ಹ್ವಾಯ್ ಇದೆಂತ ದರ್ಶಿನಿ ಹೋಟ್ಲಗೆ ಜೀರಾ ರೈಸು, ಘೀ ರೈಸು ಅಂದೇಳಿ ಬೋರ್ಡ್ ಬರ್ದ್ ಹಾಕಿದಂಗಿತ್ತಲೆ.. ಎಂತಾ ಮರಾಯ್ರೆ ಹೋಟ್ಲ್ ಗೀಟ್ಲ್ ಇಟ್ಟಿರ್ಯಾ ಎಂತ ಕತಿ ಅಂದೇಳಿ ಮಂಡಿ ಗಿಂಡ್ಕಂಬ್ಕೆ ಶುರು ಮಾಡ್ಬೇಡಿ… ಹೋಟ್ಲ್ ಇಟ್ಟರೇ ಈಗ ಹ್ಯಾಂಗ್ ಸುಧಾರ್ಸುದಂದೇಳಿ ಮಂಡಿ ಬಿಶಿ ಮಾಡ್ಕಂಡಿದ್ರ್ ಮರ್ರೆ..ನೀವ್ ಎಂತದೋ ಹೇಳ್ತ್ರಿ… ಮತ್ತೆಂತ ಅಲ್ಲ ಇದ್ ನಾನ್ ಇವತ್ತ್ ಹಿಡ್ಕಂಡ್ ಬಂದ್ ಕುಂದಾಪ್ರ ಕನ್ನಡ ಶಬ್ದ. ಈ ಶಬ್ದದ್ ಕತಿ ಎಂತ ಕಾಂಬ ಬನಿ ಹಂಗಾರೆ… ರೈಸು = ಗಡದ್ದಾಗಿರು, [...]
Archive for the ‘ನಮ್ ಊರ್ ನಮ್ಗ್ ಚಂದ’ Category
ರೈಸು – ಪುರೈಸು !!!
Posted: May 14, 2011 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ನಮ್ ಊರ್ ನಮ್ಗ್ ಚಂದ, kundapra, kundapur, kundapuraTags: ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, kundaapra kannada, kundapra, kundapur, kundapura, kundapura kannada
ತಿಂಗ್ಳ್ ಭರ್ತಿ ಆಯಿ.. ಮೇಲೊಂದ್ ತಿಂಗ್ಳಾಯ್ತ್ ಕಾಣಿ…!!!
Posted: May 8, 2011 in ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ನಮ್ ಊರ್ ನಮ್ಗ್ ಚಂದ, kundapra, kundapur, kundapuraTags: ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ದರ್ಶಿನ, darshina, kundaapura, kundapra, kundapra kannada, kundapur, kundapura, kundapura kannada
ಅಂದಾಂಗೆ ನಾಡ್ದ್ ಹನ್ನೊಂದ್ನೇ ತಾರೀಕ್ ಬಂದ್ರೆ ಬ್ಲಾಗಿಗೆ ಮೂರ್ ವರ್ಷ ಆತ್ತ್. ಇಷ್ಟ್ ದಿನ ಹ್ಯಾಂಗಿದ್ರೂ ಬ್ಲಾಗಿಗೆ ಉಪ್ವಾಸವೇ ಆಯ್ತ್. ಹುಟ್ದಬ್ಬನಾರೂ ಗಡ್ಜಾಯಿ ಮಾಡಿ ಹೊಟ್ಟಿ ತುಂಬಾ ಊಟ ಹಾಕುದ್ ಬ್ಯಾಡ್ದಾ ಹಂಗಾರೆ…. ಅದಕ್ಕೇ ಇವತ್ತ್ ಅರ್ಧ ದಿನ ಕೂತ್ಕಂಡ್ ಹುಟ್ದಬ್ಬಕ್ಕೆ ಅಡ್ಗಿ ಮಾಡದ್ದೇ ಮಾಡದ್ದ್…. ನೀವೂ ಬಂದ್ ಒಂದೆರ್ಡ್ ತುತ್ತ್ ತಿನ್ಕಂಡ್ ಹೋರೆ ನಂಗೂ ಖುಶಿಯಾತ್ತ್ ಕಾಣಿ.. ಹುಟ್ದಬ್ಬಕ್ಕೆ ಬರೀ ಕೈ ಬೀಸ್ಕಂಡ್ ಬರ್ಬೆಡಿ.. ಎಂತಾರೂ ಹಿಡ್ಕಂಡ್ ಬನಿ… ಅಂದ್ರೆ ಓದಿ ನಿಮ್ಮ ಅಭಿಪ್ರಾಯ ನಂಗ್ ಹೇಳ್ರೆ ಅದೇ ನೀವ್ ಕೊಡು ಉಡ್ಗ್ರಿ…
