ಕೊಲವೆರಿ ಸ್ಟೈಲಗೆ ಹೆಡಿಮಂಡಿ….. ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ ಬ್ಯಾಟ್ ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ ಬ್ಯಾಟ್ ಡಿಸ್ಟೆನ್ಸಲ್ಲ್ ಗೆದ್ದಿ ಗೆದ್ದಿ ಗೆದ್ದಿ ಕೊಯ್ಲು ಆಯ್ತು ಗೆದ್ದಿ ಕೊಯ್ಲು ಆದ್ರ ಮೇಲೆ ನಮ್ಗ್ ಆಡುಕ್ ಲಾಯ್ಕು ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ ಬ್ಯಾಟ್ ಬೇಸ್ಗಿ ರಜಿಯಗೆ ಫುಲ್ಲು ಫುಲ್ಲು ನಮ್ದು ಕ್ರಿಕೇಟು ಆಟ ಆಡಿ ಆರ್ಮೇಲ್ ಕೈಕಾಲ್ ತೊಳ್ಕಂಡ್ ಒಂದು ಮುಷ್ಟಿ ಊಟ ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ ಬ್ಯಾಟ್ ಕೈಯ್ಯಲ್ಲಿ [...]
Archive for the ‘kundapura’ Category
ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ ಬ್ಯಾಟ್
Posted: February 8, 2012 in anaka, ಅಣಕ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಗಮ್ಮತ್ ಇತ್ತ್ ಕಾಣಿ..., ಹಾಡು, kundaapra kannada, kundapra, kundapra kannada, kundapur, kundapur kannada, kundapura, kundapura kannadaಕೊಂದ್ ಪಾಪ ತಿಂದೇ ಪರಿಹಾರ
Posted: January 7, 2012 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ ಕನ್ನಡ, kundaapra kannada, kundapra, kundapra kannada, kundapur, kundapur kannada, kundapura, kundapura kannadaರೊಟ್ಟಿ ಜಾರಿ ತುಪ್ಪದಗ್ ಬಿದ್ದಾಂಗ್ ಆಯ್ತ್… ಹುಡ್ಕತಿದ್ದ ಬಳ್ಳಿಯೇ ಕಾಲಿಗೆ ಸಿಕ್ಕಾಂಗ್ ಆಯ್ತ್… ಹೀಂಗೆ ಎಂತ ಬೇಕಾರು ಅನ್ಕಣ್ಲಕ್ಕ್… ಇವತ್ತ್ ರವೀಂದ್ರ ಕಲಾಕ್ಷೇತ್ರದಗೆ ನೆಡಿತಿಪ್ಪ ಪುಸ್ತಕ ಪ್ರದರ್ಶನಕ್ಕ್ ಒಂದ್ ಗಳ್ಗಿ ಹೋಯ್ ಬಪ್ಪ ಅಂತ ಹೋಯಿ ಬಂದೆ. ಪ್ರತಿ ಸರ್ತಿ ಅರಮನೆ ಮೈದಾನದಗೆ ನೆಡುವ ಪುಸ್ತಕ ಪ್ರದರ್ಶನಕ್ಕೆ ಹೋತಿದ್ದಿದೆ. ಈ ವರ್ಷ ಅಲ್ಲಿಗ್ ಹೋಪ್ಕ್ ಆಯಲ್ಲ. ಬೆಂಗ್ಳೂರಗೆ ಸಾಹಿತ್ಯ ಸಮ್ಮೇಳನ ಆದಲ್ಲ್ ಹೋದ್ದೆ ಕೊನೆ. ಅದ್ರ ಮೇಲೆ ಅಂಕಿತ ಪುಸ್ತಕಕ್ಕೆ ಒಂದೊಂದ್ ಸಲ ಹೋದ್ದ್ ಬಿಟ್ರೆ ಪುಸ್ತಕ [...]
