ಕೊಲವೆರಿ ಸ್ಟೈಲಗೆ ಹೆಡಿಮಂಡಿ….. ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ ಬ್ಯಾಟ್ ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ ಬ್ಯಾಟ್ ಡಿಸ್ಟೆನ್ಸಲ್ಲ್ ಗೆದ್ದಿ ಗೆದ್ದಿ ಗೆದ್ದಿ ಕೊಯ್ಲು ಆಯ್ತು ಗೆದ್ದಿ ಕೊಯ್ಲು ಆದ್ರ ಮೇಲೆ ನಮ್ಗ್ ಆಡುಕ್ ಲಾಯ್ಕು ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ ಬ್ಯಾಟ್ ಬೇಸ್ಗಿ ರಜಿಯಗೆ ಫುಲ್ಲು ಫುಲ್ಲು ನಮ್ದು ಕ್ರಿಕೇಟು ಆಟ ಆಡಿ ಆರ್ಮೇಲ್ ಕೈಕಾಲ್ ತೊಳ್ಕಂಡ್ ಒಂದು ಮುಷ್ಟಿ ಊಟ ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ ಬ್ಯಾಟ್ ಕೈಯ್ಯಲ್ಲಿ [...]
Author Archive
ವೈ ದಿಸ್ ಹೆಡಿಮಂಡಿ ಹೆಡಿಮಂಡಿ ಹೆಡಿಮಂಡಿ ಬ್ಯಾಟ್
Posted: February 8, 2012 in anaka, ಅಣಕ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಗಮ್ಮತ್ ಇತ್ತ್ ಕಾಣಿ..., ಹಾಡು, kundaapra kannada, kundapra, kundapra kannada, kundapur, kundapur kannada, kundapura, kundapura kannadaಕೊಂದ್ ಪಾಪ ತಿಂದೇ ಪರಿಹಾರ
Posted: January 7, 2012 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ ಕನ್ನಡ, kundaapra kannada, kundapra, kundapra kannada, kundapur, kundapur kannada, kundapura, kundapura kannadaರೊಟ್ಟಿ ಜಾರಿ ತುಪ್ಪದಗ್ ಬಿದ್ದಾಂಗ್ ಆಯ್ತ್… ಹುಡ್ಕತಿದ್ದ ಬಳ್ಳಿಯೇ ಕಾಲಿಗೆ ಸಿಕ್ಕಾಂಗ್ ಆಯ್ತ್… ಹೀಂಗೆ ಎಂತ ಬೇಕಾರು ಅನ್ಕಣ್ಲಕ್ಕ್… ಇವತ್ತ್ ರವೀಂದ್ರ ಕಲಾಕ್ಷೇತ್ರದಗೆ ನೆಡಿತಿಪ್ಪ ಪುಸ್ತಕ ಪ್ರದರ್ಶನಕ್ಕ್ ಒಂದ್ ಗಳ್ಗಿ ಹೋಯ್ ಬಪ್ಪ ಅಂತ ಹೋಯಿ ಬಂದೆ. ಪ್ರತಿ ಸರ್ತಿ ಅರಮನೆ ಮೈದಾನದಗೆ ನೆಡುವ ಪುಸ್ತಕ ಪ್ರದರ್ಶನಕ್ಕೆ ಹೋತಿದ್ದಿದೆ. ಈ ವರ್ಷ ಅಲ್ಲಿಗ್ ಹೋಪ್ಕ್ ಆಯಲ್ಲ. ಬೆಂಗ್ಳೂರಗೆ ಸಾಹಿತ್ಯ ಸಮ್ಮೇಳನ ಆದಲ್ಲ್ ಹೋದ್ದೆ ಕೊನೆ. ಅದ್ರ ಮೇಲೆ ಅಂಕಿತ ಪುಸ್ತಕಕ್ಕೆ ಒಂದೊಂದ್ ಸಲ ಹೋದ್ದ್ ಬಿಟ್ರೆ ಪುಸ್ತಕ [...]
ನಮ್ಮ ಕುಂದಾಪ್ರ ಎಷ್ಟ್ ಲಾಯ್ಕಿತ್ತೆ ಕಾಣಿ…
Posted: November 18, 2011 in ಕುಂದಾಪುರ, ಕುಂದಾಪ್ರ, kundapra, kundapur, kundapuraTags: kundapur, kundapura
ಸುಮಾರ್ ಊರ್ ಬದಿ ಫೋಟೋ ಸ್ಲೈಡ್ ಶೋ ಇತ್ತ್… ಲಾಯ್ಕಿತ್ತಾ ಕಾಣಿ ನಮ್ಮ ಕುಂದಾಪ್ರ ಭಾಗ -1 ನಮ್ಮ ಕುಂದಾಪ್ರ ಭಾಗ -2 ನಮ್ಮ ಕುಂದಾಪ್ರ ಭಾಗ -3
ನೀ ಅಮೃತಧಾರೆ ..ಕೋಟಿ ಜನುಮ ಜೊತೆಗಾತಿ ಧಾಟಿಯಂಗೆ ಓದಿ…..ನೀ ನಂಬದಿಗ್ ಹೋರೆ…ಪ್ಯಾರ್ಲಿಕಾಯ್ ತಕಂಬತ್ಯಾ.
Posted: July 29, 2011 in anaka, ಅಣಕ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಗಮ್ಮತ್ ಇತ್ತ್ ಕಾಣಿ...ನೀ ಅಮ್ರತಧಾರೆ ..ಕೋಟಿ ಜನುಮ ಜೊತೆಗಾತಿ ಧಾಟಿಯಂಗೆ ಓದಿ…… ನೀ ನಂಬದಿಗ್ ಹೋರೆ…ಪ್ಯಾರ್ಲಿಕಾಯ್ ತಕಂಬತ್ಯಾ ನೀ ನಂಬದಿಗ್ ಹೋರೆ…ಎರಡು ಮಾಯ್ನಕಾಯ್ ತಕಂಬತ್ಯಾ ನೀ ನಂಬದಿಗ್ ಹೋರೆ…ಪ್ಯಾರ್ಲಿಕಾಯ್ ತಕಂಬತ್ಯಾ ನೀ ನಂಬದಿಗ್ ಹೋರೆ…ಎರಡು ಮಾಯ್ನಕಾಯ್ ತಕಂಬತ್ಯಾ ನೀ ಎಡಿಯ ಅಂದರೆ ನಾ… ಹ್ಯಾಂಗೆ ತಿಂಬುದು? ನಾ ಊರಿಗ್ ಹೋರೆ… ಕಂಡಿತಾ ಸಿಕ್ರೆ ತಕಂಬತ್ತೆ ನಾ ಹೋಪು ಸೂರಿಗೆ , ಊರಲ್ ಬಾರಿ ಮಳಿಗಾಲ ನಂಗ್ ಸಿಕ್‌ದೇ ಹೋರೇ ನಾ..ಎಂತಾ ಮಾಡುದು? ನೀ ನಂಬದಿಗ್ ಹೋರೆ ನೆನ್ಪಿತ್ತಾ ತೆಂಗಿನ್ ತ್ವಾಟ [...]
ಸುಮ್ನ್ ಆಯ್ಕಣಿ ಅಮ್ಮ ….ಕೊಡುದ್ ನೂರ್ ರೂಪಾಯ್ ಸಂಬ್ಳ… ಮಾಡೂಕ್ ನಂಗ್-ಎಡುದಿಲ್ಲ
Posted: July 23, 2011 in ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಗಮ್ಮತ್ ಇತ್ತ್ ಕಾಣಿ..., kundaapra kannada, kundapra, kundapra kannada, kundapur, kundapur kannada, kundapura, kundapura kannadaTags: ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ ಕನ್ನಡ, kundapura, kundapura kannada
ರಿಷಿ ಸಿನಿಮಾದ “ನಾನು ಒತ್ತಾರೆ ಎದ್ಬಿಟ್ಟು…” ಹಾಡನ್ನು ಕುಂದಾಪ್ರ ಬದಿ ಕೆಲ್ಸದ್ ಹೆಣ್ಣ್ ಮತ್ತ್ ಮನಿ ಯಜ್ಮಾನ್ತಿ ಮಾತಾಡುವಂಗೆ ಬರ್ದ್ರೆ ಹ್ಯಾನ್ಗಿರತ್ತ್ ಕಾಣಿ… ಈ ಪದ್ಯ ಕೇಂತಾ ಓದ್ರೆ ಇನ್ನೂ ಲಾಯ್ಕಿರತ್ತ್.. ಅದ್ಕೆ ಪದ್ಯದ ವಿಡಿಯೋ ಇಲ್ಲೇ ಪೋಸ್ಟಿನ ತುದಿಯಲ್ ಹಾಕಿದೆ ಕಾಣಿ…. ನಾಳೆ ಬೆಳ್ಮುಚ್ ಬೇಗೆದ್ದು..ಬಚ್ಲ ಒಲಿಗೆ ಕಿಚ್-ಒಟ್ಟಿ..ಗಂಟಿ ಎಬ್ಬಿ ಬರ್ಕ್ ಹೆಣೆ… ಚೂರ್ ಚಾ ಇದ್ರೆ ಕುಡ್ಕಂಡ್ ..ಆಂಗ್ಳಕ್ಕೆ ನೀರ್ ಹಾಕಿ… ರಂಗೋಲಿ ಹಾಕ್ಕ್ ಹೆಣೆ… ಹಾಡಿ ಬದಿಗೋಯಿ ಗುಡ್ಸ್ಕಂಡ್ …ದರ್ಲಿ ಒಟ್ಟ್-ಮಾಡ್ಕಂಡ್… ಗೆದ್ದಿಗ್ [...]
ಸುಮ್ನಾ…ಯ್ಕೊ… ಏ ಗಡಾ.. ಕೊಂಗಾ…ಟ ಸಾಕ್ ಗಡಾ… ಚೊಣ್ಕಿ ತಾಗ್ದಂಗ್ ಆಡ್ಬೆಡ…ಹ್ವಾ..ಹ್ವಾ..
Posted: July 23, 2011 in ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಗಮ್ಮತ್ ಇತ್ತ್ ಕಾಣಿ..., ಹಾಡು, kundaapra kannada, kundapra, kundapra kannada, kundapur, kundapur kannadaTags: ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, kundaapra, kundaapra kannada, kundapra kannada, kundapura, kundapura kannada
ರಿಷಿ ಸಿನಿಮಾದ ನಾನು ಒತ್ತಾರೆ ಎದ್ಬುಟ್ಟು…ಹಾಡು ಕುಂದಾಪ್ರಕ್ಕೆ ಬಂದ್ರೆ…ಹೀಂಗ್ ಆತ್ತ್ ಕಾಣಿ… ರಾಜು ಅನಂತ ಸ್ವಾಮೀ ಹಾಡಿದ್ ಈ ಪದ್ಯ ಕಂಡ್ರೆ ನಂಗೆ ಮಸ್ತ್ ಖುಷಿ… ಈ ಪದ್ಯ ಕೇಂತಾ ಓದ್ರೆ ಇನ್ನೂ ಲಾಯ್ಕಿರತ್ತ್.. ಅದ್ಕೆ ಪದ್ಯದ ವಿಡಿಯೋ ಇಲ್ಲೇ ಪೋಸ್ಟಿನ ತುದಿಯಲ್ ಹಾಕಿದೆ ಕಾಣಿ…. ನಾನು ಬೆಳ್ಮುಚ್ ಎದ್ಕಂಡ್..ನಿನ್ ಸೊಡ್ಡ್ ಕಂಡ್ಕಂಡ್.. ಕೈ ಮುಕ್ಕಂಡ್ ನಿಂತ್ಕಂತೆ ಹೆಣೆ… ಬೇಗ ಚಾ ಕಣ್ಣ್ ತಂದ್ಕೋಟ್ಟು.. ನಿನ್ ಕಾಲ ಬುಡ್ದಗಿಟ್ಟು… ಚೂರ್-ಚೂರೆ ಕುಡ್ಸ್ತೆ ಹೆಣೆ… ಚಾಕ್ ಸಕ್ರಿ ಕಮ್ಮಿ [...]
ಕಮಲಶಿಲೆ ಗುಹೆಯೊಳಗೆ ಹೀಗೂ ಉಂಟೆ?
Posted: July 17, 2011 in ಕಮಲಶಿಲೆ, ಕಮಲಶಿಲೆ ಗುಹೆ, ಕುಂದಾಪುರ, ಕುಂದಾಪ್ರ, kamalashile, kundapra, kundapur, kundapuraTags: ಕಮಲಶಿಲೆ, ಕಮಲಶಿಲೆ ಗುಹೆ, kamalashile, kamalashile cave
ಕಳ್ದ್ ವಾರ ಟಿ.ವಿ.9ನಗೆ ಹೀಗೂ ಉಂಟೆ ಕಾರ್ಯಕ್ರಮ್ದಗೆ…ನಮ್ಮೂರ್ ಹಳ್ಳಿಹೊಳೆ ಹತ್ರದ್ ಕಮ್ಲಶಿಲಿ ಗುಹೆದ್ ಕತಿ ಬಂದಿತ್ತ್… ಅದ್ರ ವೀಡಿಯೊ ಇಲ್ಲಿತ್ ಕಾಣಿ…. ಮಸ್ತ್ ಲಾಯ್ಕಿತ್ತ್…
ಬೋಲೋ..ತರರರ..(ಕುಂದಾಪ್ರ ಕನ್ನಡದಗೆ)… :-)
Posted: July 12, 2011 in ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಗಮ್ಮತ್ ಇತ್ತ್ ಕಾಣಿ..., kundaapra kannada, kundapra, kundapra kannada, kundapur, kundapur kannada, kundapura, kundapura kannadaಲಾಡಿ ಕಟ್ಕೊ…ಲಾಡಿ ಕಟ್ಕೊ..ಲಾಡಿ ಕಟ್ಕೊ… ಲಾಡಿ ಕಟ್ಕೊ…ಲಾಡಿ ಕಟ್ಕೊ..ಲಾಡಿ ಕಟ್ಕೊ… ಗಡೆ ನಿನ್ನ ಚಡ್ಡಿ…ಬಿಚ್ಚಿ ಹೋಯ್ತಲ್ಲ ಚಡ್ಡಿ ಲಾಡಿ ಬಾಯಿಂದ್ ತೆಗಿಯಾ ಬೆಟ್, ಚಡ್ಡಿ ಮೇಲೆತ್ತಿ ಕಟ್ಟ್.. ಪೂರಾ ತೋರತ್ತ್ ಮಾರಾಯ…ತೋರತ್ ಮರಾಯ, ಗ್ವಾನ್ಜಡಿ ಮೇಲೇರ್ಡ್ ಬಿಡ್ತೆ.. ಪೂರಾ ತೋರತ್ ಮರಾಯ….. ಲಾಡಿ ಕಟ್ಕೊ…ಲಾಡಿ ಕಟ್ಕೊ..ಲಾಡಿ ಕಟ್ಕೊ… ಮೂಗಂಗೆ ಸಿಂಬಳ ಸೊರಿತ್ತ್…ಬಾಯಂಗೆ ಎಂಜ್ಲ್ ಇಳಿತ್ತ್… ಬಾಯ್ಕಳ್ದ್ರೆ ಹತ್ರ ಹೋಪುಕೆ… ಯಾರೀಗ್ಎಡಿತ್ತ್….ಮರಾಯ ಸಿಂಬಳ ವರ್ಸ್ಕೊ ಮರಾಯ ಸಿಂಬಳ ವರ್ಸ್ಕೊ… ಗ್ವಾನ್ಜಡಿ ಮೇಲೇರ್ಡ್ ಬಿಡ್ತೆ… ಸಿಂಬಳ ವರ್ಸ್ಕೊ…ಸಿಂಬಳ ವರ್ಸ್ಕೊ…ಸಿಂಬಳ ವರ್ಸ್ಕೊ [...]
ಕೂಕಂಬ್ಕ್ ಮರವಂತೆ ಬೀಚ್ …ಬಾ ಬಾ (ಹ್ವಾಯ್ ಯಾರದ್ ಹೆದ್ರಕಂಬರ್ …ಅಂಡ್ಕಂಬರ್)
Posted: July 6, 2011 in ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, kundaapra kannada, kundapra, kundapra kannada, kundapur, kundapur kannada, kundapura, kundapura kannadaTags: ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, kundaapra kannada, kundapra, kundapra kannada, kundapur, kundapur kannada, kundapura, kundapura kannada
“ನೆನಪಿರಲಿ” ಪಿಚ್ಚರಿನ ಕೂರಕ್ ಕುಕ್ರಳ್ಳಿ ಕೆರೆ ಹಾಡು…ಕುಂದಾಪ್ರ ಸ್ಟೈಲಗೆ … (ಅಣಕ ಬರದ್ದ್ -ವಿಜಯರಾಜ್ ಕನ್ನಂತ) ಎಲ್ಲಾ ಹಕ್ಕು ಕಾಯ್ದಿರಿಸಲಾಗಿದೆ ಹ್ವಾಯ್ ಯಾರದ್ ಹೆದ್ರಕಂಬರ್ …ಅಂಡ್ಕಂಬರ್ ಹೊಕ್ಕಂಬರ್ , ಮಂಡಿ ಜಪ್ಕಂಬರ್, ಹಳೀನ್ ಹಿಂಡಲಗೆ ಮಾತಾಡ್ವರ್, ಸಂತಿಯಗೆ ಪಿಸಿ-ಪಿಸಿ ಅಂಬರ್ ಕುಂದಾಪುರ್ದಂತ ತಾಲೋಕಗೆ ಆಯ್ಕಂಡ್ ಕಾಂಬುಕ್ ಬೇಕಾದ್ದೆಲ್ಲ ಇದ್ದೂ ಹೊಳಿ,ಕಾಡ್ ಗುಡ್ಡಿ ಇದ್ರೂ, ಪ್ರೀತಿ ಮಾಡುಕ್ ಜಾಗ ಇದ್ರೂ ಕಳ್ರ ಕಣಂಗೆ ಮಿಣ್ಣಗೆ ಹೊತ್ರ್ಯಲ್ಲ… ಬನಿಯೇ.. ಇಲ್ಕಾಣಿಯೇ … ನಾನ್ ಲವ್ ಮಾಡು ಸ್ಟೈಲ್ ಒಂಚೂರ್ ಕಲಿನಿಯೇ [...]
ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ!!!
Posted: July 3, 2011 in ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಗಮ್ಮತ್ ಇತ್ತ್ ಕಾಣಿ..., kundapra, kundapur, kundapuraTags: ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, kundapra, kundapur, kundapura
ಗಾಳಿಪಟದ “ಮಿಂಚಾಗಿ ನೀನು ಬರಲು” …ಕುಂದಾಪ್ರ ಕನ್ನಡದಗೆ…:) (- ಅನುವಾದ ವಿಜಯರಾಜ್ ಕನ್ನಂತ್ ) ಎಲ್ಲ ಹಕ್ಕು ಕಾದಿರಿಸಲಾಗಿದೆ
:-) ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ ನೀ ಇಲ್ದೆ ಕಿಚ್ಹ್ ಹಿಡ್ದಂಗಾಯಿ… ಎದಿಯೊಳಗೆ ಸೆಕಿಗಾಲ ಇನ್ನಿಲ್ಯೇ ನಂಗೆ ಉಳ್ಗಾಲ… ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ ನಾ ನಿನ್ ಕನ್ಸಿಗೆ… ಬಾಡ್ಗಿಗೆ ಬಂದಿದ್ನೆ… ತಿಂಗ್ಳ ಬಾಡ್ಗಿ ಕೊಟ್ ಹೋಪ್ಕೆ…ನಿಮ್ಮನಿಗೆ ಬತ್ತೆ ನಾ ನಾ ಸರ್ತ [...]
ಕುಂದಾಪ್ರ ಪದಾರ್ಥ !!
Posted: May 19, 2011 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡTags: ಕುಂದಗನ್ನಡ, ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಪದಗಳು, ಕುಂದಾಪುರ ಕನ್ನಡ ಪದಾರ್ಥ, ಕುಂದಾಪುರ ಕನ್ನಡ ಶಬ್ದ, ಕುಂದಾಪ್ರ, ಕುಂದಾಪ್ರ ಕನ್ನಡ, kannada dictionary, kundaapra, kundaapra kannada dictionary, kundaapra kannada words, kundapur, kundapur kannada dictionary, kundapura, kundapura kannada dictionary
ಸುಮಾರ್ ಸಮಿಂದ ಎಣ್ಸ್ ಕಂಡಿದ್ದೆ… ಬ್ಲಾಗಗೆ ಯೇಗ್ಳೇಗ್ಳೋ ಬರದ್ದ್ ಕುಂದಾಪ್ರ ಕನ್ನಡ ಶಬ್ದ ಎಲ್ಲ ಒಟ್ಟ್ ಮಾಡಿ ಒಂದ್ ಬದ್ಯಗೆ ಇಟ್ರೆ ಒಳ್ಳೇದಾತ್ತಲ್ದಾ ಅಂದೇಳಿ… ಇವತ್ತ್ ಗಳ್ಗಿ ಕೂಡಿ ಬಂತ್… ಇಷ್ಟ್ ದಿನ ಬ್ಲಾಗಗೆ ಬರದ್ ಶಬ್ದ ಎಲ್ಲಾ ಒಟ್ಟ್ ಮಾಡಿ ಇಲ್ಲ್ ಕೊಟ್ಟಿದೆ.. ಇದ್ರಗೆ ನೊಂಗೂ ಒಂದ್ ’ಪಡಾವ್’ ಇತ್ತ್.!! ಹೊಸ್ತೆಂತಾರೂ ಬರುವತಿಗೆ, ಈ ಶಬ್ದ ಮೊದ್ಲೇ ಬ್ಲಾಗಗೆ ಬರ್ದಿನಾ ಇಲ್ಯಾ ಅಂದೇಳಿ ಹುಡ್ಕುಕ್ ಸುಲ್ಭ ಆಯಲ್ಯಾ? ನಿಮ್ಗ್ ಓದುಕ್ ಸಂತೆ ಎಲ್ಲ ಒಂದೆ ಬದ್ಯಗೆ [...]
ರೈಸು – ಪುರೈಸು !!!
Posted: May 14, 2011 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ನಮ್ ಊರ್ ನಮ್ಗ್ ಚಂದ, kundapra, kundapur, kundapuraTags: ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, kundaapra kannada, kundapra, kundapur, kundapura, kundapura kannada
ಹ್ವಾಯ್ ಇದೆಂತ ದರ್ಶಿನಿ ಹೋಟ್ಲಗೆ ಜೀರಾ ರೈಸು, ಘೀ ರೈಸು ಅಂದೇಳಿ ಬೋರ್ಡ್ ಬರ್ದ್ ಹಾಕಿದಂಗಿತ್ತಲೆ.. ಎಂತಾ ಮರಾಯ್ರೆ ಹೋಟ್ಲ್ ಗೀಟ್ಲ್ ಇಟ್ಟಿರ್ಯಾ ಎಂತ ಕತಿ ಅಂದೇಳಿ ಮಂಡಿ ಗಿಂಡ್ಕಂಬ್ಕೆ ಶುರು ಮಾಡ್ಬೇಡಿ… ಹೋಟ್ಲ್ ಇಟ್ಟರೇ ಈಗ ಹ್ಯಾಂಗ್ ಸುಧಾರ್ಸುದಂದೇಳಿ ಮಂಡಿ ಬಿಶಿ ಮಾಡ್ಕಂಡಿದ್ರ್ ಮರ್ರೆ..ನೀವ್ ಎಂತದೋ ಹೇಳ್ತ್ರಿ… ಮತ್ತೆಂತ ಅಲ್ಲ ಇದ್ ನಾನ್ ಇವತ್ತ್ ಹಿಡ್ಕಂಡ್ ಬಂದ್ ಕುಂದಾಪ್ರ ಕನ್ನಡ ಶಬ್ದ. ಈ ಶಬ್ದದ್ ಕತಿ ಎಂತ ಕಾಂಬ ಬನಿ ಹಂಗಾರೆ… ರೈಸು = ಗಡದ್ದಾಗಿರು, [...]
ತಿಂಗ್ಳ್ ಭರ್ತಿ ಆಯಿ.. ಮೇಲೊಂದ್ ತಿಂಗ್ಳಾಯ್ತ್ ಕಾಣಿ…!!!
Posted: May 8, 2011 in ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ನಮ್ ಊರ್ ನಮ್ಗ್ ಚಂದ, kundapra, kundapur, kundapuraTags: ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ದರ್ಶಿನ, darshina, kundaapura, kundapra, kundapra kannada, kundapur, kundapura, kundapura kannada
ಅಂದಾಂಗೆ ನಾಡ್ದ್ ಹನ್ನೊಂದ್ನೇ ತಾರೀಕ್ ಬಂದ್ರೆ ಬ್ಲಾಗಿಗೆ ಮೂರ್ ವರ್ಷ ಆತ್ತ್. ಇಷ್ಟ್ ದಿನ ಹ್ಯಾಂಗಿದ್ರೂ ಬ್ಲಾಗಿಗೆ ಉಪ್ವಾಸವೇ ಆಯ್ತ್. ಹುಟ್ದಬ್ಬನಾರೂ ಗಡ್ಜಾಯಿ ಮಾಡಿ ಹೊಟ್ಟಿ ತುಂಬಾ ಊಟ ಹಾಕುದ್ ಬ್ಯಾಡ್ದಾ ಹಂಗಾರೆ…. ಅದಕ್ಕೇ ಇವತ್ತ್ ಅರ್ಧ ದಿನ ಕೂತ್ಕಂಡ್ ಹುಟ್ದಬ್ಬಕ್ಕೆ ಅಡ್ಗಿ ಮಾಡದ್ದೇ ಮಾಡದ್ದ್…. ನೀವೂ ಬಂದ್ ಒಂದೆರ್ಡ್ ತುತ್ತ್ ತಿನ್ಕಂಡ್ ಹೋರೆ ನಂಗೂ ಖುಶಿಯಾತ್ತ್ ಕಾಣಿ.. ಹುಟ್ದಬ್ಬಕ್ಕೆ ಬರೀ ಕೈ ಬೀಸ್ಕಂಡ್ ಬರ್ಬೆಡಿ.. ಎಂತಾರೂ ಹಿಡ್ಕಂಡ್ ಬನಿ… ಅಂದ್ರೆ ಓದಿ ನಿಮ್ಮ ಅಭಿಪ್ರಾಯ ನಂಗ್ ಹೇಳ್ರೆ ಅದೇ ನೀವ್ ಕೊಡು ಉಡ್ಗ್ರಿ…
ಹೌದಾ ಸುಳ್ಳಾ ಕಾಣಿ ಬೇಕಾರೆ, ನಮ್ಮ್ ನಮ್ಮ್ ಭಾಷಿ ಚೆಂದ ಬೇರೆ ಯಾವ್ದಕ್ಕೂ ಬತ್ತಿಲ್ಲ ಅಲ್ದಾ?…
Posted: July 6, 2010 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ನಮ್ ಊರ್ ನಮ್ಗ್ ಚಂದTags: ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ
ಬಲ ಮಾಡುದ್ – ಬೆಳೆಸಿ ದೊಡ್ಡವರನ್ನಾಗಿ ಮಾಡು ಬಳಕೆ – ೧.ದೊಡ್ಡಕೆ ಮಾತ್ ಬತ್ತ್ ಅಂದೇಳಿ ಮಾತಾಡ್ಬೆಡ, ಮಾತಾಡುಕೆ ಭಾರಿ ಸುಲ್ಭ, ನಿಮ್ಮನೆಲ್ಲ ಬಲ ಮಾಡ್ಕಿದ್ರೆ ಎಷ್ಟ್ ಕಷ್ಟ್ ಪಟ್ಟಿದೆ ಅಂದೇಳಿ ನಿಂಗೆಂತ ಗೊತಿತ್? ೨.ನಿಮ್ಗ್ ಬೇರೆ ಕೆಲ್ಸ ಇಲ್ಯಾ, ಮಕ್ಳನ್ನೆಲ್ಲ ಸಾಕಿ ಬಲ ಮಾಡುದೇ ಕಷ್ಟ, ಇನ್ನ್ ಶಾಲಿ ಗೀಲಿಗೆಲ್ಲ ಕಳ್ಸುಕೆ ಎಲ್ಲಿಗೆ ಹೋಪ್ದ್? ಬಲಾದರ್ – ಬಲ ಆದವರು ,ದೊಡ್ಡವರು , ಹಿರಿಯರು ಬಳಕೆ – 1. ಸಣ್ಣರಂದೇಳಿ ಇಲ್ಲ, ಬಲಾದರಂದೇಳಿ ಇಲ್ಲ, ಎದ್ರುತ್ರ [...]
ಹ್ವಾಯ್… ಇಲ್ಲೊಂಚೂರ್ ನೀಕಿ ಕಾಂಬ್ರಿಯಲ!!
Posted: June 21, 2010 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ ಕನ್ನಡTags: ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಕಲಿ, kunda kannada, kundaapra, kundapura, kundapura kannada
ಪುರ್ಸೊತ್ತಿದ್ದಾಗ್ಳಿಕೆ ಬರುಕ್ ಉದಾಶಿನ, ಬರುಕ್ ಉಮೇದ್ ಬಂದಾಗ್ಳಿಕೆ ಪುರ್ಸೋತ್ತಿಲ್ಲ ಹಾಂಗಿನ್ ಕತಿ ಆಯ್ತ್ ಕಾಣಿ ಆರೂ ಈ ಸರ್ತಿ ಬರೀದೆ ಬಾಳ ಸಮಿ ಆಯ್ತ್. ಇನ್ ಬರಿದಿದ್ರೆ ಆಪ್ದಲ್ಲ ಅಂದೇಳಿ ನಿನ್ನೆ ಬರುಕ್ ಕೂಕಂಡೆ… ಒಂದ್ ಅರ್ಧ ದಿನದ ಮೇಲ್ ಆಯ್ತ್ ಇದನ್ನೆಲ್ಲಾ ಬರ್ದ್ ಮುಗ್ಸುವತ್ತಿಗೆ. ಬರ್ದ್ ಮುಗ್ಸ್ರ್ ಮೇಲೆ ನಂಗಂತೂ ಖುಷಿ ಆಯ್ತ್, ನಿಮ್ಗೂ ಅದ್ರಗೆ ಅರ್ಧ ಪಾಲ್ ಖುಷಿ ಸಿಕ್ರೆ..ನಾ ಬರದ್ದಕ್ಕೂ ಒಂದ್ ಲೆಕ್ಕ, ಎಂತ ಅಂತ್ರಿ? ಇನ್ನೊಂದಿಷ್ಟ್ ಕುಂದಾಪ್ರ ಕನ್ನಡ ಶಬ್ದ ಕಾಂಬ ಬನಿ ಹಂಗಾರೆ [...]
ಪಾಲಚಂದ್ರ ಅವ್ರದ್ದ್ ಒಂದ್ ಪದ್ಯ…ನಾಕ್ ಫೋಟ ಇಲ್ಲ್ಕಾಣಿ…
Posted: April 21, 2010 in ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರTags: ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, kundapura, kundapura kannada
ಹೀಂಗೆ ಇಂಟರ್ನೆಟ್ಟಗೆ ಗಿರಕಿ ಹೊಡಿತಿಪ್ಪತಿಗೆ… ಪಾಲಚಂದ್ರ ಅವ್ರದ್ದ್ ಬ್ಲಾಗ್ ಕಾಮ್ಬುಕೆ ಸಿಕ್ತ್… ತಾರೆ ಜಮಿನ್ ಪರ್ ಪಿಚ್ಚರಿದ್ ಒಂದ್ ಪದ್ಯ ಕುಂದಾಪ್ರ ಕನ್ನಡದಗೆ ‘ನನ್ನಬ್ಬಿ’ ಅಂದೇಳಿ ಬರದ್ದ್ ಓದುಕ್ ಸಿಕ್ತ್… ನೀವೂ ಓದಿ ಕಾಣಿ… ಇಲ್ಲ್ ಅದ್ರದ್ದ್ ಲಿಂಕ್ ಕೊಟ್ಟಿದೆ http://palachandra.blogspot.com/2009/06/blog-post_25.html ಹಾಂಗೆ ಕುಂದಾಪ್ರ ಸಂತಿದ್ ಒಂದಿಷ್ಟ್ ಫೋಟೋ ಸತೆ ಹಾಕಿದ್ರ್… ಅದನ್ನ್ ಕಾಣ್ಕಿದ್ರೆ ಇಲ್ಲಿಗ್ ಹೋಯ್ಕಾಣಿ… ಪಟ ಮಾತ್ರಾ ಭಾರಿ ಲಾಯ್ಕ್ ಬಂದಿತ್.. ಹೌದಾ ಸುಳ್ಳಾ ಬೇಕಾರ್ ನೀವೇ ಕಾಣಿ http://palachandra.blogspot.com/search/label/ಕುಂದಾಪುರ
ನೀನ್ ಹೋಯಿ ಹೋಯಿ ಅವ್ಳತ್ರ ಹೇಳ್ದ್ಯ…ಅವ್ಳದ್ ಹರ್ಕಟಿ ಬಾಯಿ
Posted: January 8, 2010 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡTags: ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಕಲಿ, kundapra kannada, kundapura, kundapura kannada
ಕುಂದಾಪ್ರ ಬದಿ ಶಬ್ದ ಕೆಮಿ ಮೇಲ್ ಬೀಳ್ದೆ ಸುಮಾರ್ ದಿನ ಆಯ್ತಮಗಿತ್ತಲ್ಲ… ಇಲ್ಲೊಂದೆರ್ಡ್ ಇತ್ತ್ ಕಾಣಿ.. ಜೀವ್ ಬಿಡ್ತ – ಈ ಶಬ್ದ ಕುಂದಾಪ್ರ ಕನ್ನಡದ್ದ್ ಮಾತ್ರ ಅಂತ ಹೇಳುಕಾತಿಲ್ಲ. ಬೇರೆ ಬೇರೆ ಬದಿಯಗ್ ಸತೆ ಇದೆ ನಮನಿ ಶಬ್ದ ಕೆಲವ ಇತ್ತ್. ಇದಕ್ಕೆ ಅರ್ಥ ಹೇಳುದಾರೆ ಪಂಚಪ್ರಾಣ ಅಂಬುದ್ ಸರಿ ಆತ್ತಾ ಕಾಣತ್ತ್ ಬಳಕೆ – ೧. ಅವನಿಗೆ ಮಾಯ್ನಣ್ಣ್ ಅಂದ್ರ್ ಸೈ… ಜೀವ್ ಬಿಡ್ತ ( ಬೇಕಿದ್ರೆ ನಿಮ್ಮ್ ನಿಮ್ಮ್ ಅನ್ಕೂಲಕ್ಕೆ ಮಾಯ್ ಹೆಣ್ಣ್ ಅಂದೆಳಿ ಬೇಕಾರ್ ಓದ್ಕಂಬುಕೆ ಅಡ್ಡಿಲ್ಲ) ೨. ಅವ್ಳ್ ಮಕ್ಳ್ [...]
