ರಿಷಿ ಸಿನಿಮಾದ ನಾನು ಒತ್ತಾರೆ ಎದ್ಬುಟ್ಟು…ಹಾಡು ಕುಂದಾಪ್ರಕ್ಕೆ ಬಂದ್ರೆ…ಹೀಂಗ್ ಆತ್ತ್ ಕಾಣಿ… ರಾಜು ಅನಂತ ಸ್ವಾಮೀ ಹಾಡಿದ್ ಈ ಪದ್ಯ ಕಂಡ್ರೆ ನಂಗೆ ಮಸ್ತ್ ಖುಷಿ… ಈ ಪದ್ಯ ಕೇಂತಾ ಓದ್ರೆ ಇನ್ನೂ ಲಾಯ್ಕಿರತ್ತ್.. ಅದ್ಕೆ ಪದ್ಯದ ವಿಡಿಯೋ ಇಲ್ಲೇ ಪೋಸ್ಟಿನ ತುದಿಯಲ್ ಹಾಕಿದೆ ಕಾಣಿ…. ನಾನು ಬೆಳ್ಮುಚ್ ಎದ್ಕಂಡ್..ನಿನ್ ಸೊಡ್ಡ್ ಕಂಡ್ಕಂಡ್.. ಕೈ ಮುಕ್ಕಂಡ್ ನಿಂತ್ಕಂತೆ ಹೆಣೆ… ಬೇಗ ಚಾ ಕಣ್ಣ್ ತಂದ್ಕೋಟ್ಟು.. ನಿನ್ ಕಾಲ ಬುಡ್ದಗಿಟ್ಟು… ಚೂರ್-ಚೂರೆ ಕುಡ್ಸ್ತೆ ಹೆಣೆ… ಚಾಕ್ ಸಕ್ರಿ ಕಮ್ಮಿ [...]
Posts Tagged ‘ಕುಂದಾಪ್ರ’
ಸುಮ್ನಾ…ಯ್ಕೊ… ಏ ಗಡಾ.. ಕೊಂಗಾ…ಟ ಸಾಕ್ ಗಡಾ… ಚೊಣ್ಕಿ ತಾಗ್ದಂಗ್ ಆಡ್ಬೆಡ…ಹ್ವಾ..ಹ್ವಾ..
Posted: July 23, 2011 in ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಗಮ್ಮತ್ ಇತ್ತ್ ಕಾಣಿ..., ಹಾಡು, kundaapra kannada, kundapra, kundapra kannada, kundapur, kundapur kannadaTags: ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, kundaapra, kundaapra kannada, kundapra kannada, kundapura, kundapura kannada
ಕೂಕಂಬ್ಕ್ ಮರವಂತೆ ಬೀಚ್ …ಬಾ ಬಾ (ಹ್ವಾಯ್ ಯಾರದ್ ಹೆದ್ರಕಂಬರ್ …ಅಂಡ್ಕಂಬರ್)
Posted: July 6, 2011 in ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, kundaapra kannada, kundapra, kundapra kannada, kundapur, kundapur kannada, kundapura, kundapura kannadaTags: ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, kundaapra kannada, kundapra, kundapra kannada, kundapur, kundapur kannada, kundapura, kundapura kannada
“ನೆನಪಿರಲಿ” ಪಿಚ್ಚರಿನ ಕೂರಕ್ ಕುಕ್ರಳ್ಳಿ ಕೆರೆ ಹಾಡು…ಕುಂದಾಪ್ರ ಸ್ಟೈಲಗೆ … (ಅಣಕ ಬರದ್ದ್ -ವಿಜಯರಾಜ್ ಕನ್ನಂತ) ಎಲ್ಲಾ ಹಕ್ಕು ಕಾಯ್ದಿರಿಸಲಾಗಿದೆ ಹ್ವಾಯ್ ಯಾರದ್ ಹೆದ್ರಕಂಬರ್ …ಅಂಡ್ಕಂಬರ್ ಹೊಕ್ಕಂಬರ್ , ಮಂಡಿ ಜಪ್ಕಂಬರ್, ಹಳೀನ್ ಹಿಂಡಲಗೆ ಮಾತಾಡ್ವರ್, ಸಂತಿಯಗೆ ಪಿಸಿ-ಪಿಸಿ ಅಂಬರ್ ಕುಂದಾಪುರ್ದಂತ ತಾಲೋಕಗೆ ಆಯ್ಕಂಡ್ ಕಾಂಬುಕ್ ಬೇಕಾದ್ದೆಲ್ಲ ಇದ್ದೂ ಹೊಳಿ,ಕಾಡ್ ಗುಡ್ಡಿ ಇದ್ರೂ, ಪ್ರೀತಿ ಮಾಡುಕ್ ಜಾಗ ಇದ್ರೂ ಕಳ್ರ ಕಣಂಗೆ ಮಿಣ್ಣಗೆ ಹೊತ್ರ್ಯಲ್ಲ… ಬನಿಯೇ.. ಇಲ್ಕಾಣಿಯೇ … ನಾನ್ ಲವ್ ಮಾಡು ಸ್ಟೈಲ್ ಒಂಚೂರ್ ಕಲಿನಿಯೇ [...]
ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ!!!
Posted: July 3, 2011 in ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಗಮ್ಮತ್ ಇತ್ತ್ ಕಾಣಿ..., kundapra, kundapur, kundapuraTags: ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, kundapra, kundapur, kundapura
ಗಾಳಿಪಟದ “ಮಿಂಚಾಗಿ ನೀನು ಬರಲು” …ಕುಂದಾಪ್ರ ಕನ್ನಡದಗೆ…:) (- ಅನುವಾದ ವಿಜಯರಾಜ್ ಕನ್ನಂತ್ ) ಎಲ್ಲ ಹಕ್ಕು ಕಾದಿರಿಸಲಾಗಿದೆ
:-) ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ ನೀ ಇಲ್ದೆ ಕಿಚ್ಹ್ ಹಿಡ್ದಂಗಾಯಿ… ಎದಿಯೊಳಗೆ ಸೆಕಿಗಾಲ ಇನ್ನಿಲ್ಯೇ ನಂಗೆ ಉಳ್ಗಾಲ… ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ ನಾ ನಿನ್ ಕನ್ಸಿಗೆ… ಬಾಡ್ಗಿಗೆ ಬಂದಿದ್ನೆ… ತಿಂಗ್ಳ ಬಾಡ್ಗಿ ಕೊಟ್ ಹೋಪ್ಕೆ…ನಿಮ್ಮನಿಗೆ ಬತ್ತೆ ನಾ ನಾ ಸರ್ತ [...]
