Archive for December, 2008

ಕೊಟ್ಟ್ ಮಾತ್ ತಪ್ಸುದಿಲ್ಲ, ವಾರಕ್ಕೊಂದ್ಸರ್ತಿ ಆರೂ ಈ ಬದಿಗೆ ಬತ್ತೆ ಅಂದೇಳಿ ಕಳ್ಸರ್ತಿ ಹೇಳಿದ್ನಲ್ದಾ… ಹಾಂಗೇ ಇವತ್ ಬಂದಿದೆ ಕಾಣಿ… ಹಾಂಗೇ ನೀವೆಲ್ಲ ಉತ್ರ ಕೊಟ್ಟದ್ ಕಂಡ್ ಮಸ್ತ್ ಖುಷಿ ಆಯ್ತ್ (ಬೆಂಗ್ಳೂರ್ ಬದಿ ಮಸ್ತ್ ಅಲ್ಲ ಕುಂದಾಪ್ರ ಬದಿ ಮಸ್ತ್… J )   ಅನುಪಮ, ಮಹೇಶ್, ವೀಮಾ ಶೆಟ್ಟಿ, ಅಡಿಗ, ಶಿಶಿರ, ರಂಜಿತ್, ದೀಪಾ, ಭಾಗ್ವತ್ರ್… ಇವ್ರೆಲ್ಲಾ ಉತ್ರ ಕೊಟ್ಟಿರ್. ಶಿಶಿರ, ರಂಜಿತ್ ಎರ್ಡ್ ಸಮ್ನಾದ್ ಉದಾಹರಣೆ ಸೈತ ಕೊಟ್ಟಿರ್. ಅದೇ ಅರ್ಥ ಬಪ್ಪ್ [...]

ಕಳ್ದ್ ಸರ್ತಿ ಒಂದಿಷ್ಟ್ ಕುಂದಾಪ್ರ ಕನ್ನಡ ಶಬ್ದ ಕೊಟ್ಟ್ ನಿವೆಲ್ಲ ಉತ್ರ ಹೇಳಿನಿ ಕಾಂಬ ಅಂತ್ ಹೇಳಿದೆ… ನಾವಡ್ರ್, ಯಶೋಧ ಮತ್ತೆ ಅನುಪಮ ಸುಮಾರ್ ಸರಿ ಉತ್ರ ಕೊಟ್ಟಿರ್. ಬೇರೆ ಯಾರೂ ಈ ಬದಿಗ್ ನೀಕಿ ಕಾಣಲ್ಯೋ…, ಕಂಡ್ರೂ ಉತ್ರ ಹೇಳುಕೆ ಮನ್ಸಿಲ್ಯೋ, ಅತ್ವ ಯಾರ್ ಹೇಳ್ತ್ರ್.. ಇವ್ನಿಗೆ ಬೇರೆ ಕೆಲ್ಸ ಇಲ್ಲ ಅಂದೇಳಿ ಸುಮ್ನಾಯ್ಕಂಡ್ರೋ ಗೊತ್ತಿಲ್ಲ. ಹೋಯ್ಲಿ ಬಿಡಿ… ನಂಗೇನ್ ಬೇಜಾರಿಲ್ಲ… ಯಾರಿಗಾರೂ ಒತ್ತಾಯ ಮಾಡಿ ಉತ್ರ ಹೇಳಿ ಅಂದೇಳಿ ಹೇಳುಕಾತ್ತಾ?   ಆರ್ ಹೀಂಗ್ [...]

ಈ ಬ್ಲಾಗ್ ಬದಿಗೆ ಮಂಡಿ ಹಾಕಿ ಮನ್ಕಣ್ದೆ ಸುಮಾರ ದಿನ ಆಯ್ತ್. ಹಾಂಗಂದೇಳಿ ಬರುಕ್ ಪುರ್ಸೊತ್ ಇಲ್ಲ , ಬರುಕ್ ಮನ್ಸಿಲ್ಲ ಅಂದೇಳಿ ಅಲ್ಲ. ಹಾಂಗ್ ಕೇಂಡ್ರೆ ಈ ಬ್ಲಾಗಿಗೆ ಬರುಕೆ ನಂಗೂ ಮಸ್ತ್ ಖುಷಿಯೇ. ಆರೂ ಕಳ್ದ್ ತಿಂಗ್ಳ್ ಇಡೀ ಏನೋ ಒಂದ್ನಮನಿ ಉದಾಶಿನ ಹಿಡ್ದಂಗ್ ಆಯಿತ್. ಈಗ ಅದ್ನೆಲ್ಲ ಕೊಡ್ಕಿ ಹಾಕಿ ಬರುಕ್ ಕೂಕಂಡಿದೆ. ಇನ್ನ್ ಮೇಲೆ ಹೀಂಗೆಲ್ಲ ಹಾಂಟ್ ಹಾಕುದಿಲ್ಲ ಅಕಾ.. ಸುಳ್ಳಾ-ಬದ್ಧವಾ ನೀವೆ ಕಾಣಿ ಬೇಕಾರೆ. ಈ ಬದಿಗೆಲ್ಲಾರೂ ನೀವ್ ನೀಕಿ [...]