ಹೌದಾ ಸುಳ್ಳಾ ಕಾಣಿ ಬೇಕಾರೆ, ನಮ್ಮ್ ನಮ್ಮ್ ಭಾಷಿ ಚೆಂದ ಬೇರೆ ಯಾವ್ದಕ್ಕೂ ಬತ್ತಿಲ್ಲ ಅಲ್ದಾ?…
Posted: July 6, 2010 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ನಮ್ ಊರ್ ನಮ್ಗ್ ಚಂದTags: ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ
ಬಲ ಮಾಡುದ್ – ಬೆಳೆಸಿ ದೊಡ್ಡವರನ್ನಾಗಿ ಮಾಡು ಬಳಕೆ – ೧.ದೊಡ್ಡಕೆ ಮಾತ್ ಬತ್ತ್ ಅಂದೇಳಿ ಮಾತಾಡ್ಬೆಡ, ಮಾತಾಡುಕೆ ಭಾರಿ ಸುಲ್ಭ, ನಿಮ್ಮನೆಲ್ಲ ಬಲ ಮಾಡ್ಕಿದ್ರೆ ಎಷ್ಟ್ ಕಷ್ಟ್ ಪಟ್ಟಿದೆ ಅಂದೇಳಿ ನಿಂಗೆಂತ ಗೊತಿತ್? ೨.ನಿಮ್ಗ್ ಬೇರೆ ಕೆಲ್ಸ ಇಲ್ಯಾ, ಮಕ್ಳನ್ನೆಲ್ಲ ಸಾಕಿ ಬಲ ಮಾಡುದೇ ಕಷ್ಟ, ಇನ್ನ್ ಶಾಲಿ ಗೀಲಿಗೆಲ್ಲ ಕಳ್ಸುಕೆ ಎಲ್ಲಿಗೆ ಹೋಪ್ದ್? ಬಲಾದರ್ – ಬಲ ಆದವರು ,ದೊಡ್ಡವರು , ಹಿರಿಯರು ಬಳಕೆ – 1. ಸಣ್ಣರಂದೇಳಿ ಇಲ್ಲ, ಬಲಾದರಂದೇಳಿ ಇಲ್ಲ, ಎದ್ರುತ್ರ [...]
ಕುಂದಾಪ್ರ ಕನ್ನಡದಗೊಂದು ಇಂಗ್ಲಿಷ್ ಕಾಣಿ…
Posted: December 22, 2009 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದTags: ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಶಬ್ದ, kundapra, kundapura, kundapura kannada
ಬರೀ ಕುಂದಾಪ್ರ ಕನ್ನಡದಗೆ ಮಾತ್ರ ಎಂತಕೆ , ಈಗ ಯಾವ್ ಕನ್ನಡದಗೂ ಇಪ್ಪುದ್ ಇಂಗ್ಲೀಷೆ ಅಲ್ದಾ. ಯಾರಾರೂ ಶುದ್ಧ ಕನ್ನಡ ಮಾತಾಡುವರ್ ಇದ್ರೆ ಹುಡ್ಕಿ ಕೊಡಿನಿ ಕಾಂಬ ಹಂಗಾರೆ ಅಂದೇಳಿ ನೀವ್ ಕೆಂಬ್ಕೂ ಸಾಕ್. ಅದ್ರಗೂ ಬೆಂಗಳೂರಗೆ ಹಾಂಗಿನರ್ ಯಾರಾರೂ ಇದ್ರೆ ಅವ್ರಿಗೆ ರಾಜ್ಯೋತ್ಸವ ಪ್ರಶಸ್ತಿಯೇ ಕೊಡ್ಲಕ್ಕ್ ಅಂತ್ ನೀವ್ ಹೇಳುಕೂ ಸಾಕ್. ಆರೇ ನಾ ಹೇಳುಕ್ ಹೊರಟದ್ದ್ ಅದ್ ಅಲ್ದೆ… ಒಂದ್ ಇಂಗ್ಲಿಷ್ ಶಬ್ದ ಕುಂದಾಪ್ರ ಕನ್ನಡದೊಳಗೆ ಬಂದ್ ಕೂಕಂಡಿತ್. ಆ ಶಬ್ದ ಯಾವ್ದ್ ಅಂದೇಳಿ ನೆನ್ಪ್ ಮಾಡ್ಕಂಕಿದ್ರೆ [...]