ನಮ್ಮ ಕುಂದಾಪ್ರ ಎಷ್ಟ್ ಲಾಯ್ಕಿತ್ತೆ ಕಾಣಿ…
Posted: November 18, 2011 in ಕುಂದಾಪುರ, ಕುಂದಾಪ್ರ, kundapra, kundapur, kundapuraTags: kundapur, kundapura
ಸುಮಾರ್ ಊರ್ ಬದಿ ಫೋಟೋ ಸ್ಲೈಡ್ ಶೋ ಇತ್ತ್… ಲಾಯ್ಕಿತ್ತಾ ಕಾಣಿ ನಮ್ಮ ಕುಂದಾಪ್ರ ಭಾಗ -1 ನಮ್ಮ ಕುಂದಾಪ್ರ ಭಾಗ -2 ನಮ್ಮ ಕುಂದಾಪ್ರ ಭಾಗ -3
ಸುಮ್ನ್ ಆಯ್ಕಣಿ ಅಮ್ಮ ….ಕೊಡುದ್ ನೂರ್ ರೂಪಾಯ್ ಸಂಬ್ಳ… ಮಾಡೂಕ್ ನಂಗ್-ಎಡುದಿಲ್ಲ
Posted: July 23, 2011 in ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಗಮ್ಮತ್ ಇತ್ತ್ ಕಾಣಿ..., kundaapra kannada, kundapra, kundapra kannada, kundapur, kundapur kannada, kundapura, kundapura kannadaTags: ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ ಕನ್ನಡ, kundapura, kundapura kannada
ರಿಷಿ ಸಿನಿಮಾದ “ನಾನು ಒತ್ತಾರೆ ಎದ್ಬಿಟ್ಟು…” ಹಾಡನ್ನು ಕುಂದಾಪ್ರ ಬದಿ ಕೆಲ್ಸದ್ ಹೆಣ್ಣ್ ಮತ್ತ್ ಮನಿ ಯಜ್ಮಾನ್ತಿ ಮಾತಾಡುವಂಗೆ ಬರ್ದ್ರೆ ಹ್ಯಾನ್ಗಿರತ್ತ್ ಕಾಣಿ… ಈ ಪದ್ಯ ಕೇಂತಾ ಓದ್ರೆ ಇನ್ನೂ ಲಾಯ್ಕಿರತ್ತ್.. ಅದ್ಕೆ ಪದ್ಯದ ವಿಡಿಯೋ ಇಲ್ಲೇ ಪೋಸ್ಟಿನ ತುದಿಯಲ್ ಹಾಕಿದೆ ಕಾಣಿ…. ನಾಳೆ ಬೆಳ್ಮುಚ್ ಬೇಗೆದ್ದು..ಬಚ್ಲ ಒಲಿಗೆ ಕಿಚ್-ಒಟ್ಟಿ..ಗಂಟಿ ಎಬ್ಬಿ ಬರ್ಕ್ ಹೆಣೆ… ಚೂರ್ ಚಾ ಇದ್ರೆ ಕುಡ್ಕಂಡ್ ..ಆಂಗ್ಳಕ್ಕೆ ನೀರ್ ಹಾಕಿ… ರಂಗೋಲಿ ಹಾಕ್ಕ್ ಹೆಣೆ… ಹಾಡಿ ಬದಿಗೋಯಿ ಗುಡ್ಸ್ಕಂಡ್ …ದರ್ಲಿ ಒಟ್ಟ್-ಮಾಡ್ಕಂಡ್… ಗೆದ್ದಿಗ್ [...]
ಕಮಲಶಿಲೆ ಗುಹೆಯೊಳಗೆ ಹೀಗೂ ಉಂಟೆ?
