ಅನ್ಸತಾ ಇತ್ತೆ ಎಂತಕೋ ಇವತ್ತ್
ನೀನೇ ನನ್ನವಳ್ ಅಂದೇಳಿ
ಮಾಯ್ಕದಾ ಲೋಕದಿಂದ
ನಂಗಂತೇ ಬಂದಿದಳ್ ಅಂದೇಳಿ
ಹ್ವಾಯ್ ಎಂತಾ ಲಾಯ್ಕ್ ನೋವ್ ಮಾರ್ರೆ
ಕೊಲ್ಲುದಾರೆ ಕೊಂದಾಕ್ ಹೆಣೇ ಒಂಸರ್ತಿ
ಹಾಂಗೇ ಸುಮ್ನೆ…
ಸೋರಿತಿಪ್ಪ ಮಳ್ಯಂಗ್ ಸತೇ
ನಿಂದೇ ಪರ್‍ಮಳ
ನೀ ಯಾರ್‍ದಾರೂ ಕನ್ಸಂಗ್ ಹೋರ್ ಸಾಕ್
ಹೊಟ್ಟಿಯೊಳಗೆ ಗುಳಗುಳ
ಹುಣ್ಮಿ ಚಂದ್ರ ಸತೇ ರಜಿ ಹಾಕ್ದ
ನಿನ್ ಚಂದುಗೋಂಪಿ ಸೊಡ್ ಕಂಡ ಕೂಡ್ಲೇ
ನಾ ಕೈದಿ ನೀನೇ ಜೈಲ್ ಹೆಣೇ…
ನನ್ ಹೊಸ್ರ್ ಒಂಸರ್ತಿ ಹೇಳ್ತ್ಯಾ
ಹಾಂಗೇ ಸುಮ್ನೆ….

like ith e had nan onsala kundapra kannadage madine aare ist gammathaylilla
ಹೊಯ್
ಲಾಯ್ಕಿತ್ತ್ ಮಾರಾಯ್ರೆ
ಇಷ್ಟ್ ಶೋಕಿನ್ ಪದ್ಯ ಸಿನ್ಮದವ್ರಿಗ್ಯಾರಿಗಾದ್ರೂ ಕೊಟ್ರೆ…
ಕಾಯ್ಕಿಣಿ ಮನಿಗ್ ಹೋಯ್ಕ್ ಅಷ್ಟೇ
ಇನ್ನೂ ಮಸ್ತ್ ಬರಿನಿ ಅಕಾ
ಓದುಕ್ ಭಾರಿ ಗಮ್ಮತಾತ್ತೆ
ಅಂದ್ ಹಾಂಗೆ ನನ್ನೆಸ್ರ್ ಮುರಲಿ ಅಂದ್ಹೇಳಿ
ಕುಂದಾಪ್ರದವ, ಮಂಗ್ಳೂರಗಿಪ್ಪುದೀಗ
hoi tumba laik itte… namm kundapra mali mungaru malikinta kadmi illa
wahhh sooper kaani remix