ರೊಟ್ಟಿ ಜಾರಿ ತುಪ್ಪದಗ್ ಬಿದ್ದಾಂಗ್ ಆಯ್ತ್… ಹುಡ್ಕತಿದ್ದ ಬಳ್ಳಿಯೇ ಕಾಲಿಗೆ ಸಿಕ್ಕಾಂಗ್ ಆಯ್ತ್… ಹೀಂಗೆ ಎಂತ ಬೇಕಾರು ಅನ್ಕಣ್ಲಕ್ಕ್… ಇವತ್ತ್ ರವೀಂದ್ರ ಕಲಾಕ್ಷೇತ್ರದಗೆ ನೆಡಿತಿಪ್ಪ ಪುಸ್ತಕ ಪ್ರದರ್ಶನಕ್ಕ್ ಒಂದ್ ಗಳ್ಗಿ ಹೋಯ್ ಬಪ್ಪ ಅಂತ ಹೋಯಿ ಬಂದೆ. ಪ್ರತಿ ಸರ್ತಿ ಅರಮನೆ ಮೈದಾನದಗೆ ನೆಡುವ ಪುಸ್ತಕ ಪ್ರದರ್ಶನಕ್ಕೆ ಹೋತಿದ್ದಿದೆ. ಈ ವರ್ಷ ಅಲ್ಲಿಗ್ ಹೋಪ್ಕ್ ಆಯಲ್ಲ. ಬೆಂಗ್ಳೂರಗೆ ಸಾಹಿತ್ಯ ಸಮ್ಮೇಳನ ಆದಲ್ಲ್ ಹೋದ್ದೆ ಕೊನೆ. ಅದ್ರ ಮೇಲೆ ಅಂಕಿತ ಪುಸ್ತಕಕ್ಕೆ ಒಂದೊಂದ್ ಸಲ ಹೋದ್ದ್ ಬಿಟ್ರೆ ಪುಸ್ತಕ [...]
Archive for the ‘ಕುಂದಗನ್ನಡ ಕಲಿ’ Category
ಕೊಂದ್ ಪಾಪ ತಿಂದೇ ಪರಿಹಾರ
Posted: January 7, 2012 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ ಕನ್ನಡ, kundaapra kannada, kundapra, kundapra kannada, kundapur, kundapur kannada, kundapura, kundapura kannadaಕುಂದಾಪ್ರ ಪದಾರ್ಥ !!
Posted: May 19, 2011 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡTags: ಕುಂದಗನ್ನಡ, ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಪದಗಳು, ಕುಂದಾಪುರ ಕನ್ನಡ ಪದಾರ್ಥ, ಕುಂದಾಪುರ ಕನ್ನಡ ಶಬ್ದ, ಕುಂದಾಪ್ರ, ಕುಂದಾಪ್ರ ಕನ್ನಡ, kannada dictionary, kundaapra, kundaapra kannada dictionary, kundaapra kannada words, kundapur, kundapur kannada dictionary, kundapura, kundapura kannada dictionary
ಸುಮಾರ್ ಸಮಿಂದ ಎಣ್ಸ್ ಕಂಡಿದ್ದೆ… ಬ್ಲಾಗಗೆ ಯೇಗ್ಳೇಗ್ಳೋ ಬರದ್ದ್ ಕುಂದಾಪ್ರ ಕನ್ನಡ ಶಬ್ದ ಎಲ್ಲ ಒಟ್ಟ್ ಮಾಡಿ ಒಂದ್ ಬದ್ಯಗೆ ಇಟ್ರೆ ಒಳ್ಳೇದಾತ್ತಲ್ದಾ ಅಂದೇಳಿ… ಇವತ್ತ್ ಗಳ್ಗಿ ಕೂಡಿ ಬಂತ್… ಇಷ್ಟ್ ದಿನ ಬ್ಲಾಗಗೆ ಬರದ್ ಶಬ್ದ ಎಲ್ಲಾ ಒಟ್ಟ್ ಮಾಡಿ ಇಲ್ಲ್ ಕೊಟ್ಟಿದೆ.. ಇದ್ರಗೆ ನೊಂಗೂ ಒಂದ್ ’ಪಡಾವ್’ ಇತ್ತ್.!! ಹೊಸ್ತೆಂತಾರೂ ಬರುವತಿಗೆ, ಈ ಶಬ್ದ ಮೊದ್ಲೇ ಬ್ಲಾಗಗೆ ಬರ್ದಿನಾ ಇಲ್ಯಾ ಅಂದೇಳಿ ಹುಡ್ಕುಕ್ ಸುಲ್ಭ ಆಯಲ್ಯಾ? ನಿಮ್ಗ್ ಓದುಕ್ ಸಂತೆ ಎಲ್ಲ ಒಂದೆ ಬದ್ಯಗೆ [...]
ರೈಸು – ಪುರೈಸು !!!