ಕುಂದಾಪ್ರ ಪದಾರ್ಥ !!
Posted: May 19, 2011 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡTags: ಕುಂದಗನ್ನಡ, ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಪದಗಳು, ಕುಂದಾಪುರ ಕನ್ನಡ ಪದಾರ್ಥ, ಕುಂದಾಪುರ ಕನ್ನಡ ಶಬ್ದ, ಕುಂದಾಪ್ರ, ಕುಂದಾಪ್ರ ಕನ್ನಡ, kannada dictionary, kundaapra, kundaapra kannada dictionary, kundaapra kannada words, kundapur, kundapur kannada dictionary, kundapura, kundapura kannada dictionary
ಸುಮಾರ್ ಸಮಿಂದ ಎಣ್ಸ್ ಕಂಡಿದ್ದೆ… ಬ್ಲಾಗಗೆ ಯೇಗ್ಳೇಗ್ಳೋ ಬರದ್ದ್ ಕುಂದಾಪ್ರ ಕನ್ನಡ ಶಬ್ದ ಎಲ್ಲ ಒಟ್ಟ್ ಮಾಡಿ ಒಂದ್ ಬದ್ಯಗೆ ಇಟ್ರೆ ಒಳ್ಳೇದಾತ್ತಲ್ದಾ ಅಂದೇಳಿ… ಇವತ್ತ್ ಗಳ್ಗಿ ಕೂಡಿ ಬಂತ್… ಇಷ್ಟ್ ದಿನ ಬ್ಲಾಗಗೆ ಬರದ್ ಶಬ್ದ ಎಲ್ಲಾ ಒಟ್ಟ್ ಮಾಡಿ ಇಲ್ಲ್ ಕೊಟ್ಟಿದೆ.. ಇದ್ರಗೆ ನೊಂಗೂ ಒಂದ್ ’ಪಡಾವ್’ ಇತ್ತ್.!! ಹೊಸ್ತೆಂತಾರೂ ಬರುವತಿಗೆ, ಈ ಶಬ್ದ ಮೊದ್ಲೇ ಬ್ಲಾಗಗೆ ಬರ್ದಿನಾ ಇಲ್ಯಾ ಅಂದೇಳಿ ಹುಡ್ಕುಕ್ ಸುಲ್ಭ ಆಯಲ್ಯಾ? ನಿಮ್ಗ್ ಓದುಕ್ ಸಂತೆ ಎಲ್ಲ ಒಂದೆ ಬದ್ಯಗೆ [...]
ರೈಸು – ಪುರೈಸು !!!
Posted: May 14, 2011 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ನಮ್ ಊರ್ ನಮ್ಗ್ ಚಂದ, kundapra, kundapur, kundapuraTags: ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, kundaapra kannada, kundapra, kundapur, kundapura, kundapura kannada
ಹ್ವಾಯ್ ಇದೆಂತ ದರ್ಶಿನಿ ಹೋಟ್ಲಗೆ ಜೀರಾ ರೈಸು, ಘೀ ರೈಸು ಅಂದೇಳಿ ಬೋರ್ಡ್ ಬರ್ದ್ ಹಾಕಿದಂಗಿತ್ತಲೆ.. ಎಂತಾ ಮರಾಯ್ರೆ ಹೋಟ್ಲ್ ಗೀಟ್ಲ್ ಇಟ್ಟಿರ್ಯಾ ಎಂತ ಕತಿ ಅಂದೇಳಿ ಮಂಡಿ ಗಿಂಡ್ಕಂಬ್ಕೆ ಶುರು ಮಾಡ್ಬೇಡಿ… ಹೋಟ್ಲ್ ಇಟ್ಟರೇ ಈಗ ಹ್ಯಾಂಗ್ ಸುಧಾರ್ಸುದಂದೇಳಿ ಮಂಡಿ ಬಿಶಿ ಮಾಡ್ಕಂಡಿದ್ರ್ ಮರ್ರೆ..ನೀವ್ ಎಂತದೋ ಹೇಳ್ತ್ರಿ… ಮತ್ತೆಂತ ಅಲ್ಲ ಇದ್ ನಾನ್ ಇವತ್ತ್ ಹಿಡ್ಕಂಡ್ ಬಂದ್ ಕುಂದಾಪ್ರ ಕನ್ನಡ ಶಬ್ದ. ಈ ಶಬ್ದದ್ ಕತಿ ಎಂತ ಕಾಂಬ ಬನಿ ಹಂಗಾರೆ… ರೈಸು = ಗಡದ್ದಾಗಿರು, [...]
ತಿಂಗ್ಳ್ ಭರ್ತಿ ಆಯಿ.. ಮೇಲೊಂದ್ ತಿಂಗ್ಳಾಯ್ತ್ ಕಾಣಿ…!!!