Posted: July 17, 2011 in ಕಮಲಶಿಲೆ, ಕಮಲಶಿಲೆ ಗುಹೆ, ಕುಂದಾಪುರ, ಕುಂದಾಪ್ರ, kamalashile, kundapra, kundapur, kundapuraTags: ಕಮಲಶಿಲೆ, ಕಮಲಶಿಲೆ ಗುಹೆ, kamalashile, kamalashile cave
ಕಳ್ದ್ ವಾರ ಟಿ.ವಿ.9ನಗೆ ಹೀಗೂ ಉಂಟೆ ಕಾರ್ಯಕ್ರಮ್ದಗೆ…ನಮ್ಮೂರ್ ಹಳ್ಳಿಹೊಳೆ ಹತ್ರದ್ ಕಮ್ಲಶಿಲಿ ಗುಹೆದ್ ಕತಿ ಬಂದಿತ್ತ್… ಅದ್ರ ವೀಡಿಯೊ ಇಲ್ಲಿತ್ ಕಾಣಿ…. ಮಸ್ತ್ ಲಾಯ್ಕಿತ್ತ್…
ಬೋಲೋ..ತರರರ..(ಕುಂದಾಪ್ರ ಕನ್ನಡದಗೆ)… :-)
Posted: July 12, 2011 in ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಗಮ್ಮತ್ ಇತ್ತ್ ಕಾಣಿ..., kundaapra kannada, kundapra, kundapra kannada, kundapur, kundapur kannada, kundapura, kundapura kannadaಲಾಡಿ ಕಟ್ಕೊ…ಲಾಡಿ ಕಟ್ಕೊ..ಲಾಡಿ ಕಟ್ಕೊ… ಲಾಡಿ ಕಟ್ಕೊ…ಲಾಡಿ ಕಟ್ಕೊ..ಲಾಡಿ ಕಟ್ಕೊ… ಗಡೆ ನಿನ್ನ ಚಡ್ಡಿ…ಬಿಚ್ಚಿ ಹೋಯ್ತಲ್ಲ ಚಡ್ಡಿ ಲಾಡಿ ಬಾಯಿಂದ್ ತೆಗಿಯಾ ಬೆಟ್, ಚಡ್ಡಿ ಮೇಲೆತ್ತಿ ಕಟ್ಟ್.. ಪೂರಾ ತೋರತ್ತ್ ಮಾರಾಯ…ತೋರತ್ ಮರಾಯ, ಗ್ವಾನ್ಜಡಿ ಮೇಲೇರ್ಡ್ ಬಿಡ್ತೆ.. ಪೂರಾ ತೋರತ್ ಮರಾಯ….. ಲಾಡಿ ಕಟ್ಕೊ…ಲಾಡಿ ಕಟ್ಕೊ..ಲಾಡಿ ಕಟ್ಕೊ… ಮೂಗಂಗೆ ಸಿಂಬಳ ಸೊರಿತ್ತ್…ಬಾಯಂಗೆ ಎಂಜ್ಲ್ ಇಳಿತ್ತ್… ಬಾಯ್ಕಳ್ದ್ರೆ ಹತ್ರ ಹೋಪುಕೆ… ಯಾರೀಗ್ಎಡಿತ್ತ್….ಮರಾಯ ಸಿಂಬಳ ವರ್ಸ್ಕೊ ಮರಾಯ ಸಿಂಬಳ ವರ್ಸ್ಕೊ… ಗ್ವಾನ್ಜಡಿ ಮೇಲೇರ್ಡ್ ಬಿಡ್ತೆ… ಸಿಂಬಳ ವರ್ಸ್ಕೊ…ಸಿಂಬಳ ವರ್ಸ್ಕೊ…ಸಿಂಬಳ ವರ್ಸ್ಕೊ [...]