Posted: May 14, 2011 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ನಮ್ ಊರ್ ನಮ್ಗ್ ಚಂದ, kundapra, kundapur, kundapuraTags: ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, kundaapra kannada, kundapra, kundapur, kundapura, kundapura kannada
ಹ್ವಾಯ್ ಇದೆಂತ ದರ್ಶಿನಿ ಹೋಟ್ಲಗೆ ಜೀರಾ ರೈಸು, ಘೀ ರೈಸು ಅಂದೇಳಿ ಬೋರ್ಡ್ ಬರ್ದ್ ಹಾಕಿದಂಗಿತ್ತಲೆ.. ಎಂತಾ ಮರಾಯ್ರೆ ಹೋಟ್ಲ್ ಗೀಟ್ಲ್ ಇಟ್ಟಿರ್ಯಾ ಎಂತ ಕತಿ ಅಂದೇಳಿ ಮಂಡಿ ಗಿಂಡ್ಕಂಬ್ಕೆ ಶುರು ಮಾಡ್ಬೇಡಿ… ಹೋಟ್ಲ್ ಇಟ್ಟರೇ ಈಗ ಹ್ಯಾಂಗ್ ಸುಧಾರ್ಸುದಂದೇಳಿ ಮಂಡಿ ಬಿಶಿ ಮಾಡ್ಕಂಡಿದ್ರ್ ಮರ್ರೆ..ನೀವ್ ಎಂತದೋ ಹೇಳ್ತ್ರಿ… ಮತ್ತೆಂತ ಅಲ್ಲ ಇದ್ ನಾನ್ ಇವತ್ತ್ ಹಿಡ್ಕಂಡ್ ಬಂದ್ ಕುಂದಾಪ್ರ ಕನ್ನಡ ಶಬ್ದ. ಈ ಶಬ್ದದ್ ಕತಿ ಎಂತ ಕಾಂಬ ಬನಿ ಹಂಗಾರೆ… ರೈಸು = ಗಡದ್ದಾಗಿರು, [...]
ಹೌದಾ ಸುಳ್ಳಾ ಕಾಣಿ ಬೇಕಾರೆ, ನಮ್ಮ್ ನಮ್ಮ್ ಭಾಷಿ ಚೆಂದ ಬೇರೆ ಯಾವ್ದಕ್ಕೂ ಬತ್ತಿಲ್ಲ ಅಲ್ದಾ?…
Posted: July 6, 2010 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ನಮ್ ಊರ್ ನಮ್ಗ್ ಚಂದTags: ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ
ಬಲ ಮಾಡುದ್ – ಬೆಳೆಸಿ ದೊಡ್ಡವರನ್ನಾಗಿ ಮಾಡು ಬಳಕೆ – ೧.ದೊಡ್ಡಕೆ ಮಾತ್ ಬತ್ತ್ ಅಂದೇಳಿ ಮಾತಾಡ್ಬೆಡ, ಮಾತಾಡುಕೆ ಭಾರಿ ಸುಲ್ಭ, ನಿಮ್ಮನೆಲ್ಲ ಬಲ ಮಾಡ್ಕಿದ್ರೆ ಎಷ್ಟ್ ಕಷ್ಟ್ ಪಟ್ಟಿದೆ ಅಂದೇಳಿ ನಿಂಗೆಂತ ಗೊತಿತ್? ೨.ನಿಮ್ಗ್ ಬೇರೆ ಕೆಲ್ಸ ಇಲ್ಯಾ, ಮಕ್ಳನ್ನೆಲ್ಲ ಸಾಕಿ ಬಲ ಮಾಡುದೇ ಕಷ್ಟ, ಇನ್ನ್ ಶಾಲಿ ಗೀಲಿಗೆಲ್ಲ ಕಳ್ಸುಕೆ ಎಲ್ಲಿಗೆ ಹೋಪ್ದ್? ಬಲಾದರ್ – ಬಲ ಆದವರು ,ದೊಡ್ಡವರು , ಹಿರಿಯರು ಬಳಕೆ – 1. ಸಣ್ಣರಂದೇಳಿ ಇಲ್ಲ, ಬಲಾದರಂದೇಳಿ ಇಲ್ಲ, ಎದ್ರುತ್ರ [...]
ಹ್ವಾಯ್… ಇಲ್ಲೊಂಚೂರ್ ನೀಕಿ ಕಾಂಬ್ರಿಯಲ!!
Posted: June 21, 2010 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ ಕನ್ನಡTags: ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಕಲಿ, kunda kannada, kundaapra, kundapura, kundapura kannada
ಪುರ್ಸೊತ್ತಿದ್ದಾಗ್ಳಿಕೆ ಬರುಕ್ ಉದಾಶಿನ, ಬರುಕ್ ಉಮೇದ್ ಬಂದಾಗ್ಳಿಕೆ ಪುರ್ಸೋತ್ತಿಲ್ಲ ಹಾಂಗಿನ್ ಕತಿ ಆಯ್ತ್ ಕಾಣಿ ಆರೂ ಈ ಸರ್ತಿ ಬರೀದೆ ಬಾಳ ಸಮಿ ಆಯ್ತ್. ಇನ್ ಬರಿದಿದ್ರೆ ಆಪ್ದಲ್ಲ ಅಂದೇಳಿ ನಿನ್ನೆ ಬರುಕ್ ಕೂಕಂಡೆ… ಒಂದ್ ಅರ್ಧ ದಿನದ ಮೇಲ್ ಆಯ್ತ್ ಇದನ್ನೆಲ್ಲಾ ಬರ್ದ್ ಮುಗ್ಸುವತ್ತಿಗೆ. ಬರ್ದ್ ಮುಗ್ಸ್ರ್ ಮೇಲೆ ನಂಗಂತೂ ಖುಷಿ ಆಯ್ತ್, ನಿಮ್ಗೂ ಅದ್ರಗೆ ಅರ್ಧ ಪಾಲ್ ಖುಷಿ ಸಿಕ್ರೆ..ನಾ ಬರದ್ದಕ್ಕೂ ಒಂದ್ ಲೆಕ್ಕ, ಎಂತ ಅಂತ್ರಿ? ಇನ್ನೊಂದಿಷ್ಟ್ ಕುಂದಾಪ್ರ ಕನ್ನಡ ಶಬ್ದ ಕಾಂಬ ಬನಿ ಹಂಗಾರೆ [...]
