Posts Tagged ‘kundapra’

“ನೆನಪಿರಲಿ” ಪಿಚ್ಚರಿನ ಕೂರಕ್ ಕುಕ್ರಳ್ಳಿ ಕೆರೆ ಹಾಡು…ಕುಂದಾಪ್ರ ಸ್ಟೈಲಗೆ … (ಅಣಕ ಬರದ್ದ್ -ವಿಜಯರಾಜ್ ಕನ್ನಂತ) ಎಲ್ಲಾ ಹಕ್ಕು ಕಾಯ್ದಿರಿಸಲಾಗಿದೆ ಹ್ವಾಯ್ ಯಾರದ್ ಹೆದ್ರಕಂಬರ್ …ಅಂಡ್ಕಂಬರ್ ಹೊಕ್ಕಂಬರ್ , ಮಂಡಿ ಜಪ್ಕಂಬರ್, ಹಳೀನ್ ಹಿಂಡಲಗೆ ಮಾತಾಡ್ವರ್, ಸಂತಿಯಗೆ ಪಿಸಿ-ಪಿಸಿ ಅಂಬರ್ ಕುಂದಾಪುರ್ದಂತ ತಾಲೋಕಗೆ ಆಯ್ಕಂಡ್ ಕಾಂಬುಕ್ ಬೇಕಾದ್ದೆಲ್ಲ ಇದ್ದೂ ಹೊಳಿ,ಕಾಡ್ ಗುಡ್ಡಿ ಇದ್ರೂ, ಪ್ರೀತಿ ಮಾಡುಕ್ ಜಾಗ ಇದ್ರೂ ಕಳ್ರ ಕಣಂಗೆ ಮಿಣ್ಣಗೆ ಹೊತ್ರ್ಯಲ್ಲ… ಬನಿಯೇ.. ಇಲ್ಕಾಣಿಯೇ … ನಾನ್ ಲವ್ ಮಾಡು ಸ್ಟೈಲ್ ಒಂಚೂರ್ ಕಲಿನಿಯೇ [...]

ಗಾಳಿಪಟದ “ಮಿಂಚಾಗಿ ನೀನು ಬರಲು” …ಕುಂದಾಪ್ರ ಕನ್ನಡದಗೆ…:) (- ಅನುವಾದ ವಿಜಯರಾಜ್ ಕನ್ನಂತ್ ) ಎಲ್ಲ ಹಕ್ಕು ಕಾದಿರಿಸಲಾಗಿದೆ :-) :-) ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ ನೀ ಇಲ್ದೆ ಕಿಚ್ಹ್ ಹಿಡ್ದಂಗಾಯಿ… ಎದಿಯೊಳಗೆ ಸೆಕಿಗಾಲ ಇನ್ನಿಲ್ಯೇ ನಂಗೆ ಉಳ್ಗಾಲ… ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ ನಾ ನಿನ್ ಕನ್ಸಿಗೆ… ಬಾಡ್ಗಿಗೆ ಬಂದಿದ್ನೆ… ತಿಂಗ್ಳ ಬಾಡ್ಗಿ ಕೊಟ್ ಹೋಪ್ಕೆ…ನಿಮ್ಮನಿಗೆ ಬತ್ತೆ ನಾ ನಾ ಸರ್ತ [...]

ಹ್ವಾಯ್ ಇದೆಂತ ದರ್ಶಿನಿ ಹೋಟ್ಲಗೆ ಜೀರಾ ರೈಸು, ಘೀ ರೈಸು ಅಂದೇಳಿ ಬೋರ್ಡ್ ಬರ್ದ್ ಹಾಕಿದಂಗಿತ್ತಲೆ.. ಎಂತಾ ಮರಾಯ್ರೆ ಹೋಟ್ಲ್ ಗೀಟ್ಲ್ ಇಟ್ಟಿರ್ಯಾ ಎಂತ ಕತಿ ಅಂದೇಳಿ ಮಂಡಿ ಗಿಂಡ್ಕಂಬ್ಕೆ ಶುರು ಮಾಡ್ಬೇಡಿ… ಹೋಟ್ಲ್ ಇಟ್ಟರೇ ಈಗ ಹ್ಯಾಂಗ್ ಸುಧಾರ್ಸುದಂದೇಳಿ ಮಂಡಿ ಬಿಶಿ ಮಾಡ್ಕಂಡಿದ್ರ್ ಮರ್ರೆ..ನೀವ್ ಎಂತದೋ ಹೇಳ್ತ್ರಿ… ಮತ್ತೆಂತ ಅಲ್ಲ ಇದ್ ನಾನ್ ಇವತ್ತ್ ಹಿಡ್ಕಂಡ್ ಬಂದ್ ಕುಂದಾಪ್ರ ಕನ್ನಡ ಶಬ್ದ. ಈ ಶಬ್ದದ್ ಕತಿ ಎಂತ ಕಾಂಬ ಬನಿ ಹಂಗಾರೆ… ರೈಸು = ಗಡದ್ದಾಗಿರು, [...]