Posted: May 8, 2011 in ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ನಮ್ ಊರ್ ನಮ್ಗ್ ಚಂದ, kundapra, kundapur, kundapuraTags: ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ದರ್ಶಿನ, darshina, kundaapura, kundapra, kundapra kannada, kundapur, kundapura, kundapura kannada
ಅಂದಾಂಗೆ ನಾಡ್ದ್ ಹನ್ನೊಂದ್ನೇ ತಾರೀಕ್ ಬಂದ್ರೆ ಬ್ಲಾಗಿಗೆ ಮೂರ್ ವರ್ಷ ಆತ್ತ್. ಇಷ್ಟ್ ದಿನ ಹ್ಯಾಂಗಿದ್ರೂ ಬ್ಲಾಗಿಗೆ ಉಪ್ವಾಸವೇ ಆಯ್ತ್. ಹುಟ್ದಬ್ಬನಾರೂ ಗಡ್ಜಾಯಿ ಮಾಡಿ ಹೊಟ್ಟಿ ತುಂಬಾ ಊಟ ಹಾಕುದ್ ಬ್ಯಾಡ್ದಾ ಹಂಗಾರೆ…. ಅದಕ್ಕೇ ಇವತ್ತ್ ಅರ್ಧ ದಿನ ಕೂತ್ಕಂಡ್ ಹುಟ್ದಬ್ಬಕ್ಕೆ ಅಡ್ಗಿ ಮಾಡದ್ದೇ ಮಾಡದ್ದ್…. ನೀವೂ ಬಂದ್ ಒಂದೆರ್ಡ್ ತುತ್ತ್ ತಿನ್ಕಂಡ್ ಹೋರೆ ನಂಗೂ ಖುಶಿಯಾತ್ತ್ ಕಾಣಿ.. ಹುಟ್ದಬ್ಬಕ್ಕೆ ಬರೀ ಕೈ ಬೀಸ್ಕಂಡ್ ಬರ್ಬೆಡಿ.. ಎಂತಾರೂ ಹಿಡ್ಕಂಡ್ ಬನಿ… ಅಂದ್ರೆ ಓದಿ ನಿಮ್ಮ ಅಭಿಪ್ರಾಯ ನಂಗ್ ಹೇಳ್ರೆ ಅದೇ ನೀವ್ ಕೊಡು ಉಡ್ಗ್ರಿ…
ಹೌದಾ ಸುಳ್ಳಾ ಕಾಣಿ ಬೇಕಾರೆ, ನಮ್ಮ್ ನಮ್ಮ್ ಭಾಷಿ ಚೆಂದ ಬೇರೆ ಯಾವ್ದಕ್ಕೂ ಬತ್ತಿಲ್ಲ ಅಲ್ದಾ?…
Posted: July 6, 2010 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ನಮ್ ಊರ್ ನಮ್ಗ್ ಚಂದTags: ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ
ಬಲ ಮಾಡುದ್ – ಬೆಳೆಸಿ ದೊಡ್ಡವರನ್ನಾಗಿ ಮಾಡು ಬಳಕೆ – ೧.ದೊಡ್ಡಕೆ ಮಾತ್ ಬತ್ತ್ ಅಂದೇಳಿ ಮಾತಾಡ್ಬೆಡ, ಮಾತಾಡುಕೆ ಭಾರಿ ಸುಲ್ಭ, ನಿಮ್ಮನೆಲ್ಲ ಬಲ ಮಾಡ್ಕಿದ್ರೆ ಎಷ್ಟ್ ಕಷ್ಟ್ ಪಟ್ಟಿದೆ ಅಂದೇಳಿ ನಿಂಗೆಂತ ಗೊತಿತ್? ೨.ನಿಮ್ಗ್ ಬೇರೆ ಕೆಲ್ಸ ಇಲ್ಯಾ, ಮಕ್ಳನ್ನೆಲ್ಲ ಸಾಕಿ ಬಲ ಮಾಡುದೇ ಕಷ್ಟ, ಇನ್ನ್ ಶಾಲಿ ಗೀಲಿಗೆಲ್ಲ ಕಳ್ಸುಕೆ ಎಲ್ಲಿಗೆ ಹೋಪ್ದ್? ಬಲಾದರ್ – ಬಲ ಆದವರು ,ದೊಡ್ಡವರು , ಹಿರಿಯರು ಬಳಕೆ – 1. ಸಣ್ಣರಂದೇಳಿ ಇಲ್ಲ, ಬಲಾದರಂದೇಳಿ ಇಲ್ಲ, ಎದ್ರುತ್ರ [...]
ಹ್ವಾಯ್… ಇಲ್ಲೊಂಚೂರ್ ನೀಕಿ ಕಾಂಬ್ರಿಯಲ!!
Posted: June 21, 2010 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ ಕನ್ನಡTags: ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಕಲಿ, kunda kannada, kundaapra, kundapura, kundapura kannada
ಪುರ್ಸೊತ್ತಿದ್ದಾಗ್ಳಿಕೆ ಬರುಕ್ ಉದಾಶಿನ, ಬರುಕ್ ಉಮೇದ್ ಬಂದಾಗ್ಳಿಕೆ ಪುರ್ಸೋತ್ತಿಲ್ಲ ಹಾಂಗಿನ್ ಕತಿ ಆಯ್ತ್ ಕಾಣಿ ಆರೂ ಈ ಸರ್ತಿ ಬರೀದೆ ಬಾಳ ಸಮಿ ಆಯ್ತ್. ಇನ್ ಬರಿದಿದ್ರೆ ಆಪ್ದಲ್ಲ ಅಂದೇಳಿ ನಿನ್ನೆ ಬರುಕ್ ಕೂಕಂಡೆ… ಒಂದ್ ಅರ್ಧ ದಿನದ ಮೇಲ್ ಆಯ್ತ್ ಇದನ್ನೆಲ್ಲಾ ಬರ್ದ್ ಮುಗ್ಸುವತ್ತಿಗೆ. ಬರ್ದ್ ಮುಗ್ಸ್ರ್ ಮೇಲೆ ನಂಗಂತೂ ಖುಷಿ ಆಯ್ತ್, ನಿಮ್ಗೂ ಅದ್ರಗೆ ಅರ್ಧ ಪಾಲ್ ಖುಷಿ ಸಿಕ್ರೆ..ನಾ ಬರದ್ದಕ್ಕೂ ಒಂದ್ ಲೆಕ್ಕ, ಎಂತ ಅಂತ್ರಿ? ಇನ್ನೊಂದಿಷ್ಟ್ ಕುಂದಾಪ್ರ ಕನ್ನಡ ಶಬ್ದ ಕಾಂಬ ಬನಿ ಹಂಗಾರೆ [...]
