“ನೆನಪಿರಲಿ” ಪಿಚ್ಚರಿನ ಕೂರಕ್ ಕುಕ್ರಳ್ಳಿ ಕೆರೆ ಹಾಡು…ಕುಂದಾಪ್ರ ಸ್ಟೈಲಗೆ …
(ಅಣಕ ಬರದ್ದ್ -ವಿಜಯರಾಜ್ ಕನ್ನಂತ)
ಎಲ್ಲಾ ಹಕ್ಕು ಕಾಯ್ದಿರಿಸಲಾಗಿದೆ
ಹ್ವಾಯ್ ಯಾರದ್ ಹೆದ್ರಕಂಬರ್ …ಅಂಡ್ಕಂಬರ್
ಹೊಕ್ಕಂಬರ್ , ಮಂಡಿ ಜಪ್ಕಂಬರ್, ಹಳೀನ್ ಹಿಂಡಲಗೆ ಮಾತಾಡ್ವರ್, ಸಂತಿಯಗೆ ಪಿಸಿ-ಪಿಸಿ ಅಂಬರ್
ಕುಂದಾಪುರ್ದಂತ ತಾಲೋಕಗೆ ಆಯ್ಕಂಡ್
ಕಾಂಬುಕ್ ಬೇಕಾದ್ದೆಲ್ಲ ಇದ್ದೂ
ಹೊಳಿ,ಕಾಡ್ ಗುಡ್ಡಿ ಇದ್ರೂ,
ಪ್ರೀತಿ ಮಾಡುಕ್ ಜಾಗ ಇದ್ರೂ
ಕಳ್ರ ಕಣಂಗೆ ಮಿಣ್ಣಗೆ ಹೊತ್ರ್ಯಲ್ಲ…
ಬನಿಯೇ.. ಇಲ್ಕಾಣಿಯೇ … ನಾನ್ ಲವ್ ಮಾಡು ಸ್ಟೈಲ್ ಒಂಚೂರ್ ಕಲಿನಿಯೇ !!
ಕೂಕಂಬ್ಕ್ ಮರವಂತೆ ಬೀಚ್ …ಬಾ ಬಾ
ಮೀಯುಕ್ ಕೋಟೇಶ್ವರ ಕೆರೆ..ಬಾ ಬಾ ||೨||
ಲವ್ವಿಗೇ ಈ ಲವ್ವಿಗೇ
ಕೊಡಚಾದ್ರಿ ಬೆಟ್ಟ ಇದೆ
ಈಚಿಗ್ ಮಾರ್ಣಕಟ್ಟಿ ಇದೆ ಲವ್ವಿಗೆ ನಂ ಲವ್ವಿಗೆ
ಹೆದ್ರಿಕಿ ಬಿಟ್ಟಾಕಿ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ
ಬಿಲಾಸ್ ಬಿಟ್ಟಾರೂ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ.
ಕುಂಭಾಶಿಯಗೆ ಪೂಜೆ ಹೆಳಿ..
ಕೊಲ್ಲೂರಗೆ ಜಪ ತಪ ||೨||
ಲವ್ವಿಗೆ ನಮಿಬ್ರ ಲವ್ವಿಗೆ
ನಾರ್ತಿನಲ್ಲಿ ಮೂಡ್ಗಲ್ಲು ಇದೆ
ಈಸ್ಟಗೆ ಶಂಕ್ರನಾರ್ಣ ಇದೆ..ಪೂಜೆಗೇ….ಲವ್ ಪೂಜೆಗೇ
ಹೆದ್ರಿಕಿ ಬಿಟ್ಟಾಕಿ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ
ಬಿಲಾಸ್ ಬಿಟ್ಟಾರೂ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ.