ಕೂಕಂಬ್ಕ್ ಮರವಂತೆ ಬೀಚ್ …ಬಾ ಬಾ (ಹ್ವಾಯ್ ಯಾರದ್ ಹೆದ್ರಕಂಬರ್ …ಅಂಡ್ಕಂಬರ್)
Posted: July 6, 2011 in ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, kundaapra kannada, kundapra, kundapra kannada, kundapur, kundapur kannada, kundapura, kundapura kannadaTags: ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, kundaapra kannada, kundapra, kundapra kannada, kundapur, kundapur kannada, kundapura, kundapura kannada
“ನೆನಪಿರಲಿ” ಪಿಚ್ಚರಿನ ಕೂರಕ್ ಕುಕ್ರಳ್ಳಿ ಕೆರೆ ಹಾಡು…ಕುಂದಾಪ್ರ ಸ್ಟೈಲಗೆ … (ಅಣಕ ಬರದ್ದ್ -ವಿಜಯರಾಜ್ ಕನ್ನಂತ) ಎಲ್ಲಾ ಹಕ್ಕು ಕಾಯ್ದಿರಿಸಲಾಗಿದೆ ಹ್ವಾಯ್ ಯಾರದ್ ಹೆದ್ರಕಂಬರ್ …ಅಂಡ್ಕಂಬರ್ ಹೊಕ್ಕಂಬರ್ , ಮಂಡಿ ಜಪ್ಕಂಬರ್, ಹಳೀನ್ ಹಿಂಡಲಗೆ ಮಾತಾಡ್ವರ್, ಸಂತಿಯಗೆ ಪಿಸಿ-ಪಿಸಿ ಅಂಬರ್ ಕುಂದಾಪುರ್ದಂತ ತಾಲೋಕಗೆ ಆಯ್ಕಂಡ್ ಕಾಂಬುಕ್ ಬೇಕಾದ್ದೆಲ್ಲ ಇದ್ದೂ ಹೊಳಿ,ಕಾಡ್ ಗುಡ್ಡಿ ಇದ್ರೂ, ಪ್ರೀತಿ ಮಾಡುಕ್ ಜಾಗ ಇದ್ರೂ ಕಳ್ರ ಕಣಂಗೆ ಮಿಣ್ಣಗೆ ಹೊತ್ರ್ಯಲ್ಲ… ಬನಿಯೇ.. ಇಲ್ಕಾಣಿಯೇ … ನಾನ್ ಲವ್ ಮಾಡು ಸ್ಟೈಲ್ ಒಂಚೂರ್ ಕಲಿನಿಯೇ [...]
ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ!!!
Posted: July 3, 2011 in ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಗಮ್ಮತ್ ಇತ್ತ್ ಕಾಣಿ..., kundapra, kundapur, kundapuraTags: ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, kundapra, kundapur, kundapura
ಗಾಳಿಪಟದ “ಮಿಂಚಾಗಿ ನೀನು ಬರಲು” …ಕುಂದಾಪ್ರ ಕನ್ನಡದಗೆ…:) (- ಅನುವಾದ ವಿಜಯರಾಜ್ ಕನ್ನಂತ್ ) ಎಲ್ಲ ಹಕ್ಕು ಕಾದಿರಿಸಲಾಗಿದೆ
:-) ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ ನೀ ಇಲ್ದೆ ಕಿಚ್ಹ್ ಹಿಡ್ದಂಗಾಯಿ… ಎದಿಯೊಳಗೆ ಸೆಕಿಗಾಲ ಇನ್ನಿಲ್ಯೇ ನಂಗೆ ಉಳ್ಗಾಲ… ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ ನಾ ನಿನ್ ಕನ್ಸಿಗೆ… ಬಾಡ್ಗಿಗೆ ಬಂದಿದ್ನೆ… ತಿಂಗ್ಳ ಬಾಡ್ಗಿ ಕೊಟ್ ಹೋಪ್ಕೆ…ನಿಮ್ಮನಿಗೆ ಬತ್ತೆ ನಾ ನಾ ಸರ್ತ [...]
ರೈಸು – ಪುರೈಸು !!!