ಪಾಲಚಂದ್ರ ಅವ್ರದ್ದ್ ಒಂದ್ ಪದ್ಯ…ನಾಕ್ ಫೋಟ ಇಲ್ಲ್ಕಾಣಿ…
Posted: April 21, 2010 in ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರTags: ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, kundapura, kundapura kannada
ಹೀಂಗೆ ಇಂಟರ್ನೆಟ್ಟಗೆ ಗಿರಕಿ ಹೊಡಿತಿಪ್ಪತಿಗೆ… ಪಾಲಚಂದ್ರ ಅವ್ರದ್ದ್ ಬ್ಲಾಗ್ ಕಾಮ್ಬುಕೆ ಸಿಕ್ತ್… ತಾರೆ ಜಮಿನ್ ಪರ್ ಪಿಚ್ಚರಿದ್ ಒಂದ್ ಪದ್ಯ ಕುಂದಾಪ್ರ ಕನ್ನಡದಗೆ ‘ನನ್ನಬ್ಬಿ’ ಅಂದೇಳಿ ಬರದ್ದ್ ಓದುಕ್ ಸಿಕ್ತ್… ನೀವೂ ಓದಿ ಕಾಣಿ… ಇಲ್ಲ್ ಅದ್ರದ್ದ್ ಲಿಂಕ್ ಕೊಟ್ಟಿದೆ http://palachandra.blogspot.com/2009/06/blog-post_25.html ಹಾಂಗೆ ಕುಂದಾಪ್ರ ಸಂತಿದ್ ಒಂದಿಷ್ಟ್ ಫೋಟೋ ಸತೆ ಹಾಕಿದ್ರ್… ಅದನ್ನ್ ಕಾಣ್ಕಿದ್ರೆ ಇಲ್ಲಿಗ್ ಹೋಯ್ಕಾಣಿ… ಪಟ ಮಾತ್ರಾ ಭಾರಿ ಲಾಯ್ಕ್ ಬಂದಿತ್.. ಹೌದಾ ಸುಳ್ಳಾ ಬೇಕಾರ್ ನೀವೇ ಕಾಣಿ http://palachandra.blogspot.com/search/label/ಕುಂದಾಪುರ
ನೀನ್ ಹೋಯಿ ಹೋಯಿ ಅವ್ಳತ್ರ ಹೇಳ್ದ್ಯ…ಅವ್ಳದ್ ಹರ್ಕಟಿ ಬಾಯಿ
Posted: January 8, 2010 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡTags: ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಕಲಿ, kundapra kannada, kundapura, kundapura kannada
ಕುಂದಾಪ್ರ ಬದಿ ಶಬ್ದ ಕೆಮಿ ಮೇಲ್ ಬೀಳ್ದೆ ಸುಮಾರ್ ದಿನ ಆಯ್ತಮಗಿತ್ತಲ್ಲ… ಇಲ್ಲೊಂದೆರ್ಡ್ ಇತ್ತ್ ಕಾಣಿ.. ಜೀವ್ ಬಿಡ್ತ – ಈ ಶಬ್ದ ಕುಂದಾಪ್ರ ಕನ್ನಡದ್ದ್ ಮಾತ್ರ ಅಂತ ಹೇಳುಕಾತಿಲ್ಲ. ಬೇರೆ ಬೇರೆ ಬದಿಯಗ್ ಸತೆ ಇದೆ ನಮನಿ ಶಬ್ದ ಕೆಲವ ಇತ್ತ್. ಇದಕ್ಕೆ ಅರ್ಥ ಹೇಳುದಾರೆ ಪಂಚಪ್ರಾಣ ಅಂಬುದ್ ಸರಿ ಆತ್ತಾ ಕಾಣತ್ತ್ ಬಳಕೆ – ೧. ಅವನಿಗೆ ಮಾಯ್ನಣ್ಣ್ ಅಂದ್ರ್ ಸೈ… ಜೀವ್ ಬಿಡ್ತ ( ಬೇಕಿದ್ರೆ ನಿಮ್ಮ್ ನಿಮ್ಮ್ ಅನ್ಕೂಲಕ್ಕೆ ಮಾಯ್ ಹೆಣ್ಣ್ ಅಂದೆಳಿ ಬೇಕಾರ್ ಓದ್ಕಂಬುಕೆ ಅಡ್ಡಿಲ್ಲ) ೨. ಅವ್ಳ್ ಮಕ್ಳ್ [...]
ಕುಂದಾಪ್ರ ಕನ್ನಡದಗೊಂದು ಇಂಗ್ಲಿಷ್ ಕಾಣಿ…
Posted: December 22, 2009 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದTags: ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಶಬ್ದ, kundapra, kundapura, kundapura kannada
ಬರೀ ಕುಂದಾಪ್ರ ಕನ್ನಡದಗೆ ಮಾತ್ರ ಎಂತಕೆ , ಈಗ ಯಾವ್ ಕನ್ನಡದಗೂ ಇಪ್ಪುದ್ ಇಂಗ್ಲೀಷೆ ಅಲ್ದಾ. ಯಾರಾರೂ ಶುದ್ಧ ಕನ್ನಡ ಮಾತಾಡುವರ್ ಇದ್ರೆ ಹುಡ್ಕಿ ಕೊಡಿನಿ ಕಾಂಬ ಹಂಗಾರೆ ಅಂದೇಳಿ ನೀವ್ ಕೆಂಬ್ಕೂ ಸಾಕ್. ಅದ್ರಗೂ ಬೆಂಗಳೂರಗೆ ಹಾಂಗಿನರ್ ಯಾರಾರೂ ಇದ್ರೆ ಅವ್ರಿಗೆ ರಾಜ್ಯೋತ್ಸವ ಪ್ರಶಸ್ತಿಯೇ ಕೊಡ್ಲಕ್ಕ್ ಅಂತ್ ನೀವ್ ಹೇಳುಕೂ ಸಾಕ್. ಆರೇ ನಾ ಹೇಳುಕ್ ಹೊರಟದ್ದ್ ಅದ್ ಅಲ್ದೆ… ಒಂದ್ ಇಂಗ್ಲಿಷ್ ಶಬ್ದ ಕುಂದಾಪ್ರ ಕನ್ನಡದೊಳಗೆ ಬಂದ್ ಕೂಕಂಡಿತ್. ಆ ಶಬ್ದ ಯಾವ್ದ್ ಅಂದೇಳಿ ನೆನ್ಪ್ ಮಾಡ್ಕಂಕಿದ್ರೆ [...]
