Posts Tagged ‘ಕುಂದಾಪ್ರ ಕನ್ನಡ’

ರಿಷಿ ಸಿನಿಮಾದ “ನಾನು ಒತ್ತಾರೆ ಎದ್ಬಿಟ್ಟು…” ಹಾಡನ್ನು ಕುಂದಾಪ್ರ ಬದಿ ಕೆಲ್ಸದ್ ಹೆಣ್ಣ್ ಮತ್ತ್ ಮನಿ ಯಜ್ಮಾನ್ತಿ ಮಾತಾಡುವಂಗೆ ಬರ್ದ್ರೆ ಹ್ಯಾನ್ಗಿರತ್ತ್ ಕಾಣಿ… ಈ ಪದ್ಯ ಕೇಂತಾ ಓದ್ರೆ ಇನ್ನೂ ಲಾಯ್ಕಿರತ್ತ್.. ಅದ್ಕೆ ಪದ್ಯದ ವಿಡಿಯೋ ಇಲ್ಲೇ ಪೋಸ್ಟಿನ ತುದಿಯಲ್ ಹಾಕಿದೆ ಕಾಣಿ…. ನಾಳೆ ಬೆಳ್ಮುಚ್ ಬೇಗೆದ್ದು..ಬಚ್ಲ ಒಲಿಗೆ ಕಿಚ್-ಒಟ್ಟಿ..ಗಂಟಿ ಎಬ್ಬಿ ಬರ್ಕ್ ಹೆಣೆ… ಚೂರ್ ಚಾ ಇದ್ರೆ ಕುಡ್ಕಂಡ್ ..ಆಂಗ್ಳಕ್ಕೆ ನೀರ್ ಹಾಕಿ… ರಂಗೋಲಿ ಹಾಕ್ಕ್ ಹೆಣೆ… ಹಾಡಿ ಬದಿಗೋಯಿ ಗುಡ್ಸ್ಕಂಡ್ …ದರ್ಲಿ ಒಟ್ಟ್-ಮಾಡ್ಕಂಡ್… ಗೆದ್ದಿಗ್ [...]

ರಿಷಿ ಸಿನಿಮಾದ ನಾನು ಒತ್ತಾರೆ ಎದ್ಬುಟ್ಟು…ಹಾಡು ಕುಂದಾಪ್ರಕ್ಕೆ ಬಂದ್ರೆ…ಹೀಂಗ್ ಆತ್ತ್ ಕಾಣಿ… ರಾಜು ಅನಂತ ಸ್ವಾಮೀ ಹಾಡಿದ್ ಈ ಪದ್ಯ ಕಂಡ್ರೆ ನಂಗೆ ಮಸ್ತ್ ಖುಷಿ… ಈ ಪದ್ಯ ಕೇಂತಾ ಓದ್ರೆ ಇನ್ನೂ ಲಾಯ್ಕಿರತ್ತ್.. ಅದ್ಕೆ ಪದ್ಯದ ವಿಡಿಯೋ ಇಲ್ಲೇ ಪೋಸ್ಟಿನ ತುದಿಯಲ್ ಹಾಕಿದೆ ಕಾಣಿ…. ನಾನು ಬೆಳ್ಮುಚ್ ಎದ್ಕಂಡ್..ನಿನ್ ಸೊಡ್ಡ್ ಕಂಡ್ಕಂಡ್.. ಕೈ ಮುಕ್ಕಂಡ್ ನಿಂತ್ಕಂತೆ ಹೆಣೆ… ಬೇಗ ಚಾ ಕಣ್ಣ್ ತಂದ್ಕೋಟ್ಟು.. ನಿನ್ ಕಾಲ ಬುಡ್ದಗಿಟ್ಟು… ಚೂರ್-ಚೂರೆ ಕುಡ್ಸ್ತೆ ಹೆಣೆ… ಚಾಕ್ ಸಕ್ರಿ ಕಮ್ಮಿ [...]

