Archive for July, 2011

ನೀ ಅಮ್ರತಧಾರೆ ..ಕೋಟಿ ಜನುಮ ಜೊತೆಗಾತಿ ಧಾಟಿಯಂಗೆ ಓದಿ…… ನೀ ನಂಬದಿಗ್ ಹೋರೆ…ಪ್ಯಾರ್ಲಿಕಾಯ್ ತಕಂಬತ್ಯಾ ನೀ ನಂಬದಿಗ್ ಹೋರೆ…ಎರಡು ಮಾಯ್ನಕಾಯ್ ತಕಂಬತ್ಯಾ ನೀ ನಂಬದಿಗ್ ಹೋರೆ…ಪ್ಯಾರ್ಲಿಕಾಯ್ ತಕಂಬತ್ಯಾ ನೀ ನಂಬದಿಗ್ ಹೋರೆ…ಎರಡು ಮಾಯ್ನಕಾಯ್ ತಕಂಬತ್ಯಾ ನೀ ಎಡಿಯ ಅಂದರೆ ನಾ… ಹ್ಯಾಂಗೆ ತಿಂಬುದು? ನಾ ಊರಿಗ್ ಹೋರೆ… ಕಂಡಿತಾ ಸಿಕ್ರೆ ತಕಂಬತ್ತೆ ನಾ ಹೋಪು ಸೂರಿಗೆ , ಊರಲ್ ಬಾರಿ ಮಳಿಗಾಲ ನಂಗ್ ಸಿಕ್‌ದೇ ಹೋರೇ ನಾ..ಎಂತಾ ಮಾಡುದು? ನೀ ನಂಬದಿಗ್ ಹೋರೆ ನೆನ್ಪಿತ್ತಾ ತೆಂಗಿನ್ ತ್ವಾಟ [...]

ರಿಷಿ ಸಿನಿಮಾದ “ನಾನು ಒತ್ತಾರೆ ಎದ್ಬಿಟ್ಟು…” ಹಾಡನ್ನು ಕುಂದಾಪ್ರ ಬದಿ ಕೆಲ್ಸದ್ ಹೆಣ್ಣ್ ಮತ್ತ್ ಮನಿ ಯಜ್ಮಾನ್ತಿ ಮಾತಾಡುವಂಗೆ ಬರ್ದ್ರೆ ಹ್ಯಾನ್ಗಿರತ್ತ್ ಕಾಣಿ… ಈ ಪದ್ಯ ಕೇಂತಾ ಓದ್ರೆ ಇನ್ನೂ ಲಾಯ್ಕಿರತ್ತ್.. ಅದ್ಕೆ ಪದ್ಯದ ವಿಡಿಯೋ ಇಲ್ಲೇ ಪೋಸ್ಟಿನ ತುದಿಯಲ್ ಹಾಕಿದೆ ಕಾಣಿ…. ನಾಳೆ ಬೆಳ್ಮುಚ್ ಬೇಗೆದ್ದು..ಬಚ್ಲ ಒಲಿಗೆ ಕಿಚ್-ಒಟ್ಟಿ..ಗಂಟಿ ಎಬ್ಬಿ ಬರ್ಕ್ ಹೆಣೆ… ಚೂರ್ ಚಾ ಇದ್ರೆ ಕುಡ್ಕಂಡ್ ..ಆಂಗ್ಳಕ್ಕೆ ನೀರ್ ಹಾಕಿ… ರಂಗೋಲಿ ಹಾಕ್ಕ್ ಹೆಣೆ… ಹಾಡಿ ಬದಿಗೋಯಿ ಗುಡ್ಸ್ಕಂಡ್ …ದರ್ಲಿ ಒಟ್ಟ್-ಮಾಡ್ಕಂಡ್… ಗೆದ್ದಿಗ್ [...]