ಕೊಂಗಾಟದ ಬ್ಲಾಗಿಗೆ ಐವತ್ತಾಯ್ತ್ ಕಾಣಿ…
Posted: July 31, 2009 in ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡTags: ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ
ನಿಮ್ಮ ಕೊಂಗಾಟದ ಕುಂದಾಪ್ರ ಕನ್ನಡ ಬ್ಲಾಗಗಿವತ್ತ್ ಐವತ್ನೆ ಪೋಸ್ಟ್ ಹಾಕ್ತಿದ್ದೆ ಕಾಣಿ. ಐವತ್ನೇದ್ ಆಪುಕೋಯಿ ಎಂತಾರೂ ಗಡ್ಜ್ ಮಾಡ್ಕಂದೇಳಿ ಎಣ್ಸಕಂಡಿದ್ದಿದೆ. ಸುಮಾರ್ ದಿನ್ದಿಂದ ಎಂತ ಬರುದ್ ಎಂತ ಬರುದ್ ಅಂದೇಳಿ ಆಲೋಚ್ನಿ ಮಾಡದ್ದೆ ಮಾಡದ್ದ್. ಕಡೀಗೆ ಹೀಂಗ್ ಮಾಡ್ರೆ ಹ್ಯಾಂಗ್ ಅನ್ಸ್ತ್. ನೀವೆಲ್ಲ ಈ ಬ್ಲಾಗಿಗೆ ಸುಮಾರ್ ದಿನ್ದಿಂದ್ ಬತ್ತಿದ್ರಿ ಹೌದಾ. ನಿಮ್ ಕೈಯ್ಯಗೆ ಎಂತಾರೂ ಒಂಚೂರ್ ಬರುಕೆ ಹೇಳುದ್. ಎಲ್ಲ ಎಂತ ಬರಿತ್ರಿ ಕಾಂಬಾ. ಬರುಕೆ ವಿಷ್ಯ ಎಂತಾ ಕೇಂಡ್ರ್ಯಾ? ನಮ್ ಕುಂದಾಪ್ರ ಭಾಷಿ, ಕುಂದಾಪ್ರದ್ ಜಾಗ, ಕುಂದಾಪ್ರದಗೆ ಮಾತ್ರ ಇಪ್ಪ್ [...]
ಹೀಂಗೇ ಒಂದ್ ಕತಿ… ಕಮ್ಲಶಿಲೆ ಗುಹೆಯೊಳ್ಗೊಂದು ವಿಚಿತ್ರ…
Posted: April 16, 2009 in UncategorizedTags: ಕತಿ, ಕುಂದಾಪ್ರ, ಕುಂದಾಪ್ರ ಕತಿ, ಕುಂದಾಪ್ರ ಕನ್ನಡ, kamalashile, kundaapra, kundapura
ಕುಂದಾಪ್ರ ಕನ್ನಡ ಬ್ಲಾಗಿಗೆ ಇನ್ನೇನ್ ವರ್ಷ ತುಂಬುಕ್ ಹತ್ರ ಆಯ್ತ್… ಆ ಖುಷಿಯಗೆ ಏನಾರೂ ಒಂಚೂರ್ ಬೇರೆ ಬರುವಾ ಅಂದೇಳಿ ಒಂದ್ ಕತಿ ಬರ್ದ್ರೆ ಹ್ಯಾಂಗೇ ಅಂದೇಳಿ ಬರುಕ್ ಹೊರ್ಟಿದೆ… ಕತಿ ಸುಮಾರ್ ಉದ್ದ ಇತ್ತ್… ಹಾಂಗಾಯ್ ಒಂದೇ ಸರ್ತಿ ಪೂರಾ ಕತಿ ಹಾಕುಕ್ ಆತಿಲ್ಲ… ಒಂದ್ ಮೂರ್-ನಾಕ್ ಭಾಗ ಆತ್ತ್…ವಾರಕ್ಕೊಂದ್ ಭಾಗ ಬರಿಕ್ ಅಂದೇಳಿ ಎಣ್ಸ್‌ಕಂಡಿದೆ… ಅದ್ರಗೆ ಮೊದ್ಲಿನ್ ಕಂತ್ ಇಲ್ಲಿತ್ತ್ ಕಾಣಿ… ನಿಮ್ಗೆಲ್ಲ ಕತಿ ಹಿಡ್ಸರೆ ಮುಂದಿನ್ ಕಂತ್ ಬರುವ ಅಂದೇಳಿ ಮಾಡಿದೆ.. ಓದಿ [...]
ಚಾ ಕಣ್ಣ್ ಕುಡ್ದ್ ಕುಂಚಟ್ ಹಾರ್ತ…!!