ನೀನ್ ಹೋಯಿ ಹೋಯಿ ಅವ್ಳತ್ರ ಹೇಳ್ದ್ಯ…ಅವ್ಳದ್ ಹರ್ಕಟಿ ಬಾಯಿ
Posted: January 8, 2010 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡTags: ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಕಲಿ, kundapra kannada, kundapura, kundapura kannada
ಕುಂದಾಪ್ರ ಬದಿ ಶಬ್ದ ಕೆಮಿ ಮೇಲ್ ಬೀಳ್ದೆ ಸುಮಾರ್ ದಿನ ಆಯ್ತಮಗಿತ್ತಲ್ಲ… ಇಲ್ಲೊಂದೆರ್ಡ್ ಇತ್ತ್ ಕಾಣಿ.. ಜೀವ್ ಬಿಡ್ತ – ಈ ಶಬ್ದ ಕುಂದಾಪ್ರ ಕನ್ನಡದ್ದ್ ಮಾತ್ರ ಅಂತ ಹೇಳುಕಾತಿಲ್ಲ. ಬೇರೆ ಬೇರೆ ಬದಿಯಗ್ ಸತೆ ಇದೆ ನಮನಿ ಶಬ್ದ ಕೆಲವ ಇತ್ತ್. ಇದಕ್ಕೆ ಅರ್ಥ ಹೇಳುದಾರೆ ಪಂಚಪ್ರಾಣ ಅಂಬುದ್ ಸರಿ ಆತ್ತಾ ಕಾಣತ್ತ್ ಬಳಕೆ – ೧. ಅವನಿಗೆ ಮಾಯ್ನಣ್ಣ್ ಅಂದ್ರ್ ಸೈ… ಜೀವ್ ಬಿಡ್ತ ( ಬೇಕಿದ್ರೆ ನಿಮ್ಮ್ ನಿಮ್ಮ್ ಅನ್ಕೂಲಕ್ಕೆ ಮಾಯ್ ಹೆಣ್ಣ್ ಅಂದೆಳಿ ಬೇಕಾರ್ ಓದ್ಕಂಬುಕೆ ಅಡ್ಡಿಲ್ಲ) ೨. ಅವ್ಳ್ ಮಕ್ಳ್ [...]
ಕುಂದಾಪ್ರ ಕನ್ನಡದಗೊಂದು ಇಂಗ್ಲಿಷ್ ಕಾಣಿ…
Posted: December 22, 2009 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದTags: ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಶಬ್ದ, kundapra, kundapura, kundapura kannada
ಬರೀ ಕುಂದಾಪ್ರ ಕನ್ನಡದಗೆ ಮಾತ್ರ ಎಂತಕೆ , ಈಗ ಯಾವ್ ಕನ್ನಡದಗೂ ಇಪ್ಪುದ್ ಇಂಗ್ಲೀಷೆ ಅಲ್ದಾ. ಯಾರಾರೂ ಶುದ್ಧ ಕನ್ನಡ ಮಾತಾಡುವರ್ ಇದ್ರೆ ಹುಡ್ಕಿ ಕೊಡಿನಿ ಕಾಂಬ ಹಂಗಾರೆ ಅಂದೇಳಿ ನೀವ್ ಕೆಂಬ್ಕೂ ಸಾಕ್. ಅದ್ರಗೂ ಬೆಂಗಳೂರಗೆ ಹಾಂಗಿನರ್ ಯಾರಾರೂ ಇದ್ರೆ ಅವ್ರಿಗೆ ರಾಜ್ಯೋತ್ಸವ ಪ್ರಶಸ್ತಿಯೇ ಕೊಡ್ಲಕ್ಕ್ ಅಂತ್ ನೀವ್ ಹೇಳುಕೂ ಸಾಕ್. ಆರೇ ನಾ ಹೇಳುಕ್ ಹೊರಟದ್ದ್ ಅದ್ ಅಲ್ದೆ… ಒಂದ್ ಇಂಗ್ಲಿಷ್ ಶಬ್ದ ಕುಂದಾಪ್ರ ಕನ್ನಡದೊಳಗೆ ಬಂದ್ ಕೂಕಂಡಿತ್. ಆ ಶಬ್ದ ಯಾವ್ದ್ ಅಂದೇಳಿ ನೆನ್ಪ್ ಮಾಡ್ಕಂಕಿದ್ರೆ [...]
ತಕಂಡ್ ಹೋತ್ತಾ…!!