ಅಂದಾಂಗೆ ನಾಡ್ದ್ ಹನ್ನೊಂದ್ನೇ ತಾರೀಕ್ ಬಂದ್ರೆ ಬ್ಲಾಗಿಗೆ ಮೂರ್ ವರ್ಷ ಆತ್ತ್. ಇಷ್ಟ್ ದಿನ ಹ್ಯಾಂಗಿದ್ರೂ ಬ್ಲಾಗಿಗೆ ಉಪ್ವಾಸವೇ ಆಯ್ತ್. ಹುಟ್ದಬ್ಬನಾರೂ ಗಡ್ಜಾಯಿ ಮಾಡಿ ಹೊಟ್ಟಿ ತುಂಬಾ ಊಟ ಹಾಕುದ್ ಬ್ಯಾಡ್ದಾ ಹಂಗಾರೆ…. ಅದಕ್ಕೇ ಇವತ್ತ್ ಅರ್ಧ ದಿನ ಕೂತ್ಕಂಡ್ ಹುಟ್ದಬ್ಬಕ್ಕೆ ಅಡ್ಗಿ ಮಾಡದ್ದೇ ಮಾಡದ್ದ್…. ನೀವೂ ಬಂದ್ ಒಂದೆರ್ಡ್ ತುತ್ತ್ ತಿನ್ಕಂಡ್ ಹೋರೆ ನಂಗೂ ಖುಶಿಯಾತ್ತ್ ಕಾಣಿ.. ಹುಟ್ದಬ್ಬಕ್ಕೆ ಬರೀ ಕೈ ಬೀಸ್ಕಂಡ್ ಬರ್ಬೆಡಿ.. ಎಂತಾರೂ ಹಿಡ್ಕಂಡ್ ಬನಿ… ಅಂದ್ರೆ ಓದಿ ನಿಮ್ಮ ಅಭಿಪ್ರಾಯ ನಂಗ್ ಹೇಳ್ರೆ ಅದೇ ನೀವ್ ಕೊಡು ಉಡ್ಗ್ರಿ… :-)

ಬರೀ ಕುಂದಾಪ್ರ ಕನ್ನಡದಗೆ ಮಾತ್ರ ಎಂತಕೆ , ಈಗ ಯಾವ್ ಕನ್ನಡದಗೂ ಇಪ್ಪುದ್ ಇಂಗ್ಲೀಷೆ ಅಲ್ದಾ. ಯಾರಾರೂ ಶುದ್ಧ ಕನ್ನಡ ಮಾತಾಡುವರ್ ಇದ್ರೆ ಹುಡ್ಕಿ ಕೊಡಿನಿ ಕಾಂಬ ಹಂಗಾರೆ  ಅಂದೇಳಿ  ನೀವ್ ಕೆಂಬ್ಕೂ ಸಾಕ್.  ಅದ್ರಗೂ ಬೆಂಗಳೂರಗೆ ಹಾಂಗಿನರ್ ಯಾರಾರೂ ಇದ್ರೆ ಅವ್ರಿಗೆ ರಾಜ್ಯೋತ್ಸವ ಪ್ರಶಸ್ತಿಯೇ ಕೊಡ್ಲಕ್ಕ್ ಅಂತ್ ನೀವ್ ಹೇಳುಕೂ ಸಾಕ್.  ಆರೇ ನಾ ಹೇಳುಕ್ ಹೊರಟದ್ದ್ ಅದ್ ಅಲ್ದೆ… ಒಂದ್ ಇಂಗ್ಲಿಷ್ ಶಬ್ದ ಕುಂದಾಪ್ರ ಕನ್ನಡದೊಳಗೆ ಬಂದ್ ಕೂಕಂಡಿತ್. ಆ ಶಬ್ದ ಯಾವ್ದ್ ಅಂದೇಳಿ ನೆನ್ಪ್ ಮಾಡ್ಕಂಕಿದ್ರೆ [...]

ಹೈಲು/ ಹೈಲ್ = ಕಂಗಾಲು, ಹೈರಾಣ ಬಳಕೆ :   ೧.         ಈ ವರ್ಷ ಮಳೆ ಬಾರ್ದೆ ಬ್ಯಾಸಾಯ ಮಾಡುವರ್ ಯಾಪಾರ್ ಹೈಲ್ ಅಲ್ದೇ. ೨.         ಈ ಮಕ್ಕಳಿಗೆ ರಜಿಯಾರೂ ಎಂತಕ್ ಬತ್ತೋ ಏನೋ. ಅವ್ರನ್ ಸುಧಾರ್ಸುದ್ರೊಳ್ಗೆ ಅಲ್ದೇ ನಾ ಅರ್ಧ ಹೈಲ್ ಆದ್ದ್. ೩.         ಕೊಡಿ (ಕೊಡೆ) ತಕಂಡ್ ಹೋಪುಕೆ ನೆನ್ಪ್ ಹೋಯಿ, ಮಳೆಯಗ್ ಸಿಕ್ಕಿ ಬಿದ್ದ್ ನನ್ ಯಾಪಾರ ಹೈಲಾದ್ದ್ ಅಲ್ದಾ ಮಾರ್ರೆ   ಊಜು / ಊಂಜು/ ಸೀಬು/ ಸೀಂಬು = ಚೀಪು [...]