ಆಟದ ಗರದಗೆ ಒಂದ್ ತಿರ್ಗಾಟ…
Posted: December 1, 2009 in ಆಟ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ ಕನ್ನಡ, ನಮ್ ಊರ್ ನಮ್ಗ್ ಚಂದ, ಯಕ್ಷಗಾನTags: ಆಟ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ ಕನ್ನಡ, ಯಕ್ಷಗಾನ
ಮತ್ತೆ ಎಲ್ಲ ಹ್ಯಾಂಗಿದ್ರಿ? ಊರಗ್ ಮೊನ್ನೆ ಮತ್ತ್ ಮಳಿ ಬಂದಿತಂಬ್ರಲೆ… ನಿಮ್ದ್ ಕೊಯ್ಲ್ ಎಲ್ಲಾ ಆಯ್ತ್ ಕಾಣತ್ ಅಲ್ದಾ? ಹ್ಯಾಂಗೆ ಈ ವರ್ಷ ಬ್ಯಾಸಾಯ ಅಡ್ಡಿಲ್ಲ್ಯಾ? ಪೆರ್ಡೂರ್, ಸಾಲಿಗ್ರಾಮದರದ್ ತಿರ್ಗಾಟ ಶುರು ಆಯಿರ್ಕ್ ಅಲ್ದಾ? ಆಟ ಗೀಟ ಕಾಂಬ್ಕ್ ಹೋಯಿಲ್ಲ್ಯಾ? ಈಗೀಗ ಆಟ ಕಾಂಬ್ಕ್ ಹೋಪ್ಕೇ ಮನ್ಸ್ ಬತ್ತಿಲ್ಲಪ. ಎಲ್ಲಾ ಪಿಚ್ಚರಿದೇ ಕತಿ ಮಾಡುದಾರೆ ಆಟ ಎಂತಕ್ ಕಾಣ್ಕ್ ರಾತ್ರಿಡೀ ನಿದ್ರಿ ಬಿಟ್ಕ್ಂಡ್. ಪಿಚ್ಚರೇ ಕಾಣ್ಲಕ್. ಆರೂ ಒಂದ್ ಅಂದ್ರೆ ಬೆಂಗ್ಳೂರಗೆ ಬಂದಲ್ಲ್ ಈ ಸರ್ತಿ ಎಲ್ಲಾ [...]
ನಮ್ ನಮ್ ಮಟ್ಟಿಗೆ ನಮ್ ಊರ್ ಯೇಗ್ಳಿಕೂ ನಮ್ಗ್ ಚೆಂದವೇ. ಅದ್ರಗೂ ಮಳ್ಗಾಲ ಬಂದ್ರಂತೂ ಇನ್ನೆರ್ಡ್ ಮುಷ್ಟಿ ಹೆಚ್ಚೇ ಚೆಂದ ಕಾಣತ್. ಈ ವರ್ಷ ಜೂನ್ ಸುರಿಗೆ ಒಂದ್ ನಾಕ್ ದಿನ ಮುಖ ತೋರ್ಸದಂಗ್ ಮಾಡಿ ಹೋದ್ ಮಳಿ ಪತ್ತಿ ಇಲ್ಯಲೆ, ಈ ವರ್ಷ ಬ್ಯಾಸಾಯ ಮಾಡುದ್ ಹ್ಯಾಂಗೆ ಅಂದೇಳಿ ಊರ್ ಬದ್ಯಗೆ ಎಲ್ರೂ ಮಂಡಿಬಿಶಿ ಮಾಡ್ಕಂಡ್ ಇದ್ದಿರ್. ಪೇಪರಗೆಲ್ಲ ಈ ಸರ್ತಿ ಬರ್ಗಾಲ ಬಂದಂಗೇ ಸೈ, ಇನ್ನ್ ಎಂಟ್ ದಿನ ಹೋರೆ ಕರೆಂಟ್ ಇರುದಿಲ್ಲ ಅಂಬ್ರ್- [...]