“ನೆನಪಿರಲಿ” ಪಿಚ್ಚರಿನ ಕೂರಕ್ ಕುಕ್ರಳ್ಳಿ ಕೆರೆ ಹಾಡು…ಕುಂದಾಪ್ರ ಸ್ಟೈಲಗೆ … (ಅಣಕ ಬರದ್ದ್ -ವಿಜಯರಾಜ್ ಕನ್ನಂತ) ಎಲ್ಲಾ ಹಕ್ಕು ಕಾಯ್ದಿರಿಸಲಾಗಿದೆ ಹ್ವಾಯ್ ಯಾರದ್ ಹೆದ್ರಕಂಬರ್ …ಅಂಡ್ಕಂಬರ್ ಹೊಕ್ಕಂಬರ್ , ಮಂಡಿ ಜಪ್ಕಂಬರ್, ಹಳೀನ್ ಹಿಂಡಲಗೆ ಮಾತಾಡ್ವರ್, ಸಂತಿಯಗೆ ಪಿಸಿ-ಪಿಸಿ ಅಂಬರ್ ಕುಂದಾಪುರ್ದಂತ ತಾಲೋಕಗೆ ಆಯ್ಕಂಡ್ ಕಾಂಬುಕ್ ಬೇಕಾದ್ದೆಲ್ಲ ಇದ್ದೂ ಹೊಳಿ,ಕಾಡ್ ಗುಡ್ಡಿ ಇದ್ರೂ, ಪ್ರೀತಿ ಮಾಡುಕ್ ಜಾಗ ಇದ್ರೂ ಕಳ್ರ ಕಣಂಗೆ ಮಿಣ್ಣಗೆ ಹೊತ್ರ್ಯಲ್ಲ… ಬನಿಯೇ.. ಇಲ್ಕಾಣಿಯೇ … ನಾನ್ ಲವ್ ಮಾಡು ಸ್ಟೈಲ್ ಒಂಚೂರ್ ಕಲಿನಿಯೇ [...]

ಗಾಳಿಪಟದ “ಮಿಂಚಾಗಿ ನೀನು ಬರಲು” …ಕುಂದಾಪ್ರ ಕನ್ನಡದಗೆ…:) (- ಅನುವಾದ ವಿಜಯರಾಜ್ ಕನ್ನಂತ್ ) ಎಲ್ಲ ಹಕ್ಕು ಕಾದಿರಿಸಲಾಗಿದೆ :-) :-) ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ ನೀ ಇಲ್ದೆ ಕಿಚ್ಹ್ ಹಿಡ್ದಂಗಾಯಿ… ಎದಿಯೊಳಗೆ ಸೆಕಿಗಾಲ ಇನ್ನಿಲ್ಯೇ ನಂಗೆ ಉಳ್ಗಾಲ… ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ ನಾ ನಿನ್ ಕನ್ಸಿಗೆ… ಬಾಡ್ಗಿಗೆ ಬಂದಿದ್ನೆ… ತಿಂಗ್ಳ ಬಾಡ್ಗಿ ಕೊಟ್ ಹೋಪ್ಕೆ…ನಿಮ್ಮನಿಗೆ ಬತ್ತೆ ನಾ ನಾ ಸರ್ತ [...]

ಸುಮಾರ್ ಸಮಿಂದ ಎಣ್ಸ್ ಕಂಡಿದ್ದೆ… ಬ್ಲಾಗಗೆ ಯೇಗ್ಳೇಗ್ಳೋ ಬರದ್ದ್ ಕುಂದಾಪ್ರ ಕನ್ನಡ ಶಬ್ದ ಎಲ್ಲ ಒಟ್ಟ್ ಮಾಡಿ ಒಂದ್ ಬದ್ಯಗೆ ಇಟ್ರೆ ಒಳ್ಳೇದಾತ್ತಲ್ದಾ ಅಂದೇಳಿ… ಇವತ್ತ್ ಗಳ್ಗಿ ಕೂಡಿ ಬಂತ್… ಇಷ್ಟ್ ದಿನ ಬ್ಲಾಗಗೆ ಬರದ್ ಶಬ್ದ ಎಲ್ಲಾ ಒಟ್ಟ್ ಮಾಡಿ ಇಲ್ಲ್ ಕೊಟ್ಟಿದೆ.. ಇದ್ರಗೆ ನೊಂಗೂ ಒಂದ್ ’ಪಡಾವ್’ ಇತ್ತ್.!! ಹೊಸ್ತೆಂತಾರೂ ಬರುವತಿಗೆ, ಈ ಶಬ್ದ ಮೊದ್ಲೇ ಬ್ಲಾಗಗೆ ಬರ್ದಿನಾ ಇಲ್ಯಾ ಅಂದೇಳಿ ಹುಡ್ಕುಕ್ ಸುಲ್ಭ ಆಯಲ್ಯಾ? ನಿಮ್ಗ್ ಓದುಕ್ ಸಂತೆ ಎಲ್ಲ ಒಂದೆ ಬದ್ಯಗೆ [...]

