇಕಾದ್ದೆಲ್ಲ ಇದ್ದೂ ಹೊಳಿ,ಕಾಡ್ ಗುಡ್ಡಿ ಇದ್ರೂ, ಪ್ರೀತಿ ಮಾಡುಕ್ ಜಾಗ ಇದ್ರೂ ಕಳ್ರ ಕಣಂಗೆ ಮಿಣ್ಣಗೆ ಹೊತ್ರ್ಯಲ್ಲ… ಬನಿಯೇ.. ಇಲ್ಕಾಣಿಯೇ … ನಾನ್ ಲವ್ ಮಾಡು ಸ್ಟೈಲ್ ಒಂಚೂರ್ ಕಲಿನಿಯೇ [...]

ಗಾಳಿಪಟದ “ಮಿಂಚಾಗಿ ನೀನು ಬರಲು” …ಕುಂದಾಪ್ರ ಕನ್ನಡದಗೆ…:) (- ಅನುವಾದ ವಿಜಯರಾಜ್ ಕನ್ನಂತ್ ) ಎಲ್ಲ ಹಕ್ಕು ಕಾದಿರಿಸಲಾಗಿದೆ :-) :-) ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ ನೀ ಇಲ್ದೆ ಕಿಚ್ಹ್ ಹಿಡ್ದಂಗಾಯಿ… ಎದಿಯೊಳಗೆ ಸೆಕಿಗಾಲ ಇನ್ನಿಲ್ಯೇ ನಂಗೆ ಉಳ್ಗಾಲ… ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ ನಾ ನಿನ್ ಕನ್ಸಿಗೆ… ಬಾಡ್ಗಿಗೆ ಬಂದಿದ್ನೆ… ತಿಂಗ್ಳ ಬಾಡ್ಗಿ ಕೊಟ್ ಹೋಪ್ಕೆ…ನಿಮ್ಮನಿಗೆ ಬತ್ತೆ ನಾ ನಾ ಸರ್ತ [...]

ಸುಮಾರ್ ಸಮಿಂದ ಎಣ್ಸ್ ಕಂಡಿದ್ದೆ… ಬ್ಲಾಗಗೆ ಯೇಗ್ಳೇಗ್ಳೋ ಬರದ್ದ್ ಕುಂದಾಪ್ರ ಕನ್ನಡ ಶಬ್ದ ಎಲ್ಲ ಒಟ್ಟ್ ಮಾಡಿ ಒಂದ್ ಬದ್ಯಗೆ ಇಟ್ರೆ ಒಳ್ಳೇದಾತ್ತಲ್ದಾ ಅಂದೇಳಿ… ಇವತ್ತ್ ಗಳ್ಗಿ ಕೂಡಿ ಬಂತ್… ಇಷ್ಟ್ ದಿನ ಬ್ಲಾಗಗೆ ಬರದ್ ಶಬ್ದ ಎಲ್ಲಾ ಒಟ್ಟ್ ಮಾಡಿ ಇಲ್ಲ್ ಕೊಟ್ಟಿದೆ.. ಇದ್ರಗೆ ನೊಂಗೂ ಒಂದ್ ’ಪಡಾವ್’ ಇತ್ತ್.!! ಹೊಸ್ತೆಂತಾರೂ ಬರುವತಿಗೆ, ಈ ಶಬ್ದ ಮೊದ್ಲೇ ಬ್ಲಾಗಗೆ ಬರ್ದಿನಾ ಇಲ್ಯಾ ಅಂದೇಳಿ ಹುಡ್ಕುಕ್ ಸುಲ್ಭ ಆಯಲ್ಯಾ? ನಿಮ್ಗ್ ಓದುಕ್ ಸಂತೆ ಎಲ್ಲ ಒಂದೆ ಬದ್ಯಗೆ [...]

ಹ್ವಾಯ್ ಇದೆಂತ ದರ್ಶಿನಿ ಹೋಟ್ಲಗೆ ಜೀರಾ ರೈಸು, ಘೀ ರೈಸು ಅಂದೇಳಿ ಬೋರ್ಡ್ ಬರ್ದ್ ಹಾಕಿದಂಗಿತ್ತಲೆ.. ಎಂತಾ ಮರಾಯ್ರೆ ಹೋಟ್ಲ್ ಗೀಟ್ಲ್ ಇಟ್ಟಿರ್ಯಾ ಎಂತ ಕತಿ ಅಂದೇಳಿ ಮಂಡಿ ಗಿಂಡ್ಕಂಬ್ಕೆ ಶುರು ಮಾಡ್ಬೇಡಿ… ಹೋಟ್ಲ್ ಇಟ್ಟರೇ ಈಗ ಹ್ಯಾಂಗ್ ಸುಧಾರ್ಸುದಂದೇಳಿ ಮಂಡಿ ಬಿಶಿ ಮಾಡ್ಕಂಡಿದ್ರ್ ಮರ್ರೆ..ನೀವ್ ಎಂತದೋ ಹೇಳ್ತ್ರಿ… ಮತ್ತೆಂತ ಅಲ್ಲ ಇದ್ ನಾನ್ ಇವತ್ತ್ ಹಿಡ್ಕಂಡ್ ಬಂದ್ ಕುಂದಾಪ್ರ ಕನ್ನಡ ಶಬ್ದ. ಈ ಶಬ್ದದ್ ಕತಿ ಎಂತ ಕಾಂಬ ಬನಿ ಹಂಗಾರೆ… ರೈಸು = ಗಡದ್ದಾಗಿರು, [...]