ಗಲಾಟಿಯೇ ಇಲ್ಲ ಬನಿ ಗಂಗೊಳ್ಳಿಯಲ್ಲಿ
ಮನ್ಸ್ ಬಿಚ್ಕಣಿ , ಮರ ಮರ ಗ್ವಾಯ್ ಮರ್ನ ಅಡೀಲಿ
ಹಲ್ಸ್ನಾಡಲ್ಲಿ ತಿರ್ಗಾಡುತ್ತ ||೨|| ಮೂಡು ತಕಣಿ
ಹಳ್ಳಿಯರ್ ಕಣಂಗೆ ಬದಕ್ತಾ… ಒಳ್ಳೆಯರಾಯಿನಿ
ಹ್ವಾಯ್ ಉಪ್ಪಿನಕುದ್ರು ಗೊಂಬೆಯಾಟ ಕಾಣಿ ಕಣ್ಬಿಟ್ಟು
ಯಕ್ಷಗಾನ ಬಯಲಾಟ ಕಂಡ್ಕಂಡ್ ಕಣ್ ಕಣ್ಣು ಬಿಟ್ಟು
ಕುಂದೇಶ್ವರನೆ ಇಲ್ಲಿ ನಿಂತ್ಕಂಡಿದ್ದಾನೆ…
ಪ್ರೀತಿಯಿಂದಲೇ ಕುಂದಾಪುರವ ಕಾಯ್ತಾನೆ
ಪಾರಿಜಾತದಗೆ ಕಾಪಿ ಕುಡಿನಿ, ಶೆರಾನ್ ಹೊಟ್ಳಗೆ ಉಂಡ್ಕಂಡ್ ಬನಿ
ಲವ್ವಿಗೆ ರಿಚ್ ಲವ್ವಿಗೆ
ದುಡ್ಡಿದ್ರೆ ಪಿಚ್ಚರ್-ಹೋಟ್ಲು, ಇಲ್ದಿದ್ರೆ ಗುಡ್ಡಿ-ಹಕ್ಕ್ಲು
ಲವ್ವಿಗೆ ಈ ಲವ್ವಿಗೆ
ಹೆದ್ರಿಕಿ ಬಿಟ್ಟಾಕಿ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ
ಬಿಲಾಸ್ ಬಿಟ್ಟಾರೂ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ.
ಜಾತಿ ಬಿಟ್ರೂ ಸುಖ ಪಡ್ಕ್, ||೨|| ಪ್ರೀತಿ ಮಾಡ್ ಹೆಣೆ
ನಾಳಿಗಾಪುದ್ ಇವತ್ತೇ ಆಯಿ ಹೊಯ್ಲಿ ಹೆಣೆ
ಹೊಕ್ಕಂಡ್.. ಅಂಡ್ಕಂಡ್ ಮಾಡ್ವ||೨|| ಗುಟ್ಟಿನ ಲವಮ್ಮ
ಸತ್ಯ ಹೇಳ್ ಹೆಣೆ..ಸತ್ತಿಕೂ ಲವ್ ಮಾಡ್ ಹೆಣೆ
ಜಾತಿನ್ ಸುಡು ಕಿಚ್ಚಿನ್ ಕಣಗೆ, ಪ್ರೀತಿ ಕಾಣ್ ಹೆಣೆ
ಮನ್ಸರೆಲ್ಲ ಒಂದೇ ಅಂದೇಳಿ ಹೇಳ್ ನೀ ಹೆಣೆ
ಕುಂದಾಪ್ರ ಹಳ್ಳಿಲಿ ಕಾರಂತ್ರು ಹುಟ್ಟಿದ್ರು.
ಮೂಕಜ್ಜಿ ಕತೆಗೆ ಜ್ಞಾನಪೀಠ ತಂದ್ಕೊಟ್ರು
ಸಮುದ್ರ ಬದಿ ಗಾಳಿ ಇತ್ತ್ , ಕಾಡೆಲ್ಲ ತಣ್ಣಗಿತ್ತ್ ಲವ್ವಿಗೇ…ಸ್ವೀಟ್ ಲವ್ವಿಗೇ
ಯಕ್ಷಗಾನದ್ ಪದ್ಯ ಇದೆ
ದರ್ಶಿನ-ಕೋಲದ ವಾದ್ಯ ಇದೆ
ಸಾಂಗಿಗೆ ಲವ್ ಸಾಂಗಿಗೆ
ಹೆದ್ರಿಕಿ ಬಿಟ್ಟಾಕಿ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ
ಬಿಲಾಸ್ ಬಿಟ್ಟಾರೂ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ…
ಕೂಕಂಬ್ಕ್ ಮರವಂತೆ ಬೀಚ್ …ಬಾ ಬಾ
ಮೀಯುಕ್ ಕೋಟೇಶ್ವರ ಕೆರೆ..ಬಾ ಬಾ ||೨||
ಲವ್ವಿಗೇ ಈ ಲವ್ವಿಗೇ
ಕೊಡಚಾದ್ರಿ ಬೆಟ್ಟ ಇದೆ
ಈಚಿಗ್ ಮಾರ್ಣಕಟ್ಟಿ ಇದೆ ಲವ್ವಿಗೆ ನಂ ಲವ್ವಿಗೆ
ಹೆದ್ರಿಕಿ ಬಿಟ್ಟಾಕಿ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ
ಬಿಲಾಸ್ ಬಿಟ್ಟಾರೂ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ….
