Posts Tagged ‘kunda kannada’

ಪುರ್ಸೊತ್ತಿದ್ದಾಗ್ಳಿಕೆ ಬರುಕ್ ಉದಾಶಿನ, ಬರುಕ್ ಉಮೇದ್ ಬಂದಾಗ್ಳಿಕೆ ಪುರ್ಸೋತ್ತಿಲ್ಲ ಹಾಂಗಿನ್ ಕತಿ ಆಯ್ತ್ ಕಾಣಿ ಆರೂ ಈ ಸರ್ತಿ ಬರೀದೆ ಬಾಳ ಸಮಿ ಆಯ್ತ್. ಇನ್ ಬರಿದಿದ್ರೆ ಆಪ್ದಲ್ಲ ಅಂದೇಳಿ ನಿನ್ನೆ ಬರುಕ್ ಕೂಕಂಡೆ… ಒಂದ್ ಅರ್ಧ ದಿನದ ಮೇಲ್ ಆಯ್ತ್ ಇದನ್ನೆಲ್ಲಾ ಬರ್ದ್ ಮುಗ್ಸುವತ್ತಿಗೆ. ಬರ್ದ್ ಮುಗ್ಸ್ರ್ ಮೇಲೆ ನಂಗಂತೂ ಖುಷಿ ಆಯ್ತ್, ನಿಮ್ಗೂ ಅದ್ರಗೆ ಅರ್ಧ ಪಾಲ್ ಖುಷಿ ಸಿಕ್ರೆ..ನಾ ಬರದ್ದಕ್ಕೂ ಒಂದ್ ಲೆಕ್ಕ, ಎಂತ ಅಂತ್ರಿ? ಇನ್ನೊಂದಿಷ್ಟ್ ಕುಂದಾಪ್ರ ಕನ್ನಡ ಶಬ್ದ ಕಾಂಬ ಬನಿ ಹಂಗಾರೆ [...]

ಕಳ್ದ್ ತಿಂಗ್ಳ್ ನನ್ ಬ್ಲಾಗ್ ಬದಿಗೆ ಶ್ರೀಕಾಂತ ಹೆಗಡೆ ಅಂದೇಳಿ ಒಬ್ರ್ ಬಂದಿರ್. ಅವ್ರ್ ಒಂದೆರ್ಡ್ ಕಮೆಂಟ್ ಪೋಸ್ಟ್ ಮಾಡಿರ್… ಆ ಕಮೆಂಟಗೆ ಒಂದೆರ್ಡ್ ಪ್ರಶ್ನೆ ಸತೇ ಕೇಂಡಿರ್. ಅವ್ರ್ ಕೇಂಡದ್ ಇಷ್ಟೆ…ನೀವ್ ಕುಂದಾಪ್ರದರು ಪ್ಯಾಟಿಗ್ ಬಂದ್ ಸೆಟ್ಲ ಆದೋರು ನಿಮ್ಮ ಮಕ್ಕಳಿಗೆ ಅಲ್ಲಿ ಭಾಷಿ, ಸಂಸ್ಕೃತಿ ಕೊಡುಕೆ ಮರ್ತರಲ್ಲೇ ಮಾರಾಯ್ರೆ, ಇದ್ನ ಕಂಡ್ರೆ ಕೇಂಡ್ರ ಭಾಳ ಭೇಜಾರಾತ್ತಲೆ. ನೀವ್ ಕುಂದಾಪ್ರದ ಜನ ಎಂಥಕ್ಕೆ ಮಕ್ಳ ಮರಿಗೆ ನಿಂ ಕುಂದಗನ್ನಡ ಕಲಸೂದಿಲ್ಲ ? ಅವ್ರ್ ಪ್ರಶ್ನೆಗೆ ಉತ್ರ [...]

ನಂಗಂತೂ ನಮ್ ಕುಂದಾಪ್ರ ಕನ್ನಡ ಕೇಂಡ್ರೆ ಅಷ್ಟಿಷ್ಟ್ ಖುಷಿ ಆಪುದಲ್ಲ ಗೊತ್ತಿತ? ಅದ್ರಗೂ ಈಗ ಕೆಲ್ಸ ಮಾಡುಕ್ ಅಂತೆಳಿ ಊರ್ ಬಿಟ್ಟ್ ಬೆಂಗ್ಳೂರ್ ಸೇರ್ಕಂಡ್ ಮೇಲೆ ಯಾರೆ ಕುಂದಾಪ್ರದರ್ ಸಿಕ್ರೂ ಅವ್ರನ್ ಒಂದ್ಸಲ ಕುಂದಾಪ್ರ ಕನ್ನಡದಗೆ ಮಾತಾಡ್ಸ್‌ದಿದ್ರೆ ಸಮಾಧಾನವೇ ಆತಿಲ್ಲ. ಬೆಂಗ್ಳೂರಾಗಂತೂ ಬಿಡಿ ಆ ಭಾಷಿ ಈ ಭಾಷಿ ಅಂತೇಳಿ ಎಲ್ಲಾರೂ ಸೇರ್ಕಂಡ್ ಬೆಂಗ್ಳೂರ್ ಕನ್ನಡ ಅಂಬುದ್ ಒಳ್ಳೇ ಕಿಚಿಡಿ ಆದ್ ಕಂಡ್ಮೇಲೆ…ಇನ್ನೂ ಗಮಗಮ ಅಂತೆಳಿ ಪರಿಮಳ್ ಬಪ್ಪ ಕುಂದಗನ್ನಡ ಕೆಮಿ ಮೇಲೆ ಬಿದ್ರೆ ಆಪ್ ಖುಷಿ [...]