Posted: July 10, 2009 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಕಲಿ, ತಕಂಡ್ ಹೋತ್ತಾ
ಒಂದೊಂದ್ ಬದಿ ಭಾಷಿಯಗೆ ಆಲ್ಲಲ್ಲಿದೇ ವಿಶೇಷ ಆಡುನುಡಿ ಅಂದೇಳಿ ಇರತ್ತ್. ಆ ಬದ್ಯಗಿದ್ದರ್ ಮಾತಗ್ ಮಾತ್ರ ಇದ್ ಕಾಂಬುಕೆ ಸಿಕ್ಕತ್ತ್. ಹಾಂಗಿಂದ್ ಒಂದ್ ನಾಲ್ಕ್ ಕುಂದಾಪ್ರ ಕನ್ನಡದ ಆಡುನುಡಿ ಇಲ್ಲಿತ್ತ್ ಕಾಣಿ… ತಕಂಡ್ ಹೋತ್ತಾ ಬಳಕೆ – ೧. ಬಸ್ ಹತ್ತುವ ಅಂದೇಳ್ರೆ ಅಯ್ಯಬ್ಬಾ ಈ ಜನ ಎಲ್ಲಾ ನುರುದೇ… ಹಂಗಾರ್ ಬಸ್ ನಿಲ್ಲುದಿಲ್ಲ್ಯಾ.. ಇವ್ರಿಗೆಲ ಏನ್ ತಕಂಡ್ ಹೋತ್ತಾ? ೨. ಒಂದ್ ಮಾತಾಡ್ಕಾಯ್ದಿಲ್ಲ… ಆ ನಮನಿ ಬೊಬ್ಬಿ ಹೊಡಿತ್ಯಲ.. ನಿಂಗೇನ್ ತಕಂಡ್ ಹೋತ್ತಾ? ೩. ಈ [...]
ಚಾಷ್ಟಿ, ಚಪ್ಪಿ, ಚಾಟುಳ, ಹಲ್ ಚಿಲಿ, ಚಪ್ಪಾಂಚೂರು
Posted: April 9, 2009 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ
ಚಾಷ್ಟಿ = ಚೇಷ್ಟೆ, ತುಂಟತನ ಬಳಕೆ: 1.ಮಗಿನ್ ಚಾಷ್ಟಿಯೊಳ್ಗ್ ಆಯಿಲ್ಲಪ್ಪ. ಒಂದ್ ಗಳ್ಗಿ ಸುಮ್ನ್ ಕೂಕಂಬ್ಕ್ ಬಿಡುದಿಲ್ಲ 2.ನೀ ಮನಿಯಗೆ ಚಾಷ್ಟಿ ಮಾಡ್ದಂಗೆ ಹೋದಲ್ಲೆಲ್ಲ ಚಾಷ್ಟಿ ಮಾಡ್ರೆ ಬೆನ್ನ್ ಭೇರಿಯಾತ್ತ್ ಗೊತ್ತಾಯ್ತಾ ಚಪ್ಪಿ/ಚಪ್ಪೆ/ಚೆಪ್ಪಿ=ಸಪ್ಪೆ, ತಣ್ಣಗೆ, ಬಿಕೋ ಅನಿಸು ಬಳಕೆ: 1.ಹ್ವಾಯ್… ಚಾ ಮಾಡಿ ಇಟ್ ಎಷ್ಟ್ ಹೊತ್ತಾಯ್ತ್. ಹಂಗಾರೆ ಚಪ್ಪಿ ಆಯ್ಕಿದ್ರೆ ಮೊದ್ಲೆ ಕುಡುಕಾಗ್ದಾ? 2.ಮಕ್ಳೆಲ್ಲ ರಜಿಗ್ ಬಂದ್ ಹೋರ್ ಮೇಲೆ ಮನಿಯೆಲ್ಲ ಬರೀ ಚಪ್ಪಿ ಚಪ್ಪಿ. 3.ಹುಳಿ (ಸಾಂಬಾರ್) ಲಾಇಕ್ ಆಯಿತ್. ಆರ್ ಒಂಚೂರ್ ಉಪ್ಪ್ [...]
ಚಾ ಕಣ್ಣ್ ಕುಡ್ದ್ ಕುಂಚಟ್ ಹಾರ್ತ…!!
Posted: December 11, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ ಕಲಿ
ಕೊಟ್ಟ್ ಮಾತ್ ತಪ್ಸುದಿಲ್ಲ, ವಾರಕ್ಕೊಂದ್ಸರ್ತಿ ಆರೂ ಈ ಬದಿಗೆ ಬತ್ತೆ ಅಂದೇಳಿ ಕಳ್ಸರ್ತಿ ಹೇಳಿದ್ನಲ್ದಾ… ಹಾಂಗೇ ಇವತ್ ಬಂದಿದೆ ಕಾಣಿ… ಹಾಂಗೇ ನೀವೆಲ್ಲ ಉತ್ರ ಕೊಟ್ಟದ್ ಕಂಡ್ ಮಸ್ತ್ ಖುಷಿ ಆಯ್ತ್ (ಬೆಂಗ್ಳೂರ್ ಬದಿ ಮಸ್ತ್ ಅಲ್ಲ ಕುಂದಾಪ್ರ ಬದಿ ಮಸ್ತ್… J ) ಅನುಪಮ, ಮಹೇಶ್, ವೀಮಾ ಶೆಟ್ಟಿ, ಅಡಿಗ, ಶಿಶಿರ, ರಂಜಿತ್, ದೀಪಾ, ಭಾಗ್ವತ್ರ್… ಇವ್ರೆಲ್ಲಾ ಉತ್ರ ಕೊಟ್ಟಿರ್. ಶಿಶಿರ, ರಂಜಿತ್ ಎರ್ಡ್ ಸಮ್ನಾದ್ ಉದಾಹರಣೆ ಸೈತ ಕೊಟ್ಟಿರ್. ಅದೇ ಅರ್ಥ ಬಪ್ಪ್ [...]