Posted: December 11, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ ಕಲಿ
ಕೊಟ್ಟ್ ಮಾತ್ ತಪ್ಸುದಿಲ್ಲ, ವಾರಕ್ಕೊಂದ್ಸರ್ತಿ ಆರೂ ಈ ಬದಿಗೆ ಬತ್ತೆ ಅಂದೇಳಿ ಕಳ್ಸರ್ತಿ ಹೇಳಿದ್ನಲ್ದಾ… ಹಾಂಗೇ ಇವತ್ ಬಂದಿದೆ ಕಾಣಿ… ಹಾಂಗೇ ನೀವೆಲ್ಲ ಉತ್ರ ಕೊಟ್ಟದ್ ಕಂಡ್ ಮಸ್ತ್ ಖುಷಿ ಆಯ್ತ್ (ಬೆಂಗ್ಳೂರ್ ಬದಿ ಮಸ್ತ್ ಅಲ್ಲ ಕುಂದಾಪ್ರ ಬದಿ ಮಸ್ತ್… J ) ಅನುಪಮ, ಮಹೇಶ್, ವೀಮಾ ಶೆಟ್ಟಿ, ಅಡಿಗ, ಶಿಶಿರ, ರಂಜಿತ್, ದೀಪಾ, ಭಾಗ್ವತ್ರ್… ಇವ್ರೆಲ್ಲಾ ಉತ್ರ ಕೊಟ್ಟಿರ್. ಶಿಶಿರ, ರಂಜಿತ್ ಎರ್ಡ್ ಸಮ್ನಾದ್ ಉದಾಹರಣೆ ಸೈತ ಕೊಟ್ಟಿರ್. ಅದೇ ಅರ್ಥ ಬಪ್ಪ್ [...]
ಹಾಂಗೂ ಒಂದ್ ಕಾಲ ಇದ್ದಿತ್ತ್ ಕಾಣಿ…
Posted: December 4, 2008 in ನಮ್ ಊರ್ ನಮ್ಗ್ ಚಂದTags: ಕುಂದಾಪ್ರ, ಗ್ವಾಯ್ ಬೀಜ, ನೆನ್ಪ್
ಈ ಬ್ಲಾಗ್ ಬದಿಗೆ ಮಂಡಿ ಹಾಕಿ ಮನ್ಕಣ್ದೆ ಸುಮಾರ ದಿನ ಆಯ್ತ್. ಹಾಂಗಂದೇಳಿ ಬರುಕ್ ಪುರ್ಸೊತ್ ಇಲ್ಲ , ಬರುಕ್ ಮನ್ಸಿಲ್ಲ ಅಂದೇಳಿ ಅಲ್ಲ. ಹಾಂಗ್ ಕೇಂಡ್ರೆ ಈ ಬ್ಲಾಗಿಗೆ ಬರುಕೆ ನಂಗೂ ಮಸ್ತ್ ಖುಷಿಯೇ. ಆರೂ ಕಳ್ದ್ ತಿಂಗ್ಳ್ ಇಡೀ ಏನೋ ಒಂದ್ನಮನಿ ಉದಾಶಿನ ಹಿಡ್ದಂಗ್ ಆಯಿತ್. ಈಗ ಅದ್ನೆಲ್ಲ ಕೊಡ್ಕಿ ಹಾಕಿ ಬರುಕ್ ಕೂಕಂಡಿದೆ. ಇನ್ನ್ ಮೇಲೆ ಹೀಂಗೆಲ್ಲ ಹಾಂಟ್ ಹಾಕುದಿಲ್ಲ ಅಕಾ.. ಸುಳ್ಳಾ-ಬದ್ಧವಾ ನೀವೆ ಕಾಣಿ ಬೇಕಾರೆ. ಈ ಬದಿಗೆಲ್ಲಾರೂ ನೀವ್ ನೀಕಿ [...]
ನವ್ರಾತ್ರಿಯಂದ್ರೆ…ಹೊಸ್ತು….ಹುಲಿಯಾಸ… ಹೂವಿನಕೋಲು…ಪಾಣಾರ್ರ ವೇಷ
Posted: October 8, 2008 in ನಮ್ ಊರ್ ನಮ್ಗ್ ಚಂದTags: ಕುಂದಾಪ್ರ, ನವರಾತ್ರಿ, ಪಾಣಾರ ವೇಷ, ಹುಲಿಯಾಸ, ಹುಲಿವೇಷ, ಹೂವಿನ ಕೋಲು, ಹೂವಿನ್ ಕೋಲ್, ಹೊಸ್ತ್
ನವ್ರಾತ್ರಿ ಬಂತಂದ್ರ್ ಸಾಕ್. ನೆನ್ಪ್ ಊರ್ ಬದಿ ಮುಖ ಮಾಡ್ಕಂಡ್ ಕೂಕಣತ್. ಮಾಲಯ ಅಮಾಸಿ ಮುಗದ್ದೇ ತಡ… ಎಲ್ಲರ್ ಮನ್ಯಗೂ ಕದ್ರ್ ಪೂಜಿ ಮಾಡಿ…ಅದನ್ ತಂದ್‌ಕಟ್ಟಿ ಹೊಸ್ತ್ ಮಾಡು ಗೌಜಿ ಶುರುವಾತ್ತ್. ನಮ್ಗೆ ಅಂದ್ರೆ ಮಕ್ಳಿಗೆಲ್ಲಾ ಗಡ್ಜ್ ಗಮ್ಮತ್ತ್. ಅರ್ಧವಾರ್ಷಿಕ ಪರಿಕ್ಷೆ ಎಲ್ಲಾ ಮುಗ್ದ್ ಶಾಲಿಗ್ ಬೇರೆ ರಜಿ ಸಿಕ್ಕಿರತ್. ಮತ್ತ್ ಶಾಲಿ ಬದಿಗ್ ಮುಖ ಹಾಕುದ್ ದೀಪಾವಳಿ ಪಟಾಕಿ ಎಲ್ಲ ಖಾಲಿ ಆರ್ ಮೇಲೆ ಸೈ. ಹೊಸ್ತಿನ ಊಟ ಮಾಡಿ… ಹೊಟ್ಟಿ ಭಾರ ಆದ್ದಕ್ಕೆ ಕಣ್ಣ್ [...]
ಮಂಗ್ಳೂರ್, ಉಡ್ಪಿಗೆ ಎಂಥಾ ಆಯ್ತ್ ಮಾರ್ರೆ….