ನೀವೆಂತಕೆ ಮಕ್ಳಿಗೆ ಕುಂದಾಪ್ರ ಕನ್ನಡ ಕಲ್ಸುದಿಲ್ಲ…?
Posted: March 11, 2009 in ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದTags: kunda kannada, kundaapra, kundapra kannada
ಕಳ್ದ್ ತಿಂಗ್ಳ್ ನನ್ ಬ್ಲಾಗ್ ಬದಿಗೆ ಶ್ರೀಕಾಂತ ಹೆಗಡೆ ಅಂದೇಳಿ ಒಬ್ರ್ ಬಂದಿರ್. ಅವ್ರ್ ಒಂದೆರ್ಡ್ ಕಮೆಂಟ್ ಪೋಸ್ಟ್ ಮಾಡಿರ್… ಆ ಕಮೆಂಟಗೆ ಒಂದೆರ್ಡ್ ಪ್ರಶ್ನೆ ಸತೇ ಕೇಂಡಿರ್. ಅವ್ರ್ ಕೇಂಡದ್ ಇಷ್ಟೆ…ನೀವ್ ಕುಂದಾಪ್ರದರು ಪ್ಯಾಟಿಗ್ ಬಂದ್ ಸೆಟ್ಲ ಆದೋರು ನಿಮ್ಮ ಮಕ್ಕಳಿಗೆ ಅಲ್ಲಿ ಭಾಷಿ, ಸಂಸ್ಕೃತಿ ಕೊಡುಕೆ ಮರ್ತರಲ್ಲೇ ಮಾರಾಯ್ರೆ, ಇದ್ನ ಕಂಡ್ರೆ ಕೇಂಡ್ರ ಭಾಳ ಭೇಜಾರಾತ್ತಲೆ. ನೀವ್ ಕುಂದಾಪ್ರದ ಜನ ಎಂಥಕ್ಕೆ ಮಕ್ಳ ಮರಿಗೆ ನಿಂ ಕುಂದಗನ್ನಡ ಕಲಸೂದಿಲ್ಲ ? ಅವ್ರ್ ಪ್ರಶ್ನೆಗೆ ಉತ್ರ [...]
ಹಾಂಗೂ ಒಂದ್ ಕಾಲ ಇದ್ದಿತ್ತ್ ಕಾಣಿ…
Posted: December 4, 2008 in ನಮ್ ಊರ್ ನಮ್ಗ್ ಚಂದTags: ಕುಂದಾಪ್ರ, ಗ್ವಾಯ್ ಬೀಜ, ನೆನ್ಪ್
ಈ ಬ್ಲಾಗ್ ಬದಿಗೆ ಮಂಡಿ ಹಾಕಿ ಮನ್ಕಣ್ದೆ ಸುಮಾರ ದಿನ ಆಯ್ತ್. ಹಾಂಗಂದೇಳಿ ಬರುಕ್ ಪುರ್ಸೊತ್ ಇಲ್ಲ , ಬರುಕ್ ಮನ್ಸಿಲ್ಲ ಅಂದೇಳಿ ಅಲ್ಲ. ಹಾಂಗ್ ಕೇಂಡ್ರೆ ಈ ಬ್ಲಾಗಿಗೆ ಬರುಕೆ ನಂಗೂ ಮಸ್ತ್ ಖುಷಿಯೇ. ಆರೂ ಕಳ್ದ್ ತಿಂಗ್ಳ್ ಇಡೀ ಏನೋ ಒಂದ್ನಮನಿ ಉದಾಶಿನ ಹಿಡ್ದಂಗ್ ಆಯಿತ್. ಈಗ ಅದ್ನೆಲ್ಲ ಕೊಡ್ಕಿ ಹಾಕಿ ಬರುಕ್ ಕೂಕಂಡಿದೆ. ಇನ್ನ್ ಮೇಲೆ ಹೀಂಗೆಲ್ಲ ಹಾಂಟ್ ಹಾಕುದಿಲ್ಲ ಅಕಾ.. ಸುಳ್ಳಾ-ಬದ್ಧವಾ ನೀವೆ ಕಾಣಿ ಬೇಕಾರೆ. ಈ ಬದಿಗೆಲ್ಲಾರೂ ನೀವ್ ನೀಕಿ [...]