ಕಳ್ಸರ್ತಿದ್ ಉತ್ರ… ಈ ಸರ್ತಿದ್ ಪ್ರಶ್ನೆ
Posted: December 4, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, ಕುಂದಾಪುರ ಕನ್ನಡ, ಕುಂದಾಪ್ರ ಕನ್ನಡ
ಕಳ್ದ್ ಸರ್ತಿ ಒಂದಿಷ್ಟ್ ಕುಂದಾಪ್ರ ಕನ್ನಡ ಶಬ್ದ ಕೊಟ್ಟ್ ನಿವೆಲ್ಲ ಉತ್ರ ಹೇಳಿನಿ ಕಾಂಬ ಅಂತ್ ಹೇಳಿದೆ… ನಾವಡ್ರ್, ಯಶೋಧ ಮತ್ತೆ ಅನುಪಮ ಸುಮಾರ್ ಸರಿ ಉತ್ರ ಕೊಟ್ಟಿರ್. ಬೇರೆ ಯಾರೂ ಈ ಬದಿಗ್ ನೀಕಿ ಕಾಣಲ್ಯೋ…, ಕಂಡ್ರೂ ಉತ್ರ ಹೇಳುಕೆ ಮನ್ಸಿಲ್ಯೋ, ಅತ್ವ ಯಾರ್ ಹೇಳ್ತ್ರ್.. ಇವ್ನಿಗೆ ಬೇರೆ ಕೆಲ್ಸ ಇಲ್ಲ ಅಂದೇಳಿ ಸುಮ್ನಾಯ್ಕಂಡ್ರೋ ಗೊತ್ತಿಲ್ಲ. ಹೋಯ್ಲಿ ಬಿಡಿ… ನಂಗೇನ್ ಬೇಜಾರಿಲ್ಲ… ಯಾರಿಗಾರೂ ಒತ್ತಾಯ ಮಾಡಿ ಉತ್ರ ಹೇಳಿ ಅಂದೇಳಿ ಹೇಳುಕಾತ್ತಾ? ಆರ್ ಹೀಂಗ್ [...]
ಈ ಸರ್ತಿ ಚೂರ್ ಬದ್ಲ್ ಮಾಡ್ರೆ ಹ್ಯಾಂಗೆ?… ಗತಿ ಗೋತ್ರ ಇಲ್ದಿದಂಗ್ ಆಪುದ್, ಅಂಡುದ್, ಹೊತ್ತ್‌ಹೋಪತಿಗೆ, ವರ್ಕುದ್
Posted: October 29, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, kundapra kannada
ಏಗ್ಳಿಕೆ ಕಂಡ್ರೂ ನಾನೆ ಶಬ್ದ ಬರ್ದ್, ಅದ್ರದ್ ಅರ್ಥ ಹೇಳಿ, ವಾಕ್ಯ ಮಾಡಿ ತೋರ್ಸ್‌ತಿದ್ದಿದೆ ಅಲ್ದಾ? ಈ ಸರ್ತಿ ಒಂಚೂರ್ ಬದ್ಲ್ ಮಾಡ್ವಾ? ನಾನೊಂದಿಷ್ಟ್ ಕುಂದಾಪ್ರ ಬದಿದ್ ಶಬ್ದ ಕೊಡ್ತೆ. ನೀವ್ ಅದಕ್ ಅರ್ಥ ಹೇಳಿ, ಒಂದೆರ್ಡ್ ವಾಕ್ಯ ಹೇಳಿ. ಕಾಂಬ ಯಾರೆಲ್ಲ ಉತ್ರ ಹೇಳ್ತ್ರ ಅಂದೇಳಿ. ( ಭಾಗ್ವತ್ರೆ ಹೀಂಗ್ ಮಾಡ್ಯಾರೂ ನೀವ್ ನಿಲ್ಸಿದ್ ಕುಂದಾಪ್ರ ಕನ್ನಡ ಕ್ಲಾಸ್ ಮತ್ತ್ ಶುರು ಮಾಡ್‌ತ್ರ್ಯಾ ಕಾಂಬ ಅಂದೇಳಿ…) ಯಾವ್ದೆಲ್ಲ ಶಬ್ದ ಕೇಂಡ್ರ್ಯಾ? ಎಲ್ಲ ಇಲ್ಲಿತ್ತ್ [...]