ಅಂದಾಂಗೆ ನಾಡ್ದ್ ಹನ್ನೊಂದ್ನೇ ತಾರೀಕ್ ಬಂದ್ರೆ ಬ್ಲಾಗಿಗೆ ಮೂರ್ ವರ್ಷ ಆತ್ತ್. ಇಷ್ಟ್ ದಿನ ಹ್ಯಾಂಗಿದ್ರೂ ಬ್ಲಾಗಿಗೆ ಉಪ್ವಾಸವೇ ಆಯ್ತ್. ಹುಟ್ದಬ್ಬನಾರೂ ಗಡ್ಜಾಯಿ ಮಾಡಿ ಹೊಟ್ಟಿ ತುಂಬಾ ಊಟ ಹಾಕುದ್ ಬ್ಯಾಡ್ದಾ ಹಂಗಾರೆ…. ಅದಕ್ಕೇ ಇವತ್ತ್ ಅರ್ಧ ದಿನ ಕೂತ್ಕಂಡ್ ಹುಟ್ದಬ್ಬಕ್ಕೆ ಅಡ್ಗಿ ಮಾಡದ್ದೇ ಮಾಡದ್ದ್…. ನೀವೂ ಬಂದ್ ಒಂದೆರ್ಡ್ ತುತ್ತ್ ತಿನ್ಕಂಡ್ ಹೋರೆ ನಂಗೂ ಖುಶಿಯಾತ್ತ್ ಕಾಣಿ.. ಹುಟ್ದಬ್ಬಕ್ಕೆ ಬರೀ ಕೈ ಬೀಸ್ಕಂಡ್ ಬರ್ಬೆಡಿ.. ಎಂತಾರೂ ಹಿಡ್ಕಂಡ್ ಬನಿ… ಅಂದ್ರೆ ಓದಿ ನಿಮ್ಮ ಅಭಿಪ್ರಾಯ ನಂಗ್ ಹೇಳ್ರೆ ಅದೇ ನೀವ್ ಕೊಡು ಉಡ್ಗ್ರಿ… :-)

ಹೈಲು/ ಹೈಲ್ = ಕಂಗಾಲು, ಹೈರಾಣ ಬಳಕೆ :   ೧.         ಈ ವರ್ಷ ಮಳೆ ಬಾರ್ದೆ ಬ್ಯಾಸಾಯ ಮಾಡುವರ್ ಯಾಪಾರ್ ಹೈಲ್ ಅಲ್ದೇ. ೨.         ಈ ಮಕ್ಕಳಿಗೆ ರಜಿಯಾರೂ ಎಂತಕ್ ಬತ್ತೋ ಏನೋ. ಅವ್ರನ್ ಸುಧಾರ್ಸುದ್ರೊಳ್ಗೆ ಅಲ್ದೇ ನಾ ಅರ್ಧ ಹೈಲ್ ಆದ್ದ್. ೩.         ಕೊಡಿ (ಕೊಡೆ) ತಕಂಡ್ ಹೋಪುಕೆ ನೆನ್ಪ್ ಹೋಯಿ, ಮಳೆಯಗ್ ಸಿಕ್ಕಿ ಬಿದ್ದ್ ನನ್ ಯಾಪಾರ ಹೈಲಾದ್ದ್ ಅಲ್ದಾ ಮಾರ್ರೆ   ಊಜು / ಊಂಜು/ ಸೀಬು/ ಸೀಂಬು = ಚೀಪು [...]