ಕುಂದಾಪ್ರ ಕನ್ನಡದಗೊಂದು ಇಂಗ್ಲಿಷ್ ಕಾಣಿ…
Posted: December 22, 2009 in ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದTags: ಕುಂದಗನ್ನಡ ಕಲಿ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಶಬ್ದ, kundapra, kundapura, kundapura kannada
ಬರೀ ಕುಂದಾಪ್ರ ಕನ್ನಡದಗೆ ಮಾತ್ರ ಎಂತಕೆ , ಈಗ ಯಾವ್ ಕನ್ನಡದಗೂ ಇಪ್ಪುದ್ ಇಂಗ್ಲೀಷೆ ಅಲ್ದಾ. ಯಾರಾರೂ ಶುದ್ಧ ಕನ್ನಡ ಮಾತಾಡುವರ್ ಇದ್ರೆ ಹುಡ್ಕಿ ಕೊಡಿನಿ ಕಾಂಬ ಹಂಗಾರೆ ಅಂದೇಳಿ ನೀವ್ ಕೆಂಬ್ಕೂ ಸಾಕ್. ಅದ್ರಗೂ ಬೆಂಗಳೂರಗೆ ಹಾಂಗಿನರ್ ಯಾರಾರೂ ಇದ್ರೆ ಅವ್ರಿಗೆ ರಾಜ್ಯೋತ್ಸವ ಪ್ರಶಸ್ತಿಯೇ ಕೊಡ್ಲಕ್ಕ್ ಅಂತ್ ನೀವ್ ಹೇಳುಕೂ ಸಾಕ್. ಆರೇ ನಾ ಹೇಳುಕ್ ಹೊರಟದ್ದ್ ಅದ್ ಅಲ್ದೆ… ಒಂದ್ ಇಂಗ್ಲಿಷ್ ಶಬ್ದ ಕುಂದಾಪ್ರ ಕನ್ನಡದೊಳಗೆ ಬಂದ್ ಕೂಕಂಡಿತ್. ಆ ಶಬ್ದ ಯಾವ್ದ್ ಅಂದೇಳಿ ನೆನ್ಪ್ ಮಾಡ್ಕಂಕಿದ್ರೆ [...]
ಆಟದ ಗರದಗೆ ಒಂದ್ ತಿರ್ಗಾಟ…
Posted: December 1, 2009 in ಆಟ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ ಕನ್ನಡ, ನಮ್ ಊರ್ ನಮ್ಗ್ ಚಂದ, ಯಕ್ಷಗಾನTags: ಆಟ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ ಕನ್ನಡ, ಯಕ್ಷಗಾನ
ಮತ್ತೆ ಎಲ್ಲ ಹ್ಯಾಂಗಿದ್ರಿ? ಊರಗ್ ಮೊನ್ನೆ ಮತ್ತ್ ಮಳಿ ಬಂದಿತಂಬ್ರಲೆ… ನಿಮ್ದ್ ಕೊಯ್ಲ್ ಎಲ್ಲಾ ಆಯ್ತ್ ಕಾಣತ್ ಅಲ್ದಾ? ಹ್ಯಾಂಗೆ ಈ ವರ್ಷ ಬ್ಯಾಸಾಯ ಅಡ್ಡಿಲ್ಲ್ಯಾ? ಪೆರ್ಡೂರ್, ಸಾಲಿಗ್ರಾಮದರದ್ ತಿರ್ಗಾಟ ಶುರು ಆಯಿರ್ಕ್ ಅಲ್ದಾ? ಆಟ ಗೀಟ ಕಾಂಬ್ಕ್ ಹೋಯಿಲ್ಲ್ಯಾ? ಈಗೀಗ ಆಟ ಕಾಂಬ್ಕ್ ಹೋಪ್ಕೇ ಮನ್ಸ್ ಬತ್ತಿಲ್ಲಪ. ಎಲ್ಲಾ ಪಿಚ್ಚರಿದೇ ಕತಿ ಮಾಡುದಾರೆ ಆಟ ಎಂತಕ್ ಕಾಣ್ಕ್ ರಾತ್ರಿಡೀ ನಿದ್ರಿ ಬಿಟ್ಕ್ಂಡ್. ಪಿಚ್ಚರೇ ಕಾಣ್ಲಕ್. ಆರೂ ಒಂದ್ ಅಂದ್ರೆ ಬೆಂಗ್ಳೂರಗೆ ಬಂದಲ್ಲ್ ಈ ಸರ್ತಿ ಎಲ್ಲಾ [...]
ಕೊಂಗಾಟದ ಬ್ಲಾಗಿಗೆ ಐವತ್ತಾಯ್ತ್ ಕಾಣಿ…
Posted: July 31, 2009 in ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡTags: ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ
ನಿಮ್ಮ ಕೊಂಗಾಟದ ಕುಂದಾಪ್ರ ಕನ್ನಡ ಬ್ಲಾಗಗಿವತ್ತ್ ಐವತ್ನೆ ಪೋಸ್ಟ್ ಹಾಕ್ತಿದ್ದೆ ಕಾಣಿ. ಐವತ್ನೇದ್ ಆಪುಕೋಯಿ ಎಂತಾರೂ ಗಡ್ಜ್ ಮಾಡ್ಕಂದೇಳಿ ಎಣ್ಸಕಂಡಿದ್ದಿದೆ. ಸುಮಾರ್ ದಿನ್ದಿಂದ ಎಂತ ಬರುದ್ ಎಂತ ಬರುದ್ ಅಂದೇಳಿ ಆಲೋಚ್ನಿ ಮಾಡದ್ದೆ ಮಾಡದ್ದ್. ಕಡೀಗೆ ಹೀಂಗ್ ಮಾಡ್ರೆ ಹ್ಯಾಂಗ್ ಅನ್ಸ್ತ್. ನೀವೆಲ್ಲ ಈ ಬ್ಲಾಗಿಗೆ ಸುಮಾರ್ ದಿನ್ದಿಂದ್ ಬತ್ತಿದ್ರಿ ಹೌದಾ. ನಿಮ್ ಕೈಯ್ಯಗೆ ಎಂತಾರೂ ಒಂಚೂರ್ ಬರುಕೆ ಹೇಳುದ್. ಎಲ್ಲ ಎಂತ ಬರಿತ್ರಿ ಕಾಂಬಾ. ಬರುಕೆ ವಿಷ್ಯ ಎಂತಾ ಕೇಂಡ್ರ್ಯಾ? ನಮ್ ಕುಂದಾಪ್ರ ಭಾಷಿ, ಕುಂದಾಪ್ರದ್ ಜಾಗ, ಕುಂದಾಪ್ರದಗೆ ಮಾತ್ರ ಇಪ್ಪ್ [...]
ತಕಂಡ್ ಹೋತ್ತಾ…!!
Posted: July 10, 2009 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಕಲಿ, ತಕಂಡ್ ಹೋತ್ತಾ
ಒಂದೊಂದ್ ಬದಿ ಭಾಷಿಯಗೆ ಆಲ್ಲಲ್ಲಿದೇ ವಿಶೇಷ ಆಡುನುಡಿ ಅಂದೇಳಿ ಇರತ್ತ್. ಆ ಬದ್ಯಗಿದ್ದರ್ ಮಾತಗ್ ಮಾತ್ರ ಇದ್ ಕಾಂಬುಕೆ ಸಿಕ್ಕತ್ತ್. ಹಾಂಗಿಂದ್ ಒಂದ್ ನಾಲ್ಕ್ ಕುಂದಾಪ್ರ ಕನ್ನಡದ ಆಡುನುಡಿ ಇಲ್ಲಿತ್ತ್ ಕಾಣಿ… ತಕಂಡ್ ಹೋತ್ತಾ ಬಳಕೆ – ೧. ಬಸ್ ಹತ್ತುವ ಅಂದೇಳ್ರೆ ಅಯ್ಯಬ್ಬಾ ಈ ಜನ ಎಲ್ಲಾ ನುರುದೇ… ಹಂಗಾರ್ ಬಸ್ ನಿಲ್ಲುದಿಲ್ಲ್ಯಾ.. ಇವ್ರಿಗೆಲ ಏನ್ ತಕಂಡ್ ಹೋತ್ತಾ? ೨. ಒಂದ್ ಮಾತಾಡ್ಕಾಯ್ದಿಲ್ಲ… ಆ ನಮನಿ ಬೊಬ್ಬಿ ಹೊಡಿತ್ಯಲ.. ನಿಂಗೇನ್ ತಕಂಡ್ ಹೋತ್ತಾ? ೩. ಈ [...]
ನಮ್ ನಮ್ ಮಟ್ಟಿಗೆ ನಮ್ ಊರ್ ಯೇಗ್ಳಿಕೂ ನಮ್ಗ್ ಚೆಂದವೇ. ಅದ್ರಗೂ ಮಳ್ಗಾಲ ಬಂದ್ರಂತೂ ಇನ್ನೆರ್ಡ್ ಮುಷ್ಟಿ ಹೆಚ್ಚೇ ಚೆಂದ ಕಾಣತ್. ಈ ವರ್ಷ ಜೂನ್ ಸುರಿಗೆ ಒಂದ್ ನಾಕ್ ದಿನ ಮುಖ ತೋರ್ಸದಂಗ್ ಮಾಡಿ ಹೋದ್ ಮಳಿ ಪತ್ತಿ ಇಲ್ಯಲೆ, ಈ ವರ್ಷ ಬ್ಯಾಸಾಯ ಮಾಡುದ್ ಹ್ಯಾಂಗೆ ಅಂದೇಳಿ ಊರ್ ಬದ್ಯಗೆ ಎಲ್ರೂ ಮಂಡಿಬಿಶಿ ಮಾಡ್ಕಂಡ್ ಇದ್ದಿರ್. ಪೇಪರಗೆಲ್ಲ ಈ ಸರ್ತಿ ಬರ್ಗಾಲ ಬಂದಂಗೇ ಸೈ, ಇನ್ನ್ ಎಂಟ್ ದಿನ ಹೋರೆ ಕರೆಂಟ್ ಇರುದಿಲ್ಲ ಅಂಬ್ರ್- [...]
ಪೆರ್ಡೂರ್ ಮ್ಯಾಳದರ್ ಬತ್ರಂಬ್ರಲೆ…
Posted: July 7, 2009 in ಆಟ, ಯಕ್ಷಗಾನTags: aata, ಆಟ, ಪೆರ್ಡೂರ್, ಯಕ್ಷಗಾನ, yakshagana
ಈ ಸರ್ತಿ ಬೆಂಗ್ಳೂರಗೆ ಮಳ್ಗಾಲದ ಆಟ ಇನ್ನೂ ಏನ್ ಶುರುವಾತ್ತಷ್ಟೇ. ಮೊನ್ನೆ ಇತ್ಲಾಯಿ ಸಾಲಿಗ್ರಾಮ ಮ್ಯಾಳದರ್ ಬಂದ್ ಒಂದ್ ನಾಕ್ ಆಟ ಆಡಿ ವಾಪಾಸ್ ಹೋಯಾಯತಾ ಕಾಣತ್. ಇನ್ನ್ ಪೆರ್ಡೂರರ್ ಬಪ್ಪುದ್ 17ನೇ ತಾರೀಕಿಗೆ. ಅಲ್ಲಿವರಿಗೆ ಯಾವ್ ಆಟ ಇಪ್ಪ್ ಸುದ್ದಿ ಕಾಂತಿಲ್ಲಪ್ಪ. ಪೆರ್ಡೂರರದ್ ನಾಕ್ ಆಟ ಕಾಣ್ಕಮಗಿತ್ತ್. ಧಾರೇಶ್ವರರದ್ ಒಂದೆರ್ಡ್ ಪದ್ಯ ಕೇಣ್ಕಮಗಿತ್ತ್. ಅವ್ರ್ ಆಟ ಯಾವತ್ತೆಲ್ಲ ಇತ್ತ್ ಅಂದೇಳಿ ಇನ್ನೂ ಸಮಾ ಅಂಜಾದಿಲ್ಲ. ಆರೆ ೧೭ನೇ ತಾರೀಕಿಂದ ಆಗಷ್ಟ್ ೧ನೇ ತಾರೀಕಿನವರಿಗೆ ಅವ್ರ್ ತಿರ್ಗಾಟ [...]
ಮಳಿ ಬರ್ಲಿ ಬಾರ್ದೆ ಇರ್ಲಿ. ಮಳ್ಗಾಲ ಅಂತೂ ಶುರುವಾಯಿತ್. ಹಾಂಗೇ ಬೆಂಗ್ಳೂರಿನ ಮಳ್ಗಾಲದ ಆಟ ಸತೇ ಶುರುವಾಯ್ತ್. ಕಳ್ದ್ ವಾರವೇ ಸಾಲಿಗ್ರಾಮ ಮ್ಯಾಳ್ದರದ್ ಆಟ ರವೀಂದ್ರ ಕಲಾಕ್ಷೇತ್ರದಗೆ ಶುರುವಾಯಿ ಆಯ್ತ್. ಇನ್ನೇನ್ ಮುಂದಿನ್ ತಿಂಗ್ಳ್ ಪೆರ್ಡೂರ್ ಮ್ಯಾಳ್ದರೂ ಸತೇ ಬತ್ರಾ ಕಾಣತ್. ಅವ್ರ್ ಬಂದ್ ಮೇಲೆ ನಂಗ್ ರಾತ್ರಿ ನಿದ್ರಿ ಬಿಡುದೇ ಕೆಲ್ಸ. ಕಳ್ದ್ ವರ್ಷ ಒಟ್ಟ್ ಇಪ್ಪತ್ತಕ್ಕೂ ಹೆಚ್ಚ್ ರಾತ್ರಿ ನಿದ್ರಿ ಬಿಟ್ಟಿದೆ. ಈ ವರ್ಷ ಇನ್ನೊಂದೆರ್ದ್ ಆಟ ಜಾಸ್ತಿ ಕಾಣ್ಕ್ ಅಮಗಿತ್ತ್. ಅದಿರ್ಲಿ ಈಗ [...]
ನಾನ್ ಬೆಂಗ್ಳೂರಿಗೆ ಬಂದ್ ಮೇಲೆ ಮಸ್ತ್ ಮಿಸ್ಸ್ ಮಾಡ್ಕಂತಿದ್ದದ್ ಅಂದ್ರೆ ಉದಯವಾಣಿ ಪೇಪರ್. ಇಲ್ಲ್ ಬೆಂಗ್ಳೂರ್ ಎಡಿಶನ್ ಬತ್ತ್.. ಆರೂ ಊರ್ ಬದಿ ಉದಯವಾಣಿ ನಮ್ನಿ ಇಲ್ಲ ಅದ್. ಈಗ ನಾ ಮಸ್ತ್ ದಿನ್ದಿಂದ ಕಾಯ್ತಿದ್ದ ಒಳ್ಳೆ ಸುದ್ದಿ ಬಂದಿತ್. ಉದಯವಾಣಿ ಮಣಿಪಾಲ ಎಡಿಶನ್ ಈ-ಪೇಪರ್ ಈಗ ಇಂಟರ್ನೆಟ್ಟಲ್ ಸಿಕ್ಕತ್ತ್… ನಿಮ್ಗೂ ಓದ್ಕಮಗಿದ್ರೆ ಇಲ್ಲಿಗ್ ಹೋಯ್ನಿ ಅಕಾ.. http://www.udayavani.com/epaper/
ಹೀಂಗೇ ಒಂದ್ ಕತಿ… ಕಮ್ಲಶಿಲೆ ಗುಹೆಯೊಳ್ಗೊಂದು ವಿಚಿತ್ರ…
Posted: April 16, 2009 in UncategorizedTags: ಕತಿ, ಕುಂದಾಪ್ರ, ಕುಂದಾಪ್ರ ಕತಿ, ಕುಂದಾಪ್ರ ಕನ್ನಡ, kamalashile, kundaapra, kundapura
ಕುಂದಾಪ್ರ ಕನ್ನಡ ಬ್ಲಾಗಿಗೆ ಇನ್ನೇನ್ ವರ್ಷ ತುಂಬುಕ್ ಹತ್ರ ಆಯ್ತ್… ಆ ಖುಷಿಯಗೆ ಏನಾರೂ ಒಂಚೂರ್ ಬೇರೆ ಬರುವಾ ಅಂದೇಳಿ ಒಂದ್ ಕತಿ ಬರ್ದ್ರೆ ಹ್ಯಾಂಗೇ ಅಂದೇಳಿ ಬರುಕ್ ಹೊರ್ಟಿದೆ… ಕತಿ ಸುಮಾರ್ ಉದ್ದ ಇತ್ತ್… ಹಾಂಗಾಯ್ ಒಂದೇ ಸರ್ತಿ ಪೂರಾ ಕತಿ ಹಾಕುಕ್ ಆತಿಲ್ಲ… ಒಂದ್ ಮೂರ್-ನಾಕ್ ಭಾಗ ಆತ್ತ್…ವಾರಕ್ಕೊಂದ್ ಭಾಗ ಬರಿಕ್ ಅಂದೇಳಿ ಎಣ್ಸ್‌ಕಂಡಿದೆ… ಅದ್ರಗೆ ಮೊದ್ಲಿನ್ ಕಂತ್ ಇಲ್ಲಿತ್ತ್ ಕಾಣಿ… ನಿಮ್ಗೆಲ್ಲ ಕತಿ ಹಿಡ್ಸರೆ ಮುಂದಿನ್ ಕಂತ್ ಬರುವ ಅಂದೇಳಿ ಮಾಡಿದೆ.. ಓದಿ [...]