ನವ್ರಾತ್ರಿಯಂದ್ರೆ…ಹೊಸ್ತು….ಹುಲಿಯಾಸ… ಹೂವಿನಕೋಲು…ಪಾಣಾರ್ರ ವೇಷ
Posted: October 8, 2008 in ನಮ್ ಊರ್ ನಮ್ಗ್ ಚಂದTags: ಕುಂದಾಪ್ರ, ನವರಾತ್ರಿ, ಪಾಣಾರ ವೇಷ, ಹುಲಿಯಾಸ, ಹುಲಿವೇಷ, ಹೂವಿನ ಕೋಲು, ಹೂವಿನ್ ಕೋಲ್, ಹೊಸ್ತ್
ನವ್ರಾತ್ರಿ ಬಂತಂದ್ರ್ ಸಾಕ್. ನೆನ್ಪ್ ಊರ್ ಬದಿ ಮುಖ ಮಾಡ್ಕಂಡ್ ಕೂಕಣತ್. ಮಾಲಯ ಅಮಾಸಿ ಮುಗದ್ದೇ ತಡ… ಎಲ್ಲರ್ ಮನ್ಯಗೂ ಕದ್ರ್ ಪೂಜಿ ಮಾಡಿ…ಅದನ್ ತಂದ್‌ಕಟ್ಟಿ ಹೊಸ್ತ್ ಮಾಡು ಗೌಜಿ ಶುರುವಾತ್ತ್. ನಮ್ಗೆ ಅಂದ್ರೆ ಮಕ್ಳಿಗೆಲ್ಲಾ ಗಡ್ಜ್ ಗಮ್ಮತ್ತ್. ಅರ್ಧವಾರ್ಷಿಕ ಪರಿಕ್ಷೆ ಎಲ್ಲಾ ಮುಗ್ದ್ ಶಾಲಿಗ್ ಬೇರೆ ರಜಿ ಸಿಕ್ಕಿರತ್. ಮತ್ತ್ ಶಾಲಿ ಬದಿಗ್ ಮುಖ ಹಾಕುದ್ ದೀಪಾವಳಿ ಪಟಾಕಿ ಎಲ್ಲ ಖಾಲಿ ಆರ್ ಮೇಲೆ ಸೈ. ಹೊಸ್ತಿನ ಊಟ ಮಾಡಿ… ಹೊಟ್ಟಿ ಭಾರ ಆದ್ದಕ್ಕೆ ಕಣ್ಣ್ [...]
ಗುಲಾಬಿ ಟಾಕೀಸಿಗೆ ಒಂದ್ಸಲ ಹೋಯ್ ಬಪ್ರ್ಯಲ…
Posted: September 29, 2008 in ನಮ್ ಊರ್ ನಮ್ಗ್ ಚಂದTags: ಉಮಾಶ್ರೀ, ಗಿರೀಶ್ ಕಾಸರವಳ್ಳಿ, ಗುಲಾಬಿ ಟಾಕೀಸು
ಅಂತೂ ಕಳ್ದ್ ವಾರ ಪಿ.ವಿ.ಆರ್ ಟಾಕೀಸಿಗ್ ಹೋಯಿ ಗುಲಾಬಿ ಟಾಕೀಸ್ ಕಂಡ್ಕಂಡ್ ಬಂದೆ. ವೈದೇಹಿ ಬರದ್ ಕತಿದ್ ಒಂದ್ ಸಣ್ಣ್ ಎಳಿ ಮಾತ್ರ ಇಟ್ಕಂಡಿರ್. ಕತಿ ಬದ್ಲ್ ಮಾಡ್ರೂ ಪಿಚ್ಚರ್ ಭಾರಿ ಲಾಯ್ಕ್ ಆಯಿ ಬಂದಿತ್. ಉಮಾಶ್ರೀಯಂತೂ ಕುಂದಾಪ್ರ್ ಬದ್ಯರ್ ಅಲ್ಲ ಅಂದೇಳಿ ಹೇಳುಕ್ ಯಡ್ಯ. ಹಾಂಗ್ ಕಾಂಬುಕ್ ಹೋರೆ ಎಂ.ಡಿ.ಪಲ್ಲವಿ ಮಾಡದ್ ನೇತ್ರ ಕುಂದಾಪ್ರ ಕನ್ನಡ ಮಾತಾಡ್ವತಿಗೆ ಒಂಚೂರ್ ಬೇರೆ ನಮ್ನಿ ಕೇಂತಿತ್ತ್. ಆರ್ ಇದೆಲ್ಲ ಅಷ್ಟ್ ದೊಡ್ ತಪ್ಪೇನಲ್ಲ ಬಿಡಿ. ನಾವ್ ಹುಟ್ಟಿನ್ ಲಗಾಯ್ತ್ [...]