ಕುಮ್ಟಿ ಬೀಳು, ಹೊಕ್ಡ್ , ಬೆಟ್ಟ್, ಹಿಂದಾಗು, ಲಾಟ್ ಬಿಡು
Posted: September 24, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ
ಕುಮ್ಟಿ ಬೀಳು = ಬೆಚ್ಚಿ ಬೀಳು ಬಳಕೆ ೧. ಮಗಿನ ಸುದ್ದಿಗ್ ಹೊಗ್ಬೆಡ ಅಂದ್ರ್ ಕೇಂತಿಲ್ಲ. ನೀ ಕೂಗದ್ದ್ ಕಂಡ್ ಮಗು ಕುಮ್ಟಿ ಬಿತ್ತ್ ಕಾಣ್ ೨. ನೀವ್ ಹಿಂದಿಂದ್ ಬಂದ್ ಸುಮ್ನ್ ನಿಂತ್ಕಂಡದ್ದಾ ಮರಾಯ್ರೆ. ಕತ್ಲಿ ಹೌದಾ ಅಲ್ದಾ… ನಾ ಒಂದ್ಸಲ ಕುಮ್ಟಿ ಬಿದ್ದೆ ಗೊತ್ತಾ ಹೊಕ್ಡ್ = ಜೊತೆಗೆ, ಬಳಿ, ಹತ್ತಿರ, ಒಟ್ಟಿಗೆ ಬಳಕೆ ೧. ಮೊನ್ನೆ ನಂಗೂ ಅವಂಗೂ ಮಾತಿಗ್ ಮಾತ್ ಆಯ್ ಈಗ ನನ್ ಹೊಕ್ಡ್ ಮಾತಾಡುದೇ ಕೈದ್ ಮಾಡಿದ [...]
ಅಂಬ್ಡ್, ಚೊಣ್ಕಿ ,ಹತ್ತಾ, ಪತ್ತಿ, ಹುಣ್ಸಿಹಣ್, ಬೆಳ್ಚುದು, ಹಸರ್ಸ್‌ಕಂಡ್, ಧಾತ್
Posted: September 5, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, ಕುಂದಾಪ್ರ ಕನ್ನಡ
ಅಂಬ್ಡ್, ಅಂಬಡ್ = ಜೋಡಿ, ಅವಳಿ ಬಳಕೆ ಅವ್ರಿಬ್ರ್ರೂ ಅಂಬ್ಡ್ ಮಕ್ಳ್ ಅಂಬ್ರ್. ಕಾಂಬುಕೆ ಒಂದೇ ನಮ್ನಿ ಇದ್ರ್ ಕಾಣಿ ಅಂಬ್ಡ್ ಬಾಳೆಹಣ್ ತಿಂದ್ರೆ ಅಂಬ್ಡ್ ಮಕ್ಳ್ ಹುಟ್ತ್ರ್ ಅಂಬ್ರಲಾ ಹೌದಾ? ಹತ್ತ / ಹತ್ತಾ = ಸಂಪೂರ್ಣ, ಪೂರಾ ಬಳಕೆ ಹರಿಯಗ್ ನೀರ್ ಹತ್ತಾ ಖಾಲಿ ಮಾಡ್ಬೆಡ ನಂದ್ ಇನ್ನೂ ಮಿಂದ್ ಆಯಲ್ಲ ಯಾರಾರೂ ಪಾಪ್ದರ್ ಸಿಕ್ರೆ ಅಂವ ಹತ್ತ ಬೋಳ್ಸಿ ಬಿಡ್ತ ಪತ್ತಿ = ಆಹಾರ ಇದು ಬಹುಶಃ ಪಥ್ಯ ಶಬ್ದದಿಂದ ಬಂದಿರಬಹುದು. ಪಥ್ಯ [...]
ಕಣ್ಣ್ ಕೂರುದು, ಚಪ್ಪಿ ಎಡ್ಕ್, ಹೊಡ್ಕು, ಮ್ಯಾಳಿ, ಮ್ಯಾಲಾಗ್ರ, ತಾಳ್ಳ್, ತಾಳ್
Posted: August 11, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಕಲಿ
ಕೂರ್ ಮಂಡಿ ಹಾಕುದ್/ ಕಣ್ಣ್ ಕೂರುದು = ತೂಕಡಿಸು, ನಿದ್ರೆ ಬರುವಂತಾಗು ಬಳಕೆ – ೧. ನಂಗ್ ಕಣ್ಣ್ ಕೂರ್‌ತಾ ಇತ್ತ್. ನಾ ಮಲ್ಕಂತೆ ಅಕಾ? ೨. ಟಿ.ವಿ. ಮುಂದ್ ಕೂಕಂಡ್ ಕೂರ್ ಮಂಡಿ ಹಾಕ್ದಿದ್ರೆ ಹೊಯಿ ಮಲ್ಕಂಬ್‌ಕಾಗ್ದಾ? ಚಪ್ಪಿ, ಚಪ್ಪೆ = ಸಪ್ಪೆ (ಬಿಸಿ ತಣಿಯುವುದು ಅನ್ನುವ ಅರ್ಥ ಕೂಡಾ ಇದೆ) ಬಳಕೆ – ೧. ಸಾರ್ ಸಾಪಾಯಿತ್.. ಆರೆ ಒಂಚೂರ್ ಉಪ್ಪ್ ಚಪ್ಪೆ ೨. ಎಂಥ ಮಾರಾಯ ಚಪ್ಪಿ ಇದ್ದೆ, ಹುಶಾರಿಲ್ಯಾ? ೩. [...]