ಚಾಷ್ಟಿ, ಚಪ್ಪಿ, ಚಾಟುಳ, ಹಲ್ ಚಿಲಿ, ಚಪ್ಪಾಂಚೂರು
Posted: April 9, 2009 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ
ಚಾಷ್ಟಿ = ಚೇಷ್ಟೆ, ತುಂಟತನ ಬಳಕೆ: 1.ಮಗಿನ್ ಚಾಷ್ಟಿಯೊಳ್ಗ್ ಆಯಿಲ್ಲಪ್ಪ. ಒಂದ್ ಗಳ್ಗಿ ಸುಮ್ನ್ ಕೂಕಂಬ್ಕ್ ಬಿಡುದಿಲ್ಲ 2.ನೀ ಮನಿಯಗೆ ಚಾಷ್ಟಿ ಮಾಡ್ದಂಗೆ ಹೋದಲ್ಲೆಲ್ಲ ಚಾಷ್ಟಿ ಮಾಡ್ರೆ ಬೆನ್ನ್ ಭೇರಿಯಾತ್ತ್ ಗೊತ್ತಾಯ್ತಾ ಚಪ್ಪಿ/ಚಪ್ಪೆ/ಚೆಪ್ಪಿ=ಸಪ್ಪೆ, ತಣ್ಣಗೆ, ಬಿಕೋ ಅನಿಸು ಬಳಕೆ: 1.ಹ್ವಾಯ್… ಚಾ ಮಾಡಿ ಇಟ್ ಎಷ್ಟ್ ಹೊತ್ತಾಯ್ತ್. ಹಂಗಾರೆ ಚಪ್ಪಿ ಆಯ್ಕಿದ್ರೆ ಮೊದ್ಲೆ ಕುಡುಕಾಗ್ದಾ? 2.ಮಕ್ಳೆಲ್ಲ ರಜಿಗ್ ಬಂದ್ ಹೋರ್ ಮೇಲೆ ಮನಿಯೆಲ್ಲ ಬರೀ ಚಪ್ಪಿ ಚಪ್ಪಿ. 3.ಹುಳಿ (ಸಾಂಬಾರ್) ಲಾಇಕ್ ಆಯಿತ್. ಆರ್ ಒಂಚೂರ್ ಉಪ್ಪ್ [...]
ಮೊನ್ನೆ ಕಡಲ ತಡಿಯ ತಲ್ಲಣ ಪುಸ್ತ್ಕ ತಕಂಡ್ ಬಂದ್ ಓದ್ತಾ ಇದ್ದೆ. ಅದ್ ಇನ್ನೊ ಪೂರ್ತಿ ಓದಿ ಆಯಲ್ಲ. ಓದಿ ಆರ್ ಮೇಲೆ ನನ್ ಇನ್ನೊಂದ್ ಬ್ಲಾಗಗೆ ಅದ್ರ್ ಬಗ್ಗ್ ಮಸ್ತ್ ಬರುಕ್ ಇತ್ತ್. ಇರ್ಲಿ ಬಿಡಿ ಈಗ ವಿಷ್ಯಕ್ ಬತ್ತೆ. ಈ ಪುಸ್ತ್ಕ ಓದ್ತಾ ಇಪ್ಪತಿಗೆ ನಮ್ ಕುಂದಾಪ್ರ ಬದಿಯಗೆ ನಾ ಶಾಲಿಗ್ ಹೋಪತಿಗೆ ನೆಡದ್ ಒಂದ್ ಗಲಾಟಿ ನೆನ್ಪ್ ಆಯ್ತ್. ಅದಕ್ಕೂ ಮೊದ್ಲ್ ಅಷ್ಟ್ ದೊಡ್ಡ್ ಗಲಾಟಿ ನೆಡ್ದಿತೋ ಇಲ್ಯೋ ಗೊತ್ತಿಲ್ಲ. ಆರೆ [...]
ನೀವೆಂತಕೆ ಮಕ್ಳಿಗೆ ಕುಂದಾಪ್ರ ಕನ್ನಡ ಕಲ್ಸುದಿಲ್ಲ…?
Posted: March 11, 2009 in ಗಮ್ಮತ್ ಇತ್ತ್ ಕಾಣಿ..., ನಮ್ ಊರ್ ನಮ್ಗ್ ಚಂದTags: kunda kannada, kundaapra, kundapra kannada
ಕಳ್ದ್ ತಿಂಗ್ಳ್ ನನ್ ಬ್ಲಾಗ್ ಬದಿಗೆ ಶ್ರೀಕಾಂತ ಹೆಗಡೆ ಅಂದೇಳಿ ಒಬ್ರ್ ಬಂದಿರ್. ಅವ್ರ್ ಒಂದೆರ್ಡ್ ಕಮೆಂಟ್ ಪೋಸ್ಟ್ ಮಾಡಿರ್… ಆ ಕಮೆಂಟಗೆ ಒಂದೆರ್ಡ್ ಪ್ರಶ್ನೆ ಸತೇ ಕೇಂಡಿರ್. ಅವ್ರ್ ಕೇಂಡದ್ ಇಷ್ಟೆ…ನೀವ್ ಕುಂದಾಪ್ರದರು ಪ್ಯಾಟಿಗ್ ಬಂದ್ ಸೆಟ್ಲ ಆದೋರು ನಿಮ್ಮ ಮಕ್ಕಳಿಗೆ ಅಲ್ಲಿ ಭಾಷಿ, ಸಂಸ್ಕೃತಿ ಕೊಡುಕೆ ಮರ್ತರಲ್ಲೇ ಮಾರಾಯ್ರೆ, ಇದ್ನ ಕಂಡ್ರೆ ಕೇಂಡ್ರ ಭಾಳ ಭೇಜಾರಾತ್ತಲೆ. ನೀವ್ ಕುಂದಾಪ್ರದ ಜನ ಎಂಥಕ್ಕೆ ಮಕ್ಳ ಮರಿಗೆ ನಿಂ ಕುಂದಗನ್ನಡ ಕಲಸೂದಿಲ್ಲ ? ಅವ್ರ್ ಪ್ರಶ್ನೆಗೆ ಉತ್ರ [...]
ಒಂದಿಷ್ಟ್ ಹನಿ ನಾನ್ ಬರದ್. ಮನಸಿನ ಮರ್ಮರ ಬ್ಲಾಗಗೆ ಹಾಕಿದ್ದೆ… ಅದನ್ನೆ ಕುಂದಾಪ್ರ ಕನ್ನಡದಗೆ ಬರ್ದ್ರೆ ಹ್ಯಾಂಗೆ ಅಂದೇಳಿ ಒಂದೆರ್ಡ್ ಬರ್ದಿದೆ ಕಾಣಿ… ಹ್ಯಾಂಗಿತ್ತ್ ಹೇಳಿ… ಎಲ್ಲೋ ಸೊರ್ದ್ ಮಳಿಗೆ ಹೊಳಿ ನೀರ್ ಕೆಂಪಾತ್ತಲ್ದಾ ಹಾಂಗೇ ಎಲ್ಲೋ ಇಪ್ಪ್ ನಿನ್ನ್ ನೆನ್ಪ್ ಆಯಿ ಕಣ್ಣಂಗ್ ನೀರ್ ಬಂತ್ ನಂಗೆ —————— ಸತ್ ಹೋದ ಸಂಬಂಧ ಎಲ್ಲ ನೆನ್ಪ್ ಮಾಡ್ಕಂಬ್ದ್ ಎಂತಕ್ ಅಂತ್ರ್ಯಾ? ಸತ್ತರ್ ಎದ್ದ್ ಬಂದ್ ಕತಿ ಇತ್ತಲೆ ನಂಬ್ತ್ರ್ಯಾ? —————— ನಿನ್ನ್ ನೆನ್ಪಾಯ್ದಿರ್ಲಿ ಅಂದೇಳಿ [...]
ಕಾಳ – ಏನ್ ಮಾಡುದ್ ಹೇಳಿ…ಇದ್ ನಮ್ಮನಿ… ಸಾಯ್ಬ್ರ್- ಅಚ್ಚಾ… ಕಾಳ – ಈ ಮನೀಲ್ ನಾನು ನನ್ ಹೆಂಡ್ತಿ ಇಬ್ರೆ ಇಪ್ಪುದ್ ಸಾಯ್ಬ್ರ್- ಅಚ್ಚಾ… ಅಚ್ಚಾ…. ಕಾಳ – ಅದೆಲ್ ಬಂತ್… ಸಾಯ್ಬ್ರ್- ಅರೆ ಕ್ಯಾರೆ…. ಕಾಳ – ಅಲಾ…. ಹಚಾ ಹಚಾ ಅಂದ್ರ್ಯಲ…. ಹಚಾ ಅಂದ್ರೆ ನಂಬದೀಲ್ ನಾಯ್ ಬೆರ್ಸುದ್ ಮರಾಯ್ರೆ ಸಾಯ್ಬ್ರ್- ಅರೇ ನಾನು ನಾಯಿಗೆ ಹೇಳ್ತು ಅಂತ ಮಾಡಿದೆ… ಕಾಳ – ಅಲ್ದಾ…. ನಾಯ್ ಬೆರ್ಸದ್ ಅಲ್ದಾ? ಸಾಯ್ಬ್ರ್- ಅರೇ ನಾನು [...]
ಹುಲಿಯಾದ ಕಾಳ ಭಾಗ-3
Posted: February 9, 2009 in ಆಟ, ಗಮ್ಮತ್ ಇತ್ತ್ ಕಾಣಿ..., ಯಕ್ಷಗಾನTags: ಬೆಳಿಯೂರು, ಯಕ್ಷಗಾನ, ಹಳ್ಳಾಡಿ ಜಯರಾಮ ಶೆಟ್ಟಿ, ಹಾಸ್ಯ, ಹುಲಿಯಾದ ಕಾಳ
ಸುಮಾರ್ ದಿವ್ಸ್‌ದ್ ಹಿಂದೆ ಕಾಳನ್ ಕತಿ ಇದೇ ಬ್ಲಾಗಗೆ ಓದದ್ ನೆನ್ಪ್ ಇತ್ತಾ? ಅದ್ರದ್ ಮುಂದಿನ್ ಭಾಗ ಇಲ್ಲಿತ್ತ್ ಕಾಣಿ… ಕಾಳ ಮತ್ ನಾಗ್ವೇಣಿ ಜಗ್ಳ ಮಾಡ್ತಾ ಇಪ್ಪತಿಗೆ ಒಬ್ರ್ ಸಾಯ್‌ಬ್ರ್ ಒಳ್ಗ್ ಬತ್ರ್. ಅವ್ರಿಬ್ರ್ ಲಡಾಯಿ ಮಾಡತ್ ಕಂಡ್ ಸಾಯ್ಬ್ರ್ ಕೇಂತ್ರ್… ಸಾಯ್ಬ್ರ್- ಅರೇ ಕ್ಯಾರೇ… ಅರೇ ಕ್ಯಾರೇ ಕಾಳ – ಅದೆಲ್ ಬಂತೆ…? ಸಾಯ್ಬ್ರ್- ಅರೇ…ನಿಮ್ದು ಏನು ಹುಡುಕ್ತದೆ… ಕಾಳ – ಅದೇ ನೀವ್ ಕ್ಯಾರಿ ಕ್ಯಾರಿ ಅಂದ್ರ್ಯಲ್ದಾ…. ನಾ ಹಂಗಾರ್ [...]
ಹಳ್ಳಾಡಿ ಜಯ್ರಾಮ ಶೆಟ್ರ ‘ಹಾಸ್ಯ ಬೆರ್ಸ್ ಮಜ್ಜಿಗಿ’
Posted: February 5, 2009 in ಆಟ, ಗಮ್ಮತ್ ಇತ್ತ್ ಕಾಣಿ...Tags: ಕುಂದಾಪುರ, ಜಯರಾಮ ಶೆಟ್ರ್, ಯಕ್ಷಗಾನ, ಹಾಸ್ಯ
‘ಹಾಸ್ಯ ಬೆರ್ಸ್ ಮಜ್ಜಿಗಿ‘ ಅಂದೇಳಿ ಒಂದ್ ಯಕ್ಷಗಾನದ್ ಎಂಪಿ3 ಇತ್ತ್. ಅದ್ರಗೆ ಪತ್ರಕರ್ತ ಬಸವರಾಜ್ ಶೆಟ್ಟಿಗಾರ್ರ್ ಬರದ್ದ್ ಒಂದ್ ಹಾಸ್ಯ ಪ್ರಸಂಗ ‘ಮೇಸ್ತ್ರಿ ಮಾದಯ್ಯ‘ ಅಂದೇಳಿ ಇತ್ತ್. ಆ ಪ್ರಸಂಗದಗೆ ಹಳ್ಳಾಡಿ ಜಯ್ರಾಮ ಶೆಟ್ರದ್ ಮೇಸ್ತ್ರಿ ಮಾದಯ್ಯನ ಪಾರ್ಟ್. ಅವ್ರ್ ಸುರಿಗೆ ಕುಂದಾಪ್ರ ಶಾಸ್ತ್ರಿ ಸರ್ಕಲ್ಲಗೆ ಬಂದ್ ಕೂತ್ಕಂಡ್ ಭಾಗ್ವತ್ರತ್ರ ಮಾತಾಡ್ತಾ ಒಂದ್ ಕತಿ ಹೇಳ್ತ್ರ್. ಆ ಕತಿ ಕೆಂಬ್ಕೆ ಒಂದ್ನಮನಿ ಗಮ್ಮತಿತ್ತ್. ನೀವೂ ಒಂಚೂರ್ ಕೇಣಿ… ಇದ್ ಭಾರೀ ಹಿಂದಿನ್ ಕಾಲದ್ ಕತಿ. ದೇವ್ರ್ [...]
ನಮ್ ಹಳ್ಳಿ ಬದ್ಯರಿಗೆ ಬಾಯ್ತುಂಬ ಮಾತಾಡ್ಕ್ ಕಾಣಿ. ನೂರ್ ಮಾರ್ ದೂರ ಇದ್ದರಿಗೆ ಸತೇ ಕೇಣ್ಕ್. ಯಾರ್ದಾರೂ ಮನಿಗ್ ಹೋರೆ ಕಾಪಿ ಕೊಡ್ದಿರೂ ಅಡ್ಡಿಲ್ಲ… ಅವ್ರ್ ಸಮಾ ಮಾತಾಡ್ಸ್‌ದಿದ್ರೆ ಮಾತ್ರ ಎಲ್ಲಿಲ್ದಿದ್ ಸಿಟ್ಟ್ ಬತ್ತ್. ಈ ಪ್ಯಾಟಿ ಬದ್ಯಗೆ ಹುಡ್‌ಗಿಯರೆಲ ಬಾಯ್ ಬುಡ್ದಗೆ ಮೊಬೈಲ್ ಫೋನ್ ಇಟ್ಕಂಡ್ ಪಿಸಪಿಸ ಅಂದೇಳಿ ಮಾತಾಡ್ತ್ರಲ್ದಾ… ಹಾಂಗ್ ಏನಾರೂ ಮಾತಾಡ್ಕಿದ್ರೆ ಮತ್ತೊಂದ್ ಜನ್ಮ ಎತ್ತಿ ಬರ್ಕ್. ಎಂತ ಮಾತಾಡುದಾರೂ ಗಟ್‌ಗಟ್ಟಿ ಮಾತಾಡಿಯೇ ಅಭ್ಯಾಸ. ನಂಗೆ ಹೈಸ್ಕೂಲಗೆ ಒಬ್ರ್ ಮಾಸ್ಟ್ರ್ ಇದ್ದಿರ್. ಅವ್ರ್ [...]
ಚಾ ಕಣ್ಣ್ ಕುಡ್ದ್ ಕುಂಚಟ್ ಹಾರ್ತ…!!