ಹಬ್ಬದ್ ಹೇಳ್ಕಿಗೆ ಹುಲಿ ಕೂಗತ್ತಂಬ್ರಪ್ಪ..
Posted: September 11, 2008 in ನಮ್ ಊರ್ ನಮ್ಗ್ ಚಂದTags: ಕಮಲಶಿಲೆ, ಕುಂದಾಪ್ರ ಕನ್ನಡ, ಗುಹೆ, ಹಬ್ಬ, ಹುಲಿ
ಮೊನ್ನೆ ನನ್ ಫ್ರೆಂಡ್ ಒಬ್ಬ ಕಮಲಶಿಲೆಗೆ ಹೊಯಿ ಬಂದಿದ್ದ. ಅಲ್ಲಿನ್ ಗುಹೆ ಕಾಣ್ಕ್ ಅಂದೇಳಿಯೇ ಅಂವ ಹೋದ್ದ್. ಹೋಯಿ ಬಂದನೆ ಗುಹೆ ಕಂಡ್ಕಂಡ್ ಬಂದ್ ಕತಿಯೆಲ್ಲ ಹೇಳ್ತಿದ್ದ. ಸುಮಾರ್ ಫೊಟ ಎಲ್ಲಾ ತೆಗ್ದಿದ ಅಂಬ್ರ್. ಆ ಗುಹೆ ಭಾರಿ ಲಾಯ್ಕ್ ಇತ್ತ್ ಮರಾಯ್ರೆ. ನಾನ್ ಗುಹೆ ಕಾಂಬುಕ್ ಹೋಯಿ ಸುಮಾರ್ ವರ್ಷ ಆಯ್ತ್. ಆರೆ ಸುಮಾರ್ ದೊಡ್ಡ್ ಗುಹೆ. ಗುಹೆ ಒಳ್ಗೆ ಲೈಟ್ ಹಿಡ್ಕಂಡ್ ಹೋರೆ ಸುಮಾರ್ ದೂರ್ ಹೋಯ್ಲಕ್. ಅಂವ ಹೇಳದ್ದೆಲ್ಲ ಕೇಂಡ್ ಮೇಲೆ ನಾನೂ [...]
ಸಿದ್ಧಾಪ್ರ ಸಂತಿ ದಿನ ಬಸ್ ಹತ್ತುದಂದ್ರೆ….ಅಯ್ಯಬ್ಬ!
Posted: August 25, 2008 in ನಮ್ ಊರ್ ನಮ್ಗ್ ಚಂದTags: ಕುಂದಾಪುರ, ನೆನಪು, ಸಂತಿ, ಸಿದ್ಧಾಪುರ
ಯಾವ್ದಾರೂ ಬೇಕ್ ಕಾಣಿ, ಈ ಸಂತಿ ದಿನ ಬಸ್ಸಗೆ ಹೋಪುದ್ ಮಾತ್ರ ಎಷ್ಟ್ ಕೊಟ್ರೂ ಬ್ಯಾಡ್ದೆ. ಅದ್ರಗೂ ಜೋರ ಸೆಕಿ ಇಪ್ಪ್ ಸಮಿಗೆ ಹೋಯ್ಕಾರೆ ಸಾಕ್‌ಬೇಕ್ ಅಂಬಂಗಾತ್. ಬುಧ್ವಾರ ಸಿದ್ಧಾಪ್ರದಗೆ ಸಂತಿ. ಹಾಂಗಂತೇಳಿ ಎಂತಾರೂ ಕೆಲ್ಸ ಇದ್ರೆ ಈ ವಾರ ಎಲ್ಲ ಕಾಂತ ಕೂಕಂಬುಕೆ ಆತ್ತಾ? ಅದೂ ದಿನ ಕೇಂಡರೊಟ್ಟಿಗ್ ಆ ದಿನ್‌ವೇ ಎಂತಾರೂ ಕೆಲ್ಸ ಬಂದ್ರೆ ಎಂತ ಮಾಡುಕಾತ್ತ್? ಒಟ್ಟ್ ಹೋಯ್ದಿರ್ ಉಪಾಯಿಲ್ಲ. ನಾನ್ ಶಾಲಿಗ್ ಹೋಪತಿಗೆ ಬುಧ್ವಾರ ಬಂದ್ರ್ ಸಾಕ್. ಯಾಕಾರೂ ಬಂತೋ [...]