ಹಾಂಟ್ ಹಾಕು, ಹರ್ಪು, ಬಳುವಟಿ, ಕುಟ್ಟಿ ಕೀಸು, ಮ್ವಾಳ
Posted: August 8, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಕಲಿ
ಹಾಂಟ್ ಹಾಕು / ಹಾಟ್ ಹಾಕು = ಮೋಸ ಮಾಡು, ಚಕ್ಕರ್ ಹೊಡೆ, ಕೈ ಕೊಡು ಬಳಕೆ – ೧. ನಿಮ್ ದುಡ್ ಕೊಡ್ವಾ ಮರಾಯ್ರೆ..ನಾನೇನ್ ಹಾಂಟ್ ಹಾಕ್ತನಾ ಹಂಗಾರೆ ೨. ಇವತ್ತ್ ಮನಿಗ್ ನೆಂಟ್ರ್ ಬಂದಿರ್. ಅದಕ್ಕೆ ಶಾಲಿಗ್ ಹಾಂಟ್ ಹಾಕದ್ ಹರ್ಪು = ಪರಚುವುದು, ಗಿಬರು, ಗೀರು ಬಳಕೆ – ೧. ಮಗಿನ್ ಉಗ್ರ್ ಸಮಾ ಉದ್ದ ಆಯಿತ್. ಇಲ್ಕಾಣಿ ನನ್ ಮುಖದ್ ತುಂಬಾ ಹರ್ಪದ್ ೨. ಅವ್ನೊಟ್ಟಿಗೆ ಆಡುದ್ ಬ್ಯಾಡಾ ಮರಾಯ. [...]
ಹಿಲಾಲ್ ಹಿಡಿ, ದಾನಿ ಸೊಳಿ ಅಂತಾ ಇಪ್ಪುದ್, ಚಂಯ ಚಂಯ ಅಂಬುದು
Posted: July 29, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, kundapra kannada, kundapur kannada, kundapura kannada
ಹಿಲಾಲ್ ಹಿಡಿ, ದಾನಿ ಸೊಳಿ ಅಂತಾ ಇಪ್ಪುದ್, ಚಂಯ ಚಂಯ ಅಂಬುದು ಹಿಲಾಲ್ ಹಿಡಿ, ಹಿಲ್ಲಾಲ್ ಹಿಡಿ – ತಮಾಷೆ ಮಾಡು, ಗೇಲಿ ಮಾಡು ಹಿಲಾಲು ಶಬ್ದದ್ ಅರ್ಥ ನಿಜವಾಯಿ ಕಾಂಬುಕೆ ಹೋರೆ -‘ಬಟ್ಟೆಯನ್ನು ಎಣ್ಣೆಯಲ್ಲಿ ನೆನೆಸಿ ಮಾಡಿದ ದೊಂದಿ’ ಅಂತಿತ್ತ್. ದೇವ್ರ್ ಮೂರ್ತಿ ಉತ್ಸವದ್ ಸಮಿಗೆ ರಾತ್ರಿ ಹಿಡಿತ್ರಲ ಆ ನಮನಿ ದೊಂದಿ. ಬೌಶ ಇದು ಮಾಡದ್ ತಪ್ಪನ್ ಬೆಳ್ಕಿಗೆ ಹಿಡುದ್ ಅಂಬ್ ಅರ್ಥದಗೆ ಬಂದ ನುಡಿಕಟ್ ಅಂದೇಳಿ ಕಾಣತ್ ಬಳಕೆ – [...]
ಅಕೇರಿ, ಹೀಕರ್ಣಿ, ಪಕ್ತಾ, ಹತ್ತಾ, ಹರ್ಕತ್, ತಾಪತ್ರ್ಯ, ಸೈತ
Posted: July 29, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, kundapra kannada, kundapur kannada, kundapura kannada
ಪಕ್ತಾ, ಫಕ್ತಾ – ಬರೀ ಇದ್ ಬಂದದ್ ಮರಾಠಿ ಮೂಲದಿಂದ. ಮೂಲ ಶಬ್ದ ‘ಫಕ್ತ್’. ಬಳಕೆ – ೧. ಅವ್ನಿಗೆ ಪಕ್ತಾ ಆಡು ಗಿರ ಬಿಟ್ರೆ ಮತ್ತೆಂತ ಇಲ್ಲ( ಏಗ್ಳಿಕೆ ಕಂಡರೂ ಅಂತ ಬೇಕಾರ್ ಅರ್ಥ ಮಡ್ಕಂಬ್ಕೆ ಅಡ್ಡಿಲ್ಲ) ೨. ಅವ ಇತ್ತಿತ್ಲಾಯಿ ಪಕ್ತಾ ಸುಳ್ಳ್ ಹೇಳುಕ್ ಕಲ್ತಿದ ಹತ್ತಾ, ಹತ್ತ – ಪೂರ್ಣ, ಸಂಪೂರ್ಣ ಬಳಕೆ – ೧. ಸ್ನಾನಕ್ಕೆ ಹೋದನು ನೀರ್ ಹತ್ತ ಕಾಲಿ ಮಾಡ್ಬೆಡ. ನಂಗೂ [...]