Posted: September 17, 2008 in vichaaraTags: ಉಡುಪಿ, ಉಡ್ಪಿ, ಕುಂದಾಪ್ರ, ಗಲಭೆ, ಧರ್ಮ, ಮಂಗಳೂರು, ಮಂಗ್ಳೂರ್, ಶಾಂತಿ
ಬುದ್ಧಿವಂತ್ರ್ ಜಿಲ್ಲೆ ಅಂದೇಳಿ ಕರ್ಸ್‌ಕಂತಿದ್ದ ಮಂಗ್ಳೂರಿಗೆ ಆದ್ದಾರೂ ಎಂಥದ್? ಇದ್ ಬುದ್ಧಿ ಕಡ್ಮಿ ಆದ್ದಲ್ಲ. ಕಲ್ತದ್ ಹೆಚ್ಚಾಯ್ತ್ ಕಾಲ್ ಮೇಲಾಯ್ತ್ ಅಂಬಂಗೆ ಆಡ್ತ್ರಲಾ ಇವ್ರಿಗೆಲ್ಲ ಎಂಥ ಹೇಳುದ್ ಹೇಳಿ. ಅದೆಂತದೋ ಮತಾಂತರ ಅಂದೇಲಿ ಶುರುವಾದ ಈ ಗಲಾಟಿ ಎಲ್ಲಿಗ್ ಹೋಯ್ ಮುಟ್ಟುತ್ತೋ ಆ ದೇವ್ರೇ ಬಲ್ಲ. ಬೆಂಕಿ ಇಲ್ದೆ ಹೊಗಿ ಏಳುದಿಲ್ಲ. ಫಾರಿನ್ನಿಂದ ದುಡ್ ಬತ್ತಂಬ್ರ್, ದುಡ್ಡಿನ್ ಆಶಿ ತೋರ್ಸಿ ಮರ್ಲ್ ಮಾಡ್ತ್ರಂಬ್ರ್, ಕಾಯ್ಲಿ ಗುಣ ಮಾಡ್ತೆ ಅಂದೇಳಿ ಮಂಡಿ ಹಾಳ್ಮಾಡ್ತ್ರ್ ಅಂಬ್ರ್…ಹೀಂಗೆ ಸುಮಾರ್ ವರ್ಷದಿಂದ್ಲೂ ಗುಸುಗುಸು [...]
ಕಣ್ಣ್ ಕೂರುದು, ಚಪ್ಪಿ ಎಡ್ಕ್, ಹೊಡ್ಕು, ಮ್ಯಾಳಿ, ಮ್ಯಾಲಾಗ್ರ, ತಾಳ್ಳ್, ತಾಳ್
Posted: August 11, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಕಲಿ
ಕೂರ್ ಮಂಡಿ ಹಾಕುದ್/ ಕಣ್ಣ್ ಕೂರುದು = ತೂಕಡಿಸು, ನಿದ್ರೆ ಬರುವಂತಾಗು ಬಳಕೆ – ೧. ನಂಗ್ ಕಣ್ಣ್ ಕೂರ್‌ತಾ ಇತ್ತ್. ನಾ ಮಲ್ಕಂತೆ ಅಕಾ? ೨. ಟಿ.ವಿ. ಮುಂದ್ ಕೂಕಂಡ್ ಕೂರ್ ಮಂಡಿ ಹಾಕ್ದಿದ್ರೆ ಹೊಯಿ ಮಲ್ಕಂಬ್‌ಕಾಗ್ದಾ? ಚಪ್ಪಿ, ಚಪ್ಪೆ = ಸಪ್ಪೆ (ಬಿಸಿ ತಣಿಯುವುದು ಅನ್ನುವ ಅರ್ಥ ಕೂಡಾ ಇದೆ) ಬಳಕೆ – ೧. ಸಾರ್ ಸಾಪಾಯಿತ್.. ಆರೆ ಒಂಚೂರ್ ಉಪ್ಪ್ ಚಪ್ಪೆ ೨. ಎಂಥ ಮಾರಾಯ ಚಪ್ಪಿ ಇದ್ದೆ, ಹುಶಾರಿಲ್ಯಾ? ೩. [...]
ನಂಗೆ ಬಪ್ಪುಕೆಡಿಯ ಅಂದೇಳಿ ಕೂಕಂಡಿದ್ದಿದ್ ಮಳಿರಾಯ ಕಡಿಗೂ ಕಣ್ಣ್ ಬಿಟ್ನಾ ಕಾಣತ್. ಬೆಂಗಳೂರಗೂ ನಾಕ್ ಹನಿ ಮಳಿ ಬಪ್ಪುಕ್ ಶುರು ಆಯಿತ್. ಕುಂದಾಪ್ರ ಬದ್ಯಗಂತೂ ಸಮಾ ಮಳಿ ಕುಟ್‌ತಾ ಇರ್ಕ್ ಅಲ್ದಾ? ಮಳಿ ಬಂದದ್ ಅಂಬುದ್ ಬ್ಯಾಸಾಯ ಮಾಡುವರಿಗ್ ಹೋದ್ ಜೀವ ಬಂದಂಗಾಯಿರ್ಕ್. “ಈ ವರ್ಷ ಮಳಿ ಕತಿ ಹೀಂಗೇ ಆರೆ ಯೆಂತ ಮಾಡುದ್. ಹೋಯ್ಲಿ ನೀರಾರು ಹಾರ್ಸುವ ಅಂದ್ರೆ ಕರೆಂಟ್ ಸತೆ ಇಪ್ಪುದಿಲ್ಲ” ಅಂದೇಳಿ ಮಂಡಿ ಮೇಲ್ ಕೈ ಹಾಯ್ಕಂಡ್ ಕೂಕಂಡರಿಗೆಲ್ಲ ಈಗ ಅಯ್ಯಬ್ಬ ಅಮಗ್ [...]
ಕುಂದಪ್ರಭ ಆನ್ಲೈನಂಗೆ ಸಿಕ್ಕತ್ ಗೊತ್ತಾ?