ರಿಷಿ ಸಿನಿಮಾದ ನಾನು ಒತ್ತಾರೆ ಎದ್ಬುಟ್ಟು…ಹಾಡು ಕುಂದಾಪ್ರಕ್ಕೆ ಬಂದ್ರೆ…ಹೀಂಗ್ ಆತ್ತ್ ಕಾಣಿ… ರಾಜು ಅನಂತ ಸ್ವಾಮೀ ಹಾಡಿದ್ ಈ ಪದ್ಯ ಕಂಡ್ರೆ ನಂಗೆ ಮಸ್ತ್ ಖುಷಿ… ಈ ಪದ್ಯ ಕೇಂತಾ ಓದ್ರೆ ಇನ್ನೂ ಲಾಯ್ಕಿರತ್ತ್.. ಅದ್ಕೆ ಪದ್ಯದ ವಿಡಿಯೋ ಇಲ್ಲೇ ಪೋಸ್ಟಿನ ತುದಿಯಲ್ ಹಾಕಿದೆ ಕಾಣಿ…. ನಾನು ಬೆಳ್ಮುಚ್ ಎದ್ಕಂಡ್..ನಿನ್ ಸೊಡ್ಡ್ ಕಂಡ್ಕಂಡ್.. ಕೈ ಮುಕ್ಕಂಡ್ ನಿಂತ್ಕಂತೆ ಹೆಣೆ… ಬೇಗ ಚಾ ಕಣ್ಣ್ ತಂದ್ಕೋಟ್ಟು.. ನಿನ್ ಕಾಲ ಬುಡ್ದಗಿಟ್ಟು… ಚೂರ್-ಚೂರೆ ಕುಡ್ಸ್ತೆ ಹೆಣೆ… ಚಾಕ್ ಸಕ್ರಿ ಕಮ್ಮಿ [...]

ಕಳ್ದ್ ವಾರ ಟಿ.ವಿ.9ನಗೆ ಹೀಗೂ ಉಂಟೆ ಕಾರ್ಯಕ್ರಮ್ದಗೆ…ನಮ್ಮೂರ್ ಹಳ್ಳಿಹೊಳೆ ಹತ್ರದ್ ಕಮ್ಲಶಿಲಿ ಗುಹೆದ್ ಕತಿ ಬಂದಿತ್ತ್… ಅದ್ರ ವೀಡಿಯೊ ಇಲ್ಲಿತ್ ಕಾಣಿ…. ಮಸ್ತ್ ಲಾಯ್ಕಿತ್ತ್…

ಲಾಡಿ ಕಟ್ಕೊ…ಲಾಡಿ ಕಟ್ಕೊ..ಲಾಡಿ ಕಟ್ಕೊ… ಲಾಡಿ ಕಟ್ಕೊ…ಲಾಡಿ ಕಟ್ಕೊ..ಲಾಡಿ ಕಟ್ಕೊ… ಗಡೆ ನಿನ್ನ ಚಡ್ಡಿ…ಬಿಚ್ಚಿ ಹೋಯ್ತಲ್ಲ ಚಡ್ಡಿ ಲಾಡಿ ಬಾಯಿಂದ್ ತೆಗಿಯಾ ಬೆಟ್, ಚಡ್ಡಿ ಮೇಲೆತ್ತಿ ಕಟ್ಟ್.. ಪೂರಾ ತೋರತ್ತ್ ಮಾರಾಯ…ತೋರತ್ ಮರಾಯ, ಗ್ವಾನ್ಜಡಿ ಮೇಲೇರ್ಡ್ ಬಿಡ್ತೆ.. ಪೂರಾ ತೋರತ್ ಮರಾಯ….. ಲಾಡಿ ಕಟ್ಕೊ…ಲಾಡಿ ಕಟ್ಕೊ..ಲಾಡಿ ಕಟ್ಕೊ… ಮೂಗಂಗೆ ಸಿಂಬಳ ಸೊರಿತ್ತ್…ಬಾಯಂಗೆ ಎಂಜ್ಲ್ ಇಳಿತ್ತ್… ಬಾಯ್ಕಳ್ದ್ರೆ ಹತ್ರ ಹೋಪುಕೆ… ಯಾರೀಗ್ಎಡಿತ್ತ್….ಮರಾಯ ಸಿಂಬಳ ವರ್ಸ್ಕೊ ಮರಾಯ ಸಿಂಬಳ ವರ್ಸ್ಕೊ… ಗ್ವಾನ್ಜಡಿ ಮೇಲೇರ್ಡ್ ಬಿಡ್ತೆ… ಸಿಂಬಳ ವರ್ಸ್ಕೊ…ಸಿಂಬಳ ವರ್ಸ್ಕೊ…ಸಿಂಬಳ ವರ್ಸ್ಕೊ [...]