ನಂಗೆ ಬಪ್ಪುಕೆಡಿಯ ಅಂದೇಳಿ ಕೂಕಂಡಿದ್ದಿದ್ ಮಳಿರಾಯ ಕಡಿಗೂ ಕಣ್ಣ್ ಬಿಟ್ನಾ ಕಾಣತ್. ಬೆಂಗಳೂರಗೂ ನಾಕ್ ಹನಿ ಮಳಿ ಬಪ್ಪುಕ್ ಶುರು ಆಯಿತ್. ಕುಂದಾಪ್ರ ಬದ್ಯಗಂತೂ ಸಮಾ ಮಳಿ ಕುಟ್‌ತಾ ಇರ್ಕ್ ಅಲ್ದಾ? ಮಳಿ ಬಂದದ್ ಅಂಬುದ್ ಬ್ಯಾಸಾಯ ಮಾಡುವರಿಗ್ ಹೋದ್ ಜೀವ ಬಂದಂಗಾಯಿರ್ಕ್. “ಈ ವರ್ಷ ಮಳಿ ಕತಿ ಹೀಂಗೇ ಆರೆ ಯೆಂತ ಮಾಡುದ್. ಹೋಯ್ಲಿ ನೀರಾರು ಹಾರ್ಸುವ ಅಂದ್ರೆ ಕರೆಂಟ್ ಸತೆ ಇಪ್ಪುದಿಲ್ಲ” ಅಂದೇಳಿ ಮಂಡಿ ಮೇಲ್ ಕೈ ಹಾಯ್ಕಂಡ್ ಕೂಕಂಡರಿಗೆಲ್ಲ ಈಗ ಅಯ್ಯಬ್ಬ ಅಮಗ್ [...]
ಕುಂದಪ್ರಭ ಆನ್ಲೈನಂಗೆ ಸಿಕ್ಕತ್ ಗೊತ್ತಾ?
Posted: July 17, 2008 in ನಮ್ ಊರ್ ನಮ್ಗ್ ಚಂದTags: ಕುಂದಪ್ರಭ, ಕುಂದಾಪುರ, ಕುಂದಾಪ್ರ, ಪೇಪರ್, kundaprabha, kundapur
ಕುಂದಾಪ್ರದ್ ಕಾರ್ಬಾರ್ ಎಲ್ಲಾ ತಿಳ್ಕಣ್ಕ್ ಅಂಬಗಿದ್ರೆ, ಕುಂದಾಪ್ರದ್ದೇ ಪೇಪರ್ ಓದ್ಕ್ ಅಲ್ದಾ? ಕುಂದಾಪ್ರ್‌ದ್ ಸುದ್ದಿ ವಾರ ವಾರವೂ ಕಾಣ್ಕಂಬಗಿದ್ರೆ ಈ ಲಿಂಕ್ ಕ್ಲಿಕ್ ಮಾಡಿ <http://kundaprabha.com> ವಾರದ್ ಬಿಸಿಬಿಸಿ ಸುದ್ದಿ ಒಟ್ಟಿಗೆ ಧಾರವಾಹಿ , ಕಥೆ , ಅಂಕಣ , ರಂಗೋಲಿ ಎಲ್ಲಾನು ಕಾಂಬುಕ್ ಸಿಕ್ಕತ್. ಪುರ್ಸೊತ್ತಾದ್ರೆ ಒಂದ್ ಗಳ್ಗಿ ಹೋಯಿ ಬಿಸಿ ಬಿಸಿ ಸುದ್ದಿ ಓದ್ಕಂಡ್ ಬನಿ.
ಕುಂದಾಪ್ರದಗೆ ಈ ಸರ್ತಿ ಎಲೆಕ್ಷನ್ ಟೈಟ್ ಅಂಬ್ರಲಾ ಹೌದಾ..?