ಹ್ವಾಯ್ ಇದೆಂತ ದರ್ಶಿನಿ ಹೋಟ್ಲಗೆ ಜೀರಾ ರೈಸು, ಘೀ ರೈಸು ಅಂದೇಳಿ ಬೋರ್ಡ್ ಬರ್ದ್ ಹಾಕಿದಂಗಿತ್ತಲೆ.. ಎಂತಾ ಮರಾಯ್ರೆ ಹೋಟ್ಲ್ ಗೀಟ್ಲ್ ಇಟ್ಟಿರ್ಯಾ ಎಂತ ಕತಿ ಅಂದೇಳಿ ಮಂಡಿ ಗಿಂಡ್ಕಂಬ್ಕೆ ಶುರು ಮಾಡ್ಬೇಡಿ… ಹೋಟ್ಲ್ ಇಟ್ಟರೇ ಈಗ ಹ್ಯಾಂಗ್ ಸುಧಾರ್ಸುದಂದೇಳಿ ಮಂಡಿ ಬಿಶಿ ಮಾಡ್ಕಂಡಿದ್ರ್ ಮರ್ರೆ..ನೀವ್ ಎಂತದೋ ಹೇಳ್ತ್ರಿ… ಮತ್ತೆಂತ ಅಲ್ಲ ಇದ್ ನಾನ್ ಇವತ್ತ್ ಹಿಡ್ಕಂಡ್ ಬಂದ್ ಕುಂದಾಪ್ರ ಕನ್ನಡ ಶಬ್ದ. ಈ ಶಬ್ದದ್ ಕತಿ ಎಂತ ಕಾಂಬ ಬನಿ ಹಂಗಾರೆ… ರೈಸು = ಗಡದ್ದಾಗಿರು, [...]

ಅಂದಾಂಗೆ ನಾಡ್ದ್ ಹನ್ನೊಂದ್ನೇ ತಾರೀಕ್ ಬಂದ್ರೆ ಬ್ಲಾಗಿಗೆ ಮೂರ್ ವರ್ಷ ಆತ್ತ್. ಇಷ್ಟ್ ದಿನ ಹ್ಯಾಂಗಿದ್ರೂ ಬ್ಲಾಗಿಗೆ ಉಪ್ವಾಸವೇ ಆಯ್ತ್. ಹುಟ್ದಬ್ಬನಾರೂ ಗಡ್ಜಾಯಿ ಮಾಡಿ ಹೊಟ್ಟಿ ತುಂಬಾ ಊಟ ಹಾಕುದ್ ಬ್ಯಾಡ್ದಾ ಹಂಗಾರೆ…. ಅದಕ್ಕೇ ಇವತ್ತ್ ಅರ್ಧ ದಿನ ಕೂತ್ಕಂಡ್ ಹುಟ್ದಬ್ಬಕ್ಕೆ ಅಡ್ಗಿ ಮಾಡದ್ದೇ ಮಾಡದ್ದ್…. ನೀವೂ ಬಂದ್ ಒಂದೆರ್ಡ್ ತುತ್ತ್ ತಿನ್ಕಂಡ್ ಹೋರೆ ನಂಗೂ ಖುಶಿಯಾತ್ತ್ ಕಾಣಿ.. ಹುಟ್ದಬ್ಬಕ್ಕೆ ಬರೀ ಕೈ ಬೀಸ್ಕಂಡ್ ಬರ್ಬೆಡಿ.. ಎಂತಾರೂ ಹಿಡ್ಕಂಡ್ ಬನಿ… ಅಂದ್ರೆ ಓದಿ ನಿಮ್ಮ ಅಭಿಪ್ರಾಯ ನಂಗ್ ಹೇಳ್ರೆ ಅದೇ ನೀವ್ ಕೊಡು ಉಡ್ಗ್ರಿ… :-)

ಬಲ ಮಾಡುದ್ – ಬೆಳೆಸಿ ದೊಡ್ಡವರನ್ನಾಗಿ ಮಾಡು ಬಳಕೆ – ೧.ದೊಡ್ಡಕೆ ಮಾತ್ ಬತ್ತ್ ಅಂದೇಳಿ ಮಾತಾಡ್ಬೆಡ, ಮಾತಾಡುಕೆ ಭಾರಿ ಸುಲ್ಭ, ನಿಮ್ಮನೆಲ್ಲ ಬಲ ಮಾಡ್ಕಿದ್ರೆ ಎಷ್ಟ್ ಕಷ್ಟ್ ಪಟ್ಟಿದೆ ಅಂದೇಳಿ ನಿಂಗೆಂತ ಗೊತಿತ್? ೨.ನಿಮ್ಗ್ ಬೇರೆ ಕೆಲ್ಸ ಇಲ್ಯಾ, ಮಕ್ಳನ್ನೆಲ್ಲ ಸಾಕಿ ಬಲ ಮಾಡುದೇ ಕಷ್ಟ, ಇನ್ನ್ ಶಾಲಿ ಗೀಲಿಗೆಲ್ಲ ಕಳ್ಸುಕೆ ಎಲ್ಲಿಗೆ ಹೋಪ್ದ್? ಬಲಾದರ್ – ಬಲ ಆದವರು ,ದೊಡ್ಡವರು , ಹಿರಿಯರು ಬಳಕೆ – 1. ಸಣ್ಣರಂದೇಳಿ ಇಲ್ಲ, ಬಲಾದರಂದೇಳಿ ಇಲ್ಲ, ಎದ್ರುತ್ರ [...]

