Archive for July, 2008

ನಂಗೆ ಬಪ್ಪುಕೆಡಿಯ ಅಂದೇಳಿ ಕೂಕಂಡಿದ್ದಿದ್ ಮಳಿರಾಯ ಕಡಿಗೂ ಕಣ್ಣ್ ಬಿಟ್ನಾ ಕಾಣತ್. ಬೆಂಗಳೂರಗೂ ನಾಕ್ ಹನಿ ಮಳಿ ಬಪ್ಪುಕ್ ಶುರು ಆಯಿತ್. ಕುಂದಾಪ್ರ ಬದ್ಯಗಂತೂ ಸಮಾ ಮಳಿ ಕುಟ್‌ತಾ ಇರ್ಕ್ ಅಲ್ದಾ? ಮಳಿ ಬಂದದ್ ಅಂಬುದ್ ಬ್ಯಾಸಾಯ ಮಾಡುವರಿಗ್ ಹೋದ್ ಜೀವ ಬಂದಂಗಾಯಿರ್ಕ್. “ಈ ವರ್ಷ ಮಳಿ ಕತಿ ಹೀಂಗೇ ಆರೆ ಯೆಂತ ಮಾಡುದ್. ಹೋಯ್ಲಿ ನೀರಾರು ಹಾರ್ಸುವ ಅಂದ್ರೆ ಕರೆಂಟ್ ಸತೆ ಇಪ್ಪುದಿಲ್ಲ” ಅಂದೇಳಿ ಮಂಡಿ ಮೇಲ್ ಕೈ ಹಾಯ್ಕಂಡ್ ಕೂಕಂಡರಿಗೆಲ್ಲ ಈಗ ಅಯ್ಯಬ್ಬ ಅಮಗ್ [...]

ಹಿಲಾಲ್ ಹಿಡಿ, ದಾನಿ ಸೊಳಿ ಅಂತಾ ಇಪ್ಪುದ್, ಚಂಯ ಚಂಯ ಅಂಬುದು   ಹಿಲಾಲ್ ಹಿಡಿ, ಹಿಲ್ಲಾಲ್ ಹಿಡಿ – ತಮಾಷೆ ಮಾಡು, ಗೇಲಿ ಮಾಡು ಹಿಲಾಲು ಶಬ್ದದ್ ಅರ್ಥ ನಿಜವಾಯಿ ಕಾಂಬುಕೆ ಹೋರೆ -‘ಬಟ್ಟೆಯನ್ನು ಎಣ್ಣೆಯಲ್ಲಿ ನೆನೆಸಿ ಮಾಡಿದ ದೊಂದಿ’ ಅಂತಿತ್ತ್. ದೇವ್ರ್ ಮೂರ್ತಿ ಉತ್ಸವದ್ ಸಮಿಗೆ ರಾತ್ರಿ ಹಿಡಿತ್ರಲ ಆ ನಮನಿ ದೊಂದಿ. ಬೌಶ ಇದು ಮಾಡದ್ ತಪ್ಪನ್ ಬೆಳ್ಕಿಗೆ ಹಿಡುದ್ ಅಂಬ್ ಅರ್ಥದಗೆ ಬಂದ ನುಡಿಕಟ್ ಅಂದೇಳಿ ಕಾಣತ್   ಬಳಕೆ – [...]

  ಪಕ್ತಾ, ಫಕ್ತಾ – ಬರೀ   ಇದ್ ಬಂದದ್ ಮರಾಠಿ ಮೂಲದಿಂದ. ಮೂಲ ಶಬ್ದ ‘ಫಕ್ತ್’.   ಬಳಕೆ – ೧.         ಅವ್ನಿಗೆ ಪಕ್ತಾ ಆಡು ಗಿರ ಬಿಟ್ರೆ ಮತ್ತೆಂತ ಇಲ್ಲ( ಏಗ್ಳಿಕೆ ಕಂಡರೂ ಅಂತ ಬೇಕಾರ್ ಅರ್ಥ ಮಡ್ಕಂಬ್ಕೆ ಅಡ್ಡಿಲ್ಲ) ೨.         ಅವ ಇತ್ತಿತ್ಲಾಯಿ ಪಕ್ತಾ ಸುಳ್ಳ್ ಹೇಳುಕ್ ಕಲ್ತಿದ   ಹತ್ತಾ, ಹತ್ತ – ಪೂರ್ಣ, ಸಂಪೂರ್ಣ   ಬಳಕೆ – ೧.         ಸ್ನಾನಕ್ಕೆ ಹೋದನು ನೀರ್ ಹತ್ತ ಕಾಲಿ ಮಾಡ್ಬೆಡ. ನಂಗೂ [...]