Posted: December 11, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ ಕಲಿ
ಕೊಟ್ಟ್ ಮಾತ್ ತಪ್ಸುದಿಲ್ಲ, ವಾರಕ್ಕೊಂದ್ಸರ್ತಿ ಆರೂ ಈ ಬದಿಗೆ ಬತ್ತೆ ಅಂದೇಳಿ ಕಳ್ಸರ್ತಿ ಹೇಳಿದ್ನಲ್ದಾ… ಹಾಂಗೇ ಇವತ್ ಬಂದಿದೆ ಕಾಣಿ… ಹಾಂಗೇ ನೀವೆಲ್ಲ ಉತ್ರ ಕೊಟ್ಟದ್ ಕಂಡ್ ಮಸ್ತ್ ಖುಷಿ ಆಯ್ತ್ (ಬೆಂಗ್ಳೂರ್ ಬದಿ ಮಸ್ತ್ ಅಲ್ಲ ಕುಂದಾಪ್ರ ಬದಿ ಮಸ್ತ್… J ) ಅನುಪಮ, ಮಹೇಶ್, ವೀಮಾ ಶೆಟ್ಟಿ, ಅಡಿಗ, ಶಿಶಿರ, ರಂಜಿತ್, ದೀಪಾ, ಭಾಗ್ವತ್ರ್… ಇವ್ರೆಲ್ಲಾ ಉತ್ರ ಕೊಟ್ಟಿರ್. ಶಿಶಿರ, ರಂಜಿತ್ ಎರ್ಡ್ ಸಮ್ನಾದ್ ಉದಾಹರಣೆ ಸೈತ ಕೊಟ್ಟಿರ್. ಅದೇ ಅರ್ಥ ಬಪ್ಪ್ [...]
ಕಳ್ಸರ್ತಿದ್ ಉತ್ರ… ಈ ಸರ್ತಿದ್ ಪ್ರಶ್ನೆ
Posted: December 4, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, ಕುಂದಾಪುರ ಕನ್ನಡ, ಕುಂದಾಪ್ರ ಕನ್ನಡ
ಕಳ್ದ್ ಸರ್ತಿ ಒಂದಿಷ್ಟ್ ಕುಂದಾಪ್ರ ಕನ್ನಡ ಶಬ್ದ ಕೊಟ್ಟ್ ನಿವೆಲ್ಲ ಉತ್ರ ಹೇಳಿನಿ ಕಾಂಬ ಅಂತ್ ಹೇಳಿದೆ… ನಾವಡ್ರ್, ಯಶೋಧ ಮತ್ತೆ ಅನುಪಮ ಸುಮಾರ್ ಸರಿ ಉತ್ರ ಕೊಟ್ಟಿರ್. ಬೇರೆ ಯಾರೂ ಈ ಬದಿಗ್ ನೀಕಿ ಕಾಣಲ್ಯೋ…, ಕಂಡ್ರೂ ಉತ್ರ ಹೇಳುಕೆ ಮನ್ಸಿಲ್ಯೋ, ಅತ್ವ ಯಾರ್ ಹೇಳ್ತ್ರ್.. ಇವ್ನಿಗೆ ಬೇರೆ ಕೆಲ್ಸ ಇಲ್ಲ ಅಂದೇಳಿ ಸುಮ್ನಾಯ್ಕಂಡ್ರೋ ಗೊತ್ತಿಲ್ಲ. ಹೋಯ್ಲಿ ಬಿಡಿ… ನಂಗೇನ್ ಬೇಜಾರಿಲ್ಲ… ಯಾರಿಗಾರೂ ಒತ್ತಾಯ ಮಾಡಿ ಉತ್ರ ಹೇಳಿ ಅಂದೇಳಿ ಹೇಳುಕಾತ್ತಾ? ಆರ್ ಹೀಂಗ್ [...]
ಹಾಂಗೂ ಒಂದ್ ಕಾಲ ಇದ್ದಿತ್ತ್ ಕಾಣಿ…
Posted: December 4, 2008 in ನಮ್ ಊರ್ ನಮ್ಗ್ ಚಂದTags: ಕುಂದಾಪ್ರ, ಗ್ವಾಯ್ ಬೀಜ, ನೆನ್ಪ್
ಈ ಬ್ಲಾಗ್ ಬದಿಗೆ ಮಂಡಿ ಹಾಕಿ ಮನ್ಕಣ್ದೆ ಸುಮಾರ ದಿನ ಆಯ್ತ್. ಹಾಂಗಂದೇಳಿ ಬರುಕ್ ಪುರ್ಸೊತ್ ಇಲ್ಲ , ಬರುಕ್ ಮನ್ಸಿಲ್ಲ ಅಂದೇಳಿ ಅಲ್ಲ. ಹಾಂಗ್ ಕೇಂಡ್ರೆ ಈ ಬ್ಲಾಗಿಗೆ ಬರುಕೆ ನಂಗೂ ಮಸ್ತ್ ಖುಷಿಯೇ. ಆರೂ ಕಳ್ದ್ ತಿಂಗ್ಳ್ ಇಡೀ ಏನೋ ಒಂದ್ನಮನಿ ಉದಾಶಿನ ಹಿಡ್ದಂಗ್ ಆಯಿತ್. ಈಗ ಅದ್ನೆಲ್ಲ ಕೊಡ್ಕಿ ಹಾಕಿ ಬರುಕ್ ಕೂಕಂಡಿದೆ. ಇನ್ನ್ ಮೇಲೆ ಹೀಂಗೆಲ್ಲ ಹಾಂಟ್ ಹಾಕುದಿಲ್ಲ ಅಕಾ.. ಸುಳ್ಳಾ-ಬದ್ಧವಾ ನೀವೆ ಕಾಣಿ ಬೇಕಾರೆ. ಈ ಬದಿಗೆಲ್ಲಾರೂ ನೀವ್ ನೀಕಿ [...]
ಈ ಸರ್ತಿ ಚೂರ್ ಬದ್ಲ್ ಮಾಡ್ರೆ ಹ್ಯಾಂಗೆ?… ಗತಿ ಗೋತ್ರ ಇಲ್ದಿದಂಗ್ ಆಪುದ್, ಅಂಡುದ್, ಹೊತ್ತ್ಹೋಪತಿಗೆ, ವರ್ಕುದ್
Posted: October 29, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, kundapra kannada
ಏಗ್ಳಿಕೆ ಕಂಡ್ರೂ ನಾನೆ ಶಬ್ದ ಬರ್ದ್, ಅದ್ರದ್ ಅರ್ಥ ಹೇಳಿ, ವಾಕ್ಯ ಮಾಡಿ ತೋರ್ಸ್‌ತಿದ್ದಿದೆ ಅಲ್ದಾ? ಈ ಸರ್ತಿ ಒಂಚೂರ್ ಬದ್ಲ್ ಮಾಡ್ವಾ? ನಾನೊಂದಿಷ್ಟ್ ಕುಂದಾಪ್ರ ಬದಿದ್ ಶಬ್ದ ಕೊಡ್ತೆ. ನೀವ್ ಅದಕ್ ಅರ್ಥ ಹೇಳಿ, ಒಂದೆರ್ಡ್ ವಾಕ್ಯ ಹೇಳಿ. ಕಾಂಬ ಯಾರೆಲ್ಲ ಉತ್ರ ಹೇಳ್ತ್ರ ಅಂದೇಳಿ. ( ಭಾಗ್ವತ್ರೆ ಹೀಂಗ್ ಮಾಡ್ಯಾರೂ ನೀವ್ ನಿಲ್ಸಿದ್ ಕುಂದಾಪ್ರ ಕನ್ನಡ ಕ್ಲಾಸ್ ಮತ್ತ್ ಶುರು ಮಾಡ್‌ತ್ರ್ಯಾ ಕಾಂಬ ಅಂದೇಳಿ…) ಯಾವ್ದೆಲ್ಲ ಶಬ್ದ ಕೇಂಡ್ರ್ಯಾ? ಎಲ್ಲ ಇಲ್ಲಿತ್ತ್ [...]
ನಾಳೆ ಕಲಾಕ್ಷೇತ್ರದಗೆ ಹಳ್ಳಾಡಿ ಜಯ್ರಾಮ್ ಶೆಟ್ರಿಗೆ ಅಭಿನಂದನೆ – ಬೇಡರ ಕಣ್ಣಪ್ಪ – ಶ್ವೇತ ಕುಮಾರನ ಪ್ರೇತ – ಚಿತ್ರಾಕ್ಷಿ ಕಲ್ಯಾಣ
Posted: October 17, 2008 in ಯಕ್ಷಗಾನTags: ಆಟ, ಕಾಶೀಮಾಣಿ, ಯಕ್ಷಗಾನ, ಶ್ವೇತ ಕುಮಾರನ ಪ್ರೇತ, ಸೀತಾರಾಂ ಕುಮಾರ್
ಹಳ್ಳಾಡಿ ಜಯ್ರಾಮ ಶೆಟ್ರ್ ಹೆಸ್ರ್ ಕೇಣ್ದಿದ್ದರ್ ಯಾರಿದ್ರ್ ಹೇಳಿ ಕಾಂಬ. ಸುಮಾರ್ ನಲ್‌ವತ್ ವರ್ಷದಿಂದ ಹಾಸ್ಯ ಪಾತ್ರ ಮಾಡಿ ಎಲ್ಲರನ್ನೂ ನೆಗಾಡ್ಸದರ್… ಕಮಲಶಿಲೆ, ಅಮೃತೇಶ್ವರಿ, ಮಂದರ್ತಿ, ಮೂಲ್ಕಿ, ಕುಂಬಳೆ, ಸಾಲಿಗ್ರಾಮ, ಪೆರ್ಡೂರು ಹೀಂಗೆ ಸುಮಾರ್ ಮ್ಯಾಳದಗೆ ಹಾಸ್ಯ ಪಾತ್ರ ಮಾಡಿ ರೈಸ್‌ದರ್…ಬಾಹುಕ, ಪಾಪಣ್ಣ, ಕೈರವ, ಕಾಶೀಮಾಣಿ, ಬಲರಾಮನ ದೂತ, ಕಂದರ, ವಿಜಯ, ಮಂಥರೆ, ದಾರುಕ, ಹುಲಿಯಾದ ಕಾಳ…ಹೀಂಗೆ ನಮ್ ನಮನಿ ವೇಷ ಹಾಕಿ ಹೆಸ್ರ್ ಮಾಡ್ದರ್ ಜಯ್ರಾಮ ಶೆಟ್ರು. ಅವ್ರ್ ಕಲಾಸೇವೆ ಕಂಡ್ ಕುಶಿಪಟ್ಟರೆಲ್ಲ ಸೇರಿ ಅವ್ರಿಗೊಂದ್ [...]
ನವ್ರಾತ್ರಿಯಂದ್ರೆ…ಹೊಸ್ತು….ಹುಲಿಯಾಸ… ಹೂವಿನಕೋಲು…ಪಾಣಾರ್ರ ವೇಷ
Posted: October 8, 2008 in ನಮ್ ಊರ್ ನಮ್ಗ್ ಚಂದTags: ಕುಂದಾಪ್ರ, ನವರಾತ್ರಿ, ಪಾಣಾರ ವೇಷ, ಹುಲಿಯಾಸ, ಹುಲಿವೇಷ, ಹೂವಿನ ಕೋಲು, ಹೂವಿನ್ ಕೋಲ್, ಹೊಸ್ತ್
ನವ್ರಾತ್ರಿ ಬಂತಂದ್ರ್ ಸಾಕ್. ನೆನ್ಪ್ ಊರ್ ಬದಿ ಮುಖ ಮಾಡ್ಕಂಡ್ ಕೂಕಣತ್. ಮಾಲಯ ಅಮಾಸಿ ಮುಗದ್ದೇ ತಡ… ಎಲ್ಲರ್ ಮನ್ಯಗೂ ಕದ್ರ್ ಪೂಜಿ ಮಾಡಿ…ಅದನ್ ತಂದ್‌ಕಟ್ಟಿ ಹೊಸ್ತ್ ಮಾಡು ಗೌಜಿ ಶುರುವಾತ್ತ್. ನಮ್ಗೆ ಅಂದ್ರೆ ಮಕ್ಳಿಗೆಲ್ಲಾ ಗಡ್ಜ್ ಗಮ್ಮತ್ತ್. ಅರ್ಧವಾರ್ಷಿಕ ಪರಿಕ್ಷೆ ಎಲ್ಲಾ ಮುಗ್ದ್ ಶಾಲಿಗ್ ಬೇರೆ ರಜಿ ಸಿಕ್ಕಿರತ್. ಮತ್ತ್ ಶಾಲಿ ಬದಿಗ್ ಮುಖ ಹಾಕುದ್ ದೀಪಾವಳಿ ಪಟಾಕಿ ಎಲ್ಲ ಖಾಲಿ ಆರ್ ಮೇಲೆ ಸೈ. ಹೊಸ್ತಿನ ಊಟ ಮಾಡಿ… ಹೊಟ್ಟಿ ಭಾರ ಆದ್ದಕ್ಕೆ ಕಣ್ಣ್ [...]
ಗುಲಾಬಿ ಟಾಕೀಸಿಗೆ ಒಂದ್ಸಲ ಹೋಯ್ ಬಪ್ರ್ಯಲ…
Posted: September 29, 2008 in ನಮ್ ಊರ್ ನಮ್ಗ್ ಚಂದTags: ಉಮಾಶ್ರೀ, ಗಿರೀಶ್ ಕಾಸರವಳ್ಳಿ, ಗುಲಾಬಿ ಟಾಕೀಸು
ಅಂತೂ ಕಳ್ದ್ ವಾರ ಪಿ.ವಿ.ಆರ್ ಟಾಕೀಸಿಗ್ ಹೋಯಿ ಗುಲಾಬಿ ಟಾಕೀಸ್ ಕಂಡ್ಕಂಡ್ ಬಂದೆ. ವೈದೇಹಿ ಬರದ್ ಕತಿದ್ ಒಂದ್ ಸಣ್ಣ್ ಎಳಿ ಮಾತ್ರ ಇಟ್ಕಂಡಿರ್. ಕತಿ ಬದ್ಲ್ ಮಾಡ್ರೂ ಪಿಚ್ಚರ್ ಭಾರಿ ಲಾಯ್ಕ್ ಆಯಿ ಬಂದಿತ್. ಉಮಾಶ್ರೀಯಂತೂ ಕುಂದಾಪ್ರ್ ಬದ್ಯರ್ ಅಲ್ಲ ಅಂದೇಳಿ ಹೇಳುಕ್ ಯಡ್ಯ. ಹಾಂಗ್ ಕಾಂಬುಕ್ ಹೋರೆ ಎಂ.ಡಿ.ಪಲ್ಲವಿ ಮಾಡದ್ ನೇತ್ರ ಕುಂದಾಪ್ರ ಕನ್ನಡ ಮಾತಾಡ್ವತಿಗೆ ಒಂಚೂರ್ ಬೇರೆ ನಮ್ನಿ ಕೇಂತಿತ್ತ್. ಆರ್ ಇದೆಲ್ಲ ಅಷ್ಟ್ ದೊಡ್ ತಪ್ಪೇನಲ್ಲ ಬಿಡಿ. ನಾವ್ ಹುಟ್ಟಿನ್ ಲಗಾಯ್ತ್ [...]
ಕುಮ್ಟಿ ಬೀಳು, ಹೊಕ್ಡ್ , ಬೆಟ್ಟ್, ಹಿಂದಾಗು, ಲಾಟ್ ಬಿಡು
Posted: September 24, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ
ಕುಮ್ಟಿ ಬೀಳು = ಬೆಚ್ಚಿ ಬೀಳು ಬಳಕೆ ೧. ಮಗಿನ ಸುದ್ದಿಗ್ ಹೊಗ್ಬೆಡ ಅಂದ್ರ್ ಕೇಂತಿಲ್ಲ. ನೀ ಕೂಗದ್ದ್ ಕಂಡ್ ಮಗು ಕುಮ್ಟಿ ಬಿತ್ತ್ ಕಾಣ್ ೨. ನೀವ್ ಹಿಂದಿಂದ್ ಬಂದ್ ಸುಮ್ನ್ ನಿಂತ್ಕಂಡದ್ದಾ ಮರಾಯ್ರೆ. ಕತ್ಲಿ ಹೌದಾ ಅಲ್ದಾ… ನಾ ಒಂದ್ಸಲ ಕುಮ್ಟಿ ಬಿದ್ದೆ ಗೊತ್ತಾ ಹೊಕ್ಡ್ = ಜೊತೆಗೆ, ಬಳಿ, ಹತ್ತಿರ, ಒಟ್ಟಿಗೆ ಬಳಕೆ ೧. ಮೊನ್ನೆ ನಂಗೂ ಅವಂಗೂ ಮಾತಿಗ್ ಮಾತ್ ಆಯ್ ಈಗ ನನ್ ಹೊಕ್ಡ್ ಮಾತಾಡುದೇ ಕೈದ್ ಮಾಡಿದ [...]
ಮಂಗ್ಳೂರ್, ಉಡ್ಪಿಗೆ ಎಂಥಾ ಆಯ್ತ್ ಮಾರ್ರೆ….