ಪುರ್ಸೊತ್ತಿದ್ದಾಗ್ಳಿಕೆ ಬರುಕ್ ಉದಾಶಿನ, ಬರುಕ್ ಉಮೇದ್ ಬಂದಾಗ್ಳಿಕೆ ಪುರ್ಸೋತ್ತಿಲ್ಲ ಹಾಂಗಿನ್ ಕತಿ ಆಯ್ತ್ ಕಾಣಿ ಆರೂ ಈ ಸರ್ತಿ ಬರೀದೆ ಬಾಳ ಸಮಿ ಆಯ್ತ್. ಇನ್ ಬರಿದಿದ್ರೆ ಆಪ್ದಲ್ಲ ಅಂದೇಳಿ ನಿನ್ನೆ ಬರುಕ್ ಕೂಕಂಡೆ… ಒಂದ್ ಅರ್ಧ ದಿನದ ಮೇಲ್ ಆಯ್ತ್ ಇದನ್ನೆಲ್ಲಾ ಬರ್ದ್ ಮುಗ್ಸುವತ್ತಿಗೆ. ಬರ್ದ್ ಮುಗ್ಸ್ರ್ ಮೇಲೆ ನಂಗಂತೂ ಖುಷಿ ಆಯ್ತ್, ನಿಮ್ಗೂ ಅದ್ರಗೆ ಅರ್ಧ ಪಾಲ್ ಖುಷಿ ಸಿಕ್ರೆ..ನಾ ಬರದ್ದಕ್ಕೂ ಒಂದ್ ಲೆಕ್ಕ, ಎಂತ ಅಂತ್ರಿ? ಇನ್ನೊಂದಿಷ್ಟ್ ಕುಂದಾಪ್ರ ಕನ್ನಡ ಶಬ್ದ ಕಾಂಬ ಬನಿ ಹಂಗಾರೆ [...]

ಕುಂದಾಪ್ರ ಬದಿ ಶಬ್ದ ಕೆಮಿ ಮೇಲ್ ಬೀಳ್ದೆ ಸುಮಾರ್ ದಿನ ಆಯ್ತಮಗಿತ್ತಲ್ಲ… ಇಲ್ಲೊಂದೆರ್ಡ್ ಇತ್ತ್ ಕಾಣಿ.. ಜೀವ್ ಬಿಡ್ತ – ಈ ಶಬ್ದ ಕುಂದಾಪ್ರ ಕನ್ನಡದ್ದ್ ಮಾತ್ರ ಅಂತ ಹೇಳುಕಾತಿಲ್ಲ. ಬೇರೆ ಬೇರೆ ಬದಿಯಗ್ ಸತೆ ಇದೆ ನಮನಿ ಶಬ್ದ ಕೆಲವ ಇತ್ತ್. ಇದಕ್ಕೆ ಅರ್ಥ ಹೇಳುದಾರೆ ಪಂಚಪ್ರಾಣ ಅಂಬುದ್ ಸರಿ ಆತ್ತಾ ಕಾಣತ್ತ್ ಬಳಕೆ – ೧. ಅವನಿಗೆ ಮಾಯ್ನಣ್ಣ್ ಅಂದ್ರ್ ಸೈ… ಜೀವ್ ಬಿಡ್ತ ( ಬೇಕಿದ್ರೆ ನಿಮ್ಮ್ ನಿಮ್ಮ್ ಅನ್ಕೂಲಕ್ಕೆ ಮಾಯ್ ಹೆಣ್ಣ್ ಅಂದೆಳಿ ಬೇಕಾರ್ ಓದ್ಕಂಬುಕೆ ಅಡ್ಡಿಲ್ಲ) ೨. ಅವ್ಳ್ ಮಕ್ಳ್ [...]

ಬರೀ ಕುಂದಾಪ್ರ ಕನ್ನಡದಗೆ ಮಾತ್ರ ಎಂತಕೆ , ಈಗ ಯಾವ್ ಕನ್ನಡದಗೂ ಇಪ್ಪುದ್ ಇಂಗ್ಲೀಷೆ ಅಲ್ದಾ. ಯಾರಾರೂ ಶುದ್ಧ ಕನ್ನಡ ಮಾತಾಡುವರ್ ಇದ್ರೆ ಹುಡ್ಕಿ ಕೊಡಿನಿ ಕಾಂಬ ಹಂಗಾರೆ  ಅಂದೇಳಿ  ನೀವ್ ಕೆಂಬ್ಕೂ ಸಾಕ್.  ಅದ್ರಗೂ ಬೆಂಗಳೂರಗೆ ಹಾಂಗಿನರ್ ಯಾರಾರೂ ಇದ್ರೆ ಅವ್ರಿಗೆ ರಾಜ್ಯೋತ್ಸವ ಪ್ರಶಸ್ತಿಯೇ ಕೊಡ್ಲಕ್ಕ್ ಅಂತ್ ನೀವ್ ಹೇಳುಕೂ ಸಾಕ್.  ಆರೇ ನಾ ಹೇಳುಕ್ ಹೊರಟದ್ದ್ ಅದ್ ಅಲ್ದೆ… ಒಂದ್ ಇಂಗ್ಲಿಷ್ ಶಬ್ದ ಕುಂದಾಪ್ರ ಕನ್ನಡದೊಳಗೆ ಬಂದ್ ಕೂಕಂಡಿತ್. ಆ ಶಬ್ದ ಯಾವ್ದ್ ಅಂದೇಳಿ ನೆನ್ಪ್ ಮಾಡ್ಕಂಕಿದ್ರೆ [...]