ಕುಂದಗನ್ನಡಕ್ಕೊಂದು ಕನ್ನಡಿ ಭಾಗ -2
Posted: July 24, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, ಕುಂದಾಪುರ ಕನ್ನಡ, ಕುಂದಾಪ್ರ ಕನ್ನಡ, kannada, kundaapra, kundaapura, kundapra, kundapur
ಹೈಲು/ ಹೈಲ್ = ಕಂಗಾಲು, ಹೈರಾಣ ಬಳಕೆ : ೧. ಈ ವರ್ಷ ಮಳೆ ಬಾರ್ದೆ ಬ್ಯಾಸಾಯ ಮಾಡುವರ್ ಯಾಪಾರ್ ಹೈಲ್ ಅಲ್ದೇ. ೨. ಈ ಮಕ್ಕಳಿಗೆ ರಜಿಯಾರೂ ಎಂತಕ್ ಬತ್ತೋ ಏನೋ. ಅವ್ರನ್ ಸುಧಾರ್ಸುದ್ರೊಳ್ಗೆ ಅಲ್ದೇ ನಾ ಅರ್ಧ ಹೈಲ್ ಆದ್ದ್. ೩. ಕೊಡಿ (ಕೊಡೆ) ತಕಂಡ್ ಹೋಪುಕೆ ನೆನ್ಪ್ ಹೋಯಿ, ಮಳೆಯಗ್ ಸಿಕ್ಕಿ ಬಿದ್ದ್ ನನ್ ಯಾಪಾರ ಹೈಲಾದ್ದ್ ಅಲ್ದಾ ಮಾರ್ರೆ ಊಜು / ಊಂಜು/ ಸೀಬು/ ಸೀಂಬು = ಚೀಪು [...]
ಕರ್ಕರೆ ದೇವ್ರಿಗೆ ಮರನ್ ಜಾಗಂಟಿ
Posted: July 11, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, ಕುಂದಾಪ್ರ ಕನ್ನಡ ಕಲಿ, ಗಾದಿ ಮಾತ್, ಹರಕೆ ಬಲಿ
ಕುಂದಾಪ್ರ ಶಬ್ದದ್ ಒಟ್ಟಿಗ್ ನೆನ್ಪಿಗ್ ಬಂದ ಒಂದೆರ್ಡ್ ಕುಂದಾಪ್ರ ಕನ್ನಡ ಗಾದಿ ಮಾತ್ ಇಲ್ಲಿತ್ ಕಾಣಿ ೧) ಕರ್ಕರೆ ದೇವ್ರಿಗೆ ಮರನ್(ಮರದ) ಜಾಗಂಟಿ ೨) ಊರಿಗ್ ಬುದ್ಧಿ ಹೇಳುದ್ ಒಲಿಗೆ ಉಚ್ಚಿ ಹೊಯ್ಯುದ್ ೩) ಕುಪ್ಳನ್ ನಂಬ್ಕಂಡ್ ಕೊಳ್ಕಿ ನಟ್ರಂಬ್ರ್ ಈ ಗಾದಿ ಮಾತಿನ್ ಅರ್ಥ ನಾ ಹೇಳುದಿಲ್ಲ. ಗೊತ್ತಿದ್ರೆ ನೀವೇ ಹೇಳಿ ಕಾಂಬ ಇನ್ನೊಂದ್ ಶಬ್ದ/ನುಡಿಕಟ್ ನೆನ್ಪಾಯ್ತ್ ಕಾಣಿ ಹರ್ಕಿ ಬಲಿ (ಹರಕೆ ಬಲಿ) – ಇದರ ಅರ್ಥ ನಂಗ್ [...]
ಕುಂದಗನ್ನಡಕ್ಕೊಂದು ಕನ್ನಡಿ
Posted: July 10, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, ಕುಂದಾಪ್ರ ಕನ್ನಡ, ನಂ ಭಾಷೆ, kundapura kannada
ಭಾಷೆಯೊಂದು ಜೀವನದಿಯಂತೆ. ತನ್ನ ಹರಿವಿನುದ್ದಕ್ಕೂ ಬಂದು ಸೇರುವ ಅಸಂಖ್ಯಾತ ಹಳ್ಳ-ತೊರೆಗಳನ್ನು ಅಂತರ್ಗತವಾಗಿಸಿಕೊಂಡು ಮೈದುಂಬಿ ಹರಿಯುವ ನದಿಯಂತೆಯೇ ಭಾಷೆಯೂ ಕೂಡಾ ಆಯಾ ಪ್ರದೇಶಕ್ಕೇ ಸೀಮಿತವಾದ ಪದ, ಗಾದೆ, ನುಡಿಗಟ್ಟುಗಳನ್ನು ಸೇರಿಸಿಕೊಂಡು ಸಮೃದ್ಧವಾಗುತ್ತದೆ. ಕುಂದಾಪುರ ಕನ್ನಡಕ್ಕೇ ಸೀಮಿತವಾದ ಕೆಲವು ವಿಶೇಷ ಪದಗಳನ್ನಿಲ್ಲಿ ನೋಡೋಣ. ಚರ್ಗಿ ಭರ್ತಿ – ದಂಡ ಪಿಂಡ, ಅಪ್ರಯೋಜಕ ಬಳಕೆ: ಆ ಕೆಲ್ಸ ಮಾಡುಕ ಅವ್ನ್ ಕೈಯ್ಯಗೆ ಆತ್ತಾ? ಅವ ಏನಿದ್ರೂ ಚರ್ಗಿ ಭರ್ತಿಗೇ ಸೈ ಹನಿ ಹಂದುದಿಲ್ಲ [...]
