ಹಿಲಾಲ್ ಹಿಡಿ, ದಾನಿ ಸೊಳಿ ಅಂತಾ ಇಪ್ಪುದ್, ಚಂಯ ಚಂಯ ಅಂಬುದು

Posted: July 29, 2008 in ಕುಂದಗನ್ನಡ ಕಲಿ
Tags: , , ,

ಹಿಲಾಲ್ ಹಿಡಿ, ದಾನಿ ಸೊಳಿ ಅಂತಾ ಇಪ್ಪುದ್, ಚಂಯ ಚಂಯ ಅಂಬುದು

 

ಹಿಲಾಲ್ ಹಿಡಿ, ಹಿಲ್ಲಾಲ್ ಹಿಡಿ - ತಮಾಷೆ ಮಾಡು, ಗೇಲಿ ಮಾಡು

ಹಿಲಾಲು ಶಬ್ದದ್ ಅರ್ಥ ನಿಜವಾಯಿ ಕಾಂಬುಕೆ ಹೋರೆ -ಬಟ್ಟೆಯನ್ನು ಎಣ್ಣೆಯಲ್ಲಿ ನೆನೆಸಿ ಮಾಡಿದ ದೊಂದಿ ಅಂತಿತ್ತ್. ದೇವ್ರ್ ಮೂರ್ತಿ ಉತ್ಸವದ್ ಸಮಿಗೆ ರಾತ್ರಿ ಹಿಡಿತ್ರಲ ಆ ನಮನಿ ದೊಂದಿ. ಬೌಶ ಇದು ಮಾಡದ್ ತಪ್ಪನ್ ಬೆಳ್ಕಿಗೆ ಹಿಡುದ್ ಅಂಬ್ ಅರ್ಥದಗೆ ಬಂದ ನುಡಿಕಟ್ ಅಂದೇಳಿ ಕಾಣತ್

 

ಬಳಕೆ -

೧.         ಸ್ವಲ್ಪ ಸದ್ರ ಕೊಟ್ರ್ ಸಾಕ್ ಎಲ್ಲರೂ ಹಿಲ್ಲಾಲ್ ಹಿಡುಕೇ ಬತ್ತ್ರ್

೨.         ನೀ ಹಿಲಾಲ್ ಹಿಡುದ್ ಬ್ಯಾಡ್ದಾ…ನೀ ಎಂತ ಅಂದೇಳಿ ನಂಗ್ ಗೊತ್ತಿಲ್ಲ್ಯಾ?

೩.         ಅಂವ ಜಾರಿ ಬಿದ್ರೆ ನೆಗ್ಗುದ್ ಬಿಟ್‌ಕಂಡ್ ಎಲ್ಲಾ ಸೇರ್‌ಕಂಡ್ ಹಿಲಾಲ್ ಹಿಡಿತಾ ಇದ್ರ್ಯಾ?

 

ದಾನಿ ಸೊಳಿ ಅಂತಾ ಇಪ್ಪುದ್ - ಕೆಲಸಕ್ಕೆ ಬಾರದ ಮಾತಾಡುತ್ತ ಇರು, ಒಣಹರಟೆ ಮಾಡು

(ದಾನಿ – ಹಲಸಿನ ಹಣ್ಣಿನ ಬೀಜ ;  ಸೊಳೆ - ತೊಳೆ )

 

ಈ ತರದ್ ಒಂದ್ ನುಡಿಕಟ್ಟ್ ಇತ್ತ್. ನಂಗ್ ಗೊತ್ತಿದ್ದ ಹಾಂಗೆ ಇದ್ರ ಅರ್ಥ ಅಪ್ರಯೋಜಕ ಮಾತಾಡು, ಸುಮ್ಮನೆ ಏನಾದ್ರೂ ಪಟ್ಟಾಂಗ ಹೊಡೆಯೋದು ಅಂದೇಳಿ. ಇದ್ ಅಲ್ದೇ ಬೇರೆ ಅರ್ಥ ಗೊತ್ತಿದ್ರ್ ಹೇಳಿ

 

ಬಳಕೆ -

೧.         ಬೆಳ್ಗಿಂದ ಸಾಂಯ್ಕಾಲದ್‌ವರಿಗೆ ಬಂದರ್ ಹೋದರ್ ಹತ್ರ ಎಲ್ಲಾ ದಾನಿ ಸೊಳಿ ಅಂತಾ ಕೂಕಂಬ್ ಪಾಲ್(ಬದ್ಲ್) ಎಂತಾರೂ ಬೇರೆ ಕೆಲ್ಸ ಮಾಡ್ಲಕ್ಕಲ್ದಾ?

 

 

ಇದೇ ನಮನಿ ಅರ್ಥದ್ ಇನ್ನೊಂದ್ ನುಡಿಕಟ್

ಚಂಯ ಚಂಯ ಅಂಬುದು - ರಗಳೆಯಾಗುವಂತೆ ಮಾತಾಡು, ಅರ್ಥಹೀನ ಬಡಬಡಿಕೆ

 

ಬಳಕೆ -

೧.         ಮಾತಾಡುಕೆ ಯಾರದ್ದಾರೂ ಕೆಮಿ ಸಿಕ್ರ್ ಸಾಕ್, ಚಂಯ ಚಂಯ ಅಂತಾ ಕೂಕಂಬ್ದ್. ಎಂತ ಹೇಳ್ಕ್ ಎಂತ ಹೇಳುಕಾಗ ಅಂತೇಳಿ ಗೋಚರವೇ ಇಲ್ಲ.

೨.         ಎಂತಾ ಮರಾಯ ಚಂಯ ಚಂಯ ಅಂತೆ. ಒಂದ್ ಗಳ್ಗಿ ಸುಮ್ನ್ ಕೂಕಂಬ್ಕಾಗ್ದಾ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s