Posted: July 17, 2008 in ನಮ್ ಊರ್ ನಮ್ಗ್ ಚಂದTags: ಕುಂದಪ್ರಭ, ಕುಂದಾಪುರ, ಕುಂದಾಪ್ರ, ಪೇಪರ್, kundaprabha, kundapur
ಕುಂದಾಪ್ರದ್ ಕಾರ್ಬಾರ್ ಎಲ್ಲಾ ತಿಳ್ಕಣ್ಕ್ ಅಂಬಗಿದ್ರೆ, ಕುಂದಾಪ್ರದ್ದೇ ಪೇಪರ್ ಓದ್ಕ್ ಅಲ್ದಾ? ಕುಂದಾಪ್ರ್‌ದ್ ಸುದ್ದಿ ವಾರ ವಾರವೂ ಕಾಣ್ಕಂಬಗಿದ್ರೆ ಈ ಲಿಂಕ್ ಕ್ಲಿಕ್ ಮಾಡಿ <http://kundaprabha.com> ವಾರದ್ ಬಿಸಿಬಿಸಿ ಸುದ್ದಿ ಒಟ್ಟಿಗೆ ಧಾರವಾಹಿ , ಕಥೆ , ಅಂಕಣ , ರಂಗೋಲಿ ಎಲ್ಲಾನು ಕಾಂಬುಕ್ ಸಿಕ್ಕತ್. ಪುರ್ಸೊತ್ತಾದ್ರೆ ಒಂದ್ ಗಳ್ಗಿ ಹೋಯಿ ಬಿಸಿ ಬಿಸಿ ಸುದ್ದಿ ಓದ್ಕಂಡ್ ಬನಿ.
ಹುಲಿಯಾದ ಕಾಳ….ಭಾಗ 2
Posted: July 15, 2008 in ಯಕ್ಷಗಾನTags: ಆಟ, ಕುಂದಾಪ್ರ, ಯಕ್ಷಗಾನ, ಹುಲಿಯಾದ ಕಾಳ, yakshagana
ನಾಗವೇಣಿ ಒಳ್ಗ್ ಬಂದ್ ಮಾತಾಡುಕ್ ಶುರು ಮಾಡಿ… ನಾಗವೇಣಿ : ‘ನಾಗ್ವೇಣಿ..ನಾಗ್ವೇಣಿ ಅಂದೇಳಿ ಮೂರೊತ್ತೂ ಇದೇ ಆಯ್ತ್. ಇಗಾ ಇಲ್ಲ್ ಬಾ…ಇದನ್ನ್ ಕೊಚ್ಚ್…ಇದನ್ನ್ ಆ ಗಂಟಿಗ್ ಹಾಕ್. ಇದನ್ನ್ ಕಡಿ ಇದನ್ನ್ ಆ ದೆನಿಗ್ ಹಾಕ್. ನಂಗೆ ಮಾಡುಕೆ ಬೇರೆ ಎಂತ ಕೆಲ್ಸ ಇಲ್ಯಾ? ಹೀಂಗ್ ಬೆಳದ್ದನ್ನೆಲ್ಲ ಕೊಚ್ಚಿ ಕೊಚ್ಚಿ ದೆನಿಗ್ ಹಾಕು ಪಾಲ್…ಪಾಪ ಆ ನೆರ್ಮನಿ ಸುಬ್ಬಣ್ಣನಿಗಾರೂ ಕೊಟ್ಟಿದ್ದ್ರೆ ಪದಾರ್ಥ ಮಾಡ್ಕಂಡಾರು ತಿಂತಿದ್ರೆಲೆ. ಕಾಳ : ಹ್ವಾಯ್..ಭಾಗ್ವತ್ರೇ…ಕೇಂಡ್ರ್ಯಾ…? ಈಗ ಯಾರಿಗಾರೂ ಮಧ್ಯ ಬಾಯ್ [...]
ಇನ್ನ್ ಮೂರ್ ತಿಂಗ್ಳ್ ಬೆಂಗ್ಳೂರಗೆ ಆಟ ಕಾಂಬುಕೆ ಅಡ್ಡಿಲ್ಲ…
Posted: June 9, 2008 in ಆಟ, ಯಕ್ಷಗಾನTags: ಆಟ, ಕುಂದಾಪುರ, ಕುಂದಾಪ್ರ, ಪೆರ್ಡೂರು ಮೇಳ, ಬೆಂಗಳೂರು, ಯಕ್ಷಗಾನ
ಮಳ್ಗಾಲ ಬಂದ್ರ್ ಸಾಕ್ ಕಾಣಿ. ನಂಗಂತೂ ಎಲ್ಲಿಲ್ಲದ್ ಖುಷಿ. ಮೂರೊತ್ತೂ ಬಿಡ್ದೆ ಮಳಿ ಹೊಡುವತಿಗೆ ಮನಿ ಒಳ್ಗ್ ಕೂಕಂಡ್ ಕಾಂಬುದೇ ಒಂದ್ ಚೆಂದ. ಸಣ್ಣಕಿಪ್ಪತ್ತಿಗೆ ಚೂರ್ ಮಳಿ ಬಿಟ್ರೂ ಸಾಕ್, ಗುಡ್ಡಿ ಬದಿಯಿಂದ್ ಹರ್ಕಂಡ್ ಬಪ್ಪ್ ನೀರಿಗೆ ಕಟ್ ಕಟ್ಟಿ, ಮಣ್ಣಂಗ್ ಆಡುದ್, ಹೊಳಿಯಗೆ ನೆರಿ ಬಂದ್ರೆ ನೀರ್ ಎಷ್ಟ್ ಏರಿತ್ ಅಂದೇಳಿ ಕಾಂಬುಕೆ ಮನೆಯರದ್ ಪಿರಿಪಿರಿ ಮಧ್ಯವೇ ಕೊಡಿ ಹಿಡ್ಕಂಡ್ ಹೋಯಿ ಕಾಂತಾ ಕೂಕಂತಿದ್ದದ್ದ್… ಎಲ್ಲಾ ನಿನ್ನೆ ಮೊನ್ನೆ ಅಂಬಂಗಿತ್ತ್. ಘಾಟಿಯಗೆ ಜೋರ್ ಮಳಿ ಬಂದ್ರೆ [...]