ಹೈಲು/ ಹೈಲ್ = ಕಂಗಾಲು, ಹೈರಾಣ ಬಳಕೆ :   ೧.         ಈ ವರ್ಷ ಮಳೆ ಬಾರ್ದೆ ಬ್ಯಾಸಾಯ ಮಾಡುವರ್ ಯಾಪಾರ್ ಹೈಲ್ ಅಲ್ದೇ. ೨.         ಈ ಮಕ್ಕಳಿಗೆ ರಜಿಯಾರೂ ಎಂತಕ್ ಬತ್ತೋ ಏನೋ. ಅವ್ರನ್ ಸುಧಾರ್ಸುದ್ರೊಳ್ಗೆ ಅಲ್ದೇ ನಾ ಅರ್ಧ ಹೈಲ್ ಆದ್ದ್. ೩.         ಕೊಡಿ (ಕೊಡೆ) ತಕಂಡ್ ಹೋಪುಕೆ ನೆನ್ಪ್ ಹೋಯಿ, ಮಳೆಯಗ್ ಸಿಕ್ಕಿ ಬಿದ್ದ್ ನನ್ ಯಾಪಾರ ಹೈಲಾದ್ದ್ ಅಲ್ದಾ ಮಾರ್ರೆ   ಊಜು / ಊಂಜು/ ಸೀಬು/ ಸೀಂಬು = ಚೀಪು [...]

  ಕುಂದಾಪ್ರದ್ ಕಾರ್ಬಾರ್ ಎಲ್ಲಾ ತಿಳ್ಕಣ್ಕ್ ಅಂಬಗಿದ್ರೆ, ಕುಂದಾಪ್ರದ್ದೇ ಪೇಪರ್ ಓದ್ಕ್ ಅಲ್ದಾ? ಕುಂದಾಪ್ರ್‌ದ್ ಸುದ್ದಿ ವಾರ ವಾರವೂ ಕಾಣ್ಕಂಬಗಿದ್ರೆ ಈ ಲಿಂಕ್ ಕ್ಲಿಕ್ ಮಾಡಿ <http://kundaprabha.com> ವಾರದ್ ಬಿಸಿಬಿಸಿ ಸುದ್ದಿ ಒಟ್ಟಿಗೆ ಧಾರವಾಹಿ , ಕಥೆ , ಅಂಕಣ , ರಂಗೋಲಿ ಎಲ್ಲಾನು ಕಾಂಬುಕ್ ಸಿಕ್ಕತ್. ಪುರ್ಸೊತ್ತಾದ್ರೆ ಒಂದ್ ಗಳ್ಗಿ ಹೋಯಿ ಬಿಸಿ ಬಿಸಿ ಸುದ್ದಿ ಓದ್ಕಂಡ್ ಬನಿ.  

