ಏಗ್ಳಿಕೆ ಕಂಡ್ರೂ ನಾನೆ ಶಬ್ದ ಬರ್ದ್, ಅದ್ರದ್ ಅರ್ಥ ಹೇಳಿ, ವಾಕ್ಯ ಮಾಡಿ ತೋರ್ಸ್‌ತಿದ್ದಿದೆ ಅಲ್ದಾ? ಈ ಸರ್ತಿ ಒಂಚೂರ್ ಬದ್ಲ್ ಮಾಡ್ವಾ? ನಾನೊಂದಿಷ್ಟ್ ಕುಂದಾಪ್ರ ಬದಿದ್ ಶಬ್ದ ಕೊಡ್ತೆ. ನೀವ್ ಅದಕ್ ಅರ್ಥ ಹೇಳಿ, ಒಂದೆರ್ಡ್ ವಾಕ್ಯ ಹೇಳಿ. ಕಾಂಬ ಯಾರೆಲ್ಲ ಉತ್ರ ಹೇಳ್ತ್ರ ಅಂದೇಳಿ. ( ಭಾಗ್ವತ್ರೆ ಹೀಂಗ್ ಮಾಡ್ಯಾರೂ ನೀವ್ ನಿಲ್ಸಿದ್ ಕುಂದಾಪ್ರ ಕನ್ನಡ ಕ್ಲಾಸ್ ಮತ್ತ್ ಶುರು ಮಾಡ್‌ತ್ರ್ಯಾ ಕಾಂಬ ಅಂದೇಳಿ…) ಯಾವ್ದೆಲ್ಲ ಶಬ್ದ ಕೇಂಡ್ರ್ಯಾ? ಎಲ್ಲ ಇಲ್ಲಿತ್ತ್ [...]
Archive for October, 2008
ಈ ಸರ್ತಿ ಚೂರ್ ಬದ್ಲ್ ಮಾಡ್ರೆ ಹ್ಯಾಂಗೆ?… ಗತಿ ಗೋತ್ರ ಇಲ್ದಿದಂಗ್ ಆಪುದ್, ಅಂಡುದ್, ಹೊತ್ತ್‌ಹೋಪತಿಗೆ, ವರ್ಕುದ್
Posted: October 29, 2008 in ಕುಂದಗನ್ನಡ ಕಲಿTags: ಕುಂದಗನ್ನಡ ಕಲಿ, kundapra kannada
ನಾಳೆ ಕಲಾಕ್ಷೇತ್ರದಗೆ ಹಳ್ಳಾಡಿ ಜಯ್ರಾಮ್ ಶೆಟ್ರಿಗೆ ಅಭಿನಂದನೆ – ಬೇಡರ ಕಣ್ಣಪ್ಪ – ಶ್ವೇತ ಕುಮಾರನ ಪ್ರೇತ – ಚಿತ್ರಾಕ್ಷಿ ಕಲ್ಯಾಣ
Posted: October 17, 2008 in ಯಕ್ಷಗಾನTags: ಆಟ, ಕಾಶೀಮಾಣಿ, ಯಕ್ಷಗಾನ, ಶ್ವೇತ ಕುಮಾರನ ಪ್ರೇತ, ಸೀತಾರಾಂ ಕುಮಾರ್
ಹಳ್ಳಾಡಿ ಜಯ್ರಾಮ ಶೆಟ್ರ್ ಹೆಸ್ರ್ ಕೇಣ್ದಿದ್ದರ್ ಯಾರಿದ್ರ್ ಹೇಳಿ ಕಾಂಬ. ಸುಮಾರ್ ನಲ್‌ವತ್ ವರ್ಷದಿಂದ ಹಾಸ್ಯ ಪಾತ್ರ ಮಾಡಿ ಎಲ್ಲರನ್ನೂ ನೆಗಾಡ್ಸದರ್… ಕಮಲಶಿಲೆ, ಅಮೃತೇಶ್ವರಿ, ಮಂದರ್ತಿ, ಮೂಲ್ಕಿ, ಕುಂಬಳೆ, ಸಾಲಿಗ್ರಾಮ, ಪೆರ್ಡೂರು ಹೀಂಗೆ ಸುಮಾರ್ ಮ್ಯಾಳದಗೆ ಹಾಸ್ಯ ಪಾತ್ರ ಮಾಡಿ ರೈಸ್‌ದರ್…ಬಾಹುಕ, ಪಾಪಣ್ಣ, ಕೈರವ, ಕಾಶೀಮಾಣಿ, ಬಲರಾಮನ ದೂತ, ಕಂದರ, ವಿಜಯ, ಮಂಥರೆ, ದಾರುಕ, ಹುಲಿಯಾದ ಕಾಳ…ಹೀಂಗೆ ನಮ್ ನಮನಿ ವೇಷ ಹಾಕಿ ಹೆಸ್ರ್ ಮಾಡ್ದರ್ ಜಯ್ರಾಮ ಶೆಟ್ರು. ಅವ್ರ್ ಕಲಾಸೇವೆ ಕಂಡ್ ಕುಶಿಪಟ್ಟರೆಲ್ಲ ಸೇರಿ ಅವ್ರಿಗೊಂದ್ [...]
ನವ್ರಾತ್ರಿಯಂದ್ರೆ…ಹೊಸ್ತು….ಹುಲಿಯಾಸ… ಹೂವಿನಕೋಲು…ಪಾಣಾರ್ರ ವೇಷ
Posted: October 8, 2008 in ನಮ್ ಊರ್ ನಮ್ಗ್ ಚಂದTags: ಕುಂದಾಪ್ರ, ನವರಾತ್ರಿ, ಪಾಣಾರ ವೇಷ, ಹುಲಿಯಾಸ, ಹುಲಿವೇಷ, ಹೂವಿನ ಕೋಲು, ಹೂವಿನ್ ಕೋಲ್, ಹೊಸ್ತ್
ನವ್ರಾತ್ರಿ ಬಂತಂದ್ರ್ ಸಾಕ್. ನೆನ್ಪ್ ಊರ್ ಬದಿ ಮುಖ ಮಾಡ್ಕಂಡ್ ಕೂಕಣತ್. ಮಾಲಯ ಅಮಾಸಿ ಮುಗದ್ದೇ ತಡ… ಎಲ್ಲರ್ ಮನ್ಯಗೂ ಕದ್ರ್ ಪೂಜಿ ಮಾಡಿ…ಅದನ್ ತಂದ್‌ಕಟ್ಟಿ ಹೊಸ್ತ್ ಮಾಡು ಗೌಜಿ ಶುರುವಾತ್ತ್. ನಮ್ಗೆ ಅಂದ್ರೆ ಮಕ್ಳಿಗೆಲ್ಲಾ ಗಡ್ಜ್ ಗಮ್ಮತ್ತ್. ಅರ್ಧವಾರ್ಷಿಕ ಪರಿಕ್ಷೆ ಎಲ್ಲಾ ಮುಗ್ದ್ ಶಾಲಿಗ್ ಬೇರೆ ರಜಿ ಸಿಕ್ಕಿರತ್. ಮತ್ತ್ ಶಾಲಿ ಬದಿಗ್ ಮುಖ ಹಾಕುದ್ ದೀಪಾವಳಿ ಪಟಾಕಿ ಎಲ್ಲ ಖಾಲಿ ಆರ್ ಮೇಲೆ ಸೈ. ಹೊಸ್ತಿನ ಊಟ ಮಾಡಿ… ಹೊಟ್ಟಿ ಭಾರ ಆದ್ದಕ್ಕೆ ಕಣ್ಣ್ [...]