ಮತ್ತೆ ಎಲ್ಲ ಹ್ಯಾಂಗಿದ್ರಿ? ಊರಗ್ ಮೊನ್ನೆ ಮತ್ತ್ ಮಳಿ ಬಂದಿತಂಬ್ರಲೆ… ನಿಮ್ದ್ ಕೊಯ್ಲ್ ಎಲ್ಲಾ ಆಯ್ತ್ ಕಾಣತ್ ಅಲ್ದಾ? ಹ್ಯಾಂಗೆ ಈ ವರ್ಷ ಬ್ಯಾಸಾಯ ಅಡ್ಡಿಲ್ಲ್ಯಾ? ಪೆರ್ಡೂರ್, ಸಾಲಿಗ್ರಾಮದರದ್ ತಿರ್ಗಾಟ ಶುರು ಆಯಿರ್ಕ್ ಅಲ್ದಾ?  ಆಟ ಗೀಟ ಕಾಂಬ್ಕ್ ಹೋಯಿಲ್ಲ್ಯಾ? ಈಗೀಗ ಆಟ ಕಾಂಬ್ಕ್ ಹೋಪ್ಕೇ ಮನ್ಸ್ ಬತ್ತಿಲ್ಲಪ. ಎಲ್ಲಾ ಪಿಚ್ಚರಿದೇ ಕತಿ ಮಾಡುದಾರೆ ಆಟ ಎಂತಕ್ ಕಾಣ್ಕ್ ರಾತ್ರಿಡೀ ನಿದ್ರಿ ಬಿಟ್ಕ್ಂಡ್. ಪಿಚ್ಚರೇ ಕಾಣ್ಲಕ್. ಆರೂ ಒಂದ್ ಅಂದ್ರೆ ಬೆಂಗ್ಳೂರಗೆ ಬಂದಲ್ಲ್ ಈ ಸರ್ತಿ ಎಲ್ಲಾ [...]

ನಿಮ್ಮ ಕೊಂಗಾಟದ ಕುಂದಾಪ್ರ ಕನ್ನಡ ಬ್ಲಾಗಗಿವತ್ತ್ ಐವತ್ನೆ ಪೋಸ್ಟ್ ಹಾಕ್ತಿದ್ದೆ ಕಾಣಿ. ಐವತ್ನೇದ್ ಆಪುಕೋಯಿ ಎಂತಾರೂ ಗಡ್ಜ್ ಮಾಡ್ಕಂದೇಳಿ ಎಣ್ಸಕಂಡಿದ್ದಿದೆ. ಸುಮಾರ್ ದಿನ್ದಿಂದ ಎಂತ ಬರುದ್ ಎಂತ ಬರುದ್ ಅಂದೇಳಿ ಆಲೋಚ್ನಿ ಮಾಡದ್ದೆ ಮಾಡದ್ದ್. ಕಡೀಗೆ ಹೀಂಗ್ ಮಾಡ್ರೆ ಹ್ಯಾಂಗ್ ಅನ್ಸ್ತ್. ನೀವೆಲ್ಲ ಈ ಬ್ಲಾಗಿಗೆ ಸುಮಾರ್ ದಿನ್ದಿಂದ್ ಬತ್ತಿದ್ರಿ ಹೌದಾ. ನಿಮ್ ಕೈಯ್ಯಗೆ ಎಂತಾರೂ ಒಂಚೂರ್ ಬರುಕೆ ಹೇಳುದ್. ಎಲ್ಲ ಎಂತ ಬರಿತ್ರಿ ಕಾಂಬಾ.   ಬರುಕೆ ವಿಷ್ಯ ಎಂತಾ ಕೇಂಡ್ರ್ಯಾ? ನಮ್ ಕುಂದಾಪ್ರ ಭಾಷಿ, ಕುಂದಾಪ್ರದ್ ಜಾಗ, ಕುಂದಾಪ್ರದಗೆ ಮಾತ್ರ ಇಪ್ಪ್ [...]