Posted: May 11, 2008 in ನಮ್ ಊರ್ ನಮ್ಗ್ ಚಂದTags: kannada, kundapra kannada, kundapur, kundapur election, kundapur kannada
ಅಲ್ಲ ಮರಾಯ್ರೆ ಕುಂದಾಪ್ರದಗೆ ಈ ಸರ್ತಿ ಎಲೆಕ್ಷನ್ ಭಯಂಕರ ಟೈಟ್ ಅಂಬ್ರಲಾ ಹೌದೇ ಇದು? ಯಾರ್ ಬಾಯಗ್ ಕೇಂಡ್ರೂ ಒಂದೇ ಮಾತಪ್ಪಾ.. ಈ ಸರ್ತಿ ಯಾರ್ ಗೆಲ್ಲೂದ್ ಅಂದೇಳಿ ಈಗ್ಳೇ ಹೇಳುದ್ ಕಷ್ಟಾ ಮಾರ್ರೆ.. ಶೆಟ್ರಿಗೂ ಹೆಗ್ಡೆಯರಿಗೂ ಜೋರ್ ಫೈಟ್ ಇತ್ತ್ ಗೊತ್ತಿತಾ? ಯಾರ್ ಗೆದ್ರೂ ಮೂರ್ನಾಕ್ ಸಾವ್ರದ್ ಒಳ್ಗೇ ಕಾಣಿ ಬೇಕಾರೆ… ಎಂತಾರೂ ಓಟಿನ್ ಪೆಟ್ಗಿ ಬಿಚ್ಚುವರಿಗೆ ಎಂತದೂ ಹೇಳುಕ್ ಬತ್ತಿಲ್ಲ್ಯೇ… ಅದೆಂತದೋ ಕ್ಷೇತ್ರ ವಿಭಜನೆ ಅಂಬ್ರಪ್ಪ. ಅದನ್ ಮಾಡಿ ನಮ್ ಬ್ರಹ್ಮಾವರದ್ ಹೆಗ್ಡಿಯರಿಗ್ [...]
ನಮ್ ಭಾಷಿ ಚಂದವೇ ಬೇರೆ ಕಾಣಿ…
Posted: May 11, 2008 in ನಮ್ ಊರ್ ನಮ್ಗ್ ಚಂದTags: kannada, kunda kannada, kundapra kannada, kundapur, kundapur kannada
ನಂಗಂತೂ ನಮ್ ಕುಂದಾಪ್ರ ಕನ್ನಡ ಕೇಂಡ್ರೆ ಅಷ್ಟಿಷ್ಟ್ ಖುಷಿ ಆಪುದಲ್ಲ ಗೊತ್ತಿತ? ಅದ್ರಗೂ ಈಗ ಕೆಲ್ಸ ಮಾಡುಕ್ ಅಂತೆಳಿ ಊರ್ ಬಿಟ್ಟ್ ಬೆಂಗ್ಳೂರ್ ಸೇರ್ಕಂಡ್ ಮೇಲೆ ಯಾರೆ ಕುಂದಾಪ್ರದರ್ ಸಿಕ್ರೂ ಅವ್ರನ್ ಒಂದ್ಸಲ ಕುಂದಾಪ್ರ ಕನ್ನಡದಗೆ ಮಾತಾಡ್ಸ್‌ದಿದ್ರೆ ಸಮಾಧಾನವೇ ಆತಿಲ್ಲ. ಬೆಂಗ್ಳೂರಾಗಂತೂ ಬಿಡಿ ಆ ಭಾಷಿ ಈ ಭಾಷಿ ಅಂತೇಳಿ ಎಲ್ಲಾರೂ ಸೇರ್ಕಂಡ್ ಬೆಂಗ್ಳೂರ್ ಕನ್ನಡ ಅಂಬುದ್ ಒಳ್ಳೇ ಕಿಚಿಡಿ ಆದ್ ಕಂಡ್ಮೇಲೆ…ಇನ್ನೂ ಗಮಗಮ ಅಂತೆಳಿ ಪರಿಮಳ್ ಬಪ್ಪ ಕುಂದಗನ್ನಡ ಕೆಮಿ ಮೇಲೆ ಬಿದ್ರೆ ಆಪ್ ಖುಷಿ [...]