——————————————————————————————
ಮೂಲ ಹಾಡ್ ಇಲ್ಲಿತ್ ಕಾಣಿ (ಕೃಪೆ: kannadalyrics.com)
ನೆನಪಿರಲಿ (2005) – ಕೂರಕ್ ಕುಕ್ರಳ್ಳಿ ಕೆರೆ
Submitted by Editor on Tue, 2006-01-03 19:44. ಚಿತ್ರಗೀತೆ | ನೆನಪಿರಲಿ | ಹಂಸಲೇಖ | ೨೦೦೫
ಹಾಡು: ಕೂರಕ್ ಕುಕ್ರಳ್ಳಿ ಕೆರೆ
ಗಾಯಕರು: ಎಸ್.ಪಿ.ಬಿ.
ಸಾಹಿತ್ಯ / ಸಂಗೀತ: ಹಂಸಲೇಖ
ಅರೆ ಯಾರ್ರೀ ಹೆದರ್‍ಕೊಳ್ಳೋರು…ಬೆದರ್‍ಕೊಳ್ಳೋರು
ಪೇಚಾಡೋರು, ಪರ್‍ದಾಡವ್ರು, ಮರಗಳ್ ಮರೆನಲ್ಲಿ ಮಾತಾಡವ್ರು, ಮಾರ್ನಿಂಗ್ ಶೋನಲ್ಲಿ ಪಿಸ್ಗುಟ್ಟವ್ರು
ಮೈಸೂರ್ ಅಂತಾ ಜಿಲ್ಲೆಲಿದ್ದೂ
ಕಣ್ಣಿಗ್ ಬೇಕಾದ್ ನೋಟ ಇದ್ದೂ
ಹಳೆ ರಾಜ್ರ್ರು ಅಪ್ಣೆ ಇದ್ದೂ
ಪ್ರೀತಿ ಮಾಡೋಕ್ ಜಾಗ್ಗುಳ್ ಇದ್ದೂ
ಕದ್ದು ಮುಚ್ಚಿ ಓಡಾಡ್ತೀರಲ್ರೀ
ಬನ್ರೀ.. ನೋಡ್ರೀ… ನಾನ್ ಲವ್ ಮಾಡೊ ಸ್ಟೈಲ್ ಸ್ವಲ್ಪ ಕಲೀರೀ…..!
ಕೂರಕ್ಕ್ ಕುಕ್ಕ್ರಳ್ಳಿ ಕೆರೆ…ಬಾ ಬಾ
ತೇಲಕ್ ಕಾರಂಜಿ ಕೆರೆ…ಬಾ ಬಾ ||೨||
ಲವ್ವಿಗೇ ಈ ಲವ್ವಿಗೇ
ಚಾಮುಂಡಿ ಬೆಟ್ಟ ಇದೆ
ಕನ್ನಂಬಾಡಿ ಕಟ್ಟೆ ಇದೆ ಲವ್ವಿಗೆ ನಂ ಲವ್ವಿಗೆ
ಈ ಭಯಬಿಸಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ.