ಒಂದೊಂದ್ ಬದಿ ಭಾಷಿಯಗೆ ಆಲ್ಲಲ್ಲಿದೇ ವಿಶೇಷ ಆಡುನುಡಿ ಅಂದೇಳಿ ಇರತ್ತ್. ಆ ಬದ್ಯಗಿದ್ದರ್ ಮಾತಗ್ ಮಾತ್ರ ಇದ್ ಕಾಂಬುಕೆ ಸಿಕ್ಕತ್ತ್. ಹಾಂಗಿಂದ್ ಒಂದ್ ನಾಲ್ಕ್ ಕುಂದಾಪ್ರ ಕನ್ನಡದ ಆಡುನುಡಿ ಇಲ್ಲಿತ್ತ್ ಕಾಣಿ… ತಕಂಡ್ ಹೋತ್ತಾ ಬಳಕೆ – ೧.         ಬಸ್ ಹತ್ತುವ ಅಂದೇಳ್ರೆ ಅಯ್ಯಬ್ಬಾ ಈ ಜನ ಎಲ್ಲಾ ನುರುದೇ… ಹಂಗಾರ್ ಬಸ್ ನಿಲ್ಲುದಿಲ್ಲ್ಯಾ.. ಇವ್ರಿಗೆಲ ಏನ್ ತಕಂಡ್ ಹೋತ್ತಾ? ೨.         ಒಂದ್ ಮಾತಾಡ್ಕಾಯ್ದಿಲ್ಲ… ಆ ನಮನಿ ಬೊಬ್ಬಿ ಹೊಡಿತ್ಯಲ.. ನಿಂಗೇನ್ ತಕಂಡ್ ಹೋತ್ತಾ? ೩.         ಈ [...]

ಕುಂದಾಪ್ರ ಕನ್ನಡ ಬ್ಲಾಗಿಗೆ ಇನ್ನೇನ್ ವರ್ಷ ತುಂಬುಕ್ ಹತ್ರ ಆಯ್ತ್… ಆ ಖುಷಿಯಗೆ ಏನಾರೂ ಒಂಚೂರ್ ಬೇರೆ ಬರುವಾ ಅಂದೇಳಿ ಒಂದ್ ಕತಿ ಬರ್ದ್ರೆ ಹ್ಯಾಂಗೇ ಅಂದೇಳಿ ಬರುಕ್ ಹೊರ್ಟಿದೆ… ಕತಿ ಸುಮಾರ್ ಉದ್ದ ಇತ್ತ್… ಹಾಂಗಾಯ್ ಒಂದೇ ಸರ್ತಿ ಪೂರಾ ಕತಿ ಹಾಕುಕ್ ಆತಿಲ್ಲ… ಒಂದ್ ಮೂರ್-ನಾಕ್ ಭಾಗ ಆತ್ತ್…ವಾರಕ್ಕೊಂದ್ ಭಾಗ ಬರಿಕ್ ಅಂದೇಳಿ ಎಣ್ಸ್‌ಕಂಡಿದೆ… ಅದ್ರಗೆ ಮೊದ್ಲಿನ್ ಕಂತ್ ಇಲ್ಲಿತ್ತ್ ಕಾಣಿ… ನಿಮ್ಗೆಲ್ಲ ಕತಿ ಹಿಡ್ಸರೆ ಮುಂದಿನ್ ಕಂತ್ ಬರುವ ಅಂದೇಳಿ ಮಾಡಿದೆ.. ಓದಿ [...]

ಕಳ್ದ್ ಸರ್ತಿ ಒಂದಿಷ್ಟ್ ಕುಂದಾಪ್ರ ಕನ್ನಡ ಶಬ್ದ ಕೊಟ್ಟ್ ನಿವೆಲ್ಲ ಉತ್ರ ಹೇಳಿನಿ ಕಾಂಬ ಅಂತ್ ಹೇಳಿದೆ… ನಾವಡ್ರ್, ಯಶೋಧ ಮತ್ತೆ ಅನುಪಮ ಸುಮಾರ್ ಸರಿ ಉತ್ರ ಕೊಟ್ಟಿರ್. ಬೇರೆ ಯಾರೂ ಈ ಬದಿಗ್ ನೀಕಿ ಕಾಣಲ್ಯೋ…, ಕಂಡ್ರೂ ಉತ್ರ ಹೇಳುಕೆ ಮನ್ಸಿಲ್ಯೋ, ಅತ್ವ ಯಾರ್ ಹೇಳ್ತ್ರ್.. ಇವ್ನಿಗೆ ಬೇರೆ ಕೆಲ್ಸ ಇಲ್ಲ ಅಂದೇಳಿ ಸುಮ್ನಾಯ್ಕಂಡ್ರೋ ಗೊತ್ತಿಲ್ಲ. ಹೋಯ್ಲಿ ಬಿಡಿ… ನಂಗೇನ್ ಬೇಜಾರಿಲ್ಲ… ಯಾರಿಗಾರೂ ಒತ್ತಾಯ ಮಾಡಿ ಉತ್ರ ಹೇಳಿ ಅಂದೇಳಿ ಹೇಳುಕಾತ್ತಾ?   ಆರ್ ಹೀಂಗ್ [...]