ನಾಗವೇಣಿ ಒಳ್ಗ್ ಬಂದ್ ಮಾತಾಡುಕ್ ಶುರು ಮಾಡಿ…   ನಾಗವೇಣಿ            :           ‘ನಾಗ್ವೇಣಿ..ನಾಗ್ವೇಣಿ ಅಂದೇಳಿ ಮೂರೊತ್ತೂ ಇದೇ ಆಯ್ತ್. ಇಗಾ ಇಲ್ಲ್ ಬಾ…ಇದನ್ನ್ ಕೊಚ್ಚ್…ಇದನ್ನ್ ಆ ಗಂಟಿಗ್ ಹಾಕ್. ಇದನ್ನ್ ಕಡಿ ಇದನ್ನ್ ಆ ದೆನಿಗ್ ಹಾಕ್. ನಂಗೆ ಮಾಡುಕೆ ಬೇರೆ ಎಂತ ಕೆಲ್ಸ ಇಲ್ಯಾ? ಹೀಂಗ್ ಬೆಳದ್ದನ್ನೆಲ್ಲ ಕೊಚ್ಚಿ ಕೊಚ್ಚಿ ದೆನಿಗ್ ಹಾಕು ಪಾಲ್…ಪಾಪ ಆ ನೆರ್ಮನಿ ಸುಬ್ಬಣ್ಣನಿಗಾರೂ ಕೊಟ್ಟಿದ್ದ್ರೆ ಪದಾರ್ಥ ಮಾಡ್ಕಂಡಾರು ತಿಂತಿದ್ರೆಲೆ. ಕಾಳ                   :           ಹ್ವಾಯ್..ಭಾಗ್ವತ್ರೇ…ಕೇಂಡ್ರ್ಯಾ…? ಈಗ ಯಾರಿಗಾರೂ ಮಧ್ಯ ಬಾಯ್ [...]

1೦-15 ವರ್ಷದ್ ಕೆಳ್ಗೆ ‘ಹುಲಿಯಾದ ಕಾಳ’ ಅಂದೇಳಿ ಒಂದ್ ಹಾಸ್ಯ ಪ್ರಸಂಗ ಬಂದಿತ್. ನೆನ್ಪಿತ್ತಾ? ಆಗ್ಳಿಕೆ ಆದು ಭಾರಿ ಹೆಸ್ರ್ ಮಾದಿತ್ತ್. ಹಳ್ಳಾಡಿ ಜಯರಾಮ್ ಶೆಟ್ರ್ ಕಾಳನ್ ಪಾರ್ಟ್ ಕುಂದಾಪ್ರ ಬದಿಯಲ್ ‘ವರ್ಡ್ ಪೇಮಸ್’ ಆಯಿತ್. ಹೀಂಗೆ ನಿಮ್ ಖುಶಿಗಂದೇಳಿ ಕಾಳನ್ ನಾಲ್ಕ್ ಮಾತ್ ಇಲ್ಲಿತ್ ಕಾಣಿ…   ಕಾಳ ಭಾಗ್ವತ್ರನ್ ಮಾತಾಡಸ್ತಾ….( ಜಗ್ಲಿ ಭಾಗ್ವತ್ರ್ ಅಲ್ಲ. ಇವ್ರ್ ಬೇರೆ J )   ಕಾಳ                   :     ಹ್ವಾಯ್, ನಮಸ್ಕಾರ…. ನಮಸ್ಕಾರ ಅಂದ್ನೇ…. ಅಲ್ಲಾ ಒಂದ್ [...]

ಕುಂದಾಪ್ರ ಶಬ್ದದ್ ಒಟ್ಟಿಗ್ ನೆನ್ಪಿಗ್ ಬಂದ ಒಂದೆರ್ಡ್ ಕುಂದಾಪ್ರ ಕನ್ನಡ ಗಾದಿ ಮಾತ್ ಇಲ್ಲಿತ್ ಕಾಣಿ   ೧)         ಕರ್ಕರೆ ದೇವ್ರಿಗೆ ಮರನ್(ಮರದ) ಜಾಗಂಟಿ ೨)          ಊರಿಗ್ ಬುದ್ಧಿ ಹೇಳುದ್ ಒಲಿಗೆ ಉಚ್ಚಿ ಹೊಯ್ಯುದ್ ೩)          ಕುಪ್ಳನ್ ನಂಬ್ಕಂಡ್ ಕೊಳ್ಕಿ ನಟ್ರಂಬ್ರ್   ಈ ಗಾದಿ ಮಾತಿನ್ ಅರ್ಥ ನಾ ಹೇಳುದಿಲ್ಲ. ಗೊತ್ತಿದ್ರೆ ನೀವೇ ಹೇಳಿ ಕಾಂಬ   ಇನ್ನೊಂದ್ ಶಬ್ದ/ನುಡಿಕಟ್ ನೆನ್ಪಾಯ್ತ್ ಕಾಣಿ   ಹರ್ಕಿ ಬಲಿ (ಹರಕೆ ಬಲಿ) – ಇದರ ಅರ್ಥ ನಂಗ್ [...]