ಬಲ್ಮುರಿಲಿ ಪೂಜೆ ನೆಪ
ಎಡ್ಮುರಿಲಿ ಜಪ ತಪ ||೨||
ಲವ್ವಿಗೆ ನಿರ್ವಿಘ್ನ ಲವ್ವಿಗೆ
ನಾರ್ತಿನಲ್ಲಿ ಶ್ರೀರಂಗ್‍ಪಟ್ಣ
ಸೌತಿನಲ್ಲಿ ನಂಜನ್‍ಗೂಡು ..ಪೂಜೆಗೇ….ಲವ್ ಪೂಜೆಗೇ
ಈ ಭಯಬಿಸಾಕೀ…ಲವ್ ಮಾಡಿ..ಲವ್ ಮಾಡಿ..ಲವ್ ಮಾಡಿ
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ
ಗಲಾಟೆನೇ ಇಲ್ಲ ಬನ್ರೀ ||೨|| ಗಂಗೊತ್ರಿಯಲ್ಲಿ
ಮನಸ್ಸು ಬಿಚ್ಕೊಳ್ರೀ , ಮರಮರ ಮರದ ಮರೇಲೀ
ಅರ್‍ಮನೆಲಿ ಅಡ್ಡಾಡುತ ||೨|| ಮೂಡು ತಗೊಳ್ರೀ
ರಾಜನ್ ತರಾನೇ ಲವ್ವಲ್ ದರ್ಬಾರ್ ಮಾಡ್ಬಿಡ್ರೀ
ಹೇ ರಂಗಂತಿಟ್ಟು ನೋಡಿಬಿಟ್ಟು ಹಾಡ್ರಿ ಮುತ್ತಿಟ್ಟು
ಮುಡುಕುತೊರೆಲ್ ಮನಸು ಕೊಡ್ರಿ ಕಣ್ಣಲ್ ಕಣ್ಣಿಟ್ಟು
ಕಾಳಿದಾಸನೆ ಇಲ್ ರಸ್ತೆ ಆಗವ್ನೆ
ಪ್ರೀತಿ ಮಾಡೊವ್ರ್‍ಗೆ ಸರಿ ದಾರಿ ತೋರ್‍ತಾನೆ
ಕೆ.ಆರ್.ಎಸ್ ಅಲ್ಲಿ ಕೆಫೆ ಮಾಡಿ, ಬ್ಲಫ್ಫಿನಲ್ಲಿ ಬಫೆ ಮಾಡಿ
ಲವ್ವಿಗೆ ರಿಚ್ ಲವ್ವಿಗೆ
ದುಡ್ಡಿದ್ರೆ ಲಲಿತ ಮಹಲ್, ಇಲ್ದಿದ್ರೆ ಒಂಟಿ ಕೊಪ್ಪಲ್
ಲವ್ವಿಗೆ ಈ ಲವ್ವಿಗೆ
ಈ ಭಯಬಿಸಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ.
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ
ಜಾತಿ ಬಿಟ್ರು ಸುಖ ಪಡ್ಬೇಕ್, ||೨|| ಪ್ರೀತಿ ಮಾಡಮ್ಮ
ನಾಳೆ ಆಗೋದು ಇಂದೇ ಆಗಿ ಹೋಗ್ಲಮ್ಮಾ
ಕದ್ದು ಮುಚ್ಚಿ ಪ್ರೀತಿ ಮಾಡೊ ||೨|| ಕಳ್ಳ ಲವಮ್ಮ
ಸತ್ಯ ಹೇಳಮ್ಮ, ನಿಜ್ವಾದ್ ಪ್ರೀತಿ ಮಾಡಮ್ಮಾ
ಜಾತಿ ಸುಡೋ ಮಂತ್ರ ಕಿಡಿ, ಪ್ರೀತಿ ಕಣಮ್ಮಾ
ಮನುಜ ಮತ ವಿಶ್ವಪಥ ಅಂಥ ಹೇಳಮ್ಮಾ
ತೀರ್ಥಹಳ್ಳಿ ಕುವೆಂಪು ಹುಟ್ಟಿದ್ರು
ವಿಶ್ವಪ್ರೇಮನಾ ಮೈಸೂರ್‍ಗೆ ತಂದ್ ಕೊಟ್ರು
ಮೈಸೂರೂ ಕೂಲಾಗಿದೆ, ಬೃಂದಾವನ ಗ್ರೀನಾಗಿದೆ ಲವ್ವಿಗೇ…ಸ್ವೀಟ್ ಲವ್ವಿಗೇ
ನರಸಿಂಸ್ವಾಮಿ ಪದ್ಯ ಇದೆ
ಅನಂತ್‍ಸ್ವಾಮಿ ವಾದ್ಯ ಇದೆ
ಸಾಂಗಿಗೆ ಲವ್ ಸಾಂಗಿಗೆ
ಈ ಭಯ ಬಿಸಾಕೀ ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ
ಕೂರಕ್ಕ್ ಕುಕ್ಕ್ರಳ್ಳಿ ಕೆರೆ
ತೇಲಕ್ ಕಾರಂಜಿ ಕೆರೆ ||೨||
ಲವ್ವಿಗೇ ಈ ಲವ್ವಿಗೇ
ಚಾಮುಂಡಿ ಬೆಟ್ಟ ಇದೆ
ಕನ್ನಂಬಾಡಿ ಕಟ್ಟೆ ಇದೆ ಲವ್ವಿಗೆ ನಂ ಲವ್ವಿಗೆ
ಈ ಭಯಬಿಸಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ!!!!