Posted: September 17, 2008 in vichaaraTags: ಉಡುಪಿ, ಉಡ್ಪಿ, ಕುಂದಾಪ್ರ, ಗಲಭೆ, ಧರ್ಮ, ಮಂಗಳೂರು, ಮಂಗ್ಳೂರ್, ಶಾಂತಿ
ಬುದ್ಧಿವಂತ್ರ್ ಜಿಲ್ಲೆ ಅಂದೇಳಿ ಕರ್ಸ್‌ಕಂತಿದ್ದ ಮಂಗ್ಳೂರಿಗೆ ಆದ್ದಾರೂ ಎಂಥದ್? ಇದ್ ಬುದ್ಧಿ ಕಡ್ಮಿ ಆದ್ದಲ್ಲ. ಕಲ್ತದ್ ಹೆಚ್ಚಾಯ್ತ್ ಕಾಲ್ ಮೇಲಾಯ್ತ್ ಅಂಬಂಗೆ ಆಡ್ತ್ರಲಾ ಇವ್ರಿಗೆಲ್ಲ ಎಂಥ ಹೇಳುದ್ ಹೇಳಿ. ಅದೆಂತದೋ ಮತಾಂತರ ಅಂದೇಲಿ ಶುರುವಾದ ಈ ಗಲಾಟಿ ಎಲ್ಲಿಗ್ ಹೋಯ್ ಮುಟ್ಟುತ್ತೋ ಆ ದೇವ್ರೇ ಬಲ್ಲ. ಬೆಂಕಿ ಇಲ್ದೆ ಹೊಗಿ ಏಳುದಿಲ್ಲ. ಫಾರಿನ್ನಿಂದ ದುಡ್ ಬತ್ತಂಬ್ರ್, ದುಡ್ಡಿನ್ ಆಶಿ ತೋರ್ಸಿ ಮರ್ಲ್ ಮಾಡ್ತ್ರಂಬ್ರ್, ಕಾಯ್ಲಿ ಗುಣ ಮಾಡ್ತೆ ಅಂದೇಳಿ ಮಂಡಿ ಹಾಳ್ಮಾಡ್ತ್ರ್ ಅಂಬ್ರ್…ಹೀಂಗೆ ಸುಮಾರ್ ವರ್ಷದಿಂದ್ಲೂ ಗುಸುಗುಸು [...]
ಇನ್ನೊಂದೆರ್ಡ್ ಒಳ್ಳೇ ಆಟದ್ ಸುದ್ದಿ ಹಿಡ್ಕಂಡ್…
Posted: September 15, 2008 in ಯಕ್ಷಗಾನTags: ಆಟ, ಕೊಂಡದಕುಳಿ, ಚಿಟ್ಟಾಣಿ, ಯಕ್ಷಗಾನ, ಸಾಲಿಗ್ರಾಮ
ಮೊನ್ನೆ ಶನಿವಾರ ರಾತ್ರಿ ಅಮೃತೇಶ್ವರಿ ಮೇಳ ಮತ್ತೆ ಅತಿಥಿ ಕಲಾವಿದ್ರೆಲ್ಲ ಸೇರಿ ವೀರ ವೃಷಸೇನ, ನಾಗಶ್ರೀ ಆಡಿದ್ರ್. ಕಾಂಬುಕೆ ನಾನೂ ಹೋಯಿದ್ದೆ. ಹೋದನಿಗೆ ಮತ್ತೆರ್ಡ್ ಒಳ್ಳೆ ಆಟದ್ ಸುದ್ದಿ ಸಿಕ್ತ್. ಅದನ್ನ್ ನಿಮ್ಗ್ ಹೇಳ್ವ ಅಂದೇಳಿ… ಇತ್ತಿತ್ಲಾಯಿ ಹೊಸ ಆಟ ಆಡ್ರೆ ಬೆಂಗ್ಳೂರಗೆ ಜನವೇ ಬತ್ತಿಲ್ಲ ಅಂದೇಳಿ ಮೊನ್ನೆ ಮ್ಯಾಳ್ದರ್ ಒಬ್ರ್ ಹೇಳ್ತಿದ್ರ್. ಹಾಂಗಾಯ್ ಎಲ್ಲಾ ಮ್ಯಾಳ್ದರೂ ಪೌರಾಣಿಕ ಪ್ರಸಂಗವೇ ಹೆಚ್ಚ್ ಹೆಚ್ಚ್ ಆಡುಕ್ ಶುರು ಮಾಡಿರ್. ಇದಾದ್ರೆ ಪೌರಾಣಿಕ ಪ್ರಸಂಗ ಅಂದ್ರೆ ಖುಷಿ ಪಡುವರಿಗೆ ಒಳ್ಳೆ [...]
ಹಬ್ಬದ್ ಹೇಳ್ಕಿಗೆ ಹುಲಿ ಕೂಗತ್ತಂಬ್ರಪ್ಪ..
Posted: September 11, 2008 in ನಮ್ ಊರ್ ನಮ್ಗ್ ಚಂದTags: ಕಮಲಶಿಲೆ, ಕುಂದಾಪ್ರ ಕನ್ನಡ, ಗುಹೆ, ಹಬ್ಬ, ಹುಲಿ
ಮೊನ್ನೆ ನನ್ ಫ್ರೆಂಡ್ ಒಬ್ಬ ಕಮಲಶಿಲೆಗೆ ಹೊಯಿ ಬಂದಿದ್ದ. ಅಲ್ಲಿನ್ ಗುಹೆ ಕಾಣ್ಕ್ ಅಂದೇಳಿಯೇ ಅಂವ ಹೋದ್ದ್. ಹೋಯಿ ಬಂದನೆ ಗುಹೆ ಕಂಡ್ಕಂಡ್ ಬಂದ್ ಕತಿಯೆಲ್ಲ ಹೇಳ್ತಿದ್ದ. ಸುಮಾರ್ ಫೊಟ ಎಲ್ಲಾ ತೆಗ್ದಿದ ಅಂಬ್ರ್. ಆ ಗುಹೆ ಭಾರಿ ಲಾಯ್ಕ್ ಇತ್ತ್ ಮರಾಯ್ರೆ. ನಾನ್ ಗುಹೆ ಕಾಂಬುಕ್ ಹೋಯಿ ಸುಮಾರ್ ವರ್ಷ ಆಯ್ತ್. ಆರೆ ಸುಮಾರ್ ದೊಡ್ಡ್ ಗುಹೆ. ಗುಹೆ ಒಳ್ಗೆ ಲೈಟ್ ಹಿಡ್ಕಂಡ್ ಹೋರೆ ಸುಮಾರ್ ದೂರ್ ಹೋಯ್ಲಕ್. ಅಂವ ಹೇಳದ್ದೆಲ್ಲ ಕೇಂಡ್ ಮೇಲೆ ನಾನೂ [...]
ಅಂಬ್ಡ್, ಚೊಣ್ಕಿ ,ಹತ್ತಾ, ಪತ್ತಿ, ಹುಣ್ಸಿಹಣ್, ಬೆಳ್ಚುದು, ಹಸರ್ಸ್‌ಕಂಡ್, ಧಾತ್
Posted: September 5, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, ಕುಂದಾಪ್ರ ಕನ್ನಡ
ಅಂಬ್ಡ್, ಅಂಬಡ್ = ಜೋಡಿ, ಅವಳಿ ಬಳಕೆ ಅವ್ರಿಬ್ರ್ರೂ ಅಂಬ್ಡ್ ಮಕ್ಳ್ ಅಂಬ್ರ್. ಕಾಂಬುಕೆ ಒಂದೇ ನಮ್ನಿ ಇದ್ರ್ ಕಾಣಿ ಅಂಬ್ಡ್ ಬಾಳೆಹಣ್ ತಿಂದ್ರೆ ಅಂಬ್ಡ್ ಮಕ್ಳ್ ಹುಟ್ತ್ರ್ ಅಂಬ್ರಲಾ ಹೌದಾ? ಹತ್ತ / ಹತ್ತಾ = ಸಂಪೂರ್ಣ, ಪೂರಾ ಬಳಕೆ ಹರಿಯಗ್ ನೀರ್ ಹತ್ತಾ ಖಾಲಿ ಮಾಡ್ಬೆಡ ನಂದ್ ಇನ್ನೂ ಮಿಂದ್ ಆಯಲ್ಲ ಯಾರಾರೂ ಪಾಪ್ದರ್ ಸಿಕ್ರೆ ಅಂವ ಹತ್ತ ಬೋಳ್ಸಿ ಬಿಡ್ತ ಪತ್ತಿ = ಆಹಾರ ಇದು ಬಹುಶಃ ಪಥ್ಯ ಶಬ್ದದಿಂದ ಬಂದಿರಬಹುದು. ಪಥ್ಯ [...]
ನಮ್ಮೂರ್‌ನರ್ ಒಬ್ರದ್ದ್ ‘ಬಹುಮುಖಿ’ ಅಂದೇಳಿ ಬ್ಲಾಗ್ ಇತ್ತ್. ಇವತ್ ಹೀಂಗೇ ಬ್ಲಾಗ್ ಹುಡ್ಕತಾ ಇಪ್ಪತ್ತಿಗೆ ಅದ್ ಕಣ್ಣಿಗ್ ಬಿತ್. ವಂಡಾರ್ ಕಂಬ್ಳ್‌ದ್ ಬಗ್ಗೆ ಒಂದ್ ಒಳ್ಳೆ ಲೇಖನ ಬರ್ದಿರ್. ವಂಡಾರು ಕಂಬಳ ಮತ್ತು ನರಬಲಿ… ಅಂದೇಳಿ. ಪುರ್ಸೊತ್ತ್ ಮಾದ್ಕಂಡ್ ಒಂದ್ ಗಳ್ಗಿ ಅವ್ರ್ ಬ್ಲಾಗ್ ಬದಿಗೆ ಹೋಯಿ ಬನಿ. ಹಾಂಗೇ ಮತ್ತೊಂದ್ ಬ್ಲಾಗ್ ಇತ್ತ್. ಅವ್ರೂ ನಮ್ಮೂರ್ ಬದಿಯವ್ರೆ. ಬ್ಲಾಗ್ ಹೆಸ್ರ್ ಪಾರಿಜಾತ. ಅವ್ರ್ ಬರುದ್ ಅಪ್ರೂಪ ಆರೂ ಬರದ್ದೆಲ್ಲ ಒಳ್ಳೆ ಅಪ್ರೂಪದ್ದೇ…. ಅವ್ರ್ ಬರ್ದ್ [...]
ಒಂದೆರ್ಡ್ ಒಳ್ಳೆ ಆಟ ಇತ್ತ್..ಕಾಂಬರಿದ್ರೆ ಕಾಣಿ
Posted: August 27, 2008 in ಯಕ್ಷಗಾನTags: ಆಟ, ದೇವಿ ಮಹಾತ್ಮೆ, ಯಕ್ಷಗಾನ
ಪೆರ್ಡೂರ್ನವ್ರದ್ ಈ ಸರ್ತಿದ್ ಎರ್ಡನೇ ಬೆಂಗ್ಳೂರ್ ತಿರ್ಗಾಟ್ದಗೆ ಇನ್ನೊನ್ದ್ 4 ದಿನ ಒಳ್ಳೆ ಆಟ ಇತ್ತ್. ಯಾರಾರು ಕಾಂಬರಿದ್ರೆ ಅವ್ರಿಗ್ ಅನ್ಕೂಲ ಆಯ್ಲಿ ಅಂದೇಳಿ ಆಟದ್ ಸುದ್ದಿ ಇಲ್ಲಿತ್ತ್ ಕಾಣಿ – 27 ಆಗಸ್ಟ್ (ಇವತ್ತ್ ಸಾಯಂಕಾಲ ) – ಸಂಪೂರ್ಣ ದೇವಿ ಮಹಾತ್ಮೆ 29 ಆಗಸ್ಟ್ ಬಬ್ರುವಾಹನ – ಕಾರ್ತವೀರ್ಯಾರ್ಜುನ- ಮಾಯಾಬಜಾರ್ 30 ನಾಗವಲ್ಲಿ 31 – ರಾಮಾಂಜನೇಯ – ಚಂದ್ರಾವಳಿ ವಿಲಾಸ ( ಭಾಗವತ ಸುರೇಶ್ ಶೆಟ್ಟಿ ಅಭಿನಂದನೆ) ಶುಕ್ರವಾರ ಅಂತೂ [...]
ಸಿದ್ಧಾಪ್ರ ಸಂತಿ ದಿನ ಬಸ್ ಹತ್ತುದಂದ್ರೆ….ಅಯ್ಯಬ್ಬ!
Posted: August 25, 2008 in ನಮ್ ಊರ್ ನಮ್ಗ್ ಚಂದTags: ಕುಂದಾಪುರ, ನೆನಪು, ಸಂತಿ, ಸಿದ್ಧಾಪುರ
ಯಾವ್ದಾರೂ ಬೇಕ್ ಕಾಣಿ, ಈ ಸಂತಿ ದಿನ ಬಸ್ಸಗೆ ಹೋಪುದ್ ಮಾತ್ರ ಎಷ್ಟ್ ಕೊಟ್ರೂ ಬ್ಯಾಡ್ದೆ. ಅದ್ರಗೂ ಜೋರ ಸೆಕಿ ಇಪ್ಪ್ ಸಮಿಗೆ ಹೋಯ್ಕಾರೆ ಸಾಕ್‌ಬೇಕ್ ಅಂಬಂಗಾತ್. ಬುಧ್ವಾರ ಸಿದ್ಧಾಪ್ರದಗೆ ಸಂತಿ. ಹಾಂಗಂತೇಳಿ ಎಂತಾರೂ ಕೆಲ್ಸ ಇದ್ರೆ ಈ ವಾರ ಎಲ್ಲ ಕಾಂತ ಕೂಕಂಬುಕೆ ಆತ್ತಾ? ಅದೂ ದಿನ ಕೇಂಡರೊಟ್ಟಿಗ್ ಆ ದಿನ್‌ವೇ ಎಂತಾರೂ ಕೆಲ್ಸ ಬಂದ್ರೆ ಎಂತ ಮಾಡುಕಾತ್ತ್? ಒಟ್ಟ್ ಹೋಯ್ದಿರ್ ಉಪಾಯಿಲ್ಲ. ನಾನ್ ಶಾಲಿಗ್ ಹೋಪತಿಗೆ ಬುಧ್ವಾರ ಬಂದ್ರ್ ಸಾಕ್. ಯಾಕಾರೂ ಬಂತೋ [...]
ಎಲ್ಲಿಲ್ಲದ್ ಮಳ್ಯಗೆ ಆಟೋ ಹತ್ಕಂಡ್…ಆಟ ಕಾಂಬುಕ್ ಹೋದ್ದ್…..
Posted: August 18, 2008 in ಯಕ್ಷಗಾನTags: ಆಟ, ಕೂಡಾಟ, ಪೆರ್ಡೂರು, ಯಕ್ಷಗಾನ, ಸಾಲಿಗ್ರಾಮ
14ನೇ ತಾರೀಕಿಗೆ ಸಾಂಯ್ಕಾಲ ದಿನ ಕೇಂಡರೊಟ್ಟಿಗೆ ಬೆಂಗ್ಳೂರಗೆ ಎಲ್ಲಿಲ್ಲದ್ ಮಳಿ. ಅದೂ ಅಲ್ದೆ ಎಲ್ಲರೂ ಊರಿಗ್ ಹೋಪ್ ಗಡ್ಬಿಡಿಯಗೆ ಇದ್ರಲ್ದಾ, ಅದ್ಕೇ ಟ್ರಾಫಿಕ್ ಪೂರಾ ಜಾಮ್. ಆರೂ ಆಟದ್ ಗಿರ ಎಲ್ಲ್ ಹೊತ್ತ್ ಹೇಳಿ? ಅಂತೂ ಆಟೋ ಹತ್ಕಂಡ್ ಹೊರ್‌ಟೆ. ಹತ್ ನಿಮ್‌ಷದ್ ದಾರಿಗೆ ಒಂದ್ ಗಂಟಿ ಆಯ್ತ್ ಹೋಯಿ ಮುಟ್ಟುವತಿಗೆ 11 ಗಂಟೆ. ಆಟ ಶುರುವಾಯಿತ್ತಷ್ಟೆ. ಆರೆ ಆಟ ಮಾತ್ರ ಭಾರಿ ರೈಸಿ ಬಿಟ್ಟಿತ್. ಅಂತಾ ಮಳೇಗ್ ಸತೆ ಅಷ್ಟ್ ಜನ ಸೇರದ್ದ್ ಅಡ್ಡಿಲ್ಲ. ಆಟದ್ [...]
ಸಾಲಂಕೃತ ಕನ್ಯಾದಾನ…!!