ಭಾಷೆಯೊಂದು ಜೀವನದಿಯಂತೆ. ತನ್ನ ಹರಿವಿನುದ್ದಕ್ಕೂ ಬಂದು ಸೇರುವ ಅಸಂಖ್ಯಾತ ಹಳ್ಳ-ತೊರೆಗಳನ್ನು ಅಂತರ್ಗತವಾಗಿಸಿಕೊಂಡು ಮೈದುಂಬಿ ಹರಿಯುವ ನದಿಯಂತೆಯೇ ಭಾಷೆಯೂ ಕೂಡಾ ಆಯಾ ಪ್ರದೇಶಕ್ಕೇ ಸೀಮಿತವಾದ ಪದ, ಗಾದೆ, ನುಡಿಗಟ್ಟುಗಳನ್ನು ಸೇರಿಸಿಕೊಂಡು ಸಮೃದ್ಧವಾಗುತ್ತದೆ. ಕುಂದಾಪುರ ಕನ್ನಡಕ್ಕೇ ಸೀಮಿತವಾದ ಕೆಲವು ವಿಶೇಷ ಪದಗಳನ್ನಿಲ್ಲಿ ನೋಡೋಣ.   ಚರ್ಗಿ ಭರ್ತಿ           –           ದಂಡ ಪಿಂಡ, ಅಪ್ರಯೋಜಕ   ಬಳಕೆ: ಆ ಕೆಲ್ಸ ಮಾಡುಕ ಅವ್ನ್ ಕೈಯ್ಯಗೆ ಆತ್ತಾ? ಅವ ಏನಿದ್ರೂ ಚರ್ಗಿ ಭರ್ತಿಗೇ ಸೈ   ಹನಿ ಹಂದುದಿಲ್ಲ       [...]

  ನಾ ಬ್ಲಾಗಿಗೆ ಬರಿದೆ 2-3 ವಾರ ಆಯ್ತಾ ಕಾಣತ್. ಸ್ವಲ್ಪ ಹುಶಾರಿರ್ಲಿಲ್ಲ. ಅದ್ಕೆ ನಾಕ್ ದಿನ ಊರ್ ಬದಿಗೆ ಹೋಯಿ ಇದ್ದಿದೆ. ಆ ಹೆಳಿ ಮೇಲಾರೂ ಊರಿನ್ ಮಳ್ಗಾಲದ್ ರಾಪ್ ಸ್ವಲ್ಪ ಕಾಂಬುಕ್ ಸಿಕ್ತ್. ಅದ್ರೊಟ್ಟಿಗೆ ‘ಹೊಂಡ ರಸ್ತೆಯ ಒಳಗೋ ರಸ್ತೆ ಹೊಂಡದ ಒಳಗೋ… ಹೊಂಡ ರಸ್ತೆಗಳೆರಡು ಕೆಸರು ಗೆದ್ದಿಯೊಳಗೋ’ ಅಂಬ ಅನ್ಮಾನ ಸತೆ ಶುರುವಾಯಿತ್. ಇನ್ನ್ ಮೇಲೆ ಬ್ಲಾಗಿಗೆ ವಾರಕ್ ಒಂದಾರೂ ಬರಿಕ್ ಅಂದೇಳಿ ಎಣ್ಸ್‌ಕಂಡಿದೆ.   ಮೊನ್ನೆ ನಾಕನೇ ತಾರೀಕಿಗೆ ಬೆಂಗ್ಳೂರಗೆ ನಾ [...]