Posted: May 14, 2011 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ನಮ್ ಊರ್ ನಮ್ಗ್ ಚಂದ, kundapra, kundapur, kundapuraTags: ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, kundaapra kannada, kundapra, kundapur, kundapura, kundapura kannada
ಹ್ವಾಯ್ ಇದೆಂತ ದರ್ಶಿನಿ ಹೋಟ್ಲಗೆ ಜೀರಾ ರೈಸು, ಘೀ ರೈಸು ಅಂದೇಳಿ ಬೋರ್ಡ್ ಬರ್ದ್ ಹಾಕಿದಂಗಿತ್ತಲೆ.. ಎಂತಾ ಮರಾಯ್ರೆ ಹೋಟ್ಲ್ ಗೀಟ್ಲ್ ಇಟ್ಟಿರ್ಯಾ ಎಂತ ಕತಿ ಅಂದೇಳಿ ಮಂಡಿ ಗಿಂಡ್ಕಂಬ್ಕೆ ಶುರು ಮಾಡ್ಬೇಡಿ… ಹೋಟ್ಲ್ ಇಟ್ಟರೇ ಈಗ ಹ್ಯಾಂಗ್ ಸುಧಾರ್ಸುದಂದೇಳಿ ಮಂಡಿ ಬಿಶಿ ಮಾಡ್ಕಂಡಿದ್ರ್ ಮರ್ರೆ..ನೀವ್ ಎಂತದೋ ಹೇಳ್ತ್ರಿ… ಮತ್ತೆಂತ ಅಲ್ಲ ಇದ್ ನಾನ್ ಇವತ್ತ್ ಹಿಡ್ಕಂಡ್ ಬಂದ್ ಕುಂದಾಪ್ರ ಕನ್ನಡ ಶಬ್ದ. ಈ ಶಬ್ದದ್ ಕತಿ ಎಂತ ಕಾಂಬ ಬನಿ ಹಂಗಾರೆ… ರೈಸು = ಗಡದ್ದಾಗಿರು, [...]
ತಿಂಗ್ಳ್ ಭರ್ತಿ ಆಯಿ.. ಮೇಲೊಂದ್ ತಿಂಗ್ಳಾಯ್ತ್ ಕಾಣಿ…!!!
Posted: May 8, 2011 in ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ನಮ್ ಊರ್ ನಮ್ಗ್ ಚಂದ, kundapra, kundapur, kundapuraTags: ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ದರ್ಶಿನ, darshina, kundaapura, kundapra, kundapra kannada, kundapur, kundapura, kundapura kannada
ಅಂದಾಂಗೆ ನಾಡ್ದ್ ಹನ್ನೊಂದ್ನೇ ತಾರೀಕ್ ಬಂದ್ರೆ ಬ್ಲಾಗಿಗೆ ಮೂರ್ ವರ್ಷ ಆತ್ತ್. ಇಷ್ಟ್ ದಿನ ಹ್ಯಾಂಗಿದ್ರೂ ಬ್ಲಾಗಿಗೆ ಉಪ್ವಾಸವೇ ಆಯ್ತ್. ಹುಟ್ದಬ್ಬನಾರೂ ಗಡ್ಜಾಯಿ ಮಾಡಿ ಹೊಟ್ಟಿ ತುಂಬಾ ಊಟ ಹಾಕುದ್ ಬ್ಯಾಡ್ದಾ ಹಂಗಾರೆ…. ಅದಕ್ಕೇ ಇವತ್ತ್ ಅರ್ಧ ದಿನ ಕೂತ್ಕಂಡ್ ಹುಟ್ದಬ್ಬಕ್ಕೆ ಅಡ್ಗಿ ಮಾಡದ್ದೇ ಮಾಡದ್ದ್…. ನೀವೂ ಬಂದ್ ಒಂದೆರ್ಡ್ ತುತ್ತ್ ತಿನ್ಕಂಡ್ ಹೋರೆ ನಂಗೂ ಖುಶಿಯಾತ್ತ್ ಕಾಣಿ.. ಹುಟ್ದಬ್ಬಕ್ಕೆ ಬರೀ ಕೈ ಬೀಸ್ಕಂಡ್ ಬರ್ಬೆಡಿ.. ಎಂತಾರೂ ಹಿಡ್ಕಂಡ್ ಬನಿ… ಅಂದ್ರೆ ಓದಿ ನಿಮ್ಮ ಅಭಿಪ್ರಾಯ ನಂಗ್ ಹೇಳ್ರೆ ಅದೇ ನೀವ್ ಕೊಡು ಉಡ್ಗ್ರಿ…