Posted: August 13, 2008 in ಗಮ್ಮತ್ ಇತ್ತ್ ಕಾಣಿ...Tags: ಪನ್, ಯಕ್ಷಗಾನ, ಸಾಲಂಕೃತ ಕನ್ಯಾದಾನ, ಹಾಸ್ಯ, fun, yakshagana
ಹಾಸ್ಯ ಮಾಡ್ವರಿಗೆ ಅದ್ರಗೆ ಇದ್ರಗೆ ಅಂದೇಳಿ ಇಲ್ಲೆ. ಅವ್ರ್ ಯಾವ್‌ದ್ರಗೆ ಬೇಕಾರೂ ಹಾಸ್ಯ ಹುಡ್ಕಿ ತೆಗಿತ್ರ್. ಎಲ್ಲರನ್ನೂ ಎರ್ಡ್ ಗಳ್‌ಗಿ ಬಾಯ್ ಕಳ್ದ್ ನಗ್ಸುವಂಗ್ ಮಾಡ್ತ್ರ್. ಈಗ ‘ಸಾಲಂಕೃತ ಕನ್ಯಾದಾನ’ ಅಂದ್ರೆ ಎಂತ ಹೇಳಿ ಕಾಂಬ. ನಂಗೆ ನಿಮ್ಗೆ ಎಲ್ಲ ಗೊತ್ತಿಪ್ದ್ ಅಂದ್ರೆ – ಕೈ ತುಂಬಾ ಬಳಿ, ಕುತ್ಗಿಗ್ ಎರ್‍ಡ್ ಎಳಿ ಸರ, ಒಂದ್ ನೆಕ್ಲೇಸ್, ಕಿಮಿಗ್ ಜುಮ್ಕಿ ಬೆಂಡೋಲಿ ಎಲ್ಲ ಹೇರ್ಕಂಡ್, ಮಂಡಿ ತುಂಬಾ ಹೂ ಮುಡ್ಕಂಡ್ ನಿಂತ್ಕಂಡ ಮದ್‌ಮಗ್ಳ್ ಚಿತ್ರ. ಹೌದಾ ಸುಳ್ಳಾ? [...]
ಕಣ್ಣ್ ಕೂರುದು, ಚಪ್ಪಿ ಎಡ್ಕ್, ಹೊಡ್ಕು, ಮ್ಯಾಳಿ, ಮ್ಯಾಲಾಗ್ರ, ತಾಳ್ಳ್, ತಾಳ್
Posted: August 11, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಕಲಿ
ಕೂರ್ ಮಂಡಿ ಹಾಕುದ್/ ಕಣ್ಣ್ ಕೂರುದು = ತೂಕಡಿಸು, ನಿದ್ರೆ ಬರುವಂತಾಗು ಬಳಕೆ – ೧. ನಂಗ್ ಕಣ್ಣ್ ಕೂರ್‌ತಾ ಇತ್ತ್. ನಾ ಮಲ್ಕಂತೆ ಅಕಾ? ೨. ಟಿ.ವಿ. ಮುಂದ್ ಕೂಕಂಡ್ ಕೂರ್ ಮಂಡಿ ಹಾಕ್ದಿದ್ರೆ ಹೊಯಿ ಮಲ್ಕಂಬ್‌ಕಾಗ್ದಾ? ಚಪ್ಪಿ, ಚಪ್ಪೆ = ಸಪ್ಪೆ (ಬಿಸಿ ತಣಿಯುವುದು ಅನ್ನುವ ಅರ್ಥ ಕೂಡಾ ಇದೆ) ಬಳಕೆ – ೧. ಸಾರ್ ಸಾಪಾಯಿತ್.. ಆರೆ ಒಂಚೂರ್ ಉಪ್ಪ್ ಚಪ್ಪೆ ೨. ಎಂಥ ಮಾರಾಯ ಚಪ್ಪಿ ಇದ್ದೆ, ಹುಶಾರಿಲ್ಯಾ? ೩. [...]
ಹಾಂಟ್ ಹಾಕು, ಹರ್ಪು, ಬಳುವಟಿ, ಕುಟ್ಟಿ ಕೀಸು, ಮ್ವಾಳ
Posted: August 8, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಕಲಿ
ಹಾಂಟ್ ಹಾಕು / ಹಾಟ್ ಹಾಕು = ಮೋಸ ಮಾಡು, ಚಕ್ಕರ್ ಹೊಡೆ, ಕೈ ಕೊಡು ಬಳಕೆ – ೧. ನಿಮ್ ದುಡ್ ಕೊಡ್ವಾ ಮರಾಯ್ರೆ..ನಾನೇನ್ ಹಾಂಟ್ ಹಾಕ್ತನಾ ಹಂಗಾರೆ ೨. ಇವತ್ತ್ ಮನಿಗ್ ನೆಂಟ್ರ್ ಬಂದಿರ್. ಅದಕ್ಕೆ ಶಾಲಿಗ್ ಹಾಂಟ್ ಹಾಕದ್ ಹರ್ಪು = ಪರಚುವುದು, ಗಿಬರು, ಗೀರು ಬಳಕೆ – ೧. ಮಗಿನ್ ಉಗ್ರ್ ಸಮಾ ಉದ್ದ ಆಯಿತ್. ಇಲ್ಕಾಣಿ ನನ್ ಮುಖದ್ ತುಂಬಾ ಹರ್ಪದ್ ೨. ಅವ್ನೊಟ್ಟಿಗೆ ಆಡುದ್ ಬ್ಯಾಡಾ ಮರಾಯ. [...]
ನಾಡ್ದ್ ಆಗಷ್ಟ್ 14ನೇ ತಾರೀಕ್ ಗುರುವಾರ ಬೆಂಗ್ಳೂರಿನ ರವೀಂದ್ರ ಕಲಾಕ್ಷೇತ್ರದಗೆ ಒಂದ್ ಭರ್ಜರಿ ಆಟ ಇತ್ತ್ ಗೊತ್ತಿತಾ? ಆವತ್ ಪೆರ್ಡೂರ್ ಮತ್ತ್ ಸಾಲಿಗ್ರಾಮ ಮ್ಯಾಳದರ್ ಒಟ್ಟಾಯಿ ಕೂಡಾಟ ಆಡ್ತ್ರ್. ಪ್ರಸಂಗ ಎಂಥಾ ಕೇಂಡ್ರ್ಯಾ? ಕೂಡಾಟ ಅಂದ್ರ ಮೇಲೆ ಪೌರಾಣಿಕ ಪ್ರಸಂಗವೇ ಇರ್ಕ್ ಅಂದೇಳಿ ಎಣ್ಸ್‌ತಿದ್ರ್ಯಲ್ದಾ? ನೀವ್ ಎಣ್ಸ್‌ಕಂಡದ್ ಸಮ. ‘ಸುಧನ್ವ ಕಾಳಗ-ಭೀಷ್ಮ ವಿಜಯ-ಕುಶಲವ’ ಆಡ್ತ್ರ್ ಅಂಬ್ರ್. ಧಾರೇಶ್ವರ್-ಹೆರಂಜಾಲು-ಮಯ್ಯ-ಸುರೇಶ್ ಶೆಟ್ಟಿ, ರವೀಂದ್ರ ಶೆಟ್ಟಿ..ಹೀಂಗೆ ಓಟ್ಟ್ 5 ಜನ ಭಾಗ್ವತ್ರ್ ಪದ. ‘ಯಕ್ಷರಂಗದ ಸಿಡಿಲಮರಿ’ ಅಂದೇಳಿ ಹೆಸ್ರ್ ಮಾಡಿದ್ ತೀರ್ಥಳ್ಳಿ [...]
ನಂಗೆ ಬಪ್ಪುಕೆಡಿಯ ಅಂದೇಳಿ ಕೂಕಂಡಿದ್ದಿದ್ ಮಳಿರಾಯ ಕಡಿಗೂ ಕಣ್ಣ್ ಬಿಟ್ನಾ ಕಾಣತ್. ಬೆಂಗಳೂರಗೂ ನಾಕ್ ಹನಿ ಮಳಿ ಬಪ್ಪುಕ್ ಶುರು ಆಯಿತ್. ಕುಂದಾಪ್ರ ಬದ್ಯಗಂತೂ ಸಮಾ ಮಳಿ ಕುಟ್‌ತಾ ಇರ್ಕ್ ಅಲ್ದಾ? ಮಳಿ ಬಂದದ್ ಅಂಬುದ್ ಬ್ಯಾಸಾಯ ಮಾಡುವರಿಗ್ ಹೋದ್ ಜೀವ ಬಂದಂಗಾಯಿರ್ಕ್. “ಈ ವರ್ಷ ಮಳಿ ಕತಿ ಹೀಂಗೇ ಆರೆ ಯೆಂತ ಮಾಡುದ್. ಹೋಯ್ಲಿ ನೀರಾರು ಹಾರ್ಸುವ ಅಂದ್ರೆ ಕರೆಂಟ್ ಸತೆ ಇಪ್ಪುದಿಲ್ಲ” ಅಂದೇಳಿ ಮಂಡಿ ಮೇಲ್ ಕೈ ಹಾಯ್ಕಂಡ್ ಕೂಕಂಡರಿಗೆಲ್ಲ ಈಗ ಅಯ್ಯಬ್ಬ ಅಮಗ್ [...]
ಹಿಲಾಲ್ ಹಿಡಿ, ದಾನಿ ಸೊಳಿ ಅಂತಾ ಇಪ್ಪುದ್, ಚಂಯ ಚಂಯ ಅಂಬುದು
Posted: July 29, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, kundapra kannada, kundapur kannada, kundapura kannada
ಹಿಲಾಲ್ ಹಿಡಿ, ದಾನಿ ಸೊಳಿ ಅಂತಾ ಇಪ್ಪುದ್, ಚಂಯ ಚಂಯ ಅಂಬುದು ಹಿಲಾಲ್ ಹಿಡಿ, ಹಿಲ್ಲಾಲ್ ಹಿಡಿ – ತಮಾಷೆ ಮಾಡು, ಗೇಲಿ ಮಾಡು ಹಿಲಾಲು ಶಬ್ದದ್ ಅರ್ಥ ನಿಜವಾಯಿ ಕಾಂಬುಕೆ ಹೋರೆ -‘ಬಟ್ಟೆಯನ್ನು ಎಣ್ಣೆಯಲ್ಲಿ ನೆನೆಸಿ ಮಾಡಿದ ದೊಂದಿ’ ಅಂತಿತ್ತ್. ದೇವ್ರ್ ಮೂರ್ತಿ ಉತ್ಸವದ್ ಸಮಿಗೆ ರಾತ್ರಿ ಹಿಡಿತ್ರಲ ಆ ನಮನಿ ದೊಂದಿ. ಬೌಶ ಇದು ಮಾಡದ್ ತಪ್ಪನ್ ಬೆಳ್ಕಿಗೆ ಹಿಡುದ್ ಅಂಬ್ ಅರ್ಥದಗೆ ಬಂದ ನುಡಿಕಟ್ ಅಂದೇಳಿ ಕಾಣತ್ ಬಳಕೆ – [...]
ಅಕೇರಿ, ಹೀಕರ್ಣಿ, ಪಕ್ತಾ, ಹತ್ತಾ, ಹರ್ಕತ್, ತಾಪತ್ರ್ಯ, ಸೈತ
Posted: July 29, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, kundapra kannada, kundapur kannada, kundapura kannada
ಪಕ್ತಾ, ಫಕ್ತಾ – ಬರೀ ಇದ್ ಬಂದದ್ ಮರಾಠಿ ಮೂಲದಿಂದ. ಮೂಲ ಶಬ್ದ ‘ಫಕ್ತ್’. ಬಳಕೆ – ೧. ಅವ್ನಿಗೆ ಪಕ್ತಾ ಆಡು ಗಿರ ಬಿಟ್ರೆ ಮತ್ತೆಂತ ಇಲ್ಲ( ಏಗ್ಳಿಕೆ ಕಂಡರೂ ಅಂತ ಬೇಕಾರ್ ಅರ್ಥ ಮಡ್ಕಂಬ್ಕೆ ಅಡ್ಡಿಲ್ಲ) ೨. ಅವ ಇತ್ತಿತ್ಲಾಯಿ ಪಕ್ತಾ ಸುಳ್ಳ್ ಹೇಳುಕ್ ಕಲ್ತಿದ ಹತ್ತಾ, ಹತ್ತ – ಪೂರ್ಣ, ಸಂಪೂರ್ಣ ಬಳಕೆ – ೧. ಸ್ನಾನಕ್ಕೆ ಹೋದನು ನೀರ್ ಹತ್ತ ಕಾಲಿ ಮಾಡ್ಬೆಡ. ನಂಗೂ [...]
ಕುಂದಗನ್ನಡಕ್ಕೊಂದು ಕನ್ನಡಿ ಭಾಗ -2
Posted: July 24, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, ಕುಂದಾಪುರ ಕನ್ನಡ, ಕುಂದಾಪ್ರ ಕನ್ನಡ, kannada, kundaapra, kundaapura, kundapra, kundapur
ಹೈಲು/ ಹೈಲ್ = ಕಂಗಾಲು, ಹೈರಾಣ ಬಳಕೆ : ೧. ಈ ವರ್ಷ ಮಳೆ ಬಾರ್ದೆ ಬ್ಯಾಸಾಯ ಮಾಡುವರ್ ಯಾಪಾರ್ ಹೈಲ್ ಅಲ್ದೇ. ೨. ಈ ಮಕ್ಕಳಿಗೆ ರಜಿಯಾರೂ ಎಂತಕ್ ಬತ್ತೋ ಏನೋ. ಅವ್ರನ್ ಸುಧಾರ್ಸುದ್ರೊಳ್ಗೆ ಅಲ್ದೇ ನಾ ಅರ್ಧ ಹೈಲ್ ಆದ್ದ್. ೩. ಕೊಡಿ (ಕೊಡೆ) ತಕಂಡ್ ಹೋಪುಕೆ ನೆನ್ಪ್ ಹೋಯಿ, ಮಳೆಯಗ್ ಸಿಕ್ಕಿ ಬಿದ್ದ್ ನನ್ ಯಾಪಾರ ಹೈಲಾದ್ದ್ ಅಲ್ದಾ ಮಾರ್ರೆ ಊಜು / ಊಂಜು/ ಸೀಬು/ ಸೀಂಬು = ಚೀಪು [...]
ಕುಂದಪ್ರಭ ಆನ್ಲೈನಂಗೆ ಸಿಕ್ಕತ್ ಗೊತ್ತಾ?
Posted: July 17, 2008 in ನಮ್ ಊರ್ ನಮ್ಗ್ ಚಂದTags: ಕುಂದಪ್ರಭ, ಕುಂದಾಪುರ, ಕುಂದಾಪ್ರ, ಪೇಪರ್, kundaprabha, kundapur
ಕುಂದಾಪ್ರದ್ ಕಾರ್ಬಾರ್ ಎಲ್ಲಾ ತಿಳ್ಕಣ್ಕ್ ಅಂಬಗಿದ್ರೆ, ಕುಂದಾಪ್ರದ್ದೇ ಪೇಪರ್ ಓದ್ಕ್ ಅಲ್ದಾ? ಕುಂದಾಪ್ರ್‌ದ್ ಸುದ್ದಿ ವಾರ ವಾರವೂ ಕಾಣ್ಕಂಬಗಿದ್ರೆ ಈ ಲಿಂಕ್ ಕ್ಲಿಕ್ ಮಾಡಿ <http://kundaprabha.com> ವಾರದ್ ಬಿಸಿಬಿಸಿ ಸುದ್ದಿ ಒಟ್ಟಿಗೆ ಧಾರವಾಹಿ , ಕಥೆ , ಅಂಕಣ , ರಂಗೋಲಿ ಎಲ್ಲಾನು ಕಾಂಬುಕ್ ಸಿಕ್ಕತ್. ಪುರ್ಸೊತ್ತಾದ್ರೆ ಒಂದ್ ಗಳ್ಗಿ ಹೋಯಿ ಬಿಸಿ ಬಿಸಿ ಸುದ್ದಿ ಓದ್ಕಂಡ್ ಬನಿ.
ಹುಲಿಯಾದ ಕಾಳ….ಭಾಗ 2
Posted: July 15, 2008 in ಯಕ್ಷಗಾನTags: ಆಟ, ಕುಂದಾಪ್ರ, ಯಕ್ಷಗಾನ, ಹುಲಿಯಾದ ಕಾಳ, yakshagana
ನಾಗವೇಣಿ ಒಳ್ಗ್ ಬಂದ್ ಮಾತಾಡುಕ್ ಶುರು ಮಾಡಿ… ನಾಗವೇಣಿ : ‘ನಾಗ್ವೇಣಿ..ನಾಗ್ವೇಣಿ ಅಂದೇಳಿ ಮೂರೊತ್ತೂ ಇದೇ ಆಯ್ತ್. ಇಗಾ ಇಲ್ಲ್ ಬಾ…ಇದನ್ನ್ ಕೊಚ್ಚ್…ಇದನ್ನ್ ಆ ಗಂಟಿಗ್ ಹಾಕ್. ಇದನ್ನ್ ಕಡಿ ಇದನ್ನ್ ಆ ದೆನಿಗ್ ಹಾಕ್. ನಂಗೆ ಮಾಡುಕೆ ಬೇರೆ ಎಂತ ಕೆಲ್ಸ ಇಲ್ಯಾ? ಹೀಂಗ್ ಬೆಳದ್ದನ್ನೆಲ್ಲ ಕೊಚ್ಚಿ ಕೊಚ್ಚಿ ದೆನಿಗ್ ಹಾಕು ಪಾಲ್…ಪಾಪ ಆ ನೆರ್ಮನಿ ಸುಬ್ಬಣ್ಣನಿಗಾರೂ ಕೊಟ್ಟಿದ್ದ್ರೆ ಪದಾರ್ಥ ಮಾಡ್ಕಂಡಾರು ತಿಂತಿದ್ರೆಲೆ. ಕಾಳ : ಹ್ವಾಯ್..ಭಾಗ್ವತ್ರೇ…ಕೇಂಡ್ರ್ಯಾ…? ಈಗ ಯಾರಿಗಾರೂ ಮಧ್ಯ ಬಾಯ್ [...]