ಮೊನ್ನೆ ನನ್ ಫ್ರೆಂಡ್ ಒಬ್ಬ ಕಮಲಶಿಲೆಗೆ ಹೊಯಿ ಬಂದಿದ್ದ. ಅಲ್ಲಿನ್ ಗುಹೆ ಕಾಣ್ಕ್ ಅಂದೇಳಿಯೇ ಅಂವ ಹೋದ್ದ್. ಹೋಯಿ ಬಂದನೆ ಗುಹೆ ಕಂಡ್ಕಂಡ್ ಬಂದ್ ಕತಿಯೆಲ್ಲ ಹೇಳ್ತಿದ್ದ. ಸುಮಾರ್ ಫೊಟ ಎಲ್ಲಾ ತೆಗ್ದಿದ ಅಂಬ್ರ್. ಆ ಗುಹೆ ಭಾರಿ ಲಾಯ್ಕ್ ಇತ್ತ್ ಮರಾಯ್ರೆ. ನಾನ್ ಗುಹೆ ಕಾಂಬುಕ್ ಹೋಯಿ ಸುಮಾರ್ ವರ್ಷ ಆಯ್ತ್. ಆರೆ ಸುಮಾರ್ ದೊಡ್ಡ್ ಗುಹೆ. ಗುಹೆ ಒಳ್ಗೆ ಲೈಟ್ ಹಿಡ್ಕಂಡ್ ಹೋರೆ ಸುಮಾರ್ ದೂರ್ ಹೋಯ್ಲಕ್. ಅಂವ ಹೇಳದ್ದೆಲ್ಲ ಕೇಂಡ್ ಮೇಲೆ ನಾನೂ [...]

ಅಂಬ್ಡ್, ಅಂಬಡ್ = ಜೋಡಿ, ಅವಳಿ ಬಳಕೆ ಅವ್ರಿಬ್ರ್ರೂ ಅಂಬ್ಡ್ ಮಕ್ಳ್ ಅಂಬ್ರ್. ಕಾಂಬುಕೆ ಒಂದೇ ನಮ್ನಿ ಇದ್ರ್ ಕಾಣಿ ಅಂಬ್ಡ್ ಬಾಳೆಹಣ್ ತಿಂದ್ರೆ ಅಂಬ್ಡ್ ಮಕ್ಳ್ ಹುಟ್ತ್ರ್ ಅಂಬ್ರಲಾ ಹೌದಾ?  ಹತ್ತ / ಹತ್ತಾ = ಸಂಪೂರ್ಣ, ಪೂರಾ ಬಳಕೆ ಹರಿಯಗ್ ನೀರ್ ಹತ್ತಾ ಖಾಲಿ ಮಾಡ್ಬೆಡ ನಂದ್ ಇನ್ನೂ ಮಿಂದ್ ಆಯಲ್ಲ ಯಾರಾರೂ ಪಾಪ್ದರ್ ಸಿಕ್ರೆ ಅಂವ ಹತ್ತ ಬೋಳ್ಸಿ ಬಿಡ್ತ ಪತ್ತಿ = ಆಹಾರ ಇದು ಬಹುಶಃ ಪಥ್ಯ ಶಬ್ದದಿಂದ ಬಂದಿರಬಹುದು. ಪಥ್ಯ [...]

ಕೂರ್ ಮಂಡಿ ಹಾಕುದ್/ ಕಣ್ಣ್ ಕೂರುದು = ತೂಕಡಿಸು, ನಿದ್ರೆ ಬರುವಂತಾಗು ಬಳಕೆ – ೧.         ನಂಗ್ ಕಣ್ಣ್ ಕೂರ್‌ತಾ ಇತ್ತ್. ನಾ ಮಲ್ಕಂತೆ ಅಕಾ? ೨.         ಟಿ.ವಿ. ಮುಂದ್ ಕೂಕಂಡ್ ಕೂರ್ ಮಂಡಿ ಹಾಕ್ದಿದ್ರೆ ಹೊಯಿ ಮಲ್ಕಂಬ್‌ಕಾಗ್ದಾ?   ಚಪ್ಪಿ, ಚಪ್ಪೆ = ಸಪ್ಪೆ (ಬಿಸಿ ತಣಿಯುವುದು ಅನ್ನುವ ಅರ್ಥ ಕೂಡಾ ಇದೆ) ಬಳಕೆ – ೧.         ಸಾರ್ ಸಾಪಾಯಿತ್.. ಆರೆ ಒಂಚೂರ್ ಉಪ್ಪ್ ಚಪ್ಪೆ ೨.         ಎಂಥ ಮಾರಾಯ ಚಪ್ಪಿ ಇದ್ದೆ, ಹುಶಾರಿಲ್ಯಾ? ೩.         [...]

