ಬುದ್ಧಿವಂತ್ರ್ ಜಿಲ್ಲೆ ಅಂದೇಳಿ ಕರ್ಸ್‌ಕಂತಿದ್ದ ಮಂಗ್ಳೂರಿಗೆ ಆದ್ದಾರೂ ಎಂಥದ್? ಇದ್ ಬುದ್ಧಿ ಕಡ್ಮಿ ಆದ್ದಲ್ಲ. ಕಲ್ತದ್ ಹೆಚ್ಚಾಯ್ತ್ ಕಾಲ್ ಮೇಲಾಯ್ತ್ ಅಂಬಂಗೆ ಆಡ್ತ್ರಲಾ ಇವ್ರಿಗೆಲ್ಲ ಎಂಥ ಹೇಳುದ್ ಹೇಳಿ. ಅದೆಂತದೋ ಮತಾಂತರ ಅಂದೇಲಿ ಶುರುವಾದ ಈ ಗಲಾಟಿ ಎಲ್ಲಿಗ್ ಹೋಯ್ ಮುಟ್ಟುತ್ತೋ ಆ ದೇವ್ರೇ ಬಲ್ಲ. ಬೆಂಕಿ ಇಲ್ದೆ ಹೊಗಿ ಏಳುದಿಲ್ಲ. ಫಾರಿನ್ನಿಂದ ದುಡ್ ಬತ್ತಂಬ್ರ್, ದುಡ್ಡಿನ್ ಆಶಿ ತೋರ್ಸಿ ಮರ್ಲ್ ಮಾಡ್ತ್ರಂಬ್ರ್, ಕಾಯ್ಲಿ ಗುಣ ಮಾಡ್ತೆ ಅಂದೇಳಿ ಮಂಡಿ ಹಾಳ್ಮಾಡ್ತ್ರ್ ಅಂಬ್ರ್…ಹೀಂಗೆ ಸುಮಾರ್ ವರ್ಷದಿಂದ್ಲೂ ಗುಸುಗುಸು [...]