  ಕುಂದಾಪ್ರದ್ ಕಾರ್ಬಾರ್ ಎಲ್ಲಾ ತಿಳ್ಕಣ್ಕ್ ಅಂಬಗಿದ್ರೆ, ಕುಂದಾಪ್ರದ್ದೇ ಪೇಪರ್ ಓದ್ಕ್ ಅಲ್ದಾ? ಕುಂದಾಪ್ರ್‌ದ್ ಸುದ್ದಿ ವಾರ ವಾರವೂ ಕಾಣ್ಕಂಬಗಿದ್ರೆ ಈ ಲಿಂಕ್ ಕ್ಲಿಕ್ ಮಾಡಿ <http://kundaprabha.com> ವಾರದ್ ಬಿಸಿಬಿಸಿ ಸುದ್ದಿ ಒಟ್ಟಿಗೆ ಧಾರವಾಹಿ , ಕಥೆ , ಅಂಕಣ , ರಂಗೋಲಿ ಎಲ್ಲಾನು ಕಾಂಬುಕ್ ಸಿಕ್ಕತ್. ಪುರ್ಸೊತ್ತಾದ್ರೆ ಒಂದ್ ಗಳ್ಗಿ ಹೋಯಿ ಬಿಸಿ ಬಿಸಿ ಸುದ್ದಿ ಓದ್ಕಂಡ್ ಬನಿ.  

ಅಲ್ಲ ಮರಾಯ್ರೆ ಕುಂದಾಪ್ರದಗೆ ಈ ಸರ್ತಿ ಎಲೆಕ್ಷನ್ ಭಯಂಕರ ಟೈಟ್ ಅಂಬ್ರಲಾ ಹೌದೇ ಇದು? ಯಾರ್ ಬಾಯಗ್ ಕೇಂಡ್ರೂ ಒಂದೇ ಮಾತಪ್ಪಾ.. ಈ ಸರ್ತಿ ಯಾರ್ ಗೆಲ್ಲೂದ್ ಅಂದೇಳಿ ಈಗ್ಳೇ ಹೇಳುದ್ ಕಷ್ಟಾ ಮಾರ್ರೆ.. ಶೆಟ್ರಿಗೂ ಹೆಗ್ಡೆಯರಿಗೂ ಜೋರ್ ಫೈಟ್ ಇತ್ತ್ ಗೊತ್ತಿತಾ? ಯಾರ್ ಗೆದ್ರೂ ಮೂರ್ನಾಕ್ ಸಾವ್ರದ್ ಒಳ್ಗೇ ಕಾಣಿ ಬೇಕಾರೆ… ಎಂತಾರೂ ಓಟಿನ್ ಪೆಟ್ಗಿ ಬಿಚ್ಚುವರಿಗೆ ಎಂತದೂ ಹೇಳುಕ್ ಬತ್ತಿಲ್ಲ್ಯೇ…   ಅದೆಂತದೋ ಕ್ಷೇತ್ರ ವಿಭಜನೆ ಅಂಬ್ರಪ್ಪ. ಅದನ್ ಮಾಡಿ ನಮ್ ಬ್ರಹ್ಮಾವರದ್ ಹೆಗ್ಡಿಯರಿಗ್ [...]

ನಂಗಂತೂ ನಮ್ ಕುಂದಾಪ್ರ ಕನ್ನಡ ಕೇಂಡ್ರೆ ಅಷ್ಟಿಷ್ಟ್ ಖುಷಿ ಆಪುದಲ್ಲ ಗೊತ್ತಿತ? ಅದ್ರಗೂ ಈಗ ಕೆಲ್ಸ ಮಾಡುಕ್ ಅಂತೆಳಿ ಊರ್ ಬಿಟ್ಟ್ ಬೆಂಗ್ಳೂರ್ ಸೇರ್ಕಂಡ್ ಮೇಲೆ ಯಾರೆ ಕುಂದಾಪ್ರದರ್ ಸಿಕ್ರೂ ಅವ್ರನ್ ಒಂದ್ಸಲ ಕುಂದಾಪ್ರ ಕನ್ನಡದಗೆ ಮಾತಾಡ್ಸ್‌ದಿದ್ರೆ ಸಮಾಧಾನವೇ ಆತಿಲ್ಲ. ಬೆಂಗ್ಳೂರಾಗಂತೂ ಬಿಡಿ ಆ ಭಾಷಿ ಈ ಭಾಷಿ ಅಂತೇಳಿ ಎಲ್ಲಾರೂ ಸೇರ್ಕಂಡ್ ಬೆಂಗ್ಳೂರ್ ಕನ್ನಡ ಅಂಬುದ್ ಒಳ್ಳೇ ಕಿಚಿಡಿ ಆದ್ ಕಂಡ್ಮೇಲೆ…ಇನ್ನೂ ಗಮಗಮ ಅಂತೆಳಿ ಪರಿಮಳ್ ಬಪ್ಪ ಕುಂದಗನ್ನಡ ಕೆಮಿ ಮೇಲೆ ಬಿದ್ರೆ ಆಪ್ ಖುಷಿ [...]