ಹಾಂಟ್ ಹಾಕು / ಹಾಟ್ ಹಾಕು = ಮೋಸ ಮಾಡು, ಚಕ್ಕರ್ ಹೊಡೆ, ಕೈ ಕೊಡು ಬಳಕೆ – ೧.         ನಿಮ್ ದುಡ್ ಕೊಡ್ವಾ ಮರಾಯ್ರೆ..ನಾನೇನ್ ಹಾಂಟ್ ಹಾಕ್ತನಾ ಹಂಗಾರೆ ೨.         ಇವತ್ತ್ ಮನಿಗ್ ನೆಂಟ್ರ್ ಬಂದಿರ್. ಅದಕ್ಕೆ ಶಾಲಿಗ್ ಹಾಂಟ್ ಹಾಕದ್   ಹರ್ಪು = ಪರಚುವುದು, ಗಿಬರು, ಗೀರು ಬಳಕೆ – ೧.         ಮಗಿನ್ ಉಗ್ರ್ ಸಮಾ ಉದ್ದ ಆಯಿತ್. ಇಲ್ಕಾಣಿ ನನ್ ಮುಖದ್ ತುಂಬಾ ಹರ್ಪದ್ ೨.         ಅವ್ನೊಟ್ಟಿಗೆ ಆಡುದ್ ಬ್ಯಾಡಾ ಮರಾಯ. [...]

ಹೈಲು/ ಹೈಲ್ = ಕಂಗಾಲು, ಹೈರಾಣ ಬಳಕೆ :   ೧.         ಈ ವರ್ಷ ಮಳೆ ಬಾರ್ದೆ ಬ್ಯಾಸಾಯ ಮಾಡುವರ್ ಯಾಪಾರ್ ಹೈಲ್ ಅಲ್ದೇ. ೨.         ಈ ಮಕ್ಕಳಿಗೆ ರಜಿಯಾರೂ ಎಂತಕ್ ಬತ್ತೋ ಏನೋ. ಅವ್ರನ್ ಸುಧಾರ್ಸುದ್ರೊಳ್ಗೆ ಅಲ್ದೇ ನಾ ಅರ್ಧ ಹೈಲ್ ಆದ್ದ್. ೩.         ಕೊಡಿ (ಕೊಡೆ) ತಕಂಡ್ ಹೋಪುಕೆ ನೆನ್ಪ್ ಹೋಯಿ, ಮಳೆಯಗ್ ಸಿಕ್ಕಿ ಬಿದ್ದ್ ನನ್ ಯಾಪಾರ ಹೈಲಾದ್ದ್ ಅಲ್ದಾ ಮಾರ್ರೆ   ಊಜು / ಊಂಜು/ ಸೀಬು/ ಸೀಂಬು = ಚೀಪು [...]

ಭಾಷೆಯೊಂದು ಜೀವನದಿಯಂತೆ. ತನ್ನ ಹರಿವಿನುದ್ದಕ್ಕೂ ಬಂದು ಸೇರುವ ಅಸಂಖ್ಯಾತ ಹಳ್ಳ-ತೊರೆಗಳನ್ನು ಅಂತರ್ಗತವಾಗಿಸಿಕೊಂಡು ಮೈದುಂಬಿ ಹರಿಯುವ ನದಿಯಂತೆಯೇ ಭಾಷೆಯೂ ಕೂಡಾ ಆಯಾ ಪ್ರದೇಶಕ್ಕೇ ಸೀಮಿತವಾದ ಪದ, ಗಾದೆ, ನುಡಿಗಟ್ಟುಗಳನ್ನು ಸೇರಿಸಿಕೊಂಡು ಸಮೃದ್ಧವಾಗುತ್ತದೆ. ಕುಂದಾಪುರ ಕನ್ನಡಕ್ಕೇ ಸೀಮಿತವಾದ ಕೆಲವು ವಿಶೇಷ ಪದಗಳನ್ನಿಲ್ಲಿ ನೋಡೋಣ.   ಚರ್ಗಿ ಭರ್ತಿ           –           ದಂಡ ಪಿಂಡ, ಅಪ್ರಯೋಜಕ   ಬಳಕೆ: ಆ ಕೆಲ್ಸ ಮಾಡುಕ ಅವ್ನ್ ಕೈಯ್ಯಗೆ ಆತ್ತಾ? ಅವ ಏನಿದ್ರೂ ಚರ್ಗಿ ಭರ್ತಿಗೇ ಸೈ   ಹನಿ ಹಂದುದಿಲ್ಲ       [...]