1೦-15 ವರ್ಷದ್ ಕೆಳ್ಗೆ ‘ಹುಲಿಯಾದ ಕಾಳ’ ಅಂದೇಳಿ ಒಂದ್ ಹಾಸ್ಯ ಪ್ರಸಂಗ ಬಂದಿತ್. ನೆನ್ಪಿತ್ತಾ? ಆಗ್ಳಿಕೆ ಆದು ಭಾರಿ ಹೆಸ್ರ್ ಮಾದಿತ್ತ್. ಹಳ್ಳಾಡಿ ಜಯರಾಮ್ ಶೆಟ್ರ್ ಕಾಳನ್ ಪಾರ್ಟ್ ಕುಂದಾಪ್ರ ಬದಿಯಲ್ ‘ವರ್ಡ್ ಪೇಮಸ್’ ಆಯಿತ್. ಹೀಂಗೆ ನಿಮ್ ಖುಶಿಗಂದೇಳಿ ಕಾಳನ್ ನಾಲ್ಕ್ ಮಾತ್ ಇಲ್ಲಿತ್ ಕಾಣಿ… ಕಾಳ ಭಾಗ್ವತ್ರನ್ ಮಾತಾಡಸ್ತಾ….( ಜಗ್ಲಿ ಭಾಗ್ವತ್ರ್ ಅಲ್ಲ. ಇವ್ರ್ ಬೇರೆ J ) ಕಾಳ : ಹ್ವಾಯ್, ನಮಸ್ಕಾರ…. ನಮಸ್ಕಾರ ಅಂದ್ನೇ…. ಅಲ್ಲಾ ಒಂದ್ [...]
ಕರ್ಕರೆ ದೇವ್ರಿಗೆ ಮರನ್ ಜಾಗಂಟಿ
Posted: July 11, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, ಕುಂದಾಪ್ರ ಕನ್ನಡ ಕಲಿ, ಗಾದಿ ಮಾತ್, ಹರಕೆ ಬಲಿ
ಕುಂದಾಪ್ರ ಶಬ್ದದ್ ಒಟ್ಟಿಗ್ ನೆನ್ಪಿಗ್ ಬಂದ ಒಂದೆರ್ಡ್ ಕುಂದಾಪ್ರ ಕನ್ನಡ ಗಾದಿ ಮಾತ್ ಇಲ್ಲಿತ್ ಕಾಣಿ ೧) ಕರ್ಕರೆ ದೇವ್ರಿಗೆ ಮರನ್(ಮರದ) ಜಾಗಂಟಿ ೨) ಊರಿಗ್ ಬುದ್ಧಿ ಹೇಳುದ್ ಒಲಿಗೆ ಉಚ್ಚಿ ಹೊಯ್ಯುದ್ ೩) ಕುಪ್ಳನ್ ನಂಬ್ಕಂಡ್ ಕೊಳ್ಕಿ ನಟ್ರಂಬ್ರ್ ಈ ಗಾದಿ ಮಾತಿನ್ ಅರ್ಥ ನಾ ಹೇಳುದಿಲ್ಲ. ಗೊತ್ತಿದ್ರೆ ನೀವೇ ಹೇಳಿ ಕಾಂಬ ಇನ್ನೊಂದ್ ಶಬ್ದ/ನುಡಿಕಟ್ ನೆನ್ಪಾಯ್ತ್ ಕಾಣಿ ಹರ್ಕಿ ಬಲಿ (ಹರಕೆ ಬಲಿ) – ಇದರ ಅರ್ಥ ನಂಗ್ [...]
ಕುಂದಗನ್ನಡಕ್ಕೊಂದು ಕನ್ನಡಿ
Posted: July 10, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, ಕುಂದಾಪ್ರ ಕನ್ನಡ, ನಂ ಭಾಷೆ, kundapura kannada
ಭಾಷೆಯೊಂದು ಜೀವನದಿಯಂತೆ. ತನ್ನ ಹರಿವಿನುದ್ದಕ್ಕೂ ಬಂದು ಸೇರುವ ಅಸಂಖ್ಯಾತ ಹಳ್ಳ-ತೊರೆಗಳನ್ನು ಅಂತರ್ಗತವಾಗಿಸಿಕೊಂಡು ಮೈದುಂಬಿ ಹರಿಯುವ ನದಿಯಂತೆಯೇ ಭಾಷೆಯೂ ಕೂಡಾ ಆಯಾ ಪ್ರದೇಶಕ್ಕೇ ಸೀಮಿತವಾದ ಪದ, ಗಾದೆ, ನುಡಿಗಟ್ಟುಗಳನ್ನು ಸೇರಿಸಿಕೊಂಡು ಸಮೃದ್ಧವಾಗುತ್ತದೆ. ಕುಂದಾಪುರ ಕನ್ನಡಕ್ಕೇ ಸೀಮಿತವಾದ ಕೆಲವು ವಿಶೇಷ ಪದಗಳನ್ನಿಲ್ಲಿ ನೋಡೋಣ. ಚರ್ಗಿ ಭರ್ತಿ – ದಂಡ ಪಿಂಡ, ಅಪ್ರಯೋಜಕ ಬಳಕೆ: ಆ ಕೆಲ್ಸ ಮಾಡುಕ ಅವ್ನ್ ಕೈಯ್ಯಗೆ ಆತ್ತಾ? ಅವ ಏನಿದ್ರೂ ಚರ್ಗಿ ಭರ್ತಿಗೇ ಸೈ ಹನಿ ಹಂದುದಿಲ್ಲ [...]
ನಾ ಬ್ಲಾಗಿಗೆ ಬರಿದೆ 2-3 ವಾರ ಆಯ್ತಾ ಕಾಣತ್. ಸ್ವಲ್ಪ ಹುಶಾರಿರ್ಲಿಲ್ಲ. ಅದ್ಕೆ ನಾಕ್ ದಿನ ಊರ್ ಬದಿಗೆ ಹೋಯಿ ಇದ್ದಿದೆ. ಆ ಹೆಳಿ ಮೇಲಾರೂ ಊರಿನ್ ಮಳ್ಗಾಲದ್ ರಾಪ್ ಸ್ವಲ್ಪ ಕಾಂಬುಕ್ ಸಿಕ್ತ್. ಅದ್ರೊಟ್ಟಿಗೆ ‘ಹೊಂಡ ರಸ್ತೆಯ ಒಳಗೋ ರಸ್ತೆ ಹೊಂಡದ ಒಳಗೋ… ಹೊಂಡ ರಸ್ತೆಗಳೆರಡು ಕೆಸರು ಗೆದ್ದಿಯೊಳಗೋ’ ಅಂಬ ಅನ್ಮಾನ ಸತೆ ಶುರುವಾಯಿತ್. ಇನ್ನ್ ಮೇಲೆ ಬ್ಲಾಗಿಗೆ ವಾರಕ್ ಒಂದಾರೂ ಬರಿಕ್ ಅಂದೇಳಿ ಎಣ್ಸ್‌ಕಂಡಿದೆ. ಮೊನ್ನೆ ನಾಕನೇ ತಾರೀಕಿಗೆ ಬೆಂಗ್ಳೂರಗೆ ನಾ [...]
ಅನ್ಸತಾ ಇತ್ತೆ ಎಂತಕೋ ಇವತ್ತ್ ನೀನೇ ನನ್ನವಳ್ ಅಂದೇಳಿ ಮಾಯ್ಕದಾ ಲೋಕದಿಂದ ನಂಗಂತೇ ಬಂದಿದಳ್ ಅಂದೇಳಿ ಹ್ವಾಯ್ ಎಂತಾ ಲಾಯ್ಕ್ ನೋವ್ ಮಾರ್ರೆ ಕೊಲ್ಲುದಾರೆ ಕೊಂದಾಕ್ ಹೆಣೇ ಒಂಸರ್ತಿ ಹಾಂಗೇ ಸುಮ್ನೆ… ಸೋರಿತಿಪ್ಪ ಮಳ್ಯಂಗ್ ಸತೇ ನಿಂದೇ ಪರ್‍ಮಳ ನೀ ಯಾರ್‍ದಾರೂ ಕನ್ಸಂಗ್ ಹೋರ್ ಸಾಕ್ ಹೊಟ್ಟಿಯೊಳಗೆ ಗುಳಗುಳ ಹುಣ್ಮಿ ಚಂದ್ರ ಸತೇ ರಜಿ ಹಾಕ್ದ ನಿನ್ ಚಂದುಗೋಂಪಿ ಸೊಡ್ ಕಂಡ ಕೂಡ್ಲೇ ನಾ ಕೈದಿ ನೀನೇ ಜೈಲ್ ಹೆಣೇ… ನನ್ ಹೊಸ್ರ್ [...]
ಇನ್ನ್ ಮೂರ್ ತಿಂಗ್ಳ್ ಬೆಂಗ್ಳೂರಗೆ ಆಟ ಕಾಂಬುಕೆ ಅಡ್ಡಿಲ್ಲ…
Posted: June 9, 2008 in ಆಟ, ಯಕ್ಷಗಾನTags: ಆಟ, ಕುಂದಾಪುರ, ಕುಂದಾಪ್ರ, ಪೆರ್ಡೂರು ಮೇಳ, ಬೆಂಗಳೂರು, ಯಕ್ಷಗಾನ
ಮಳ್ಗಾಲ ಬಂದ್ರ್ ಸಾಕ್ ಕಾಣಿ. ನಂಗಂತೂ ಎಲ್ಲಿಲ್ಲದ್ ಖುಷಿ. ಮೂರೊತ್ತೂ ಬಿಡ್ದೆ ಮಳಿ ಹೊಡುವತಿಗೆ ಮನಿ ಒಳ್ಗ್ ಕೂಕಂಡ್ ಕಾಂಬುದೇ ಒಂದ್ ಚೆಂದ. ಸಣ್ಣಕಿಪ್ಪತ್ತಿಗೆ ಚೂರ್ ಮಳಿ ಬಿಟ್ರೂ ಸಾಕ್, ಗುಡ್ಡಿ ಬದಿಯಿಂದ್ ಹರ್ಕಂಡ್ ಬಪ್ಪ್ ನೀರಿಗೆ ಕಟ್ ಕಟ್ಟಿ, ಮಣ್ಣಂಗ್ ಆಡುದ್, ಹೊಳಿಯಗೆ ನೆರಿ ಬಂದ್ರೆ ನೀರ್ ಎಷ್ಟ್ ಏರಿತ್ ಅಂದೇಳಿ ಕಾಂಬುಕೆ ಮನೆಯರದ್ ಪಿರಿಪಿರಿ ಮಧ್ಯವೇ ಕೊಡಿ ಹಿಡ್ಕಂಡ್ ಹೋಯಿ ಕಾಂತಾ ಕೂಕಂತಿದ್ದದ್ದ್… ಎಲ್ಲಾ ನಿನ್ನೆ ಮೊನ್ನೆ ಅಂಬಂಗಿತ್ತ್. ಘಾಟಿಯಗೆ ಜೋರ್ ಮಳಿ ಬಂದ್ರೆ [...]
ನಾಡ್ದ್ ಶನಿವಾರ 14ನೆ ತಾರಿಕಿಗೆ ನಂದೊಂದ್ ಪುಸ್ತ್ಕ ಬಿಡುಗಡೆ ಇತ್ತೆ..
Posted: June 7, 2008 in ಪುಸ್ತಕTags: ಅಂತರಂಗದ ಆಪ್ತಸ್ವರ, ಪುಸ್ತಕ ಬಿಡುಗಡೆ
ಹ್ವಾಯ್ ಬಪ್ಪು ಶನಿವಾರ 14ನೆ ತಾರಿಕಿಗೆ ಇಲ್ಲೆ ಬಸ್ವನ್ ಗುಡಿಲ್ ನಂದ್ ಒಂದ್ ಕವನ ಪುಸ್ತ್ಕ ಬಿಡುಗಡೆ ಇತ್ತ್ ಮಾರಾಯ್ರೆ ಜಾಗ – ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ ಬಸವನಗುಡಿ ಪೊಲೀಸ್ ಸ್ಟೇಶನ್ ಹತ್ತಿರ, ಬಸವನಗುಡಿ, ಬೆಂಗಳೂರು ಪುಸ್ತ್ಕದ್ ಹೆಸ್ರ್ – ಅಂತರಂಗದ ಆಪ್ತಸ್ವರ ಬೆಳಿಗ್ಗೆ 10.30 ಸುರಿಗೆ ಒಂಚೂರ್ ಪುರ್ಸೊತ್ತ್ ಮಾಡ್ಕಂಡ್ ಈ ಬದಿಗೆ ಬನಿ ಅಕಾ? ಎಂತಾರು ಕೇಂಬುಕಿದ್ರೆ 9739099432 ಗೆ ನಂಬರಿಗೆ ಒಂದ್ [...]
ಕುಂದಾಪ್ರದಗೆ ಈ ಸರ್ತಿ ಎಲೆಕ್ಷನ್ ಟೈಟ್ ಅಂಬ್ರಲಾ ಹೌದಾ..?
Posted: May 11, 2008 in ನಮ್ ಊರ್ ನಮ್ಗ್ ಚಂದTags: kannada, kundapra kannada, kundapur, kundapur election, kundapur kannada
ಅಲ್ಲ ಮರಾಯ್ರೆ ಕುಂದಾಪ್ರದಗೆ ಈ ಸರ್ತಿ ಎಲೆಕ್ಷನ್ ಭಯಂಕರ ಟೈಟ್ ಅಂಬ್ರಲಾ ಹೌದೇ ಇದು? ಯಾರ್ ಬಾಯಗ್ ಕೇಂಡ್ರೂ ಒಂದೇ ಮಾತಪ್ಪಾ.. ಈ ಸರ್ತಿ ಯಾರ್ ಗೆಲ್ಲೂದ್ ಅಂದೇಳಿ ಈಗ್ಳೇ ಹೇಳುದ್ ಕಷ್ಟಾ ಮಾರ್ರೆ.. ಶೆಟ್ರಿಗೂ ಹೆಗ್ಡೆಯರಿಗೂ ಜೋರ್ ಫೈಟ್ ಇತ್ತ್ ಗೊತ್ತಿತಾ? ಯಾರ್ ಗೆದ್ರೂ ಮೂರ್ನಾಕ್ ಸಾವ್ರದ್ ಒಳ್ಗೇ ಕಾಣಿ ಬೇಕಾರೆ… ಎಂತಾರೂ ಓಟಿನ್ ಪೆಟ್ಗಿ ಬಿಚ್ಚುವರಿಗೆ ಎಂತದೂ ಹೇಳುಕ್ ಬತ್ತಿಲ್ಲ್ಯೇ… ಅದೆಂತದೋ ಕ್ಷೇತ್ರ ವಿಭಜನೆ ಅಂಬ್ರಪ್ಪ. ಅದನ್ ಮಾಡಿ ನಮ್ ಬ್ರಹ್ಮಾವರದ್ ಹೆಗ್ಡಿಯರಿಗ್ [...]
ನಮ್ ಭಾಷಿ ಚಂದವೇ ಬೇರೆ ಕಾಣಿ…
Posted: May 11, 2008 in ನಮ್ ಊರ್ ನಮ್ಗ್ ಚಂದTags: kannada, kunda kannada, kundapra kannada, kundapur, kundapur kannada
ನಂಗಂತೂ ನಮ್ ಕುಂದಾಪ್ರ ಕನ್ನಡ ಕೇಂಡ್ರೆ ಅಷ್ಟಿಷ್ಟ್ ಖುಷಿ ಆಪುದಲ್ಲ ಗೊತ್ತಿತ? ಅದ್ರಗೂ ಈಗ ಕೆಲ್ಸ ಮಾಡುಕ್ ಅಂತೆಳಿ ಊರ್ ಬಿಟ್ಟ್ ಬೆಂಗ್ಳೂರ್ ಸೇರ್ಕಂಡ್ ಮೇಲೆ ಯಾರೆ ಕುಂದಾಪ್ರದರ್ ಸಿಕ್ರೂ ಅವ್ರನ್ ಒಂದ್ಸಲ ಕುಂದಾಪ್ರ ಕನ್ನಡದಗೆ ಮಾತಾಡ್ಸ್‌ದಿದ್ರೆ ಸಮಾಧಾನವೇ ಆತಿಲ್ಲ. ಬೆಂಗ್ಳೂರಾಗಂತೂ ಬಿಡಿ ಆ ಭಾಷಿ ಈ ಭಾಷಿ ಅಂತೇಳಿ ಎಲ್ಲಾರೂ ಸೇರ್ಕಂಡ್ ಬೆಂಗ್ಳೂರ್ ಕನ್ನಡ ಅಂಬುದ್ ಒಳ್ಳೇ ಕಿಚಿಡಿ ಆದ್ ಕಂಡ್ಮೇಲೆ…ಇನ್ನೂ ಗಮಗಮ ಅಂತೆಳಿ ಪರಿಮಳ್ ಬಪ್ಪ ಕುಂದಗನ್ನಡ ಕೆಮಿ ಮೇಲೆ ಬಿದ್ರೆ ಆಪ್ ಖುಷಿ [...]