Tumba Laikitt Kannantre… Odi nagadi nagadi… nann kathi lagadi aayth… Tumba khushi aayth. Thank you very much
ಹ್ವಾಯ್,, ಒಳ್ಳೆ ಲಾಯ್ಕ್ ಬರ್ದಿರಿ,, ಮೊನ್ನೆ ನಾನು ನನ್ ಹೆಂಡ್ತಿ ಒಟ್ಟಿಗೆ ಕೂಕಂಡ್ ಮಿಂಚಾಗಿ ಬಪ್ಪಕು ಹಾಡಿನ ಹೊಸ ಲಿರಿಕ್ಸ್ ಓದಿ ನಕ್ಕಿತ್.. ಇದ್ ಇನ್ನು ಒಳ್ಳೆ ಬಂದಿತ್..
Sooparru!
ಮಸ್ತ್ ಲಾಯ್ಕಿತ್ತ್ ಮಾರೇರೇ
ನೆಗಾಡಿ ನೆಗಾಡಿ ಸಾಕಾಯ್ತ್..
ಓದಿ ಸಕತ್ ನಗು ಬಂತೆ ಮರ್ರೆ…ಒಳ್ಳೆ ಲಾಯ್ಕಿತ್ತಲೇ…
ಲವ್ ಮಾಡುಕೆ ಇಷ್ಟು ಕಷ್ಟ ಪಡ್ಕಾ ಹ್ಹಾ ಹ್ಹಾ ಹ್ಹಾ
laaykith marre..:):)
ಸಕ್ಕತ್ ಸರ್!
Sooper
ಚಂದ ಬರೀತೀರ ನೀವು
Kannathre .,
mast like ith. Kambuke ganad idd sthala ondu bidalilla. Mast khushi aytha
deepa
thanks deepa
ಲಾಯ್ಕಿತ್.
ಇನ್ನೊಂದು ಹಾಡು ನಂಬದಿ ಭಾರಿ ಫ಼ೆಮಸ್ ಆಯಿದ್ದಿತ್. ದಲೇರ್ ಮೆಹೆಂದಿಯ “ಹಾಯೊ ರಬ್ಬಾ ಹಾಯೊ ರಬ್ಬಾ” ಹಾಡನ್ನು “ಹಾರಿ ತಕ್ ಬಾ, ಹಾರಿ ತಕ್ ಬಾ” ಅಂದೇಳಿ ಹಾಡುತ್ತಿದ್ದರು. ಪುರಾ ಹಾಡು ನೆನಪಿಲ್ಲ.
ಹಾರಿ ತಕ್ ಬಾ, ಹಾರಿ ತಕ್ ಬಾ, ಹಾರಿ ತಕ್ ಬಾ,
ಹಾರಿ ತಕ್ ಬಾ, ಹಾರಿ ತಕ್ ಬಾ, ಹಾರಿ ತಕ್ ಬಾ,
ಓ ಗಡಾ, ಗದ್ದಿ ಬದಿ ಬಾ, ನೀ ಹಾರಿ ತಕ್ ಬಾ
ಕಟ್ಟ್ ಕಡ್ದು ನೀರ್ ಬಿಡ್ದಿರ್ ಅಗಿ ಕೊಳಿತ್ತೊ
ಅಯ್ಯೊ ಬೇಗ್ ಬಾರ ನೀ ಹಾರಿ ತಾರ.
http://www.lyricstime.com/daler-mehndi-bolo-tara-ra-ra-lyrics.html
ಪದ್ಯ ಕಟ್ಟುಕೆ ನನ್ ಕೈಯಗೆ ಆತಿಲ್ಲ. ನೀವು ಮುಂದುವರಿಸಿ ಕಾಂಬ!
ಸಂತು.
santhu…sooper.. will try this weekend
ವಾಹ್… ಸೂಪರ್ ಮಾರಾಯ…
laaykith