Archive for March, 2009

ಕಳ್ದ್ ತಿಂಗ್ಳ್ ನನ್ ಬ್ಲಾಗ್ ಬದಿಗೆ ಶ್ರೀಕಾಂತ ಹೆಗಡೆ ಅಂದೇಳಿ ಒಬ್ರ್ ಬಂದಿರ್. ಅವ್ರ್ ಒಂದೆರ್ಡ್ ಕಮೆಂಟ್ ಪೋಸ್ಟ್ ಮಾಡಿರ್… ಆ ಕಮೆಂಟಗೆ ಒಂದೆರ್ಡ್ ಪ್ರಶ್ನೆ ಸತೇ ಕೇಂಡಿರ್. ಅವ್ರ್ ಕೇಂಡದ್ ಇಷ್ಟೆ…ನೀವ್ ಕುಂದಾಪ್ರದರು ಪ್ಯಾಟಿಗ್ ಬಂದ್ ಸೆಟ್ಲ ಆದೋರು ನಿಮ್ಮ ಮಕ್ಕಳಿಗೆ ಅಲ್ಲಿ ಭಾಷಿ, ಸಂಸ್ಕೃತಿ ಕೊಡುಕೆ ಮರ್ತರಲ್ಲೇ ಮಾರಾಯ್ರೆ, ಇದ್ನ ಕಂಡ್ರೆ ಕೇಂಡ್ರ ಭಾಳ ಭೇಜಾರಾತ್ತಲೆ. ನೀವ್ ಕುಂದಾಪ್ರದ ಜನ ಎಂಥಕ್ಕೆ ಮಕ್ಳ ಮರಿಗೆ ನಿಂ ಕುಂದಗನ್ನಡ ಕಲಸೂದಿಲ್ಲ ? ಅವ್ರ್ ಪ್ರಶ್ನೆಗೆ ಉತ್ರ [...]

ಒಂದಿಷ್ಟ್ ಹನಿ ನಾನ್ ಬರದ್. ಮನಸಿನ ಮರ್ಮರ ಬ್ಲಾಗಗೆ ಹಾಕಿದ್ದೆ… ಅದನ್ನೆ ಕುಂದಾಪ್ರ ಕನ್ನಡದಗೆ ಬರ್ದ್ರೆ ಹ್ಯಾಂಗೆ ಅಂದೇಳಿ ಒಂದೆರ್ಡ್ ಬರ್ದಿದೆ ಕಾಣಿ… ಹ್ಯಾಂಗಿತ್ತ್ ಹೇಳಿ…   ಎಲ್ಲೋ ಸೊರ್ದ್ ಮಳಿಗೆ ಹೊಳಿ ನೀರ್ ಕೆಂಪಾತ್ತಲ್ದಾ ಹಾಂಗೇ ಎಲ್ಲೋ ಇಪ್ಪ್ ನಿನ್ನ್ ನೆನ್ಪ್ ಆಯಿ ಕಣ್ಣಂಗ್ ನೀರ್ ಬಂತ್ ನಂಗೆ —————— ಸತ್ ಹೋದ ಸಂಬಂಧ ಎಲ್ಲ ನೆನ್ಪ್ ಮಾಡ್ಕಂಬ್ದ್ ಎಂತಕ್ ಅಂತ್ರ್ಯಾ? ಸತ್ತರ್ ಎದ್ದ್ ಬಂದ್ ಕತಿ ಇತ್ತಲೆ ನಂಬ್‌ತ್ರ್ಯಾ? —————— ನಿನ್ನ್ ನೆನ್ಪಾಯ್ದಿರ್ಲಿ ಅಂದೇಳಿ [...]