“ನೆನಪಿರಲಿ” ಪಿಚ್ಚರಿನ ಕೂರಕ್ ಕುಕ್ರಳ್ಳಿ ಕೆರೆ ಹಾಡು…ಕುಂದಾಪ್ರ ಸ್ಟೈಲಗೆ … (ಅಣಕ ಬರದ್ದ್ -ವಿಜಯರಾಜ್ ಕನ್ನಂತ) ಎಲ್ಲಾ ಹಕ್ಕು ಕಾಯ್ದಿರಿಸಲಾಗಿದೆ ಹ್ವಾಯ್ ಯಾರದ್ ಹೆದ್ರಕಂಬರ್ …ಅಂಡ್ಕಂಬರ್ ಹೊಕ್ಕಂಬರ್ , ಮಂಡಿ ಜಪ್ಕಂಬರ್, ಹಳೀನ್ ಹಿಂಡಲಗೆ ಮಾತಾಡ್ವರ್, ಸಂತಿಯಗೆ ಪಿಸಿ-ಪಿಸಿ ಅಂಬರ್ ಕುಂದಾಪುರ್ದಂತ ತಾಲೋಕಗೆ ಆಯ್ಕಂಡ್ ಕಾಂಬುಕ್ ಬೇಕಾದ್ದೆಲ್ಲ ಇದ್ದೂ ಹೊಳಿ,ಕಾಡ್ ಗುಡ್ಡಿ ಇದ್ರೂ, ಪ್ರೀತಿ ಮಾಡುಕ್ ಜಾಗ ಇದ್ರೂ ಕಳ್ರ ಕಣಂಗೆ ಮಿಣ್ಣಗೆ ಹೊತ್ರ್ಯಲ್ಲ… ಬನಿಯೇ.. ಇಲ್ಕಾಣಿಯೇ … ನಾನ್ ಲವ್ ಮಾಡು ಸ್ಟೈಲ್ ಒಂಚೂರ್ ಕಲಿನಿಯೇ [...]

ಗಾಳಿಪಟದ “ಮಿಂಚಾಗಿ ನೀನು ಬರಲು” …ಕುಂದಾಪ್ರ ಕನ್ನಡದಗೆ…:) (- ಅನುವಾದ ವಿಜಯರಾಜ್ ಕನ್ನಂತ್ ) ಎಲ್ಲ ಹಕ್ಕು ಕಾದಿರಿಸಲಾಗಿದೆ :-) :-) ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ ನೀ ಇಲ್ದೆ ಕಿಚ್ಹ್ ಹಿಡ್ದಂಗಾಯಿ… ಎದಿಯೊಳಗೆ ಸೆಕಿಗಾಲ ಇನ್ನಿಲ್ಯೇ ನಂಗೆ ಉಳ್ಗಾಲ… ಮಿಂಚಾಯಿ ನೀನು ಬಪ್ಪುಕು… ನಿಂತಲ್ಲೇ ಮಳ್ಗಾಲ ಬೆಚ್ಚಗೆ ನಿನ್ನೊಟ್ಟಿಗಿದ್ರೆ… ಕೂಕಂಡಲ್ಲೇ ಚಳಿಗಾಲ ನಾ ನಿನ್ ಕನ್ಸಿಗೆ… ಬಾಡ್ಗಿಗೆ ಬಂದಿದ್ನೆ… ತಿಂಗ್ಳ ಬಾಡ್ಗಿ ಕೊಟ್ ಹೋಪ್ಕೆ…ನಿಮ್ಮನಿಗೆ ಬತ್ತೆ ನಾ ನಾ ಸರ್ತ [...]